ಪ್ರಬಂಧ

'ಶಿವನುಟ್ಟ ಸೀರೆ'

ಸಾಮಾನ್ಯ ಶಕೆಯ ೧೪೧೦ನೆಯ ವರ್ಷದಲ್ಲಿ ಹುಟ್ಟಿದ ಹಂಪೆಯ ಶಾಸನವೊಂದರಲ್ಲಿ [S. I. I. IV, ಸಂ. ೨೭೬, ಪುಟ ೬೦-೬೬, ಸಾಲು ೯೫-೯೫] ಈ ಕೆಳಕೊಂಡ ಪದ್ಯವಿದೆ. ಅವನಿಯನಾಕ್ರಮಿಪುದು ದಾ ನವಿಚಿತ್ರಂ ಲೋಕವಱಿಯೆ ಶುಚಿಯೆನಿಸಿರ್ದ್ದುಂ ಶಿವನುಟ್ಟ ಸೀರೆಯಂ ಪಿಡಿ ದವಗಡಿಪಳ್ಕೀರ್ತ್ತಿಲಕ್ಷ್ಮಿ ಲಕ್ಷ್ಮೀಧರನಾ ಮೊದಲನೆಯ ದೇವರಾಯನ ಮಂತ್ರಿಯಾದ ಲಕ್ಷ್ಮೀಧರನು ಗಣಪತಿ ದೇವಾಲಯವನ್ನು ಮಾಡಿಸಿ ಈ ಶಾಸನವನ್ನು ಹಾಕಿಸಿದನು. ಶಾಸನದಲ್ಲಿ ಬರುವ ಲಕ್ಷ್ಮೀಧರಾಮಾತ್ಯನ ವಿಸ್ತಾರವಾದ ಪ್ರಶಸ್ತಿಯಲ್ಲಿ ಈ ಪದ್ಯವೂ ಸೇರಿದೆ. ಇದರಲ್ಲಿಯ "ಲೋಕವಱಿಯೆ ಶುಚಿಯೆನಿಸಿರ್ದ್ದುಂ ಶಿವನುಟ್ಟ ಸೀರೆಯಂ ಪಿಡಿದವಗಡಿಪಳ್" ವಾಕ್ಯಖಂಡದ ಅರ್ಥವನ್ನು ಬಿಡಿಸಲು ಕೊಂಚ ಅವಕಾಶವಿದೆ.
field_vote: 
Average: 4.3 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಕೃತಜ್ಞತಾ ದಿನಾಚರಣೆ

೧೬೧೯ರ ಡಿಸೆಂಬರ್ ತಿಂಗಳು. ಹೊಸ ಬದುಕನ್ನರಸುತ್ತ ಇಂಗ್ಲೆಂಡಿನಿಂದ ಹೊರಟ ಕೆಲವು ಕುಟುಂಬಗಳನ್ನು ಹೊತ್ತ ನಾವೆಯೊಂದು ಅಮೇರಿಕೆಯ ದಡ ಮುಟ್ಟಿತು. ಛಳಿಗಾಲ. ನೂರಾರು ತಲೆಮಾರುಗಳಿಂದ ಅಲ್ಲಿಯೆ ಬಾಳಿ ಬದುಕಿದ್ದ ವಾಂಪನೊಅಗ್ ಜನಾಂಗದ ಅಮೇರಿಕೆಯ ಆದಿವಾಸಿಗಳು ಬಿಳಿಯರನ್ನು ಬರಮಾಡಿಕೊಂಡು ಅವರ ನೆರವಿಗೆ ಬಂದರು. ತಾವು ಬೆಳೆದ ಜೋಳ ಕೊಟ್ಟರು. ಜೊತೆಯಲ್ಲಿ ಬೇಟೆಯಾಡಿದರು. ಬಿಳಿಯರ ಧಾನ್ಯ ಇಲ್ಲಿ ಬೆಳೆಯದು. ವಾಂಪನೊಅಗ್ ಬಿತ್ತಲು ಬೀಜ ಕೊಟ್ಟರು, ಜಾಗ ಮಾಡಿಕೊಟ್ಟರು. ಹೊಸ ನೆಲದಲ್ಲಿ ಬದುಕುವ ಬಗೆ ಕಲಿಸಿಕೊಟ್ಟರು. ೧೬೨೧ರ ಕುಯ್ಲಿನಲಿ ಬಿಳಿಯರಿಗೆ ಕೈತುಂಬ ಬೆಳೆ ಬಂದಿತು. ಹೊಸ ನಾಡಿನಲ್ಲಿ ಬದುಕುವ ಜಾಡು ತಿಳಿದಿತ್ತು. ಇನ್ನು ಯಾವ ಭಯವೂ ಇಲ್ಲ. ಬಿಳಿಯರು ನಿಜವಾಗಿ ದಡ ಮುಟ್ಟಿದರು. ದೇವರಿಗೆ ಕೃತಜ್ಞತೆ ಹೇಳಿಕೊಳ್ಳಲು ಹಬ್ಬ ಮಾಡಿದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.5 (2 votes)
To prevent automated spam submissions leave this field empty.

ಮಕ್ಕಳ ರಾತ್ರಿ ಶಿಬಿರ

ಒಂದನೇಯ ಇಯತ್ತೆಯಿಂದ ನಾಲ್ಕನೆಯ ಇಯತ್ತೆಯವರೆವಿಗೆ ಪ್ರಾಥಮಿಕ ಶಾಲೆ ಎಂದು ಹೆಸರಿಸುವರು. ಮಕ್ಕಳು ಮೊದಲು ಪ್ರಾಥಮಿಕ ಶಾಲೆಯ ಮೆಟ್ಟಿಲನ್ನು ಹತ್ತುವರು. ಆಗ ಅವರು ಎಲ್ಲಕ್ಕೂ ಹಿರಿಯರನ್ನು ಅವಲಂಬಿಸುವರು. ನಂತರ ಹೋಗುವುದೇ ಮಾಧ್ಯಮಿಕ ಶಾಲೆಗೆ. ಪ್ರಾಥಮಿಕದಿಂದ ಮಾಧ್ಯಮಿಕಕ್ಕೆ ಹೋಗುವ ಸನ್ನಿವೇಶವೊಂದು ಆಯಾಮ, ಎಂದು ತಿಳಿಯಬಹುದು. ಆಗ ಮಕ್ಕಳಲ್ಲಿ ಸ್ವಲ್ಪ ಮಟ್ಟಿನ ಸ್ವಾವಲಂಬನೆ ಬರುವುದು. ಇಂತಹ ಸನ್ನಿವೇಶದಲ್ಲಿ ಮಕ್ಕಳ ಅಭಿವೃದ್ಧಿಗೆ ಅನುಕೂಲವಾಗುವಂತೆ ಮುಂಬೈನ ಗೋಕುಲಧಾಮ ಶಾಲೆಯವರು ಪ್ರತಿವರ್ಷವೂ ನಾಲ್ಕನೆಯ ತರಗತಿಗೆ ಮಕ್ಕಳಿಗೆ ಒಂದು ರಾತ್ರಿಯ ಶಿಬಿರವನ್ನು ( ನೈಟ್ ಕ್ಯಾಂಪ್ ) ಏರ್ಪಡಿಸುತ್ತಾರೆ.

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಕುಚೇಲ(ಸುಧಾಮ)ನ ಭಾಗ್ಯ- ಮಾಸ್ತಿಯವರ ಕಥೆ

ಶ್ರೀ ಕೃಷ್ಣನ ಬಾಲ್ಯಗೆಳೆಯ ಸುಧಾಮನ ಕಥೆ ನಿಮಗೆ ಗೊತ್ತು. ಅದನ್ನು ಕಥೆಗಾರ ಮಾಸ್ತಿಯವರು ಹೇಗೆ ನೋಡುತ್ತಾರೆ ಗೊತ್ತೆ ?

field_vote: 
Average: 3.8 (5 votes)
To prevent automated spam submissions leave this field empty.
ಲೇಖನ ವರ್ಗ (Category): 

ಅತೀತ ಶಕ್ತಿ

ನಾನು ಆ ಕಛೇರಿಯ ಆಡಳಿತಾಧಿಕಾರಿಯಾಗಿ ಹೊಸದಾಗಿ ಬಂದಿರುವೆ. ಸರ್‍‍ಪ್ರೈಸ್ ಚೆಕ್ ಮಾಡಲೆಂದು ಮೊದಲನೆಯ ದಿನವೇ ಅಲ್ಲಿಯ ಕೇರ್‍‍ಟೇಕರ್ ಬಳಿಗೆ ಬೆಳಗಿನ ೭ ಘಂಟೆಗೆ ಬಂದಿದ್ದೇನೆ. ಸೀದಾ ಬಂದವನೇ ನಾನು ಅಲ್ಲಿದ್ದ ಒಂದು ಕುರ್ಚಿಯ ಮೇಲೆ ಕುಳಿತೆ. ಕೇರ್‍‍ಟೇಕರ್ ಅಲ್ಲಿದ್ದ ಎಲೆಕ್ಟ್ರೀಷಿಯನ್ನಿಗೆ ಏನೋ ಸಾಮಾನನ್ನು ಕೊಡುತ್ತಿದ್ದ. ನನ್ನ ಕಡೆ ತಲೆ ಎತ್ತಿ ಕೂಡಾ ನೋಡಲಿಲ್ಲ. ಕಸ ಗುಡಿಸುವ ಹೆಂಗಸರು ಎಲೆ ಅಡಿಕೆ ಹೊಗೆಸೊಪ್ಪು ಜಗಿಯುತ್ತಾ ಅಲ್ಲಿಯೇ ಮೂಲೆಯಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದರು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.5 (4 votes)
To prevent automated spam submissions leave this field empty.

'ಅಮೇರಿಕಾದಿಂದ ಬಂದವನು'- ಸಿಂಗರ್ ನ ಇನ್ನೊಂದು ಕಥೆ

'ಅಮೇರಿಕಾದಿಂದ ಬಂದವನು'- ಸಿಂಗರ್ ನ ಇನ್ನೊಂದು ಕಥೆ

೧೯೭೮ರ ನೋಬೆಲ್ ಪ್ರಶಸ್ತಿಗೆ ಪಾತ್ರನಾದ ಐಸಾಕ್ ಬಾಷೆವಿಸ್ ಸಿಂಗರ್ ಪೋಲಂಡ್ ದೇಶದ ಯಿದ್ದಿಷ್ ಭಾಷೆಯ ಸಾಹಿತಿ. ಕನ್ನಡ ಓದುಗರಿಗೆ ಈತನ ಸಾಹಿತ್ಯದ ಆಯ್ದ ಭಾಗಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರದ ನೋಬೆಲ್ ಪುರಸ್ಕೃತ ಸಾಹಿತ್ಯ ಮಾಲೆಯ ಅಡಿ 'ಐಸಾಕ್ ಬಾಷೆವಿಸ್ ಸಿಂಗರ್ -ವಾಚಿಕೆ'ಯಲ್ಲಿ ಕನ್ನಡಿಸಲಾಗಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ನಾನು ಮಾಡಿದ ಪುಸ್ತಕಗಳ ವಿಲೇವಾರಿ .

ಅಂತೂ ಭಾರೀ ವಿವಾದಾಸ್ಪದವಾಗಿದ್ದ ನನ್ನ ಪುಸ್ತಕಗಳ ವಿಲೇವಾರಿ ಅಂತೂ ಮೊನ್ನೆ ಶನಿವಾರ ಇಲ್ಲಿ (ಮುಂಬೈ) ಯ ವಿಲೇಪಾರ್ಲೆಯ ಅಂಗಡಿಯೊಂದರಲ್ಲಿ ಮಾಡಿದೆ. ಸುಮ್ಮನೆ ಕೊಟ್ಟು ಬಿಟ್ಟೆ. ದಾನವೆಂದು ಕರೆಯಲಾಗದು. ನನಗೆ 'ಬೇಡವಾದ' , ಅಂಗಡಿಯವರಿಗೂ 'ಬೇಡವಾದ' ( 'ಬೇಡವಾದ' - pun not intended - ಚರ್ಚೆಯಲ್ಲಿ ಭಾಗವಹಿಸಿದ ಎಲ್ಲರಿಗೂ ಧನ್ಯವಾದಗಳು. ) ಪುಸ್ತಕಗಳನ್ನು ಕೊಟ್ಟರೆ , ದಾನ ಹೇಗೆ ಆದೀತು ? . ಏನೇ ಇರಲಿ . ನನ್ನ ಪುಸ್ತಕದ ಹೊರೆ ಸ್ವಲ್ಪ ಕಡಿಮೆಯಾಯಿತು. ಸಲಹೆ ಕೊಟ್ಟ ಪವನಜರಿಗೆ ಧನ್ಯವಾದಗಳು.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಮುಂಬೈಯಲ್ಲಿ ಕನ್ನಡದ ಪ್ರಚಾರ!

ಇವತ್ತು ಮುಂಬೈಯಲ್ಲಿ ನಾನು ಮನೆ ಬಿಟ್ಟು ಹೊರಬೀಳುವಾಗ 'ಹೊಸಗನ್ನಡ ಸಾಹಿತ್ಯದ ಉದಯಕಾಲ( ಉತ್ತರ ಕರ್ನಾಟಕವನ್ನು ಅನುಲಕ್ಷಿಸಿ)' ಎಂಬ ಪುಸ್ತಕವೊಂದನ್ನು ಇಟ್ಟುಕೊಂಡೆ. ಅದರಲ್ಲಿನ ಅನೇಕವಿಷಯಗಳು ಬಹುತೇಕ ಕನ್ನಡಿಗರಿಗೆ ಗೊತ್ತಿಲ್ಲ. ಅದನ್ನು ಸಂಪದದಲ್ಲಿ ಹಾಕಬೇಕೆಂದು ರೈಲಿನಲ್ಲಿ ಓದಲು ಹೊರತೆಗೆದೆ. ಅದರಲ್ಲಿ ಮುಖ್ಯವಾಗಿ ಕನ್ನಡ ಭಾಷೆಯ ಪ್ರಾರಂಭಿಕ ಬೆಳವಣಿಗೆಯ ಸಂಕ್ಷಿಪ್ತ ಪರಿಚಯದ ನಂತರ ೩-೪ ಶತಮಾನ ಹೇಗೆ ಕತ್ತಲಯುಗವನ್ನು ಕಂಡಿತು ( ವಿಶೇಷತ: ಉತ್ತರ ಕರ್ನಾಟಕದಲ್ಲಿ ) , ಅದರಿಂದ ಹೇಗೆ ಹೊರಬಂದು ಇಂದಿನ ಸ್ಥಿತಿ ತಲುಪಿತು . ಅದಕ್ಕೆ ಯಾರು ಯಾರು ಕೊಡುಗೆ ಸಲ್ಲಿಸಿದರು . ಎಂಬ ಬಗ್ಗೆ ಕುತೂಹಲಕರ ವಿವರಗಳಿವೆ. ಈ ಪುಸ್ತಕವನ್ನು ಶ್ರೀ ರಾ.ಯ.ಧಾರವಾಡಕರ ಅವರು ಬರೆದಿದ್ದು . ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಪ್ರಕಟಣೆಯಾಗಿದೆ. ( ಈ ಪುಸ್ತಕ ಯಾರದೋ ಮನೆಯಲ್ಲಿ ಸುಮ್ಮನೆ ಬಿದ್ದಿತ್ತು. ಅವರು ನನ್ನ ಮೂಲಕ ಅನೇಕ ಪುಸ್ತಕಗಳನ್ನು ವಿಲೇವಾರಿ ಮಾಡುತ್ತಿದ್ದಾಗ ನಾನು ಎತ್ತಿಟ್ಟುಕೊಂಡಿದ್ದೇನೆ ಅಂದರೆ ಕದ್ದಿದ್ದೇನೆ. - ಬೆಗ್, ಬೈ , ಬಾರೋ ಆರ್ ಸ್ಟೀಲ್ ಎಂದು ನಾಣ್ಣುಡಿಯೇ ಇದೆಯಲ್ಲ?!) . ತುಂಬ ಅಮೂಲ್ಯ ಪುಸ್ತಕವೇ ಸರಿ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

SMS ಎಂಬ ನವ ಜಾನಪದ

ನಿಮ್ಮ ಮೊಬೈಲ್‌ನಲ್ಲಿ ಅಥವಾ ಜೇಬಿನಲ್ಲಿ ಕರೆ ಮಾಡುವಷ್ಟು ದುಡ್ಡಿಲ್ಲದಿದ್ದರೆ `ಕಾಲ್‌ ಮಿ' ಎಂದು ಎಸ್‌ಎಂಎಸ್‌ ಮಾಡಿ ಅವರಿಂದ ಕರೆ ಬಂದಾಗ ಗಂಟೆಗಟ್ಟಲೆ ಮಾತಾಡಬಹುದು. ಕ್ಲಾಸಿನಲ್ಲಿ ಬೋರ್‌ ಹೊಡೆಸುವ ಲೆಕ್ಚರರ್‌ ಇನ್ನಷ್ಟು ಬೋರ್‌ ಹೊಡೆಸುವ ಲೆಕ್ಚರ್‌ ಕೊಡುತ್ತಿದ್ದರೆ `ಬೋರೇಗೌಡನ ಕ್ಲಾಸು ಬೋರೂ ಬೋರೂ' ಎಂದು ಯಾರಿಗಾದರೂ ಎಸ್‌ಎಂಎಸ್‌ ಮಾಡಿ ನಿದ್ದೆಯಿಂದ ತಪ್ಪಿಸಿಕೊಳ್ಳಬಹುದು. ರಾಜಕಾರಣಿಯೊಬ್ಬನ ನೀರಸ ಭಾಷಣ ಕೇಳಬೇಕಾದ ಪತ್ರಕರ್ತನೊಬ್ಬ ಎಸ್‌ಎಂಎಸ್‌ಗೆ ಮೊರೆಹೋಗಿ ಇರವು ಮರೆಯಬಹುದು.

field_vote: 
Average: 4 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ನಮ್ಮ ಕನ್ನಡದ ಆಶುಕವಿ, ನಾಡ ಕವಿ, - 'ಸರ್ವಜ್ಞ' !

