ವ್ಯಕ್ತಿ ವಿಷಯ, ಪರಿಚಯ, ಸಾಧನೆ

ಕುಲಕಸುಬಿಗೆ ಸೃಷ್ಟಿಶೀಲತೆಯ ಮೆರುಗು ನೀಡುವ ಮಂಜುನಾಥ್ ಆಚಾರ್

field_vote: 
Average: 4.5 (2 votes)
To prevent automated spam submissions leave this field empty.

ಆವಿನಹಳ್ಳಿಯ ಮಂಜುನಾಥ್ ಆಚಾರ್ ಅವರದು ''ಕಾಯಕವೇ ಕೈಲಾಸ'' ಎಂದು ನಂಬಿರುವ ಶ್ರಮದ
ಬದುಕು. ತಮ್ಮ ಕುಲಕಸುಬಿನ ಕಮ್ಮಾರ ವೃತಿಯೊಡನೆ ಸೃಷ್ಟಿಶೀಲತೆಯ ಮೈದುಬಿ ಬಂದಂತೆ
ಕೈಗಾರಿಕಾ ಶೆಡ್‌ನಲಿ ತಮ್ಮ ಕನಸಿನ ಪುಟ್ಟ ಫಾಬ್ರಿಕೇಷನ್ ಯಂತ್ರಗಾರವನ್ನು
ಸ್ಥಾಪಿಸಿಕೊಂಡಿದ್ದಾರೆ. ಕೆಲಸ ಸಣ್ಣದಿರಲಿ,ದೊಡ್ಡದಿರಲಿ ಮಂಜುನಾಥ್ ಆಚಾರ್ ಹಾಜರಿರಲೇ
ಬೇಕು. ಸಣ್ಣ ಪೆಟ್ಟಿಗೆಯ ಕೆಲಸದಿಂದ ಹಿಡಿದು ಹೊಸ ಮನೆಯ ಗೇಟ್, ಗ್ರಿಲ್, ಕಿಟಕಿ,
ಬಾಗಿಲು ಕೆಲಸಗಳನ್ನು ಸೇರಿಸಿ ಪುಟ್ಟ ಯಂತ್ರದ ಮರು ತಯಾರಿಕೆಗೂ ಆಚಾರ್
ಸೃಷ್ಟಿಶೀಲತೆಗೆ ಹಿಡಿದ ಕನ್ನಡಿ. ಆಚಾರ್‌ರ ಪ್ರಸಿದ್ಧ ಆವಿನಹಳ್ಳಿ ನೇಗಿಲು ಅವರ
ಸೃಷ್ಟಿಶೀಲತೆಗೆ ಹಿಡಿದ ಕನ್ನಡಿ. ಇಂದಿದು ಸುಮಾರು ಸುತ್ತಲಿನ ಐದು ಜಿಲ್ಲೆಗಳಲ್ಲಿ

ಸಾಹಿರ್ ಲೂಧಿಯಾನ್ವಿ ಮತ್ತು ಸುರೇಶ್ ಹೆಗ್ಡೆ

field_vote: 
Average: 4 (1 vote)
To prevent automated spam submissions leave this field empty.

  ಉರ್ದು ಕವಿ, ಹಿಂದಿ ಚಲನಚಿತ್ರಗೀತಕಾರ ಸಾಹಿರ್ ಲೂಧಿಯಾನ್ವಿ ಓರ್ವ ಭಗ್ನಪ್ರೇಮಿ. ಆತನ ಪ್ರೇಮ ಭಗ್ನಗೊಂಡದ್ದು ಒಮ್ಮೆಯಲ್ಲ, ಎರಡು ಬಾರಿ. ಅಮೃತಾ ಪ್ರೀತಮ್ ಮತ್ತು ಸುಧಾ ಮಲ್ಹೋತ್ರಾ ಇಬ್ಬರೂ ಆತನಿಗೆ ಗಗನಕುಸುಮಗಳಾದರು. ವಿವಾಹಕ್ಕೆ ಕೋಮು ಅಡ್ಡಬಂದಿತ್ತು. ಭಗ್ನಪ್ರೇಮದ ಹತಾಶೆ ಸಾಹಿರ್‌ನನ್ನು ಮದಿರೆಯ ದಾಸನನ್ನಾಗಿಸಿತು. ಅದೇ ವೇಳೆ ಇದೇ ಹತಾಶೆಯು ಆತನಿಂದ ಭಾವಪೂರ್ಣ ಕಾವ್ಯವನ್ನೂ ಸೃಷ್ಟಿಸಿತು.
  ’ಕಭೀ ಕಭೀ’ ಹಿಂದಿ ಚಲನಚಿತ್ರದಲ್ಲಿ ಸಾಹಿರ್‌ನ ಹೃದಯದಾಳದ ಅಂತಹ ಕೆಲ ಪಲುಕುಗಳನ್ನು ನಟ ಅಮಿತಾಭ್ ಬಚ್ಚನ್‌ನ ಬಾಯಿಂದ ನುಡಿಸಲಾಗಿದೆ. ಅಂತಹ ಒಂದು ಪಲುಕನ್ನು ಸಂಪದಿಗ ಮಿತ್ರ ಆತ್ರಾಡಿ ಸುರೇಶ್ ಹೆಗ್ಡೆ ಕನ್ನಡಕ್ಕೆ ಭಾವಾನುವಾದ ಮಾಡಿ ಇದೇ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ನೋಡಿ:

ನೊಬೆಲ್ ಪ್ರಶಸ್ತಿ ವಿಜೇತ ಮಾರಿಯೋ ವರ್ಗಾಸ್ ಲೌಸ


 

field_vote: 
Average: 5 (1 vote)
To prevent automated spam submissions leave this field empty.

ಶಾಸ್ತ್ರಿಗಳಿಗೊಂದು ಸಲಾಂ ಹೇಳೋಣ ಬನ್ನಿ!

ಶಾಲೆ ಮುಗಿಸಿ ಮನೆಗೆ ಹೊರಟ ಕೆಲ ಮಕ್ಕಳು ದಾರಿಯಲ್ಲಿ ಸಿಕ್ಕ ಮಾವಿನ ತೋಟಕ್ಕೆ ಲಗ್ಗೆಯಿಟ್ಟರು.ಕೆಲ ಹುಡುಗರು ಮರ ಹತ್ತಿ ಮಾವಿನ ಹಣ್ಣು ಕೀಳುತಿದ್ದರೆ, ಒಬ್ಬ ಬಾಲಕ ಮಾತ್ರ ಕೆಳಗೆ ನಿಂತು ನೋಡುತಿದ್ದ.ಮಾಲಿ ಅಲ್ಲಿಗೆ ಬಂದ ಕೂಡಲೇ ಮರ ಹತ್ತಿದ್ದ ಹುಡುಗರು ಕಾಲ್ಕಿತ್ತರೆ, ಆ ಬಾಲಕ ಸಿಕ್ಕಿಬಿದ್ದ.ಮಾಲಿ ಹುಡುಗನಿಗೆ ಬೈದು,ಥಳಿಸಲಾರಂಭಿಸಿದ ಆ ಬಾಲಕ ‘ನನ್ನನ್ನು ಬಿಟ್ಟು ಬಿಡಿ,ನಾನು ಅಪ್ಪ ಇಲ್ಲದ ಹುಡುಗ’ ಎಂದು ಅಂಗಲಾಚಿದ.ಕರಗಿದ ಮಾಲಿ,’ಅಪ್ಪ ಇಲ್ಲದವನು ಇನ್ನು ಮೇಲೆ  ಜವಾಬ್ದಾರಿಯುತವಾಗಿ ಇರುವುದನ್ನು ಕಲಿ’ ಎಂದು ಹೇಳಿ ಬಿಟ್ಟುಬಿಟ್ಟ.ಅಲ್ಲಿಂದ ಇನ್ನೆಂದು ಇಂತ ಕೆಲಸ ಮಾಡುವುದಿಲ್ಲವೆಂದು ಪ್ರತಿಜ್ಞೆ ಮಾಡಿ ಹೊರಟ ಆ ಹುಡುಗನಿಗೆ ಆಗ ೬-೭ ವರ್ಷವಿದ್ದಿರಬೇಕು.ಬಹುಷಃ ಅಂದೇ ಆತ ತನ್ನ ನಡೆ-ನುಡಿ ಆದರ್ಶಪ್ರಾಯವಾಗಿರಬೇಕು ಅಂತ ನಿರ್ಧ

field_vote: 
Average: 5 (1 vote)
To prevent automated spam submissions leave this field empty.

ಈ ಜೀವ ನಿನಾಗಾಗಿ

field_vote: 
No votes yet
To prevent automated spam submissions leave this field empty.

ನಾನು ಕನ್ನಡದ ಹುಡುಗ, ಕನ್ನಡ ನನ್ನ ಉಸಿರು, ಕರುನಾಡಿನಲ್ಲೆ ನನ್ನ ಜೀವನ ಮತ್ತು ಮರಣ, ನಾನು ತುಂಬಾ ಸಿಂಪಲ್ ಹಾಗೇನೇ ಸೆನ್ಸಿಟಿವ್ ಕೂಡ, ನನ್ನಗೆ ನನ್ನದೇ ಅದ ಆದರ್ಶಗಳಿವೆ, ನನಗೆ ನನ್ನದೇ ಅದ ಸ್ಟೈಲ್ ಇದೆ, ನನಗೆ ಬೇರೆಯವರ ತರ ನಾನು ಇರಬೇಕು ಅಂತ ಅಸೆ ಪಡಲ್ಲ, ಬೇರೆಯವರು ಬೇಕಾದರೆ ನನ್ನ ತರ ಇರಬವುದು, ನಾನು ಯಾವಾಗಲು ನಂದೆ ಅದ ಸ್ಟೈಲ್ ಇರಬೇಕು ಅಂತ ಬಯಸುತಿನಿ. ನನಗೆ ಫ್ರೆಂಡ್ಸ್ ಅಂದ್ರೆ ತುಂಬಾ ಇಷ್ಟ, ಸ್ನೇಹ ಅಂದ್ರೆ ಏನು?ಸ್ನೇಹಿತ ಅಂದ್ರೆ ಯಾರು?ಸ್ನೇಹದಲ್ಲಿ ಸ್ವಾರ್ಥ ತುಂಬಿರುತ್ತ? ಹುಟ್ಟುತ ಬರೋದು ರಕ್ತ ಸಂಬಂಧ,ಅದು ಅದ ಮೇಲೆ ಬರೋದು ಸ್ನೇಹ ಅಗಿರಬವುದು ಅಥವಾ ಪ್ರೀತಿ ಅಗಿರಬವುದು!ಸ್ನೇಹದಲ್ಲಿ ಪರಸ್ಪರ ವಿಶ್ವಾಸ, ನಂಬಿಕೆ, ಆತ್ಮೀಯತೆ ಇರುತ್ತೆ.

ಶಂಕರ್ ನಾಗ್: ಒಂದು ನುಡಿ ನಮನ....

field_vote: 
No votes yet
To prevent automated spam submissions leave this field empty.

ಸರಿಯಾಗಿ ಇಪ್ಪತ್ತು ವರ್ಷದ ಹಿಂದೆ... ಇದೇ ದಿನ...

ಲತಾ ದೀದೀ, ಜನಮ್ ದಿನ್ ಮುಬಾರಕ್

field_vote: 
Average: 5 (1 vote)
To prevent automated spam submissions leave this field empty.


(ಜಾದೂಗರ್ ತೇರೇ ನೈನಾ
ದಿಲ್ ಜಾಯೇಗಾ ಬಚ್‌ಕೇ ಕಹ್ಞಾ
ರುಕ್ ಜಾವ್ಞೂ, ಝುಕ್ ಜಾವ್ಞೂ
ತೇರಾ ಮುಖ್‌ಡಾ ಮೈ ದೇಖೂ ಜಹ್ಞಾ)

ಜಾದೂಗರ್ ತೇರಾ ಗಾಯನ್
ದಿಲ್ ಖೋಯೇಗಾ ಉಸ್‌ಮೇ ಮೇರಾ
ಝುಕ್ ಜಾವ್ಞೂ, ಝುಕ್ ಜಾವ್ಞೂ
ತೇರಾ ಮೀಠಾ ಸಾ ಗೀತ್ ಹೈ ಜಹ್ಞಾ

(ಮಿಲ್‌ತೀ ಹೈ ಜಿಂದಗೀ ಮೇ
ಮೊಹಬ್ಬತ್ ಕಭೀ ಕಭೀ
ಹೋತೀ ಹೈ ದಿಲ್‌ಭರೋಂಕೀ
ಇನಾಯತ್ ಕಭೀ ಕಭೀ)

ಮಿಲ್‌ತೀ ಹೈ ಜಿಂದಗೀ ಮೇ
ಮಧುರ್ ಗೀತ್ ಕಭೀ ಕಭೀ
ಹೋತೀ ಹೈ ದಿಲ್‌ಭರ್ ಆಪ್‌ಕೀ
ಇನಾಯತ್ ಕಭೀ ಕಭೀ

(ಜ್ಯೋತಿ ಕಲಶ್ ಛಲ್‌ಕೇ.
ಹುಯೇ ಗುಲಾಬೀ, ಲಾಲ್ ಸುನೆಹ್‌ರೆ
ರಂಗ್ ದಲ್ ಬಾದಲ್‌ಕೇ)

ಗೀತ್ ಕಲಶ್ ಛಲ್‌ಕೇ.
ಹುವಾ ಖುಷೀ ಭೀ, ಔರ್ ಕುಛ್ ಘಮ್ ಭೀ
ಸುನ್‌ಕರ್ ವೋ ಝಲ್‌ಕೇ

***

ಸಂಪದಿಗ ಶ್ರೀಯುತ ಡಿ ಎಸ್ ರಾಮಸ್ವಾಮಿಯವರಿಗೆ ೨೦೧೦ ರ " ವಿಭಾ ಸಾಹಿತ್ಯ ಪ್ರಶಸ್ತಿ"

field_vote: 
Average: 5 (2 votes)
To prevent automated spam submissions leave this field empty.

 

ಮಿತ್ರರೇ


ಒಂದು ಅತ್ಯಂತ ಶುಭ ಹಾಗೂ ಖುಶಿ ಸಮಾಚಾರವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನನ್ನ  ಮನಸ್ಸು ತವಕಿಸುತ್ತಿದೆ.

 

ಕವಯಿತ್ರಿ ವಿಭಾ ಅವರ ನೆನಪಿನಲ್ಲಿ ನೀಡಲಾಗುವ ೨೦೧೦ ರ "ವಿಭಾ ಸಾಹಿತ್ಯ ಪ್ರಶಸ್ತಿ" , ಸಂಪದಿಗರಾದ ಡಿ ಎಸ್ ರಾಮಸ್ವಾಮಿಯವರ "ತೆರೆದರಷ್ಟೇ ಬಾಗಿಲು" ಕೃತಿಗೆ ಲಭಿಸಿದೆ.

 

ಇವರ "ಮರೆತ ಮಾತು’(೨೦೦೨);’ಉಳಿದ ಪ್ರತಿಮೆಗಳು’(೨೦೦೭) ಎರಡು ಕವನ ಸಂಕಲನಗಳು ಪ್ರಕಟಗೊಂಡಿವೆ.

 

‘ಗದುಗಿನ ನಡೆದಾಡುವ ದೇವರು’ -ಪುಟ್ಟರಾಜ ಗವಾಯಿಗಳು ಆತ್ಮೈಕ್ಯ.

field_vote: 
Average: 4.9 (11 votes)
To prevent automated spam submissions leave this field empty.

 

ಗದುಗಿನ ಪಂಡಿತ ಪುಟ್ಟರಾಜ ಕವಿಗವಾಯಿಗಳಿಗೆ ಪಾದ ಮುಟ್ಟಿ ನಮಸ್ಕರಿಸುತ್ತಿರುವ ಸ್ಯಾಕ್ಸೋಫೋನ್ ಚಕ್ರವರ್ತಿ ಕದ್ರಿ ಗೋಪಾಲನಾಥ.

 

ಸಂವೇದನ - ಆಗಸ್ಟ್ ತಿಂಗಳ ಕಾರ್ಯಕ್ರಮ "ನೆನಪಿನಂಗಳದಲ್ಲಿ ಕಿ. ರಂ."

field_vote: 
No votes yet
To prevent automated spam submissions leave this field empty.

ಸ್ನೇಹಿತರೆ,
 
ಭಾನುವಾರ, ಆಗಸ್ಟ್ 29 ರಂದು  ಬೆಳಗ್ಗೆ 10.30ಕ್ಕೆ ಸಂವೇದನ ತಂಡದ ಒಂದು ಒಳ್ಳೆಯ ಕಾರ್ಯಕ್ರಮ "ನೆನಪಿನಂಗಳದಲ್ಲಿ ಕಿ. ರಂ." ಪ್ರಸ್ತುತ ಪಡಿಸುತ್ತಿದ್ದೇವೆ.  


 


ಸ್ಥಳ  : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು


  


ಕಾರ್ಯಕ್ರಮದಲ್ಲಿ ನಮ್ಮೊಂದಿಗೆ


 


ಪ್ರೊ. ಚಂದ್ರಶೇಖರ ಪಾಟೀಲ 

ಕಾಲದಕನ್ನಡಿ: “ಶೇಣಿ ಎ೦ಬ ಯಕ್ಷಗಾನ ಲೋಕದ ಭೀಷ್ಮ“ ರಿಗೊ೦ದು ನುಡಿ ನಮನ

                                              sheni gopala krishna bhat

field_vote: 
No votes yet
To prevent automated spam submissions leave this field empty.

ಕಾಲದಕನ್ನಡಿ: ಈನಾ ಮೀನಾ ಡೀಕಾ.. ಡಾಯ್ ಡಮನಿಕ.. ಮಕನಕನಕ....

 


field_vote: 
Average: 3.8 (8 votes)
To prevent automated spam submissions leave this field empty.

ಕಿನ್ನರಿ ಬ್ರಹ್ಮಯ್ಯ

ಇಂದಿನ ಆಂಧ್ರಪ್ರದೇಶದ ಪೂದೂರು ಎಂಟನೂರೈವತ್ತು ವರ್ಷಗಳ ಹಿಂದೆ ಕಲ್ಯಾಣದ ಚಾಲುಕ್ಯರ ಆಡಳಿತದಲ್ಲಿತ್ತು. ನಂತರ ಕಲಚೂರಿ ಬಿಜ್ಜಳನ ಆಡಳಿತಕ್ಕೆ ಹೋಯಿತು. ಆಗ ಪೊಡೂರು ಎಂದು ಕರೆಯಲಾಗುತ್ತಿತ್ತು. ಆ ಊರಿನಲ್ಲಿದ್ದ ಅಕ್ಕಸಾಲಿಗ ಕುಟುಂಬವೊಂದರಲ್ಲಿ ಬ್ರಹ್ಮಯ್ಯ ಎಂಬ ಶಿವಭಕ್ತನೊಬ್ಬನಿದ್ದನು. ಅವನು ತನಗೆ ವಂಶಪಾರಂಪರ್ಯವಾಗಿ ಬಂದಿದ್ದ ವೃತ್ತಿಯ ಜೊತೆಗೆ ಕಿನ್ನರಿ ನುಡಿಸುವುದನ್ನೂ ಕಲಿತಿದ್ದನು. ಆತನಿಗೆ ಕಿನ್ನರಿ ನುಡಿಸುವುದನ್ನು ಕಲಿಸಿದ ಗುರುವೊಬ್ಬರಿಗೆ ಒಂದಷ್ಟು ಆಭರಣ ಮಾಡಿಕೊಡುವ ಅವಕಾಶ ಅವನಿಗೆ ಬರುತ್ತದೆ. ಗುರುವಿನ ಕೆಲಸ ಎಂಬ ತುಂಬು ಅಭಿಮಾನದಿಂದ ಆಭರಣ ತಯಾರು ಮಾಡಿದ ಬ್ರಹ್ಮಯ್ಯ ಅದನ್ನು ಗುರುವಿಗೆ ಒಪ್ಪಿಸಲು ಬರುತ್ತಾನೆ. ಆತ ಕೊಟ್ಟ ಆಭರಣಗಳ ಸೊಗಸನ್ನು ಸವಿಯುತ್ತ ಗುರುಗಳು ಅದನ್ನು ಸ್ವೀಕರಿಸುತ್ತಾರೆ.

field_vote: 
Average: 5 (2 votes)
To prevent automated spam submissions leave this field empty.

ಕಲಕೇತ ಬೊಮ್ಮಯ್ಯ

ಕೈಯಲ್ಲಿ ಹಿಡಿದಿದ್ದ ಬೆತ್ತ ಗಾಳಿಯಲ್ಲಿ ವಿವಿಧ ಆಕೃತಿಗಳನ್ನು ರಚಿಸುತ್ತಾ ತಿರುಗುತ್ತಿತ್ತು. ಕಾಲಿನಲ್ಲಿದ್ದ ಕಿರುಗೆಜ್ಜೆಗಳು ಕಾಲಂದಿಗೆಯೊಂದಿಗೆ ಸೇರಿ ಘಲ್ ಘಲ್ ಶಬ್ದವನ್ನು ಕುಣಿತಕ್ಕೆ ಅನುಗುಣವಾಗಿ ಹೊರಹೊಮ್ಮಿಸುತ್ತಿದ್ದವು. ಮುಂದಲೆಯಲ್ಲಿ ಎತ್ತಿಕಟ್ಟಿದ ಮುಡಿ, ನೊಸಲಲ್ಲಿ ಧರಿಸಿದ ವಿಭೂತಿ, ಕಿವಿಗಳಲ್ಲಿ ಧರಿಸಿದ ಹಸಿರಿನೋಲೆ, ಕಾಲುಗಳಲ್ಲಿ ಗೆಜ್ಜೆ-ಅಂದಿಗೆ, ಎಡಗೈಯಲ್ಲಿ ಟಗರಿನ ಕೊಂಬು, ಬಲಗೈಯಲ್ಲಿ ಬೆತ್ತ ಮೈಮೇಲೆ ಕಾವಿಯ ಬಟ್ಟೆ ಧರಿಸಿದ ಕಲಕೇತಯ್ಯ ಮದ್ದಳೆಯ ಧ್ವನಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಬರುತ್ತಿದ್ದರೆ ಬೀದಿಬೀದಿಯ ಜನರೆಲ್ಲಾ ಭಲೇ...ಭಲೇ ಎಂದು ಕೂಗಿ ಆತನನ್ನು ಉರಿದುಂಬಿಸುತ್ತಿದ್ದರು. ಕಲಕೇತಯ್ಯ ಗತ್ತಿನ ನಡಿಗೆ ಹಾಕುತ್ತಾ ಬರುತ್ತಿದ್ದ ಹಾಗೆ ಯಾವಾವುದೋ ಕೆಲಸದ ಮೇಲೆ ಹೊರಟವರೆಲ್ಲಾ ಒಂದರಗಳಿಗೆ ನಿಂತು ಅವನ ಕುಣಿತವನ್ನು ನೋಡಿಯೇ ಮುನ್ನಡೆಯುತ್ತಿದ್ದರು. ಬೀದಿಯ ಕೊನೆಗೆ ಬಂದಾಗ ಕೇತಯ್ಯನ ಕುಣಿತಕ್ಕೆ ವಿರಾಮ. ನೋಡುತ್ತಿದ್ದ ಜನರೆಲ್ಲಾ ತಮಗೆ ತೋಚಿದಷ್ಟು ಹಣವನ್ನು ಕೇತಯ್ಯನ ಸಂಗಡಿಗ ಹಿಡಿದ ಜೋಳಿಗೆಯಲ್ಲಿ ಹಾಕುತ್ತಿದ್ದರು.

field_vote: 
Average: 5 (1 vote)
To prevent automated spam submissions leave this field empty.

ಕಲಕೇತ ಬೊಮ್ಮಯ್ಯ

ಕೈಯಲ್ಲಿ ಹಿಡಿದಿದ್ದ ಬೆತ್ತ ಗಾಳಿಯಲ್ಲಿ ವಿವಿಧ ಆಕೃತಿಗಳನ್ನು ರಚಿಸುತ್ತಾ ತಿರುಗುತ್ತಿತ್ತು. ಕಾಲಿನಲ್ಲಿದ್ದ ಕಿರುಗೆಜ್ಜೆಗಳು ಕಾಲಂದಿಗೆಯೊಂದಿಗೆ ಸೇರಿ ಘಲ್ ಘಲ್ ಶಬ್ದವನ್ನು ಕುಣಿತಕ್ಕೆ ಅನುಗುಣವಾಗಿ ಹೊರಹೊಮ್ಮಿಸುತ್ತಿದ್ದವು. ಮುಂದಲೆಯಲ್ಲಿ ಎತ್ತಿಕಟ್ಟಿದ ಮುಡಿ, ನೊಸಲಲ್ಲಿ ಧರಿಸಿದ ವಿಭೂತಿ, ಕಿವಿಗಳಲ್ಲಿ ಧರಿಸಿದ ಹಸಿರಿನೋಲೆ, ಕಾಲುಗಳಲ್ಲಿ ಗೆಜ್ಜೆ-ಅಂದಿಗೆ, ಎಡಗೈಯಲ್ಲಿ ಟಗರಿನ ಕೊಂಬು, ಬಲಗೈಯಲ್ಲಿ ಬೆತ್ತ ಮೈಮೇಲೆ ಕಾವಿಯ ಬಟ್ಟೆ ಧರಿಸಿದ ಕಲಕೇತಯ್ಯ ಮದ್ದಳೆಯ ಧ್ವನಿಗೆ ತಕ್ಕಂತೆ ಹೆಜ್ಜೆ ಹಾಕುತ್ತಾ ಬರುತ್ತಿದ್ದರೆ ಬೀದಿಬೀದಿಯ ಜನರೆಲ್ಲಾ ಭಲೇ...ಭಲೇ ಎಂದು ಕೂಗಿ ಆತನನ್ನು ಉರಿದುಂಬಿಸುತ್ತಿದ್ದರು. ಕಲಕೇತಯ್ಯ ಗತ್ತಿನ ನಡಿಗೆ ಹಾಕುತ್ತಾ ಬರುತ್ತಿದ್ದ ಹಾಗೆ ಯಾವಾವುದೋ ಕೆಲಸದ ಮೇಲೆ ಹೊರಟವರೆಲ್ಲಾ ಒಂದರಗಳಿಗೆ ನಿಂತು ಅವನ ಕುಣಿತವನ್ನು ನೋಡಿಯೇ ಮುನ್ನಡೆಯುತ್ತಿದ್ದರು. ಬೀದಿಯ ಕೊನೆಗೆ ಬಂದಾಗ ಕೇತಯ್ಯನ ಕುಣಿತಕ್ಕೆ ವಿರಾಮ. ನೋಡುತ್ತಿದ್ದ ಜನರೆಲ್ಲಾ ತಮಗೆ ತೋಚಿದಷ್ಟು ಹಣವನ್ನು ಕೇತಯ್ಯನ ಸಂಗಡಿಗ ಹಿಡಿದ ಜೋಳಿಗೆಯಲ್ಲಿ ಹಾಕುತ್ತಿದ್ದರು.

field_vote: 
Average: 4 (2 votes)
To prevent automated spam submissions leave this field empty.

ಗಾಯನ ಗಾರುಡಿಗನ ನಿರ್ಗಮನ...

field_vote: 
No votes yet
To prevent automated spam submissions leave this field empty.

ಲೈಂಗಿಕ ಅಲ್ಪಸಂಖ್ಯಾತರೆಂದರೆ ಯಾರು?

ಸಂಪದಿಗರೆ ನೆನ್ನೆ ಹಿಜ್ರಾಗಳ ಬಗ್ಗೆ ಮಾಹಿತಿಯನ್ನ ನೀಡಿದೆ ಈವತ್ತು ಹಿಜ್ರಾಗಳ ಜೊತೆಗೆ ಹಲವಾರು ಸಮುದಾಯದವರು ಲೈಂಗಿಕ ಅಲ್ಪಸಂಖ್ಯಾತರಾಗಿ/ಕಾರ್ಮಿಕರಾಗಿ ಕೆಲ್ಸ ಮಾಡುತ್ತಿದ್ದಾರೆ ಅವರ ಬಗ್ಗೆ ಸ್ವಲ್ಪ ಮಾಹಿತಿ ಬೇಸರ ಪಡಬೇಡಿ ಓದಿ ಪ್ರತಿಕ್ರಿಯಿಸಿ.

 

ಲೈಂಗಿಕ ಅಲ್ಪಸಂಖ್ಯಾತರೆಂದರೆ ಹಿಜ್ರಾ, ಕೋಥಿಗಳು, ಡಬಲ್ ಡೇಕರ್‌ಗಳು, ಜೋಗಪ್ಪಂದಿರು, ಲೆಸ್ಬಿಯನ್‌ಗಳು, ಸಲಿಂಗಕಾಮಿ/ದ್ವಿಲಿಂಗಕಾಮಿ ಗಂಡಸರು ಮತ್ತು ಹೆಂಗಸರು, ಗೇಗಳು, ಹೆಣ್ಣಾಗಿ ಹುಟ್ಟಿ ಗಂಡಾಗಿ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಲಿಂಗ ಬದಲಾಸಿಕೊಳ್ಳುವವರು, ಟ್ರಾನ್ಸ್‌ಜೆಂಡರ್‌ಗಳನ್ನು ಒಳಗೊಂಡಂತೆ ಇರುವವರು. ಆದರೆ ಇಷ್ಟಕ್ಕೆ ಸೀಮಿತವಲ್ಲದ ಇನ್ನೂ ಅನೇಕ ಲೈಂಗಿಕತೆಯ ಗುರುತುಗಳುಳ್ಳ ಸಮುದಾಯದವರು ಸೇರಿದ್ದಾರೆ.

 

field_vote: 
Average: 4.5 (2 votes)
To prevent automated spam submissions leave this field empty.

ಹಿಜ್ರಾಗಳು ಎಂದರೆ ಯಾರು?

ಟ್ರಾಪಿಕ್ ಸಿಗ್ನಲ್ ಗಳಲ್ಲಿ ರೈಲುಗಳಲ್ಲಿ ಮಾಮ ಮಾಮ ಎಂದು ಅಡ್ದ ಗಟ್ಟಿ ಹಣವಸೂಲಿ ಮಾಡುವವರನ್ನು ನಾವು ಕಾಣುತ್ತೇವೆ. ಹಣ ಕೊಟ್ಟರೆ ಪರವಾಗಿಲ್ಲ ಇಲ್ಲ ಅಂದ್ರೆ ಬೈದು ಹೋಗುವುದಂತು ಗ್ಯಾರಂಟಿ ಆದ್ರೆ ಕೆಲವರು ಹಣ ಕೇಳ್ತಾರೆ ಇಲ್ಲ ಅಂದ್ರೆ ಸುಮ್ನೆ ಹೋಗ್ತಾರೆ ಹೀಗೆ ಹಲವಾರು ಜನ ಇರ್ತಾರೆ ಇವರನ್ನ ಹಿಜ್ರಾ ಎಂದು ಕರೆಯುವುದು ರೂಡಿ. ಇತ್ತೀಚೆಗೆ ಇವರ ಸಹಾಯಕ್ಕೆ ನಿಂತ ಸಂಸ್ಥೆಯೊಟ್ಟಿಗೆ ವೆಬ್ ಸೈಟ್ ಕೆಲ್ಸ ಮಾಡುವ ಆರು ತಿಂಗಳ ಕೆಲ್ಸ ಮಾಡುತ್ತಿರಬೇಕಾದ್ರೆ ಹಿಜ್ರಾಗಳ ಬಗ್ಗೆ ಸಂಗ್ರಹಿಸಿದ ಮಾಹಿತಿಯನ್ನು ಮತ್ತು ಹಿಜ್ರಾಗಳ ಚರಿತ್ರೆಯನ್ನು ನಿಮ್ಮೊಟ್ಟಿಗೆ ಹಂಚಿಕೊಳ್ಳಲು ಬಯಸುತ್ತೇನೆ.

field_vote: 
Average: 4.7 (3 votes)
To prevent automated spam submissions leave this field empty.

ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ

field_vote: 
Average: 5 (5 votes)
To prevent automated spam submissions leave this field empty.


 ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ದಯಮಾಡಿ ಈ ವ್ಯಕ್ತಿಯನ್ನು ಭೆಟ್ಟಿಯಾಗಿ

ಮನೆ ನೋಡಿದರೆ ಬಡವರು, ಮನಸ್ಸು ನೋಡಿದರೆ ಸಂಪನ್ನರು

ಈಗಿನ ರಾಯಚೂರು ಜಿಲ್ಲೆ ಲಿಂಗಸೂರು ತಾಲ್ಲೂಕಿನ ಅಮರೇಶ್ವರ ಎಂಬ ಗ್ರಾಮಕ್ಕೆ ಸುಮಾರು ಎಂಟನೂರೈವತ್ತು ವರ್ಷಕ್ಕೂ ಹೆಚ್ಚಿನ ಇತಿಹಾಸವಿದೆ. ಬಸವನ ಕಾಲಕ್ಕೆ ಆ ಊರಿನಲ್ಲಿ ಮಾರಯ್ಯ ಮತ್ತು ಲಕ್ಕಮ್ಮ ಎಂಬ ದಂಪತಿಗಳಿದ್ದರು. ಅನನ್ಯ ಶಿವಭಕ್ತರಾಗಿದ್ದ ಅವರಿಬ್ಬರೂ ಊರಿನಲ್ಲಿದ್ದ ಅಮರೇಶ್ವರ (ಶಿವ) ದೇವರ ಸೇವೆಯಲ್ಲಿ ನಿರತರಾಗಿದ್ದರು. ನಾಡಿನಾದ್ಯಂತ ಪ್ರಸರಿಸುತ್ತಿದ್ದ ಕಲ್ಯಾಣದ ಸಮಾಚಾರ, ಬಸವಣ್ಣ ಕೀರ್ತಿ ಮಾರಯ್ಯ ದಂಪತಿಗಳಿಗೂ ತಲುಪಿತು. ಮಹಾನ್ ಶಿವಭಕ್ತನಾದ ಬಸವಣ್ಣನನ್ನು ಕಾಣುವ ದಂಪತಿಗಳಿಬ್ಬರಿಗೂ ಅತಿಯಾಗಿ ಒಂದೇ ಚಿತ್ತದಿಂದ ಕಲ್ಯಾಣದ ದಾರಿ ಹಿಡಿದು ನಡದೇಬಿಟ್ಟರು. ನೇರವಾಗಿ ಮಹಾಮನೆಗೆ ಬಂದು ಅಲ್ಲಿ ಶರಣರ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

field_vote: 
Average: 4 (2 votes)
To prevent automated spam submissions leave this field empty.

ಸ್ನೇಕ್ ಕಿರಣ್ ಎಂಬ ಹಾವಾಡಿಗ

field_vote: 
Average: 4 (1 vote)
To prevent automated spam submissions leave this field empty.

ಕಿರಣ್ ಶಿವಮೊಗ್ಗದ ವಾಸಿ. ಈತ ಹುಟ್ಟಿದಾಗಿನಿಂದಲೂ ಹಾವನ್ನು ಹಿಡಿಯುವ ವಿದ್ಯೆಯನ್ನು ಕಲಿತವನಲ್ಲ. ಹೊಟ್ಟೆ ಪಾಡಿಗಾಗಿ ಶಿವಮೊಗ್ಗದ ಗ್ಯಾರೇಜ್ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದ. ಮೊದಲು ಸಣ್ಣ ಪುಟ್ಟ ಹಾವುಗಳನ್ನು ಹಿಡಿಯುತ್ತಿದ್ದ ಕಿರಣ್ ನಂತರದ ದಿನಗಳಲ್ಲಿ ಹಾವು ಹಿಡಿಯುವ ಕಲೆಯನ್ನು ಕರಗತ ಮಾಡಿಕೊಂಡ.

 

ಗೂಳೆಪ್ಪನೆಂಬ ಪ್ರತಿಫಲಾಪೇಕ್ಷೆಯಿಲ್ಲದ ಅರಣ್ಯ ಕಾವಲುಗಾರ

field_vote: 
Average: 4.8 (5 votes)
To prevent automated spam submissions leave this field empty.

gooleppa

ಅಪರೂಪದ ವಿಶಿಷ್ಟ ಕಲಾವಿದ ಕಾಶಿ

field_vote: 
Average: 4.5 (2 votes)
To prevent automated spam submissions leave this field empty.

ಕಲೆಯೆನ್ನುವುದು ಎಲ್ಲರಲ್ಲಿರುತ್ತೆ ಆದರೆ ವಿಶೇಷವಾದ ಕಲೆಗಳು ಕೆಲವರಿಗೆ ಮಾತ್ರ ಒಲೆದಿರುತ್ತದೆ. ಅದರಲ್ಲೂ ವಿಗ್ರಹ ಕೆತ್ತನೆ ಮತ್ತು ಸಿಮೆಂಟ್ ವಿಗ್ರಹಗಳನ್ನು ರೂಪಿಸುವಂತಹ ಕಲೆ ಬಹಳ ವಿಶಿಷ್ಟ. ಅಂತಹ ಕಲೆಯನ್ನು ಕರಗತ ಮಾಡಿಕೊಂಡು ಇಂದು ದೇಶಾದ್ಯಂತ ಪ್ರಸಿದ್ದಿಯಾಗಿರುವ ಕಾಶಿನಾಥ್  ಶಿಕಾರಿಪುರದವರು ಎನ್ನುವುದಕ್ಕಿಂತ ಕರ್ನಾಟಕ ರಾಜ್ಯದವರು ಎನ್ನುವುದಕ್ಕೆ ನಮಗೆಲ್ಲರಿಗೂ ಹೆಮ್ಮೆ. 

ಶಿಕಾರಿಪುರದ ಹುಚ್ಚರಾಯಸ್ವಾಮಿ ಕೆರೆಯ ತಟದಲ್ಲಿ ನಿರ್ಮಾಣವಾಗಿರುವ ಈಶ್ವರ ವಿಗ್ರಹ

ದ.ರಾ.ಬೇಂದ್ರೆ - ಅಕ್ಷರ ಚಿತ್ರ

field_vote: 
Average: 5 (1 vote)
To prevent automated spam submissions leave this field empty.

ಚಿತ್ರ ಬರೆವಲ್ಲಿ ಒಂದು ಹೊಸ ಪ್ರಯೋಗ ಮಾಡೋಣ ಎಂದು ಮನಸ್ಸಾಯಿತು. ಇದನ್ನು ಬೇರೆಯವರು ಮಾಡಿರಬಹುದು. ಆದರೆ ನನಗೆ ಇದು ಹೊಸತು. 


ನನ್ನ ಮೆಚ್ಚಿನ ಕವಿ ಡಾ| ದ.ರಾ.ಬೇಂದ್ರೆ’ಯವರ ಚಿತ್ರ ಬರೆದು, ಅವರ ಕೆಲವು ರಚನೆಗಳ ಸಾಲನ್ನೂ ಬರೆದೆ. ಸಂಪದಿಗರಲ್ಲಿ ಹಂಚಿಕೊಂಡಿದ್ದೇನೆ. ನಿಮಗೆ ಏನನ್ನಿಸಿತು, ತಿಳಿಸಿ.


ಈ ಕೆಲವು ಸಾಲುಗಳು, ಅವರ ಚಿತ್ರವನ್ನು ಅಲಂಕರಿಸಿದೆ !


೦೧. ಉತ್ತರ ಧೃವಧಿಂ ದಕ್ಷಿಣ ಧೃವಕೂ


೦೨. ನಾಕು ತಂತಿ


೦೩. ಇನ್ನು ಯಾಕೆ ಬರಲಿಲ್ಲವ್ವ ಹುಬ್ಬಳ್ಳಿಯವಾ


೦೪. ನೀ ಹೀಂಗೆ ನೋಡಬ್ಯಾಡ


೦೫. ನುಡಿದು ಬೇಸತ್ತಾಗ


೦೬. ಮೂಡಲ ಮನೆಯಾ


೦೭. ಹಸಿಯಿದ್ದಳು ಬಿಸಿಯಿದ್ದಳು


೦೮. ಗಮ ಗಮಾಡಿಸ್ತಾವ ಮಲ್ಲಿಗೆ


೦೯. ಹಕ್ಕಿ ಹಾರುತಿದೆ ನೋಡಿದಿರಾ


೧೦. ಮಲ್ಲದ ಗಿಣಿಯೇ


೧೧. ಅಂತರಂಗದಾ ಮೃದಂಗ


೧೨. ಪಾತರಗಿತ್ತಿ ಪಕ್ಕ ನೋಡಿದ್ಯೆನೆ ಅಕ್ಕ


೧೩. ಹರಗೋಣ ಬಾ ಹೊಲ ಹೊಸದಾಗಿ


೧೪. ನಾನು ಬಡವಿ ಆತ ಬಡವ

ದೇವರಕೊಂಡರೆಡ್ಡಿ

field_vote: 
No votes yet
To prevent automated spam submissions leave this field empty.

ಬೆಂಗಳೂರಿನ ಅನೇಕಲ್ ಬಳಿ ತಳಿ ರಸ್ತೆಯಲ್ಲಿ ತಮಿಳುನಾಡಿನ ಗಡಿಗೆ ಹತ್ತಿದಂತೆ ಇರುವ ವಳಗೆರೆಹಳ್ಳಿಯಲ್ಲಿ ಜನಿಸಿದ ದೇವರಕೊಂಡರೆಡ್ಡಿಯವರು ಸರಳ ಸಾಮಾನ್ಯ ವ್ಯಕ್ತಿಯಂತೆ ತೋರುತ್ತಾರೆ. ಆದರೆ ಅವರೊಬ್ಬ ಅನುಪಮ ವಿದ್ವಾಂಸ. ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಪ್ರೌಢಶಾಲಾ ಶಿಕ್ಷಕರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ, ಕರ್ನಾಟಕ ಗೆಜೆಟಿಯರ‍್ ಇಲಾಖೆಯಲ್ಲಿ ಅನ್ವೇಷಕರಾಗಿ ಕೆಲಸಮಾಡಿ ಅನಂತರ ಕನ್ನಡ ವಿಶ್ವವಿದ್ಯಾಲಯದ ಶಾಸನಶಾಸ್ತ್ರ ವಿಭಾಗದಲ್ಲಿ ಸೇವೆ ಸಲ್ಲಿಸಿದ್ದಾರೆ.

ಶಾಂಘೈ ಕನ್ನಡ ಸಂಘ ಉಧ್ಘಾಟನೆ

field_vote: 
Average: 4.5 (4 votes)
To prevent automated spam submissions leave this field empty.

ನಿಮ್ಮಂತೆಯೇ ಕನ್ನಡವೇ  ನನ್ನುಸಿರೂ ಸಹ.

ನಾಯಿಗೂ ಒಂದು ಸ್ಮಾರಕ!

ಈ ಹಿಂದೆ ಎಲ್ಲೂ ಕರಾವಳಿಯಲ್ಲಿರುವ ಒಂದು ನಾಯಿಸ್ಮಾರಕದ ಬಗ್ಗೆ ಓದಿದ್ದೆ. ಇಂದು ದಟ್ಟ್ ಕನ್ನಡ.ಕಾಂನಲ್ಲಿ ಚೆನ್ನಪಟ್ಟಣದಲ್ಲಿ ನಾಯಿಗೂ ಒಂದು ದೇವಸ್ಥಾನವಿರುವುದು ತಿಳಿಯಿತು. (ಅದರ ಫೋಟೋ ಮಾತ್ರ ಹಾಕಿದ್ದಾರೆ). ಇದಾದ ಮೇಲೆ ಒಂದು ನಾಯಿಯ ಸ್ಮಾರಕವೃತ್ತಾಂತವನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕೆನ್ನಿಸಿದೆ.

ಕ್ರಿ.ಶ. ೯೪೮ನೇ ಇಸವಿಯ ಸ್ಮಾರಕ ಶಾಸನವೊಂದು ಮಂಡ್ಯಜಿಲ್ಲೆಯ ಆತಕೂರಿನಲ್ಲಿದೆ (ಈಗ ಅದನ್ನು ಬೆಂಗಳೂರಿನ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಇಡಲಾಗಿದೆ). ಶಾಸನದ ಜೊತೆಯಲ್ಲಿ(ನಡುವೆ) ನಾಯಿ ಹಂದಿಯೊಂದಿಗೆ ಹೋರಾಡುತ್ತಿರುವ ಉಬ್ಬು ಶಿಲ್ಪವೂ ಇದೆ. ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣ ಮತ್ತು ಚೋಳದೊರೆ ಮೂರನೇ ರಾಜಾದಿತ್ಯನ ನಡುವೆ ತಕ್ಕೋಲ ಎಂಬಲ್ಲಿ ಯುದ್ಧದಲ್ಲಿ ರಾಜಾದಿತ್ಯ ಹತನಾಗುತ್ತಾನೆ. ರಾಜಾದಿತ್ಯನನ್ನು ಕೊಂದವು ಕೃಷ್ಣನ ದಂಡನಾಯಕನಾದ ಗಂಗದೊರೆ ಬೂತುಗ. ಈ ಬೂತುಗನಿಗೆ ನೆರವಾದವನು ಆತನ ಅಂಕಕಾರನಾದ ಮಣೆಲರ ಆತನ ಸಾಹಸವನ್ನು ಮೆಚ್ಚಿದ ಕೃಷ್ಣನು ‘ನಿನಗೆ ಏನು ಬೇಕು ಬೇಡಿಕೋ’ ಎಂದು ಕೇಳುತ್ತಾನೆ. ಆಗ ಮಣೆಲರ ಕೃಷ್ಣನ ಬಳಿಯಿದ್ದ ‘ಕಾಳಿ’ ಎಂಬ ಹೆಣ್ಣುನಾಯಿಯನ್ನು (ಶಿಲ್ಪದಲ್ಲೂ ಹೆಣ್ಣು ನಾಯಿಯನ್ನು ಕೆತ್ತಲಾಗಿದೆ) ಬೇಡಿ ಪಡೆದುಕೊಳ್ಳುತ್ತಾನೆ. (ದತ್ತಿ, ಜಹಗೀರು, ಸೇನಾಪತಿ ಮುಂತಾದವುಗಳನ್ನು ಬೇಡದೆ ಕೇವಲ ನಾಯಿಯನ್ನು ಮಣೆಲರ ಬೇಡಿದನೆಂದರೆ ಆ ನಾಯಿಯ ಸಾಹಸ ಎಂಥದ್ದಿರಬಹುದು!? ಹರಿ ಎಂಬುದು ಮಣೆಲರನ ಕುದುರೆಯ ಹೆಸರು. ಬಹುಶಃ ಮಣೆಲರ ಪ್ರಾಣಿಪ್ರಿಯನಾಗಿದ್ದರಬಹುದು).

ಆ ನಾಯಿಯೊಂದಿಗೆ ತನ್ನ ಸಹಯೋಧರ ಜೊತೆ ಊರಿಗೆ ಮಣೆಲರ ವಾಪಸ್ಸಾಗುತ್ತಿದ್ದಾಗ, ಕೆಳಲೆನಾಡಿನ ಬೆಳತೂರಿನ ಪಶ್ಚಿಮಕ್ಕೆ ಇರುವ ಕಲ್ಲುಗುಡ್ಡವೊಂದರಲ್ಲಿ ಹಂದಿಯೊಂದಕ್ಕೆ ಮುಖಾಮುಖಿಯಾಗುತ್ತಾರೆ. ‘ಕಾಳಿ’ ನಾಐಇಯನ್ನು ಹಂದಿಯ ಮೇಲೆ ಛೂ ಬಿಡುತ್ತಾಋಎ. ಹಂದಿಗೂ ನಾಯಿಘೂ ಭಯಂಕರವಾದ ಹೋರಾಟ ನಡೆಯುತ್ತದೆ. ಅಂತ್ಯದಲ್ಲಿ ಹಂದಿ-ನಾಯಿಗಳೆರಡೂ ಸತ್ತುಹೋಗುತ್ತವೆ! ಮಣೆಲರನಿಗೆ ಅತೀವ ದುಃಖವಾಗುತ್ತದೆ. ನಾಯಿಯ ಶವವನ್ನು ತನ್ನ ಊರಾದ ಆತಕೂರಿಗೆ ತಂದು ಚಲ್ಲೇಶ್ವರ ದೇವಾಲಯದ ಎದುರಿಗೆ ಸಂಸ್ಕಾರ ಮಾಡುತ್ತಾನೆ. ನಂತರ ಅದಕ್ಕೆ (ಹಂದಿ ನಾಯಿ ಹೋರಾಡುತ್ತಿರುವ ಹಾಗೂ ವಿವರಗಳನ್ನುಳ್ಳ) ಸ್ಮಾರಕಶಿಲೆಯನ್ನು ಮಾಡಿಸಿ ನೆಡೆಸುತ್ತಾನೆ. ಊರಿನ ಹಿರಿಯಕೆರೆಯ ಕೆಳಗೆ ಮತ್ತಿಮರಗಳ ಬಳಿಯ ಕಾಲುವೆಯ ಸಮೀಪದಲ್ಲಿದ್ದ ಎರಡು ಖಂಡುಗ ಬೆಳೆಯುವ ಗದ್ದೆಯನ್ನು ದತ್ತಿಯಾಗಿ ಬಿಟ್ಟು ಕಾಳಿ ಸಮಾಧಿಯ ಪೂಜೆಗೆ ವ್ಯವಸ್ಥೆ ಮಾಡುತ್ತಾನೆ.

field_vote: 
Average: 5 (2 votes)
To prevent automated spam submissions leave this field empty.

ಗಾಂಧೀಜಿ ಕಂಡುಕೊಂಡ ಲೈಂಗಿಕತೆ

ಬಡಕಲು ಶರೀರದ, ತುಂಡು ಬಟ್ಟೆಯ, ಬ್ರಿಟಿಷರು "ಫಕೀರ ಎಂದು ಕರೆಯುತ್ತಿದ್ದ ಗಾಂಧಿ ಒಂದು ಅಪರೂಪದ ವ್ಯಕ್ತಿತ್ವ.   ಬಿಳಿಯರ ದಾಸ್ಯದಿಂದ ಅಹಿಂಸಾತ್ಮಕವಾಗಿ ನಮಗೆ ಮುಕ್ತಿ ಕೊಡಿಸಿದ ಗಾಂಧೀಯ ಬಗ್ಗೆ ಕೆಲವರಿಗೆ ಪೂಜ್ಯ, ಗೌರವ ಭಾವನೆ ಇದ್ದರೆ  ಇನ್ನೂ ಕೆಲವರಿಗೆ ಅವರ ಆದರ್ಶ ಮತ್ತು ಆಶಯಗಳ ಬಗ್ಗೆ ತಕರಾರು. ನಾನು ಚಿಕ್ಕವನಿದ್ದಾಗ ಶಾಲೆಯಲ್ಲಿ ಚರಿತ್ರೆಯ ಅಧ್ಯಾಪಕರು ಗಾಂಧೀಯವರನ್ನು ಏಕವಚನದಲ್ಲಿ ಸಂಬೋಧಿಸಿ ತಮ್ಮದೇ ಆದ ರಾಜಕೀಯ ಆಶಯಗಳ ಚರಿತ್ರೆ ಓದುತ್ತಿದ್ದಾಗ ಸಿಟ್ಟಿಗೆದ್ದಿದಿದೆ. ಮನೆಗಳಲ್ಲಿ ನಾವು ಕಲಿತಿದ್ದು ಹಿರಿಯರನ್ನು ಗೌರವಿಸಬೇಕು, ಬಹುವಚನದಲ್ಲಿ ಕರೆಯಬೇಕು ಎಂದು. ಅದರಲ್ಲೂ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾ ಚೇತನ ಎಂದರಂತೂ ಏಕವಚನ ದೂರವೇ ಉಳಿಯಿತು. ದೊಡ್ಡವನಾಗುತ್ತಾ ಗಾಂಧಿಯ ಬಗ್ಗೆ ಇನ್ನೂ ಚಿತ್ರ ವಿಚಿತ್ರ ಸಂಗತಿಗಳು ಕೇಳಲು ಸಿಕ್ಕವು. ಗಾಂಧೀ ರಾಜಕಾರಣದ ಬಗ್ಗೆ ಅವರ ಉದ್ದೇಶಗಳ ಬಗ್ಗ್ಗೆ ಹಲವರಿಗೆ ಹಲವು ರೀತಿಯ ಅಭಿಪ್ರಾಯ. ವಿಚಿತ್ರವೆಂದರೆ ಗಾಂಧೀ ಬಗ್ಗೆ ದೇಶದ ಒಳಗೆ ಮಾತ್ರ ವಿರೋಧವಲ್ಲ, ಅವರು ಒಂದು ನಿರ್ದಿಷ್ಟ ಸಮುದಾಯವನ್ನು ಓಲೈಸುತ್ತಿದ್ದಾರೆಂದು, ಮುಸ್ಲಿಂ  ದೇಶವನ್ನು ಹುಟ್ಟುಹಾಕಲು ಕಾರಣಕರ್ತರಾದರೆಂದು ಅವರನ್ನು ವಧಿಸಿದ ನಾಥೂರಾಂ ಗೋಡ್ಸೆಯ ಅಭಿಪ್ರಾಯದಿಂದ ಹಿಡಿದು ಪಾಕಿಸ್ತಾನದ ದಿವಂಗತ ಮಾಜಿ ಪ್ರಧಾನಿ ಜುಲ್ಫಿಕರ್ ಅಲಿ ಭುಟ್ಟೋ ವರೆಗೂ ಅವರ ಬಗ್ಗೆ ಸಂಶಯ. ಭುಟ್ಟೋ ತಾವು ಬರೆದ  ಪುಸ್ತಕವೊಂದರಲ್ಲಿ ಗಾಂಧೀಜೀ ಹೀಗೆ ಹೇಳಿದ್ದರೆಂದು ಉಲ್ಲೇಖಿಸಿದ್ದರು. "ಒಂದು ವೇಳೆ ಹಿಂದೂಧರ್ಮ ಭಾರತದಿಂದ ಅಥವಾ ಏಷಿಯಾ ಖಂಡದಿಂದ ಮೂಲೋತ್ಪಾಟನೆಯಾದರೆ ಹಿಂದೂ ಧರ್ಮದ ಕತೆ ಮುಗಿದಂತೆ, ಆದರೆ ಇಸ್ಲಾಂ ಭಾರತದಿಂದ, ಯಾ ಏಶಿಯದಿಂದಲೇ ಮೂಲೋತ್ಪಾಟನೆಯಾದರೂ ಅದು ಬೇರೆಲ್ಲಾದರೂ ಚಿಗುರೊಡೆಯುತ್ತದೆ, ಬೆಳೆಯುತ್ತದೆ" ಎಂದು ಹೇಳಿದ ಗಾಂಧೀಜಿ ಮುಸ್ಲಿಮರು ಭಾರತದಿಂದ ಹೊರದಬ್ಬಲ್ಪಟ್ಟರೆ ಅದು ಸಮರ್ಥನೀಯ ಎನ್ನುವ ಅಭಿಪ್ರಾಯವ ನ್ನು ಹೊಂದಿದ್ದರು ಎಂದು ಬರೆದು ಗಾಂಧೀಜಿಯ ಇಬ್ಬಂದಿತನವನ್ನು ಟೀಕಿಸಿದ್ದರು. ಗಾಂಧಿ ಇಲ್ಲೂ ಸಲ್ಲಲಿಲ್ಲ, ಅಲ್ಲೂ ಸಲ್ಲಲಿಲ್ಲ.

field_vote: 
Average: 4.1 (11 votes)
To prevent automated spam submissions leave this field empty.
ಸರಣಿ: 

ಹುಚ್ಚರಾಯಸ್ವಾಮಿ ಜಾತ್ರೆಗೆ ತಪ್ಪದ ಮುಖ್ಯಮಂತ್ರಿ ಯಡಿಯೂರಪ್ಪ

ಶಿಕಾರಿಪುರ ಪಟ್ಟಣದ ಹುಚ್ಚರಾಯಸ್ವಾಮಿ ದೇವಸ್ಥಾನ ತನ್ನದೇ ಆದ ಇತಿಹಾಸವನ್ನು ಹೊಂದಿದೆ. ಇದನ್ನು ವ್ಯಾಸರಾಯರು ಪ್ರವಾಸ ಸಂದಭðದಲ್ಲಿ ಶಿಕಾರಿಪುರಕ್ಕೆ ಬಂದಾಗ ಹುಚ್ಚರಾಯ ಎಂಬುವರಿಂದ ನಿವೇಶನ ಪಡೆದ ಮೂಲ ದೇವರಾದ ಆಂಜನೇಯನ್ನು ಪ್ರತಿಷ್ಠಾಪಿಸಿದರು. ಹುಚ್ಚರಾಯ ನಿವೇಶನ ನೀಡಿದ ಕಾರಣ ಆಂಜನೇಯ ಹುಚ್ಚರಾಯನಾದ. ವಿಗ್ರಹದ ವಿಶೇಷತೆ ಏನೆಂದರೆ ಇದು ದೊರೆತಿದ್ದು ದೇವಸ್ಥಾನದ ಸಮೀಪದ ಕೆರೆಯಲ್ಲಿ (ಹುಚ್ಚರಾಯ ಸ್ವಾಮಿ ಕೆರೆ), ಆದರೆ ಇದರ ಮೂಗು ಮುರಿದಿದ್ದ ಕಾರಣ ಹಿಮಾಲಯದಿಂದ ಸಾಲಿಗ್ರಾಮದ ಮೂಗೊಂದನ್ನು ತಂದು ಜೋಡಿಸಲಾಯಿತು ಎನ್ನುವುದು ಪ್ರತೀತಿ. ಈಗಲೂ ಮೂಲ ವಿಗ್ರಹಕ್ಕೂ ಮೂಗಿಗೂ ವ್ಯತ್ಯಾಸ ಕಾಣಬಹುದಾಗಿದೆ. ಹುಚ್ಚರಾಯನಿಗೆ ಭ್ರಾಂತೇಶ ಎಂದೂ ಕರೆಯುತ್ತಾರೆ. ಹಿರೇಕೇರೂರು ತಾಲ್ಲೂಕಿನ ಸಾತೇನಹಳ್ಳಿಯ ಸಾಂತೇಶ, ಕದರಲಮಂಡಗಿಯ ಕಾಂತೇಶ ಹಾಗೂ ಶಿಕಾರಿಪುರದ ಭ್ರಾಂತೇಶನನ್ನು ಒಂದೇ ದಿನ ಅದರಲ್ಲೂ ಶ್ರಾವಣ ಮಾಸದಲ್ಲಿ ನೋಡಿದರೆ ಕಾಶಿಗೆ ಹೋಗಿ ಬಂದಷ್ಟು ಪುಣ್ಯ ಎಂದು ಹಿರಿಯರು ನುಡಿಯುತ್ತಾರೆ.

field_vote: 
No votes yet
To prevent automated spam submissions leave this field empty.
ಸರಣಿ: 

ಅಸ್ತಮಿಸಿದ ಕನ್ನಡ ಅರುಣೋದಯದ ಕೊಂಡಿ

field_vote: 
Average: 5 (12 votes)
To prevent automated spam submissions leave this field empty.

    ಹತ್ತಾರು ಮನೆಗಳನ್ನು ತಿರುಗಿ ಅವರ ಮನೆಯ ಅಂಚೆ ಕಾಗದಗಳನ್ನು ಒಟ್ಟು ಮಾಡಿ ಅಧ್ಯಯಿನಿಸಿ ಒಂದು ಕಾಲದ ಸಂಸ್ಕೃತಿ, ಸಾಮಾಜಿಕ ಜೀವನಪರಿಯ ಕುರಿತು ಸಂಶೋಧನೆ ಮಾಡಬಹುದೆಂಬ ಧೈರ್ಯ ಇದ್ದುದ್ದು ಕೇವಲ ಡಾ.ಶ್ರೀನಿವಾಸ ಹಾವನೂರರಿಗೆ ಮಾತ್ರ. ಇರುವೆ ಗುಣದ ಈ ಸಂಶೋಧಕರಿಗೆ ಒಂದು ಹಳೆಯ ಕಾಗದದ ತುಂಡು ಕೂಡ ಹತ್ತು ಕಥೆಗಳನ್ನು ಹೇಳುತ್ತದೆ ಎಂಬ ಸತ್ಯ ಗೊತ್ತಿತ್ತು. ಮೂಲತ: ಗ್ರಂಥಪಾಲಕರಾಗಿದ್ದ ಹಾವನೂರ ತಾವು ಕೆಲಸ ಮಾಡಿದ ಕಡೆಯಲೆಲ್ಲ ಇಂಥ ಸಂಗ್ರಹ ಸಂಸ್ಕೃತಿಯನ್ನು ಬೆಳೆಸುತ್ತಾ ಹೋದವರು. 

    ವ್ಯವಸ್ಥಿತ ಸಂಗ್ರಹ ಮತ್ತು ಸಂಶೋಧನೆ ಇವರ ಕೆಲಸಗಳಲ್ಲಿ ಕಾಣುವ ಮುಖ್ಯ ಅಂಶ. ಆಕರಗಳನ್ನು ಅರ್ಕೈವ್ ಮಾಡುವ ಮತ್ತು ಅಧ್ಯಯನಕ್ಕಾಗಿ ಹೊಂದಿಸಿಕೊಳ್ಳುವ ಕಲೆ ಇವರಿಗೆ ಕರಗತವಾಗಿತ್ತು. ಇವರ ಈ ಎಲ್ಲ ಯೋಜನೆಗಳ ಮೂಲನೆಲೆಗಳು ಬಹುಶ:  ವಿಜ್ಞಾನ ವಿದ್ಯಾರ್ಥಿಯಾಗಿದ್ದ ಕಾರಣದಿಂದ ಬಂದ ಗುಣಗಳು ಎನಿಸುತ್ತದೆ. ಇಂಥ ಒಂದು ಸಂಸ್ಕಾರದಿಂದಲೇ ವೈಜ್ಞಾನಿಕ ನೆಲೆಯಲ್ಲಿ  ಕನ್ನಡ ಸಾಹಿತ್ಯವು ನಡುಗನ್ನಡದಿಂದ ಹೊಸಗನ್ನಡಕ್ಕೆ ತಿರುವು ಪಡೆದುಕೊಂಡ ಆ ಸಂಕ್ರಮಣಕಾಲದ ಸಾಹಿತ್ಯದ ಚಿತ್ರಣವನ್ನು ತುಂಬಾ ಯಶಸ್ವಿಯಾಗಿ ಕಟ್ಟಿಕೊಡಲು ಸಾಧ್ಯವಾಯಿತು.
    ಸುಮಾರು ೧೮೫೦ ರಿಂದ ೧೯೨೦ ರವರೆಗಿನ  ಕನ್ನಡದ ಹತ್ತಾರು ಆಕರಗಳನ್ನು ಸಂಗ್ರಹಿಸಿ ಅದರ ಆಧಾರದ ಮೇಲೆ ಹೊಸಗನ್ನಡ ಸಾಹಿತ್ಯ ಬೆಳೆದು ಬಂದ ಬಗೆಯನ್ನು ವಿವರಿಸಿದ್ದಾರೆ. ಆಗ ಮಿಶನರಿಗಳು ಕನ್ನಡ ನೆಲದಲ್ಲಿ ಕನ್ನಡದ ಕೃತಿಗಳನ್ನು ಸಂಗ್ರಹಿಸಿ ಪ್ರಕಟಿಸುವ, ಮುದ್ರಿಸುವ ಕಾಲ. ಇನ್ನೊಂದೆಡೆ ಜರ್ಮನಿಯ ಬಾಸೆಲ್ ಮಿಶನ್ ನ ಕನ್ನಡದ ಕಾರ್ಯ ಚಟುವಟಿಕೆ, ಮತ್ತೊಂದೆಡೆ ಕನ್ನಡದ ಪ್ರಥಮ ಪತ್ರಿಕೆ 'ಮಂಗಳೂರು ಸಮಾಚಾರ' ಮಾಡಿದ ಸಂಚಲನ ಇಷ್ಟೂ ವಿಚಾರಗಳು ಕನ್ನಡ ನಾಡು ನುಡಿಯ ಮೇಲೆ ಬೀರಿದ ಪ್ರಭಾವವನ್ನು ಅತ್ಯುತ್ತಮವಾಗಿ ಡಾಕ್ಯುಮೆಂಟ್ ಮಾಡಿದವರು ಡಾ.ಹಾವನೂರ. ಕನ್ನಡದ ಮೊದಲ ಪತ್ರಿಕೆ ‘ಮಂಗಳೂರು ಸಮಾಚಾರ’ದ ಬಗ್ಗೆ ಅವರು ಸಂಶೋಧನೆ ನಡೆಸಿದ್ದೂ ಅಲ್ಲದೆ ಅದರ ಪ್ರತಿಗಳ ನೆರಳಚ್ಚು ಕೃತಿಗಳನ್ನೂ ಕಾಪಿಡಲೂ ಕಾರಣರಾಗಿದ್ದಾರೆ. ಅವುಗಳನ್ನು ಮೈಕ್ರೋ ಫಿಲಂ ರೀತಿಯಲ್ಲಿ ಕೂಡ ಸಂಗ್ರಹಿಸಲಾಗಿದೆ.  

ವರ್ಷ ೨೦೦೯ ರ ಫಾಲ್ಕೆ ಪ್ರಶಸ್ತಿ ಪುರಸ್ಕೃತ, ಶ್ರೀ. ವಿ. ಕೆ. ಮೂರ್ತಿಯವರನ್ನು ಮುಂಬೈನ ಜನತೆ ಅಭಿನಂದಿಸಿತು !

 

field_vote: 
Average: 5 (2 votes)
To prevent automated spam submissions leave this field empty.

‘ಸತ್ತು ಬದುಕುವುದು ಹೇಗೆ!?’ ಎಂದು ತೋರಿಸಿಕೊಟ್ಟವನ ನೆನಪಿಗೆ…

ಕ್ರಾಂತಿಕಾರಿಗಳೆಂದರೆ ಹಾದಿ ತಪ್ಪಿದ ದೇಶ ಭಕ್ತರಲ್ಲ, ಅವರಿಗೂ ಧ್ಯೇಯ,ಗುರಿ,ಆದರ್ಶಗಳಿರುತ್ತವೆ.ಮತ್ತು ಆ ಆದರ್ಶಗಳನ್ನ ಪಾಲಿಸಲು ತಮ್ಮ ಜೀವವನ್ನು ಸಹ ಅವರು ಅರ್ಪಿಸಬಲ್ಲರು ಅಂತ ಜಗತ್ತಿಗೆ ತೋರಿಸಿಕೊಟ್ಟವರು, ಹುಟ್ಟಿ ಬಂದು ಅಷ್ಟೇ ಬೇಗ ಅದಿನ್ಯಾವ್ದೋ ತುರ್ತು ಕೆಲಸವಿದೆ ಅನ್ನುವಂತೆ ಎದ್ದು ಹೊರಟವರು,ಸತ್ತು ಬದುಕುವುದು ಹೇಗೆ ಅಂತ ತೋರಿಸಿಕೊಟ್ಟು ಹೋದವರು ಭಗತ್ ಸಿಂಗ್,ರಾಜಗುರು ಮತ್ತು ಸುಖದೇವ್.

field_vote: 
Average: 5 (9 votes)
To prevent automated spam submissions leave this field empty.

ಲೋಹಿಯಾ - 100

ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಪುಸ್ತಕದ ಮುನ್ನುಡಿಯ ಮೊದಲ ಮೂರು ಸಾಲುಗಳಿವು: ‘ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು.’

ಈ ಸಾಲುಗಳನ್ನು ಮೊದಲ ಬಾರಿ ಓದಿದ ಮೇಲೆ ನನ್ನಲ್ಲಿ ಮೊದಲಿಗೇ ಎದ್ದ ಪ್ರಶ್ನೆ ‘ಈ ಲೋಹಿಯಾ ಯಾರು?’ ಎಂಬುದು. ಹೀಗೆ ಲೋಹಿಯಾರನ್ನು ಹುಡುಕುತ್ತಾ ಅವರ ಬಗ್ಗೆ ಕನ್ನಡದಲ್ಲಿ ದೊರೆಯುತ್ತಿದ್ದ ಸಣ್ಣಪುಟ್ಟ ಮಾಹಿತಿಗಳನ್ನು ಓದುತ್ತಾ ದಕ್ಕಿಸಿಕೊಳ್ಳುತ್ತಾ ಹೋದ ನನಗೆ, ಬಹುಶಃ ಭಾರತಮಟ್ಟದ ನಾಯಕರೊಬ್ಬರು ಕರ್ನಾಟಕದ ಮೇಲೆ ಇಷ್ಟೊಂದು ರಾಜಕೀಯ, ಸಾಮಾಜಿಕ, ಸಾಹಿತ್ಯಕ ಪ್ರಭಾವ ಬೀರಿದ್ದು ಲೋಹಿಯಾ ಒಬ್ಬರೆ ಅನಿಸಿತ್ತು. ಆಗ ತೇಜಸ್ವಿ ಮತ್ತು ಎಂ.ಡಿ.ಎನ್. ಅನುವಾದಿಸಿರುವ ಲೋಹಿಯಾ ಎನ್ನುವ ಪುಸ್ತಕ ನನಗೆ ಲೋಹಿಯಾ ಅವರ ಚಿಂತನ ಜಗತ್ತನ್ನು ತೆರೆದಿಟ್ಟಿತ್ತು. ಮುಂದೆ ಕನ್ನಡ ಸಂಸ್ಕೃತಿ ನಿರ್ದೇಶನಾಲಯ ಪ್ರಕಟಿಸಿದ ಐದು ಸಂಪುಟಗಳು ಲೋಹಿಯಾ ಅವರ ಸಮಗ್ರ ಬರಹಗಳನ್ನು ಕನ್ನಡದಲ್ಲಿ ಓದುವಂತೆ ಮಾಡಿ ಲೋಹಿಯಾ ಅವರನ್ನು ಇನ್ನಷ್ಟು ಹತ್ತಿರ ಮಾಡಿಬಿಟ್ಟವು.

field_vote: 
Average: 4.3 (3 votes)
To prevent automated spam submissions leave this field empty.

ದೆಹಲಿ ಕರ್ನಾಟಕ ಸಂಘದಲ್ಲಿ ಶ್ರೀ ವಿ.ಕೆ.ಮೂರ್ತಿ ಹಾಗೂ ಶ್ರೀ ಶಿವಧ್ವಜ್ ಅವರುಗಳಿಗೆ ಸನ್ಮಾನ

field_vote: 
No votes yet
To prevent automated spam submissions leave this field empty.

ಇಂದು ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಿಗರಾದ ಶ್ರೀ ವಿ.ಕೆ.ಮೂರ್ತಿ (ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರು) ಹಾಗೂ ಶ್ರೀ ಶಿವಧ್ವಜ್ (ಅತ್ಯತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ 'ಗಗ್ಗರ' ತುಳು ಚಿತ್ರದ ನಿರ್ದೇಶಕರು) ಅವರುಗಳನ್ನು ಶಾಲು ಹೊದೆಸಿ, ಹಾರ ಹಾಕಿ, ಹೂಮಳೆ ಸುರಿಸಿ, ಫಲ ಸಮರ್ಪಣೆಯೊಂದಿಗೆ ನೆನಪಿನ ಕಾಣಿಕೆಯನ್ನಿತ್ತು, ಹೃತ್ಪೂರ್ವಕವಾಗಿ ಸನ್ಮಾನಿಸಲಾಯಿತು.


ಶ್ರೀ ಮೂರ್ತಿಯವರು ಮಾತನಾಡುತ್ತ, ಕನ್ನಡಿಗರಾದ ನೀವು ತಾಯ್ನಾಡಿನಿಂದ ದೂರದ ದೆಹಲಿಯಲ್ಲಿ ಆತ್ಮೀಯವಾಗಿ ನೀಡುತ್ತಿರುವ ಈ ಸಮ್ಮಾನ ತಮಗೆ ಫಾಲ್ಕೆ ಪ್ರಶಸ್ತಿ ಬಂದ ಸಂತೋಷವನ್ನು ಇಮ್ಮಡಿಗೊಳಿಸಿದೆ. ತಮ್ಮ ಕಣ್ಣುಗಳು ಆನಂದ ಭಾಷ್ಪಗಳಿಂದ ತುಂಬಿ ಬರುತ್ತಿವೆ ಎಂದೆನ್ನುತ್ತ ಭಾವುಕರಾದರು.

‘ಜೂರ’ ಪ್ರಶಸ್ತಿ ಶಾಸನದ ಹೆಗ್ಗಳಿಕೆ

ದೂರದ ಮಧ್ಯಪ್ರದೇಶದ ಮೈಹಾರ್ ರೈಲ್ವೆ ನಿಲ್ದಾಣದಿಂದ ೧೨ ಕಿಲೋಮೀಟರ್ ದೂರದಲ್ಲಿರುವ ಜೂರ ಎಂಬ ಹಳ್ಳಿಗೂ, ಕನ್ನಡ ನಾಡಿಗೂ, ಕನ್ನಡ ನಾಡನ್ನು ಆಳಿದ ಹತ್ತನೇ ಶತಮಾನದ ರಾಷ್ಟ್ರಕೂಟ ದೊರೆ ಮೂರನೇ ಕೃಷ್ಣನಿಗೂ ಎಲ್ಲಿಗೆಲ್ಲಿಯ ಸಂಬಂಧ! ಹೌದು ಅಂತಹ ಒಂದು ಪ್ರತ್ಯಕ್ಷ ಸಾಕ್ಷಿ ನಮ್ಮ ಕಣ್ಣ ಮುಂದಿದೆ. ೧೯೨೧ರಲ್ಲೇ ಶ್ರೀ ಆರ್.ಡಿ.ಬ್ಯಾನರ್ಜಿ ಎನ್ನುವವರು ಆ ಸಾಕ್ಷಿಯನ್ನು ನಮಗೆ ಒದಗಿಸಿ ಕೊಟ್ಟಿದ್ದಾರೆ. 

field_vote: 
Average: 3 (2 votes)
To prevent automated spam submissions leave this field empty.

ಹೇಮರಾಜ್

field_vote: 
Average: 5 (3 votes)
To prevent automated spam submissions leave this field empty.
ಹೇಮರಾಜ್ 
ಬಿಳಿಚರ್ಮದ ಬಿಳಿದಾಡಿಯ ಆ ೬೭ ವರ್ಷದ ಮುದುಕನನ್ನು ನೋಡಿದರೆ ಆತ ವಿದೇಶೀಯ ಎಂದೆನ್ನಿಸುವುದು ಸಹಜ. “ನಾನು ಬೆಲ್ಜಿಯಂ ದೇಶದವನು ನಿಜ, ಆದರೆ ನಾನೀಗ ಭಾರತೀಯ, ಭಾರತೀಯನೆಂದು ಕರೆದುಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ, ಇಂಡಿಯಾದ ಜನರನ್ನು, ಇಂಡಿಯಾದ ನೆಲವನ್ನು, ಇಂಡಿಯಾದ ಸಂಸ್ಕೃತಿಯನ್ನು ನಾನು ಪ್ರೀತಿಸುತ್ತೇನೆ, ಈ ಮಣ್ಣಿನೊಂದಿಗೆ ನನಗೆ ಆಳವಾದ ಭಾವನೆಗಳಿವೆ” ಎನ್ನುತ್ತಾರೆ ಆ ಬೆಲ್ಜಿಯಂ ಸಂಜಾತ ಧರ್ಮಶಾಸ್ತ್ರಜ್ಞ ಹೇಮರಾಜ್. ೧೯೭೫ರಲ್ಲಿ ಅವರು ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರಿಗೆ ಮಾಡಿದ ಮನವಿಯ ಮೇರೆಗೆ ಅವರು ಪೂರ್ಣಪ್ರಮಾಣದ ಭಾರತೀಯ ಪೌರತ್ವ ಪಡೆದು ಪತ್ನಿ ಕಾವೇರಿ ಹಾಗೂ ಮಗಳು ಸುದೀಪ್ತಳೊಂದಿಗೆ ಬೆಂಗಳೂರಿನ ಪುಲಕೇಶಿನಗರದ ರಾಬರ್ಟ್ಸನ್ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ.
ಹೇಮರಾಜರ ತಂದೆ ಹೆಮೆರಿಕ್ಸ್ ಅವರು ಇಂಡಿಯಾದಲ್ಲಿ ಕುಷ್ಠರೋಗ ಚಿಕಿತ್ಸೆಯನ್ನು ಪರಿಚಯಿಸಿದವರಲ್ಲಿ ಮೊದಲಿಗರು. ಅವರು ಆಫ್ರಿಕಾದ ಕಾಂಗೋ ನಾಡಿನಲ್ಲಿ (೧೯೨೯ ರಿಂದ ೧೯೫೪) ೨೫ ವರ್ಷಗಳ ಸೇವೆ ಸಲ್ಲಿಸಿ ಇಂಡಿಯಾಕ್ಕೆ ಬಂದರು. ಹಾಲೆಂಡಿನಲ್ಲಿ ಪ್ರಳಯ ಉಂಟಾದಾಗ ಭಾರತೀಯ ರೆಡ್ ಕ್ರ್ರಾಸ್ ಸಂಸ್ಥೆಯ ಮೂಲಕ ಅವರು ಅಲ್ಲಿ ಸೇವೆಗೆ ನಿಯೋಜಿತರಾದರು. ಅವರ ಸೇವೆಯನ್ನು ಗುರುತಿಸಿ ಹಾಲೆಂಡ್ ಸರ್ಕಾರವು ಅವರ ಬೆನ್ನು ತಟ್ಟಿ ಕುಷ್ಟರೋಗ ಚಿಕಿತ್ಸೆಗೆ ನೆರವು ನೀಡಿ ಅವರನ್ನು ಇಂಡಿಯಾಕ್ಕೆ ಮರಳಿಸಿತು.
ಅದೇ ಸಂದರ್ಭದಲ್ಲಿ ಕುಷ್ಠರೋಗಕ್ಕೆ ಬಲಿಯಾಗಿ ಮದ್ರಾಸು ವಿಶ್ವವಿದ್ಯಾಲಯದಿಂದ ಹೊರಹಾಕಲ್ಪಟ್ಟ ಜಗದೀಶನ್ ಎಂಬ ಪ್ರೊಫೆಸರು ಇವರ ಜೊತೆಗೂಡಿ ಬೆಲ್ಜಿಯನ್ ಕುಷ್ಠರೋಗ ಕೇಂದ್ರವನ್ನು ಪ್ರಾರಂಭಿಸಿದರು. ಸಹಸ್ರಾರು ರೋಗಿಗಳಿಗೆ ಚಿಕಿತ್ಸೆ ನೀಡಿದ ಆ ಕೇಂದ್ರ ಇಂದಿಗೂ ಕಾರ್ಯ ನಿರ್ವಹಿಸುತ್ತಿದೆ. ಅವರ ಜನಪರ ಕಾರ್ಯಗಳನ್ನು ಗುರುತಿಸಿದ ಇಂಡಿಯಾ ಸರ್ಕಾರವು ಅವರನ್ನು ವಿಶ್ವ ಆರೋಗ್ಯ ಸಂಸ್ಥೆಗೆ ತನ್ನ ಪ್ರತಿನಿಧಿಯಾಗಿ ಕಳಿಸಿತು. ಅವರ ಐದು ಮಕ್ಕಳಲ್ಲಿ ಒಬ್ಬರಾದ ಹೇಮರಾಜ್ ಇಂದು ಇಂಡಿಯಾದಲ್ಲಿ ನೆಲೆಗೊಂಡಿದ್ದಾರೆ.
ಹೇಮರಾಜ್ ಜುಬ್ಬಾ ತೊಟ್ಟು ಬರಿಗಾಲಲ್ಲಿ ನಡೆಯುತ್ತಾ ಗುಡಿ ಚರ್ಚು ಮಸೀದಿಯೆನ್ನದೆ ಎಲ್ಲೆಡೆ ಸಲೀಸಾಗಿ ಪ್ರವೇಶಿಸುತ್ತಾರೆ. ಮನುಷ್ಯತ್ವವನ್ನು ದೂರಮಾಡುವ ಧರ್ಮ ಸಂಸ್ಕೃತಿ ಮುಂತಾದ ಎಲ್ಲ ಬಂಧನಗಳನ್ನೂ ನಾನು ಕಳಚಿದ್ದೇನೆ ಎನ್ನುತ್ತಾರವರು. ೪೨ವರ್ಷಗಳ ಹಿಂದೆ ಪುಣೆಯ ಪೇಪಲ್ ಸೆಮಿನರಿಗೆ ಸೇರಿಕೊಂಡ ಅವರು ಕ್ರೈಸ್ತಗುರುವಾಗಿ ಸೇವೆ ಮಾಡಲು ರಾಂಚಿಗೆ ನಿಯುಕ್ತರಾದರು. ಆ ನಂತರ ಧರ್ಮಗ್ರಂಥಗಳ ಬಗ್ಗೆ ಸ್ನಾತಕೋತ್ತರ ಪದವಿಗಾಗಿ ರೋಮಿನ ಬಿಬ್ಲಿಕಲ್ ಯೂನಿವರ್ಸಿಟಿ ಸೇರಿದರು. ಆದರೆ ಅವರ ಮನಸ್ಸು ವಿದೇಶದ ಕೃತಕ ಜೀವನಕ್ಕಿಂತ ಕೊಳಚೆ ಪ್ರದೇಶದಲ್ಲಿನ ಜೀವಂತಿಕೆಗಾಗಿ ತುಡಿಯುತ್ತಿತ್ತು. 
ಅಶೋಕನ ಶಿಲಾಲಿಪಿಯ ಬಗ್ಗೆ ಅವರು ಡಾಕ್ಟರೆಟ್ ಪಡೆದಿರುವ ಅವರು ಹಿಂದೀ ಬೈಬಲ್ ಅನುವಾದದ ಸಾರಥ್ಯ ವಹಿಸಿದ್ದಾರೆ. ಸರಳ ಸುಲಲಿತವಾಗಿ ಹಿಂದೀ, ಇಂಗ್ಲಿಷ್, ಫ್ರೆಂಚ್, ಡಚ್ ಮತ್ತು ಜರ್ಮನ್ ಭಾಷೆಗಳನ್ನಾಡುವ ಹೇಮರಾಜರು ಸಂಸ್ಕೃತ, ಲತೀನ್, ಹೀಬ್ರೂ ಮತ್ತು ಗ್ರೀಕ್ ಭಾಷೆಗಳ ಪರಿಚಯ ಹೊಂದಿದ್ದಾರೆ. ಈಗ ಅವರು ಕನ್ನಡ ಕಲಿಯುತ್ತಿದ್ದಾರಲ್ಲದೆ ನಮ್ಮ ದೇಶೀ ಶೈಲಿಯ ಉಡುಗೆ ತೊಡುಗೆ ಆಚಾರ ವಿಚಾರಗಳನ್ನು ರೂಢಿಸಿಕೊಂಡು ಶುದ್ಧ ಸಸ್ಯಾಹಾರಿಯಾಗಿದ್ದಾರೆ.
ಅವರ ಮನೆಗೆ ಯಾರು ಹೋದರೂ ಅಲ್ಲಿ ವಿದೇಶೀ ಸಂಸ್ಕೃತಿಯನ್ನು ಕಾಣಲಾಗದು. ಅವರ ಹಿಂದೀ ಅತ್ಯಂತ ಶುದ್ಧ, ಅವರ ಬೈಬಲ್ ಹಿಂದೀಯಲ್ಲಿದೆ. ಅವರ ಗೋಡೆಗಳ ಮೇಲೆ ಭಗವದ್ಗೀತೆಯ ಸಾಲುಗಳುಳ್ಳ ಸುಂದರ ಫಲಕಗಳಿವೆ ಮತ್ತು ಭಾರತೀಯ ಚಿತ್ರಕಲೆಗಳಿವೆ. ಅವರ ಅಧ್ಯಯನ ಕೋಣೆಯಲ್ಲಿ ಎಲ್ಲ ಧರ್ಮಗಳ ಧರ್ಮಗ್ರಂಥಗಳಿವೆ. 
ಭಾನುವಾರ ಗೀತಾ ವಾಚನ, ಸೋಮವಾರ ಪಹ್ಲಾವೀಗಾಥ, ಮಂಗಳವಾರ ಪ್ರಾಕೃತಸೂತ್ರ, ಬುಧವಾರ ಪಾಳಿಪದ, ಗುರುವಾರ ಗುರುಮುಖಿಜಪ, ಶುಕ್ರವಾರ ಕುರಾನ್ ಪಠನ, ಶನಿವಾರ ತೋರಾ ಓದುವ ಅವರು ಸಂಜೆಗಳಲ್ಲಿ ಪವಿತ್ರ ಬೈಬಲ್ ವಾಚಿಸುತ್ತಾರೆ. ಹೀಗೆ ಸರ್ವಧರ್ಮಗಳಿಂದ ಸ್ವಧರ್ಮವನ್ನು ಆಚರಿಸುವ ಆದರ್ಶ ಬೆಳೆಸಿಕೊಂಡಿದ್ದಾರೆ. 
"ಧರ್ಮವನ್ನು ತಿಳಿಯದವನು ಕೋಮುವಾದ ಮಾಡುತ್ತಾನೆ, ಧರ್ಮದ ಆಳಕ್ಕಿಳಿದವನು ನಿಜಮನುಷ್ಯನಾಗುತ್ತಾನಲ್ಲದೆ ಎಲ್ಲ ಧರ್ಮಗಳನ್ನೂ ಪ್ರೀತಿಸುತ್ತಾನೆ" ಎನ್ನುತ್ತಾರವರು.

