ದುರ್ಗಾಸ್ತುತಿ

ದುರ್ಗಾಸ್ತುತಿ

ಚಿತ್ರ

ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ
ಬೆಳಗುತಿರೆ ನಿನಗೆನ್ನ ಪೂಜಾರ್ಪಣೆ
ಇಳೆಯ ಭಾಗ್ಯವೆ! ನೀ ಭವಾರ್ಣವವ ದಾಟಿಸಲು
ಬಳಿಗೆ ಬಾರೆನ್ನೆಡೆಗೆ ಶ್ರೀ ದುರ್ಗೆಯೆ!

 

-ಹಂಸಾನಂದಿ 

ಕೊ: ನವರಾತ್ರಿಯ ಸಮಯದಲ್ಲಿ ಪದ್ಯಪಾನದಲ್ಲಿ (http://padyapaana.com) ಕೇಳಿದ್ದ ಪ್ರಶ್ನೆಗೆ ನನ್ನ ಉತ್ತರ ಹೀಗಿತ್ತು.

ಕೊ.ಕೊ: ಕೇಳಿದ್ದ ಪ್ರಶ್ನೆ   ಹೋಗಿತ್ತು: Bar(ಬಾರ್), Car(ಕಾರ್), War(ವಾರ್), Jar(ಜಾರ್) ಪದಗಳನ್ನು ಬಳೆಸಿ ದುರ್ಗಾಸ್ತುತಿಯ ಸಾಲಂಕಾರಪದ್ಯಗಳನ್ನು ರಚಿಸಿರಿ ;  ಹೀಗೆ ಪದಗಳನ್ನು ಕೊಟ್ಟು ಅದನ್ನು ಅಳವಡಿಸಿ ಪದ್ಯ ಬರೆಯುವ ಕಸರತ್ತಿಗೆ ದತ್ತಪದಿ ಎಂದು ಹೆಸರು.   ಇದಕ್ಕೆ ನಾನಿಲ್ಲಿ ಬರೆದಿರುವ ಉತ್ತರ ಪಂಚಮಾತ್ರಾ ಚೌಪದಿಯ ಛಂದಸ್ಸಿನಲ್ಲಿದೆ.

ಕೊ.ಕೊ.ಕೊ: ದೇವರನ್ನು ನಾನಾರೂಪದಲ್ಲಿ ಪೂಜಿಸುವ ನಮಗೆ , ಕಾಳಿಯೇನು ? ದುರ್ಗಿಯೇನು? ಅವರು ಕೇಳಿದ್ದು ದುರ್ಗಾಸ್ತುತಿಯಾದರೂ, ಮೊಗ ಕಾರ್ಮುಗಿಲ ಬಣ್ಣದವಳಾದ್ದರಿಂದ ಈ ದೇವಿ ಕಾಳಿಯೇ ಇರಬೇಕು! (ಚಿತ್ರ ಕೃಪೆ: http://upload.wikimedia.org/wikipedia/commons/c/c5/Kali_Devi.jpg )

 

Rating
No votes yet

Comments

Submitted by ಗಣೇಶ Fri, 11/21/2014 - 00:17

ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ ಬೆಳಗುತಿರೆ..
ವ್ಹಾ. ಕಾಳಿಯ ವರ್ಣನೆ..
ಹಂಸಾನಂದಿಯವರೆ, ನಿಮ್ಮ ಪದ್ಯಪಾನದಿಂದಾಗಿ ಈಗ ಮಂತ್ರದಲ್ಲಿ ನಾನು "ಕಾರ್ ಬಾರ್ ವೈನ್ ಸ್ಟೋರ್..."ಹುಡುಕುವುದೇ ಜಾಸ್ತಿಯಾಗಿದೆ. :)
"serveಅಮಂಗಳ ಮಾಂಗಲ್ಯೇ ಶಿವೇ sir warಥ ಸಾಧ ಕೇಶ ರಣ್ಯೇತ್ರ್ಯಂbuckಏ ದೇವೀ....."