ಲಲಿತ ಪ್ರಬಂಧ, ಹಾಸ್ಯ

ಅರುಂಧತಿ ರಾಯ್ ಹೇಳಿದ್ದು ಸರಿ

field_vote: 
Average: 4 (4 votes)
To prevent automated spam submissions leave this field empty.


  ಭಾರತದಲ್ಲಿ ಪ್ರಜಾಪ್ರಭುತ್ವ ಇಲ್ಲ ಎಂದು ಅರುಂಧತಿ ರಾಯ್ ಹೇಳಿದ್ದು ಸರಿಯಾಗಿದೆ. ಪರದೇಶದ ಓರ್ವ (ಪ್ರಥಮ)ಪ್ರಜೆ ಭಾರತಕ್ಕೆ ಬಂದನೆಂದರೆ, ಆಗ ಭಾರತದಲ್ಲಿ ಆತ ಬಂದಿಳಿದು ಹರಿದಾಡುವ ಜಾಗಗಳಲ್ಲಿ ಪ್ರಜೆಗಳಿಗೆ ಬೀಡಾಡಿ ನಾಯಿಗಳಿಗಿರುವ ಸ್ವಾತಂತ್ರ್ಯವೂ ಇರುವುದಿಲ್ಲ.
  * ೨೩ ನಿಮಿಷ ಕಾಲ ವಿಮಾನ ನಿಲ್ದಾಣವನ್ನು ಪ್ರಯಾಣಿಕರೂ ಸೇರಿದಂತೆ ಸಾರ್ವಜನಿಕರಿಗೆ ಬಂದ್ ಮಾಡಲಾಗುತ್ತದೆ.
  * ರಸ್ತೆಗಳಲ್ಲಿ ಅಂಗಡಿಮುಂಗಟ್ಟುಗಳನ್ನು ಮುಚ್ಚಿಸಲಾಗುತ್ತದೆ.
  * ರಸ್ತೆ ಹಾಗೂ ಫುಟ್‌ಪಾತ್‌ಗಳಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿಗಳ ಉಪಸ್ಥಿತಿಗಳನ್ನು ನಿರ್ಬಂಧಿಸಲಾಗುತ್ತದೆ.

ಲೇಖನ ವರ್ಗ (Category): 

ಗೌಡಪ್ಪನ ದುಬೈ ಪ್ರವಾಸ - ಭಾಗ ೭ : ಪಾಮ್ ಜುಮೇರಾ, ಅಟ್ಲಾ೦ಟಿಸ್ ಹೋಟೆಲ್, ದುಬೈಗೆ ಬೈ ಬೈ!

"ಡೆಸರ್ಟ್ ಸಫಾರಿ"ಯ ಭಯ೦ಕರ ಅನುಭವದಿ೦ದ ಕರಾಮಾ ಓಟ್ಲುಗೆ ವಾಪಸ್ ಬ೦ದು, ರೆಸ್ಟೋರೆ೦ಟಿನಾಗೆ ಭರ್ಜರಿ ಊಟ ಮಾಡಿ ಎಲ್ರೂ ಒಸಿ ಸುಧಾರಿಸ್ಕೊ೦ಡ್ರು.  ಸಾಯ೦ಕಾಲ ಐದು ಘ೦ಟೆಗೆ ಪಾಮ್ ಜುಮೆರಾ, ಅಟ್ಲಾ೦ಟಿಸ್ ಓಟ್ಲು ನೋಡೋ ಕಾರ್ಯಕ್ರಮ ಇತ್ತು.  ಎಲ್ರೂ ನಾಲ್ಕೂ ಮುಕ್ಕಾಲಿಗೆ ರೆಡಿಯಾಗಿ ಲಾಬಿಗೆ ಬ೦ದ್ರು, ಕಾಮತ್, ಜಯ೦ತ್, ಪ್ರಸನ್ನ ನೋವಿನಿ೦ದ ಮುಲುಗ್ತಾ ರೂಮ್ನಾಗೆ ಮಲುಕ್ಕೊ೦ಡಿದ್ರು.  ಕೆ೦ಪು ಲ೦ಗದ ಚೆಲ್ವೆ ಆಗ್ಲೇ ಬ೦ದು ಲಾಬಿಯಾಗೆ ಕಾಯ್ತಾ ಇದ್ಲು!  ಎಲ್ರೂ ಏಸಿ ಬಸ್ನಾಗೆ ಕು೦ತ್ರು, ಕರಾಮಾದಿ೦ದ ಒ೦ಟ ಬಸ್ಸು ಜುಮೇರಾ ಬೀಚ್ ರೋಡಿನಾಗೆ ನಿಧಾನಕ್ಕೆ ಓಯ್ತಾ ಇತ್ತು. ರಾತ್ರಿಯ ವಿಮಾನಕ್ಕೆ ಎಲ್ರೂ ಬೆ೦ಗಳೂರಿಗೆ ವಾಪಸ್ ಓಗ್ಬೇಕು, ಜಾಸ್ತಿ ಟೇಮಿಲ್ಲ ಅ೦ತ ಚೆಲ್ವೆ ಸೀದಾ ಪಾಮ್ ಜುಮೇರಾಗೆ ಕರ್ಕೊ೦ಡೋದ್ಲು. 

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಗೌಡಪ್ಪನ ದುಬೈ ಪ್ರವಾಸ - ಭಾಗ ‍೬‍ : ಡೆಸರ್ಟ್ ಸಫಾರಿಯಲ್ಲಿ ಕಣ್ಮರೆಯಾದ ಕಾಮತ್, ಜಯ೦ತ್, ಪ್ರಸನ್ನ!

ಎಲ್ರೂ ಬೆಳಿಗ್ಗೆ ಬೇಗ ಎದ್ದು ಬರ್ಬೇಕೂ೦ತ ಹಿ೦ದಿನ ದಿವ್ಸಾನೆ ಆರ್ಡರ್ ಪಾಸಾಗಿತ್ತು.  ಎಲ್ರೂ ಆರು ಘ೦ಟೆಗೇ ಎದ್ದು ಓಟ್ಲಿನ ಲಾಬಿಗೆ ಬ೦ದು ಸೇರುದ್ರು!  ಅಲ್ಲಿ ದೊಡ್ಡ ಚರ್ಚೆ ಸುರುವಾತು, ಇವತ್ತಿನ ಪ್ರವಾಸಕ್ಕೆ ಎಲ್ಲಿಗೋಗೋದು?  ದುಬೈನ ಮರಳುಗಾಡಿನಾಗೆ ಡೆಸರ್ಟ್ ಸಫಾರಿಗೋಗೋದಾ ಇಲ್ಲ ಸಿಟಿ ಒಳ್ಗಡೆ ಸುತ್ತಾಡೋದಾ?  ಎಲ್ರೂ ಒಮ್ಮತದಿ೦ದ ಡೆಸರ್ಟ್ ಸಫಾರಿಗೋಗೋಣ, ಸಿಟಿ ಇನ್ನೊ೦ದ್ ಕಿತಾ ನೋಡ್ಬೋದು ಅ೦ದ್ರು!  ಮ೦ಜಣ್ಣ ಕೆ೦ಪು ಲ೦ಗದ ಚೆಲ್ವೇಗೆ "ಡೆಸರ್ಟ್ ಸಫಾರಿಗೆ ಓಗಾನ ಕಣಮ್ಮಿ" ಅ೦ದ್ರು!  ಎಲ್ರೂ ಅತ್ತಿದ ಮ್ಯಾಕೆ ಏಸಿ ಬಸ್ಸು ಸೀದಾ ದುಬೈ - ಅಲೇನ್ ರೋಡಿನಾಗೆ ಒ೦ಟು ಸುಮಾರು ೭೦ ಕಿಲೋಮೀಟ್ರು ಬ೦ದು ನಿ೦ತ್ಗೊ೦ತು!  ಗೌಡಪ್ಪ ಮತ್ತವನ ಪಟಾಲಮ್ಮು ತೊಡೆ ಸೊ೦ದಿನಾಗೆ ಕೈ ಇಟ್ಗೊ೦ಡು ಮೂತ್ರ ಮಾಡೋಕ್ಕೆ ಜಾಗ

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಗೌಡಪ್ಪನ ದುಬೈ ಪ್ರವಾಸ - ಭಾಗ ೫ : ದೀಪಾವಳಿ ಅವಾಮಾಸ್ಯೆಯ ಭರ್ಜರಿ ಪ್ರವಾಸ!

ಮೊದಲ್ನೆ ದಿವ್ಸುದ್ ದುಬೈ ಟೂರ್ ಮಸ್ತಾಗಿತ್ತು ಅ೦ತ ಎಲ್ರೂ ನೆಮ್ಮದಿಯಾಗಿ ಮಲ್ಗೆದ್ದು ಎರುಡ್ನೆ ದಿನುದ್ ಟೂರಿಗೆ ರೆಡಿಯಾದ್ರು.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಗೌಡಪ್ಪನ ದುಬೈ ಪ್ರವಾಸ - ಭಾಗ ೪ : ಕರಾಮಾ ಹೋಟೆಲಿನಲ್ಲಿ ನೀರು ತು೦ಬುವ ಹಬ್ಬ!

ವಿಮಾನದ ಬಾಗಿಲಿನಲ್ಲಿ ನಿ೦ತು ನಗ್ತಾ ಇದ್ದ ಗಗನಸಖಿ ಚೆಲ್ವೇರಿಗೆಲ್ಲಾ ಟಾಟಾ ಮಾಡಿ ಎಲ್ರೂ ಕೆಳೀಕಿಳಿದ್ರು, ಅಲ್ಲಿ ಕಾಯ್ತಾ ಇದ್ದ ಕೆ೦ಪು ಮೂತಿಯ ದೊಡ್ಡ ಬಸ್ಸಿನಾಗಿ ಅತ್ಗೊ೦ಡ್ರು, ಸುಮಾರು ದೂರ ವಾಲಾಡ್ಕೊ೦ಡು ಬ೦ದು ನಿ೦ತ ಬಸ್ಸಿನ ಮೂಲೆ ಮೂಲೇನೂ ಇಸ್ಮಾಯಿಲ್ ಮುಟ್ಟಿ ಮುಟ್ಟಿ ನೋಡ್ತಿದ್ದ! "ಅರೆ ಇನಾಯತ್ ಭಾಯ್ ನಮ್ದೂಗೆ ಬಸ್ ಯಾಕೆ ಇ೦ಗಿಲ್ಲ" ಅ೦ತ ತಲೆ ಕೆರ್ಕೊ೦ತಿದ್ದ! 

ದುಬೈ ವಿಮಾನ ನಿಲ್ದಾಣ ಒ೦ದು ದೊಡ್ಡ ಊರಿನ ಥರಾ ಇತ್ತು, ಗೌಡಪ್ಪ ಮತ್ತು ಟೀ೦ ಬಿಟ್ಟ ಕಣ್ಣು ಬಿಟ್ಟ೦ಗೆ ಸುತ್ತ ಮುತ್ತ ನೋಡ್ತಾ ಬ೦ದು ಸಾಲಿನಾಗೆ ನಿ೦ತ್ಗ೦ಡ್ರು,

field_vote: 
Average: 4.7 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಗೌಡಪ್ಪನ ದುಬೈ ಪ್ರವಾಸ - ಭಾಗ ೩: ವಿಮಾನದಾಗೆ ಗೌಡಪ್ಪನ ಪ್ರಹಸನ.

ಅ೦ತೂ ಇ೦ತೂ ಕ್ಯಾಪ್ಟನ್ ಲತಾ ಒದ್ದಾಡಿಸ್ಕೊ೦ಡು ವಿಮಾನ ಮೇಲಕ್ಕೇರಿಸಿದ್ರು,

field_vote: 
Average: 3.7 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಪ್ರಸಾದು ಹೋಗಿಬಿಟ್ ನಂತೆ

field_vote: 
No votes yet
To prevent automated spam submissions leave this field empty.

ಭಾನುವಾರ ಬೆಳಿಗ್ಗೆ ಬೆಳಿಗ್ಗೆ ಒಂದು ಎಂಟು ಗಂಟೆಗೆಲ್ಲಾ ಎದ್ದು, ನಾರಾಯಣ, ಶ್ರೀಹರಿ ಕಾಪಾಡಪ್ಪ ಅಂತ ಮನೆಯ ಮುಖ್ಯದ್ವಾರ ತೆಗೆದೆ.
"ಇನ್ನೂ ಮಲಿಗಿದಿಯೇನೋ" ಅಂತ ನಮ್ ಸತ್ಯಣ್ಣ ಬಂದ್ರು
ಓ ಏನೋ ಗ್ರಹಚಾರ ಇದೆ.  ಬೆಳಿಗ್ಗೆನೇ ಆಣ್ಣಾ‌ಅವ್ರ್ ಕ್ಯೆಲಿ ಸಿಕ್ಕಿಹಾಕಿಕೊಂಡೆನಲ್ಲ ಅಂತ ಅನ್ಕೊಂಡು,
"ಬಾ ಕಾಫಿ ಕುಡಿಯೋಣ" ಆಂದೆ,
"ಇನ್ನೂ ಕಾಫಿ ಕುಡಿದಿಲ್ವ" ಅಂದ್ರು
"ಇಲ್ಲಾ, ಈಗಿನ್ನೂ ಇವಳು ಸ್ನಾನಕ್ ಹೋದ್ಲು" ಎಂದೆ.  ನಾವು ಸಿಕ್ಕಾಪಟ್ಟೆ ಸ್ಟ್ರಿಕ್ಟ್.  ಸ್ನಾನ ಮಾಡದೆ ಆಡುಗೆ ಮನೆಗೆ ಹೋಗಲ್ಲ ಅಂತ ತಿಳಿದುಕೊಳ್ಳಲಿ, ಸ್ವಲ್ಪ ನಮ್ಮ ಬಗ್ಗೆ ಅಣ್ಣವ್ರಿಗೆ ಇರುವ ಅಸಡ್ಡೆಯಾದರೂ ನಿವಾರಣೆಯಾಗಲಿ ಅಂದುಕೊಂಡೆ.
"ಅಯ್ಯೋ, ಇಷ್ಟ್ ಬೇಗ ಯಾಕೋ ಸ್ನಾನ, ಸ್ವಲ್ಪ ಕರಿ" ಅಂದ್ರು.
ಸ್ನಾನಕ್ಕೆ ಹೋಗಿರೋರನ್ನ ಕರಿ

ಲೇಖನ ವರ್ಗ (Category): 

ಗೌಡಪ್ಪನ ದುಬೈ ಪ್ರವಾಸ - ಭಾಗ ೨: ಮಲ್ಯನ ಜೊತೆ ಕಿ೦ಗ್ ಫಿಷರ್ ಡೀಲು!

ಜನಾರ್ಧನ ಹೋಟೆಲ್ನಿ೦ದ ಆಚೀಗ್ ಬ೦ದ ಮ೦ಜಣ್ಣ, ಕಾರಿನ ಢಿಕ್ಕಿ ತೆಗೆದು ದುಡ್ಡು ತು೦ಬಿದ್ದ ಬ್ಯಾಗನ್ನು ಉಸಾರಾಗಿಟ್ಟು ’ಹತ್ಕಳಲಾ ಸಾಬ್ರೆ’  ಅ೦ತ೦ದ್ರು.  ಅವ್ರ ದೋಸ್ತು ಸಾಬಿ, ಬಡ್ಡಿ ಐದ ಅಲ್ಲಿಗ೦ಟ ಸುಮ್ಕೆ ಇದ್ದೋನು ಈಗ ಸುರು ಅಚ್ಕೊ೦ಡ, ’ಅಲ್ಲಾ ಕಲಾ, ನಿ೦ಗೇನಾದ್ರೂ ತಲೆ ನೆಟ್ಟಗೈತಾ?  ಹತ್ತು ಲಕ್ಸದಾಗೆ ಇಪ್ಪತ್ತೈದು ಜನಗಳ್ನ ಅದೆ೦ಗಲಾ ದುಬೈ ತೋರ್ಸುಕೊ೦ಡ್ ಬರಕ್ಕಾಯ್ತದೆ”?  ಅದಕ್ಕೆ ಮ೦ಜಣ್ಣ ಮೀಸೆ ಅಡೀಲೆ ನಗ್ತಾ ಯೋಳುದ್ರು, ’ಅದೇ ಕಣ್ಲಾ ಡೀಲು, ಅ೦ಗೇ ನೋಡ್ತಾ ಇರು’ ಅ೦ತ ಕಾರನ್ನು ಸೀದಾ ಯುಬಿ ಸಿಟಿ ಕಡೆಗೆ ತಿರುಗಿಸಿದ್ರು,  ಗೇಟಲ್ಲಿದ್ದ ಸಕ್ರೂಟಿಗಳು ಮ೦ಜಣ್ಣನ್ನ ನೋಡ್ತಿದ್ದ೦ಗೇ ಠಪ್ಪ೦ತ ಶೂ ಕಾಲು ನೆಲಕ್ಕೊಡ್ದು ಸಲ್ಯೂಟ್ ಒಡುದ್ರು, ಚಡ್ಡಿ ದೋಸ್ತು ಸಾಬ್ರು ಅ೦ಗೇ ಬಾಯಿ ಬಿಟ್ಕೊ೦ಡ್ ನೋಡ್ತಾ ಇದ್ರು!&n

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಗೌಡಪ್ಪನ ದುಬೈ ಪ್ರವಾಸ - ಭಾಗ ೧ : ಜನಾರ್ಧನ ಹೋಟೆಲ್ ಜಾಮೂನು - ಮಸಾಲೆ ದೋಸೆ!

ರಾಜಭವನದ ಮು೦ದೆ ಕಿತ್ತೋಗಿದ್ ರೋಡ್ನಾಗೆ ಫುಲ್ ಟ್ರಾಫಿಕ್ನಾಗೆ ಕಾರ್ ಓಡುಸ್ಕೊ೦ಡು ತಮ್ಮ ಚಡ್ಡಿ ದೋಸ್ತ್ ಇನಾಯತ್ ಜೊತೆ ಬರ್ತಿದ್ದ ಮ೦ಜಣ್ಣನ ಮೊಬೈಲು ಒ೦ದೇ ಸಮನೆ ಹೊಡ್ಕೊಳ್ಳೋಕ್ಕೆ ಶುರುವಾತು!  ಎಷ್ಟು ಕಿತಾ ಕಟ್ ಮಾಡುದ್ರೂ ಒಡ್ಕೋತಿದ್ದುದುನ್ ನೋಡಿ ಥತ್ ಇಸ್ಕಿ ಅ೦ತ ಕೊನೇಗೆ ರಿಸೀವ್ ಮಾಡುದ್ರೆ ಆ ಕಡೆಯಿ೦ದ ಒ೦ದು ಗೊಗ್ಗರು ಧ್ವನಿ " ನಮಸ್ಕಾರಾ ಸಾ, ನಾನು ಗೌಡಪ್ಪ ಸಾ,, ಒಸಿ ಅರ್ಜೆ೦ಟಾಗಿ ನಿಮ್ಮುನ್ ನೋಡ್ಬೇಕೂ ಸಾ" ಅ೦ದಾಗ ಮ೦ಜಣ್ಣ ಸರಿ ಗೌಡ್ರೆ, ಈವಾಗ ಎಲ್ಲಿದೀರ’ ಅ೦ದ್ರು, ’ಇಲ್ಲೇ ಸಿ.ಎ೦. ಮನೆ ಹತ್ರ ಇದೀವಿ ಸಾ, ಇ೦ಗೇ ಬನ್ನಿ ಸಾ...’ ಅ೦ದ ಗೌಡಪ್ಪ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಏನೋ ಮಾಡಲು ಹೋಗಿ.....

field_vote: 
Average: 5 (1 vote)
To prevent automated spam submissions leave this field empty.

ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...


ನಾನು ನನ್ನ ಗಿಡಗಳಿಗೆ ನೀರು ಹಾಕೋಣ ಎಂದು ಹೊರಟೆ.

ಲೇಖನ ವರ್ಗ (Category): 

ನೂರೊಂದು ನೆನಪು

field_vote: 
Average: 1 (1 vote)
To prevent automated spam submissions leave this field empty.

ನೂರೊಂದು ನೆನಪು ಎದೆಯಾಳದಿಂದ ಹಾಡಿಗೆ ಸಾಹಿತ್ಯ ಬದಲಿಸಿದ್ದೇನೆ...ಒಳ್ಳೆಯ ಹಾಡನ್ನು ಹಾಳು ಮಾಡುತ್ತಿದ್ದೇನೆಂದು ಬೈದುಕೊಳ್ಳಬೇಡಿ..ಇದು ಕೇವಲ ಹಾಸ್ಯಕ್ಕಾಗಿ..


ನೂರೊಂದು ತಿಂಡಿ...ತಿನಬೇಕು ಇಂದು.. 

ಹಸಿವಾಗಿ ಬಂದೆ...ತಿನ್ನೋಕೆ ಬಂದೆ...

 ನೂರೊಂದು ತಿಂಡಿ...ತಿನಬೇಕು ಇಂದು.. 


ಹಸಿವಾಗಿ ಬಂದೆ...ತಿನ್ನೋಕೆ ಬಂದೆ...

ಬಿಸಿಬೇಳೆಬಾತು ಜೊತೆಯಲ್ಲಿ ಬೂಂದಿ

ಇಡ್ಲಿ, ವಡೆ ಪೊಂಗಲ್ಲು ಬೇಕೆಂದು ಇಂದು..


ನೂರೊಂದು ತಿಂಡಿ...ತಿನಬೇಕು ಇಂದು.. 

ಹಸಿವಾಗಿ ಬಂದೆ...ತಿನ್ನೋಕೆ ಬಂದೆ

 ಘಮ್ಮೆನ್ನೋ ದೋಸೆ,,ಆಲೂಗಡ್ಡೆ ಪಲ್ಯ

ಮದ್ದೂರು ವಡೆಯೋ..ಮೈಸೂರು ಪಾಕೋ...

ಬಿಸಿ ಬಿಸಿ ಪೂರಿ...ವೆಜಿಟೇಬಲ್ ಸಾಗು..

ಫ್ರೈಡ್ ರೈಸು,ಘೀ ರೈಸು ಎಲ್ಲಾನೂ ಚೈನೀಸು...

ತಿಂಡಿ ಬಿಸಿ ಇರಲಿ...ಪ್ಲೇಟು ಕ್ಲೀನಿರಲಿ..

ಲೇಖನ ವರ್ಗ (Category): 

ಮರೆವಿನ ನೆನಪು

field_vote: 
No votes yet
To prevent automated spam submissions leave this field empty.

ತೊಂಬತ್ತು ವರುಷದ ಹಳೆ ದಂಪತಿಗಳು ಒಬ್ಬ ವೈದ್ಯರಲ್ಲಿ ಬಂದರು ತಮ್ಮ ಮರೆಗುಳಿತನದ ಬಗ್ಗೆ ಪ್ರಸ್ತಾಪಿಸಿ.
ವೈದ್ಯರು ಅವರನ್ನು ಪರಿಶೀಲಿಸಿ ಏನಾದರು ಸಮಸ್ಯೆಗಳಿದ್ದರೆ ತಿಳಿಸಲಿ ಎಂದು.
ವೈದ್ಯರು ಅವರನ್ನು ಪರಿಶೀಲಿಸಿ ಅವರ ಆರೋಗ್ಯ ಸರಿಯಾಗಿಯೇ ಇದೆಯೆಂದು ಹೇಳುತ್ತಾ ಅವರಿಗೆ ವಿಷಯಗಳನ್ನು
 ಒಂದು ಕಾಗದದಲ್ಲಿ ಬರೆದಿಟ್ಟುಕೊಳ್ಳಲು ಹೇಳುತ್ತ, ಅವರ ಮರೆವನ್ನು ಕಡಿಮೆ ಮಾಡಲು ಅದು ಸಹಕಾರಿಯಾದೀತೆಂದೂ ಹೇಳಿದರು.

ಆ ದಿನ ರಾತ್ರೆ ದಂಪತಿಗಳು ಟೀವಿ ನೋಡುತ್ತಿದ್ದರು. ಪತಿ ತನ್ನ ಸ್ಥಳದಿಂದೆದ್ದಾಗ
ಪತ್ನಿ ಕೇಳಿದಳು" ಎಲ್ಲಿಗೆ ಹೋಗುತ್ತಿದ್ದೀಯಾ?

ಪತಿ: "ಅಡುಗೆ ಮನೆಗೆ! ನನಗೊಂದು ತಟ್ಟೆ ಬ್ರೆಡ್ ಮತ್ತು ಜಾಮ್ ತರಲು! ನಿನಗೇನಾದರು ತರಬೇಕೇ?"

ಲೇಖನ ವರ್ಗ (Category): 

ಗೌಡಪ್ಪನ ಪಾಸ್ ಪೋರ್ಟ್ ಪ್ರಹಸನ...

field_vote: 
No votes yet
To prevent automated spam submissions leave this field empty.

ಗೌಡಪ್ಪನ ಪಾಸ್ ಪೋರ್ಟ್ ಪ್ರಹಸನ...


 

ಲೇಖನ ವರ್ಗ (Category): 

ಶಿವಾ ಅಂತ ಹೋಗುತ್ತಿದ್ದೆ

field_vote: 
Average: 5 (3 votes)
To prevent automated spam submissions leave this field empty.

ಜಾಕಿ ಚಿತ್ರದ ಶಿವಾ ಅಂತ ಹೋಗುತ್ತಿದ್ದೆ ಹಾಡಿಗೆ ಸಾಹಿತ್ಯ ಬದಲಾಯಿಸಿದ್ದೇನೆ..ಇದು ಕೇವಲ ಹಾಸ್ಯಕ್ಕಾಗಿ.


 


ಶಿವಾ ಅಂತ ಹೋಗುತ್ತಿದ್ದೆ ಸಿ.ಎಂ.ಆಗಿ


ಸಿಕ್ಕಾಪಟ್ಟೆ ಫೈಟು ಇತ್ತು ಸೀಟಿಗಾಗಿ...


ಅರ್ಧಂಬರ್ಧ ಸಪೋರ್ಟ್ ಇತ್ತು ಪಕ್ಷದಲಿ...


ನೀ ಹೋದೆ ಸೈಡಿನಲ್ಲಿ..


 


ಕಂಡು ಕಂಡು ಬಿದ್ದಂಗಾಯ್ತು ಹಳ್ಳದಲಿ..


ಕಂಬ್ಳಿ ಹುಳ ಬಿಟ್ಟಂಗಾಯ್ತು ಹಾಸ್ಗೆನಲಿ..


ಕಚಗುಳಿ ಇಟ್ಟಂಗಾಯ್ತು ಬೆನ್ನಿನಲಿ..


ನೀ ಬಂದಾಗ ಪಕ್ಷದಲಿ.. ಪಕ್ಷದಲಿ..ಪಕ್ಷದಲಿ..ಪಕ್ಷದಲಿ...


 


ಗೂಳಿಯನ್ನು ಬಿಡಂಗಿಲ್ಲ...ಶೋಭಾ ನನ್ನ ಬಿಡೋದಿಲ್ಲ..


ಗೂಳಿಯನ್ನು ಬಿಡಂಗಿಲ್ಲ...ಶೋಭಾ ನನ್ನ ಬಿಡೋದಿಲ್ಲ.


ಅಯ್ಯೋ ಪಾಪ ಹುಡುಗಿ ಜೀವ ಹೆದರುವುದು..


ಥೂ ನಂಗೆ ಯಾಕೆ ಹಿಂಗೆ ಎಲ್ಲ ಅನಿಸುವುದು...


ಯಾರ ಮಾತು ಕೇಳಲಿಲ್ಲ...ಯಾರ ಮಾತು ಕೇಳಲಿಲ್ಲ...

ಲೇಖನ ವರ್ಗ (Category): 

ಕನ್ನಡ ರಾಜ್ಯೋತ್ಸವ ವಿಶೇಷ...

field_vote: 
Average: 4 (4 votes)
To prevent automated spam submissions leave this field empty.

ಕನ್ನಡ ರಾಜ್ಯೋತ್ಸವವನ್ನು  ನಮ್ಮ ಟಿ.ವಿ.ಹಾಗೂ ಎಫ್.ಎಂ.ನಿರೂಪಕರು ನಡೆಸಿಕೊಟ್ಟರೆ ಹೇಗಿರಬಹುದು ಎಂದು ಸಣ್ಣ ಉದಾಹರಣೆ...

ಲೇಖನ ವರ್ಗ (Category): 

ಸರ್ವೇ ಸಂಪದಿಗಾಃ ಸುಖಿನೋ ಭವಂತು : ಓದಿ, ನಕ್ಕು, ಬಿಡಿ.

field_vote: 
Average: 3.8 (5 votes)
To prevent automated spam submissions leave this field empty.


ಜಗವೆಲ್ಲ ಮಲಗಿರಲು ಅವನೊಬ್ಬನೆದ್ದ, ಅವನೇ ಬುದ್ಧ.
ಸಂಪದಿಗರೆಲ್ಲ ಸಂಡೇ ಮೂಡಿನಲ್ಲಿರಲು ಇವನೊಬ್ಬ ಕೊರೆದ, ಇವನೇ (ಶಾಸ್ತ್ರೀ ಎಂಬ) ಪೆದ್ದ.
*೦*
ಯಾರು ಯಾರು ನೀ ಯಾರು? ಎಲ್ಲಿಂದ ಬಂದೆ ಯಾವೂರು?
ಯಾರು ಯಾರು ನಾವ್ ಯಾರು? ನಾವೆಲ್ಲ ಇಲ್ಲಿ ಸಂಪದರು.
*೦*
ಸರ್ವೇ ಸಂಪದಿಗಾಃ ಸುಖಿನೋಭವಂತು.
ಇದು survey: ಸಂಪದಿಗರು ಹೇಗಿದ್ದಾರೆ, ಎಂತು?
*೦-
ನಾವಾಡುವ ನುಡಿಯೇ ಕನ್ನಡ ನುಡಿ....
ನಾವಿರುವಾ ತಾಣವೆ ಗಂಧದ ಗುಡಿ.

ನಾವಾಡುವ ನುಡಿಯೇ ಸಂಪದ ನುಡಿ....
ನಾವ್ ಬರೆಯೋ ತಂತ್ರವೆ ಬರಹ, ಶ್ರೀಲಿಪಿ, ನುಡಿ....
ಡಿಫರೆಂಟ್ ಡಿಫರೆಂಟ್ ಬಿಡಿ.
*೦*

ಲೇಖನ ವರ್ಗ (Category): 

ಗೌಡಪ್ಪನ ಉರ್ದು ಕಲಿಯುವಿಕೆ...

field_vote: 
No votes yet
To prevent automated spam submissions leave this field empty.

ಸಂಜೆ ಸುಬ್ಬ, ಕಿಸ್ನ, ಸೀನ, ಸೀತು ಕೋಮಲ್ ಎಲ್ರೂ ನಿಂಗನ್ ಚಾ ಅಂಗಡಿ ತಾವ ಕೂತ್ಕೊಂಡು ಆ ನಿಂಗ ಕೊಟ್ಟ ಕಲಗಚ್ಚು ಕುಡ್ಕೊಂಡು ಎಲ್ರಲಾ ನಮ್ ಗೌಡ ನಾಪತ್ತೆ ಆಗ್ಬಿಟ್ಟವನೇ..ಆ ಪುನೀತ್ ಕೈಲಿ ಒದೆ ತಿಂದ ಮ್ಯಾಕೆ ಈ ಕಡೆ ಕಾಣಿಸ್ತಾನೆ ಇಲ್ಲ....ದೂರದಲ್ಲಿ ಯಾವುದೊ ಒಂದು ಬಿಳಿ ಆಕೃತಿ ಕಂಡು ಏ ಓಡ್ರಲಾ ಮೋಹಿನಿ ಬಂದ್ ಬಿಟ್ಟಿದೆ ಊರ್ಗೆ..ಲೇ ನಿಲ್ರಲಾ ನಾನು ಕಣ್ರಲಾ ಗೌಡ ಅಂತಿದ್ರು ಬಡ್ಡೆತಾವು ಓಡ್ತಾನೆ ಇದ್ವು...ಆಮೇಲೆ ವಾಸನೆ ಬಂದ್ ಮ್ಯಾಕೆ ಹೌದು ಕಲಾ ಇದು ನಮ್ ಗೌಡಪ್ಪನೆ ಅಂತ ನಿಂತುಕೊಂಡರು..ರೀ ಏನ್ರಿ ಇದು ನಿಮ್ ಅವತಾರ...ಲೇ ದುಬೈ ಹೋಗ್ತಿದಿವಲ್ಲ ಅದಕ್ಕೆ ಅಲ್ಲಿ ಅದೆಂತದೋ ಸೇಕ್ ಇರ್ತಾರನ್ತಲ್ಲ ಅವ್ರು ಇದೆ ರೀತಿ ಗೆಟಪ್ಪು ಕಲಾ...ರೀ ನಿಮ್ಗೆಲ್ರಿ ಸಿಕ್ತು ಈ ಡ್ರೆಸ್ಸು..ನೋಡ್ಲಾ ಈ ನೈಟಿ ನಮ್ ಹೆಂಡ್ರುದು ಕಲಾ..ತಲೆ ಮ್ಯಾಕೆ ಹಾಕಿ
ಲೇಖನ ವರ್ಗ (Category): 

ಕಚ್ಚಾಟ ಒಳ್ಳೆಯದು

field_vote: 
Average: 4.5 (2 votes)
To prevent automated spam submissions leave this field empty.


  ನಮ್ಮ ನಾಯಕರು ನಾಯಿಗಳಹಾಗೆ ಕಚ್ಚಾಡುತ್ತಿರುವುದರಿಂದ ನಾಡಿನ ಪ್ರಜೆಗಳಿಗೆ ಒಳ್ಳೆಯದೇ ಆಗಿದೆ. ’ಕ್ಷಣಕ್ಷಣದ ಸುದ್ದಿಗಾಗಿ ನೋಡ್ತಾ ಇರ್ತೀವಿ ಟಿವಿ ನ್ಯೂಸ್’ ಅಂತ ಅಹರ್ನಿಶಿ ವಾರ್ತಾಲಾಪ ನೋಡುವುದರಲ್ಲೇ ಪ್ರಜೆಗಳು ತಲ್ಲೀನರಾಗಿದ್ದಾರೆ. ಸೆಕೆಂಡಿಗೆರಡರಂತೆ ಕಾಣಿಸಿಕೊಳ್ಳುವ ಬ್ರೇಕಿಂಗ್ ನ್ಯೂಸ್‌ಗಳಂತೂ ಪ್ರಜೆಗಳನ್ನು ರೋಮಾಂಚನಗೊಳಿಸುತ್ತಿವೆ. ಒಟ್ಟಾರೆಯಾಗಿ, ಕಾಸು ಖರ್ಚಿಲ್ಲದೆ ಮನೆಯಲ್ಲಿಯೇ ಪ್ರಜೆಗಳಿಗೆ ಭರ್ಜರಿ ಮನೋರಂಜನೆ ದೊರಕುತ್ತಿದೆ.

ಲೇಖನ ವರ್ಗ (Category): 

ಗೌಡಪ್ಪನ ದುಬೈ ಟೂರ್...

field_vote: 
No votes yet
To prevent automated spam submissions leave this field empty.

ಮೊದಲ ಬಾರಿಗೆ ಕೋಮಲ್ ಅವರ ಕೂಸಾದ ಗೌಡಪ್ಪನ ಬಗ್ಗೆ ಬರೀತಾ ಇದ್ದೀನಿ..ಕೋಮಲ್ ಹಾಗೂ ಮಂಜಣ್ಣನ ಅಷ್ಟು ಹಾಸ್ಯ ಪ್ರಜ್ಞೆ ನನಗಿಲ್ಲ...ತಕ್ಕಮಟ್ಟಿಗೆ ಬರೆದು ಖೊಕ್


ಕೊಡುತ್ತಿದ್ದೇನೆ...ಮುಂದುವರೆಸುವ ಇಷ್ಟ ಇದ್ದರೆ ಯಾರಾದರೂ ಮುಂದುವರಿಸಬಹುದು...ಹಾಗೆ ಸಂಪದಿಗರ ಹೆಸರುಗಳನ್ನೂ ಬಳಸಿದ್ದೇನೆ..ಯಾರಿಗಾದರೂ ತಪ್ಪು


ಎನಿಸಿದಲ್ಲಿ ತೆಗೆದುಬಿದುತ್ತೇನೆ. ದಯವಿಟ್ಟು ತಿಳಿಸಿ


 


ಏ ಸುಬ್ಬ, ಸೀನ, ಸೀತು, ಕೋಮಲ್,ಕಿಸ್ನ ಇಸ್ಮಾಯಿಲ್ಲು ಎಲ್ರು ಸಾಯಂಕಾಲ ನಿಂಗನ್ ಚಾ ಅಂಗಡಿ ತಾವ ಬರ್ರಲಾ ಅಂದ ಗೌಡಪ್ಪ... ಯಾಕ್ರಿ ಅಂತ ಸುಬ್ಬ ಕೇಳಿದ್ದಕ್ಕೆ


ಏ ಥೂ ಬರ್ರಲಾ ನಿಮ್ ತಾವ ಒಂದು ವಿಸ್ಯ ಮಾತಾಡ್ಬೇಕು ಅಂದ. ಸರಿ ಸಂಜೆ ಎಲ್ರು ಸಂಜೆ ನಿಂಗನ್ ಅಂಗಡಿ ತಾವ ಸೇರಿದ್ರು..ಏ ನಿಂಗ ಟು ಬೈ ಸಿಕ್ಸ್ ಚಾ ಹಾಕಲ


ಅಂದ ಗೌಡಪ್ಪ...ನಿಮ್ ಮಕ್ಕೆ ಚಾ ಚಲ್ಟ ಹುಯ್ಯ ಅನ್ಕೊಂಡು ನಿಂಗ ಎಲ್ರಿಗೂ ಆ ಕಲಗಚ್ಚು ಕೊಟ್ಟ..ಗೌಡ್ರೆ ಈಗ ಹೇಳ್ರಿ ಅದೇನ್ ವಿಸ್ಯ ಅಂತ..


 

ಲೇಖನ ವರ್ಗ (Category): 

ಸತ್ಯ ಪೀಠ...

field_vote: 
No votes yet
To prevent automated spam submissions leave this field empty.

ಇದು ಕೇವಲ ಹಾಸ್ಯಕ್ಕಾಗಿ..ನಗು ಬಂದರೆ ನಕ್ಕು ಬಿಡಿ...


 


ಒಂದು ಸಿನಿಮಾ ಬಿಡುಗಡೆಗೆ ಮುನ್ನ ಕರೆಯುವ ಪ್ರೆಸ್ ಮೀಟ್ ನಲ್ಲಿ ಸಂಭಾಷಣೆಗಳು ಹೇಗಿರುತ್ತವೆ ಎಂಬುದಕ್ಕೆ ಸಣ್ಣ ಉದಾಹರಣೆ..


