ನೋಡಿ ಹೇಳೋದು ಮರತೇ ಬಿಟ್ಟೆ

0

ಮೊನ್ನೆ ಆಬ್ಸೆಂಟ್ ಮೈಂಡ್ ಬಗ್ಗೆ ಬರೆದಾಗಲೇ ಈ ವಿಷಯವನ್ನು ಹೇಳಬೇಕೆಂದಿದ್ದೆ , ಮರೆತೇ ಬಿಟ್ಟೆ ನೋಡಿ . ಹೋಗ್ಲಿ ಆ ಕಾರಣಕ್ಕಾದರೂ ಇನ್ನೊಂದು ಬ್ಲಾಗ್ ಬರೆಯೋ ಅವಕಾಶವಾಯಿತು .
ಈ ಆಬ್ಸೆಂಟ್ ಮೈಂಡ್ಗೂ ಮರೆವಿಗೂ ಬಹಳ ಹತ್ತಿರವಾದ ಸಂಬಂಧವಿದೆ ಅನ್ಸುತ್ತೆ .ಆಬ್ಸೆಂಟ್ ಮೈಂಡ್ ಅಂದ್ರೆ ಮನುಷ್ಯ ಗೊತ್ತಿದ್ದೂ ಗೊತ್ತಿಲ್ಲದಂತೆ ತನ್ನ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುವುದು. ಕೆಲವೊಮ್ಮೆ ಇದರ ಜೊತೆಗೆ ಮರೆವು ಸೇರಿಬಿಟ್ಟರೆ ಪರಿಸ್ಥಿತಿ ಸ್ವಲ್ಪ ಕಷ್ಟವಾಗಿಬಿಡುತ್ತದೆ .ಈಗೊಂದು ತಿಂಗಳ ಹಿಂದೆ ಆದ ಘಟನೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ .
"ಅಂದು ನನ್ ಅಕ್ಕನ ಮನೆಯಲ್ಲಿ ಅದೇನೋ ಕಾರ್ಯಕ್ರಮವಿತ್ತು , ಸ್ವಲ್ಪ ಕೆಲಸವಿದ್ದ ಕಾರಣ ಬೆಳಿಗ್ಗೆ ಎಂದಿನಂತೆ ಆಫೀಸ್ಗೆ ಬಂದು ಮಧ್ಯಾನದ ಮೇಲೆ ಅಲ್ಲಿಗೆ ಹೊಗೊದೆಂದು ನಿರ್ಧರಿಸಿದ್ದೆ .ಎಂದಿನಂತೆ ತಡವಾಗಿ ಎದ್ದು ಗಡಿಬಿಡಿ ಅಲ್ಲಿ ಆಫೀಸ್ ಗೆ ಬಂದು ಕೆಲಸ ಮುಗಿಸಿ ೧೨.೦೦ ಕ್ಕೆ ಅಲ್ಲಿಂದ ಹೊರಟೆ . ಹೊಟ್ಟೆ ಬೇರೆ ತಳಮಳ ಶುರುಮಾಡಿತ್ತು , ಬೆಳಗಿನ ಗಡಿಬಿಡಿ ಅಲ್ಲಿ ಏನು ತಿಂದಿರಲಿಲ್ಲ . ಬಸ್ ನಿಲ್ದಾಣದ ಮುಂದೆ ಬಂದು ನಿಂತೇ , ಅಲ್ಲಿಯೇ ಬೇಕರಿ ಇದ್ದಿದ್ದರಿಂದ ಸಾಫ್ಟ್ ಡ್ರಿಂಕ್ ಮತ್ತು