ಚುಟುಕುಗಳು

ಚುಟುಕುಗಳು

ಸಂಪಾದನೆ
'ಸಂಪಾದನೆ' ಹಾಗಂದರೇನು?
ದ್ರವ್ಯ ವಿಶ್ವಾಸ ಪ್ರೀತಿ
ಮಾನವೀಯತೆ ಯಾವುದರ ಸಂಪಾದನೆ?
ಇಲ್ಲವೆ ಇದಕೊಂದು
ಬೇರೆಯದೇ ಆದ ಅರ್ಥವಿದೆಯೆ?

ಜೀವನದ ಕೊನೆಯ ಗಳಿಗೆಯಲಿ
ಬಾಳಿದ ಬದುಕಿನ ಖಾತೆ ಕಿರ್ದಿಗಳ
ವಹಿಗಳ ತೆಗೆದು ನೋಡೆ
ಸಂಪಾಧಿಸಿದವುಗಳು
ಬೆರಳೆಣಿಕೆಯ ಕೆಲವಾದರೆ
ಸಂಪಾದಿಸಲಾಗದೆ ಉಳಿದವು ಅನೇಕ
*

ಅಪನಂಬಿಕೆ
ಶತಮಾನಗಳ ಕಾಲದಿಂದಲೂ
ನಾವು ಬರಿ ಅಪನಂಬಿಕೆಯ
ಪಥದಲೇ ಸಾಗಿ ಬಂದಿದ್ದೇವೆ
ನಂಬಿಕೆ ಎನ್ನುವುದು ಬಲು
ಅಪರೂಪದ ಒಂದು ವಸ್ತು
ಎಲ್ಲೋ ಸಾವಿರಕ್ಕೊ ಲಕ್ಷಕ್ಕೋ
ಮಾದರಿಗಾಗಿ ದೊರಕುವಂತಹುದು
*

ಆತ್ಮ ಮತ್ತು ದೇಹ
ಆತ್ಮ ಮತ್ತು ದೇಹಗಳದು
ಒಂದು ರೀತಿಯ
ಅವಿನಾಭಾವ ಸಂಬಂಧ
ಆತ್ಮ ದೇವ ಸ್ವರೂಪಿಯಾದರೆ
ದೇಹವೊಂದು ದೇವಾಲಯ
*

ಪ್ರೇಮ ಗಂಗೆ
ಪ್ರೇಮಿಗಳ ಮಧ್ಯೆ ಏಕಾಂತ
ರಗ್ಗು ಹೊದ್ದು ಮಲಗಿದೆ
ಪ್ರೇಮ ಬರಿ ದೇಹ ತೃಷೆ
ಮಾತ್ರವೆ ಅಲ್ಲ ಅದು
ಅಂತರಂಗದ ಒರತೆ ಅದು
ಮಾತ್ರ ಬತ್ತಬಾರದು
*

Rating
Average: 1 (1 vote)

Comments

Submitted by lpitnal Mon, 11/25/2013 - 21:09

ಪಾಟೀಲ ಸರ್ ರವರಿಗೆ ಲಕ್ಷ್ಮೀಕಾಂತ ಇಟ್ನಾಳ ರ ವಂದನೆಗಳು. ಚುಟುಕುಗಳು ಅರ್ಥಗರ್ಭಿತ ವಾಗಿವೆ. ಸಂಪಾದನೆ, ಅಪನಂಬಿಕೆ, ಆತ್ಮ ಮತ್ತು ದೇಹ, ಪ್ರೇಮ ಗಂಗೆ ಚುಟುಕುಗಳು ಬಲುವಿಸ್ತಾರ ಅರ್ಥದೊಂದಿಗೆ ಗಟ್ಟಿಯಾಗಿವೆ. ಲೌಕಿಕತೆಯನ್ನು ಪಾರಮಾರ್ಥದೊಂದಿಗೆ ಹೆಚ್ಚು ಹೆಚ್ಚು ಜ್ಞಾಪಿಸುತ್ತವೆ. ಧನ್ಯವಾದಗಳು.

