ಸುಮ್ನೆ ಹೀಗೆ-೧೬

ಸುಮ್ನೆ ಹೀಗೆ-೧೬

ಅಂದುಕೊಂಡಂತೆ
ಆಗುವುದೇ ?
ಬೆಸೆದಿದೆ ಸೂತ್ರವದೇನೋ ?
ಬೇಕೆಂದಾಗ ಕಾಮನಬಿಲ್ಲು
ಮೂಡುವುದೇ?
ಗುಡುಗಿಗೂ ಮಿಂಚಿಗೂ ಇದೆ ನಂಟು
ಬಿಚ್ಚಬೇಕು ನಮ್ಮೊಳಗಿನ ಗಂಟು

Rating
No votes yet

Comments

Submitted by sathishnasa Sat, 09/21/2013 - 11:20

"ನಾವಂದುಕೊಂಡಂತೆ ನಡೆದರೂ ಅದು ಅವನಿಚ್ಚೆಯಂತೆ ನಡೆದಿರುತ್ತದೆ" ಸುಂದರ ಸಾಲುಗಳು ಪ್ರೇಮರವರೇ .......ಸತೀಶ್

Submitted by nageshamysore Sat, 09/21/2013 - 18:26

ಪ್ರೇಮಾಶ್ರೀಯವರೆ,

"ಗುಡುಗಿಗೂ ಮಿಂಚಿಗೂ ಇದೆ ನಂಟು
ಬಿಚ್ಚಬೇಕು ನಮ್ಮೊಳಗಿನ ಗಂಟು"

- ಸೊಗಸಾದ ಸಾಲುಗಳು! ಗಂಟು ಬಿಚ್ಚಬೇಕೇನೊ ಸರಿ ಆದರೆ,

"ಬಿಚ್ಚಬಿಡದಲ್ಲಾ ಹಾಳು ಸೆಂಟಿಮೆಂಟು,
ನುಸುಳಬಿಡದ ಸಂಬಂಧಗಳೆ ಒಗಟು,
ಸದ್ಯಾ, ಭಾವನೆಗಳಿವೆಯಲ್ಲಾ ಸಗಟು,
ಹೋರಾಡುತಲಿವೆ ಬಿಡದೆಲೆ ಜಿಗುಟು ||
 
ಧನ್ಯವಾದಗಳೊಂದಿಗೆ
ನಾಗೇಶ ಮೈಸೂರು
 

Submitted by Premashri Mon, 09/23/2013 - 11:00

In reply to by nageshamysore

ಬಿಚ್ಚಹೊರಟಷ್ಟೂ ಮತ್ತೆ ಮತ್ತೆ ಸುತ್ತಿಕೊಳ್ಳುವುದು ಗಂಟು.ನಿಮ್ಮ ಕವನವೂ ಚೆನ್ನಾಗಿದೆ. ಮೆಚ್ಚುಗೆಗೆ ಧನ್ಯವಾದಗಳು ನಾಗೇಶ್ ಅವರೆ.