ಭಾಷೆ-ಕನ್ನಡ

ಸಂಪದಪ್ರಿಯರು ಶುದ್ಧವಾಗಿ ಬರೆದರೆ ಅದೆಷ್ಟು ಚೆನ್ನ!

ಸಂಪದದಂತಹ ಆನ್‌ಲೈನ್ ವೇದಿಕೆಯನ್ನು ಕನ್ನಡಿಗರು ಸಮರ್ಥವಾಗಿ ಬಳಸುತ್ತಿದ್ದೇವೆ ಎನ್ನುವುದರಲ್ಲಿ ಅನುಮಾನವಿಲ್ಲ.ಇಲ್ಲಿ ಬರುತ್ತಿರುವ ವಿಚಾರಗಳು ಉನ್ನತ ಮಟ್ಟದವಾಗಿ ಖುಷಿಕೊಡುತ್ತವೆ.ಭಾಷೆಯ ಬಗೆಗೆ ಅಭಿಮಾನ, ಸಂಸ್ಕೃತಿ ಬಗ್ಗೆ ಹೆಮ್ಮೆ,ಕಳಕಳಿ ಬರಹಗಳಲ್ಲಿ ಎದ್ದು ಕಾಣುತ್ತವೆ.ತಾವು ಓದಿದ ಉತ್ತಮ ವಿಚಾರಗಳನ್ನು ಇತರರಲ್ಲಿ ಹಂಚುವ,ಒಳ್ಳೆಯ ಅಭಿರುಚಿಯನ್ನು ಹುಟ್ಟುಹಾಕುವ ಉತ್ಸಾಹ ಇಲ್ಲಿ ವ್ಯಕ್ತವಾಗುತ್ತದೆ.ಅಂತರ್ಜಾಲದ ಹೊಸ ಮುನ್ನಡೆಗಳ ಬಗೆಗೆ ಇತರರ ಗಮನ ಸೆಳೆಯುವ ಬಗ್ಗೆ ಮುತುವರ್ಜಿ ತೆಗೆದುಕೊಳ್ಳುವವರು ಸಾಕಷ್ಟು ಇದ್ದಾರೆ.ಕ್ರೀಡೆ-ಅದರಲ್ಲೂ ಕ್ರಿಕೆಟ್ ಬಗ್ಗೆ, ಪ್ರವಾಸ ಅನುಭವಗಳ ಬಗೆಗೆ ಬರೆಯುವವರ ಬಳಗವೇ ಇದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಗೂಗಲ್ ಮತ್ತು ಕನ್ನಡ

ಗೂಗಲ್ ಮತ್ತು ಕನ್ನಡ

ಗೂಗಲ್ ನಲ್ಲಿ ಕನ್ನಡದ ಪುಟಗಳನ್ನು ಹುಡುಕುವುದನ್ನು ಸುಲಭಗೊಳಿಸಲು ನನ್ನದೇ ಆದ ಅಂತರ್ಜಾಲ ಪುಟವನ್ನು ಸಿದ್ದಪಡಿಸಿದ್ದೇನೆ. ಇಲ್ಲಿ ಟೈಪ್ ಮಾಡಲು ಬರಹದಂತಹ ಯಾವುದೇ ತಂತ್ರಾಂಶದ ಅಗತ್ಯವಿಲ್ಲ. ನೇರವಾಗಿ ನಿಮ್ಮ ಕೀಲಿಮಣೆಯಿಂದ ಟೈಪ್ ಮಾಡಬಹುದು. ಇಲ್ಲಿ ನನ್ನದೇ ಆದ ಕೀಲಿಮಣೆ ವಿನ್ಯಾಸವನ್ನು ಬಳಸಿದ್ದು, ಇದು ಕಗಪ ಕೀಲಿಮಣೆಗಿಂತ ಭಿನ್ನವಾಗಿದೆ.

ನನ್ನ ಅಂತರ್ಜಾಲ ಪುಟದ ವಿಳಾಸ ಹೀಗಿದೆ:

http://karnataka.110mb.com/google.html

field_vote: 
Average: 2 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡದ ಕಂಪು

ಕನ್ನಡವನ್ನು ಬೆಳೆಸಲು ಕನ್ನಡದ ಬಗ್ಗೆ ಹೊರ ರಾಜ್ಯದಿಂದ ಬಂದು ನೆಲೆಸಿರುವ ಜನರಲ್ಲಿ ಆಸಕ್ತಿ ಮೂಡಿಸುವುದು ಇಂದು ಅಗತ್ಯವಾಗಿದೆ. ಅಂತದೊಂದು ಪ್ರಯತ್ನ ನಮ್ಮ ಕಂಪನಿ LG CNS Global, ಬೆಂಗಳೂರಿನಲ್ಲಿ ನಡೆಯಿತು. ನಮ್ಮ ಟೀಮಿನಲ್ಲಿ ಇರುವ 25 ಜನರಲ್ಲಿ 12 ಜನ ಕನ್ನಡಿಗರು ಮತ್ತು ಉಳಿದವರು ಹೊರ ರಾಜ್ಯದವರು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಚಾಮರಸ ಮತ್ತು ಬೇಂದ್ರೆ

ಈಗಿನ ದಿನಗಳಲ್ಲಿ ಈ ಎಬ್ಬರು ಕವಿಗಳ ಕೃತಿಗಳನ್ನು ಓದುತ್ತಿದ್ದೇನೆ. ಆಗ ಓದುವಾಗ ನನಗೆ ಇವರಿಬ್ಬರಲ್ಲಿ ಬಹಳ ಸಾಮ್ಯತೆ ಕಂಡುಬಂತು. ಇದನ್ನು ಗಮನಿಸುತ್ತಾ ಓದಿದರೆ ಇನ್ನು ಖುಶಿ ಸಿಗುತ್ತೆ ಅಂತ ಒಂದೇ ಸಮನೆ ಇಬ್ಬರನ್ನು ಓದುತ್ತಾ ಇದ್ದೀನಿ.

ಮೊದಲಿಗೆ, ಇಬ್ಬರ ಪದ್ಯಗಳು ಕಿವಿಗೆ ರಾಚುವಂತೆ ಇವೆ. ಬೇರೆಯವರು ಓದುವುದನ್ನು ಅಥವಾ ನೀವೆ ಓದುತ್ತಿದ್ದರೆ ಕೇಳುವುದಕ್ಕೆ ಹಿತವೆನಿಸಿ ನಿಮ್ಮ ಗಮನವನ್ನು ಸೆಳೆಯುತ್ತದೆ. ಅಂದರೆ ಶ್ರವಣತೆಗೆ ಒತ್ತು ಕೊಡಲಾಗಿದೆ. ಇದೇ ಈ ಇಬ್ಬರ ಪದ್ಯಗಳ ಜೀವಾಳ.

ಉದಾ: ಚಾಮರಸನ ಪ್ರಭುಲಿಂಗಲೀಲೆಯ ಈ ಸಾಲುಗಳ ನೋಡಿ

"ಉಣಿಸುವುಣಿಸೆಂದೆಂಬರೆಲ್ಲರು |

ವುಣಿಸನುಂಬುದನಿಂದು ಕಂಡೆವು |

ದಣಿಸಿದಿರಿ ನೀವಾದೊಡೆಮ್ಮನು ಭಕ್ತ ನಿಮ್ಮಾಣೆ ||

ಅಣಕವಲ್ಲಿದು ನರಸುರೋರಗ |

ರೆಣಿಕೆಯೊಳು ನಿನಗಾರು ಸರಿ ಕಾ |

ರಣಕಳಾತ್ಮಕ ನೀನೆಲೈ ಬಸವಣ್ಣ ಕೇಳೆಂದ "

ಇದು ಅಲ್ಲಮನು ಬಸವಣ್ಣನ ಮನೆಗೆ ಬಂದಾಗ ಬಸವಣ್ಣನು ಅವನನ್ನು ಸತ್ಕರಿಸುವ ರೀತಿ ಕಂಡು ಅಲ್ಲಮನು ಹೇಳುವ ಮಾತು.

ಇಲ್ಲಿ ಪ್ರತಿ ಸಾಲಿನ ಎರಡನೆ ಸಾಲಿನ ಅಕ್ಕರಗಳು 'ಣ','ಣಿ' ಇಂದ ಕೂಡಿದೆ. ಚಾಮರಸನು ಈ ರೀತಿ ಪ್ರಯೋಗ ಉದ್ದಕ್ಕೂ ಮಾಡಿದ್ದಾನೆ. ಇದರಿಂದಲೇ ಇದು ಗಮಕಿಗಳಿಗೆ ಹತ್ತಿರವಾಗಿರಬಹುದು. ಈ ರೀತಿಯ ಚೆಲುವಾದ ಸಾಲುಗಳು ಬೇಕಾದಷ್ಟಿವೆ.

ಇನ್ನು ಬೇಂದ್ರೆಯವರು ಶಬ್ದಗಳ ಸೊಗಡನ್ನು ಹೀರಿ ಬೆಳೆದ ಕೆಲವೇ ಕೆಲವರಲ್ಲಿ ಒಬ್ಬರು. ಮಡಿವಂತಿಕೆಗೆ ಮಣೆ ಹಾಕದೆ ಯಾವುದೇ ಪದಗಳ ಪ್ರಯೋಗಕ್ಕೆ ಹಿಂಜರಿಯದೆ ಶಬ್ದ ಸೌಂದರ್ಯವನ್ನು ನಮಗೆ ಅವರ ಪದ್ಯಗಳಲ್ಲಿ 'ಉಣಿ'ಸುತ್ತಾರೆ. ನನಗಂತೂ ಮೆಚ್ಚಿನ ಕವಿ ಇವರೇ.

"ಒಂದೇ ಬಾರಿ ನನ್ನ ನೋಡಿ

ಮಂದನಗಿ ಹಾಂಗ ಬೀರಿ

ಮುಂದ ಮುಂದ ಮುಂದ ಹೋದ

ಹಿಂದ ನೋಡದ ಗೆಳತಿ"

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕರ್ನಾಟಕ ಸ೦ಗೀತದ ಪರ೦ಪರೆ -- ಡಿ.ವಿ.ಜಿಯವರ ಭಾಷಣ.

ಕರ್ನಾಟಕ ಸ೦ಗೀತದ ಪರ೦ಪರೆ

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡ ಎಲ್ಲಿದೆ... ?

"ಸೀ ಯಾ, ನೋ ಡಾ... ಕಮಿಂಗ್ ಡಾ.... " ಇದೇ ನಾವಾಡುವ ನುಡಿ! ಇದೇ ಸ್ವಾಮಿ ನಮ್ಮ ಗಂಧದ ಗುಡಿಯ ಪಾಡು!

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಇದ್ಯಾವ್ ಬೆಂಗಳೂರು ಸ್ವಾಮೀ? ಕನ್ನಡದವರೆಲ್ಲಾ ಎಲ್ಲಿ ಸ್ವಾಮೀ?

- ನವರತ್ನ ಸುಧೀರ್

ನಾನು ಸುಮಾರು ಮೂವತ್ತೈದು ವರ್ಷಗಳು ಕರ್ನಾಟಕದಿಂದ ಹೊರಗಿದ್ದು ಸೇವಾ ನಿವೃತ್ತನಾದಮೇಲೆ ಬೆಂಗಳೂರಿಗೆ ಹಿಂತಿರುಗಿದ ಕನ್ನಡಿಗ. ಬಂದ ಹಲವು ದಿನಗಳಲ್ಲೇ ಆದ ನನ್ನ ಅನುಭವಗಳನ್ನು ಆಧಾರಿಸಿ “ಮರಳಿ ಮಣ್ಣಿಗೆ - ಏನಾಗಿದೆ ನಮ್ಮ ಚೆಲುವನಾಡಿಗೆ?” ಅನ್ನುವ ಲೇಖನದಲ್ಲಿ ನನ್ನ ಗೋಳನ್ನು ತೋಡಿಕೊಂಡಿದ್ದೆ. (http://www.ourkarnataka.com/kannada/articles/whatwrong.htm )

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡ ನಾಡು, ನುಡಿ , ಜನ, ಸಂಸ್ಕೃತಿ- ಪರಭಾಷೀಯರು ಏಕೆ ಗೌರವಿಸಬೇಕು?

-ನವರತ್ನ ಸುಧೀರ್

ಕನ್ನಡಿಗರೂ ಅಂದಮೇಲೆ ಕನ್ನಡ ನಾಡು, ನುಡಿ, ಜನಗಳ ಬಗ್ಗೆ ಹೆಮ್ಮೆ, ಅಭಿಮಾನ, ಗೌರವ ಇವೆಲ್ಲವೂ ಇರಲೇಬೇಕು, ನಿಜ. ಆದರೆ ಇದನ್ನು ಯಾವ ರೀತಿ ಪ್ರದರ್ಶಿಸ ಬೇಕು ಅನ್ನೋ ಬಗ್ಗೆ ಇನ್ನೂ ಒಮ್ಮತ ಇದ್ದಂತಿಲ್ಲ.

ಬೇರೆಯವರು ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಅಷ್ಟಾಗಿ ಗೌರವಿಸುತ್ತಿಲ್ಲ, ನಮ್ಮ ನಾಡಿನಲ್ಲಿ ನಾವೇ ಹೊರಗಿನವರಂತಾಗಿದ್ದೇವೆ ಅನ್ನೋ ದುಃಖ ನಮ್ಮಲ್ಲನೇಕರಿಗಿದೆ. ನಮ್ಮನ್ನು ಅನಾಗರೀಕರು ಅಸಂಸ್ಕೃತರೂ ಅಂತ ಅಂದುಕೊಂಡರೂ ಪರವಾಗಿಲ್ಲ ಪರಭಾಷೀಯರಿಗೆ ಕಡ್ಡಾಯವಾಗಿ ಕನ್ನಡ ಕಲಿಸಬೇಕು ಅಂತ ಹಲವರು. ಎಲ್ಲಾ ನಾಮಫಲಕಗಳೂ ಕನ್ನಡದಲ್ಲಿರಬೇಕು ಅಂತ ಹಲವರು. ಕನ್ನಡದ ಕವಿತೆಗಳಿರುವ ಟೀ ಶರ್ಟ್ ಹಾಕಿಕೊಂಡು ನಿಮ್ಮ ಕನ್ನಡ ಪ್ರೇಮ ಮೆರೆಯಿರಿ ಅಂತ ಇತರರು. ನಮ್ಮ ನಾಡಿನಲ್ಲೇ ನಮ್ಮ ನಾಡಿನ ನೆಲ, ಜಲ, ಗಾಳಿ, ಸವಲತ್ತುಗಳನ್ನು ಬಳಸಿಕೊಂಡು ಹೊರಗಿನಿಂದ ಬಂದು ವಲಸೆಯಾದ ಪರಭಾಷೀಯರು ನಮ್ಮ ಭಾಷೆ ಕಲಿಯದೆ ಅಗೌರವ ಸೂಚಿಸುತ್ತಿದ್ದಾರೆ ಅಂತ ಬೇರೆ ಕನ್ನಡ ಪ್ರಾಧೀಕಾರದ ಅಧ್ಯಕ್ಷ ಶ್ರೀ ಸಿದ್ದಲಿಂಗಯ್ಯನವರು ಇತ್ತೀಚೆಗೆ ಹೇಳಿಕೆಯೊಂದನ್ನಿತ್ತಿದ್ದಾರೆ. ನಮಗೆ ಬೇರೆಯವರು ಕನ್ನಡ ಕಲಿಯುವುದು ಮುಖ್ಯವೋ ಅಥವಾ ಅವರು ನಮ್ಮ ನಾಡು , ಜನ, ಭಾಷೆ ಮತ್ತು ಸಂಸ್ಕೃತಿಯನ್ನು ಗೌರವದಿಂದ ಕಾಣಬೇಕು ಅನ್ನುವುದು ಜಾಸ್ತಿ ಮುಖ್ಯವೋ ನಾವು ಮೊದಲು ನಿರ್ಧರಿಸಬೇಕು.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಸಂಸ್ಕೃತ ಮತ್ತು ಕನ್ನಡ ಕುರಿತು ಬಡಿದಾಟ ಯಾಕೆ?

ಸಂಪದದ ಒಳಹೊರಗೆ ಕನ್ನಡದ ಬಗ್ಗೆ ಕಾಳಜಿ ಇರುವ ( ಅರಿವಿನ ಜೊತೆಗೆ :-)) ಜನರಲ್ಲಿ ಉಂಟಾಗುವ ವಾದವಿವಾದಗಳು ನನಗೆ ಒಮ್ಮೊಮ್ಮೆ ಅಚ್ಚರಿಯನ್ನು ಕೆಲವೊಮ್ಮೆ ಬೇಜಾರನ್ನು ಉಂಟು ಮಾಡುತ್ತವೆ.ಈ ಗಲಾಟೆ ಲಟಾಪಟಿಗಳು ವ್ಯಕ್ತಿ, ಜಾತಿಗಳನ್ನು ತೆಗೆಳುವದರಲ್ಲೋ ಅಥವಾ ಒಣ ಪಾಂಡಿತ್ಯ ತೋರುವುದರಲ್ಲೋ ಮುಗಿಯುತ್ತದೆ. ಇವುಗಳಲ್ಲಿ ನಾನು ಕಂಡ ಸಾಮಾನ್ಯ ಸಂಗತಿಗಳು ಇಂತಿವೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ

ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ
ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ. ಇದರ ಬಗ್ಗೆ ಪತ್ರಿಕೆಯಲ್ಲಿ ಸುದ್ದಿಗಳು ಬರುತ್ತಲೇ ಇವೆ. ಅದಿರಲಿ ಇದೇ ವಿಷಯ ಬೆಂಗಳೂರಿನಲ್ಲಿ ಅತಿರೇಕವಾಗಿ ಬೆಳೆದಿದೆ. ಇದರ ಬಗ್ಗೆ ನನ್ನ ಸ್ನೇಹಿತನೊಬ್ಬ ಮೇಲ್ ಕಳಿಸಿದ, ಅದನ್ನು ಹಾಗೆ ಕನ್ನಡೀಕರಿಸಿದ್ದೇನೆ. ಸ್ವಲ್ಪ ಓದಿ.......

