ಬದುಕು ,ಭಾವ ಮತ್ತು ನಾನು

0

ಪಟ್ ಪಿಟ್ ಟುಳುಮ್......................ಸದ್ದು ಮಾಡುತ್ತ ಆಗ ತಾನೇ ನಿಂತ ಮಳೆಯ ಹನಿಗಳು ಸೂರಿನಿಂದ ಕೆಳಗೆ ಅಂಗಳದಲ್ಲಿ ನಿಂತ ನೀರಿನ ಮೇಲೆ ಬೀಳುತ್ತಿತ್ತು .ಡುಂ ಡುಡುಂ ಎಂದು ಸದ್ದು ಮಾಡುತ್ತಿದ್ದ ಗುಡುಗು ,ಅದಕ್ಕೆ ತಾಳ ಬದ್ದವಾಗಿ ಬಂದು ಹೋಗುತಿದ್ದ ಮಿಂಚು ತಮ್ಮ ಆಟ ಇನ್ನು ಮುಗಿದಿಲ್ಲ ಎಂಬ ಸೂಚನೆ ಆಗಲೇ ಕೊಡುತ್ತಿದ್ದವು .
ಜಗಲಿಯ ಮೇಲೆ ಕೂತು ಅಮ್ಮ ಸುಟ್ಟು ಕೊಟ್ಟ ಹಲಸಿನ ಹಪ್ಪಳ ಒಂದು ಕೈ ಅಲ್ಲಿ ,ಬಿಸಿ ಬಿಸಿ ಹೊಗೆ ಆಡುತ್ತಿರುವ ಕಾಫಿ ಇನ್ನೊಂದು ಕೈಲಿ , ತಿನ್ನುತ್ತಾ ಆ ಮಳೆಯ ಮುಂದಿನ ಆಟದ ನಿರೀಕ್ಷೆಯಲ್ಲಿ ಕುಳಿತಿರುವವನಂತೆ ಆಗಸದಲ್ಲೇ ನೋಡುತ್ತಾ ಕುಳಿತಿದ್ದೆ .
ಡಂ ಡಮಾರ್ ಎಂಬ ಭಯಂಕರ ಗುಡುಗಿನ ಸದ್ದು ಒಮ್ಮೆ ಮೈ ನಡುಕಿಸಿತ್ತಾದರು , ಮಾಮೂಲ್ ಅದ್ದರಿಂದ ಅಸ್ಟೇನು ಭಯವಾಗಲಿಲ್ಲ .ಸುಮ್ಮನೆ ಕುಳಿತಿದ್ದೇನಲ್ಲ ಹೊಟ್ಟೆ ಉರಿ ಈ ಯೋಚನೆ ಗಳಿಗೆ ತಕ್ಷಣ ಆವರಿಸಿಕೊಂಡು ಬಿಡುತ್ತವೆ . ಮಳೆ ನಿಂತಾಗ ಕೂಗುವ ಕೆಲವು ಹುಳ ಹಪ್ಪಟೆ ಗಳು ಟ್ರೂ ಟ್ರೂ ಪ್ರೂ ಕ್ರೂ .........ಹೀಗೆ ಕಾಗುಣಿತವೆ ಗೊತ್ತಿಲ್ಲದಂತೆ ಕಿರುಚಾಡುತ್ತಿದ್ದವು.ಇವೆಲ್ಲವೂ ಒಮ್ಮೆ ಒಟ್ಟಾಗಿ ನನ್ನನ್ನು ನಿದಾನವಾಗಿ ಗತದೆಡೆಗೆ ಕೊಂಡೈಯಲು ತಯಾರಾದಂತೆ ಭಾಸವಾಗುತಿತ್ತು . ನಾನೋ ಮೊದಲೇ ಭಾವುಕ ,ಅಂದ ಮೇಲೆ ಕೇಳಬೇಕೆ?
ಹೊರಳಿತು ನನ್ನಾ ಯೋಚನೆ ಬಾಲ್ಯದೆಡೆಗೆ , ಹೇಗಿತ್ತು ನಾ ಕಂಡ ಆ ನನ್ನ ಬಾಲ್ಯದ ದಿನಗಳು ಈಗ ಹೇಗಾಗಿದೆ .
೩ ಕಾಲಗಳಿಗೆ ತಕ್ಕಂತೆ ನನ್ನಾ ಬದುಕು ಕೂಡ ಬದಲಾಗುತ್ತಾ ಸಾಗುತಿತ್ತು .ಅಬ್ಬಾ ಅದೆಷ್ಟು ಆಟ ,ಮೋಜು ಮಸ್ತಿ ಮಾಡಿದ್ದೆನಾಗ . ಹೇಳತೀರದು ನನ್ನಾ ಸಂಭ್ರಮವನ್ನ . ಬದುಕು ಎಂದು ವೇಳಾಪಟ್ಟಿಯಾಗಿರಲಿಲ್ಲ .ಸ್ವಚ್ಚಂದವಾದ ಆಗಸದಲ್ಲಿ ಇರುವ ಹಕ್ಕಿಯಂತೆ ಎಲ್ಲಿ ಬೇಕಾದರು ಹಾರಾಡು , ಗೂಡು ಸೇರುವುದು ಮರೆಯದಿದ್ದರೆ ಸೈ.
ನನಗಿನ್ನೂ ನೆನಪಿದೆ ಆ ಬಾಲ್ಯದ ತುಂಟಾಟಗಳು , ಪಕ್ಕದಲ್ಲಿರುವವನ ಬಳಪ ಕದಿಯುವುದು ,ಅವನತ್ತಾಗ ಹಿರಿ ಹಿಗ್ಗುವುದು .ಸ್ವಲ್ಪ ತರಗತಿಯಲ್ಲಿ ಯಲ್ಲರಿಗಿಂತ ಚುರುಕಾಗಿದ್ದರಿಂದ ನಾನೆ ಕ್ಲಾಸ್ ಲೀಡರ್ ಆಗಿದ್ದೆ ,ಅಬ್ಬಾ ಎಷ್ಟು ಪಕ್ಷಪಾತಿ ಆಗಿದ್ದೆ ನಾನಾಗ , ನನಗೆ ಯಾರು ಆಗುವುದಿಲ್ಲವೋ ಅವರ ಹೆಸರೇ ಹಲಗೆಯ ಮೇಲೆ ಬರೆಯುತ್ತಿದ್ದೆ (ಅದು ಜಾಸ್ತಿ ಇಂಟು ಹಾಕಿ )ನೆನೆಸಿ ಕೊಂಡರೆ ನಗು ಬರುತ್ತದೊಮ್ಮೆ .
ಸಂಜೆ ಯಾದರೆ ಸಾಕು ಅಕ್ಕ ಅಣ್ಣನ ಜೊತೆ ಕೂತು ಬಾಯಿ ಪಾಠ ಮಾಡಲೇ ಬೇಕು ,ಮಗ್ಗಿ ,ನಕ್ಷತ್ರಗಳ ಹೆಸರು ,ಕಾಗುಣಿತ ,ವಾರಗಳು ,ತಿಥಿ .ಹೀಗೆ ಇನ್ನು ಏನೇನೋ .......ನಾನೋ ತುಂಟ .ಅದು ಅಲ್ಲದೆ ಚಿಕ್ಕವನಾದ್ದರಿಂದ ಸ್ವಲ್ಪ ಸಲುಗೆ ಬೇರೆ . ಆದರೂ ನಮ್ಮ ಅಪ್ಪನ ಒಂದು ಕಣ್ಣು ಸದಾ ನನ್ನಾ ಮೇಲೆಯೇ .
ಅಂದಿನ ಆಟಗಳು ಒಂದೇ ಎರಡೇ , ಕುಂಟಾ ಪಿಲ್ಲಿ ,ಚಿನ್ನಿ ದಾಂಡು,ಲಗೋರಿ , ಹಿಡಿಯೋ ಆಟ , ಚಪ್ಪೆ ಆಟ , ಕಟ್ಟೆ ಆಟ , ಕಬ್ಬಡಿ , ಕಂಬದ ಆಟ , ಮರ ಕೋತಿ .ಹೀಗೆ ಹತ್ತು ಹಲವು ...ಜೊತೆಗೆ ಕ್ರಿಕೆಟ್ ವೀಕ್ಷಣೆ (ಆಡಲು ಸೇರಿಸಿಕೊಳ್ಳುತ್ತಿರಲಿಲ್ಲ ,ಚಿಕ್ಕವ ಎಂಬ ಕಾರಣಕ್ಕೆ ).
ಮಳೆಗಾಳದಲ್ಲೋ ಸ್ಕೂಲಿಗೆ ಚಕ್ಕರ್ ಹೊಕೊದೆ ಮಜಾ ಕೊಡೊ ಸಂಗತಿ ,ಕಾಲು ನೋವು ,ತಲೆ ನೋವು ,ಜ್ವರ ಹೀಗೆ ದಿನಕ್ಕೊಂದು ಸುಳ್ಳು ,ಇನ್ನು ಮಜಾವಾದ ವಿಷಯ ಅಂದ್ರೆ ನಮ್ಮ ಮನೆ ಇಂದ ಸ್ಕೂಲಿಗೆ ಹೋಗೋ ದಾರಿಲಿ ಒಂದು ಕಾಲುವೆ ಇದೆ ,ಮಳೆ ಬಂತೆದರೆ ಸಾಕು ,ಮಾಸ್ತರ ಮುಂದೆ ಹಾಜರ್ ,ಸರ್ ಹಳ್ಳ ಬರುತ್ತೆ ರಜ ಕೊಡಿ .ಈಗ ಕೆಲವೊಮ್ಮೆ ಬಸ್ ಇಳಿದು ಮನೆಗೆ ಹೋಗುವಾಗ ಅನ್ನಿಸುತ್ತೆ ಎಷ್ಟು ಚೆಂದ ಆ ಬಾಲ್ಯ .

