'ಅಪರಂಜಿ ಶಿವು' ಅವರ 'ಯೋಗಿ ಮತ್ತು ಅಪ್ಸರೆ'

'ಅಪರಂಜಿ ಶಿವು' ಅವರ 'ಯೋಗಿ ಮತ್ತು ಅಪ್ಸರೆ'

'ಅಪರಂಜಿ ಶಿವು' ಅವರ 'ಯೋಗಿ ಮತ್ತು ಅಪ್ಸರೆ'- (ಹಾಸ್ಯ) ಇತ್ತೀಚೆಗೆ ಓದಿದೆ . ಓದಿದೆ. ಮೊದಲಿಗೆ ವಿಶೇಷವೇನೂ ಅನ್ನಿಸಲಿಲ್ಲ. ಅರ್ಧ ತಲುಪುತ್ತಿದ್ದಂತೆ ಮನಸ್ಸಿಗೆ ಸೇರಿತು. ರಾ.ಶಿ. ಅವರ ಶೈಲಿಯಲ್ಲಿದೆ. ಎಂದೂ ಮರೆಯಲಾರದಂಥ ತುಂಬಾ ಒಳ್ಳೆಯ ಜೋಕುಗಳೂ ಸಿಕ್ಕವು. ಒಳ್ಳೆಯ ಸರಸಮಯ ಸಾಹಿತ್ಯ. ಓದಬಹುದು. ಆ ಜೋಕುಗಳು ಹೀಗಿವೆ......

೧) ಒಬ್ಬಳು ತನ್ನ ಗೆಳತಿಯನ್ನು ಕೇಳುತ್ತಾಳೆ. 'ಯಾಕೇ, ಕೆನ್ನೆ ಊದ್ಕೊಂಡಿದೆ?'
ಅವಳು :- 'ನಿನ್ನೆ ನನ್ನ ಗಂಡ ಹೊಡೆದ್ಬಿಟ್ಟ'
ಇವಳು :- 'ನಿನ್ ಗಂಡ ಊರಲ್ಲಿಲ್ಲ ಅಂತ ತಿಳ್ಕೊಂಡಿದ್ನಲ್ಲೇ?'
ಅವಳು ( ಏನ್ ಹೇಳಬಹುದು? ಊಹಿಸಿ , ನೋಡೋಣ')
.......
..
.
.
.
.
.
.
.
'ನಾನೂ ಹಾಗೇ ತಿಳ್ಕೊಂಡಿದ್ದೆ ... ಅದಕ್ಕೇ ......."

೨) ಒಬ್ಬಳು ಗೆಳತಿಯನ್ನುಕೇಳುತ್ತಾಳೆ- ನೀನು 'ಪ್ರೇಮ' ಮಾಡುವಾಗ ಗಂಡನ ಜತೆ ಮಾತಾಡ್ತೀಯಾ ?
ಅವಳು - ಯಾಕಿಲ್ಲ ? ...........
..
..
..
..
..
..
..
ಈಗೇನು ಮೊದಲಿನ ಹಾಗಲ್ಲವಲ್ಲ? ಮೊಬೈಲ್ ಇದೆಯಲ್ಲ ?

Rating
No votes yet