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ನನಗೆ ಹಿಡಿಸಿದ ಕವಿರಾಜಮಾರ್ಗದ ಒಂದಿಶ್ಟು ಸಾಲುಗಳು

(೧)
ಅಱಿವುಳ್ಳವರೊಳ್ ಬೆರಸದು
ದಱಿಂದಮರಿಯದರೊಳಪ್ಪ ಪರಿಚಯದಿಂದಂ
ನೆಱೆಯಿಂದ್ರಿಯಮಂ ಗೆಲ್ಲದು
ದಱಿಂದಮಕ್ಕುಂ ಜನಕ್ಕೆ ಪೀನಂ ಬೆಸನಂ
[ಅರಿವುಳ್ಳವರೊಂದಿಗೆ ಬೆರೆಯದಿರುವುದರಿಂದಲೂ, ದಡ್ಡರೊಂದಿಗೆ ಆಗುವ ಪರಿಚಯದಿಂದಲೂ, ಇಂದ್ರಿಯಗಳನ್ನು ಚೆನ್ನಾಗಿ ಗೆಲ್ಲದೆ ಇರುವುದರಿಂದಲೂ ಮಂದಿಗೆ ಹೆಚ್ಚು ಬೆಸನವು ಒದಗುತ್ತದೆ ]

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಬೆಳೆಯಬೇಕಿದೆ ಕನ್ನಡ ‘ಬರಹ-ನುಡಿ’ ಯಿಂದಾಚೆಗೆ!

(ನಾಗೇಶ್ ಹೆಗಡೆಯವರ ಸಂಪದ ಪಾಡ್‍ಕ್ಯಾಸ್ಟ್ ಸಂದರ್ಶನ ಕೇಳಿದ ನಂತರ, ಡಿಜಿಟಲ್ ಡಿವೈಡ್ ಮತ್ತು ಕಂಪ್ಯೂಟರಿನಲ್ಲಿ ಕನ್ನಡದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದೆ. ನಾಲ್ಕು ವರ್ಷಗಳ ಹಿಂದೆ ದಟ್ಸ್‌ಕನ್ನಡ.ಕಾಮಿನಲ್ಲಿ ಬರೆದ ಈಗಿನ ಈ ಸದರಿ ಲೇಖನ ಮತ್ತೆ ಆ ವಿಚಾರದ ಚರ್ಚೆಗೆ ಸೂಕ್ತ ಮತ್ತು ಆಗಿನ ಎಷ್ಟೋ ವಿಚಾರಗಳು ಈಗಲೂ ಪ್ರಸ್ತುತ ಎನ್ನಿಸಿದ್ದರಿಂದ ಇಲ್ಲಿಯೂ ಅಪ್‍ಲೋಡ್ ಮಾಡುತ್ತಿದ್ದೇನೆ. - ರವಿ - ಮಾರ್ಚ್ 4, 2008)

[ಕಂಪ್ಯೂಟರ್‌ನಲ್ಲಿ ಕನ್ನಡದ ಸಾಧ್ಯತೆಗಳ ವಿಸ್ತರಿಸಬೇಕಾಗಿದ್ದ ‘ಕಗಪದ’ ತೌಡು ಕುಟ್ಟುವ ಕೆಲಸ ಮಾಡುತ್ತಿದ್ದರೆ, ತನ್ನ ಯಾವತ್ತಿನ ದಿವ್ಯ ಉದಾಸೀನದಲ್ಲಿ ಕನ್ನಡಿಗ ಮುಳುಗಿಹೋಗಿದ್ದಾನೆ. ಇಂಥದೊಂದು ಸಂಧಿಕಾಲದಲ್ಲಿ , ಕನ್ನಡ ತಂತ್ರಾಂಶದ ಕುರಿತು ಸದ್ಯದ ವಿರೋಧಾಭಾಸಗಳು ಹಾಗೂ ಆಗಬೇಕಾದ ಕೆಲಸಗಳ ಕುರಿತು ಒಂದು ಅವಲೋಕನ. - ಜನವರಿ 9, 2004 - ದಟ್ಸ್‌ಕನ್ನಡ.ಕಾಮ್]

ಸಾವಿರಾರು ಜನ ಅಂತರ್ಜಾಲದ ಕನ್ನಡ ಪ್ರೇಮಿಗಳು ಸಕ್ರಿಯವಾಗಿರುವ ಯಾಹೂ ಗ್ರೂಪ್‌ಗಳಲ್ಲಿ ಕಳೆದ ಹದಿನೈದಿಪ್ಪತ್ತು ದಿನಗಳಿಂದ ಒಂದು ವಿಷಯದ ಮೇಲೆ ಕೆಂಡಾಮಂಡಲ ಚರ್ಚೆ ನಡೆಯುತ್ತಿದೆ; ವೈಯುಕ್ತಿಕ ಆರೋಪಗಳಿಂದ ಹಿಡಿದು ಕನ್ನಡದ ಸಾರ್ವಜನಿಕ ಹಿತಾಸಕ್ತಿಯವರೆಗೂ ಸಾಗಿದೆ ಈ ಚರ್ಚೆ. ಚರ್ಚೆಯ ವಸ್ತು : ‘ಕನ್ನಡ ಗಣಕ ಪರಿಷತ್ತು’ ; ಕನ್ನಡದ ‘ನುಡಿ’ ತಂತ್ರಾಂಶದ ತಯಾರಕರು.

‘ನುಡಿ’ ಸರ್ಕಾರಿ ಕಚೇರಿಗಳಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಉಚಿತ ತಂತ್ರಾಂಶ. ಇಲ್ಲಿಯವರೆಗೆ ತಮ್ಮ ಸೇವೆಗೆ ಸರ್ಕಾರದಿಂದ ಸುಮಾರು 30 ಲಕ್ಷ ರೂಪಾಯಿಗಳಷ್ಟು ಅನುದಾನ ಪಡೆದಿರುವ ಈ ಸಂಸ್ಥೆ ಈ ಮಧ್ಯೆ ಕನ್ನಡ ತಂತ್ರಾಂಶ ಅಭಿವೃದ್ಧಿಯ ಕೆಲಸ ಬಿಟ್ಟು ಬೇರೆ ಯಾರೂ ಮಾಡಬಹುದಾದ ಕೇವಲ Data Entry ಕೆಲಸ ಮಾಡುತ್ತಿದೆ ಎನ್ನುವುದು ಕೆಲವರ ಆರೋಪ. ಇದೇ ವಿಷಯದ ಮೇಲೆ ಮೇ 25ರಂದು ಮೈಸೂರಿನಲ್ಲಿ ಗಣಕಯಂತ್ರವನ್ನು ಉಪಯೋಗಿಸುವ ಪರಿಣತಿ ವರ್ಷಗಳ ಹಿಂದಿನಿಂದಲೇ ಇರುವ ಪ್ರಸಿದ್ಧ ಸಾಹಿತಿ ಪೂರ್ಣಚಂದ್ರ ತೇಜಸ್ವಿಯವರ ಆಗ್ರಹದ ಮೇರೆಗೆ ಒಂದು ಸಭೆ ಏರ್ಪಾಟಾಗಿತ್ತು. ತೇಜಸ್ವಿ, ಪ್ರೊ.ಲಿಂಗದೇವರು ಹಳೆಮನೆ, ಕಗಪದ ಮಾಜಿ-ಹಾಲಿಗಳಾದ ಪವನಜ, ಶ್ರೀನಾಥಶಾಸ್ತ್ರಿ ಮುಂತಾದವರ ನಡುವೆ ಒಂದು ದಿನಪೂರ್ತಿಯ ಚರ್ಚೆ ನಡೆಯಿತು. ಈ ಸಭೆಯಲ್ಲಿ ಕೇವಲ ತೌಡು ಕುಟ್ಟುವ ಕೆಲಸವಷ್ಟೇ ನಡೆಯಿತು, ಮತ್ತೇನೇನೂ ಪ್ರಯೋಜನವಾಗಲಿಲ್ಲ ಎನ್ನುವ ಸಂಗತಿ ಸಾರ್ವತ್ರಿಕವಾಯಿತು...

ಇವೆಲ್ಲವುಗಳ ಹಿನ್ನೆಲೆಯಲ್ಲಿ ಕಗಪದ ( ಕನ್ನಡ ಗಣಕ ಪರಿಷತ್‌) ಇತ್ತೀಚಿನ ಯೋಜನೆಗಳು ಸಹ ಅವರಿಗೆ ಅಂತಹ ಕ್ರೆಡಿಬಿಲಿಟಿ ಕೊಡುವಂತಹವುದಲ್ಲ. ಈ ಮಧ್ಯೆ ಅವರು ಮೈಸೂರು ವಿಶ್ವವಿದ್ಯಾನಿಲಯ ಮತ್ತು ಇನ್ನೊಂದು ಖಾಸಗಿ ಸಂಸ್ಥೆಯಾಂದಿಗೆ ಸಹಭಾಗಿತ್ವದಲ್ಲಿ ಕನ್ನಡ ವಿಶ್ವಕೋಶವನ್ನು CDಯಲ್ಲಿ ಹೊರತರುವ ಕೆಲಸ ಹಮ್ಮಿಕೊಂಡಿದ್ದಾರೆ. ಇಲ್ಲಿ ಕಗಪದ ಪಾತ್ರ ಅಂತಹ ದೊಡ್ಡದೇನೂ ಇದ್ದ ಹಾಗೆ ನನಗಂತೂ ಕಾಣುತ್ತಿಲ್ಲ. ವಿಶ್ವವಿದ್ಯಾನಿಲಯ ಮತ್ತು ಖಾಸಗಿ ಸಂಸ್ಥೆಯವರೇ ಇದನ್ನು ನಿಭಾಯಿಸಬಹುದು. ಆದ್ದರಿಂದಾಗಿಯೇ, "ಇಂಥ DTP ಕೆಲಸವನ್ನು" ಕಗಪ ಮೊದಲ ಆದ್ಯತೆಯೆಂದು ಸ್ವೀಕರಿಸಿ ಮಾಡಬೇಕಿತ್ತೇ?’. ಈ ಪ್ರಶ್ನೆ ಹಲವರ ಬಾಯಿಂದ ಹೊರಬೀಳುತ್ತಿದೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡೆವೇ ಇರಲಿ, ಬೇಡವೆಂದರೆ ಮಾಡು ಜಾಗ ಖಾ(ಲೀ)-ರಘೋತ್ತಮ್ ಕೊಪ್ಪರ

ಕನ್ನಡೆವೇ ಇರಲಿ, ಬೇಡವೆಂದರೆ ಮಾಡು ಜಾಗ ಖಾ(ಲೀ)

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

Firefox ಬಳಸುವ ಕನ್ನಡಿಗರಿಗೆ ಸಿಹಿ ಸುದ್ದಿ

ನಾನು ವೆಬ್ ಬ್ರೌಸ್ ಮಾಡಲು Firefox ಬಳಸುತ್ತೇನೆ. ಆದರೆ ಕನ್ನಡ ವೆಬ್ ಪೇಜ್ ಗಳಿಗೆ ಹೋದಾಗ ಅದು ಅಕ್ಷರಗಳನ್ನು ಸರಿಯಾಗಿ ತೋರಿಸುವುದಿಲ್ಲ. ಈಗ ಕೆಲವು ದಿನಗಳ ಹಿಂದೆ Firfox 3 beta 4 ವರ್ಶನ್ ಬಿಡುಗಡೆ ಮಾಡಿದ್ದಾರೆ. ನಾನು ಒಮ್ಮೆ ಪರೀಕ್ಷಿಸೋಣ ಎಂದು download ಮಾಡಿದೆ. ಅದರಲ್ಲಿ ಕನ್ನಡ ಸರಿಯಾಗಿ ಮೂಡುತ್ತಿದೆ :).

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕರ್ನಾಟಕದಲ್ಲಿ ಕನ್ನಡಿಗರೆಷ್ಟು ?

೨೦೦೧ರ ಜನಗಣತಿಯ ಪ್ರಕಾರ ಕರ್ನಾಟಕದಲ್ಲಿ ಕನ್ನಡಿಗರ ಸಂಖ್ಯೆ ಎಷ್ಟು ಗೊತ್ತಿದೆಯೇ?

ಒಟ್ಟು ಜನಸಂಖ್ಯೆ ೫.೨೮ ಕೋಟಿ

ಕನ್ನಡಿಗರು ೩.೪೮ ಕೋಟಿ (೬೬%)

ಉರ್ದು ಭಾಷಿಕರು ೫೫.೩೯ ಲಕ್ಷ

ತೆಲುಗರು ೩೬.೯೮ ಲಕ್ಷ

ಮರಾಠಿಗರು ೧೮.೯೨ ಲಕ್ಷ

ತಮಿಳರು ೧೮.೭೪ ಲಕ್ಷ

ಹಿಂದಿ ಭಾಷಿಕರು ೧೩.೪೪ ಲಕ್ಷ

ಮಲಯಾಳಿಗಳು ೭.೦೧ ಲಕ್ಷ

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಹೊಗೇನಕಲ್ ಪ್ರೀತಿ.ಎಂ. ಕೃಪೆ. ಕ.ರ.ವೇ.

ಕನ್ನಡಿಗರ ಮೇಲೆ ತಮಿಳರ ಕುತಂತ್ರ ಇವತ್ತಿಂದಲ್ಲ ನಿನ್ನೇದಲ್ಲ. ತಲೆತಲಾಂತರದಿಂದಲೂ ಇವರು ಕನ್ನಡಿಗರಿಗೆ ಕಿರುಕುಳ ಕೊಡ್ತಾನೇ ಇದಾರೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಅವನಿವನುವನ್

ಕನ್ನಡದಲ್ಲಿ ಎಲ್ಲರಿಗೂ ಗೊತ್ತಿರುವಂತೆ ಅವನು, ಇವನು, ಆ(ಯಾ)ವನು ಮಾತ್ರ ಎಲ್ಲರಿಗೂ ಗೊತ್ತಿರಬಹುದು. ಆದರೆ ಉವನು, ಉವಳು, ಉದು, ಊ, ಊತ, ಊಕೆ, ಉಲ್ಲಿ ಈ ಪದಗಳು ಬಹಳ ಜನರಿಗೆ ಗೊತ್ತಿಲ್ಲ. ’ಅದು’ ಎಂದರೆ ದೂರದಲ್ಲಿರುವ ವಸ್ತುವನ್ನು ಸೂಚಿಸುತ್ತದೆ. ’ಇದು’ ಹತ್ತಿರದಲ್ಲಿರುವ ವಸ್ತುವನ್ನು ಸೂಚಿಸುತ್ತದೆ. ’ಉದು’ ಇವೆರಡರ ನಡುವೆ ಇರುವ ವಸ್ತುವನ್ನು ಸೂಚಿಸುತ್ತದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಮಱೆತುಹೋದ ಹೞಗನ್ನಡ ಪದಗಳು

ಈಂಟು=ಕುಡಿ
ಆಟರ್‍=ಮೇಲೆ ಬೀೞು, ಎಗರು
ಕವರ್‍=ಆವರಿಸು, ಮುಗಿಬೀೞು
ಆೞ್=ಮುೞುಗು
ಮಱುಗು=ಕಾಯು, ತಾಪಗೊಳ್ಳು, ಪಶ್ಚಾತ್ತಾಪಪಡು
ಮಾಣ್‍=ನಿರಾಕರಿಸು, ಬೇಡವೆನ್ನು, ಬಿಟ್ಟುಬಿಡು
ಪಾರ್‍=ನಿರೀಕ್ಷಿಸು

ವಿ. ಸೂ. ಈ ಸಂಗ್ರಹವನ್ನು ಪರಿಷ್ಕರಿಸುತ್ತೇನೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ನಾವೆಲ್ಲಾ ಆಫ್ರಿಕಾದಿಂದ ಬಂದವರು

ಸುಧಾ , ಮೇ ೧ರ ಸಂಚಿಕೆಯಲ್ಲಿ "ಮಾನವ ಇತಿಹಾಸದ ’ಸಾಂಗ್ ಲೈನ್ಸ್’" ಎಂಬ ಮುಖಪುಟ ಲೇಖನ ಪ್ರಕಟವಾಗಿದೆ.
ಇದರಲ್ಲಿ ಲೇಖಕರು ( ಲಕ್ಷ್ಮೀಪತಿ ಕೋಲಾರ) ಆಫ್ರಿಕಾದ ಬುಡಕಟ್ಟುಗಳಿಗೂ ದಕ್ಚಿಣ ಭಾರತಕ್ಕೂ , ಆಸ್ಟ್ರೇಲಿಯಾದ ಆದಿವಾಸಿಗಳಿಗೂ ಇರಬಹುದಾದ ಪುರಾತನ ನಂಟಿನ ಬಗ್ಯೆ ಬರೆದಿದ್ದಾರೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡ ಕೀ ಲೇಔಟ್‍ನಲ್ಲಿನ ತೊಂದರೆಗಳ ಬಗೆಗೆನ ಚರ್ಚೆ

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಅನಂತಮೂರ್ತಿಯವರ -'ಕನ್ನಡ ಕಾಪಾಡುವ ಹೋರಾಟ, ಆನಂದ'.

ಇವತ್ತಿನ 'ವಿಜಯ ಕರ್ನಾಟಕ'ದ ಸಾಪ್ತಾಹಿಕಪುರವಣಿಯಲ್ಲಿ ಬಂದಿರುವ ಅನಂತಮೂರ್ತಿಯವರ ಲೇಖನ ಇದು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಮನ ತುಂಬಿದ ಕವಿ

ಮನ ತುಂಬಿದ ಕವಿ
“ಎದೆ ತುಂಬಿ ಹಾಡಿದೆನು ಅಂದು ನಾನು” ಎಂದು ಹಾಡಿದರು ಜಿ.ಎಸ್. ಶಿವರುದ್ರಪ್ಪನವರು.
“I write when I cannot help writing” ಎಂದರು ಕವಿ ರವೀಂದ್ರ ನಾಥ ಟಾಗೂರರು
“ಎನ್ನಪಾಡೆನಗಿರಲಿ ಅದರ ಹಾಡನಷ್ಟೇ ಹಾಡುವೆನು ರಸಿಕ ನಿನಗೆ,
ಕಲ್ಲು ಸಕ್ಕರೆಯಂಥ ನಿನ್ನೆದೆಯು ಕರಗಿದರೆ ಅದರ ಸವಿಯನಷ್ಟೇ ಹಣಿಸು ನನಗೆ”
ಹೀಗೆಂದವರು ಕನ್ನಡದ ವರಕವಿ ದ.ರಾ.ಬೇಂದ್ರೆಯವರು.
ಸಾಹಿತ್ಯ ಲೋಕದಲ್ಲಿ ಅರಳಿದ ಕುಸುಮಗಳೆಂದರೆ ಈ ಸಾಹಿತಿಗಳು. ಸಂವೇದನಾಶೀಲ ವ್ಯಕ್ತಿಗಳು. ತಮ್ಮ ನೋವು ನಲಿವುಗಳನ್ನೆಲ್ಲಾ ಹಾಡಾಗಿ ಹೊರ ಹೊಮ್ಮಿಸಿ ಹಗುರಾಗುತ್ತಿದ್ದರೇನೋ ಮನದೊಳಗೆ. ಹಾಗೆಯೇ ದ.ರಾ.ಬೇಂದ್ರೆಯವರ ಅನೇಕ ಕವನಗಳು ಅಂತಃಕರಣ ಕುದ್ದು ಕುದ್ದು ಹೊರಬಿದ್ದ ಕವನಗಳಾಗಿರಬೇಕು. ಅವರು ತಮ್ಮ ಬದುಕಿನಲ್ಲಿ ಪಟ್ಟ ಪಾಡೇ ಹಾಡಾಗಿ ಹೊರಬಂದು ಓದುಗರ ಮನ ಮುಟ್ಟಿದೆ. ಹೀಗೆ ಅವರ ನೋವಿನ ಹಾಡುಗಳನ್ನು ಓದಿದಾಗ ಕಣ್ಣೀರು ಮಿಡಿದು ಅವರ ಹಾಸ್ಯ ಮಾತುಗಳ ಬಗ್ಗೆ ಕೇಳಿದಾಗ ಉಲ್ಲಾಸಗೊಂಡು ನಾನು ನಕ್ಕು ಸಂತೋಷ ಅನುಭವಿಸಿದ್ದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆ ನನಗೆ.
ಬೇಂದ್ರೆ ಬಡತನದಲ್ಲಿ ಬೆಂದವರು. ಸಾವು ನೋವುಗಳ ಬೆಂಕಿಯಲ್ಲಿ ಬೆಂದವರು. ಎದೆಯುದ್ದದ ಮಗನನ್ನು ಕಳೆದುಕೊಂಡಾಗ,

field_vote: 
Average: 4 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ದನಿಯಱಿವು

ಕನ್ನಡ ದನಿಗಳ ಅಱಿವಿನ ಬಗ್ಗೆ ಬರೆಯುತ್ತಿದ್ದೇನೆ.

