ತೆಪ್ಪಗಿರಿ ?!!

ತೆಪ್ಪಗಿರಿ ?!!

ನನ್ನ ಮೊದಲನೇ ಅಂಕಣ "ಇಟ್ಸ್ ನೆವರ್ ಟೂ ಲೇಟ್ " ಬರೆದ ಒಂದೇ ವಾರದಲ್ಲಿ ಆಗತಾನೇ ಇಂಜಿನ್‌ರಿಂಗ್ ಮುಗಿಸಿದ್ದ ನನ್ನ ತಂಗಿ ,ಸಾಫ್ಟ್‌ವೇರ್ ಕಂಪನೀಗೆ ಹೋಗಲು ಇಷ್ಟವಿಲ್ಲ ಆದ್ರೆ ನನಗೆ ಟೀಚರ್ ಹಾಗಬೇಕೆಂಬ ಆಸೆ ಇದೆ ಎಂದು ನನ್ನಲ್ಲಿ ಹೇಳಿಕೊಂಡಾಗ,ನಾನು ಎರಡನೇ ಯೋಚನೆ ಮಾಡದೆ ಅವಳ ರೆಸ್ಯೂಮೆ ರೆಡೀ ಮಾಡಿ .ಅದರ ಹತ್ತು ಪ್ರತಿಗಳನ್ನು ಅವಳ ಕೈಗಿತ್ತು "ಹತ್ತಿರದ ಶಾಲೆಗಳಿಗೆ ಕೊಟ್ಟಿ ಬಾ" ಎಂದಿದ್ದೆ .ಇದಾದ ಮೂರೇ ದಿನದಲ್ಲಿ ಆಕೆಗೆ ಗಣಿತ ಶಿಕ್ಷಕಿಯಾಗಿ ಮನೆಯ ಹತ್ತಿರದಲ್ಲೇ ಇದ್ದ ಶಾಲೆಯಲ್ಲಿ ಕೆಲಸ ಸಿಕ್ಕಿತ್ತು. ಮೊದಲ ದಿನದ ಕೆಲಸಕ್ಕೆಂದು ಹೊರಟು ನಿಂತ ಆಕೆಗೆ ನಾನು "ಎಲ್ಲಾ ಮಕ್ಕಳನ್ನು ಸರಿಸಮಾನವಾಗಿ ಕಾಣು,ಯಾವತ್ತೂ ನಿನಗೆ ನಿನ್ನ ಕೆಲಸದಿಂದ ಮಕ್ಕಳಿಗೆ ಪ್ರಯೋಜನವಿಲ್ಲ ಎಂದೆನಿಸುತ್ತೋ ಆದಿನವೇ ಆ ಕೆಲಸಕ್ಕೆ ರಾಜೀನಾಮೆ ನೀಡಿಬಿಡು , ಯಾಕೆಂದರೆ ನೀನು ಮಾಡ ಹೊರಟಿರುವುದು ದೇಶ ಕಟ್ಟುವ ಕೆಲಸ" ಎಂದು ಹೇಳಿ ಕಳುಹಿಸಿದ್ದೆ .ಆಕೆಯು ಬಹಳ ಖುಷಿಯಿಂದಲೇ ತನ್ನ ಕೆಲಸ ಮಾಡುತ್ತಾ,ಮಕ್ಕಳ ಮಧ್ಯೆ ಬೆರೆಯುತ್ತಾ,ಶಾಲೆಯ ಆಡಳಿತ ಮಂಡಳಿಯಿಂದ ಒಳ್ಳೆ ಹೆಸರು ಸಂಪಾದಿಸುತ್ತ ಹೊರಟಳು. ಆಕೆಯ ಕೆಲಸದ ಬಗ್ಗೆ ನಮ್ಮೆ ಮನೆಯಲ್ಲಿ ಎಲ್ಲರಿಗೂ ಖುಷಿ,ಗೌರವ ಇತ್ತು ಹಾಗೂ ಇದೆ.