"ಸಿನಿಮಾ ನಾವು ಅಂದುಕೊಂಡಿದ್ದಕ್ಕಿಂತ ಬಹಳ ಚೆನ್ನಾಗಿ ಮೂಡಿ ಬಂದಿದೆ"


"ನಮ್ಮ ರೈಟರ್ ಈ ಕಥೆ ಹೇಳಿದ ತಕ್ಷಣ ನನಗೆ ಶಾಕ್ ಆಯ್ತು..ಆಗಲೇ ನನಗನಿಸಿತ್ತು ಈ ಚಿತ್ರ ಖಂಡಿತ ಹಿಟ್ ಆಗುತ್ತದೆ ಎಂದು"


"ಈ ಚಿತ್ರದಲ್ಲಿ ನಟಿಸಿದ ಎಲ್ಲರಿಗೂ ವಂದನೆಗಳು..ಪ್ರತ್ಯೇಕವಾಗಿ ನಾಯಕ ಹಾಗೂ ನಾಯಕಿಗೆ ಥ್ಯಾಂಕ್ಸ್"


"ದುಡ್ಡಿನ ವಿಷಯದಲ್ಲಿ ಎಲ್ಲೂ compromise ಆಗಿಲ್ಲ "


"ಈ ಚಿತ್ರದ ಸಮಯದಲ್ಲಿ ಇದು ಶೂಟಿಂಗ್ ಎಂದು ಅನಿಸುತ್ತಿರಲೇ ಇಲ್ಲ...ಒಂದು ಕುಟುಂಬದ ಜೊತೆ ವಿಹಾರಕ್ಕೆ ಹೋದ ಹಾಗೆ ಇತ್ತು"


"ಈ ಚಿತ್ರದ ಪ್ರತಿ ಹಾಡುಗಳು ಹೊಸದಾಗಿ ಮಧುರವಾಗಿ ಮೂಡಿ ಬಂದಿದೆ"


"ಈ ಸಿನಿಮಾದಲ್ಲಿ ಶೃಂಗಾರ ಸ್ವಲ್ಪ ಹೆಚ್ಚಾದರೂ ಇಂದಿನ ಯುವ ಪೀಳಿಗೆಗೆ ಒಂದು ಉತ್ತಮ ಸಂದೇಶ ಇದೆ "

ಲೇಖನ ವರ್ಗ (Category): 

ಶಂಭೊ ಸಿದ್ದಲಿಂಗ: ಬೆಂಗಳೂರಿನತ್ತ

(ಮಾಲಿಕೆ  :ಮೂರು)     


ಶಂಭೊ ಸಿದ್ದಲಿಂಗ: ಬೆಂಗಳೂರಿನತ್ತ    

field_vote: 
Average: 3 (1 vote)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಪ್ರೇಮ (ಪ್ರಶ್ನೆ) ಪತ್ರಿಕೆ

field_vote: 
Average: 4 (2 votes)
To prevent automated spam submissions leave this field empty.

ಒಬ್ಬ ಕಾಲೇಜ್ ಹುಡುಗ ತನ್ನ ಪ್ರೇಯಸಿಗೆ ತನ್ನ ಪ್ರೇಮ ನಿವೇದನೆಯನ್ನು ತಿಳಿಸಿದ ಬಗೆ..

 

ಪ್ರಿಯ ಪೂಜಾ..

ಈ ಕೆಳಕಂಡ ಪ್ರಶ್ನೆಗಳಿಗೆ ಉತ್ತರಿಸು...ಆಯ್ಕೆಗಳ ಮೇಲೆ ಅಂಕಗಳನ್ನು ನಿರ್ಧರಿಸುವುದು.

 

೧) ನಾನು ಕ್ಲಾಸಿಗೆ ಬಂದ ತಕ್ಷಣ ನಿನ್ನ ನೋಟ ನನ್ನ ಮೇಲೆ ಬೀಳುವುದು..ಯಾಕೆ?

ಅ) ಪ್ರೀತಿಯಿಂದ

ಆ) ನನ್ನನ್ನು ನೋಡದೆ ಇರಲು ಸಾಧ್ಯವಾಗದೆ.

ಇ) ನಿಜವಾಗಲು..ನಾನು ಹಾಗೆ ಮಾಡುತ್ತಿದ್ದೇನ?

 

೨) ಕ್ಲಾಸಿನಲ್ಲಿ ಉಪನ್ಯಾಸಕರು ಜೋಕ್ ಮಾಡಿದಾಗ, ನೀನು ನಕ್ಕು ತಕ್ಷಣ ನನ್ನ ಕಡೆ ನೋಡುವೆ ಏಕೆ?

ಅ) ನೀನು ಯಾವಾಗಲು ನನ್ನ ನಗುವನ್ನು ಬಯಸುವುದರಿಂದ

ಆ) ನನಗೆ ಹಾಸ್ಯ ಎಂದರೆ ಇಷ್ಟವೋ ಇಲ್ಲವೋ ಎಂದು ಪರೀಕ್ಷಿಸಲು

ಇ) ನನ್ನ ನಗುವಿನಿಂದ ನೀನು ಆಕರ್ಷಿತಳಾಗಿದ್ದೀಯ..

 

ಲೇಖನ ವರ್ಗ (Category): 

ಶಂಭೊ ಸಿದ್ದಲಿಂಗ:ಅಪ್ಪನಿಗೆ ಶುಗರ್

ಶಂಭೊ ಸಿದ್ದಲಿಂಗ:ಅಪ್ಪನಿಗೆ ಶುಗರ್


ಸಿದ್ದಲಿಂಗನ ಅಪ್ಪ ಮರಿಲಿಂಗನಿಗೆ ಏಕೋ ಮೈ ಹುಷಾರಿಲ್ಲ ಸದಾ ಸುಸ್ತು ಸಿದ್ದಲಿಂಗನ ಅಮ್ಮ ತನಗೆ ತಿಳಿದ ಎಲ್ಲ ಕಷಾಯಗಳನ್ನು ಮಾಡಿ ಕುಡಿಸಿದಳು ಅವನು ಹಾಗೆ. ಕಡೆಗೆ ಊರಲ್ಲಿದ್ದ ಆಯುರ್ವೇದ ಪಂಡಿತನ ಬಳಿಗೆ ಕರೆದೋಯ್ದ ಸಿದ್ದಲಿಂಗ ಅಪ್ಪನನ್ನು. ಆ ಪಂಡಿತ 'ಟೂ ಇನ್ ವನ್' ಅಂದರೆ ಜನಗಳಿಗೆ ಮಾತ್ರವಲ್ಲ ಅಲ್ಲಿಯ ದನಗಳಿಗೂ ಅವನೇ ಪಂಡಿತ ಹಾಗಾಗಿ ಅವನು ಮನೆಯಿಂದ ಹೊರಹೊರಟರೆ ದನಗಳು ಇವನನ್ನು ಕಂಡು ದೂರಹೋಗುತ್ತಿದ್ದವ್ವು (ಕಹಿ ಔಷದಿಯ ನೆನಪು).  

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ರಾಜಕೀಯ "ಪಂಚರಂಗಿ"ಗಳು..

field_vote: 
Average: 3.7 (3 votes)
To prevent automated spam submissions leave this field empty.

ಪಂಚರಂಗಿ ಸಿನಿಮಾದ ಪಂಚರಂಗಿ ನಾವುಗಳು ಹಾಡಿಗೆ ಇಂದಿನ ರಾಜಕೀಯದ ರೀಮಿಕ್ಸ್ ಮಾಡಿದೀನಿ...ಇದು ಕೇವಲ ಹಾಸ್ಯಕ್ಕಾಗಿ..


 


ಪಂಚರಂಗಿ ನಾವುಗಳು, ಪಂಚರ್ ಅಂಗಡಿ ಟೈರುಗಳು...

ಮೂರೋ, ನಾಲ್ಕೋ ಪಾರ್ಟಿಗಳು..ಜೊತೆಯಲಿ ಸ್ವತಂತ್ರ ಅಭ್ಯರ್ಥಿಗಳು..

ಕಾರಿನ ಮೇಲೆ ಕೆಂಪು ದೀಪಗಳೋ....

ಖಾಕಿ, ಖಾದಿ ಟೋಪಿಗಳು..ಮನೆ, ಕಾರು, ಬಂಗಲೆಗಳು..

ಇನ್ನು ಮುಂದೆ ಓದ್ತಾ ಇದ್ರೆ ಥ್ಯಾಂಕ್ಸ್ ಉಉಉ ಗಳು...

 

ಪಂಚರಂಗಿ ನಾವುಗಳು, ಪಂಚರ್ ಅಂಗಡಿ ಟೈರುಗಳು

ಏನೋ ಎಲೆಕ್ಷನ್ ಗಳು , ಎಂಥ  ವೋಟಿಂಗ್ ಗಳು,

ಎಲ್ಲ ರಾಜಕೀಯದ್ ಮ್ಯಾಚುಗಳು ..

ಎಲ್ರು ಒಳ್ಳೆ ತಲೆಗಳೋ...ನಾವು ಆದ್ವು ಕುರಿಗಳೋ..

ಮೂಕರಾಗಿ ನಿಂತಿರೋ statue ಗಳು..

 

ಬಿ.ಜೆ.ಪಿ.ಗಳು, ಕಾಂಗ್ರೆಸ್ ಗಳು, ಜೆ.ಡಿ.ಎಸ.ಗಳು,

ಲೇಖನ ವರ್ಗ (Category): 

ಕತ್ತಲಲ್ಲಿ ಕಂಡದ್ದೇನು????

field_vote: 
Average: 3 (4 votes)
To prevent automated spam submissions leave this field empty.

ಸುಮಾರು 6 ವರ್ಷಗಳ ಹಿಂದಿನ ಮಾತು...ಆಗಷ್ಟೇ ಹೊಸದಾಗಿ "Bajaj Caliber " ಗಾಡಿ ಕೊಂಡಿದ್ದೆ...ಆದರೆ ಇನ್ನು ಗಾಡಿ


ಓಡಿಸಲು ಕಲಿತಿರಲಿಲ್ಲ...ಹಾಗಾಗಿ ದಿನಾಲೂ ನನ್ನ ಸ್ನೇಹಿತ ಬಂದು ನನ್ನನ್ನು ಕರೆದುಕೊಂಡು ಹೋಗಿ ಗಾಡಿ ಓಡಿಸಲು ಹೇಳಿಕೊಡುತ್ತಿದ್ದ..ನಮ್ಮ ಮನೆ ಇದ್ದದ್ದು ಚಾಮರಾಜಪೇಟೆಯಲ್ಲಿ...ಮೊದಮೊದಲು ಅಲ್ಲಲ್ಲೇ ಮೈದಾನದಲ್ಲಿ ಕಲಿಸಿಕೊಡುತ್ತಿದ್ದ...ನಂತರ ರಸ್ತೆಗಿಳಿದು "Long Ride " ವರೆಗೂ ಬಂದು ತಲುಪಿತು ನನ್ನ ಗಾಡಿ ಕಲಿಯುವಿಕೆ..


 


ಹೀಗೆ ಒಮ್ಮೆ ಗಾಡಿ ಕಲಿಯಲು ಚಾಮರಾಜಪೇಟೆಯಿಂದ ಖಾಲಿ ರಸ್ತೆ ಹುಡುಕಿಕೊಂಡು ಕೆಂಗೇರಿಗೆ ಬಂದು ತಲುಪಿದೆವು..ಕೆಂಗೇರಿ


ಬಸ್ ನಿಲ್ದಾಣ ದಾಟಿ ಸ್ವಲ್ಪ ಮುಂದೆ ಹೋದರೆ ಈಗಿರುವ ಮೇಲ್ಸೇತುವೆ ಪಕ್ಕ ಒಂದು ರಸ್ತೆ ಇತ್ತು...ಅದು ಎಂಥಹ ಜಾಗ ಎಂದರೆ..


ನಿರ್ಮಾನುಷವಾದ ಜಾಗ...ಸುತ್ತಲೂ ಖಾಲಿ ನಿವೇಶನಗಳು, ಹುಡುಕಿದರೂ ಒಂದು ನರಪಿಳ್ಳೆಯ ಸುಳಿವು ಇರಲಿಲ್ಲ..ಅದೇಕೋ

ಲೇಖನ ವರ್ಗ (Category): 

ಶಂಭೊ ಸಿದ್ದಲಿಂಗ : ಅಹಾ ಪಾಯಸ

                        ಶಂಭೊ ಸಿದ್ದಲಿಂಗ : ಅಹಾ ಪಾಯಸ 

 

 

 

 

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ನಗೆ ಹನಿಗಳು...

field_vote: 
Average: 3.2 (5 votes)
To prevent automated spam submissions leave this field empty.

ಸೇಡು..


 


ಸೊಳ್ಳೆಯ ಮೇಲೆ ಸೇಡು ತೀರಿಸಿಕೊಳ್ಳುವ ಬಗೆ..


ಒಂದು ಸೊಳ್ಳೆಯನ್ನು ಹಿಡಿದು ಹಾಡು ಹೇಳಿ ಅದನ್ನು ಮಲಗಿಸಿ


ಅದರ ಕಿವಿಯಲ್ಲಿ "ಗುಯ್..ಗುಯ್...ಗುಯ್..." ಎಂದು ಕಿರುಚುವುದು.


 


******************************************************


ಸ್ವಾಮಿ ಅಯ್ಯಪ್ಪ..


 


ಕರ್ನಾಟಕ ದ ರಾಜಕೀಯ "ಸ್ವಾಮಿ ಅಯ್ಯಪ್ಪ" ನ ಕೈಯಲ್ಲಿ


ಏನೆಂದು ಅರ್ಥ ಆಗಲಿಲ್ಲವೇ?


ಕುಮಾರ "ಸ್ವಾಮಿ"


ಸಿದ್ದರಾಮ "ಅಯ್ಯ"


ಯಡಿಯೂರ್ "ಅಪ್ಪ"


 


ಯಾವ ದೇವರು ಕರ್ನಾಟಕವನ್ನು ಕಾಪಾಡುವನೋ??


 


*******************************************************


 


ಮದುವೆ ಕಸ್ಟಮರ್ ಕೇರ್..


 


ಸಂಬಂಧಗಳಿಗಾಗಿ ಒಂದನ್ನು ಒತ್ತಿ..


ನಿಶ್ಚಿತಾರ್ಥಕ್ಕಾಗಿ ಎರಡನ್ನು ಒತ್ತಿ..


ಮದುವೆಗಾಗಿ ಮೂರನ್ನು ಒತ್ತಿ...


 

ಲೇಖನ ವರ್ಗ (Category): 

ಕ್ಷಿಪಣಿ ದಾಳಿ

field_vote: 
Average: 5 (1 vote)
To prevent automated spam submissions leave this field empty.

ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...


 


ಇದು ಕೇವಲ ಹಾಸ್ಯಕ್ಕಾಗಿ...

 

ಶೀತಲ ಸಮರದ ಮಧ್ಯದಲ್ಲಿ..ಅಮೆರಿಕ ಏನಾದರೂ ಒಂದು ಕ್ಷಿಪಣಿಯನ್ನು ದಾಳಿ ಮಾಡಿದರೆ...

 

ಸೋವಿಯತ್ ಉಪಗ್ರಹಗಳು ಅದರ ಮಾಹಿತಿಯನ್ನು ೩ ಸೆಕೆಂಡ್ಗಳಲ್ಲಿ ಅದನ್ನು ಸೋವಿಯತ್ ಸೈನ್ಯಕ್ಕೆ ರವಾನಿಸಿ ೫ ಸೆಕೆಂಡ್ಗಳಲ್ಲಿ ಸೋವಿಯತ್ ಮರು ದಾಳಿ ನಡೆಸುತ್ತಿದ್ದವು..

ಇದು ಅವರ ತಂತ್ರಗಾರಿಕೆ...

 

ಅದೇ ಭಾರತ ಹಾಗೂ ಪಾಕ್ ನಡುವೆ ಕ್ಷಿಪಣಿ ದಾಳಿ ನಡೆದರೆ...

ಪಾಕ್ ಸೈನ್ಯ ಭಾರತದ ಮೇಲೆ ಕ್ಷಿಪಣಿ ದಾಳಿ ನಡೆಸಲು ನಿರ್ಧರಿಸಿತು..ಅದಕ್ಕೆ ಅವರಿಗೆ ಸರ್ಕಾರದ ಅನುಮತಿ ಬೇಕಿಲ್ಲ. ಹಾಗೆ ದಾಳಿ ನಡೆಸಲು ಸಿದ್ಧತೆ ನಡೆಸಿತು...

 

ಭಾರತ ತಂತ್ರಜ್ಞಾನ ಬಹಳ ಮುಂದುವರಿದದ್ದು...ಕೇವಲ ೮ ಸೆಕೆಂಡ್ ಗಳಲ್ಲಿ ಅದರ ಮಾಹಿತಿ ಭಾರತ ಸೇನೆಗೆ ಲಭಿಸಿ ಮರು ದಾಳಿ ನಡೆಸಲು ನಿರ್ಧರಿಸಿತು..

ಲೇಖನ ವರ್ಗ (Category): 

ಕ್ರೆಡಿಟ್ ಕಾರ್ಡ್ ನ ಸೌಲಭ್ಯಗಳು...

field_vote: 
Average: 5 (2 votes)
To prevent automated spam submissions leave this field empty.

ಮಿಂಚಂಚೆಯಲ್ಲಿ ಬಂದದ್ದು...ಕನ್ನಡಕ್ಕೆ ಅನುವಾದಿಸಿದ್ದೇನೆ...

ಆತ್ಮೀಯ ಸಂಪದಿಗರೇ ನನ್ನ ಬಹುಪಾಲು ಬರಹಗಳು ಮಿಂಚಂಚೆಯಿಂದ ಅನುವಾದಿತ ಲೇಖನಗಳು

ನನ್ನ ಉದ್ದೇಶ ಕೇವಲ ಮನರಂಜನೆ ಮಾತ್ರ...ಯಾರಿಗಾದರು ಇದು ತಪ್ಪು ಅನಿಸಿದಲ್ಲಿ ತಿಳಿಸಿ...ಇನ್ನು ಮುಂದೆ ಅಂಥಹ ಲೇಖನಗಳನ್ನು ಹಾಕುವುದಿಲ್ಲ..


ಸಾಫ್ಟ್ವೇರ್ ಕಂಪನಿ ಒಂದರಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದ ಮೋಹನ್ ಗೆ ಸೋಮವಾರ ಮಧ್ಯಾಹ್ನ ಒಂದು ಕರೆ ಬಂತು..


 


ಹಲೋ ಸರ್...ನಾವು HDFC ಬ್ಯಾಂಕ್ ಇಂದ ಕರೆ ಮಾಡುತ್ತಿರುವುದು..ನಿಮಗೊಂದು ಅದ್ಭುತ ಅವಕಾಶ ಕೊಡುತ್ತಿದ್ದೇವೆ...ನಮ್ಮ ಗೋಲ್ಡನ್ ಕ್ರೆಡಿಟ್ ಕಾರ್ಡ್ ಉತ್ತಮ ಕೊಡುಗೆ ನೀಡುತ್ತಿದೆ...ಅತಿ ಹೆಚ್ಚಿನ


ತಿಂಗಳ ಲಿಮಿಟ್ ಹಾಗು ಅತಿ ಕಡಿಮೆ ಬಡ್ಡಿ ದರಗಳನ್ನು ನೀಡುತ್ತಿದೆ...ನೀವು ಬಿಡುವಾಗಿದ್ದರೆ ಒಂದು ೨ ನಿಮಿಷ ನಿಮ್ಮ ಹತ್ತರ ಮಾತನಾಡಬಹುದ..??

ಲೇಖನ ವರ್ಗ (Category): 

ಭಾರತೀಯರ ಬುದ್ಧಿವಂತಿಕೆ...

field_vote: 
Average: 4.3 (3 votes)
To prevent automated spam submissions leave this field empty.

ಮಿಂಚಂಚೆಯಲ್ಲಿ ಬಂದದ್ದು..ಆಂಗ್ಲದಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ...


 


"ನ್ಯೂ ಯಾರ್ಕ್ ನಲ್ಲಿದ್ದ ಭಾರತೀಯನೊಬ್ಬ ಬ್ಯಾಂಕೊಂದಕ್ಕೆ ಹೊಕ್ಕಿ ಲೋನ್ ಆಫೀಸರ್ ಹತ್ತಿರ ಹೋಗಿ..


ನಾನು ಎರಡು ವಾರದ ಮಟ್ಟಿಗೆ ಕೆಲಸದ ಮೇಲೆ ಭಾರತಕ್ಕೆ ಹೋಗುತ್ತಿದ್ದೇನೆ..ನನಗೆ $ ೫,೦೦೦ ಸಾಲ ಬೇಕಿದೆ


ಎಂದು ಕೇಳಿದನು..


 


ಆಗ ಬ್ಯಾಂಕಿನ ಅಧಿಕಾರಿ ಅವನಿಗೆ ಹೇಳಿದರು..ನೋಡಿ ನಾವು ನಿಮಗೆ ಸಾಲ ನೀಡಲು ಏನಾದರೂ ಅಡವಿಡಬೇಕೆಂದು...


ತಕ್ಷಣ ಭಾರತೀಯ ಆ ಅಧಿಕಾರಿಗೆ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ  ತನ್ನ ಹೊಸ "ಫೆರಾರಿ" ಕಾರಿನ ಕೀಯನ್ನು ಹಾಗು ಕಾರಿನ ದಾಖಲೆಗಳನ್ನು


ಆತನ ಕೈಗೆ ನೀಡಿದನು.


 


ತಕ್ಷಣ ಆತನಿಗೆ ಸಾಲ ನೀಡಿ ಅಧಿಕಾರಿ ತನ್ನ ಸಹೋದ್ಯೋಗಿಯೊಂದಿಗೆ ಮಾತನಾಡಲು ಶುರು ಮಾಡಿದನು.. ಈ ಭಾರತೀಯರಿಗೆ


ಬುದ್ಧಿನೇ ಇಲ್ಲ...ಕೇವಲ $ ೫,೦೦೦ ಸಾಲಕ್ಕೆ ತನ್ನ $ ೨,೫೦,೦೦೦ ಬೆಲೆಯ ಹೊಸ "ಫೆರಾರಿ" ಕಾರನ್ನು ಅಡ ಇಟ್ಟಿದಾನಲ್ಲ..ಎಂದು ನಕ್ಕು

ಲೇಖನ ವರ್ಗ (Category): 

ಟಾಮೀ!!!!!.....ಮಲೆನಾಡಿನ ಶಿಕಾರಿಯ ಒಂದು (ಕಟ್ಟು)ಕಥೆ.

field_vote: 
Average: 5 (1 vote)
To prevent automated spam submissions leave this field empty.

                   ಒಂದು ದಶಕದ ಹಿಂದೆ-ನಾನು ಹಾಸ್ಟೆಲ್ಲಿನಲ್ಲಿ ಇದ್ದು ಓದುತ್ತಿದ್ದಾಗ-ಓದಿ ಓದಿ ಬೇಜಾರಾಗಿ ಸ್ನೇಹಿತರೆಲ್ಲ ಅಪರಾತ್ರಿ ಯಾರದ್ದೋ ರೂಮಿನಲ್ಲಿ ಸೇರಿ ಪಟಾಕಿ ಹೊಡೆಯುತ್ತಿದ್ದಾಗ-ತೇಲಿ ಬಂದ ವಿಷಯವೇ ಈ ಸ್ವಾರಸ್ಯಕರ ಕಥೆ!!! ನಾಲ್ಕು ಜನ ಸೇರಿ ಲೋಕಾಭಿರಾಮವಾಗಿ ಮಾತಾಡುವಾಗ ಎಲ್ಲರ ಗಮನವನ್ನು ತನ್ನೆಡೆ ಸೆಳೆಯಲು ಕಾಲು ಬಾಲ ಸೇರಿಸಿ ಕಥೆ ಹೇಳುವವರನ್ನು ನೀವು ನೋಡಿರಬಹುದು. ನಮ್ಮ ಸಹಪಾಟಿ ರಮೇಶನೂ ಅಂತಹವನೇ. ರಮೇಶ ಬಯಲುಸೀಮೆಯಾವನಾದರೂ ಅವನ ತಾಯಿಯ ತವರೂರು ಮಲೆನಾಡಿನ ನಮ್ಮ ತಾಲೂಕು ಕೊಪ್ಪಾಕ್ಕೆ ಸೇರಿದ ಒಂದು ಹಳ್ಳಿ.

ಲೇಖನ ವರ್ಗ (Category): 

ರಾಜಕೀಯದಿಂದ - ರಾಜಕೀಯಕ್ಕೆ...

field_vote: 
No votes yet
To prevent automated spam submissions leave this field empty.

ನಾಲ್ಕು ಜನ ಟೀ ಕುಡಿಯುವಾಗ ಏನು ಕೆಲಸ ಇಲ್ಲದೆ ಶುರು ಹಚ್ಚಿಕೊಂಡ ಸಂಭಾಷಣೆ ಎಲ್ಲಿಂದ ಎಲ್ಲಿಗೆ ಯಾವ ಯಾವ ರೂಪ ಪಡೆಯುತ್ತದೆ ಎಂದು ಒಂದು ಸಣ್ಣ ಕಲ್ಪನೆ...


 

ಏನೋ ಮಗಾ..ಸರ್ಕಾರ ಬಿದ್ದೋಗತ್ತಂತೆ ಹೌದಾ?..ಹೇ ಇಲ್ಲ ಮಗಾ...ಇವರದೆಲ್ಲ ಡೌ ಗಳು...ಲಾಸ್ಟ್ ಟೈಮ್ ಹಿಂಗೆ ಅಗಿರ್ಲಿಲ್ವಾ...

ಅದೇ ಗಣಿಧಣಿಗಳು ಬೇರೆ ಹೋಗ್ತಿವಿ ಅಂದಾಗ ಕೊನೆಗೆ ಸುಷ್ಮಕ್ಕ ಬಂದು ರಾಜಿ ಮಾಡಿಸ್ಲಿಲ್ವ..ಇದು ಅಷ್ಟೇನೆ...ನೆನ್ನೆ ಅದ್ಯಾವನೋ ಆಚಾರ್ಯ ಅಂತಲ್ಲ

ಅವ್ನು ಬಿಟ್ಟು ಹೋಗ್ತೀನಿ ಅಂದಿದ್ದವ್ನು ಇವತ್ತು ನೋಡು ಆಗಲೇ ಇವರೇ ನಮ್ಮ ಮು.ಮಂ.ಗಳು ಅಂತಾನೆ...ಬರೀ ನಾಟಕ...

ನಾಟಕನಾ ಮಗಾ ಕೃಷ್ಣ ಸಂಧಾನ ನಾಟಕ ನೋಡಿದೆ ಮಗಾ ನೆನ್ನೆ ನಕ್ಕು ನಕ್ಕು ಸಾಕಾಗೋಯ್ತು...ಅದ್ರಲ್ಲಿ ಹಳ್ಳಿಯವರು ನಾಟಕ

ಮಾಡ್ತಾರೆ ಏನ್ ಮಜಾ ಗೊತ್ತ...ಅವ್ರ ಡೈಲಾಗ್ ಗಳಂತೂ ಸೂಪರ್...ಅದ್ರಲ್ ನೋಡ್ಬೇಕು ಮಗಾ ದುರ್ಯೋಧನ ಪಾರ್ಟು ಊರ್ ಗೌಡ ಹಾಕಿರ್ತಾನೆ..,

ಲೇಖನ ವರ್ಗ (Category): 

ವಿಮಾನ ದುರಂತ

field_vote: 
Average: 5 (1 vote)
To prevent automated spam submissions leave this field empty.

ಮಿಂಚಂಚೆಯಲ್ಲಿ ಬಂದ ಆಂಗ್ಲ ಲೇಖನ...ಅನುವಾದಿಸಿದ್ದೇನೆ...

 

ನಾನು ವಿಮಾನದಲ್ಲಿದ್ದೆ...ಕೆಲಸದ ಮೇಲೆ ಮತ್ತೊಮ್ಮೆ ವಿದೇಶಕ್ಕೆ ಹೊರಡುತ್ತಿದ್ದೆ..ಬಹಳ ಖುಶಿಯಲ್ಲಿದ್ದೆ.. ಕಿಟಕಿಯ ಆಚೆ ಮುಸ್ಸಂಜೆಯ ಸವಿಯನ್ನು ಸವಿಯುತ್ತಿದ್ದೆ...

ಸ್ವರ್ಗದಲ್ಲಿದ್ದಂತೆ ಭಾಸವಾಗುತ್ತಿತ್ತು..ನನ್ನನ್ನು ನಾನು ಮೈ ಮರೆತಿತಿದ್ದೆ ಆ ಸೌಂದರ್ಯದಲ್ಲಿ.. ಅಷ್ಟರಲ್ಲಿ ಒಂದು ದನಿ ನನ್ನನ್ನು ವಾಸ್ತವಕ್ಕೆ ಕರೆದುಕೊಂಡು ಬಂತು...

 

" ಸರ್, ತಿನ್ನಲು ಅಥವಾ ಕುಡಿಯಲು ಏನಾದರು ತೆಗೆದುಕೊಳ್ಳುವಿರ? "

 

ನಾನು ತಿರುಗಿ ನೋಡಿದೆ, ಆಶ್ಚರ್ಯ ಚಕಿತನಾದೆ ನನ್ನ ಕಾಲೇಜ್ ಸಹಪಾಟಿಯನ್ನು ಕಂಡು..ಸುಂದರವಾದ "ಸಾಕ್ಷಿ".

 

"ಹೇ ಸಾಕ್ಷಿ, ನೀನೇನಾ, ಅದು ನೀನು,,ಇಷ್ಟು ಸುಂದರವಾಗಿ ಈ ಗಗನ ಸಖಿಯ ಪೋಷಾಕಿನಲ್ಲಿ.."

 

ಲೇಖನ ವರ್ಗ (Category): 

ರಾಜಕೀಯ ಮಿಸಳಭಾಜಿ

field_vote: 
Average: 4 (1 vote)
To prevent automated spam submissions leave this field empty.

* ಕಾಲುಕುಪ್ಪಸದವರು ಮೇಲೆ ಟೊಪ್ಪಿಗೆಯವರು
  ಬಾಲೆಯರ ಮುಖದ ಕಪಿಗಳು ಶ್ರೀರಂಗವ
  ಆಳಹೋದಾರು ಸರ್ವಜ್ಞ
- ಡೊಳ್ಳುಹೊಟ್ಟೆಯ ಜನರು ಕಳ್ಳಜೇಬಿನ ಖಳರು
   ಸುಳ್ಳುಹೇಳುವ ಮಂದಿ ಆಳಿ ಈ ದೇಶವನು
   ಕೊಳ್ಳೆಹೊಡೆಯುವರು ಸರ್ವಘ್ನ

* ಕೇಳುವವರಿದ್ದರೇ ಹೇಳುವುದು ಬುದ್ಧಿಯನು
  ಕೋಳದಲಿ ಬಿದ್ದು ನರಳುವಗೆ ಬುದ್ಧಿಯನು
  ಹೇಳಿ ಫಲವೇನು ಸರ್ವಜ್ಞ
- ಹೇಳುವುದು ಯಾರು ಈ ನೀಚರಿಗೆ ಬುದ್ಧಿಯನು
   ಕೇಳುವರೆ ಇವರು ಪ್ರಜೆ ಹೇಳ್ವ ಬುದ್ಧಿಯನು
   ಖೂಳರಿವರಯ್ಯ ಸರ್ವಘ್ನ

* ಬೇವಿನ ಬೀಜವ ಬಿತ್ತಿ
  ಬೆಲ್ಲದ ಕಟ್ಟೆಯ ಕಟ್ಟಿ
  ಆಕಳ ಹಾಲನೆರೆದು
  ಜೇನುತುಪ್ಪವ ಹೊಯ್ದಡೆ

ಲೇಖನ ವರ್ಗ (Category): 

ಹಲೋ ..ಹಲೋ..

field_vote: 
Average: 5 (1 vote)
To prevent automated spam submissions leave this field empty.

ಮಿಂಚಂಚೆಯಲ್ಲಿ ಬಂದದ್ದು...ಆಂಗ್ಲದಿಂದ ಕನ್ನಡಕ್ಕೆ ಅನುವಾದಿಸಿದ್ದೇನೆ...


 


ಹಲೋ ..ಹಲೋ..

 

ದಯವಿಟ್ಟು ಮಾತಾಡು ನನ್ ಜೊತೆ...ಯಾಕೆ ಫೋನ್ ಎತ್ತಲಿಲ್ಲ...?

 

"ಯಾಕೆ ಏನಾಯ್ತು, ಎಲ್ಲ ಚೆನ್ನಾಗಿದೆ ತಾನೇ?

 

ಏನ್ ಚೆನ್ನಾಗಿರೋದು..ಏನು ಚೆನ್ನಾಗಿಲ್ಲ...ಗಡಿಯಾರ ನೋಡು..ರಾತ್ರಿ ೧೧ ಗಂಟೆ...ಈಗಿನ್ನೂ ಆಫೀಸ್ ಮುಗಿಸಿಕೊಂಡು ಮನೆಗೆ ಹೋಗುತ್ತೀದ್ದೀನಿ..ಇವತ್ತೂ ಊಟ ಇಲ್ಲ.. ಈಗ ಮನೆಗೆ ಹೋಗಿ ನಾನೇ ಅಡಿಗೆ ಮಾಡಿ

ಊಟ ಮಾಡಬೇಕು..ಕಳೆದ ಮೂರು ದಿನದಿಂದ ಬರಿ ನೂಡಲ್ಸ್ ತಿನ್ನುತ್ತಿದ್ದೇನೆ..ನನ್ನ "ಪಿ..ಎಂ." ನನ್ನ ತಿನ್ನುತ್ತಿದ್ದಾನೆ...ಬೆಲೆ ಏರಿಕೆ ನೋಡಿದ್ಯಾ..ನಾಳೆಯಿಂದ ಎಲ್ಲ ೨/- ರೂಪಾಯಿ ಜಾಸ್ತಿ...ನನ್ನ ಸಂಬಳ ಒಂದನ್ನು ಬಿಟ್ಟು..

ನನಗನ್ನಿಸುತ್ತೆ ನಮ್ಮ ಆಫೀಸ್ ನ ಮುಂದಿರುವ ಭಿಕ್ಷುಕ ನನಗಿಂತ ಹೆಚ್ಚಾಗಿ ಸಂಪಾದಿಸುತ್ತಾನೆ ಎಂದು...

 

ಲೇಖನ ವರ್ಗ (Category): 

ಗೊಮ್ಮಟನ ಮು೦ದೆ ಗೌಡಪ್ಪ!

field_vote: 
Average: 4 (1 vote)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಇಸ್ಮಾಯಿಲ್ ಬಸ್ನಾಗೆ.... ನಾನ್ ಸ್ಟಾಪ್ ಶ್ರವಣ ಬೆಳಗೊಳ

field_vote: 
Average: 1 (1 vote)
To prevent automated spam submissions leave this field empty.

ಗೌಡಪ್ಪ ಅಂಡ್ ಕಂಪನೀ ಶ್ರವಣ ಬೆಳಗೊಳಕ್ಕೆ ಹೊರಟರು. ಗೌಡಪ್ಪ ಮಾತ್ರ ಮಂಜಣ್ಣನ ಪಕ್ಕ ಕುಳಿತುಕೊಂಡಿದ್ದ. ಮಂಜಣ್ಣ ಮಾಡಿದ ಹಾಗೆ ಮಾಡುವ. ಮಂಜಣ್ಣ ಬಿಸ್ಲೆರಿ ನೀರು ಕುಡಿದರೆ ಅದನ್ನೇ ಕುಡಿಯುವ. ಮಂಜಣ್ಣ ಬ್ಲ್ಯಾಕ್ ಲೇಬಲ್ ಕುಡಿದರೆ ಅದನ್ನೇ ಸ್ವಲ್ಪ ಕುಡಿಯುವ. ಮತ್ತೆ ಎಲ್ಲೇ ನೀರು ಕಂಡರು ಗಾಡಿ ನಿಲ್ಲಿಸಿ, ಸ್ನಾನ ಮಾಡಿ ಬಂದು ಮಂಜಣ್ಣನ ಬಾಗ್ ನಲ್ಲಿ ಇರುವ ದುಬೈ ಸೆಂಟ್ ಹಚ್ಚಿ ಕೊಳ್ಳುತ್ತಿದ್ದ. ಇದರ ವಾಸನೆ ಇಂದ ನಮ್ಮ ಇಸ್ಮಾಯಿಲ್ ಭಯ್ಯಾಗೆ ತಲೆ ನೋವು ಬಂದಿತ್ತು ಅಂದರೆ ನೀವೇ ಯೋಚನೆ ಮಾಡಿ. ನಮ್ಮ ಮಂಜಣ್ಣ, ಲೇsss ಗೌಡ ನನ್ನ ಎರಡು ವರ್ಷದ ಸೆಂಟ್ ಬಾಟಲ್ ಖಾಲಿ ಮಾಡಿಯಲ್ಲಲ್ಲೇ ಎಂದು ಕಿರುಚುತ್ತಿದ್ದರು. ನಮ್ಮ ಮಂಜಣ್ಣ ಹಾಡು ಹಾಡಿದರೆ, ನಮ್ಮ ನಾವುಡ್ರು ,ಗಣೇಶಣ್ಣ ಬೋನೇಟ್ ಮೇಲೆ ಕೂತು ತಾಳ ಹಾಕವ್ರು.

ಲೇಖನ ವರ್ಗ (Category): 

ಕೋಮಲಣ್ಣ.... ಗೌಡಪ್ಪ...ಇಸ್ಮಾಯಿಲ್‌ ಎಲ್ಲರಿಗೂ.... ನನ್ನ ತಲೆಗವಸು ತೆಗೆದು ಅಡ್ಡಬಿದ್ದೆ

field_vote: 
No votes yet
To prevent automated spam submissions leave this field empty.

ಅಲ್ಲಾ ಸ್ವಾಮಿ... ಪ್ರಪಂಚದಲ್ಲಿ ಎಲ್ಲಾದ್ರು ಈ ಪರಿ ಇಚಿತ್ರ ನೋಡಿದೀರಾ? ವಲ್ಡ್ ನಾಗಿರೋ ಏಳು ಕೋಟಿ ಕನ್ನಡ್ತಾಯಿ ಮಕ್ಕಳ ಬಾಯಾಗೆ ಇದೇ ಕೊಮಲ್ಲು, ಗೌಡಪ್ಪನ್ನ ವಾಸ್ನೆ, ಶಾನಕ್ಕನವರ ಬಳಗದಿಂದ ನಡೆದ ಗೌಡಪ್ಪನ ಮಹಾಮಸ್ತಕಾಭಿಷೇಕ, ಇಸ್ಮಾಯಿಲ್ ಬಸ್ಸಲಿ ಎಲ್ಲರ್ ಟೂರು ಈ ಮಾತ್ಗಳೇ ಓಡಾಡ್ತ ಇವೆ. ಯಡ್ಯೂರಪ್ಪ, ಕಟ್ಟಾ ನಾಯ್ಡು, ಕುಮಾರಣ್ಣ, ದೇಸಪಾಂಡೆ, ಕಾಮನ್ವೆಲ್ತು... ಎಲ್ಲ ಜನಾ ಮರ್ತೆ ಬಿಟ್ಟವ್ರೆ. ಏನೋ ರಾಮ್ ಕೃಷ್ಣ ಅಂಥಾ... ಬೇರೇವ್ರು ಬರ್ದಿದ್ದುನ್ನ ಓದ್ಕೊಂಡು.. ನನ್ಪಾಡಿಗೆ ನನ್ಮೀಸೇ ಅಡಿಲಿ ನಾನು ನಕ್ಕೊಂಡು ಕುಂತಿದ್ದ ನನ್ನಂಧ ಐನಾತಿ ಕೂಡ ಬರ್ಯೋ ಹಂಗೇ ಮಾಡ್ಬುಟ್ರಲ್ಲ ಆ ಕೋಮಲ್ಲು... ಅದೂ.. ಗೌಡಪ್ಪ ಸಂಪದದಲ್ಲಿ ಉಟ್ಟಿ ಇನ್ನು ನೆಟ್ಟಗೆ ಒಂದು ವರ್ಸ ಕೂಡ ಆಗಿಲ್ಲ.....

ಲೇಖನ ವರ್ಗ (Category): 

ಕನಕ ಪುರಂದರರ ಕಟಕಟೆಯಲ್ಲಿ ಕಚಡಾ ರಾಜಕಾ’ರಣಿ’ಗಳು

field_vote: 
Average: 4 (3 votes)
To prevent automated spam submissions leave this field empty.


* ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ
  ಕೂಗಿದರು ಧ್ವನಿ ಕೇಳಲಿಲ್ಲವೆ ನರಹರಿಯೆ
- ಬಾಗಿಲನು ತೆರೆದು ಕುರ್ಚಿಯನು ಕೊಡೊ ದೊರೆಯೆ
   ತಾಗಿದರು ಬಿಸಿ, ಆಗಲಿಲ್ಲವೆ ಉರಿ, ಯಡಿ ದೊರೆಯೆ

* ಹೂವ ತರುವರ ಮನೆಗೆ ಹುಲ್ಲ ತರುವೆ
  ಆವ ಪರಿಯಲಿ ಸಲಹೊ ದೇವ ಚಿನ್ಮಯನೇ
- ಹೂವ ನೀಡ್ವರ ಕಿವಿಗೆ ಹೂವನಿಡುವೆ
   ನೋವ ನೀಡ್ವುದೆ ನಿನ್ನ ಕುಟಿಲ ಹೇ ಯಡಿಯೇ

* ಈತನೀಗ ವಾಸುದೇವನೂ; ಲೋಕದೊಡೆಯ
  ಈತನೀಗ ವಾಸುದೇವನೂ
  ಈತನೀಗ ವಾಸುದೇವ ಈ ಸಮಸ್ತ ಲೋಕದೊಡೆಯ
  ದಾಸಗೊಲಿದು ತೇರನೇರಿ ತೇಜಿ ಪಿಡಿದು ನಡೆಸಿದಾತ
- ಈತನೀಗ ರೇಣುಕಾರ್ಯನೂ; ಗುಂಪಿನೊಡೆಯ
   ಈತನೀಗ ರೇಣುಕಾರ್ಯನೂ

ಲೇಖನ ವರ್ಗ (Category): 

ಇಸ್ಮಾಯಿಲ್ ಬಸ್ನಾಗೆ.... ಹೊರನಾಡಿನಿ೦ದ ಧರ್ಮಸ್ಥಳಕ್ಕೆ....ಗೌಡಪ್ಪ ಮತ್ತವನ ಪಟಾಲಮ್ಮು!

field_vote: 
Average: 5 (1 vote)
To prevent automated spam submissions leave this field empty.

ಅ೦ತೂ ಇ೦ತೂ ರಾಘವೇ೦ದ್ರ ನಾವಡರ ಕೃಪಾ ಕಟಾಕ್ಷದಿ೦ದ ಗೌಡಪ್ಪನ ಮೈಯಾಗಿದ್ದಿದ್ ಹಳ್ಸೋದ್ ಫಳಾವ್ ವಾಸ್ನೆ ಒ೦ಟೋಯ್ತು ಅನ್ನೋ ಖುಷೀಲಿ ಕೋಮಲ್ಲು, ಕಿಸ್ನ, ಸುಬ್ಬ ಎಲ್ಲ "ಏನಿದು..... ಸುವಾಸನೆ’ ಅ೦ತಾ ಅದ್ಯಾವುದೋ  ಪಿಚ್ಚರ್ ಹಾಡು ಹಾಡ್ಕೋತಾ ರೂಮಿನಿ೦ದ ಆಚೆಗೆ ಬ೦ದ್ರು.  ಆಗ ಅವರಿಗೆ ನೆನಪಾಯ್ತು, ಇಸ್ಮಾಯಿಲ್ ಎಲ್ಲಿ, ಅವನ ಬಸ್ ಎಲ್ಲಿ?

ಲೇಖನ ವರ್ಗ (Category): 

ಗೌಡಪ್ಪನ ಮಹಾ ಸ್ನಾನ!

field_vote: 
No votes yet
To prevent automated spam submissions leave this field empty.

ಪಾಪ, ಗೌಡಪ್ಪನ ಟೇಮು ಚೆನ್ನಾಗಿಲ್ಲ ಅನ್ಸುತ್ತೆ. ಎಲ್ಲಾ ಸೇರಿ ಹಿಡಿದು ಜಗ್ಗಿ ಎಳೆದು ಗೌಡಪ್ಪ ಹೈರಾಣಾಗಿ ಹೋಗಿದ್ದರು. ಸುಗರ್ ಇದ್ರೂನೂ ಊಟದಾಸೆಯಿಂದ ಕೋಮಲ್‌ನ ಅಂಗಿಯ ಚುಂಗು ಹಿಡಿದು ಅಲ್ಲೀವರೆಗೂ ಬಂದಿದ್ದ ಗೌಡಪ್ಪ ಬರಿಯ ಸಹಜ ಕುತೂಹಲದಿಂದ ಕನ್ನಡಕ ಕಾಣಿಸ್ತಾ ಇಲ್ಲ ಎಂದುದಕ್ಕೇ, ನಸಗುನ್ನಿ ಕಾಯಿ ಹಾಕಿ ಸ್ನಾನ ಮಾಡ್ಸಿ ಲಗಾಡಿ ತೆಗ್ದೇ ಬಿಟ್ರಲ್ರೀ ನಾವಡರೇ....

ಲೇಖನ ವರ್ಗ (Category): 

ನಡಿ ಕುಂಬಳವೇ ಟರ್ರಾ ಪುರ್ರಾ.. ಗೌಡರ ಪಟಾಲಮ್ಮೂ ಕೆರೆತಾವ ದಾರಿಯೂ

 

 
" ( ಸ್ವಗತ :

  "ಸುಮ್ನೆ ಕೂತ್ಕೊಂಡ್...... ಮಗೀನ್ ಕುಂಡಿ ಕೆತ್ದ""
ನಮ್ಕಡೀ ಗಾದಿ ನಿಂಗೆ ಸರಿಯಾಯ್ತು.
ಅಲ್ಲ ಗಣೇಶರ ಲೇಖನದ ಪ್ರತಿಕ್ರೀಯೆಯಲ್ಲಿ ನೀನ್ ಯಾಕೆ ಹಾಗೆ ಬರ್ದೆ? ನಿಂಗೇನ್ ಬೇಕಿತ್ತಾ ಇದ್?
ಸರಿ ಅನ್ಬವ್ಸ್!! 

ಎಲ್ಲಿಯದೀ  ಸದ್ದು..? "


ಮುಗಿದರೇನಾಯಿತು ಮೊಸರನ್ನ
ಇನ್ನೂ ಇದೆಯಲ್ಲ ಚಿತ್ರಾನ್ನ,

ಅಲ್ಲದೇ ಪುಳಿಯೋಗೆರೆ ಮೊಸರನ್ನ


ಅಶು ಕವಿತೆಯಿನ್ನೂ ಮುಗಿದಿರಲಿಲ್ಲ,

 

ಅವರ ಸವಂಡೇ ನಿಂತಿತಾ ,

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಚಹಾ - ಕಾಫಿಯ ಪುರಾಣ

field_vote: 
No votes yet
To prevent automated spam submissions leave this field empty.

ಮೂಲ ಲೇಖಕರು : ಸುಮಂತ್ ಶಾನುಭಾಗ್

 


ಬೆಳಿಗ್ಗೆ ಎದ್ದ ತಕ್ಷಣ ೮೦% ಜನರು ಕುಡಿಯುವ ಚಹಾ - ಕಾಫಿಯ ಪುರಾಣ ಯಾರಿಗಾದರೂ ಗೊತ್ತ? ಅಷ್ಟಾದಶ ಪುರಾಣಗಳಲ್ಲಿ ೧೯ನೆ ಪುರಾಣದಲ್ಲಿ ಪೇಯಪರ್ವದ ೪೨೦ ನೆ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ.


"ನಭಯಂ ಚಾಸ್ತಿ ಜಾಗೃತ:". ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ. ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ. ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನೆ.


 


ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಬೇರಿನ ಆರ್ತನಾದ ಕೇಳಿಸಿತು.

ಲೇಖನ ವರ್ಗ (Category): 

ಡಾ// ರಾಜ್ ಹಾಗು ಅಮಿತಾಭ್

field_vote: 
Average: 4 (2 votes)
To prevent automated spam submissions leave this field empty.

ಈ ಹಾಸ್ಯ ಬರಹವನ್ನು ಮುಂಚೆ ಓದಿರಬಹುದು...ಓದಿದ್ದರೆ ಇನ್ನೊಮ್ಮೆ ಓದಿ ನಕ್ಕು ಹಗುರಾಗಿ....ಇಲ್ಲದಿದ್ದರೆ ತಿರಸ್ಕರಿಸಿ...


 


ಡಾ// ರಾಜ್ ಹಾಗು ಅಮಿತಾಭ್ ರ ನಡುವೆ ವಾಗ್ವಾದ ನಡೆಯುತ್ತಿತ್ತು...ರಾಜ್ ಹೇಳುತ್ತಿದ್ದರು ನನಗೆ ಪ್ರಪಂಚದ ಎಲ್ಲ ಪ್ರಖ್ಯಾತ ವ್ಯಕ್ತಿಗಳಪರಿಚಯವೂ ಇದೆ ಬೇಕಾದರೆ ಆಧಾರ ಸಮೇತವಾಗಿ ನಿರೂಪಿಸಬಲ್ಲೆ  ಎಂದು...


ಆದರೆ ಅಮಿತಾಭ್ ಅಷ್ಟು ಸುಲಭವಾಗಿ ಒಪ್ಪಲು ತಯಾರಿರಲಿಲ್ಲ...


 


ಸರಿ ರಾಜ್ ಅಮಿತಾಭ್ ಗೆ ಹೇಳಿದರು...ನೀವು ಯಾವುದಾದರು ಖ್ಯಾತ ವ್ಯಕ್ತಿಯ ಹೆಸರು ಹೇಳಿರಿ ನಾನು ಅವರೊಡನೆ ಮಾತಾಡಿ ನಿಮ್ಮ ಸಂಶಯವನ್ನು ಪರಿಹರಿಸಬಲ್ಲೆ ಎಂದರು...ಅಮಿತಾಭ್ ಕ್ಷಣ ಕಾಲ ಯೋಚಿಸಿ "ಟಾಮ್ ಕ್ರೂಸ್" ಎಂದಾಕ್ಷಣ...ರಾಜ್ ಅವರು ಹೋ ಗೊತ್ತು ನಡೀರಿ ಹೋಗೋಣ ಎಂದು ಇಬ್ಬರು ಹಾಲಿವುಡ್ ಗೆ ತೆರಳಿದರು. 


 


ರಾಜ್ ಅವರನ್ನು ಕಂಡಾಕ್ಷಣ ಟಾಮ್ "ಅಣ್ಣಾವ್ರೆ" ಎಂದು ಉದ್ಗಾರ ತೆಗೆದು ಅವರಿಗೆ ಊಟೋಪಚಾರ ನೀಡಿ ಬೀಳ್ಕೊಟ್ಟರು. ಇದನ್ನು

ಲೇಖನ ವರ್ಗ (Category): 

"ಬಾಯ್ ಫ್ರೆಂಡ್"

field_vote: 
Average: 5 (1 vote)
To prevent automated spam submissions leave this field empty.

ನಾಲ್ಕು ಜನ ಸ್ನೇಹಿತರು ೩೦ ವರ್ಷಗಳ ಬಳಿಕ ಒಂದು ಗುಂಡಿನ ಪಾರ್ಟಿಯಲ್ಲಿ ಭೇಟಿಯಾದರು..


ಕೆಲವು ಪೆಗ್ಗುಗಳ ಬಳಿಕ ಒಬ್ಬಾತ ಶೌಚಕ್ಕೆಂದು ಹೋದ.. ಉಳಿದ ಮೂವರು ತಮ್ಮ ಮಕ್ಕಳ ಬಗ್ಗೆ ಮಾತಾಡಲು ಶುರು ಮಾಡಿದರು.


 


ಮೊದಲನೆಯವ ಹೇಳಿದ ನನ್ನ ಮಗ ನನ್ನ ಹೆಮ್ಮೆಯ ಪುತ್ರ.....ನನ್ನ ಮಗ ಎಂ.ಬಿ.ಎ. ಮುಗಿಸಿ ಒಂದು ಪ್ರತಿಷ್ಟಿತ ಕಂಪನಿಯಲ್ಲಿ


ಉನ್ನತ ಹುದ್ದೆಯಲ್ಲಿದ್ದಾನೆ.  ಅವನು ಈಗ ಎಷ್ಟು ಸಿರಿವಂತನೆಂದರೆ ತನ್ನ ಸ್ನೇಹಿತನ ಹುಟ್ಟು ಹಬ್ಬಕ್ಕೆಂದು ಮರ್ಸಿಡಿಸ್ ಕಾರನ್ನು


ಉಡುಗೊರೆಯಾಗಿ ನೀಡಿದ್ದಾನೆ.


 


ಎರಡನೆಯವ "ಹೌದಾ' ಎಂದು ಉದ್ಗಾರ ತೆಗೆದು..ನನ್ನ ಮಗನು ಏನು ಕಮ್ಮಿಯಿಲ್ಲ...ಅವನು ಪೈಲಟ್ ಟ್ರೈನಿಂಗ್ ಮುಗಿಸಿ


ಈಗ ಒಂದು ದೊಡ್ಡ ವಿಮಾನ ಯಾನ ಕಚೇರಿಯಲ್ಲಿ ಕೆಲಸಕ್ಕೆ ಸೇರಿ ಈಗ ತನ್ನದೇ ಆದ ಒಂದು ವಿಮಾನ ಯಾನ ಕಂಪನಿ


ತೆರೆದಿದ್ದಾನೆ..ಅವನು ತನ್ನ ಸ್ನೇಹಿತನ ಹುಟ್ಟು ಹಬ್ಬದ ಸಲುವಾಗಿ ಒಂದು ಪ್ರತ್ಯೇಕ ವಿಮಾನವನ್ನೇ ಉಡುಗೊರೆಯಾಗಿ ನೀಡಿದ್ದಾನೆ.


 

ಲೇಖನ ವರ್ಗ (Category): 

ಹಾವು ಬಂದಿತಮ್ಮಮ್ಮ!

field_vote: 
Average: 2.5 (2 votes)
To prevent automated spam submissions leave this field empty.


ದಾಸವಾಣಿ:
ಆನೆ ಬಂದಿತಮ್ಮಮ್ಮ
ಮರಿಯಾನೆ ಬಂದಿತಮ್ಮಮ್ಮ
ತೊಲಗಿರೆ ತೊಲಗಿರೆ ಪರಬ್ರಹ್ಮ
ಬಲು ಸರಪಣಿ ಕಡಕೊಂಡು ಬಂತಮ್ಮ

ಕಪಟನಾಟಕದ ಮರಿಯಾನೆ
ನಿಕಟಸಭೆಯೊಳಗೆ ನಿಂತಾನೆ
ಕಪಟನಾಟಕದಿಂದ ಸೋದರಮಾವನ
-ನಕಟಕಟೆನ್ನದೆ ಕೊಂದಾನೆ
ಆನೆ ಬಂದಿತಮ್ಮಮ್ಮ

***

ಶಾಸ್ತ್ರಿವಾಣಿ:
ಹಾವು ಬಂದಿತಮ್ಮಮ್ಮ
ನಾಗ್ರ್ಹಾವು ಬಂದಿತಮ್ಮಮ್ಮ
ಹಿಡಿದೆವು ಹಿಡಿದೆವು ನಂ ಕರ್ಮ
ಬಲು ಜಡವಾಯಿತು ಕ್ರೀಡಾಗ್ರಾಮ

ಕಳಪೆ ಕಾಮಗಾರಿಯ ಹಾವು
ಒಳಗೆ ಲಂಚಗುಳಿತನದ್ಹಾವು
ಖಳರು ಸೇರಿಕೊಂಡು ದೇಶದ ಮಾನವ
ಕಳೆದ ಗುರುತಾಗಿ ಈ ಹಾವು
ಹಾವು ಬಂದಿತಮ್ಮಮ್ಮ

ಲೇಖನ ವರ್ಗ (Category): 

ಕೃತಗ್ನತೆಯ ಗ್ನಾನಾಗ್ನಾನಗಳು

ಕೆಲವು ವರ್ಷಗಳ ಹಿಂದೆ ಪತ್ರಿಕೆಯೊಂದರಲ್ಲಿ ಓದಿದ್ದೆ: ಸ್ಟೂಡಿಯೋ ಒ೦ದರಲ್ಲಿ ಅನ೦ತ ನಾಗ್‌ರವರ ಚಿತ್ರೀಕರಣ ನಡೆಯುತಿತ್ತು. ಒ೦ದು ಸ೦ಭಾಷಣೆಯಲ್ಲಿ “ಅಜ್ಞಾನ” ಅಂತೇನೋ ಒ೦ದು ಪದವಿತ್ತು. ಅನ೦ತ್ “ಅಜ್ಞಾನ” ಎಂದು ಉಚ್ಚರಿಸಿದರೆ ನಿರ್ದೇಶಕರು “ಅಗ್ನಾನ” ಅ೦ತ ತಿದ್ದುತ್ತಿದ್ದರು. ಅನ೦ತ್ ಮತ್ತೆ “ಅಜ್ಞಾನ” ಎಂದು ಹೇಳಿದರೆ ನಿರ್ದೇಶಕರು ಪುನಃ “ಅಗ್ನಾನ” ಅ೦ತಲೇ ತಿದ್ದುತ್ತಿದ್ದರು. ರೇಗಿದ ಅನ೦ತ್, “ರೀ, ಅದು ‘ಅಗ್ನಾನ’ ಅಲ್ಲ; ‘ಅಜ್ಞಾನ, ಅಜ್ಞಾನ’” ಎಂದು ತಿದ್ದಿ ಹೇಳಿದರು. ನಿರ್ದೇಶಕರು, ” ಇಲ್ಲಾ, ಅದರ ಸರಿಯಾದ ಉಚ್ಚಾರಣೆ ‘ಅಗ್ನಾನ’ “, ಎ೦ದೇ ವಾದಿಸಿದರು. ಕೊನೆಗೆ ಅನ೦ತ್, “ಸರಿ. ಇನ್ನೊ೦ದು ಫ್ಲೋರಲ್ಲಿ ಡಾಕ್ಟರ್ ರಾಜ್‍ಕುಮಾರ್ ಇದ್ದಾರೆ; ಅವರನ್ನ ಕೇಳೋಣ,” ಎಂದು ಸಲಹೆ ಮಾಡಿದಾಗ ಅವರಲ್ಲಿ ಹೋಗಿ ತಮ್ಮ ಸಮಸ್ಯೆಯನ್ನು ಮುಂದಿಟ್ಟರು. ರಾಜ್‍ಕುಮಾರ್ ನಸುನಕ್ಕು, ಅನಂತ ನಾಗ್ ಹೇಳುವುದೇ ಸರಿ. ‘ಅಗ್ನಾನ’ ಎಂದು ಉಚ್ಚರಿಸುವುದು ಸರಿಯಲ್ಲ; ‘ಅಜ್ಞಾನ’ ಎಂದೇ ಸರಿಯೆಂದು ತೀರ್ಪಿತ್ತರು.

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಅಯೋಧ್ಯೆ ತೀರ್ಪಿನ ಮುಂದೂಡುವಿಕೆಯಿಂದುಂಟಾದ ಕಷ್ಟನಷ್ಟಗಳು

field_vote: 
Average: 3.5 (6 votes)
To prevent automated spam submissions leave this field empty.


  (ಈ ಪಟ್ಟಿಯನ್ನು ನೀವು ಗಂಭೀರವಾಗಿ ಪರಿಗಣಿಸಿದರೆ ಅದಕ್ಕೆ ನಾನು ಹೊಣೆಗಾರನಲ್ಲ.)
* ಶಾಲಾ ಮಕ್ಕಳಿಗೆ ಎರಡು ದಿನಗಳ ರಜಾ ಮಜಾ ಸದ್ಯಕ್ಕಂತೂ ಕೈತಪ್ಪಿಹೋಯಿತು.
* ಪೋಲೀಸ್ ಬಂದೋಬಸ್ತ್‌ಗೆ ಮಾಡಿದ ಖರ್ಚೆಲ್ಲ ವ್ಯರ್ಥವಾಯಿತು.
* ವಿವಿಧ ಸಂಘಟನೆಗಳ ಪ್ರತಿಭಟನಾಕಾರರ ಉತ್ಸಾಹಕ್ಕೆ ತಣ್ಣೀರೆರಚಿದಂತಾಯಿತು.
* ಬಾಡಿಗೆ ಪ್ರತಿಭಟನಾಕಾರರ ಆದಾಯಕ್ಕೆ ಹೊಡೆತ ಬಿತ್ತು.
* ತೀರ್ಪಿನ ಕಾವಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳಬಯಸಿದ್ದ ಪುಢಾರಿಗಳು ಆ ಕಾರ್ಯಕ್ರಮವನ್ನು ಮುಂದೂಡಬೇಕಾಯಿತು.
* ಬರ್ಖಾದತ್, ಸರ್ದೇಸಾಯಿ, ಪ್ರತಾಪಸಿಂಹಾದಿಗಳು ಆವೇಶ ಹತ್ತಿಕ್ಕಿಕೊಂಡು ಕಾಯಬೇಕಾದ ಅವಸ್ಥೆ ಬಂತು.
* ಟಿವಿ ಕೇಂದ್ರಗಳಿಗೆ ಕ್ಯೂ ಹಚ್ಚಿದ್ದ ಗಣ್ಯರು ಮತ್ತು ಬುದ್ಧಿಜೀವಿಗಳು ವಾಪಸ್ ಹೋಗಬೇಕಾಯಿತು.

ಲೇಖನ ವರ್ಗ (Category): 

ಕಿಮ್ಸ್ ವೈದ್ಯರ ಸನ್ನಿಧಾನಕ್ಕೆ

field_vote: 
Average: 5 (1 vote)
To prevent automated spam submissions leave this field empty.

 

(ಪುಟ್ಟರಾಜ ಗವಾಯಿಗಳ ನಿಧನದ ಶೋಕಾಚರಣೆ ಜಾರಿಯಲ್ಲಿದ್ದಾಗ್ಗ್ಯೂ ಸಮಾರಂಭ ಏರ್ಪಡಿಸಿ ಕುಡಿದು ನರ್ತಿಸಿದ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ವೈದ್ಯರಿಗೆ ಈ ಅಣಕವಾಡುಗಳು ಸಮರ್ಪಿತ)

ಕಿಮ್ಸ್ ಕೀ ಕಸಮ್


ಹೇ ಜೈ ಜೈ ಶಿವ್ ಶಂಕರ್
ಗವಾಯಿ ಗಯೇ ಡೋಂಟ್ ಕೇರ್
ಕೆ ಸಾಲೇ ಹಮ್‌ನೇ ಖೂಬ್ ಪಿಯಾ

ಹೋ ಓ ಗಿರ್ ಜಾಯೇಂಗೇ
ಹಮ್ ಮರ್ ಜಾಯೇಂಗೇ
ಯೇ ಡ್ರಿಂಕ್ಸ್ ಹಮೇ ಖೂಬ್ ಕಿಕ್ ದಿಯಾ
ಓ ಸೌ ರಾಬಡೀ

ಕಿಮ್ಸ್ ಕಲ್ಯಾಣ

ಲೇಖನ ವರ್ಗ (Category): 

ಕುಚೇಲ ವಾಣಿ: ಸಾಮ್ರಾಟರೇ, ಸೈಡು ಬಿಡಿ

ತಾವೇ ಹಾಕಿಕೊಂಡ ಆದರೆ ಎಂದೂ ಪಾಲಿಸದ ವೇಳಾಪಟ್ಟಿಯ ಪ್ರಕಾರ ಇಂದು ಸಾಮ್ರಾಟರು ಸಂತಾಪಕೀಯವನ್ನು ಪ್ರಕಟಿಸಬೇಕಿತ್ತು. ಮಧ್ಯ ರಾತ್ರಿ ಹನ್ನೆರಡು ಘಂಟೆ ಕಳೆದು ಇಷ್ಟು ಹೊತ್ತಾದರೂ ಸಾಮ್ರಾಟರು ಕೀಬೋರ್ಡಿಗೆ ಅಂಗೈ ತೋರಿಸುವ ಲಕ್ಷಣವೂ ಕಾಣಲಿಲ್ಲ. ಇದು ಒಂದು ದಿನದ ಗೋಳಲ್ಲ, ನಗಾರಿ ಪ್ರಾರಂಭವಾದ ದಿನದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ.

field_vote: 
Average: 4 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಗಣಪತಿ ಬರೆದ ಮಹಾಪ್ರಬಂಧ

field_vote: 
Average: 4.3 (4 votes)
To prevent automated spam submissions leave this field empty.

  ಓಂ ಶ್ರೀ ಗಣೇಶಾಯ ನಮಃ, ಓಂ ಶ್ರೀ ಗಣೇಶಾಯ ನಮಃ.
  ಯಾವುದೇ ಕೆಲಸವನ್ನು ಆರಂಭಿಸಬೇಕಾದರೆ ಮೊದಲು ಗಣಪತಿಗೆ ’ಹಾಯ್’ ಹೇಳಿ ಮುಂದುವರಿಯಬೇಕು. ಒಂದು ಸಲ ’ಹಾಯ್’ ಹೇಳಿದರೆ ಸಾಕು, ಆದರೆ ನಾನಿಲ್ಲಿ ಎರಡು ಸಲ ಹೇಳಿದ್ದೇನೆ. ಯಾಕೆಂದರೆ ಇದು ಗಣಪತಿಯ ಕುರಿತಾದ್ದೇ ಬರಹ.


  ಪೀಠಿಕೆ
  ಹರಿಕಥೆಯ ಪೇಳ್ವೆನು ಭಕ್ತರಿಗಿಂದು
  ಹರಸುತನೆ ಹರಸುತನೆ ಓದು
  ನೀನೂ ಚತುರ್ಥಿಯಂದು
  ಇಲ್ಲಿಗೆ ಬಂದು.

  ಯಾವುದೇ ಹರಿಕಥೆಯಾಗಲೀ ಗಣಪತಿಯ ಪದ್ಯರೂಪಿ ಸ್ತುತಿಯೊಂದಿಗೆ ಆರಂಭವಾಗಬೇಕು. ಎಂದೇ ಈ ಹರಿಕಥೆಯ ಆರಂಭದಲ್ಲಿ ಗಣಪತಿ ಕುರಿತ ಈ ಪದ್ಯ. ಆದರೆ ಈ ಪದ್ಯವು ಸ್ತುತಿಯಲ್ಲ, ವಸ್ತುಸ್ಥಿತಿ. ಬರಲಿರುವ ಚತುರ್ಥಿಯಂದು ಗಣಪ ನಮ್ಮ ಬಳಿಗೆ ಬರುತ್ತಾನಷ್ಟೆ. ಆಗ ಅವನೂ ಓದಲಿ ಈ ಹರಿಕಥೆ.
  ಅಂದಹಾಗೆ, ಮೇಲಿನ ಪದ್ಯದಲ್ಲಿ ನಾನು ಎರಡು ಸಲ ’ಹರಸುತನೆ’ ಎಂದದ್ದರ ಅರ್ಥ ಇಂತಿದೆ. ಮೊದಲನೆಯದರ ಅರ್ಥ ’ಹರನ ಮಗನೆ’ ಎಂದು. ಎರಡನೆಯದರ ಅರ್ಥ ’ಹರಸುತ್ತಲೇ’ ಎಂದು. ಹರಿಕಥೆ ದಾಸರ ಶಬ್ದಚಮತ್ಕಾರ ಇದು. ಇಷ್ಟಕ್ಕೂ, ಹರಿಕಥೆಯೆಂದರೆ ಹಾರ್‍ಮೋನಿಯಂ, ತಬಲಾ ಮತ್ತು ಹರಿದಾಸರ ಕೈಯಲ್ಲಿನ ಚಿಟಿಕೆ ಇವುಗಳ ಜೊತೆಗೆ ಅವರ ಬಾಯಿಂದಲೂ ಹೊರಡುವ ನಾನಾ ಬಗೆಯ ಶಬ್ದಗಳ ಅರ್ಥಾತ್ ಸೌಂಡ್‌ಗಳ ಚಮತ್ಕಾರವೇ ತಾನೆ!

ಲೇಖನ ವರ್ಗ (Category): 

ಗಲ್ಲಿ ಸ್ವಾಮಿಗಳ ಪ್ರಶಸ್ತಿ ಪ್ರಸಂಗವೂ...............

field_vote: 
Average: 4.5 (2 votes)
To prevent automated spam submissions leave this field empty.

ಲೇಖನ ವರ್ಗ (Category): 

ಮಲೆನಾಡಿನ ಮಧ್ಯದಿಂದ (ವಿನೋದ ಪ್ರಸಂಗಗಳು) -3

field_vote: 
Average: 5 (1 vote)
To prevent automated spam submissions leave this field empty.

         ಮಲೆನಾಡಿನ ಪ್ರತಿ ಹಳ್ಳಿಯಲ್ಲೂ ಅನೇಕ ಸ್ವಾರಸ್ಯಕರ ಘಟನೆಗಳು ನಡಿಯುತ್ತಲೆ ಇರುತ್ತದೆ. ಕೆಲವೊಂದು ಕಥೆಗಳನ್ನು ಇಲ್ಲಿ ಹೇಳುತ್ತೇನೆ.


                       ರಮೇಶ ರಾಯರು ನಮ್ಮ ಪಕ್ಕದ ಊರಿನ ಒಬ್ಬ ವ್ಯವಸಾಯಗಾರರು. ವಿನೋದ ಪ್ರವೃತ್ತಿಯ ಗಂಭೀರ ನಿಲುವಿನ ಮನುಷ್ಯ. ಯಾರದ್ದಾದ್ರ ತಲೆಗೆ ಏನಾರು ಹುಳಬಿಟ್ಟು ಅವರು ಮಂಗ ಆಗುವುದನ್ನ ದೂರದಿಂದ ನೋಡುತ್ತಿರುತ್ತಾರೆ. ಗಂಭೀರ ವದನರಾಗಿ ವಿಷಯಗಳನ್ನು ಹೇಳುತ್ತಿದ್ದಾರೆ ಯಾರಾದರು ಅದನ್ನು ನಂಬಲೇಬೇಕು.

ಲೇಖನ ವರ್ಗ (Category): 

ಒಂದು ಕೆಲಸ ಮಾಡಲು ಹೋಗಿ ಇನ್ನೊಂದು ಮಾಡಿದರು

field_vote: 
Average: 4 (1 vote)
To prevent automated spam submissions leave this field empty.

 

ಲೇಖನ ವರ್ಗ (Category): 

ಸದನದಲ್ಲಿ ದಶಾವತಾರ!

field_vote: 
Average: 5 (1 vote)
To prevent automated spam submissions leave this field empty.

  ಈಚೆಗಷ್ಟೇ ನಮ್ಮ ಶಾಸಕರು ವಿಧಾನಸೌಧದಲ್ಲಿ ಹಾಡು ಹೇಳಿದರು, ಅಂತ್ಯಾಕ್ಷರಿ ಆಡಿದರು, ಊಟ ಮಾಡಿದರು, ನಿದ್ದೆಯನ್ನೂ ಮಾಡಿ ಎದ್ದರು. ಮುಂದಿನ ದಿನಗಳಲ್ಲಿ ಅವರು ಇನ್ನೇನೇನು ಮಾಡಬಹುದೆಂಬ ಐಡಿಯಾವನ್ನು ಅವರ ಉಪಯೋಗಕ್ಕಾಗಿ ನಾನಿಲ್ಲಿ ಅವರಿಗೆ ಕೊಡಲಿಚ್ಛಿಸುತ್ತೇನೆ:
  * ’ಭಾವಿ ಪ್ರಧಾನಿ ರಾಹುಲ್’ ಎಂಬ ನಾಟಕವನ್ನು ಆಡಬಹುದು. ಹಗಲು ಸದನದ ಬಾವಿಯಲ್ಲಿ ಪ್ರತಿಭಟನೆ, ರಾತ್ರಿ ಮೊಗಸಾಲೆಯಲ್ಲಿ ’ಭಾವಿ ಪ್ರಧಾನಿ ರಾಹುಲ್’ ನಾಟಕ. ಸರಿಹೊಂದುತ್ತದೆ.
  * ರಾಜ್‌ಕುಮಾರ್ ಅಭಿನಯದ ’ಮಣ್ಣಿನ ಮಗ’ ಚಲನಚಿತ್ರದ ಪ್ರದರ್ಶನವನ್ನು ಏರ್ಪಡಿಸಿ, ದೇವೇಗೌಡರನ್ನು ಆಮಂತ್ರಿಸಿ, ಅವರ ಅಧ್ಯಕ್ಷತೆಯಲ್ಲಿ ಚಿತ್ರ ನೋಡಿ ಆನಂದಿಸಬಹುದು.

ಲೇಖನ ವರ್ಗ (Category): 

ಸಂತಾಪಕೀಯ: ಸಾಮ್ರಾಟರಿಗೆ ಹೇಳಿ ಬಹುಪರಾಖ್!

ಪಬ್ಲಿಕ್ ಮೆಮೊರಿ ಈಸ್ ಶಾರ್ಟ್ ಎನ್ನುವ ಬುದ್ಧಿವಂತಿಕೆಯ ಮಾತೊಂದಿದೆ... ಪಬ್ಲಿಕ್ ಟಾಯ್ಲೆಟ್ ಟೂ ಈಸ್ ಮಚ್ ಶಾರ್ಟ್ ಆಫ್ ವಾಟರ್ ಎಂಬ ಅನುಭವವೇದ್ಯ ಮಾತೂ ಇದೆ. ವರ್ಲ್ಡ್  ಕಪ್ಪಿನಲ್ಲಿ ಚಿಲ್ಲರೆ ತಂಡದೆದುರು ಸೋತು ಸುಣ್ಣವಾದರೂ, ಕೋಟಿ ರುಪಾಯಿ ಲಂಚ ಹೊಡೆದ ಆರೋಪ ತಲೆಯ ಮೇಲೆ ಕೂತಿದ್ದರೂ, ಲಜ್ಜೆಯಿಲ್ಲದ ಕುಕರ್ಮ ಮಾಡಿ ಸಿಕ್ಕುಬಿದ್ದರೂ ಜನರು ಧೈರ್ಯವಾಗಿ ಎದುಗುಂದದೆ ಬಾಳುವುದಕ್ಕೆ ಈ ಮೇಲಿನ ಬುದ್ಧಿವಂತಿಕೆಯ ಮಾತೇ ಆಧಾರ. ಜನರ ಈ ‘ಗಜನಿ’ ಮಾದರಿಯ ಅತ್ಯದ್ಭುತ ನೆನಪಿನ ಶಕ್ತಿಯನ್ನು ವೃದ್ಧಿಸುವುದಕ್ಕಾಗಿ ಅನೇಕ ಟಾನಿಕ್ಕುಗಳು ಹಗಲಿರುಳು ಕೆಲಸ ಮಾಡುತ್ತಿದ್ದರೂ ಒಟ್ಟಾರೆಯಾಗಿ ಸಮಾಜಕ್ಕೆ ಮರೆವಿನ ಶಕ್ತಿಯು ಬಲವಾಗಿ ವೃದ್ಧಿಯಾಗುತ್ತಿದೆ.

 

field_vote: 
Average: 5 (5 votes)
To prevent automated spam submissions leave this field empty.
ಲೇಖನ ವರ್ಗ (Category): 

ದಾನ್ ದಾನ್ ಪರ್ ಲಿಖಾ ಹೈ ತೇರಾ ನಾಮ್!

field_vote: 
Average: 5 (1 vote)
To prevent automated spam submissions leave this field empty.

ಶ್ರೀ ಮಧುಸೂದನ ಪೆಜತ್ತಾಯರ ಸ್ಮೃತಿಪಟಲದಿಂದ...


ಕ್ರಿ.ಶ. ೧೯೫೬ನೇ ಇಸವಿ ಇರಬೇಕು. ಆಗಷ್ಟೇ ಉಡುಪಿಯ ಬೋರ್ಡ್ ಹೈಸ್ಕೂಲ್‌ನ ಆರನೇ ತರಗತಿಗೆ ಸೇರಿದ್ದೆ. ನಮ್ಮ ಮನೆಯಿಂದ ಸ್ಕೂಲ್ ಎರಡು ಮೈಲಿ ದೂರ. ನಮ್ಮಮಧ್ಯಾಹ್ನದ ಊಟದ ವಿರಾಮದ ವೇಳೆ ಮಧ್ಯಾಹ್ನ ೧೨-೩೦ ರಿಂದ ೨-೦೦ ಗಂಟೆಯವರೆಗೆ ಇತ್ತು. ಶಾಲಾದಿನಗಳಲ್ಲಿ ಲಗುಬುಗೆಯಿಂದ ಮನೆಗೆ ನಡೆದು ಬಂದು ಬೇಗಬೇಗನೇ ಮೂಗು ಬಾಯಿಯಿಂದ ಊಟ ಮುಕ್ಕಿ ಸಮಯಕ್ಕೆ ಸರಿಯಾಗಿ ಪುನಃ ಸ್ಕೂಲ್ ಸೇರುತ್ತಾ ಇದ್ದೆ!


ಸೈಕಲ್ ಕಲಿತರೆ ನನಗೆ ತುಂಬಾ ಅನುಕೂಲ ಆಗಬಹುದೆಂಬ ಆಸೆಯಿಂದ ಪ್ರತೀ ಸಂಜೆ ಬಾಡಿಗೆಯ ಸೈಕಲ್ ಪಡೆದು ಕಲಿಯ ತೊಡಗಿದೆ. ಮೊದಲ ದಿನವೇ ನನ್ನ ಬಾಡಿಗೆಯ ಸೈಕಲ್ ಪಲ್ಟಿ ಹೊಡೆದು ಕಾಲಿಗೆ ಗಾಯ ಮಾಡಿಕೊಂಡೆ. ಕುಂಟುತ್ತಾ ನಡೆಯುತ್ತಿದ್ದ ನನಗೆ ಅಮ್ಮ ನಾಲ್ಕಾಣೆಯ ಪಾವಲಿ (ನಾಣ್ಯ) ಕೊಟ್ಟು ನಮ್ಮ ಹೈಸ್ಕೂಲ್ ಪಕ್ಕದಲ್ಲೇ ಇದ್ದ ಆನಂದ ಭವನ ಹೋಟೆಲಿನಲ್ಲಿ “ಪ್ಲೇಟ್ ಊಟ ಮಾಡು” ಎಂದು ಹೇಳಿದ್ದರು.


