"ಯುಗಾದಿ "

"ಯುಗಾದಿ "

ಚಿತ್ರ

ಯುಗ ಯುಗಗಳಿಂದ ಸಾಗಿ ಬಂದಿದೆ ಯುಗಾದಿ,

ಎಲ್ಲರನು ಹೊಸ ವರ್ಷದ  ಹೊಸತನದ ಕಡೆಗೆ,

ಕರೆದೊಯ್ಯಲು ಬಂದಿದೆ ಈ ಹಬ್ಬ ಯುಗಾದಿ ,

ಮಾಮರಗಳಿಗೆ ಹೊಸ ಚಿಗುರು ಬಂದಿದೆ,

ಕೋಗಿಲೆಗೆ ಹಾಡುವ ಚೈತನ್ಯ ತಂದಿದೆ ,

ಭೂಮಿ ತಾಯಿಯ ಸೊಬಗನ್ನು ಹೆಚ್ಚಿಸಲಿದೆ,

ರೈತರ ಮನದಲಿ ಹೊಂಗನಸು  ಮೂಡಿಸಿದೆ,

ಎಲ್ಲರ ಮನದಲ್ಲಿ ಸಂತಸದ ಚಿಲುಮೆ ಚಿಮ್ಮಿದೆ,

 ಮನೆಮನೆಗೆ ನವೋಲ್ಲಾಸ ಕರೆತಂದಿದೆ,

ಕಾತುರದಿ ಕಾಲಿಡಲು ಕಾದಿದೆ ನವಸಂವತ್ಸರ,

ಮಕ್ಕಳಿಗೆ ಹೊಸ ಉಡುಗೆ ತೊಡುವ ಆನಂದ,

ಹಬ್ಬ ಅಚರಿಸಲು ಮಹಿಳೆಯರಿಗೆ ಮಹದಾನಂದ,

ಯುಗಗಳು ಕಳೆದರು ಯುಗಾದಿ ಮರಳಲಿ,

 ಮತ್ಸರದ ಭಾವಗಳು ಬದಲಾವಣೆಯಾಗಲಿ,

ಬೇವು ಬೆಲ್ಲದಂತಹ ಜೀವನ ಸ್ವೀಕರಿಸುವಂತಾಗಲಿ..........

ಚಿತ್ರ ಕೃಪೆ : ಇಂಟರ್ನೆಟ್

Rating
No votes yet