ಇದರ ಮಧ್ಯೆ ದಸರಾ ರಜೆಗೆಂದು ಊರಿಗೆ ಹೋಗಿ ಒಂದು ವಾರ ಮುಂಚೆಯೇ ವಾಪಸ್ಸ್ ಬಂದಿದ್ದ ಆಕೆ ಯಾಕೋ ಮೊದಲಿನಂತೆ ಖುಷಿಯಿಂದ ಇದ್ದಂತೆ ನನಗೆ ಕಾಣಲಿಲ್ಲ .,ಕಾರಣ ಕೇಳಲು ನಾನೂ ಹೋಗಲಿಲ್ಲ . ಈಗೇ ಒಂದು ದಿನ ಟಿ ವಿ ನೋಡುತ್ತಾ ಕುಳಿತಿದ್ದ ನಾವು ,ದೀಡಿರನೆ ಹೊರಟ ಕರೆಂಟ್ಗೆ ದೀಪ ಹಚ್ಚಿ ಕುಳಿತ್ತಿದ್ದೆವು. ಮನೆಯ ತುಂಬಾ ಮೌನ ಆವರಿಸಿತ್ತು,ಆಕೆಯೇ ಮಾತು ಮುರಿದು "ಮೊನ್ನೆ ಅತ್ತೆ ಫೋನ್ ಮಾಡಿ,ಇಂಜಿನಿಯರಿಂಗ್ ಮಾಡಿ,ಟೀಚರ್ ಕೆಲಸಕ್ಕೆ ಯಾಕೆ ಹೋಗ್ತಾ ಇದ್ದೀಯಾ" ಅಂತ ಹೀಯಾಳಿಸುವ ರೀತಿಯಲ್ಲಿ ಕೇಳಿದರು ಎಂದು ಆಳುತ್ತ ಹೇಳಿದಳು. ನಾನು "ಅದನೆಲ್ಲಾ ಕೇಳಿಯೂ ಕೇಳದಂತೆ ಇರು" ಎಂದಷ್ಟೇ ಹೇಳಿ ಸುಮ್ಮನಾದೇ. ಅದಕ್ಕೆ ಆಕೆ "ಆತ್ತೆ ಅಷ್ಟೇ ಅಲ್ಲ,ಊರಿನಲ್ಲಿ ಯಾರೇ ಸಿಕ್ಕರೂ "ಹೇಗಿದ್ದೀಯ " ಅಂತಲೂ ಕೇಳದೇ ,ಇಂಜಿನಿಯರಿಂಗ್ ಮಾಡಿ ಯಾಕೆ ಟೀಚರ್ ಆದೇ,ಇದಕ್ಕೆ ಇಂಜಿನಿಯರಿಂಗ್ ಮಾಡುವ ಬದಲು ಯಾವುದಾದರೂ ಬೇರೆ ಡಿಗ್ರೀ ಮಾಡ್ಭುದಿತ್ತಲ್ಲ " ಎಂದರಂತೆ . ಇದನ್ನು ಕೇಳಿದ ಮೇಲಂತೂ ನನ್ನ ಕೋಪ ನೆತ್ತಿಗೇರಿತ್ತು. ಈ ರೋಗಗ್ರಸ್ತ ಸಮಾಜದ ಮೇಲೆ ಅತೀವ ಹೇಸಿಗೆ ಉಂಟಾಯಿತು. ಇಂಥ ದರಿದ್ರ ಸಮಾಜಕ್ಕೆ ಹೆದರಿ ಅದೆಷ್ಟೋ ಮಂದಿ ತಮಗಿಷ್ಟವಿಲ್ಲದ ಕೆಲಸ ಮಾಡುತ್ತಾ , ತಮ್ಮ ಹುಟ್ಟಿನ ಉದ್ದೇಶವನ್ನೇ ಮರೆತಿದ್ದಾರೆ.

ತಾವಂತು ಬೇರೆಯವರ ಮಾತಿಗೆ ಹೆದರಿ, ತಮಗಿಷ್ಟವಿಲ್ಲದ ಕೆಲಸ ಮಾಡುತ್ತಿದ್ದರೆ , ತೆಪ್ಪಗೆ ತಮ್ಮ ಪಾಡಿಗೆ ತಾವು ಇದ್ದು ಬಿಡಿ. ನಿಮಂತ ಕೊಳಕು ಮನಸ್ಥಿತಿಗಳಿಗೆ ಹೆದರದೆ ಜೀವನದಲ್ಲಿ ಅಂದುಕೊಂಡಿದ್ದನು ಮಾಡ ಹೊರಡುವ ಮುಗ್ಧ ಮನಸ್ಸುಗಳಿಗೆ ನೋವು ಮಾಡಬೇಡಿ. ಅಷ್ಟಕೂ ನಮ್ಮ ಮನೆಯ ಮಕ್ಕಳು ಮಾಡ ಹೊರಟಿರುವುದು ಭಯೋತ್ಪಾದನೆಯೋ,ಅತ್ಯಾಚಾರವೋ,ಸಮಾಜಘಾತುಕ ಕೆಲಸಗಳನ್ನೋ ಅಲ್ಲವಲ್ಲ .