ಬಿಳಿಚರ್ಮದ ಬಿಳಿದಾಡಿಯ ಆ ೬೭ ವರ್ಷದ ಮುದುಕನನ್ನು ನೋಡಿದರೆ ಆತ ವಿದೇಶೀಯ ಎಂದೆನ್ನಿಸುವುದು ಸಹಜ. “ನಾನು ಬೆಲ್ಜಿಯಂ ದೇಶದವನು ನಿಜ, ಆದರೆ ನಾನೀಗ ಭಾರತೀಯ, ಭಾರತೀಯನೆಂದು ಕರೆದುಕೊಳ್ಳಲು ನನಗೆ ಹೆಮ್ಮೆಯೆನಿಸುತ್ತದೆ, ಇಂಡಿಯಾದ ಜನರನ್ನು, ಇಂಡಿಯಾದ ನೆಲವನ್ನು, ಇಂಡಿಯಾದ ಸಂಸ್ಕೃತಿಯನ್ನು ನಾನು ಪ್ರೀತಿಸುತ್ತೇನೆ, ಈ ಮಣ್ಣಿನೊಂದಿಗೆ ನನಗೆ ಆಳವಾದ ಭಾವನೆಗಳಿವೆ” ಎನ್ನುತ್ತಾರೆ ಆ ಬೆಲ್ಜಿಯಂ ಸಂಜಾತ ಧರ್ಮಶಾಸ್ತ್ರಜ್ಞ ಹೇಮರಾಜ್. ೧೯೭೫ರಲ್ಲಿ ಅವರು ಅಂದಿನ ಪ್ರಧಾನಮಂತ್ರಿ ಇಂದಿರಾಗಾಂಧಿಯವರಿಗೆ ಮಾಡಿದ ಮನವಿಯ ಮೇರೆಗೆ ಅವರು ಪೂರ್ಣಪ್ರಮಾಣದ ಭಾರತೀಯ ಪೌರತ್ವ ಪಡೆದು ಪತ್ನಿ ಕಾವೇರಿ ಹಾಗೂ ಮಗಳು ಸುದೀಪ್ತಳೊಂದಿಗೆ ಬೆಂಗಳೂರಿನ ಪುಲಕೇಶಿನಗರದ ರಾಬರ್ಟ್ಸನ್ ರಸ್ತೆಯಲ್ಲಿ ವಾಸಿಸುತ್ತಿದ್ದಾರೆ.

ಹೇಮರಾಜರ ತಂದೆ ಹೆಮೆರಿಕ್ಸ್ ಅವರು ಇಂಡಿಯಾದಲ್ಲಿ ಕುಷ್ಠರೋಗ ಚಿಕಿತ್ಸೆಯನ್ನು ಪರಿಚಯಿಸಿದವರಲ್ಲಿ ಮೊದಲಿಗರು. ಅವರು ಆಫ್ರಿಕಾದ ಕಾಂಗೋ ನಾಡಿನಲ್ಲಿ (೧೯೨೯ ರಿಂದ ೧೯೫೪) ೨೫ ವರ್ಷಗಳ ಸೇವೆ ಸಲ್ಲಿಸಿ ಇಂಡಿಯಾಕ್ಕೆ ಬಂದರು. ಹಾಲೆಂಡಿನಲ್ಲಿ ಪ್ರಳಯ ಉಂಟಾದಾಗ ಭಾರತೀಯ ರೆಡ್ ಕ್ರ್ರಾಸ್ ಸಂಸ್ಥೆಯ ಮೂಲಕ ಅವರು ಅಲ್ಲಿ ಸೇವೆಗೆ ನಿಯೋಜಿತರಾದರು. ಅವರ ಸೇವೆಯನ್ನು ಗುರುತಿಸಿ ಹಾಲೆಂಡ್ ಸರ್ಕಾರವು ಅವರ ಬೆನ್ನು ತಟ್ಟಿ ಕುಷ್ಟರೋಗ ಚಿಕಿತ್ಸೆಗೆ ನೆರವು ನೀಡಿ ಅವರನ್ನು ಇಂಡಿಯಾಕ್ಕೆ ಮರಳಿಸಿತು.

ಬ್ರಾಡ್ಮನ್ ಹಾಗು ಸಚಿನ್ !

field_vote: 
No votes yet
To prevent automated spam submissions leave this field empty.

ಒಮ್ಮೆ ವರ್ಲ್ಡ್ ಕಪ್ ನ ಪಂದ್ಯದಲ್ಲಿ ಸಚಿನ್ ಆಟವನ್ನು  ವೀಕ್ಷಿಸುತ್ತಿರುವಾಗ , ಬ್ರಾಡ್ಮನ್ ಅವರು ತಮ್ಮ ಹೆಂಡತಿಯನ್ನು ಕರೆದು ಹೇಳಿದ್ದರಂತೆ , 'ಈ ಹುಡುಗನ ಆಟದ ಶೈಲಿ ನನ್ನ ಶೈಲಿಯನ್ನು ಹೋಲುತ್ತದೆ ಎಂದು '. ಅಂದಿನಿಂದ ಇಲ್ಲಿಯವರೆಗೂ ಅನೇಕರು ಸಚಿನ್ ರನ್ನು ಬ್ರಾಡ್ಮನ್ ಗೆ ಹೋಲಿಕೆ ಮಾಡುತ್ತಲೇ ಬಂದಿದ್ದಾರೆ . ಆದರೆ ಎಲ್ಲರು ಮರೆಯುತ್ತಿರುವ ಒಂದು ವಿಷಯ ಎಂದರೆ , ಬ್ರಾಡ್ಮನ್ ಆಡಿದ್ದ ಕಾಲ ಮತ್ತು ಸಚಿನ್ ಆಡುತ್ತಿರುವ ಕಾಲ , ಎರಡು ವಿಭಿನ್ನ !

ಸತ್ಯಕಾಮರ ಕಿಡಿನುಡಿಗಳು -೨

 ಸತ್ಯಕಾಮರು ಗಾಂಧಿಜಿಯ ಅನುಯಾಯಿಗಳು. ಗಾಂಧಿಜಿ ಹೇಳಿದ ಹಾಗೆಯೇ ಬದುಕಿ ತೋರಿದವರು. ಸ್ವಾತಂತ್ರ ಹೋರಾಟದಲ್ಲಿ ಪಾಲುಗೊಂಡು ಜೈಲನ್ನು ಕಂಡವರು. ಬಿಡುಗಡೆಯ ಹೋರಾಟವೇ ಕಾಯಕವಾಗಿದ್ದ ಸತ್ಯಕಾಮರಿಗೆ ಚಳುವಳಿ ಮುಗಿದ ಮೇಲೆ ಕೆಲಸವಿಲ್ಲದಂತಾಯಿತು. ಬಿಜಾಪುರಕ್ಕೆ ನಡೆದು ಬಂದರು. ಬಿಜಾಪುರದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಮೈದಣಿಯೆ ಕೂಲಿಕೆಲಸವನ್ನು ಮಾಡಿ ಹೊಟ್ಟೆಹೊರೆಯುತ್ತಿದ್ದರು. ಕೊಟ್ಟಿಗೆಯ ಸಗಣಿ ಬಳಿಯುವುದು. ಹೊಲಗಳಿಗೆ ನೀರು ಬಿಡುವುದು, ಕಳೆ ಕೀಳುವುದು, ಎಂಜಲೆಲೆ ಆಯುವುದು, ಕಸ ಮುಸುರೆ ಕೆಲಸ ಇತ್ಯಾದಿಗಳು ಅವರ ನಿತ್ಯಕಾಯಕವಾಗಿದ್ದವು.

field_vote: 
Average: 4.8 (4 votes)
To prevent automated spam submissions leave this field empty.

ಸತ್ಯಕಾಮರ ಕಿಡಿನುಡಿಗಳು

       ಸತ್ಯಕಾಮರು ಇಪ್ಪತ್ತನೆಯ ಶತಮಾನ ಕಂಡ ಅಪರೂಪದ ಅವಧೂತರು. ತಾಂತ್ರಿಕ ವಿದ್ಯೆಯಲ್ಲಿ ಪಳಗಿದವರು. ಅವರಿಗೆ ವಾಕ್ ಸಿದ್ಧಿ ಲಭಿಸಿತ್ತು ಎನ್ನುತ್ತಾರೆ. ತಾಂತ್ರಿಕ ಸಾಧನೆಯಲ್ಲಿ ಗಳಿಸಿದ ಸಿಧ್ಧಿಯನ್ನೆಲ್ಲ ಕಪ್ಪತಗುಡ್ಡ ಎಂಬ ಊರಿನಲ್ಲಿ ತ್ಯಜಿಸಿ ಸಾತ್ವಿಕ ಜೀವನ ನಡೆಸಿದವರು. ಗಾಂಧೀಜಿಯ ಅನುಯಾಯಿ. ಅವರ ಬೋಧನೆಗಳನ್ನು ಅಕ್ಷರಶಃ ತಮ್ಮ ಜೀವನದಲ್ಲಿ ಅನುಷ್ಟಾನಕ್ಕೆ ತಂದವರು.

field_vote: 
Average: 4.7 (7 votes)
To prevent automated spam submissions leave this field empty.

ಮಹಾರಾಜ ಸ್ವಾತಿತ್ತಿರುನಾಳ್ - ೩

ತ್ಯಾಗರಾಜರ 'ದರ್ಶನ'

field_vote: 
Average: 5 (10 votes)
To prevent automated spam submissions leave this field empty.

ಮಹಾರಾಜ ಸ್ವಾತಿತ್ತಿರುನಾಳ್ - ೨

ಕೇರಳದಲ್ಲಿದ್ದ ಕರ್ನಾಟಕ ಸಂಗೀತವನ್ನು ಸುಧಾರಿಸಿ ಅದಕ್ಕೆ ಒಂದು ಭವ್ಯವಾದ ನಿಜರೂಪವನ್ನು ಕೊಟ್ಟ ಕೀರ್ತಿ ಸ್ವಾತಿತ್ತಿರುನಾಳ್ ಅವರಿಗೇ ಸಲ್ಲಬೇಕು. ಅವರ ಆಸ್ಥಾನದಲ್ಲಿ ಮಹಾನ್ ಸಂಗೀತ ವಿದ್ವಾಂಸರಿದ್ದರು. ಅವರಲ್ಲಿ ನಲ್ಲತಂಬಿ ಮುದಲಿಯಾರ್, ವಡಿವೇಲು, ಮೇರುಸ್ವಾಮಿ, ಕನ್ನಯ್ಯ, ಅನಂತಪದ್ಮನಾಭಗೋಸ್ವಾಮಿ, ಗೋವಿಂದಮಾರಾರ್ ಎಂಬುವವರು ಪ್ರಮುಖರು. ಪ್ರಸಿದ್ಧ ಸಾಹಿತಿಗಳಾದ ಕೋಯಿಲ್ ತಂಬುರಾನ್, ಇರಯಿಮ್ಮನ್ ತಂಬಿ, ರಾಮವಾರಿಯರ್ ಅವರುಗಳೂ ಇದ್ದರು.

field_vote: 
Average: 4.9 (14 votes)
To prevent automated spam submissions leave this field empty.

ನೆನಪಾಗಿ ಹಿಂಡದಿರು ಹುಳಿಮಾವಿನ ಮರವೇ...........

field_vote: 
Average: 4.2 (5 votes)
To prevent automated spam submissions leave this field empty.

೧೯೯೮ ರಲ್ಲಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ನಡೆದ ಪುಸ್ತಕ ಬಿಡುಗಡೆ ಸಮಾರಂಭವೊಂದರಲ್ಲಿ ಲಂಕೇಶ್ ಅವರನ್ನು ಕಂಡು ಒಮ್ಮೆ ಕೈ ಕುಲುಕಿದ್ದು ಬಿಟ್ಟರೆ ಮತ್ತೆ ನಾನು ಅವರನ್ನು ಯಾವತ್ತೂ ಹತ್ತಿರದಿಂದ ನೋಡುವದಾಗಲಿ, ಅಥವಾ ಅವರ ಒಡನಾಟಕ್ಕೆ, ಸಂಪರ್ಕಕ್ಕೆ ಬರುವದಾಗಲಿ ಎಂದೂ ಮಾಡಿದವನಲ್ಲ. ಆದರೂ ಅವರ ಬರಹಗಳಿಂದಲೇ ಅವರು ಎಂಥ ವ್ಯಕ್ತಿಯಾಗಿದ್ದರು ಎಂಬುದನ್ನು ಒಂದು ಅಂದಾಜು ಹಾಕಿದವನು ನಾನು.

ಮಹಾರಾಜ ಸ್ವಾತಿತ್ತಿರುನಾಳ್ - ೧

೧೭೫೦-೧೮೫೦ರಲ್ಲಿ ಸಂಗೀತ ಕಲೆ ಉಚ್ಚಸ್ಥಾಯಿಯನ್ನು ಮುಟ್ಟಿತ್ತೆನ್ನಬಹುದು. ಸಂಗೀತ ಪ್ರಪಂಚದಲ್ಲಿ ಇಂದಿಗೂ ಪ್ರಚಾರದಲ್ಲಿರುವ ಅಪಾರ ಸಂಖ್ಯೆಯ ಭಾವಭರಿತ ಕೀರ್ತನೆಗಳು ಆ ಒಂದುನೂರು ವರ್ಷಗಳಲ್ಲಿ ಬೆಳಕಿಗೆ ಬಂದವೇ ಆಗಿವೆ. ಅದನ್ನು, ಆ ಒಂದು ಶತಮಾನಕಾಲವನ್ನು 'ಸಂಗೀತ ಯುಗ' ಎಂದೇ ಹೇಳಬೇಕು. ಆ ಒಂದುನೂರು ವರುಷ ಕಾಲದಲ್ಲೇ ದಕ್ಷಿಣ ಭಾರತದಲ್ಲಿ ಬಾಳಿ ಬದುಕಿದ ವಾಗ್ಗೇಯಕಾರರು, ಸಂಗೀತ ವಿದ್ವಾಂಸರು ಹಲವರು. ಅವರಲ್ಲಿ ಸ್ವಾತಿತ್ತಿರುನಾಳ್ ಸಹ ಒಬ್ಬರು. 

field_vote: 
Average: 5 (21 votes)
To prevent automated spam submissions leave this field empty.

‘ಸೋಲಾರ್ ನ್ಯಾನೋ ಕಾರ್’ ತಯಾರಿಸಿದ ಹುಬ್ಬಳ್ಳಿಯ ‘ಈಶಾನ್ ಅವಸ್ಥಿ’ಗಳು!

field_vote: 
Average: 4.6 (14 votes)
To prevent automated spam submissions leave this field empty.

ಪರಿಸರ ಸ್ನೇಹಿ ಸೋಲಾರ್ ನ್ಯಾನೋ ಕಾರ್ ತಯಾರಿಸಿದ ಹುಬ್ಬಳ್ಳಿ ರೋಟರಿ ಕನ್ನಡ ಮಾಧ್ಯಮ ಶಾಲೆಯ ಸಚಿನ್, ನಾಗರಾಜ್ ಹಾಗೂ ಮಂಜುನಾಥ.

 

ಜಪಾನಿ ಶಿಕ್ಷಣತಜ್ಞ ತೆತ್ಸುಕೊ ಕೊರೋಯೋನಾಗಿ ಬರೆದ ‘ತೊತ್ತೋಚಾನ್’ ಬಹುಚರ್ಚಿತ ಪುಸ್ತಕ. ನಮ್ಮ ಕಾಮಿಕ್ಸ್ ರಾಣಿ ‘ಪುಟಾಣಿ ಪುಟ್ಟಿ’ಯಂತೆ ಬಲು ಚೂಟಿ ಆ ತೊತ್ತೋಚಾನ್. ಆಕೆಗೆ ಮೇಷ್ಟ್ರು ರೈಲು ಬೋಗಿಯಲ್ಲಿ ಪಾಠ ಮಾಡಬೇಕು; ಗಿಡದ ಟೊಂಗೆಗೆ ನೇತಾಡುವಾಗ ಅಮ್ಮ ಊಟ ಮಾಡಿಸಬೇಕು, ನೂರಾರು ಟಿಕೇಟ್ ಕೈಯಲ್ಲಿ ಹಿಡಿಯುವ ಬಸ್ ಕಂಡಕ್ಟರ್ ಆಕೆ ಸದ್ಯ ಆಗಬೇಕು! ಆಕೆಯೊಂದಿಗೆ ಆಟವಾಡಲು ಹೆಡ್ ಮಾಸ್ತರ್ ಬರಬೇಕು..ಜೊತೆಗೆ ಗಿಳಿ, ಮೊಲ, ಜಿಂಕೆ ಎಲ್ಲ ಅವರು ಹಿಡಿದು ತರಬೇಕು!

’ಜ್ಯೋತಿ ಬಸು,’ ರವರು ಇನ್ನೆಲ್ಲಿ ?

 

೨೦೦೯ ರ, ಜನವರಿಯಿಂದ ನ್ಯೂಮೋನಿಯ ಕಾಯಿಲೆಯ ವಿಕೋಪಕ್ಕೆ  ಬಲಿಯಾಗಿದ್ದ, ೯೫ ವರ್ಷ ಪ್ರಾಯದ, ಹಿರಿಯ ಕಮ್ಯುನಿಸ್ಟ್ ನಾಯಕ, ಶ್ರೀ. ಜ್ಯೋತಿ ಬಸುರವರು, ರವಿವಾರ, ೧೧.೪೭ ಕ್ಕೆ ಎ. ಎಮ್. ಆರ್. ಐ ಆಸ್ಪತ್ರೆಯಲ್ಲಿ ನಿಧನರಾದರು. ಅವರು ಹಲವಾರು ದಿನಗಳಿಂದ ವೆಂಟಿಲೇಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜನವರಿ, ೧, ರಿಂದಲೂ ಅವರು ನರಳುತ್ತಲೇ ಇದ್ದರು. 

field_vote: 
Average: 5 (1 vote)
To prevent automated spam submissions leave this field empty.

‘ಪೂಚಂತೇ ಬ್ರೈಲ್ ತಂತ್ರಾಂಶ’ ರೂಪಿಸಿದ್ದಾರೆ ಈ ಹುಡುಗರು!

field_vote: 
Average: 5 (1 vote)
To prevent automated spam submissions leave this field empty.

ಸಂಪದಿಗರೆ! `ಸಂಪದ'ದಲ್ಲಿ ನನ್ನ `....ಬೆಣ್ಣೆಖಾಲಿ' ಕವನಕ್ಕೆ ಬಂದ ಪ್ರತಿಕ್ರಿಯೆಗಳಿಗೆ ನಾನು ಉತ್ತರಿಸುವಾಗ `ಐ.ಟಿ.ಯಲ್ಲಿ ಕನ್ನಡ'ಕ್ಕೆ ಸಂಬಂಧಿಸಿದಂತೆ ಸರ್ಕಾರದ ದಿವ್ಯ ನಿರ್ಲಕ್ಷ್ಯ ಕುರಿತು ನನ್ನ ಅಸಹನೆ ವ್ಯಕ್ತಪಡಿಸಿ ಕವನದ ನಿಜವಾದ ಆಶಯ ಕುರಿತು ಸ್ಪಷ್ಟಪಡಿಸಿದ್ದೆ. ಪರಿಸ್ಥಿತಿ ಏನೇನೂ ಬದಲಾಗಿಲ್ಲ ಎಂಬುದಕ್ಕೆ 2008 ಫೆ.18 ರಂದು (ಅಥವಾ ಒಂದೆರಡು ದಿನ ಆಸುಪಾಸು) `ಸಂಯುಕ್ತ ಕರ್ನಾಟಕ'ದಲ್ಲಿ ಪ್ರಕಟವಾದ ನನ್ನ ಈ ಲೇಖನವೇ ಸಾಕ್ಷಿ! ಉಪಯುಕ್ತ ಮಾಹಿತಿ ಇದೆ ಎನಿಸಿದ್ದರಿಂದ ಅದನ್ನೇ ನಿಮಗಾಗಿ ಇಲ್ಲಿ ಪ್ರಸ್ತುತಪಡಿಸಿದ್ದೇನೆ:-  ಪ್ರಭಾಕರ  

ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ...

ಪರೀಕ್ಷೆ ಮುಗಿಯಲು ಇನ್ನು ಅರ್ಧ ಗಂಟೆ ಮಾತ್ರ ಬಾಕಿ ಇತ್ತು. ಬರೆದ ಉತ್ತರಗಳನ್ನು ಒಮ್ಮೆ ಪರೀಕ್ಷಿಸಿ, ಉಳಿದಿದ್ದ ಕೊನೆಯ ಪ್ರಶ್ನೆಗೆ ಬೇಗ ಬೇಗ ಉತ್ತರಿಸಲು ಶುರು ಮಾಡಿದೆ. ಹದಿನೈದು ನಿಮಿಷಗಳಲ್ಲಿ ಆ ಪ್ರಶ್ನೆಯ ಉತ್ತರವೂ ಮುಗಿಯಿತು. ಎಲ್ಲವೂ ಸರಿಯಾಗಿದೆ ಎಂದು ನೋಡಿಕೊಂಡು, ಇನ್ನೂ ಹತ್ತು ನಿಮಿಷಗಳು ಬಾಕಿ ಇರುವಂತೆ, ಉತ್ತರ ಪತ್ರಿಕೆಯನ್ನು ಕೊಠಡಿಯ ಮೇಲ್ವಿಚಾರಕನಿಗೆ ಕೊಟ್ಟು ದಡಬಡಾಯಿಸಿ ಹೊರಗೋಡಿದೆ. ‘ಏ ತಮ್ಮಾ, ಇನ್ನೂ ಹತ್ತು ನಿಮಿಷ ಐತಿ. ಸರಿಯಾಗಿ ಚೆಕ್‌ ಮಾಡು, ಲಾಸ್ಟ್‌ ಪೇಪರ್‌ ಇದು’ ಅಂತ ಆತ ಕೂಗುತ್ತಿದ್ದರೂ, ಹಿಂತಿರುಗಿ ಕೂಡ ನೋಡದೇ ರೂಮಿನ ಕಡೆ ಓಡುನಡಿಗೆಯಲ್ಲಿ ಹೊರಟೆ.

ಸಿದ್ಧವಾಗಿದ್ದ ಬ್ಯಾಗನ್ನು ಎತ್ತಿಕೊಂಡು, ರೂಮು ಪೂರ್ತಿಯಾಗಿ ಖಾಲಿಯಾಗಿರುವುದನ್ನು ಕಣ್ಣಂದಾಜಿನಲ್ಲೇ ಪರೀಕ್ಷಿಸಿ, ಬೀಗ ಹಾಕಿ ಮಾಲೀಕನಿಗೆ ಕೊಟ್ಟು, ರಜೆ ಮುಗಿದ ನಂತರ ಬರುವೆ ಎಂದು ಹೇಳಿದವನೇ ಒಂದು ಕಿಮೀ ದೂರವಿದ್ದ ಬಸ್‌ ಸ್ಟ್ಯಾಂಡ್‌ ಕಡೆ ಹೊರಟೆ. ಆಗ ಗಂಟೆ ಒಂದೂವರೆ.

ಪರೀಕ್ಷೆ ಮುಗಿಸಿಕೊಂಡು ಬಂದ ಮಿತ್ರ, ‘ಏನಂಥ ಅರ್ಜೆಂಟ್‌? ಇವತ್ತೊಂದಿನ ಇದ್ದು ನಾಳೆ ಹೋಗುವಿಯಂತೆ. ಊರಲ್ಲೇನು ಅಂಥ ಕೆಲಸ?’ ಎಂದು ಕೇಳುತ್ತಿದ್ದರೂ ಗಮನಿಸದೇ, ‘ಮಾರಾಯ, ನನ್ನ ಬಸ್‌ ಸ್ಟ್ಯಾಂಡ್‌ ಹತ್ರ ಬಿಡ್ತಿಯಾ?’ ಎಂದೆ. ಅವನ ಸೈಕಲ್‌ ಹಿಂದೆ ಕೂತು ಬಸ್‌ಸ್ಟ್ಯಾಂಡ್‌ ತಲುಪಿದಾಗ, ಗದಗ್‌ಗೆ ಹೊರಟಿದ್ದ ಬಸ್‌ನ ಬಾಗಿಲು ಹಾಕುತ್ತಿದ್ದ ಕಂಡಕ್ಟರ್‌. ಸೈಕಲ್‌ನಿಂದ ನೆಗೆದವನೇ, ಬಸ್‌ ಏರುತ್ತ, ಗೆಳೆಯನಿಗೆ ಕೈ ಬೀಸುತ್ತ, ಬೆವರೊರೆಸಿಕೊಳ್ಳುತ್ತ ಕೂತೆ.

ನರೇಗಲ್‌ನ ನನ್ನ ಪಿಯುಸಿ ಮೊದಲ ವರ್ಷದ ಪರೀಕ್ಷೆಯ ಕೊನೆಯ ಪೇಪರ್‌ ಮುಗಿಸಿ ನಾನಷ್ಟು ತುರ್ತಾಗಿ ಹೊರಟಿದ್ದು ಗದಗ್‌ಗೆ. ಬಸ್‌ಸ್ಟ್ಯಾಂಡ್‌ ಹತ್ತಿರದಲ್ಲೇ ಇರುವ ಕೃಷ್ಣಾ ಟಾಕೀಸನ್ನು ಮೂರು ಗಂಟೆಯೊಳಗೆ ತಲುಪುವುದು ನನ್ನ ಉದ್ದೇಶ. ಏಕೆಂದರೆ, ಮೂರು ಗಂಟೆಗೆ ಮ್ಯಾಟ್ನಿ ಷೋ ಶುರುವಾಗುತ್ತದೆ. ತಪ್ಪಿಸಿಕೊಂಡರೆ, ಒಂದನೇ ಷೋಗೇ ಹೋಗಬೇಕು. ಆಗ ಅಲ್ಲಿಂದ ಐವತ್ತು ಕಿಮೀ ದೂರವಿರುವ ಊರಿಗೆ ಹೋಗಲು ಬಸ್‌ ಸಿಗುವುದಿಲ್ಲ.

field_vote: 
Average: 4.8 (13 votes)
To prevent automated spam submissions leave this field empty.

ಗಿಳಿಯು ಪಂಜರದೊಳಿಲ್ಲ

field_vote: 
Average: 5 (2 votes)
To prevent automated spam submissions leave this field empty.

ಪ್ರೀತಿಯ ಅಶ್ವತ್ಥ್ ಅವರೆ,

ನಿಮ್ಮ ಸಾವಿನ ಸುದ್ದಿ ನನ್ನ ಮೈ ಮನಸ್ಸುಗಳೆರಡನ್ನೂ ಶೂನ್ಯವಾಗಿಸಿಬಿಟ್ಟಿದೆ. ಮನದೊಳಗಿನ ನೋವು ಮುಖದಲ್ಲಿ ಎದ್ದು ಕಾಣುತ್ತಿದೆ. ಕಣ್ಣೀರು ಕಂಡೂ ಕಾಣದಂತೆ ತಾನೇ ತಾನಾಗಿ ಹರಿಯುತ್ತಿದೆ. ಇಲ್ಲಿ ಎಲ್ಲರೂ ಯಾಕೆ ಯಾಕೆ ಎಂದು ಕೇಳುತ್ತಿದ್ದಾರೆ. ಹೇಗೆ ಹೇಳಲಿ ಅವರಿಗೆ ನೀವಿಲ್ಲದೆ ಉಂಟಾದ ತಳಮಳವನ್ನು? ಹೇಗೆ ಹೇಳುವದು ಅವರಿಗೆ ನೀವಿಲ್ಲದೆ ಸ್ಮಶಾನವಾಗಿದೆ ಮನದಂಗಳ ಎಂದು. ಹೇಗೆ ಹೇಳಲಿ ಅವರಿಗೆ ನಮ್ಮ ನಾಡಿನ ಮುದ್ದಿನ ಗಿಳಿಯೊಂದು ಪಂಜರದೊಳಗಿಂದ ಹಾರಿ ಹೋಗಿದೆ ಎಂದು. ಏನ ಹೇಳಲಿ ಅವರಿಗೆ ನಿಮ್ಮ ಸಾಧನೆಯ ಬಗ್ಗೆ. ಹೇಗೆ ತಿಳಿಸಲಿ ಅವರಿಗೆ ನಿಮ್ಮ ಹಾಡುಗಳ ಬಗ್ಗೆ. ದೂರದ ಲಿಬಿಯಾದಲ್ಲಿ ಕುಳಿತು ಮನಸ್ಸು ಒಂದೇ ಸಮನೆ ನಿಡುಸೊಯ್ಯುತಿದೆ ನೀವಿಲ್ಲದ ಸುದ್ದಿ ಕೇಳಿ. ಛೇ, ನಾನು ಬೆಂಗಳೂರಿನಲ್ಲಿದ್ದಿದ್ದರೆ ನಿಮ್ಮ ಅಂತ್ಯಕ್ರಿಯೆಯಲ್ಲಾದರೂ ಪಾಲುಗೊಳ್ಳಬಹುದಿತ್ತಲ್ಲವೆ? ಅಂತಿಮ ದರ್ಶನವನ್ನಾದರು ಪಡೆಯಬಹುದಿತ್ತು. ಏನು ಮಾಡುವದು? ಟೀವಿ ಚಾನೆಲ್‍ಗಳಲ್ಲಿ ತೋರಿಸುವ ನಿಮ್ಮ ಅಂತ್ಯಕ್ರಿಯೆಯ ನೇರ ಪ್ರಸಾರವನ್ನು ನೋಡಿ ಇಲ್ಲಿಂದಲೇ ನಿಮಗೊಂದು ಕಂಬನಿ ಮಿಶ್ರಿತ ಅಂತಿಮ ವಿದಾಯವನ್ನು ಹೇಳಿದ್ದೇನೆ.

ಅಶ್ವತ್ಥರ್ಪಣ

field_vote: 
Average: 4 (3 votes)
To prevent automated spam submissions leave this field empty.

(ಇದೀಗಷ್ಟೇ ಸಿ.ಅಶ್ವತ್ಥ್ ನಿಧನವಾರ್ತೆ ಕೇಳಿ ನನ್ನ ಮನ ಮಿಡಿದ ಬಗೆ ಹೀಗೆ. ಇದು ಕನ್ನಡದ ಆ ಮೇರು ಗಾಯಕನಿಗೆ ನನ್ನ ಅಶ್ರುತರ್ಪಣ)

ಕನ್ನಡವೇ ಸತ್ಯ
ಎಂದು ಹಾಡಿದ
ನೀನೇ ಸತ್ತೆಯಾ!

ಏನು ಮಾಡೋದು,
ಸಾವೂ ಸತ್ಯ!

ನೋವಿನ ನಡುವೆಯೂ
ನೆಮ್ಮದಿಯೆಂದರೆ,
ಕನ್ನಡವೂ ನಿತ್ಯ
ನಿನ್ನ
ಹೊನ್ನ ಕಂಠವೂ ನಿತ್ಯ

ಗಾನ ಗಾರುಡಿಗ ಇನ್ನಿಲ್ಲ..

field_vote: 
No votes yet
To prevent automated spam submissions leave this field empty.

ashwath no more

 

 

 

ತಮ್ಮ ಕಂಚಿನ ಕಂಠದಿಂದ ಭಾವ ಪೂರ್ಣ ಗಾಯನದ ಸ್ವರದೂಟ ಉಣಬಡಿಸಿ ತಮ್ಮ ಜನುಮ ದಿನದಿಂದೆ ಮರೆಯಾದ ಸ್ವರಾತ್ಮ ಸಿ. ಅಶ್ವಥ್’ರವರಿಗಿದೊ ಭಾವಪೂರ್ಣ ಅಶ್ರುತರ್ಪಣ..

ಚಿತ್ರ: hindu.com

ಮಲ್ಲಾಡಿಹಳ್ಳಿ, ಶ್ರೀ ಶ್ರೀ ರಾಘವೇಂದ್ರಸ್ವಾಮಿಗಳು !

field_vote: 
Average: 5 (1 vote)
To prevent automated spam submissions leave this field empty.

ಒಬ್ಬ ಸಮರ್ಥ ಯೋಗಾಚಾರ್ಯ, ಮತ್ತು ಅನೇಕ ಸಂಸ್ಥೆಗಳನ್ನು ಕಟ್ಟಿ, ಮಲ್ಲಾಡಿಹಳ್ಳಿಯ ಜನತೆಗೆ ಸಮರ್ಪಿಸಿ ಸದ್ದಿಲ್ಲದೆ ಇಹಲೋಕವನ್ನು ಬಿಟ್ಟುನಡೆದ ಕರ್ಮ-ಯೋಗಿಗಳು ರಾಘವೇಂದ್ರರಾಯರು. 

ಸ್ವಾಮೀಜಿಯವರ ಬಳಿ ನಿಂತು ಕೇಳುತ್ತಿರುವವರು, 'ಶ್ರೀ ಸೂರ್ದಾಸ್ ಜಿ ' ಯವರು. ಅವರು ಹೊಳಲ್ಕೆರೆಯ ನಿವಾಸಿಗಳು. ಸ್ವಾಮೀಜಿಯವರ ನೆರಳಿನಂತೆ ಸಹಕರಿಸುತ್ತಾ ಬಂದವರು. 

 

ಹಾಯ್ ಪ್ರಿಯತಮಾ !

field_vote: 
Average: 5 (1 vote)
To prevent automated spam submissions leave this field empty.

ನನಗೆ, ’ಪ್ರಿಯತಮ ”, ಅಷ್ಟೇನು ಹೊಸಬರೂ ಅಲ್ಲ. ಅಥವಾ ಅವರ ಮುಂದೆ ನಿಂತು ಗೊತ್ತೆಂದು ಹೇಳಿಕೊಳ್ಳುವಷ್ಟು ಪರಿಚಯಸ್ತನೂ ಅಲ್ಲಾ. ಆದರೆ, ಅವರು ನನಗೆ ಗೊತ್ತು, ಎಂದು ಮಾತ್ರ ಹೇಳಬಲ್ಲೆ. ಪ್ರತಿಮಂಗಳವಾರ ಅವರ ಕಾಲಂ ತಪ್ಪದೆ ಓದುತ್ತಾ ಬಂದಿದ್ದೇನೆ. ಆದರೆ ಅವರಿಗೆ ನನ್ನ ಪರಿಚಯವಿಲ್ಲ ! ಇದು ವಾಸ್ತವ ಸಂಗತಿ.

ಕೈಲಾಸಂ ಎಂಬ ದುರಂತ ದಂತಕಥೆ

field_vote: 
Average: 4.7 (6 votes)
To prevent automated spam submissions leave this field empty.

ಕನ್ನಡ ಸಾಹಿತ್ಯ ಲೋಕದಲ್ಲಿ, ಅದರಲ್ಲೂ, ನಾಟಕರಂಗದಲ್ಲಿ , ತಮ್ಮದೇ ಆದ ಛಾಪು ಮೂಡಿಸಿದ ಕೈಲಾಸಂ ತಮ್ಮ ಬದುಕಿನ ಶೈಲಿಯಿಂದ, ಹಾಸ್ಯಮಯ ಮಾತಿನ ಮೋಡಿಯಿಂದ, ಪ್ರತಿಭೆಯಿಂದ ,ಬಹುವಿಷಯಗಳಲ್ಲಿ ವಿದ್ವತ್ತಿನಿಂದ , ದಂತಕಥೆಯೇ ಆಗಿಹೋಗಿದ್ದಾರೆ. ಅವರು ಇಲ್ಲವಾಗಿ ಆರು ದಶಕಗಳು ಮೀರಿದ್ದರೂ, ಇಂದಿಗೂ ಅವರ ಬಗೆಗಿನ ಕುತೂಹಲ, ಆದರಾಭಿಮಾನ , ಕನ್ನಡಿಗರಲ್ಲಿ ಜಾಗೃತವಾಗಿದೆ.


                ತ್ಯಾಗರಾಜ ಪರಮಶಿವ ಕೈಲಾಸಂರ  ಪೂರ್ವಜರು ತಮಿಳುನಾಡಿನ ತಂಜಾವೂರು ಕಡೆಯವರು. ದಿವಾನ್ ಶೇಷಾದ್ರಿ ಅಯ್ಯರ್ ಕಾಲದಲ್ಲಿ ಮೈಸೂರಿಗೆ ಬಂದು ನೆಲೆಸಿದವರು.ಅವರ ತಂದೆ ಪರಮಶಿವ ಅಯ್ಯರ್ ಮೈಸೂರಿನ ಛೀಫ್ ಕೋರ್ಟಿನ ಜಡ್ಜಿಯಾಗಿದ್ದರು. ಇಂಥಾ ಆಢ್ಯ ಮನೆತನದಲ್ಲಿ ಜನ್ಮ ತಳೆದವರು ಕೈಲಾಸಂ.


                ಹುಟ್ಟಿದ ವರ್ಷದ ಬಗ್ಯೆ ಭಿನ್ನಾಭಿಪ್ರಾಯಗಳಿದ್ದರೂ, ೧೮೮೪ರ ಜುಲೈ ೨೭ ಅವರ ಹುಟ್ಟಿದ ದಿನ ಎಂದು ಸಾಧಾರಣವಾಗಿ ಒಪ್ಪಲಾಗಿದೆ. ೧೯೮೪ರಲ್ಲಿ ಅವರ ಶತಮಾನೋತ್ಸವವನ್ನು ಕರ್ನಾಟಕ ಮಾತ್ರವಲ್ಲದೇ, ಇತರ ಕಡೆಗಳಲ್ಲಿಯೂ ಆಚರಿಸಲಾಯಿತು. ಹುಟ್ಟಿದ್ದು ಬೆಂಗಳೂರಿನ ’ತಾರಾಮಂಡಲ ಪೇಟೆ’ ಎಂದು ಕರೆಯಲಾಗುತ್ತಿದ್ದ ಪ್ರದೇಶದಲ್ಲಿ. ಇದು ಧರ್ಮರಾಯನ ಗುಡಿ, ಅವೆನ್ಯೂ ರಸ್ತೆ, ಚಿಕ್ಕಪೇಟೆ ಚೌಕ ಇವುಗಳ ಹತ್ತಿರದಲ್ಲಿತ್ತು. ಅಲ್ಲಿ ಪಟಾಕಿ ತಯಾರಿಸುವ ಕೆಲಸ ನಡೆಯುತ್ತಿದ್ದಿದ್ದರಿಂದ ’ತಾರಾಮಂಡಲ ಪೇಟೆ’ ಎಂಬ ಹೆಸರು ಬಂದಿತ್ತು. ಅವರ ತಂದೆ ವರ್ಗವಾದ ಕಡೆಗಳಲ್ಲಿ ಬೆಂಗಳೂರು, ಹಾಸನ ಇತ್ಯಾದಿ, ಅವರ ಪ್ರಾಥಮಿಕ ವಿದ್ಯಾಭ್ಯಾಸ ನಡೆಯಿತು. ಹೈಸ್ಕೂಲು ಕೆಲಕಾಲ ಮೈಸೂರಿನಲ್ಲಿ ನಡೆಯಿತು. ಆಗ ಅವರ ಹಾಸ್ಟೆಲ್ ಸಹಪಾಠಿಗಳು ಬಿ.ಎಂ.ಶ್ರೀ ಮತ್ತು (ಮುಂದೆ ಪ್ರೋ.) ಎನ್.ಎಸ್. ಸುಬ್ಬರಾಯರು. ಮೆಟ್ರಿಕ್ಯುಲೇಷನ್ನಿಗೆ ಮದರಾಸಿಗೆ ಹೋಗಿ ಅಲ್ಲಿ ರೈಟ್ ಆನರಬಲ್ ಶ್ರೀನಿವಾಸ ಶಾಸ್ತ್ರಿಗಳ ಪ್ರಿಯ ಶಿಷ್ಯರಾದರು. ಮುಂದೆ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಓದಿ ಇಡೀ ಮದರಾಸು ಪ್ರಾಂತ್ಯಕ್ಕೇ ಮೊದಲಸ್ಥಾನ ಗಳಿಸಿ ಬಿ.ಎ ತೇರ್ಗಡೆಯಾದರು. ಇದಕ್ಕಾಗಿ ವಿಶ್ವವಿದ್ಯಾನಿಯದ ಕ್ರೋಮಾರ್ಟಿ (Cromarty) ಪದಕವನ್ನು ಪಡೆದರು. ಇದು ನಡೆದದ್ದು ೧೯೦೭ರಲ್ಲಿ.

ಆಯಿಯೂ ಕೃಷ್ಣದೇವರಾಯನೂ ಮತ್ತು ಮೂರನೆಯ ನೆಪೋಲಿಯನ್ನನೂ...

ಇದೊಂದು ವಿಶೇಷವಾದ ಘಟನೆ. ಇತಿಹಾಸವನ್ನು ಕೆದಕಿದಂತೆಲ್ಲಾ ಈ ರೀತಿಯ ಘಟನೆಗಳು ನಮ್ಮ ಮುಂದೆ ತೆರೆದುಕೊಳ್ಳುತ್ತವೆ. ಇತಿಹಾಸವೆಂದರೆ ಕೇವಲ ರಾಜರುಗಳ ಇತಿಹಾಸವಲ್ಲ. ಅದು ಜನಸಾಮಾನ್ಯರ ಇತಿಹಾಸವೂ ಹೌದು. 


ಮದ್ರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿರುವ ಡಾ. ತಮಿಳು ಸೆಲ್ವಿ ಅವರ ‘ನೇಪಥ್ಯ’ ಎಂಬ ಸಂಶೋಧನಾ ಲೇಖನಗಳನ್ನೊಳಗೊಂಡ ಪುಸ್ತಕದಲ್ಲಿ ಈ ರೀತಿಯ ಹಲವಾರು ವಿಷಯಗಳು ಬೆಳಕು ಕಂಡಿವೆ. 


೧೬ನೇ ಶತಮಾನದ ಪೂರ್ವಾರ್ಧದಲ್ಲಿ ವಿಜಯನಗರದ ಅರಸು ಕೃಷ್ಣದೇವರಾಯನ ಒಂದು ಕ್ಷಣದ ದುಡುಕಿನಿಂದ ಉಂಟಾದ ಪ್ರಮಾದ ೧೯ನೇ ಶತಮಾನದ ಉತ್ತರಾರ್ಧದಲ್ಲಿ ಮೂರನೆಯ ನೆಪೋಲಿಯನ್ ಮತ್ತು ಅಂದಿನ ಪಾಂಡಿಚೆರಿಯ ಗೌರ್ನರ್ ಆಗಿದ್ದ ಅಲೆಕ್ಸಾಂಡರ್ ಡ್ಯರಾಂಡ್ ದುಬ್ರಾಯ್ ಅವರಿಂದ ತೊಡೆದು ಹೋಗುತ್ತದೆ! ಇತಿಹಾಸದಲ್ಲಿ ವಿಶಿಷ್ಟವಾಗಿ ದಾಖಲೂ ಆಗುತ್ತದೆ.