ನನಗೆ ಸಂಭ್ರಮವೋ ಸಂಭ್ರಮ!

ಲೇಖನ ವರ್ಗ (Category): 

ಆಫೀಸೆಲ್ಲಾ...... ನಾತಮಯ....

field_vote: 
Average: 5 (6 votes)
To prevent automated spam submissions leave this field empty.

ಆಗೀಗ ಗಾಳಿಯೊಂದಿಗೆ ಕೆಟ್ಟ ವಾಸನೆ ಪಸರಿಸುತ್ತಿತ್ತು. ಭಾನುವಾರದ ಗಮ್ಮತ್ತಿನೂಟದ ಪ್ರಭಾವವಿರಬೇಕು. ನಮ್ಮಾಫೀಸಿನ ಸಿಬ್ಬಂದಿಯೊಬ್ಬರು ಕಾಲಮೇಲೆ ಕಾಲು ಹಾಕಿ, ಒಂದು ಭಾಗವನ್ನು ಒಂಚೂರು ಎತ್ತಿ, ಒಂಥರಾ ಭಂಗಿಯಲ್ಲಿ ಕುರ್ಚಿಯಲ್ಲಿ ಕುಳಿತಿದ್ದರು. ಇವರ ಭಂಗಿ ನೋಡಿ ದುರ್ನಾತಕ್ಕೆ ಕಾರಣ ಕಂಡು ಹಿಡೆದೆ. ನಕ್ಕುಬಿಟ್ಟರೆ ಅವರಿಗೆ ಅವಮಾನವಾದೀತೆಂದು ಆಡಲೂ ಆಗದೆ, ಅನುಭವಿಸಲೂ (ವಾಸನೆಯನ್ನು) ಆಗದೇ ಕುಳಿತಿದ್ದೆ.  ನಿಮಗೂ ಈಗ ಕಾರಣ ಗೊತ್ತಾಗಿರಬಹುದು. ಸುಸಂಸ್ಕೃತಿಯಿಂದ ಮಂಡಿಸುವುದಾದರೆ ಅಪಾನವಾಯು ಅಥವಾ ಅಧೋವಾಯು ಹೊರಡುತ್ತಿತ್ತು. ಸಮ್ಮನೆ ನೇರವಾಗಿ ಹೇಳುವುದಾದರೆ ಹೂಸು ಬಿಡುತ್ತಿದ್ದರು.

ಲೇಖನ ವರ್ಗ (Category): 

ಅನಸೂಯಾಬಾಯಿ ಮನೆಗೆ ಬಿಗ್ ಸ್ಕ್ರೀನ್ ಬಂತು !

 

field_vote: 
Average: 4.4 (5 votes)
To prevent automated spam submissions leave this field empty.
ಲೇಖನ ವರ್ಗ (Category): 

ಸರಣಿ ಮಿಂಚಂಚೆಯಿಂದ ತಲೆ ಕೆಟ್ಟ ವ್ಯಕ್ತಿಯೋರ್ವನ ಕರುಣಾಜನಕ ಮಿಂಚಂಚೆನಾನು ನನ್ನಎಲ್ಲಾ ಗೆಳೆಯ ಮತ್ತು ಭಂಧು ಬಾಂಧವರಿಗೆ ಅವರು ೨೦೦೦ ನಿಂದ ನನಗೆ ಕಳುಹಿಸುತ್ತಿರುವ ಮಿಂಚಂಚೆಗಾಗಿ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ
ಅವರ ಆ ಮಿಂಚಂಚೆಗಳ ಕಾರಣದಿಂದಲೇ
೧.ಕೋಲಾದಲ್ಲಿ ಸ್ನಾನ ಗೃಹ ,ಪಾಯಿಖಾನೆ ಸ್ವಛ್ಚ ಮಾಡಬಹುದೆಂಬುದು ಕೇಳಿಯೇ ನಾನು ಅದನ್ನು ಕುಡಿಯುವದನ್ನು ಬಿಟ್ಟೇ ಬಿಟ್ಟೆ.
೨. ನಾನು ಸಿನೆಮಾ ಮಂದಿರಗಳಲ್ಲಿ ಆಸನದಲ್ಲಿ ಎಐಡ್ಸ್ ಸೂಜಿಗಳನ್ನಿಡುತ್ತರಂತ ಕೇಳಿ ಸಿನೆಮಾ ನೋಡುವುದನ್ನೂ ನಿಲ್ಲಿಸಿ ಬಿಟ್ಟೆ.
 ೩. ಸಾವಿರ ಸಾವಿರ ಮಿಂಚಂಚೆಗಳನ್ನು ಅತ್ತಿಂದಿತ್ತ ಕಳುಹಿಸಿಯೂ ಇನ್ನೂ ಬಾರದ ಮೊಬಾಯಿಲ್, ಕ್ಯಾಮರಾ, ಲ್ಯಾಪ್ಟೋಪ್ಗಳಿಗಾಗಿ ಕಾಯುತ್ತಿದ್ದೇನೆ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಅಷ್ಟಪಾದಿ ಸ್ತುತಿ

field_vote: 
No votes yet
To prevent automated spam submissions leave this field empty.


ಪಾಲ್ ಅಲೆನ್ ಅಲ್ಲೇನ್ ನಿನ್ನ ಹೆಸರು?
ಪಾಲಿಸೆಮ್ಮನು, ಭವಿಷ್ಯವನು ಉಸುರು.

ಕಾಲ್ಚೆಂಡಾಟದಲಿ ನಿಜ ನಿನ್ನ ನುಡಿಯು
ಮೇಲ್ಕೊಂಡಾಡುವೆನು ’ನಿನಗಾರು ಸರಿಯು?’

ಅಷ್ಟಪಾದಿಯೆ, ನೀನು ಈ ಬುವಿಗೆ
ಇಷ್ಟವಾಗಿಹೆ, ವಂದಿಸುವೆವೈ ನಿನಗೆ.

ಅಷ್ಟದಿಕ್ಕುಗಳಲ್ಲು ಅಹ ನಿನ್ನ ಸ್ತುತಿಯು!
ಅಷ್ಟದಿಗ್ಗಜಸಮಾನ ನಿನ್ನ್ ಮತಿಯು!

ಅಷ್ಟಮಂಗಲಸಹಿತ ಅರ್ಚಿಸುವೆವ್ ನಿನ್ನ
ಅಷ್ಟಾಂಗಸಹಿತ ಪೊಡಮಡುವೆವ್ ಚಿನ್ನ!

ಎಷ್ಟು ಹೊಗಳಿದರೂ ಕಮ್ಮಿ ನಿನ್ನನ್ನು
ಕಷ್ಟ ತಿಳಿವುದು ನಿನ್ನ ಅಂತರಂಗವನು

ಜ್ಯೋತಿಷವು ಶಾಸ್ತ್ರ; ಅದಲ್ಲ ಠಸ್‌ಪುಸ್
ಆದರದನಿಂದು ನುಡಿವುದು ಆಕ್ಟೊಪಸ್!

   

ಲೇಖನ ವರ್ಗ (Category): 

ಸದನ ಚೌಪದಿ

field_vote: 
Average: 5 (2 votes)
To prevent automated spam submissions leave this field empty.

  ’ಕಮಲೇ ಕಮಲೋತ್ಪತ್ತಿಃ
  ಶ್ರೂಯತೇ ನ ತು ದೃಶ್ಯತೇ’

ಹೀಗೆ ಎರಡು ಸಾಲುಗಳನ್ನು ಸವಾಲಾಗಿ ನೀಡಿ ಸಿಂಹಳದ ರಾಜ ಈ ಚೌಪದಿಯನ್ನು ಅರ್ಥಗರ್ಭಿತವಾಗಿ ಪೂರ್ಣಗೊಳಿಸುವವರಿಗೆ ಬಹುಮಾನ ಘೋಷಿಸುತ್ತಾನೆ.
  ’ಬಾಲೇ, ತವ ಮುಖಾಂಭೋಜೇ
  ಕಥಂ ಇಂದೀವರದ್ವಯಂ!’

ಎಂದು (ವೇಶ್ಯೆಯೋರ್ವಳ ಮುಖದರ್ಶನದಿಂದ ಸ್ಫೂರ್ತಿಗೊಂಡು) ಇನ್ನೆರಡು ಸಾಲುಗಳನ್ನು ಮಹಾಕವಿ ಕಾಳಿದಾಸ ರಚಿಸಿ ಚೌಪದಿಯನ್ನು ಪೂರ್ಣಗೊಳಿಸುತ್ತಾನೆ.
  ಈ ಚೌಪದಿಯನ್ನು ಕನ್ನಡದಲ್ಲಿ ಹೀಗೆ ಹೇಳಬಹುದೇನೋ.
  ’ಕಮಲದಲ್ಲಿ ಕಮಲ ಹುಟ್ಟುವುದನು
  ಕೇಳಬಹುದು, ಕಾಣಲಾಗದು.
  ಕನ್ನೆ, ನಿನ್ನ ಮುಖಕಮಲದೊಳು

ಲೇಖನ ವರ್ಗ (Category): 

ಮದುವೆ ಯಾವಾಗ

field_vote: 
No votes yet
To prevent automated spam submissions leave this field empty.

ಮಿತ್ರ ಶ್ರೀಕಾಂತ್ ನನಗೊಂದು ಮೇಲ್ ಕಳಿಸಿದ್ರು , ಹೇಗೂ ಸಂಪದಕ್ಕೆ ಬಂದು ತುಂಬಾ ದಿನಗಳಾಗಿತ್ತು, ಸಂಪದಿಗರು ಇದನ್ನು ಓದ್ತಾರೆ, ಅಂತಾ ಇಲ್ಲಿ ಹಾಕಿದ್ದೆ.

-ಶ್ರೀಧರ್

------------------------------------------------------------

ಶ್ರೀ ಪಾಲಚಂದ್ರರ ಕಾಮೆಂಟ್ ನೋಡಿ ಅವರು ನೀಡಿರುವ ಕೊಂಡಿಯನ್ನೇ ಇಲ್ಲಿ ನೀಡಿರುವೆ.

http://taralegalu.blogspot.com/2010/02/blog-post.html

ಲೇಖನ ವರ್ಗ (Category): 

ಪಂಜಿನ ಮೆರವಣಿಗೆ - ಹೀಗೊಂದು ಹಾಸ್ಯ ಪ್ರಸಂಗ

field_vote: 
No votes yet
To prevent automated spam submissions leave this field empty.

"ಪಂಜಿನ ಮೆರವಣಿಗೆ" ಉಂಡು ಪಂಡ್ ದು ಬರೀತ ಇಲ್ಲುದ ಸತೀಸೆ ಬತ್ತ್ ದು ಪಂಡೆ.  ಮಾತೆರ್ಲ ಪೋಯಿ ಪೋಯಿ ಪಂಡೆರು.. ಆಂಡ್.. ಪೋದು ತೂನಗ... ಎಯಿನ?  
ಎನ್ನ ಕೈಟು ಮಾತ್ರ ಪಂಜಿ....

ಬೊಕ್ಕ ಮಾತೆರ್ನ ಕೈಟು ತೂಟೆ... 

 

ಸೂಚನೆ: ತುಳು ಭಾಷೆಯಲ್ಲಿ ಪಂಜಿ ಅಂದರೆ ಹಂದಿ

 

ಮಂಗಳೂರು ಸ್ಟೈಲ್ ಅನುವಾದ.

"ಪಂಜಿನ ಮೆರವಣಿಗೆ" ಉಂಟು, ಅಂತ ಪಕ್ಕದ ಮನೆ ಸತೀಶ ಬಂದು ಹೇಳಿದ. ಎಲ್ರು ಹೋಗ್ವ ಹೋಗ್ವ ಹೇಳಿದ್ರು.

ಆಯ್ತು ಅಂತ ಮೆರವಣಿಗೆಗೆ ಹೋಗಿ ನೋಡ್ವಾಗ ಎಂತ?  

ನನ್ನ ಕೈಯಲ್ಲಿ ಮಾತ್ರ ಹಂದಿ.

ಬೇರೆ ಎಲ್ಲರ ಕೈಯಲ್ಲಿ ದೊಂದಿ (ಪಂಜು)..

 

ಲೇಖನ ವರ್ಗ (Category): 

ಸೀನನ ವಿರಹ ಮತ್ತು ಜೋನಿ ಬೆಲ್ಲ

 

 

 

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೩

field_vote: 
Average: 4 (1 vote)
To prevent automated spam submissions leave this field empty.

ಪ್ಯಾಟೆಗೆ ಹೋಗಿದ್ದ ಗೌಡ್ರು ಬಸ್ಸಿಂದಿಳಿದು ಮನೆ ಕಡೆಗೆ ಹೆಜ್ಜೆ ಹಾಕ್ತಿದ್ರು. ಹಿಂದ್ಗಡೆಯಿಂದ  ಸ್ಪೀಡಾಗಿ ಬಂದ ಸ್ಕಾರ್ಪಿಯೋ ಸಡನ್ ಆಗಿ ನಿಲ್ತು.

ಸ್ಕಾರ್ಪಿಯೋದಿಂದ ಇಳಿದ ರಂಗಣ್ಣನ ನೋಡಿ ಗೌಡ್ರು 'ಏನ್ಲಾ ರಂಗಣ್ಣ ಯಾರ್ದಲ ಗಾಡಿ?'

ನಂದೇ ಗೌಡ್ರೆ, ಇವತ್ತು ಹೊಸದು ತಂದೆ, ಹೆಂಗಿದೆ ಗೌಡ್ರೆ?

ಸಕತ್ತಾಗಿದೆ ಕಣ್ಲ. ಅದೆಲ್ಲಿಂದ ಇಷ್ಟು ಕಾಸು ಬಂತ್ಲಾ?

ಅದೇ ಗೌಡ್ರೆ, ರೆಸಾರ್ಟ್ನಿಂದ ದುಡಿದಿದ್ದು.

ಆಗ್ಬಹುದು ಬುಡ್ಲ, ಬಲ್ಬೇಗ ಅವ್ರಿವ್ರನ್ನ ಏಮಾರ್ಸಿ ಎಲ್ಲ ಮಾಡ್ಕಂಬಿಟ್ಟೆ.

ದೊಡ್ಡ ಮೀನು ಬದ್ಕ್ಬೇಕಂದ್ರೆ ಸಣ್ಣ ಮೀನು ಸಾಯ್ಲೆಬೇಕಲ್ವ ಗೌಡ್ರೆ? ಅದಿರ್ಲಿ, ಸೋಮನಹಳ್ಳಿ ಹತ್ರ ಒಂದು ೨೦೦ ಎಕ್ರೆ ಜಾಗ ಕೊಂಡ್ಕಂಡೆ ಗೌಡ್ರೆ.

ಲೇಖನ ವರ್ಗ (Category): 

ಮಲೆನಾಡಿನ ವಿನೋದ ಪ್ರಸಂಗಗಳು-೨

field_vote: 
Average: 5 (1 vote)
To prevent automated spam submissions leave this field empty.

ಬೆಳಿಗ್ಗೆ ಮುಂಚೆ ಸವಿ ನಿದ್ದೆಯಿಂದ ಎದ್ದು ಬರುತ್ತಿದ್ದಂತೆ ಬಸವನ ಆಡಿಸುವವನ ವಾಲಗದ ‘ಪೆ-ಪೆ-ಪ್ಯಾ’ ಶಬ್ದ, ಕಟ್ಟಿಹಾಕಿದ ದೊಡ್ಡ ದನಿಯ ನಾಯಿಗಳ ಬೊಗಳುವಿಕೆಯ ಪ್ರತ್ಯುತ್ತರ-ಕೇಳಿದಾಗ ಬಾಲಭಟ್ರಿಗೆ ಹ್ಯಾಗಾಗಿರಬೇಡ? ಅದಕ್ಕಿಂತ ಹೆಚ್ಹಾಗಿ ಬಸವನ ಆಡಿಸುವವನು “ನಿವ್ ಸುಮ್ನಿರಿ, ಹೋಗಿ. ನಿಮ್ಮಣ್ಣನ ಕರೀರಿ” ಅಂದಾಗ ಎಷ್ಟು ಸಿಟ್ಟು ಬಂದಿರಬೇಡ? ಬನ್ನಿ, ಮೊದಲಿಂದ ಓದಿ.


ರಮೇಶರಾಯರು ನಮ್ಮ ಪಕ್ಕದ ಊರಿನ ವ್ಯವಸಾಯಗಾರರು. ಒಳ್ಳೆಯ ಮನುಷ್ಯ. ನೋಡಲು ತುಂಬಾ ಗಂಭೀರರಾಗಿ ಕಾಣುತ್ತಾರೆ. ಆದರೆ ವಿನೋದ ಪ್ರವೃತ್ತಿಯ ಮನುಷ್ಯ. (ಅವರ ಬಗ್ಗೆ ನನ್ನ ಹಿಂದಿನ ಬ್ಲಾಗಿನಲ್ಲಿ ಓದಿ).

ಲೇಖನ ವರ್ಗ (Category): 

ಸಾಕಪ್ಪಾ ಸಾಕು

field_vote: 
Average: 5 (2 votes)
To prevent automated spam submissions leave this field empty.

ಇಲ್ಲ ಅಮ್ಮ ನಾನು ಬರಲ್ಲ, ಬೆಂಗಳೂರಿಂದ ಬಂದು ಒಂದೆರಡು ದಿನ ಆರಾಮಾಗಿ ಇರಣ ಅಂದ್ರೆ ನೀನೊಳ್ಳೆ ಯಾವಾಗ್ಲೂ ಮದ್ವೆ, ಸಾವು, ತಿಥಿ ಅಂತ ಕರೀತಿಯಲ್ಲ.

ಹೂಂ ಕಣಪ್ಪ ಬರ್ಲೇಬೇಕು ಅವ್ರು ನಿಂದಕ್ಕೆ ಬರೋದು ಬೇಡ್ವ?

'ಏನಕ್ಕೆ, ತಿಥಿಗಾ?'

ನಿಂದೆಲ್ಲಿ ತಿಥಿ ಆಗತ್ತೆ ಯಾರದಾದ್ರೂ ತಿಥಿ ಮಾಡ್ತೀಯ, ಕಥೆ ಎಲ್ಲ ಬೇಡ ಈಗ ಸುಮ್ನೆ ಹೊರಡು.

ನಂಗಾಗಲ್ಲ.

ಹಾಗಿದ್ರೆ ಅಡಿಗೆ ನೀನೆ ಮಾಡಿ ಊಟ ಮಾಡಿ ಅಜ್ಜಿಗೆ ಬಡಿಸಿ ಇಲ್ಲೇ ಇರು.

ಯಾಕೋ ಎಡವಟ್ಟಾಗ್ತಿದೆ ಅನ್ನಿಸ್ತು. ಬರ್ತೀನಿ ಅಂತ ಹೊರಟೆ.

ಕಲ್ಯಾಣ ಮಂಟಪದ ಹತ್ತಿರ ಹೋದ್ರೆ, ಇಂಥ ಕುಟುಂಬದವರಿಂದ ಸ್ವಾಗತ ಅನ್ನೋ ಬೋರ್ಡ್ ಇಲ್ಲ :(

ಏನಮ್ಮ ಇದು ಅಂದೆ.

ಲೇಖನ ವರ್ಗ (Category): 

ಪುರಂದರದಾಸರ ಫುಟ್ಬಾಲ್ ಪದ

field_vote: 
Average: 3.3 (3 votes)
To prevent automated spam submissions leave this field empty.


(ಒರಿಜಿನಲ್ ಪದ)
ಕೃಷ್ಣಾ ಎನಬಾರದೆ?
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ
ಕೃಷ್ಣಾ ಎನಬಾರದೆ?
ನರಜನ್ಮ ಬಂದಾಗ ನಾಲಿಗೆ ಇದ್ದಾಗ
ಕೃಷ್ಣಾ ಎನಬಾರದೆ?

ಮಲಗೆದ್ದು ಮೈಮುರಿದು ಏಳುತಲೊಮ್ಮೆ
ಕೃಷ್ಣಾ ಎನಬಾರದೆ? ನಿತ್ಯ
ಸುಳಿದಾಡುತ ಮನೆಯೊಳಗಾದರು ಒಮ್ಮೆ
ಕೃಷ್ಣಾ ಎನಬಾರದೆ?

ದುರಿತರಾಶಿಗಳನು ತಂದು ಬಿಸುಡಲು
ಕೃಷ್ಣಾ ಎನಬಾರದೆ? ಸದಾ
ಗರುಡವಾಹನ ಸಿರಿಪುರಂದರ ವಿಠಲನ್ನೇ
ಕೃಷ್ಣಾ ಎನಬಾರದೆ?

--೦--

(ಡೂಪ್ಲಿಕೇಟ್ ಪದ)
ಫುಟ್ಬಾಲ್ ನೋಡ್ಬಾರದೆ?
ಫುಟ್ಬಾಲ್ ನೋಡಲು ಸೊಗಸು ಅದೆಷ್ಟೆಲ್ಲ!
ಫುಟ್ಬಾಲ್ ನೋಡ್ಬಾರದೆ?
ವಿಶ್ವಕಪ್ ನಡೆವಾಗ ಟಿವಿ ಎದುರಿರುವಾಗ
ಫುಟ್ಬಾಲ್ ನೋಡ್ಬಾರದೆ?

ಲೇಖನ ವರ್ಗ (Category): 

ಎಲ್ಲ ಮಂಜುನಾಥನ ಮಹಿಮೆ

field_vote: 
Average: 4.5 (4 votes)
To prevent automated spam submissions leave this field empty.

ಹೊಸ ಪ್ರೊಜೆಕ್ಟ್ , ಮುಗಿಸುವ ಅವಧಿ ಬೇರೆ ಕಡಿಮೆ ಇದ್ದುದರಿಂದ ಹಗಲು-ರಾತ್ರಿಯೆನ್ನದೆ ಆ ವಾರ ಕೆಲಸ ಮಾಡಿದ್ದೆ. ಶುಕ್ರವಾರದ ದಿನ ಸ್ವಲ್ಪ ದಣಿವನ್ನು ನಿವಾರಿಸಿಕೊಳ್ಳಲು ಬೇಗ ಬಂದು ಹಾಸಿಗೆ ಮೇಲೆ ಬಿದ್ದೆ.

ನಮ್ಮ ಗುಂಪಿನಲ್ಲಿರೋ ಹುಡುಗರಲ್ಲಿ ಒಂದಷ್ಟು ಜನದ್ದು ಆಗ್ಲೇ ಮದುವೆ ಆಗಿದೆ. ಇನ್ನೊಂದು ಸ್ವಲ್ಪ ಹುಡುಗರ ಲಗ್ನ ಆಗಿದೆ, ಮತ್ತೆ ಕೆಲವರು ಇನ್ನೂ ಹುಡುಗಿಯರನ್ನ ಹುಡುಕ್ತಿದ್ದಾರೆ.

ಕೊನೆ ಕೆಟಗರಿಯಲ್ಲಿ ನಾನೂ ಒಬ್ಬ.

ನನ್ನ ಆಫೀಸಲ್ಲೂ ಸಹ ನನ್ನ ಜೊತೆಗೆ ಕೆಲಸಕ್ಕೆ ಸೇರಿದ ಬಹುತೇಕ ಮಂದಿ ಮದುವೆ ಆಗಿ ಇನ್ನು ಸ್ವಲ್ಪ ದಿನಗಳಲ್ಲಿ ಮತ್ತೊಂದು ಗುಡ್ ನ್ಯೂಸ್ ಕೊಡೊ ಹಂತದಲ್ಲಿದ್ದಾರೆ.

ನಾನೂ ಸಹ ಊರಿಗೆ ಹೋದಾಗಲೆಲ್ಲ 'ಮದುವೆ ಗಿದುವೆ ಮಾಡೋ ಏನಾದರೂ ಯೋಚನೆ ಇದೆಯಾ ??' ಅಂತ ಕೇಳಿದ್ರೆ....

ಲೇಖನ ವರ್ಗ (Category): 

ರಾಜಕಾರಣಿಗಳು ಎಂದಿಗೂ ಸುಳ್ಳು ನುಡಿಯುವುದಿಲ್ಲ

field_vote: 
Average: 2.5 (4 votes)
To prevent automated spam submissions leave this field empty.

ಲೇಖನ ವರ್ಗ (Category): 

’ಶ್ರೀ ಶ್ರೀ’ ಬಗ್ಗೆ ಕೆಲವು ಪ್ರಶ್ನೆಗಳು

field_vote: 
Average: 3.1 (9 votes)
To prevent automated spam submissions leave this field empty.


(ಈ ಪ್ರಶ್ನೆಗಳನ್ನು ಗಂಭೀರವಾಗಿ ತೆಗೆದುಕೊಳ್ಳಬೇಡಿ. ತೆಗೆದುಕೊಂಡರೆ ನನ್ನ ಆಕ್ಷೇಪವಿಲ್ಲ.)

  ಎಲ್ಲಿಂದಲೋ ತೂರಿಬಂದ ಗುಂಡಿಗೆ
  ಅದಿರಿತು ರವಿಶಂಕರರ ಗುಂಡಿಗೆ
  ಶ್ವಾನಪುರಾಣ ಕೇಳಿದಮೇಲೆ
  ಮರಳಿತು ಅವರ ಮುಖದ ಕಳೆ

  ಅದುವರೆಗೂ ನಗುತ್ತಿದ್ದರೂ ಅವರು
  ಕಳವಳ ಸ್ಫುಟವಾಗಿತ್ತು ಮುಖದಲ್ಲಿ
  ನಿಜ ತಿಳಿಸಿದರಲ್ಲ ಪೋಲೀಸರು
  ಆಗ ಮೂಡಿತು ನೈಜ ನಗು ಅಲ್ಲಿ

  ಶ್ರೀ ಶ್ರೀಗಳ ಈ ಅವಸ್ಥೆ ಗಮನಿಸಿದಾಗ
  ನನ್ನನ್ನೊಂದು ಪ್ರಶ್ನೆ ಕಾಡುತ್ತಿದೆ ಈಗ:
  ಆರ್ಟ್ ಆಫ್ ಲಿವಿಂಗ್ ಕಲಿಸುವವರೇ
  ಬದುಕುವ ಕಲೆಯನ್ನು ಅರಿಯರೇ?!

  ಇನ್ನೂ ಕೆಲವು ಪ್ರಶ್ನೆಗಳು:

ಲೇಖನ ವರ್ಗ (Category): 

ರಂಗ - ರಂಗಿಯ ಲವ್ ಸ್ಟೋರಿ

field_vote: 
Average: 4 (1 vote)
To prevent automated spam submissions leave this field empty.

ಹೀರೋ ರಂಗ ಹಾಗೂ ಹೀರೋಯಿನ್ ರಂಗಿಯದೂ ಹಲವು ವರ್ಷಗಳ ಲವ್.  ಅದರಲ್ಲೂ ಚೆಡ್ಡಿ ರಂಗ ಅಂದರೆ ಸಾಕು, ಅದೇ ನಮ್ ರಂಗಿ ಪಿರುತಿ ಮಾತ್ತಾನಲ್ಲಾ ಅವನ್ ಕಣ್ಲಾ ಅನ್ನುವಷ್ಟರ ಮಟ್ಟಿಗೆ ಹಳ್ಳಿಯಲ್ಲಿ ರವಷ್ಟು ಪೇಮಸ್.  

ಲೇಖನ ವರ್ಗ (Category): 

ಪುಟ್ಟ ಕಲಿತ ಅಣ್ಣಾವರ ಹಾಡು

field_vote: 
Average: 5 (1 vote)
To prevent automated spam submissions leave this field empty.

ಮೊನ್ನೆ ನಮ್ಮ ದೂರದ ಸಂಬಂಧಿ ಒಬ್ಬರ ಮನೆಗೆ ಹೋಗಿದ್ದೆ. ಅವರ ಐದು ವರ್ಷದ ಮುದ್ದು ಮಗನಿಗೆ ಅಣ್ಣಾವರ ಹಾಡು ಕಲಿಸಿದೆ.
ಆ ಹಾಡು ಈ ರೀತಿ ಇತ್ತು.
ಮಾನವನಾಗಿ ಹುಟ್ಟಿದಮೇಲೆ ಏನೇನ್ ಕಂಡಿ
ಸಾಯೋತನಕ ಸಂಸಾರದಲ್ಲಿ ಗಂಡ ಗುಂಡಿ
ಹೇರಿಕೊಂಡು ಹೋಗೋದಿಲ್ಲ ಸತ್ತಾಗ ಬಂಡಿ
ಇರೋದ್ರೊಳಗೆ ಒಮ್ಮೆ ನೋಡು ಜೋಗದ ಗುಂಡಿ.

ಮಗು ಕೂಡಾ ಬಹಳ ಖುಷಿಯಲ್ಲೇ ಹಾಡು ಕಲಿಯಿತು. ಸ್ವಲ್ಪ ತಿಂಡಿ ಪೋತ. ಇಡೀ ದಿನ ಬಾಯಲ್ಲಿ ಏನಾದ್ರೂ ತಿಂತಾ ಇರಬೇಕು ಅವನಿಗೆ.
ನನಗು ಹಾಡು ಕಲಿಸಿದ ಖುಷಿ. ಸಂಜೆ ಮನೆಯಲ್ಲಿದ್ದ ಎಲ್ಲರನ್ನು ಒಟ್ಟು ಸೇರಿಸಿ , ಹೆಮ್ಮೆಯಿಂದ ಪುಟ್ಟನಿಗೆ ಹಾಡು ಹೇಳಲು ಹೇಳಿದೆ.
ಪುಟ್ಟ ಖುಷಿಯಿಂದ ಹಾಡಿದ್ದು ಹೀಗೆ.
ಮಾನವನಾಗಿ ಹುಟ್ಟಿದಮೇಲೆ ಏನೇನ್ ತಿಂದಿ?,

ಲೇಖನ ವರ್ಗ (Category): 

ಮಲೆನಾಡಿನ ವಿನೋದ ಪ್ರಸಂಗಗಳು-೧

field_vote: 
Average: 3 (4 votes)
To prevent automated spam submissions leave this field empty.

      ಇದು ಅನೇಕ ವರ್ಷದ ಕೆಳಗೆ ಮಲೆನಾಡಿನಲ್ಲಿ ನಡೆದ ಸಂಗತಿ. ಶಾಮ ಭಟ್ಟರು ಶೃಂಗೇರಿಯ ಒಬ್ಬ ಪಟಾಪಟಿ ಬ್ರಾಹ್ಮಣ. ಮಾತುಗಾರಿಕೆಯಲ್ಲಿ ಎತ್ತಿದ ಕೈ. ತೋರು ಬೆರಳು ಮತ್ತು ಮಧ್ಯದ ಬೆರಳ ಮಧ್ಯೆ ಬ್ರಿಸ್ಟಾಲ್ ಸಿಗರೆಟ್ ಹಚ್ಚಿ ಹಿಡಿದು ಕೈಯ್ಯನ್ನು ಮುಷ್ಟಿಮಾಡಿ ಸಿಗರೇಟನ್ನು ತುಟಿಗೆ ತಾಗಿಸದೆ ಮುಷ್ಟಿಯ ಮೇಲ್ತುದಿಯಿಂದಲೇ ಸಿಗರೇಟು ಎಳೆಯುತ್ತಾ ಪ್ರತಿಯೊಂದು ವಿಷಯದ ಬಗ್ಗೆ ಅವರಾಡುವ ಪಟಾಪಟಿ ಮಾತು ಕೇಳಲು (ಹಾಗು ನೋಡಲು) ಚಂದ.

      ಆಗ ಉತ್ತರದಲ್ಲೆಲ್ಲೋ ಸೋತು ಬಂದಿದ್ದ ಇಂದಿರಾ ಗಾಂಧಿ ಮರುಜನ್ಮ ಪಡೆಯಲು ನಿಂತಿದ್ದು ನಮ್ಮ ಚಿಕ್ಕಮಗಳೂರು ಕ್ಷೇತ್ರದಲ್ಲೆ.

ಲೇಖನ ವರ್ಗ (Category): 

ವಸ್ತ್ರಪುರಾಣ

field_vote: 
Average: 5 (1 vote)
To prevent automated spam submissions leave this field empty.

ವಸ್ತ್ರವೆನ್ನುವುದು ಈಗ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿರುವುದನ್ನು ಕಾಣುತ್ತೇವೆ.

ಇಲ್ಲಿ ಅಂಥ ಯಾವುದೋ ವಿವಾದದ ಬಗ್ಗೆ ನಾನು ಇಲ್ಲಿ ಹೇಳಿ ನಿಮ್ಮ ತಲೆ ಹಾಳು ಮಾಡುವುದಿಲ್ಲ ಎಂದು ಕೀಲಿಮಣೆಯ ಮೇಲೆ ಆಣೆ ಮಾಡಿ ಹೇಳುತ್ತೇನೆ.

ವಸ್ತ್ರಪುರಾಣವನ್ನು ಕೈಗೆತ್ತಿಕೊಂಡಾಗ ಕಾಣುವುದು ಸ್ತ್ರೀಲಿಂಗವೇ ಅಂದರೆ ನೀವು ತಪ್ಪು ತಿಳಿದುಕೊಳ್ಳಬಾರದು.

ಲೇಖನ ವರ್ಗ (Category): 

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೧

field_vote: 
No votes yet
To prevent automated spam submissions leave this field empty.
ಏನು ರಂಗಣ್ಣ ತುಂಬಾ ದಿನದಿಂದ ಪತ್ತೇನೆ ಇಲ್ಲ, ಎಲ್ಲಿ ಹೋಗಿತ್ತೋ ಸವಾರಿ. ಗೌಡ್ರು ಗದ್ದೆ ಕಡೆ ಹೋಗ್ತಿದ್ದಾಗ ಸಿಕ್ಕ ರಂಗಣ್ಣನ ಕೇಳಿದ್ರು. ಹೂಂ ಗೌಡ್ರೆ, ಪ್ಯಾಟೆಲಿ ಸ್ವಲ್ಪ ಕೆಲ್ಸ ಇತ್ತು, ಹಂಗಾಗಿ ಅಲ್ಲೇ ಇದ್ದೆ. ಅದೇನ್ಲ ಅಂತ ಕೆಲ್ಸ? ಅದೆಂತದೋ ಹೋಟ್ಲು ಓಪನ್ ಮಾಡ್ತೀಯಂತೆ ಅದ್ಕಾ? ಅದೇ ಗೌಡ್ರೆ, ರೆಸಾರ್ಟ್ ಅಂತ, ಅದ್ಕೆ ಸ್ವಲ್ಪ ಓಡಾಡ್ತಿದೀನಿ ಓ, ಅದೇನೋ ಸರ್ಕಾರ ಬೀಳಸ್ಬೇಕು ಅಂದ್ರೆ ರಾತ್ರಿ ರಾತ್ರಿನೇ ರಾಜಹಂಸದಲ್ಲಿ ಓಡಿಹೋಗಿ ಡೀಲ್ ಮಾಡ್ಕೋತಾ ಇದ್ರಲ್ಲ ಅಂತದ? ಅಲ್ಲ ಗೌಡ್ರೆ, ಬೆಂಗಳೂರಲ್ಲಿ ಅದೇನೋ ಸಾಪ್ಟೆರ್ ಅಂತಾರಲ್ಲ, ಅಲ್ಲಿ ಕೆಲ್ಸ ಮಾಡ ಹೈಕ್ಳುಗಳು ಕಿತ್ಕೊಂಡು ಕಾಸು ಖರ್ಚು ಮಾಡ್ತಾವಂತೆ ಇಂಥದಕ್ಕೆ, ಅದ್ಕೆ ಅದ್ನ ಹಾಕಿ ನಾನು ನಾಕು ಕಾಸು ಮಾಡನ ಅಂತ. ಅಲ್ಲ ಕಣ್ಲ, ಊರೋರು ಹೊಟ್ಟೆಗೆ ಹೊಡೆದು ಇಂಥ ಹಲ್ಕಾ ಕೆಲ್ಸ ಮಾಡೋಕೆ ನಿಂಗೆ ಹೆಂಗಾದ್ರೂ ಮನ್ಸು ಬಂತ್ಲಾ? ನಾನೇನು ಮಾಡ್ದೆ ಗೌಡ್ರೆ, ಅವ್ರಿಗೆ ಅವ್ರ ಕಾಸು ಕೊಟ್ಟಿದೀನಲ್ಲ.
ಲೇಖನ ವರ್ಗ (Category): 

ಗೌಡ್ರು ರಂಗಣ್ಣ ಮತ್ತೆ ರಾಜಕೀಯ - ೧

field_vote: 
No votes yet
To prevent automated spam submissions leave this field empty.

ಏನು ರಂಗಣ್ಣ ತುಂಬಾ ದಿನದಿಂದ

ಲೇಖನ ವರ್ಗ (Category): 

ಸೈಕಲ್ಲೂ ಗ್ಲೋಬಲ್ ವಾರ್ಮಿಂಗೂ

ಸ್ವಲ್ಪ ದಿನದ ಹಿಂದೆ ಶೇವಿಂಗ್ ಪುರಾಣ ಬರೆದು ನನ್ನ ಗೆಳೆಯರಿಗೆ ಲಿಂಕ್ ಕಳ್ಸಿದ್ದೆ, ಕಥೆ ಓದಿದ ಸೌಜ 'ನಾನು ಚಾಕಲೇಟ್ ವೆಂಕನ ಹತ್ರನೇ ಕೊಟ್ಟಿದ್ದೆ, ಬಹುಷ ಧೋಪ ಹಾಗೆ ಮಾಡಿರಬೇಕು' ಅಂತ ರಿಪ್ಲೇ ಮಾಡಿದ.

ಲೋ, ಅದು ಕಥೆ ಕಣೋ ಅಂದಾಗ ಸುಮ್ನಾದ.

ಅದಾಗಿ ಸ್ವಲ್ಪ ದಿನಾ ಆದ್ಮೇಲೆ ಅಂದ್ರೆ ಮೊನ್ನೆ ಭಾನುವಾರ ಫೋನ್ ಮಾಡಿದೆ. 'ಇಲ್ಲೇ ಎಲ್ಲೋ ಬಂದಿದ್ದಂತೆ ಕರೆದಿದ್ರೆ ನಾನೂ ಬರ್ತಿದ್ದೆ'

ಇಲ್ವೋ, ಕಮರ್ಷಿಯಲ್ಗೆ ಹೋಗಿದ್ವಿ ಹಂಗೆ ಕುಳ್ಡನ್ನ ಬಿಟ್ಟು ಹೊರಟೆ

ಸರಿ, ಮತ್ತೇನು ವಿಶೇಷ

field_vote: 
Average: 3.3 (3 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಮರೆವು..

field_vote: 
Average: 4.1 (11 votes)
To prevent automated spam submissions leave this field empty.
ಮುಂಜಾನೆ ಇನಾ ಓದಿದ್ದೆಲೇ ..ಅಲ್ಲೆ ಬರೀಬೇಕಾದ್ರ ಮರ್ತ್ ಬಿಟ್ಟೆ ನೋಡು..
ಅಲಾ ಇವನ.. ಪರ್ಸ ಮನ್ಯಾಗ ಮರ್ತ್ ಬಂದೆ ನೋಡು..
ನೀ ಕೊಟ್ಟೀರು ಆಮೇಲೆ ಕೊಡ್ತೆನಿ ನಾನು..
ಅಯ್ಯ..ಉಪ್ಪ ಹಾಕೋದ ಮರ್ತೆ ನೋಡ್ಪಾ..
ಹಿಂಗ ದಿನಾಲೂ ಎಷ್ಟೋ ಸರ್ತೆ ಮರೆವಿನ ಪ್ರಸಂಗಗಳನ್ನ ವ್ಯಾಖ್ಯಾನ ಮಾಡೋದನ್ನ ಕೇಳಿರ್ತೆವಿ,ಮಾಡಿರ್ತೆವಿ, ಅಲಾ.. ?ಈ ಮರೆವು ಅನ್ನೋದು ಎನದಲಾ ಅದು ಒಂದು ರೀತಿ ನಮ್ಮ ಜೀವನದ ಅವಿಭಾಜ್ಯ ಅಂಗ ಆಗಿ ಬಿಟ್ಟದ.ಎಷ್ಟು ಅಂದ್ರ, ಆಧುನಿಕ ಜಗತ್ನ್ಯಾಗ ಈ ಮರೆವನ್ನ ಗೆದ್ದವರು ಇಲ್ಲೇ ಇಲ್ಲ ಅನ್ನೋ ಅಷ್ಟು !
ಲೇಖನ ವರ್ಗ (Category): 

ನಿತ್ಯಾನಂದರ ನಗು

field_vote: 
Average: 5 (1 vote)
To prevent automated spam submissions leave this field empty.

  ಪೋಲೀಸರು ಬಂಧಿಸಿ ಕರೆದೊಯ್ಯುತ್ತಿದ್ದಾಗಲೂ ನಿತ್ಯಾನಂದರು ನಗುತ್ತಿದ್ದರು! ಏಕಿರಬಹುದು?
  ನಾನು ನಾಲ್ಕು ಕಾರಣಗಳನ್ನು ಊಹಿಸಿದ್ದೇನೆ:
  * ಅಣ್ಣಾವ್ರ ಜನ್ಮದಿನಕ್ಕೆ ಮೂರು ದಿನ ಮೊದಲಷ್ಟೇ ಬಂಧನಕ್ಕೊಳಗಾದ ನಿತ್ಯಾನಂದರಿಗೆ ಅಣ್ಣಾವ್ರ ಅಭಿನಯದ ಈ ಹಾಡು ನೆನಪಿಗೆ ಬಂದಿರಬಹುದು: ’ನಗುನಗುತಾ ನಲೀ ನಲೀ, ಏನೇ ಆಗಲೀ’.
  * ನಿತ್ಯಾನಂದ ಅಂತ ಹೆಸರಿಟ್ಟುಕೊಂಡಮೇಲೆ ಸದಾ(ನಂದ ಗೌಡರಹಾಗೆ) ನಗುತ್ತಲೇ ಇರಬೇಕಲ್ಲವೆ?
  * ತನ್ನ ಮುಖ ನೋಡಿದ ಭಕ್ತ-ಭಕ್ತೆಯರು, ’ಆ ಮೊಗವು, ಎಂಥಾ ಚೆಲುವು, ಮನವಾ ಸೆಳೆವಾ ಬಂಗಾರದ ಹೂವು’, ಎಂದು ಈಗಲೂ ಸಂಭ್ರಮಿಸುತ್ತಾರೆ/ಸಂಭ್ರಮಿಸಲಿ ಎಂಬ ಭ್ರಮೆ ಇರಬಹುದು.

ಲೇಖನ ವರ್ಗ (Category): 

ಕರೆಂಟ್ ಕಟಕಿಗಳು

field_vote: 
Average: 5 (2 votes)
To prevent automated spam submissions leave this field empty.

ಸಾಲವನು ಕೊಂಬಾಗ ಹಾಲೋಗರುಂಡಂತೆ
(ಸರ್ವಜ್ಞ)

ವಿದ್ಯುತ್ತು ಇದ್ದಾಗ ಗೆದ್ದೆತ್ತು ಸಿಕ್ಕಂತೆ
ವಿದ್ಯುತ್ತು ಕೈಯ ಕೊಟ್ಟಾಗ ಆ ಎತ್ತು
ಗುದ್ದಿ ಹೋದಂತೆ ಕರ್ಮಜ್ಞ

ಕಣ್ಣಾಮುಚ್ಚೇ ಕಾಡೇಗೂಡೇ
(ಅನಾಮಿಕ)

ಕಣ್ಣಾಮುಚ್ಚೇ ಕತ್ತಲ ಗೂಡೇ
ವಿದ್ಯುತ್ ಮತ್ತೆ ಹೊರಟೇಹೋಯ್ತು
ನಾನದರಾಸೆ ಬಿಟ್ಟೇಬಿಟ್ಟೆ
ನೀವೂ ಕ್ಯಾಂಡಲ್ ಹಚ್ಚಿಟ್ಕೊಳ್ಳಿ

ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ
(ಬಸವೇಶ್ವರ ವಚನ)

ಲೇಖನ ವರ್ಗ (Category): 

ಎಂಥಾ ಲೋಕವಯ್ಯಾ! ಇದು ಎಂಥಾ ಲೋಕವಯ್ಯಾ!

field_vote: 
Average: 4 (4 votes)
To prevent automated spam submissions leave this field empty.

(’ಸುಧಾ’ ೨೦೧೦ರ ಹಾಸ್ಯ ಸಂಚಿಕೆಯಲ್ಲಿ ಪ್ರಕಟಿತ ವಿಡಂಬನೆ)

ಟಿವಿಯ ಎಲ್ಲಾ ಚಾನೆಲ್‌ಗಳ ಎಲ್ಲಾ ಕಾರ್ಯಕ್ರಮಗಳೂ ತುಂಬಾ ಚೆನ್ನಾಗಿ ಮೂಡಿಬರುತ್ತಿವೆ. ತಂದೆತಾಯಂದಿರು ಮಕ್ಕಳನ್ನು ಶಾಲೆಗೆ ಕಳಿಸುವ ಅಗತ್ಯವೇ ಇಲ್ಲ. ಟಿವಿ ಆನ್ ಮಾಡಿ ಮಕ್ಕಳ ಕೈಯಲ್ಲಿ ರಿಮೋಟ್ ಕೊಟ್ಟು ಟಿವಿಯ ಮುಂದೆ ಕೂರಿಸಿದರೆ ಸಾಕು. ಶಾಲೆಯಲ್ಲಿ ಕಲಿತುಕೊಳ್ಳಲು ಸಾಧ್ಯವಾಗದ್ದನ್ನೂ ಮಕ್ಕಳು ಟಿವಿ ನೋಡಿ ಕಲಿತುಕೊಂಡುಬಿಡುತ್ತವೆ. ಅವು ಒಂದೊಂದು ವರ್ಷ ಟಿವಿ ನೋಡಿದಂತೆಲ್ಲ ಅವಕ್ಕೆ ಒಂದೊಂದು ತರಗತಿಯ ತೇರ್ಗಡೆ ಪ್ರಮಾಣಪತ್ರವನ್ನು ಸರ್ಕಾರವು ನೀಡುತ್ತಹೋದರಾಯಿತು. ಇದರಿಂದಾಗಿ ಸರ್ಕಾರಕ್ಕೆ ಶಿಕ್ಷಣದ ಬಾಬ್ತು ಹಣ ಉಳಿತಾಯವಾಗುತ್ತದೆ. ಆ ಹಣವನ್ನು ಮಠಮಾನ್ಯಗಳಿಗೆ ದಾನ ನೀಡಲು ಬಳಸಿಕೊಳ್ಳಬಹುದು.

ಲೇಖನ ವರ್ಗ (Category): 

ಬೆಟ್ಟ ನಿಟ್ಟುಸಿರು ಬಿಟ್ಟಾಗ

ಐಸ್ಲಂಡ್ ಒಂದು ಪುಟ್ಟ ದೇಶ. ವಿರಳವಾಗಿ ಕೇಳುವ ಹೆಸರು. ಅಂತರ ರಾಷ್ಟ್ರೀಯ ಬ್ಯಾನ್ಕುಗಳನ್ನು ಬಿಟ್ಟರೆ ಹೇಳಿಕೊಳ್ಳುವಂಥ ಉದ್ದಿಮೆಗಲಿಲ್ಲ. ಆದರೂ ಇತ್ತೀಚಿನ ಹಣಕಾಸು ಬಿಕ್ಕಟ್ಟಿನ ವಿದ್ಯಮಾನದವರೆಗೂ ವಿಶ್ವದ ಶ್ರೀಮಂತ ರಾಷ್ಟ್ರ ಗಳಲ್ಲಿ ಒಂದು. ಒಂದು ಲಕ್ಷ ಚದರಡಿಯ, ಸುಮಾರು ಮೂರು ಲಕ್ಷ ಜನಸಂಖ್ಯೆಯ ಯೂರೋಪಿನ ಈ ದ್ವೀಪ ಯಾರ ಕಣ್ಣಿಗೂ ಬೀಳದೆ (ಅಮೆರಿಕೆಯ ಹಾಗೆ ಎಲ್ಲಾ ಕಡೆ ಮೂಗು ತೂರಿಸದೆ)  ತನ್ನ ಪಾಡಿಗೆ ತಾನಿರುವ ದೇಶ. ಎಂಭತ್ತರ ದಶಕದಲ್ಲಿ ಪರಮಾಣು ಅಸ್ತ್ರಗಳ ನಿಯಂತ್ರಣಕ್ಕೆ ಅಮೇರಿಕ ಮತ್ತು ರಷ್ಯ ದೇಶಗಳ ನಾಯಕರು ತಮ್ಮ ಮಾತುಕತೆಗೆ ಆರಿಸಿಕೊಂಡಿದ್ದು ಐಸ್ಲೆಂಡ್ ದೇಶದ ರಾಜಧಾನಿಯಾದ "ರೇಕ್ಯವಿಕ್" ನಗರವನ್ನು.ರೇಗನ್, ಗೋರ್ಬಚೋಫ್ ನಡುವಿನ ಮಾತುಕತೆ ನಂತರ ಮತ್ತೊಮ್ಮೆ ಐಸ್ಲೆಂಡ್ ಸುದ್ದಿಯಲ್ಲಿ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಅದು..... ಅದಲ್ಲ....! ಮರಾಯ್ರೆ.............. ಇದು!!!!!

ಹೋಯ್ ಇದು.... ಅದಲ್ವಾ?

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಡಜನ್ನಿಗೆ ಹತ್ತು !!!!!ಛೇ! ಛೆ!! ಫಸ್ ಗಯಾ

"ಪಪ್ಪಾ ಒಂದೈವತ್ರುಪಾಯಿ ಕೊಡು" ಎಂದ ಮಗರಾಯ.
"ನಾನ್ಕೊಡಲ್ಲ, ಅಲ್ಲ ಐವತ್ರುಪಾಯಿ ಏನಕ್ಕೆ ಹೇಳು ಮೊದಲು?" ಪಪ್ಪ ಉವಾಚ.
"ಕೊಡ್ತೀಯಾ ಇಲ್ಲವಾ ಹೇಳು ಮೊದಲು" ಮಗನದ್ದು ಒಂದೇ ಮಾತು.
"ಇಲ್ಲವೇ ಇಲ್ಲ" ಅಪ್ಪನ ಖಂಡಿತ ಉತ್ತರ.
"ಹೋಗ್ಲಿ ಬಿಡು ಮಮ್ಮಿ ಹತ್ತಿರ ತಗೋತೀನಿ ಬಿಡು" ಮಗನ ಮಾತಿನಲ್ಲಿ ಖಚಿತತೆ.
"ಹೇಗೆ, ಹೇಗೆ ತಗೋತೀಯಾ?" ತಂದೆಯ ನೋಟದಲ್ಲಿ ಅನಿಶ್ಚತತೆ.
"ಪಕ್ಕದ್ಮನೆ ಅಂಕಲ್ ಹತ್ತಿರ ಅವಳು " ಇವತ್ತು ನೀವು ತುಂಬಾನೇ ಸ್ಮಾರ್ಟಾಗಿ ಕಾಣ್ತಾ ಇದ್ದೀರಾ.." ಅಂತ ಇನ್ನು ಏನೇನೊ ಮಾತಾಡ್ತಾ ಇರೋದನ್ನ ನೋಡಿದ್ದೆ, ಬೆಳಿಗ್ಗೆ.." ಮಗ ನಿಜವಾಗಿಯೂ ಮರಿ ಪತ್ತೆದಾರ.

field_vote: 
Average: 4.7 (3 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಒಂದು ಶೇವಿಂಗ್ ಪುರಾಣ

ಒಂದೆರಡು ದಿನ ಶೇವ್ ಮಾಡದೇ ಬಿಟ್ಟಿದ್ದರಿಂದ ಗಡ್ಡದ ಕೂದಲುಗಳು ತಲೆ ಕೂದಲಿಗೆ ಪೈಪೋಟಿ ಕೊಡುತ್ತಿದ್ದವು. ಶನಿವಾರ ಬೇರೆ, ವೀಕೆಂಡ್. ಏನಾದರಾಗಲಿ ಇವತ್ತು ಶೇವ್ ಮಾಡೇ ತೀರಬೇಕು ಅಂದ್ಕೊಂಡೆ. ಪಕ್ಕದ ರೂಮಲ್ಲಿ ಮೀಟರ್, ಬಾಬು ಇನ್ನೂ ಮುಸುಕಿ ಹಾಕಿ ಮಲ್ಕೊಂಡಿದ್ರು.

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಸೂರಿನ ಕೂಗು

ಕೆಲಸ ನಡೆಯದೇ ಇದ್ದಾಗ, ತಾನು ಬಯಸಿದ್ದು ಸಿಗದೇ ಇದ್ದಾಗ "ಅತ್ತು ಕರೆದು ಮೈಯ್ಯನ್ನೆಲ್ಲಾ ಪರಚಿಕೊಳ್ಳುವುದು" ಮಗು. ಕೆಲವರು ಕೈಗೆ ಸಿಕ್ಕಿದ್ದನ್ನು ಗೋಡೆಗೆ ಅಪ್ಪಳಿಸಿ ತಮ್ಮ ಕೋಪವನ್ನು  ವ್ಯಕ್ತಪಡಿಸು ತ್ತಾರೆ. ಇನ್ನೂ ಕೆಲವರು ಶತಪಥ ಹಾಕುತ್ತಾ ತಮ್ಮ ಕೋಪವನ್ನು ನೆಲದ ಮೇಲೆ, ಪಾಪಿ ಶರೀರ ಹೊತ್ತ ಪಾದಗಳ ಮೇಲೆ ತೋರಿಸುತ್ತಾರೆ, ಇಲ್ಲಾ ಕೈಗೆ ಸಿಗುವ ಮಕ್ಕಳ ಕಿವಿ ಹಿಂಡಿ, ಅವರ ಬಾಯಿಂದ ಸಪ್ತ ಸ್ವರ ಹೊರಡಿಸಿ ಕೋಪ ತೀರಿಸಿಕೊಳ್ಳುತ್ತೇವೆ. ಕೋಪ ಎನ್ನುವುದೇ ಹೀಗೆ. ವ್ಯಕ್ತಪಡಿಸಲೇ ಬೇಕು. ಇಲ್ಲದಿದ್ದರೆ ಹಿಡಿದಿಟ್ಟುಕೊಂಡ ಕೋಪ depression ಆಗಿಯೋ ಮತ್ತೇನಾದರೂ ಆಗಿಯೋ ಪರಿಣಮಿಸುತ್ತದೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಹೊಸ ಬಿಸಿಬಿಸಿ ಸುದ್ದಿಗಳು

field_vote: 
Average: 5 (1 vote)
To prevent automated spam submissions leave this field empty.

ದೇಶದ ಆಡಳಿತ ಚುಕ್ಕಾಣಿ ಹಿಡಿಯಲು ಚುನಾವಣೆಗಳು ನಡೆದವು. ಅಭ್ಯರ್ಥಿಗಳು ಹಣ, ಹೆಂಡದ ಹೊಳೆ ಹರಿಸದೇ ಪ್ರಾಮಾಣಿಕತೆಯಿಂದಲೇ ಆಯ್ಕೆಯಾದರು. ಮತದಾರ ಪ್ರಭುಗಳು ಸಹ ಏನನ್ನು ಕೇಳದೆ ಮತ ನೀಡಿದರು. ಎಲ್ಲಿಯೂ ಎನೊಂದೂ ಗಲಭೆಯಾಗದೆ ಶಾಂತಿಯುತವಾಗಿ ನಡೆದ ಚುನಾವಣೆಯಲ್ಲಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆಯೇ ಇರಲಿಲ್ಲ.
ದೇಶದ ಸರ್ವತೋಮುಖ ಅಭಿವೃದ್ಧಿಯಾಗುವವರೆಗೆ ವೇತನವನ್ನೇ ಪಡೆಯುವದಿಲ್ಲ ಎಂದು ಎಲ್ಲ ಸಂಸದರು ಸಂಸತ್ತಿನಲ್ಲಿ ಪಟ್ಟು ಹಿಡಿದಿದ್ದಾರೆ. ವಿಷಯ ಸಂಸತ್ತಿನಲ್ಲಿ ಸರ್ವಾನುಮತದಿಂದ ಅಂಗೀಕಾರವಾಗಿದೆ. ಇದೀಗ ಯಾವ ಸಂಸದರಿಗೂ ವೇತನವೇ ಇಲ್ಲ. ತಮಗೆ ದೊರೆಯುವ ಎಲ್ಲ ಸೌಲಭ್ಯಗಳನ್ನೂ ಸಂಸದರು ನಿರಾಕರಿಸಿದ್ದಾರೆ. ಇವರ ಪಟ್ಟು ನೋಡಿ ದೇಶದ ಎಷ್ಟೋ ನಾಗರಿಕರು, ಪಕ್ಷದ ಕಾರ್ಯಕರ್ತರಿಗೆ ಹುಚ್ಚೇ ಹಿಡಿದಿದೆ.

ಲೇಖನ ವರ್ಗ (Category): 

ನಗುವೊಂದು ರಸಪಾಕ

field_vote: 
Average: 4.1 (9 votes)
To prevent automated spam submissions leave this field empty.

          ಹಿಂದೆ ಚೀನಾ ದೇಶದಲ್ಲಿ ನಗುವ ಸಂತ(laughing monks)ರೆಂದೇ ಪ್ರಸಿದ್ಧರಾದ ಮೂವರು ಪರಿವ್ರಾಜಕರಿದ್ದರು. ಮೂವರು ಒಟ್ಟಿಗೆ ನಗುತ್ತ ನಗಿಸುತ್ತ ತಮ್ಮ ಜೀವಮಾನವನ್ನೇ ಕಳೆದರು. ಸಂತೆ, ಮಾರುಕಟ್ಟೆ ಮುಂತಾದ ಜನನಿಬಿಡ ಪ್ರದೇಶದಲ್ಲಿ ಎತ್ತರದ ಜಾಗವನ್ನು ಏರಿ ಮೂವರು ಅವರ ಪಾಡಿಗೆ ಅವರು ನಗುತ್ತಿದ್ದರು. ನಗು ಸಾಂಕ್ರಾಮಿಕ ಅನ್ನುತ್ತಾರಲ್ಲ, ಇವರನ್ನು ನೋಡಿ ಜನ ನಗುತ್ತಿದ್ದರು. ಕ್ರಮೇಣ ಅವರ ಪ್ರಸಿದ್ಧಿ ಬೆಳೆಯಿತು. ಅವರು ಹೋದಲ್ಲೆಲ್ಲ ನಗೆಯ ಅಲೆಗಳು ಏಳತೊಡಗಿದವು. ಈ ನಡುವೆ ಮೂವರಲ್ಲಿ ಓರ್ವ ಸಂತ ಮರಣಹೊಂದಿದ. ಸಾಯುವ ಮೊದಲು ’ನಾನು ಜೀವಮಾನದಲ್ಲಿ ಒಮ್ಮೆಯೂ ಸ್ನಾನ ಮಾಡಿಲ್ಲ, ಆದ್ದರಿಂದ ಚಿತೆಯಲ್ಲಿ ಸುಡುವ ಮೊದಲು ನನ್ನ ದೇಹಕ್ಕೆ ಸ್ನಾನ ಮಾಡಿಸಬಾರದು, ನಾನು ಉಟ್ಟ ಬಟ್ಟೆಯನ್ನು ಬಿಚ್ಚಬಾರದು’ ಎಂದು ಆತ ಉಳಿದಿಬ್ಬರಿಗೆ ಸೂಚನೆ ಕೊಟ್ಟಿದ್ದ. ಸರಿ, ಆತನ ಇಚ್ಛೆಯಂತೇ ಸಾಗಿದ ಅಂತಿಮಕ್ರಿಯೆಯಲ್ಲಿ ಬಾರಿ ಜನಸ್ತೋಮ ನೆರೆದಿತ್ತು. ಚಿತೆಗೆ ಅಗ್ನಿಸ್ಪರ್ಶ ಮಾಡಿದೊಡನೆಯೆ ಚಿತೆಯಿಂದ ಡಂ ಡಂ ಎಂಬ ಸಿಡಿಮದ್ದುಗಳ ಸ್ಫೋಟದ ಶಬ್ದ ಹೊರಡಲಾರಂಬಿಸಿತು. ಜನ ಗಾಬರಿಯಾಗಿ ಅತ್ತಿತ್ತ ಓಡಿ ಅವಿತುಕೊಂಡು ನೋಡತೊಡಗಿದರು. ಆ ಸಂತ ತನ್ನ ಬಟ್ಟೆಯಲ್ಲಿ ಪಟಾಕಿಗಳನ್ನು ಬಚ್ಚಿಟ್ಟುಕೊಂಡಿದ್ದ. ನೋಡನೋಡುತ್ತಲೆ ಸಿಡಿಮದ್ದು ಸುಡುಬಾಣಗಳು ಸ್ಫೋಟಗೊಂಡು ಸದ್ದು ಮಾಡುತ್ತ, ಆಕಾಶದಲ್ಲಿ ಬೆಳಕಿನ ವಿವಿಧ ಚಿತ್ತಾರಗಳನ್ನು ಮೂಡಿಸುತ್ತ ಹಬ್ಬದ ವಾತಾವರಣವನ್ನು ಮೂಡಿಸಿಬಿಟ್ಟವು. ಜನ ಮತ್ತೆ ನಗತೊಡಗಿದರು. ಸಂತ ಸಾವಿನಲ್ಲೂ ನಗಿಸಿದ್ದ.

ಲೇಖನ ವರ್ಗ (Category): 

ಬೆಂಗಳೂರಿಗರಿಗೆಲ್ಲಿ ಬೆಳದಿಂಗಳ ಭಾಗ್ಯ?

field_vote: 
Average: 4.5 (2 votes)
To prevent automated spam submissions leave this field empty.

          ಕವಿ ರವೀಂದ್ರನಾಥ ಟಾಗೂರರು ಒಮ್ಮೆ ತಮ್ಮ ಕೋಣೆಯಲ್ಲಿ ಮೊಂಬತ್ತಿಯ ಬೆಳಕಿನಲ್ಲಿ ಏನನ್ನೋ ಓದುತ್ತ, ಇನ್ನೇನನ್ನೋ ಚಿಂತಿಸುತ್ತ ಕುಳಿತಿದ್ದರು. ಮೊಂಬತ್ತಿಯ ಮೇಣ ಕರಗಿ ಜ್ವಾಲೆ ಆರಿಹೋಯಿತು, ಕೋಣೆಯಲ್ಲಿ ಕತ್ತಲು ವ್ಯಾಪಿಸಿತು. ಆಗ ಕಿಟಕಿಯ ಸಂದಿನಿಂದ ಕೋಣೆಯೊಳಗೆ ಇಣುಕಿದ ಬೆಳದಿಂಗಳ ಎಳೆಯೊಂದು ರವೀಂದ್ರರನ್ನು ಸೆಳೆಯಿತು. ಕೋಣೆಯಿಂದ ಹೊರಬಂದ ರವೀಂದ್ರರ ಕವಿಹೃದಯ ಬೆಳದಿಂಗಳ ಸೊಬಗಿಗೆ ಸಂಪೂರ್ಣ ಸೂರೆಗೊಂಡಿತು. ಕವಿ ತನ್ನನ್ನು ತಾನು ಮರೆತರು. ಹುಣ್ಣಿಮೆಯ ಹಾಲುಬೆಳದಿಂಗಳಿಗೆ ಸೋಲದ ಮನೆವೆಲ್ಲಿದೆ ಹೇಳಿ. ಅಂತಹ ಸೋತ ಮನವೇ ’ಗೀತಾಂಜಲಿ’ಯಂತಹ ಮೇರು ಕೃತಿಯನ್ನು ಸೃಷ್ಟಿಸಬಲ್ಲದು. ಪ್ರೇಮಕವಿಗಳನ್ನು ಬೆಳದಿಂಗಳು ಕಾಡಿದಷ್ಟು ಇನ್ನಾರೂ ಕಾಡಿರಲಿಕ್ಕಿಲ್ಲ.

ಲೇಖನ ವರ್ಗ (Category): 

ನಾಲ್ಕೇ ಸಾಲಿನಲ್ಲಿ ನಾಲ್ಕು ತಲೆಮಾರಿನ ಕಥೆ !

field_vote: 
No votes yet
To prevent automated spam submissions leave this field empty.

ೀಗೊಂದು ತಲೆಮಾರಿನ ಕಥೆ

ಅಂದು: ಸದಾಶಿವರಾಯರು ಮನೆಯವರ ವಿರೋಧ ಲೆಕ್ಕಿಸದೆ ಪರಜಾತಿ ಯುವತಿಯನ್ನು ’ಪ್ರೇಮಿಸಿ’ ಮದುವೆಯಾಗಿ ದಿಟ್ಟ ಹೆಜ್ಜೆಯನ್ನಿಡುತ್ತ ಎಲ್ಲರ ಹುಬ್ಬೇರುವಂತೆ ಮಾಡಿದ್ದರು !

ನಂತರ: ಸದಾಶಿವರಾಯರ ಮಗ ಹೊರದೇಶದಲ್ಲಿದ್ದುಕೊಂಡು ಭಾರತದಲ್ಲಿ ’ಅಪ್ಪ-ಅಮ್ಮ ನೋಡಿದ’ ಹುಡುಗಿಯನ್ನು ಮದುವೆಯಾಗಿ ಸಹೋದ್ಯೋಗಿಗಳ ಹುಬ್ಬೇರುವಂತೆ ಮಾಡಿದ್ದರು !!

ಈಗ: ಸದಾಶಿವರಾಯರ ಮೊಮ್ಮಗ "ಹುಡುಗಿ"ಯನ್ನು ಮದುವೆಯಾಗಿ ಹಲವಾರು ಮಂದಿಯ ಹುಬ್ಬೇರುವಂತೆ ಮಾಡಿದ್ದಾನೆ !!!

ಮುಂದೆ: ಸದಾಶಿವರಾಯರ ಮರಿಮಗ "ಮದುವೆಯಾಗಿ" ಮಾತೆ ಖುಷ್ಬೂದೇವಿ’ಯವರ ಅನುಯಾಯಿಗಳ ಕೆಂಗಣ್ಣಿಗೆ ಗುರಿಯಾಗಲಿದ್ದಾನೆ !!!!

ಅಂದು: ಸದಾಶಿವರಾಯರು ಮನೆಯವರ ವಿರೋಧ ಲೆಕ್ಕಿಸದೆ ಪರಜಾತಿ ಯುವತಿಯನ್ನು ’ಪ್ರೇಮಿಸಿ’ ಮದುವೆಯಾಗಿ ದಿಟ್ಟ ಹೆಜ್ಜೆಯನ್ನಿಡುತ್ತ ಎಲ್ಲರ ಹುಬ್ಬೇರುವಂತೆ ಮಾಡಿದ್ದರು !

ಲೇಖನ ವರ್ಗ (Category): 

ಚುನಾವಣಾ ಸ್ವಾರಸ್ಯಗಳು

field_vote: 
Average: 4.8 (4 votes)
To prevent automated spam submissions leave this field empty.

  ಈಚೆಗಷ್ಟೇ ಸಂಪನ್ನಗೊಂಡ ಬಿಬಿಎಂಪಿ (ಬೃಹತ್ ಬೆಂಗಳೂರು ಮಹಾನಗರಪಾಲಿಕೆ) ಚುನಾವಣೆಯ ಮತದಾನದ ದಿನ ನಾನು ಒಪ್ಪೊತ್ತಿಡೀ ಬೆಂಗಳೂರು ಮಹಾನಗರ ಸುತ್ತಾಡಿದೆ. ಯಾವುದೇ ಸಾರ್ವಜನಿಕ ಚುನಾವಣೆಯ ಮತದಾನದ ದಿನ ಇದು ನನ್ನ ಖಾಯಂ ಹವ್ಯಾಸ. ಅಂದು ನಾನು ಗಮನಿಸಿದ ಕೆಲವು ಸ್ವಾರಸ್ಯಕರ ಘಟನೆಗಳು ಇಂತಿವೆ:

  ಬೆಳಗ್ಗೆ ಮತದಾನ ಮಾಡಲು ನನ್ನ ಮತಗಟ್ಟೆಕಡೆ ಹೋಗುತ್ತಿದ್ದೆ.
  "ಸಾರ್, ಒಂದು. ನೆನಪಿರಲಿ", ಎಂದು ಯಾರೋ ಕೂಗಿಹೇಳಿದರು.
  ಬೆನ್ನಿಗೇ, "ಸಾರ್, ಎರಡು", ಎಂದು ಇನ್ನೊಂದು ಕಡೆಯಿಂದ ಧ್ವನಿ ಬಂತು.
  "ಮೂರು ಸಾರ್, ಮೂರು", ಮತ್ತೊಂದು ಆವಾಜ್.
  "ನನ್ನದು ನಾಲ್ಕನೇದಕ್ಕೆ", ಎಂದು ಹೇಳುತ್ತ ನಾನು ಮುಂದುವರಿದೆ.

ಲೇಖನ ವರ್ಗ (Category): 

ಯಾರಿಗೆ ಬೇಕು ಈ ಲೆಕ್ಕ ?

field_vote: 
Average: 4.2 (5 votes)
To prevent automated spam submissions leave this field empty.
ಾರಿಗೆ ಬೇಕು ಈ ಲೆಕ್ಕ
ಒಂದು ದಿನ ಹೀಗೆ ದಿಢೀರನೆ ಒಂದು ಯೋಚನೆ ಬಂತು. ಏನು ಅಂತೀರಾ?
ಜಗತ್ತಿನಲ್ಲಿ ಖ್ಯಾತನಾಮರ ಪ್ರತಿಮೆಗಳು ಎಷ್ಟಿವೆ ? 
ತಿಳಿದವರನ್ನು ಕೇಳೋಣವೆಂದುಕೊಂಡು ಗೂಗಲಿಸಿದೆ. ನನ್ನ ಹಾಗೇ ಯಾರಿಗೋ ಕುತೂಹಲ ಹೆಚ್ಚಾಗಿ ಈ ಪ್ರಶ್ನೆ ಕೇಳಿದ್ದಕ್ಕೆ ಒಬ್ಬರು ಏನೆಂದು ಉತ್ತರಿಸಿದ್ದಾರೆ ಗೊತ್ತೆ "ಕಳೆದ ಒಂದು ಘಂಟೆಯಲ್ಲಿ ಎಷ್ಟಿದ್ದವೋ ಅದಕ್ಕಿಂತ ಹೆಚ್ಚು" ಎಂದು. ಹೆಚ್ಚು ಕಮ್ಮಿ ಬೀರಬಲ್’ನ ಕಾಗೆಗಳ ಸಂಖ್ಯೆಯ ಕಥೆಯನ್ನು ನೆನಪಿಗೆ ತರಿಸುವಂತಹ ಉತ್ತರ. ಇರಲಿ, ಒಟ್ಟಾರೆ ನನಗೆ ಅರ್ಥವಾಗಿದ್ದು, ಪ್ರತಿ ಒಂದು ಘಂಟೆಯಲ್ಲಿ ಕನಿಷ್ಟ ಒಂದು ಪ್ರತಿಮೆಯಾದರೂ ಏಳುತ್ತದೆ ಎಂದು. ನಿಜವೋ ಸುಳ್ಳೋ ಗೊತ್ತಿಲ್ಲ.
ಗೂಗಲ್ ದೇವನಿಗೆ ತಿಳಿದಿಲ್ಲದ ಉತ್ತರವನ್ನು ಇನ್ಯಾರಿಂದಲಾದರೂ ಪಡೆಯೋಣ ಎಂದುಕೊಂಡೆ. ಯಾರ್ಯಾರನ್ನೋ ಕೇಳಿದೆ. ಯಾರಿಗೂ ಗೊತ್ತಿಲ್ಲ. ಒಬ್ಬರು "ಅಲ್ರೀ, ತೆಂಡೂಲ್ಕರ್ ಇದುವರೆಗೂ ಎಷ್ಟು ರನ್’ಗಳು ಮಾಡಿದ್ದಾನೆ ಕೇಳಿ. ಅಂಕಿ-ಅಂಶದ ಸಮೇತ ಹೇಳಬಲ್ಲೆ. ಅದು ಬಿಟ್ಟು ..." ಮತ್ತೊಬ್ಬ ಹಿರಿಯರು "ಅಶ್ವಥ್ ಎಷ್ಟು ಚಿತ್ರಗಳಲ್ಲಿ ನಟಿಸಿದ್ದಾರೆ ಅಂತ ಕೇಳಿ, ಬೇಕಿದ್ರೆ ಹೇಳ್ತೀನಿ... ಆದ್ರೆ...". ಹೋಗ್ಲಿ ಬಿಡಿ... ಎರಡೂ ದೊಡ್ಡ ಸಂಖ್ಯೇನೇ ! ಸದ್ಯಕ್ಕೆ ಆ ಎರಡೂ ವಿಷಯ ಬೇಕಿಲ್ಲ.
ಅದೃಷ್ಟವಶಾತ್ ಒಬ್ಬರಿಗೆ ತಿಳಿದಿತ್ತು ... ವಾವ್ .. ಅಂದಿರಾ? ... ತಡ್ಕೊಳ್ಳಿ ... ಅವರಿಗೆ ತಿಳಿದಿದ್ದು ಉತ್ತರವಲ್ಲ! ಇಂಥವರನ್ನು ಕೇಳಿ, ಅವರಿಗೆ ಗೊತ್ತಿರಬಹುದು ಅಂತ. ಜೊತೆಗೆ, ನಿಮಗೆ ತಿಳಿದ ಮೇಲೆ ನನಗೂ ಹೇಳಿ ಅಂದರು. 
ಅವರನ್ನು ಅರಸಿ ಹೋದೆ. ಇವರ ಹೇಳಿದ ಬೀದಿ ಅಂತೂ ಸಿಕ್ಕಿತು. ಮೂಲೆಯಲ್ಲಿ ಅಂಬೇಡ್ಕರ್ ಅವರ ಪ್ರತಿಮೆ ಕೂಡ ಇತ್ತು. ಯಾರನ್ನೋ ವಿಳಾಸ ಕೇಳಿದೆ. ನೇರವಾಗಿ ಹೋಗಿ. ಅಲ್ಲೊಂದು ಹಳೇ ಅಂಬಾಸಡರ್ ಕಾರ್ ನಿಂತಿರುತ್ತೆ. ಅಲ್ಲೇ ಅವರ ಮನೆ. ಅನುಮಾನ ಬಂತು ಕೇಳಿಯೇಬಿಟ್ಟೆ "ಇವತ್ತು ಆ ಕಾರ್ ಅಲ್ಲಿ ಇಲ್ದೇ ಇದ್ರೆ?". ಕೆಕ್ಕರಿಸಿ ನೋಡಿ ಹೇಳಿದರು "ನಾಲ್ಕೂ ಚಕ್ರಗಳಲ್ಲಿ ಗಾಳಿ ಇಲ್ಲದೆ, ತುಕ್ಕು ಹಿಡಿದ ಆ ಕಾರ್ ಹತ್ತು ವರ್ಷದಿಂದ್ಲೂ ಅಲ್ಲೇ ನಿಂತಿದೆ. ಈಗಲೂ ಅಲ್ಲೇ ಇರುತ್ತೆ ಅನ್ನೋ ಗ್ಯಾರಂಟಿ ಕೊಡಲೇನು?". ತೆಪ್ಪಗೆ ಜಾಗ ಖಾಲಿ ಮಾಡಿದೆ.
ಮನೆಯ ಮುಂದೆ ಬೋರ್ಡ್ ಲಗತ್ತಿಸಿದ್ದರು "ಮೂರ್ತಿ" ಅಂತ. "ಮೂರ್ತಿಗಳ ಬಗ್ಗೆ ಮೂರ್ತಿಯವರಲ್ಲಿ ಕೇಳಲು ಮೂರ್ತಿಗಳು ಅವರ ಮನೆಗೆ ಭೇಟಿ ಇತ್ತಿದ್ದರು" ಎಂಬ ಪದಸಾಲು ಎಷ್ಟು ಚೆನಾಗಿದೆ ಅಲ್ಲವೇ? ಅವರನ್ನು ಭೇಟಿಯಾಗಿ ಇದೇ ಪ್ರಶ್ನೆ ಕೇಳಿದೆ. "ಜಗತ್ತಿನಲ್ಲಿನ ಖ್ಯಾತನಾಮರ ಪ್ರತಿಮೆಗಳು ಒಟ್ಟು ಎಷ್ಟಿವೆ? ನಿಮಗೆ ಗೊತ್ತೆ?" ಅಂತ.
ತಿಳಿದುಕೊಂಡು ಏನ್ ಮಾಡ್ತೀಯೋ ಮಂಕೇ? ಅನ್ನೋ ರೀತಿಯಲ್ಲಿ ನೋಡಿ "ನೋಡ್ತೀನಿ" ಅಂತ.
ಯಾವುದೋ ಪುಸ್ತಕ ತೆಗೆದು ಕೈಯಲ್ಲಿ ಪೆನ್ ಹಿಡಿದು ಕೇಳಿದರು "ನಿಮಗೆ ಒಟ್ಟು ಎಷ್ಟಿವೆ ಅನ್ನೋದರ ಜೊತೆಗೆ ಒಬ್ಬೊಬ್ಬ ಖ್ಯಾತ ನಾಮರ ಎಷ್ಟೆಷ್ಟು ಪ್ರತಿಮೆಗಳು ಇವೆ ಎಂದು ಬೇಕೆ?" ಎಂದು. ಓ! ಹೌದಲ್ಲ? ಇದರ ಬಗ್ಗೆ ಯೋಚಿಸಲೇ ಇಲ್ಲ. ಗಾಂಧೀಜಿ, ಅಂಬೇಡ್ಕರ್ ಇವರ ಪ್ರತಿಮೆಗಳು ಸಿಕ್ಕಾಪಟ್ಟೆ ಇವೆ. ಹಾಗಾಗಿ ಹೇಳಿದೆ "ಗೊತ್ತಿದ್ದಲ್ಲಿ ಒಬ್ಬೊಬ್ಬರದೂ ಎಷ್ಟು ಪ್ರತಿಮೆಗಳು ಇವೆ ಎಂದೇ ತಿಳಿಸಿ" ಅಂದೆ. 
ಮತ್ತೊಂದು ಪ್ರಶ್ನೆ ಬಂತು ಅವರಿಂದ "ಪ್ರತಿಮೆಗಳಲ್ಲಿ life sizeನವುಗಳು bust size ನವುಗಳೂ ಬೇರೆ ಬೇರೆ ಲೆಕ್ಕ ಬೇಕೇ?" ಎಂದು
ಓಹೋ ! ಇದು ಇನ್ನೂ ಉತ್ತಮ !! ಉದಾಹರಣೆಗೆ ಮೈಸೂರು ಮಹಾರಾಜರ ಪ್ರತಿಮೆ ಎರಡೂ ರೀತಿಯಲ್ಲಿ ಇರುತ್ತದೆ.  ಇರಲಿ ಎರಡೂ ಹೇಳಿ ಎಂದೆ.
ಅವರಿಂದ ಇನ್ನೊಂದು ಪ್ರಶ್ನೆ ಬಂತು "ಖ್ಯಾತನಾಮರು ಅಂದರೆ ನಿಮಗೆ ರಾಜಕಾರಣಿಗಳು, ನಟ/ನಟಿಯರು, ಯತಿಗಳು, ಆಟಗಾರರು, ಸಾಹಿತಿಗಳು ಹೀಗೆ ಎಲ್ಲರದೂ ಬೇಕೆ?" 
ಕುಳಿತಿದ್ದ ಸೀಟಿನಲ್ಲಿ ಇನ್ನೂ ಸ್ವಲ್ಪ ಮುಂದೆ ಬಂದೆ. ’ಎಷ್ಟು ಹೆಚ್ಚು ಮಾಹಿತಿ ಇದ್ರೆ ಅಷ್ಟು ಉತ್ತಮ’ ಎಂದೆ
"ಪ್ರತಿಮೆಗಳನ್ನು ಕಂಚು, ಕಲ್ಲು, ಅಮೃತಶಿಲೆ’ಗಳನ್ನು ಬಳಸಿ ಮಾಡಿರುತ್ತಾರೆ. ಎಲ್ಲ ಮಾಹಿತಿ ಬೇರೆ ಬೇರೆ ಬೇಕೇ?" ಎಂದು ಕೇಳಿದರು.
ಇದ್ಯಾಕೋ ಅತೀ ಅಯ್ತು ಅನ್ನಿಸಿದರೂ ’ಇದ್ರೆ ಸಂತೋಷ, ಕೊಡಿ’ ಎಂದೆ. ಉತ್ಸಾಹ ಕಡಿಮೆಯಾಗಲು ತೊಡಗಿತು.
ಮತ್ತೊಂದು ಪ್ರಶ್ನೆ ತೂರಿ ಬಂತು "ನಿಮಗೆ ಕುಳಿತಿರೋ ಪ್ರತಿಮೆ, ನಿಂತಿರೋ ಪ್ರತಿಮೆ, ವೀರರು ಕುದುರೆ ಮೇಲೆ ಕುಳಿತಿರೋ ಪ್ರತಿಮೆ ಹೀಗೆ ಎಲ್ಲವೂ ಬೇಕೇ?"
ಇವರು ಕೇಳ್ತಿರೋ ಪ್ರಶ್ನೆಗಳ ಸರಣಿ ನನ್ನಲ್ಲಿ ಯಾಕೋ ಅನುಮಾನ ತರಿಸುತ್ತಿದೆ. ಸುಮ್ಮನೆ ಮಾಹಿತಿ ಕೊಡಿ ಎಂದು ಕೇಳಿದರೆ, ಇಷ್ಟೆಲ್ಲ ಯಾರಾದರೂ ಮಾಹಿತಿ ನೀಡಿಯಾರೇ? ಒಂದೋ ಇವರಲ್ಲಿ ಮಾಹಿತಿ ಇಲ್ಲ. ಅಥವಾ ಅಷ್ಟು ಮಾಹಿತಿ ಕೊಡಲು ಇಷ್ಟು ದುಡ್ಡು ಕೊಡಿ ಎಂದು ಕೇಳಬಹುದು.
ಇರಲಿ ನಿಂತಿರುವ, ಕುಳಿತಿರುವ ಪ್ರತಿಮೆಗಳು ಸರಿ ಆದರೆ ಈ ಕುದುರೆ ವಿಷಯ ಆಸಕ್ತಿ ಮೂಡಿಸಿತು "ಕುದುರೆ ಮೇಲೆ ಕುಳಿತ ವೀರರ ಪ್ರತಿಮೆ ಬಗ್ಗೆ ಹೇಳಿದಿರಲ್ಲ. ಅದರ ಬಗ್ಗೆ ಸ್ವಲ್ಪ ವಿವರ ಕೊಡ್ತೀರಾ?"
ಅವರು ಅದಕ್ಕೆ "ಒಂದು ಕಾಲೆತಿರ್ರೋ ಕುದುರೆ ಮೇಲಿನ ವೀರ / ವೀರ ವನಿತೆ , ಯುದ್ದದಲ್ಲಿ ಗಾಯಾಳುವಾಗಿ ಸತ್ತರೆಂದು ಅರ್ಥ. ಪ್ರತಿಮೆಯ ಕುದುರೆಯ ನಾಲ್ಕೂ ಕಾಲುಗಳು ಊರಿದ್ದರೆ ಅವರದು ಸ್ವಾಭಾವಿಕ ಸಾವು ಎಂದರ್ಥ" ಅಂದರು. ಸೂಕ್ಷ್ಮ ವಿಷಯಗಳು. ಧನ್ಯವಾದ ತಿಳಿಸಿದೆ.
ಅದರ ಹಿಂದೆಯೇ ಮತ್ತೊಂದು ಪ್ರಶ್ನೆ ಗುಂಡಿನಂತೆ ತೂರಿ ಬಂತು "ನಿಮಗೆ ಬದುಕಿರುವವರ ಪ್ರತಿಮೆಗಳ ಸಂಖ್ಯೆ ಬೇಕೇ? ಅಥವಾ ಹೋದವರದು ಮಾತ್ರ ಸಾಕೇ?". 
ಅದಕ್ಕೆ ನಾನು "ಬೇಗ ಹೇಳಿದರೆ ಇದ್ದವರ ಪ್ರತಿಮೆಗಳ ಲಿಸ್ಟ್’ನಲ್ಲಿ ನಿಮ್ಮದೂ ಇರುತ್ತೆ ಇಲ್ದೆ ಇದ್ರೆ ಎರಡನೇ ಲಿಸ್ಟ್’ನಲ್ಲಿ ಖಂಡಿತ ಇರುತ್ತೆ" ಅಂತ ಹೇಳುವಾ ಎಂದು ನಾಲಿಗೆ ತುದಿವರೆಗೂ ಬಂತು... ಬದಲಿಗೆ ಇತಿಶ್ರೀ ಹಾಡಲೆಂದು "ನಿಮ್ಮಲ್ಲಿ ನಿಜಕ್ಕೂ ಇಷ್ಟೆಲ್ಲ ಮಾಹಿತಿ ಇದೆಯೇ?" ಎಂದು ಕೇಳಿಯೇ ಬಿಟ್ಟೆ.
ಅವರು ಅಷ್ಟೇ ಶಾಂತವಾಗಿ "ನಿಜ ಹೇಳಬೇಕೂ ಅಂದರೆ ಯಾವ ಮಾಹಿತೀನೂ ಇಲ್ಲ. ನಾನು ಪ್ರತಿಮೆಗಳನ್ನು ಡೆಲಿವರಿ ಮಾಡುವವನು. ಲೆಕ್ಕ ಇಡೋವ್ನಲ್ಲ. ಬೇರೆಲ್ಲಾದರೂ ವಿಚಾರಿಸಿ ತಿಳಿಸಬೇಕೂ ಅಂದಲ್ಲಿ ನಿಮಗೆ ಏನೇನು ಮಾಹಿತಿ ಬೇಕೂ ಅಂತ ಪ್ರಶ್ನೆಗಳನ್ನು ಬರೆದುಕೊಳ್ತಾ ಇದ್ದೀನಿ" ಅನ್ನೋದೇ?
ಬಂದ ದಾರಿಗೆ ಸುಂಕವಿಲ್ಲ ಎಂದು ವಾಪಸ್ಸು ಬರುವಾಗ ಬೆರಳ ತೋರುತ್ತ ನಿಂತಿದ್ದ ಅಂಬೇಡ್ಕರ್ ಅವರ ಪ್ರತಿಮೆ ಮತ್ತೆ ನೋಡಿದೆ. ಮೊದಲು ನಾನು ಆ ಪ್ರತಿಮೆ ನೋಡಿದಾಗ ಏನು ಹೇಳಿದರು? ಈಗೇನು ಹೇಳುತ್ತಿದ್ದಾರೆ? ಗೊತ್ತಗ್ತಿಲ್ಲ ! ಪ್ರತಿಮೆಗಳಿಗೂ ಮಾತು ಬರುವಂತಿದ್ದಿದ್ದರೆ ?

ಒಂದು ದಿನ ಹೀಗೆ ದಿಢೀರನೆ ಒಂದು ಯೋಚನೆ ಬಂತು. ಏನು ಅಂತೀರಾ?

ಲೇಖನ ವರ್ಗ (Category): 

ಸಾತ್ತ್ವಿಕ ಸುಳ್ಳು

field_vote: 
Average: 4 (2 votes)
To prevent automated spam submissions leave this field empty.

          ’ಅಶ್ವತ್ಥಾಮೋ ಹತಃ ಇತಿ, ನರೋ ವಾ ಕುಂಜರೋ ವಾ’; ಆ ಧರ್ಮರಾಜನ ಬಾಯಿಂದಲೇ ಕೃಷ್ಣ ಅರ್ಧಸತ್ಯವನ್ನು ಹೇಳಿಸಿದನಲ್ಲ. ಧರ್ಮರಾಜನಿಗೆ ಗೊತ್ತಿತ್ತು, ಭೀಮ ಕೊಂದಿದ್ದು ಅಶ್ವತ್ಥಾಮ ಎಂಬ ಹೆಸರಿನ ಆನೆಯನ್ನು ಎಂದು. ಆದರೂ ’ನರೋ ವಾ ಕುಂಜರೋ ವಾ’ ಎಂದು ಸಣ್ಣ ಧ್ವನಿಯಲ್ಲಿ ಹೇಳಿದ. ಅದನ್ನೂ ಕೃಷ್ಣ ತನ್ನ ಪಾಂಚಜನ್ಯದ ಧ್ವನಿಯಿಂದ ಮರೆಮಾಚಿಸಿದ. ಸುಳ್ಳು ದ್ರೋಣನಿಗೆ ಸತ್ಯವಾಗಿ ಕೇಳುವಂತೆ ಮಾಡಿದ. ಪರಿಣಾಮ ದ್ರೋಣನಿಗೆ ತನ್ನ ಮಗನ ಚಿರಂಜೀವತ್ವದ ಮೇಲೆಯೇ ನಂಬಿಕೆಯಿರದಾಯಿತು. ಸೇನಾಪತಿತ್ವದ ಕರ್ತವ್ಯಕ್ಕಿಂತ ಪುತ್ರಮೋಹವೇ ಮೇಲಾಯಿತು. ಕುರುಕ್ಷೇತ್ರ ಯುದ್ಧದ ನಡೆಯೇ ಬದಲಾಯಿತು.

ಲೇಖನ ವರ್ಗ (Category): 

ಸ-ಸಂ-ದರ್ಶನ

field_vote: 
Average: 4.7 (3 votes)
To prevent automated spam submissions leave this field empty.

ಹುಣ್ಣಿಮೆಗೊಮ್ಮೆ ಅಮಾವಾಸ್ಯೆಗೊಮ್ಮೆ ತಪ್ಪದೇ ಪ್ರಕಟವಾಗುವ ಪ್ರಸಿದ್ಧ ದಿನಪತ್ರಿಕೆ ’ಸವಿವಾಣಿ’ಯು ಕನ್ನಡದ ಕ್ಯಾತ ಖಂಡಾಯ ಸಾಹಿತಿ ಹಾಗೂ ಕಂಡದ್ದನ್ನು ಕೆಂಡದಂತೆ ಉಗುಳುವ ಗುಂಡುಗಲಿ ಸಂಕ್ರಾಮಣ್ಣ ಅವರೊಡನೆ ನಡೆಸಿದ ಸಂದರ್ಶನ:

ಲೇಖನ ವರ್ಗ (Category): 

ನಮ್ಮ ಕಷ್ಟಾನೂ ಸ್ವಲ್ಪ ಅರ್ಥ ಮಾಡಿಕೊಳ್ರೀ !!

field_vote: 
Average: 4 (1 vote)
To prevent automated spam submissions leave this field empty.

 ಅದೃಷ್ಟವಶಾತ್ ಬೆಳಿಗ್ಗೆ ಎದ್ದೆ ! ಸತ್ಯ ಕಣ್ರೀ. ನೆನ್ನೆ ಇದ್ದೋರು ಇವತ್ತಿಲ್ಲ. ಇವತ್ತಿರೋರು ನಾಳೆ ಇಲ್ಲ. ದುರಾದೃಷ್ಟವಶಾತ್ ಎಡ ಮಗ್ಗುಲಲ್ಲಿ ಎದ್ದೆ. ಅಲ್ಲ, ಬಲ ಮಗ್ಗುಲಲ್ಲಿ ಎದ್ದೇ ದಿನವೂ ಬಾಸ್ ಕೈಲಿ (ಬಾಯಲ್ಲಿ) ಉಗಿಸಿಕೊಳ್ಳೋದು ಗ್ಯಾರಂಟಿ.. ಹಾಗಿರಬೇಕಾದರೆ ಇನ್ನು ಎಡ ಮಗ್ಗುಲಲ್ಲಿ ಎದ್ರೆ ಏನು ಗತಿಯೋ ಏನೋ. 


ಇಲ್ಲ ಕಣ್ರೀ, ಹಂಗೆಲ್ಲ ಅಂದುಕೊಂಡ್ರೆ ಅಸ್ತು ದೇವತೆಗಳು ಅಸ್ತು ಅಂದುಬಿಡ್ತಾರಂತೆ ! ಇಲ್ಲ ಇಲ್ಲ, ಅವೆಲ್ಲ ಮೂಢನಂಬಿಕೆಗಳು !! ಛೇ! ಇಲ್ಲ, ಎಡ ಮಗ್ಗುಲಲ್ಲಿ ಎದ್ದದ್ದಕ್ಕೆ ಒಂದು ರೂಪಾಯಿ ತಪ್ಪು ಕಾಣಿಕೆ ಹಾಕಿಬಿಡ್ತೀನಿ, ಮೊದಲೇ  Performance Evaluation ಸಮಯ ... ಯಾಕ್ ಬೇಕು ರಿಸ್ಕೂ !!! 


ಮಂಚ ಮತ್ತು ಹಾಸಿಗೆ ಒಟ್ಟಿಗೆ ನುಡಿದವು "ಸದ್ಯ ದಡಿಯ ಎದ್ದ" ಅಂತ.

ಲೇಖನ ವರ್ಗ (Category): 

ಪ್ರತಂಪು ಸಿಂಹ ಬರೆದಿದ್ದಾರೆ: ಮುಹ್ ಖೋಲ್ಕರ್ ನಕ್ಕುನೋಡಿ.... ಮಿಸ್ಟರ್ ಬುದ್ಧಿಜೀವಿ!

ಓದುಗರಿಗೆಲ್ಲ ನಮಸ್ಕಾರ. ನಿಮಗೆಲ್ಲಾ ಗೊತ್ತಿದೆ ನಾನೊಬ್ಬ ಪತ್ರಕರ್ತ. ಕನ್ನಡ ಪತ್ರಿಕೋದ್ಯಮದಲ್ಲಿ ಚಿಕ್ಕ ವಯಸ್ಸಿಗೆ ಅಂಕಣಕಾರನಾದೆ, ಈಗಲೂ ನಮ್ಮ ಪತ್ರಿಕೆಯಲ್ಲಿ ನಾನೇ ಸೀನಿಯರ್ ಅಂಕಣಕಾರ. ನನ್ನ ಅಂಕಣಗಳಲ್ಲಿ `ನಾನು' ಎಂಬ ಪದವನ್ನು ನಾನು ಬಳಸುವುದಿಲ್ಲ. ಅಂಕಣ ಬರಹ ವೈಯಕ್ತಿಕವಾಗಿರಬಾರದು ಹಾಗೂ ವ್ಯಕ್ತಿ ನಿಷ್ಟವಾಗಿರಬಾರದು ಎನ್ನುವುದು ನನ್ನ ನಂಬಿಕೆ.ವಸ್ತುನಿಷ್ಟವಾಗಿ ಬರೆಯುವುದರಿಂದಲೇ ನನ್ನ ಅಂಕಣ ಇಷ್ಟು ಜನಪ್ರಿಯವಾಗಲು ಸಾಧ್ಯವಾಗಿರುವುದು.

field_vote: 
Average: 3.7 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ನಾಲ್ಕನೇ ವರ್ಗ

field_vote: 
Average: 5 (1 vote)
To prevent automated spam submissions leave this field empty.

          ಮುಲ್ಲಾ ನಸ್ರುದ್ದೀನ್ ಎದೆಯವರೆಗೆ ಬರುವಷ್ಟು ಉದ್ದವಾದ ಗಡ್ಡ ಬೆಳೆಸಿದ್ದ. ತುರಿಕೆಯಾಗುತ್ತಿತ್ತು. ಆಗಾಗ ಕೆರೆದುಕೊಳ್ಳಬೇಕಾಗುತ್ತಿತ್ತು. ಅದನ್ನು ಗಮನಿಸಿದ ಸ್ನೇಹಿತನೊಬ್ಬ ಕೇಳಿದ. "ಮುಲ್ಲಾ ಉದ್ದ ಗಡ್ಡ ಬೆಳೆಸಿದ್ದೀಯಾ, ಕಿರಿಕಿರಿ ಅನ್ನುಸುವುದಿಲ್ಲವೇ?"

          "ಅಯ್ಯೋ ತುಂಬ ಕಿರಿಕಿರಿ, i hate it"

          "ಮತ್ತೆ ಯಾಕಿಟ್ಟುಕೊಂಡಿದ್ದೀಯಾ? why can't you get rid of it?"

          "my wife hates it too" ಮುಲ್ಲಾ ಉತ್ತರಿಸಿದ, ಶಾಂತನಾಗಿ !!

ಲೇಖನ ವರ್ಗ (Category): 

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದು ಕೋ(ತಿ)ಟಿ ರುಪಾಯಿ (ಖರ್ಚು )

field_vote: 
Average: 4.9 (9 votes)
To prevent automated spam submissions leave this field empty.

 

ಲೇಖನ ವರ್ಗ (Category): 

ನಿದ್ದೆ ಮಾಡುವಾಗ ಮೆದುಳಿನ ಗ್ರಹಣ ಶಕ್ತಿ ಹೆಚ್ಚು: ವರದಿ

field_vote: 
Average: 5 (1 vote)
To prevent automated spam submissions leave this field empty.

ಮಂಡ್ಯದ ವಿಜ್ಞಾನಿಗಳ  ಅಧ್ಯಯನ ಬಯಲು ಮಾಡಿದ ಸತ್ಯ

ಬೆಂಗಳೂರು, ಫೆ 25: ತಾವು ತರಗತಿಯಲ್ಲಿ ಪಾಠ ಮಾಡುವಾಗ ತೂಕಡಿಸುವ ವಿದ್ಯಾರ್ಥಿಗಳ ಬಗ್ಗೆ ಇನ್ನು ಮುಂದೆ ಅಧ್ಯಾಪಕರು ಸಿಟ್ಟಾಗಬೇಕಿಲ್ಲ. ಮೈಯೆಲ್ಲ ಎಚ್ಚರವಾಗಿದ್ದು ಪಾಠ ಕೇಳುವ ವಿದ್ಯಾರ್ಥಿಗಳಿಗಿಂತ ಬೆಲ್ಲ ತೂಗುತ್ತ ನಿದ್ದೆ ಮಾಡುವ ವಿದ್ಯಾರ್ಥಿಗಳ ಮೆದುಳು ಹೆಚ್ಚು ಗ್ರಹಿಸುತ್ತಿರುತ್ತದೆ.  ಮಂಡ್ಯದ ಸಂಶೋಧಕರು ನಡೆಸಿರುವ ಅಧ್ಯಯನ  ತೋರಿಸಿಕೊಟ್ಟ ಸಂಗತಿಯಿದು.

ಲೇಖನ ವರ್ಗ (Category): 

ಹೆಸರಿಡೋರು...!

field_vote: 
No votes yet
To prevent automated spam submissions leave this field empty.

ಹೆಸರಿಡೋದೂ ಒಂದು ಕಲೆನಾ? ಹೌದು ಅನ್ಸುತ್ತೆ. ನಾನು ಹೆಳ್ತಿರೋದು ಚಿಕ್ಕ ಮಕ್ಕಳಿಗೆ ಹೆಸರಿಡೋದರ ಬಗ್ಗೆ ಅಲ್ಲ, ದೊಡ್ಡವರಿಗೆ ಇಡೋದರ ಬಗ್ಗೆ! ಕೆಲವರು ಇರ್ತಾರೆ, ಎಲ್ಲರಿಗೂ ಹೆಸರಿಡೋದೇ ಅವರ ಕಾಯಕ. ಬೇರೆಯವರ ಹಾವ ಭಾವ, ಗಾತ್ರ, ಧ್ವನಿ ಹೀಗೆ ಹಲವಾರು ಲಕ್ಷಣಗಳನ್ನು ನಿರಂತರವಾಗಿ ಅಭ್ಯಸಿಸಿ ಒಂದು ಹೆಸರೂ ಅಂತ ಇಟ್ರು ಅಂದ್ರೆ ಮುಗಿತು! ಆ ಮನುಷ್ಯನ ಗತಿ ಅಧೋಗತಿ. ನಾವು ಹಾಸ್ಟೇಲಲ್ಲಿದ್ದಾಗ ನಮ್ಮ ಮಿತ್ರನೊಬ್ಬ ಹಾಗೆ ಹೆಸರಿಡೋದರಲ್ಲಿ ನಿಷ್ಣಾತನಾಗಿದ್ದ. ನಮ್ಮ ಸಹಪಾಠಿಯಾಗಿದ್ದ ನಾಗರಾಜ ಆಗಾಗ ನನ್ನ ರೂಮ್ ಗೆ ಭೇಟಿ ನೀಡುತ್ತಿದ್ದ. ಅವನದು ಸ್ವಲ್ಪ ನರಿಬುದ್ಧಿ. ಸರಿ ನಮ್ಮ ಹೆಸರಿಡೊ ಮಿತ್ರ ಅವನಿಗೆ ಒಂದ್ಯಾವುದೋ ಶುಭ ಮುಹುರ್ತದಲ್ಲಿ ನರಿ ಅಂತ ನಾಮಕರಣ ಮಾಡಿಯೆ ಬಿಟ್ಟ ನೋಡಿ!

ಲೇಖನ ವರ್ಗ (Category): 

ನಾಯಿಪ್ರೇಮಿಗಳಲ್ಲೊಂದು ಬಿನ್ನಪ

field_vote: 
Average: 5 (5 votes)
To prevent automated spam submissions leave this field empty.

          ಸ್ನೇಹಿತನೊಬ್ಬ ಮೊನ್ನೆಯಿಂದ ನನ್ನ ಮೇಲೆ ಸಿಕ್ಕಾಪಟ್ಟೆ ಸಿಟ್ಟು ಮಾಡಿಕೊಂಡುಬಿಟ್ಟಿದ್ದಾನೆ. ಕಾರಣ ಇಷ್ಟೇ, ಹೀಗೆ ನಾವೊಂದಿಷ್ಟು ಗೆಳೆಯರು ಸಂಜೆ ಹೊತ್ತಿಗೆ ಮಾಮೂಲು ಹರಟೆ ಹೊಡೆಯುತ್ತಿದ್ದೆವು. ಒಬ್ಬ "ಮಂದಿ ನಾಯಿ ಯದಕ ಸಾಕ್ತಾರ್ ಗೊರ್ತನ.s..?" ಅಂದ. "ಯಾಕಂದ್ರೆ, ಅವರಿಗೆ ಮನೆನಲ್ಲಿ ಕಿಮ್ಮತ್ತು ಕೊಡೋರು ಯಾರೂ ಇರಲ್ಲ, at least ಒಂದು ನಾಯಿನಾದ್ರೂ ಇರಲಿ ಅಂತ. ಇವರು ಹಾಕಿದ ಬಿಸ್ಕಿಟ್ ತಿಂದು ಬಾಲ ಅಲ್ಲಾಡಿಸ್ತಾ ಇರ್ತದಲ್ಲಾ?" ಅಂತ ನಾನು ಆಣಿಮುತ್ತು ಉದುರಿಸಿಬಿಟ್ಟೆ. ನನ್ನ ಮೇಲೆ ಮುನಿಸಿಕೊಂಡ ಸ್ನೇಹಿತ ಅಂದೆನಲ್ಲಾ, ಆ ಮನುಷ್ಯ ಒಂದಲ್ಲ, ಎರಡಲ್ಲ ಒಟ್ಟೂ ಎಂಟು ನಾಯಿ ಸಾಕಿದ್ದ ! ಅವುಗಳ ಹೆಸರು ಕೇಳಿ, ಶಿವ, ರಾಮ, ಗೌರಿ ಇತ್ಯಾದಿ.

ಲೇಖನ ವರ್ಗ (Category): 

ದಿಬ್ಬಣ

field_vote: 
Average: 5 (6 votes)
To prevent automated spam submissions leave this field empty.
ಕೇಳಿದಳು ಕನಸಿನಲಿ ಕತ್ರಿನಾ ಕೈಫು
ಆಗಲೇ ಸುಮಂತಾ ನಾ ನಿನ್ನ ವೈಫು
ಹೇಳಿದೆನು ನೀನೊಂದು ಕೆಲಸವನು ಮಾಡು
ಮನೆ ಮುಂದೆ ನಿಂತಿರುವ ಕ್ಯೂವನ್ನು ನೊಡು||
ಲೇಖನ ವರ್ಗ (Category): 

ಉದಯಗೀತೆ

field_vote: 
Average: 5 (4 votes)
To prevent automated spam submissions leave this field empty.

  ಗದಗದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವ ಸಂದರ್ಭದಲ್ಲಿ, ಹುಯಿಲಗೋಳರ ಕ್ಷಮೆ ಕೋರಿ, ಉದಯಗೀತೆ :

  ಉದಯವಾಗಿದೆ ನಮ್ಮ ಚೆಲುವ ಕನ್ನಡನಾಡು
  ಬದುಕು ಬಲು ಕಷ್ಟಕರವೆನಿಪ ಗೋಳಿನ ಗೂಡು

  ರಾಜಕಾರಣದಿ ಕಿತ್ತಾಡುವರ ನೆಲೆವೀಡು
  ಆಜನ್ಮ ವೈರಿಸದೃಶರು ಸೆಣೆಪ ರಣನಾಡು
  ಓಜೆಯಿಂ ಹಿರಿದುಂಡ ಶಾಸಕರ ನಡೆ ಸೂಡು
  ಭೋಜನದಿ ಮೈಮರೆತ ಅಧಿಕಾರಿಗಳ ಬೀಡು

  ಸೊಕ್ಕಿಗ ಬಕಾಸುರರು ಬೆಳೆದು ಮೆರೆದಿಹ ನಾಡು
  ಲೆಕ್ಕ ತೋರಿಸದೆ ಹಣ ಬಚ್ಚಿಡುವವರ ಗೂಡು
  ಚೊಕ್ಕ ಕೈಗಳ ಹೊಂದಿದವರಿಗಿದು ಬೆಂಗಾಡು
  ಬೊಕ್ಕಸದ ಲೂಟಿಯೈ ಇಲ್ಲಿ ನಡೆದಿದೆ ನೋಡು

  ಪಾವನರು ಪರಭಾಷಿಕರು ಅವರದೀ ನಾಡು

ಲೇಖನ ವರ್ಗ (Category): 

ಮನದಲ್ಲೇ ಉಳಿದ ಮನದ ಮಾತುಗಳು

field_vote: 
Average: 4.5 (2 votes)
To prevent automated spam submissions leave this field empty.

          ಮನ ಮೇ ಹಿ ರಹ ಗಯೀ

          ಮನ ಕಿ ಬಾತ್

          ಜಬ್ ದೇಖೀ ಸೋಹನ ಶ್ಯಾಮ ಕೋ

          ಗೋಪಿಕೆಯೊಬ್ಬಳ ಅಳಲು ನೋಡಿ, ಶ್ಯಾಮನಲ್ಲಿ ತನ್ನ ಪ್ರೇಮವನ್ನು ನಿವೇದಿಸಲು ಬಂದಳು, ಆದರೆ ಆತನೆದರು ಏನನ್ನೂ ಹೇಳಲಾರಳು, ಮನದ ಮಾತುಗಳು ಮನದಲ್ಲೇ ಉಳಿದವು.

ಲೇಖನ ವರ್ಗ (Category): 

’ಬ್ಲಡಿ ಬಾಸ್ಟರ್ಡ್’ : ಮುಂದುವರಿದುದು

field_vote: 
Average: 5 (2 votes)
To prevent automated spam submissions leave this field empty.

  ನನ್ನ ಬ್ಲಡಿ ಬಾಸ್ಟರ್ಡ್ ಲೇಖನಕ್ಕೆ,
  ಅಲ್ಲ ಅಲ್ಲ, ನನ್ನ ಲೇಖನ ಬ್ಲಡಿ ಬಾಸ್ಟರ್ಡ್‌ಗೆ,
  ಥೂ, ಇದೂ ಅಲ್ಲ, ಬ್ಲಡಿ ಬಾಸ್ಟರ್ಡ್ ಎಂಬ ನನ್ನ...,
  ಶ್ಶಿಶ್ಶಿ, ಇದು ಇನ್ನೂ ಅನರ್ಥ,
  ಬ್ಲಡಿ ಬಾಸ್ಟರ್ಡ್ ಎಂಬ ಹೆಸರಿನಲ್ಲಿ ನಾನು ಬರೆದ...,
  ಅಯ್ಯೋ, ಇದು ಮತ್ತೂ ಅನರ್ಥ,
  ’ಬ್ಲಡಿ ಬಾಸ್ಟರ್ಡ್...’ ಎಂಬ ಶಿರೋನಾಮೆ ಕೊಟ್ಟು ನಾನು ಬರೆದ...
  ಅಬ್ಬ, ಈಗ ಸರಿಯಾಗಿ ಬಂತು,
  ...ನಾನು ಬರೆದ ಲೇಖನಕ್ಕೆ ಪ್ರತಿಕ್ರಿಯಿಸುತ್ತ ಮಿತ್ರ ಶ್ರೀವತ್ಸ ಜೋಶಿಯವರು ಒಂದು ಡೌಟು (:-)) ವ್ಯಕ್ತಪಡಿಸಿದ್ದಾರೆ.

ಲೇಖನ ವರ್ಗ (Category): 

ಬ್ಲಡಿ ಬಾಸ್ಟರ್ಡ್ ಅಜರಾಮರ!

field_vote: 
Average: 5 (5 votes)
To prevent automated spam submissions leave this field empty.

  ಮಾಜಿ ಪ್ರಧಾನಿ ದೇವೇಗೌಡರಿಗೆ ಇತ್ತೀಚೆಗೆ ಅದೇಕೋ ’ಬ್ಲಡಿ ಬಾಸ್ಟರ್ಡ್’ ಎಂಬ ಪ್ರಶಂಸಾ ಪದದ ಬಳಕೆಯು ಅಚ್ಚುಮೆಚ್ಚಾದಂತೆ ಕಂಡುಬರುತ್ತಿದೆ. ಈ ರಾಜ್ಯದ ಮುಖ್ಯಮಂತ್ರಿಗೆ, ಅಡ್ವೊಕೇಟ್ ಜನರಲ್ ಅವರಿಗೆ, ಹೀಗೆ ಎಂಥೆಂಥವರಿಗೆಲ್ಲ ಗೌಡರು ಆ ಪ್ರಶಂಸಾ ಪದವನ್ನು ಲಗತ್ತಿಸುತ್ತಿರುವುದನ್ನು ಗಮನಿಸಿದರೆ ಅವರಿಗದು ಅಚ್ಚುಮೆಚ್ಚೋ ಅಥವಾ ಹುಚ್ಚೋ ಎಂಬ ಸಂಶಯ ಬರದಿರದು. ಅದೇನೇ ಇರಲಿ, ದೇವೇಗೌಡರ ಬಳಕೆಯ ಅನುಕೂಲಕ್ಕಾಗಿ ಅವರಿಗೆ ’ಬ್ಲಡಿ ಬಾಸ್ಟರ್ಡ್’ ಪ್ರಶಂಸಾ ಪದದ ಹೂರಣವನ್ನಿಲ್ಲಿ ನೀಡುತ್ತಿದ್ದೇನೆ. ದಯೆಯಿಟ್ಟು ಅವಗಾಹಿಸುವುದು.

ಲೇಖನ ವರ್ಗ (Category): 

ಕೆಲವು ಪ್ರಸಂಗಗಳು

field_vote: 
Average: 4.3 (3 votes)
To prevent automated spam submissions leave this field empty.

೧. ಬಂದಿರೋದು ಅಣ್ಣ ಅಲ್ವ ?

ಆಗಷ್ತ ಕೆಲಸ ಸೇರಿದ್ದೆ . ಊರಿಗೆ ಹೋಗಿದ್ದಾಗ ಪರಿಚಿತರ ಮನೆಗೆ ಹೋಗ ಬೇಕಾದ ಪ್ರಸಂಗ ಬಂದಿತ್ತು . ಗೇಟ್ ತೆಗೆದ ಕೂಡಲ ಅದೆಲ್ಲಿತ್ತೋ ಡಾಬರ್ಮನ್  ಹುಟ್ಟಿದ ಮೇಲೆ ಮನುಶ್ಯರನ್ನೆ ನೋಡದವರಂತೆ ಬೊಗಳುತ್ತಾ ಬಂತು . ಇನ್ನೇನು ಅಲ್ಲಿಂದ ತಿರುಗಿ ಹೋಗಬೇಕು ಅನ್ನುವಾಗ ಪರಿಚಿತ ದನಿ ಕೇಳಿ ಬಂತು "ಜಿಮ್ಮಿ ಸುಮ್ನಿರು ಬಂದಿರೋದು ಅಣ್ಣ ಅಲ್ವ ?" .

೨ . ನಾವು ಆಶ್ಟೇ ಉಳ್ದವ್ರ...

ಲೇಖನ ವರ್ಗ (Category): 

ಜೀವನದಲ್ಲಿ ದುಡ್ಡೇ ಎಲ್ಲ ಅಲ್ಲ !

field_vote: 
Average: 5 (4 votes)
To prevent automated spam submissions leave this field empty.

ಕೆಲವರಿಗೆ ಎಷ್ಟು ಬಡ್ಕೊಂಡ್ರೂ ಅರ್ಥವೇ ಆಗೋಲ್ಲ !!

ಶುದ್ದ ಭಾನುವಾರ ಬೆಳಿಗ್ಗೆ ಕಾಫೀ ಹೀರುತ್ತ ಕಿಟಿಕಿಯಿಂದ ಹೊರಗೆ ಕಣ್ಣು ಹಾಯಿಸಿದಾಕ್ಷಣ ಕಣ್ಣಿಗೆ ಬಿದ್ದದ್ದು ಸುಬ್ಬಣ್ಣನ ಬರುವಿಕೆ ! ಕನಿಷ್ಟ ಇನ್ನೊಂದು ಘಂಟೆ ಅವನಿಗೆ ಉಪದೇಶ ಮಾಡಬೇಕು.

"ಸುಬ್ಬೂ, ಜೀವನದಲ್ಲಿ ದುಡ್ಡೇ ಎಲ್ಲ ಅಲ್ಲ !"  ಅನ್ನೋ ಮಾತನ್ನ ನಾನು ಈ ಸುಬ್ಬಣ್ಣನಿಗೆ ಎಷ್ಟು ಸಾರಿ ಹೇಳಿದ್ದೀನೋ ಗೊತ್ತಿಲ್ಲ. ಹಲವಾರು ಉದಾಹರಣೆ ಕೊಟ್ಟು ಹೇಳಿದ್ದೀನಿ ಕೂಡ. ನಿಮ್ಮೊಂದಿಗೂ ಹಂಚಿಕೊಳ್ಳುತ್ತೇನೆ ನೋಡಿ ...

ಲೇಖನ ವರ್ಗ (Category): 

ನಾಮ....!

field_vote: 
Average: 5 (9 votes)
To prevent automated spam submissions leave this field empty.

ಇಲ್ಲಿ ನಾನು ’ನಾಮ’ ಅಂದಿದ್ದು ಒಂದೋ ಇಲ್ಲಾ ಮೂರೋ, ಅಡ್ಡವೋ ಇಲ್ಲಾ ಉದ್ದದ್ದೋ, ಬಿಳಿಯದೋ ಅಥವಾ ಕೆಂಪನೆಯದೋ ಅಲ್ಲ. ’ನಾಮ’, ’ನಾಮಧೇಯ’ ಅರ್ಥಾತ್ ಹೆಸರಿನ ಬಗ್ಗೆ ಅಷ್ಟೆ.


ಧರ್ಮಸ್ಥಳ ಮಂಜುನಾಥನ ಕೃಪೆಯಿಂದ(!?) ಹುಟ್ಟಲಿದ್ದ ನನಗೆ ಹುಟ್ಟೋಕ್ ಮುಂಚೇನೆ ನನ್ನ ಹೆಸರು ನಿಗದಿ ಮಾಡಿಕೊಂಡು ಕಾಯ್ತಿದ್ರಂತೆ ನನ್ನ ತಂದೆ ತಾಯಿ. ಅಕಸ್ಮಾತ್ ಹೆಣ್ಣಾಗ್ಬಿಟ್ಟಿದ್ರೆ..? ಇದೆಯಲ್ಲ ಪೂರಕವಾದ ಹೆಸರು ’ಮಂಜುಳ’ಅಂತಂತಂದಿದ್ರು ಇವ್ರು. ಅಲ್ಲಾ.. ಮಂಜುನಾಥನಿಗೂ ಮಂಜುಳಳಿಗೂ ಎಲ್ಲಿಯ ಸಂಬಂಧ ಅಂತೀನಿ. ’ಮಂಜು’ವೆಂಬ ಸಮಾನ ಪದವಷ್ಟೇ ಸಾಕೆ? ಅದರ ಅರ್ಥದ ಗೋಜಿಗೂ ಹೋಗಬೇಡವೆ? ಬಹುತೇಕ ಮಂಜುಳರ ಹೆಸರಿನ ಹಿಂದಿನ ಗುಟ್ಟು ಇದೇ ಇರುತ್ತೆ ಅಂತ ನನಗೆ ಅಂದು ಅರಿವಾಯ್ತು. ಇಲ್ಲಿ ಇನ್ನೊಂದು ವೈರುಧ್ಯವನ್ನ ಪ್ರಸ್ತಾಪಿಸಲೇ ಬೇಕು. ನನ್ನಕ್ಕನ ಹೆಸರು ಪೂರ್ಣಿಮ. ಬಣ್ಣ ಸ್ವಲ್ಪ ಕಪ್ಪು!. ನನ್ನ ತಂದೆ ತಾಯಿಯರ ಪ್ರಕಾರ ನನ್ನಕ್ಕ ’ಅನ್ನಪೂರ್ಣೆಶ್ವರಿ’ ಕೃಪಾಪೋಷಿತಳಂತೆ!. ಅದಕ್ಕೆ ಅವಳ ಹೆಸರು ಪೂರ್ಣಿಮ. ಎಲ್ಲಿಂದೆಲ್ಲಿಗೆ ಸಂಬಂಧ?

ಲೇಖನ ವರ್ಗ (Category): 

ವಸ್ತ್ರಪುರಾಣ

field_vote: 
Average: 4.3 (3 votes)
To prevent automated spam submissions leave this field empty.

ವಸ್ತ್ರವೆನ್ನುವುದು ಈಗ ಬೇರೆ ಬೇರೆ ದೇಶಗಳಲ್ಲಿ ಬೇರೆ ಬೇರೆ ರೀತಿಗಳಲ್ಲಿ ವಿವಾದಗಳನ್ನು ಸೃಷ್ಟಿಸುತ್ತಿರುವುದನ್ನು ಕಾಣುತ್ತೇವೆ.


ಇಲ್ಲಿ ಅಂಥ ಯಾವುದೋ ವಿವಾದದ ಬಗ್ಗೆ ನಾನು ಇಲ್ಲಿ ಹೇಳಿ ನಿಮ್ಮ ತಲೆ ಹಾಳು ಮಾಡುವುದಿಲ್ಲ ಎಂದು ಕೀಲಿಮಣೆಯ ಮೇಲೆ ಆಣೆ ಮಾಡಿ ಹೇಳುತ್ತೇನೆ.


ವಸ್ತ್ರಪುರಾಣವನ್ನು ಕೈಗೆತ್ತಿಕೊಂಡಾಗ ಕಾಣುವುದು ಸ್ತ್ರೀಲಿಂಗವೇ ಅಂದರೆ ನೀವು ತಪ್ಪು ತಿಳಿದುಕೊಳ್ಳಬಾರದು.


ನಿಮ್ಮ ಕಣ್ಣೆದುರು ಕೂಡ ಈಗ ಪುಟ್ಟ ಹುಡುಗಿಯರ ,ಯುವತಿಯರ ,ಹೆಂಗಸರ, ಅಜ್ಜಿಯಂದಿರ ಉಡುಪುಗಳು ಕುಣಿಯುತ್ತಿವೆಯೆಂದು ನಾನು ಸರಿಯಾಗಿಯೇ ಊಹಿಸುತ್ತಿದ್ದೇನೆ.

ಲೇಖನ ವರ್ಗ (Category): 

ಬಜೆ ಗೋವಿಂದ

field_vote: 
Average: 4 (2 votes)
To prevent automated spam submissions leave this field empty.

  ಗೋವಿಂದನ ಉಚ್ಚಾರ ಬಲು ಸ್ಪಷ್ಟ.

ಲೇಖನ ವರ್ಗ (Category): 

ಸರಸ-ವಿರಸ

field_vote: 
Average: 4.4 (12 votes)
To prevent automated spam submissions leave this field empty.

 

ಅಳುವೂ ಬರಲಿಲ್ಲ, ಅವಳೂ ಬರಲಿಲ್ಲ, ಒರಗಲೂ ಇಲ್ಲ. ಹಾಗಾಗಿ, ನಾನೇ ಅವಳ ಬಳಿ ಹೋಗಿ "what is your ಸಂಕಟ ?" ಎಂದು ಕಂಗ್ಲೀಷ್’ನಲ್ಲಿ ಕೇಳೋಣ ಎಂದು ಯೋಚಿಸಿದೆ. ಹಾಗೆ ಕೇಳಿದರೆ ಸರಿ ಹೋಗುತ್ತೋ ಇಲ್ಲವೋ  ’you are my ಸಂಕಟ’ ಅಂದರೆ ಏನು ಮಾಡುವುದು.  ಹೋಗಲಿ,  ಟೀ.ವಿ ಕನ್ನಡದಲ್ಲಿ  "ಹೇನಾಯ್ತು ? " ಅಂತ ಕೇಳಲೇ?  "ಹೇನಿಲ್ಲ" ಅಂದುಬಿಟ್ಟರೆ ? ಸರಿ, ಸರಸವಾಗಿ ಡಾ|ರಾಜ್ ಶೈಲಿಯಲ್ಲಿ "ಕೋಪವೇತಕೇ ನನ್ನಲೀ ಹೇಳುಬಾ ಪ್ರೇಯಸೀ " ಎಂದು ಹಾಡೋಣ ಅಂತ ಹತ್ತಿರ ಹೋದರೆ, ಅವಳ ಮುಖ  "ಬಾರಾ... ಜಗಳಕೆ ಬಾರಾ" ಎಂದು ಹಾಡುವಂತೆ ತೋರಿತು. 
ಇದ್ಯಾವುದೂ ಬೇಡ. ಸರಸದ ಮಾತೇ ಸರಿ ಎಂದು ತೀರ್ಮಾನ ಮಾಡಿ "ನೀ ಸಿಟ್ಟು ಮಾಡಿಕೊಂಡಾಗ ಕೆಂಪು ಕೆಂಪಾಗಿ ಕಾಣೋದು ನೋಡಿ ಮನೆಯಲ್ಲಿ ಟೊಮ್ಯಾಟೋ ಮುಗಿದಿರೋದು ನೆನಪಾಯ್ತು ನೋಡು " ಅಂದೇ ಬಿಟ್ಟೆ. ಸದ್ಯ, ’ನಿಮ್ಮ ಹೊಟ್ಟೆ ನೋಡಿದಾಗಲೆಲ್ಲ ಕುಂಬಳಕಾಯಿ ಹುಳಿ ತಿನ್ನಬೇಕು ಅನ್ನಿಸುತ್ತೆ’ ಅಂತ ಅವಳು ಹೇಳಲಿಲ್ಲ. ನನ್ನ ಆ ಮಾತಿಗೆ ಅವಳು ಇನ್ನೂ ಕೆಂಪಾದಳು. ನಾಚಿಕೆಯಿಂದಲೋ ಅಥವಾ ಹೆಚ್ಚಿನ ಸಿಟ್ಟಿನಿಂದಲೋ ತಿಳಿಯದಾಯಿತು. ಮುಂದುವರೆಸಿದೆ "ಇದನ್ನೇ ಹೇಳೋದು... ಕೆಂಪೇ ಕೆಂಪೋತ್ಪತ್ತಿ:  ಅಂತ ".  ಆಗ ನಿಜಕ್ಕೂ ನಾಚಿಕೆಯ ಕೆಂಪೇರಿ ನಗು ಅಳು ಎರಡೂ ಒಟ್ಟಿಗೆ ಬಂದೇ ಬಿಟ್ಟಿತು. 
"ಈಗಲಾದರೂ ವಿಷಯ ಹೇಳು ಕೆಂಪಮ್ಮಾ " ಅಂದೆ. ನಾರಿ ನುಡಿದಳು "ಇವತ್ತು ಬೆಳಿಗ್ಗೆ ಇಂದ ನಾನೂ ಕಾಯ್ತಾ ಇದ್ದೀನಿ. ನನಗೆ ಶುಭಾಶಯ ಹೇಳಲೇ ಇಲ್ಲ ನೀವು". ಹೌದು, ಈಗಲೂ ಹೇಳಿಲ್ಲ ! ನಾನೇನು ಮಾಡಲಿ ಯಾವುದೋ ತಿಂಗಳು ಯಾವುದೋ ದಿನ ಹುಟ್ಟಿದರೆ ಹೇಗೆ ನೆನಪು ಇರುತ್ತೆ. ಅದೇ, ನಮ್ಮ ಪಕ್ಕದ ಮನೆ ರೋಜ ನೋಡಿ. ಜನವರಿ ಒಂದನೇ ತಾರೀಖು ಹುಟ್ಟಿದಳಂತೆ. ಹಾಗಂತ ಇವಳೇ ಹೇಳಿದ್ದು. ವಿಷಯ ತಿಳಿದಾಗಿನಿಂದ ಪ್ರತೀ ವರ್ಷ ತಪ್ಪದೆ, ಅವಳ ಗಂಡ ಅವಳಿಗೆ ವಿಶ್ ಮಾಡದಿದ್ದರೂ, ನಾನಂತೂ ಮಾಡಿದ್ದೇನೆ. ಹೋಗ್ಲಿ ಬಿಡಿ, ವಿಷಯಕ್ಕೆ ಬರೋಣ. 
ಸಮಾಧಾನ ಮಾಡುವಂತೆ ಹೇಳಿದೆ "ಅಲ್ವೇ, ನನಗೆ ನೆನಪಿಲ್ಲಾ ಅಂತ ಅಂದುಕೊಂಡಿದ್ದೀಯಾ. ಆ ಹಾಳಾದ ಹೂವಿನ ಅಂಗಡಿಯವನಿಗೆ ಬೆಳಿಗ್ಗೆ ಒಂಬತ್ತು ಘಂಟೆಗೆ ಸರಿಯಾಗಿ ಹೂವಿನ ಬುಕೆ ತೆಗೆದುಕೊಂಡು ಬಾ ಅಂತ ನೆನ್ನೆ ಸಂಜೆ ದುಡ್ಡು ಕೊಟ್ಟಿದ್ದೆ. ನೋಡು, ಇನ್ನೂ ಬಂದಿಲ್ಲ. ಅಲ್ಲಾ, ಹೂವಂತಹ ನಿನ್ನ ಮನಸ್ಸನ್ನು ಹೂವಿನಿಂದ ವಿಶ್ ಮಾಡುವುದು ಬಿಟ್ಟು ಬರೀ ಕೈಯಲ್ಲಿ ವಿಶ್ ಮಾಡಲಿಕ್ಕೆ ನಾನೇನು ಬಿಕನಾಸೀನೇ? " ಅಂತ ನನ್ನ ನಾನೇ ಬೈದುಕೊಂಡೆ. ಸೂರ್ಯಕಾಂತಿ ಹೂವಿನಂತೆ ಅರಳಿದ ಅವಳ ಮುಖದಲ್ಲಿನ ಬಾಯಿಂದ ನುಡಿ ಮುತ್ತುಗಳು ಉರುಳಿತು "ಬರೀ ಹೂವಿನ ಬುಕೆ ನಾ". 
ಸಾವರಿಸಿಕೊಂಡು  "ಹೂವಿನ ಬುಕೆ ಇಂದ ಒಂದು ಕೆಂಪು ರೋಜನ್ನು ತೆಗೆದುಕೊಂಡು ಮುಡಿದ ಮೇಲೆ ಹೊರಗಡೆ ಊಟಕ್ಕೆ ಹೋಗೋಣ ಅಂತ ನನ್ನ ಪ್ಲಾನು" ಅಂತ ಇಲ್ಲದ ಪ್ಲಾನು ಹೊರಬಿಟ್ಟೆ. ಅವಳು ಬಿಟ್ಟಾಳೆಯೇ "ಮತ್ತೊಂದು ರೋಸ್ ತೆಗೆದುಕೊಂಡು ನಿಮ್ಮ ಕಿವಿ ಮೇಲೆ ಇಟ್ಕೊಂಡು ಹೋದರೆ ಹೇಗೆ? ಅಲ್ರೀ, ಬೆಳಿಗ್ಗೆ ಸೊಪ್ಪಿನ ಹುಳಿ ಮಾಡು ಅಂತ ಹೇಳಿದ್ದು, ನಾಳೆಗಾ? ". ಥತ್! ಯಾಕೋ ಇವತ್ತು ಎದ್ದ ಘಳಿಗೆ ಚೆನ್ನಾಗಿಲ್ಲ. ಒಂದು ಹೇಳಿದರೆ ಇನ್ನೊಂದರಲ್ಲಿ ಸಿಕ್ಕಿಹಾಕಿಕೊಳ್ಳುತ್ತಿದ್ದೇನೆ.
"ಅಲ್ಲ, ವಿಶಾಲೂ. ನಿನಗೆ ಸೊಪ್ಪಿನ ಹುಳಿ ಇಷ್ಟ ಅಲ್ವಾ. ಅದಕ್ಕೇ ಹೇಳಿದ್ದು" ಅಂದೆ. ವಿಶಾಲೂ "ನನಗೆ ಸೊಪ್ಪು ಇಷ್ಟ ಅಂತ ನಾನೇ ಮಾಡಿಕೊಂಡು ತಿನ್ನಬೇಕಾ. ನೀವು ಮಾಡೋದು ತಾನೇ ? " ಅನ್ನೋದೇ. ಯಾಕೋ ವ್ಯಾಪಾರ ಗಿಟ್ತಾ ಇಲ್ಲ ಅಂತ ಅಂದುಕೊಂಡು "ಸರಿ, ಅದು ಬಿಡು. ಈಗ ಹೇಳು, ಯಾವ ಹೋಟಲ್ಲಿಗೆ ಹೋಗೋಣ ?". ವಿಶಾಲೂ ಹೇಳಿದಳು "ಎಂಟನೇ ಕ್ರಾಸ್’ನಲ್ಲಿರೋ ಜನತಾ ಹೋಟೆಲ್ಲಿಗೆ ಹೋಗೋಣ ? ". ನಾನು ಬಿಗುಮಾನದಿಂದ ನುಡಿದೆ "ಥತ್! ಇಂತಹ ದಿನಾನೂ ನಿನ್ನನ್ನ ಆ ದರಿದ್ರ ಹೋಟೆಲ್ಲಿಗೆ ಕರೆದುಕೊಂಡು ಹೋಗ್ತೀನಾ?  ಬೇರೇ ಕಡೆ ಹೋಗೋಣ". ವಿಶಾಲೂ ಪ್ರತಿ ನುಡಿದಳು "ಅಲ್ರೀ, ಹಾಗಲ್ಲ, ಊಟ ಆದ ಮೇಲೆ ಅಲ್ಲಿಂದ ರಾಜರತ್ನಂ ಜುವೆಲರ್ಸ್’ಗೆ ನೆಡೆದೇ ಹೋಗಬಹುದು. ಸುಮ್ಮನೆ ಆಟೋ ಖರ್ಚು ಇರೋಲ್ಲ. ". ಪಕ್ಕದಲ್ಲೇ ಬಾಂಬ್ ಸಿಡಿದ ಹಾಗೆ ಆಯಿತು.
ಮತ್ತೆ ಸಾವರಿಸಿಕೊಂಡು ನುಡಿದೆ "ಅಲ್ಲಾ, ಇವತ್ತು ಭಾನುವಾರ ಅಲ್ವಾ? ಅಂಗಡಿ ರಜಾ".  ವಿಶಾಲೂ ನುಡಿದಳು "ಹೌದು, ಕಸ್ಟಮರ್ಸ್’ಗೆ ರಜ. ಆದರೆ ಡೆಲಿವರಿ ಕೊಡ್ತಾರೆ". ಇದೇನಪ್ಪ ಹೊಸ ವಿಷಯ ಅಂತ ಮಿಕಿ ಮಿಕಿ ನೋಡಿದೆ. ಅವಳು ಹೇಳಿದಳು "ಹೋದ ವಾರ ಆ ಕಡೆ ಹೋದಾಗ ಒಂದು ಸರ ನೋಡಿದ್ದೇ, ನೀವು ಹೇಳಿದ್ರೀ, ಒಂದು ಒಳ್ಳೇ ದಿನ ಕೊಡಿಸ್ತೀನಿ ಅಂತ. ಜ್ಞ್ನಾಪಕ ಇಲ್ವಾ? ಇದಕ್ಕಿಂತಾ ಒಳ್ಳೇ ದಿನ ಬೇಕಾ ? ನೆನ್ನೆ ಅಂಗಡಿಯವರಿಗೆ ಹೇಳಿ ಬಂದಿದ್ದೆ. ನಾಳೆ ಬರ್ತೀವಿ ತೆಗೆದಿಟ್ಟಿರಿ ಅಂತ. ಹೇಗಿದ್ರೂ ನೀವೂ ರೆಡಿ ಇದ್ದೀರಾ. ಮೊದಲು ಅಂಗಡಿಗೆ ಹೋಗಿ, ಸರ ತೆಗೆದುಕೊಂಡು ಆಮೇಲೆ ಊಟಕ್ಕೆ ಹೋಗೋಣ. ಸದ್ಯ, ಊಟದಲ್ಲಿ ನಿಧಾನ ಆಗಿ ಅಂಗಡಿ ಮುಚ್ಚಿಬಿಟ್ಟಾರು ".
ಮನದಲ್ಲೇ ಹಾಡಿಕೊಂಡೆ "ದಾರಿ ಕಾಣದಾಗಿದೇ ರಾಘವೇಂದ್ರನೇ...". ಇಬ್ಬರೂ ಹೊರಗೆ ಹೊರಟೆವು. ವಿಶೇಷವಾಗಿ ನಾವು ಹೊರಗೆ ಹೊರಟಾಗ ಹೇಗೋ ಕೊನೆ ಮನೆ ಅನಸೂಯಾಬಾಯಿಗೆ ತಿಳಿದು ಹೋಗುತ್ತದೆ. ಅವರೂ ಅದೇ ಸಮಯಕ್ಕೆ ಏನೋ ಕೆಲಸ ಇರುವ ಹಾಗೆ, ಹೊರಗೆ ಬಂದು ನಮ್ಮಿಂದ ವಿಷಯ ತಿಳಿದುಕೊಂಡ ಮೇಲೇನೇ ನಮಗೆ ಮುಂದೆ ಹೋಗಲು ಅನುಮತಿ ಸಿಗುವುದು. ಅಲ್ಲಿಯವರೆಗೆ ಜಪ್ಪಯ್ಯ ಅಂದರೂ ಬಿಡಲ್ಲ. ನನಗೋ ಅವರು ಬಂದರೇ ಆಗೋಲ್ಲ. ನಾನು ಸಿಡಿ ಸಿಡಿ ಅನ್ನುವುದು ಅವರು ಅದನ್ನು ಲೆಕ್ಕಿಸದೆ ಇರುವುದು ಎಲ್ಲ ಮಾಮೂಲು. ಇಂದೂ ಹಾಗೇ ಆಯಿತು. ನಾವು ಹೊರಗೆ ಕಾಲಿಡುತ್ತಿದ್ದಂತೆಯೇ ಅವರೂ ಹಾಗೇ ಸುಮ್ಮನೆ ಹಾದು ಹೋಗುವವರಂತೆ ನಮ್ಮನ್ನು ನೋಡಿ ನಿಂತು ಹಲ್ಲುಗಿಂಜಿದರು. ಇಂದು ಸಿಡಿಗುಟ್ಟುವ ಸರದಿ ವಿಶಾಲೂದು. ನಾನೇ ಹೋಗಿ ಅವರನ್ನು ಮಾತನಾಡಿಸಿದೆ. ಇದನ್ನು ನಿರೀಕ್ಷಿಸದ ಅವರು ಸೀದ ವಿಶಾಲೂ ಬಳಿ ಬಂದು "ರಾಮಣ್ಣಿಗೆ ಬಂದ ಜ್ವರ ವಾಸಿ ಆಯಿತಾ" ಅನ್ನೋದೇ ? 
ವಿಶಾಲೂ ಹೇಳಿದಳು "ಸ್ವಲ್ಪ ಮೈ ಬೆಚ್ಚಗಿದೆ ಅಂತ ಇದ್ದರು. ಅದಕ್ಕೆ ಸ್ವಲ್ಪ ಗಾಳಿಗೆ ತಿರುಗಾಡಿಕೊಂಡು ಬಂದರೆ ಸರಿ ಹೋಗಬಹುದು ಅಂತ ನಾನೇ ಹೊರಡಿಸಿಕೊಂಡು ಹೋಗುತ್ತಿದ್ದೇನೆ".  ಮೈ ಬೆಚ್ಚಗಾದರೆ ಹೊರಗೆ ತಿರುಗಾಡುವುದೇ? ಸುಳ್ಳು ಹೇಳಲಿಕ್ಕೂ ಬರುವುದಿಲ್ಲ ಇವಳಿಗೆ. ಆದರೆ ನನಗೆ ಜ್ವರ ಯಾವಾಗ ಬಂದಿತ್ತು ?  ನಾನು ಏನು ವಿಷಯ ಎಂದು ಸನ್ನೆ ಮಾಡಿ ಕೇಳಿದಾಗ ಅವಳು ನನ್ನನ್ನು ನೂಕಿಕೊಂಡು "ಸುಮ್ಮನೆ ಬನ್ನಿ"  ಅಂತ ಹೊರಡಿಸಿಕೊಂಡು ಹೋದಳು. ಇವತ್ತೇನೋ ಆಗಿದೆ. ಎಂದೂ ಬಿಡದ ಅನಸೂಯಾಬಾಯಿ ಹೆಚ್ಚು ವಿಷಯ ಕೇಳದೆ ನಮ್ಮನ್ನು ಹಾಗೇ ಬಿಟ್ಟುಬಿಟ್ಟರು. ಆಮೇಲೆ ವಿಷಯ ಹೇಳಿದಳು, ಅವರ ಸೊಸೆ ಸೀಮಂತಕ್ಕೆ ನನಗೂ ಊಟಕ್ಕೆ ಹೇಳಿದ್ದರಂತೆ. ಅಲ್ಲಿ ನನಗೇನು ಕೆಲಸ ಅಂತ ಇವಳು ನನಗೆ ಜ್ವರ ಅಂತ ಹೇಳಿದ್ದಳು. ಒಟ್ಟಾರೆ ನನಗೆ ಹಬ್ಬದೂಟ ಮಿಸ್ ಆಯಿತು.
ಅಂತೂ ನಮ್ಮ ಸವಾರಿ ಅಂಗಡಿಯ ಕಡೆ ನೆಡೆದಿತ್ತು. ಮನದಲ್ಲೇ ನೂರು ಬಾರಿ "ಅಂಗಡಿ ಬಾಗಿಲು ಮುಚ್ಚಿರಲಿ" ಎಂದು ಕೇಳಿಕೊಂಡೆ. ಕಣ್ಣಲ್ಲಿ ಕಸವೇನೋ ಬಿತ್ತು ಎಂದು ಉಜ್ಜಿಕೊಂಡಾಗ ಕಣ್ಣಿನ ರೆಪ್ಪೆಯ ಕೂದಲು ಬೆರಳಿಗೆ ಅಂಟಿಕೊಂಡಿತು. "ಅಂಗಡಿ ಬಾಗಿಲು ಮುಚ್ಚಿರಲಿ" ಎಂದು ಮನದಲ್ಲೇ ಮತ್ತೆ ಅಂದುಕೊಂಡು ಅದನ್ನು ಉಫ಼್ ಮಾಡಿದೆ. ಅಂಗಡಿಯ ಬಾಗಿಲಿಗೆ ಹೋದರೆ ..... ಬಾಗಿಲು ಬೀಗ !!!!!!! "ಯುರೇಕಾ" ಎಂದು ಕೂಗಲಿಲ್ಲ ಅಷ್ಟೇ!
ವಿಶಾಲೂ ಅಂಗಡಿಯವನಿಗೆ ಮನದಲ್ಲೇ ನೂರು ಬಾರಿ ಶಾಪ ಹಾಕಿದಳು. ನಾನು ನೂರು ಬಾರಿ ಆಶೀರ್ವಾದ ಮಾಡಿದ್ದೆ. ಅಲ್ಲಿಂದ ಸೀದ ಮನೆ ಕಡೆ ಹೊರಟೆವು. ಹೋಟಲ್ಲೂ ಇಲ್ಲ ಏನೂ ಇಲ್ಲ. ಹೇಗಿದ್ರೂ ಸೊಪ್ಪಿನ ಹುಳಿ ರೆಡಿ ಇತ್ತಲ್ಲ. ಕಣ್ಣುಗಳೆರಡೂ ಕನ್ನಂಬಾಡಿ ಕಟ್ಟೆಯಾಗಿತ್ತು. ಯಾವ ಕ್ಷಣದಲ್ಲಾದರೂ ಕಟ್ಟೆ ಒಡೆದು ನೀರು ಧೋ ಎಂದು ಸುರಿಯುವ ಸ್ಥಿತಿಯಲ್ಲಿತ್ತು. ಮನೆ ತಲುಪಿದ ಕೂಡಲೆ, ಅವಳ ಹುಟ್ಟುಹಬ್ಬಕ್ಕೆಂದು,  ಮೊದಲೇ ಖರೀದಿ ಮಾಡಿಟ್ಟಿದ್ದ ಚಿನ್ನದ ಸರ ತೆಗೆದು, ಅವಳ ಕೊರಳಿಗೆ ಹಾಕಿದೆ. ಈಗ ನಿಜಕ್ಕೂ ಜೋರಾಗಿ ಅಳು ಬಂದಿತ್ತು. ಒಳ್ಳೇದಕ್ಕೂ ಅಳು ಕೆಟ್ಟದಕ್ಕೂ ಅಳು. ನನಗೆ ಅರ್ಥವೇ ಆಗೋಲ್ಲ.
ಈಗ ನಿಜಕ್ಕೂ ಕೇಳಿದೆ "what is your ಸಂಕಟ ? ಸರ ಚೆನ್ನಾಗಿಲ್ವಾ? " ಅಂತ. ಏನೋ ಹೇಳಲಿಕ್ಕೆ ಬಾಯಿ ತೆರೆದಳು ಆದರೆ ಅದೇ ಸಮಯಕ್ಕೆ ಯಾರೋ ಬಾಗಿಲು ಬಡಿದರು. ತೆರೆದ ಬಾಯಿ ಮುಚ್ಚಿ, ಮುಚ್ಚಿದ್ದ ಬಾಗಿಲು ತೆರೆಯಲು, ಅಲ್ಲಿ ಅಂಗಡಿಯವನು ನಿಂತಿದ್ದ. "ಸಾರಿ ಮೇಡಮ್, ಬೇರೇ ಕೆಲಸ ಇತ್ತು ಅಂತ ಅಂಗಡಿ ಬೇಗ ಮುಚ್ಚಿದೆ. ಆದರೆ ಖಾಯಂ ಗಿರಾಕಿ ನೀವು ಅಂತ ನಿಮ್ಮ ಆರ್ಡರ್ ಮನೆಗೇ ತಲುಪಿಸೋಣ ಅಂತ ಬಂದೆ. ಇವತ್ತು ಸ್ಪೆಶಲ್ಲು ದಿನ ಅಲ್ವಾ.........." ನಮ್ಮ ಮನೆ ವಿಷಯ ನಮಗಿಂತಲೂ ಹೊರಗಿನವರಿಗೆ ಚೆನ್ನಾಗಿ ಗೊತ್ತಿರುತ್ತೆ.
ಅವನು ತಂದುಕೊಟ್ಟ ಪ್ಯಾಕೆಟ್ ತೆರೆದು ಅದರಿಂದ ಒಂದು ಡಬ್ಬಿ ಹೊರತೆಗೆದಳು. ನನ್ನೆದೆ ಇನ್ನೂ ಜೋರಾಗಿ ಹೊಡೆದುಕೊಳ್ಳಲು ಶುರು ಮಾಡಿತ್ತು. ನಾನು ಸರ್ಪ್ರೈಸ್ ಮಾಡಲು ತಂದಿದ್ದರೆ ಇವಳು ಇನ್ನೊಂದು ತೆಗೆದಿಟ್ಟು ಕೊಂಡಿದ್ದಾಳೆ. ಡಬ್ಬಿಯಿಂದ ಒಂದು ಉಂಗುರ ಹೊರತೆಗೆದು, ನನ್ನ ಬೆರಳಿಗೆ ತೊಡಿಸಿ "happy anniversary" ಅಂದಳು !!!!! 
ಅಂದರೇ,  ಇಂದು ಅವಳ ಹುಟ್ಟಿದಹಬ್ಬ ಅಲ್ಲಾ ! ನಾನು ಹುಟ್ಟಿದಹಬ್ಬ ಅಂತ ಸರ ತಂದಿದ್ದೆ. ಮುಂಚೇನೇ ಗೊತ್ತಿದ್ದರೆ ಏನು ದೊಡ್ಡ ಸರ ತರ್ತಾ ಇದ್ನೇ ?  ಇಂದು ನಮ್ಮ ಮದುವೆಯಾದ ದಿನ. ಇಬ್ಬರೂ ಒಬ್ಬರಿಗೊಬ್ಬರು ಸರ್ಪ್ರೈಸ್ ಮಾಡಿಕೊಂಡಿದ್ದೆವು ! ಕಡೆಗೂ ನನ್ನೆದೆಗೆ ಒರಗಿ "ಅಲ್ರೀ, ಇವತ್ತು ನಮ್ಮ ಮದುವೆಯಾದ ದಿನ ಅಂತ ಗೊತ್ತಿದ್ದೂ ನಾಟಕ ಆಡಿದಿರಾ" ಅಂದಳು. ನಾನು ನುಡಿದೆ "ಖಂಡಿತಾ ನೆನಪಿರಲಿಲ್ಲ. ಸಾಮಾನ್ಯವಾಗಿ ನಾನು ದುರ್ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ" !!!

ಬೆಳಿಗ್ಗೆ ಇಂದ ಏನೋ ಧುಮ ಧುಮ ಅನ್ನುತ್ತಾ ಓಡಾಡುತ್ತಿದ್ದಳು ವಿಶಾಲೂ. ಏನೂ ಅಂತ ಹೇಳ್ತಿಲ್ಲ. ಕೆನ್ನೆಗಳು ಭಾಗಶ: ಕೆಂಪಾಗಿದ್ದು,  ಕಣ್ಣಲ್ಲಿ ಅಲ್ಲಲ್ಲೇ ನೀರು ತುಂಬಿದ್ದು, ತುಂತುರು ಅಥವಾ ಭಾರಿ ಅಳು ಬರುವ ಸಾಧ್ಯತೆ ಇತ್ತು. ನನ್ನೆದೆಗೆ ಒರಗಿ ಅತ್ತಾಗ (ಅತ್ತರೆ) ಕಾಟನ್ ಶರ್ಟಿನ ಜೊತೆ ಹೃದಯಕ್ಕೆ ಹತ್ತಿರವಾದ ಬನಿಯನ್ ಕೂಡಾ ಎಲ್ಲಿ ಒದ್ದೆಯಾಗುವುದೋ ಎಂದು ಅಲೋಚಿಸಿ, ನೀರು ಬಿದ್ದರೂ ಜಾರಿ ಹೋಗುವುದಕ್ಕೆ ಹತ್ತಿರವಾದ ಪಾಲಿಸ್ಟರ್ ಶರ್ಟು ಧರಿಸಿ ಕುಳಿತೆ.

ಅಳುವೂ ಬರಲಿಲ್ಲ, ಅವಳೂ ಬರಲಿಲ್ಲ, ಒರಗಲೂ ಇಲ್ಲ. ಹಾಗಾಗಿ, ನಾನೇ ಅವಳ ಬಳಿ ಹೋಗಿ "what is your ಸಂಕಟ ?" ಎಂದು ಕಂಗ್ಲೀಷ್’ನಲ್ಲಿ ಕೇಳೋಣ ಎಂದು ಯೋಚಿಸಿದೆ. ಹಾಗೆ ಕೇಳಿದರೆ ಸರಿ ಹೋಗುತ್ತೋ ಇಲ್ಲವೋ  ’you are my ಸಂಕಟ’ ಅಂದರೆ ಏನು ಮಾಡುವುದು.  ಹೋಗಲಿ,  ಟೀ.ವಿ ಕನ್ನಡದಲ್ಲಿ  "ಹೇನಾಯ್ತು ? " ಅಂತ ಕೇಳಲೇ?  "ಹೇನಿಲ್ಲ" ಅಂದುಬಿಟ್ಟರೆ ? ಸರಿ, ಸರಸವಾಗಿ ಡಾ|ರಾಜ್ ಶೈಲಿಯಲ್ಲಿ "ಕೋಪವೇತಕೇ ನನ್ನಲೀ ಹೇಳುಬಾ ಪ್ರೇಯಸೀ " ಎಂದು ಹಾಡೋಣ ಅಂತ ಹತ್ತಿರ ಹೋದರೆ, ಅವಳ ಮುಖ  "ಬಾರಾ... ಜಗಳಕೆ ಬಾರಾ" ಎಂದು ಹಾಡುವಂತೆ ತೋರಿತು. 

ಲೇಖನ ವರ್ಗ (Category): 

ನಗೆನಗಾರಿಯ ಸಾಮ್ರಾಜ್ಞಿಯಾಗುವತ್ತ ಮೊದಲ ಹೆಜ್ಜೆ

ನಗೆನಗಾರಿ, ಸಂಪದದಲ್ಲಿ ಸಾಮ್ರಾಟರ ಆಟಾಟೋಪಗಳಿಂದ ಭಯಬೀತಗೊಂಡು, ಅಡಗಿಕೊಂಡಿರುವ ಸ್ವಘಟ್ಟಿಯ ಭಕ್ತರು ಸಾಮ್ರಾಜ್ಞಿಯೊಬ್ಬಳ ಹುಡುಕಾಟದಲ್ಲಿರುವರೆಂದು, ಈ ಜಾಗಕ್ಕೆ ನೀನೇ ಸರಿಯಾದ ಆಯ್ಕೆ ಎಂದು,  ಈ ಇಂಚರಳ ಕನಸಿನಲ್ಲಿ ಸ್ವತಃ ಸ್ವಘಟ್ಟಿಯೇ ಪ್ರತ್ಯಕ್ಷವಾಗಿ ಹೇಳಿದ ಮೇಲೆ ನನಗ್ಯಾತಾರ ಭಯ?  

field_vote: 
Average: 4.1 (8 votes)
To prevent automated spam submissions leave this field empty.
ಲೇಖನ ವರ್ಗ (Category): 

ತಲೆಹರಟೆ ಪುರಾಣಂ

field_vote: 
Average: 3.7 (3 votes)
To prevent automated spam submissions leave this field empty.

ಬೆಳಿಗ್ಗೆ ಎದ್ದ ತಕ್ಷಣ 80 % ಜನರು ಕುಡಿಯುವ ಚಹಾ-ಕಾಪಿಯ ಪುರಾಣ ಯಾರಿಗಾದರೂ ಗೊತ್ತಾ ?? ಅಷ್ಟಾದಶ ಪುರಾಣಗಳಲ್ಲಿ 19ನೇ ಪುರಾಣವಾದ ತಲೆಹರಟೆ ಪುರಾಣದಲ್ಲಿ ಪೇಯಪರ್ವದ 420 ನೇ ಶ್ಲೋಕದಲ್ಲಿ ಚಹಾದ ಉಲ್ಲೇಖವಿದೆ. "ನಭಯಂ ಚಾಸ್ತಿ ಜಾಗೃತಃ " ಅಂದರೆ ಚಾ ಕುಡಿದವನಿಗೆ ಯಾವ ಭಯವೂ ಇಲ್ಲ ಅವನು ಸದಾ ಜಾಗೃತನಾಗಿರುತ್ತಾನೆ ಎಂದು ಹೇಳಲಾಗಿದೆ .ಅದರ ಸಂಕ್ಷಿಪ್ತ ವಿವರಣೆಯನ್ನು ಇಲ್ಲಿ ಕೊಟ್ಟಿದ್ದೇನ
ವನವಾಸ - ರಾವಣ ಸಂಹಾರ - ಪಟ್ಟಾಭಿಷೇಕ ಎಲ್ಲ ಆದ ನಂತರ ರಾಮ ಒಮ್ಮೆ ಹೀಗೆ Evening Walk ಗೋಸ್ಕರ ದಂಡಕಾರಣ್ಯದಲ್ಲಿ ಸಂಚರಿಸುತ್ತಿದ್ದಾಗ ಯಾವುದೋ ಒಂದು ಬೇರಿನ ಆರ್ತನಾದ ಅವನಿಗೆ ಕೇಳಿಸಿತು . ಈಗ ಬೇರುಗಳು ಎಲ್ಲಿ ಅಳುತ್ತವೆಯೇ ?? ಎಂಬ ಲಾಜಿಕಲ್ ಪ್ರಶ್ನೆ ಕೇಳಬೇಡಿ .

ಲೇಖನ ವರ್ಗ (Category): 

ಗ್ರಹಚಾರ್ಯ!

field_vote: 
Average: 5 (6 votes)
To prevent automated spam submissions leave this field empty.

’ನಮ್ಮದು ಶಿಸ್ತಿನ ಪಕ್ಷ’: ಹೇಳೋದು ಆಚಾರ
ಬ್ಲ್ಯಾಕ್‌ಮೇಲ್‌ಗೆ ಬಲಿಯಾಗಿ ಇದೋ ಅನಾಚಾರ!
ಇದು ಭಾಜಪ-ರೇಣುಕಾಚಾರ್ಯ ವಿಚಾರ
ಇಂಥ ನಾಯಕರಿರೋದು ನಮ್ಮ ಗ್ರಹಚಾರ!

ಪರಸ್ತ್ರೀಯೊಡನೆ ಅಂದು ಮುದ್ದಾಡಿದವ
ಮತ್ತೆ ಅವಳೊಡನೆಯೇ ಗುದ್ದಾಡಿದವ
ಮಂತ್ರಿಪದವಿಗಾಗಿ ಒದ್ದಾಡಿದವ
ಕುತಂತ್ರದಿಂ ಮಂತ್ರಿಯಾದಂಥವ!

ಇಂಥವಗೆ ಪಕ್ಷ ತಾ ಮಣಿಯಬೇಕಾಯ್ತೆ!
ಮಂತ್ರಿಯೆಂದಿವನ ನಾವ್ ಒಪ್ಪಬೇಕಾಯ್ತೆ!
ಎಂಥ ದಿನ ಬಂತಪ್ಪ, ಹೇ ಯಡ್ಯೂರಪ್ಪ!
ಚಿಂತೆಯಾಗಿದೆ ನಮಗೆ, ಮುಂದೆ ಹೇಗಪ್ಪಾ!

ಲೇಖನ ವರ್ಗ (Category): 

ಮೀಟಿಂಗ್ Crashers !

field_vote: 
Average: 2.3 (3 votes)
To prevent automated spam submissions leave this field empty.
ಲಾಹಿ ದಂಪತಿಗಳು ಇತ್ತೀಚೆಗೆ ಭಾರತದ ಪ್ರಧಾನಿ ಹಾಗೂ ಅಮೇರಿಕದ ರಾಷ್ಟ್ರಪತಿ’ಯವರ ಸಭೆಗೆ ಹೋಗಿ (ನುಗ್ಗಿ) ಬಂದರು. ನನಗೆ ತಿಳಿದ ಮಟ್ಟಿಗೆ ಅವರು ಮಾಡಿದ್ದು ಇಷ್ಟೇ ! ಹೋದರು, ಫೋಟೋ ತೆಗೆಸಿಕೊಂಡರು, ಹೊರ ಬಂದರು, ವದನಪುಸ್ತಕ’ದಲ್ಲಿ ಫೋಟೋಗಳನ್ನು ಹಾಕಿದರು .... ಮುಂದೆ ನೆಡೆದದ್ದು ಚರಿತ್ರೆ .... 
ಎಲ್ಲ ಸಂದರ್ಶನಗಳಲ್ಲೂ ಇವರು, ತಾವು ಮೀಟಿಂಗ್ Crashers ಅಲ್ಲ ಅಂತ ಹೇಳ್ತಾ ಬಂದಿದ್ದಾರೆ ... ಮೀಟಿಂಗ್’ಗೆ ಹೋಗಿ, ಇದ್ದು, ಬಂದ ಮಾತ್ರಕ್ಕೆ ಅದು ಕ್ರಾಶ್ ಅಲ್ಲ ... ಅವರ ಇರುವಿಕೇ ಒಂದು ಕ್ರಾಶ್ ... ರವಿಚಂದ್ರನ್ ಸಿನಿಮಾಗಳಲ್ಲಿ ತೋರಿಸುವಂತೆ ಧ್ವಂಸ ಮಾಡಿದರೇ ಕ್ರಾಶ್ ಅಲ್ಲ ... 
Crashers ಅಂತ ಯಾಕೆ ಕರೆದೆ ಅಂದರೆ, ಇವರುಗಳು ಒಂದು ತರಹ ಹಿಂಸಾತ್ಮಕ ವ್ಯಕ್ತಿಗಳು ... ಚೂರಿ ತೆಗೆದುಕೊಂಡು ಚುಚ್ಚಿದರೆ ಮಾತ್ರ ಹಿಂಸೆ ಅಂತೇನಲ್ಲ ...
ಬಿಟ್ಬಿಡು ಗುರೂ.. ಕೊರೀ ಬೇಡಾ... ರಕ್ತ ಬರ್ತಿದೇ ಅಂದಿರಾ ... ಬಿಡಲ್ಲ... ಮುಖ್ಯ ವಿಚಾರಕ್ಕೆ ಬರ್ತೀನಿ ... ಇಂದಿನ ವಿಚಾರ ಮೀಟಿಂಗ್’ನಲ್ಲಿರೋ ಇಂತಹ ಕ್ರಾಶರ್ಸ್ ಬಗ್ಗೆ ...
ಕೆಲವೆಲ್ಲ ನನಗೆ ಸರಿ ಹೋಗೋಲ್ಲ !! ಏನು ಸರಿ ಹೋಗೋಲ್ಲ ಅಂದ್ರಾ? ಕೇಳಿ ..
ನಾನೊಮ್ಮೆ ಯಾವುದೋ ಹೋಟೆಲ್ಲಿನಲ್ಲಿ ನೆಡೆದ ಮೀಟಿಂಗ್’ಗೆ ಹೋಗಿದ್ದೆ. ನನ್ನಂತಹ ಕೇಳುಗರು, ಅಲ್ಲಲ್ಲೇ ಹಾಕಿದ್ದ ಗುಂಡಗಿನ ಟೇಬಲ್’ನ ಚೇರುಗಳನ್ನು ಅಲಂಕರಿಸಿದ್ದೆವು. ಬೆಳಗಿನಿಂದ ಊಟದ ಸಮಯ ಬರುವವರೆಗೂ ಭಯಂಕರ ಕಸಿವಿಸಿ. ಯಾಕೆ ಅಂದರೆ, ಟೇಬಲ್ ಮೇಲೆ ಹಾಕಿದ್ದ ಬಿಳೀ ವಸ್ತ್ರದ ಒಂದು ಭಾಗ ಇಸ್ತ್ರಿ ಆಗಿರಲಿಲ್ಲ. ಮುದುರು ಮುದುರಾಗಿತ್ತು. ಆ ವಸ್ತ್ರವು ಎಲ್ಲ ಕಡೆ ನೀಟಾಗಿ ಇದ್ದರೂ ಒಂದೆಡೆ ಮಾತ್ರ ಹೀಗಿತ್ತು. ಅದೂ ನಾನು ಕುಳಿತ ಕಡೆ ಮಾತ್ರ. ಥತ್! ಬಟ್ಟೆ ತೆಗೆದುಕೊಂಡು ಹೋಗಿ ಇಸ್ತ್ರಿ ಮಾಡಿಬಿಡೋಣ ಎನ್ನುವಷ್ಟು ಕಸಿವಿಸಿ. 
ಊಟದ ಸಮಯಕ್ಕೆ, ಬೇರೆಡೆ ಖಾಲಿ ಇದ್ದ ಮತ್ತೊಂದು ಚೇರನ್ನು ಹುಡುಕಿ ಕುಳಿತುಕೊಂಡೆ. ವಸ್ತ್ರ ಲಕ್ಷಣವಾಗಿತ್ತು, ಆದರೆ ಅಲ್ಲೇ ಮೂಲೆಯಲ್ಲಿ ಇನ್ನೂ ಶುಚಿ ಮಾಡದ ಊಟದ ಟೇಬಲ್ ಇರಬೇಕೆ? ಹೋಗ್ಲಿ ಅಂತ ಅಂದುಕೊಂಡರೆ, ಸಂಜೆವರೆಗೂ ಮತ್ತೆ ಕಸಿವಿಸಿ. ಈಗೇನಾಯ್ತು ದೊಡ್ಡರೋಗ ಅಂದಿರಾ. ’ಮಜ್ಜಿಗೆ ಹುಳಿ’ಗೆ ಯಾರೋ ಫಲಕ ನೇತು ಹಾಕಿದ್ದು "ಮಜ್ಜಿಗೆ ಹುಳ" ಎಂದು. ಆ ಫಲಕ ನೋಡೀ ನೋಡೀ ಮನಸ್ಸಿಗೆ ಹಿಂಸೆ ಮಾಡಿಕೊಳ್ಳುತ್ತಿದ್ದೆ !!
ಇದಿಷ್ಟು ಪೀಠಿಕೆ ... ಆಫೀಸಿನ ಮೀಟಿಂಗ್’ಗಳಲ್ಲಿ ನನಗಾಗೋ ಹಿಂಸೆಗಳನ್ನು ಕೇಳಿ:
೧. ಎಲ್ಲರೂ ಧ್ಯಾನಾಸಕ್ತರಾಗಿ ಕುಳಿತರಲು, ನನ್ನ ಪಕ್ಕದಲ್ಲಿ ಕುಳಿತಿರುವವನು ಆಗಾಗ ತನ್ನ ಪೆನ್ನನ್ನು ಆನ್-ಆಫ್ ಮಾಡುತ್ತಿದ್ದ. ಕಿಟಿ-ಕಿಟಿ ಕಿಟಿ-ಕಿಟಿ ಕಿಟಿ-ಕಿಟಿ ... 
೨. ಕೆಲವರು ಉಗುರು ಕಚ್ಚುವುದು, ಪೆನ್ ಕಚ್ಚುವುದು ಇತ್ಯಾದಿಗಳನ್ನು ಮೀಟಿಂಗ್ ನೆಡೆಯುವಾಗಲೇ ಮಾಡುವುದು .. ಬಹುಶ: ನಾನಿದ್ದಾಗ ಮಾತ್ರ ಅಂತ ಅನ್ನಿಸುತ್ತೆ !!
೩. ನಾ ಕಂಡ ಮತ್ತೊಬ್ಬರದು ಮಹಾ ವಿಶೇಷ ... ಪ್ರತಿ ಐದು ನಿಮಿಷಕ್ಕೆ ಕಿವಿಯಲ್ಲಿ ಬೆರಳ ತೂರಿಸಿ ಕೂದಲು ಕಿತ್ತುವುದು. ಅಲ್ಲಾ, ಐದು ನಿಮಿಷಕ್ಕೇ ಕೂದಲು ಮತ್ತೆ ಬೆಳೆಯುತ್ತದೆಯೇ?
೪. ಇಲ್ಲಿನ ಮೀಟಿಂಗ್’ಗಳು ನೆಡೆಯುವಾಗಲೇ ಪಾನೀಯ ಅಥವಾ ಆಹಾರ ಸೇವನೆ ಮಾಡಬಹುದು. ನನ್ನ ಟೀಮಿನ ಒಬ್ಬಾತ, ಎಲ್ಲೆಡೆ ನಿಶಬ್ದವಾಗಿರಲು ಚಿಪ್ಸ್ ತಿನ್ನುತ್ತಾನೆ .... ಕರಂ ಕರಂ ಕರಂ .... ಚಿತ್ರ ಹಿಂಸೆ .... ಮೈ ಪರಚಿಕೊಳ್ಳುವಂತೆ ಆಗುತ್ತೆ, ನನಗೆ...
೫. ಬಹಳ ವರ್ಷಗಳ ಮುನ್ನ ಒಬ್ಬಾತನ ವಿಶೇಷ ಗುಣ ಕಂಡು ದಂಗುಬಡಿದು ಹೋಗಿದ್ದೆ. ಮೀಟಿಂಗ್ ಸಮಯದಲ್ಲಿ ಹೋಟೆಲ್ಲಿನಿಂದ ಕಾಫೀ ತರಿಸಿದ್ದೆವು. ಈತ, ಲೋಟದಲ್ಲಿನ ಕಾಫೀ ಹೀರುವಾಗ ಒಂದೆರಡು ಹನಿ ಲೋಟದ ಹೊರಗೆ ಸೋರಿತು. ಎಲ್ಲಿ ಕೆಳಗೆ ಬೀಳುತ್ತೋ ಎಂದು ಥಟ್ಟನೆ ಪಿಂಗಾಣಿ ಲೋಟದ ಹೊರಭಾಗ ನೆಕ್ಕೋದೇ?
೬. ಮತ್ತೊಬ್ಬನ ವಿಚಾರ ಕೇಳಿ. ಮೀಟಿಂಗ್ ಶುರುವಾದ ಮೇಲೆ ಈತ ಒಳಗೆ ಬರುತ್ತಾನೆ. ರೂಮಿನ ಎಲ್ಲೆಡೆ ಜನ ಕುಳಿತರಲು, ಮಧ್ಯದಲ್ಲೊಂದೆಡೆ ಕುರ್ಚಿ ಎಳೆದುಕೊಂಡು ಕೂರುತ್ತಾನೆ. ನೀವು ಬ್ಯುಸಿ ಇದ್ದರೂ ಅವನ ’ಗುಡ್ ಮಾರ್ನಿಂಗ್’ ನೀವು ಕೇಳಲೇಬೇಕು. ತಿರುಗಾಲಿ ಕುರ್ಚಿಯಲ್ಲಿ ಕುಳಿತು ಆಗಾಗ ಎಲ್ಲರ ಮುಖಗಳನ್ನೂ ಒಮ್ಮೆ ನೋಡುವುದು, ಸ್ವಲ್ಪ ಹೊತ್ತು ಸುಮ್ಮನೆ ಕೂಡುವುದು, ಮತ್ತೊಮ್ಮೆ ಎಲ್ಲರ ಮುಖ ನೋಡುವುದು ಹೀಗೆ ....
೭. ಮತ್ತೊಬ್ಬನ ಕಥೆ ಕೇಳಿ. ಮೀಟಿಂಗ್’ಗೆ ಬರುವ ಮುನ್ನ ಪೆಪ್ಸಿ’ಯ ಪ್ಲಾಸ್ಟಿಕ್ ಬಾಟ್ಲಿ ಹಿಡಿದು ಬರುತ್ತಾನೆ. ಕುರ್ಚಿಯಲ್ಲಿ ಕುಳಿತು, ಮುಚ್ಚುಳ ತೆರೆದು, ಒಂದು ಸಿಪ್ ಹೀರಿ, ಮುಚ್ಚುಳ ಮುಚ್ಚಿ, ಬಾಟ್ಲಿ ಪಕ್ಕಕ್ಕೆ ಇರಿಸಿ, ಕೈ ಒರೆಸಿಕೊಂಡು, ಬಾಯಿ ಒರೆಸಿಕೊಂಡು, ಬಾಯಿಗೆ ಕೈ ಅಡ್ಡ ಹಿಡಿದು ಮೆಲ್ಲಗೆ ತೇಗಿ, ಮತ್ತೆ ಬಾಟ್ಲಿ ತೆಗೆದುಕೊಂಡು, ಮುಚ್ಚುಳ ತೆರೆದು, ಒಂದು ಸಿಪ್ ಹೀರಿ, ಮುಚ್ಚುಳ ಮುಚ್ಚಿ, ಬಾಟ್ಲಿ ಪಕ್ಕಕ್ಕೆ ಇರಿಸಿ, ಕೈ ಒರೆಸಿಕೊಂಡು, ಬಾಯಿ ಒರೆಸಿಕೊಂಡು, ಬಾಯಿಗೆ ಕೈ ಅಡ್ಡ ಹಿಡಿದು ಮೆಲ್ಲಗೆ ತೇಗಿ,ಮತ್ತೆ ಬಾಟ್ಲಿ ತೆಗೆದುಕೊಂಡು, ...... ನನ್ನನ್ನು ಹಿಡ್ಕೊಂಡ್ ಹೊಡೆಯೋಣ ಅನ್ನಿಸುತ್ತಾ ಇದೆಯಾ ? ಅಲ್ರೀ, ಎರಡು ಸಾರಿ ಓದಿದ್ದಕ್ಕೇ ನಿಮಗೆ ಹೀಗೆ ಅನ್ನಿಸಿರಬೇಕಾದರೆ, ಪ್ರತಿ ದಿನ, ಇಡೀ ಒಂದು ಲೀಟರ್ ಕುಡಿಯುವವರೆಗೂ ನನ್ನ ಗಮನವನ್ನು ಕಿತ್ತು ಸೆಳೆವಾಗ ನನಗೆ ಹೇಗೆ ಅನ್ನಿಸಿರಬೇಡ?
೮. ಈಗ ಹೇಳೋ ವಿಷಯ ನಿಮಗೆ ಬ್ಯಾಸರ ತರಿಸಿದರೆ ನನ್ನ ಪರಿಸ್ಥಿತಿಯನ್ನೂ ಒಮ್ಮೆ ಊಹಿಸಿ ಆಮೇಲೆ ಅಸಹ್ಯ ಪಟ್ಟುಕೊಳ್ಳಿ, ಆಯ್ತಾ? ನನ್ನೆದುರಿಗೆ ಕುಳಿತ ಈ ಮಹಾಶಯ, ತನ್ನ ಪೆನ್ಸಿಲ್’ನ ಹಿಂಭಾಗವನ್ನು ಕಿವಿಯಲ್ಲಿ ತೂರಿಸಿ ಓಡಾಡಿಸುತ್ತ ಆನಂದಪಡುತ್ತಿದ್ದ. ನನಗೆ ಏನೋ ನೋಟ್ ಮಾಡಿಕೊಳ್ಳುವುದಿತ್ತು. ಪೆನ್ನಿನಲ್ಲಿ ಬರೆದುಕೊಳ್ಳಹತ್ತಿದೆ. ಯಾಕೋ ಏನೋ ಬರೆಯಲೇ ಇಲ್ಲ. ಒಮ್ಮೆ ಒದರಿ ನಂತರ ಬರೆಯಲು ಪ್ರಯತ್ನ ಮಾಡಿದೆ. ನನ್ನ ಪೆನ್ ಬರೆಯಲು ಮುಷ್ಕರ ಹೂಡಿತ್ತು. ನನ್ನ ಅವಸ್ತೆ ನೋಡಿ, ಎದುರಿಗೆ ಕುಳಿತಿದ್ದ ಆ ಮಹಾಶಯ ತನ್ನ ಪೆನ್ಸಿಲ್ ಅನ್ನು ನನಗೆ ಕೊಡೋದೇ? ತೆಗೆದುಕೊಳ್ಳಲೋ ಬೇಡವೋ, ನೀವೇ ಹೇಳಿ.
ಈವರೆಗೂ ನನಗೆ ಸರಿ ಬೀಳದ ವಿಷಯಗಳ ೧% ಮಾತ್ರ ಕೇಳಿದ್ದಕ್ಕೆ ಬಹಳ ಸಂತೋಷ. ನಿಮ್ಮ ಮೀಟಿಂಗ್ ಅನುಭವಗಳನ್ನು ಹಂಚಿಕೊಳ್ಳಿ. ನೀವೂ ನನ್ನಂತೇನಾ ಎಂದು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ ... ಯಾಕೆ ಅಂದಿರಾ? ... ನನ್ನ ಬಗ್ಗೆ ಒಂದು ದೂರು ಇದೆ ... "ಜಗತ್ತಿನಲ್ಲಿ ಇರುವವರೆಲ್ಲ ಒಂದು ಟೈಪು ಆದರೆ ನೀವೇ ಒಂದು ಟೈಪು" ಅಂತ ...... 

ಸಲಾಹಿ ದಂಪತಿಗಳು ಇತ್ತೀಚೆಗೆ ಭಾರತದ ಪ್ರಧಾನಿ ಹಾಗೂ ಅಮೇರಿಕದ ರಾಷ್ಟ್ರಪತಿ’ಯವರ ಸಭೆಗೆ ಹೋಗಿ (ನುಗ್ಗಿ) ಬಂದರು. ನನಗೆ ತಿಳಿದ ಮಟ್ಟಿಗೆ ಅವರು ಮಾಡಿದ್ದು ಇಷ್ಟೇ ! ಹೋದರು, ಫೋಟೋ ತೆಗೆಸಿಕೊಂಡರು, ಹೊರ ಬಂದರು, ವದನಪುಸ್ತಕ’ದಲ್ಲಿ ಫೋಟೋಗಳನ್ನು ಹಾಕಿದರು .... ಮುಂದೆ ನೆಡೆದದ್ದು ಚರಿತ್ರೆ .... 

ಎಲ್ಲ ಸಂದರ್ಶನಗಳಲ್ಲೂ ಇವರು, ತಾವು ಮೀಟಿಂಗ್ Crashers ಅಲ್ಲ ಅಂತ ಹೇಳ್ತಾ ಬಂದಿದ್ದಾರೆ ... ಮೀಟಿಂಗ್’ಗೆ ಹೋಗಿ, ಇದ್ದು, ಬಂದ ಮಾತ್ರಕ್ಕೆ ಅದು ಕ್ರಾಶ್ ಅಲ್ಲ ... ಅವರ ಇರುವಿಕೇ ಒಂದು ಕ್ರಾಶ್ ... ರವಿಚಂದ್ರನ್ ಸಿನಿಮಾಗಳಲ್ಲಿ ತೋರಿಸುವಂತೆ ಧ್ವಂಸ ಮಾಡಿದರೇ ಕ್ರಾಶ್ ಅಲ್ಲ ... 

Crashers ಅಂತ ಯಾಕೆ ಕರೆದೆ ಅಂದರೆ, ಇವರುಗಳು ಒಂದು ತರಹ ಹಿಂಸಾತ್ಮಕ ವ್ಯಕ್ತಿಗಳು ... ಚೂರಿ ತೆಗೆದುಕೊಂಡು ಚುಚ್ಚಿದರೆ ಮಾತ್ರ ಹಿಂಸೆ ಅಂತೇನಲ್ಲ ...

ಬಿಟ್ಬಿಡು ಗುರೂ.. ಕೊರೀ ಬೇಡಾ... ರಕ್ತ ಬರ್ತಿದೇ ಅಂದಿರಾ ... ಬಿಡಲ್ಲ... ಮುಖ್ಯ ವಿಚಾರಕ್ಕೆ ಬರ್ತೀನಿ ... ಇಂದಿನ ವಿಚಾರ ಮೀಟಿಂಗ್’ನಲ್ಲಿರೋ ಇಂತಹ ಕ್ರಾಶರ್ಸ್ ಬಗ್ಗೆ ...

ಲೇಖನ ವರ್ಗ (Category): 

ಚಾ, ಕಾಪಿ, ಪೆಪ್ಸಿ, ಕೋಲಾ : ಕಾಲು, ಬಾಲ, ಮೂಲ

field_vote: 
Average: 4.3 (7 votes)
To prevent automated spam submissions leave this field empty.

  ’ತಲೆಹರಟೆ ಪುರಾಣ’ವೆಂಬ ೧೯ನೇ ಪುರಾಣದಲ್ಲಿ ಚಾ ಕಾಪಿಗಳ ಉಗಮೋಲ್ಲೇಖ ಇರುವ ಬಗ್ಗೆ ಯಾರೋ ಪ್ರಗಲ್ಭ ’ಪನ್‌’ಡಿತರು ಸಂಶೋಧಿಸಿ (ಚಾ ಕಾಪಿ ಶೋಧಿಸಿದಂತೆ ಶೋಧಿಸಿ) ಬರೆದ ಪ್ರ(ಚಂಡ)ಬಂಧವೊಂದು ನನ್ನ ಕಿರಿಯ ಮಿತ್ರ ಪರಾಂಜಪೆಯವರ ಮಿಂಚಂಚೆಪೆಟ್ಟಿಗೆಗೆ ಬಂದುಬಿದ್ದದ್ದೇ ತಡ, ಪರಾಂಜಪೆಯವರು ಆ ಮಿಂಚಂಚೆ ಪುರಾಣವನ್ನು ನನಗೂ ಸೇರಿದಂತೆ ತಮ್ಮೆಲ್ಲ ಮಿತ್ರರಿಗೂ (ಮಿಂಚಂಚೆ ದ್ವಾರಾ) ಕಳಿಸುವ ಮೂಲಕ ನನ್ನಂಥವರ ಮನಸ್ಸಿನಲ್ಲಿ ಮಿಂಚಿನ ಸಂಚಲನಕ್ಕೆ ಕಾರಣೀ’ಭೂತ’ರಾಗಿದ್ದಾರೆ.


  ’ಭಲೆ ಭಲೆ!’ ಎನ್ನುವಂತೆ ’ತಲೆಹರಟೆ ಪುರಾಣ’ ಕೊರೆದಿರುವ ಆ ಪನ್‌ಡಿತ ಮಹಾಆಶಯರು ಯಾರೋ, ತಮ್ಮ ಅಭಿಧಾನವನ್ನು ಅನಾವರಣಗೊಳಿಸಿದ್ದಿದ್ದರೆ ಬೇಷಿತ್ತು, ಇರಲಿ.


  ’ನ ಭಯಂ ಚಾಸ್ತಿ ಜಾಗೃತಃ’, ಅಂದರೆ, ’ಚಾ ಕುಡಿದವನಿಗೆ ಯಾವ ಭಯವೂ ಇಲ್ಲ’, ಎಂದು ಕರೆಕ್ಟಾಗಿ ಹೇಳಿರುವ ಸದರಿ ಪನ್‌ಡಿತರು ಚಹಾವನ್ನು ಭಾರತಕ್ಕೆ ತಂದವರು ಟಾಟಾ ಎಂದು ಅಪ್ಪಣೆಕೊಡಿಸಿದ್ದಾರೆ. ಈ ಬಗ್ಗೆ ನನ್ನ ಎಕ್ಸ್-ಪರ್ಟ್ ಒಪಿನಿಯನ್ ಇಂತಿದೆ.
  ಟೀಟೀಯನ್ನು, ಅದಕ್ಕಿಂತ ಒಂದು ಹೆಜ್ಜೆ ಹಿಂದಿದ್ದ ಟಾಟಾ ಅಲ್ಲದೆ ಇನ್ನ್ಯಾರು ಹೊತ್ತು ತರಲು ಸಾಧ್ಯ?

ಲೇಖನ ವರ್ಗ (Category): 

ಕಾಂಪ್ಲೆಕ್ಸ್ friendship

iendship’ನಲ್ಲಿ ನಾನಾ ವಿಧ. ಸದ್ಯಕ್ಕೆ ಮೂರನ್ನು ತಿಳಿದುಕೊಳ್ಳೋಣ .... ಸಿಂಪಲ್ friendship ಅಂದರೆ ಎದುರಿಗೆ ಸಿಕ್ಕಾಗ ಯಥಾಶಕ್ತಿ ಕಿಸಿಯುವಿಕೆ. ಅಂದರೆ ತುಟಿ ಅಂಚಿನ ನಗು, ಒಂದೇ ಒಂದು ಹಲ್ಲು ತೋರಿಸಿ ನಗು, ಬಾಯನ್ನು ಸ್ವಲ್ಪವೇ ಹಿಗ್ಗಿಸಿ ನಗು ... ಹೀಗೆ ಯಥಾಶಕ್ತಿ .... ಬಾಯಿ ಇದ್ದಷ್ಟು ಅಥವಾ ಹಲ್ಲಿನ ಬಣ್ಣದ ಮೇಲೆ ಅವಲಂಬಿತವಾಗಿ .... 
ಎರಡನೆಯದು, ಕಾಂಪೌಂಡ್ friendship. ಕೆಲಸ ಮುಗಿಸಿ ಗಂಡ ಮನೆಗೆ ಬಂದು ಅರ್ಧ ಘಂಟೆಯಾದರೂ ಒಂದು ಲೋಟ ಕಾಫಿ ಕೊಡದೆ, ಪಕ್ಕದಮನೆ ಪಂಕಜಮ್ಮನ ಜೊತೆ, ಕಾಂಪೌಂಡ್ ಬದಿಯಲ್ಲಿ ನಿಂತು ಮಿಕ್ಕೆಲ್ಲ ಮನೆಯ ವಿಷಯದ ಬಗ್ಗೆ ಮಾತನಾಡುವುದು. 
ಮೂರನೆಯದು, ಅಂದರೆ ಇಂದಿನ ವಿಚಾರವಾದ ಕಾಂಪ್ಲೆಕ್ಸ್ friendship.
ನಾನು ಕಾಂಪ್ಲೆಕ್ಸ್ ಅಂದಾಗ ನೀವು ಸಿಕ್ಕಾಪಟ್ಟೆ complicated ಆಗಿ ಯೋಚನೆ ಮಾಡಬೇಡಿ. ಇದು ನನ್ನ ಹಾಗೂ ಸುಬ್ಬುವಿನ friendshipಊ ... ಇನ್ನು ಕಾಂಪ್ಲೆಕ್ಸ್ ಅಂದರೇನು? ಅದು ಸುಬ್ಬು specialಉ ... ತಾನು ಕಡಲೇಕಾಯಿ ತಿನ್ನುತ್ತಾ ಇದ್ದೀನಿ ಆದರೆ ಅವನು ಗೋಡಂಬಿ ತಿಂತಾ ಇದ್ದಾನೆ ... ಅನ್ನೋ ಸುಬ್ಬುವಿನ ಕಾಂಪ್ಲೆಕ್ಸು ... ಆ ಇನ್ನೊಬ್ಬನ ಮುಂದೆ ಇವನಿಗೆ inferiority ಕಾಂಪ್ಲೆಕ್ಸು ... ಅಂದರೆ ಕೀಳರಿಮೆ .... 
ಯಾರಿಗೂ ಈ ಸುಬ್ಬುವಿನ ಗುಣ ಇಷ್ಟವಾಗದೆ ಇರುವುದರಿಂದ ಅವನಿಗೆ ಇರುವ ಸ್ನೇಹಿತ ಅಂದರೆ ನಾನೊಬ್ಬನೇ ... ನಾನು ಹೇಗೆ ಇವನಿಗೆ ತಗಲಿಹಾಕಿಕೊಂಡು ಇನ್ನೂ ನೇತಾಡ್ತಾ ಇದ್ದೀನಿ ಅಂಬೋದು ಚಿದಂಬರ ರಹಸ್ಯ ... ಯಾಕೇಂದ್ರೆ ಅದು ನನಗೇ ಗೊತ್ತಿಲ್ಲ ! ಇದು ಇಂದು ನೆನ್ನೆಯದಲ್ಲ .... ಬಹಳ ವರ್ಷಗಳದ್ದು ... ಇಂತಹ ಕಾಂಪ್ಲೆಕ್ಸ್ ಸುಬ್ಬುವಿನ ಮತ್ತು ನನ್ನ ಮಧ್ಯೆ ಇರುವ friendshipನ ವಿಚಾರಕ್ಕೆ ನಾನಿಟ್ಟ ಕಾಂಪ್ಲಿಕೇಟೆಡ್ ಹೆಸರು ’ಕಾಂಪ್ಲೆಕ್ಸ್ friendship’ ಅಂತ.....
ಅವನಿಗೆ ತಿಳುವಳಿಕೆ ಹೇಳಲು ನಾನೂ ಬಹಳಷ್ಟು ಸಾರಿ ಪ್ರಯತ್ನ ಪಟ್ಟಿದ್ದೇನೆ ... ಸುಬ್ಬು ಇನ್ನೂ ಸುಧಾರಿಸಿಲ್ಲ ... ನನ್ನ ಪ್ರಯತ್ನ ಕಂಡು ಯಾರೋ ಹೇಳಿದರು ’ನೀನು ಅವನಂತಾಗಬಹುದು ಅಷ್ಟೇ.. ಆದರೆ ಅವನು ಸುಧಾರಿಸೋದಿಲ್ಲ’. ಆದರೆ ನನಗೆ ಮಾತ್ರ ಇವನು ಒಂದಲ್ಲಾ ಒಂದು ದಿನ ತಾನು ಇನ್ನೊಬ್ಬರಿಗಿಂತ ಮೇಲಿದ್ದೀನಿ ಎಂಬ ಸಂದೇಶ ಹೊತ್ತು ತರುತ್ತಾನೆ ಎಂಬೋ ಗ್ಯಾರಂಟಿ .... 
ಸುಬ್ಬುವಿಗೆ ಎರಡನೇ ವರ್ಷ ಪಿಯುಸಿ’ಯಲ್ಲಿ ಕಡಿಮೆ ಅಂಕ ಬಂದು ಇವನ ಪರಿಚಯದವರೆಲ್ಲಾ ಇಂಜಿನೀರಿಂಗು ಅಥವಾ ಡೆಂಟಲ್ಲು ಅಂತ ಆಚೆ ಈಚೆ ಹೋದಾಗ ಇವನು ಮೆಂಟಲ್ ತರಹ ಆಡ್ತಿದ್ದ. ಆ ಸಮಯದಲ್ಲಿ ನಾನೇನು ಹೇಳಿದರೂ ಇವನಿಗೆ ತಟ್ಟಲಿಲ್ಲ. ವಿಜ್ಞ್ನಾನ, ಗಣಿತ ನಮ್ಮಂತಹವರಿಗಲ್ಲ ಎಂಬೋ ತಾತ್ಸಾರ ಮೂಡಿಸಿಕೊಂಡು, ಎದುರಿಗೆ ಹಳೇ ಪರಿಚಯದವ್ರು ಕಂಡರೆ ಮುಖ ಮರೆಸಿಕೊಂಡು ಹೋಗೋ ಅಷ್ಟು ಕೀಳರಿಮೆ ಮೂಡಿಸಿಕೊಂಡ. 
ಓದು ಮುಗಿದ ಮೇಲೆ, ಕೆಲಸಕ್ಕೆ ಸೇರಿಕೊಂಡ ಸುಬ್ಬು. ತಾನು ಸೇರಿದ ಕೆಲಸದಲ್ಲಿ ಡ್ರಸ್ ಕೋಡ್ ಎಂಬುದೇನೂ ಇರಲಿಲ್ಲ. ಮೈ ಮೇಲೆ ಬಟ್ಟೆ ಇದ್ದರೆ ಸಾಕಿತ್ತು. ಒಮ್ಮೆ ಹೀಗೆ ಕೆಲವರು ಪರಿಚಯದವರನ್ನು ಸೂಟು-ಬೂಟು-ಟೈ’ನಲ್ಲಿ ನೋಡಿದಾಗ ಮತ್ತೆ ಕಾಂಪ್ಲೆಕ್ಸ್ ಶುರು. ಅವರೆಲ್ಲರಿಂದ ದೂರ ಸರಿದ.
ಹೀಗೇ ಕೆಲವು ವರ್ಷ ಕಳೆದ ಮೇಲೆ ಮದುವೆ ಆಯ್ತು. ತನ್ನ ಮದುವೆಗೆ ಹೆಚ್ಚು ಜನ ಬರಲಿ ಎಂಬ ಉದ್ದೇಶದಿಂದ ಸಿಕ್ಕವರಿಗೆಲ್ಲಾ ಕಾರ್ಡ್ ಹಂಚಿದ್ದ. ಕೆಲವರು ಬಂದರು ಹಲವಾರು ಜನ ಬರಲಿಲ್ಲ. ಇವನು ಕಾರ್ಡ್ ಕೊಟ್ಟನಲ್ಲ ಎಂದು ಅವರೂ ಇವನಿಗೆ ತಮ್ಮ ಮದುವೆ ಕಾರ್ಡ್ ಕಳಿಸಿದ್ದರು. ಒಂದೆರಡು ಮದುವೆಗೆ ಹೋದ ಆಮೇಲೆ ಬಿಟ್ಟ. ಯಾಕೆ ಅಂದಿರಾ? ಅಲ್ಲೂ ಕಾಂಪ್ಲೆಕ್ಸ್. ಇವನ ಮದುವೆ ಆಗಿದ್ದು ಒಂದು ಸಾಧಾರಣ ಛತ್ರ. ಇವನ ದುರಾದೃಷ್ಟ, ಮಿಕ್ಕವರದು ಧಾಮ್ ಧೂಮ್ ಎಂದು ದೊಡ್ಡ ಹೋಟೆಲ್’ಗಳಲ್ಲಿ ನೆಡೆದ ಮದುವೆ. 
ತಾನು ಕೈನೆಟಿಕ್ ಹೋಂಡ ಓಡಿಸಿದರೆ ಮಿಕ್ಕವರು ಕಾರು ... ಅಲ್ಲಿ ಕಾಂಪ್ಲೆಕ್ಸು ... ತಾನೊಂದು ಸಾಧರಣ ಕಂಪನಿಯಾದರೆ ಬೇರೆಯವರು ಅಮೇರಿಕ, ಯು.ಕೆ’ಗಳಲ್ಲಿ ಕೆಲಸ ... ಅಲ್ಲಿ ಕಾಂಪ್ಲೆಕ್ಸು ... ಬೇರೆಯವರು ಮೇನೇಜರ್ ಆಗಿದ್ದಾರೆ ತಾನು ಮೇನೇಜರ್ ಅಲ್ಲಾ ... ಅಲ್ಲಿ ಕಾಂಪ್ಲೆಕ್ಸು ... ಒಂದೇ ಎರಡೇ ?
ನಾನೂ ದೇಶ ಬಿಟ್ಟು ಹೊರದೇಶಕ್ಕೆ ಬಂದೆ ... ಸುಬ್ಬುವಿನ ಜೊತೆ ಈಗ ಕೇವಲ ಈ-ಮೈಲ್ ಸಂಪರ್ಕ ಮಾತ್ರ ... ಹೀಗೇ ಒಂದು ಸಾರಿ ಊರಿಗೆ ಹೋದಾಗ ಅಕಸ್ಮಾತ್ ಸಿಕ್ಕಿದ ... ನಾನು ಹೊರದೇಶದಲ್ಲಿ ಇದ್ದೀನಿ ಅನ್ನೋ ವಿಷಯಕ್ಕೆ ಇವನ ರೋಗ ಶುರು ಅಂತ ಅಂದುಕೊಂಡೆ ... ಆದರೆ, ಅಂಥಾದ್ದೇನೂ ಕಾಣಿಸಲಿಲ್ಲ... 
ಬದಲಿಗೆ, ’ನಿನ್ನ ಬರಹ ಓದುತ್ತಿರುತ್ತೇನೆ’ ಅಂತ ಮಾತ್ರ ಅಂದ .... ’ಚೆನ್ನಾಗಿರುತ್ತೆ ಅನ್ನೋ ಪ್ರಶಂಸೆಯಾಗಲಿ, ಕೆಟ್ಟದಾಗಿರುತ್ತೆ ಅನ್ನೋ ತೆಗೆಳಿಕೆಯಾಗಲಿ ಅಥವಾ ಹೀಗೆ ಬರೆಯಬಹುದಿತ್ತು ಎಂಬ ಸಲಹೆಯಾಗಲಿ ಏನೂ ಇರಲಿಲ್ಲ’. ಸುಮ್ಮನಾದೆ ಯಾಕೆಂದರೆ ಅಲ್ಲೂ ಎಲ್ಲಿ ಅವನಿಗೆ ಕಾಂಪ್ಲೆಕ್ಸ್ ಶುರುವಾಗುತ್ತೋ ಅಂತ ... 
ಮಾತಿನ ಮಧ್ಯೆ ನಾನೂ ಈ ನಡುವೆ ಬರೀತೀನಿ ಅಂದ .... 
ಬಹಳ ಸಂತೋಷದಿಂದ "ಅರ್ರೇ ! ಸುಬ್ಬು ... ಪತ್ರಿಕೆಗೋ, ಬ್ಲಾಗೋ, ಎಲ್ಲಿ ಬರೀತಿ, ಯಾವ ವಿಷಯದ ಬಗ್ಗೆ ಬರೀತಿ, ಹೇಳೋ" ಅಂತ ಆತುರ ತೋರಿದೆ ...
ಅವನು ನುಡಿದ ... 
ನಾನು ಬಹಳ ವರ್ಷಗಳಿಂದ ಕಾದಿದ್ದ ದಿನ ... ಅಂದರೆ, ತಾನು ಇನ್ನೊಬ್ಬನಿಗಿಂತ ಮೇಲು ಎಂಬ ಭಾವ ಅವನಿಗೆ ಬರುತ್ತದೆ ಎಂಬ ದಿನ ... ಅದು, ಇದೇ ದಿನ ಎಂದು ನನಗೆ ಅರಿವಾಗಿರಲಿಲ್ಲ ... ನನಗೇ ಒದ್ದುಗೊಂಡು ಬರುತ್ತೆ ಎಂಬುದನ್ನಂತೂ ಖಂಡಿತಾ ನಿರೀಕ್ಷೆ ಮಾಡಿರಲಿಲ್ಲ ....
ಅವನು ನುಡಿದಿದ್ದ "ನಾನು ನಿನ್ನ ಹಾಗೆ ಕನ್ನಡದಲ್ಲಿ ಬರೆಯೋಲ್ಲ ಕಣೋ ...  my writings are always in English " ... ಅಂತ ! ಪಾಪಿ ಸುಬ್ಬು !!

friendship’ನಲ್ಲಿ ನಾನಾ ವಿಧ. ಸದ್ಯಕ್ಕೆ ಮೂರನ್ನು ತಿಳಿದುಕೊಳ್ಳೋಣ .... ಸಿಂಪಲ್ friendship ಅಂದರೆ ಎದುರಿಗೆ ಸಿಕ್ಕಾಗ ಯಥಾಶಕ್ತಿ ಕಿಸಿಯುವಿಕೆ. ಅಂದರೆ ತುಟಿ ಅಂಚಿನ ನಗು, ಒಂದೇ ಒಂದು ಹಲ್ಲು ತೋರಿಸಿ ನಗು, ಬಾಯನ್ನು ಸ್ವಲ್ಪವೇ ಹಿಗ್ಗಿಸಿ ನಗು ... ಹೀಗೆ ಯಥಾಶಕ್ತಿ .... ಬಾಯಿ ಇದ್ದಷ್ಟು ಅಥವಾ ಹಲ್ಲಿನ ಬಣ್ಣದ ಮೇಲೆ ಅವಲಂಬಿತವಾಗಿ .... 

ಎರಡನೆಯದು, ಕಾಂಪೌಂಡ್ friendship. ಕೆಲಸ ಮುಗಿಸಿ ಗಂಡ ಮನೆಗೆ ಬಂದು ಅರ್ಧ ಘಂಟೆಯಾದರೂ ಒಂದು ಲೋಟ ಕಾಫಿ ಕೊಡದೆ, ಪಕ್ಕದಮನೆ ಪಂಕಜಮ್ಮನ ಜೊತೆ, ಕಾಂಪೌಂಡ್ ಬದಿಯಲ್ಲಿ ನಿಂತು ಮಿಕ್ಕೆಲ್ಲ ಮನೆಯ ವಿಷಯದ ಬಗ್ಗೆ ಮಾತನಾಡುವುದು. 

ಮೂರನೆಯದು, ಅಂದರೆ ಇಂದಿನ ವಿಚಾರವಾದ ಕಾಂಪ್ಲೆಕ್ಸ್ friendship.

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: