ಬದುಕು ಭಾವ ಮತ್ತು ನಾನು - ೪ ( ನನ್ನ ಮೊದಲ ಕುಪ್ಪಳ್ಳಿ ಪಯಣ )

0

ಬೇಗ ಹೊರಡೋ ಬಿಸಿಲು ಜಾಸ್ತಿಯಾದ ಮೇಲೆ ಅಷ್ಟು ದೂರ ನಡಿಯೋಕೆ ಸುಸ್ತಾಗುತ್ತೆ ,ಬಚ್ಚಲು ಮನೆಯಲ್ಲಿ ನನ್ನ ಗಾಯನವನ್ನು ಪ್ರದರ್ಶಿಸುತಿದ್ದ ನನಗೆ ಅತ್ತ ಕಡೆ ಇಂದ ಅಮ್ಮನ ಕೂಗು ಕೇಳಿಬಂತು .ಹೇರಂಭಾಪುರ ಎಂಬಲ್ಲಿ ಒಂದು ಊಟದ ಮನೆ ಇತ್ತು , ಅಮ್ಮ ಹಿಂದಿನ ದಿನವಷ್ಟೇ ಹೊಗಿಬಂದಿದ್ದರಿಂದ ಈಗ ಸರತಿ ನನ್ನದಾಗಿತ್ತು . ಬೇಗ ಬೇಗ ಸಂಧ್ಯಾವಂದನೆ , ಪೂಜೆ ಮುಗಿಸಿ ಹೊರಡಲು ಅಣಿಯಾದೆ . ನಮ್ಮ ಮನೆ ಇಂದ ೫ ಕಿ ಮಿ ಅಷ್ಟೇ .ಒಳದಾರಿ ಯಾಗಿದ್ದರಿಂದ ಇಷ್ಟು ಅಂತರ , ಮುಖ್ಯ ಮಾರ್ಗವಾಗೆ ಹೋಗುವುದಾದರೆ ೧೦ ಕಿ ಮಿ ಆಗುತ್ತೆ .ಸಾಮಾನ್ಯವಾಗಿ ಬೇಸಿಗೆಯಲ್ಲಿ ನಮ್ಮ ಕಡೆ ದಿನಕ್ಕೊಂದು ಊಟದ ಮನೆ ಇದ್ದೆ ಇರುತ್ತೆ .ಹೋಗಲೇಬೇಕು ಜನಬಳಕೆ ಇರಬೇಕಲ್ಲ ಅದಕ್ಕೆ . ಬಿಳಿ ಪಂಚೆ ,ಶರ್ಟ್ ಹಾಗೆಯೇ ದಪ್ಪ ಕೆಮ್ಪಂಚು ಇರುವ ಶಲ್ಯ ಧರಿಸಿ ಹೊರಟೆ . ಈ ಹೇರಂಭಾಪುರದ ಬಗ್ಗೆ ನಿಮಗೆ ಹೇಳಲೇ ಬೇಕು . ಇಲ್ಲಿರುವ ದೇವಸ್ತಾನದ ಹೆಸರು ಜಲದುರ್ಗಂಬ ಎಂದು .ವಿಶೇಷ ಏನಪ್ಪಾ ಅಂದ್ರೆ ಇಲ್ಲಿ ವರ್ಷದ ಎಲ್ಲಾ ಕಾಲದಲ್ಲೂ ಅಮ್ಮನವರು ಇರುವ ಗರ್ಭಗುಡಿ ಯಲ್ಲಿ ಸದಾ ನೀರು( ಜಲ ಏಳುತ್ತದೆ ) ಇದ್ದೆ ಇರುತ್ತೆ . ಕುಪ್ಪಳ್ಳಿ ಗೆ ನೀವು ಬೇಟಿ ಕೊಡುವುದಾದರೆ ಇಲ್ಲಿಗೂ ಒಮ್ಮೆ ಹೋಗಿ ಬನ್ನಿ .ಹೇರಂಭಾಪುರದ ಗುಡ್ಡದ ಮೇಲೆ ಬಂದು ನಿತ್ತಾಗ ನನಗೆ ನೆನಪಾಗಿದ್ದೆ ನನ್ನ ಮೊದಲ ಕುಪ್ಪಳ್ಳಿ ಪಯಣ .ಆಗ ನಾನಿನ್ನು ೯ ನೇ ತರಗತಿಯಲ್ಲಿದ್ದೆ , ನಮಗೆ ತೀರಾ ಹತ್ತಿರವಿದ್ದರೂ ಒಮ್ಮೆಯೂ ನೋಡಿರಲಿಲ್ಲ ನಾನು ಕುಪ್ಪಳ್ಳಿಯನ್ನು .ಅದು ಒಂದು ಕಾರಣವಾದರೆ ಇನ್ನೊಂದು ಕಾರಣ ,ಹಿಂದಿನ ವರ್ಷವಿಡಿ ಬಾಯಿ ಪಾಠ ಮಾಡಿದ್ದ " ಓ ನನ್ನ ಚೇತನ ಆಗು ನೀ ಅನಿಕೇತನ " ಪದ್ಯ .ಈ ಪದ್ಯ ವನ್ನು ನಾವು (ಅಂದರೆ ೮ ನೇ ತರಗತಿಯವರು ) ಎಲ್ಲರು ಸೇರಿ ೧೦ ನೇ ತರಗತಿಯವರಿಗೆ ಬಿಳ್ಕೊಡುಗೆ ಕೊಡುವಾಗ ಹಾಡಿದ್ದೆವು , ಇಲ್ಲಿ ನಮ್ಮ ಕನ್ನಡ ಶಿಕ್ಷಕರನ್ನು ನಾನು ನೆನಪಿಸಿಕೊಳ್ಳಲೇಬೇಕು . ಸತತ ಒಂದು ತಿಂಗಳು ಈ ಹಾಡನ್ನು ರಾಗ ಪೂರ್ಣವಾಗಿ ಹಾಡಲು ಅಭ್ಯಾಸ ಮಾಡಿಸಿದ್ದರು ಅವರು ( ನಿಮಗಿದೋ ಒಂದನೇ ಸಾರ್ ).ಅಂತು ಕಾಲ ಕೂಡಿ ಬಂತು , ಒಂದು ಶನಿವಾರ ನಾವು ೮ ಮಂದಿ ಕೂಡಿ ಹೋಗುವುದು ಎಂದು ನಿರ್ಧರಿಸಿದೆವು .ನಮ್ಮಲಿ ೪ ರ ಬಳಿ ಸೈಕಲ್ ಇತ್ತು (ನನ್ನ ಬಳಿಯೇ ಇರಲಿಲ್ಲ , ಹಾಗೆಯೇ ನನಗೆ ಇಬ್ಬರನ್ನು ಕೂಡಿಸಿಕೊಂಡು ಹೊಡಿಯೋಕೆ ಕೂಡ ಬರುತ್ತಿರಲಿಲ್ಲ ).ಅದರಲ್ಲಿ ೩ ವರಿಗೆ ಸೈಕಲ್ ಹೊಡೆಯಲು ಬರುತ್ತಿರಲಿಲ್ಲ (ಹೆಸರು ನೆನಪಿದೆ ಅದಕ್ಕೆ ಬರೆದುಬಿಡುತ್ತೇನೆ : ಇನ್ಜಿತ್ , ಕೀರ್ತಿ , ಸುಮಂತ್ , ಸಂದೇಶ ,ಸಂತೋಷ ,ಸುನೀಲ, ಮಂಜುನಾಥ ).ಆ ಶನಿವಾರ ಮುಖ್ಯಶಿಕ್ಷಕರಲ್ಲಿ ಮನವಿಮಾಡಿಕೊಂಡು ಸ್ವಲ್ಪ ಬೇಗೆನೆ ಹೊರೆಟೆವು .ಒಂದು ಅರ್ಧ ಕಿ ಮಿ ಇಳಿಜಾರ್ ಆದರೆ ಇನ್ನೊಂದು ಕಿ ಮಿ ಉಬ್ಬು . ಹೀಗೆ ಏನೋ ಹರಟುತ್ತ , ಕುಣಿಯುತ್ತ ಹೋಗುತ್ತಿದ್ದೆವು . ಒಟ್ಟು ೧೦ ಕಿ ಮಿ ಕ್ರಮಿಸಬೇಕಿತ್ತು . ಅರ್ಧ ದಾರಿಗೆ ಬಂದಾಗ ಸಿಗುವುದೇ ಈ ಹೇರಂಭಾಪುರ.