ನಿನ್ನ ನಗುವೇತಕೆ ಮೌನವಾಗಿದೆ..!.

0

ಕುದಿಯುವ ಕೋಪ ಮನದೊಳಗೆ

ಅರಿಯದ ವೇದನೆ ನಿನ್ನೊಳಗೆ

ನಗುವೇತಕೆ ಮೌನವಾಗಿದೆ  

ನಿನ್ನ ನಲಿವೇತಕೆ ಮರೆಯಾಗಿದೆ .IIಪII

ಹೊಳೆಯುವ ರೂಪವು ನೀನಲ್ಲವೆ

ನಿನ್ನ ಮುನಿಸಿಗೆ ಕಾರಣ ಬೇಕಲ್ಲವೆ

ನಿನ್ನಯ ವೇದನೆ ನನ್ನದಲ್ಲವೆ

ನಿನ್ನ ಹೃದಯದೊಳೆನಗೆ ಸ್ಥಳವಿಲ್ಲವೆ.

ಪ್ರೀತಿಯ ಪುಟಗಳ ಹಾಳೆಯ ಮೇಲೆ

ಕಣ್ಣೀರಿನಿಂದ ಕಥೆ ಬರೆದೆ

ಹೃದಯದ ಒಳಗೆ ಉಸಿರಾದಂತೆ

ನನ್ನ ಬಾಳಿಗೆ ಮುನ್ನುಡಿಯಾದೆ.

ಬೆಳಗುವ ಸೂರ್ಯ ಕತ್ತಲಾದಂತೆ

ನಲಿಯುವ ತಾವರೆ ಸುಮ್ಮನಾಗಿದೆ

ಲೋಕಕೆ ಲೋಕವು ಒಂಟಿಯಾದಂತೆ

ಸುಮ್ಮನಿರೆ ನೀ, ನಾ ಶಿಲೆಯಾಗುವೆ.

ಮನಸಿನ ಕೋಪವ ತಣಿಸಿಬಿಡು

ಹೂನಗೆ ತುಟಿಗಳ ಅರಳಿಬಿಡು

ನಿನ್ನ ಜೀವಕೆ ಜೀವವು ನನ್ನಾಣೆ

ನಿನಗಾಗಿ ನನ್ನ ಪ್ರಾಣವ ಬಿಟ್ಟೆನೇ..