ಉಸಿರುಲಿಗಳು(ಸರಗಳು=ಸ್ವರಗಳು):

ಅ ಆ (ಕೊರಲು(ಳು)ಲಿ). 

ಇ ಈ (ಅಂಗುೞುಲಿ).

ಉ ಊ (ತುಟಿಯುಲಿ).

(ಋ, ೠ) (ನೆತ್ತಿಯುಲಿ) 

ಎ ಏ ಐ (ಕೊರಲಂಗುೞುಲಿ).

ಒ ಓ ಔ (ಕೊರಲ್ದುಟಿಯುಲಿ).

ತಡೆಯುಲಿಗಳು(ಬೆಂಜನಗಳು):

ಕ (ಖ) ಗ (ಘ) ಙ (ಕೊರಲುಲಿಗಳು) ನನ್ನ ಪ್ರಕಾರ ಮೆದುವಂಗುೞುಲಿ .

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ನಿಮಗೆ ಕನ್ನಡ ಬರುತ್ತಾ?

(ಈ ಲೇಖನದ ಮೂಲ ಇಂಗ್ಲೀಶ್ ನಲ್ಲಿರುವುದರಿಂದ ಇದು ಪರಭಾಷೆಯವರನ್ನು ಉದ್ದೇಶಿಸಿ ಬರೆಯಲಾಗಿದೆ ಎಂದು ಅಥವಾ ಕನ್ನಡ ತಾಯಿನುಡಿಯಾದರೂ ಇಂಗ್ಲೀಶ್ ನಲ್ಲಿಯೇ ಓದಬಯಸುವವರಿಗೆಂದೇ ಬರೆಯಲಾಗಿದೆ ಎಂದು ಭಾವಿಸಬಹುದು. ಇದನ್ನು ನನ್ನ ಗೆಳೆಯನೊಬ್ಬ ಇ-ಮೇಲ್ ಮಾಡಿದ್ದರಿಂದಾಗಿ ಯಾರು ಬರೆದಿರುವುದು ಎಂದು ತಿಳೀದಿಲ್ಲ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡಕಂದರ್ ತಪಂಗೆಯ್ದರ್

ಕನ್ನಡದೇವಿಯ ದಯಮೇ-
ಮಿನ್ನುಂ ತಮಗೆ ದೊರೆಯದೆನುತುಂ ತೆಂಕಣದಾ
ಪೊನ್ನಂಪೇಟೆಯ ಕಾಡೊಳ್
ಕನ್ನಡಕಂದರ್ ಮರದಡಿಯೊಳ್‍ ತಪಗೆಯ್ದರ್||

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕರ್ನಾಟಕದಲ್ಲಿ ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೆ ಇರುವ ತೊಡಕುಗಳೇನು?

ಕನ್ನಡ ನಾಡು, ನುಡಿಯ ಬಗ್ಗೆ ಕಾಳಜಿಯ ಲೇಖನವೊಂದನ್ನು ಬರೆಯದೆ ತುಂಬಾನೇ ದಿನಗಳಾಗಿ ಹೋದವಲ್ಲ ಎನ್ನುವ ಸಂಗತಿಯು ಮನವನ್ನು ಹಗಲಿರುಳು ಕಾಡುತ್ತಲೇ ಇತ್ತು. ಅದನ್ನು ಅರಿತು ನನ್ನ ಮನದಲ್ಲೇ ಕ್ರೋಢೀಕರಿಸಿದ್ದ ಅಭಿಪ್ರಾಯದ ನುಡಿಗಳನ್ನು ಬಿತ್ತರಿಸುವ ಸಲುವಾಗಿ ಈ ಲೇಖನವನ್ನು ಬರೆದಿರುವೆನು. ಕರ್ನಾಟಕದಲ್ಲಿ ಕನ್ನಡ ಭಾಷೆಯ ಸಾರ್ವಭೌಮತ್ವಕ್ಕೆ ಇರುವ ತೊಡಕುಗಳೇನು?

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡ ವಿಕಿಪೀಡಿಯಾ

ಸಂಪದ ಬಳಗದ ಸದಸ್ಯರಿಗೆ ನಮಸ್ಕಾರ...

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ರಾಷ್ಟ್ರ ಭಾಷೆ ಸೋಗಿನಲ್ಲಿ ಹಿಂದಿ ಹೇರಿಕೆ!

ಭಾರತ ದೇಶದ ಒಟ್ಟು ಐಕಮತ್ಯ, ಸಮಗ್ರತೆ ಮತ್ತು ಪರಿಪೂರ್ಣತೆಯನ್ನು ಭದ್ರಗೊಳಿಸಲು, ಅದರ ಎಲ್ಲಾ ಭಾಷಾವಾರು ಜನಾಂಗಗಳ ಪ್ರಾದೇಶಿಕ ಸ್ವಾಯತ್ತತೆಯ ಅಖಂಡತೆಯನ್ನು ಕಾಪಾಡುವುದು ಹಾಗು ಬೆಳೆಸುವುದು ಬಹುಮುಖ್ಯವಾದದ್ದು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಬಿಡದಿಯಲ್ಲಿ ತಲೆ ಎತ್ತಿರುವ "INNOVATIVE FILM CITY" ಯಲ್ಲಿ ಕನ್ನಡಾನೂ ಸ್ವಲ್ಪ ಒಳಗೆ ಬಿಡಿ!

ನೆನ್ನೆ, ಬೆಂಗಳೂರು-ಮೈಸೂರು ರಸ್ತೆಯಲ್ಲಿ, ಬಿಡದಿ ಸಮೀಪದಲ್ಲಿ ಕಟ್ಟಿರುವ "ಇನ್ನೋವೇಟಿವ್ ಫಿಲ್ಮ್ ಸಿಟಿ" ನೋಡಿ ಬರುವ [ದೌರ್]ಭಾಗ್ಯ ಒದಗಿ ಬಂದಿತ್ತು. ಬೆಂಗಳೂರಿನಲ್ಲಿ innovative multiplex ಎಂಬ ಮೊಟ್ಟ ಮೊದಲನೆ "ಬಹು ಪರದೆ ಸಿನೆಮಾಮನೆ" ಕಟ್ಟಿದ ಮಂದಿಯೇ ಇದನ್ನು ನಿರ್ಮಿಸಿದ್ದಾರೆ ಎಂದು ಬಲ್ಲವರು ತಿಳಿಸಿದ್ದರು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಶಾಸ್ತ್ರೀಯ ಭಾಷೆಗಳು ಹಾಗೂ ಕನ್ನಡ

ಕಳೆದ ಮೂರ್ನಾಲ್ಕು ವರ್ಷಗಳಿಂದ ಈ "ಕ್ಲಾಸಿಕಲ್" ಭಾಷೆ ಕುರಿತು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ವಲಯದಲ್ಲಿ ಭಾರೀ ಚರ್ಚೆಯೇ ನಡೆದಿದೆ. UNESCO(ಯುನೆಸ್ಕೊ ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಹಾಗೂ ಸಾಂಸ್ಕೃತಿಕ ಸಂಸ್ಥೆ) ಬಹಳ ವರ್ಷಗಳ ಹಿಂದೆಯೇ ಭಾರತದ ಅತ್ಯಂತ ಪ್ರಾಚೀನ ಭಾಷೆಯೆಂದು ಸಾಮಾನ್ಯವಾಗಿ ಪರಿಗಣಿಸಲ್ಪಟ್ಟಿರುವ ಸಂಸ್ಕೃತವನ್ನು ಒಳಗೊಂಡಂತೆ ಕ್ಲಾಸಿಕಲ್ ಗ್ರೀಕ್, ಲ್ಯಾಟಿನ್ ಮತ್ತು ಕ್ಲಾಸಿಕಲ್ ಪರ್ಶಿಯನ್ (ಇಂಡೋ-ಯುರೋಪಿಯನ್ ಭಾಷೆಗಳು) ಕ್ಲಾಸಿಕಲ್ ಚೈನೀಸ್ (ಸೈನೊ-ಟಿಬೆಟಿಯನ್ ಭಾಷೆ) ಭಾಷೆಗಳನ್ನು "ಕ್ಲಾಸಿಕಲ್" ಭಾಷೆಗಳೆಂದು ಗುರುತಿಸಿತ್ತು. ನಮ್ಮ ದೇಶದಲ್ಲಿ ಈ ಶಾಸ್ರೀಯ ಭಾಷೆ ಎಂಬುದರ ಕುರಿತು ಚರ್ಚೆ ನಡೆಯಲಾರಂಭಿಸಿದ್ದು ನಮ್ಮ ನೆರೆಯ ಭಾಷೆ, ದ್ರಾವಿಡ ಭಾಷೆಗಳಲ್ಲಿಯೇ ಅತ್ಯಂತ ಪ್ರಾಚೀನ ಭಾಷೆಯೆಂದು ಹೇಳಲಾಗುವ ತಮಿಳನ್ನು ಭಾರತ ಸರಕಾರ "ಕ್ಲಾಸಿಕಲ್" ಭಾಷೆ ಎಂದು ಘೋಷಿಸಿದ ನಂತರವೇ. 2004 ನೇ ಇಸವಿ ಅಕ್ಟೋಬರ್ 12 ರಂದು ಕೇಂದ್ರ ಸರಕಾರ ಈ ಕುರಿತು ಅಧಿಸೂಚನೆ ಹೊರಡಿಸುವ ಮೂಲಕ ತಮಿಳನ್ನು ಅಧಿಕೃತವಾಗಿ "ಕ್ಲಾಸಿಕಲ್" ಭಾಷೆ ಎಂದು ಘೋಷಿಸಿತು. ಆನಂತರವಷ್ಟೇ ಕರ್ನಾಟಕದಲ್ಲಿ ಕ್ಲಾಸಿಕಲ್ ಭಾಷೆಯ ಕುರಿತು ಚರ್ಚೆ ನಡೆಯಲಾರಂಭಿಸಿದ್ದು. ಒಂದು ವೇಳೆ ತಮಿಳಿಗೆ ಕ್ಲಾಸಿಕಲ್ ಭಾಷೆ ಸ್ಥಾನಮಾನ ಸಿಗದಿದ್ದಲ್ಲಿ ಈ ಚರ್ಚೆಯೇ ಹುಟ್ಟುತ್ತಿರಲಿಲ್ಲವೇನೋ. ಅಂದು ಆರಂಭವಾದ ಚರ್ಚೆ ಇಲ್ಲಿಯವರೆಗೂ ಮುಂದುವರಿಯುತ್ತಲೇ ಬಂದಿದೆ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಅಂಗುಲಹುಳು

ಕ್ರಿಸ್ತಪೂರ್ವ ಒಂದನೇ ಶತಮಾನದಿಂದ ಮೊದಲುಗೊಂಡು ಇಂದಿನವರೆಗೆ ಕನ್ನಡ ನಾಡು ನುಡಿ ಸಂಸ್ಕೃತಿ ನಿಂತನೀರಾಗದೆ ಉಚ್ಛ್ರಾಯಸ್ಥಿತಿಯಲ್ಲಿ ಸಾಗುತ್ತಿವೆ. ಪಂಪರನ್ನಾದಿಗಳ ಜೈನಯುಗವಾಗಿರಬಹುದು, ಕುಮಾರವ್ಯಾಸ ಪುರಂದರರ ಭಾಗವತಯುಗವಾಗಿರಬಹುದು, ರೈಸ್ ಕಿಟೆಲ್ಲರ ಕ್ರೈಸ್ತಯುಗವಾಗಿರಬಹುದು, ಕುವೆಂಪುಕಾರಂತರ ಜ್ಞಾನಪೀಠಯುಗವಾಗಿರಬಹುದು ಎಲ್ಲಿಯೂ ಕನ್ನಡಕ್ಕೆ ಸೋಲಿಲ್ಲ, ಕನ್ನಡಕ್ಕೆ ಕುಂದಿಲ್ಲ.
ಒಂದಲ್ಲ ಒಂದು ಸಂದರ್ಭದಲ್ಲಿ ಇಡೀ ದಕ್ಷಿಣ ಇಂಡಿಯಾವನ್ನು ತನ್ನ ತೆಕ್ಕೆಯಲ್ಲಿಟ್ಟು ಆಳಿದ ರಾಜಪರಂಪರೆ ಕನ್ನಡಿಗರದು. ದಕ್ಷಿಣಾದಿ ಸಂಗೀತ ಪ್ರಕಾರಕ್ಕೆ ಕರ್ನಾಟಕ ಸಂಗೀತ ಎನ್ನುವ ಹೆಮ್ಮೆಯ ನಾಮಾಂಕಿತದ ಗೌರವಭಾಜನರು ಕನ್ನಡಿಗರು, ರಾಷ್ಟ್ರಕ್ಕೆ ಬಂಗಾರ ನೀಡುವ ಪರುಷದ ಶಕ್ತಿಯಿದೆ ಕನ್ನಡದ ನೆಲಕ್ಕೆ, ಸುಗಂಧಸೌರಭ ಸೂಸುವ ಚಂದನ ಮಲ್ಲಿಗೆಗಳ ನಾಡಲ್ಲವೇ ನಮ್ಮದು!
ಭಾರತ, ರಾಮಾಯಣಗಳ ಖಳರಿಗೆ ಉದಾತ್ತತೆಯ ಬಣ್ಣ ಲೇಪಿಸಿ ಕಾವ್ಯದಲ್ಲಿ ನೆಲದ ಸೊಗಡಿನ ಕಂಪು ಪಸರಿಸಿದ ಕವಿಗಳು ನಮ್ಮವರು. ನವರಸಗಳ ಸಿದ್ಧಿಯಲ್ಲ ನವರಸಗಳ ಅಭಿವ್ಯಕ್ತಿಯಲ್ಲಿನ ಎಣೆಯಿಲ್ಲದ ಸಾಮರ್ಥ್ಯಕ್ಕಲ್ಲವೆ ಸಂದಿವೆ ಜ್ಞಾನಪೀಠಗಳು. ಕನ್ನಡದಲ್ಲಿ ಏನುಂಟು ಏನಿಲ್ಲ? ಕನ್ನಡವ ಕಾಣಬಲ್ಲ ಕಣ್ಣುಬೇಕು, ಮನಸು ಬೇಕು.
ಕನ್ನಡದಲ್ಲಿ ಏನೆಲ್ಲ ಇದೆ ಎಂದು ನಮಗೆ ತೋರಿಸಿಕೊಟ್ಟವರು ವಿದೇಶೀಯರು ಎಂಬುದನ್ನು ಕನ್ನಡದ ಕವಿ ಎ ಕೆ ರಾಮಾನುಜನ್ ಅವರು ತಮ್ಮ ಕವನವೊಂದರಲ್ಲಿ ಧ್ವನ್ಯಾತ್ಮಕವಾಗಿ ಹೇಳಿದ್ದಾರೆ. ನಾನು ಬಹಳ ವರ್ಷಗಳ ಹಿಂದೆ ಆ ಕವನ ಓದಿದ್ದು. ಈಗಲೂ ಅದರ ಹೂರಣ ಕಾಡುತ್ತದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ವೈದ್ಯಕೀಯ,ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡಕ್ಕೆ ಒತ್ತು!