ಅಲ್ಲಿಂದ ಸುಮಾರು ೨ ಕಿ ಮಿ ಗಳಷ್ಟು ದೂರ ಕಿರಿದಾದ , ತುಂಬಾ ತಿರುವುಗಳಿರುವ ಇಳಿಜಾರು . ಎಲ್ಲರು ಸೈಕಲ್ ನಿಲ್ಲಿಸಿ , ಎಚ್ಚರಿಕೆಯಿಂದ ಬರುವಂತೆ ಹೇಳಿ ನಾನು ಹಾಗು ಇನ್ನೊಬ್ಬ ಮುಂದೆ ಹೊರೆಟೆವು . ಬೇರೆಯವರಿಗೆ ಬುದ್ದಿ ಮಾತು ಹೇಳಿದ ನಾವು , ಅದನ್ನೇ ಉಲ್ಲಂಘಿಸಿ ಹೋಗುತ್ತಿದ್ದೆವು . ೨ ಕಿ ಮಿ ಬಂದು ಸೈಕಲ್ ನಿಲ್ಲಿಸಿ ಉಳಿದವರ ಬರುವಿಕೆಗಾಗಿ ಕಾಯುತಿದ್ದೆವು .೧ , ೨ , ಉಹು ಬರಲೇ ಇಲ್ಲ ೩ ನೇ ಯದು . ಕಾದು ಕಾದು ಹಿಂತುರುಗಿ ಹೋಗಿ ನೋಡಿದರೆ ಅಲ್ಲಾಗಲೇ ಆಗಿತ್ತು ಅಪಘಾತ . ಬ್ರೇಕ್ ಫೈಲುರ್ ಆಗಿದ್ದರಿಂದ ಅವನು ಸೈಕಲ್ ಅನ್ನು ಅಲ್ಲೇ ಇದ್ದ ಪಕ್ಕದ ದರೆಗೆ ತೆಗೆದುಕೊಂಡು ಹೋಗಿ ಗುದ್ದಿದ್ದ . ಕಾಲು ಮುರಿದಿತ್ತು , ಹಿಂದಗಡೆ ಕುಳಿತವನಿಗೆ ಏನು ಆಗಿರಲಿಲ್ಲ . ಅದೃಷ್ಟ ಚೆನ್ನಾಗಿ ಇತ್ತು ಇನ್ ಒಂದು ಪರ್ಲಂಗ ಮುಂದೆ ಬಂದಿದ್ದಾರೆ ೩೦ ಅಡಿ ಧರೆ ಇಂದ ಬಿದ್ದು ಇಬ್ಬರು ಪರಶಿವನ ಪಾದಸೇರಿಬಿಡುತ್ತಿದ್ದರು .ಅಷ್ಟರಾಗಲೇ ಇನ್ನೊಬ್ಬನ ಕೂಗಿಗೆ ಕೆಳಗಡೆ ಕೆಲಸ ಮಾಡುತಿದ್ದ ತೋಟದವರು ಬಂದು ಅವನನ್ನು ಆಸ್ಪತ್ರೆಗೆ ಕರೆದೊಯ್ಯುವ ವ್ಯವಸ್ತೆ ಮಾಡಿ ಆಗಿತ್ತು .ಆದರೆ ನಮ್ಮಲ್ಲಿ ಒಬ್ಬ ಅವರೊಟ್ಟಿಗೆ ಹೋಗಬೇಕಿತ್ತು , ನಾಯಕನಾಗಿ ಆ ಕ್ಷಣ ನಾನೇ ಹೋಗಬೇಕಿತ್ತು ಆದರೆ ನಾ ಅದನ್ನ ಮಾಡಲಿಲ್ಲ ಎಂಬ ಕೊರಗು ಈಗಲೂ ಇದೆ ನನಗೆ . ಅವನ ಜೊತೆ ಇನ್ನೊಬ್ಬನನ್ನು ಕಳಿಸಿ ನಾವ್ ೬ ಮಂದಿ ಸ್ವಲ್ಪ ಹೊತ್ತು ಅಲ್ಲೇ ಯೋಚಿಸುತ್ತಾ ಕುಳಿತವು , ಮುಂದೇನು ಮಾಡುವುದೆಂದು ?ವಾಪಸ್ ಹೋದರೆ ಇಷ್ಟು ಹೊತ್ತಿಗಾಗಲೇ ಶಾಲೆ ಈರುವ ಊರಲ್ಲಿ ಇಲ್ಲ ಸುದ್ದಿ ಆಗಿ ಬಿಟ್ಟಿರುತ್ತೆ , ಕಂಡಕಂಡವರಿಗೆಲ್ಲ ಉತ್ತರಿಸಬೇಕು ? ಶಾಲೆಯಲ್ಲಿ ಹೆಡ್ ಮಾಸ್ತರ ಕೋಪಕ್ಕೆ ಗುರಿಯಾಗಬೇಕು ( ಮುಖ್ಯವಾಗಿ ನಾನು ). ಆ ಕ್ಷಣಕ್ಕೆ ನನ್ನ ಕ್ರಿಮಿನಲ್ ತಲೆ ಕೆಲಸ ಮಾಡಿಟ್ಟು , ಕಾವಲಿ ಕಾಯಿದಾಗ ತುಪ್ಪ ಸುರಿಯುವುದು ಬೇಡ, ಮುಂದುವರಿಸೋಣ ನಮ್ಮ ಪಯಣ ಅಂದೇ . ಎಲ್ಲರಿಂದ ತೀವ್ರ ಆಕ್ಷೇಪ ಬಂದರು ಎಲ್ಲರಿಗು ಸಮಾದಾನ ಮಾಡಿ ಹೊರಡಿಸಿಕೊಂಡು ಹೊರಟೆ .ಈಗ ಮತ್ತೊಂದು ಸಮಸ್ಯೆ ನನಗೂ ಮತ್ತು ಇನ್ನೊಬ್ಬ , ಇಬ್ಬರಿಗೂ ಡಬ್ಬಲ್ ಹೊಡೆಯಲು ಬರುತ್ತಿರಲಿಲ್ಲ , ಕೊನೆಗೂ ಹೇಗೋ ಧೈರ್ಯಮಾಡಿ ಆ ಕೆಲಸ ನಾನೇ ವಹಿಸಿಕೊಂಡೆ .ಅಂತು ಇಂತೂ ಬಂದಿತ್ತು ಕುಪ್ಪಳ್ಳಿ , ಆ ೨ ಘಂಟೆ ನಾವು ಎಲ್ಲವನ್ನು ಮರೆತು ಕುಪ್ಪಳ್ಳಿ ಯನ್ನು ಮನಸಾರೆ ಅನುಭವಿಸಿದ್ದೆವು .ಎಲ್ಲ ನನ್ನದುಕೊಂಡಂತೆ ಆಗಿತ್ತು , ನಾವು ಮನೆಗಳಿಗೆ ಹೋಗುವಾಗ ರಾತ್ರಿ ಆಗಿತ್ತು . ಮರುದಿನ ಶಾಲೆಯಲ್ಲಿ ಸ್ವಲ್ಪ ಬೈಗುಳ ಬೈಸಿಕೊಂಡರು ಅಷ್ಟೇನೂ ಬೇಜಾರಾಗಲಿಲ್ಲ . ಕಹಿ ಘಟನೆ ನಡೆಯಬಾರದಿತ್ತು ಏನು ಮಾಡುವುದು ಎಲ್ಲವು ಮುಗಿದು ಹೋಗಿತ್ತು .ಮತ್ತೆ ಆ ಸ್ನೇಹಿತನ ಮನೆಗೆ ಎಲ್ಲರು ಹೋಗಿ ಅವನ ಯೋಗಕ್ಷೇಮ ವಿಚಾರಿಸಿಕೊಂಡು ಬಂದೆವು .ಮತ್ತೊಂದು ತಿಂಗಳಲ್ಲಿ ಅವ ಸರಿಯಾಗಿದ್ದ .ಹೀಗಿತ್ತು ನನ್ನ ಕುಪ್ಪಳ್ಳಿ ಪಯಣ .ಹೀಗೆ ಹಳೆಯದನ್ನು ಯೋಚಿಸುತ್ತಾ ನಾನು ದೇವಸ್ಥಾನದ ಹತ್ತಿರ ಬಂದಾಗಿತ್ತು , ಬಾಳೆಲೆ ನನ್ನೇ ನೋಡುತ್ತಿತ್ತು . ಹಃ ಹಿ ಹೀ :D

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಚೆನ್ನಾಗಿತ್ತು ರೀ ನಿಮ್ ಮೊದಲ ಕುಪ್ಪಳ್ಳಿ ಪಯಣ ಆದ್ರು ಬಿದ್ದ ನಿಮ್ಮ ಸ್ನೇಹಿತನ್ನ ಬಿಟ್ಟು ನೀವು enjoy ಮಾಡ್ಬಾರ್ದಿತ್ತು ರೀ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಆದ್ರು ಬಿದ್ದ ನಿಮ್ಮ ಸ್ನೇಹಿತನ್ನ ಬಿಟ್ಟು ನೀವು enjoy ಮಾಡ್ಬಾರ್ದಿತ್ತು ರೀ>>
