ನಿಮಗೂ ಹೀಗೆ ಆಗಿದೆಯ ?

0

                                   ಮನುಷ್ಯನ ಮನಸೇ ಹೀಗೆ , ಒಂದು ಕ್ಷಣದಲ್ಲಿ ಏನೆಲ್ಲಾ ಯೋಚಿಸಿ ಬಿಡುತ್ತದೆಯೆಂದರೆ ,ಬೆಳಕಿನ ವೇಗಕ್ಕಿಂತ ಇದರ ಚಿಂತನಾ ವೇಗವೇ ಹೆಚ್ಚೇನೂ ಅನ್ನಿಸಿಬಿಡುತ್ತದೆ .ಇರುವುದೊಂದೇ ಆದರೆ ಯೋಚನೆ ಸಾವಿರ .ಎದ್ದ ತಕ್ಷಣ ಗಡಿಯಾರ ನೋಡಿದಿರಿ ಅಂದುಕೊಳ್ಳಿ ,ಸಮಯ ನೋಡಿದ ತಕ್ಷಣ ಶುರುವಾಗಿ ಬಿಡುತ್ತವೆ ನಿಮ್ಮಾ ಯೋಚನೆಗಳು ಸ್ನಾನ ಬೇಗ ಮಾಡು ,ಇರೋದು ಅರ್ಧ ಘಂಟೆ ಮಾತ್ರ , ತಿಂಡಿ ಇಲ್ಲೇ ತಿನ್ನಲೋ ಅಥವಾ ಆಫೀಸ್ ಅಲ್ಲೇ ಎನ್ನದ್ರು ಮುಕ್ಕಲೋ , ಬಸ್ ಟೈಮ್ ಆಯಿತು ,ಆ ಬಸ್ ಸಿಕ್ಕಿಲ್ಲ ಅಂದ್ರೆ ಆಟೋದಲ್ಲಿ ಹೋಗ್ಲೋ ,ಬೇಡ ಬೇಡ ಸುಮ್ನೆ ದಂಡ ,ಇವತ್ತೇನು ಕೆಲಸ ಕಾದಿದೆಯೋ ,ಸಂಜೆ ಬೇಗ ಬಂದ್ರೆ ಫಿಲಂ ಗೆ ಹೋಗ ಬಹುದಿತ್ತೇನೋ ....................................ಹೀಗೆ ಹತ್ತು ಹಲವು ಯೋಚನೆಗಳು ಕೇವಲ ಕ್ಷಣದೊಳಗೆ .

                                 ಹೀಗೆ ಕೆಲವು ಸಲ ನೂರಾರು ಯೋಚನೆಗಳು ಮನಸ್ಸಿನಲ್ಲಿ ಹೊಕ್ಕಾಗ ಅದು ಕೆಲವೊಮ್ಮೆ ಜಾಮ್ ಆಗುವುದುಂಟು .ಹೇಗಂದ್ರೆ ಮಾಡ ಹೊರಟಿರುವ ಕೆಲಸವೇ ಮರೆತು ಹೋಗುವುದು ಅಥವಾ ಏನೋ ಮಾಡಲು ಹೋಗಿ ಇನ್ನೇನೋ ಮಾಡಿರುವುದು ಅಥವಾ ಆ ಕ್ಷಣ ದಲ್ಲಿ ಎಲ್ಲವೂ ಮರೆತು ಹೋಗಿ ಒಂದು ಕ್ಷಣ ಮನಸಿನ ಕೆಲಸವೇ ನಿಂತುಹೋಗಿಬಿಡುವುದು ಹೀಗೆ ಕೆಲವರಿಗೆ ಇನ್ನು ವಿಚಿತ್ರ ರೀತಿಯ ಅನುಭವಗಳು ಆಗಿರಲೂಬಹುದು. ಇದನ್ನ ಆಂಗ್ಲ ಭಾಷೆಯಲ್ಲಿ "absence mind " ಅನ್ನುತ್ತಾರೆ . ಇದೆ ರೀತಿಯ ಒಂದು ಅನುಭವ ನಿನ್ನೆ ನನಗಾಯಿತು ಅದನ್ನ ನಿಮ್ಮೊಂದಿಗೆ ಹಂಚಿ ಕೊಳ್ಳುತ್ತಿದ್ದೇನೆ .

