ಹಳೇ ಕನ್ನಡ

ಹಳೇ ಕನ್ನಡ

ಕುಡುಗೋಲು ಕಡಗೋಲು ಕಡಾಯಿ ಕಲ್ಡಬತ್ತ

ಕಣ್ಕಟ್ಟು ಕೀಲೆಣ್ಣೆ ಕಾಲುಣ್ಣು ಕಲ್ಲಣ್ಣೆ

ಬಾಚಣಿಗೆ ಬೀಸಣಿಗೆ ಬಚ್ಬಾಯಿ ಬಾರ್ಕೋಲು

ಸೋರುಪ್ಪು ಕಣ್ಕಪ್ಪು ಕಾಳ್ಗಿಚ್ಚು ಕಲಗಚ್ಚು

ಕಣ್ಗಿಸುರು ಮೆಳ್ಗಣ್ಣು ಗುಕ್ಬಾಯಿ ಬಕ್ದೆಲೆ

ಕಡುಕ್ಲರೊಟ್ಟಿ ಪುಡಿಚೆಟ್ನಿ ಕೆನೆಮೊಸ್ರು  ಉದುರುಬ್ಯಾಳಿ

ಪದರಪೇಣಿ ಕಾಕಂಬಿ ಉದ್ರೊಟ್ಟಿ ಕಾಯಚೆಟ್ನಿ

ಹುಳಿಮಜ್ಗಿ ಜೋಳದಂಬ್ಲಿ ನವಣನ್ನ ಬಳಕ್ಲುಮುದ್ದೆ

ಮನೆಯಂಗ್ಳ ಪಡಸಾಲಿ ಕಸಬರ್ಗಿ ಕೊಡ್ಪಾನ

ಉಂಬ್ಳಿಹೊಲ ಜಂಗ್ಳಿದನ ಜನಜಂಗ್ಳಿ ಕರೆಕಂಬ್ಳಿ

ಅಂಕ್ಲತ್ತಿ ಸುಂಕದ್ಕಟ್ಟೆ ಸೂಲೆಮ್ಮೆ ದೇವ್ರಕೋಣ

ಸರಹದ್ದು ಪಾರಿಬೇಲಿ  ಕುರಿಬಲಿ ಮಾರಿಹಬ್ಬ

ಸರಸಾಡ್ಲು ಬೇಲಿಸಾಲು ಬೆಲ್ಲದಚಾವು ಬೆಂಡುಬತ್ತಾಸು

ಚಕ್ಡಿಬಂಡಿ ಅಕ್ಡಿಕಾಳು ಒಡಕ್ಲುಬ್ಯಾಳಿ ಅಡಕ್ಲುಗಡಿಗಿ

ಹರುಕ್ಲುಚೆಣ್ಣ ಕುರುಕ್ಲುತಿಂಡಿ ಸೋರಕ್ಲುಮೂಗು ಹೆಗಲ್ಚೀಲ

ಗ್ವಾವಿನ್ಜುಳ್ಳಿ ಕರಿಹಲ್ಗಿ ತೊಂಡೆಕಾಯಿ ಕಲ್ಲಿನ್ಬಳಪ

ಈಚ್ಲಣ್ಣು ಬೆಳ್ಕಾಯಿ ಬಾರೆಹಣ್ಣು ಉಂಚಿಕಟ

ಜೋಳದಬೆಳ್ಸಿ ಸೌತೆಈಚು ಕಾರ್ಚಿಕಾಯಿ ಅಕ್ರಿಕಿಸೊಪ್ಪು

ತುರ್ಚಲಗಿಡ ಚೇಳ್ಕೊಂಡಿಕಾಯಿ ಒಳಮುಚ್ಗ ಹೊರಮುಚ್ಗ

ಉಗ್ನಿಬಳ್ಳಿ ಡಬ್ಳದಣ್ಣು ಟೀಕಿಸಪ್ಪು ಬಬ್ಲಿಹಾಲು

ನೆಗ್ಲಿಮುಳ್ಳು ಕಾರೆಟೆಂಗು ಬಿಕ್ಕಿಕಾಯಿ ಕೌಳಿಹಣ್ಣು

ದೊಣ್ಣೆಕಟ ಆವ್ರಾಣೆ ಕಂಚ್ಗಾರ ಪಾತರಗಿತ್ತಿ

ಕಳ್ಳಿಸಾಲು ಹುಲ್ಮನೆ ಹಳ್ಳಿಜೀವನ ಗ್ರಾಮ್ಯಭಾಷೆ

ಹಳ್ಳಿಬಿಟ್ವಿ ಪ್ಯಾಟಿಗಿ ಬಂದ್ವಿ ಭಾಷೆಬಿಟ್ವಿ ಕನ್ನಡಮರೆತ್ವಿ

Rating
No votes yet

Comments

Submitted by makara Sun, 08/25/2013 - 17:39

ಇದರಲ್ಲಿ ನೂರಕ್ಕೆ ತೊಂಬತ್ತೈದು ಪದಗಳ ಅರ್ಥ ನನಗೆ ಗೊತ್ತಿದೆ; ಆದರೆ ಇದರಲ್ಲಿ ನನ್ಮಕ್ಳಿಗೆ ಐದೂ ಸಹ ಗೊತ್ತಿಲ್ಲ. ಏಕೆಂದರೆ ನಾವು ಬಳಸೋದು ಕಂಗ್ಲೀಷ್ :(
ಹೀಗಾದರೂ ಹಳೆಯ ಪದಗಳನ್ನು ನೆನಪು ಮಾಡಿದ್ದಕ್ಕೆ ಧನ್ಯವಾದಗಳು, ಜಯಪ್ರಕಾಶರೆ. ಶೀರ್ಷಿಕೆ ಹಳೇಗನ್ನಡ ಆಗ್ಬೇಕಿತ್ತೇನೋ?

Submitted by jayaprakash M.G Wed, 08/28/2013 - 09:49

In reply to by makara

ಶ್ರೀಧರ ಬಂಡ್ರಿಯವರೆ ಇದು ಹೊಸಗನ್ನಡದ ಹಳೆಯ ರೂಪ.ಹಳೆ ಮೈಸೂರು ಭಾಗದ ಹಳ್ಳಿಗಳಲ್ಲಿ 40 ವರ್ಷಗಳ ಹಿಂದೆ ಈಶಬ್ದಗಳು ನಿತ್ಯ ರೂಢಿಯಲ್ಲಿದ್ದವು.ಇಂದು ಈ ಶಬ್ದಗಳು ನಗರಗಳಲ್ಲಿ ಅಪರಿಚಿತ ಹಳ್ಳಿಗಳಲ್ಲಿ ಅಪರೂಪ ಇದು ಹೊಸಗನ್ನಡದ ಇಂದಿನ ಸ್ಥಿತಿ ಮುಂದಿನ ಗತಿ ಹೇಗೋ? ವಂದನೆಗಳು