ಅದೇನೋ ಕಣ್ಣಿಗೆ ಸ್ವಲ್ಪ ದೊಡ್ಡದಾಗಿ ಕಂಡಿದ್ದು ತಿನ್ನುತ್ತಾ ನಿಂತಿದ್ದೆ . ಅಷ್ಟರಲ್ಲಿ ಬಂತು ನೋಡಿ ನಾನು ಹೋಗಬೇಕಾಗಿದ್ದ ಬಸ್ , ಎಲ್ಲರನ್ನು ತಳ್ಳಿ ಹತ್ತಿಕುಳಿತುಕೊಂಡೆ , ಅಬ್ಬ ಸೀಟು ಸಿಕ್ತಲ್ಲ ಅಂತಲ್ಲ ಮನಸಲ್ಲೇ ಖುಷಿಪಡುತ್ತಿರುವಾಗಲೇ ತಕ್ಷಣ ನೆನಪಾಯಿತು ನೋಡಿ ಹ್ಮಂ ಬೇಕರಿಯವನಿಗೆ ದುಡ್ಡೇ ಕೊಟ್ಟಿಲ್ಲವಲ್ಲ ಅಂತ , ಸಧ್ಯ ನಾನು ಬಸ್ ಹತ್ತುವಾಗ ಅವನು ಒಮ್ಮೆ ಕಳ್ಳ ಕಳ್ಳ ಅಂತ ಕೂಗಿ ಕೊಂಡಿದ್ದರೂ ಅಂದು ನನಗೆ ಧರ್ಮದೇಟು ಗ್ಯಾರೆಂಟಿ ಬಿಳ್ತಿತ್ತು. ಅವ ನನ್ನ ಗಮನಿಸಲಿಲ್ಲವೇನೋ ಹಾಗೇನೂ ಆಗಲಿಲ್ಲ .
ಮಾಡಿದ್ದು ತಪ್ಪು ಆದರು ಆ ಕ್ಷಣದಲ್ಲಿ ಏನು ಮಾಡುವಹಾಗಿರಲಿಲ್ಲ , ವಾಪಸ್ ಬರುವಾಗ ಹೋಗಿ ಮರೆತು ಹೋಯಿತು ಅಂತ ಹೇಳಿ ದುಡ್ಡು ಕೊಡೋಣ ಅನ್ಕೊಂಡು ಸುಮ್ಮನಾದೆ. ನಿಜವಾದ ತೊಂದರೆ ಇದ್ದಿದ್ದು ಇವಾಗ , ನಾನು ಆ ಕಡೆ ಬರುತ್ತಿರೋದು ನೋಡಿ ಆತ ಕಳ್ಳ ಕಳ್ಳ ಕೂಗಿಕೊಂಡರೆ ಮರ್ಯಾದೆ ಏನ್ ಆಗಬೇಡ .ಅಂತು ಧೈರ್ಯ ಮಾಡಿ ಏನಾದರು ಆಗಲಿ ಅಂತ ವಾಪಸ್ ಬರುವಾಗ ಆ ಕಡೆ ಹೋದೆ .ಅಬ್ಬ , ಅಲ್ಲಿ ಅವರ ಮಡದಿ ಇದ್ದರು , ಬೆಳಿಗ್ಗೆ ನಡೆದಿದ್ದು ಹೇಳಿ ನಿಮ್ ಮನೆಯವರಿಗೆ ಹೇಳ್ಬಿಡಿ ಅಂತ ಹಣ ಕೊಟ್ಟೆ .ಆದರೂ ಮನಸಿನಲ್ಲಿ ಭಯ , ಆಕಸ್ಮಾತ್ ಇವರು ಮರೆತು ಹೇಳದೇ ಹೋದರೆ ಹೋದರೆ , ನಾಳೆ ನಾನು ಇಲ್ಲಿ ಬಂದಾಗ ಮತ್ತೆ ಇವರು ಗಲಾಟೆ ಮಾಡಿದರೆ ?