ಇದರ ಪೂರ್ಣ ಕಥೆ ಹೀಗಿದೆ. 

field_vote: 
Average: 4 (4 votes)
To prevent automated spam submissions leave this field empty.

ಕೂಡ್ಲಿಗಿಯ ಮಿಮಿಕ್ರಿ ಕಲಾವಿದ ಕೋಗಳಿ ಕೊಟ್ರೇಶ್ ಥೈಲ್ಯಾಂಡ್‌ನಲ್ಲಿ

field_vote: 
Average: 4.3 (3 votes)
To prevent automated spam submissions leave this field empty.

ಗೆಳೆಯರ ಗುಂಪಿನಲ್ಲಿ ಆಗಾಗ ಖುಷಿಯಿಂದ ಪ್ರಾಣಿಗಳ ಧ್ವನಿಯನ್ನು ಅನುಕರಣೆ ಮಾಡುತ್ತ ಚಿಂವ್ ಚಿಂವ್, ಗುರ್ರ್ ಎನ್ನುತ್ತ, ಚಿತ್ರನಟರ ಅನುಕರಣೆ ಮಾಡುತ್ತಿದ್ದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯ ಕೋಗಳಿ ಕೊಟ್ರೇಶ್ ಇತ್ತೀಚೆಗೆ ಕಾರ್ಯಕ್ರಮ ನೀಡಲು ಥೈಲ್ಯಾಂಡ್‌ಗೆ ಹಾರಿದ್ದು ಎಲ್ಲರಲ್ಲೂ ಅಚ್ಚರಿ ಮೂಡಿಸಿತು. 

ಕೊಟ್ರೇಶ್ ಕೂಡ್ಲಿಗಿಯಿಂದ ಥೈಲ್ಯಾಂಡ್‌ಗೆ ಹಾರಿದ ಮಾರ್ಗ ಅಷ್ಟು ಸುಲಭದ್ದಾಗಿರಲಿಲ್ಲ. ಅದರ ಹಿಂದೆ ಸಾಕಷ್ಟು ಶ್ರಮ, ಸಾಧನೆಯಿದೆ. ಪ್ರಾಥಮಿಕ ತರಗತಿಯಿಂದಲೇ ಮಿಮಿಕ್ರಿಯಲ್ಲಿ ಆಸಕ್ತಿ ಹೊಂದಿದ್ದ ಕೊಟ್ರೇಶ್ ತಮ್ಮ ತಂದೆಯವರಾದ ಕೋಗಳಿ ವೀರಣ್ಣನವರು ತಬಲಾ ನುಡಿಸುತ್ತಿದ್ದಾಗ, ಅದನ್ನೇ ಬಾಯಲ್ಲಿ ಹೇಳಿದರೆ ಹೇಗೆ ಬರಬಹುದೆಂಬುದರಿಂದ ಇವರ ಮಿಮಿಕ್ರಿ ಸಾಹಸಗಾಥೆ ಆರಂಭಗೊಳ್ಳುತ್ತದೆ. ನಂತರ ಅದೇ ಹವ್ಯಾಸವಾಗಿ, ಪ್ರಾಣಿ, ಪಕ್ಷಿ, ನಟರ, ವ್ಯಕ್ತಿಗಳ ಅನುಕರಣೆ ಮಾಡತೊಡಗಿದರು.

ಕಲಾಂ ಧೀಮಂತಿಕೆ

field_vote: 
Average: 5 (3 votes)
To prevent automated spam submissions leave this field empty.

  ೨೦೧೨ರಲ್ಲಿ ಮಹಾಪ್ರಳಯವೇನೂ ಸಂಭವಿಸುವುದಿಲ್ಲವೆಂದು ಸಾರಿ ಸಾರಿ ಹೇಳುತ್ತ ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಭಯಭೀತರ ಮನಸ್ಸಿನಲ್ಲಿ ಧೈರ್ಯ ತುಂಬುತ್ತಿದ್ದಾರೆ. ತಾನೊಬ್ಬ ಮಾಜಿ ರಾಷ್ಟ್ರಪತಿ ಮತ್ತು ’ಭಾರತರತ್ನ’ ಬಿರುದಾಂಕಿತ ಎಂದು ದೊಡ್ಡಸ್ತಿಕೆಯ ಧೋರಣೆಯಿಂದ ಮೋಡಗಳಲ್ಲಿ ತೇಲಾಡದೆ ಕಲಾಂ ಅವರು ತಾನೊಬ್ಬ ವಿಜ್ಞಾನಿ ಮತ್ತು ಜನರಿಗೆ ಧೈರ್ಯ ಹೇಳುವುದು ತನ್ನ ಕರ್ತವ್ಯ ಎಂದು ಭಾವಿಸಿ ಈ ಧೈರ್ಯ ಹೇಳುವ ಕಾರ್ಯ ಮಾಡುತ್ತಿದ್ದಾರೆ. ಅವರ ಕರ್ತವ್ಯಪ್ರಜ್ಞೆ, ಸರಳತೆ ಮತ್ತು ಸಾಮಾಜಿಕ ಕಳಕಳಿ ಇವು ನಿಜಕ್ಕೂ ಪ್ರಶಂಸಾರ್ಹ.

ಸಿಕ್ಸ್ತ್ ಸೆನ್ಸ್ ಮಿಸ್ಟ್ರಿ ಮ್ಯಾನ್ - ಪ್ರಣವ್ ಮಿಸ್ಟ್ರಿ

field_vote: 
Average: 2 (2 votes)
To prevent automated spam submissions leave this field empty.

ನಾವು ಜೀವಿಸುತ್ತಿರೋ ನೈಜ ಜಗತ್ತು ಮತ್ತು ಕಂಪ್ಯೂಟರಿನ ಒಳ ಜಗತ್ತು ಭೌತಿಕ ನೆಲೆಯಲ್ಲಿ ಬೇರೆ ಬೇರೆಯೇ ಸರಿ.

ಏ ಬಾ.. ಇಲ್ಲಿ ಎಂದು ಕೈ ಸನ್ನೆ ಮಾಡಿ ಕೂಗಿದರೆ.. ಎದುರಿಗಿದ್ದವರು ನಮ್ಮ ಬಳಿ ಬರೋ ರೀತಿಯಲ್ಲಿ....ಕೀಲಿಮಣೆ ಬಳಸದೇ ಬರೀ ಅಂಗಸನ್ನೆಗಳ ಮೂಲಕ ಕಂಪ್ಯೂಟರ್ಗೆ ಸನ್ನೆ ಮಾಡಿ ಏನಾದ್ರು ಹೇಳಿದ್ರೆ ಊಹಿಸಿಕೊಳ್ಳಿ!! ಅದು ಅರ್ಥಮಾಡಿಕೊಳ್ಳುತ್ತಾ?? ಇಲ್ವಾ!!

ಇದು ಉಮಾಶ್ರೀ!!

field_vote: 
Average: 5 (1 vote)
To prevent automated spam submissions leave this field empty.

ನಾನು ಆಗ ತಾನೆ M.A ಮಾಡಿ ಬೆಂಗಳೂರಿನ ಕಾಲೇಜೊಂದರಲ್ಲಿ ಉಪನ್ಯಾಸಕ ವೃತ್ತಿಯನ್ನು ಆರಂಭಿಸಿದ್ದೆ. ಅದೇನು ನನ್ನ ಅದೃಷ್ಟವೋ ಏನೋ ನಾನು ಸೇರಿಕೊಂಡ ವರ್ಷವೇ ನಮ್ಮ ಕಾಲೇಜಿನ ಸಾಂಸ್ಕೃತಿಕ ಸಂಘದ ಉದ್ಘಾಟನಾ ಸಮಾರಂಭಕ್ಕೆ ನನ್ನ ಅಚ್ಚುಮೆಚ್ಚಿನ ನಟಿ ಉಮಾಶ್ರೀಯವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿತ್ತು. ನನಗೆ ಖುಶಿಯೋ ಖುಶಿ! ಏಕೆಂದರೆ ನಾನು ಆ ವೇಳೆಗಾಗಲೆ ‘ಸಂಗ್ಯಾ ಬಾಳ್ಯಾ’ ಚಿತ್ರದಲ್ಲಿನ ಅವರ ವಿಶೇಷ ಅಭಿನಯವನ್ನು ನೋಡಿ ಅವರ ಕಟ್ಟಾ ಅಭಿಮಾನಿಯಾಗಿದ್ದೆ. ಆ ಚಿತ್ರಕ್ಕೆ ಅವರು ಪನೋರಮಾ ಶ್ರೇಷ್ಟ ಪೋಷಕ ನಟಿ ಪ್ರಶಸ್ತಿಯನ್ನೂ ಗಿಟ್ಟಿಸಿದ್ದರು. ಇದೀಗ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡು ಎಲ್ಲರ ಗಮನವನ್ನು ಸೆಳೆದಿದ್ದಾರೆ. ಕಾರ್ಯಕ್ರಮದ ದಿನ ನಮಗೆಲ್ಲರಿಗೂ ಉಮಾಶ್ರೀ ಬರುತ್ತಾರೋ ಇಲ್ಲವೋ ಎನ್ನುವ ಆತಂಕ ಇತ್ತು.

''ಇಂದು' ಆಕೆ ಬದುಕಿದ್ದರೆ!?'

field_vote: 
Average: 3 (5 votes)
To prevent automated spam submissions leave this field empty.

ಅದು ೧೯೭೭ - ೭೮ರ ಇಸವಿಯಿದ್ದಿರಬೇಕು, ಬಿಹಾರದ ಬೆಲ್ಚಿ ಎಂಬ ಗ್ರಾಮದಲ್ಲಿ ಮೇಲ್ಜಾತಿಯವರ ಕ್ರೌರ್ಯಕ್ಕೆ  ಸಿಕ್ಕಿ ದಲಿತರ ಮಾರಣ ಹೋಮವಾಗಿತ್ತು. ಘಟನೆಯಲ್ಲಿ ನೊಂದವರಿಗೆ ಸಾಂತ್ವಾನ ಹೇಳಲು (ರಾಜಕೀಯ ಉದ್ದೇಶವು ಇತ್ತು, ಅದು ಬೇರೆ ಮಾತು ಬಿಡಿ) ಅದೇ ದಿನ ನಡು ರಾತ್ರಿಯಲ್ಲಿ ಏಕಾಂಗಿಯಾಗಿ ದಿಲ್ಲಿಯಿಂದ ಹೊರಟು,ಜೀಪಿನಿಂದ ಪ್ರಯಾಣ ಶುರು ಮಾಡಿ,ನಂತರ ಜೀಪು ಮುಂದೆ ಸಾಗದಿದ್ದಾಗ ರೈತನ ಟ್ರಾಕ್ಟರ್ ನಲ್ಲಿ ಮುಂದೆ ಸಾಗಿ, ನಡುವಲ್ಲಿ ನದಿ ಬಂದಾಗ ಆನೆಯೇರಿ ಘಟನೆ ನಡೆದ ಸ್ಥಳಕ್ಕೆ ಒಬ್ಬಂಟಿಯಾಗಿ ಬಂದ ಅವರನ್ನು ನೋಡಿದಾಗ ನೊಂದವರಿಗೆ ಸಾಕ್ಷಾತ್ 'ತಾಯಿ'ಯನ್ನು ನೋಡಿದಂತೆ ಆಯ್ತು. ಆ ತಾಯಿ 'ಇಂದಿರಾ ಗಾಂಧೀ' ಅವರ ಕಣ್ಣೀರು ಒರೆಸಿದ್ದಳು.

ಕಾಯಕ ಯೋಗಿ ಹುಲಿಕೆರೆಯ ಎಂ.ಷಡಕ್ಷರಿ

field_vote: 
No votes yet
To prevent automated spam submissions leave this field empty.

ವಯಸ್ಸಿರುವಾಗ ವೃತ್ತಿಯನ್ನು ಕೈಗೊಂಡು ಕಾಯಕ ನಡೆಸುವುದು ಸಾಮಾನ್ಯ ಸಂಗತಿ. ವಯಸ್ಸಾದ ನಂತರ ಮೊದಲಿನ ಉತ್ಸಾಹ ಕಳೆದುಕೊಳ್ಳುವುದು, ನಿವೃತ್ತಿಯಾದ ನಂತರವಂತೂ ಜೀವನ ನಶ್ವರ ಎಂಬ ಸ್ಥಿತಿಗೆ ತಲುಪುವುದೂ ಸಾಮಾನ್ಯವೇ. ಆದರೆ ೮೦ರ ಇಳಿವಯಸ್ಸಿನಲ್ಲೂ ಅದೇ ಉತ್ಸಾಹ, ನಿವೃತ್ತಿಯಾದ ನಂತರವೂ ಅದೇ ಕಾಯಕನಿಷ್ಠೆಯನ್ನಿರಿಸಿಕೊಂಡವರು ವಿರಳ. 

ನುಡಿಸಿರಿ-ಸಾಹಿತ್ಯ ಮತ್ತು ಸಂಸ್ಕೃತಿಗಳ ಭವ್ಯ ಮಿಲನ

field_vote: 
Average: 3.5 (4 votes)
To prevent automated spam submissions leave this field empty.

ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ‘ನುಡಿಸಿರಿ-೨೦೦೯’ರಲ್ಲಿ ಭಾಗವಹಿಸಿದ ಸಂಭ್ರಮ, ಖುಷಿ ಮತ್ತು ಸಮ್ಮೇಳನವನ್ನು ಆಯೋಜಕರು ರೂಪಿಸಿದ್ದ ರೀತಿಗಳನ್ನು ಹಂಚಿಕೊಳ್ಳುವ ಯತ್ನ ಈ ಲೇಖನದ್ದು.

ನಮ್ಮಲ್ಲಿ ಬಹಳ ಜನ ಸಾಹಿತ್ಯ ಸಮ್ಮೇಳನಗಳನ್ನು ‘ಸಂತೆ’ ಎಂದು ಕರೆದಿದ್ದೇವೆ/ಭಾವಿಸಿದ್ದೇವೆ. ಆಯೋಜಕರ ಮರ್ಜಿಗನುಗುಣವಾಗಿ, ಆಳುವ ಸರ್ಕಾರದ ನೀತಿಗನುಗುಣವಾಗಿ ಸಮ್ಮೇಳನಗಳ ಕಾರ್ಯಕ್ರಮಗಳು ರೂಪುಗೊಳ್ಳುವುದರಿಂದಾಗಿ ಇಂಥ ಅಪವಾದಗಳು ತಪ್ಪಿದ್ದಲ್ಲ. ಅದರಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನಗಳಂತೂ ‘ಸಾಹಿತ್ಯ’ವೊಂದನ್ನು ಬಿಟ್ಟು ಉಳಿದೆಲ್ಲ ಚಟುವಟಿಕೆಗಳನ್ನೂ ನಡೆಸಿರುತ್ತವೆ. ಹಲವು ಕಾರಣಗಳಿಂದಾಗಿ ಪದೇ ಪದೇ ಮುಂದೂಡಲ್ಪಡುವ ಈ ಸಮ್ಮೇಳನಗಳು ಸ್ವಾಗತ ಸಮಿತಿಯ ಅಧ್ಯಕ್ಷರ ಮತ್ತು ಎಲ್ಲಿ ಸಮ್ಮೇಳನ ನಡೆಯಲು ಆಯೋಜಿಸಲಾಗಿದೆಯೋ ಆ ಸ್ಥಳದ ಸಚಿವ/ಶಾಸಕ/ಸಂಸದರ ಕೃಪಾಶೀರ್ವಾದದಿಂದ ನಡೆಯಬೇಕಿರುವ ಕಾರಣ ರಾಜಕೀಯ ಬದಲಾವಣೆಗಳೂ ಇಂಥ ಸಮ್ಮೇಳನಗಳ ಹಣೆಯ ಬರಹವನ್ನೇ ಬದಲಾಯಿಸಿಬಿಡುತ್ತವೆ. ಊಟ-ತಿಂಡಿಗಳ ವಿತರಣೆ, ಪ್ರದೇಶವಾರು ಭೋಜನ ವಿಶೇಷತೆಯನ್ನು ಪ್ರದರ್ಶಿಸುವ ಸಲುವಾಗಿ ಮಠ, ಮಾನ್ಯಗಳನ್ನೂ ಓಲೈಸಿಲಾಗಿರುತ್ತದೆ. ಹೀಗೆ ಸಾಹಿತ್ಯ ಸಂಗತಿಗಳಿಗಿಂತಲೂ ಸಾಹಿತ್ಯೇತರ ಸಂಗತಿಗಳೇ ಮುಖ್ಯವಾಗಿ ಸಮ್ಮೇಳನಾಧ್ಯಕ್ಷರ ಆಯ್ಕೆಯಿಂದಲೂ ಕಸರತ್ತುಗಳ ಮೇಲೆ ಕಸರತ್ತುಗಳು ನಡೆದು ಅದು ಇಡೀ ಸಮ್ಮೇಳನದ ಸ್ವರೂಪವನ್ನೇ ಬದಲಿಸಿಬಿಡುವುದೂ ಸರ್ವೇ ಸಾಮಾನ್ಯವಾದ ವಿಷಯವಾಗಿದೆ. ಸಮ್ಮೇಳನಗಳಲ್ಲಿ ಮಂಡಿಸಲಾಗುವ ನಿರ್ಣಯಗಳಂತೂ ಹನುಮಂತನ ಬಾಲದಂತೆ ಬೆಳೆದೂ, ಬೆಳೆದೂ ಬೆಳೆಯುತ್ತವೇ ವಿನಾ ಅವುಗಳ ಅನುಷ್ಠಾನ ಎಂಬುದಂತೂ ಯಾವ ಸರ್ಕಾರಗಳಿಂದಲೂ ಸಾಧ್ಯವಾಗದಿರುವುದೂ ಇಂಥ ನಿರ್ಣಯಗಳ ಮೇಲಿನ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿದೆ. ಸಮ್ಮೇಳನದ ವೆಚ್ಚಕ್ಕಾಗಿ ಸರ್ಕಾರ ಕೊಡಮಾಡುವ ಅನುದಾನ, ಈಗಂತೂ ಅದು ಒಂದು ಕೋಟಿ ರೂಪಾಯಿ, ಅದರ ಮೇಲೆ ಸರ್ಕಾರೀ ನೌಕರರ ಒಂದು ದಿನದ ವೇತನ, ಸ್ಥಳೀಯ ಸಂಸ್ಥೆಗಳ ಹಣಕಾಸಿನ ಬೆಂಬಲ, ಮಠ ಮಾನ್ಯಗಳ ಸಹಾಯ ಹೀಗೆ ಒಟ್ಟೂ ಸೇರುವ ಹತ್ತಿರ ಹತ್ತಿರ ನಾಲ್ಕು ಕೋಟಿ ರೂಪಾಯಿ ಒಂದು ಸಮ್ಮೇಳನಕ್ಕೆ ಬಳಸಲಾಗುತ್ತದೆ.

೧೯೪೭ರ ಸ್ವಾತಂತ್ರ್ಯದ ಸೂರ್ಯನ ನೋಡಲು ಸುಭಾಷರು 'ಬದುಕಿದ್ದರಾ!?'

ಚಿನ್ನದ ಮೊಟ್ಟೆಯಿಡುವ 'ಐ.ಸಿ.ಎಸ್' ಅನ್ನು ಎಡಗಾಲಲ್ಲಿ ಒದ್ದು ಬಂದಾಗ ಅವರ ವಯಸ್ಸು ೨೩, ಹಾಗೆ ಸರ್ಕಾರಿ ಪದವಿ ನಿರಾಕರಿಸಿ ಇಂಗ್ಲೆಂಡ್ನಿಂದ ಸೀದಾ ಮುಂಬಯಿಗೆ ಬಂದಿಳಿದವರು ಮೊದಲು ಭೇಟಿ ಮಾಡಿದ್ದು  'ಮಹಾತ್ಮ ಗಾಂಧಿಜಿ'ಯವರನ್ನು.ಮಹಾತ್ಮರ ಸಲಹೆಯಂತೆ 'ದೇಶ ಬಂಧು' ಚಿತ್ತರಂಜನ ದಾಸ್ರವರೊಂದಿಗೆ ಭಾರತದ ಸ್ವಾತಂತ್ಯ್ರ  ಹೋರಾಟಕ್ಕೆ ಧುಮುಕಿ ಮುಂದಿನ ೨೫ ವರ್ಷಗಳಲ್ಲಿ , ೪೦೦೦೦ -೪೫೦೦೦  ಜನರ  'ಆಜಾದ್ ಹಿಂದ್ ಫೌಜ' ಎಂಬ ಸೇನೆಯನ್ನು ಮುನ್ನಡೆಸಿ ಬ್ರಿಟಿಷ್ ಸಾಮ್ರಾಜ್ಯಶಾಹಿ ಕನಸಿನಲ್ಲೂ ಬೆಚ್ಚಿಬೀಳುವಂತೆ ಮಾಡಿದ ಆ ಮಹಾನ್ ನಾಯಕನ ಹೆಸರು 'ನೇತಾಜಿ ಸುಭಾಷ್ ಚಂದ್ರ ಬೋಸ್'.  

field_vote: 
Average: 5 (1 vote)
To prevent automated spam submissions leave this field empty.

ಪ್ರತಿಭಾ ನಂದಕುಮಾರ್

field_vote: 
Average: 4.8 (4 votes)
To prevent automated spam submissions leave this field empty.

(೧)

‘ಮತ್ತೆ ಅದೇ ಹಳೆಯ ಕಣಿ ಕೇಳಬೇಡ
ಬಾಲಕರಿಲ್ಲದ ಬಾಲೆ ಆಯ್ಕೆ ಹೊರತು ಅನಿವಾರ್ಯವಲ್ಲ
ಹಾಸುಂಡು ಬೀಸಿ ಒಗೆದ ಬಾಳು ನನ್ನದಲ್ಲ ನಿನ್ನದು
ಗಾಣಕ್ಕೆ ಕಟ್ಟಿದ ಬಾಡಿಗೆ ಎತ್ತು ನಾನಂತೂ ಆಗುವುದಿಲ್ಲ’

(೨)

ಎರಡು ವಿಷಯ ಹೇಳುತ್ತೇನೆ
ಗಂಟು ಹಾಕಿ ನೆನಪಿಟ್ಟುಕೊಳ್ಳಿ
ನನ್ನ ಶವ ಯಾತ್ರೆಯಲ್ಲಿ
ಸೂಫಿ ಗಜಲ್ ಹಾಡಿ

ತಿಥಿಗೆ ಆ ಸಾಬಿಯನ್ನು ಕರೆಯಿರಿ
ಆಮೇಲೆ ನೀವೆಲ್ಲಾ ಬಡಿದಾಡಿಕೊಂಡು ಸಾಯಿರಿ!

ಕನಕದಾಸರು

ಕನಕದಾಸರು (ಕ್ರಿ. ಶ. ೧೪೮೬-೧೫೮೦)

ಕನಕದಾಸರು

field_vote: 
Average: 3.9 (10 votes)
To prevent automated spam submissions leave this field empty.

ಒಬಾಮಾ-ಶ್ವೇತಭವನದಲ್ಲಿ ದೀಪಾವಳಿ ಆಚರಿಸಿದ ಪ್ರಪ್ರಥಮ ಅಧ್ಯಕ್ಷ !

field_vote: 
Average: 3 (1 vote)
To prevent automated spam submissions leave this field empty.

 

ಕರ್ನಾಟಕದ ಗದ್ದರ್ ಪಿಚ್ಚಳ್ಳಿ ಶ್ರೀನಿವಾಸ್

ಭಾನುವಾರ ನೀರನಿಶ್ಚಿಂತೆ ಕಾರ್ಯಕ್ರಮಕ್ಕೆ ಕೋಲಾರಕ್ಕೆ ಹೋದಾಗ ಸುಂದರವಾದ ಅಂತರಗಂಗೆಯ ಬೆಟ್ಟದ ತಪ್ಪಲಿನಲ್ಲಿರುವ ಶಿವಗಂಗೆಗೆ ಬೇಟಿ ನೀಡಿದ್ದೆವು. ಶಿವಗಂಗೆಯಲ್ಲಿ "ಆದಿಮ" ಸಂಸ್ಥೆ ನೆಲೆಯೂರಿದೆ. 

ಆದಿಮವನ್ನು ಮತ್ತು ಅಲ್ಲಿನ ಸೊಬಗನ್ನು ನೋಡಿದ ಕೋಲಾರಕ್ಕೆ ಬೇಟಿ ನೀಡಿದ ನಮ್ಮಸಂಪದ ಬಳಗ ಪೋಟೋಗಳನ್ನು ಕ್ಲಿಕ್ಕಿಸಿದ್ದೇ ಕ್ಲಿಕ್ಕಿಸಿದ್ದು. ಜೊತೆಗೆ ಗೋಡಂಬಿ, ದ್ರಾಕ್ಷಿ ಮಿಶ್ರಿತ ಪಾಯಸ ಕುಡಿಯುತ್ತಾ ಸ್ವಲ್ಪ ಸ್ವಲ್ಪವೇ ಹೊಟ್ಟೆಯೊಳಗೆ ಇಳಿಸುತ್ತಾ ಫೋಟೋ ಕ್ಲಿಕ್ಕಿಸುತ್ತಿರಬೇಕಾದ್ರೆ ಅಲ್ಲಿಗೆ ಆದಿಮ ಸಂಸ್ಥೆಯ ಸಂಸ್ಥಾಪಕ 'ಕೋಟಗಾನಹಳ್ಳಿ ರಾಮಯ್ಯ' ಮತ್ತು 'ಪಿಚ್ಚಳ್ಳಿ ಶ್ರೀನಿವಾಸ್' ಬಂದರು. ಅವರನ್ನೂ ಸಹ ಕ್ಯಾಮರಾಗಳು ಸೆರೆ ಹಿಡಿದವು. ಇದಾದ ನಂತರ ಸ್ವಲ್ಪ ಮಾತುಕಥೆ, ಕಪ್ಪು ಟೀ - ಹೀಗೆ ನಡೆಯಿತು. ನಂತರ ಬೆಟ್ಟಿಂದ ಕೆಳಗೆ ಇಳಿಯಬೇಕಾದ್ರೆ ನಾನಿದ್ದ ಕಾರಿನೊಳೆಗೆ ಪಿಚ್ಚಳ್ಳಿ ಶ್ರೀನಿವಾಸ್ ಬೆಟ್ಟದಿಂದ ಕೆಳಗಿನವರೆಗೆ ಡ್ರಾಪ್ಗೆ ಅಂತ ಬಂದ್ರು, ಪಕ್ಕದಲ್ಲಿದ್ದ ಶ್ರೀನಿವಾಸ್ ರವರೊಟ್ಟಿಗೆ ನಾನು ಮಾತಿಗಿಳಿದೆ. ಇದ್ಯಾಕೆ ಇದೆಲ್ಲಾ ಅಂತೀರಾ ಸುಮ್ಮನೇ ಬರೆದೆ ಅಷ್ಟೆ.

field_vote: 
Average: 5 (3 votes)
To prevent automated spam submissions leave this field empty.

ಜಯ್ ಹೋ ಸುಕುಮಾರ್ ಸೇನ್ !!

field_vote: 
Average: 4.5 (2 votes)
To prevent automated spam submissions leave this field empty.

ಈಗಷ್ಟೇ ಫಲಿತಾಂಶ ಹೊರಬಿದ್ದಿದೆ. ಯಾವ ಪಕ್ಷಕ್ಕೂ ಬಹುಮತ ನೀಡದೆ, ಹಾಗೆಂದು ಸ್ಥಿರ ಸರ್ಕಾರ ರಚನೆಗೆ ತೊಂದರೆಯೂ ಆಗದಂತೆ ಮತದಾರ ಬುದ್ದಿವಂತಿಕೆಯಿಂದ ಮತ ಚಲಾಯಿಸಿದ್ದಾನೆ. ಪ್ರಜಾಪ್ರಭುತ್ವದ ಗಜಗಮನಕೆ ಚುನಾವಣೆಯೇ ಅಂಕುಶ ಎಂಬುದನ್ನು ಅವನು ಅರ್ಥ ಮಾಡಿಕೊಂಡಿರುವುದಕ್ಕೆ ಸಾಕ್ಷಿ ಇದು.

‘ರೆಡ್ಡಿಮೇಷ್ಟ್ರು’ ಮತ್ತು ನಾನು

field_vote: 
Average: 4 (2 votes)
To prevent automated spam submissions leave this field empty.

ಕ್ರಿ.ಶ.೧೯೯೮ರಲ್ಲಿ ನಾನು ಉದ್ಯೋಗಾರ್ಥಿಯಾಗಿ ಬೆಂಗಳೂರಿಗೆ ಬಂದೆ. ಬೆಳಿಗ್ಗೆ ೯ ಗಂಟೆಯಿಂದ ಸಂಜೆ ೪ ಗಂಟೆಯವರಗೆ ಮಾತ್ರ ಉದ್ಯೋಗ. ನಂತರ ಕಾಲ ಕಳೆಯುವುದು ಬಹಳ ಕಷ್ಟವಾಗುತ್ತಿತ್ತು. ಯಾವುದಾದರೂ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕೆಂಬ ಉತ್ಕಟವಾದ ಆಕಾಂಕ್ಷೆ.

ಜೀನ್ ಜೆನೆ

field_vote: 
Average: 4 (1 vote)
To prevent automated spam submissions leave this field empty.

ಪ್ರಜಾವಾಣಿಯ ಪ್ರತಿಭಾನುವಾರದ ವಿದ್ಯಮಾನ ಪುಟದಲ್ಲಿ ಲಿಂಗದೇವರು ಹಳೆಮನೆ ಅವರು ಸಾರಸ್ವತ ಎಂಬ ಅಂಕಣ ಬರೆಯುತ್ತಾರೆ. ಇಂದಿನ (೧೦/೦೫/೨೦೦೯) ಅಂಕಣದಲ್ಲಿ ಅವರು ಕೈದಿಗಳ ಸಾಹಿತ್ಯದ ಬಗ್ಗೆ ಬರೆಯುತ್ತಾ ಜೀನ್ ಜೆನೆ (೧೯೧೦-೧೯೮೬) ಯ ಬಗ್ಗೆ ಪ್ರಸ್ತಾಪಿಸುತ್ತಾರೆ.ಜೀನ್ ಒಬ್ಬ ಜಾರಪುತ್ರ.

ಒಂದು ಅಪೂರ್ವವಾದ ಗ್ರಂಥ

 

ಸದ್ಗುರು ಶ್ರೀ ಬ್ರಹ್ಮಚೈತನ್ಯ ಮಹಾರಾಜರ ಜೀವನಚರಿತ್ರೆ ; ಒಂದು ಅಪೂರ್ವವಾದ ಗ್ರಂಥ

ಡಾ. ಹೊ.ರಾ. ಶ್ರೀಪಾದ್, ಉಪನ್ಯಾಸಕ, ಭೌತಶಾಸ್ತ್ರ (ಸ್ನಾತಕೋತ್ತರ) ವಿಭಾಗ,  ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ),  ಮಂಡ್ಯ. sreepadhr@yahoo.com

field_vote: 
No votes yet
To prevent automated spam submissions leave this field empty.

ಬದುಕುವಾಸೆ 'ತೇಜಸ್ವಿ'ಯವರ ಹಾಗೆ

field_vote: 
Average: 4 (1 vote)
To prevent automated spam submissions leave this field empty.

ಯಾಕೋ ನೀವು ನನ್ನ ಜೀವನದ ಪ್ರತಿ ಹಂತದಲ್ಲೂ ಕಾಡುತ್ತಿರುತ್ತೀರ. ಹೌದು ನಾನೂ ನಿಮ್ಮ ಹಾಗೆಯೇ ಬದುಕಬೇಕು. ನೀವು ಬರೆದಿರುವ ಎಲ್ಲಾ ಬರವಣಿಗೆಗಳನ್ನು ನಾನು ಯಾರೂ ಇಲ್ಲದಿರುವಾಗಲೇ ಓದುತ್ತೇನೆ. ಏಕೆಂದರೆ ನನ್ನ ಆಸ್ವಾದನೆಗೆ ಧಕ್ಕೆಯಾಗಬಾರದೆಂಬ ಸ್ವಾರ್ಥ ನನ್ನದು.

ವಿಲಕ್ಷಣ ದಾರ್ಶನಿಕ ಯೂ.ಜಿ.ಕೃಷ್ಣಮೂರ್ತಿ (ಯೂಜಿ)

field_vote: 
Average: 4 (2 votes)
To prevent automated spam submissions leave this field empty.

ತನ್ನಲ್ಲಿ ನೀಡುವುದಕ್ಕೆ ಯಾವ ಸ೦ದೇಶವೂ ಇಲ್ಲವೆ೦ದು, ಈ ಜಗತ್ತಿನಲ್ಲಿ ನೀವು ಅರ್ಥಮಾಡಿಕೊ೦ಡು ಬದುಕುವ೦ಥದು ಏನೂ ಇಲ್ಲವೆ೦ದು ಸಾರಿಕೊ೦ಡೇ ಜಗತ್ತಿನ ಆಧ್ಯಾತ್ಮಿಕ ಜಿಜ್ಞಾಸುಗಳಲ್ಲಿ, ಚಿ೦ತಕರಲ್ಲಿ ಗಾಢ ಆಸಕ್ತಿ ಕೆರಳಿಸಿದ ಒಬ್ಬ ವರ್ಣರ೦ಜಿತ ದಾರ್ಶನಿಕ ಚಿ೦ತಕ ಉಪ್ಪಾಲೂರಿ ಗೋಪಾಲ ಕೃಷ್ಣಮೂರ್ತಿ.ಯೂಜಿಯೆ೦ದೇ ವಿಶ್ವಾದ್ಯ೦ತ ಚಿರಪರಿಚಿತ.

ಬರೆಯದ ಕವಿತೆಯ ರೂಪಕ (ಡಾ.ರಾಜ್ ಕುಮಾರ್ ಕುರಿತು)

field_vote: 
No votes yet
To prevent automated spam submissions leave this field empty.

‘ಅಣ್ಣ'- ಪ್ರೀತಿಗೆ, ಹಿರಿತನಕ್ಕೆ, ಭಯಕ್ಕೆ ಮತ್ತು ಕೆಲವೊಮ್ಮೆ ದಾಸ್ಯವನ್ನು ಪ್ರದರ್ಶಿಸಲು ಬಳಸುವ ಪದ. ನಿಜ, ‘ಅಣ್ಣ' ಎಂದು  ಡಾ.ರಾಜಕುಮಾರ್‌ರನ್ನು ಯಾರು ಯಾರು ಯಾವ ಯಾವ ಕಾರಣಕ್ಕೆ ಕರೆದರು ಎನ್ನುವುದರ ಮೇಲೆ, ಅವರು ಆ ಅಣ್ಣನೊಂದಿಗಿಟ್ಟುಕೊಂಡಿದ್ದ ಸಂಬಂಧಗಳ ಅರಿವು ನಮಗಾಗುತ್ತದೆ.

ಸತ್ತ ಶ್ರೇಷ್ಠರೆಲ್ಲ ನಕ್ಷತ್ರಗಳಾಗಿ ಮಿನುಗುತ್ತಾರೆನ್ನುವುದು ಒಂದು ರಮ್ಯ ಕಲ್ಪನೆ. ಆದರೆ ಚಿತ್ರರಂಗದ ‘ಈ ತಾರೆ' ಕನ್ನಡದ ನೆಲದಲ್ಲಿ ಬರೀ ಮಿನುಗಲಿಲ್ಲ. ಬದಲಿಗೆ ಸೂರ್ಯನಾಗಿ ಪ್ರಖರಿಸಿದ್ದು ಈಗ ಇತಿಹಾಸ. ಅವರ ನಿಧನದಿಂದ ಒಂದು ಯುಗ ಮುಕ್ತಾಯವಾಯಿತೆಂದು ಇತ್ತೀಚಿನ ಬೆಳವಣಿಗೆಗಳು ದೃಢಪಡಿಸಿವೆ.

ಸಾಮಾನ್ಯರು ಸತ್ತಾಗ ಕೂಡ ಸಂತಾಪ ಸೂಚಕ ಸಭೆಗಳು ಸೂತಕ ಕಳೆಯುವವರೆಗೂ ಮಾತಲ್ಲಿ, ಆಚರಣೆಯಲ್ಲಿ ನಡೆಯುತ್ತಲೇ ಇರುತ್ತವೆ.  ರಾಜ್‌ರಂಥ ‘ಜನಪ್ರಿಯ'ರು ನಿಧನರಾದಾಗ ಆ ಸಂತಾಪದ ಕಣ್ಣೀರ ಹನಿಗಳನ್ನು ಕೂಡಿಸಿದರೆ ಸಾಗರವಾಗುವುದು ನಿಶ್ಚಿತ.  ಆದರೆ ರಾಜ್ ಕುರಿತ ಪುಸ್ತಕಗಳು, ಆಡಿಯೊ, ವಿಡಿಯೊ ಸಿ.ಡಿಗಳು, ಮಾರ್ಕೆಟ್ಟಿನ ತುಂಬ ತುಂಬಿಕೊಳ್ಳುತ್ತಿರುವಾಗ, ಸಾವು ಕೂಡ ಹೇಗೆ ವ್ಯಾಪಾರದ ಸರಕಾಗಿ ಬಿಡುತ್ತದೆ ಮತ್ತು ಇಂಥ ಚರಮ ಶ್ಲೋಕ ಬರೆಯಲೆಂದೇ ಕಾದು ಕುಳಿತವರ ಮನಸ್ಥಿತಿಯ ಬಗ್ಗೆಯೂ ಸಂಕಟವಾಗುತ್ತದೆ.

ಆರ್ ವಿ ಭದ್ರಯ್ಯ = ನೀರ್ ಭದ್ರಯ್ಯ: ಇಂತವರೂ ಇದ್ದಾರೆ......

field_vote: 
No votes yet
To prevent automated spam submissions leave this field empty.

 

 

ಸಂಪದ ಮಿತ್ರರೇ

ಇದು ಒಬ್ಬ ಸಾಮಾನ್ಯ ಮನುಷ್ಯನ ಜನೋಪಯೋಗಿ ಕೆಲಸದ ಕಥೆ ...

ಓದಿ ನಿಮ್ಮ ಅಭಿಪ್ರಾಯ ತಿಳಿಸಿ.

ಆಧಾರ:ಬೆಂಗಳೂರು ಮಿರರ್ ೦೫.೦೪.೨೦೦೯ (ಒಳ್ಳೆಯದ್ದು ಎಲ್ಲಿದ್ದರು ಅದನ್ನು ಎಲ್ಲರಿಗೂ ತಿಳಿಸುವುದು , ತಿಳಿಯುವಂತೆ ಮಾಡುವುದು ನಡೆಯುತ್ತಿರಬೇಕು)

 

ಜನಪದ ಭಂಡಾರ ಸಿರಿಯಜ್ಜಿಗೆ ನುಡಿ ನಮನ.

field_vote: 
Average: 5 (1 vote)
To prevent automated spam submissions leave this field empty.

ಸಾಮ್ಮರ್‌ಫೀಲ್ಡ್ ರಷ್ಯಾದ ಪ್ರಖ್ಯಾತ ಗಣಿತಜ್ಞ. ಅವನ ಮೂರು ಜನ ಶಿಷ್ಯಂದಿರಿಗೆ ನೋಬೆಲ್ ಪ್ರಶಸ್ತಿ ಬಂದಿದೆ. ಆದರೆ ಸ್ವತಃ ಸಾಮ್ಮರ್‌ಫೀಲ್ಡ್ ಗೆ ನೋಬೆಲ್ ಪ್ರಶಸ್ತಿ ಬಂದಿಲ್ಲ! ಸಾಮ್ಮರ್‌ಫೀಲ್ಡ್ ಸಂಜೆ ಐದು ನಿಮಿಷದ ಮಟ್ಟಿಗೆ ವಾಕಿಂಗ್ ಹೊರಡುತ್ತಿದ್ದ. ಅವನ ಶಿಷ್ಯಂದಿರು ಅಥವಾ ಶಿಷ್ಯರಾಗಬಯಸುವವರು ಅವನ ಹಿಂದೆ ಓಡಬೇಕಿತ್ತು.

ಹುಳು, ಹಕ್ಕಿಗಳನ್ನು ಬೆನ್ನಟ್ಟಿಹೋದವರಿಗೆ ಹೊನ್ನ ಕಿರೀಟದಂಥ ಪ್ರಶಸ್ತಿಗಳು ಬೆನ್ನಟ್ಟಿ ಬಂದವು!

field_vote: 
No votes yet
To prevent automated spam submissions leave this field empty.

ಈಗ್ಗೆ ಒಂದು ತಿಂಗಳ ಹಿಂದೆಯಷ್ಟೇ ಒಬ್ಬರು ನನ್ನ ಬ್ಲಾಗಿಗೆ www.bisilahani.blogspot.com ಹೊಸದಾಗಿ ಭೇಟಿಕೊಟ್ಟು ಅಲ್ಲಿ ನಾನು ಪ್ರಕಟಿಸಿದ ಕವನವೊಂದಕ್ಕೆ ಪ್ರತಿಕ್ರಿಯೆ ನೀಡುತ್ತಾ “ಹೀಗೆ ಹಾರಾಡುತ್ತಾ ನಿಮ್ಮ ಬ್ಲಾಗಲ್ಲಿ ಬಿದ್ದೆ. ರವೀಂದ್ರನಾಥ ಟ್ಯಾಗೋರ್‌ರವರ ಕವನವನ್ನು ತುಂಬಾ ಚೆನ್ನಾಗಿ ಅನುವಾದಿಸಿದ್ದೀರಿ. ನನ್ನ ಬ್ಲಾಗಿಗೊಮ್ಮೆ ಬೇಟಿಕೊಡಿ. ಅಲ್ಲಿ ಒಂದಷ್ಟು ಚೆಂದದ ಫೋಟೊಗಳಿವೆ, ಲೇಖನಗಳಿವೆ. ಭೂಪಟಗಳಿವೆ, ಪುಟ್ಟ ಪುಟ್ಟ ಕತೆಗಳಿವೆ” ಎಂದು ಹೇಳಿದ್ದರು. ನಾನು ಎಂದಿನಂತೆ ಸಹಬ್ಲಾಗಿಗರು ಪ್ರತಿಕ್ರಿಯಿಸಿದಾಗ ಅವರಿಗೊಂದು ಧನ್ಯವಾದ ಹೇಳಿ ಸುಮ್ಮನಾಗುವಂತೆ ಸುಮ್ಮನಾಗುವದಾಗಲಿ, ಅಥವಾ ಅವರು ತಮ್ಮ ಬ್ಲಾಗನ್ನು ನೋಡಲು ಹೇಳಿದಾಗ ವಿಳಂಬಮಾಡುವಂತೆ ವಿಳಂಬ ಮಾಡುವದನ್ನಾಗಲಿ ಇವರ ವಿಷಯದಲ್ಲಿ ಮಾಡಲಿಲ್ಲ. ತಕ್ಷಣ ಅವರ ಬ್ಲಾಗಿಗೆ ಭೇಟಿಕೊಟ್ಟೆ. ಅದಕ್ಕೆ ಕಾರಣ- ಅದರಲ್ಲಿರುವ ಒಂದಷ್ಟು “ಚೆಂದನೆಯ ಫೋಟೋಗಳು”! ಹಾಗೂ ನನಗೂ ಫೋಟೊಗ್ರಾಫಿಯಲ್ಲಿ ಮೊದಲಿನಿಂದಲೂ ಅಲ್ಪ ಸ್ವಲ್ಪ ಆಸಕ್ತಿ ಇತ್ತಲ್ಲ? ಒಮ್ಮೆ ನೋಡೇ ಬಿಡುವಾ ಎಂದುಕೊಂಡು ಅವರ ಬ್ಲಾಗಿನೊಳಕ್ಕೆ ಇಣುಕಿದೆ.