                                                  "ಆಗಲೇ ರಾತ್ರಿ ೧೦.೦೦ ಆಗಿತ್ತು , ಇನ್ನು ಆಫೀಸ್ ಅಲ್ಲೇ ಇದ್ದೆ .ಯಾಕೋ ಸ್ವಲ್ಪ ಸುಸ್ತು ಅನ್ನಿಸಿತು ಸಾಕು ಇವತ್ತಿಗೆ ಅನ್ನಿಸಿ ಹೊರಬಂದೆ .ಮನಸಿನ ತುಂಬಾ ಯೋಚನೆಗಳು ಕೆಲಸದ್ದು , ರೆಸ್ಟ್ ತೆಗೆದುಕೊಳ್ಳಬೇಕು,ಬೆಳಿಗ್ಗೆ ಬೇಗ ಏಳಬೇಕು ,ಊಟ ಏನ್ ಮಾಡೋದು , ಪಿಜಿ ಅಲ್ಲಿ ಇರುತ್ತೋ ಇಲ್ವೋ ,ಮನೆಗೆ ಫೋನ್ ಮಾಡಬೇಕಿತ್ತು , ಭಾನುವಾರದ ಪ್ರೊಗ್ರಾಮ್ ಬೇರೆ ಕ್ಯಾನ್ಸಲ್ ಆಯಿತಲ್ಲ ಅನ್ನೋ ಬೇಜಾರ ,ಬಸ್ ಸಿಕ್ಕತ್ತೋ ಇಲ್ವೋ ಈ ಟೈಮ್ ಅಲ್ಲಿ , ಆಟೋ ಆದ್ರೆ ಒಂದುವರೆ ಕೊಡ್ಬೇಕು , ಹೀಗೆ ಹತ್ತು ಹಲವು ಯೋಚನೆ ಮಾಡುತ್ತಲೇ ಕಾಲುಗಳು ನಿಧಾನವಾಗಿ ಬಸ್ ನಿಲ್ದಾಣದತ್ತ ಹೆಜ್ಜೆ ಹಾಕುತ್ತಿದ್ದವು .ವಜ್ರ ಬಸ್ ಬಂತು ಯೋಚನಾ ಮುಗ್ದನಾಗೆ ಒಳ ಹೋದೆ .ಖಾಲಿನೇ ಇತ್ತು , ಕಂಡಕ್ಟರ್ ಎಲ್ಲಿಗೆ ಅಂದ 'ಗಣೇಶ್ ಭವನ್ ' ಕೊಡಿ ಎಂದೇ ,ಒಮ್ಮೆ ಮುಖ ನೋಡಿ ಮತ್ತೆ ಎಲ್ಲಿಗೆ ಅಂದ , ನಾನು ಸ್ವಲ್ಪ ಜೋರಾಗೆ 'ಗಣೇಶ್ ಕೊಡಯ್ಯ ಅಂದೇ ' , ಈಗ ಅವನಿಗೆ ಸ್ವಲ್ಪ ಕೋಪ ಬಂತು ಅನ್ಸುತ್ತೆ 'ರೀ ಇದೆ ಗಣೇಶ್ ಭವನ್ , ಮೈ ಮೇಲೆ ಎಚ್ಚರ ಇಟ್ಕೊಂಡು ಬಸ್ ಹತ್ತಿ ಅಂದ ' :D .ತಕ್ಷಣ ಯಾವುದೊ ಲೋಕದಲ್ಲಿದ್ದವನು ದಡಕ್ ಎಂದು ಭೂಮಿ ಮೇಲೆ ಬಿದ್ದ ಹಾಗೈತು .ಸುತ್ತ ಮುತ್ತ ನೋಡಿಕೊಂಡೆ ,ಸಧ್ಯ ಯಾರು ಇರಲಿಲ್ಲ .ನನ್ನನ್ನು ನಾನೇ ಹಳಿದುಕೊಂಡು 'ಬ್ಯಾಂಕ್ ಕಾಲೋನಿ ' ಕೊಡಿ ಎಂದೇ , ಆಮೇಲೆ ಒಳಗೊಳಗೇ ನನ್ನ ಮೂರ್ಖತನಕ್ಕೆ ನಾನೇ ನಗುತ್ತ ಪಿಜಿ ತಲುಪಿದೆ ".

                          ಇದು ಕೇವಲ ಭಾವುಕರಿಗೆ ಮಾತ್ರ ಆಗುತ್ತದೆಯೋ ಅಥವಾ ಎಲ್ಲರಿಗೂ ಸರ್ವೇ ಸಾಮನ್ಯವೋ ನಾನರಿಯೆ , ಆದರೆ ಕೆಲವೊಂದು ಸಲ ಇದು ದೊಡ್ಡ ಪ್ರಮಾದಗಳಿಗೂ ಎಡೆಮಾಡಿಕೊಡುತ್ತದೆ ಅಂದ್ರೆ ತಪ್ಪಾಗಲಾರದು .ಮನಸ್ಸಿನ ಹಿಡಿತ ಇಲ್ಲಿ ಬಹಳ ಮುಖ್ಯವಾಗುತ್ತೆ , ಅದೆಷ್ಟೋ ಯೋಚನೆಗಳಿದ್ದರು ವರ್ತಮಾನದ ಆಗುಹೋಗುಗಳಿಗೆ ಲಗುಬಗೆಯಲ್ಲಿ ಸ್ಪಂದಿಸಿದರೆ ಮಾತ್ರ ಈ 'absence mind ' ಅನ್ನು ದೂರ ಇಡಬಹುದು ಅನ್ಸುತ್ತೆ .

                                        ನೀವೇನಂತೀರಾ ?

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಈ ಅನುಭವಕ್ಕೆ ಮನುಷ್ಯ ಭಾವುಕನೇ ಆಗಿರಬೇಕಿಲ್ಲ..
ಗೊಂದಲ ಕೇವಲ ಭಾವುಕರಿಗೆ ಸೀಮಿತ ಅಂತ ಇದೆಯೇ?
absence mind ಇಬ್ಬರಿಗೂ ಸಾದ್ಯತೆ ಇದೆ ಅಲ್ಲವೇ..

ನಿಮ್ಮೊಲವಿನ,
ಸತ್ಯ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<< ಈ ಅನುಭವಕ್ಕೆ ಮನುಷ್ಯ ಭಾವುಕನೇ ಆಗಿರಬೇಕಿಲ್ಲ.>>
ಅಲ್ಲ ಅಂತ ನಾನು ಹೇಳಲಿಲ್ಲ ಸತ್ಯಣ್ಣ , ಭಾವುಕ ಮನುಷ್ಯ ಈ ತರಹದ 'absence mind' ನಲ್ಲಿ ಜಾಸ್ತಿ ಇರತಾನೇನೋ ಅಂದೇ .
<<,ಗೊಂದಲ ಕೇವಲ ಭಾವುಕರಿಗೆ ಸೀಮಿತ ಅಂತ ಇದೆಯೇ?>>>
ನಾನೆಲ್ಲಿ ಹೇಳಿದೆ ಹಾಗೆ :D :D
<>
ಖಂಡಿತ :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಅನೇಕ ಬಾರಿ ಹಾಗೇ ಆಗುತ್ತೆ. ಯಾವುದೋ ಯೋಚನೆ ಹಾಗು ಮನಸ್ಸು ಗೊಂದಲದಿಂದ ಇದ್ದರೆ ನೀವು ಹೇಳಿದಂತೆ ಆಗುವುದು.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ನಾಗರಾಜ್ ರವರೆ , ನಿಮ್ಮಿ ಪ್ರತಿಕ್ರಿಯೆಗೆ ಧನ್ಯವಾದಗಳು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾಕೈದು ಕೆಲ್ಸಾನ ಒಟ್ಗೆ ಮಾಡಕ್ಕೋಗಿ ಯಾವ್ದನ್ನೂ ಮುಗ್ಸೋಕಾಗ್ದೆ ಮಧ್ಯದಲ್ಲಿ ಸಿಕ್ಕೊಂಡಾಗ ಹೀಗಾಗುತ್ತೆ. ಇನ್ನೂ ಬೇರೆಷ್ಟೊ ಕಾರಣಗಳಿಂದಾನೂ ಹೀಗಾಗ್ಬೋದು. ನನ್ಗೆ ಈ ತರ ತುಂಬಾ ಸಲ ಆಗತ್ತೆ.
ಭಾವುಕತೆಗೂ ಅಬ್ಸೆನ್ಸ್ ಮೈಂಡ್ಗೂ ಸಂಬಂಧವೇ??? ನನ್ಗೆ ಹಂಗನ್ಸಲ್ಲ..

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ಭಾವುಕತೆಗೂ ಅಬ್ಸೆನ್ಸ್ ಮೈಂಡ್ಗೂ ಸಂಬಂಧವೇ??>>.
ಇದ್ದರೂ ಇರಬಹುದು ಅನ್ನೋದು ನನ್ನ ಅಭಿಮತ , ಕಾರಣ ಇಷ್ಟೇ ಭಾವುಕರು ಯಾವುದನ್ನು ಹೆಚ್ಚಾಗಿ ಹಂಚಿಕೊಳ್ಳೋಲ್ಲ ಮನಸಲ್ಲೇ ಮರುಗುತ್ತಿರುತ್ತಾರೆ ಅಥವಾ ಹಿಗ್ಗುತ್ತಿರುತ್ತಾರೆ .ಅವಾಗ ಈರೀತಿ ಹೆಚ್ಚಾಗಿ ಆಗಬಹುದು ಅಂತ ಅನ್ಸುತ್ತೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್,
ಭಾವುಕತೆಗೆ ಮತ್ತೆ ಆಬ್ಸೆನ್ಟ್ ಮೈಂಡ್ ಗೂ ಸಂಬಂಧವಿದೆ ಅನ್ನಿಸುತ್ತೆ. ನಾವು ಮಾಡುವ ಮೊದಲೇ ತುಂಬ ಯೋಚಿಸಿ ಹೆದರುವ ಇಲ್ಲವೇ ಆತುರದ ನಿರ್ಧಾರ ಮಾಡುತ್ತೇವೆ. ಇಲ್ಲವೇ ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಾ ಕೆಲಸ ಮಾಡದೇ ಫಲ ನಿರೀಕ್ಷಿಸುತ್ತೆವೆ..