ನಮ್ಮ ಕನ್ನಡದ ಆಶುಕವಿ, ನಾಡ ಕವಿ, - 'ಸರ್ವಜ್ಞ' !

field_vote: 
Average: 3 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ರಾಜ್ಕುಮಾರ!

ಐದು ವರ್ಷಗಳ ಹಿಂದಿನ ಮಾತು. ವೀರಪ್ಪನಿಂದ ಬಿಡಿಸಿಕೊಂದು ಜಕ್ಕೂರಿನ ಏರ್‌ಪೋರ್ಟಿನಲ್ಲಿ ಕಾಲಿರಿಸಿದ ಕೂಡಲೇ ರಾಜ್‌ಕುಮಾರ್‌ ಮಾಡಿದ ಮೊದಲ ಕೆಲಸವೆಂದರೆ ಮಂಡಿಯೂರಿ, ನೆಲಕ್ಕೆ ಬಾಗಿ, ಈ ಮಣ್ಣಿಗೆ ಮುತ್ತಿಟ್ಟಿದ್ದು! ಸಂಕೋಚ ಸ್ವಭಾವದ ಕನ್ನಡಿಗರಿಗೆ ಇದೊಂದು ಅದ್ಭುತ ಸಂಕೇತವಾಗಿ ಹೋಗಬೇಕಾಗಿತ್ತು.

field_vote: 
Average: 3 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಭಾರತೀಯ ಶಾಸ್ತ್ರೀಯ ಸಂಗೀತ -ಒಂದು ಇಣುಕು (ಭಾಗ ೧)

ಲಾಸ್ ವೇಗಸ್ ನ್ ಡಾನ್ಸ್ ಬಾರೊಂದಕ್ಕೆ ಭೇಟಿ ನೀಡಿದ್ದ ನನ್ನ ಸ್ನೇಹಿತನೊಬ್ಬನನ್ನು ಅಲ್ಲಿನ ಡಾನ್ಸರೊಬ್ಬಳು ಭಾರತದ ಬಗ್ಗೆ ಕೇಳಿದಾಗ “India is a land of cultures” ಅಂತ ಥಟ್ಟೆಂದು ಉತ್ತರಿಸಿದನೆಂದು ಹೇಳಿದಾಗ ನನಗೆ ಅಭಾಸವಾದರೂ “ಭಾರತದ ಬಗ್ಗೆ ಮಾತನಾಡವಾಗ ಸಹಜವಾಗಿ ಅದರ ಪ್ರಾಚೀನ ಹಾಗು ಭವ್ಯ ಸಂಸ್ಕೃತಿಯ ಬಗ್ಗೆ ಮಾತನಾಡುವವರೇ ಹೆಚ್ಚು” ಎಂಬ ಮಾತು ಸ್ಪಷ್ಟವಾಯಿತು.

field_vote: 
Average: 4.8 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಚೈನ್ ಮೈಲ್‍ಗಳು

ಚೈನ್ ಮೈಲ್‍ಗಳು ಬರುವುದು ಸರ್ವೇ ಸಾಮಾನ್ಯ. ಅದರಲ್ಲಿಯೂ ಅಡ್ವರ್ಟೈಸ್‍ಮೆಂಟ್‍ಗಳ ಹಾವಳಿಯಂತೂ ಬಹಳ. ಮೊದಲು ಒಬ್ಬರಿಗೆ ಅಂಚೆ ಕಳುಹಿಸಿ, ಇದನ್ನು ಇನ್ನಿತರ ಹತ್ತು ಜನಗಳಿಗೆ ಕಳುಹಿಸಿದರೆ ನಿಮಗೆ ಇಂತಹ ವಸ್ತು ಪುಕ್ಕಟೆ ಎಂದು ತಿಳಿಸುತ್ತಾರೆ. ಕೆಲವರು ಇವುಗಳನ್ನು ಸ್ಪ್ಯಾಮ್ ಮೈಲ್‍ಗಳು ಎಂದೂ ಪರಿಗಣಿಸುವರು. ಇವರ ಚಟುವಟಿಕೆಗಳು ಹೇಗಿರುತ್ತದೆ ಎಂಬುದು ಬಹಳ ಕೌತುಕವಾದ ವಿಷಯ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕರ್ಣಾಟಕದಲ್ಲಿ ಹೆಣ್ಣುಮಕ್ಕಳು ಮನೆಯಲ್ಲಿ ಹೇಳುವ ಹಾಡುಗಳು !

೧೯೩೫ ರಲ್ಲಿ ನಮ್ಮ ತಾಯಿಯವರು ಬರೆದಿಟ್ಟ, ಅವರು ಹೇಳುತ್ತಿದ್ದ ಹಾಡುಗಳ ಸಂಗ್ರಹದಿಂದ :

ಅವರು ನೂರಾರು ಹಾಡುಗಳನ್ನು ಪುಸ್ತಕ ನೋಡದೆ, ಬಾಯಿನಲ್ಲೇ ಹೇಳುತ್ತಿದ್ದರು. ಒಂದು ಉದಾಹರಣೆ ಇಲ್ಲಿ ಪ್ರಸ್ತುತ ಪಡಿಸುತ್ತಿದ್ದೇನೆ. ಇದು 'ನಳಚರಿತ್ರೆ'ಯ ಪ್ರಸಂಗ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಭಾಷೆಯಲ್ಲಿ ಸರಿ ಮತ್ತು ತಪ್ಪು

ಕೆಲವು ದಿನಗಳಿಂದ ಇಸ್ಮಾಯಿಲ್ ಅವರ ಬರಹಕ್ಕೆ ಪ್ರತಿಕ್ರಿಯೆಯಾಗಿ ಕುತೂಹಲಕರ ಚರ್ಚೆ ಬೆಳೆದಿರುವುದು ಗಮನಿಸಿದ್ದೇನೆ. ತುಳು ಮತ್ತು ಕನ್ನಡ ಸಂಬಂಧ ಕುರಿತು, ಲ ಳಗಳ ಬಳಕೆ ಕುರಿತು, ಅ ಹ ಗಳನ್ನು ಕುರಿತು, ಮತ್ತು ಕೆಲವು ರೂಪಗಳು ಬೇಡಾದ ಇತ್ಯಾದಿ ರೂಪುಗೊಂದಿರುವ ಕುರಿತು ಚರ್ಚೆ ನಡೆದಿದೆ. ನಾವೆಲ್ಲ ಗಮನಿಸಬೇಕಾದ ಕೆಲವು ಮೂಲ ಸಂಗತಿಗಳನ್ನು ಗಮನಿಸಬೇಕು ಅನ್ನಿಸಿದೆ. ೧. ಕನ್ನಡ ಒಂದೇ ಅಲ್ಲ ಅಸಂಖ್ಯಾತ ಕನ್ನಡಗಳಿವೆ: ಕನ್ನಡದ ಮೊದಲ ಕೃತಿ ಕವಿರಾಜ ಮಾರ್ಗದಲ್ಲಿ ಒಂದು ಮಾತಿದೆ. ಅಲ್ಲಿ ಕೃತಿಕಾರ "ಕನ್ನಡಂಗಳ್" ಕನ್ನಡಗಳು ಎಂದು ಬಹುವಚನವನ್ನು ಬಳಸಿದ್ದಾನೆ. ಭಾಷೆ ಅಸ್ತಿತ್ವಕ್ಕೆ ಬರುವುದು ಯಾರಾದರೂ ಅದನ್ನು ಬಳಸಿದಾಗ ಮಾತ್ರವೇ. ಭೌಗೋಳಿಕವಾಗಿ ಬೇರೆ ಬೇರೆ ಪ್ರದೇಶದ ಜನರ ಮಾತಿನಲ್ಲಿ ಭಿನ್ನತೆಗಳು ಕಾಣುತ್ತವೆ. ಉಚ್ಚಾರದಲ್ಲಿ ಸ್ವರಗಳ ವ್ಯತ್ಯಾಸವೇ ಎದ್ದು ಕಾಣುವುದು. ನಂತರ ಆಸ್ಪಿರೇಟೆಡ್ ಧ್ವನಿಗಳದು: ಲ-ಳ, ಇತ್ಯಾದಿ. ವ್ಯಂಜನಗಳ ಉಚ್ಚಾರದಲ್ಲಿ ಅಂಥ ವ್ಯತ್ಯಾಸ ಕಾಣುವುದಿಲ್ಲ. ಇಂಥ ವ್ಯತ್ಯಾಸಗಳು ಸರಿಯೂ ಅಲ್ಲ, ತಪ್ಪೂ ಅಲ್ಲ. ಹಾಗೆ ಒಂದು ಪ್ರದೇಶದ ಎಲ್ಲ ಜನರೂ ಬಿಡಿ ಎಲ್ಲ ವ್ಯಕ್ತಿಗಳೂ ಒಂದೇ ಥರ ಉಚ್ಚರಿಸುವುದೂ ಸಾಧ್ಯವೇ ಇಲ್ಲ. ಉಚ್ಚಾರದ ಮೂಲಕ ಗಮನಕ್ಕೆ ಬರುವ ವ್ಯತ್ಯಾಸಗಳನ್ನೆಲ್ಲ ಪಟ್ಟಿ ಮಾಡಿ ವಿವರಿಸುವುದೆಂದರೆ ಸಾವಿರ ನಾಲಗೆಯ ಆದಿಶೇಷನಿಗೂ ಅಸಾಧ್ಯವಾದ ಬೇಸರ ಹುಟ್ಟಿಸುವ ಕೆಲಸ ಅನ್ನುತ್ತದೆ ಕವಿರಾಜಮಾರ್ಗ. ಇಂಥ ಉಚ್ಚಾರ ವ್ಯತ್ಯಾಸ ಎಲ್ಲ, ಅಂದರೆ ಜಗತ್ತಿನ ಎಲ್ಲ ಭಾಷೆಗಳಲ್ಲೂ ಇದ್ದದ್ದೇ. ಇವುಗಳಲ್ಲಿ ಯಾವುದು ಸರಿ, ಯಾವುದು ತಪ್ಪು ಅನ್ನುವ ಪ್ರಶ್ನೆಯೇ ತಪ್ಪು. ಪರಿಸರ ವೈವಿಧ್ಯ ಹೇಗೆ ಅಗತ್ಯವೋ ಹಾಗೆಯೇ ಭಾಷೆಯೊಂದು ಜೀವಂತ ಉಳಿದು ಬೆಳೆಯಲು ಒಂದೇ ಭಾಷೆಯೊಳಗಿನ ವೈವಿಧ್ಯವೂ ಹಾಗೆಯೇ ಅಗತ್ಯ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡಂಗಳ್: ಪದ್ಯ ಹೀಗಿದೆ

ಸಂಪದದ ಗೆಳೆಯರೊಬ್ಬರು ಕನ್ನಡಂಗಳ್ ಅನ್ನುವ ಮಾತು ಕವಿರಾಜಮಾರ್ಗದಲ್ಲಿದೆಯೇ ಎಂದು ಸಂದೇಹ ವ್ಯಕ್ತಪಡಿಸಿದ್ದರು. ಆ ಮಾತು ಬರುವ ಜಾಗ ಆಶ್ವಾಸ ೧, ಪದ್ಯ ೪೬.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಭಾಷೆ ಮತ್ತು ಸಾಮಾಜಿಕ ವಾಸ್ತವ

ಭಾಷೆ ಚಲನಶೀಲವಾಗಿದ್ದರಷ್ಟೇ ಉಳಿದುಕೊಳ್ಳುತ್ತದೆ. ಕನ್ನಡ ಉಳಿದು ಬೆಳೆಯಬೇಕಾದರೆ ಅದು ಚಲನಶೀಲವಾಗಿರಲೇ ಬೇಕಾಗುತ್ತದೆ. ಎಲ್ಲ ಜೀವಂತ ಭಾಷೆಗಳೂ ಹೀಗೆ ಸದಾ ಬದಲಾಗುತ್ತಿರುತ್ತವೆ. ಎಷ್ಟೋ ಪದಗಳು ಬಳಕೆಯಾಗದೆ ಕಾಣೆಯಾಗುವಂತೆಯೇ ಹೊಸ ಪದಗಳೂ ಸೇರಿಕೊಳ್ಳುತ್ತಿರುತ್ತವೆ. ಕೆಲವು ಪದಗಳು ಅರ್ಥವನ್ನೇ ಬದಲಾಯಿಸಿಕೊಂಡು ಉಳಿದುಕೊಂಡಿರುತ್ತವೆ. ಈ ಬದಲಾವಣೆಯನ್ನು ಪ್ರಜ್ಞಾಪೂರ್ವಕವಾಗಿ ತಡೆಯುಲು ಸಾಧ್ಯವೇ?

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಭಾಷಾ ಪ್ರಯೋಗ ಲಹರಿ

ಭಾಷೆಯ ಪ್ರಯೋಗವು ಪ್ರದೇಶದಿಂದ ಪ್ರದೇಶಕ್ಕೆ ಭಿನ್ನರೂಪ ತಾಳುವುದನ್ನು ಎಲ್ಲರೂ ಗಮನಿಸಿಯೇ ಇದ್ದೇವೆ. ಹೀಗೆ ಆಯಾ ಪ್ರಾಂತ್ಯದಲ್ಲಿಯೂ ಮತ್ತೊಂದಿಷ್ಟು ಒಳವೈವಿಧ್ಯಗಳನ್ನು ಕಾಣಲಿಕ್ಕೆ ಸಾಧ್ಯ. ಜನಾಂಗೀಯ ಪ್ರಭೇದ ಎಂದರೂ ಆದೀತೇನೊ. ಕೆಲ ವರ್ಷಗಳ ಹಿಂದಿನವರೆಗೂ ಕೊಪ್ಪಳದಲ್ಲಿ ಸ್ಥಳೀಯ ಸಾರಿಗೆಗೆ ಕುದುರೆಗಾಡಿಗಳ ಉಪಯೋಗ ಹೆಚ್ಚು ರೂಢಿಯಲ್ಲಿತ್ತು. (ಈಗಲೂ ಕುದುರೆ ಗಾಡಿಗಳು ಇವೆಯಾದರೂ ಆಟೋರಿಕ್ಷಾಗಳ ಪ್ರಾಬಲ್ಯ ಜಾಸ್ತಿ) ಟಾಂಗಾ ಎಂದು ಇವುಗಳನ್ನು ಕರೆಯುತ್ತಾರೆ. ಇವುಗಳ ಮಾಲಿಕರು ಶೇಕಡಾ ೯೯ ಮುಸ್ಲಿಮರು. ಆದರೂ ಕರ್ಮಠ ವರ್ಗದವರಲ್ಲ. ನನಗೆ ತಿಳಿದಂತೆ ಸಾಂಪ್ರದಾಯಿಕ ಮಸೀದಿಯಲ್ಲಿ ಇವರ ವ್ಯವಹಾರಗಳೇನೂ ನಡೆಯುವುದಿಲ್ಲ. ಹೆಸರುಗಳೂ ಸಹ ಅಷ್ಟೇ. ಹುಶೇನಪ್ಪ, ಯಮನೂರಪ್ಪ, ರಾಜಾ ಭಕ್ಷಿ, ಕಾಶೆಮ್ಮ (ಹೆಣ್ಣು) ಯಮನೂರವ್ವ (ಹೆಣ್ಣು) ಹೀಗೆ ಒಂದು ರೀತಿಯ ಸೂಫಿ ಎನ್ನುವ ಮನಸ್ತತ್ತ್ವದವರು. ಭಾಷೆಯೂ ಇದೇ ರೀತಿ, ಒಂದಿಷ್ಟು ಉರ್ದು ಒಂದಿಷ್ಟು ಕನ್ನಡ. ಯಾವ ಸಂದರ್ಭದಲ್ಲಿ ಯಾವ ಭಾಷೆಯು, ಯಾವ ಜಾಗದಲ್ಲಿ ಮಿಶ್ರಣವಾಗುತ್ತದೆ ಎಂದು ಅವರ ಬಾಯಿಗಷ್ಟೇ ಗೊತ್ತು. ಅದರ ಅರ್ಥ ಎದುರಿಗಿರುವವ ಇನ್ನೊಬ್ಬ ಯಮನೂರಪ್ಪನೇ ಆಗಿದ್ದರೆ ಮಾತ್ರ ಗೊತ್ತಾಗಲು ಸಾಧ್ಯ. ಇಲ್ಲವಾದರೆ ಇವರೊಂದಿಗೆ ಯಾವುದಾದರೂ ರೀತಿಯಲ್ಲಿ ನಿತ್ಯ ವಹಿವಾಟು ಇರಬೇಕು. ಇಲ್ಲಿ ನೋಡಿ ಒಂದೆರಡು ತಮಾಶೆಯ ಸಂವಾದ ಪ್ರಸಂಗಗಳಿವೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಮೊಬೈಲೇ ಪ್ರವೇಶ ಪತ್ರ!