ಬಿಲ್ ಗೇಟ್ಸ್ ಮತ್ತು ಅನಾಫಿಲಿಸ್ ಸೊಳ್ಳೆ!

field_vote: 
No votes yet
To prevent automated spam submissions leave this field empty.

ಇಮಾಮ್ ಸಾಬೀಗೂ ಗೋಕುಲಾಷ್ಟಮೀಗೂ ಅದೇನ್ರೀ ಸಂಬಂಧ ಅಂತ ಕೇಳ್ತೀರಾ?

ಐಟಿ ಕ್ಷೇತ್ರದ ಮಹಾನ್ ಸಾಧಕ ಬಿಲ್ ಗೇಟ್ಸ್ಗೂ ಮತ್ತು ಒಂದು ಯ:ಕಷ್ಚಿತ್ ಸೊಳ್ಳೆಗೂ ಸಂಬಂಧ ಕಲ್ಪಿಸೋದು ಇದೆಂಥಾ ತರಲೆ ಕೆಲಸಾ ಅಂತ ಅಂದುಕೋತೀರೇನೋ? ಒಂದು ರೀತಿ ಸಂಬಂಧ ಇದೆ ಅಂತ ಮುಂದೆ ನಿಮಗೇ ವೇದ್ಯವಾಗುತ್ತೆ.

ನಮ್ಮ ಇಂಫೋಸಿಸ್ ನಾರಾಯಣ ಮೂರ್ತಿಗಳ ತರಹಾನೇ ಗೇಟ್ಸ್ ಕೂಡಾ ತಾವೇ ಹುಟ್ಟು ಹಾಕಿದ ಮೈಕ್ರೋಸಾಫ್ಟ್ ಕಂಪನಿಯಿಂದ ನಿವೃತ್ತರಾದದ್ದು ಎಲ್ಲರಿಗೂ ತಿಳಿದ ವಿಚಾರ. ಆದರೆ ನಮ್ಮ ಮೂರ್ತಿಗಳು ಅದೇ ಕಂಪನಿಯ ಚೇರ್ಮನ್ ಮತ್ತು ಚೀಫ್ ಮೆಂಟರ್ ಆಗಿ ಮುಂದುವರೆಯುತ್ತಿರೋದು ಎಲ್ಲರಿಗೂ ತಿಳಿದ ವಿಚಾರವೇ? ಆದರೆ ವಿಶ್ವದ ಅತಿ ಹೆಚ್ಚು ಶ್ರೀಮಂತರಲ್ಲಿ ಒಬ್ಬರಾದ ಬಿಲ್ ಗೇಟ್ಸ್ ಈಗೇನು ಮಾಡುತ್ತಿದ್ದಾರೆ ಅಂತ ಅದೆಷ್ಟು ಜನರಿಗೆ ತಿಳಿದಿದೆ?

"ಸಾಂಗತ್ಯ" ವೆಂಬ ಆಸಕ್ತರ ಸಮೂಹ

field_vote: 
No votes yet
To prevent automated spam submissions leave this field empty.

ಒಂದು ಖುಷಿಯನ್ನು ಹಂಚಿಕೊಳ್ಳಲು ಕಾರಣ ಬೇಕಿಲ್ಲ. ಖುಷಿಯಾಗಿದೆ, ಅದಕ್ಕೇ ಹಂಚಿಕೊಳ್ಳುತ್ತಿದ್ದೇನೆ ಎಂದರಷ್ಟೇ ಸಾಕು. ಹಾಗೆಯೇ "ಸಾಂಗತ್ಯ’ ಹೊಸದೊಂದು ಬ್ಲಾಗ್. ಇತ್ತೀಚೆಗಷ್ಟೇ ಆರಂಭವಾದದ್ದು.

ಮೊದಮೊದಲ ಕಲ್ಪನೆಗಳು -ಕೃತಿ :ದೇವರು - ಎ.ಎನ್. ಮೂರ್ತಿರಾವ್

field_vote: 
No votes yet
To prevent automated spam submissions leave this field empty.

ಮೊದಮೊದಲ ಕಲ್ಪನೆಗಳು

ಶತಶತಮಾನಗಳ ಹಿಂದೆ, ಮಾನವನಲ್ಲಿ ಆತ್ಮಪ್ರಜ್ಣೆ ಅರಳಿ ಅವನು ತನ್ನ ಸುತ್ತಲ ಪ್ರಪಂಚವನ್ನು ಕೂತೂಹಲದಿಂದ ನೋಡಲಾರಂಭಿಸಿದಾಗ ಅವನಿಗೆ ಕಂಡದ್ದೇನು ?

ಅಗ್ನಿಪರ್ವತಗಳಿಂದ ಭುಗಿಲೆದ್ದು ಗಗನಕ್ಕೆ ಏರುತ್ತಿರುವ ಜ್ವಾಲೆ; ಕಾದು ಕರಗಿ ಉಕ್ಕಿ ತನ್ನ ದಾರಿಯಲ್ಲಿ ಸಿಕ್ಕಿದ್ದನ್ನೆಲ್ಲ ಸುಟ್ಟು ಹರಿಯುತ್ತಿರುವ ಲಾವಾರಸ; ಮೋಡದ ದಟ್ಟಣೆಯನ್ನು ಇರಿದಿರಿದು ಕಣ್ಣು ಕೋರ್ಯೆಸುವ ಮಿಂಚು; ಕಾಳ್ಗಿಚ್ಚಿನಿಂದ ಭಸ್ಮವಾಗುತ್ತಿರುವ ಕಾಡು; ಕ್ಷುಬ್ದವಾದ ಸಮುದ್ರ, ಅದರ ತೀರದ ಮೇಲೆ ಅಪ್ಪಳಿಸುವ ಅಲೆಗಳು; ಇವುಗಳ ಜೊತೆಗಿನ ಗುಡುಗಿನ ಆರ್ಭಟ, ಸಿಡಿಲಿನ ಹೊಡೆತ, ಈ ಭಯಂಕರ ಪ್ರಪಂಚದಲ್ಲಿ ನಾನು ಹೇಗೆ ತಾನೆ ಬದುಕಿಯೇನು ?’ ಎಂದು ಅವನು ತಲ್ಲಣಿಸಿರಬೇಕು.

ಎ. ಎನ್. ಮೂರ್ತಿರಾವ್ ವ್ಯಕ್ತಿ ಪರಿಚಯ

field_vote: 
Average: 3.8 (4 votes)
To prevent automated spam submissions leave this field empty.

 ಡಾ. ಎ.ಎನ್.ಮೂರ್ತಿ ರಾವ್ (ಅಕ್ಕಿ ಹೆಬ್ಬಾಳು ನರಸಿಂಹಮೂರ್ತಿರಾಯರು)

ಅಪರೂಪದ ವ್ಯಕ್ತಿ

field_vote: 
Average: 1 (1 vote)
To prevent automated spam submissions leave this field empty.

``ಗುರುಸ್ಮರಣೆ: ಅಪರೂಪದ ವ್ಯಕ್ತಿ ಪ್ರೊ.ಎಸ್.ಗೋಪಾಲ್''  

ಲೇಖಕ~ ಡಾ;ಹೊ.ರಾ.ಶ್ರೀಪಾದ್, ಆಯ್ಕೆಶ್ರೇಣಿ ಭೌತಶಾಸ್ತ್ರ ಉಪನ್ಯಾಸಕ (ಸ್ನಾತಕೋತ್ತರ ವಿಭಾಗ), ಸರ್ಕಾರಿ ಮಹಾವಿದ್ಯಾಲಯ(ಸ್ವಾಯತ್ತ), ಮಂಡ್ಯ.

ಯಾರಿಗೂ ಅರ್ಥವಾಗದ ಬಾಪೂ….? ನಿಜವಾದ ಕಥೆ ಏನು?

field_vote: 
No votes yet
To prevent automated spam submissions leave this field empty.

- ನವರತ್ನ ಸುಧೀರ್

ಸಂಪದದಲ್ಲಿ ಬೇರೆಡೆ ಸ್ವಾತಂತ್ರ್ಯಪೂರ್ವದಲ್ಲಿ ಭಾರತದ ಭಾವಿ ಪ್ರಧಾನಿಯ ಆಯ್ಕೆಯಲ್ಲಿ ಗಾಂಧೀಜಿಯವರು ವಹಿಸಿದ ಪಾತ್ರದ ಬಗ್ಗೆ ಪ್ರತ್ಯಕ್ಷದರ್ಶಿಯೊಬ್ಬರ ಹೇಳಿಕೆಯ ಆಧಾರಿತ ಲೇಖನ ಪ್ರಕಟಿಸಲಾಗಿದೆ. ಕಳೆದ ಅರವತ್ತಕ್ಕೂ ಹೆಚ್ಚು ವರ್ಷಗಳಲ್ಲಿ ಸ್ವತಂತ್ರ ಭಾರತದಲ್ಲಿ ನೆಹರೂರವರ ಭೂಮಿಕೆಯ ಬಗ್ಗೆ ಅನೇಕ ಚರ್ಚೆಗಳಾಗಿದ್ದರೂ, ಎಲ್ಲಿಯೂ ನೆಹರೂರವರ 'ದೇಶವನ್ನು ಸುಟ್ಟು ಹಾಕುವ ಮನೋಸ್ಥಿತಿಯ' ಬಗ್ಗೆ ಓದಿದ್ದಂತಿರಲಿಲ್ಲ.

೨೦೦೬ ರಲ್ಲಿ ಗಾಂಧೀಜಿಯವರ ಜೀವನ ಕುರಿತಾಗಿ ಅವರ ಮೊಮ್ಮಗ ಶ್ರೀ ರಾಜ್‍ಮೋಹನ್ ಗಾಂಧಿ ಬರೆದ Mohan Das – A True Story of a Man, his People and an Empire – Penguin Viking – (೭೪೩ ಪುಟಗಳು ) ಪ್ರಕಟವಾಯಿತು. ಈ ಪುಸ್ತಕದಲ್ಲಿ ಭಾರತದ ಭಾವಿ ನಾಯಕನ ಚುನಾವಣೆಯ ಬಗ್ಗೆ ಉಲ್ಲೇಖಿಸಲಾದ ಎರಡು ಪುಟಗಳ (೫೪೪ - ೫೪೫) ಯಥಾವತ್ ಕನ್ನಡ ಭಾವಾನುವಾದ ಈ ಕೆಳಕಂಡಂತಿದೆ. ಮೂಲ ಅರ್ಥಕ್ಕೆ ಕುಂದು ಬಾರದಂತೆ ಸಾಧ್ಯವಾದಷ್ಟು ಶ್ರಮಿಸಿದ್ದೇನೆ.

ವಿಕಾಸವಾದ

field_vote: 
No votes yet
To prevent automated spam submissions leave this field empty.

ಅನಿವಾಸಿಯವರು ಡಾರ್ವಿನ್ ಅವರ 200ನೇ ಹುಟ್ಟುಹಬ್ಬದ ಪ್ರಯುಕ್ತ ಆ ವಿಜ್ಞಾನಿಯನ್ನು ನೆನಪು ಮಾಡಿಕೊಟ್ಟರು. ವಿಕಾಸ ಸಿದ್ಧಾಂತವನ್ನು ಭದ್ರ ಬುನಾದಿಯ ಮೇಲೆ ಸ್ಥಾಪಿಸಿ, ಜೀವವಿಜ್ಞಾನದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಕ್ರಾಂತಿಗೆ ಕಾರಣರಾದ ಬ್ರಿಟಿಷ್ ಜೀವವಿಜ್ಞಾನಿ ಡಾರ್ವಿನ್ ಬಗ್ಗೆ ಅರಿಯದವರು ಯಾರು?
ಡಾರ್ವಿನ್ ಒಬ್ಬ ವೈದ್ಯರ ಮಗನಾಗಿ ಇಂಗ್ಲಾಂಡ್‘ನ ಶ್ರೂಸ್ಬರಿಯಲ್ಲಿ ಜನಿಸಿದರು. ವೈದ್ಯರ ಮಗ ವೈದ್ಯರೇ ಆಗಬೇಕೇನೋ ಎಂಬಂತೆ ಎಡಿನ್‍ಬರ್ಗ್‍ನಲ್ಲಿ ವೈದ್ಯಕೀಯ ಕಾಲೇಜಿಗೆ ಸೇರಿದರು. ಆದರೆ ಅವರ ಒಲವು ಅತ್ತಕಡೆ ಇರಲಿಲ್ಲವೋ ಏನೋ ಅವರು ಕೇಂಬ್ರಿಡ್ಜ್ ಯೂನಿವರ್ಸಿಟಿಗೆ ಸೇರಿ M.A. ಪದವಿ ಪಡೆದರು.ಅಲ್ಲಿ ಬಯೋಲಜಿ ಪ್ರೊಫೆಸರ್ ಜಾನ್ ಸ್ಟೀವನ್ಸ್ ಹೆನ್ಸ್ಲೊ ಅವರ ಗೆಳೆತನ ಅವರಿಗೆ ದೊರಕಿತು. ಅಲ್ಲಿ ಡಾರ್ವಿನ್ ಅವರಿಗೆ ಜೀವಶಾಸ್ತ್ರ ಹಾಗೂ ಭೂಶಾಸ್ತ್ರದ ಬಗ್ಗೆ ಆಸಕ್ತಿ ಬೆಳೆಯಿತು.
ಒಮ್ಮೆ 1835ರ ಸೆಪ್ಟೆಂಬರ್ 15ರಂದು ಬೀಗಲ್ ಎಂಬ ಹಡಗು ವೈಜ್ಞಾನಿಕ ವಿಚಾರಗಳ ಅನ್ವೇಷಣೆಗಾಗಿಯೇ ಹೊರಟಿತು. ಅದರ ಕ್ಯಾಪ್ಟನ್ 26 ವರ್ಷಯ ಯುವಕ ರಾಬರ್ಟ್ ಫಿಟ್ಸ್ ರಾಯ್ ತನ್ನ ಜೊತೆಗೆ ಒಬ್ಬ ಜೀವಶಾಸ್ತ್ರಜ್ಞನನ್ನು (Naturalist) ಸಹಚರರಾಗಿ ಬರಬೇಕೆಂದು ಬಯಸಿದ. ಅದಕ್ಕೆ ಪ್ರೊ. ಹೆನ್ಸ್ಲೊ ಅವರು ಡಾರ್ವಿನ್ನನ್ನು ಕ್ಯಾಪ್ಟನ್ ಜೊತೆ ಹೋಗುವಂತೆ ಸಲಹೆ ನೀಡಿದರು. ಅದರಂತೆ ಹೊರಟ ಡಾರ್ವಿನ್‘ಗೆ ಆದ ಲಾಭವೇ ಇಂದು ನಮ್ಮ ಮುಂದಿರುವ ಅವರ ವಿಕಾಸವಾದದ ಸಿದ್ಧಾಂತ. ಆಸ್ಟ್ರೇಲಿಯಾ ಹಾಗೂ ದಕ್ಷಿಣ ಅಮೆರಿಕದೊಂದಿಗೆ ದಕ್ಷಿಣ ಅಮೆರಿಕದ ಹತ್ತಿರ ಇರುವ ದಕ್ಷಿಣ ದ್ವೀಪಗಳಾದ ಗ್ಯಾಲ್ಪಗೋಸ್ ದ್ವೀಪಗಳತ್ತ ಪಯಣ ಬೆಳೆಸಿದರು. ಸತತ 5 ವರ್ಷಗಳ ಈ ಪಯಣದಲ್ಲಿ ಡಾರ್ವಿನ್ ಭೂಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರಗಳ ಎಷ್ಟೋ ವಿಷಯ ಸಂಗ್ರಹಣೆ ಮಾಡಿದರು. ಅವುಗಳಿಗೆ ವೈಜ್ಞಾನಿಕ ನಿಯಮಗಳನ್ನು ಅಳವಡಿಸಿಕೊಂಡು ಸ್ಪೆಸಿಮನ್ನುಗಳನ್ನು ಸಂಗ್ರಹಿಸಿಕೊಂಡು ಬಂದರು. ಇದು ಅವರ ವಿಕಾಸವಾದಕ್ಕೆ ತಳಪಾಯ ಹಾಕಿತು. ಅವರು ತನ್ನ “origin of species”ನಲ್ಲಿ ಪೀಠಿಕೆಯಾಗಿ ಹೀಗೆ ಬರೆದಿದ್ದಾರೆ.

ಸದ್ಗುರು ಮಹಾರಾಜ್

field_vote: 
Average: 4 (2 votes)
To prevent automated spam submissions leave this field empty.

ಪ.ಪೂ.ಶ್ರೀ ಶ್ರೀ ವಿರಜಾನಂದಜೀ ಮಹಾರಾಜ್

ಸ್ವಾಮಿ ಶ್ರೀ ಸಹಜಾನಂದಜೀ ಮಹಾರಾಜ್

field_vote: 
No votes yet
To prevent automated spam submissions leave this field empty.

ಪ.ಪೂ. ಶ್ರೀ ಶ್ರೀ ಸಹಜಾನಂದಜೀ ಮಹಾರಾಜ್

ಜಯಂತ್ ಕಾಯ್ಕಿಣಿ ಕಣ್ಣಲ್ಲಿ ತೇಜಸ್ವಿ - ಭಾಗ ೨

field_vote: 
No votes yet
To prevent automated spam submissions leave this field empty.

ಇನ್ನು ತೇಜಸ್ವಿಯವರ ಹ್ಯೂಮರ್ ಇದೆಯಲ್ಲಾ ಅದು ಭಾಳಾ ಕಷ್ಟವಾದ ಹ್ಯೂಮರ್. ಕರ್ವಾಲೋದಲ್ಲಿ ಅವರ ನಾಯಿ ಕಿವಿ ಬಗ್ಗೆ ಪ್ರಸ್ತಾಪ ಬರುತ್ತೆ. “ಅದು ಗರಂ ಮಸಾಲಾ ವಾಸನೆಗೆ ತನ್ನ ಸ್ವಾಭಿಮಾನವನ್ನೆಲ್ಲಾ ಕಳೆದುಕೊಂಡು ಬಾಲ ಮುದುರುಸಿಕೊಂಡು ಕಿವಿಗಳನ್ನ ಜೋಲಿಸಿಕೊಂಡು ಓಡಾಡ್ತಾ ಇತ್ತು” ಅಂತ, ಇದನ್ನ ವಿಶ್ಯುಯಲೈಸ್ ಮಾಡೋದು ಭಾಳಾ ಕಷ್ಟ. ಹೋದ ವರ್ಷ ಏನಾಯ್ತು, ಅವರ ಕೃಷ್ಣೇಗೌಡನ ಆನೆ ಕಥೆಯನ್ನ ಸಿನಿಮಾ ಮಾಡ್ಬೇಕು ಅಂತ ನಮ್ಮ ಗಾಂಧಿ ನಗರದ ನಿರ್ಮಾಪಕರಿಗೆ ಭಾಳಾ ಆವೇಶ ಬಂದು ಬಿಡ್ತು. ಅವರು ನನಗೆ ಸ್ಕ್ರಿಪ್ಟ್ ಬರೀಬೇಕು ಹಾಗೆ-ಹೀಗೆ ಅಂತ ಫೋನ್ ಮಾಡಿದ್ರು. ನಾನು ತಕ್ಷಣ ತೇಜಸ್ವಿಯವರಿಗೆ ‘ಸಾರ್ ಸ್ವಲ್ಪ ಡೇಂಜರು ಈಗ, ಕೃಷ್ಣೇಗೌಡರ ಆನೆ ಮೇಲೆ ಗಾಂಧಿನಗರದವರ ಕಣ್ಣು ಬಿದ್ದಿದೆ, ಆನೆ ಮೇಲೆ ಮಲ್ಲಿಕಾ ಶೆರಾವತ್ತನ್ನ ಕೂರಿಸಿ ಹಾಡೂ-ಗೀಡೂ ಬಂದ್ರೂ ಬರಬಹುದು ನೀವು ಸ್ವಲ್ಪ ಕೇರ್ ಫುಲ್ಲಾಗಿರಿ’ ಅಂದೆ, ಅದಕ್ಕವರು ‘ಹೌದು ಮಾರಾಯ ನಿಜ ನೀನು ಹೇಳೋದು ಅಂದ್ರು.’

ಆ ಸಂದರ್ಭದಲ್ಲಿ ನಾನು ಅವರಿಗೆ ಹೇಳ್ದೆ “ ಸಾರ್ ನಿಮ್ಮ ಹ್ಯೂಮರ್ ಭಾಳಾ ವಿಶಿಷ್ಟವಾದದ್ದು, ಉದಾಹರಣೆಗೆ ‘ಮಂದಣ್ಣ ಒಂದೇ ರಾತ್ರೀಲಿ ಕಿರೀಟ ಬಿದ್ದು ಹೋದ ರಾಜನಂತೆ ನಡೆದು ಹೋದನು’ ಅಂತ ಇರುತ್ತೆ ಇದನ್ನ ವಿಶುಯಲೈಸ್ ಮಾಡೋಕೆ ಏನ್ಮಾಡ್ತೀರಿ? ಅದು ಲಿಟರರಿ ಹ್ಯೂಮರ್ರು. ಕಾನೂರು ಹೆಗ್ಗಡಿತೀಲಿ ಬರೋ ಹ್ಯೂಮರ್ ಸಹ ಇದೇ ತರವಾದದ್ದು. ಅದು ಪಾಪ ಪಾಂಡು, ಸಿಲ್ಲಿ ಲಲ್ಲೀಲಿ ಬರೋ ಹ್ಯೂಮರ್ ತರದ್ದಲ್ಲ, ನೀವು ಅಂತವರ ಕೈಗೆ ಕೊಟ್ರೆ ಕಷ್ಟ’ ಅಂತ. ಅದು ತೇಜಸ್ವಿಯವರಿಗೂ ಗೊತ್ತಿತ್ತು ಅನ್ಸುತ್ತೆ
“ಹೌದಪ್ಪ ಅದು ಅವರಿಗೂ ಗೊತ್ತಾಗಿ ಬಿಟ್ ಬಿಡ್ತಾರೆ ಬಿಡು ಕಾಳಜಿ ಮಾಡ್ಬೇಡ’ ಅಂದ್ರು, ಹಾಗೇ ಆಯ್ತು, ಕೃಷ್ಣೇಗೌಡನ ಆನೇನೂ ಬಚಾವಾಯ್ತು, ಮಲ್ಲಿಕಾ ಶರಾವತ್ತೂ ಬಾಚಾವಾದ್ಲು.

ಜಡಭರತ

field_vote: 
No votes yet
To prevent automated spam submissions leave this field empty.

ಒಮ್ಮೆ ನಾನು ಸಪ್ನಾ ಬುಕ್ಸ್ ಅಂಅಗಡಿಗೆ ಭೈರಪ್ಪ ನವರ ಆವರಣ ತರ್ಲಿಕ್ಕಂತಾ ಹೋಗಿದ್ದೆ, ಅಲ್ಲಿ ನನ್ನ ಕಣ್ಣಿಗೆ ಒಂದು ಪುಸ್ತಕ ಬಿತ್ತು. ಅದರ ಹೆಸರು "ನಾನೆ ಬಿಜ್ಜಳ" ಅಂತ ಹಂಗ ಇರ್ಲಿ ಓದೋಣ ಅನ್ಕೋಂದು ತಗೋಡು ಮನೀಗೆ ಹೋದ್ ಮ್ಯಾಲೆ ಅ ಪುಸ್ತಕ ಓದಿದೆ. ಅದು ಒಂದು ನಾಟಕ. ಅದನ್ನು ಬರದವರ್ಯಾರು ಅಂತ ನೋಡಿದಾಗ ಗೊತ್ತಾತು ಅವ್ರೆ ಜಡಭರತ ಅಂತ.

ಜಯಂತ್ ಕಾಯ್ಕಿಣಿ ಕಣ್ಣಲ್ಲಿ ತೇಜಸ್ವಿ

field_vote: 
No votes yet
To prevent automated spam submissions leave this field empty.

ತೇಜಸ್ವಿ ಮೌನದ ಬಗ್ಗೆ ನಮ್ಮ ಪೊಸೆಸಿವ್ ಚಳವಳಿಗಾರರ ಮನಸ್ಸಿನಲ್ಲಿ ಒಂದು ರೀತಿಯ ಸಿಟ್ಟಿದೆ. ತೇಜಸ್ವಿಯವರು ಮಾತಾಡಬೇಕಾದ ಸಮಯದಲ್ಲಿ ಮಾತಾಡ್ತಾ ಇರಲಿಲ್ಲ. ಯಾವುದೋ ಒಂದು ಚಳುವಳಿ ಸಂದರ್ಭದಲ್ಲಿ ಇವರು ಯಾವುದೋ ಮೀನಿಗೆ ಗಾಳ ಹಾಕ್ತಾ ಇದಾರೆ, ಯಾವುದೋ ಹಕ್ಕಿಯ ಚಿತ್ರಕ್ಕಾಗಿ ಕಾಯ್ತಾ ಕೂತಿದ್ದಾರೆ ಅಂತ. ಇದನ್ನು ನಾನು ಅವರ ಸಂದರ್ಶನ ಮಾಡುವಾಗ ಕೇಳಿದೆ. ‘ಇದೇನಪ್ಪ ಇದು ಈ ಮೌನ’ ಅಂತ. ಅವರಂದ್ರು ‘ಮೌನವೇ ಒಂದು ಭಾಷೆ. ಮೌನವೇ ಒಂದು ಉತ್ತರ.’
ನಾನು ಅವರಿಗೆ ಆಪ್ತನಾಗಿ ಅವರನ್ನ ಅರ್ಥ ಮಾಡಿಕೊಳ್ಳುವ ಒಂದು ಪ್ರಯತ್ನ ಏನಂದ್ರೆ; ಅವರಿಗೆ ಕಳೆದ ೧೫ ವರ್ಷಗಳಲ್ಲಿ ಎಲ್ಲಾ ಚಳುವಳಿಗಳಲ್ಲೂ, ಸಿದ್ಧಾಂತಗಳಲ್ಲೂ ಆವೇಶ ಇತ್ತು, ಆದ್ರೆ ಸಿದ್ಧಾಂತಿಗಳಲ್ಲಿ, ಚಳವಳಿಗಾರರಲ್ಲಿ ನಂಬಿಕೆ ಹೊರಟೋಗ್ಬಿಟ್ಟಿತ್ತು. ಈಗ ಭ್ರಷ್ಟರಾದಂತ, ಪ್ರಚಾರಕ್ಕೆ ಹಾತೊರೆಯುವಂತ, ಮಾಧ್ಯಮಗಳಲ್ಲಿ ಮಿಂಚಬೇಕೂ ಅಂತ ನೋಡುವವರನ್ನ ಅಥವಾ ಜಾತಿ, ಹಣ ಅಂತ ರಾಜಕಾರಣ ಮಾಡುವ ಮುಂದಾಳುಗಳ ಬಗ್ಗೆ ಅವರಿಗೆ ಮುಜುಗರ ಉಂಟಾಗಿಬಿಟ್ಟಿತ್ತು. ನಾನು ಆ ಸಿದ್ಧಾಂತವನ್ನ ಸಪೋರ್ಟ್ ಮಾಡಿದ್ರೆ ಆ ವ್ಯಕ್ತಿಗಳನ್ನ ಸಪೋರ್ಟ್ ಮಾಡಿದ ಹಾಗಾಗುತ್ತೆ, ಒದು ವೇಳೆ ಮಾಡ್ದೇ ಇದ್ರೆ ಇವುಗಳಿಂದ ದೂರವಾಗೋ ಹಾಗಾಗುತ್ತೆ ಅಂತ ಭಾಳಾ ಪಜೀತಿನಲ್ಲಿ ಅವರಿದ್ರು.

ಮರೆಯಾದ ಯಕ್ಷಗಾನದ ಅನರ್ಘ್ಯ ರತ್ನ ಕೆರೆಮನೆ ಶಂಭು ಹೆಗ್ಡೆ

field_vote: 
No votes yet
To prevent automated spam submissions leave this field empty.

ಅನನ್ಯ ಕಲಾವಿದ ಶಂಭು ಹೆಗ್ಡೆಯವರ ನಿರ್ಯಾಣ

ಸಂಜೆ ಕಾಲೇಜಿನಿಂದ ಬಸವಳಿದು ಬಂದಿದ್ದೆ ನಾನು. ಎಂದಿನಂತೆ ಟಿವಿಯೊಳಗೆ ಹೊಸ ಸುದ್ದಿ ಏನಿದೆ ಎಂದು ನೋಡಲು ಇಣುಕಿದೆ ಅದರೊಳಗೆ. ಆ ಸುದ್ದಿ ಮತ್ತಷ್ಟು ಬಸವಳಿಯುವಂತೆ ಮಾಡಿತು - ಕುಣಿಯುತ್ತ ಕುಣಿಯುತ್ತಲೇ ಕೆರೆಮನೆ ಶಂಭು ಹೆಗ್ಡೆ ಈ ಭವದ ಆಟ ಮುಗಿಸಿ ಮತ್ತೆ ಬರದ ಲೋಕದತ್ತ ನಡೆದಿದ್ದಾರೆಂದು ತಿಳಿದಾಗ ಮನ ಕಲಕಿತು. ಸಾಗರದಲ್ಲಿ ತೆರೆಗಳು ಎದ್ದೆದ್ದು ಬರುವಂತೆ ನೆನಪುಗಳು ಒತ್ತೊತ್ತಿ ಬರತೊಡಗಿದುವು. ಅದನ್ನಿಲ್ಲಿ ಮೂಡಿಸುತ್ತಿದ್ದೇನೆ.

1975ರ ಸುಮಾರಿಗೆ ಪುತ್ತೂರಿಗೆ "ಮಹಾಗಣಪತಿ ಯಕ್ಷಗಾನ ಮಂಡಳಿ, ಇಡಗುಂಜಿ" ಎಂಬ ಬಡಗು ತಿಟ್ಟಿನ ಮೇಳ ಬರುತ್ತದೆಂಬ ಸುದ್ದಿ ಕೇಳಿದಾಗ ಅದಾಗಲೇ ಯಕ್ಷಗಾನದ ಹುಚ್ಚು ಹಿಡಿಸಿಕೊಂಡಿದ್ದ ಹುಡುಗ ಪ್ರಾಯದ ನಮಗೆಲ್ಲ ಕುತೂಹಲ. ಆ ಮೇಳದಲ್ಲಿ ಕೆರೆಮನೆ ಕುಟುಂಬದ ಘಟಾನುಘಟಿ ಕಲಾವಿದರಿದ್ದಾರಂತೆ, ಪಾತ್ರಧಾರಿಗಳು ಕೇದಗೆ ಮುಂಡಾಸು ತೊಡುತ್ತಾರಂತೆ, ನೆಲದಲ್ಲಿ ಮಂಡಿಯೂರಿ ಗರಗರನೆ ಸುತ್ತುತ್ತಾರಂತೆ. ನಮ್ಮ ಕುತೂಹಲಕ್ಕೆ ಗರಿಗಳು, ರೆಕ್ಕೆ ಪುಕ್ಕಗಳು ಮೂಡತೊಡಗಿದುವು.

ಇಂದಿನ ದಿನವೇ ಶುಭದಿನವು

field_vote: 
No votes yet
To prevent automated spam submissions leave this field empty.
ಇಂದಿನ ದಿನವೇ ಶುಭದಿನವು
ಇಂದಿನ ವಾರ ಶುಭವಾರ
ಇಂದಿನ ತಾರೆ ಶುಭತಾರೆ
ಇಂದಿನ ಯೋಗ ಶುಭಯೋಗ
ಇಂದಿನ ಕರಣ ಶುಭ ಕರಣ
ಇಂದು ಪುರಂದರ ವಿಟ್ಠಲ ರಾಯನ
ಸಂದರ್ಶನ ಫಲವೆಮಗಾಯಿತು!

ಈ ಉಗಾಭೋಗದಲ್ಲಿ ಪುರಂದರದಾಸರು ಹೇಳೋದು ನಿಜವೇ. ದೇವರನ್ನು ನೆನೆಯೋದಕ್ಕೆ ಪಂಚಾಂಗ ನೋಡ್ಬೇಕಿಲ್ಲ. ಯಾಕಂದ್ರೆ, ಎಂದು ನಾವು ಹರಿಯನ್ನು ನೆನ್ನೆಯುತ್ತೇವೋ ಅವತ್ತಿನ ದಿನ ಚೆನ್ನಾಗೇ ಆಗುತ್ತೆ ಅನ್ನೋದು ಪುರಂದರದಾಸರ ಅಭಿಪ್ರಾಯ. ಹಾಗೇ, ಪುರಂದರದಾಸರಂತಹ ಮಹನೀಯರನ್ನ ನೆನೆಯೋದಕ್ಕೆ ಕೂಡ, ಯಾವ ದಿನವಾದರೂ ಒಳ್ಳೇದೇ. ಆದರೂ, ಅಂಥವರನ್ನ ಅವರು ಹುಟ್ಟಿದ ದಿನದಂದೋ, ಅಥವಾ ಅವರ ಜೀವನದ ಯಾವುದಾದರೂ ಮಹತ್ವದ ಘಟನೆ ನಡೆದ ದಿನ ನೆನೆಸಿಕೊಳ್ಳೋದು ಸಂಪ್ರದಾಯವಾಗಿ ಬಂದಿದೆ. ಅಂತಹ ದಿನಗಳು ನಮಗೆ ಇಂಥಾ ಹಿರಿಯ ಜೀವಗಳು ತಮ್ಮ ಬಾಳಿನಲ್ಲಿ ನಡೆದು ತೋರಿದ ದಾರಿಯನ್ನೊಮ್ಮೆ ಮತ್ತೊಮ್ಮೆ ವಿವರವಾಗಿ ನೋಡೋದಕ್ಕೆ ಒಂದು ಅವಕಾಶ ಕೊಡುತ್ತವೆ. ಇವತ್ತು ಪುರಂದರ ದಾಸರ ಆರಾಧನೆ ( ಜನವರಿ ೨೫, ೨೦೦೯, ಪುಷ್ಯ ಬಹುಳ ಅಮಾವಾಸ್ಯೆ) ಆಗಿರೋದ್ರಿಂದ, ಅವರ ಕೆಲವು ಮಾತುಗಳನ್ನೋ ಓದೋದು, ಅಥವಾ ಕೇಳೋದು ಒಳ್ಳೇದು ಅಂತ ನನ್ನನಿಸಿಕೆ.

ಸ್ಟೀವ್ ಜಾಬ್ಸ್ ಜೀವನದ ಪ್ರೀತಿ ಮತ್ತು ನಷ್ಟ - 2

field_vote: 
Average: 4 (1 vote)
To prevent automated spam submissions leave this field empty.

ಸ್ಟೀವ್ ಜಬ್ಸ್ನ್ ಜೀವನದ ಪ್ರೀತಿ ಮತ್ತು ನಷ್ಟ

ಸ್ಟೀವ್ ಜಾಬ್ಸ್ - ಮಿದಿಳಿನಿಂದ ತಂತ್ರಜ್ಞ್ಯಾನಿ, ಹೃದಯದಿಂದ ಕಲೆಗಾರ - 1

field_vote: 
No votes yet
To prevent automated spam submissions leave this field empty.

ಸ್ಟೀವ್ ಜಾಬ್ಸ್ - ಮಿದಿಳಿನಿಂದ ತಂತ್ರಜ್ಞ್ಯಾನಿ, ಹೃದಯದಿಂದ ಕಲೆಗಾರ

ಪ್ರಿಯ ಓದುಗರೇ ನಿಮಗೆ ಹೆಸರಾಂತ ಪತ್ತೇದಾರಿ ಸಾಹಿತಿ 'ಕೌಂಡಿನ್ಯ' ಅಥವಾ ವೈ ಏನ್ ನಾಗೇಶ್ ಗೊತ್ತ? ಅವರ ಕಾದಂಬರಿಗಳನ್ನ ಓದಿದ್ದೀರ? ಹೇಗನ್ನಿಸಿತು?

field_vote: 
Average: 4.5 (2 votes)
To prevent automated spam submissions leave this field empty.

ನಾನು ಮೊದಲ ಸಾರಿ ಕೌಂಡಿನ್ಯ ಅವರ ಕಾದಂಬರಿಯನ್ನ ಬುಕ್ ಸ್ಟಾಲ್ ಒಂದರಲ್ಲಿ(ರಾಯಚೂರು) ಖರೀದಿಸಿ ಟೈಮ್ ಪಾಸ್ಗೆ ಅಂಥ ಓದಲು ಶುರು ಮಾಡ್ದೆ.

ಮೊದಲಲ್ಲಿ ಓದು ಒಂಥರಾ ವಿಶೇಷ ಅನ್ನಿಸಿತು... ನಂತರ ಅವರ ಕೌಂಡಿನ್ಯ ವಿಶೇಷ ಹೆಸರಿನ ಬುಕ್ ಅನ್ನು ಪ್ರತಿ ತಿಂಗಳು ಕೊಂದು ಓದಲು ಶುರು ಮಾಡ್ದೆ .

ಅವರ ಹಾಸ್ಯ, ಕ್ರೈಂ,ಶೃಂಗಾರ,ವನ್ನು ಅವರ ಕಾದಂಬರಿಗಳಲ್ಲಿ ಬಳಸುವ ರೀತಿ ಅಮೋಘ....

ಕಸ್ತೂರಿ ರಂಗನ್ ಜತೆ ಸಂದರ್ಶನ

field_vote: 
No votes yet
To prevent automated spam submissions leave this field empty.

ಲೋಕಸಭಾ ಚ್ಯಾನೆಲ್ ನಲ್ಲಿ ಕಸ್ತೂರಿ ರಂಗನ್ ಅವರೊಂದಿಗೆ ನಡೆಯುತ್ತಿದ್ದ ಸಂದರ್ಶನ ನೋಡಿ - ಕೇಳಿ ಅದರ ವಿವರವನ್ನು ಸಂಪದಿಗರಿಗೆ ತಿಳಿಸಬೇಕೆನ್ನುವ ಉತ್ಸಾಹದಿಂದ ಈ ಬರಹ. ಮಂಡನೆಯ ಶೈಲಿ, ವಿಷಯ ಸ್ಪಷ್ಟತೆ, ಭಾಷೆಯ ಮೇಲಿನ ಹಿಡಿತ,.. ಎಲ್ಲವೂ ಅನನ್ಯ. ಅಭಿಮಾನ ಹುಟ್ಟುವಂತಿತ್ತು.

ನಮ್ಮ ರಾಮಣ್ಣ ಮಾಸ್ತರ್ ‘ಬಂಗಾರದ ಮನುಷ್ಯ’.

field_vote: 
No votes yet
To prevent automated spam submissions leave this field empty.

" BUTTERFLIES DON'T KNOW THE COLOUR OF THEIR WINGS.
BUT HUMAN EYES KNOW HOW NICE IT IS.
LIKE WISE DR.RAMANNA DOESN'T KNOW HOW GOOD HE IS;
BUT WE- SAMPADIGA'S KNOW HOW SPECIAL HE IS..!"
ನಮ್ಮ ಮಾಸ್ತರ್ ರಾಮಣ್ಣ ಇಂದು ‘ಕನ್ನಡಪ್ರಭ ವರ್ಷದ ವ್ಯಕ್ತಿ- ೨೦೦೮.’
ನನ್ನ ಜೀವಮಾನದಲ್ಲಿ ಯೋಗ್ಯರಿಗೆ ಪುರಸ್ಕಾರ ಸಲ್ಲುವುದನ್ನು ಇನ್ನೆಂದಿಗೂ ನೋಡಲಾರೆ ಎಂದು ಕೊಂಡಿದ್ದೆ. ಆದರೆ ಆ ಅನಿಸಿಕೆ ಇಂದು ಸುಳ್ಳಾಯಿತು. ನಂಬಿಕೆ ಸುಳ್ಳಾದಾಗಲೂ ಖುಷಿ ಪಡಬಹುದಾದ ಸುವರ್ಣ ಘಳಿಗೆಗಳು ನನ್ನಂತಹ ಅದೆಷ್ಟು ಜನರ ಜೀವನದಲ್ಲಿ ಬರಬಹುದು? ಪ್ರಶಸ್ತಿಗಳೆಲ್ಲ ಮೌಲ್ಯ ಕಳೆದುಕೊಳ್ಳುತ್ತಿರುವ ಕಾಲವಿದು. ಪ್ರಶಸ್ತಿ ಘೋಷಿಸುವವರು ಯೋಗ್ಯರನ್ನು ಗುರುತಿಸಿ, ನೀಡುವುದು ಭಗೀರಥ ಪ್ರಯತ್ನಕ್ಕಿಂತ ಒಂದು ಗುಂಜಿ ಹೆಚ್ಚೇ ಶ್ರಮದಾಯಕ. ಕನ್ನಡಪ್ರಭ ಹಾಗು ಬಿ.ಡಿ.ಗೋಯೆಂಕಾ ಪ್ರತಿಷ್ಠಾನ ಈ ನಿಟ್ಟಿನಲ್ಲಿ ಅಪ್ಪಟ ಚಿನ್ನವನ್ನು ಶೋಧಿಸಿದೆ. ಒಂದರ್ಥದಲ್ಲಿ ಈ ಪ್ರಶಸ್ತಿಗೆ ರಾಮಣ್ಣ ಮೌಲ್ಯ ತಂದಿದ್ದಾರೆ.

ನಾ ಕಚ್ಚುವೆ

field_vote: 
No votes yet
To prevent automated spam submissions leave this field empty.