ಮುಖ್ಯಮಂತ್ರಿ ಯಡಿಯೂರಪ್ಪನವರು ವೈದ್ಯಕೀಯ ಮತ್ತು ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕನ್ನಡಕ್ಕೆ ಒತ್ತು ನೀಡಲು ಸರಕಾರ ಬಯಸಿದೆ ಎಂದು ಘೋಷಿಸಿದ್ದಾರೆ.ಅದಕ್ಕಾಗಿ ಅರೆಕಾಲಿಕ ಉಪನ್ಯಾಸಕರನ್ನು ನೇಮಿಸುವ ಯೋಚನೆ ಇದೆ ಎಂದೂ ಹೇಳಿದ್ದಾರೆ. ಆದರೆ ಕನ್ನಡಕ್ಕೆ "ಒತ್ತು" ನೀಡುವುದು ಹೇಗೆ ಎಂದು ಅವರು ವಿವರಿಸಿಲ್ಲ, ಅಥವಾ ಪತ್ರಿಕೆಗಳು ಆ ಬಗ್ಗೆ ಬರೆದಿಲ್ಲ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಶಾಸ್ತ್ರೀಯ ಭಾಷೆಯ ಗುಣ ಲಕ್ಷಣಗಳು

ಈ ಹಿಂದೆ ಪ್ರಸ್ತಾಪಿಸಿದ ಹಾಗೆ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯದ ತಮಿಳು ಹಾಗೂ ಸಂಸ್ಕ್ರತ ಪ್ರಾಧ್ಯಾಪಕ ಪ್ರೊ.ಜಾರ್ಜ್ ಎಲ್. ಹಾರ್ಟ್ ಅಂತರ್ಜಾಲದಲ್ಲಿ ತಾವು ಪ್ರಕಟಿಸಿದ್ದ ಲೇಖನದಲ್ಲಿ ಶಾಸ್ತ್ರೀಯ ಭಾಷೆಯ ಕುರಿತು ನಾಲ್ಕು ಚಹರೆಗಳನ್ನು ಪಟ್ಟಿ ಮಾಡಿದ್ದರು.
ಅವುಗಳೆಂದರೆ,

1) ಒಂದು ಭಾಷೆ ಪುರಾತನವಾಗಿರಬೇಕು
2) ಅದು ಸ್ವತಂತ್ರ ಪರಂಪರೆಯನ್ನು ಹೊಂದಿದ್ದು ತನ್ನಷ್ಟಕ್ಕೆ ತಾನೇ ಬೆಳೆದಿರಬೇಕು
3) ಬೇರೊಂದು ಬಾಷೆಯಿಂದ ಒಡಮೂಡಿರಬಾರದು
4) ಸಮೃದ್ಧ್ದವಾದ ಹಾಗೂ ಸಂಪದ್ಭರಿತವಾದ ಪ್ರಾಚೀನ ಇತಿಹಾಸ ಹೊಂದಿರಬೇಕು

ಇದು ಒಂದೆಡೆಯಾದರೆ, ಮತ್ತೊಂದೆಡೆ ಭಾರತ ಸರಕಾರ ಒಂದು ಭಾಷೆಯನ್ನು ಶಾಸ್ತ್ರೀಯ ಭಾಷೆ ಎಂದು ಮಾನ್ಯ ಮಾಡುವುದಕ್ಕೆ ನಾಲ್ಕು ಚಹರೆಗಳನ್ನು ಪಟ್ಟಿ ಮಾಡಿದ್ದು, ಅವು ಇಂತಿವೆ:

1) ಒಂದು ಭಾಷೆಯ ಪಠ್ಯಗಳು/ದಾಖಲಾದ ಇತಿಹಾಸ ಒಂದು ಸಾವಿರ ವರ್ಷಕ್ಕೂ ಪುರಾತನವಾಗಿರಬೇಕು
2) ಪುರಾತನ ಸಾಹಿತ್ಯ /ಪಟ್ಯಗಳು ತಲೆತಲೆಮಾರುಗಳ ಜನರಿಂದ ಅತ್ಯಂತ ಮೌಲಿಕ ಪರಂಪರೆಯೆಂದು ಪರಿಗಣಿತವಾಗಿರುಬೇಕು
3) ಸಾಹಿತ್ಯಿಕ ಪರಂಪರೆ ಸ್ವೋಪಜ್ಞವಾಗಿದ್ದು, ಯಾವುದೇ ಬೇರೊಂದು ಭಾಷೆ/ಸಮುದಾಯದಿಂದ ಸ್ವೀಕಾರವಾಗಿರಬಾರದು
4) ಶಾಸ್ತ್ರೀಯ ಭಾಷೆ ಮತ್ತು ಸಾಹಿತ್ಯ ಪ್ರಸ್ತುತ ಭಾಷೆ ಮತ್ತು ಸಾಹಿತ್ಯಕ್ಕ್ಕಿಂತ ಭಿನ್ನವಾಗಿರಬೇಕು ಅಥವಾ ಇತ್ತೀಚಿನ ಸ್ವರೂಪಕ್ಕಿಂತ ಭಿನ್ನವಾಗಿರಬೇಕು ಅಥವಾ ಇತ್ತೀಚಿನ ಸ್ವರೂಪಕ್ಕಿಂತ ಅಥವಾ ಅದರಿಂದ ಬೆಳವಣಿಗೆ ಹೊಂದಿದ ಭಾಷೆಗಳಿಗಿಂತ ಬೇರೆಯದೇ ಎನ್ನಿಸುವ ಹಾಗಿರಬೇಕು (ಉದಾಹರಣೆ: ಲ್ಯಾಟಿನ್ಗಿಂತ ರೋಮನ್; ಸಂಸ್ಕೃತ ಪಾಳಿಗಿಂತ ಪ್ರಾಕೃತ ಮತ್ತು ಆಧುನಿಕ ಇಂಡೋ ಆರ್ಯನ್ ಭಾಷೆಗಳು ಭಿನ್ನವಾಗಿರುವ ಹಾಗೆ)

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ವಾರೆಕೋರೆ ಮೂಲಕ ಕಾರ್ಟೂನ್ ಕಲಿಯಿರಿ

"ವಾರೆಕೋರೆ" ಹಾಸ್ಯ ಮಾಸಪತ್ರಿಕೆಯು ನಿಮ್ಮನ್ನು ನಗಿಸಲು ಬರುತ್ತಿದೆ. ಖ್ಯಾತ ವ್ಯಂಗ್ಯಚಿತ್ತಾರಿಗ ಪ್ರಕಾಶ್ ಶೆಟ್ಟಿ ಈ ನಗೆ ಪತ್ರಿಕೆಯ ನೇತೃತ್ವ ವಹಿಸಲಿದ್ದಾರೆ. ಮೂರು ದಶಕಗಳಿಂದ ವ್ಯಂಗ್ಯಚಿತ್ರ ಕ್ಷೇತ್ರದಲ್ಲಿ ಪ್ರಯೋಗ ಮಾಡುತ್ತಾ, ಮುಂಗಾರು,ಚಿತ್ರತಾರಾ,ಸಂತೋಷ ಮುಂತಾದ ಪತ್ರಿಕೆಗಳನ್ನು ತನ್ನ ವ್ಯಂಗ್ಯಚಿತ್ರ,ಕ್ಯಾರಿಕೇಚರ್ ಮತ್ತು ವಿನ್ಯಾಸಗಳಿಂದ ಅಲಂಕರಿಸಿದ ಕನ್ನಡಿಗ ಪ್ರಕಾಶ್ ಅವರ ಹೊಸ ಸಾಹಸ ಈ ಕನ್ನಡ ಪತ್ರಿಕೆ.

ಕಾರ್ಟೂನ್ ಕಲಿಯಿರಿ:

ವಾರೆಕೋರೆಯಲ್ಲಿ "ಕಾರ್ಟೂನ್ ಕಲಿಯಿರಿ" ಎನ್ನುವ ಉಚಿತ ಸಂಚಿಕೆ ಪ್ರತಿತಿಂಗಳೂ ಕನ್ನಡ-ಇಂಗ್ಲೀಷ್ ಎರಡೂ ಭಾಷೆಯಲ್ಲಿಯೂ ಬರಲಿದೆ.ಇದು ಓದುಗರಿಗೆ ಬೋನಸ್ .ಕಾರ್ಟೂನ್ ಕಲಿಯುವ ಆಸಕ್ತಿ ಇದ್ದವರು, ಇಂಗ್ಲೀಷ್ ಗೊತ್ತಿಲದವರಿಗೂ ಅನುಕೂಲ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ದಾಸ ಶ್ರೇಷ್ಠ ಕನಕದಾಸ..

ಕರ್ನಾಟಕದಲ್ಲಿ ಹರಿದಾಸ ಪರಂಪರೆ ಸುಮಾರು ೫೦೦ ವರ್ಷಗಳ ಬಹುದೊಡ್ಡ ಇತಿಹಾಸ ಹೊಂದಿದೆ. ಹಿಂದೂಸ್ಥಾನಿ ಸಂಗೀತ ಪಿತಾಮಹ ಪುರಂದರದಾಸರ ನಂತರ ಆ ಸ್ಥಾನದಲ್ಲಿ ನಿಲ್ಲುವುವರೆಂದರೆ ಕನಕದಾಸರು. ದಾಸ ಪರಂಪರೆ ಸಮಾಜದ ವರ್ಗ ಸಂಘರ್ಷ, ಜಾತಿ ಸಂಘರ್ಷವನ್ನು ಕರ್ಮುಠ ಸಿದ್ಧಾಂತಗಳನ್ನು ಹೆಕ್ಕಿ ಅದರ ನಿರುಪದ್ರವಿ ಗುಣಗಳನ್ನು ತಿಳಿಸಿದರು.

field_vote: 
Average: 3.8 (15 votes)
To prevent automated spam submissions leave this field empty.
ಲೇಖನ ವರ್ಗ (Category): 

ಅನ್ಯ ರಾಜ್ಯದವರಲ್ಲಿರುವ ಭಾಷಾ ಪ್ರೇಮ ನಮ್ಮಲ್ಲಿ ಯಾಕೆ ಇಲ್ಲಾ?

ನಮ್ಮ ಅಕ್ಕ ಪಕ್ಕದಲ್ಲಿರುವ ಅನ್ಯ ರಾಜ್ಯದವರು ನಮ್ಮ ರಾಜ್ಯಕ್ಕೆ ಬಂದು ತಮ್ಮ ಉದ್ಯೋಗ, ವಹಿವಾಟು, ಲೇವಾದೇವಿ ಮಾಡುತ್ತಾರೆ. ಆದರೆ ಅವರು ಮಾತನಾಡುವುದು ಅವರ ಭಾಷೆ. ಹಲವಾರು ತಮಿಳರು ಬಟ್ಟೆಯ ವ್ಯಾಪಾರ, ಹಣದ ಲೇವಾದೇವಿ ಮಾಡುತ್ತಾರೆ. ಮನೆಮನೆಗೆ ಹೋಗಿ ಕಂತಿನಲ್ಲಿ ಬಟ್ಟೆ ಕೊಡುತ್ತಾರೆ. ಪ್ರತಿ ತಿಂಗಳು ಹಣ ವಸೂಲಿಗೆ ಹೋಗುತ್ತಾರೆ. ಆದರೆ ಮಾತನಾಡುವುದು ತಮಿಳು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

"ಡೋಂಟ್ ಕಾಲ್ ಅಮ್ಮ ಕಾಲ್ ಮಮ್ಮಿ"

ನೆನ್ನೆ ಮಗಳನ್ನು ಇಂಟರ್‍೬ನ್ಯಾಶ್‌ನ್‌ಲ್ ಸ್ಕೂಲ್ ಒಂದಕ್ಕೆ ಕರೆದುಕೊಂಡು ಹೋಗಿದ್ದೆ ನೋಂದಣಿ ಮಾಡಿಸಬೇಕಿತ್ತು
ವಿಚಾರಣೆ ನಡೆಯಿತು ಸ್ಕೂಲು ತುಂಬ ಚೆನ್ನಾಗಿತ್ತು, ಶುಲ್ಕವೂ ಅಷ್ಟೆ ಬೊಂಬಾಟ್ ಆಗಿಯೇ ಇತ್ತು
ಅವಳ ಓರಲ್ ಇಂಟ್‌ರ್ವ್ಯೂ ಮಾಡಿದರು ಅವಳೂ ಉತ್ತರಿಸಿದಳು
ಸರಿ ಅಡ್ಮಿಶನ್ ಮಾಡಬೇಕು
ಆಗ
ಅಲ್ಲೇ ಕೂತು ಕೂತು ಬೇಜಾರಾಯ್ತೇನೊ ನನ್ನ ಮಗಳು

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ.

ಇಂಗ್ಲೀಷಿನಿಂದ ಕನ್ನಡಕ್ಕೆ ಅನುವಾದ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ವಿಶ್ವ ಕನ್ನಡಿಗರ ಜಾಗೃತಿ ಸಮಾವೇಶಕ್ಕೆ ಕರೆ

ಕನ್ನಡ ನಾಡು ಇಂದು ಅತ್ಯಂತ ಸಂಕಷ್ಟದ ದಿನಗಳನ್ನು ಎದುರಿಸುತ್ತಿದೆ. ಒಂದು ಕಡೆ ತೀವ್ರವಾದ ಜಾಗತಿಕ ಆರ್ಥಿಕ ಹಿಂಜರಿತದಿಂದ ನಮ್ಮ ಬದುಕಿನ ಮೇಲಾಗಿರುವ ಕೆಟ್ಟ ಪರಿಣಾಮಗಳು. ಇನ್ನೊಂದೆಡೆ ಭಯೋತ್ಪಾದಕರು ಅಮಾಯಕ ನಾಗರೀಕರನ್ನು ಅಮಾನವೀಯವಾಗಿ ಕೊಲ್ಲುತ್ತಾ ದೇಶದ ಭದ್ರತೆಗೇ ಒಡ್ಡುತ್ತಿರುವ ಸವಾಲುಗಳು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡಿಗರಿಗೆ ನನ್ನ ಮನವಿ,

ಕನ್ನಡಿಗರಿಗೆ ನನ್ನ ಮನವಿ,

ನಮ್ಮ ಕನ್ನಡದ ಶ್ರೇಷ್ಟ ಕೃತಿಕರಾದ...ಮಾಸ್ತಿ ವೆಂಕಟೇಶ್ಅಯ್ಯಂಗಾರ್, J P ರಾಜರತ್ನಂ, T P ಕೈಲಾಸಂ, K S ನಿಸಾರ್ ಅಹ್ಮದ್...ಇನ್ನು ಎಷ್ಟೋ ಮಹನೀಯರ ಮಾತೃಬಾಷೆ ಬೇರೆಯದಾದರು, ಕನ್ನಡ ಬಾಷಯೆಯ ನಿಜವಾದ ರುಚಿಯನ್ನು ಉಂಡವರು...ಕನ್ನಡದಲ್ಲೇ ತಮ್ಮ ಸಾಹಿತ್ಯದ ಹಿಡಿತವನ್ನು ಸಾಧಿಸಿ, ಶೇಷ್ಟ ಸಾಹಿತಿಗಾಳದರು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕೈಗುಳಿಗೆ

ಕನ್ನಡದಲ್ಲಿ ಆಗಮ ಸನ್ಧಿಯಿಲ್ಲವೆಂಬುದು ಒನ್ದು ಪೆರಮೆಯೇ ಆಗಿದೆ. ಕೆಲವು ಬಗೆಯ ಆಗಮ ಸನ್ಧಿಗಳು ಹೇಗಾಗುತ್ತವೆನ್ದು ನನ್ನ ಹಿನ್ದಿನ ಬರೆಹಗಳಲ್ಲಿ ತೋರಿಸಿರುವೆನು.

http://sampada.net/forum/15169
http://sampada.net/forum/14250

ಆದರೆ ಸಂಪದದ ಕೆಲವು ಪುಟಗಳ ಗಮನಿಸಿದಾಗ ಈ ಕೆಳಗಣ ಅನುಮಾನಗಳಿರುವನ್ತೆ ಕಣ್ಡುಬನ್ತು:

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಯಾವುದು ಗ್ರಾಮ್ಯ, ಕೈಗುಳಿಗೆ-3

ಯಾವುದು ಗ್ರಾಮ್ಯ?:
ಮಾಂಗಾಯಿ - ಇದು ಗ್ರಾಮ್ಯವೆನ್ದು ಸಾಮಾನ್ಯ ತಿಳಿವಳಿಕೆ. ನಿಜವಾಗಿ ಮಾವಿನ್ ಕೂಡೆ ಕಾಯಿ ಮಾಂಗಾಯಿ ಶುದ್ಧ ಒರೆಯಾಗಿದೆ. ಇನ್ತಹ ಒರೆಗಳಿನ್ದಲೇ ಭಾಷೆಯ ನಿಜವಾದ ಗುಣ ಎದ್ದು ಕಾಣುವನ್ತಹುದು. ದ್ರಾವಿಡಾದಿ ಭಾಷೆಗಳಲ್ಲಿ ಇನ್ತಹ ಒರೆಗಳು ಕನಿಷ್ಠ ನೂರಾದರೂ ಇವೆ ಮತ್ತು ಅವು ಗ್ರಾಮ್ಯಗಳೆನ್ದೆಣಿಸಲ್ಪಡಲಿಲ್ಲ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

"ನೀಲಿಹಲ್ಲು"

ಏನಿದು ಈ ನೀಲಿಹಲ್ಲು ಎಂದು ಆಶ್ಚರ್ಯವಾಗುತ್ತಿರಬಹುದಲ್ಲವೇ??

ಹಲ್ಲು ಎಂದರೆ ಎಲ್ಲರಿಗೂ ತಕ್ಷಣ ಹೊಳೆಯುವುದು ಫಳಫಳನೆ ಹೊಳೆಯುವ ಹಲ್ಲು, ಬೆಳ್ಳಗಿರುವ ಹಲ್ಲು. ಆದರೆ ಕೆಲವರಿಗೆ ಸ್ವಲ್ಪ ಹಳದಿಯಾಗಿರುತ್ತದೆ. ಆ ಬಿಳಿ, ಹಳದಿ ಹಲ್ಲುಗಳ ವಿಚಾರ ಬಿಡಿ (ನಾನೆಲ್ಲಿ ಹಿಡಿದುಕೊಂಡಿದ್ದೇನೆ ಬಿಡುವುದಕ್ಕೆ ಅಂತ ಕೇಳಬೇಡಿ ಮತ್ತೆ).

ನಮ್ಮ ಕಚೇರಿಯಲ್ಲಿ ನನ್ನ ಸಹುದ್ಯೋಗಿಯೊಬ್ಬರು ನನ್ನ ಬಳಿಬಂದು ನನಗೆ ನೀಲಿಹಲ್ಲು ಬೇಕಿದೆ, ಸಿಗತ್ತ ಅಂದರು. ಅದಕ್ಕೆ ನಾನು ನೀಲಿಹಲ್ಲ ಎಂದು ಆಶ್ಚರ್ಯಪಟ್ಟು, ನನ್ನ ಬಳಿಯಂತು ಇಲ್ಲ. ಅಂಗಡಿಯಲ್ಲು ದೊರೆಯುವುದಿಲ್ಲ ಅನ್ಸತ್ತೆ. ಎಲ್ಲಿ ತಯಾರಿ ಮಾಡುತ್ತಾರೋ ನನಗೆ ಗೊತ್ತಿಲ್ಲ. ಒಂದು ಕೆಲಸ ಮಾಡಿ, ನೀವು ನೇರ ದಂತವೈದ್ಯರ ಬಳಿ ಹೋಗಿ ವಿಚಾರಿಸಿ ಎಂದು ವ್ಯಂಗ್ಯವಾಗಲ್ಲದಿದ್ದರೂ ಸ್ವಲ್ಪ ತಮಾಷೆಯಾಗೇ ಉತ್ತರಿಸಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

" ಕನ್ನಡ ಚಿತ್ರರಂಗದ ಕಾಯಿಲೆ ವಾಸಿಯಾಗಿರುವಾಗ ಡಬ್ಬಿಂಗ್ ಬೇಡವೆಂಬ ನೀತಿಯ ಔಷದಿ ಇನ್ನೂ ಏಕೆ?"

ಕನ್ನಡಿಗರ ಬದುಕಿನ ಜತೆ-ಜತೆಗೆ ಹಾಸುಹೊಕ್ಕಾಗಿರುವ ಕನ್ನಡ ಚಿತ್ರೋದ್ಯಮಕ್ಕೆ ಎಪ್ಪತ್ತೈದು ವರ್ಷ ತುಂಬಿದೆ . ಈ ಸಂಭ್ರಮಾಚರಣೆಗೆ ಕಾರಣರಾದ ಕನ್ನಡ ಚಲನಚಿತ್ರೋದ್ಯಮದ ಎಲ್ಲರಿಗೂ ಶುಭ ಹಾರೈಕೆಗಳು. ಸಿನಿಮಾ ಅತ್ಯಂತ ಪ್ರಭಾವಿ ಮಾಧ್ಯಮಗಳಲ್ಲಿ ಒಂದಾಗಿದ್ದು ನಾಡಿನ ಸಂಸ್ಕೃತಿ, ಪರಂಪರೆಗಳನ್ನು ಬಿಂಬಿಸುವುದಷ್ಟೇ ಅಲ್ಲದೆ ರೂಪಿಸುವುದರಲ್ಲೂ ಪರಿಣಾಮಕಾರಿ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಪದ ಸಂಪದ - 1

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಆಹಾ! ಹಾಸ್ಯವೇ!

ಇಂದು ’ಮೂರ್ಖರ ದಿನ’. ಹಾಸ್ಯಕ್ಕೂ ಮೂರ್ಖತನಕ್ಕೂ ಸಂಬಂಧ ಕಲ್ಪಿಸುವ ದಿನ! ಹೀಗೆ ಸಂಬಂಧ ಕಲ್ಪಿಸುವುದೇ ಒಂದು ರೀತಿಯಲ್ಲಿ ಮೂರ್ಖತನ!

field_vote: 
Average: 3 (1 vote)
To prevent automated spam submissions leave this field empty.
ಲೇಖನ ವರ್ಗ (Category): 

"ಓಂ-ಕಾರ", "ಸಪ್ತ ಸ್ವರಗಳು" ಮತ್ತು "ಕನ್ನಡ ಅಕ್ಷರ ಮಾಲೆ"

ಓಂ-ಕಾರವನ್ನು ನಾದ ಬ್ರಹ್ಮವೆಂದು ಸೃಷ್ಠಿ ಮೂಲವೆಂದು ನಾವೆಲ್ಲರು ಕೇಳಿದ್ದೇವೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

"ಇಂಟರ್‌ನ್ಯಾಶನಲ್ ಫೊನೆಟಿಕ್ ಆಲ್ಫಬೆಟ್ " ಚೌಕದಲ್ಲಿ ಕನ್ನಡ ವರ್ಣ ಮಾಲೆ / ದನಿಯಱಿವು

ಈಚಿನ ದಿನಗಳಲ್ಲಿ ಸಾಮಾನ್ಯವಾಗಿ ಕನ್ನಡ ಅಕ್ಷರ ಮಾಲೆಯಲ್ಲಿ ಯಾವ ಅಕ್ಷರಗಳು ಇರಬೇಕು ಯಾವ ಅಕ್ಷರಗಳು ಇರಬಾರದು ಅನ್ನುವುದೇ ದೊಡ್ಡ ಚರ್ಚೆಯ ವಿಷಯವಾಗಿ ಬಿಟ್ಟಿದೆ.

ಶ್ರೀ ಶಂಕರ ಭಟ್ಟರು, ಬರೆದಿರುವ "ಕನ್ನಡಕ್ಕೆ ಬೇಕು ಕನ್ನಡದ್ದೇ ವ್ಯಾಕರಣ"/"ಕನ್ನಡ ಬರಹವನ್ನು ಸರಿಪಡಿಸೋಣ" ಅನ್ನೊ ಪುಸ್ತಕ ಈ ಚರ್ಚೆಗೆ ಒಂದಿಷ್ಟು ಪುಷ್ಠಿ ಕೊಟ್ಟುಬಿಟ್ಟಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡಕ್ಕೆ ಬೇಕೊ೦ದು ಅ೦ತರ್ಜಾಲ ಕೈಪಿಡಿ

ನೀವು ಕನ್ನಡದಲ್ಲಿ e-mail ಗೆ ಏನನ್ನುತ್ತೀರಾ? ಇ-ಅ೦ಚೆ, ವಿದ್ಯುನ್ಮಾನ ಅ೦ಚೆ, ವಿ-ಅ೦ಚೆ ಅಥವಾ ಮಿ೦ಚೆ! ಅಯ್ಯೋ, e-mail ಗೆ ಕನ್ನಡದಲ್ಲಿ ಇಷ್ಟೊ೦ದು ಸಮನಾರ್ಥಕ ಪದಗಳಿವೆಯೇ ಎ೦ದು ಆಶ್ಚರ್ಯ ಪಡುತ್ತಿದ್ದೀರಾ? ಅಥವಾ ನಾನು ಆಗಲೇ ಈ ಗು೦ಪಿನಲ್ಲಿರುವ ಪದವೊ೦ದನ್ನು ಉಪಯೋಗಿಸುತ್ತಿದ್ದೇನೆ ಎ೦ದು ಸಮಾಧಾನ ಪಟ್ಟುಕೊಳ್ಳುತ್ತಿದ್ದೀರಾ?

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡ ಸಾಹಿತ್ಯಕ್ಕೊಬ್ಬರು ಮಾರ್ಗದರ್ಶಕರು ಬೇಕೇ....?

ವಿಜಯ ಕರ್ನಾಟಕದಲ್ಲಿ (14-11-2009) “ಕನ್ನಡ ಸಾಹಿತ್ಯಕ್ಕೆ ಮಾರ್ಗದರ್ಶಕರೊಬ್ಬರು ಬೇಕಾಗಿದ್ದಾರೆ” ಎಂಬ ಲೇಖನ ಓದಿದೆ. ಕನ್ನಡ ಸಾಹಿತ್ಯ ಎತ್ತ ಸಾಗಿದೆ? ಸಾಹಿತ್ಯ ನಿಂತ ನೀರಾಗಿಲ್ಲ. ಹೊಸ ಲೇಖಕರು, ಪುಸ್ತಕಗಳ ಬೆಳೆ ಹುಲುಸಾಗಿಯೆ ಇದೆಯಲ್ಲ ಎಂದು ಹೇಳಬಹುದು ಎಂದು ಆರಂಭವಾಗುವ ಲೇಖನ, ಏಳು ಜ್ಞಾನ ಪೀಠ ಪ್ರಶಸ್ತಿಗಳನ್ನು ಪಡೆದುಕೊಂಡಿರುವ  ನಮ್ಮ ಕನ್ನಡ ಸಾಹಿತ್ಯದ ಗತ ವೈಭವವನ್ನು ವಿವರಿಸುತ್ತದೆ.  ಅಂಥ ಪ್ರಶಸ್ತಿ 1998ರ ನಂತರ ಏಕೆ ಬಂದಿಲ್ಲ?  ಎಂಬ ಪ್ರಶ್ನೆ ಬೇರೆ...  ಕನ್ನಡ  ಸಾಹಿತಿಗಳ ಹಾಗೂ ಸಾಹಿತ್ಯದ ಬರ ಬಂದಿದೆಯೇ? ಎಂಬಿತ್ಯಾದಿ ಪ್ರಶ್ನೆಗಳು ಒಂದರ ಹಿಂದೆ ಮತ್ತೊಂದು ಎನ್ನುತ್ತದೆ.  ಹಿಂದಿನ ಸಾಹಿತ್ಯ ಚಳುವಳಿ ಅಥವಾ ಕಾಲ ಘಟ್ಟದಲ್ಲಿ  ಅದಕ್ಕೊಬ್ಬ ಹರಿಗೋಲು ಹಾಕುವವನಿದ್ದ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡ ಶಬ್ದ, ನುಡಿಗಟ್ಟು, ಭಾಷೆ

  ’ಲಿವಿಂಗ್ ಟುಗೆದರ್’ ಎನ್ನುವ ಬದಲಿಗೆ ’ಒಟ್ಟುಳಿಕೆ’ ಎನ್ನಬಹುದೆಂದು ಗಂಗಾಧರ ಶಾಸ್ತ್ರಿ ಎನ್ನುವವರು ಈಚೆಗೆ ದಿನಪತ್ರಿಕೆಯೊಂದರಲ್ಲಿ ಪತ್ರಮುಖೇನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅವರ ಈ ಅಭಿಪ್ರಾಯ ಒಪ್ಪತಕ್ಕದ್ದಾಗಿದೆ. ಆದರೆ, ’ಉಳಿಕೆ’ ಎಂಬ ಪದವು ’ಉಳಿತಾಯ’ ಎಂಬರ್ಥದಲ್ಲಿ ಬಳಕೆಯಲ್ಲಿರುವುದರಿಂದ ’ಒಟ್ಟುಳಿಕೆ’ ಪದವು ಸರಿಹೋಗದಿದ್ದರೆ, ’ಸಹವಾಸ’, ’ಸಹಬಾಳ್ವೆ’, ’ಸಹಜೀವನ’ ಎಂಬ ಪದಗಳನ್ನು ಬಳಸಬಹುದು. ’ಸಹವಾಸ’ ಪದವು ಬೇರೆ ಅರ್ಥದಲ್ಲಿ ಬಳಕೆಯಲ್ಲಿದ್ದರೂ, ’ಸಹಬಾಳ್ವೆ’, ’ಸಹಜೀವನ’ ಪದಗಳನ್ನು ವಿಶಾಲ ಅರ್ಥವ್ಯಾಪ್ತಿಯಲ್ಲಿ ಬಳಸಲಾಗುತ್ತಿದ್ದರೂ ಈ ಮೂರೂ ಪದಗಳೂ ’ಲಿವಿಂಗ್ ಟುಗೆದರ್’ ಎಂಬ ಧ್ವನಿಯನ್ನೇ ಹೊರಡಿಸುತ್ತವೆ. ಯಾವ ಪದವೇ ಆಗಲಿ, ನುಡಿಗಟ್ಟೇ ಆಗಲಿ ಸತತ ಬಳಕೆಯಿಂದಾಗಿ ಕ್ರಮೇಣ ಜನಮಾನಸಕ್ಕೆ ಒಗ್ಗಬೇಕಷ್ಟೆ.

field_vote: 
Average: 3.8 (8 votes)
To prevent automated spam submissions leave this field empty.
ಲೇಖನ ವರ್ಗ (Category): 

ರೇಡಿಯೋ ಗಿರ್ಮಿಟ್ : ಅಂತರ್ಜಾಲದಲ್ಲಿ ಕನ್ನಡ ರೇಡಿಯೋ

ರೇಡಿಯೋ ಗಿರ್ಮಿಟ್ ಒಂದು ವಿಭಿನ್ನವಾದ ಅಂತರ್ಜಾಲ ರೇಡಿಯೋ ಸ್ಟೇಷನ್. ಇದರ ಮುಖ್ಯ ಉದ್ದೇಶ, ಪ್ರಪಂಚದಾದ್ಯಂತ ಹರಡಿರುವ ಕನ್ನಡ ಪ್ರೇಮಿಗಳನ್ನು ಸಂಗೀತದ ಮೂಲಕ ಒಂದು ಗೂಡಿಸುವುದಾಗಿದೆ. ವಾರದ ೭ ದಿನ ೨೪ ಘಂಟೆ ಸಂಗೀತದ ಸುಧೆಯನ್ನು ಹರಿಸುತ್ತಿರುವ ಈ ರೇಡಿಯೋ, ಬೇರೆ ಬೇರೆ ವಿಷಯಗಳಿಗೆ ಸಂಬಧಪಟ್ಟ ಹಲವಾರು ವೈವಿಧ್ಯಮಯ ಕಾರ್ಯಕ್ರಮಗಳನ್ನೂ ಪ್ರಸ್ತುತ ಪಡಿಸುತ್ತದೆ. ತನ್ನ ಸರಳವಾದ ವೆಬ್ ಪೇಜ್ ಇಂದಾಗಿ ಈಗಾಗಲೇ ೮೦ಕ್ಕೂ ಹೆಚ್ಚ್ಚಿನ ದೇಶಗಳಿಗೆ ತಲುಪಿರುವ ಈ ರೇಡಿಯೋ ಇನ್ನು ಹೆಚ್ಚು ಹೆಚ್ಚು ಪ್ರಸಿದ್ಧಿಯನ್ನು ಪಡೆಯುತ್ತಿದೆ.

field_vote: 
Average: 5 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ವಾ ಪೊರ್ಲುಯಾ ನಮ್ಮ ತುಳು ಭಾಷೆ.....

* ನೆನೆಪು *
ಓ ಪೊಣ್ಣೆ...
ನೇರೆಳಾದ್
ಬರ್ಪೆ ಪಂಡ;
ಆಂಡಾ
ನೆನೆಪಾದೆ
ಓರಿಯಾ...


* ಕಾರಣ *
ಯಾನ್ ಮೋಕೆ ಮಲ್ತಿನಾ
ಆ ಪೊಣ್ಣ್
ಯೆನನ್ ಬೊಡ್ಚಿ ಪಂಡಲ್
ಕಾರಣ
ಯಾನ್ ದಾಲಾ ಕೆನ್ದ್ ಜಿಗೆ...


* ದಾಯೆ...? *
ಬೊಡೆದಿನ
ಎದುರು ಉಂತರೆ
ದಾಂತಿನಕುಲು ದಮ್ಮು...
ಪರ್ಪೆರ್
ಬ್ರಾಂಡಿ, ವಿಸ್ಕಿ, ರಮ್ಮು..


* ಅಂತರ *
ಪ್ರಾಯ ಆಯಿನ
ಅಪ್ಪೆ, ಅಮ್ಮೆರ್ ಪಂಡ
ಸಮಸ್ಯೆ...
ಪ್ರಾಯೊಗು ಬತ್ತಿನ
ಪೊಣ್ಣು ಜೊಕುಲು ಪಂಡ
ಸವಾಲ್...?


* ಮರ್ಲ್... *
ಪೊಣ್ಣೆ
ಈ ಎನನ್ ತುನಾಗ
ಯಾನ್ ಕವಿ ಆಯೆ
ಈ ಉಂತುದು ತೆಲ್ಪುನಗಾ
ಯನ್ ಮರ್ಲೆ ಆಯೆ...


 


field_vote: 
Average: 4.4 (5 votes)
To prevent automated spam submissions leave this field empty.
ಲೇಖನ ವರ್ಗ (Category): 

’ತರಕಲಾಂಡಿ’ ಇತ್ಯಾದಿ

  ’ಸಂಪದ’ದಲ್ಲಿ ನಾನು ಪ್ರಕಟಿಸಿರುವ (ಅಪ)ಹಾಸ್ಯಕವನ ’ಗ್ರಹಚಾರ್ಯ’ಕ್ಕೆ ಪ್ರತಿಕ್ರಿಯೆ ನೀಡುತ್ತ, ಮಿತ್ರದ್ವಯರಾದ ಎಚ್.ಎಸ್.ಪ್ರಭಾಕರ ಮತ್ತು ಚೈತನ್ಯ ಭಟ್ ಇವರು ಶಬ್ದಜಿಜ್ಞಾಸೆ ನಡೆಸಿದ್ದಾರೆ. ಎಚ್ಚೆಸ್ಸ್ ಅವರ ’ಥರಕಲಾಂಡಿ’ ಎಂಬ ಪದಪ್ರಯೋಗ ಕಂಡು ಭಟ್ಟರು, ’ಅದು ಥರಕಲಾಂಡಿನೋ? ತಡಕಲಾಂಡಿನೋ?’ ಎಂದು ತಿಳಿಯಬಯಸಿದ್ದಾರೆ. ಭಟ್ಟರ ಪ್ರಶ್ನೆಗೆ ಈ ಶಾಸ್ತ್ರಿಯ ಉತ್ತರ ಇಂತಿದೆ:

  ’ತರಕಲಾಂಡಿ’ ಎಂಬುದು ಸೂಕ್ತ ಪ್ರಯೋಗ. ’ತರಕಲು’ ಎಂದರೆ ’ಒರಟು’ ಎಂದರ್ಥ. ’ತರಕಲಾಂಡಿ’ ಎಂದರೆ ’ಒರಟ’.

field_vote: 
Average: 4.7 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಅದು ಪಾದದೆಚ್ಚರ, ಇದು ಪದದೆಚ್ಚರ

  ಹಿಂದೆ ರಾಜಮಹಾರಾಜರ ಕಾಲದಲ್ಲಿ, ಆಸ್ಥಾನಕ್ಕೆ ರಾಜರು ಬರುವಾಗ ಅವರ ಪಕ್ಕದಲ್ಲಿ ಒಬ್ಬ ಸೇವಕ ಇರುತ್ತಿದ್ದ. ಅವನನ್ನು ’ಪಾದದೆಚ್ಚರದವನು’ ಎಂದು ಕರೆಯಲಾಗುತ್ತಿತ್ತು. ನಡೆದು ಬರುವಾಗ ದೊರೆಯು ಯಾವ ಕಾರಣಕ್ಕೂ ಕೆಳಗೆ ದೃಷ್ಟಿ ಹಾಯಿಸದೆ ನೇರ ಎದುರುಗಡೆ ನೋಡುತ್ತಲೇ ನಡೆಯುವುದು ಪದ್ಧತಿಯಾಗಿತ್ತು. ಕೆಳಗೆ ನೋಡಲು ತಲೆತಗ್ಗಿಸುವುದು ರಾಜನ ಘನತೆಗೆ ಕುಂದೆಂದು ಭಾವಿಸಲಾಗುತ್ತಿತ್ತು. ಆಸ್ಥಾನದಲ್ಲಿ ನೆರೆದ ಪ್ರಜೆಗಳೆದುರು ರಾಜನೆಲ್ಲಾದರೂ ಅವನತಮುಖಿಯಾಗುವುದೇ?

field_vote: 
Average: 3 (5 votes)
To prevent automated spam submissions leave this field empty.
ಲೇಖನ ವರ್ಗ (Category): 

ಪದಜಿಜ್ಞಾಸು ಮಿತ್ರರಿಗಿದೋ ಉತ್ತರ

  ’ಸಂಪದ’ದಲ್ಲಿ ಈಚೆಗೆ ನಾನು ಪ್ರಕಟಿಸಿರುವ ’ಗ್ರಹಚಾರ್ಯ’ ಮತ್ತು ’ತರಕಲಾಂಡಿ ಇತ್ಯಾದಿ’ ಬರಹಗಳಿಗೆ ಪ್ರತಿಕ್ರಿಯೆ ವ್ಯಕ್ತಪಡಿಸುತ್ತ ಕೆಲ ಮಿತ್ರರು ಕೆಲವು ಪ್ರಶ್ನೆಗಳನ್ನು ಕೇಳಿದ್ದಾರೆ, ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆ ಪ್ರಶ್ನೆಗಳಿಗೆ ಮತ್ತು ಬೇಡಿಕೆಗಳಿಗೆ ಉತ್ತರವಾಗಿ ಈ ಬರಹ.