ಸಾತ್ವಿಕ್ ಎನ್ ವಿ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಧನ್ಯವಾದ ಸಾತ್ವಿಕ್ ರವರೆ ಓದಿ ಪ್ರತಿಕ್ರಿಯಿಸಿದ್ದಕ್ಕೆ .
<ಆಬ್ಸೆನ್ಟ್ ಮೈಂಡ್ ಬರಲು ಮುಖ್ಯ ಕಾರಣ ನಾನು ಮೊದಲೇ ಹೇಳಿದಂತೆ ಗೊಂದಲ ಉಂಟಾಗುವುದು .
ಉದಾ :ನಿಮ್ಮ ಕಂಪ್ಯೂಟರ್ ಅಲ್ಲಿ ಒಮ್ಮೆಲೇ ೧೦ ಅಥವಾ ೨೦ ವಿವಿಧ ವಿಂಡೋ ಓಪನ್ ಮಾಡಿ , ತಕ್ಷಣ ಆರಿಸಿದರೆ ಅದು ಸ್ವಲ್ಪ ಕಾಲ ಸಮಯ ತೆಗೆದುಕೊಂಡು ಆಮೇಲೆ ಕಾರ್ಯ ಪ್ರವೃತ್ತವಾಗುತ್ತದೆ. ಇದು ಒಂತರ ಹಾಗೆ >

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾವುಕತೆಯೋ, absent mindಓ, ಕಂಡಕ್ಟರ್‍ಗೆ ಅದು ಅರ್ಥ ಆಗಬೇಕಲ್ಲ!

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ವಿನಿ ಈ ಥರದ ಅನುಭವ ನನಿಗು ಬೇಗಾದಷ್ಟ್ ಸಾರಿ ಆಗಿದೆ.......ಹಿ ಹ್ಹಿ
ಎಷ್ಟೊಂದ್ಸಾರಿ ಯಾವುದೊ ರೋಡಿಗೊಗ್ಬೇಕಾಗಿದ್ದೋಳು ಯಾವ್ದೊ ರೋಡಿ ಗೋಗಿರ್ತೀನಿ...
ಒಂಡೊಂದ್ಸಾರಿ ಅಂಗಡಿಗೆ ಏನುಕ್ಕೋಗಿರ್ತೀನಿ ಅಂತಾನೆ ಮರ್ತೋಗಿರುತ್ತೆ..
ನನ್ನ ಪ್ರಕಾರ ಅದುಕ್ಕೆ ನಮ್ಮ ತಲೆಯಲ್ಲಿರುವ ಹಲವಾರು ಯೋಚನೆಗಳು, ಒತ್ತಡಗಳು...ಕಾರಣ.......

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

<<<ನಮ್ಮ ತಲೆಯಲ್ಲಿರುವ ಹಲವಾರು ಯೋಚನೆಗಳು, ಒತ್ತಡಗಳು...ಕಾರಣ.>>>
ಅದೇ ನಾನು ಹೇಳ ಹೊರಟಿದ್ದು ಅಕ್ಕ, ಮನುಷ್ಯ ಭಾವುಕನಾದಾಗ ಈ ಯೋಚನೆ , ಒತ್ತಡ ಆತನನ್ನು ಹೆಚ್ಚಾಗಿ ಕಾಡುತ್ತದೆ ಅನ್ನೋದು ನನ್ನ ಭಾವನೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ತಮ್ಮಾ.. ಈ ತರದ ಅನುಭವ ನನಗೂ ಆಗಿದೆ. ನನ್ನ ಪ್ರಕಾರ ಎಲ್ಲರಿಗೂ ಒಂದಲ್ಲಾ ಒಂದ್ಸಲ ಆಗೇ ಇರತ್ತೆ.......

ಶ್ಯಾಮಲ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಎಲ್ಲಾರಿಗೂ ಆಗಿರುತ್ತೆ ನಿಜ ಅಕ್ಕ , ಆದ್ರೆ ಕೆಲವರಿಗೆ ಮರುಕಳಿಸುತ್ತಿರುತ್ತದೆ ಅನ್ಸುತ್ತೆ .

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.