vidyakumargv ರವರ ಬ್ಲಾಗ್

'ದೃಶ್ಯ' ಚಿತ್ರ ವಿಮರ್ಶೆ

ಜೀವನದಲ್ಲಿ ಅದೆಷ್ಟೋ ಘಟನೆಗಳು ನಡೆದು ಹೋಗುತ್ತವೆ ಯಾವೂ ನಮ್ಮ ಹಿಡಿತದಲ್ಲಿ ಇರುವುದಿಲ್ಲ. ಹುಟ್ಟೇ ಒಂದು ಆಕಸ್ಮಿಕ, ಇನ್ನು ಸಾವಿನ ಕತೆ ಹಾಗಿರಲಿ. ನೀವು ಏನೂ ತಪ್ಪು ಮಾಡದೆ ನಿಮ್ಮನ್ನಾರೋ ಹಿಂಸಿಸಿದರೆ ಹೇಗಿರುತ್ತೆ? ನೀವು, ನಿಮ್ಮವರು ಅಂತ ಇದ್ದ ನಿಮ್ಮ ಪುಟ್ಟ ಗೂಡು ಬಿರುಗಾಳಿಗೆ ಬಲಿಯಾದರೆ? ಯಾವುದೋ ವಿಷಸರ್ಪ; ಗೂಡಿಗೆ ಬಂದು ನಿಮ್ಮವರನ್ನು ಕಚ್ಚಿದರೆ? ಈ ಯಾವ ಕಹಿ ಘಟನೆಯೂ ನಮ್ಮ ಕೈನಲ್ಲಿ ಇಲ್ಲ ಆದರೆ ಇಂತಹ ಘಟನೆಗಳು ಯಾರ ಜೀವನದಲ್ಲೂ, ಯಾವಗಳಿಗೆಯಲ್ಲೂ ಸಂಭವಿಸಬಹುದು, ಸಂಭವಿಸುತ್ತಿರುತ್ತವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.3 (3 votes)
To prevent automated spam submissions leave this field empty.

ನಿಮ್ಮ ಗೂಗಲ್ ಮೆದುಳಿಗೊಂದು ಕೈಪಿಡಿ

ಗೂಗಲ್ಲಿಗೆ ಇನ್ನೂ ಟೀನ್ ಏಜು. ಮೊನ್ನೆ ತಾನೆ ಹದಿನಾರು ವರ್ಷ ತುಂಬಿತು. ಈ ಅಲ್ಪಾವದಿಯಲ್ಲೇ ಗೂಗಲ್ ಎಲ್ಲರ ಮೆಚ್ಚಿನ ಹುಡುಗ ಮಾತ್ರ ಅಲ್ಲ ಎಲ್ಲರಿಗೂ ಬೇಕಾದವ! ಗೂಗಲ್ ಇಲ್ಲದೆ ಬದುಕುವುದನ್ನೊಮ್ಮೆ ಯೋಚಿಸಿನೋಡಿ. "ಏನ್ ಸ್ವಾಮಿ ಮೆದುಳೇ ಇಲ್ಲದೆ ಬದುಕುವುದುಂಟಾ?!" ಅಂತಾರೆ ಇವತ್ತಿನ ಜನ. ಮಕ್ಕಳ ಅಸಾಯಿನ್‍ಮೆಂಟು ಹುಡುಕಿ ಕೊಡುವುದರಿಂದ ಹಿಡಿದು, ಕಂದಮ್ಮಗಳಿಗೆ ನಾಮಕರಣಮಾಡಲು ಹೆಸರು ಹುಡುಕುವವರೆಗೆ ಗೂಗಲ್ ಕೆಲಸಮಾಡುತ್ತಿದೆ. "ಗೂಗಲ್ ಏನು ಬೇಕಾದ್ರು ಹುಡುಕಿಕೊಡುತ್ತೆ ಅಂತೀರಲ್ಲಾ, ನನ್ನ್ ಚಪ್ಪಲ್ ಹುಡುಕ್ಲಿ ನೋಡಣ" ಹೀಗಂತ ಅಪಹಾಸ್ಯ ಮಾಡಿದ್ದುಂಟು. ಆದ್ರೇ ಇವತ್ತು ಅದೇ ಜನ "ಹೇಳ್ ಗುರು ಯಾವ್ ದೇವಸ್ಥಾನ್ದ್ ಹತ್ರ ಚಪ್ಲಿ ಬಿಟ್ಟಿದ್ದಿ, ಗೂಗಲ್ ಮ್ಯಾಪ್ ನಲ್ಲಿ ಹುಡ್ಕೋಣ ಅಂತಾರೆ".

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಈ ಕ್ಷಣ 'ಬಿ ಅಲರ್ಟ್'

ಜೀವನಾವಧಿ ಅಲ್ಪ, ಬಯಕೆಗಳು ಭೋಗ ವಸ್ತುಗಳು ಬಹಳ, ಯಾವನು ಇತರರಿಗಾಗಿ ಬದುಕುತ್ತಾನೋ ಅವನೇ ನಿಜವಾಗಿ ಬದುಕುತ್ತಾನೆ. ತಮಸ್ಸಿನಲ್ಲಿ ಅಂದರೆ ಬ್ರಮೆಯಲ್ಲಿ, ಆಲಸ್ಯದಲ್ಲಿ ಕಳೆವ ಸಮಯ ಸಾವಿಗೆ ಸಮ. ಅಹಂಕಾರ, ಅಲ್ಪತನ, ಸಿಟ್ಟು, ಲೋಭ, ಮೊಹಗಳು ನರಕವೇ ಹೊರತು ಮತ್ತೇನಲ್ಲ. ಪ್ರತಿ ಕ್ಷಣ, ಪ್ರತಿ ನಿಮಿಷ, ಜೀವನದಲ್ಲಿ ಎಚ್ಚರಿಕೆಯಿಂದ ಬದುಕುವವನೆ ಬದುಕುತ್ತಾನೆ. ನಾನು ತೂಕಡಿಸುತ್ತಿರ ಬಹುದಾದ ಈ ಕ್ಷಣ ಮತ್ತಾರಿಗೋ ಸಾಯಲು ಕೊನೆಯ ಕ್ಷಣವಾಗಿರ ಬಹುದು, ಅಪಘಾತದ ಮುಂಚಿನ ಕ್ಷಣವಾಗಿರ ಬಹುದು, ಪರೀಕ್ಷೆಯ ಕೊನೆಯ ಕ್ಷಣವಾಗಿರ ಬಹುದು. ಜೀವನ ಈ ಕ್ಷಣ ನಮ್ಮ ಬಳಿಯಿರಲು, ಕೊನೆಯ ಉಸಿರು ಉಳಿದಿರುವ ವರೆಗು ನಮಗೆ ಅಸಾಧ್ಯವಾದದ್ದು ಮತ್ತೊಂದಿಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಅಮ್ಮನ ಪ್ರೀತಿ

ಅಮ್ಮ ನಿನ್ನ ಬಗೆಗೆ ಬರೆಯ ಹೊರಟೆ
ಬರಿಯ ಪದಗಳು ನಿಲುಕವು ಆ ನಿನ್ನ ಪ್ರೀತಿ
ಬಿಡಿಸಿದೆ ಬಣ್ಣವ ಸಿಡಿಸಿದೆ
ತೋರಲಾಗದೆ ಹೋದೆ ನಿನ್ನ ಮಮತೆಯ ರೀತಿ
ಅಮ್ಮ ನಿನ್ನ ಹಿಡಿಯಲಾರೆ
ನಿನ್ನ ಪೂರ್ಣ ಅರಿಯಲಾರೆ
ಬೆಳೆದರೆಷ್ಟು ಎತ್ತರ
ಕೂಸೆ ಅಲ್ಲವೆ ಎಂದಿಗೂ ನಾನು
ಅಮ್ಮನೆ ತಾನೆ ಎಂದೆಂದಿಗೂ ನೀನು
ಅಮ್ಮನಿಗೂ ಹಸಿವಿಗೂ ಅದೆಂತ ಜೋಡಿ?
ಅಮ್ಮನ ಬಗೆಗೆ ಬರೆಯ ಹೊರಟೆ
ಬರೆವುದ ನಿಲ್ಲಿಸಿ ಅಡುಗೆ ಕೋಣೆಗೆ ಓಡಿದೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಸದ್ಯಕ್ಕೆ ತಪಸ್ಸೇ ಬ್ರಹ್ಮ

ಪುಟಾಣಿ ಬಾಲಕ ಗುರುವಿನೊಡನೆ ವಿನಮ್ರವಾಗಿ "ಹೇ ಗುರುವೆ ನನಗೆ ಬ್ರಹ್ಮವನ್ನು ಉಪದೇಶಿಸು" ಎಂದು ಕೇಳುತ್ತದೆ. ಬಾಲ್ಯದಲ್ಲಿ ಬ್ರಹ್ಮವನ್ನ ಅರಿಯ ಹೊರಟ ಬಾಲಕನನ್ನ ಮನದಲ್ಲೇ ಮೆಚ್ಚಿದ ಗುರುವು ನಗುತ್ತ. "ಮಗು, ನಿನಗೆ ಸದ್ಯಕ್ಕೆ ತಪಸ್ಸೇ ಬ್ರಹ್ಮ, ತಪಸ್ಸಿನಿಂದಲೇ ನೀನು ಅವನನ್ನು ಅರಿತುಕೊಳ್ಳಬಹುದು. ಯಾವುದರಿಂದ ಜೀವಿಗಳು ಹುಟ್ಟಿವಿಯೋ, ಯಾವುದರಿಂದ ಬದುಕುತ್ತಿವಿಯೊ, ಕೊನೆಗೆ ಯಾವುದನ್ನು ಅವು ಸೇರುತ್ತವೆಯೊ ಅದೇ ಬ್ರಹ್ಮ, ಈ ಪರಿಜ್ಞಾನ ನಿನ್ನೊಂದಿಗಿರಲಿ" ಎಂದು ಹೇಳಿ ಗುರುವು ತೆರಳುತ್ತಾನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

Pages

Subscribe to RSS - vidyakumargv ರವರ ಬ್ಲಾಗ್