  ’ಭಾವಜೀವಿ’ ಹರಿಹರಪುರ ಶ್ರೀಧರ ಅವರು ’ಭಾಷಾಜೀವಿ’ಯಾದಾಗ ಅವರಿಗೆ ’ಹೆದರುಪುಕ್ಕಲ’; ’ಬಿಕನಾಸಿ’ ಈ ಪದಗಳು ವಿಚಿತ್ರವಾಗಿ ಕಂಡಿವೆ. ’ಹೆದರುಪುಕ್ಕಲ’ ಎಂದು ಬಳಸಲಾಗುತ್ತಿರುವ ಪದವು ದ್ವಿರುಕ್ತಿಯಲ್ಲವೆ ಎಂಬ ಅನುಮಾನ (ಸಹಜವಾಗಿಯೇ) ಅವರನ್ನು ಕಾಡಿದೆ.

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಬಳಕೆಗೆ ಬರದ ಮುದ್ರಣ ಪದ್ಧತಿ

`ಕನ್ನಡ ಬಾವುಟ' ಕವಿತೆಯನ್ನು ಕರ್ಣಾಟಕ ಸಾಹಿತ್ಯ ಪರಿಷತ್ತು ಪ್ರಕಟಿಸಿರುವ `ಕನ್ನಡ ಬಾವುಟ' (೧೯೩೮) ಕೃತಿಯಲ್ಲಿ ನೋಡಬಹುದು. ಅದರ ಚಿತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ.

ಮುದ್ರಣ ಹೊಸ ರೀತಿ ಇದೆಯಲ್ಲವೇ? ಈ ಮಾರ್ಪಾಡುಗಳ ಪ್ರಸ್ತಾಪ ಪುಸ್ತಕದ ಮುನ್ನುಡಿಯಲ್ಲಿದೆ. ಈ ಮಾರ್ಪಾಡುಗಳನ್ನು ಬಳಸಿ ಮುದ್ರಿತವಾಗಿರುವ ಉದಾಹರಣೆ ಅದು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ: ಹಾಗೆಂದರೇನು?

(ಕೆಲವು ತಿಂಗಳ ಕೆಳಗೆ ಮುಂಬಯಿಯ ಕನ್ನಡ ಸಂಸ್ಥೆಯೊಂದರ ಮಾಸಪತ್ರಿಕೆಗಾಗಿ ಬರೆದ ಲೇಖನ)

 2008ರ ಅಕ್ಟೋಬರ್‍ ೩೧ರಂದು ಕೇಂದ್ರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ಸಚಿವೆ, ಅಂಬಿಕಾ ಸೋನಿ ಒಂದು ಅಧಿಕೃತ ಹೇಳಿಕೆಯಲ್ಲಿ ಕನ್ನಡ ಮತ್ತು ತೆಲುಗು ಭಾಷೆಗಳನ್ನು ಕೇಂದ್ರ ಸರಕಾರವು “ಶಾಸ್ತ್ರೀಯ ಭಾಷೆ” ಎಂದು ಪರಿಗಣಿಸಿರುವುದಾಗಿ  ಘೋಷಿಸಿದರು. ಕರ್ನಾಟಕ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ತಮ್ಮ ತಮ್ಮ ರಾಜ್ಯೋತ್ಸವ ಆಚರಿಸುತ್ತಿರುವ ಸಂದರ್ಭದಲ್ಲಿ (ನವೆಂಬರ್‍ ೧) ಈ ಘೋಷಣೆ ಹೊರಬಂದಿತ್ತು. ಇದರೊಂದಿಗೆ ಶಾಸ್ತ್ರೀಯ ಸ್ಥಾನಮಾನಕ್ಕೆ ಒತ್ತಾಯಿಸುತ್ತಿದ್ದ ಕರ್ನಾಟಕ ಮತ್ತು ಆಂಧ್ರದ ಜನತೆಯ ಪ್ರಯತ್ನ ಅಂತೂ ಫಲ ಕೊಟ್ಟಿತು. ಆದರೂ ಅದಕ್ಕೊಂದು ಕೊಕ್ಕೆ ಇತ್ತು .ಕನ್ನಡ ಮತ್ತು ತೆಲುಗು ಭಾಷೆಗಳಿಗೆ ಶಾಸ್ತ್ರೀಯ ಸ್ಥಾನ ನೀಡುವುದರ ವಿರುದ್ಧ ಚೆನ್ನೈ ಉಚ್ಚ ನ್ಯಾಯಾಲಯದಲ್ಲಿ ನಡೆಯುತ್ತಿರುವ ಮೊಕದ್ದಮೆಯ ತೀರ್ಮಾನಕ್ಕೆ ಸರಕಾರದ ಈ ನಿರ್ಣಯ ಬದ್ಧವಾಗಿತ್ತು.

 ಶಾಸ್ತ್ರೀಯ ಭಾಷೆ ಸ್ಥಾನಮಾನ ಎಂಬುದು ನಮ್ಮಲ್ಲಿ ಹೆಚ್ಚು ಹೆಚ್ಚು ಕೇಳಿ ಬಂದಿರುವುದು ಕಳೆದ ಐದು ವರ್ಷಗಳಲ್ಲಿ ಮಾತ್ರ. ಶಾಸ್ತ್ರೀಯ ಭಾಷೆ ಎಂದರೇನು ? ಆದಕ್ಕೇಕೆ ಇಷ್ಟು ಸ್ಥಾನಮಾನ?.

field_vote: 
Average: 5 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ರಾಜಕೀಯ


ಸಾಕಾಗಿದೆ ನೋಡಿ ರಾಜಕೀಯ

 ರಾವಣ

 ಜರಾಸ೦ದ

 ಕೀಚಕ

 ಯ

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಸಾಹಿತ್ಯ ಸಮ್ಮೇಳನ : ಹೇಗಿರಬೇಕು, ಹೇಗಿವೆ?

  ಇಂದಿನಿಂದ ಮೂರು ದಿನಗಳ ಕಾಲ ಗದಗ ನಗರದಲ್ಲಿ ’೭೬ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ’ನಡೆಯಲಿದೆ. ಸಮ್ಮೇಳನದ ಅಧ್ಯಕ್ಷತೆಯ ಅವಕಾಶ ನಾಡೋಜ ಗೀತಾ ನಾಗಭೂಷಣ ಅವರಿಗೆ ಲಭಿಸಿದೆ. ಈ ಸಂದರ್ಭದಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಕನ್ನಡ ಸಾಹಿತ್ಯ ಸಮ್ಮೇಳನ ಇವು ಹೇಗಿವೆ, ಹೇಗಿರಬೇಕು ಎಂಬುದನ್ನು ಕುರಿತು ಒಂದು ಮಂಥನ ಈ ಲೇಖನ.
  ಚಂದ್ರಶೇಖರ ಪಾಟೀಲರು (’ಚಂಪಾ’) ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದ ದಿನಗಳಲ್ಲಿ ಆ ಸಂಸ್ಥೆಯು ’ಕನ್ನಡ ಚಳವಳಿ ಪರಿಷತ್ತು’ ಆಗಿ ವಿಜೃಂಭಿಸಿದ್ದು ಎಲ್ಲರಿಗೂ ಗೊತ್ತಿರುವ ವಿಷಯ. ನಾಡು-ನುಡಿಗಾಗಿ ಇಂದು ಚಳವಳಿಗಳು ಅನಿವಾರ್ಯವಾಗಿರುವುದು ದಿಟವಾದರೂ, ’ಕಸಾಪ’ದಂಥ ಸಾಹಿತ್ಯ ಸಂಘಟನೆಯ ಅಧ್ಯಕ್ಷರು ಸಾಹಿತ್ಯಕ್ಕಿಂತ ಚಳವಳಿ, ಹೋರಾಟಗಳಿಗೇ ಹೆಚ್ಚು ಆದ್ಯತೆ ನೀಡುತ್ತಿದ್ದಾರೆಂಬ ಅಭಿಪ್ರಾಯ ಕೆಲ ವಲಯಗಳಲ್ಲಿ ಉಂಟಾಗಿ ಅದರಿಂದಾಗಿ ಪರಿಷತ್ತಿನ ಕರ್ತವ್ಯದ ಬಗ್ಗೆಯೇ ಆ ದಿನಗಳಲ್ಲಿ ಹಲವರಲ್ಲಿ ಗೋಜಲು ಸೃಷ್ಟಿಯಾಗಿತ್ತು. ’ಸಾಹಿತ್ಯ ಪರಿಷತ್ತು ಸಾಹಿತ್ಯದ ಕೆಲಸ ಬಿಟ್ಟು ಬೇರೆಲ್ಲ ಕೆಲಸಗಳನ್ನೂ ಮಾಡುತ್ತಿದೆ’ ಎಂಬ ಅಸಮಾಧಾನವೂ ಕೆಲವು ಸಾಹಿತಿಗಳಲ್ಲಿ ಹಾಗೂ ಸಾಹಿತ್ಯಪ್ರೇಮಿಗಳಲ್ಲಿ ಮನೆಮಾಡಿತ್ತು. ’ಕಸಾಪ’ದ ಹೆಸರನ್ನು ’ಕನ್ನಡ ಸಂಸ್ಕೃತಿ ಪರಿಷತ್ತು’ ಎಂದು ಬದಲಾಯಿಸಬೇಕೆಂದು ಎಂ.ಎಂ.ಕಲಬುರ್ಗಿ ಅವರು ಪರಿಷತ್ತಿನದೇ ಸಮಾರಂಭವೊಂದರಲ್ಲಿ ಅರ್ಥಗರ್ಭಿತ ಸಲಹೆ ನೀಡಿದ್ದರು. (ಕೆಲ ಪತ್ರಿಕೆಗಳಲ್ಲಿ ಪ್ರಕಟಗೊಂಡಂತೆ ಅವರು ಇತ್ಯಾತ್ಮಕವಾಗಿ ಆ ರೀತಿ ಸಲಹೆ ಮಾಡಿದ್ದಲ್ಲ. ನೊಂದು ನುಡಿದದ್ದು. ಅಂದು ಅವರೊಡನೆ ವೇದಿಕೆ ಹಂಚಿಕೊಂಡಿದ್ದ ನಾನು ಅವರ ಭಾಷಣವನ್ನು ಸಂಪೂರ್ಣ ಆಲಿಸಿದ್ದೇನೆ.)
  ಸಾಹಿತ್ಯವಲಯದ ಈ ಅಸಮಾಧಾನವನ್ನು ನಿವಾರಿಸುವ ಕೆಲಸವನ್ನು ಪರಿಷತ್ತು ಇಂದು ಮಾಡಬೇಕಾಗಿದೆ. ಸಾಹಿತ್ಯ ಪರಿಚಾರಿಕೆಯೇ ಸಾಹಿತ್ಯ ಪರಿಷತ್‌ನ ಮುಖ್ಯ ಕೆಲಸವಾಗಬೇಕಾಗಿದೆ.

field_vote: 
Average: 5 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಸ್ಲಂನಲ್ಲಿ ಕನ್ನಡ ಲಿನಕ್ಸ್ ಬಿಡುಗಡೆ

ಸ್ಲಂನಲ್ಲಿ  ಕನ್ನಡ ಲಿನಕ್ಸ್ ಬಿಡುಗಡೆ

 ಗೋಡೆಯ ಈಚೆ  ಹೊಸ ಗುರುಪನಪಾಳ್ಯ  ಸ್ಲಂ. ಗೋಡೆಯ ಆಚೆ ಜಗತ್ತಿನ ಅತಿ ದೊಡ್ಡ ಕಂಪ್ಯೂಟರ್ ಕಂಪನಿ - ಐಬಿಎಂ. ಆದರೆ ಕನ್ನಡ ಲಿನಕ್ಸ್ ಸಾಫ್ಟ್ ವೇರ್ ಬಿಡುಗಡೆ  ಈಚೆ ಸ್ಲಂನ ಅಂಬೇಡಕರ ಸಮುದಾಯ ಕಂಪ್ಯೂಟರ್ ಕೇಂದ್ರದಲ್ಲಿ. ಈ ವಿಶಿಷ್ಟ ರೀತಿಯ ಬಿಡುಗಡೆ ಹಮ್ಮಿಕೊಂಡದ್ದು ಕರ್ನಾಟಕ ಸ್ವತಂತ್ರ ತಂತ್ರಾಂಶ  ಆಂದೋಲನದ (ಎಫ್.ಎಸ್.ಎಂ.ಕೆ.) ಸ್ವಯಂಸೇವಕರು. ಈ ವಿಪರ್ಯಾಸದತ್ತ ಗಮನ ಸೆಳೆದವರು ಕನ್ನಡ ಲಿನಕ್ಸ್ ಬಿಡುಗಡೆ ಮಾಡಿ ಮಾತನಾಡಿದ ಹೊಸತು  ಸಂಪಾದಕ ಡಾ. ಜಿ. ರಾಮಕೃಷ್ಣ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡ ಕಡೆಗಣಿಸುವ ಕರ್ನಾಟಕದ ವ್ಯಾಪಾರ ಮಳಿಗೆಗಳು

  ’ಮ೦ತ್ರಿ ಸ್ಕ್ವೇರ್ ಬೆ೦ಗಳೂರು’ ಮಳಿಗೆ ಭಾರತದಲ್ಲೇ ಅತಿ ದೊಡ್ಡ ವ್ಯವಹಾರ ಮಳಿಗೆ ಎ೦ದು ಗುರುತಿಸಿಕೊ೦ಡಿದೆ. ಈ ಮಳಿಗೆಯಲ್ಲಿ ಸ್ಪಾರ್, ಲೈಫ್ ಸ್ಟೈಲ್, ಶಾಪರ್ಸ್ ಸ್ಟಾಪ್ ನ೦ತಹ ಹಲವು ಅ೦ಗಡಿಗಳು ತೆರೆದು ಕೊ೦ಡಿವೆ. ವಿಶಾಲವಾದ  ಈ ಮಳಿಗೆ ಸುತ್ತಾಡಲು ಕನಿಷ್ಟ ಒ೦ದು ಇಡೀ ದಿನ ಬೇಕಾದೀತು. ಆದರೆ ಈ ಮಳಿಗೆ ಒಳ ಹೊಕ್ಕರೆ ಇದು ಕರ್ನಾಟಕವಲ್ಲವೆ೦ಬ ಅನುಭವವ೦ತೂ ಬರುವುದು ಸಹಜ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಅಕ್ಷರ ಕಡಿತಕ್ಕೆ ತಮಿಳು ಮಾದರಿ?

ಈ ವಾರ ಮಾರುಕಟ್ಟೆಗೆ ಬಂದಿರುವ ನನ್ನ " ಕನ್ನಡಕ್ಕೇಕೆ ಶಂಕರ ಬಟ್ಟರ ಕತ್ತರಿ? " ಎಂಬ ಪುಸ್ತಕದ ಕೆಲವು ಭಾಗಗಳು.

ಅಕ್ಷರ ಕಡಿತಕ್ಕೆ ತಮಿಳು ಮಾದರಿ?

ಹಿರಿಯ ಭಾಷಾವಿದ್ವಾಂಸರಾದ ಡಾ. ಡಿ. ಎನ್. ಶಂಕರ ಭಟ್ಟರು ಈಚಿನ ವರ್ಷಗಳಲ್ಲಿ" ಹೊಸ ಕನ್ನಡ"ವನ್ನು ಪ್ರತಿಪಾದಿಸುತ್ತಿದ್ದಾರೆ. ಕನ್ನಡದ ಅಕ್ಷರಗಳನ್ನು ಕಡಿಮೆ ಮಾಡಬೇಕು ಹಾಗೂ ಸಂಸ್ಕೃತದಿಂದ ಬಂದ ಪದಗಳನ್ನು ಬಿಟ್ಟುಬಿಡಬೇಕು ಎನ್ನುವುದು ಅವರ ವಾದದ ಮುಖ್ಯಾಂಶ. ಅವರ ಇತ್ತೀಚಿನ ಪುಸ್ತಕಗಳು ಅವರದೇ ಆದ ಹೊಸ ಕನ್ನಡದಲ್ಲಿ ಬರುತ್ತಿವೆ.

ಪರಂಪರೆ ಮತ್ತು ಸಂಸ್ಕೃತಿಗಳ ಬಗ್ಗೆ ಡಿ.ಎನ್.ಎಸ್. ಬರಹಗಳಲ್ಲಿ ವ್ಯಕ್ತವಾಗುವ ನಿಲುವೇನು ಎಂದು ನೋಡಬೇಕು. ಅವರು ಒಂದೆಡೆ ಸ್ವಾಭಿಮಾನ, ಸ್ವಸಂಸ್ಕೃತಿ ಬಗ್ಗೆ ಮಾತಾಡುತ್ತಾರೆ; ಇನ್ನೊಂದೆಡೆ ವ್ಯಾವಹಾರಿಕ ಪ್ರಯೋಜನಗಳ ಬಗ್ಗೆ ಮಾತಾಡುತ್ತಾರೆ.ಇನ್ನೊಂದೆಡೆ ವರ್ತಮಾನ ಕಾಲವನ್ನೂ ಈಚಿನ ಕೆಲ ಶತಮಾನಗಳ ಇತಿಹಾಸವನ್ನೂ ನಿರಾಕರಿಸುತ್ತಾರೆ.

ತಮಿಳನ್ನು ಅನುಸರಿಸುವುದೇ ಕನ್ನಡದ ಸಂಸ್ಕೃತಿಯನ್ನು ಹಾಗೂ ಸೊಗಡನ್ನು ಉಳಿಸುವ ದಾರಿ ಎಂದು ಡಾ.ಡಿ.ಎನ್.ಎಸ್. ಹೇಳುತ್ತಾರೆ. ಆರ್. ಗಣೇಶ್ ಹೇಳುವಂತೆ , ಈ ಸುಧಾರಣೆಯು " ಒಂದು ಶತಾಬ್ಧಿಗೂ ಮುನ್ನ ತಮಿಳುನಾಡಿನಲ್ಲಿ ವೀರ ತಮಿಳರು ನಡೆಸಿದ ಅವಿಚಾರಿತ ಸುಧಾರಣೆಯ ಸವಕಲು ಅನುಕರಣೆಯೆಂಬುದನ್ನು ಬಲ್ಲವರೆಲ್ಲ ಬಲ್ಲರು.ಇಷ್ಟಾಗಿಯೂ ತಮಿಳು ಜಾಗತಿಕ ಸ್ತರದಲ್ಲಿ ತಾನೊಂದು ಭಾಷೆಯಾಗಿ ಏನನ್ನೂ ಸಾಧಿಸಲಾಗಲಿಲ್ಲ.ತಮಿಳರಿಗೆ ಜೀವಿಕೆಯ ಅನಿವಾರ್ಯತೆಯಿಂದ ವ್ಯವಹಾರಮಾತ್ರಕ್ಕಾಗಿ ಕಲಿಯಬೇಕಾಗಿ ಬರುವ ಇನ್ನಿತರ ಭಾಷೆಗಳನ್ನರಿಯಲೂ ಅದು ಸಹಕಾರಿಯಾಗಿಲ್ಲ." ಕೆ.ವಿ.ತಿರುಮಲೇಶ್ ಅವರು ಕೂಡ ತಮಿಳರ ಈ ಮಾದರಿ ಕನ್ನಡಕ್ಕೆ ಅನುಸರಣಯೋಗ್ಯವಲ್ಲ ಎಂದು ತುಂಬ ಸ್ಪಷ್ಟವಾಗಿಯೇ ಹೇಳಿದ್ದಾರೆ.