Submitted by H A Patil Tue, 11/26/2013 - 16:41

In reply to by lpitnal

ಲಕ್ಷ್ಮೀಕಾಂತ ಇಟ್ನಾಳ ರವರಿಗೆ ವಂಧನೆಗಳು
ಈ ಚುಟುಕುಗಳ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ಚುಟುಕುಗಳ ಗ್ರಹಿಕೆಗೆ ಮತ್ತು ಮೆಚ್ಚುಗೆಗೆ ಧನ್ಯವಾದಗಳು.

Submitted by venkatb83 Wed, 11/27/2013 - 17:47

In reply to by lpitnal

+1, ಹಿರಿಯರೇ ಇಲ್ಲಿನ ಬರಹಗಳ ಬಗ್ಗೆ ಅವುಗಳ ವಿಷಯದ ಬಗ್ಗೆ ಏನಾದರೂ ಹೇಳಲು ನಾ ಚಿಕ್ಕವನು - ಆದರೆ ಬರಹಗಳಲ್ಲಿ ಅಪರಿಮಿತರ್ಥವಿದೆ ,
ಕೊನೆಯ ಚುಟುಕ ಅದರ ಅಂತ್ಯ ಇಷ್ಟವಾಯಿತು .
ಹಾಗೆಯೇ ಕೆಲ ದಿನಗಳಿಂದ ನಿಮ್ಮ ಬರಹಕ್ಕೆ ಕಾದಿದ್ದ ನಮಗೆ ಒಂದೊಳ್ಳೆ ಬರಹ ಸಿಕ್ಕ ಹಾಗೂ ಆಯಿತು ..
ನನ್ನಿ
ಶುಭವಾಗಲಿ
\।/

Submitted by H A Patil Wed, 11/27/2013 - 18:32

In reply to by venkatb83

ಸಪ್ತಗಿರಿ ಯವರಿಗೆ ವಂದನೆಗಳು
ಚುಟುಕುಗಳ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ತಮ್ಮ ಬರಹಗಳು ಸಂಪದದಲ್ಲಿ ಕಂಡು ಬರುತ್ತಿಲ್ಲ. ಈ ನಿಟ್ಟಿನಲ್ಲಿ ಆಲೋಚಿಸಿ ಚಿಟುಕುಗಳ ಮೆಚ್ಚುಗೆಗೆ ಧನ್ಯವಾದಗಳು'

Submitted by makara Mon, 11/25/2013 - 23:13

ಶ್ರೀಯುತ ಪಾಟೀಲರಿಗೆ ವಂದನೆಗಳು. ಶ್ರೀಯುತ ಇಟ್ನಾಳರ ಮಾತಿಗೆ ನನ್ನದೂ ಸಹಮತವಿದೆ. ನಾವು ಅಪನಂಬಿಕೆಗಳಲ್ಲಿ ಶತಶತಮಾನಗಳಿಂದ ಬಾಳುತ್ತಿಲ್ಲ, ಆದರೆ ಪೂರ್ವಿಕರು ಅಥವಾ ಇತರರು ಹೇಳಿದ್ದನ್ನು ವಿವೇಚನೆಯಿಲ್ಲದೆ ನಂಬುತ್ತಿದ್ದೇವೆ; ಅದನ್ನು ನಾವು ಮಾರ್ಪಡಿಸಿಕೊಳ್ಳಬೇಕು.
ವಂದನೆಗಳೊಂದಿಗೆ, ಶ್ರೀಧರ್ ಬಂಡ್ರಿ

Submitted by H A Patil Tue, 11/26/2013 - 16:45

In reply to by makara

ಶ್ರೀಧರ ಬಂಡ್ರಿ ಯವರಿಗೆ ವಂದನೆಗಳು
ಚುಟುಕುಗಳನ್ನು ತಾವು ಗ್ರಹಿಸಿದ ರೀತಿ ನನಗೆ ಹಿಡಿಸಿತು, ತಾವನ್ನುವುದು ಸರಿ ಪೂರ್ವಿಕರು ಮತ್ತು ಇತರರು ಹೇಳಿದ್ದನ್ನು ನಾವು ವಿವೇಚನೆಯಿಲ್ಲದೆ ನಂಬುತ್ತ ಬಂದಿದ್ದೇವೆ ನಾವು ಅದನ್ನು ಮಾರ್ಪಡಿಸಿಕೊಳ್ಳಬೇಕು ಎನ್ನುವ ತಮ್ಮ ಅಭಿಪ್ರಾಯ ಸರಿ, ಧನ್ಯವಾದಗಳು.

