ಕಳೆದು ಹೋದ ಆ ದಿನಗಳು

5

ಕಳೆದು ಹೋದವು 
ನೀ ನನ್ನ ಬಿಟ್ಟ ಆ 
ದಿನಗಳು 
ಹಸಿವಿನ ಹಂಗಿಲ್ಲದೆ 
ಕಣ್ಣೀರಿನ ಕೊರತೆ ಇಲ್ಲದೆ 

ಕಳೆದು ಹೋದವು
ಆ ದಿನಗಳು 
ಗಾಢ ನಿದ್ದೆಯೊಳಗೆ 
ನೀ ನುಸುಳಿ 
ಮೈ ಮನವನೊಮ್ಮೆ 
ಜುಮ್ ಎನಿಸಿ 
ಮತ್ತದೇ ಏಕಾಂತವ 
ಬಿಟ್ಟು ಹೋದಂತಹ 
ದಿನಗಳು 

ಕಳೆದು ಹೋದವು
ಆ ದಿನಗಳು 
ಒಡಲ ನೋವೆಲ್ಲ 
ಬಚ್ಚಿಟ್ಟು ಹುಸಿನಗೆಯ 
ನಕ್ಕಂತಹ ದಿನಗಳು 

ಕಳೆದು ಹೋದವು
ಆ ದಿನಗಳು 
ಜನಸಾಗರದ ಮಧ್ಯೆ 
ನಿನ್ನನ್ನೇ ಹುಡುಕಿದ 
ಈ ಕಂಗಳ 
ಯಾತನೆಯ ದಿನಗಳು 

ಇಷ್ಟೆಲ್ಲ ಕಳೆದರೂ
ಉಳಿದಿದೆ ಇಂದು 
ನೀ ಹೇಳಿದ ನಂಬಿಕೆಯ 
ಹಿಂದಿದ್ದ ಹುಸಿಮಾತುಗಳು 
ಮುಗ್ದ ಮುಖದ 
ಹಿಂದಿದ್ದ 
ಅವಕಾಶವಾದಿತನದ 
ರೂಪಗಳು 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ಸೊಗಸಾದ ಕವನ,ವಿನಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ ಅವರೇ " ಮತ್ತು ಒಂದು ಸ್ವಚ್ಚ ಹೊಸ ನಾಳೆಯ ಉದಯದ ನಿರೀಕ್ಷೆಯಲ್ಲಿ" ಒಂದು ಚಂದದ ಕವಿತೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

***ನೀ ಹೇಳಿದ ನಂಬಿಕೆಯ ಹಿಂದಿದ್ದ ಹುಸಿಮಾತುಗಳು ಮುಗ್ದ ಮುಖದ ಹಿಂದಿದ್ದ ಅವಕಾಶವಾದಿತನದ ರೂಪಗಳು ********* ಅರ್ಥಗರ್ಭಿತ ಸಾಲುಗಳು ವಿನಯ್, ಹಿಂದಿನ ಹಲವು ಕಹಿನೆನಪುಗಳನ್ನು ನೆನಪಿಸಿದವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.