ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ(8)

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ ನಿಗೂಢ(8)

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ  ನಿಗೂಢ(8)

=========================

 

ದಿನಕ್ಕೆ ಒಂದೇ ಹೆಜ್ಜೆ ಇಟ್ಟರು ಸರಿಯೆ

ಗುರಿ ತಲುಪುವೆನು ಎನ್ನುವ 

ಬಸವನ ಹುಳುವಿನ ಛಲ

 

ಕಾಲುಗಳು ಮುರಿದರು ಸರಿಯೆ 

ಹಿಡಿದ ಹಿಡಿತವ ಬಿಡೆನು  ಎನ್ನುವ

ಉಡದ ಬಿಗಿಯ ಹಿಡಿತದ ಬಲ

 

ತಲೆ ಮುರಿದರು ಸರಿಯೆ

ಕಚ್ಚಿ ಹಿಡಿದ ಬಾಯ ಸಡಲಿಸೆ ಎನ್ನುವ

ನೆಲದಿ ಹರಿವ ಚಿಕ್ಕ ಇರುವೆಯ ಹಟ 

 

ಎಲ್ಲ ವಿಸ್ಮಯಗಳ ನಡುವೆ ಅದೇಕೊ  

ಚಿಕ್ಕ ಕಾರಣಗಳಿಗೂ ನೇಣ ಹಗ್ಗ

ಕೈಲಿ ಹಿಡಿದು ಸಾವಿಗೆ ಶರಣಾಗುವ 

ಮನುಜನ ಶಕ್ತಿಹೀನ ಮನ

 

ಪ್ರಕೃತಿಯ ವಿಜ್ಞಾನ ತತ್ವಗಳೆಲ್ಲ  ನಿಗೂಢ

ವಿಸ್ಮಯಗಳನ್ನೆಲ್ಲ ಅರಿಯುವ 

ಮನೋ ಬುದ್ದಿ  ಮನುಜನಿಗೆ ಕೊಟ್ಟ  ಪ್ರಕೃತಿ

ಭಯದ ಬಲೆಯನ್ನು ಹೃದಯದಿ ನೇಯ್ದಿದೆ 

ಸಾಧಿಸುವ ಮನಕ್ಕೊಂದು  ಪರಧಿ ಹಾಕಿದೆ

 

http://narvangala.bl...

Rating
No votes yet