Submitted by nageshamysore Tue, 11/26/2013 - 04:26

ಪಾಟೀಲರೆ ನಮಸ್ಕಾರ,
.
ಅರ್ಥಪೂರ್ಣ ಚುಟುಕಗಳು. ನನಗೆ ತುಂಬಾ ಹಿಡಿಸಿದ್ದು ಸಂಪಾದನೆ (ಶರಣರ 'ಶೂನ್ಯ ಸಂಪಾದನೆ'ಯನ್ನು ನೆನಪಿಸಿತು). ಅಂತೆಯೆ ಅಪನಂಬಿಕೆ - ನಂಬಿಕೆಯೆನ್ನುವುದು ಅಪರೂಪದ ಪದವೆನ್ನುವ ಮಾತು ನಿಜಕ್ಕೂ ಸತ್ಯ (ಬಾಯಲ್ಲಿ ಎಷ್ಟೆ ಹೇಳಿದರೂ ನಮ್ಮ ಎಷ್ಟೋ ನಡುವಳಿಕೆಯನ್ನು ನಿರ್ಧರಿಸುವುದೆ ನಂಬಿಕೆ ಯಾ ಅಪನಂಬಿಕೆಯ ನಿವ್ವಳ ಮೊತ್ತ)
.
ಧನ್ಯವಾದಗಳೊಂದಿಗೆ 
ನಾಗೇಶ ಮೈಸೂರು

Submitted by H A Patil Tue, 11/26/2013 - 16:50

In reply to by nageshamysore

ನಾಗೇಶ ಮೈಸೂರು ರವರಿಗೆ ವಂದನೆಗಳು
ಈ ಚುಟುಕುಗಳ ಕುರಿತು ತಾವು ವ್ಯಕ್ತ ಪಡಿಸಿದ ಅಭಿಪ್ರಾಯಗಳನ್ನು ಓದಿದೆ, <<< ಸಂಪಾದನೆ ಚುಟುಕು ತಮಗೆ ಶರಣರ ಶೂನ್ಯ ಸಂಪಾದನೆ ಯನ್ನು ನೆನಪಿಸಿತು ಎಂದಿದ್ದೀರಿ, ನನಗೆ ಅಚ್ಚರಿಯಾಯಿತು ಆ ಚುಟುಕು ಬರೆಯುವಾಗ ಅದು ನನ್ನ ಗಮನಕ್ಕೆ ಬಂದಿರಲೇ ಇಲ್ಲ>>>ಒಂದು ಬರಹ ಓದುಗನ ಎದುರು ಬಿಚ್ಚಿಕೊಳ್ಳುವ ಪರಿ ಅನನ್ನಯವಾದುದು, ತಮ್ಮ ಅನಿಸಿಕೆಗಳು ಸತ್ಯ ಧನ್ಯವಾದಗಳು.

Submitted by kavinagaraj Tue, 11/26/2013 - 10:52

ಉತ್ತಮ ಚುಟುಕುಗಳು, ಪಾಟೀಲರೇ. ಅಪನಂಬಿಕೆ ಅನ್ನುವ ವಿಷಯದಲ್ಲಿ ಬರೆದ ಚುಟುಕು ಪರಾಮರ್ಶಿಸಿ. ಅಪನಂಬಿಕೆ ಅನ್ನುವುದಕ್ಕಿಂತ ಅಂಧ ಸಂಪ್ರದಾಯ ಸೂಕ್ತವಾಗಬಹುದು. ನಿಮ್ಮ ಚುಟುಕುಗಳು ಯೋಚನಾಲಹರಿಗೆ ಉತ್ತಮ ಸರಕುಗಳು!