ಇವತ್ತು ಪುತ್ತೂರಿನ ರವೀಂದ್ರ ಐತಾಳರ ಮನೆಗೆ ಹೋಗಿ ಬಂದೆವು. ಭೇಟಿ ಕೊಟ್ಟ ನಮಗೆ, ಜನರಲ್ಲಿ ಹಾವಿನ ಭಯ ಕಡಿಮೆ ಮಾಡಲು ಅವರು ಬಹಳ ಒಳ್ಳೆಯ ಕೆಲಸ ಮಾಡಿದ್ದಾರೆ ಅನಿಸಿತು: ಕೆಲ ಹಾವು ತಳಿಗಳ ಎರಡೆರಡು ಹಾವುಗಳನ್ನು ಸಾಕಿ ಬೆಳೆಸಿದ್ದಾರೆ. ಅದರಲ್ಲಿ ಹೊಸ ಸೇರ್ಪಡೆ ಈ ಪುಟ್ಟ ಮರಿ ಹಾವುಗಳು. ಯಾರೋ ಕಂಡ ಕೂಡಲೆ ಸಾಯಿಸದೆ ಹಿಡಿದು ತಂದುಕೊಟ್ಟದ್ದಂತೆ ಇದು, ನಾಳೆಯ ದಿನ ಕಾಡಿಗೆ ಬಿಡುವುದು ಎಂದಿದ್ದದ್ದು ಇವತ್ತು ಈ ಮಡಿಕೆಯಲ್ಲಿ ಇಟ್ಟಿದ್ದರು.

ಮಡಿಕೆ ತೆಗೆದು ನಮಗೆ ತೋರಿಸುವಾಗ ಆ ಹಾವಿನ ಮರಿಗೆ ಐತಾಳರು ಮಾಡುತ್ತಿರುವ ಕೆಲಸದ ಅರಿವು ಬಹಳ ಕಡಿಮೆ ಇದ್ದೀತು. ಇವನ್ನು ವಾಪಸ್ ಕಾಡಿಗೆ ಬಿಡುತ್ತಿರುವ ಐತಾಳರಿಗೆ ಮೇಲಿರುವ ಚಿತ್ರದಲ್ಲಿ ಕಚ್ಚಿದಂತೆ ಕಚ್ಚುವುದಿರಲಿ,  ಅದರ ಜೀವ ಉಳಿಸಿದವರಿಗೂ ಹೀಗೇ ಕಚ್ಚಬಹುದು ಕೂಡ. ಅದೇ ಅಲ್ಲವ ಪ್ರಕೃತಿ? :-)

ಬಣ್ಣದ ತಗಡಿನ ತುತ್ತೂರಿ.... :)

field_vote: 
Average: 4.7 (3 votes)
To prevent automated spam submissions leave this field empty.

ಜಿ.ಪಿ.ರಾಜರತ್ನಂ - ಶತಮಾನದ ಕವಿಯ ಪರಿಚಯ ಶಿಶು ಗೀತೆಗಳ ಮೂಲಕ...

ಪದ್ಯ ಶುರುವಾದ ಸಮಯ:

ಹಿಂದೂ ಅಮೆರಿಕನ್ ಫೌಂಡೇಶನ್!!!

field_vote: 
No votes yet
To prevent automated spam submissions leave this field empty.

ಬಹಳ ದಿನಗಳಿಂದಲೂ ಈ ಸಂಸ್ಥೆಯ, ಸ್ಥಾಪಕರ ಕುರಿತು ಸಂಪದದಲ್ಲಿ ಬರೆಯೋಣ ವೆಂದಿದ್ದೆ. ಆದರೆ ಯೋಗ (ಒಂದು ತರಹ ಲಗ್ನ) ಕೂಡಿ ಬಂದಿರಲಿಲ್ಲ ಇಲ್ಲಿಯವರೆಗೆ. ಇವತ್ತು ಬುದುವಾರ, ವೆಂಕಟೇಶನ ಪ್ರೀತಿಯದಿನ! ಹೇಗೋ ಮಾಡಿ ತನ್ನ ಮಹಿಮೆಯನ್ನೊಳಗೊಂಡ ಧರ್ಮದ ಬಗ್ಗೆ ಅವನೇ ಹೇಳಿ ಬರೆಸುತ್ತಿದ್ದಾನೆ ( ಅರ್ಥಾತ್ ನನಗೆ ಸಾಕಷ್ಟು ಕಾಲಾವಕಾಶ ಕೊಟ್ಟಿದ್ದಾನೆ-ಬರೆಯಲು).

ಪ್ರೀತಿ ಅಂದ್ರೆ ಇದೇನಾ...?

field_vote: 
No votes yet
To prevent automated spam submissions leave this field empty.

ಪ್ರೀತಿ-ಪ್ರೇಮ ಎಂದು ಆರಂಭಗೊಂಡು ೨ ವರ್ಷ ಕಳೆಯುವುದರೊಳಗೆ ವಿಚ್ಚೇದನ ಪಡೆಯುವ ಮಂದಿ ಇರುವ ಈ ಕಾಲದಲ್ಲಿ, ಪತಿಯ ನೆನಪಿಗೋಸ್ಕರ ೬೦ ವರ್ಷಗಳಿಂದ ಹಿಡಿದ ಕಾಯಕವನ್ನು ನಡೆಸಿಕೊಂಡು ಬರುತ್ತಿದ್ದಾರೆ ಎಂದರೆ ಬಹುಷಃ ನಂಬಲಿಕ್ಕಾಗದಿದ್ದರೂ ಇದು ಸತ್ಯ. ಯಾರಪ್ಪ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದೀರಾ...?

ಮತ್ತೆ ಬಂದರು ಪರಮೇಶ್ವರ ಭಟ್ಟರು

field_vote: 
No votes yet
To prevent automated spam submissions leave this field empty.

 ಶೃಂಗೇರಿ ವಿದ್ಯಾರಣ್ಯಪುರ ಪರಮೇಶ್ವರ ಭಟ್ಟರು (ಎಸ್.ವಿ. ಪರಮೇಶ್ವರ ಭಟ್ಟ) ನಮ್ಮ ಸಾಹಿತ್ಯ ಚರಿತ್ರೆಯಲ್ಲಿ ಕನ್ನಡದ ಕಾಳಿದಾಸ ಎಂದೇ ಹೆಸರಾದವರು.

ಕಾವ್ಯ, ವಚನ, ಮುಕ್ತಕ, ಅನುವಾದ, ವಿಮರ್ಶೆಗಳಲ್ಲಿ ಅವರ ಸೃಜನಶೀಲತೆ ಅನಾವರಣಗೊಂಡಿದೆ. ಆದರೆ, ಈ ಹೊತ್ತಿನ ಸಾಹಿತ್ಯ ಪ್ರಪಂಚದಲ್ಲಿ ಪರಮೇಶ್ವರ ಭಟ್ಟರು ಕಾಳಿದಾಸನ ಕಾವ್ಯಗಳಿಂದಲೇ ಹೆಚ್ಚು ನೆನಪಾಗುತ್ತಾರೆ.

ಅವರ ಇನ್ನಿತರೆ ಸಾಹಿತ್ಯ ಪ್ರಕಾರಗಳ ಕೃತಿಗಳು ಮರೆಯಾಗಿವೆ. ರಮ್ಯ ಪಂಥದ ಪ್ರಮುಖ ಕವಿಗಳಾದ ಕುವೆಂಪು, ಬೇಂದ್ರೆ, ಪು.ತಿ.ನ.ರಂಥವರೊಂದಿಗೆ ಗುರುತಿಸಬಹುದಾದ ಕಾವ್ಯ ಪ್ರತಿಭೆ ಭಟ್ಟರದ್ದು.

ಕಾಳಿದಾಸನ ಕಾವ್ಯದ ಅನುವಾದದಲ್ಲೇ ಅವರ ಸೃಜನಶೀಲತೆ ಅರಿವು ನಮಗಾಗುತ್ತದೆ. ಈ ಕವಿ ಕಲ್ಪನೆಯ ರಮ್ಯತೆ, ರೂಪಕ ಶಕ್ತಿಗಳನ್ನು ಅವರ ಕವನ ಸಂಕಲನ, ಮುಕ್ತಕಗಳು, ಆಧುನಿಕ ವಚನಗಳನ್ನು ಓದಿಯೇ ಸವಿಯಬೇಕು.

ಈ ಎಲ್ಲಾ ಕೃತಿಗಳಲ್ಲಿ ಭಟ್ಟರ ಪ್ರಯೋಗಶೀಲತೆ ಪ್ರಧಾನವಾಗಿ ಕಾಣುತ್ತದೆ. ಮುಖ್ಯವಾಗಿ ಭಟ್ಟರ ಕೃತಿಗಳಲ್ಲಿ ವಸ್ತುಗಳಿಗೆ ತಡಕಾಟವಿಲ್ಲ.

ಯುವ ಕವಿಗೆ ಬರೆದ ಪತ್ರಗಳು....

field_vote: 
No votes yet
To prevent automated spam submissions leave this field empty.

ಕಳೆದ ವಾರ ಡಿಸೆಂಬರ್ ೫ರಂದು ಸಂಜೆ ಮಲ್ಲೇಶ್ವರಂ ಗಾಂಧಿ ಸಾಹಿತ್ಯ ಭವನದಲ್ಲಿ "ಜಿ ಪಿ ರಾಜರತ್ನಂ ಜನ್ಮ ಶತಮಾನೋತ್ಸವ" ಸಮಾರಂಭವಿತ್ತು. ಕವಿ ಜಿ.ಎಸ್.ಶಿವರುದ್ರಪ್ಪನವರ ಅಧ್ಯಕ್ಷತೆಯಲ್ಲಿ, ಪ್ರೊ.ಅ.ರಾ.ಮಿತ್ರ ಅವರಿಂದ 'ರಾಜರತ್ನಂ-ಒಂದು ಮರು ನೆನಪು' ಉಪನ್ಯಾಸ, ಅತಿಥಿ - ಹೊ.ಶ್ರೀನಿವಾಸಯ್ಯನವರು.

ಪ್ರೊ.ಅ.ರಾ.ಮಿತ್ರ, ಜಿ.ಎಸ್.ಶಿವರುದ್ರಪ್ಪನವರು ರಾಜರತ್ನಂ ಅವರ ಸಾಧನೆಗಳನ್ನ ನೆನಪಿಸಿಕೊಟ್ಟು ಅವರ ಅನುಭವಗಳನ್ನ ಹಂಚಿಕೊಂಡರು. ಗಾಂಧಿ ಸಾಹಿತ್ಯ ಭವನದ ಪೂರ್ತಿ ಎಪ್ಪತ್ತು ಎಂಬತ್ತು ದಾಟಿದ ಹಿರಿಯರೇ ಇದ್ದರು. ಅಬ್ಬಾ....ಇಷ್ಟು ಇಳಿ ವಯಸ್ಸಿನಲ್ಲಿ ನಡೆದಾಡಲು,ಕುಳಿತುಕೊಳ್ಳಲು ಕಷ್ಟವಾದರೂ ಸಹ ಅವರವರ ಜೀವನ,ಅನುಭವಗಳ ಜೊತೆ ಬೆಸೆದುಕೊಂಡಿರುವ ರಾಜರತ್ನಂ ಅವರ ನೆನಪುಗಳನ್ನ ಇನ್ನಷ್ಟು ಹಸಿ ಮಾಡಿಕೊಳ್ಳಲು ಬಂದವರನ್ನೆಲ್ಲಾ ಕಂಡು ಬಹು ಅಚ್ಚರಿಯೆನಿಸಿತು...

ಉಪನ್ಯಾಸದ ಜೊತೆಗೆ ಪ್ರೊ.ಓ.ಎಲ್.ಎನ್.ಸ್ವಾಮಿಯವರು ಅನುವಾದಿಸಿರುವ ರೈನರ್ ಮಾರಿಯಾ ರಿಲ್ಕ್ - ಯುವ ಕವಿಗೆ ಬರೆದ ಪತ್ರಗಳು, ಸಂಧ್ಯಾ ದೇವಿಯವರ ಅಗ್ನಿ ದಿವ್ಯ, ಲಕ್ಕೂರು ಆನಂದರ ಬಟವಾಡೆಯಾಗದ ರಸೀತಿ ಪುಸ್ತಕಗಳ ಅನಾವರಣ ಕಾರ್ಯಕ್ರಮವೂ ಇತ್ತು. 

ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳು (ಕಿರು ಪರಿಚಯ)-

field_vote: 
No votes yet
To prevent automated spam submissions leave this field empty.

ಕಥಾಧಾರೆ-೪

-ಸದ್ಗುರು ಭಗವಾನ್ ಶ್ರೀಧರಸ್ವಾಮಿಗಳು (ಕಿರು ಪರಿಚಯ)-

ಅಪೂರ್ವ ಸಾಹಿತಿ-ಗಣಪತಿ ಮೊಳೆಯಾರ.

field_vote: 
No votes yet
To prevent automated spam submissions leave this field empty.

- ಜಯದೇವ ಪ್ರಸಾದ.

ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ

field_vote: 
Average: 4 (3 votes)
To prevent automated spam submissions leave this field empty.

vh

(ಮಂಗಳೂರು ಆಕಾಶವಾಣಿ 16/11/2008ರಂದು ಪ್ರಸಾರ ಮಾಡಿದ ಡಾ. ವೀರೇಂದ್ರ  ಹೆಗ್ಗಡೆಯವರ ಸಂದರ್ಶನದ ಮೊದಲಭಾಗದಲ್ಲಿ ಕೇಳಿಸಿಕೊಂಡ ಅಂಶಗಳು)

ವೀರೇಂದ್ರ ಹೆಗ್ಗಡೆಯವರು ಧರ್ಮಸ್ಥಳದ ಧರ್ಮಾಧಿಕಾರಿ. ಅವರು ಸದ್ದಿಲ್ಲದೆ ಮಾಡುತ್ತಿರುವ ಜನಸೇವೆ ಜನಾರ್ದನನ ಸೇವೆಗೆ ಅರ್ಥ ಮೂಡಿಸಿದೆ.

ವಚನಕಾರರು - ೨

field_vote: 
Average: 4 (13 votes)
To prevent automated spam submissions leave this field empty.

ಬಸವಣ್ಣಬಸವಣ್ಣನವರು (೧೧೩೦ - ೧೧೬೭): ಭಕ್ತಿ ಭಂಡಾರಿ ಬಸವಣ್ಣನವರು ಸಮಾಜ ಸುಧಾರಕರು. ಜನರಲ್ಲಿ ಮೇಲುಕೀಳೆಂಬ ಭಾವನೆಯನ್ನು ತೊಡೆದು ಹಾಕಲು ಯತ್ನಿಸಿ ಭಾವೈಕ್ಯತೆಯನ್ನು ಸಾಧಿಸಲು ಶ್ರಮಿಸಿದರು. ವೀರಶೈವ ಮತವನ್ನು ಬಲಪಡಿಸಿದರು.

ಗಹನವಾದ ವಿಷಯಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ಎಲ್ಲರಿಗೂ ಅರ್ಥವಾಗುವಂತೆ ತಿಳಿಸಿದರು. ಹನ್ನೆರಡನೆಯ ಶತಮಾನದಲ್ಲೇ ಸಾಮಾಜಿಕ ಪ್ರಜ್ಞೆಯನ್ನು ಜನರಲ್ಲಿ ಮೂಡಿಸುವಂಥಹ ಕಾರ್ಯವು ಕನ್ನಡಿಗರಾದ ಇವರಿಂದ ನಡೆಯಿತು.

ಬೆಂಗಳೂರಿನ ಹೊರವಲಯದಲ್ಲಿ ಮಾದರಿ ಜಲಪ್ರಯೋಗ

field_vote: 
No votes yet
To prevent automated spam submissions leave this field empty.

(ಬೆಂಗಳೂರಿನ ಸುತ್ತಲಿನ ಅರದೇಶಹಳ್ಳಿ, ಕಡತನಮಲೆ, ಅದ್ದೆ ಮತ್ತು ಬಿಸುವನಹಳ್ಳಿ ಗ್ರಾಮಗಳಲ್ಲಿ ಸದ್ದಿಲ್ಲದ ಜಲಕ್ರಾಂತಿಯೊಂದು ನಡೆಯುತ್ತಿದೆ. ಐದು ವರ್ಷಗಳ ಹಿಂದೆ ದೊಡ್ಡಬಳ್ಳಾಪುರದ ಜನಜಾಗೃತಿ ಸಂಸ್ಥೆ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಗಳ ಸಹಕಾರ ಪಡೆದು, ಈ ಭಾಗದ ಒಂದು ಕಿ.ಮೀ ಉದ್ದ, ೫ರಿಂದ ೩೦ ಮೀಟರ್ ಅಗಲ ಹಾಗೂ ೨-೩ ಮೀಟರ್ ಆಳವಿರುವ ಕೊರಕಲನ್ನು ಅಂತರ್ಜಲ ಇಂಗಿಸುವ ತಾಣವನ್ನಾಗಿ ಆರಿಸಿಕೊಳ್ಳಲಾಯಿತು. ಏನೂ ಕಷ್ಟವಿಲ್ಲದೇ ರೂ.೨ ಲಕ್ಷ ದೇಣಿಗೆ ಸಂಗ್ರಹವಾಯಿತು. ಸರ್ಕಾರದ ನೆರವಿಗಾಗಿ ಕಾಯದೇ ರೈತರು, ನೀರನ್ನು ನಿಲ್ಲಿಸಲು ಮಣ್ಣಿನ ಐದು ಚೆಕ್ ಡ್ಯಾಂಗಳನ್ನು ಕಟ್ಟಲು ಸಿದ್ಧರಾದರು. ನಂತರ ಏನಾಯಿತು? ಜಲ ಮರುಪೂರಣ ಯಶಸ್ವಿಯಾಯಿತೆ?)

ಬೆಂಗಳೂರಿನ ಹೊರವಲಯದ ಅರದೇಶಹಳ್ಳಿ, ಕಡತನಮಲೆ, ಅದೆ ಮತ್ತು ಬಿಸುವನಹಳ್ಳಿ ಗ್ರಾಮದಲ್ಲಿ ಸದ್ದಿಲ್ಲದ ಜಲಕ್ರಾಂತಿಯೊಂದು ನಡೆಯುತ್ತಿದೆ. ಸುತ್ತಲ ಊರುಗಳ ಹಲವಾರು ರೈತರಿಗೆ ಬೆಂಗಳೂರು-ದೊಡ್ಡಬಳ್ಳಾಪುರ ರಸ್ತೆಯ ಅಂಚಿನ ಒಂದು ಸಣ್ಣ ಮಣ್ಣಿನ ಚೆಕ್ ಡ್ಯಾಂ (ಅಣೆಕಟ್ಟು) ಯಾತ್ರಾ ಸ್ಥಳದಂತಾಗಿಬಿಟ್ಟಿದೆ.

ವಚನಕಾರರು - ೧

field_vote: 
Average: 4.3 (7 votes)
To prevent automated spam submissions leave this field empty.

ಅಕ್ಕಮಹಾದೇವಿಅಕ್ಕಮಹಾದೇವಿ (೧೧೩೦ - ೧೧೬೦): ಸಮಾಜಸಧಾರಣೆಯಲ್ಲಿ ಮಹಿಳೆಯ ಪಾತ್ರವು ಹಿರಿದಾದುದು. ಪುರಷಪ್ರಧಾನವಾದ ಸಮಾಜದಲ್ಲಿ ಮಹಿಳೆಯರು ಪುರುಷರಿಗೆ ಸಮಾನವಾಗಿ ನಿಲ್ಲಬಲ್ಲರೆಂಬ ಪ್ರಜ್ಞೆಯನ್ನು ಸುಮಾರು ಎಂಟುನೂರು ವರ್ಷಗಳ ಹಿಂದೆಯೇ ಮೂಡಿಸಿದ ಕರ್ನಾಟಕದ ಪ್ರಪ್ರಥಮ ಮಹಿಳೆಯೆಂದರೆ ಅಕ್ಕಮಹಾದೇವಿ.

ಹನ್ನೆರಡನೆಯ ಶತಮಾನದಲ್ಲೇ ಇಂತಹ ಮಹಿಳಾ ಜಾಗೃತಿಯನ್ನು ಮೂಡಿಸಿದರು. ಸಂಸಾರವನ್ನು ತ್ಯಜಿಸಿ, ಚೆನ್ನಮಲ್ಲಿಕಾರ್ಜುನ ದೇವರೇ ತನ್ನ ಪತಿಯೆಂಬುದಾಗಿ ನಂಬಿದರು. ತಮ್ಮ ವೈರಾಗ್ಯದ ಮೂಲಕವೇ ಪುರುಷರೊಡನೆ ಹೋರಾಡಿ ಸಮಾಜೋದ್ಧಾರದ ಕಾರ್ಯದಲ್ಲಿ ನೆರವಾದರು ಈ ಶಿವಶರಣೆ. ತಮ್ಮ ಭಾವನೆಗಳನ್ನು ವಚನಗಳ ಮೂಲಕ ತಿಳಿಗನ್ನಡದಲ್ಲಿ ತಿಳಿಸಿದರು. ಲಿಂಗಭೇದವಿಲ್ಲದೆ, ಜಾತಿಭೇದವಿಲ್ಲದೆ ಪ್ರತಿಯೊಬ್ಬರೂ ಲೋಕವಿಚಾರಗಳನ್ನು ಅರಿಯುವಂತೆ ಮಾಡಿದರು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ‘ಸ್ವರಾಧಿರಾಜ್’ ಭೀಮಸೇನರಿಗೆ ‘ಭಾರತರತ್ನ’ ಗೌರವ.

field_vote: 
No votes yet
To prevent automated spam submissions leave this field empty.

೧೯೩೩, ಆಗಸ್ಟ್ ೧೫ ರಿಂದ ೨೦ ಹನ್ನೆರಡು ವರ್ಷದ ಬಾಲಕ ಗದುಗಿನ ಹೊಂಬಳದಿಂದ ಮನೆ ಬಿಟ್ಟು ಓಡಿಹೋದ.

ಮೈಸೂರಿನಲ್ಲಿ ಎಂ.ಎ. ಪದವಿ ಕಲೀಲಿಕ್ಕಿದ್ದ ತಂದೆ ಗುರುರಾಜರಿಗೆ ತಾರು ಹೋಯಿತು. ಅವರ ಸಹೋದರ ಗೋವಿಂದ ಈ ಟೆಲಿಗ್ರಾಂ ಕೊಟ್ಟಿದ್ದರು. ಇದೆ ಟೆಲಿಗ್ರಾಂ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಜೇಕಬ್ ಅವರಿಗೆ ತೋರಿಸಿ ರಜೆ ಪಡೆದು ಊರಿಗೆ ಓಡಿದರು ತಂದೆ.

ಇವರನ್ನು ನೋಡುತ್ತಲೇ ದು:ಖದ ಕಟ್ಟೆ ಒಡೆಯಿತು ತಾಯಿಗೆ. ‘ಊಟ, ತಿನಿಸಿನ ಮ್ಯಾಲೆ ಸಿಟ್ಟು ಮಾಡಿಕೊಂಡು, ಅನ್ನಕ್ಕ ತುಪ್ಪ ಬಡಿಸಲಿಲ್ಲ ಅನ್ನೋದನ್ನ ನೆವಾ ಮಾಡಿಕೊಂಡು ಊರು ಬಿಟ್ಟು ಹೋಗ್ಯಾನ’ ಗಳಗಳನೇ ಅಳುತ್ತ ತಾಯಿ ಅಲವತ್ತುಕೊಂಡರು.

ಒಳ್ಳೆಯ ಪೌಷ್ಠಿಕ ಆಹಾರದ ರೂಢಿಯಿದ್ದ ಹುಡುಗನಿಗೆ ಮೊದಲ ಪಲಾಯನ ಬಹಳ ತೊಂದರೆದಾಯಕ ಆಗಿತ್ತು. ಮುಂಬೈ ತಲುಪಿದಾಗ ಅವನ ಕಿಸೆಯಲ್ಲಿ ಒಂದು ದುಡ್ಡು ಇರಲಿಲ್ಲ! ಕನ್ನಡ ಭಾಷೆ ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ. ಮುಂಬೈ ಅಂತಹ ಮಹಾನಗರಿಯಲ್ಲಿ ರಸ್ತೆಯ ಬದಿಗೆ ನಿಂತು ಅವನ ಹಾಡು ಕೇಳುವಷ್ಟು ಪುರುಸೊತ್ತು ಅಂದು ಕೂಡ ಯಾರಿಗೂ ಇರಲಿಲ್ಲ.

ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ ಮಹಾನ್ ಹೋರಾಟಗಾರ.

field_vote: 
No votes yet
To prevent automated spam submissions leave this field empty.

ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್ ಗೆ ಕುಂಬ್ಳೆ ವಿದಾಯ ಹೇಳಿದ್ದಾರೆ. ಇಂದು ಅವರು ತಮ್ಮ ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಆಡಿದರು.

ಅನಿಲ್ ಕುಂಬ್ಳೆ (ಜನನ: ಅಕ್ಟೋಬರ್ ೧೭, ೧೯೭೦)

ಕುಂಬ್ಳೆ ಲೆಗ್ ಸ್ಪಿನ್ನರ್. ಇವರ ಗೂಗ್ಲಿ ಕ್ರಿಕೆಟ್ ಜಗತ್ತಿನಲ್ಲಿ ಬಹಳ ಪ್ರಸಿದ್ಧ.

ಇವರು ಮೊದಲು ಮಧ್ಯ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದ್ದು. ಇದು ಅವರಿಗೆ ಕೊಡುಗೆ ಎಂಬಂತೆ ವೇಗವಾಗಿ ಬೌಲ್ ಮಾಡಲು ಸಹಾಯಕವಾಗಿದೆ.

ಸಾಧಾರಣವಾಗಿ ಸ್ಪಿನ್ ಬೌಲರ್‌ಗಳು ಬಾಲ್ ಹಾಕುವ ವೇಗಕ್ಕಿಂತ ಹೆಚ್ಚು ವೇಗದಲ್ಲಿ ಬೌಲ್ ಮಾಡುವ ಅನಿಲ್ ಕುಂಬ್ಳೆ, ೬೦೦ಕ್ಕೂ ಹೆಚ್ಚು ಟೆಸ್ಟ್ ವಿಕೆಟ್‌ಗಳನ್ನು ಪಡೆದಿದ್ದಾರೆ.

ಇವರು ಒಂದು ದಿನದ ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದು ಎಪ್ರಿಲ್ ೨೫, ೧೯೯೦ ರಂದು, ಶ್ರೀಲಂಕಾ ಮೇಲಿನ ಪಂದ್ಯದಲ್ಲಿ.

ಅದೇ ವರ್ಷ ಇಂಗ್ಲೆಂಡ್ ವಿರುದ್ಧ ಮ್ಯಾಂಚೆಸ್ಟರ್‌ನಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟರು.

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೩

field_vote: 
No votes yet
To prevent automated spam submissions leave this field empty.

ಮುತ್ತುಸ್ವಾಮಿ ದೀಕ್ಷಿತರುಶ್ರೀ ಮುತ್ತುಸ್ವಾಮಿ ದೀಕ್ಷಿತರು (೧೭೭೫ - ೧೮೩೫): ತಿರುವಾರೂರಿನಲ್ಲೇ ಜನಿಸಿದ ಶ್ರೀ ಮುತ್ತುಸ್ವಾಮಿ ದೀಕ್ಷಿತರು ಸಂಗೀತ ತ್ರಿಮೂರ್ತಿಗಳಲ್ಲಿ ಕಿರಿಯರು. ಸಂಗೀತ ವಿದ್ವಾಂಸರಾದ, ವಾಗ್ಗೇಯಕಾರರಾದ ರಾಮಸ್ವಾಮಿ ದೀಕ್ಷಿತರ ಹಾಗೂ ಭಾಗಿರಥಮ್ಮನವರ ಪುತ್ರರಾಗಿ ಜನಿಸಿದರು. ತಂದೆಯಿಂದಲೇ ಸಂಗೀತವನ್ನು ಕಲಿತರು. ವೈಣಿಕರಾಗಿ, ಗಾಯಕರಾಗಿ, ಸಂಸ್ಕೃತ, ತಂತ್ರಶಾಸ್ತ್ರ, ಮಂತ್ರಶಾಸ್ತ್ರ, ಜ್ಯೋತಿಶಾಸ್ತ್ರ, ಅಲಂಕಾರ ಶಾಸ್ತ್ರಗಳಲ್ಲಿ ನಿಷ್ಣಾತರಾಗಿದ್ದರು. ಚಿದಂಬರನಾಥ ಯೋಗಿಗಳಿಂದ ಶ್ರೀವಿದ್ಯಾಮಂತ್ರೋಪದೇಶವನ್ನು ಪಡೆದರು. ಗುರುಗಳೊಡನೆ ಕಾಶಿಗೆ ತೆರಳಿ ಅಲ್ಲಿ ಐದು ವರ್ಷಗಳ ಕಾಲ ಮಂತ್ರಜಪವನ್ನು ನಡೆಸಿದರು. ಗಂಗಾನದಿಯಲ್ಲಿ ನಿಂತು ಜಪವನ್ನು ಮಾಡಿ ಮುಗಿಸಿದಾಗ ಅವರ ಕೈಗೆ ವೀಣೆಯು ತಾನಾಗಿಯೇ ಬಂದಿತ್ತು. ಕಾಶಿಯಲ್ಲಿದ್ದಾಗ ದೀಕ್ಷಿತರು ಕರ್ನಾಟಕ ಸಂಗೀತದ ಜೊತೆ ಹಿಂದೂಸ್ಥಾನಿ ಸಂಗೀತವನ್ನು ಅಭ್ಯಾಸ ಮಾಡಿದರು. ಚಿಕ್ಕಂದಿನಲ್ಲೇ ಇವರಿಗೆ ಪಾಶ್ಚಾತ್ಯ ಸಂಗೀತದ ಪರಿಚಯವಾಯಿತು. ತಂದೆಗೆ ಆಪ್ತಮಿತ್ರರಾದ ಚರ್ಚಿನ ಪಾದರಿಗಳ ಸಹವಾಸದಲ್ಲಿ ಪಾಶ್ಚಾತ್ಯ ಸಂಗೀತದ ರೂಢಮೂಲಗಳನ್ನು ಅರಿತುಕೊಂಡರು. ಹೀಗೆ ಮೂರು ಮುಖ್ಯವಾದ ಶಾಸ್ತ್ರೀಯ ಸಂಗೀತ ಪದ್ಧತಿಗಳ ಪರಿಚಯವಾಯಿತು.

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೨

field_vote: 
No votes yet
To prevent automated spam submissions leave this field empty.

ತ್ಯಾಗರಾಜರುಶ್ರೀ ತ್ಯಾಗರಾಜರು (೧೭೬೭ - ೧೮೪೭): ಕರ್ನಾಟಕ ಸಂಗೀತ ಚರಿತ್ರೆಯಲ್ಲಿ ವಾಗ್ಗೇಯಕಾರ ಸಾರ್ವಭೌಮ ಎನಿಸಿಕೊಂಡ ತ್ಯಾಗರಾಜರು ಸಂಗೀತ ತ್ರಿಮೂರ್ತಿಗಳಲ್ಲಿ ಒಬ್ಬರು. ತಿರುವಾರೂರಿನಲ್ಲಿ ರಾಮಬ್ರಹ್ಮ ಮತ್ತು ಸೀತಮ್ಮ ದಂಪತಿಗಳಿಗೆ ಜನಿಸಿದ ಇವರು ಬಾಲ್ಯದಲ್ಲಿಯೇ ಸಂಗೀತ, ಸಾಹಿತ್ಯ, ವೇದ, ಪುರಾಣ, ಉಪನಿಷತ್ತು, ಅಲಂಕಾರ ಶಾಸ್ತ್ರಗಳ ಅಧ್ಯಯನ ಮಾಡಿದ್ದರು. ತಮ್ಮ ಐದನೇ ವಯಸ್ಸಿನಲ್ಲೇ ವಾಲ್ಮೀಕಿ ರಾಮಾಯಣದ ಇಪ್ಪತ್ತನಾಲ್ಕು ಸಾವಿರ ಶ್ಲೋಕಗಳನ್ನು ಕಂಠಪಾಠ ಮಾಡಿ ಶ್ರೀ ತ್ಯಾಗರಾಜರು ಸುಮಧುರವಾಗಿ ಹಾಡುತ್ತಿದ್ದರು. ತಂದೆ ರಾಮಬ್ರಹ್ಮರ ರಾಮಾಯಣದ ವ್ಯಾಖ್ಯಾನಕ್ಕೆ ಶ್ಲೋಕಗಳನ್ನು ಹಾಡುತ್ತಿದ್ದರು.

ಸೊಂಠಿ ವೆಂಕಟರಮಣ ಭಾಗವತರ ಶಿಷ್ಯರಾಗಿ, ತಮ್ಮ ಎಂಟನೇ ವಯಸ್ಸಿನಲ್ಲಿ ಶಿಷ್ಯವೃತ್ತಿಯನ್ನು ಆರಂಭಿಸಿ, ಎರಡು ವರ್ಷಗಳ ಕಾಲಾವಧಿಯಲ್ಲಿ ಸಂಗೀತದಲ್ಲಿ ಪಾರಂಗತರಾದರು. ಗುರುಗಳು ಹೆಮ್ಮೆಯಿಂದ "ದೊರಕುನಾ ಇಟುವಂಟಿ ಶಿಷ್ಯುಡು" ಅಂದರೆ "ಇಂತಹ ಶಿಷ್ಯನು ದೊರಕುವನೇ" ಎಂದು ಸಭಿಕರ ಮುಂದೆ ತ್ಯಾಗರಾಜರನ್ನು ಹೊಗಳಿದರು.

ಕರ್ನಾಟಕ ಸಂಗೀತದ ತ್ರಿಮೂರ್ತಿಗಳು - ೧

field_vote: 
Average: 5 (1 vote)
To prevent automated spam submissions leave this field empty.

ಶ್ಯಾಮಶಾಸ್ತ್ರಿಗಳು
ಶ್ಯಾಮಶಾಸ್ತ್ರಿಗಳು (ಕ್ರಿ.ಶ. ೧೭೬೨ - ೧೮೨೭): ಸಂಗೀತ ತ್ರಿಮೂರ್ತಿಗಳಲ್ಲಿ ಹಿರಿಯವರಾದ ಶ್ಯಾಮಶಾಸ್ತ್ರಿಗಳು ಕಾಮಾಕ್ಷಿದೇವಿಯ ಉಪಾಸನೆಯನ್ನು ಮಾಡಿ ದೇವಿಯನ್ನು ಒಲಿಸಿಕೊಂಡು, ಅವಳೊಡನೆ ಮಾತನಾಡಿದ್ದರು. ಬಂಗಾರು ಕಾಮಾಕ್ಷಿಯನ್ನು ಎಡೆಬಿಡದೆ ಆರಾಧಿಸಿದ್ದರು. ಅವಳನ್ನು ತಮ್ಮ ಕೃತಿಗಳ ಮೂಲಕ ನಾನಾ ವಿಧದಲ್ಲಿ ಬೇಡಿದ್ದರು. ಅದರಲ್ಲೂ ದೇವಿಯನ್ನು ತಾಯಿಯೆಂದೇ ಸಂಭೋದಿಸಿ ಆನಂದ ಪಟ್ಟಿದ್ದರು.

ಶ್ಯಾಮಶಾಸ್ತ್ರಿಗಳು ತಿರುವಾರೂರಿನಲ್ಲಿ ಜನಿಸಿದರು. ತಂದೆ ವಿಶ್ವನಾಥ ಅಯ್ಯರ್‍. ವೆಂಕಟಸುಬ್ರಹ್ಮಣ್ಯನೆಂದು ಮಗುವಿಗೆ ನಾಮಕರಣ ಮಾಡಿದರು. ಮುದ್ದಿನಿಂದ ಶ್ಯಾಮಕೃಷ್ಣನೆಂದು ಮಗುವನ್ನು ಕರೆಯುತ್ತಿದ್ದರು. ಮುಂದೆ ಶ್ಯಾಮಶಾಸ್ತ್ರಿಗಳೆಂಬ ಹೆಸರೇ ಜನಜನಿತವಾಗಿ ಉಳಿಯಿತು. ಶ್ಯಾಮಶಾಸ್ತ್ರಿಗಳು ವೇದಾಧ್ಯಯನ, ವ್ಯಾಕರಣ, ಛಂದಸ್ಸು, ಸಾಹಿತ್ಯ ಮುಂತಾದ ಶಾಸ್ತ್ರಗಳಲ್ಲಿ ಪಾರಂಗತರು. ಸಂಗೀತವನ್ನು ತಮ್ಮ ಸೋದರಮಾವನಿಂದ ಕಲಿತರು.

ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್‌ ಅನ್ನೋದಕ್ಕೆ ಅಡ್ಡಿಯಿಲ್ಲ

field_vote: 
No votes yet
To prevent automated spam submissions leave this field empty.

ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್‌ ಅಲ್ಫೋನ್ಸಾ ಬಗ್ಗೆ ಅಕ್ಟೋಬರ್‍ ೧೨ರಂದು (ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್ umeshkumar ವ್ಯಕ್ತಿ ವಿಷಯ, ಪರಿಚಯ, ಸಾಧನೆ 29 Oct 12 2008 - 11:00pm ) ಬರೆದ ಲೇಖನಕ್ಕೆ ೨೫ಕ್ಕೂ ಹೆಚ್ಚು ಪ್ರತಿಕ್ರಿಯೆಗಳು ಬಂದಿವೆ. ಆ ಬರೆಹ ಅವಸರದ್ದಾಗಿತ್ತು. ನಿಮಗೆಲ್ಲಾ ಗೊತ್ತೇ ಇರುವಂತೆ ಪತ್ರಿಕಾ ಬರೆಹ ಅವಸರದ ಸಾಹಿತ್ಯ. ಅದರಲ್ಲೂ ಟಿ.ವಿ.

ಜನ ಬಿಸಾಕುತ್ತಾರೆ ಕಲ್ಲು,ನಾವದನ್ನು ಮಾಡಿಕೊಳ್ಳುತ್ತೇವೆ ಮೈಲಿಗಲ್ಲು!

field_vote: 
No votes yet
To prevent automated spam submissions leave this field empty.

ಕಲಾಂ ಸರ್.. ಇಂದು ‘ನಿಮಗೆ ಹಜಾರ್ ಸಲಾಂ..ಲಾಖ್ ಮುಬಾರಕ್ ’.

field_vote: 
Average: 2 (1 vote)
To prevent automated spam submissions leave this field empty.

ನಮ್ಮ ದೇಶ ಕಂಡ ಅಪ್ರತಿಮ ಪ್ರತಿಭೆಯ ಭಾರತ ರತ್ನ, ವಿಜ್ನಾನಿ-ರಾಷ್ಟ್ರಪತಿ ಡಾ.ಅವುಲ್ ಫಕೀರ್ ಜೈನುಲ್ಲಾಬ್ದೀನ್ ಅಬ್ದುಲ್ ಕಲಾಂ (ಡಾ.ಎ.ಪಿ.ಜೆ.ಅಬ್ದುಲ್ ಕಲಾಂ) ಅವರ ಹುಟ್ಟಿದ ಹಬ್ಬವಿಂದು. ನಮ್ಮ ಪತ್ರಿಕೆಗಳು ಮರೆತೇ ಹೋದ ಸುದ್ದಿ ಇದು. ಕಾರಣ ಈಗ ಅವರು ಮಾಜಿ. ಹಾಗಾಗಿ ನಮ್ಮ ಮಾಧ್ಯಮಗಳಿಗೆ ಇದು ‘ಅಪತ್ರಿಕಾವಾರ್ತೆ’!

ಆದರೆ ಲಕ್ಷಾಂತರ ಸಂಪದಿಗರು, ಸಂಪದ ಓದುಗರ ಪರವಾಗಿ ಆತ್ಮೀಯ ಸು.ಶ್ರೀ. ಸವಿತಾ ಎಸ್.ಆರ್. ಅವರು ನಿನ್ನೆಯೇ ಶುಭ ಕೋರಿದ್ದಾರೆ. ಆ ಪ್ರಕ್ರಿಯೆಯ ಮುಂದುವರೆದ ಭಾಗವಾಗಿ ಈ ಲೇಖನ. ಅವರಿಗೊಂದು ನುಡಿ ಶುಭಾಶಯ.

ದೇಶದ ವೈಜ್ನಾನಿಕ ಸಂಶೋಧನಾ ಕೇಂದ್ರವೊಂದರಲ್ಲಿ ರಕ್ಷಣೆಗೆ ಸಂಬಂಧಿಸಿದ ಮಹತ್ವಾಕಾಂಕ್ಷಿ ಯೋಜನೆಯೊಂದನ್ನು ಕೈಗೆತ್ತಿಕೊಳ್ಳಲಾಗಿತ್ತು. ಯೋಜನೆಯನ್ನು ಅತಿ ಶೀಘ್ಹ್ರದಲ್ಲಿ ಪೂರ್ಣಗೊಳಿಸಬೇಕಾದ ಅನಿವಾರ್ಯತೆ ತಲೆದೋರಿತ್ತು. ಮೇಲಾಗಿ ಪೂರ್ಣಗೊಳಿಸಲು ಕೇಂದ್ರ ನೀಡಿದ ಅವಧಿ ಸಹ ಅತಿ ಕಡಿಮೆ ಇತ್ತು.

ಅಬ್ದುಲ್ ಕಲಾಮರಿಗೆ ಜನ್ಮ ದಿನದ ಶುಭಾಶಯಗಳು

field_vote: 
Average: 3 (3 votes)
To prevent automated spam submissions leave this field empty.

ವಯಸ್ಸು ಯಾವುದೇ ಇರಲಿ..ಕನಸುಗಳು ಸದಾ ನಿಮ್ಮೊಂದಿಗಿರಲಿ..ಆ ಕನಸುಗಳು ಎಂದೆಂದಿಗೂ ದೊಡ್ಡದಾಗಿರಲಿ... ಅಂತ ಹೇಳಿದ ನಮ್ಮ ಅಬ್ದುಲ್ ಕಲಾಂರ ಜನ್ಮ ದಿನ ಅಕ್ಟೋಬರ್ 15ರಂದು.

ಸಂತ ಪದವಿಗೇರಿದ ಪ್ರಥಮ ಭಾರತೀಯ ಸಿಸ್ಟರ್

field_vote: 
No votes yet
To prevent automated spam submissions leave this field empty.

ಭಾರತೀಯ ಕ್ರಿಶ್ಚಿಯನ್ನರ ಪಾಲಿಗೆ ಇಂದು ಸಾಮಾನ್ಯ ಭಾನುವಾರವಲ್ಲ. ಶುಭ ದಿನ ಎಂದರೆ ತಪ್ಪಲ್ಲ. ವ್ಯಾಟಿಕನ್‌ ಸಿಟಿಯಲ್ಲಿ ಎರಡನೇ ಭಾರತೀಯರೊಬ್ಬರಿಗೆ ಸಂತ ಪದವಿ ಪ್ರಾಪ್ತವಾಗಿದೆ. ಈ ಸಂತಸ ಕ್ರಿಶ್ಚಿಯನ್ನರದ್ದು. ಈ ಸಂತಸಕ್ಕೆ ಇನ್ನೊಂದು ಕಾರಣವೂ ಇದೆ. ಇದೇ ಮೊದಲ ಬಾರಿಗೆ ಸಿಸ್ಟರ್ ಒಬ್ಬರಿಗೆ ಸಂತಪದವಿ ಪ್ರಾಪ್ತವಾಗಿರುವುದು.