ನಗುವೇತಕೆ ಮೌನವಾಗಿದೆ  

ನಿನ್ನ ನಲಿವೇತಕೆ ಮರೆಯಾಗಿದೆ .IIಪII

                                       ವಸಂತ್

ಚತ್ರಕೃಪೆ. http://lh3.ggpht.com

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ವಸಂತ್ ಎಂದಿನಂತೆ ಚೆನ್ನಾಗಿದೆ ನಿಮ್ಮ ಕವನ ಇಷ್ಟವಾಯ್ತು ಈ ಶಬ್ದಗಳನ್ನು ಗಮನಿಸಿ ನಿನ್ನಯ ವೇದನೆ ತನದಲ್ಲವೆ- ನಿನ್ನಯ ವೇದನೆ ನನ್ನದಲ್ಲವೇ ಪಲ್ಲವಿ - ನಿನ್ನ ನಲಿವೇತಕೆ ಮರೆಯಾಗಿದೆ ಸಾಲಿನ ನಂತರ ಬರಬೇಕಲ್ಲವೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಯೆಗೆ ಧನ್ಯವಾದಗಳು ಗೋಪಿನಾಥ್ ಸರ್. ಹಾಗೇಯೆ ಕೆಲವು ಬದಲಾವಣೆಗಳನ್ನು ತಿಳಿಸಿ ಕವನದ ಅಂದವನ್ನು ಹೆಚ್ಚಿಸಿದ್ದೀರ ಅದಕ್ಕೂ ಸಹ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಸಂತ್ ಅವರೇ ಕವನ ತುಂಬಾ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತುಂಬಾ ಧನ್ಯವಾದಗಳು ragosha ಸರ್ ನಿಮ್ಮ ಪ್ರತಿಕ್ರಿಯೆಗೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ ವಸಂತ್ ನನಗೆ ಸರ್ ಅಂತ ಕರೆದಿದ್ದೀರಾ ನಾನು ಪುರುಷ ಅಲ್ಲ, ಸ್ತ್ರೀ ದಯವಿಟ್ಟು ನನ್ನ ಪ್ರೊಫೈಲ್ ಗಮನಿಸಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಸ೦ತ್, ಏನೆ೦ದು ಪ್ರತಿಕ್ರಿಯಿಸಬೇಕೆ೦ದೇ ಗೊತ್ತಾಗುತ್ತಿಲ್ಲ! ಕವನದಿ೦ದ ಕವನಕ್ಕೆ ತಾವು "ನಿರಾಶಾ ಪ್ರೇಮ ಕವಿ"ಯ ಪಟ್ಟಕ್ಕೆ ಹತ್ತಿರವಾಗುತ್ತಿದ್ದೀರಿ, ಕವನ ಮಾತ್ರ ತು೦ಬಾ ಭಾವಪೂರ್ಣವಾಗಿ ಹೃದಯಕ್ಕೆ ತಟ್ಟುವ೦ತಿದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಆತ್ಮೀಯ ಮಾತುಗಳಿಗೆ ಏನು ಹೇಳಬೇಕೊ ನನಗೂ ತಿಳಿಯುತ್ತಿಲ್ಲ ಮಂಜು ಸರ್. ನನ್ನ ಈ ಬದಲಾವಣೆಗೆ ಸಂಪದಿಗರೇ ಕಾರಣ ಎಂದು ಮಾತ್ರ ಹೇಳಬಲ್ಲೆ. ನನ್ನ ಕವನಗಳನ್ನು ತಿದ್ದಿ ತಿಳಿಸಿ ಅಂದಗೋಳಿಸಿದ್ದಕ್ಕೆ ನಿಮಗೆಲ್ಲರಿಗೂ ನನ್ನ ಹೃದಯ ಪೂರ್ವಕ ವಂದನೆಗಳನ್ನು ತಿಳಿಸುತ್ತೇನೆ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಸಂತ್ ಇಲ್ಲಿ ಗಮನಿಸಿ ಅಂದ ಗೊಳಿಸದ್ದಕ್ಕೆ-ಅಂದರೆ ವಿರುದ್ಧ ಅರ್ಥ ಬರುತ್ತೆ, ಆ ಶಬ್ದ ಅಂದ ಗೊಳಿಸಿದುದಕ್ಕೆಅಂತ ಆಗಬೇಕಿತ್ತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸರ್ ಈ ಪದವನ್ನು ಗಮನಿಸಿರಲಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದಿನದಿ೦ದ ದಿನಕ್ಕೆ “ ಚಿರವಿರಹಿ“ ಯಾಗುವತ್ತ ವಸ೦ತ್! ನಮ್ಮ ಸ೦ಸ್ಥೆಗೆ ಮತ್ತೊಬ್ಬ ಕವಿಯ ಸೇರ್ಪಡೆ! ಚೆನ್ನಾಗಿದೆ. ಪದಗಳ ಬಳಕೆ ಹಾಗೂ ಜೋಡಣೆಯ ಬಗ್ಗೆ ಇನ್ನೂ ಸ್ವಲ್ಪ ಗಮನಹರಿಸಿ. ಉತ್ತಮ ಕವಿಯಾಗುವತ್ತ ದಾಪುಗಾಲಿಕ್ಕುತ್ತಿದ್ದೀರಿ. ಸ೦ತಸವಾಯಿತು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮಗಳ ಆಶೀರ್ವಾದ ನನ್ನ ಮೇಲಿರುವ ತನಕ. ನನಗೆಂದೂ ಸೋಲಿವೆಂದುಕೊಳ್ಳುತ್ತೇನೆ ನಾವಡ ಸರ್. ನಿಮ್ಮ ಪ್ರತಿಕ್ರಿಯೆಗೆ ತುಂಬಾ ಧನ್ಯವಾದಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕವನ ಚೆನ್ನಾಗಿದೆ ರಾಘವೇಂದ್ರರಿಗೆ ನಿಮಗೆ ಆಶೀರ್ವಾದ ಕೊಡುವಷ್ಟು ದೊಡ್ಡ ಮಗಳಿದ್ದಾಳಾ? ಬೇಸರಿಸದಿರಿ ,ತಮಾಷೆಗಂದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಸಣ್ಣ ತಪ್ಪಿಗೆ ಕ್ಷಮೆಯಿರಲಿ ragosha ಮೇಡಂ. ನಾನು ನಿಮ್ಮ ಪ್ರೋಪೈಲ್ ನೋಡದೇ ಸರ್ ಎಂದು ಪ್ರತಿಕ್ರಿಯೆಸಿ ಬಿಟ್ಟೆ. ಈ ಸಣ್ಣ ತಪ್ಪನ್ನು ಮನಸ್ಸಿಗೆ ಅಚ್ಚಿಕೊಳ್ಳಬೇಡಿ ವಂದನೆಗಳೊಂದಿಗೆ. ವಸಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.