" ದೀಪಾವಳಿ"

" ದೀಪಾವಳಿ"

ಚಿತ್ರ

ಕತ್ತಲೆಯ  ಓಡಿಸಿ ಬೆಳಕನು ತಂದ ದೀಪ

ಕಷ್ಟವ ತೊಲಗಿಸಿ ಸುಖವ ಮೂಡಿಸಿದ ದೀಪ

ಮನುಜನ ಬದುಕಿಗೆ ಬೆಳಕು ನೀಡುವ ದೀಪ

 ಹಗಲಲಿ ಬೆಳಗುವ ಸೂರ್ಯನ ಬೆಳಕು ಚಂದ

ಇರುಳಲಿ ಚಂದ್ರನ ತಂಪಿನ ಬೆಳಕು ಚಂದ

ಮನೆ ಮನೆಯಲಿ ದೀಪಾವಳಿಯ ಬೆಳಕು ಚಂದ

 ವಿಚಾರಗಳು  ಬೇರೆಯಾದರೂ ಎಲ್ಲರಿಗಿರುವ ಮನಸು ಒಂದೆ

 ಬೇರೆ ಬೇರೆ ದೀಪವಾದರು ಕೊಡುವ ಬೆಳಕು ಒಂದೆ

ಸದಾ ಮಿನುಗುತ್ತಿರಲಿ ನಕ್ಷತ್ರದಂತೆ ಈ ದೀಪ

 ನೋಡಬೇಕು ಚಿಗಳ್ಳಿ  ಗ್ರಾಮದ ನಂದದ ದೀಪ

ಮನೆ ಮನೆಯಲಿ ಹೊಮ್ಮಲಿ ಹರ್ಷದ ದೀಪ  

 ಜೀವನದಲಿ  ಶಾಶ್ವತವಾಗಲಿ ಸಂತಸದ ನಂದಾದೀಪ.

 

 

Rating
No votes yet

Comments

Submitted by swara kamath Wed, 10/22/2014 - 15:43

ರವಿಂದ್ರ ಅವರೆ ದೀಪಾವಳಿ ಹಬ್ಬಕ್ಕೆ ಉತ್ತಮವಾದ ಕವನ ಬರೆದಿರುವಿರಿ.".ಸಂಪದ " ಬಳಗದ ಎಲ್ಲರಿಗೂ ಹಬ್ಬದ ಶುಭ ಹಾರೈಕೆಗಳನ್ನ ನಾನು ಬಯಸಲು ತಮ್ಮ ಕವನದ ಚೀತ್ರವೇ ನಾಂದಿಯಾಗಲಿ. ವಂದನೆಗಳು.................................ರಮೇಶ ಕಾಮತ್

Submitted by ravindra n angadi Wed, 10/22/2014 - 16:13

ನಮಸ್ಕಾರಗಳು ಸರ್,
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು
ನಿಮಗೂ ಹಾಗೂ ನಿಮ್ಮ ಕುಟುಂಬ ವರ್ಗಕ್ಕೂ ದೀಪಾವಳಿ ಹಬ್ಬದ ಹಾರ್ದಿಕ ಶುಭಾಷಯಗಳು:) :) :)

Submitted by H A Patil Wed, 10/29/2014 - 19:20

ರವೀಂದ್ರ ಎನ್ ಅಂಗಡಿಯವರಿಗೆ ವಂದನೆಗಳು
'ದೀಪಾವಳಿ' ಕವನವನ್ನು ಇಂದು ಓದಿದೆ, ಚೆನ್ನಾಗಿ ನಿರೂಪಿಸಿದ್ದೀರಿ. ದೀಪದ ವಿವಿಧತೆಯ ಪರಿಚಯ ಮಾಡಿ ಕೊಟ್ಟಿದ್ದೀರಿ. ಕವನಕ್ಕೆ ಅಳವಡಿಸಿದ ಚಿತ್ರ ತುಂಬ ಸೊಗಸಾಗಿದೆ. ತಡವಾಗಿ ದೀಪಾವಳಿ ಹಬ್ಬದ ಶುಭಾಶಯಗಳು. ಧನ್ಯವಾದಗಳು.