ಸಿಸ್ಟರ್ ಅಲ್ಫೋನ್ಸಾ ಈ ಮೇರು ಪದವಿಯನ್ನು ಮುಡಿಗೇರಿಸಿಕೊಂಡವರು. ಕೇರಳದ ಕೊಟ್ಟಾಯಂನವರಾದ ಸಿಸ್ಟರ್ ಅಲ್ಫೋನ್ಸಾ ಪವಾಡಗಳ ಬಗ್ಗೆ ಭರನಂಗನಮ್ ಸಾಕಷ್ಟು ಐತಿಹ್ಯಗಳಿವೆ. ಇತ್ತೀಚಿನ ವರ್ಷಗಳಲ್ಲಿ ಭರನಂಗನಮ್‌ನ ಚರ್ಚ್ನನಲ್ಲಿ ಪ್ರಾರ್ಥನೆ ನಡೆಸಿ ರೋಗ ವಾಸಿ ಮಾಡಿಕೊಂಡವರಂತೂ ಸಿಸ್ಟರ್ ಅಲ್ಫೋನ್ಸಾ ಪವಾಡವನ್ನು ಕೊಂಡಾಡುವವರೇ...!

ಅನ್ನಕುಟ್ಟಿ ಸಿಸ್ಟರ್ ಆದುದು ಹೀಗೆ

ವ್ಯಾಟಿಕನ್ ಕ್ಯಾಥೋಲಿಕ್ ಚರ್ಚ್‌‌ನಿಂದ ಸಂತ ಪದವಿ ಪಡೆಯೋದು ಸುಲಭದ ಮಾತಲ್ಲ. ಭಾರತದ ಕ್ರಿಶ್ಚಿಯನ್ನರ ಪಾಲಿಗೆ ಇದು ಎರಡನೇ ಸಂತ ಪದವಿ. ಇಂದು ಸಂತಪದವಿಗೇರಿದ ಸಿಸ್ಟರ್‍ ಅಲ್ಫೋನ್ಸಾ ಹುಟ್ಟಿದ್ದು ೧೯೧೦ರ ಆಗಸ್ಟ್ ೧೯ರಂದು. ಸ್ವಂತ ಊರು ಕೇರಳದ ಕೊಟ್ಟಾಯಂ ಜಿಲ್ಲೆಯ ಕುಡುಮಲೂರು. ತಂದೆ ಜೋಸೆಫ್. ತಾಯಿ ಮೇರಿ ಮುಟ್ಟತ್‌ಪಾಡತ್. ಬಾಲ್ಯದ ಹೆಸರು ಅನ್ನಾ. ಮನೆಮಂದಿಗೆಲ್ಲ ಪ್ರೀತಿಯ ಅನ್ನಕುಟ್ಟಿ. ಈ ಅನ್ನಕುಟ್ಟಿ ಹುಟ್ಟಿದ ೩ ತಿಂಗಳ ಅಂತರದಲ್ಲೇ ತಾಯಿ ಮೇರಿ ಮುಟ್ಟತ್‌ಪಾಡತ್ ಕೊನೆಯುಸಿರೆಳೆದರು.

ಗುರುದತ್ ಎಂಬ ದುರಂತ ನಾಯಕ

field_vote: 
No votes yet
To prevent automated spam submissions leave this field empty.

ಆತ ದುರಂತ ನಾಯಕ. ಆತನ ಜೀವನದಲ್ಲಷ್ಟೇ ಅಲ್ಲ, ನಟಿಸಿದ ಹಾಗೂ ನಿರ್ಮಿಸಿದ ಚಿತ್ರಗಳುದ್ದಕ್ಕೂ ಈ ದುರಂತ ಪ್ರತಿಫಲಿಸಿದೆ. ಕನ್ನಡಿಗನಾಗಿ ಹುಟ್ಟಿ, ಬಂಗಾಳಿಯಾಗಿ ಬೆಳೆದು, ನಟ-ನಿರ್ದೇಶಕನಾಗಿ ಅಮರನಾದ ಗುರುದತ್ ಭಾರತೀಯ ಚಿತ್ರರಂಗ ಕಂಡ ವಿಶಿಷ್ಟ ಪ್ರತಿಭೆ. ನಿದ್ದೆ ಗುಳಿಗೆ ಸೇವಿಸಿ ಆತ ಆತ್ಮಹತ್ಯೆ ಮಾಡಿಕೊಂಡು ಇಂದಿಗೆ ೪೪ ವರ್ಷಗಳು. ಹಿಂದಿ ಚಿತ್ರರಂಗ ಎಂದೂ ಮರೆಯದ ಈ ಮಹಾನ್ ಪ್ರತಿಭೆ ಇವತ್ತಿಗೂ ದಂತಕಥೆ.

ಗುರುದತ್ ಹುಟ್ಟಿದ್ದು ಕನ್ನಡಿಗನಾಗಿ. ಶಿವಶಂಕರರಾವ್ ಪಡುಕೋಣೆ ಹಾಗೂ ವಸಂತಿ ದಂಪತಿಗಳ ಮಗನಾಗಿ ೧೯೨೫ರ ಜುಲೈ ೯ ರಂದು ಬೆಂಗಳೂರಿನಲ್ಲಿ ಜನಿಸಿದಾಗ ಆತನ ತಾಯಿಗೆ ಕೇವಲ ೧೬ ವರ್ಷದ ಪ್ರಾಯ. ಗುರುದತ್‌ನ ಮೊದಲ ಹೆಸರು ವಸಂತ ಕುಮಾರ್. ಅಪ್ಪ ಶಿವಶಂಕರ್ ದಕ್ಷಿಣ ಕನ್ನಡ ಜಿಲ್ಲೆಯ ಪಣಂಬೂರಿನಲ್ಲಿ ನೆಲೆಸಿದ್ದವರು. ಬ್ಯಾಂಕ್ ನೌಕರಿಗೆ ಹೋಗುವ ಮೊದಲು ಇಲ್ಲಿಯೇ ಶಿಕ್ಷಕರಾಗಿದ್ದ ಶಿವಶಂಕರರಾವ್ ಅವರ ಆರ್ಥಿಕ ಪರಿಸ್ಥಿತಿ ಚೆನ್ನಾಗಿರಲಿಲ್ಲ. ತಮ್ಮಂದಿರಾದ ಆತ್ಮಾರಾಮ್, ದೇವಿದಾಸ್ ಹಾಗೂ ತಂಗಿ ಲಲಿತಾ ಅವರೊಂದಿಗೆ ಕಷ್ಟಕರ ಬಾಲ್ಯ ಕಳೆದ ಗುರುದತ್, ಕ್ರಮೇಣ ಆಸಕ್ತಿ ತೋರಿದ್ದು ಸಿನಿಮಾ ಪೋಸ್ಟರ್‌ಗಳ ಚಿತ್ರಗಳನ್ನು ಬಿಡಿಸುವತ್ತ.

ಶಬ್ದಗಳ ಮೋಡಿಗಾರ- ಜಯಂತ ಕಾಯ್ಕಿಣಿ

field_vote: 
Average: 5 (1 vote)
To prevent automated spam submissions leave this field empty.

"ಅನಿಸುತಿದೆ ಯಾಕೋ ಇಂದು ನೀನೇನೆ ನನ್ನವಳೆಂದು", "ನಿನ್ನಿಂದಲೇ ನಿನ್ನಿಂದಲೇ ಕನಸೊಂದು ಶುರುವಾಗಿದೆ", "ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ", "ಮಧುವನ ಕರೆದರೆ ತನು ಮನ ಸೆಳೆದರೆ", "ನಿಂತಲ್ಲೆ ಹಾಳಾದೆ ನಿನ್ನಿಂದಲೇ", ಎನ್ನುತ್ತಾ ೨೦೦೬ರ ವರುಷದಿಂದೀಚಿಗೆ, ಕನ್ನಡ ಚಿತ್ರ ಪ್ರೇಮಿಗಳ ಹೃದಯಕ್ಕೆ ಲಗ್ಗೆ ಇಟ್ಟು, ಅವರನ್ನು ತನ್ನ ಅಕ್ಷರಗಳ ಮೋಹಕ ಬಲೆಯಲ್ಲಿ ಸಿಲುಕಿಸಿದ, ನನ್ನ ಮೆಚ್ಚಿನ ಬರಹಗಾರ, ಜಯಂತಣ್ಣನ ಬಗ್ಗೆ ಒಂದು ಪರಿಚಯ ಲೇಖನ ಬರೆಯಬೇಕೆಂದು ಬಹಳ ದಿನಗಳಿಂದ ಯೋಚಿಸುತ್ತಿದ್ದೆ. ಬೆಂಗಳೂರಿನ ಜಯನಗರದ ರೋಟರ್‍ಯಾಕ್ಟ್ ಸಂಸ್ಥೆಯವರು ೨೦೦೮ರ ನವೆಂಬರ್ ತಿಂಗಳಲ್ಲಿ, ಕರ್ನಾಟಕ ರಾಜ್ಯೋತ್ಸವ ಸಂಭ್ರಮದ ಸಲುವಾಗಿ ಪ್ರಕಟಿಸುವ ನೆನಪಿನ ಹೊತ್ತಗೆಗಾಗಿ, ಲೇಖನ ಬರೆದು ಕೊಡಲು, ನನ್ನ ಸ್ನೇಹಿತ ಸೋಮ ತಿಳಿಸಿದ. ಯಾವ ವಿಷಯದ ಬಗ್ಗೆ ಬರೆಯೋಣವೆಂದು ಚರ್ಚಿಸಿದಾಗ, ಅವನು ಕನ್ನಡ ಸಾಹಿತ್ಯದಲ್ಲಿ ಜನಸಾಮಾನ್ಯರು ಅಭಿಮಾನದಿಂದ ಯಾವಾಗಲೂ ನೆನಪಿಸಿಕೊಳ್ಳುವ ಮೂರು ಕನ್ನಡ ಸಾಹಿತಿಗಳ ಬಗ್ಗೆ ಬರೆದು ಕೊಡಿ, ಎನ್ನುವಷ್ಟರಲ್ಲಿ, ಅವನ ಬಾಯಿಂದ ಮೊದಲು ಬಂದ ಹೆಸರೇ ಜಯಂತ ಕಾಯ್ಕಿಣಿಯವರದ್ದು. ಅದೇನೋ ಅಂತರಲ್ಲ "ರೋಗಿ ಬಯಸಿದ್ದೂ ಹಾಲು ಅನ್ನ, ವೈದ್ಯ ಹೇಳಿದ್ದೂ ಹಾಲು ಅನ್ನ", ಹಾಗೆಯೇ ನನ್ನ ಮನಸ್ಸಿನಲ್ಲಿ ಬಹಳ ದಿನಗಳಿಂದ ಜಯಂತಣ್ಣನವರ ಬಗ್ಗೆ ಲೇಖನರೂಪ ತಳೆಯುತ್ತಿದ್ದ ಅಕ್ಷರಗಳಿಗೆ ಹೊರ ಹೊಮ್ಮಲು ಒಂದು ಕಾರಣ ಈಗ ಸಿಕ್ಕಿತು.
           ನನಗೆ ಪುಸ್ತಕಗಳನ್ನು ಓದುವ, ಅದರಲ್ಲೂ ಕನ್ನಡ ಸಾಹಿತ್ಯ ಪ್ರಕಾರದ ಪುಸ್ತಕಗಳನ್ನು ಓದುವ ಗೀಳು ಬಹಳ ಹಳೆಯದ್ದು. ನಾನು ಚಿಕ್ಕವಳಿರುವಾಗ ದೀಪಾವಳಿ ಮತ್ತು ಯುಗಾದಿ ಹಬ್ಬದ ಸಲುವಾಗಿ ಹೊರಬರುವ ವಿಶೇಷ ಸಂಚಿಕೆಗಳಲ್ಲಿ, ತುಷಾರದಲ್ಲಿ ಪ್ರಕಟವಾಗುತ್ತಿದ್ದ ಜಯಂತಣ್ಣನ ಬರಹಗಳೆಂದರೆ ನನಗೆ ಅಚ್ಚುಮೆಚ್ಚು, ಒಂದೇ ಮಾತಿನಲ್ಲಿ ಹೇಳುವುದಾದರೆ, ನನ್ನ ಸಾಹಿತ್ಯ ಅಲ್ಪ-ಸ್ವಲ್ಪ ಕೃಷಿಗೆ ಆದರ್ಶ, ಗುರು ಅವರೇ. ಮುಂಗಾರುಮಳೆಯ ಯೋಗರಾಜ್ ಭಟ್ಟರು ಕನ್ನಡ ಸಿನೆಮಾರಂಗದಲ್ಲಿರುವ ನನ್ನ ಪತಿ ಸುಬ್ರಹ್ಮಣ್ಯ.ಎಂ.ಕೆ.ಯವರಿಗೆ ಸ್ನೇಹಿತ. ಹಾಗಾಗಿ ಅವರ ಮೂಲಕ ಜಯಂತಣ್ಣ ನನ್ನ ಪತಿಗೆ ಪರಿಚಯ. ನನಗೆ ಅವರ ಮುಖಾಮುಖಿ ಪರಿಚಯವಾಗಿದ್ದು ನನ್ನ ಪತಿಯಿಂದ. ದ್ರೋಣಾಚಾರ್ಯ ಏಕಲವ್ಯನೆದುರು ಪ್ರತ್ಯಕ್ಷವಾದಂತೆ,  ಬಾಲ್ಯದ ಆರೇಳು ತರಗತಿಯಿಂದಲೂ ಆದರ್ಶವಾಗಿ ನಾನು ಆರಾಧಿಸುತ್ತಿದ್ದ, ನನ್ನ ಸಾಹಿತ್ಯ ಗುರು, ಕಾಯ್ಕಿಣಿಯವರು, ನಮ್ಮ ಮನೆಗೆ ಬಂದಾಗ ನಾನು ನಿಜವಾಗಿಯೂ, "ಕನಸೋ ಇದು, ನನಸೋ ಇದು" ಎಂದು ಸಾವಿರಾರು ಸಲ ನನ್ನನ್ನೇ ಪ್ರಶ್ನಿಸಿಕೊಂಡಿದ್ದೇನೆ. ಜಯಂತ ಕಾಯ್ಕಿಣಿರವರು ನಮ್ಮ ಮನೆಗೆ ಬಂದ ಮೊದಲ ದಿನವೇ, ನನಗಿರುವ ಸಾಹಿತ್ಯಾಸಕ್ತಿಯನ್ನು ಕೇಳಿ ತುಂಬಾ ಪ್ರಶಂಸಿದರು, ಮುಂದೆಯೂ ಬರೆಯುತ್ತಿರಬೇಕೆಂದು ಪ್ರೋತ್ಸಾಹಿಸಿದರು. ಅಷ್ಟು ಸರಳ ಸಜ್ಜನಿಕೆ ಅವರದು. ಹಾಗಾಗಿಯೇ ನಮ್ಮ ಟೋಳಿಯವರಿಗೆಲ್ಲಾ ಅವರು ಮೆಚ್ಚಿನ ಜಯಂತಣ್ಣ. ಇವಿಷ್ಟು ಕಾರಣಗಳು ಈ ಲೇಖನ ಬರೆಯಲು.

ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!

field_vote: 
No votes yet
To prevent automated spam submissions leave this field empty.

ಮರೆಯಲಾಗುವುದೇ ಈ ಅಸಾಧಾರಣ ವ್ಯಕ್ತಿಯನ್ನು!
ದೃಶ್ಯ 1
[ ಬ್ಯಾಂಕ್ ಒಂದರಲ್ಲಿ ತುಂಬಾ ಜನ ಕಾಯುತ್ತಿದ್ದರು. ಅಲ್ಲಿನ ಅಕೌಂಟೆಂಟ್ ಇನ್ನೂ ಬಂದಿರಲಿಲ್ಲ ]
ವ್ಯಕ್ತಿ1:- ನನಗೆ officeಗೆ ಹೊತ್ತಾಗ್ತಾ ಇದೆ. ಏನು ಮಾಡಲಪ್ಪ?
ವ್ಯಕ್ತಿ2:- ಹೌದು ನನಗೂ ಹೊತ್ತಾಗ್ತಾ ಇದೆ.
ವ್ಯಕ್ತಿ3:- ಯಾವಾಗಲೂ ಸಮಯಕ್ಕೆ ಸರಿಯಾಗಿ ಬರುವ ಅಕೌಂಟೆಂಟ್ ಇವತ್ತು ಯಾಕೆ ಲೇಟೋ!

ಗಣಿತ ಸಾಗರದಲ್ಲೊಂದು ಅನರ್ಘ್ಯ ರತ್ನ

field_vote: 
Average: 3.9 (7 votes)
To prevent automated spam submissions leave this field empty.

ಗಣಿತ ಸಾಗರದಲ್ಲೊಂದು ಅನರ್ಘ್ಯ ರತ್ನ
ನಿತ್ಯ ನೂತನ ಗಣಿತದಲ್ಲಿರುವ
ಅಗಣಿತ ವಿಚಾರಗಳ ಕಡಲೊಳು
ಮುಳುಗಿ ಮುತ್ತು ರತ್ನಗಳೆತ್ತಿ ತಂದಿರಿವ
ಗಣಿತ ತಜ್ಞರೆಲ್ಲರಿಗೂ ಶಿರಬಾಗಿ ನಮಿಪೆನು.
ವಿಸ್ತಾರವಾದ ಗಣಿತ ಸಾಗರದಲ್ಲಿ ಒಂದು ಹನಿಯಷ್ಟಾದರೂ ನನ್ನಂತಹಾ ಸಾಮಾನ್ಯರಿಗೆ ತಿಳಿದಿದೆಯೋ ಇಲ್ಲವೋ ನಾನರಿಯೆ. ಆದರೂ ಆ ವಿಷಯ ಕೊಡುವ ಆನಂದ ಮಾತ್ರ ಅಮೋಘವಾದುದು..

ಶಂಕರ್ ನಾಗ್: ಒಂದು ನೆನಪು...

field_vote: 
Average: 2.7 (3 votes)
To prevent automated spam submissions leave this field empty.

ಶಂಕರನಾಗ್ ಅವರು ನಮ್ಮನ್ನು ಅಗಲಿ ಇಂದಿಗೆ ಹದಿನೆಂಟು ವರ್ಷ.

ಶಂಕರ್ ನಾಗ್ ಎಂದರೆ ಸಾಕು ಕನ್ನಡಿಗರಲ್ಲಿ ಏನೋ ಒಂದು ರೀತಿ ಹುರುಪು ಮತ್ತು ಲವಲವಿಕೆ ಮೂಡುತ್ತದೆ. ಸಾಧನೆಯ ಉತ್ತುಂಗಕ್ಕೇರುವ ತವಕದಲ್ಲಿ ಅವಿರತವಾಗಿ ಪಾದರಸದಂತೆ ಕೆಲಸಮಾಡುತ್ತಿದ್ದ ಶಂಕರ್ ಮೇಲೆ ವಿಧಿಗೆ ಅದೇನು ಮುನಿಸೋ ಏನೋ . 1990ರ ಸೆ. 30ರಂದು ತನ್ನ ಬಳಿಗೆ ಕರೆದುಕೊಂಡು ಬಿಟ್ಟಿತು.

ಕನ್ನಡ ಚಿತ್ರರಂಗವನ್ನು ಮುಂಚೂಣಿಯಲ್ಲಿ ಸಾಗುವಂತೆ ಮಾಡಿದ ನಾಗ್ ಅವರಿಗೆ ಮುಂದೊಂದು ದೊಡ್ಡ ಆಘಾತ ಕಾದ್ದಿತ್ತು. ತಮ್ಮ ಮುಂದಿನ ಚಿತ್ರ "ಜೋಕುಮಾರ ಸ್ವಾಮಿ" ಕುರಿತು ಚರ್ಚಿಸಲು ಪತ್ನಿ ಅರುಂಧತಿ ನಾಗ್ ಹಾಗೂ ಪುತ್ರಿಯೊಂದಿಗೆ ಅದು ಸೆಪ್ಟೆಂಬರ್ 30, 1990 ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ತಮ್ಮ ಕಾರಿನಲ್ಲಿ ಬೆಂಗಳೂರಿಗೆ ಹೋಗುತ್ತಿದ್ದಾಗ, ದಾವಣಗೆರೆ ಹತ್ತಿರ ಅವರು ಹೋಗುತ್ತಿದ್ದ ಕಾರು ಅಪಘಾತಕ್ಕೆ ಈಡಾಯಿತು. ಅದರಲ್ಲಿ ನಾಗ್ ಅವರನ್ನು ಬಿಟ್ಟು ಎಲ್ಲರೂ ಉಳಿದರು. ಆದರೆ, ಶಂಕರ್ ನಾಗ್.... ಅಮರರಾದರು. ಶಂಕರ್ ನಮ್ಮೊಂದಿಗಿಲ್ಲ ಎಂಬುದನ್ನು ಜೀರ್ಣಿಸಿಕೊಳ್ಳಲು ಇಂದಿಗೂ ಕನ್ನಡ ಚಿತ್ರರಂಗಕ್ಕೆ ಕಷ್ಟವಾಗುತ್ತಿದೆ.

ವಿಜ್ಞಾನ ಲೋಕದಲ್ಲೊಂದು ಉತ್ಕೃಷ್ಟ ತಾರೆ

field_vote: 
No votes yet
To prevent automated spam submissions leave this field empty.

ವಿಜ್ಞಾನ ಲೋಕದಲ್ಲೊಂದು ಉತ್ಕೃಷ್ಟ ತಾರೆ
ನರನವೊಲೆ ತರುಗಳಂ ಸುಖದುಃಖಗಳನರಿವ
ಪರಿಯ ತೋರುವ ಯಂತ್ರಚಯವ ರಚಿಸಿ
ಅಣುರೇಣತೃಣಗಳೋಳಮಲ ಚೈತನ್ಯಮಿಹ
ಮರ್ಮವಂ ಲೋಚನಕೆ ಮಿಷಯಮೆನಿಸಿ||
ಭೌತತಾತ್ವಿಕಶಾಸ್ತ್ರ ಸಾಮ್ರಾಜ್ಯ ರಾಜನೆನಿಸಿ
ವಿಶ್ವಸೃಷ್ಟಿಯ ಚತುರತೆಯ ವಿಶದಗೊಳಿಸಿ
ಕಣ್ಗೆ ಕಾಣದ ತತ್ವಮಂ ಶ್ರಮಿಸುತರಸಿ
ಮೆರೆವನೀ ಜಗದೀಶನಾರ್ಯಕುಲತೋಷಂ||

ಹೀಗೆ ಕನ್ನಡ ಸಾರಸ್ವತ ಲೋಕದ ಮೇರುಗಳಲಿ ಒಬ್ಬರಾದ ಹಿರಿಯ ಸಾಹಿತಿ ಡಿ.ವಿ.ಜಿ.ಯವರು ಅದೇ ಸಾರಸ್ವತ ಲೋಕದ ಮೇರು ಎನಿಸಿಕೊಳ್ಳುವ ಮಹಾನ್ ವಿಜ್ಞಾನಿಯೋರ್ವರ ಬಗ್ಗೆ ಬರೆದ ಕವನವಿದು. “ಕಪಿಲ ಕಣಾದಾದಿ ಸದಸದ್ವಿಚಾರಕರ ಕುಲದ ಕೀರ್ತಿಗೆ ರನ್ನಗಲಶ” ಎಂದು ಮಹಾನ್ ಸಾಹಿತಿ ಡಿ.ವಿ.ಜಿ.ಯವರ ಮೆಚ್ಚುಗೆಗೆ ಪಾತ್ರರಾದ ಮೇರು ವಿಜ್ಞಾನಿ ಯಾರು ಗೊತ್ತೆ? ಸಸ್ಯಗಳಿಗೂ ಜೀವವಿದೆ, ಅವು ನಮ್ಮ ಹಾಗೆ ಉಸಿರಾಡುತ್ತವೆ ಎಂದು ಈ ಲೋಕಕ್ಕೆ ತೋರಿಸಿಕೊಟ್ಟ ಮಹಾನ್ ವಿಜ್ಞಾನಿ ಜಗದೀಶ್ ಚಂದ್ರ ಬೋಸ್ ಅವರು.

"ಅನ್ನಿ ಯೊಂದಿಗಿನ ಆತ್ಮೀಯ ಒಡನಾಟ"

field_vote: 
No votes yet
To prevent automated spam submissions leave this field empty.

ಜೀವನವೆಂಬ ಕಾಲಚಕ್ರದಲ್ಲಿ ಪ್ರತಿದಿನ ಅನೇಕ ಜನರ ಭೇಟಿಯಾಗುತ್ತದೆ. ಆದರೆ ಅದರಲ್ಲಿ ಕೆಲವರಸ್ಟೆ ನೆನಪಿಟ್ಟುಕೊಳ್ಳುವ ವ್ಯಕ್ತಿತ್ವ ಹೊಂದಿರುತ್ತಾರೆ, ಹಾಗೆಯೇ ನಮ್ಮ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯುತ್ತಾರೆ.

ಅಗಲಿದ ಚೇತನ

field_vote: 
No votes yet
To prevent automated spam submissions leave this field empty.

ಅಗಲಿದ ಚೇತನ.
ಅಪಾರಜ್ಞಾನ, ಅಷ್ಟೇ ಸೌಜನ್ಯತೆ, ಸರಳ ನೇರ ನಡೆ ನುಡಿ ಇವೆಲ್ಲವನ್ನೂ ಒಟ್ಟುಗೂಡಿಸಿದಾಗ ಎದ್ದು ಕಾಣುವ ರೂಪವೇ ಹಿರಿಯ ಸಾಹಿತಿಗಳಲ್ಲೊಬ್ಬರಾದ ಶ್ರೀಯುತ ಎಚ್.ಎಸ್.ಕೃಷ್ಣಸ್ವಾಮಿಯವರು. ಅಂಕಣಕಾರರೆಂದೇ ಖ್ಯಾತಿ ಹೊಂದಿರುವ ಅವರು ಈಗ 29ನೇ ತಾರೀಕು ಇನ್ನಿಲ್ಲವಾದರು ಎಂದು ತಿಳಿದಾಗ ಮನಸ್ಸಿಗೆ ಉತ್ತಮವಾದುದೇನನ್ನೋ ಕಳೆದುಕೊಂಡ ಭಾವ. 1920ರ ಆಗಸ್ಟ್ 20ರಂದು ಜನಿಸಿದ ಅವರು 2008ರ ಅದೇ ಆಗಸ್ಟ್ 29ರಂದು ನಮ್ಮನ್ನೆಲ್ಲಾ ಅಗಲಿದ್ದಾರೆ.
ಖ್ಯಾತ ಅರ್ಥಶಾಸ್ತ್ರಜ್ಞರಾದ ಇವರು ಅನೇಕ ದಿನಪತ್ರಿಕೆಗಳು ವಾರ ಪತ್ರಿಕೆಗಳಲ್ಲಿ ವಾಣಿಜ್ಯ, ವ್ಯಕ್ತಿವಿಷಯಕ್ಕೆ ಸಂಬಂಧಪಟ್ಟ ಅಂಕಣಗಳನ್ನು ಬರೆಯುವ ಮೂಲಕ ಜನಪ್ರಿಯರಾದರು. ಸುಧಾ ವಾರ ಪತ್ರಿಕೆಯಲ್ಲಿ 36 ವರ್ಷ ಒಂದು ವಾರವೂ ತಪ್ಪದೇ ವ್ಯಕ್ತಿ ವಿಶೇಷ ಅಂಕಣ ಬರೆದು ಅನೇಕ ಮಹಾನ್ ವ್ಯಕ್ತಿಗಳ ಪರಿಚಯ ಮಾಡಿಸಿದ್ದರು. ‘ಕನ್ನಡದಲ್ಲಿ ವಿಡಂಬನಾ ಸಾಹಿತ್ಯ’ ಎಂಬ ಇವರ ವಿಮರ್ಶನಾತ್ಮಕ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್‍ನ ‘ಭಾಸ್ಕರರಾವ್ ಸ್ಮಾರಕ’ ಬಹುಮಾನ ಲಭಿಸಿದೆ.ಹಾಗೆಯೇ ವಾಣಿಜ್ಯ ಹಾಗೂ ಅರ್ಥಶಾಸ್ತ್ರಕ್ಕೆ ಸಂಬಂಧಪಟ್ಟ ಹಾಗೆ ‘ನಮ್ಮ ಅಭಿವೃದ್ದಿ ಯೋಜನೆ’ ಕೃತಿಗೆ ರಾಜ್ಯ ಸರ್ಕಾರದ ಪ್ರಶಸ್ತಿ ಲಭಿಸಿದೆ. ಇವರ ಪ್ರಭಂದಗಳಲ್ಲಿ ಪ್ರಭುದ್ದತೆ, ಚಿಂತನೆ, ಅಧ್ಯಯನಶೀಲತೆ ಹಾಗೂ ಕಾವ್ಯ ಗುಣಗಳನ್ನು ಕಾಣಬಹುದು ಎಂದು ಡಾ.ದೇ.ಜವರೇಗೌಡರು ಹೇಳಿದ್ದಾರೆ. ಇವರು ಕೆಲವು ಕಾದಂಬರಿಗಳು ಸಹಾ ಬರೆದಿದ್ದಾರೆ.
ಇವರನ್ನು ಕವಿ ಚನ್ನವೀರಕಣವಿಯವರು ಸಾಹಿತ್ಯ ಲೋಕದ ಸವ್ಯ ಸಾಚಿ ಎಂದಿದ್ದಾರೆ. ಹಾಗೆಯೇ ಕವಿ ದೊಡ್ಡ ರಂಗೇಗೌಡರು ಇವರ ಸಾಹಿತ್ಯ ಭೂಮಿ ತೂಕದ ಸಾಹಿತ್ಯ ಎಂದೇ ವರ್ಣಿಸಿದ್ದಾರೆ.

ದಾಸರ ಪದಗಳ ಖಣಿ, ಗಮಕ ಕಲಾನಿಧಿ ಅನಂತಾಚಾರ್ಯ ಕಟಗೇರಿ ದಾಸರು ನಮಗೆ ಹಿತ್ತಿಲ ಗಿಡ!

field_vote: 
Average: 4.7 (3 votes)
To prevent automated spam submissions leave this field empty.

"ತಂಬೂರಿ ಮೊದಲಾದ ಅಖಿಲ ವಾದ್ಯಗಳಿದ್ದು!
ಕೊಂಬು-ಕೊಳಲು ಧ್ವನಿಗಳಿದ್ದು;
ತುಂಬರು ನಾರದರ ಗಾನ ಕೇಳುವ ಹರಿ
ನಂಬಲಾರ ಈ ಢಂಬಕದ ಕೂಗಾಟ;
ಕೇಳನು ಹರಿ ತಾಳನು"//

"ವಾಹ್! ದಾಸರ ಏನ್ ಹಾಡ್ ಹಾಡಿದ್ರಿ! ಈ ದಾಸರ ಪದಕ್ಕ ಸಾಕ್ಷಾತ್ ಹರಿ ಪ್ರತ್ಯಕ್ಷ ಆಧಾಂಗ ಆತು. ಒಂಚೂರು ತಡೀರಿ..ಏ..ಕೃಷ್ಣಾ ನೀ ಹೇಳು, ದಾಸರು ಹಾಡಿದ ಪದದ ರಾಗ ಯಾವುದು?"

ಗಾಯನಗಂಗೆ, ಪದ್ಮವಿಭೂಷಣ ಡಾ.ಗಂಗೂಬಾಯಿ ಹಾನಗಲ್ ಕಟಗೇರಿ ದಾಸರ ಗಾಯನ ಕೇಳಿ, ಆನಂದದಿಂದ ಉದ್ಗರಿಸಿದ ವಾಕ್ಯಗಳಿವು. ಗಾಯನಗಂಗೆಯ ಅಪೇಕ್ಷೆಯ ಮೇರೆಗೆ ಅವರ ಮಗಳು ಕೃಷ್ಣಾ ಅವರಿಗೆ ದಾಸರ ಪದಗಳನ್ನು ಕಲಿಸಲು ಹೋದಾಗ ಕಟಗೇರಿ ದಾಸರಿಗೆ ಒದಗಿಬಂದ ಸಂದರ್ಭ ಇದು.

ಸಹಜ ಕೃಷಿ ಹರಿಕಾರ ಮಸನೊಬು ಫುಕುಓಕಾ ಮರಳಿ ಮಣ್ಣಿಗೆ.

field_vote: 
Average: 3 (2 votes)
To prevent automated spam submissions leave this field empty.

ಭಾರತ ಕೃಷಿ ಸಂಸ್ಕೃತಿ ರಾಷ್ಟ್ರ. ನಮ್ಮಲ್ಲಿ ಕೃಷಿ ‘ಸಂಸ್ಕೃತಿ’ ‘ವ್ಯವಹಾರ’ ಅಲ್ಲ. ‘ಅಗ್ರಿಕಲ್ಚರ್’ ಅದು ‘ಅಗ್ರಿ ಬಿಸಿನೆಸ್’ (ಉಳಿದ ದೇಶಗಳಲ್ಲಿ ಪ್ರಚಲಿತವಿರುವಂತೆ) ಅಲ್ಲ!

ಎತ್ತು, ಆಕಳು ಮತ್ತು ಎಮ್ಮೆ ಮೊದಲಾದವನ್ನು ಸಾಕಿಕೊಂಡು ಶ್ರಮ ನಂಬಿ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದ ನಮ್ಮ ನೇಗಿಲಯೋಗಿ. ಹಣವಿರದಿದ್ದರೂ ಹಾಲು, ಮೊಸರು, ಬೆಣ್ಣೆ, ತುಪ್ಪ ಹೀಗೆ ಹೈನಿಗೆ, ಜಾನುವಾರುಗಳ ಸಗಣಿ, ಮೂತ್ರ ಹೀಗೆ ಸಾವಯವ ಗೊಬ್ಬರಕ್ಕೆ, ಅಡುಗೆಗೆ ಗೋಬರ್ ಗ್ಯಾಸ್, ಧಾನ್ಯ ಲಕ್ಷ್ಮಿಯ ಕೃಪಾಕಟಾಕ್ಷ ಊಳುವಯೋಗಿಯ ನೆರಳಾಗಿತ್ತು. ಹಳ್ಳಿಗಳು ಸಮೃದ್ಧವಾಗಿದ್ದವು. ಅನ್ನದ ಬಟ್ಟಲು ಅರಿವಿನ ಮುಗಿಲಿಗಿಂತ ಶ್ರೇಷ್ಠವಾಗಿತ್ತು.

ಕ್ರಮೇಣ ಆಧುನಿಕ ಕೃಷಿ ಉಪಕರಣಗಳು ನಮ್ಮ ಭೂಮಿಗೆ ಕಾಲಿಟ್ಟವು. ಮಾನವ ಶ್ರಮ ಪೂರಕ, ಪ್ರೇರಕವಾಗಿದ್ದ ಕೃಷಿ ಸಂಸ್ಕೃತಿ ಯಂತ್ರ ಅವಲಂಬಿತ ಕೃಷಿ ವ್ಯವಹಾರವಾಗಿ ಚಾಲನೆ ಪಡೆಯಿತು. ಊಳುವ ಒಡೆಯ ಆಳಾದ. ಕೃಷಿ ಕೂಲಿಯಾದ. ಕ್ರಮೇಣ ಉದ್ಯೋಗ ಅರಸಿ ಪಟ್ಟಣಗಳಿಗೆ ಅನಿವಾರ್ಯವಾಗಿ ಉಳ್ಳವರ ಗುಲಾಮನಾಗಿ ಬಂದ. ಕೃಷಿ ನಿರಾಶ್ರಿತ ಎಂಬ ಹೊಸ ಹಣೆಪಟ್ಟಿ ಅಂಟಿಸಲಾಯಿತು. ಟ್ರ್ಯಾಕ್ಟರ್ ಭೂಮಿಗೆ ಕಾಲಿಟ್ಟಿದ್ದೇ ತಡ ಕೃಷಿಕರ ಬೆನ್ನೆಲುಬಾಗಿದ್ದ ಜಾನುವಾರು ಕಟುಕರ ಮನೆ ಸೇರಿದವು. ರೈತನ ಮಕ್ಕಳು ಹಾಲು-ಹೈನಿನಿಂದ ವಂಚಿತರಾಗಿ ದಾರಿ ತಪ್ಪಿದ ಮಕ್ಕಳಾದರು. ಇದನ್ನೇ ಅಭಿವೃದ್ಧಿ ಎಂದು ಮಾಧ್ಯಮಗಳು ಜಾಹಿರಾತುಗಳ ಮೂಲಕ ಸಾರಿದವು. ರೈತ ಅಭಿವೃದ್ಧಿ ರಥದ ಚಕ್ರದಡಿಯಲ್ಲಿ ಸಿಲುಕಿ ಹಣ್ಣುಗಾಯಿ-ನೀರುಗಾಯಿಯಾದ.

ಮೇರು ವಿಜ್ಞಾನಿಯ ಕಥೆ

field_vote: 
Average: 5 (1 vote)
To prevent automated spam submissions leave this field empty.

ಹುಡುಕುವಿಕೆ, ಏನಾದರೂ ಹೊಸತನ್ನು ಹುಡುಕುತ್ತಲೇ ಇರುವಿಕೆ. ಇದೇ ಗುರಿಯಾಗಿ ವಿಜ್ಞಾನ ಗಗನದಲ್ಲಿ ಮಿಂಚಿ ಮಿನುಗುವ ನಕ್ಷತ್ರದಂತೆ ಮಾನವ ಚಿಂತನೆಯೆ ಎಲ್ಲೆಯ ದಾಟಿ ಮೇಲೇರಿ ಮೇಲೇರಿ ಅದ್ಭುತಗಳ ಸಾಧಿಸಿದರೂ ಎಲೆ ಮರೆಯ ಕಾಯಿಯೆಂದೇ ಭೌತವಿಜ್ಞಾನದ ಜಗತ್ತು ಗುರುತಿಸಿರುವ ಮಹಾನ್ ಮೇಧಾವಿ ಶ್ರೀಯುತ K.S.ಕೃಷ್ಣನ್ ಅಂದರೆ ಕರಿಯಮಾಣಿಕ್ಯಂ ಶ್ರೀನಿವಾಸ ಕೃಷ್ಣನ್ 1898ರ ಡಿಸೆಂಬರ್ 4ರಂದು ತಮಿಳುನಾಡಿನಲ್ಲಿ ಜನಿಸಿದವರು.
“ವಾಸ್ತವಗಳನ್ನು ಕಾಣುವುದೇ ಭೌತ ಶಾಸ್ತ್ರದ ಅರ್ಥ” ಎಂದು ಕೃಷ್ಣನ್ ಪದೇಪದೇ ತನ್ನ ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ನಾನಾ ಕ್ಷೇತ್ರಗಳ ಮೂಲಕ ಅವರು ಭೌತಶಾಸ್ತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕೃಷ್ಣನ್ ರವರು C.V.ರಾಮನ್ ರವರ ಮಾರ್ಗದರ್ಶನದಲ್ಲಿ ಬೆಳೆದವರು. C.V.ರಾಮನ್ರವರ ಬೆಳಕು ಕ್ಷೇತ್ರದಲ್ಲಿ ರಾಮನ್ ಪರಿಣಾಮದ ಶೋಧನೆಯಲ್ಲಿ ಹೆಚ್ಚು ದುಡಿದವರು. 1928ರಲ್ಲಿ ರಾಮನ್ರವರು ದ್ರವಗಳ ಮೂಲಕ ಬೆಳಕು ಚದುರುವುದನ್ನು ಗಮನಿಸಿದರು. ಬೆಳಕಿನ ಒಂದು ಕಿರಣವನ್ನು benzene ಮುಂತಾದ ದ್ರವಗಳ ಮೂಲಕ ಹಾಯಿಸಿದಾಗ ಅದು ಹಲವಾರು ಕಿರಣಗಳಾಗಿ ಚದುರಿದವು. ಆ ಕಿರಣಗಳು ಬೇರೆ ಬೇರೆ frequency ಅಂದರೆ ವೇಗ ಹೊಂದಿರುವುದರಿಂದ ವಿವಿಧ ಬಣ್ಣಗಳಲ್ಲಿ ಕಾಣುತ್ತವೆ. ಕೆಲವು ಬಣ್ಣಗಳು ಕೆಲವು ಸಂದರ್ಭಗಳಲ್ಲಿ ತೀವ್ರತೆಯನ್ನು ಹೊಂದುತ್ತವೆ. ನೋಡಿ! ಸಾಧಾರಣವಾಗಿ ಆಕಾಶ ನೀಲಿಯಾಗಿ ಕಾಣುತ್ತದೆ. ವಾತಾವರಣದಲ್ಲಿರುವ ಸಣ್ಣ ಕಣಗಳಿಂದ ಸೂರ್ಯನ ಕಿರಣಗಳು ಚದುರಿಸಲ್ಪಟ್ಟಾಗ ನೀಲಿ ಬಣ್ಣದ ಕಿರಣಗಳ ತೀವ್ರತೆ ಹೆಚ್ಚಾಗಿರುತ್ತದೆ. ಅದೇರೀತಿ ಸೂರ್ಯ ಹುಟ್ಟುವಾಗ ಅಥವಾ ಮುಳುಗುವಾಗ ವಾತಾವರಣದ ಅತಿ ಹೆಚ್ಚಿನ ಭಾಗದ ಮೂಲಕ ಸೂರ್ಯನ ಕಿರಣಗಳು ಹಾದು ಬರುವಾಗ ನೀಲಿ ಬಣ್ಣ ತನ್ನ ತೀವ್ರತೆ ಕಳೆದುಕೊಂಡು ಆ ಸ್ಥಾನವನ್ನು ಕೆಂಪು ಬಣ್ಣ ಪಡೆದು ಆಕಾಶ ಕೆಂಪು ಬಣ್ಣವನ್ನು ಹೊಂದುವಂತೆ ಮಾಡುತ್ತದೆ. ಈ ಸಂಶೋಧನೆ C.V.ರಾಮನ್ರವರಿಗೆ 1930ರಲ್ಲಿ ನೋಬಲ್ ಪಾರಿತೋಷಕವನ್ನು ತಂದುಕೊಟ್ಟರೂ ಇದರಲ್ಲಿ ಅವರ ಸಮಕ್ಕೂ ಕೈ ಜೋಡಿಸಿದವರು ಎಂದರೆ K.S.ಕೃಷ್ಣನ್ ಅವರು. ಆ ನೊಬೆಲ್ ಪ್ರಶಸ್ತಿ C.V.ರಾಮನ್ ಅವರಿಗೇ ಸಲ್ಲಬೇಕು ಎಂಬುದು ನಿರ್ವಿವಾದ. ಆದರೂ ಕೃಷ್ಣನ್ ಅವರ ಸಹಾಯವನ್ನು C.V.ರಾಮನ್ ಅವರು ಹೀಗೆ ಸ್ಮರಿಸುತ್ತಾರೆ, “1930ರಲ್ಲಿ ನನಗೆ ನೀಡಿದ ನೋಬೆಲ್ ಪ್ರಶಸ್ತಿ 1921ರಿಂದ ಮಾಡಿದ ಸಂಪೂರ್ಣ ಕೆಲಸವನ್ನು ಗಣನೆಗೆ ತೆಗೆದುಕೊಳ್ಳದೇ 1928ರಲ್ಲಿ ಆದ ಮುಖ್ಯ ಕೆಲಸಗಳನ್ನು ಮಾತ್ರ ಗಣನೆಗೆ ತೆಗೆದುಕೊಂಡರೆ ನನ್ನ ಈ ಪ್ರಶಸ್ತಿಗೆ ಕೃಷ್ಣನೂ ಸಹಾ ಪಾಲುದಾರನಾಗುತ್ತಿದ್ದ.”