ಇಂದಿನ ಸಮಾಜದಲ್ಲಿ ಈ ಹೀಯಾಳಿಸುವ ,ಆ ಕೆಲಸ ಮೇಲು,ಈ ಕೆಲಸ ಕೀಳು ಎಂದು ಓರಗೆ ಹಚ್ಚುವ  ಹುಚ್ಚು ಎಷ್ಟು ಬೆಳೆದಿದೆ ಎಂದರೆ ,ತಮ್ಮ ಖುಷಿಗೆ ಕೆಲಸ ಮಾಡಿ ಬದುಕುವವರಿಗಿಂತ , ಬೇರೆಯವರನ್ನು ಖುಷಿ ಪಡಿಸಲು ಬದುಕುವ , ಬದುಕುತ್ತಿರುವ ಜನಗಳೇ ಜಾಸ್ತಿ .

ಮೊನ್ನೆ ಮೋದಿಯವರು ಶಿಕ್ಷಕರ ದಿನಾಚರಣೆ ದಿನದಂದು ದೇಶದ ಮಕ್ಕಳನ್ನು ,ಶಿಕ್ಷಕರನ್ನು ಉದ್ದೇಶಿಸಿ ಮಾತನಾಡುತ್ತಾ "ಇಂದು ಜಗತ್ತಿನಾದ್ಯಂತ ಗಣಿತ ಮತ್ತು ವಿಜ್ಞಾನ ಶಿಕ್ಷಕರಿಗೆ ಬಹು ಬೇಡಿಕೆ ಇದೆ. ಈ ಬೇಡಿಕೆಯನ್ನು ಈಡೇರಿಸುವ ರಾಷ್ಟ್ರ ನಮ್ಮ ಭಾರತ ಆಗಬೇಕು" ಎಂದು ಹೇಳಿದ್ದು ಈ ರೋಗಗ್ರಸ್ತ ಮನಸ್ಸುಗಳಿಗೆ ತಲುಪುವುದೇ ಇಲ್ಲ ಬಿಡಿ.

 

ಇಂದು ಬಹುತೇಕ ಯುವ ಸಮೂಹ IT/BT/CITY ಗಳತ್ತ ಮುಖ ಮಾಡುತ್ತಿದ್ದರೆ , ಕೆಲವು ಬೆರಳೆಣಿಕೆಯಷ್ಟು ಯುವಕರು ವ್ಯವಸಾಯ ಮಾಡ ಹೊರಟಿರುವುದ್ದನ್ನು ಕಂಡು ಖುಷಿ ಪಟ್ಟುಕೊಳ್ಳಬೇಕಿತ್ತು, ಅಂಥ ಯುವ ಸಮುದಾಯವನ್ನು ಪ್ರೋಸ್ಸಾಹಿಸಬೇಕಿತ್ತು. ಆದರೆ ಇಂದು ಆಗುತಿರುವುದೇ ಬೇರೇ. ಮದುವೆ ವಯಸ್ಸಿಗೆ ಬಂದ ಇಂಥ ಯುವಕರಿಗೆ ಹೆಣ್ಣು ಕೊಡಲು ಈ ಸಮಾಜ ಹಿಂಜರಿಯುತ್ತದ್ದೆ. ಯಾಕೇ ಸ್ವಾಮಿ , ಇಡೀ ದೇಶಕ್ಕೆ ಅನ್ನ ಕೊಡುವ ರೈತ, ತನ್ನ ಹೆಂಡತಿ ಮಕ್ಕಳನ್ನು ಸಾಕಲಾರನೇ ? ಅಥವಾ ವ್ಯವಸಾಯ ಎಂಬುದು ಕೀಳು ವೃತ್ತಿ ಎಂದು ನೀವೇ ತೀರ್ಮಾನಿಸಿ ಬಿಟ್ಟರೋ ಹೇಗೆ ? ಅದೇ ಒಬ್ಬ ನೀಚೆಗೆಟ್ಟ ರಾಜಕಾರಣಿ ಮಗನಿಗೇ,ಮತ್ಯಾರದೋ ಕೈ ಕಾಲು ಇಡಿದು ಅವರ ಜೇಬಿಗೆ ಒಂದಷ್ಟು ಲಂಚ ತುರುಕಿ , ಒಂದು ಸರ್ಕಾರಿ ನೌಕರಿ ಗಿಟ್ಟಿಸಿಕೊಂಡು , ತಾನು ಕೊಟ್ಟ ಲಂಚವನ್ನು ಬಡ್ಡಿ ಸಮೇತ ಮತ್ತದ್ದೇ ಲಂಚದ ರೂಪದಲ್ಲಿ ಸಂಪಾದಿಸುವ ಒಬ್ಬ ಸಮಾಜಘಾತುಕ ವ್ಯಕ್ತಿಗೆ ಇಂದು ಮುಂದು ಯೋಚನೆ ಮಾಡದೇ ತಮ್ಮ ತಮ್ಮ ಮನೆ ಮಗಳನ್ನು ಧಾರೆ ಎರೆದು ಕೊಡುತ್ತೀರಲ್ಲ .,ನಿಮ್ಮದು ರೋಗಗ್ರಸ್ತ ಮಾನ್ಸ್ಸಲ್ಲದೆ ಮಾತಿನೇನು ಹೇಳಿ ?