ಕೆಲವೊಮ್ಮೆ ಏನೋ ಮಾಡಲು ಹೋಗಿ ಇನ್ನೇನೋ ಮಾಡಿಬಿಡುತ್ತೇವೆ , ನಾನು ಮಾಡಿದ್ದು ಹಾಗೆ .ಯೋಚಿಸುತ್ತ ನಿಂತವನಿಗೆ ಅಲ್ಲೇ ಪಕ್ಕದಲ್ಲಿ ಬೆಳಿಗ್ಗೆ ನೋಡಿದ್ದ ಆ ಅಂಗಡಿಯವನನ್ನೇ ನೋಡಿದ ಹಾಗಾಯಿತು , ಅಬ್ಬಾ ಒಮ್ಮೆ ಇವರಲ್ಲೂ ಹೇಳಿ ಬಿಡೋಣ ಅಂತ "ಸರ್ ಬೆಳಿಗ್ಗೆ ಮಿಸ್ ಆಯಿತು , ನಿಮ್ಮ ಮನೆಯವರ ಹತ್ತಿರ ಈಗ ಹಣ ಕೊಟ್ಟಿದ್ದೇನೆ ಅಂದೇ ", ಅವರು ಯಾವ ಹಣ? , ಯಾರ ಬಳಿ ಕೊಟ್ಟಿದ್ದೀರ? ಯಾಕೆ ? ಅನ್ನಬೇಕೆ .ಆಮೇಲೆ ಗೊತ್ತಾಗಿದ್ದು ಅವರು ಆ ಅಂಗಡಿಯವರಲ್ಲ , ಅಲ್ಲೇ ಪಕ್ಕದಲ್ಲಿರುವ ಟ್ರಾವೆಲ್ ಏಜೆನ್ಸೀಯವರು ಎಂದು. ಈಗಂತೂ ಫುಲ್ಲ್ ಶೇಮ್ ಆಗಿತ್ತು , ಕೊನೆಗೆ ಆ ಅಂಗಡಿಯವರ ಮಡದಿ ನಾನು ಹೇಳ್ತಿನಪ್ಪ ನಿನ್ ಹೋಗು ಅಡ್ದಿಲ್ಲ ಅಂದ್ರೂ , ಒಮ್ಮೆ ನನ್ನನ್ನು ನೋಡಿ ನಾನೇ ನಕ್ಕೂ ವಾಪಸ್ ಬಂದೆ ."

ಅಂತೂ ವಾರಕ್ಕೊಂದು ಎಡವಟ್ಟು ಮಾಡುತ್ತಾ ಇದ್ದೀನಿ :D :D
ನಿಮಗೂ ಹೀಗೆ ಆಗಿರಬಹುದು ಅಲ್ವಾ ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಹೌದು...ನಾನೊಂದ್ಸಲ ಏನೋ ಯೋಚನೆ ಮಾಡ್ತಾ production data ಎಲ್ಲಾ ಡಿಲೀಟ್ ಮಾಡ್ಬಿಟ್ಟಿದ್ದೆ...delete ಅಲ್ಲ truncate ಮಾಡಿದ್ದೆ. Backup ಇದ್ದಿದ್ದಕ್ಕೆ ಸರಿಹೋಯ್ತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನನ್ನ ಮರೆವಿನ ಬಗ್ಗೆ ಬರೀ ಬೇಕೂ ಅಂತಾ ನಾ ಕೂತ್ಕೊಂಡ್ರೆ , ನಾನ್ ಏನ್ ಬರೀಬೇಕೂ ಅಂತಾ ಕೂತ್ಕೊಂಡೇ ಅಂತಾ ಮರೆತು ಕರ್ಜರ್ ಮೇಲೆ ಕೆಳಗೆ ಆಡಿಸಿದರೆ ಮೂಲ ಲೇಖನಾನೂ ಕಾಣ್ಬೇಡ್ವೇ! ಸರಿ ನೆನಪಾಯ್ತು, ಅದೇ ನನ್ನ ಮರೆವಿನ ಬಗ್ಗೆ ಬರೀಬೇಕೂ ಅಂತಾ.
* ಮೋಟಾರ್ ಬೈಕ್ ಪೇಟೆಯಲ್ಲಿ ನಿಲ್ಲಿಸಿ ಆಟೋ ಹತ್ತಿ ಮನೆಗೆ ಬಂದಿರೋದು ಕನಿಷ್ಟ ನಾಲ್ಕೈದು ಸಲ. ನಿಖರವಾಗಿ ಎಷ್ಟು ಸಲ ಅಂತಾ ಮರೆತು ಹೋಗಿದೆ.
* ಮೂವತ್ತು ವರ್ಷದ ಮಾತು. ಆದರೂ ಮರೆತಿಲ್ಲ ನೋಡಿ.ನನ್ ಫ್ರೆಂಡು ಮದುವೆಯಾಗಿ ಎರಡು ತಿಂಗಳಾಗಿತ್ತಷ್ಟೆ. ಪುಣ್ಯಾತ್ಮ ಮಾರ್ಕೆಟ್ ಗೆ ಪತ್ನಿ ಕರೆದುಕೊಂಡು ಹೋದ. ಪತ್ನಿ ತರಕಾರಿ ವಿಚಾರಿಸ್ತಾ ನಿಂತುಕೊಂಡಿದ್ಲು, ನನ್ ಫ್ರೆಂಡ್ ಅದೇನೋ ತಗೋಳ್ಬೇಕೂ ಅಂತಾ ಮುಂದೆ ಒಂದ್ ಅಂಗಡೀಗೆ ಬಂದ. ನಾನೂ ಅಲ್ಲೇ ಏನೋ ತೆಗೆದುಕೊಳ್ತಾ ನಿಂತಿದ್ದೆ. ಅಲ್ಲಿ ಒಂದು ಹತ್ತು ನಿಮಿಷ ವ್ಯಾಪಾರ ಆಯ್ತು. ಇವ್ನು ಅವನ ಹೆಂಡತಿಯನ್ನು ಕರೆದುಕೊಂಡು ಬಂದಿದ್ದಾನೆಂದು ನಂಗೆ ಗೊತ್ತಿಲ್ಲ. ಅಂಗಡಿಯಲ್ಲಿ ವ್ಯಾಪಾರ ಮುಗಿಸಿದ ಮೇಲೆ ನಮ್ಮ ಮಾಮೂಲಿ ಹೋಟೆಲ್ ಗೆ ಹೋಗಿ ಕಾಫೀ ಕುಡಿದು ನಾನು ಬೈಕ್ ಹತ್ತಿದೆ. ಹಿಂದೆ ಅವನೂ ಕೂತ. ಅವರ ಮನೆ ಮುಂದೆ ನಿಲ್ಲಿಸಿದೆ. ಮನೆ ಬಾಗಿಲು ಬೀಗ ಹಾಕಿದೆ! ಎಲ್ಲಯ್ಯಾ ನಿನ್ ಪತ್ನಿ? ಅಂತಾ ಕೇಳಿದಾಗಲೇ ಅವನಿಗೆ ತನ್ನ ಮರೆವಿನ ಅರಿವಾಗಿದ್ದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಸರ್ ಓದಿ ಪ್ರತಿಕ್ರಿಯಿಸಿ , ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ .

<<ಮನೆ ಬಾಗಿಲು ಬೀಗ ಹಾಕಿದೆ! ಎಲ್ಲಯ್ಯಾ ನಿನ್ ಪತ್ನಿ? ಅಂತಾ ಕೇಳಿದಾಗಲೇ ಅವನಿಗೆ ತನ್ನ ಮರೆವಿನ ಅರಿವಾಗಿದ್ದು>>

:D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಪ್ರದೀಪ್ ಓದಿ ಪ್ರತಿಕ್ರಿಯಿಸಿ , ನಿಮ್ಮ ಅನುಭವಗಳನ್ನು ಹಂಚಿಕೊಂಡಿದ್ದಕ್ಕೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.