enjoy ಏನು ಮಾಡಿಲ್ಲ ಅಕ್ಕ , ಸುಮ್ನೆ ಹೋಗಿ ಬಂದ್ವಿ ಅಷ್ಟೇ , ಪರಿಸ್ಥಿತಿ ಹಾಗಿತ್ತು .
ಧನ್ಯವಾದಗಳು ನಿಮ್ಮಿ ಪ್ರತಿಕ್ರಿಯೆಗೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್... ನಿಮ್ಮ ಕುಪ್ಪಳ್ಳಿ ಪ್ರಯಾಣದ ವಿಚಾರ ಚೆನ್ನಾಗಿ ಬರೆದಿದ್ದೀರಿ. ಈ ಹೇರಂಭಾಪುರದ ಬಗ್ಗೆ ಮತ್ತಷ್ಟು ವಿವರಗಳನ್ನು ಹೇಳ್ರಿ...... ಮತ್ತೆ ಯಾವಾಗಲಾದರೂ ಆ ಕಡೆ ಹೋದಾಗ, ನಾನೂ ದೇವಸ್ಥಾನ ನೋಡ್ಕೊಂಡು ಬರ್ತೀನಿ. ಮತ್ತೆ ಎರಡನೆಯ ಸಾರಿ ಯಾವಾಗ ಹೋದಿರಿ, ಕುಪ್ಪಳ್ಳಿಗೆ ?

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಮೇಲೆ ಕಾಲೇಜು ದಿನಗಳಲ್ಲಿ ತುಂಬಾ ಸರಿ ಹೋಗಿದ್ದೇನೆ ಅಕ್ಕ .
ಕುಪ್ಪಳ್ಳಿ ಸುತ್ತ ಮುತ್ತಲಿನ ವೀಕ್ಷಿಸಬಹುದಾದ ಸ್ಥಳಗಳ ಬಗ್ಗೆ ಒಂದು ಲೇಕನ ಬರೀತೀನಿ ಬಿಡಿ .
ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ಅಕ್ಕ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ.. ಹ್ಹಿಹ್ಹಿ :) ಚೆನ್ನಾಗಿದೆ :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ದಿವ್ಯಾರವರೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಬಚ್ಚಲು ಮನೆಯಲ್ಲಿ ನನ್ನ ಗಾಯನವನ್ನು ಪ್ರದರ್ಶಿಸುತಿದ್ದ >>
ಏನೇನು ಪ್ರದರ್ಶನ ಮಾಡಿಸ್ತೀರಪ್ಪ ಬಚ್ಚಲು ಮನೇಲಿ ???!!!! :)

ಅಲ್ಲೆಲ್ಲಾ ಸಾಕಷ್ಟು ಸುತ್ತಾಡಿದ್ದೇನೆ. ಹೇರಮ್ಭಾಪುರ ಹೆಂಗೆ ಮಿಸ್ ಆತೋ ?? ಇರ್ಲಿ ಮತ್ತೆ ಹೋಗ್ತಿನಂತೆ.

"ಓ ನನ್ನ ಚೇತನ !!!! "
ಏಳನೆಯ ತರಗತಿಯಲ್ಲಿ ನಾವು ಅಂದರೆ ಕನ್ನಡ ಮೀಡಿಯಂ ಹುಡುಗರು ಎಂತಹ ಮಹತ್ಸಾಧನೆ ಮಾಡುವ ತಾಕತ್ತು ಉಳ್ಳವರು ಎಂಬುದನ್ನು ಈ ಹಾಡಿನ ಮೂಲಕ ತೋರಿಸಿದ್ದೆವು. ನಮ್ಮ ನಂತರದ ವರ್ಷಗಳಲ್ಲಿ ಬಂದ ಕನ್ನಡ ಮಾಧ್ಯಮದ ಹುಡುಗರಿಗೆ ಕೀಳರಿಮೆ ಕಿತ್ತೊಗೆಯಲು ದಾರಿ ತೋರಿಸಿದ್ದೆವು. ಅದಕ್ಕೆ ಒಂದು ಕೊಂಡಿಯಾಗಿತ್ತು ಕುವೆಂಪು ರ "ಓ ನನ್ನ ಚೇತನ." ನಾನು ಈಗಲೂ ಹೆಮ್ಮೆ ಪಡುವ ಸಾಧನೆ ಅದು. ನೆನಪಾಯಿತು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಏನೇನು ಪ್ರದರ್ಶನ ಮಾಡಿಸ್ತೀರಪ್ಪ ಬಚ್ಚಲು ಮನೇಲಿ ???!!>>
ಹೇಳುತಿದ್ದೆ , ಇಲ್ಲಿ ಬೇಡ ಅಷ್ಟೇ , ನಮ್ಮ ಮನೆ ಕಡೆ ಬನ್ನಿ ಕುದ್ದಾಗಿ ನೋಡಿರುವಿರಂತೆ :D :D
<<ಅಲ್ಲೆಲ್ಲಾ ಸಾಕಷ್ಟು ಸುತ್ತಾಡಿದ್ದೇನೆ. ಹೇರಮ್ಭಾಪುರ ಹೆಂಗೆ ಮಿಸ್ ಆತೋ ??>>
ಇನ್ನು ಸಾಕಷ್ಟಿವೆ ಮುಂದಿನ ಲೇಕನ ಅದರ ಬಗ್ಗೆಯೇ .
<<"ಓ ನನ್ನ ಚೇತನ !!!! ">>
ಇದು ಸರ್ವಕಾಲಿಕ ಉತ್ತಮ ಕವಿತೆ ,

ಪ್ರತಿಕ್ರಿಯಿಸಿದಕ್ಕೆ ಧನ್ಯವಾದಗಳು ಹರ್ಷಣ್ಣ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಈಗ್ಲಾದ್ರು ಸೈಕಲ್ ಹೊಡೆಯೋದು ಕಲ್ತುಕೊಂಡ್ಯಾ??
ಅಥವಾ ಇನ್ನು ರೈಲು ಬಿಡೋದ್ರಲ್ಲೆ ಇದ್ದೀಯಾ?? ;)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಈಗ್ಲಾದ್ರು ಸೈಕಲ್ ಹೊಡೆಯೋದು ಕಲ್ತುಕೊಂಡ್ಯಾ??
ಅಥವಾ ಇನ್ನು ರೈಲು ಬಿಡೋದ್ರಲ್ಲೆ ಇದ್ದೀಯಾ?>>
ಸೈಕಲ್ ಹೊಡೆಯೋಕೆ ಬರ್ತಿತ್ತು ಅಕ್ಕ , ಡಬಲ್ ಬರ್ತಾ ಇದ್ದಿಲ್ಲ ಅಸ್ಟೆ.
ಇನ್ನು ರೈಲು ಬಿಡೋದು ನಿಲ್ಲಿಸಿದರೆ ನಮ್ಮ ಲಾಲುಗೆ ಬೇಜಾರ ಅಗಲ್ವೋ ? ಹಾಗಾಗಿ ಅದು ಚಾಲ್ತಿಯಲ್ಲಿದೆ :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.