ಮಾತೋಬ್ಬರ ಮುಂದೆ ಕೈಚಾಚದೆ ,ಸ್ವಾಬಿಮಾನಿಯಾಗಿ ,ತನ್ನ ಶ್ರಮದಿಂದ ಜೀವನ ಕಟ್ಟಿಕೊಳ್ಳುವ ರೈತರ ಕೆಲಸ ಮೇಲೋ? ಇಲ್ಲಾ,ತನ್ನ ಮುಂದೆ ಬಂದ ಪ್ರತಿಯೊಬ್ಬ ಪ್ರಜೆಯನ್ನು ರಕ್ತ ಹೀರುವ ಜಿಗಣೆ ಆಗೇ ದುಡ್ಡು ಮಾಡುವ ಸರ್ಕಾರಿ ಕೆಲಸ ಮೇಲೋ ?

ಈ ಸಂಧರ್ಬದಲ್ಲಿ ನನಗೆ ವಿಶ್ವೇಶ್ವರಯ್ಯನವರು ಹೇಳುತಿದ್ದ ಮಾತು ನೆನಪಿಗೆ ಬರುತ್ತದೆ. "ಈ ಪ್ರಪಂಚದಲ್ಲಿ ಯಾವ ಕೆಲಸವೂ ಮೇಲಲ್ಲ,ಕೀಳು ಅಲ್ಲ. ನೀನು ಮಾಡುವ ಕೆಲಸ ರೈಲ್ವೆ ಪ್ಲ್ಯಾಟ್‌ಫಾರ್ಮ್ ಗುಡಿಸುವ ಕೆಲಸವೇ ಆಗಿದ್ದರು ,ಪ್ರಪಂಚದ ಬೇರೆ ಯಾವ ರೈಲ್ವೆ ಪ್ಲ್ಯಾಟ್‌ಫಾರ್ಮ್ ಕೂಡ ನೀನೂ ಗುಡಿಸಿದ ಹಾಗೆ ಅಚ್ಚುಕಟ್ಟಾಗಿರಬಾರದು".

ಮುತ್ತಿನಂತ ಮಾತು ಅಂದರೆ ಇದೇ ನೋಡಿ. ನಮ್ಮ ರೋಗಗ್ರಸ್ತ ಮನಸ್ಸುಗಳ ಸ್ಥಿತಿ ಮನೋರೋಗವಾಗಿ ಬದಲಾಗುವ ಮೊದಲೇ ನಾವು ಎಚ್ಚೇತುಕೊಳ್ಳಬೇಕಿದೆ. ಎಲ್ಲಾ ಕೆಲ್ಸವನ್ನು,ಕೆಲಸದವರನ್ನು ಗೌರವಿಸಬೇಕಿದೆ. ನಾವು ಬದುಕುತ್ತಿರುವ ಸಮಾಜದ್ಧಲ್ಲಿ ಎಲ್ಲಾ ರೀತಿಯ ಕೆಲಸಗಾರರ ಅವಶ್ಯಕತೆ ಇದೆ. ನಿಮ್ಮ ಮನೆಯ ಮೋರಿ ಕಸಗಳಿಂದ ಕಟ್ಟು ನಿಂತಿದ್ದರೆ ,ಅದನ್ನು ಸರಿಪಡಿಸಲು ನೀವೂ ಯಾವ ಯಾವ ಸಾಫ್ಟ್‌ವೇರ್ ಇಂಜಿನಿಯರ್ಗೆ ಫೋನ್ ಮಾಡುತ್ತೀರಿ ಹೇಳಿ ?ಆ ಮೋರಿ ಸರಿಪಡಿಸಲು ಬಂದ ಪೌರಕಾರ್ಮಿಕರಿಗೂ ಒಂದಷ್ಟು ಸ್ವಾಬಿಮಾನ ಇರುತ್ತೆ ಅನ್ನೋದನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಅವರಿಗೂ ಗೌರವ ಕೊಡಿ. ನಾನು ಇಷ್ಟು ಹೇಳಿದ ಮೇಲೂ,ನೀವು ಈ ದೇಶ ನಡೆಯುತಿರುವುದು ಕೇವಲ ಇಂಜಿನೀಯರ್ಸ್ ,ರಾಜಕಾರಣಿಗಳಿಂದ ,ಸರ್ಕಾರಿ ನೌಕರರಿಂದ ಮಾತ್ರ್ತಾ ಎಂದು ತಿಳಿದಿದ್ದರೆ ,ಅದು ನಿಮ್ಮ ದುರ್ಬಲ ಮನಸ್ಥಿತಿಗೆ ಎತ್ತಿಹಿಡಿದ ಕನ್ನಡಿ.

ಕೊನೆಯದಾಗಿ ತಾವು ಅಂದು ಕೊಡಿದ್ದನ್ನು ಮಾಡ ಹೊರಡುವ ,ಹೊರಟ್ಟಿರುವ ಮನಸ್ಸುಗಳಿಗೆ ಒಂದು ಚಿಕ್ಕ ಕಿವಿ ಮಾತು. ಅತ್ಯಾಚಾರ,ಅನಾಚಾರ,ಕಳ್ಳತನ,ನೀಚ ರಾಜಕಾರಣ,ಲಾಂಚಬಾಕತನ,ಕೊಲೆ,ಸುಲಿಗೆ ಮುಂತಾದ ಸಮಾಜಘಾತುಕ ಕೆಲಸ ಮಾಡಿಕೊಂಡು ಇರುವವರೇ ಯಾರಿಗೂ ,ಯಾರಾ ಮಾತಿಗೂ ತಲೆಕೆಡಿಸಿಕೊಳ್ಳದೆ ಆರಾಮಾಗಿ ಇರುವಾಗ .,ಏನಾದರೂ ಸಾದಿಸಬೇಕು ,ಕುರಿ ಮಂದೆಯಂತೆ  ಬದುಕಬಾರದು ಅಂದುಕೊಳ್ಳುವ ನಿಮಗೆ ಇನೇಷ್ಟು ಆತ್ಮವಿಶ್ವಾಸ,ಗೌರವ ಇರಬೇಕು ಅಂತ ಸ್ವಲ್ಪ ಯೋಚನೆ ಮಾಡಿ. ಮೊದಲು ನಿಮಗೆ ನಿಮ್ಮ ಮೇಲೆ ನಂಬಿಕೆ ಇದ್ದರೆ,ಈ ಸಮಾಜ ಕೇಳುವ ಪ್ರಶ್ನೆಗಳಿಗೆ "ಸರಿಯಾಗಿ" ಶಾಲಿನಲ್ಲಿ ಚಪ್ಪಲಿ ಇಟ್ಟು ಮುಖದ ಮೇಲೆ ಹೊಡೆದಂತೆ ಉತ್ತರಿಸಲು ಕಷ್ಟವಾಗಲಾರದು.

“If you stop and throw stones at every dog that barks ,you will never reach your destination”

- Winston S . churchil

ರಾಜಿಯಾದ ಮನಸ್ಸು,

ಕಿರಣ್  ಎಸ್ ಪಿ

Rating
No votes yet

Comments

Submitted by naveengkn Mon, 10/27/2014 - 09:11

ಬರಹದ ದಾಟಿ ಮನಸೆಳೆಯಿತು,,,,,, ಉತ್ತಮ ಬರಹ,,,,
-ಜೀ ಕೇ ನ