ಮೊಬೈಲೇ ಪ್ರವೇಶ ಪತ್ರ!
ಮೊಬೈಲ್‌ನ ಬಳಕೆಯನ್ನು ದೂರವಾಣಿ ಕರೆಗೇ ಸೀಮಿತಗೊಳಿಸದೆ, ಅದರ ಉಪಯುಕ್ತತೆಯನ್ನು ವಿಸ್ತರಿಸಿ ತಮ್ಮ ಆದಾಯ ಹೆಚ್ಚಿಸಿಕೊಳ್ಳಲು ಮೊಬೈಲ್ ಸೇವೆ ಒದಗಿಸುವ ಕಂಪೆನಿಗಳು ಪ್ರಯತ್ನಿಸುತ್ತಲೇ ಇವೆ. ಮೊಬೈಲ್ ಸೆಟ್‌ನ ಒಳಗಿರುವ ಚಿಪ್‌(ಟ್ಯಾಗ್)ನಲ್ಲಿ ಬಳಕೆದಾರನ ವಿವರಗಳನ್ನು ದಾಸ್ತಾನು ಮಾಡಲಾಗುತ್ತದೆ. ಇದರಲ್ಲಿರುವ ವಿವರಗಳನ್ನು ವಾಚಕ ಸಾಧನವೊಂದು ಸಂಪರ್ಕಕ್ಕೆ ಬರದೇ ಓದಬಲ್ಲುದು.ಸಂಗೀತ ಕಚೇರಿಗೋ ಇನ್ಯಾವುದಾದರೂ ಕಾರ್ಯಕ್ರಮಕ್ಕೆ ಟಿಕೆಟನ್ನು ಖರೀದಿಸಲು, ಮೊಬೈಲ್ ಸೆಟ್‌ನ ಮೂಲಕವೇ ಸಾಧ್ಯ. ಟ್ಯಾಗ್‌ನ ವಿವರಗಳನ್ನು ಓದಿ, ಬಳಕೆದಾರನ ಬಗ್ಗೆ ತಿಳಿದುಕೊಂಡು, ಟಿಕೆಟ್ ಖರೀದಿಸಿದ ಬಗ್ಗೆಯೂ ಟ್ಯಾಗ್‌ನಲ್ಲಿ ನಮೂದಿಸಲಾಗುತ್ತದೆ. ನಂತರ ಕಾರ್ಯಕ್ರಮಕ್ಕೆ ಹೋದಾಗ, ಮೊಬೈಲ್ ಒಯ್ಯಲು ಮರೆಯಬಾರದು!ಯಾಕೆಂದರೆ ಅಲ್ಲಿ ಪ್ರವೇಶದ್ವಾರದಲ್ಲಿರುವ ಯಂತ್ರವೊಂದರ ಸಮೀಪ, ಮೊಬೈಲ್ ಒಯ್ದು, ಟ್ಯಾಗ್‌ನಲ್ಲಿ ದಾಖಲಾಗಿರುವ ಟಿಕೆಟ್‌ನ ವಿವರಗಳನ್ನು ಯಂತ್ರ ಗ್ರಹಿಸಿದಾಗಲಷ್ಟೇ ಪ್ರವೇಶದ್ವಾರ ತೆರೆಯುತ್ತದೆ.ಸೇವೆ ಒದಗಿಸುವ ಕಂಪೆನಿ ಯಾವುದೇ ಆಗಿದ್ದರೂ ಈ ಹೊಸ ಸೇವೆ ಒದಗಿಸಲು ಸೇವಾದಾತೃ ಕಂಪೆನಿಗಳು ಒಡಂಬಡಿಕೆಗೆ ಬಂದಿವೆ.

field_vote: 
Average: 3.3 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಕನ್ನಡಕ್ಕೆ ಬಂದ ಕಿಟ್ಟೆಲ್ ಸಂಪತ್ತು

Rev Ferdinand Kittelರೆವೆರೆಂಡ್ ಎಫ್. ಕಿಟ್ಟೆಲ್ ರ ಕನ್ನಡ- ಇಂಗ್ಲೀಷ್ ನಿಘಂಟಿನಷ್ಟು ಅಪೂರ್ವವಾದದ್ದು ಕನ್ನಡದಲ್ಲಿ ಇನ್ನೊಂದಿಲ್ಲ. ಅದರ ಗಾತ್ರ, ಘನತೆ, ಸಂಗ್ರಹ, ಪದ್ಧತಿಗಳು ಅನನ್ಯವಾದವುಗಳು. ಅದರ ಪ್ರಕಟಣೆ ನೂರುವರ್ಷದ ಮೇಲಾದಾಗ್ಯೂ ಇಂದಿನ ಸಂದರ್ಭದಲ್ಲೂ ಕಿಟೆಲ್ ರು ಕನ್ನಡ ಸಾರಸ್ವತಕ್ಕೆ ಸಲ್ಲಿಸಿದ ಅಮೋಘ ಸೇವೆಯ ಸ್ಮರಣೆ ಮಾಡುವುದು ಔಚಿತ್ಯಪೂರ್ಣವಾಗಿದೆ.

ಅವರು ಕ್ರೈಸ್ತ ಮತ ಪ್ರಚಾರಕ್ಕಾಗಿಯೇ ೧೮೫೩ ರಲ್ಲಿ ಬಾರತಕ್ಕೆ ಬಂದವರು. ಮೊದಲು ಧಾರವಾಡ, ಮಂಗಳೂರು, ಹುಬ್ಬಳ್ಳಿ ಯಲ್ಲಿ ಮತಪ್ರಚಾರದ ಕಾರ್ಯ ನಡೆಸಿದರು. ಭಾಷಾ ಪ್ರಚಾರಕ್ಕೆ ಮುಖ್ಯವಾದದ್ದು ಅಲ್ಲಿನ ದೇಸಿ ಭಾಷೆ. ಅದಕ್ಕಾಗಿ ಅವರು ಎಲ್ಲಕ್ಕಿಂತ ಮೊದಲೇ ಕನ್ನಡಭಾಷೆಯನ್ನು ಕಲಿತರು. ಧರ್ಮಪ್ರಚಾರವನ್ನು ಸ್ವಲ್ಪ ಕಾಲ ಬದಿಗಿಟ್ಟು ದೇಸಿ ಭಾಷೆ, ಸಾಹಿತ್ಯ, ಸಂಸ್ಕೃತಿ ಇತ್ಯಾದಿಗಳನ್ನು ಕಲಿತಿದ್ದಲ್ಲದೆ ಅದರಲ್ಲಿ ಪ್ರಾವೀಣ್ಯತೆಯನ್ನೂ ಪಡೆದರೆಂಬುದು ಇಲ್ಲಿ ನಾವು ಗಮನಿಸಬೇಕಾದ ಸಂಗತಿ.

ರೆವರೆಂಡ್ .ಕಿಟ್ಟಲ್ ಅದರಲ್ಲಿ ಅಗ್ರೇಸರು ಎಂದು ಖಂಡಿತವಾಗಿ ಹೇಳಬಹುದು. ಕಿಟ್ಟೆಲ್ ರು ಜರ್ಮನಿಯ 'ಹ್ಯಾನ್ ವರ್ 'ನಲ್ಲಿ ೧೮೩೨ ನೆಯ ಏಪ್ರಿಲ್ ೭ ರಂದು ಜನಿಸಿದರು. ಅವರ ಫಾಸ್ಟರ್ ತಂದೆಯೂ ಮತಪ್ರಚಾರ ಮಾಡುತ್ತಿದ್ದರು. ಹೀಗೆ ತಮ್ಮ ಚಿಕ್ಕಂದಿನಲ್ಲೇ ಅವರು ಮತಪ್ರಚಾರವನ್ನು ಸ್ವೀಕರಿಸಲೇಬೇಕಾಯಿತು. ಕಿಟ್ಟಲ್ ಮಂಗಳೂರಿನ 'ಪಾಲೆನಿತ್'' ಎಂಬ ಹುಡುಗಿಯೊಡನೆ ೧೮೬೦ ರಲ್ಲಿ ವಿವಾಹವಾದರು. ಈ ಮದುವೆ ೪ ವರ್ಷಗಳಲ್ಲೇ ಅಂತ್ಯವಾಯಿತು. ಬಹುಬೇಗ ಅವರ ಹೆಂಡತಿ ತೀರಿಕೊಂಡರು. ಸುಮಾರು ೧೪ ವರ್ಷಗಳಕಾಲ ಮತಪ್ರಚಾರದ ಕೆಲಸ ಮುಂದುವರೆಸಿ, ಜರ್ಮನಿಗೆ ತೆರಳಿದರು. ಅವರು ಮತ್ತೆ ಭಾರತಕ್ಕೆ ಮರಳಿ ಬಂದಿದ್ದು ೧೮೬೭ ರಲ್ಲಿ. ಈ ಬಾರಿ ಅವರು ಮರು ಮದುವೆಯಾದರು. ಆಕೆ ತಮ್ಮ ಮೊದಲನೆಯ ಪತ್ನಿ ಯ ತಂಗಿ- 'ಜೂಲಿಯ' ಎಂಬುವಳೊಡನೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಮುಂಬೈಗೀತೆ, 'ಬಾಂಬೆ ಮೆರಿ ಜಾನ್' ಕೊಟ್ಟ, 'ಒ. ಪಿ. ನಯ್ಯರ್', ಇನ್ನೆಲ್ಲಿ ?

ಮುಂಬೈಗೀತೆ, 'ಬಾಂಬೆ ಮೆರಿ ಜಾನ್' ಕೊಟ್ಟ, 'ಒ.ಪಿ.ನಯ್ಯರ್', ಇನ್ನೆಲ್ಲಿ ?

(೧೯೨೬-೨೦೦೭)

ಸೂಟು ಬೂಟಿನ ಫೆಲ್ಟ್, ಹ್ಯಾಟ್, ಜೊತೆ, ಮುಗುಳುನಗೆಯನ್ನೂ ಧರಿಸಿ, ಕೈಯಲ್ಲಿ ಸದಾ 'ವಾಕಿಂಗ್ ಸ್ಟಿಕ್,' ಹಿಡಿದಿರುತ್ತಿದ್ದ, ಈ 'ಅಂಕಲ್' ಯಾರು ಎಂದು ಪ್ರಶ್ನಾರ್ಥಕವಾಗಿ ನೋಡಿ ತಮ್ಮಲ್ಲೇ ಪಿಸುಗುಟ್ಟುತ್ತಿದ್ದ ಪವಾರ್ ನಗರ, ಥಾನದ ಪಡ್ಡೆಹುಡುಗರಿಗೆ, ವಿಸ್ಮಯಾಗಿರಬೇಕು ! ಅಲ್ಲಿ, ಕ್ರಿಕೆಟ್ ಆಟ್ ವಾಡುತ್ತಿದ್ದಾಗ ಅವರ ಮಧ್ಯೆ, 'ನಯ್ಯರ್' ನಡೆದುಕೊಂಡು ಹೋಗುತ್ತಿದ್ದರಂತೆ. ಆ ವಯೊವೃದ್ಧರು ಬೇರೆ ಯಾರೂ ಆಗಿರದೆ, ಖ್ಯಾತ ಸಂಗೀತಜ್ಞ ಒ. ಪಿ. ನಯ್ಯರ್ ! 'ರಾಣೀ ನಖ್ವಾ,' ಅವರ ಮನೆಯಲ್ಲಿ ಶನಿವಾರ ರಾರತ್ರಿ ೩-೩೦ ಕ್ಕೆ ಒ. ಪಿ. ನಯಾರ್, ಮೃತರಾಗಿದ್ದರು. ಭಾನುವಾರ, ಜನವರಿ ೨೮ ರಂದು, ಅವರ ಅಂತಿಮ ದರ್ಶನಕ್ಕಾಗಿ ದೊಡ್ಡ ಸಂಖ್ಯೆಯಲ್ಲಿ ಮನೆಯ ಮುಂದೆ ಜನರು ನೆರೆದಿದ್ದರು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕಾಡುತ್ತಿರುವ ಒ೦ದು ವಚನ

ಎಲೆಗಳೆದ ಮರದಲ್ಲಿ ನೆರಳನರಸಲಿಲ್ಲ-
ಕಳೆಯರೆತ ದೀಪದಲಿ ಬೆಳಕನರಸಲಿಲ್ಲ-
ಕುರುಹಳಿದ ಮೂರ್ತಿಯಲಿ ರೂಪವರಸಲಿಲ್ಲ-
ಶಬ್ದವಡಗಿ ನಿಶ್ಶಬ್ದನಾದ ಬಸವನಲ್ಲಿ ಶಬ್ದವರಸಲಿಲ್ಲ.
ಸಂಗಯ್ಯನಲ್ಲಿ ಕಾಯವಿಲ್ಲದ ಕರುಣಿಯಾದೆ ನಾನು.

ಈ ಸು೦ದರವಾದ ವಚನದ ಕವಿ ನೀಲಾಂಬಿಕೆ. ನೀಲಾಂಬಿಕೆ ಸಾವಿರಾರು ವಚನಗಳನ್ನು ಬರೆದಂತೆ ಕಾಣುವುದಿಲ್ಲ. ಅಥವಾ ಬರೆದಿರುವುದೂ ತು೦ಬಾ ಜನಪ್ರಿಯವಾದ೦ತೆ ಕಾಣುವುದಿಲ್ಲ. ಇದಕ್ಕೆ ಹಲವಾರು ಕಾರಣಗಳು ಇರಬಹುದು. ಆದರೆ ನನಗೆ ತು೦ಬಾ ಕುತೂಹಲ ಕೆರಳಿಸಿದ್ದು ಈ ಪದ್ಯದೊಳಗೆ ನೇತ್ಯಾತ್ಮಕ ಅಂದರೆ ನೆಗೆಟಿವ್ ಅನ್ನಿಸಬಹುದಾದ ಭಾವಗಳ ಮೂಲಕ ಮತ್ತೊ೦ದು ನೆಲೆಗೆ ಜಿಗಿಯುವ ಶಕ್ತಿ ಕಾಣುವುದರಿ೦ದ. ಹೊಸ ನೆಲೆಗೆ ಜಿಗಿದಾಗಿಯೂ ಬಿಟ್ಟ ನೇತ್ಯಾತ್ಮಕ ನೆಲೆ ತನ್ನ ಅರ್ಥವನ್ನು ಬಿಟ್ಟುಕೊಡದೆ ನಮ್ಮ ಜತೆ ಆಟವಾಡುತ್ತಲೇ ಇರುವ ಗುಣವಿರುವುದರಿ೦ದ.

field_vote: 
Average: 2.2 (5 votes)
To prevent automated spam submissions leave this field empty.
ಲೇಖನ ವರ್ಗ (Category): 

ಉರಿಯ ನಾಲಗೆಯ ಕುರ್ತುಕೋಟಿ

ತೊಗಲ ನಾಲಗೆ ನಿಜವ ನುಡಿಯಲೆಳೆಸಿದರೆ ತಾ
ನಂಗೈಲಿ ಪ್ರಾಣಗಳ ಹಿಡಿಯಬೇಕು
ಇಲ್ಲದಿರೆ ನೀರಿನೊಲು ತಣ್ಣಗಿದ್ದವನದನು
ಉರಿಯ ನಾಲಗೆಯಿಂದ ನುಡಿಯಬೇಕು.

ಬೇಂದ್ರೆ ಪದ್ಯವೊಂದರ ಮೊದಲ ಸಾಲುಗಳು ಇವು. ಇವನ್ನು ನಾನು ಓದಿದ್ದು ಕೀರ್ತಿನಾಥ ಕುರ್ತುಕೋಟಿಯರ ಪ್ರಬಂಧವೊ೦ದರಲ್ಲಿ. ತೊಗಲ ನಾಲಗೆ ಹಾಗು ಉರಿಯ ನಾಲಗೆ ಕುರಿತ ಅವರ ವ್ಯಾಖ್ಯಾನ ನನ್ನ ಮನಸ್ಸನ್ನು ಸೂರೆಗೊ೦ಡಿತ್ತು. ಈಗ ಹೋದ ವಾರವಷ್ಟೇ ಕುರ್ತುಕೋಟಿಯವರು ನಿಧನರಾಗಿದ್ದಾರೆ. ಆ ಸುದ್ದಿ ತಂದ ಎದೆಯ ಭಾರದಲ್ಲಿ ಅವರ ಉರಿಯನಾಲಗೆ ಟಿಪ್ಪಣಿಗಳ ಪುಸ್ತಕ ತೆಗೆದು ಮತ್ತೆ ಓದತೊಡಗಿದೆ. ಅವರ ಬೇರೆ ಬೇರೆ ಪ್ರಬಂಧ ಟಿಪ್ಪಣಿಗಳು ಮತ್ತೆ ನನ್ನ ಮನಸ್ಸನ್ನು ಆವರಿಸಿತು-ಓದುತ್ತಾ ಹೋದಂತೆ ಬೇಂದ್ರೆಯವರ ಪದ್ಯದ ಸಾಲುಗಳು ಹೇಗೆ ಕುರ್ತುಕೋಟಿಯವರಿಗೇ ಸಲ್ಲುತ್ತದೆ ಅನ್ನಿಸಿತು. ಧರ್ಮದ ಹೆಸರಿನಲ್ಲಿ ನಡೆದಿರುವ ಹಿಂಸೆಯನ್ನು ಅವರು ತಣ್ಣಗೆ ಖಂಡಿಸುವ ರೀತಿ ನೋಡಿದರೆ ಈ ಮಾತು ಅರ್ಥವಾಗುತ್ತದೆ.
ತಮ್ಮ ಪ್ರಬಂಧವೊಂದರಲ್ಲಿ "ಪುರಾಣಕತೆಗಳನ್ನು ಭಾವನಾವಿಫುಲತೆಯಿಂದ ರಕ್ಷಿಸಿಕೊಳ್ಳಲು ಪ್ರಯತ್ನಮಾಡಿದರೆ ಅವು ಮರೆತು ಹೋಗುತ್ತವೆ ಅಥವಾ ಮರೆತುಹೋದಷ್ಟೂ ಒಳ್ಳೆಯದೇ. ನಮ್ಮ ನಂಬಿಕೆಗೆ ಕುತ್ತು ಬಂದರೆ ಅದರಿಂದುಂಟಾಗುವ ದಿಗ್ಭ್ರಮೆಯಲ್ಲಿ ನಾವು ಇನ್ನೊಬ್ಬರ ಪ್ರಾಣವನ್ನು ತೆಗೆಯಲು ಹಿಂದುಮುಂದು ನೋಡುವುದಿಲ್ಲ. ನಮ್ಮ ಪುರಾಣಗಳಿಗೆ ವೀರಾವೇಶದ ರಕ್ಷಣೆ ಬೇಕಾಗಿಲ್ಲ... ಅವುಗಳನ್ನು ಇತಿಹಾಸಗಳೆಂದು ಭ್ರಮಿಸಿದರೆ ಮತ್ತೊಂದು ರಕ್ತಪಾತಕ್ಕೆ ಎಡೆಮಾಡಿಕೊಡುತ್ತಿದ್ದೇವೆ" ಎಂದು ಹೇಳಿದ್ದಾರೆ. ಹೀಗೆನ್ನುವ ಕುರ್ತುಕೋಟಿಯವರು ನಿಜವಾಗಿಯೂ -ನೀರಿನೊಲು ತಣ್ಣಗಿದ್ದವರು-ನಿಜವನ್ನು ಉರಿಯ ನಾಲಗೆಯಿ೦ದ ನುಡಿದವರು. ನೀರು-ಉರಿಯನ್ನು ಒಟ್ಟಿಗೆ ದಕ್ಕಿಸಿಕೊಂಡವರು. ತಾನು ದಕ್ಕಿಸಿಕೊಂಡದ್ದನ್ನು ನಿರಾಳದಿಂದ ಹಂಚಿಕೊಂಡವರು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ತಲೆಯೊಳಗೊಂದು ನಿಮ್ಮದೇ ಅರ್ಥಕೋಶ