ಕನ್ನಡದಲ್ಲಿ ಕಾನೂನು - ಸಿ ಎನ್ ಮಂಜಪ್ಪನವರ ಕಾಣಿಕೆಗಳು

field_vote: 
Average: 5 (2 votes)
To prevent automated spam submissions leave this field empty.

"ಆಡಳಿತದಲ್ಲಿ ಕನ್ನಡ" "ಎಲ್ಲೆಲ್ಲೂ ಕನ್ನಡ" ಈ ಕೂಗು ಬಹಳ ಕಾಲದಿಂದಲೂ ಇದೆ. ಆದರೆ ಅದಕ್ಕೆ ಬೇಕಾದ ತಯಾರಿಯ ಬಗ್ಗೆ ಮಾತ್ರ ನಮ್ಮ ಧೋರಣೆ ಬೇರೆ. ಪ್ರಾಥಮಿಕ ಹಂತದಿಂದ ಇಂಗ್ಲಿಷ್ ಬೇಕೇ ಬೇಕು ಅಂತಲೂ ಅನ್ನುವವರು ನಾವೆ. ಇಂಗ್ಲಿಷಿನ ಬುನಾದಿಯ ಮೇಲೆ ಕನ್ನಡದರಮನೆ ಕಟ್ಟಲು ಸಾಧ್ಯವೇ? ಕನ್ನಡ ಕಲಿಕೆ ಇಲ್ಲದೆ ಕನ್ನಡದಾಡಳಿತ ಎಂತು?

ಧಾರವಾಡದ ಕೋಗಿಲೆ

field_vote: 
No votes yet
To prevent automated spam submissions leave this field empty.

ದೆಹಲಿ ಆಕಾಶವಾಣಿಯಲ್ಲಿ ಸುಶ್ರಾವ್ಯವಾದ ಹಿಂದೂಸ್ತಾನಿ ಸಂಗೀತ ಕೇಳಿಬರುತ್ತಿತ್ತು. ಅದನ್ನು ಕೇಳುತ್ತಾ ಕುಳಿತಿದ್ದ ಓರ್ವ ಹುಡುಗಿ, “ಆಂಟಿ ಹಾಡ್ತಾರೆ ಅಂತ ಕೂತ್ರೆ ಯಾರೋ ಗಂಡಸರು ಹಾಡ್ತಾ ಇದಾರೆ.” ಎಂದು ಗೊಣಗಿದಳು. ಅದನ್ನು ಕೇಳಿಸಿಕೊಂಡ ಅವಳ ಅಮ್ಮ “ಗಂಡಸಾದರೇನು ಹೆಂಗಸಾದರೇನು? ಸಂಗೀತ ಅಂತೂ ಚೆನ್ನಾಗಿದೆ ಅಲ್ವಾ? ಸುಮ್ಮನೆ ಕೂತು ಕೇಳು” ಎಂದಾಗ,
ಮಗಳು, “ಹೌದು ಸಂಗೀತವೇನೋ ಮೇಲ್ಮಟ್ಟದ್ದೆ. ಕೇಳಲು ಕರ್ಣಾನಂದವಾಗೇ ಇದೆ. ಆದರೂ ಆಂಟಿ ತನ್ನ ಹಾಡು ಬರತ್ತೆ ಕೇಳು ಅಂತ ಹೇಳಿದ್ರು. ಅದು ಯಾಕೆ ಬರಲಿಲ್ಲ ಅಂತ ಆಶ್ಚರ್ಯ ಆಯ್ತು ಅಷ್ಟೆ.” ಅಂದಳು.
ಆ ಆಂಟಿ ಮನೆಗೆ ಬಂದರು. ಅವಳು ಒಳಗೆ ಕರೆದು ಉಪಚರಿಸಿದಳು. ಅವರು ಸುಧಾರಿಸಿಕೊಂಡು ಕೇಳಿದರು, “ ನನ್ನ ಹಾಡು ಕೇಳಿದ್ಯೇನೆ ಹುಡುಗಿ?”
“ರೇಡಿಯೋ ಆನ್ ಮಾಡಿದ್ದೆ ಆಂಟಿ. ಆದರೆ ಯಾರೋ ಗಂಡಸರು ಹಾಡುತ್ತಿದ್ದರು.” ಎಂದಳು ಹುಡುಗಿ.
ಆಗ ಅವರು ಜೋರಾಗಿ ನಕ್ಕು, “ಆ ಗಂಡು ಕೋಗಿಲೆ ನಾನೇಕಣೆ ಹುಡುಗಿ” ಎಂದರು.
ಒಂದು ಕ್ಷಣ ಹುಡುಗಿ ಪೆಚ್ಚಾಗಿ ನಂತರ ಅವರೊಂದಿಗೆ ನಗಲು ಪ್ರಾರಂಭಿಸಿದಳು. “ಹೆಸರು ಅನೌನ್ಸ್ ಮಾಡಿದಾಗ ಯಾರೋ ಬಂದಿದ್ದರು. ಆ ಗಡಿಬಿಡಿಯಲ್ಲಿ ಹೆಸರು ಕೇಳಿಸಿಕೊಳ್ಳಲು ಆಗಲಿಲ್ಲ. ಅದಕ್ಕೆ ಈ ತಾಪತ್ರಯ ಆಗಿದ್ದು.” ಎಂದಳು.

ಆಧುನಿಕ ಖಗೋಲವಿಜ್ಞಾನದ ಗೆಲಿಲಿಯೋ - ಫ್ರೆಡ್ ಹಾಯ್ಲ್

field_vote: 
Average: 5 (1 vote)
To prevent automated spam submissions leave this field empty.

ಸದಾ ತೀವ್ರ ಬೌಧ್ಧಿಕ ವಾದ ವಿವಾದಗಳಲ್ಲಿ ನಿರತರಾಗಿರುತ್ತ, ಉತ್ಸಾಹದ ಬುಗ್ಗೆಯಾಗಿದ್ದ ಸುಪ್ರಸಿದ್ಧ ಖಗೋಳ ವಿಜ್ಞಾನಿ ಫ್ರೆಡ್ ಹಾಯ್ಲ್ ಅಗೋಸ್ತ್ 20, 2001 ರ೦ದು ನಿಧನರಾದಾಗ ಬ್ರಿಟಿಷ್ ಬ್ರಾಡ್ ಕಾಸ್ಟಿ೦ಗ್ ಕ೦ಪೆನಿ (BBC) ಬಿತ್ತರಿಸಿತು : " ವಿಶ್ವದ ಉಗಮವನ್ನು ವಿವರಿಸುವ ಸಿದ್ಧಾ೦ತಕ್ಕೆ " ಬಿಗ್ ಬ್ಯಾ೦ಗ್ " (Big Bang) ಎ೦ಬ ಸು೦ದರ ಹೆಸರನ್ನು ಟ೦ಕಿಸಿದ ಶ್ರೇಷ್ಟ ಬ್ರಿಟಿಷ್ ಖಗೋಳ ವಿಜ್ಞಾನಿ ಹಾಯ್ಲ್ ನಿಧನರಾದರು. ಅವರಿಗೆ 86 ವಷ೯ ವಯಸ್ಸಾಗಿತ್ತು. ಯಾವ ಸಿದ್ಧಾ೦ತಕ್ಕೆ ಬಿಗ್ ಬ್ಯಾ೦ಗ್ ಎ೦ಬ ಹೆಸರಿತ್ತು ಅದರ ಅಭೂತಪೂರ್ವ ಜನಪ್ರಿಯತೆಗೆ ಕಾರಣರಾದರೊ, ಅದೇ ಸಿದ್ಧಾ೦ತವನ್ನು ತಮ್ಮ ಜೀವನದುದ್ದಕ್ಕೂ ಅವರು ಟೀಕಿಸಿದರು, ಪ್ರಶ್ನಿಸಿದರು."

ಹಾಯ್ಲ್ ಅವರ ಆಪ್ತ ಸ್ನೇಹಿತ ಮತ್ತು ಹಲವು ಸ೦ಶೋಧನೆಗಳಲ್ಲಿ ಸಹಭಾಗಿಯಾಗಿಯಾಗಿದ್ದ , ಇ೦ಗ್ಲ೦ಡಿನ ವೇಲ್ಸ್ ಕಾಲೇಜಿನಲ್ಲಿ ಗಣಿತ ವಿಭಾಗ ಮುಖ್ಯಸ್ಥರಾಗಿರುವ ಚ೦ದ್ರಾ ವಿಕ್ರಮ ಸಿ೦ಘೆ ಹೇಳುವಂತೆ "ಈ ವಿಶ್ವವನ್ನು ನಾವು ನೋಡುವ ದೃಷ್ಟಿಯನ್ನು ಕಳೆದ ನೂರು ವಷ೯ಗಳಲ್ಲಿ ಯಾವ ವಿಜ್ಞಾನಿಯೂ ಹಾಯ್ಲ್ ಅವರ೦ತೆ ಬದಲಾಯಿಸಿದರೆ೦ದು ನನಗನ್ನಿಸುವುದಿಲ್ಲ. "

ಪರಿಧಿಯಿಂದ ಹೊರಗೆ ಹೋದ ವ್ಯಾಸ

field_vote: 
No votes yet
To prevent automated spam submissions leave this field empty.

ವ್ಯಾಸರು ಚಿರನಿದ್ರೆಗೆ ಮರಳಿದ್ದಾರೆ, ನಿಜ. ಆದರೆ ಅವರ ಮುನ್ನೂರಕ್ಕೂ ಹೆಚ್ಚಿನ ಕತೆಗಳಲ್ಲಿ ವ್ಯಾಸರು ಸದಾ ಜೀವಂತವಾಗಿ ಮಾತನಾಡುತ್ತಿದ್ದಾರೆ, ಉಸಿರಾಡುತ್ತಿದ್ದಾರೆ. ಒಬ್ಬ ಸತ್ವಶಾಲಿ ಬರಹಗಾರನಿಗೆ ಸಾವೆಂಬುದೇ ಇಲ್ಲ. ಭೌತಿಕವಾಗಿ ವ್ಯಾಸರು ಇದ್ದಿದ್ದು ಕೆಲವೇ ಕೆಲವು ನಿಕಟವರ್ತಿಗಳ ಮಟ್ಟಿಗೆ.

ಮೂವತ್ತೆರಡು ವರ್ಷಗಳಿಂದ ರಸ್ತೆಯಲ್ಲೇ ವಾಸ

field_vote: 
No votes yet
To prevent automated spam submissions leave this field empty.

ಈತನ ಹೆಸರು ಬಸಪ್ಪ ಫಕೀರಪ್ಪ ಮುಳಗುಂದ. ವಯಸ್ಸು ೭೫ ವರ್ಷ.

ಧಾರವಾಡದ ವಿರಕ್ತಮಠ ಓಣಿಯ ಮೂವತ್ತಡಿಯ ಪುಟ್ಟ ರಸ್ತೆಯ ಒಂದು ಪಕ್ಕದಲ್ಲಿ ಕಳೆದ ಮೂವತ್ತೆರಡು ವರ್ಷಗಳಿಂದ ಈತ ಠಿಕಾಣಿ ಹೂಡ್ಡಿದ್ದಾನೆ. ಯಾರನ್ನೂ ಏನೂ ಕೇಳುವುದಿಲ್ಲ. ಯಾರಾದರೂ ಹಣ ಅಥವಾ ಆಹಾರ ಕೊಡಲು ಬಂದರೆ ಸ್ವೀಕರಿಸುವುದಿಲ್ಲ. ರಸ್ತೆ ಪಕ್ಕ, ಚರಂಡಿ ಮೇಲೆ ದಿನಕ್ಕೆ ಎರಡು ಹೊತ್ತು ಅಡುಗೆ ಮಾಡುತ್ತಾನೆ. ಉಳಿದಂತೆ ಅವರಿವರಿಗೆ ಸಣ್ಣಪುಟ್ಟ ಕೆಲಸ ಮಾಡಿಕೊಡುತ್ತಾನೆ. ರಾತ್ರಿಯಾಗುತ್ತಲೇ ಅಲ್ಲೇ ರಸ್ತೆ ಪಕ್ಕ ಮಲಗಿ ಬಿಡುತ್ತಾನೆ.

ಕಳೆದ ಮೂವತ್ತೆರಡು ವರ್ಷಗಳಿಂದ ಒಂದು ದಿನವೂ ವ್ಯತ್ಯಾಸವಾಗದಂತೆ ಈತ ಇಂತಹ ಬದುಕನ್ನು ನಡೆಸುತ್ತ ಬಂದಿದ್ದಾನೆ. ಒಂದು ವೇಳೆ ಈತ ಯಾರಿಂದಾದರೂ ಏನನ್ನಾದರೂ ಕೇಳ್ದಿದರೆ ಅದು ‘ವೇಳೆ ಎಷ್ಟು?’ ಎಂದು ಮಾತ್ರ.

ಗ್ರಹ-ತಾರೆಗಳ (ಜಿ.ಟಿ) ನಾರಾಯಣ ತೇ ನಮೋ ನಮೋ...

field_vote: 
No votes yet
To prevent automated spam submissions leave this field empty.

ಭಾನುವಾರ (ಜೂನ್ ೨೯, ೨೦೦೮) ವಿಜಯಕರ್ನಾಟಕ ಪತ್ರಿಕೆಯಲ್ಲಿ ಪರಾಗಸ್ಪರ್ಶ ಅಂಕಣದ ಲೇಖನ ಇಲ್ಲಿದೆ.

ಇದರಲ್ಲಿ ಸಂಪದ, ಜಿಟಿಎನ್ ಅವರೊಂದಿಗೆ ಸಂಪದದ ಸಂದರ್ಶನ ಪಾಡ್‌ಕಾಸ್ಟ್, ಇಸ್ಮಾಯಿಲ್... ಇತ್ಯಾದಿ ಉಲ್ಲೇಖಗೊಂಡಿವೆ.

- ಶ್ರೀವತ್ಸ ಜೋಶಿ

ರಾಷ್ಟ್ರಪತಿ ಹುದ್ದೆಗೆ ಘನತೆ ತಂದವರು

field_vote: 
No votes yet
To prevent automated spam submissions leave this field empty.

1950ರ ಜನವರಿ 26ರಂದು ಭಾರತ ಬ್ರಿಟನ್‌ನೊಂದಿಗಿನ ತನ್ನ ಸಂಬಂಧವನ್ನು ಕಡಿದುಕೊಂಡು ಗಣರಾಜ್ಯವಾಯಿತು. ಡಾ.ರಾಜೇಂದ್ರ ಪ್ರಸಾದ್, ಸ್ವತಂತ್ರ ಭಾರತದ ಮೊತ್ತ ಮೊದಲ ರಾಷ್ಟ್ರಪತಿಯಾದರು.

ಸಾಹಿತ್ಯಪ್ರಿಯರ ಅನಿವಾರ್ಯ ಸಂಗಾತಿ

field_vote: 
No votes yet
To prevent automated spam submissions leave this field empty.

ಲಂಕೇಶ್ ವಾರವಾರವೂ ಬರೆಯುತ್ತಿದ್ದ ಟೀಕೆ-ಟಿಪ್ಪಣಿ ಮತ್ತು ಮರೆಯುವ ಮುನ್ನ ಕಲಂನ ಲೇಖನಗಳದೇ ಒಂದು ವೈಶಿಷ್ಟ್ಯವಿದೆ.

ಶ್ರೀಪಾದರಾಜರು

field_vote: 
Average: 5 (1 vote)
To prevent automated spam submissions leave this field empty.


ಇದೇ ತಿಂಗಳ ೧೭ ನೇ ತೇದಿಯಂದು ೧೪ನೇ ಶತಮಾನದ ಮಹಾನ್ ಭಕ್ತ, ದಾಸಕೂಟದ ಹರಿಕಾರ ಶ್ರೀಪಾದರಾಜರ ಆರಾಧನೆ ನಡೆಯಿತು. ಅವರ ಒಂದು ಚಿಕ್ಕ ಪರಿಚಯ ಕೊಡುವ ಲೇಖನ ಇದು.

ಶ್ರೀಪಾದರಾಜರ ಬಾಲ್ಯದ ಹೆಸರು ಲಕ್ಶ್ಮೀನಾರಾಯಣ ಎಂದು. ಅವರು ೧೪೧೨ ರಲ್ಲಿ ಬೆಂಗಳೂರು ಸಮೀಪದ ಅಬ್ಬೂರಿನಲ್ಲಿ ಜನಿಸಿದರು. ಒಮ್ಮೆ ಪದ್ಮನಾಭತೀರ್ಥರ ಶಿಷ್ಯಗಣದವರಲ್ಲೊಬ್ಬರಾದ ೮ ನೇ ಪೀಠಾದಿಪತಿ ಸ್ವರ್ಣವರ್ಣಾತೀರ್ಥರು ಅಬ್ಬೂರಿನ ಮೂಲಕ ಸಾಗುತ್ತಿದ್ದಾಗ ಆಟವಾಡುತ್ತಿದ್ದ ಈ ಬಾಲಕನನ್ನು ಗಮನಿಸಿ, ಮಾತನಾಡಿಸಿ ಅವನಲ್ಲಿದ್ದ ಅಪಾರ ಶಕ್ತಿಯನ್ನು ಗಮನಿಸಿ ೫ನೇ ವರ್ಷಕ್ಕೆ ಸನ್ಯಾಸ ಕೊಡಿಸಿ ವಿಧ್ಯಾಭ್ಯಾಸ ಮಾಡಿಸಿದರು. ಅಬ್ಬೂರು ಎಷ್ಟುದೂರ ಇದೇ ಎಂದು ಕೇಳಿದ್ದಕ್ಕೆ ’ಮುಳುಗುತ್ತಿರುವ ಸೂರ್ಯನನ್ನು ನೋಡಿರಿ, ನಾವು ಇಲ್ಲಿ ಇನ್ನೂ ಆಟವಾಡುತ್ತಿರುವುದನ್ನು ನೋಡುತ್ತಿದ್ದೀರಿ. ಅಬ್ಬೂರು ಎಷ್ಟುದೂರ ಇದೆ ಎಂದು ಊಹಿಸಿಕೊಳ್ಳಿ’ ಎಂದರಂತೆ. ಶ್ರೀಪಾದರಾಜರು ಧೃವಾಂಶ ಸಂಭೂತರೆಂದು ನಂಬಿಕೆಇದೆ. ಶ್ರೀವ್ಯಾಸರಾಯರು ಇವರ ಶಿಷ್ಯರಲ್ಲೊಬ್ಬರು.

ಬೆಳಗಲ್ ವೀರಣ್ಣನವರ ಮಕುಟಕ್ಕಿನ್ನೊಂದು ಗರಿ!!

field_vote: 
No votes yet
To prevent automated spam submissions leave this field empty.

ನಾನು ಈ ಹಿಂದೆ ತೊಗಲುಗೊಂಬೆಯಾಟದ ತಜ್ಞ/ಕಲೆಗಾರ ಶ್ರೀ ಬೆಳಗಲ್ ವೀರಣ್ಣನವರ ಕಿರು ಪರಿಚಯ ಮಾಡಿಕೊಟ್ಟಿದ್ದೆ. ಆ ಪ್ರತಿಭಾವಂತ ಕಲಾವಿದರಿಗೆ ಈಗ ೨೦೦೭ರ ಪ್ರತಿಷ್ಟಿತ ಜಾನಪದಶ್ರೀ ಪ್ರಶಸ್ತಿ ದೊರಕಿದೆ.

ಭರದ್ವಾಜ ಮುನಿ

field_vote: 
No votes yet
To prevent automated spam submissions leave this field empty.

ಬ್ರಹ್ಮನ ಅಯೋನಿಜ ಪುತ್ರ ದೇವರ್ಷಿ ಅಂಗೀರಾರಿಗೆ ಉತಥ್ಯ ಮತ್ತು ಬೃಹಸ್ಪತಿ ಎಂಬ ಇಬ್ಬರು ಗಂಡು ಮಕ್ಕಳು. ಉತಥ್ಯನ ಪತ್ನಿ ಮಮತಾಳೊಂದಿಗೆ ಬೃಹಸ್ಪತಿ ಸೇರಿ ಭರದ್ವಾಜರ ಜನನ ಆಯಿತು.
ಉತಥ್ಯನ ಕ್ಷೇತ್ರದಲ್ಲಿ ಬೃಹಸ್ಪತಿಯ ಬೀಜದಿಂದ ಜನಿಸಿದುದರಿಂದ ‘ದ್ವಾಜ’.
ದ್ವಾಜಂ ಭರ ಇತಿ ಭರದ್ವಾಜಃ .

ಕನ್ನಡ ಕಣ್ಮಣಿ ಡಾ||ರಾಜ್ ರವರಿಗೆ ಇಂದು ಎಪ್ಪತ್ತೊಂಬತ್ತು ವರ್ಷಗಳು

field_vote: 
No votes yet
To prevent automated spam submissions leave this field empty.

In Memoriam
~ Dr. Raj Kumar ~
1929-2006

ಕನ್ನಡ ಕಣ್ಮಣಿ ಡಾ||ರಾಜ್ ರವರಿಗೆ ಇಂದು ಎಪ್ಪತ್ತೊಂಬತ್ತು ವರ್ಷಗಳು ತುಂಬುತ್ತವೆ.ಅಣ್ಣಾವ್ರಿಗೆ ನಮ್ಮೆಲ್ಲರ ಪರವಾಗಿ ಹುಟ್ಟು ಹಬ್ಬದ ಶುಭಾಶಯಗಳು!!

ಇಂದಿನ ದಿನ ಕನ್ನಡಿಗರಿಗೆ ಶುಭ ದಿನ ನಮ್ಮ ಪ್ರೀತಿಯ ರಾಜ್ ಹುಟ್ಟಿದ ದಿನ.ಅವರ ಕೊಡುಗೆ ಅಪಾರ ಆದ್ದರಿಂದಲೇ ಅವರು ನಮಗೆಲ್ಲರಿಗೂ ಹೃದಯದಷ್ಟು ಹತ್ತಿರ.

ಬೇಂದ್ರೆ ನೆನಪು

field_vote: 
Average: 5 (2 votes)
To prevent automated spam submissions leave this field empty.

ವರಕವಿ ದ ರಾ ಬೇಂದ್ರೆ

ಪ್ರತಿ ಯುಗಾದಿಯಂದು ರೇಡಿಯೋ ಅಥವಾ ದೂರದರ್ಶನದಲ್ಲಿ ತಪ್ಪದೆ ಪ್ರಸಾರವಾಗುವ ಗೀತೆ ಬೇಂದ್ರೆಯವರ "ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ". ಒಂದು ರೀತಿಯಲ್ಲಿ ಬೇವು ಬೆಲ್ಲದಂತೆ ಈ ಗೀತೆಯೂ ಹಬ್ಬದ ಅವಿಭಾಜ್ಯ ಅಂಗವಾಗಿದೆ.

ಬೇಂದ್ರೆಯವರು ಈ ಪ್ರಸಿದ್ಧ ಗೀತೆಯಲ್ಲದೆ ಯುಗಾದಿಯ ಬಗ್ಗೆ ಇನ್ನೂ ಒಂದು ಗೀತೆಯನ್ನು ರಚಿಸಿದ್ದಾರೆ. ಅದರ ಮೊದಲ ಸಾಲುಗಳು ಇಂತಿವೆ:
ಅವರವರಿಗೆ ಅವರ ಹಾದಿ
ಅವರ ಹಾದಿ
ನನಗೆ ನಿನಗೆ ಒಂದೇ ಆದಿ
ಒಂದೇ ದಾದಿ
ಯುಗದ ಮಧ್ಯೆ ಬಿಂದು ಒಂದೂ
ಯುಗದ ಮಧ್ಯೆ ಬಿಂದು ಒಂದೂ

ಬೇಂದ್ರೆಯವರ ಇಂಥಹ ಸರಳವೆನಿಸುವ ಕವನಗಳಲ್ಲೇ ಜೀವನ ದರ್ಶನವಾಗುತ್ತದೆ. ಒಮ್ಮೆ ಬೇಂದ್ರೆಯವರ ಕಾವ್ಯದ ಬಗ್ಗೆ ಮಾತಾಡಲು ಬಂದವರಿಗೆ ವರಕವಿಯ ಕೆಲವು ಅಪರೂಪದ ಅಥವಾ ವಿಶಿಷ್ಟ ಕವನಗಳ ಬಗ್ಗೆ ಹೇಳಲು ಕೋರಲಾಯಿತು. ಅದಕ್ಕೆ ಉತ್ತರವಾಗಿ ಅವರು ಬೇಂದ್ರೆಯವರ ಪ್ರತಿ ಕವನವೂ ವಿಶಿಷ್ಟವೂ ಅಪರೂಪದ್ದೂ ಆದದ್ದು ಎಂದರು.

ಶಿಗ್ಗಾವಿ ಮಾಸ್ತರರು ಮತ್ತು ಕೋತಿಗಳು.....

field_vote: 
Average: 5 (1 vote)
To prevent automated spam submissions leave this field empty.

ಸುಮಾರು ೨ ವರ್ಷಗಳ ಹಿಂದೆ ಪ್ರಜಾವಾಣಿಯಲ್ಲಿ ಗುತ್ತಲದ ಶಿಗ್ಗಾವಿ ಮಾಸ್ತರರ ಬಗ್ಗೆ ಆರ್.ಎಸ್.ಪಾಟೀಲ ಎಂಬವರು ಬರೆದ ಲೇಖನ ಬಂದಿತ್ತು. ಶಿಗ್ಗಾವಿ ಮಾಸ್ತರರ ಮನೆಗೆ ಮುಂಜಾನೆ ೧೧ ಗಂಟೆಗೆ ಮತ್ತು ಸಂಜೆ ೪ ಗಂಟೆಗೆ ಕಾಡು ಕೋತಿಗಳು ಊಟಕ್ಕೆ ಬರುವುದರ ಬಗ್ಗೆ ಆ ಲೇಖನದಲ್ಲಿ ತಿಳಿಸಲಾಗಿತ್ತು.

ಅದೊಂದು ದಿನ ಶಿಗ್ಗಾವಿ ಮಾಸ್ತರರು ಮನೆಯ ಜಗುಲಿಯಲ್ಲಿ ಕುಳಿತು ಊಟ ಮಾಡುತ್ತಿದ್ದರಂತೆ. ಆಗ ಮರವೊಂದರ ಮೇಲೆ ೨ ಕೋತಿಗಳು ಕಂಡುಬಂದವು. ಸಣ್ಣ ರೊಟ್ಟಿ ಚೂರನ್ನು ಅವುಗಳೆಡೆ ಎಸೆದಾಗ ದಾಕ್ಷಿಣ್ಯದಿಂದ ಕಸಿದುಕೊಂಡವು. ನಂತರ ಮರುದಿನ ಮತ್ತವೇ ೨ ಕೋತಿಗಳು. ಮತ್ತೆ ಶಿಗ್ಗಾವಿ ಮಾಸ್ತರರು ರೊಟ್ಟಿ ಚೂರು ನೀಡಿದರು. ಮರುದಿನ ೫ ಕೋತಿಗಳು. ಹೀಗೆ ಕೋತಿಗಳ ಒಂದು ಗುಂಪೇ ಬರತೊಡಗಿತು. ಒಂದೇ ವಾರದೊಳಗೆ ದಾಕ್ಷಿಣ್ಯವೆಲ್ಲಾ ಮಾಯ. ಸೀದಾ ಜಗುಲಿಗೆ ಬಂದು ಶಿಗ್ಗಾವಿ ಮಾಸ್ತರರ ತೊಡೆಯೇರಿ ರೊಟ್ಟಿ ತಿನ್ನುವುದು, ನೇರ ಮನೆಯೊಳಗೆ ಬಂದು ಶಿಗ್ಗಾವಿ ಮಾಸ್ತರರ ಶ್ರೀಮತಿ ಅನುಸೂಯಮ್ಮನವರನ್ನು ತಿನ್ನಲು ಕೊಡುವಂತೆ ಪೀಡಿಸುವುದು, ಅಡಿಗೆ ಮನೆಗೆ ನುಗ್ಗಿ ತಿನ್ನಲು ಹುಡುಕಾಡುವುದು ಈ ಮಟ್ಟಿಗೆ ವಾನರರ ಸಲುಗೆ ಬೆಳೆಯಿತು.

ಪಡಸಾಲೆಯಲ್ಲಿ ಹಾಸಿದ ಚಾಪೆಯ ಮೇಲೆ ಸಾಲಲ್ಲಿ ಕುಳಿತ ಕೋತಿ ಕುಟುಂಬಕ್ಕೆ ಬಡಿಸುವ ಕಾರ್ಯ ಅನುಸೂಯಮ್ಮನವರದ್ದಾಗಿತ್ತು. ಕಿತ್ತಾಡದೇ, ಸದ್ದಿಲ್ಲದೇ ಕೊಟ್ಟದ್ದನ್ನು ತಿಂದು ಮನೆಯೊಳಗೆ ಒಂದಷ್ಟು ಸುತ್ತಾಡಿ ನಂತರ ನಿಧಾನಕ್ಕೆ ಹೊರಡುವ ಕೋತಿಗಳು ಮರುದಿನ ೧೧ಕ್ಕೆ ಅಥವಾ ಅದೇ ದಿನ ಸಂಜೆ ೪ಕ್ಕೆ ಮತ್ತೆ ಹಾಜರು. ಕೋತಿಗಳಿಗೆ ಅಡುಗೆ ತಯಾರಿಸುವುದು ಅನುಸೂಯಮ್ಮನವರಿಗೆ ಪ್ರತಿನಿತ್ಯದ ಕೆಲಸವಾಗಿತ್ತು. ದಿನಾಲೂ ಅವಲಕ್ಕಿ, ರೊಟ್ಟಿ, ಮಂಡಕ್ಕಿ, ಸೌತೆಕಾಯಿ ಇವುಗಳನ್ನು ನೀಡುವ ಬದಲು ಯಾವುದಾದರೂ ಹೊಸ ರುಚಿಯ ತಿಂಡಿಯನ್ನು ನೀಡಿದಾಗ, ಆ ಹೊಸ ರುಚಿ ಹಿಡಿಸದಿದ್ದರೆ ಕೋತಿಗಳ ರಂಪಾಟ. ಆಗ ಮತ್ತೆ ಅವೇ ಎಂದಿನ ತಿಂಡಿಗಳನ್ನು ನೀಡಿ ಅವುಗಳನ್ನು ಸಮಾಧಾನಪಡಿಸುವುದು. ಈ ಕೋತಿಗಳಿಗೆ ಶಿಗ್ಗಾವಿ ಮಾಸ್ತರರೆಂದರೆ ಅತಿ ಅಚ್ಚುಮೆಚ್ಚು. ಅವರೊಂದಿಗೆ ಬೆಳೆಸಿಕೊಂಡಷ್ಟು ಸಲುಗೆಯನ್ನು ಉಳಿದವರೊಂದಿಗೆ ಈ ಕೋತಿಗಳು ಬೆಳೆಸಿಕೊಂಡಿಲ್ಲ. ರೊಟ್ಟಿ ಈ ಕೋತಿಗಳ ಅಚ್ಚುಮೆಚ್ಚಿನ ತಿಂಡಿಯಂತೆ. ರೊಟ್ಟಿಯನ್ನು ಚೂರು ಮಾಡಿ ಚಾಪೆಯ ಮೇಲೆ ಇಟ್ಟರೆ, ಬಂದ ಎಲ್ಲಾ ಕೋತಿಗಳು ಸಾವಕಾಶವಾಗಿ ಹಂಚಿಕೊಂಡು ತಿನ್ನುತ್ತಿದ್ದವಂತೆ.

ಅಮ್ಮ ನಿನಗೆ ಗೊತ್ತೇನಮ್ಮ, ನೀನಿಲ್ಲದಿದ್ದರೆ ಹೆದರಿಕೆಯಮ್ಮ...

field_vote: 
No votes yet
To prevent automated spam submissions leave this field empty.

ಶ್ರೀರಾಮಕೃಷ್ಣ ಪರಮಹಂಸರು

field_vote: 
No votes yet
To prevent automated spam submissions leave this field empty.

ಶ್ರೀರಾಮಕೃಷ್ಣ ಪರಮಹಂಸರು
`ಸತ್ಸಂಗಿ`, ಹೊಳೆನರಸೀಪುರ
( ಇಂದು ದಿ: 09-03-2008 - ಹಿಂದೂ ಪಂಚಾಂಗದ ಪ್ರಕಾರ ಇಂದು ಪರಮಹಂಸರ ಜನ್ಮದಿನವಾಗಿದೆ.
ಆದ್ದರಿಂದ ಅವರ ಸ್ಮರಣೆಗಾಗಿ ಈ ಸಂಕ್ಷಿಪ್ತ ಲೇಖನವನ್ನು ಪ್ರಕಟಿಸಿ ಅವರಿಗೆ ವಂದನೆಗಳನ್ನು ಸಲ್ಲಿಸಿರುವೆ)

ರಾನ್ ಮುಯೆಕ್‍ನ ಅಧ್ಭುತ ಶಿಲ್ಪಕಲೆ

field_vote: 
No votes yet
To prevent automated spam submissions leave this field empty.

 

ಆಸ್ಟ್ರೇಲಿಯಾದ  ಶಿಲ್ಪಿ ರಾನ್ ಮುಯೆಕ್ ಅಗಾಧ ಪ್ರಮಾಣದ “ಹೈಪರ್ ರಿಯಲಿಸ್ಟಿಕ್” ಕಲಾಕೃತಿಗಳನ್ನು ತಯಾರಿಸುವುದರಲ್ಲಿ ಅಪ್ರತಿಮ ಕೌಶಲವುಳ್ಳವನು.

ಆಧುನಿಕ ಔದ್ಯೋಗಿಕ ಭಾರತದ ಶಿಲ್ಪಿ , ಅಪ್ರತಿಮ ದೇಶಪ್ರೇಮಿ - ಶ್ರೀ ಜಮ್‍ಷೆಡ್ಜಿ ಟಾಟಾ.

field_vote: 
No votes yet
To prevent automated spam submissions leave this field empty.

- ನವರತ್ನ ಸುಧೀರ್

3rd March 2008 - ಶ್ರೀ  ಜಮ್‍ಷೆಡ್ಜಿ ಟಾಟಾ ಅವರ 169ನೇ ಜನ್ಮದಿನ. ಭಾರತೀಯ ವಿಜ್ನಾನ ಸಂಸ್ಥೆ ಮತ್ತು ಟಾಟಾ ಸಂಸ್ಥೆಗಳ Founders Day. 2008-2009 ಭಾರತೀಯ ವಿಜ್ನಾನ ಸಂಸ್ಥೆಯ ಶತಮಾನೋತ್ಸವ ವರ್ಷ ಕೂಡ.

ಅಪರೂಪದ ಪ್ರಧಾನಮಂತ್ರಿ ಮುರಾರಜೀ ದೇಸಾಯಿ

field_vote: 
No votes yet
To prevent automated spam submissions leave this field empty.

ಅಪರೂಪದ ಪ್ರಧಾನಮಂತ್ರಿ ಮುರಾರಜೀ ದೇಸಾಯಿ
=======================

ಬೆಳಗಲ್ಲು ವೀರಣ್ಣನವರ ತಲೆಗೊಂದು ಹೊಸ ಗರಿ ಮೂಡಿದೆ

field_vote: 
No votes yet
To prevent automated spam submissions leave this field empty.

ನಾನು ಈ ಹಿಂದೆ ತೊಗಲುಗೊಂಬೆಯಾಟದ ಪ್ರವೀಣ ಶ್ರೀ ಬೆಳಗಲ್ಲು ವೀರಣ್ಣನವರ ವ್ಯಕ್ತಿ ಪರಿಚಯ ಮಾಡಿಕೊಟ್ಟಿರುವುದು ಸರಿಯಷ್ಟೆ.

ಪ್ರೊ.ಕೆ. ರಾಮದಾಸ್ ಬಾಲ್ಯದ ಪುಟತೆರೆದ ವಿಲಿಯಂ

field_vote: 
No votes yet
To prevent automated spam submissions leave this field empty.

ಪ್ರೊ.ಕೆ.ರಾಮದಾಸ್ ಬಗ್ಗೆ ಅಥವಾ ಸ್ವತಃ ರಾಮದಾಸರೇ ಬರೆದ ಒಂದೂ ಪುಸ್ತಕವಿಲ್ಲ ಎನ್ನುವ ಕೊರತೆಯನ್ನು ತಮ್ಮದೇ ರೀತಿಯಲ್ಲಿ ನೀಗಿಸಿದ್ದಾರೆ ರಾಮದಾಸ್‌ರವರ ಬಾಲ್ಯ ಸಖ ಶ್ರೀ ವಿಲಿಯಂ.

ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ - ಮುಂದುವರೆದ ಲೇಖನ

field_vote: 
No votes yet
To prevent automated spam submissions leave this field empty.

ಬೆಳಗಲ್ಲು ವೀರಣ್ಣನವರ ತಂಡ ಸಮಕಾಲೀನ ಸಮಸ್ಯೆಗಳಿಗೆ ಅಪಾರವಾಗಿ ಸ್ಪಂಧಿಸಿದೆ. ಅದರಲ್ಲಿಯೂ ಸ್ವಾತಂತ್ರ್ಯ ಸಂಗ್ರಾಮ, ಬಾಪು, ಪ್ರವಾದಿ ಬಸವೇಶ್ವರ, ಕಿತ್ತೂರು ರಾಣಿ ಚೆನ್ನಮ್ಮ ಮುಂತಾದ ಪ್ರಯೋಗಗಳು ತೊಗಲುಗೊಂಬೆಯಾಟದಲ್ಲಿ ಪ್ರದರ್ಶನಗೊಂಡಿದ್ದು, ಮಹತ್ವದ ಸಾಧನೆಗಳಾಗಿವೆ.

ತೊಗಲುಗೊಂಬೆಯಾಟದ ಚಾಣಾಕ್ಷ - ಬೆಳಗಲ್ಲು ವೀರಣ್ಣ

field_vote: 
No votes yet
To prevent automated spam submissions leave this field empty.

ವೃತ್ತಿ ರಂಗಭೂಮಿ ಹಾಗು ತೊಗಲುಗೊಂಬೆಯಾಟದ ಮಹಾನ್ ಕಲಾವಿದ ಶ್ರೀ ಬೆಳಗಲ್ಲು ವೀರಣ್ಣ, ರಾಷ್ಟ್ರೀಯ ಸ್ಥರದ ಪ್ರತಿಭಾಶಾಲಿ.

ಪೌರಾಣಿಕ ಕಥೆಗಳಿಗಷ್ಟೇ ಸೀಮಿತವಾಗಿದ್ದ ತೊಗಲು ಆಟದ ಪ್ರಕಾರವನ್ನು ಐತಿಹಾಸಿಕ ಮತ್ತು ಸಾಮಾಜಿಕ ವಸ್ತುಗಳ ಕಥಾ ಪ್ರಸಂಗಗಳನ್ನು ನಿರೂಪಿಸಲು ಮೊಟ್ಟ ಮೊದಲಿಗೆ ಭಾರತದಲ್ಲಿ ಬಳಸಿದ ಏಕೈಕ ಕಲಾವಿದರೆಂಬ ಹೆಗ್ಗಳಿಕೆಗೆ ಇವರು ಪಾತ್ರರಾಗಿದ್ದಾರೆ.

ಸುಮರು ೧೯೩೬ರಲ್ಲಿ ಸಿಳ್ಳೆಕ್ಯಾತ ಜನಾಂಗದಲ್ಲಿ ಹುಟ್ಟಿದ ಈ ಕಲಾವಿದರ ಪೂರ್ವಜರು ಸಹ ಮಹಾನ್ ಕಲಾವಿದರೇ. ತಂದೆ ದೊಡ್ಡ ಹನುಮಂತಪ್ಪ ಪ್ರಸಿದ್ಧ ಪಿಟೀಲು ವಾದಕರಾಗಿದ್ದರು. ಅಲ್ಲದೆ ಬಯಲಾಟದ ಸ್ತ್ರೀ ಪಾತ್ರ ವೇಶಧಾರಿಯಾಗಿದ್ದು, ಇವರ ಅಜ್ಜ ಗಂಜಿ ಹನುಮಂತಪ್ಪ ಜ್ಯೋತಿಷ್ಯ ಮತ್ತು ರಮಲ ವಿದ್ಯಾ ಪಂಡಿತರಾಗಿದ್ದರು.

ಬಾಲಕ ವೀರಣ್ಣ ತಂದೆಯ ಬಯಲಾಟದ ವಿದ್ಯೆಯನ್ನು ಮಗೂಡಿಸಿಕೊಂದ್ರು. ಅವರ ಧ್ವನಿ ಮತ್ತು ಗಾಯನ ಸಿರಿಯನ್ನು ಮೆಚ್ಚಿಕೊಂಡಿದ್ದ ಜೋಳದರಾಶಿ ದೊಡ್ಡನಗೌಡರು ಸಿಡಿಗಿನ ಮೊಳೆ ಶ್ರೀ ವೈ.ಎಂ. ಚಂದ್ರಯ್ಯಸ್ವಾಮಿ ತಮ್ಮ ಕಂಪನಿ ನಾಟಕಗಳಿಗೆ ಹುಟ್ಟು ಕಲಾವಿದರಾದ ವೀರಣ್ಣನವರನ್ನು ಸೇರಿಸಿಕೊಂಡು ಆರಂಭದ ದಿನಗಳಲ್ಲಿ ಪ್ರೋತ್ಸಾಹಿಸಿದರು.

ಚಾರಿತ್ರಿಕ ನಾಟಕಗಳ ಪುನರ್ಜನ್ಮದಾತ - ಆಂಜನೇಯ - ಮುಂದುವರೆದ ಲೇಖನ

field_vote: 
No votes yet
To prevent automated spam submissions leave this field empty.

ಆಂಜನೇಯ ಅವರ ಸಾಹಿತ್ಯ ಸೇವೆ: