ಬಾಳ ಪಯಣ

0

ಸುಖವಿದೆ ಶಾಶ್ವತವಲ್ಲ
ದುಃಖವಿದೆ ನಿರಂತರವಲ್ಲ
ಇವೆರಡುಗಳ ನಡುವೆ
ಬದುಕಿದೆ ಜೀವನಪರ್ಯಂತ

ಬದುಕಿದು ಬಲೆಯಂತೆ
ಮುಂದೆ ಸಾಗಲು ಹಣೆಯಬೇಕಿದೆ
ಬಲೆಯ,ಅಲ್ಲೇ ನಿಲ್ಲಲೂ
ಬಳಸಬೇಕಿದೆ ಅದನ್ನ

ನಾವು ಬಿಟ್ಟರೂ ಬಿಡದೀ
ಬಲೆಯೂ ನಮ್ಮ ನಂಟು
ಸಾಗಿದಂತೆ ಹಿಂಬಾಲಿಸುವ
ನೆರಳಿನಂತೆ ಬರುತಲೇ
ಇರುವುದು ನಮ್ ಹಿಂದೆ
ಎಂದೆಂದೂ

ಬದುಕ ಹೂಡಹೊರಟ ಎಲ್ಲರೂ
ಬೀಳಲೇಬೇಕಿದೆ ಈ ಜಾಲದಲೊಮ್ಮೆ
ಅರಿವಿರುವವರೂ ಹೆಣೆಯುವರು
ಸುಂದರ ಭವಿಷ್ಯದ ಬಲೆಯ
ಬದುಕ ಈ ಆಟ ಅರಿಯದವರು
ಉಳಿಯುವರು ಅಲ್ಲೇ ಕನಸುಗಳಾಗಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಸಕತ್... ವಿನಿ. ನಮಸ್ಕಾರಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಬದುಕ ಹೂಡಹೊರಟ ಎಲ್ಲರೂ ಬೀಳಲೇಬೇಕಿದೆ ಈ ಜಾಲದಲೊಮ್ಮೆ ಅರಿವಿರುವವರೂ ಹೆಣೆಯುವರು ಸುಂದರ ಭವಿಷ್ಯದ ಬಲೆಯ>> ವಿನಯರವರೆ ನಮಸ್ಕಾರ. ನಿಮ್ಮ ಕವನದ ಈ ಸಾಲುಗಳು ಮೆಚ್ಚಿಗೆಯಾಯಿತು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<ಸುಖವಿದೆ ಶಾಶ್ವತವಲ್ಲ ದುಃಖವಿದೆ ನಿರಂತರವಲ್ಲ >> ಈ ಸಾಲುಗಳು ನಿನ್ನೆ ಮೊಬೈಲಿಗೆ ಬಂದ ಮೆಸೇಜ್ ಒಂದರ ನೆನಪು ತರಿಸಿತು. ಅದು ಏನೆಂದರೆ ಅಕ್ಬರ್ ಬೀರಬಲ್ಲನಲ್ಲಿ ಒಂದು ಪ್ರಶ್ನೆ ಕೇಳುತ್ತಾನಂತೆ, "ಸಂತೋಷದಲ್ಲಿರುವವನಿಗೆ ಮತ್ತು ದುಃಖದಲ್ಲಿರುವವನಿಗೆ ಒಂದು ಮಾತು ಹೇಳಿದರೆ ಅವನ ಸಂತೋಷ ಮತ್ತು ಇವನ ದುಃಖ ಎರಡೂ ಹೋಗಬೇಕು. ಆ ಮಾತು ಏನು" ಅದಕ್ಕೆ ಬೀರಬಲ್ಲ ಹೇಳುತ್ತಾನೆ, "ಈ ಸಮಯ ಕಳೆದು ಹೋಗುತ್ತದೆ"
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಿಯವರೇ ಕವನ ಅರ್ಥಗರ್ಭಿತವಾಗಿ ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.