Submitted by H A Patil Tue, 11/26/2013 - 16:54

In reply to by kavinagaraj

ಕವಿ ನಾಗರಾಜ ರವರಿಗೆ ವಂದನೆಗಳು
ಮಾನ್ಯರೆ ಈ ಚುಟುಕುಗಳ ಕುರಿತು ತಾವು ವ್ಯಕ್ತ ಪಡಿಸಿದ ಅಭಿಪ್ರಾಯಗಳನ್ನು ಓದಿದೆ, ಅಪನಂಬಿಕೆ ವಿಷಯವನ್ನು ಪರಾಮರ್ಶಿಸಿ ಅದನ್ನು ಅಂಧ ಸಂಪ್ರದಾಯ ಎನ್ನುವುದು ಸೂಕ್ತವಾಗಬಹುದು ಎಂದಿದ್ದೀರಿ, ಅಪನಂಬಿಕೆ ಬದಲು ಸಂಪ್ರದಾಯ ಪದವನ್ನು ಬಳಸ ಬಹುದಿತ್ತು ಆದರೆ ಬರೆಯುವಾಗ ನನಗೆ ಆ ಪದ ಹೊಳೆದಯಲಿಲ್ಲ, ತಮ್ಮದು ಸೂಕ್ತ ಸಲಹೆ ಧನ್ಯವಾದಗಳು.

Submitted by H A Patil Tue, 11/26/2013 - 16:56

In reply to by ravindra n angadi

ರವೀಂದ್ರ ಎನ್ ಅಂಗಡಿ ಯವರಿಗೆ ವಂದನೆಗಳು
ಸಂಪದ ಬಳಗಕ್ಕೆ ತಮಗೆ ಸ್ವಾಗತ, ಚುಟುಕುಗಳ ಮೆಚ್ಚುಗೆಗೆ ಧನ್ಯವಾದಗಳು.

Submitted by partha1059 Wed, 11/27/2013 - 19:27

ಪಾಟಿಲರೆ
'ಸಂಪಾದನೆ' ಗೆ ಮತ್ತೊಂದು ಅರ್ಥವಿದೆ (ಸಂಪಾದಕ‍)
ನಮ್ಮ ಜೀವನದ‌ ಒಳಿತು ಕೆಡುಕಗಳನ್ನೆಲ್ಲ ವಿಂಗಡಿಸಿ
ಸರಿ ತಪ್ಪುಗಳನ್ನೆಲ್ಲ ವೀಕ್ಷಿಸಿ
ಬೇಡವಾದುದ್ದನ್ನು ತೆಗೆದು,
ಬೇಕಾದುದ್ದನ್ನು ತಿದ್ದಿ
ಜೋಡಿಸುವುದು ಸಂಪಾದನೆಯೆ !
‍‍‍‍‍‍‍‍
ಇದು ನನಗೆ ಹೊಳೆದ‌ ಅರ್ಥ‌,
ವಿಶ್ವಾಸಗಳೊಡನೆ
ಪಾರ್ಥಸಾರಥಿ

Submitted by H A Patil Wed, 11/27/2013 - 20:54

In reply to by partha1059

ಪಾರ್ಥಸಾರಥಿ ಯವರಿಗೆ ವಂದನೆಗಳು
ಚುಟುಕುಗಳ ಕುರಿತು ತಮ್ಮ ಪ್ರತಿಕ್ರಿಯೆ ಓದಿದೆ, ತಮ್ಮ ಅನಿಸಿಕೆ ಸರಿ, ಆದರೆ ಹಾಗೆ ಸರಿ ತಪ್ಪುಗಳನ್ನು ವಿಂಗಡಿಸಿ ಬದುಕುವವರು ಎಷ್ಟು ಜನ? ಜಗದ ಸಾಮಾನ್ಯ ನಿಯಮವನ್ನು ಕುರಿತು ನಾನು ದಾಖಲಿಸಿದೆ, ತಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.