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಇಡೀ ಬಾಟ್ಳಿ ಖಾಲಿಒಮ್ಮೆ ಶೀನ ನಮ್ಮ ಮಲೆಯಾಳೀ ಪಂಡಿತರಲ್ಲಿಗೆ ಹೋಗಿದ್ದ.
"ಹೋಯ್ ಪಂಡಿತರೇ ನಂಗೆ ಸಲ್ಪ ತಾಕತ್ ಬಪ್ಪೂಕೆ ಎಂತಾದ್ರೂ ಕೊಡಿ"
ಪಂಡಿತರು ಒಂದ ಬಾಟ್ಲಿ ಚ್ಯವನಪ್ರಾಶ ಕೊಟ್ಟ ದಿನಕ್ಕೆಳ್ಡ ಸಲ ತಕ್ಕಂಬ್ಕ್ ಹೇಳ್ದ್ರ.

ಸಾಯಂಕಾಲ ಅವ್ನ ಮನಿ ಹತ್ರ ಹೋದ್ರೆ "  ಎಲ್ಲಾ ಶೀನ?"
ಅವ್ನ ಮಗ ಅಂದ " ಅವ್ರ ಆಗ್ಲಿಂದ ಬಾವಿಯೊಳ್ಗೆ ಕೂತ್ಕಂಡಿರೇ"
"ಹೌದಾ........ ?
ಇವ್ರ ಬಾವಿಯಗೆ ಇಣ್ಕಿ ಕೇಂಡ್ರ"  ಯಾಕಾ? ಶೀನಾ ಅಲ್ಯಾಕೆ ಕೂಕಂಡದ್ದ್?"
ಎಂತ ರುಚಿ ಇತ್ತ ಮರ್ರಯ್ರೇ ,  ಬಾಟ್ಳಿ ಖಾಲಿಯಾದ್ದೇ ಗೊತ್ತಾಯ್ಲಿಲ್ಲ,
ಆದ್ರೆ ತಿಂದಮ್ಯಾಲೆ ಮೈಯೆಲ್ಲಾ ಎಂತಾ ಉರಿ ಅಂತ್ರೀ
ಅದಕ್ಕೇ  ನೀರಡಿ ಕೂತ್ಕಂಡಿದ್ದೆ!!!!!..
!!!!!!!!!!!!!!!!!!!!!!!!!!!!

field_vote: 
Average: 3.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

’ಅತಿಥಿ’-’ಆಮಂತ್ರಿತ’-’ಅಭ್ಯಾಗತ’

  ’ಸಂಪದ’ದಲ್ಲೊಂದುಕಡೆ ಮಿತ್ರ ವೆಂಕಟೇಶಮೂರ್ತಿ ಅವರು ನನ್ನನ್ನು ಈ ಕೆಳಗಿನಂತೆ ಪ್ರಶ್ನಿಸಿದರು:

<ಆಹ್ವಾನ ಪತ್ರಿಕೆಯಲ್ಲಿ "ಅತಿಥಿಗಳು" ಎ೦ದು ಬಳಸುವ ಬಗ್ಗೆ..
"ಅತಿಥಿಗಳು" ಅ೦ದರೆ ಕರೆಯದೇ ಬರುವವರು ಎ೦ಬ ಅರ್ಥ ಬರುವುದಿಲ್ಲವೇ?
"ಅಭ್ಯಾಗತರು" ಎ೦ಬ ಪದದ ಬಳಕೆ ಸರಿಯಲ್ಲವೇ? "ಅತಿಥಿಗಳು" ಅಥವಾ "ಅಭ್ಯಾಗತರು" ಯಾವುದು ಸರಿ?>

  ಅವರ ಈ ಪ್ರಶ್ನೆಯನ್ನು ನಾನು ಗಮನಿಸುವ ಮೊದಲೇ ಮಿತ್ರ-ವಿದ್ವಾಂಸ ನಾ. ಸೋಮೇಶ್ವರ ಅವರು ಗಮನಿಸಿ ಈ ಕೆಳಗಿನಂತೆ ಉತ್ತರಿಸಿದರು:

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಫೇಸ್ ಬುಕ್ ಕನ್ನಡ ಗೊಳಿಸಲು ಸಹಕರಿಸಿ....

ನಮಸ್ಕಾರ,
 ನಿಮಗೆಲ್ಲ ತಿಳಿದಿರಬಹುದು 'ಫೇಸ್ ಬುಕ್ ' ಜಾಲತಾಣ ಹೆಚ್ಚು ಜನರನ್ನು ತಲುಪಲು ತನ್ನ ಸೇವೆಯನ್ನು ಜಗತ್ತಿನ 75ಕ್ಕೂ ಹೆಚ್ಚು ಭಾಷೆಗಳಿಗೆ ವಿಸ್ತರಿಸಿದೆ.. ಇದರಲ್ಲಿ ಕನ್ನಡವೂ ಒಂದು.ಭಾಷೆಗಳ ಅನುವಾದವನ್ನು ಫೇಸ್ ಬುಕ್ ತನ್ನ ಬಳಕೆದಾರರಿಂದಲೇ ಮಾಡಿಸುತ್ತಿದೆ.


 ಬಳಕೆದಾರರು ತಮಗೆ ಆಸಕ್ತಿಇರುವ ಭಾಷೆ ಯನ್ನು ಬಳಸಿ 'ಫೇಸ್ ಬುಕ್' ಪಟ್ಟಿ ಮಾಡಿರುವ ಪದಗಳನ್ನು ಅನುವಾದಿಸಬಹುದು ಅಥವಾ ಈಗಾಗಲೇ ಅನುವಾದಗೊಂಡಿರುವ ಪದಗಳ ಬಗ್ಗೆ ತಮ್ಮ ಅಭಿಮತ ತಿಳಿಸಬಹುದು. ಜಾಲತಾಣದ ಒಳಗಿನ ತಂತ್ರಾಂಶ ಈ ಎಲ್ಲ ಅನುವಾದಗಳನ್ನು ಮತ್ತು ಪ್ರತಿಕ್ರಿಯೆಗಳನ್ನು ವಿಮರ್ಶಿಸಿ ಸೂಕ್ತವಾದ ಅನುವಾದವನ್ನು ಆರಿಸುತ್ತದೆ. ಹೀಗೆ ಎಲ್ಲ ಫೇಸ್ ಬುಕ್ ಪದಗಳು ಅನುವಾದಗೊಂಡರೆ 'ಸಂಪೂರ್ಣ ಕನ್ನಡಮಯ ಫೇಸ್ ಬುಕ್'' ರೆಡಿ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

"ಹಳೇ ಬೇರು ಹೊಸ ಚಿಗುರು" - ಇದೇ ಗುರಿನುಡಿ ಹೊಂದಿದ ಲೇಖನ

"ಸಂಪದ"ದ ಗುರಿನುಡಿ "ಹಳೇ ಬೇರು ಹೊಸ ಚಿಗುರು". ಇದೇ ಗುರಿನುಡಿ ಹೊಂದಿದ ಲೇಖನ ನೋಡಿ ನನಗೆ ಈ ಗುರಿ ನುಡಿ ಆರಿಸಿದವರ ಬಗ್ಗೆ ಹೆಮ್ಮೆ ಅನ್ನಿಸಿತು.

ರಂಗಾಯಣದ ನಿರ್ದೇಶಕ ಲಿಂಗದೇವರು ಹಳೆಮನೆಯವರೊಂದಿಗೆ ಮಾತುಕತೆ: ಗುಡಿಹಳ್ಳಿ ನಾಗಾರಾಜ ಎಂಬ ಲೇಖನ ಜುಲೈ ೧ ರ "ಸುಧಾ" ವಾರಪತ್ರಿಕೆಯಲ್ಲಿ ಪ್ರಕಟವಾಗಿದೆ ಅದನ್ನು <http://sudhaezine.com/pdf/2010/07/01/20100701a_042101001.jpg >ಓದಬಹುದು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡದಲ್ಲಿ ಟೈಪ್ ಮಾಡಬೇಕೆ?

 ಫೇಸ್ ಬುಕ್ ನಲ್ಲಿ ಕನ್ನಡದಲ್ಲಿ ಬರೆಯಬೇಕೆ?

ಜಿ ಮೇಲ್,ಯಾಹೂ ಮೇಲ್ ನಿಂದ ಕನ್ನಡದಲ್ಲಿ ಮಿಂಚೆ ಕಳಿಸಬೇಕೆ?

ಜಿ ಟಾಕ್,ಯಾಹೂ ಮೆಸ್ಸೆಂಜರ್,ಫೇಸ್ ಬುಕ್ ಚಾಟ್ ನಲ್ಲಿ ಗೆಳೆಯರ ಜೊತೆ ಕನ್ನಡದಲ್ಲಿ ಹರಟೆ ಹೊಡೆಯಬೇಕೆ?

ಒಂದು ಒಳ್ಳೆಯ ಲೇಖನಕ್ಕೆ ಕನ್ನಡದಲ್ಲಿ ಪ್ರತಿಕ್ರಿಯೆ ನೀಡಬೇಕೆ?

ಇವುಗಳು ಹಾಗು ಅಂತರ್ಜಾಲ/ಗಣಕಯಂತ್ರದಲ್ಲಿ  ಇನ್ನಷ್ಟು ಕಡೆಗಳಲ್ಲಿ ಕನ್ನಡ ಬಳಸಲು ನಿಮ್ಮೆಲ್ಲರಿಗೆ ಅನುವಾಗುವ ಹಾಗೆ ನಾನು ಕೆಲವು ವಿಧಾನಗಳು,ತಂತ್ರಾಂಶಗಳು ಹಾಗು ವೆಬ್ ತಾಣಗಳನ್ನು ಪಟ್ಟಿ ಮಾಡಿದ್ದೇನೆ.

ನೀವು ಉಪಯೋಗಿಸಲು ಶುರು ಮಾಡಿ..ಮತ್ತು ನಿಮ್ಮ ಗೆಳೆಯರೆಲ್ಲರಿಗೂ ತಿಳಿಸಿ....

field_vote: 
Average: 2 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಗೂಗಲ್ ನ್ಯೂಸ್ ನಲ್ಲಿ ಕನ್ನಡ ಹೆಂಗಪ್ಪ ಬರುತ್ತೆ?

ಗೂಗಲ್ ನ್ಯೂಸ್ ನಲ್ಲಿ ಕನ್ನಡ ನ್ಯೂಸ್ ಇಲ್ಲ ಎನ್ನುವ ಚರ್ಚೆ ಏನ್ ಗುರು ಹಾಗು ಸಂಪದ ದಲ್ಲಿ ನೆಡೆಯುತ್ತಿರುವುದು ನಿಮಗೆ ತಿಳಿದಿರಬಹುದು. ಸಂಪದ ಲೇಖನದಲ್ಲಿ ಓದುಗರಾಗಿ ನಾವು ಯಾವ ರೀತಿ ಇದನ್ನು ಸರಿಪಡಿಸಲು ಸಹಾಯ ಮಾಡಬಹುದು ಎಂದು ಚೆನ್ನಾಗಿ ಮೂಡಿಬಂದಿದೆ.
ಇಂದು ನಾವು ಪ್ರಿಯಾಂಕ್ ರವರು ಸೂಚಿಸಿರುವ ಕೆಲಸಗಳನ್ನು ಮಾಡುವುದರ ಜೊತೆಗೆ ಈ ಸಮಸ್ಯೆಯ ಮೂಲ ಕಾರಣಗಳು ಯಾವುವು ಎಂದು ಯೋಚಿಸಬೇಕಾಗಿದೆ .
1. ನಮ್ಮ ಮನೆಗಳಲ್ಲಿ ಕನ್ನಡ ಪತ್ರಿಕೆ ಹಾಗು ಕನ್ನಡ ಸಾಪ್ತಾಹಿಕಗಳನ್ನು ತರಿಸುವುದು ಅಥವಾ ಓದುವುದು ಕಡಿಮೆ ಆಗಿರಬಹುದೇ?

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಬ್ರಿಟಿಷ್ ಏರ್ ವೇಸ್ ವಿಮಾನದಲ್ಲಿ ಆದ ಅನುಭವ

ಮೊನ್ನೆ ನನಗೆ ಬ್ರಿಟಿಷ್ ಏರ್ವೇಸ್ ವಿಮಾನದಲ್ಲಿ ಪ್ರಯಾಣ ಮಾಡುವ ಅವಕಾಶ ದೊರಕಿತ್ತು.
ಬನವಾಸಿ ಬಳಗದ ಮಿಂಚೆಗಳಲ್ಲಿ ಓದಿದ್ದಂತೆ ಬೆಂಗಳೂರಿಗೆ ಬಂದು/ಹೋಗುವ ಎಲ್ಲ ಬ್ರಿಟಿಷ್ ಏರ್ವೇಸ್ ವಿಮಾನಗಳಲ್ಲಿ ಕನ್ನಡದಲ್ಲಿ ಪ್ರಕಟಣೆ ಹೊರಡಿಸುವುದು ತಿಳಿದಿತ್ತು.

ಲಂಡನ್ ನಿಂದ ಹೊರಡುವಾಗ ಕನ್ನಡದಲ್ಲಿ ಪ್ರಕಟಣೆ ಹೊರಡಿಸಿದರು..
ಬೇರೆ ದೇಶದ ನೆಲದಲ್ಲಿ ಎಲ್ಲ ಪ್ರಯಾಣಿಕರ ಮುಂದೆ ಕನ್ನಡದಲ್ಲಿ ಪ್ರಕಟಣೆ ಕೇಳುವುದು ನಿಜಕ್ಕೂ ಮನಸ್ಸಿಗೆ ಬಹಳ ಖುಷಿ ಕೊಟ್ಟಿತು.
ನಂತರ ಪ್ರಕಟಣೆ ಮಾಡಿದ ಗಗನಸಖಿಯನ್ನು ಮಾತನಾಡಿಸಿ ಕನ್ನಡದಲ್ಲಿ ಪ್ರಕಟಣೆ ಮಾಡಿದ್ದಕ್ಕೆ ಧನ್ಯವಾದ ಹೇಳಿ ಬಂದೆ.
ಅವನಿಗೆ ಕನ್ನಡದಲ್ಲಿ ಮಾತನಾಡಲು ಬರುವ ಕಾರಣದಿಂದಲೇ ಆ ಕೆಲಸ ಸಿಕ್ಕಿದ್ದು ಎಂದು ತಿಳಿದು ಸಂತೋಷ ಆಯಿತು..

field_vote: 
Average: 4.8 (5 votes)
To prevent automated spam submissions leave this field empty.
ಲೇಖನ ವರ್ಗ (Category): 

ಮಾನ್ಯ ಡಾ ಎಚ್ ಎಸ್ ವಿ ಯವರ ಅಭ್ಯಾಸ ೪ ೧೧.೦೭.೨೦೧೦

ಈ ಸಾರಿಯ ಅಭ್ಯಾಸ ೪ ನಮ್ಮ ಸ್ನೇಹಿತ ಶ್ರೀ ಸುರೇಶ ಶಂಕರ ನಾರಾಯಣ ಅವರ ಮನೆ "ಧಾತ್ರಿ"ಯಲ್ಲಿ, ಬೆಳಗಿನ ಪುಷ್ಕಳ ತಿಂಡಿಯಾದ ಮೇಲೆ ಅವರ ಸುಂದರ ಸುಸಜ್ಜಿತ ಕೆಳಮಹಡಿಯಲ್ಲಿ ಅಭ್ಯಾಸದ ಆರಂಭವಾಯ್ತುfield_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..?

 


 


ನಮ್ಮ ರಾಜ್ಯದ ಹೆಸರು 'ಕರ್ನಾಟಕ' ಅಂತ ಹೇಗೆ ಬಂತು..?  ಆ ಶಬ್ದದಲ್ಲಿ ' ನಾಟಕ' ಅಂತ ಹೇಗೆ..?  ವಿವರಿಸಿ..

ಕೆಲವೊಬ್ರು...ಕರ್ನಾಟಕ ...ಕರ್ ನಾಟಕ್  ಎಂದು ಹಿಂದಿ ಭಾಷೆಯಲ್ಲಿ ಹಾಸ್ಯ ಮಾಡ್ತಾರೆ..:)

ಕೆಲವೊಮ್ಮೆ ರಾಜಕೀಯದ ಸಮಾಚಾರ ನೋಡುವಾಗ ಹಾಗೆ ಅನ್ನಿಸುವುದು..ನಿಜ..:)) 

 

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡದಲ್ಲಿ ಮಾತನಾಡಿ ಮತ್ತು ಲಾಭ ಮಾಡಿಕೊಳ್ಳಿ ! ಅತ್ಯದ್ಭುತ !!

 

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಡಬ್ಬಿಂಗ್ ಬೇಕೋ ಬೇಡವೋ ಅಂತ ನಿರ್ಧರಿಸಬೇಕಾದವನು “ಕನ್ನಡ ಪ್ರೇಕ್ಷಕನೋ?” ಇಲ್ಲ “ಕನ್ನಡ ಚಿತ್ರ ರಂಗವೋ?”

“ಮಚ್ಚು,ಲಾಂಗು,ಲೀಟರ್ ಗಟ್ಲೆ ರಕ್ತ ಬಿಟ್ಟು ಬೇರೆ ಇನ್ನೆನಪ್ಪ ಇದೆ ನಿಮ್ಮ ಕನ್ನಡ ಚಿತ್ರಗಳಲ್ಲಿ?, ವರ್ಷಕ್ಕೆ ಬರೋ ಚಿತ್ರಗಳಲ್ಲಿ ಅರ್ದಕ್ಕರ್ಧ ರಿಮೇಕ್ ಚಿತ್ರಗಳೇ.ಯಪ್ಪಾ!! ಬಿಡೋ ಹೋಗ್ಲಿ… ” ಅಂತ ನನ್ನ ಅನ್ಯ ಭಾಷೆಯ ಗೆಳೆಯರು ಕೂಡಿ ಗೇಲಿ ಮಾಡಿ ನಗ್ತಾ ಇದ್ರು.ನಾನಾದರು ಏನಂತ ಉತ್ತರ ಕೊಡ್ಲಿ, ಇರೋ ವಿಷ್ಯಾನೆ ತಾನೇ ಪಾಪ ಅವ್ರು ಹೇಳ್ತಾ ಇರೋದು.ಅದ್ರಲ್ಲಿ ತಪ್ಪೇನಿದೆ?,ಒಬ್ಬ ಕನ್ನಡ ಸಿನೆಮಾ ಅಭಿನಯದ ಅಭಿಮಾನಿಯಾಗಿದ್ದಕ್ಕೆ ಇಂತ ಮಾತುಗಳನ್ನ ಕೇಳಲೆಬೇಕಾಗಿತ್ತು.

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ರಾಷ್ಟ್ರಭಾಷೆಯಿಲ್ಲದ ರಾಷ್ಟ್ರದಲ್ಲಿ…

ಅದು ೧೯೩೭ ರ ಸಮಯ ಇಡಿ ದೇಶ ಸ್ವಾತಂತ್ರ್ಯ ಹೋರಾಟದಲ್ಲಿ ಮುಳುಗಿತ್ತು.ಆದರೆ ಇತ್ತ ತಮಿಳು ನಾಡಿನಲ್ಲಿ ಬೇರೆಯದೇ ಹೋರಾಟ ಶುರುವಾಗಿತ್ತು! ಒಂದು ಕಡೆ ನೋಡಿದರೆ ವಿದೇಶಿಗಳ ವಿರುದ್ಧ ಹೋರಾಟ ಇನ್ನೊಂದು ಕಡೆ ಇದೆ ದೇಶದ ಮತ್ತೊಂದು ಭಾಷೆಯ ಹೇರಿಕೆಯ ಮೇಲೆ ಹೋರಾಟ! ಅದು ‘ಹಿಂದಿ ಹೇರಿಕೆಯ ವಿರುದ್ಧ’!
ಮೇಲ್ನೋಟಕ್ಕೆ ಸ್ವಾತಂತ್ರ್ಯ ಹೋರಾಟದಂತಹ ಸಮಯದಲ್ಲಿ ದಂಗೆಯೆದ್ದ ತಮಿಳರ ಮೇಲೆ ಕೋಪ ಉಕ್ಕಿ ಬರುವುದು ಸಹಜವೇ.ಆದರೆ ಅವರೇನು ಸುಮ್ ಸುಮ್ನೆ ಬಾಯಿ ಬಡ್ಕೊತಿದ್ರಾ? ಅವರು ಹಾಗೆ ತಿರುಗಿ ಬೀಳುವಂತೆ ಮಾಡಿದ್ದಾದರು ಏನು? ಮಾಡಿದ್ದಾದರೂ ಯಾರು? ಅವ್ರ ಹೆಸರು ಸಿ.ರಾಜಗೋಪಾಲಚಾರಿ.

field_vote: 
Average: 4.5 (17 votes)
To prevent automated spam submissions leave this field empty.
ಲೇಖನ ವರ್ಗ (Category): 

ತುಳು ಕಲಿಯಿರಿ - ಭಾಗ ೧ - ಸಾಮಾನ್ಯ ಬಳಕೆಯ ವಾಕ್ಯಗಳು

ನನ್ನ ಆ೦ಗ್ಲ ಬ್ಲಾಗ್ ನಲ್ಲಿ ಬರೆದ ’ತುಳು ಕಲಿಯಿರಿ’ ಲೇಖನಗಳ ಸರಣಿಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಕೆಲವು ಕನ್ನಡ ಓದುಗರು ಕನ್ನಡ ಲಿಪಿಯಲ್ಲಿಯೇ ತುಳುವನ್ನು ಬರೆದರೆ ತಮಗೆ ಕಲಿಯಲು, ಪದಗಳ ಉಚ್ಛಾರಣೆಯನ್ನು ಸ್ಪಷ್ಟವಾಗಿ ತಿಳಿಯಲು ಅನುಕೂಲವೆ೦ದು ತಿಳಿಸಿದ್ದರಿ೦ದ ನನ್ನ ಕನ್ನಡ ಬ್ಲಾಗ್ ನಲ್ಲಿ ಈ ಸರಣಿಯನ್ನು ಶುರು ಮಾಡುತ್ತಿದ್ದೇನೆ. ತಮ್ಮ ಪ್ರೋತ್ಸಾಹ ಈ ಲೇಖನ ಮಾಲೆಗೂ ಇರಲಿ. ಸರಣಿಯ ಮೊದಲ ಈ ಲೇಖನದಲ್ಲಿ ಸಾಮಾನ್ಯವಾಗಿ ಬಳಸಲ್ಪಡುವ ವಾಕ್ಯಗಳನ್ನು ನೀಡಿದ್ದೇನೆ.

ಕನ್ನಡ : ನಮಸ್ಕಾರ, ಹೇಗಿದೀರ?
ತುಳು : ನಮಸ್ಕಾರ, ಎ೦ಚ ಉಲ್ಲರ್?

ಕನ್ನಡ : ಊಟ ಆಯ್ತಾ?

field_vote: 
Average: 4.1 (8 votes)
To prevent automated spam submissions leave this field empty.
ಲೇಖನ ವರ್ಗ (Category): 

ತುಳು ಕಲಿಯಿರಿ - ಭಾಗ ೨ - ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತುಕತೆ

ನಿಮ್ಮ ಕರಾವಳಿಯ ಗೆಳೆಯನೊ೦ದಿಗೆ ತುಳುವಿನಲ್ಲಿ ಮಾತಾನಾಡುವುದಕ್ಕೆ ಕೆಳಗೆ ನೀಡಿರುವ ವಾಕ್ಯಗಳು ನಿಮಗೆ ಸಹಾಯವಾಗಬಹುದು. ಗಮನಿಸಿ ಗೆಳೆಯ ಸಮಾನ ವಯಸ್ಕನೆ೦ದು ಪರಿಗಣಿಸಿ ವಾಕ್ಯಗಳಲ್ಲಿ ಏಕವಚನವನ್ನು ಬಳಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಬಳಕೆಯಲ್ಲಿರುವ ತುಳು ಭಾಷೆಯಲ್ಲಿ ಹಲವು ಶೈಲಿಗಳು ಅಥವಾ ಆಡುನುಡಿಗಳಿವೆ(Dialects). ಇಲ್ಲಿ ನಾನು ಬಳಸಿರುವ ಶೈಲಿ ಮ೦ಗಳೂರು ಕಡೆಯದ್ದು.

ಕನ್ನಡ : ನಮಸ್ಕಾರ, ಹೇಗಿದೀಯ?
ತುಳು : ನಮಸ್ಕಾರ, ಎ೦ಚುಲ್ಲ?

ಕನ್ನಡ : ನಾನು ಚೆನ್ನಾಗಿದೀನಿ.
ತುಳು : ಯಾನ್ ಉಸಾರುಲ್ಲೆ.

ಕನ್ನಡ : ಮನೇಲಿ ಎಲ್ಲ್ರು ಚೆನ್ನಾಗಿದಾರ?
ತುಳು : ಇಲ್ಲಡ್ ಮಾತೆರ್ಲ ಉಸಾರುಲ್ಲೆರಾ?

ಕನ್ನಡ : ಎಲ್ಲ್ರು ಚೆನ್ನಾಗಿದಾರೆ.

field_vote: 
Average: 3.3 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡದ ಈ ಲೋಕ

ಇಂಟರ್ ನೆಟ ನಲ್ಲಿ ಕನ್ನಡವನ್ನು ಬಳಸುವುದರ ಬಗ್ಗೆ ನಾನು ಬರೆದ ಪುಸ್ತಕ ಕನ್ನಡದ ಈ ಲೋಕ. ಈಪುಸ್ತಕದಲ್ಲಿ ನೂರು ಪುಟಗಳಿವೆ. ೨೨-೯-೧೦ರಂದು ಪ್ರಜಾವಾಣಿ ಈ ಪುಸ್ತಕದ ಬಗ್ಗೆ ಲೇಖನ ಪ್ರಕಟಿಸಿದಾಗ ನನಗೆ ೨೫೦ಕ್ಕೂ ಹೆಚ್ಚು ಕರೆಗಳು ಬಂದವು. ಹಳ್ಳಿಗಳ ಜನ ಆಸಕ್ತಿ ತಾಳಿದರು. ಕನ್ನಡದಲ್ಲಿ ಇ ಮೈಲ್ ಮಾಡಲು ಸಾದ್ಯವೇ ಎಂದು ಕೇಳಿದರು. ನಮ್ಮ ಸಾಮಾನ್ಯ ಜನರಿಗೆ ಇಂಟ್ರ್ನೆಟ್ ತಂತ್ರಜ್ನಾನವನ್ನು ತಲಪಿಸಬೇಕಾಗಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ವಿಚಕ್ಷಣಾ ಆಯೋಗದ ವಿಲಕ್ಷಣ ಕನ್ನಡ!


  ’ವಿಚಕ್ಷಣಾ ಜಾಗೃತಿ ಸಪ್ತಾಹ’ದ ಅಂಗವಾಗಿ ’ಕೇಂದ್ರೀಯ ವಿಚಕ್ಷಣಾ ಆಯೋಗ’ವು ಡಿಎವಿಪಿ ಇಲಾಖೆಯ ಮೂಲಕ ಇದೇ ದಿನಾಂಕ ೨೫ರಂದು ಕನ್ನಡ ದಿನಪತ್ರಿಕೆಗಳಲ್ಲಿ ಪ್ರಕಟಿಸಿರುವ ಅರ್ಧ ಪುಟದ ಜಾಹಿರಾತಿನಲ್ಲಿ ಕನ್ನಡದ ಕಗ್ಗೊಲೆ ಮಾಡಲಾಗಿದೆ! ಅಲ್ಲಿ ಮುದ್ರಿತವಾಗಿರುವ ಕೆಲವು ಕನ್ನಡ ಪದಗಳು ಇಂತಿವೆ:
  ’ಬ್ರಷ್ಟಾಚಾರ, ಬೃಷ್ಟಾಚಾರ, ಆಂದೊಲನ, ಅಂದೊಲನ, ವಿಳಸ, ಗೊತ್ತುವಿಳಿ, ಜಾಗೃತೆ, ಜಾಗೃತಾ ಸಪ್ತಾಹ, ಜಾಗೃತ ಸಪ್ತಾಯ, ಆಭಿವೃದ್ಧಿ, ಸ್ಪೂರ್ತಿ, ನಿರಕ್ಷಿಸುತ್ತದೆ, ಅವದಿ, ಹೊರಾಟ, ಆಗತ್ಯವಾಗಿದೆ, ಪ್ರಚೊದಿಸುವದರ, ಹೊರಾಡುವಂತೆ, ತಿಳುವಳಿಕೆ, ಫೊಸ್ಟರ್‌ಗಳು, ಉಪಯೊಗಿಸುವ, ಆಡಳಿತೆ, ಸಾರ್ಮಥ್ಯ, ಆವಕಾಶ, ಅಗತ್ಯತೆ, ಆಯೊಗ, ಸುತ್ರಗಳನ್ನು.......’. ಹೀಗೆ ಸೂತ್ರವಿಲ್ಲದ ಗಾಳಿಪಟವಾಗಿ ವಿಚಕ್ಷಣಾ ಆಯೋಗದ ಕನ್ನಡ ವಿಜೃಂಭಿಸಿದೆ!

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಪ್ರೊಫೈಲ್ ಶಬ್ದಕ್ಕೆ ಸಮಾನವಾಗಿ "ಪ್ರವರ" ಬಳಸಬಹುದೇ?

ಸಂಪದಿಗರೇ,

 

ನಮಗೆಲ್ಲಾ ಪ್ರೊಫೈಲ್  ಶಬ್ದ ಗೊತ್ತು, ಅದಕ್ಕೆ ಕನ್ನಡದಲ್ಲಿ ಸಮಾನವಾದ ಶಬ್ದಗಳು ಏನಾದರೂ ಬಳಕೆಯಲ್ಲಿ ಇವೆಯೇ?

 

ಈ ಕುರಿತು ಯೋಚಿಸಿದಾಗ "ಪ್ರವರ" ಶಬ್ದ ಬಳಸ ಬಹುದೇನೊ; ಪ್ರೊಫೈಲ್ ನಂತೆ ಪ್ರವರವೂ ಕೂಡ ತಾನೇ ತನ್ನ ಕುರಿತು ಓರ್ವ ಹೇಳಿಕೊಳ್ಳುವ ಪರಿಚಯ.

 

ಆದ್ದರಿಂದ ಸಮಂಜಸವಾಗಬಹುದು ಎಂದು ಕೊಂಡಿರುವೆ.

 

ತಮ್ಮ ಅನಿಸಿಕೆ, ಬೇರೆ ಶಬ್ದ ತಿಳಿಸಿ; "ಪ್ರವರ" ಸೂಕ್ತ ಎನಿಸಿದರೆ ಬಳಸಿ.

 

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಷಯಗಳು!!!

 

ನಮಸ್ಕಾರಗಳೊಂದಿಗೆ...

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಸಂಪದಿಗರಿಗೆ ಇಲ್ಲುಂಟು ಎಂಟು ಬಗೆಯ ನಂಟು


                ಅಷ್ಟಬಂಧ

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

೫೪ನೇ ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ನಮ್ಮ ಕನ್ನಡ...

ಇಂದು ನಮ್ಮ ಕನ್ನಡ ನಾಡು ೫೪ನೇ ಕನ್ನಡ ರಾಜ್ಯೋತ್ಸವ ಆಚರಿಸುತ್ತಿದೆ. ಈ ನಮ್ಮ ನಾಡ ಉತ್ಸವ ಈ ಒಂದು ದಿನಕ್ಕಷ್ಟೇ ಸೀಮಿತವಾಗಿಬಿಡುತ್ತದೆ ಎಂಬ ಅಪಸ್ವರವನ್ನು ತೊಡೆದುಹಾಕಲೆಂದೇನೊ, ಕರ್ನಾಟಕ ಸರ್ಕಾರ ರಾಜ್ಯೋತ್ಸವ ಸಮಿತಿಯು ನ.೧ ರಿಂದ ಮುಂದಿನ ವರ್ಷ ನ.೧ರವರೆಗೆ "ಕನ್ನಡ ಉಳಿಸಿ ವರ್ಷಾಚರಣೆ" ಹಮ್ಮಿಕೊಂಡಿದೆ. ಬೆಂಗಳೂರಿನ ಮೈಸೂರು ವೃತ್ತದಲ್ಲಿ ನೃಪತುಂಗ ಮಂಟಪ ನಿರ್ಮಿಸಿ ಆಚರಣೆಗೆ ಚಾಲನೆ ನೀಡಿ, ನವೆಂಬರ‍್ ಪೂರ್ತಿ ಬೆಂಗಳೂರಿನ ನಾನಾ ಪ್ರದೇಶಗಳಲ್ಲಿ ಹಾಗೂ ರಾಜ್ಯದಾದ್ಯಂತ ವರ್ಷವಿಡೀ ರಾಜ್ಯೋತ್ಸವ ಆಚರಿಸಲು ನಿರ್ಧರಿಸಲಾಗಿದೆ. ನಿಜಕ್ಕೂ ಇದೊಂದು ವಿಶೇಷ, ನಮ್ಮ ನಾಡಿನ ಕನ್ನಡ ಜನತೆಯನ್ನೆಚ್ಚರಿಸುವ ಅವರೆಲ್ಲ ಕನ್ನಡದ ಬಗ್ಗೆ ಮತ್ತೆ ಹೆಮ್ಮೆ ಪಡವಂತೆ ಪುನರ‍್ ಪ್ರಯತ್ನಿಸುವುದು ಕನ್ನಡಾಭಿಮಾನಿಗಳ ಮಹತ್ವದ ಕೆಲಸವೇ ಸರಿ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡ ನಮ್ಮಿಂದೇನನ್ನು ನಿರೀಕ್ಷಿಸುತ್ತದೆ?

    ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಕನ್ನಡ ಏಕೀಕರಣದ ಹೋರಾಟದಲ್ಲಿ ತುಂಬ ಮಹನನೀಯರ ಕೊಡಿಗೆಯಿದೆ. ಅವರ ಹೊರಾಟಗಳು ನಿರರ್ಥಕವಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ. ಎಲ್ಲ ಭಾಷೆಗಳು ಅದನ್ನು ಮಾತನಾಡುವ ಜನರಿಂದ ಅದರ ಬೆಳವಣಿಗೆಯ ಬಗ್ಗೆ ನಿರೀಕ್ಷೆ ಇಟ್ಟುಕೊಳ್ಳುತ್ತವೆ. ಹೇಗೆ ತಾಯಿ ವೃದ್ದಾಪ್ಯದಲ್ಲಿ ಮಗನ ಪ್ರೀತಿ ಮತ್ತು ಅಶ್ರಯ ಬಯಸುತ್ತಾಳೋ ಹಾಗೇ. ನಮ್ಮ ಭಾಷೆ ವೃದ್ದಾಪ್ಯಕ್ಕೆ ಸರಿದಿದೆ ಎಂದು ನಾನನ್ನುತ್ತಿಲ್ಲ. ಕನ್ನಡಮ್ಮ ಚಿರಯೌವ್ವನೆ. ಆ ಅವಲಂಬನೆಯನ್ನು ನಿರೂಪಿಸಲು ಆ ರೀತಿ ಹೇಳಿದೆ. ಅದು ಸಹಜ ಕೂಡ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಹಾರ್ಧಿಕ ಶುಭಾಷಯ ಬೇಡ, ಹಾರ್ದಿಕ ಶುಭಾಶಯ ಇರಲಿ

field_vote: 
Average: 4.7 (3 votes)
To prevent automated spam submissions leave this field empty.
ಲೇಖನ ವರ್ಗ (Category): 
Subscribe to ಭಾಷೆ-ಕನ್ನಡ

ಆಯ್ದ ಬರಹಗಳು

Sampada is a community of people passionate about literary activities in Kannada. Sampada is one of the largest Kannada communities on the Internet. ಸಂಪದ ಕನ್ನಡ ನಾಡು, ನುಡಿ, ಓದು ಸುತ್ತ ಆಸಕ್ತಿ ಇಟ್ಟುಕೊಂಡಿರುವವರ ಆನ್ಲೈನ್ ಸಮುದಾಯ ಹಾಗು ಕನ್ನಡದ ಮೊತ್ತ ಮೊದಲ ಆನ್ಲೈನ್ ಸಮುದಾಯಗಳಲ್ಲೊಂದು.

Powered by Drupal. Technology support by : Saaranga Infotech

1 2