ಒಂದಿಷ್ಟು ಹನಿಗವನಗಳು

3

ನಿನ್ನ ಪ್ರತಿ ನಗುವ
ಹಿಂದೊಂದು
ಕಾರಣವಿದೆ ಎಂದು
ತಿಳಿದಿದ್ದು
ನಿನ್ನ ನೋಡುತ
ನಾ ಚರಂಡಿ ಒಳಗೆ
ಬಿದ್ದಾಗಲೇ

***************

ಈಗಿನವರು ಹೇಗೆಂದರೆ
ಕೊಳವೆ ನೀರು
ಕುಡಿದು ಅನ್ನುತ್ತಾರೆ
ಬಿಸಿ ರೀ
ಅದೇ ಅದನ್ನ ಬಾಟಲ್
ಆಲ್ಲಿ ತುಂಬಿಸಿ ಕೊಟ್ಟರೆ
ಅನ್ನುತ್ತಾರೆ
ಬಿಸ್ಲರಿ

****************

ಮೊನ್ನೆ ಮಳೆಬಂದಾಗಲೇ
ತಿಳಿದಿದ್ದು ನನ್ನವಳಿಗೆ
ನನ್ನ ಮೇಲಿನ ಪ್ರೀತಿ ಎಷ್ಟೆಂದು
ನೆನೆಯುತ್ತಿರ ನೀವೆಂದು
ಹೋಗಿಯೇ ಬಿಟ್ಟಳು
ಒಬ್ಬಳೇ
ಸಿನಿಮಾಗೆಂದು

***************

ನಾನು ದಿನವು ಕುಡಿಯುವುದಿಲ್ಲ
ನನ್ನವಳೊಂದಿಗೆ ಜಗಳವಾಡಿದ
ದಿನ ಮಾತ್ರ ಕುಡಿಯುತ್ತೇನೆ
ಆದರೂ ಜನ ನೋಡು ದಿನ 

ಕುಡಿಯುತ್ತಾನೆ ಅನ್ನುತ್ತಾರೆ

***************

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3 (2 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ನಿಜ ಎಲ್ಲದಕ್ಕೂಐಲ್ಲಿ ಕಾರಣವುಂಟು ಬಾಟಲೀ ಮಹಾತ್ಮೆಯ ಅರಿವುಂಟು ಒಂಟಿ ಸಿನಿಮಾಕ್ಕೆ ಹೋದಳೆಂದು ಮತ್ತೆ ಬಾಟಲಿಯದೇ ಮಾತುಂಟು! :)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ತಪ್ಪೊಪ್ಪು: <<ನಿಜ ಎಲ್ಲದಕ್ಕೂಐಲ್ಲಿ ಕಾರಣವುಂಟು>> ನಿಜ ಎಲ್ಲದಕ್ಕೂ ಇಲ್ಲಿ ಕಾರಣವುಂಟು
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಲಕ್ಕೂ ಚೆನ್ನಾಗಿವೆ. ನಮಸ್ಕಾರಗಳೊ೦ದಿಗೆ ನಾವಡ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹ ಹ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸದ್ಯ ಚರಂಡಿ ಬಿದ್ದಗಾಲದ್ರು ಜ್ನಾನದೊಯವಾಯಿತಲ್ಲ, ಚೆನ್ನಾಗಿದೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬಾರಲ್ಲಿ ಕೂತು ಚಿಂತನೆ ನಡೆದಿತ್ತು ಗಹನ ಆಗ ಬಾಯಿಂದ ಹೊರಬಿತ್ತು ಹನಿ ಹನಿ ಕವನ.... ಆ ಕವನಗಳನ್ನು “ಸಂಪದಿ“ಸಿದಕ್ಕೆ ನಿಮಗಿದೋ ನಮನ!! ನಿಮ್ಮವ ನಾಗರಾಜ ಸಾಠೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:-) :-)
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.