ಒಮ್ಮೊಮ್ಮೆ ಅನ್ನಿಸುತ್ತೆ ನಾನ್ಯಾಕೆ ಇಲ್ಲ ಆಗಿನ ಹಾಗೆ, ಮಳೆಗಾಲದಲ್ಲಿ ಆನೇಕಲ್ಲು ಬಿದ್ದ ತಕ್ಷಣ ಹೆಕ್ಕಲು ಓಡಿ ಹೋಗುತಿದ್ದ ಆ ಕಾಲುಗಳಿಗೆ ಇಂದೇಕೆ ಮುಜುಗರ ಯಾರದ್ರು ನೋಡಿಯರೆಂಬ , ಕಲ್ಲು ಕಂಡ ತಕ್ಷಣ ಎತ್ತಿ ಯಾವೋದು ಮರದತ್ತ ಎಸಯುತಿದ್ದ ಕೈಗಳೇಕೆ ಸುಮ್ಮನಾಗಿವೆ ?
ವ್ಯಕ್ತಿ ಬೆಳೆದ ತಕ್ಷಣ ,ಬಾಲ್ಯವನ್ನು ಮರೆತು ಬಿಡಬೇಕು ಎಂಬ ಕಾನೂನು ಏನಾದರು ಇದೆಯೇ ?
ಇಲ್ಲವೆಂದರೆ , ಮತ್ಯಾಕೆ ನಾವು ಬಾಲ್ಯವನ್ನು ಪನರ್ವರ್ತಿಸಲು ಹಿಂಜರಿಯುತ್ತೇವೆ?

ಇದೆಲ್ಲವನ್ನು ಗಮನಿಸಿದಾಗ ಅರಿಯುತ್ತೇವೆ ................ಬದಲಾಗಿದೆ .
ಅದು ಬಾವವೋ ,ನಾನೋ ಅಥವಾ ಬದುಕೋ ? ತಿಳಿಯದಾಗಿದೆ ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಬಾಲ್ಯದ ನೆನಪಾಗುತ್ತಿದೆ.. :)
ಆದರೆ ಕೆಲವೊಂದು ನನ್ನಲ್ಲಿ ಇನ್ನೂ ಜೀವಂತವಾಗಿದೆ.. ಮಕ್ಕಳಾಟಿಕೆ ಮರಳಿ ಮಾಡೋಣ.. :)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಸಿದಕ್ಕೆ ಧನ್ಯವಾದಗಳು ದಿವ್ಯರವರೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಾಲ್ಯದ ನೆನಪೇ ಅಷ್ಟು, ನೆನಪಿಸಿಕೊಂದಷ್ಟೂ ಖುಷಿಯಾಗುತ್ತದೆ. ಬಾಲ್ಯದ ಮಜಾ ನಮ್ಮ ಬದುಕಿನ ಬೇರಾವ ಹಂತದಲ್ಲೂ ಸಿಗಲಾರದು. ಬದುಕಿನ ಯಾವುದೇ ಜಂಜಾಟಗಳಿಲ್ಲ, ಚಿಂತೆಯಿಲ್ಲ, ಮನಸ್ಸು ನಿರ್ಮಲ, ಯಾವುದಕ್ಕೂ ಅಸಹ್ಯಪಟುಕೊಳ್ಲೋದಿಲ್ಲ....ಈಗ ಅಯ್ಯೋ ಈ ನೀರು, ಚೆನ್ನಾಗಿದೆಯೋ ಇಲ್ಲವೊ ಕುಡಿಯಲು.. ಹಣ್ಣನ್ನು ತೊಳೆಯದೇ ತಿನ್ನೋದು ಹೇಗೆ.. ಹತ್ತು ಹಲವು ಪ್ರಶ್ನೆಗಳು....

ನಾವೆಲ್ಲ ಚಿಕ್ಕವರಿದ್ದಾಗ, ನದಿ ನೀರು, ಬಾವಿ ನೀರು,,ಕುಡಿಯಲು ಏನೂ ಚಿಂತಿಸುತ್ತಿರಲಿಲ್ಲ.. ಹಣ್ಣುಗಳನ್ನೂ ಅಷ್ಟೇ ಮರದಿಂದ ಹಾಗೆ ಕಿತ್ತುಕೊಂಡು ತಿನ್ನುತ್ತಿದ್ದೆವು..

ಬಾಲ್ಯ ನೆನಪಿಸಿದ್ದಕ್ಕೆ ಧನ್ಯವಾದಗಳು ವಿನಯ್.

-ಶೋಭಾ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರತಿಕ್ರಿಸಿದಕ್ಕೆ ಧನ್ಯವಾದಗಳು ಶೋಭಕ್ಕ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅದು ಜಾಸ್ತಿ ಇಂಟು ಹಾಕಿ
ಅಂದ್ರೆ?
>>ಮತ್ಯಾಕೆ ನಾವು ಬಾಲ್ಯವನ್ನು ಪನರ್ವರ್ತಿಸಲು ಹಿಂಜರಿಯುತ್ತೇವೆ?
ದೊಡ್ಡೊರಿಗೆಲ್ಲಾ ಹೆದ್ರುಕೋಬಾರ್ದು, ಮುಂದುವರೆಸಿ ಬಾಲ್ಯಾನ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಅದು ಜಾಸ್ತಿ ಇಂಟು ಹಾಕಿ>>
ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಯಾರು ಜಾಸ್ತಿ ಗಲಾಟೆ ಮಾಡ್ತಾರೋ ಅವರ ಹೆಸರು ಬೋರ್ಡ್ ಮೇಲೆ ಬರೆದು , ಜಾಸ್ತಿ ಗಲಾಟೆಯ ಸಂಕೇತವಾಗಿ *****(ಗುಣಾಕಾರದ ಚಿಹ್ನೆ ಹಾಕುತ್ತಿದ್ವಿ)........ಈಗ ಹೇಗೆ ಗ್ರೆಡು ಕೊಡ್ತಾರೋ ಹಾಗೆ ? ಆದರೆ ಅದು ಗಲಾಟೆಯ ಸಂಕೇತ ಅಷ್ಟೇ .

ಪ್ರತಿಕ್ರಿಸಿದಕ್ಕೆ ಧನ್ಯವಾದಗಳು ಪಾಲಣ್ಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಟು ಹಾಕೋದಂದ್ರೆ X ’ ಈ ಚಿಹ್ನೆ ಪಾಲಣ್ಣಾ...... ಶಿಕ್ಷಕರು ಇಲ್ಲದೇ ಇರೋವಾಗ ಆ ಕ್ಲಾಸಿಗೆ ಒಬ್ಬ ಮಾನಿಟರ್ ಅಂತ ಮಾಡಿ ,"ನಾನು ಬರೋತನಕ ಕ್ಲಾಸ್ ಸೈಲೆಂಟಾಗಿ ಇರ್ಬೇಕು " ಅಂತ ಹೇಳಿ ಯಾರಾದ್ರೂ ಮಾತಾಡಿದ್ರೆ ಅವರ ಹೆಸರನ್ನ ಬೋರ್ಡ್ ಮೇಲೆ ಬರೆಯೋಕೆ ಹೇಳೋರು. ಆ ಮಾನಿಟರ್ ಗೆ ಯಾರನ್ನ ಕಂಡ್ರೆ ಆಗೋದಿಲ್ವೋ ಅವರ ಹೆಸರನ್ನ ಬೋರ್ಡ್ ಮೇಲೆ ಬರೀತಿದ್ದ. ( ಆಫ್ ಕೋರ್ಸ್ ಅವ್ರು ಮಾತೂ ಆಡಿರಬಹುದು)
ಒಂದ್ ಸಾರಿ ಮಾತಾಡಿದ್ರೆ ಅವರ ಹೆಸರು ಬೋರ್ಡ್ ಮೇಲೆ ..... ಬರೆದ ಮೇಲೂ ಮಾತಾಡಿದ್ರೆ ಪಕ್ಕ ಒಂದು ಇಂಟು ಮಾರ್ಕು... ಮತ್ತೆ ಮಾತಾಡಿದ್ರೆ ಇನ್ನ ಒಂದು ಇಂಟು ಮಾರ್ಕು... ಹಿಂಗೆ ಇಂಟು ಮಾರ್ಕ್ ಎಷ್ಟ್ ಇರ್ತಿತ್ತೋ ಅಷ್ಟ್ ಸಾರಿ ಅವನು ಮಾತಾಡಿದಾನೆ ಅಂತ ಅರ್ಥ... ಹ್ಹೆ ಹ್ಹೆ ... ತುಂಬಾ ಚೆನ್ನಾಗಿರ್ತಿತ್ತು. ನಾನೂ ಹಾಗೇ ಮಾಡ್ತಿದ್ದೆ ಕ್ಲಾಸಲ್ಲಿ..

ಹಳೇ ದಿನಗಳ್ನ ನೆನಪು ಮಾಡಿದ್ದಕೆ ಧನ್ಯವಾದ ವಿನಯ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದಗಳು ಭವಾನಿ ಅಕ್ಕ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ, ಭವಾನಿ
ವಿವರಣೆಗೆ ನನ್ನಿ, ಒಂಥರಾ ಮಜವಾಗಿದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಾಲ್ಯವೇ ಹಾಗೆ , ಒಂಥರಾ ಮಜಾ ಅಲ್ವಾ ಪಾಲಣ್ಣ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂಂ ಕಣೋ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಕ್ಕತ್ತ್ ಅಲ್ವಾ.ವಿನಯ್... ನಾವು ವಿದ್ಯಾರ್ಥಿಗಳಾಗಿದ್ದಾಗ ಎಷ್ಟೆಲ್ಲಾ ತರ್ಲೆ ಮಾಡ್ತಿದ್ವಿ... ಈಗ ನಮ್ ವಿದ್ಯಾರ್ಥಿಗಳ್ನ ನೋಡ್ತಿದ್ರೆ ಅವೆಲ್ಲಾ ನೆನಪಿಗೆ ಬರುತ್ತೆ ನಂಗೂ ... ಬರೀಬೇಕು ನಾನೂ ಸಹ ಇದರ ಬಗ್ಗೆ....

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಭವ್ಯಕ್ಕ,ಎಷ್ಟು ಚೆಂದ ಆ ಬಾಲ್ಯ .....
ಇದರ ಮುಂದಿನ ಕಂತು ಬರಿಯೋ ಮನಸ್ಸಾಗುತ್ತಿದೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಮಳೆಗಾಲದಲ್ಲಿ ಆನೇಕಲ್ಲು ಬಿದ್ದ ತಕ್ಷಣ ಹೆಕ್ಕಲು ಓಡಿ ಹೋಗುತಿದ್ದ ಆ ಕಾಲುಗಳಿಗೆ ಇಂದೇಕೆ ಮುಜುಗರ ಯಾರದ್ರು ನೋಡಿಯರೆಂಬ , ಕಲ್ಲು ಕಂಡ ತಕ್ಷಣ ಎತ್ತಿ ಯಾವೋದು ಮರದತ್ತ ಎಸಯುತಿದ್ದ ಕೈಗಳೇಕೆ ಸುಮ್ಮನಾಗಿವೆ ?
ಈಗಲೂ ಇವುಗಳನ್ನು ನಾನು ಮಾಡ್ತೇನೆ ಆದರೆ ಸುತ್ತಾ ಮುತ್ತಾ ಯಾರೂ ಇಲ್ಲದಾಗ ಮಾತ್ರ.
:)
ವಿನಯ್ ಬಾಲ್ಯದ ನೆನಪುಗಳು ತುಂಬಾ ಚೆನ್ನಾಗಿವೆ ಮುಂದುವರೆಸಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.