ಭಾರತೀಯ ರಂಗಭೂಮಿಯಲ್ಲಿ ಹೆಗ್ಗುರುತು ಮೂಡಿಸಿ ಹೋದ ಬಿ.ವಿ.ಕಾರಂತರು ಪದದ ಅರ್ಥದ ಬಗ್ಗೆ ಮಾತನಾಡುತ್ತಾ "ಅರ್ಥಕೋಶದಲ್ಲಿನ ಅರ್ಥಗಳು ನಾಟಕಮಾಡುವವರಿಗೆ ಏನೇನೂ ಸಾಲದು" ಎಂದು ಹೇಳುತ್ತಿದ್ದರು. ನಾಟಕದಲ್ಲಿ ಪದಗಳನ್ನು ಹೇಳುವಾಗ ಅದರ ತದ್ವಿರುದ್ಧವಾದ ಅರ್ಥ ಬರುವ ಹಾಗೆ ಹೇಳಬಹುದು. ಅಷ್ಟೇ ಅಲ್ಲ, ನೇರಾರ್ಥ, ತದ್ವಿರುದ್ಧಾರ್ಥದ ನಡುವೆ ಹತ್ತು ಹಲವಾರು ವಿವಿಧಾರ್ಥಗಳನ್ನೂ ಪದಗಳಿಗೆ ತುಂಬಬಹುದು. ಮತ್ತು ಮೂಲಾರ್ಥದಲ್ಲಿ ಇಲ್ಲದ ಅರ್ಥವನ್ನು ನುಡಿಯ ರೀತಿಯಲ್ಲಿ ಮತ್ತು ನುಡಿಯ ಸಂದರ್ಭದಲ್ಲಿ ಆರೋಪಿಸಬಹುದು. ಹಾಗಾಗಿ ನಟರಿಗೆ ಪದದ ಅರ್ಥ ಎನ್ನುವುದು ಪ್ರತಿನಿತ್ಯ ಎದುರಿಸಬೇಕಾದ ಒಂದು ಚಲನಶೀಲ ಅಂಶ.
ಕುರ್ತುಕೋಟಿಯವರು ತಮ್ಮ ಪ್ರಬಂಧ ಒಂದರಲ್ಲಿ ಸ್ವಾತಂತ್ಯ್ರ ಎಂಬ ಪದಕ್ಕೆ ಹೇಗೆ ಅರ್ಥ ಬದಲಾವಣೆಯಾಗುತ್ತಿದೆ ಎಂದು ನಿರೂಪಿಸುತ್ತಾರೆ. ಸ್ವಾತಂತ್ಯ್ರಪೂರ್ವದಲ್ಲಿ ಆ ಪದಕ್ಕಿದ್ದ ಅರ್ಥಕ್ಕೂ, ನಂತರ ಪ್ರತಿದಶಕದಲ್ಲೂ ಅದರ ಅರ್ಥ ಬದಲಾಗತ್ತಿರುವುದನ್ನು ನಮ್ಮ ಅವಗಾಹನೆಗೆ ತರುತ್ತಾರೆ. ಮತ್ತೊಂದು ಕಡೆ, "ಬಂಗಾರ" ಒಂದು ವಸ್ತುವಿಗಿಂತ ಅದರ ಮೂಲಸತ್ವಕ್ಕಿರುವ ಪದ ಎಂದು ಹೇಳುತ್ತಾರೆ. ಪದದ ಅರ್ಥಪಲ್ಲಟವಾಗುವುದು ಒಂದು ಭಾಷಾ ಸಮುದಾಯದ ಬೆಳವಣಿಗೆಯಲ್ಲಿ ಅನಿವಾರ್ಯವೇನೋ. ಹಾಗೆಯೇ ಆ ಪಲ್ಲಟಗಳನ್ನು ಗಮನಿಸುವುದು ಕೂಡ ಆ ಸಮುದಾಯದ ಬಗ್ಗೆ ನಮಗೆ ಹೊಳಹುಗಳನ್ನು ಕೊಡುತ್ತದೆ.
ಸುಮಾರು ಎರಡು-ಮೂರು ವರ್ಷದ ಕೆಳಗೆ ಆಸ್ಟ್ರೇಲಿಯಾದ ಸರ್ಕಾರಿ ರೇಡಿಯೋ 'ಎಬಿಸಿ'ಯಲ್ಲಿ ಕಾಲ್‌ಬ್ಯಾಕ್ ಕಾರ್ಯಕ್ರಮವನ್ನು ಕೇಳುತ್ತಿದೆ. ಅಂದು "ಜೇಡರಬಲೆ" ಎಂಬ ಪದದ ಬಗ್ಗೆ ಮಾತುಕತೆ ನಡೆದಿತ್ತು. "ಕಾಬ್‌ವೆಬ್‌" ಮತ್ತು "ಸ್ಪೈಡರ್‌ ವೆಬ್‌" ಎರಡೂ ಒಂದೇ ವಸ್ತುವಿಗೆ ಸಂಬಂಧಪಟ್ಟಿದ್ದರೂ ಯಾವ ಯಾವ ಸಂದರ್ಭದಲ್ಲಿ ಅವುಗಳನ್ನು ಉಪಯೋಗಿಸುತ್ತೀರ ಎಂಬುದು ಚರ್ಚಾ ವಿಷಯವಾಗಿತ್ತು. ಹಲವಾರು ಜನರು ಕರೆಮಾಡಿ ತಮ್ಮ ವಿಚಾರಗಳನ್ನು ಹೇಳುತ್ತಿದ್ದರು. ಮನೆಯ ಹೊರಗಿದ್ದರೆ ಸ್ಪೈಡರ್‌ವೆಬ್‌, ಒಳಗಿದ್ದರೆ ಕಾಬ್‌ವೆಬ್‌ ಎಂದು ಕೆಲವರು ಹೇಳಿದರೆ, ಅದಕ್ಕೆ ತದ್ವಿರುದ್ಧವಾದ ಅರ್ಥದಲ್ಲಿ ಬಳಸುತ್ತೇವೆ ಎಂದು ಇನ್ನು ಕೆಲವರು ಹೇಳುತ್ತಿದ್ದರು. ಕಾಬ್‌ ಎಂಬುದು ಚಕ್ರದ ಪದವಾದ್ದರಿಂದ ಸ್ಪೈಡರ್‌ವೆಬ್‌ ಅದು ಚಕ್ರದ ರೂಪದಲ್ಲಿಲ್ಲದಾಗ ಎಂದು ಕೆಲವರು ಹೇಳಿದರು. ಧೂಳು ಹಿಡಿದಿದ್ದರೆ ಕಾಬ್‌ವೆಬ್‌ ಇಲ್ಲದಿದ್ದರೆ ಸ್ಪೈಡರ್‌ವೆಬ್‌. ಜೇಡ ಇನ್ನೂ ಅಲ್ಲಿದ್ದರೆ ಸ್ಪೈಡರ್‌ ವೆಬ್‌ ಇಲ್ಲದಿದ್ದರೆ ಕಾಬ್‌ವೆಬ್‌ ಎಂದು ಉಪಯೋಗಿಸುತ್ತೇವೆ ಎಂದು ಕೆಲವರು ವಿವರಿಸಿದರು. ಮರಗಿಡಗಳಂಥ ಪ್ರಾಕೃತಿಕ ಪರಿಸರದಲ್ಲಿದ್ದರೆ ಸ್ಪೈಡರ್‌ವೆಬ್‌, ಕುರ್ಚಿ, ಮೇಜು, ಕಿಟಕಿಯಂಥ ಮಾನವ ನಿರ್ಮಿತ ವಸ್ತುಗಳಿಗೆ ಕಟ್ಟಿದರೆ ಕಾಬ್‌ವೆಬ್‌ ಎಂದು ಇನ್ನು ಕೆಲವರು ಅರ್ಥೈಸಿದರು.
ಒಟ್ಟಾರೆ, ಇದು ಯಾವ ಪದಕ್ಕೆ ಯಾವ ಅರ್ಥ ಸರಿ ಯಾವುದು ತಪ್ಪು ಎಂಬ ಚರ್ಚೆ ಆಗಿರಲಿಲ್ಲ. ಒಂದು ರೀತಿಯಲ್ಲಿ ನೋಡಿದರೆ ಅದರ ಬಗ್ಗೆ ಚರ್ಚೆಯೇ ಬೇಕಾಗಿರುವುದಿಲ್ಲ. ಅರ್ಥಕೋಶ ತೆಗೆದು ನೋಡಿಬಿಟ್ಟರೆ ಸಾಕು. ಆದರೆ ಯಾರಿಗೆ ಯಾವಾಗ ಯಾವ ಪದಕ್ಕೆ ಯಾವ ಅರ್ಥ ಸರಿಯೆನಿಸುತ್ತದೆ ಎಂಬುದನ್ನು ಹೇಳುತ್ತಾ ಜತೆಜತೆಗೆ ಕಾರ್ಯಕ್ರಮ ನಡೆಸಿಕೊಡುವವ ಯಾಕೆ ಅವರಿಗೆ ಹಾಗೆನಿಸುತ್ತದೆ ಎಂದು ಮಾತನಾಡಿಸುತ್ತಾ ಅವರ ಜೀವನದ ಮತ್ತು ಭಾವನೆಗಳ ವಿವರವನ್ನು ಹೇಳುವಂತೆ ಪ್ರೇರೇಪಿಸುತ್ತಿದ್ದ. ಹಾಗಾಗಿ ಆ ಕಾರ್ಯಕ್ರಮ ಪದಗಳ ಬಗ್ಗೆಯಾದರೂ ನಿಜವಾಗಿಯೂ ಬದುಕುಗಳ ಬಗ್ಗೆಯೇ ಆಗಿತ್ತು!

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಜಯಂತ ಕಾಯ್ಕಿಣಿಯವರ ಹೊಸ ಕತೆ - ನೀರು

  • ನಿದ್ದೆ ಎಚ್ಚರ ನೀರು ಬೆಳಕು ಪಯಣ ಭಯ ದಣಿವುಗಳ ಮಾದಕ ಮಿಶ್ರಣದಂತಿರುವ ಒದ್ದೆ ಇರುಳಲ್ಲಿ ಒಂದು ಸ್ವಪ್ನದಲ್ಲಿ ನಡೆದಂತೆ ನಡೆದರು. ಅದಾಗಲೇ ಅವರ ನಡುವೆ ಎಷ್ಟೋ ವರುಷಗಳಿಂದ ಜತೆಗಿದ್ದಂತಿದ್ದ ಸಲುಗೆಯ ದಣಿವು ಇತ್ತು.
  • "ಕಾಳಜಿ ಮಾಡಬೇಡಿ ಸಾಬ್, ಬೇಗ ಬಲುಬೇಗ ಗುಣವಾಗ್ತೀರಿ, ನಿಮ್ಮ ಮೊಮ್ಮಗಳ ಮದುವೆ ಖಂಡಿತ ನೋಡ್ತೀರಿ. ನನ್ನ ಈ ರಾತ್ರಿಯ ದುವಾ ಇದೆ ನಿಮಗೆ"
  • ಲಕ್ಷಾಂತರ ಮನೆಗಳನ್ನು ನಡುನೀರಿನಲ್ಲಿ ಬಿಟ್ಟು ಲಕ್ಷಾಂತರ ಜನರನ್ನು ಅಂಚಿಗೆ ತಳ್ಳಿದ ಈ ಜಲಪ್ರಳಯದ ಅನಂತರದ ಈ ಸುದೀರ್ಘ ನೀರವದ ಬೀದಿಯಲ್ಲಿ, ಇರುಳಿನ ಕೊನೆಗಳಿಗೆಯಲ್ಲಿ, ಆರಾಧ್ಯ ಜೀವದ ಲೇಸಿಗೆಂದು ಹೃದಯ ತುಂಬಿ ತಂದ ಪುಟ್ಟ ಬಿಂದಿಗೆಯೊಂದು ಚಲಿಸಿ ಹೋದ ರೀತಿಯನ್ನು ಸುಮ್ಮನೆ ನೋಡಿದ ಸಂತೋಷನ್ ಗೆ ದೇವರನ್ನೇ ಕಂಡಂತಾಯಿತು..

ಮೇಲಿನ ಈ ಮೂರೂ ಪಂಕ್ತಿಗಳು ನನ್ನ ಪ್ರೀತಿಯ ಕತೆಗಾರ ಜಯಂತ್ ಕಾಯ್ಕಿಣಿಯವರ ಇತ್ತೀಚಿನ ಪ್ರಕಟಿತ ಕತೆ - ನೀರು - ಇಂದ ಆಯ್ದದ್ದು. ತರಂಗದ ಈ ಬಾರಿಯ ಯುಗಾದಿ ವಿಶೇಷಾಂಕದಲ್ಲಿ ಪ್ರಕಟವಾಗಿದೆ.

ಜಯಂತ್ ನನ್ನ ಪ್ರೀತಿಯ ಬರಹಗಾರರು. ಒಬ್ಬ ಲೇಖಕರಾಗಿ ಮತ್ತು ವ್ಯಕ್ತಿಯಾಗಿ ನಾನು ಅವರನ್ನು ತುಂಬ ಇಷ್ಟಪಡುತ್ತೇನೆ. ಅವರ ಸಹವಾಸವೇ, ಮಾತುಕತೆಯೇ ಒಂದು ಆಹ್ಲಾದ.. ಕಡಲ ದಂಡೆಯ ಸಂಜೆ ಗಾಳಿಯಂತೆ... ಅವರ ಬರಹಗಳು ಮಬ್ಬು ಕವಿದ ಮನಸ್ಸಿನಲ್ಲಿ ಮಿನುಗುವ ಪುಟ್ಟ ದೀಪಗಳಾಗಿ ಚಿಂತನೆಯ ಬೆಳಕು ಹಚ್ಚುತ್ತವೆ. ಇಲ್ಲ ಅವರೇನು ಉಪದೇಶ ಮಾಡುವುದಿಲ್ಲ, ದಾರಿದೀಪವೂ ಅಲ್ಲ - ಕತ್ತಲ ಹಾದಿಯುದ್ದದ ಮನೆಗಳ ದೀಪದ ಕೋಲಿನಂತೆ ಅವರ ಬರಹ/ಕತೆ/ಕವನಗಳು. ಅದು ಕಣ್ಣು ಕುಕ್ಕುವ ಪ್ರಖರ ಬೆಳಕಲ್ಲ, ಇದೇ ದಾರಿಯಲ್ಲಿ ಹೋಗಿ ಎಂದು ಹೇಳುವ ಕೈಮರವಲ್ಲ.. ನಿಮ್ಮ ದಾರಿಯ ನೀವೇ ಹುಡುಕಿಕೊಳ್ಳಲು ಸುಲಭವಾಗುವಂತೆ, ನಿಮಗೇ ಉದ್ದೇಶಿಸದಂತೆ, ಆದರೆ ನಿಮಗಾಗೇ ಕಾದಿರುವಂತೆ ಬೆಳಗಿರುವ ಬೆಳಕಿನ ಕೋಲುಗಳು. ಓದತೊಡಗಿದಂತೆ ಆಪ್ತವಾಗಿ ತೆರೆದುಕೊಳ್ಳುವ ಕಥಾಲೋಕದೊಂದಿಗೆ ನಿಮ್ಮೊಳಹೊಕ್ಕು, ನಿಮ್ಮ ನಡೆ ನುಡಿ ಆಲೋಚನೆಗಳಲ್ಲಿ ನಿಮ್ಮವೇ ಆಗಿ ಹೊರಹೊಮ್ಮುವ ಭಾವ ದೀಪಗಳು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ನೀರು-ನೀರವತೆ-ನಗ್ನತೆ

ಸಂಜೆ,ಮುಸ್ಸಂಜೆಯ ಸಮಯ. ವಿಪರೀತ ಧಗೆ. ಬಗೆ ಬಗೆಯ ಸಸ್ಯವನ್ನು ರಾಶಿ,ರಾಶಿಯಾಗಿ ತನ್ನೊಡಲಲ್ಲಿ ಇಟ್ಟುಕೊಂಡ ಆ ಬೆಟ್ಟದ ಇಳಿಜಾರಿನಲ್ಲಿ ಇಳಿದಿಳಿದು ಹೋದೆ.ಹಸಿರು ಉಡುಗೆಯುಟ್ಟ ಎದುರಿಗಿನ ಬೆಟ್ಟದ ಕಲ್ಲಂಚಿನಿಂದ ಝರಿ,ಝರಿಯಾಗಿ ಆತುರದಿಂದ ಜರಿ ಜರಿದು ತೊರೆಯಾಗಿ ಹರಿ ಹರಿದು ಹೋಗುತ್ತಿದ್ದ ಚಿಕ್ಕಹಳ್ಳ...ಗೂಡಿಗೆ ಮರಳಿದ್ದ ಹಕ್ಕಿಗಳ ಚಿಲಿಪಿಲಿಯ ಹೊರತಾಗಿ ಅಲ್ಲೆಲ್ಲ ನಿಶ್ಯಬ್ದ..ಕಪ್ಪು ಕಪ್ಪು ಕಲ್ಲು ಹಾಸುಗಳು..ಬಿಸಿಲಿಗೆ ಅಷ್ಟಿಷ್ಟು ಕಾದವುಗಳು.

ಬೀಸುಗಾಲು ಹಾಕುತ್ತ ಹತ್ತಿ,ಗುತ್ತಿ ಹೋದ ನಾನು ಅ೦ತಿಮವಾಗಿ ಒಂದು ಬಂಡೆಯ ಮೇಲೆ ಕುಳಿತೆ.ಸಹಜವಾಗಿ ನೀರಿಗಿಳಿದವು ನನ್ನೆರಡು ಕಾಲುಗಳು..ತಂಪೆಂದರೆ ತಂಪಾದ ನೀರು ಅದು. ಕಾಲುಗಳಿಗೆ ಸವರಿಕೊಂಡು ಹೋಗುತ್ತಿದ್ದ ತಣ್ಣನೆಯ ನೀರು ನನಗೆ ಕಾಲವನ್ನೇ ಮರೆಸಿತ್ತು.
ಬೆಳದಿಂಗಳು ಆವರಿಸಿತ್ತು.ಅಲ್ಲಿ ಯಾರೂ ಇರಲಿಲ್ಲ ನನ್ನೊಬ್ಬನ ಹೊರತಾಗಿ.ಪ್ರಕೃತಿ ಮತ್ತು ಅದು ಎಲ್ಲ ಮನುಷ್ಯರನ್ನು ಸೃಷ್ಟಿಸಿದ್ದ ಹಾಗೆ ಸೃಷ್ಟಿಸಿದ್ದ ನಾನು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ನಲ್ಮೆಯ ನಮನ

ಸುಂದರ ಪಾರ್ಕು, ಸುತ್ತೆಲ್ಲ ಮರಗಳು

ಚೈತ್ರದ ಹೂಗಳು ವೈಶಾಖದ ಬಿಸಿಲಲ್ಲೂ ನಗುತ್ತಿದ್ದರೆ ಅದು ಬೆಂಗಳೂರಿನ ಮರಗಳ ವೈಭವ ಅಂತ ನೀವೆ ಅವತ್ಯಾವತ್ತೋ ಹೇಳಿದ್ರಿ. ಆ ಸುಮವೈಭವ ನೋಡುತ್ತ, ಉದ್ಯಾನದ ಕಲ್ಲು ಮೆಟ್ಟಿಲೇರಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಮಾತು

ಸಂಸ್ಕೃತದಲ್ಲಿ ಒಂದು ಹೇಳಿಕೆ ಇದೆ: ಹಿರಣ್ಮಯೇನ ಪಾತ್ರೇನ ಸತ್ಯಸ್ಯಾಪಿ ಬಹಿರ್ಮುಖಂ... ಅಂದರೆ ಚಿನ್ನದ ಒಂದು ಪಾತ್ರೆಗೆ ಚಿನ್ನದ ಮುಸುಕು ಹಾಕಿಡಲಾಗಿದೆ. ಅದಕ್ಕೆ ಸತ್ಯ ಎಂದು ಹೆಸರಿಡಲಾಗಿದೆ. ಸತ್ಯವನ್ನು ಕಾಣಬಯಸುವವರು ಹತ್ತಿರ ಬಂದು ಮುಸುಕು ತೆಗೆದು ನೋಡಿ ಏನೂ ಇಲ್ಲ ಎನ್ನುತ್ತಾರೆ. ಮಾನವರ ಸ್ವಭಾವವೇ ಹಾಗೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಹೀಗೊ೦ದ್ ವಿಷ್ಯ...

’ಚುನಾವಣೆಗಳು ಬರುತ್ತಾ ಇವೆ ತಾವು ಯಾರಿಗೆ ಓಟು ಹಾಕುತ್ತೀರಾ...?

’ಅಯ್ಯೋ...ಬಿಡಿ ಸಾರ್, ಎಲ್ಲಾ ಕಳ್ಳ ನನ್ನ್ ಮಕ್ಳು, ಯಾರಿಗ್ ಹಾಕಿದ್ರು ಅಷ್ಟೆ,ದೇಶ ಎನ್ ಉದ್ದಾರವಾಗೊಲ್ಲ , ಅದಕ್ಕೆ ನಾನು ಮತ ಹಾಕೊದೇ ಇಲ್ಲ .’

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ರಾಷ್ಟ್ರೀಯ ಭಾಷೆ

"ಮಕ್ಕಳೇ ನಮ್ಮ ರಾಷ್ಟ್ರೀಯ ಭಾಷೆ ಯಾವುದು..?" ಎ೦ದು ಕೇಳಿದರು ಶಿಕ್ಷಕಿ.

"ಹಿ೦ದಿ" ಎ೦ದ ಎಲ್ಲ ಹುಡುಗರೂ ಒಕ್ಕೂರಲಿನಿ೦ದ.ದುರದೃಷ್ಟವಶಾತ್ ನಾನೂ ಆ ಗು೦ಪಿನಲ್ಲಿದ್ದೆ.ಇದು ನಡೆದುದ್ದು ಸುಮಾರು ಹದಿನೈದು ವರ್ಷಗಳ ಹಿ೦ದೆ.

field_vote: 
Average: 1 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕುಂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ ಈ ಜಿಂಕೆ ಮರಿಗಳು

ಈ ಚಿತ್ರದಲ್ಲಿರುವ ತ್ರಿವಳಿಗಳನ್ನು ನಾನು ಇತ್ತೀಚೆಗೆ ಮೈಸೂರಿಗೆ ಮದುವೆಯೊಂದಕ್ಕೆ ಹೋದಾಗ ಕಂಡೆ. ಈಗ ಸುಮಾರು ಒಂದೂವರೆ ವರ್ಷ ವಯಸ್ಸಿನ ಈ ಸುಂದರ ತ್ರಿವಳಿಗಳನ್ನು ಕಂಡಾಗ ಆದ ಆನಂದ ಅಷ್ಟಿಷ್ಟಲ್ಲ. ಅದನ್ನು ಸಂಪದದ ಓದುಗರೊಂದಿಗೆ ಹಂಚಿಕೊಳ್ಳುವವರೆಗೂ ನನ್ನ ಮನಸ್ಸಿಗೆ ಸಮಾಧಾನವಿರಲಿಲ್ಲ.

field_vote: 
Average: 4 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ವಿಜ್ಞಾನ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು

ವೈಜ್ಞಾನಿಕ ಪ್ರಪಂಚದಲ್ಲಿ ಮಹಿಳೆಯರ ಸಾಧನೆಗಳು
“ಕಾರ್ಯೇಷು ದಾಸಿ, ಕರಣೇಷು ಮಂತ್ರಿ,
ರೂಪೇಷು ಲಕ್ಷ್ಮಿ, ಕ್ಷಮಯಾ ಧರಿತ್ರಿ
ಭೋಜ್ಯೇಷು ಮಾತಾ, ಶಯನೇಷು ರಂಭಾ,
ಷಡ್ಗುಣ ಭಾರ್ಯಾ ಕುಲಮುದ್ಧರಂತಿ.”
ಎಂದು ಒಂದು ಶ್ಲೋಕ ರಚಿಸಿ ಹೆಣ್ಣನ್ನು ಒಂದು ಚೌಕಟ್ಟಿನೊಳಗೆ ಬಂಧಿಸಿ ಅವಳನ್ನು ನಿರುಪಯುಕ್ತಳನ್ನಾಗಿ ಮಾಡುವ ಪ್ರಯತ್ನ ನಡೆಯುತ್ತಲೇ ಬಂದಿದೆ. ಕೆಟ್ಟ ಸಂಪ್ರದಾಯಗಳ ಒತ್ತಡದಿಂದಾಗಿ ಅನುಪಯುಕ್ತವಾದ ಕಟ್ಟುಪಾಡುಗಳಿಂದಾಗಿ ಎಲ್ಲಾ ಸೌಲಭ್ಯಗಳಿಂದಲೂ ಮಹಿಳೆ ವಂಚಿತಳಾಗಿದ್ದಾಳೆ. ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸದ ಅವಶ್ಯಕತೆ ಇಲ್ಲ, ಜಗತ್ತಿನ ಬೆಳಕು ಅವರಿಗೆ ಅನಾವಶ್ಯಕ. ಲೋಕಜ್ಞಾನ ಕಟ್ಟಿಕೊಂಡು ಅವರೇನು ಮಾಡಬೇಕು? ಮನೆ, ಗಂಡ, ಮಕ್ಕಳು ಇವರನ್ನು ಪೋಷಿಸಿಕೊಂಡು ಬದುಕುವುದೇ ಉತ್ತಮ ಮಾರ್ಗ ಎಂದು ಮನೆಯಲ್ಲೇ ಮಹಿಳೆಯನ್ನು ಕೊಳೆಯಬಿಟ್ಟು ಅವಳ ಅನೇಕ ರೀತಿಯ ಪ್ರತಿಭೆಗಳು ಬೆಳಕಿಗೆ ಬಾರದೇ ನಶಿಸಿ ಹೋಗಿ, ಅವಳಿಗೆ ಮಾತ್ರವಲ್ಲದೇ ದೇಶಕ್ಕೂ ಕೂಡ ಅನ್ಯಾಯವೆಸಗಿದ ಹಾಗಾಗಿದೆ. ದೈವ ನಿಯಾಮಕದಲ್ಲಿ ಸರಿಸಮಾನವಾದ ಮಾನಸಿಕ ಸಾಮರ್ಥ್ಯವನ್ನು ಹೊಂದಿರುವ ಮಹಿಳೆ, ಪುರುಷರಂತೆಯೇ ಪ್ರತಿಯೊಂದು ಕ್ಷೇತ್ರದಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುವ ಅಧಿಕಾರ ಮಹಿಳೆಗೂ ಇದೆ ಎಂಬುದು ಎಲ್ಲರಿಗೂ ಮನವರಿಕೆಯಾಗಬೇಕು. ಮಹಿಳೆಯ ಪರಿಸ್ಥಿತಿ ಈಗ 5 ದಶಕಗಳಿಂದ ಎಷ್ಟೋ ಸುಧಾರಿಸುತ್ತಾ ಬಂದಿದೆ ಎಂದಾದರೂ ಇನ್ನೂ ಸಾಕಷ್ಟು ಮಹಿಳೆಯರು ಅನೇಕ ಕಾರಣಗಳಿಂದ ತಮ್ಮ ಗೂಡಿನಿಂದ ಹೊರ ಬರಲಾರದೇ ತೊಳಲಾಡುತ್ತಿದ್ದಾರೆ. ಸಾಧಾರಣ ವಿಚಾರಗಳಲ್ಲೇ ಹೀಗಿರ ಬೇಕಾದರೆ ಇನ್ನು ಪ್ರಗತಿಪರ ವಿಜ್ಞಾನ ಪ್ರಪಂಚದಲ್ಲಿ ಸಾಧನೆಗಳನ್ನು ಸಾಧಿಸಲು ಅವರಿಗೆಲ್ಲಿ ಅವಕಾಶವಿತ್ತು? ಹೀಗಾಗಿ ಈ ಸಮಾಜದೊಂದಿಗೆ ಹೋರಾಡುತ್ತಲೇ ವಿಜ್ಞಾನ ಪ್ರಪಂಚದಲ್ಲಿ ಸಾಧನೆಗೈದ ಮಹಿಳೆಯರು ಎಂದರೆ ಬೆರಳೆಣಿಕೆಯಷ್ಟು ಮಾತ್ರ. ಅವರಲ್ಲೂ ಕೂಡ ಅ ಉನ್ನತ ಮಟ್ಟವನ್ನು ತಲುಪಲು ಹೆಣಗಾಡಿ ತೊಳಲುತ್ತಿರುವ ಭಾರತೀಯ ಮಹಿಳೆಯರ ಬಗ್ಗೆ ಓದಿದಾಗ (ನೇಮಿ ಚಂದ್ರರವರ ಮಹಿಳಾ ಅಧ್ಯಯನ) ಮನಸ್ಸಿಗೆ ಖೇದವೆನಿಸಿತು. ಬಹುಷಃ ಇನ್ನೊಂದು 50,60 ವರ್ಷಗಳಲ್ಲಾದರೂ ನಮ್ಮ ಈ ಕೊರಗು ನೀಗಬಹುದೇನೋ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಇಹದ ಬದುಕಿನ ಪಯಣ ಮುಗಿಸಿದ ಜಿಟಿಎನ್

ಮೈಸೂರಿನ ೨೫೪೩೭೫೯ ಸಂಕ್ಯೆಗೆ ದೂರವಾಣಿ ಕರೆ ಮಾಡಿದರೆ, ನೀವಿನ್ನು ಎಂದಿನ ಗಂಭೀರ ಧ್ವನಿ "ನಮಸ್ಕಾರ, ಜಿ.ಟಿ.ನಾರಾಯಣರಾವ್" ಎಂದಿಗೂ ಕೆಳದು. ಸರಸ್ವತೀಪುರಂನಲ್ಲಿರುವ "ಅತ್ರೀ" ಮನೆಯ ಗೇಟನ್ನು ಮೆಲ್ಲಗೆ ತೆರೆದರೂ ಸಾಕು, ಮನೆಯೊಳಗಿಂದ ಹೊರ ಬಂದು, ಎರಡೂ ಕೈ ಜೋಡಿಸಿ ನಮಸ್ಕಾರ ಮಾಡುತ್ತ "ಸುಖ ಪ್ರಯಾಣವಾಯಿತೇ" ಎಂದು ಕೇಳಿ ಸ್ವಾಗತಿಸುತ್ತಿದ್ದ ಜಿ.ಟಿ.ನಾರಾಯಣ ರಾವ್, ಹೃಸ್ವವಾಗಿ ಜಿಟಿಎನ್ ಇನ್ನಿಲ್ಲ. "ಮುಗಿಯದ ಪಯಣ" ಕೃತಿಯ ಕರ್ತೃ ಇಹದ ಬಾಳಿನ ಪಯಣ ಮುಗಿಸಿ ವಿಶ್ವ ರಹಸ್ಯದಲ್ಲಿ ಲೀನವಾಗಿದ್ದಾರೆ.

ಜಿಟಿಎನ್ ಗುರುವಾರ (೨೬.೬.೨೦೦೮) ಸಂಜೆ ಸ್ನೇಹಿತರ ಮನೆಯಲ್ಲಿ ಸಂಗೀತಕ್ಕೆ ಸಂಬಂಧಿಸಿದ ಲೇಖನವನ್ನು ಕಂಪ್ಯೂಟರ್ ಪರದೆ ಮೇಲೆ ಓದುತ್ತ ಇದ್ದಾಗ "ಎಲ್ಲ ಮಂಜಾಗುತ್ತಿದೆ" ಎಂದರಂತೆ. ಮನೆಯವರು ಶರಬತ್ತು ಕೊಟ್ಟರು. ಕುಡಿದು ಮತ್ತೆ ಓದಲು ತೊಡಗುತ್ತಿದ್ದಂತೆ ನಿದ್ದೆಗೆ ಜಾರಿದರು. ಆ ನಿದ್ದೆ ಮಾತ್ರ ದೀರ್ಘ ನಿದ್ರೆಯಾಯಿತು. ಮತ್ತೆಂದೂ ಏಳದ ನಿದ್ರೆಯಾಯಿತು. ಈ ಭುವಿಯ ಯಾವ ಶಕ್ತಿಯೂ ಅವರನ್ನು ನಿದ್ದೆಯಿಂದ ಎಚ್ಚರಿಸಲು ಸಾಧ್ಯವಾಗದ ನಿದ್ದೆಯದು.
ಅವರಿಗೆ ಎಂಬತ್ತಮೂರರ ವಯಸ್ಸು. ವಯಸ್ಸಿಗೆ ಅನುಗುಣವಾಗಿ ದೇಹ ಕೃಷವಾಗಿತ್ತು - ಹಕ್ಕಿಯಂತಾಗಿತ್ತು. ಆದರೆ ಜೀವನೋತ್ಸಾಹ ಅದೇ ಇತ್ತು. ಜಿಟಿಎನ್ ಸ್ಮೃತಿ ಕಳೆದುಕೊಂಡ ಸುದ್ದಿ ಬಂದಾಗ ಅವರು ಮತ್ತೆ ಚೇತರಿಸಿಕೊಳ್ಳಬಹುದೆಂಬ ನಿರೀಕ್ಷೆ ಇತ್ತು. ಏಕೆಂದರೆ ನಾಲ್ಕೈದು ವರ್ಷಗಳ ಹಿಂದೆ ಅವರ ದೇಹ ಸ್ಥಿತಿ ತೀರ ಹದಗೆಟ್ಟಿತ್ತು. ಆ ಸಂದರ್ಭದಲ್ಲಿ ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದಾಗ ಅವರು ಹೇಳುತ್ತಿದ್ದರು "ಸೋರುತಿಹುದು ಮನೆಯ ಮಾಳಿಗೀ" ಅವರಿಗೆ ತಮಾಷೆ. ನಮಗೆ?ಮ್ಮ "ಮುಗಿಯದ ಪಯಣ" ದಲ್ಲಿ "ಯಮ ಸದನ ನೋಡಿ ಬಂದೆ" ಎಂಬ ಅಧ್ಯಾಯದಲಿ ಈ ಬಗ್ಗೆ ಬರೆದಿದ್ದಾರೆ. ಸಾವು ಬದುಕಿನ ಹೋರಾಟದಲ್ಲಿ ಜಯಶಾಲಿಯಾಗಿ ಮರಳಿದ ಜಿಟಿಎನ್ ಅವರಿಗೆ ನಾನು ಬರೆದೆ "ಜವರಾಯ ಬಂದರೂ ನಿಮ್ಮನ್ನು ಕರೆದೊಯ್ಯಲಿಲ್ಲ, ನಮಗಾಗಿ" ಆದರೆ ಈ ಬಾರಿ ಹಾಗಾಗಲೇ ಇಲ್ಲ. ಜವರಾಯ ತಣ್ಣಗೆ ಬಂದ ಯಾರಿಗೂ ಹೇಳದೇ - ಅವರನ್ನು ಓಯ್ದೇ ಬಿಟ್ಟ.
ಮೈಸೂರಿಗೆ ಧಾವಿಸಿ, ಅತ್ರಿ ಮನೆ ತಲುಪುವಾಗ ನಡು ಮಧ್ಯಾಹ್ನ. ಹೊರಗಡೆ ಜನರೋ ಜನರು. ಒಳಗೆ ಹಜಾರದಲ್ಲಿ ಜಿಟಿಎನ್ ಮಲಗಿದ್ದರು ಹೂವಿನ ರಾಶಿಯನ್ನೇ ಹೊದ್ದು. ಮೂಕದಲ್ಲೊಂದು ನಗುವಿನ ಸೆಳೆ. ಪಕ್ಕದ ಅವರ ಆಧ್ಯಯನ ಕೊಠಡಿಯಲ್ಲಿ ಪುಸ್ತಕಗಳ ರಾಶಿ. ಬಿಳಿ ಹಾಳೆಯ ಮೇಲೆ ಬರೆಡಿಟ್ಟ ಟಿಪ್ಪಣಿ, ಅತ್ರಿಸೂನು ಕವನದ ಸಾಲುಗಳು. ಎಲ್ಲವೂ ಇದ್ದುವು. ಆದರೆ ಇವೆಲ್ಲವುಗಳಿಗೆ ಅರ್ಥ ಕೊಡುವ, ಮಾತು ನೀಡುವ, ಚಿತ್ರವಾಗುವ, ರೂಪಕವಾಗುವ ಆ ಚೇತನ ಮಾತ್ರ ಅಲ್ಲಿರಲಿಲ್ಲ. ಅನಿಕೇತನ ಹುಡುಕುತ್ತ ಹೊರಟಿತ್ತೇ? ಗೊತ್ತಿಲ್ಲ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕತೆಗಾರ್ತಿ ದೊಡ್ಡಮ್ಮ

"ರೂಪವ್ವ ಬಾರೆ , ಆನಂದ ಬಾರಲಾ , ಒಂದ್ಕತೆ ಯೇಳ್ತೀನಿ " ಅಂತಾ ಆ ಹೆಂಗಸು ಕರೆದ ತಕ್ಶಣ, ಏನೇ ಮಾಡುತ್ತಿದ್ದರೂ ನಾವು ಅವಳ ಮುಂದೆ ಹಾಜಾರಾಗುತ್ತಿದ್ದೆವು.
ಅವಳ ಹೆಸರೇ ದೊಡ್ಡಮ್ಮ. ಪಕ್ಕದ ಮನೆಯವರಿಗೆ ಯಾವುದೋ ಸಂಬಂಧದವಳು. ಅವಾಗ ವಯಸ್ಸು ಎಷ್ಟು ಅಂತ ಗೊತ್ತಾಗ್ತಿರಲಿಲ್ಲ, ಅದೆಲ್ಲಾ ಬೇಕಾಗೂ ಇರಲಿಲ್ಲ.
ಈಗ ಅನ್ನಿಸುತ್ತಿದೆ ಸುಮಾರು ೬೫ -೭೦ ವರ್ಷವಿರಬೇಕು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಬಾಗಿಲು ತೆರೆಯೆ, ಪುಟ್ಟಮ್ಮ .....!

ಒಮ್ಮೆ ಹಿಂತಿರುಗಿ ನೋಡಿದಾಗ, ನೆನಪಿನ ಬುತ್ತಿಯನ್ನು ಬಿಚ್ಚಿ ವೀಕ್ಷಿಸಿದಾಗ, ತಾಯ್ನಾಡಿನಿಂದ ದೂರಸರಿದಾಗ, ಕಾಣುವ ಒಳನೋಟ ಅದ್ಭುತ !

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಒ೦ದು ಬೆಚ್ಚನೆಯ ನೆನಪು..

ಈಗ್ಗೆ ಸುಮಾರು ೧೫ ವಸ೦ತಗಳ ಹಿ೦ದೆ ಒ೦ದು ದಿನ. ನಾವು ಶಿವಮೋಗ್ಗದ ರಾಜೇ೦ದ್ರನಗರದ ಮಕ್ಕಳಿಗೆಲ್ಲ ಬೆಳಿಗ್ಗೆಯಿ೦ದ ಹಬ್ಬದ ಸಡಗರ. ಬೇಗ ಬೇಗ ಉಳಿದ ಮಕ್ಕಳೆಲ್ಲಾ ನಮ್ಮ ಮನೆಗೆ ಬರುವ ಮು೦ಚೆ ತಿ೦ಡಿ ತಿ೦ದು, ಸ್ನಾನ ಮಾಡಿ ಮಣ್ಣು ಮಾಡಿಕೊಳ್ಳಬಹುದಾದ ಹಳೆಯ ಬಟ್ಟೆ ಹಾಕಿಕೊ೦ಡು ತಯಾರಾಗಿದ್ದೆವು. ಅರಣ್ಯ ಇಲಾಖೆಯಿ೦ದ ಬ೦ದ ಸುಮಾರು 300 - 400 ಸಸಿಗಳು ಪುಟ್ಟ ಪುಟ್ಟ ಎಲೆಗಳನ್ನು ಹೊಳೆಯಿಸುತ್ತಾ ಕೋಮಲವಾಗಿ ನಮ್ಮ ಮನೆ ಅ೦ಗಳದಲ್ಲಿ ಬಳುಕುತ್ತಿದ್ದವು..
ವಿಷಯ ಇಷ್ಟೆ, ಅವತ್ತು ನಾವು ರಾಜೇ೦ದ್ರ ನಗರದ ಮಕ್ಕಳು ವನ ಮಹೋತ್ಸವ ಆಚರಿಸುತ್ತಿದ್ದೆವು. ಅರಣ್ಯ ಇಲಾಖೆಯವರು ಉಚಿತವಾಗಿ ಸಸಿಗಳನ್ನು ಕೊಟ್ಟಿದ್ದರು, ನಮ್ಮ ಹಿರಿಯರೆಲ್ಲಾ ದುಡ್ಡು ಹಾಕಿ ಅವಕ್ಕೆ ಬೇಲಿಗಳನ್ನು ವ್ಯವಸ್ಥೆ ಮಾಡಿದ್ದರು. ಎಲ್ಲ ನಮ್ಮ ಮನೆಗೆ ಬ೦ದು ಸೇರಿದರು. ಮಕ್ಕಳ ಸೈನ್ಯ ದಿಗ್ವಿಜಯಕ್ಕೆ ಹೊರಟ ಯೋಧರ೦ತೆ ಎದೆಯುಬ್ಬಿಸಿ ಕೈಯಲ್ಲಿ ಕತ್ತಿಯ ಬದಲು ಒ೦ದೊ೦ದು ಸಸಿ ಹಿಡಿದು ನಡೆದೆವು ಜೊತೆಯಲ್ಲಿ ನಾವೊ೦ದಿಷ್ಟು ಮಕ್ಕಳ ಅಪ್ಪ೦ದಿರು..ಒ೦ದಿಷ್ಟೇನು ಹೆಚ್ಚು ಕಮ್ಮಿ ಎಲ್ಲಾ ಅಪ್ಪ೦ದಿರೂ ಕೈಯಲ್ಲಿ ಗುದ್ದಲಿ ಸಲಾಕೆಗಳನ್ನು ಹಿಡಿದು ನಮ್ಮ ಜೊತೆಗೆ ಅಪರೂಪಕ್ಕೆ ಸಿಕ್ಕ ತಮ್ಮ ಸ್ನೇಹಿತರ ಜೊತೆ ಮಾತಾಡುತ್ತಾ ಬ೦ದರು. ಬರಲು ಅನುಮಾನಿಸುತ್ತ ಗೇಟಿನಲ್ಲಿ ನಿ೦ತು ನೋಡುತ್ತಿದ್ದ ಅಪ್ಪ೦ದಿರನ್ನು ಹೊರಟವರು ’ಇರಲಿ ಬಾರೋ ಇವುಗಳ ಕೈಯಲ್ಲಿ ಒ೦ದಿಷ್ಟು ಗಿಡ ನೆಡಿಸಿ ಬರೋಣ’ ಎನ್ನುತ್ತಾ ಅವರನ್ನೂ ಸೇರಿಸಿಕೊ೦ಡು ದೊಡ್ಡ ದೊ೦ಬಿ ಮಾಡುತ್ತಾ ಹೊರಟೆವು..ಬೆಳಗಿನ ಹೂಬಿಸಿಲಲ್ಲಿ ಮೊದಲನೇ ಕ್ರಾಸ್ ನಿ೦ದ ಗಿಡಗಳನ್ನು ನೆಡುತ್ತಾ ಬ೦ದೆವು. ಆ ಗು೦ಪಿನಲ್ಲಿದ್ದ ಮಕ್ಕಳ ಮನೆ ಬ೦ದರೆ ಅವರೆ ಗಿಡ ನೆಡುತ್ತಿದ್ದರು. ಅ೦ತೂ ಇಡೀ ರಾಜೇ೦ದ್ರ ನಗರ ಹೀಗೇ ಮರಗಳಾಗುವ ಗಿಡಗಳನ್ನು ನೆಟ್ಟೆವು.
ನಮ್ಮ ಮನೆಯ ಮು೦ದೆ ನೆಟ್ಟ ಮರ ನಾನೇ ನೆಟ್ಟದ್ದು. ನಾನು ಅಕ್ಕ ಇಬ್ಬರೂ ಇದ್ದೆವು ಆದರೆ ಅಕ್ಕನಿಗೆ ನಾನು ಮುದ್ದಿನ ತ೦ಗಿ ಆದ್ದರಿ೦ದ ಅವಳ ಪಾಲಿಗೆ ನಾನು ಮಾಡಿದ ಕೆಲಸ ಜಗತ್ತಿನಲ್ಲೇ ’ಬೆಸ್ಟ್’ (ಈಗಲೂ ಅವಳು ಅದೇ ಭ್ರಮೆಯಲ್ಲೇ ಇದ್ದಾಳೆ ಬಿಡಿ..) ಹಾಗಾಗಿ ನಾನು ನೆಟ್ಟರೆ ಆ ಮರ ಜಗತ್ತಿನಲ್ಲೇ ಬೆಸ್ಟ್ ಆಗುವುದರಿ೦ದ ಅದನ್ನು ನೆಡುವ ಸುಯೋಗ ನನಗೇ ಬ೦ತು. ನಮ್ಮ ಮನೆ ಮು೦ದೆ ನೆಟ್ಟದ್ದು ಹಳದಿ ಹೂವು ಬಿಡುವ ರೈನ್ ಟ್ರೀ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಇಬ್ಬನಿ ಬಿದ್ದ ಭೂಮಿಯಲ್ಲಿ ಜಗ್ಗಲಗಿ ಕಲರವ

ಕೊಂಚ ಸಮಯ ಜತೆಗಿದ್ದು ದೂರ ಹೋದ ಸಂಗಾತಿಯೆ,

ಎಲ್ಲೋ ಇರುವ, ಹೇಗೋ ಬದುಕುತ್ತಿರುವ ನಿನಗೆ ಕಾಲೇಜಿನ ಕ್ರೀಡಾಂಗಣಕ್ಕೆ ಉತ್ಸವದ ಪುಳಕ ಬಂದಿದ್ದು ನೆನಪಿದೆಯೆ?

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಮುಚ್ಚಳವಿಲ್ಲದ ಪೆನ್ನು

ತುಂಬ ದಿನವಾಗಿತ್ತು ಪೆನ್ನು ಹೊರ ತೆಗೆದು ಬರೆಯಲು ಕೂತು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಧಾರವಾಡದಲ್ಲಿ ಹುಟ್ಟಿ ಬಾಲ್ಟಿಮೋರ್‌ನಲ್ಲಿ ಹರಿದ ನಮ್ಮೆಲ್ಲರ ಶಾಲ್ಮಲಾ!

("ಅಕ್ಕ 2006" ರ ಸಮಯದಲ್ಲಿ ಬರೆದದ್ದು. "ವಿಕ್ರಾಂತ ಕರ್ನಾಟಕ" ವಾರಪತ್ರಿಕೆಯ ಸೆಪ್ಟೆಂಬರ್ 22, 2006ರ ಸಂಚಿಕೆಯಲ್ಲಿ ಪ್ರಕಟವಾಗಿರುವ ಈ ಲೇಖನವನ್ನು "ಅಕ್ಕ-2008" ರ ಸಮಯದಲ್ಲಿ ಇಲ್ಲಿ.)

ಅದು 1994. ಧಾರವಾಡ ವಿಶ್ವವಿದ್ಯಾನಿಲಯದ ಹಾಸ್ಟೆಲ್‌ನಲ್ಲಿ ಸ್ನೇಹಿತರೊಬ್ಬರ ರೂಮಿನಲ್ಲಿ ಒಂದು ರಾತ್ರಿ ತಂಗಿದ್ದೆ. ಅಂದು ಅವರು ಕ್ಯಾಂಪಸ್‌ನ ಬಗ್ಗೆ ಮಾತನಾಡುತ್ತ ಅಲ್ಲಿ ಹರಿಯುವ ಶಾಲ್ಮಲ ನದಿಯ ಬಗ್ಗೆ ಹೇಳಿದ್ದರು. ಅದೇ ಮೊದಲ ಸಲ ಆ ಮುದ್ದಾದ ಹೆಸರನ್ನು ಕೇಳಿದ್ದು. ಇಲ್ಲಿಯವರೆಗೂ ನೋಡಿಲ್ಲದ ಆ ಗುಪ್ತಗಾಮಿನಿ ನನಗೆ ಅಂದೇ ಆಪ್ತವಾಗಿಬಿಟ್ಟಿತು.

ನಾಲ್ಕೈದು ವರ್ಷಗಳ ಹಿಂದೆ ಹೀಗೆ ಅಂತರ್ಜಾಲದಲ್ಲಿ ಕನ್ನಡ ಭಾವಗೀತೆಗಳನ್ನು ಕೇಳುತ್ತಿದ್ದಾಗ ಅಚಾನಕ್ಕಾಗಿ ಶಾಲ್ಮಲಾ ಎಂಬ ಪದ ಸಿ.ಅಶ್ವಥ್‌ರ ಕಂಚಿನ ಕಂಠದಿಂದ ಹೊಮ್ಮಿ ನನ್ನ ಕಿವಿ ಮುಟ್ಟಿತು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಸ್ವಗತ

ಮೊನ್ನೆ ನಮ್ಮೂರಿಂದ ಮೂವರು ಪ್ರತಿಭಾವಂಥರು ಇತ್ತ ನ್ಯೂಯಾರ್ಕ್ ಕಡೆಗೆ ಬಂದಿದ್ದರು, ನ್ಯೂಯಾರ್ಕ್ ನಲ್ಲಿ ಅವರು ಯಾರದೋ ಮನೆಯಲ್ಲುಳಿದು ಕೊಂಡಿದ್ದರು, ನಾನು ಅವರನ್ನೆಲ್ಲ ಭೆಟ್ಟಿ ಮಾಡುವ ಇಚ್ಛೆಯಿಂದ
ಅವರನ್ನು ನಮ್ಮ ಕಡೆ ಬನ್ನಿ ಎಂದು ಆಹ್ವಾನಿಸಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ವಿವಾಹಿತೆಯ ಮೇಲೆ ಅತ್ಯಾಚಾರ, ನಮ್ಮ ಪ್ರತಿನಿಧಿಯಿಂದ

ಪತ್ರಿಕೆ ಓದುವುದನ್ನು ಕೇಳಿದ್ದೀರಾ?

ಗೊಂದಲ ಬೇಡ, ನಾನು ಸರಿಯಾಗಿಯೇ ಕೇಳುತ್ತಿದ್ದೇನೆ. ನಾವೆಲ್ಲ ಪತ್ರಿಕೆ ಓದುತ್ತೇವೆ. ಬಹುತೇಕ, ಮನಸ್ಸಿನೊಳಗೇ ಓದುತ್ತೇವೆ. ಆದರೆ, ಹಳ್ಳಿಗಳಲ್ಲಿ ಪತ್ರಿಕೆಯನ್ನು ಗಟ್ಟಿಯಾಗಿ ಓದುವುದನ್ನು ಕೇಳಿದ್ದೀರಾ?

ಒಮ್ಮೆ ಕೇಳಬೇಕು ನೀವು. ಬಲೇ ತಮಾಷೆಯಾಗಿರುತ್ತದೆ. ಹೆಡ್ಡಿಂಗ್‌ನಿಂದ ಹಿಡಿದು, ಕೊನೆಗೆ ಅಚ್ಚಾಗಿರುವ ಏಜೆನ್ಸಿ ಹೆಸರುಗಳಿಂದ ಅಥವಾ ಬೈಲೈನ್‌ಗಳಿಂದ ಹಿಡಿದು ಪ್ರತಿಯೊಂದನ್ನೂ ಗಟ್ಟಿಯಾಗಿ ಓದುತ್ತಾರೆ ಕೆಲವರು. ಅವರು ಓದುವುದನ್ನು ಸುತ್ತಮುತ್ತ ಹತ್ತಾರು ಜನ ಗಮನವಿಟ್ಟು ಕೇಳುತ್ತಿರುತ್ತಾರೆ. ಅಲ್ಲಿ ಚರ್ಚೆಗಳು ನಡೆಯುತ್ತವೆ. ವಾದಗಳಾಗುತ್ತವೆ. ವಿವಾದಗಳೂ ಹುಟ್ಟಿಕೊಳ್ಳುತ್ತವೆ. ಸುದ್ದಿಯ ಪರ ಮತ್ತು ವಿರೋಧಿ ಗುಂಪುಗಳು ಸೃಷ್ಟಿಯಾಗಿ ಸಣ್ಣ ಜಗಳಗಳೂ ನಡೆಯುವುದುಂಟು. ಅದಕ್ಕೇ ಕೇಳಿದ್ದು, ಪತ್ರಿಕೆ ಓದುವುದನ್ನು ಕೇಳಿದ್ದೀರಾ ಎಂದು.

ಒಂದೆರಡು ತಮಾಷೆ ಪ್ರಸಂಗಗಳು ಇಲ್ಲಿ ನೆನಪಾಗುತ್ತವೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಇ೦ಕಾ - ಮುಗಿದುಹೋದ ಒ೦ದು ಯೋಧ ಜನಾ೦ಗದ ಕಥೆ ಭಾಗ ೧

ಕ್ರಿಸ್ತ ಶಕ 1200 ರಿ೦ದ 1535 ರ ಕಾಲದಲ್ಲಿ ದಕ್ಷಿಣ ಅಮೆರಿಕಾದಲ್ಲಿ, ಭೂ ಮಧ್ಯ ರೇಖೆಯಿ೦ದ ಚಿಲಿಯ ಪೆಸಿಫಿಕ್ ತೀರದವರಗೆ ಹಬ್ಬಿರುವ ಭೂಭಾಗವನ್ನೆಲ್ಲಾ ಆಕ್ರಮಿಸಿ, ಪ್ರಭುತ್ವ ಸಾಧಿಸಿದ್ದ ಮಹಾನ್ ಯೋಧ ಜನಾ೦ಗವೇ ಇ೦ಕಾ ನಾಗರೀಕತೆ. ಇ೦ಕಾ ಸಾಮ್ರಾಜ್ಯ ಆಗ ಪೆರುವಿನಲ್ಲಿ ಸ್ಥಾಪಿತವಾಗಿದ್ದ ‘ಮೋಛೆ’ ಜನಾ೦ಗವನ್ನು ಉರುಳಿಸುವ ಮೂಲಕ ಸ್ಥಾಪಿತವಾಯಿತೆ೦ದು ಹೇಳಲಾಗುತ್ತದೆ. ಇ೦ಕಾ ಜನರು ಮೂಲತಃ ಯೋಧರು. ಬಲಿಷ್ಠ ಹಾಗೂ ಪ್ರಬಲವಾದ ಸೇನೆಯ ಮೂಲಕವೇ ಅವರ ಅಸ್ತಿತ್ವ. ಇ೦ಥದೊ೦ದು ಉಗ್ರ ಆವೇಶಭರಿತ ಸೈನ್ಯ ಹಾಗೂ ಸ್ಪಷ್ಥ ಧಾರ್ಮಿಕ ನ೦ಬಿಕೆಗಳಿ೦ದಲೇ ಇ೦ದಿಗೂ ಈ ಜನಾ೦ಗ ಅಮೆರಿಕಾದ ಅತಿ ದೊಡ್ಡ ಮೂಲನಿವಾಸಿ ಸಮಾಜ ಎ೦ದು ಗುರುತಿಸಲ್ಪಡುತ್ತದೆ. 15ನೇ ಶತಮಾನದಲ್ಲಿ ತನ್ನ ಉಚ್ಛ್ರಾಯ ಸ್ಥಿತಿಯನ್ನು ತಲುಪಿದ ಈ ಜನಾ೦ಗ 1535ರಲ್ಲಿ ಸ್ಪಾನಿಷ್ ಆಕ್ರಮಣಕಾರಿಗಳ ದೆಸೆಯಿ೦ದ ಹಠಾತ್ ಮತ್ತು ದಾರುಣವಾದ ಅ೦ತ್ಯ ಕ೦ಡಿತು. ಇ೦ಕಾಗಳ ಪಟ್ಟಣಗಳು, ಕೋಟೆ ಕೊತ್ತಲಗಳು ಹೆಚ್ಚಾಗಿ ಎತ್ತರದ ಪ್ರಸ್ಥಭೂಮಿಗಳಲ್ಲಿ ಅಥವಾ ಪರ್ವತಗಳ ಕಡಿದಾದ ಇಳಿಜಾರುಗಳಲ್ಲಿ ಸ್ಥಾಪಿತವಾದವುಗಳು. ಇ೦ಕಾಗಳ ವಾಸ್ತು ಶೈಲಿ ಇವತ್ತಿಗೂ ಬೆಚ್ಚಿಬೀಳಿಸುವಷ್ಟು, ನ೦ಬಲಸಾಧ್ಯವೆನಿಸುವಷ್ಟು ಸ೦ಕೀರ್ಣವಾದುದು ಮತ್ತು ಪರಿಪೂರ್ಣವಾದುದು. ಪ್ರತಿ ಪಟ್ಟಣದ ಕಲ್ಲು ಸೋಪಾನಗಳು ಪಟ್ಟಣದ ತುತ್ತ ತುದಿಯನ್ನು ತಲುಪುತ್ತವೆ.

ಇ೦ಕಾ ಕಟ್ಟಡಗಳ ಪ್ರತಿಯೊ೦ದು ಕಲ್ಲೂ ಟನ್‘ಗಟ್ಟಳೆ ತೂಕವಿರುತ್ತವೆ. ಇ೦ಥ ಬೃಹತ್ ತೂಕದ ಕಲ್ಲುಗಳ ಜೋಡಣೆ ಎಷ್ಟು ಅಚ್ಚುಕಟ್ಟಾಗಿರುತ್ತವೆ೦ದರೆ ಒ೦ದು ಗಡ್ಡ ಹೆರೆಯುವ ಬ್ಲೇಡ್ ಕೂಡಾ ಒಳಗೆ ನುಗ್ಗುವುದಿಲ್ಲ!! ಚಕ್ರದ ಉಪಯೋಗ ಗೊತ್ತಿಲ್ಲದ ಇ೦ಕಾಗಳು ತಮ್ಮ ಆ ಎತ್ತರದ ಜಾಗಗಳಿಗೆ ಇಳಿಜಾರುಗಳಿಗೆ ಬೆನ್ನ ಮೇಲೆ ಮತ್ತು ಲಾಮಾಗಳ ಮೇಲೆ ಹೊರಿಸಿ ಒ೦ದೊ೦ದು ಕಲ್ಲನ್ನೂ ಸಾಗಿಸಿದ್ದಾರೆ. ಪ್ರತಿ ಪಟ್ಟಣದ ಮಧ್ಯಭಾಗ ಸರ್ಕಾರಿ ಕಟ್ಟಡಗಳಿಗೆ ಮೀಸಲಾಗಿರುತ್ತದೆ ಹಾಗೂ ಅದನ್ನು ಆವರಿಸಿದ೦ತೆ ಜನಸಾಮಾನ್ಯರ ಮನೆಗಳು ಕಟ್ಟಲಾಗಿರುತ್ತದೆ. ಎಲ್ಲಾ ಕಟ್ಟಡಗಳೂ ಕಲ್ಲು ಕಟ್ಟಡಗಳಾಗಿದ್ದು ಹುಲ್ಲು ಛಾವಣಿಯನ್ನು ಹೊ೦ದಿರುತ್ತವೆ. 

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಪಕ್ಷಾಂತರ ಇರಲಿ! ಮತಾಂತರ ಬೇಡ!! ಯಾಕೆ?

ಮಾನವ ಹುಟ್ಟಿದಾಗಿನಿಂದ ನಡೆಯುತ್ತಿರುವ ಮತಾಂತರದ ಬಗ್ಗೆ ಈಗ “ಚರ್ಚ್ ಗಳ ಮೇಲಿನ ದಾಳಿ” ನಡೆದಾಗಿನಿಂದ ಚರ್ಚೆಯಾಗುತ್ತಿದೆ. ಇದರ ಪರ-ವಿರೋಧ ಅಭಿಪ್ರಾಯಗಳನ್ನು ಕೆಲವು ಜನಪ್ರಿಯ ಲೇಖಕರು ವ್ಯಕ್ತಪಡಿಸುತ್ತಿದ್ದಾರೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಒಂದು ರೂಪಾಯಿ ಎಂದು ಹೀಗಳೆಯದಿರಿ

ರಸ್ತೆಯಲ್ಲೇನೋ ಮಿಂಚುತ್ತದೆ.

ಅದು ಏನು ಎಂಬುದನ್ನು ಗುರುತಿಸಿದಾಗ ನಿಮ್ಮ ಕಣ್ಣುಗಳೂ ಮಿಂಚುತ್ತವೆ. ’ಅರೆ ವ್ಹಾ, ಒಂದು ರೂಪಾಯಿ!’ ಎಂದು ಮನಸ್ಸು ಅರಳುತ್ತದೆ. ಖುಷಿಯಿಂದ ನಾಣ್ಯವನ್ನು ಕೈಗೆತ್ತಿಕೊಂಡು ಪರೀಕ್ಷಿಸುತ್ತೀರಿ. ಅನುಮಾನವೇ ಇಲ್ಲ. ಅದು ಪಕ್ಕಾ ಒಂದು ರೂಪಾಯಿ.

ನೀವು ಎಷ್ಟೇ ಸಂಬಳ ಪಡೆಯುವವರಾಗಿರಿ, ಹೀಗೆ ಅನಾಯಾಸವಾಗಿ ದೊರೆತ ದುಡ್ಡು ತರುವ ಖುಷಿ ಗಳಿಕೆಯ ಖುಷಿಯನ್ನು ಮೀರಿಸುತ್ತದೆ. ಸಿಕ್ಕಿದ್ದು ಒಂದೇ ರೂಪಾಯಿಯಾದರೂ ಆ ಕ್ಷಣಗಳಲ್ಲಿ ಅದು ಕೊಡುವ ಖುಷಿಯೇ ವಿಚಿತ್ರ. ಅರೆ, ಒಂದು ರೂಪಾಯಿ ಬಗ್ಗೆ ಎಷ್ಟೊಂದು ಹೇಳ್ತಿದ್ದೀ ಎಂದು ಹೀಗಳೆಯದಿರಿ. ಅದಕ್ಕೆ ಅಪಾರ ಸಾಧ್ಯತೆಗಳಿವೆ.

ಹಳ್ಳಿಯ ಕಡೆ ಯಾವ ಅಂಗಡಿಗೇ ಹೋಗಿ, ಒಂದು ರೂಪಾಯಿಗೆ ನಿಮಗೆ ಅರ್ಧ ಕಪ್ ಚಹ ಖಂಡಿತ ಸಿಗುತ್ತದೆ. ಒಂದು ಮೆಣಸಿನಕಾಯಿ ಬಜ್ಜಿ ಗ್ಯಾರಂಟಿ. ಬೀಡಾ ಅಂಗಡಿಯಲ್ಲಿ ಒಂದು ರೂಪಾಯಿಗೆ ಸೊಗಸಾದ ತಾಂಬೂಲ (ಬೀಡಾ ಅಲ್ಲ!), ಅಥವಾ ಗುಟ್ಕಾ ಚೀಟು, ಅಥವಾ ಅಡಿಕೆ ಪುಡಿ ಚೀಟು ದೊರತೀತು. ಧೂಮಪಾನಿಗಳಾಗಿದ್ದರೆ ಎರಡು ಬೀಡಿ ಸಿಗುವುದಂತೂ ಖಾತರಿ. ಇವೇನೂ ಬೇಡ ಎಂದರೆ ಲವಂಗ, ಏಲಕ್ಕಿ ಅಥವಾ ಸೋಂಪು ಇರುವ ಪುಟ್ಟ ಚೀಟನ್ನಾದರೂ ತೆಗೆದುಕೊಳ್ಳಬಹುದು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಅಲಾರಾಂಗೆ ಸಲಾಂ!

ಅಲಾರಾಂಗೆ ಚಳಿಗಾಲವಿಲ್ಲ.

ಅದಕ್ಕೆ ಮಳೆಗಾಲವೂ ಇಲ್ಲ, ಬೇಸಿಗೆ ಕಾಲವೂ ಇಲ್ಲ. ಅದಕ್ಕೆ ಇರುವುದು ಒಂದೇ ಕಾಲ. ಅದು ಸಮಯ.

ಯಾವಾಗ ಸೆಟ್ ಮಾಡಿರುತ್ತೇವೋ, ಆ ಕಾಲಕ್ಕೆ ಸರಿಯಾಗಿ ಬಡಿದುಕೊಳ್ಳುವುದೊಂದೇ ಅದಕ್ಕೆ ಗೊತ್ತು. ಹಾಗೆ ಬಡಿದುಕೊಳ್ಳುತ್ತಾ, ನಮ್ಮನ್ನೂ ಬಡಿದು ಎಬ್ಬಿಸುತ್ತದೆ. ಅಥವಾ ಎಬ್ಬಿಸಲು ಬಡಿದಾಡುತ್ತದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಮನೆಯೊಂದರ ಸುತ್ತ ಮುತ್ತಾ...

ಬಸವನಗುಡಿಯ ಈ ಚಾಳಿಗೆ ನಾವು ಬಂದಾಗ, ಮೊದಲು ನಮ್ಮ ಗಮನ ಸೆಳೆದದ್ದು, ಚಾಳು ಮನೆಯ ಪಕ್ಕದಲ್ಲಿದ್ದ ವಿಶಾಲವಾದ ಖಾಲಿ ಜಾಗ, ಅದರ ಸುಮಾರು ಅರ್ಧದಷ್ಟಿದ್ದ ಮಜಬೂತಾದ ಹಳೆಯ ಮನೆ. ಕಿಷ್ಕಿಂಧೆಯಂತಿದ್ದ ನಮ್ಮ ಮನೆಗೆ ಈ ಖಾಲಿ ಸೈಟು ಒಂದು ದೊಡ್ಡ ವಿಸ್ತರಣದಂತಿತ್ತು. ಬಹುಶಃ ನಾವು ಈ ಚಾಳನ್ನು ಆರಿಸಿಕೊಳ್ಳಲು ಇದೂ ಒಂದು ಕಾರಣ. ನಿವೇಶನದ ಬಹುಭಾಗ ಪಾಳು ಸುರಿಯುತ್ತಿದ್ದರೂ, ಮನೆಯ ಆಸುಪಾಸಿನಲ್ಲಿ ಸಾಕಷ್ಟು ಜಾಗದಲ್ಲಿ ಮನೆಯವರು ಹಬ್ಬಿಸಿದ್ದ ಮಲ್ಲಿಗೆ ಹಂಬು, ಜಾಜಿ, ಐದಾರು ಗುಲಾಬಿ ಗಿಡ; ಅದರ ಮೇಲೆ ಬೆಳಗು, ಸಂಜೆ, ಮಧ್ಯಾಹ್ನ ಉರಿಬಿಸಿಲಿನಲ್ಲಿ ಬೀಸಿ ಬರುವ ತಂಗಾಳಿ ತೆರೆದ ಕಿಟಕಿಯ ಮೂಲಕ ನಮ್ಮ ಮನೆಯನ್ನೆಲ್ಲ ತುಂಬುತ್ತಿತ್ತು. ಈ ಸೈಟಿನ ಪಕ್ಕ ಇನ್ನೊಂದು ಮನೆ. ಮನೆಯ ಯಜಮಾನ ಒಬ್ಬ ಶ್ರದ್ಧಾಳು ಬ್ರಾಹ್ಮಣ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ನನ್ನ ತಪ್ಪೇ ಅಥವಾ ಸಿನಿಕತನವೇ?

ಬೈದುಕೊಂಡೆ ಶುರುಮಾಡುತ್ತೇನೆ. ಮಂಗಳೂರಿನ ಮಧ್ಯಾಹ್ನದ ಬಿಸಿಲು, ಕರೆ೦ಟಿಲ್ಲದೇ ಕೊರಗುವ ಫ್ಯಾನ್ ಗಳ ನಡುವೆ ಕೂತಾಗ ಇದ್ದವರ ಮೇಲೆಲ್ಲಾ ರೇಗುತ್ತಾ ಇರೋದು ಒಂದು ಉದ್ಯೋಗ. ಬೈಯೊದು ನಮ್ಮ ಆಜನ್ಮ ಸಿದ್ಧಹಕ್ಕುರ್‍ಈ ಎಂಬ ಸ್ನೇಹಿತ ಪ್ರತಾಪನ ಮಾತು ನಕ್ಕು ನಿಲ್ಲಿಸಲು ಬಿಡೋದಿಲ್ಲ. ಸಾಹಿತ್ಯದ ಓದಿನಲ್ಲಿ ಹೇಳಿದ ಮೊದಲ ವಾಕ್ಯವೇ ’ಪ್ರಮಾಣಿಸಿ ನೋಡು’.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ತಲೆ ಮರೆಸಿಕೊ೦ಡಿದ್ದ "ಕಾ೦ಗ್ರೆಸ್" ರೇಡಿಯೋ

ಸ್ವಾತಂತ್ರ ಹೋರಾಟದಲ್ಲಿ ಹಲವು ಮಾದರಿಗಳಲ್ಲಿದ್ದವು. ಅನೇಕ ರೀತಿಯ ಪ್ರಯತ್ನಗಳಿದ್ದವು. ಸಾಧ್ಯವಿದ್ದ ಎಲ್ಲ ಅವಕಾಶಗಳನ್ನು ಬಳಸಿಕೊಂಡು ಸ್ವಾತಂತ್ರ್ಯ ಹೋರಾಟವನ್ನು ಉತ್ತೇಜಿಸುವುದು ಅಂದಿನ ಹೋರಾಟಗಾರರ ಉದ್ದೇಶವಾಗಿತ್ತು. ಅ೦ಥ ಸಮಯದಲ್ಲಿ ಸಮೂಹ ಮಾಧ್ಯಮ ಕ್ರಾ೦ತಿಯ ಶಿಶುವಾದ ರೇಡಿಯೋವನ್ನು ಮರೆಯಲು ಸಾಧ್ಯವೇ?

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಇಂಥಹಾ ಸರ್ಕಾರಗಳು, ರಾಜಕಾರಣಿಗಳು, ಅಧಿಕಾರಿಗಳು ನಮಗೆ ಬೇಕೆ?

ದೇಶದ ರಾಜಕಾರಣ, ಆಳುವ ಸರ್ಕಾರಗಳು, ರಾಜಕೀಯ ವ್ಯವಸ್ಥೆ ಸ್ವಾತಂತ್ರ ಬಂದ ೬೧ ವರ್ಷಗಳಲ್ಲೇ ತನ್ನ ಮೂಲ ಧ್ಯೇಯ, ತತ್ವ ಸಿದ್ದಾಂತಗಳನ್ನು ಕಳೆದುಕೊಂಡು ಅಧೋಗತಿಗೆ ಇಳಿಯುತ್ತಿದ್ದು, ಜನಸಮಾನ್ಯರ ಟೀಕೆಗೆ ಗುರಿಯಾಗುತ್ತಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಗೋವಿ೦ದ ಪೈ ಎಂಬ ಅದ್ಭುತ (ಭಾಗ-೧)

ಕನ್ನಡದ ಮೊದಲ ರಾಷ್ಟ್ರಕವಿ ಗೋವಿ೦ದ ಪೈ ಅವರದು ಬಹುಮುಖೀ ವ್ಯಕ್ತಿತ್ವ. ಸಾಹಿತ್ಯಿಕ ಸಾಧನೆಯ೦ತೆ ಸ೦ಶೋಧನಾ ಕಾರ್ಯದಲ್ಲೂ ಅವರದು ಎತ್ತಿದ ಕೈ. ಬಹುಭಾಷಾ ವಿಶಾರದ ಕೂಡ. ಗೋವಿ೦ದ ಪೈ ಅವರದು ಶ್ರೀಮ೦ತ ಸಾಹುಕಾರ ಬಾಬಾ ಪೈ ಮನೆತನ. ಅವರ ಜನನ ೧೮೮೩ ರ ಮಾರ್ಚ್ ೨೩ ನೆಯ ತಾರೀಕಿನ೦ದು ತಾಯಿ ದೇವಕಿಯಮ್ಮ ಅವರ ತವರುಮನೆಯಾದ ಮ೦ಜೇಶ್ವರದಲ್ಲಿ ಆಯಿತು.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಸ೦ಸ್ಕೃತಿ ಮತ್ತು ಸ೦ವಹನ

ಸ೦ಸ್ಕೃತಿಯ ಸ೦ವಹನವಾಗುವುದು ಮಾಧ್ಯಮಗಳ ಮೂಲಕ. ಆ ಮಾಧ್ಯಮವು ಭಾಷೆ, ಅಭಿನಯ, ವರ್ತನೆ, ಕಲಾಕೃತಿ ಇತ್ಯಾದಿ ರೂಪಗಳಲ್ಲಿರುತ್ತದೆ. ಅ೦ದರೆ ಶಾಬ್ದಿಕ ಇಲ್ಲವೇ ಅಶಾಬ್ದಿಕ ರೂಪದಲ್ಲಿರುತ್ತದೆ. ವ್ಯಕ್ತಿಯ ಒಟ್ಟು ಭೌತಿಕ ಚಟುವಟಿಕೆಗಳು ಮತ್ತು ಬೌದ್ಧಿಕ ಚಲನೆಗಳ ಫಲಿತಾ೦ಶವನ್ನು ಸ೦ಸ್ಕೃತಿಯೆನ್ನಬಹುದು.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಮಾತೆಂಬ ಜ್ಯೋತಿರ್ಲಿಂಗ

ಮಾತು- ಭಾಷೆಯೊಂದನ್ನು ಆಡುವ ಸ್ವರೂಪ. ನಾವುಕನ್ನಡಿಗರು, ಅವರು ತಮಿಳರು, ನೀವು ತುಳುವರು ಎಂದು ಹೇಳುವಾಗೆಲ್ಲ ಭಾಷೆಯನ್ನೇ ಅವರವರ  ಪರ್ಯಾಯವಾಗಿ ಬಳಸುತ್ತೇವೆ. ಭಾಷೆಯ ಮೂಲಕ ಜನರನ್ನು ಗುರ್ತಿಸುವುದು ಜಾತಿಯ ಮೂಲಕ ಗುರ್ತಿಸುವುದಕ್ಕಿಂತಲೂ ಒಳ್ಳೆಯದೇ ತಾನೆ? ‘ಭಾಷ್' ಎಂಬ ಸಂಸ್ಕೃತದ ಧಾತುವಿಗೆ ಹೇಳು, ತಿಳಿಸು ಎಂಬ ಅರ್ಥ ಇರುವುದಾದರೂ, ‘ಸೊಲ್' ಎಂಬ ಕನ್ನಡದ ರೂಪಕ್ಕಿರುವ ಅರ್ಥವೂ ಇದೇ ಬಗೆಯದು. ಅಂದರೆ ಒಂದು ಹೇಳಿಕೆಯನ್ನು ಕೊಡುವುದಕ್ಕೆ ಬಳಸುವ ಮಾಧ್ಯಮವನ್ನು ಭಾಷೆ ಎಂದು ಕರೆಯುವುದಾದಲ್ಲಿ ಆ ಮಾಧ್ಯಮವು ಬಳಸುವ ಶಬ್ದರೂಪಗಳನ್ನು ‘ಮಾತು' ಎಂದು ಒಪ್ಪಿಕೊಳ್ಳಬೇಕಾಗುತ್ತದೆ. ನಮಗರ್ಥವಾಗದ ಪ್ರಾಣಿಗಳ ಕೂಗುಗಳು ಅವು ಬಳಸುವ ಭಾಷೆಯ ಮಾತುಗಳೇ ತಾನೆ? ಕಾಗೆಯ ಕೂಗನ್ನು, ಗುಬ್ಬಿಯ ದನಿಯನ್ನು ಗಮನವಿಟ್ಟು ಕೇಳಿದರೆ ಅವುಗಳ ಕೂಗಿನ ಸ್ತರ ಸಂದರ್ಭಕ್ಕೆ ತಕ್ಕಂತೆ ಬದಲಾಗುವುದನ್ನು ಗುರ್ತಿಸಬಹುದು. ಮಾತು ಜ್ಯೋತಿರ್ಲಿಂಗ ಎಂಬ ಸಾಲಿನ ಅರ್ಥ ಈಗ ಎಟುಕಲಿಕ್ಕೆ ಸಾಧ್ಯವಾದೀತು. ಆದರೆ ಭಾಷೆ ಅನ್ನುವುದು ಪ್ರಮಾಣಮಾಡು ಎನ್ನುವ ಅರ್ಥವನ್ನೂ ತನ್ನೊಟ್ಟಿಗೇ ಇಟ್ಟುಕೊಂಡಿರುವುದರಿಂದ ಯಾವತ್ತೂ ಆಡುವುದನ್ನು ಮನಸ್ಸಾಕ್ಷಿಪೂರ್ವಕವಾಗಿ ಸ್ಪಷ್ಟವಾಗಿ ಮತ್ತು ಪ್ರಾಮಾಣಿಕವಾಗಿಯೇ ಆಡಬೇಕು ಎಂದಾಯಿತು. ಆದರೆ ಇವತ್ತು ಶಾಸ್ತ್ರೀಯ ಭಾಷೆಯ ವಿಷಯದಲ್ಲಿ ನಡೆಯುತ್ತಿರುವ ಸಂಗತಿಗಳನ್ನು ನೋಡಿದರೆ ‘ಭಾಷೆ'ಎನ್ನುವುದರ ಹಿಂದೆ ಮನಸ್ಸಾಕ್ಷಿ ಇರಲೇಬೇಕು ಎನ್ನುವುದಕ್ಕೂ ಪುರಾವೆ ದೊರಕುತ್ತಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುವ ಯುವಜನಾಂಗ ಹಾದಿತಪ್ಪುತ್ತಿರುವುದೆಲ್ಲಿ?

ನೀರು ಸೇದಿ ಸೇದಿ
ನೆಲವ ಅಗೆದು, ಅಗೆದು
ಎಪ್ಪತ್ತಾದರೂ ಇಪ್ಪತ್ತರಂತೆ ಕಾಣುತ್ತಿದ್ದರು ಅಂದಿನವರು!
ಬೀಡಿ, ಸಿಗರೇಟ್ ಸೇದಿ ಸೇದಿ
ಗುಟ್ಕಾ, ಪಾನ್ ಪರಾಗ್ ಅಗಿದು, ಅಗಿದು
ಇಪ್ಪತ್ತರಲ್ಲೇ ಎಪ್ಪತ್ತರಂತೆ ಕಾಣುತ್ತಾರೆ ಇಂದಿನವರು!

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ನಾಯಿ ಸಾಕುವ ನಾಯಿ ಪಾಡು......

‘ನಾಯಿ ಮನೆಕಾಯುತ್ತದೆ. ತಂಗಳನ್ನೂ ಅಮೃತವೆನ್ನುವಂತೆ ಉಣ್ಣುತ್ತದೆ. ಎಂದೆಂದೂ ಮನೆಯ ಸುತ್ತಳತೆಯಲ್ಲೇ ಇದ್ದು ಹೋಗಿ ಬರುವವರ ನಿಗ ನೋಡುತ್ತದೆ. ಬೇಜಾರಿನ ಘಳಿಗೆಗಳಲ್ಲಿ, ಸಂತಸದ ಸಂದರ್ಭಗಳಲ್ಲೂ ಮನೆಯ ಯಜಮಾನನ ಕಾಲ ಬುಡದಲ್ಲೇ ಇದ್ದು ಆ ಕ್ಷಣಗಳ ಸಾಕ್ಷಿಯಾಗುತ್ತದೆ....'

ನಾಯಿಯ ಮೇಲೆ ಪ್ರಬಂಧ ಬರೆಯಲು ತಿಣುಕುತ್ತಿದ್ದ ನನ್ನ ಚಿಕ್ಕ ಮಗನಿಗೆ ಇಷ್ಟು ವಿವರ ಕೊಟ್ಟದ್ದೇ ತಪ್ಪಾಗಿಬಿಟ್ಟಿತು. ಪ್ರಬಂಧ ಬರೆಯುವುದನ್ನು ಅಷ್ಟಕ್ಕೇ ಬಿಟ್ಟವನೇ ತನಗೊಂದು ನಾಯಿಮರಿ ಬೇಕೇ ಬೇಕೆಂದು ಹಟ ಹಿಡಿದು ಕುಳಿತು ಬಿಟ್ಟ. ಸಾಮ, ಬೇಧ, ಮುಗಿದು ದಂಡನೆಯ ತುರೀಯಕ್ಕೆ ನಾನಿಳಿದರೂ ಅವನು ಜಪ್ಪಯ್ಯ ಅನ್ನದೇ ನಾಯಿಯ ಧ್ಯಾನದಲ್ಲೇ ಊಟ, ತಿಂಡಿಗಳನ್ನು ಬಿಟ್ಟು ಸತ್ಯಾಗ್ರಹದ ಹಾದಿ ತುಳಿದ. ಎಷ್ಟಾದರೂ ಹೆತ್ತ ಕರುಳು. ಇವಳೂ ಮಗನ ಪರವಾಗಿ ನಿಂತಳು. ಇಷ್ಟೂ ದಿನ ನನ್ನೆದುರು ನಿಲ್ಲಲೂ ಹೆದರುತ್ತಿದ್ದ ನನ್ನ ಮಗಳೂ ತಮ್ಮನ ಪರವಾಗಿ ವಾದಿಸತೊಡಗಿದಳು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕಳಚಿದ ಕಾಲಗರ್ಭದ ಸವಿಸವಿ ನೆನಪು

ಕೊನೆಗೂ ೨೦೦೮ ಕಾಲನ ಕಾಳ್ತುಳಿತಕ್ಕೆ ಸಿಕ್ಕಿ ಕಾಲಗರ್ಭವನ್ನು ಸೇರಿದೆ. ಹತ್ತು ಹಲವು ವಿವಾದಗಳನ್ನು, ನೂರಾರು ಸಮಸ್ಯೆಗಳನ್ನು ತನ್ನ ಒಡಲಾಳದಲ್ಲಿ ನುಂಗಿಕೊಂಡು ವಿದಾಯ ಹಾಡಿದೆ.
ಎಂಟು ಸಾವಿರದ ಎಂಟರೊಳಗಿನ ನಂಟು ಇದೀಗ ತಾನೇ ಸಡಿಲಗೊಂಡಿದೆ. ನೆನಪಿನ ಗಂಟು ಭಾರವಾಗಿದೆ.
ಜಗವಿಹುದನಾದಿಯದು, ಮೊದಲಿಲ್ಲ, ಕೊನೆಯಿಲ್ಲ,
ಯುಗದಿಂದ ಯುಗಕೆ ಹರಿವುದು ಜೀವನದಿ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ದಾಸರ ದಾಸರಾದ ಕನಕದಾಸರು

ಉಡುಪಿಯಲ್ಲಿ ಕನಕದಾಸರಿಂದ ಆದ ಚಮತ್ಕಾರ ಎಲ್ಲರೂ ತಿಳಿದದ್ದೇ. ಅಂತಹಾ ಮಹಾನ್ ಭಕ್ತ ಬೇಲೂರಿನಲ್ಲಿ ದಾಸರ ದಾಸರಾಗಿ ಊಳಿಗ ಮಾಡಿದ್ದು, ಅದನ್ನು ಮಹಾಪುಣ್ಯದ ಕೆಲಸ ಎಂದು ಅವರು ಭಾವಿಸಿದ್ದು ಅವರ ವೈಶಿಷ್ಟ್ಯ.
ಬೇಲೂರಿನಲ್ಲಿ ವೈಕುಂಠದಾಸರೆಂಬ ಹರಿಭಕ್ತರಿದ್ದರು. ಕನಕದಾಸರ ದೀಕ್ಷಾ ಗುರುಗಳಾದ ತಿರುಮಲೆ ತಾತಾಚಾರ್ಯರೇ ಇವರಿಗೂ ದೀಕ್ಷೆ ಕೊಟ್ಟವರೆಂದು ಹೇಳುತ್ತಾರೆ. ಇವರು ಬೇಲೂರು ಬಿಟ್ಟು ಹೊರಗೆಲ್ಲೂ ಹೋದವರಲ್ಲ. ಆದರೂ ಅವರ ಖ್ಯಾತಿಯಂತೂ ಎಲ್ಲಾಕಡೆ ಹರಡಿತ್ತು. ಕನಕದಾಸರು ವೈಕುಂಠದಾಸರ ಹಿರಿಮೆಯನ್ನು ಮೊದಲೇ ಕೇಳಿದ್ದರು. ಅವರನ್ನು ಕಾಣಲೆಂದು ಬೇಲೂರಿಗೆ ಹೋದರು. ವೈಕುಂಠದಾಸರೂ ಕನಕದಾಸರ ವಿಚಾರವನ್ನು ತಿಳಿದವರಾಗಿದ್ದರು. ಪರಸ್ಪರ ಗೌರವ ವಿಶ್ವಾಸಗಳು ಬೆಳೆದಿದ್ದವು, ಆದರೆ ಪರಸ್ಪರ ಭೆಟ್ಟಿಯಾಗಿರಲಿಲ್ಲ ಅಷ್ಟೇ. ಕನಕದಾಸರು ಬೇಲೂರಿಗೆ ಬಂದು ವೈಕುಂಠದಾಸರ ಮನೆಯನ್ನು ಹುಡುಕಿಕೊಂಡು ಹೋಗಿ, ಅವರಲ್ಲಿ ಊಳಿಗಕ್ಕೆ ಸೇರಿದರು. ತಾವು ಇಂಥವರು ಎಂದು ವೈಕುಂಠದಾಸರಿಗೆ ತಿಳಿಯಪಡಿಸದೇ ಅವರು ಹೇಳಿದ ಕೆಲಸಗಳನ್ನೆಲ್ಲಾ ನಿಷ್ಠೆಯಿಂದ, ಭಕ್ತಿಯಿಂದ, ಬೇಸರಪಡದೇ ಮಾಡುತ್ತಿದ್ದರು. ಆದರೆ ಒಂದು ದಿನ ವೈಕುಂಠದಾಸರಿಗೆ ತನ್ನಲ್ಲಿ ಊಳಿಗ ಮಾಡುತ್ತಿರುವವರು ಕನಕದಾಸರು ಎಂಬ ವಿಚಾರ ತಿಳಿದು ಹೋಯಿತು. ಆಗ ವೈಕುಂಠದಾಸರಿಗೆ ಆದ ಸಂಕಟ ಅಷ್ಟಿಷ್ಟಲ್ಲ. ಇಷ್ಟು ದೊಡ್ಡ ಹರಿದಾಸರು ತನ್ನ ಮನೆಯಲ್ಲಿ ಇದ್ದರೂ ತಾನು ಗುರುತಿಸಿ ಗೌರವಿಸಲಾರದೇ ಹೋದೆನೇ ಎಂದು ಮರುಗಿದರು. ಕನಕದಾಸರ ಕಾಲು ಹಿಡಿದು ತಪ್ಪನ್ನು ಮನ್ನಿಸಬೇಕೆಂದು ಪರಿಪರಿಯಾಗಿ ಬೇಡಿಕೊಂಡರು.

field_vote: 
Average: 4 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಸ್ತ್ರೀ -ಎರಡು ದೃಷ್ಟಿಕೋನ

ಜಗತ್ತಿನಲ್ಲಿ ಬಹುಕಾಲದಿ೦ದ ಮಹಿಳೆಯ ಬಗ್ಗೆ ಎರಡು ರೀತಿಯ ದೃಷ್ಟಿಕೋನಗಳಿವೆ. ಅದರಲ್ಲೂ ಭಾರತೀಯ ಸ೦ಸ್ಕೃತಿಯಲ್ಲಿ ಸ್ತ್ರೀಗೆ ಮಹತ್ವದ ಸ್ಥಾನವೂ ಇದೆ. ಪೂಜ್ಯ ಸ್ಥಾನವೂ ಇದೆ. ಹಾಗೆಯೇ ಅವಳ ಶೋಷಣೆಯೂ ಆಗಿದೆ ಎ೦ಬುದು ಸಮಾನದ ಸತ್ಯವೂ ಹೌದು. ಹೆಣ್ಣಿನ ವಿಚಾರದಲ್ಲೇ ಈ ವಿರೋಧಾಭಾಸಗಳು ಕ೦ಡುಬರುವುದು ಒ೦ದು ವಿಪರ್ಯಾಸವೂ ಹೌದು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಬರಿದಾದ ನದಿ-ಕೆರೆ, ಮಳೆರಾಯನಿಗೆ ಕೇಳಿಸದೇ ಮೊರೆ?

ಅದೊಂದು ದೊಡ್ಡಕೆರೆ, ಸುಮಾರು ೧೦ ಸಾವಿರ ಎಕರೆ ಪ್ರದೇಶದಲ್ಲಿ ತನ್ನನ್ನು ಆವರಿಸಿಕೊಂಡಿದೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಇಲ್ಲಿ ಎಲ್ಲವೂ "ಒಬಾಮ"ಮಯವಾಗುತ್ತಿದೆ

ಅಮೆರಿಕದ ಅಧ್ಯಕ್ಷ ಬರಾಕ್ ಹುಸೇನ್ ಒಬಾಮನ ಬಗ್ಗೆ ಕಳೆದೆರಡು ತಿಂಗಳಿಂದ ಬರೆಯದ ಪತ್ರಿಕೆಗಳಿಲ್ಲ, ಸುದ್ದಿ ಬಿತ್ತರಿಸದ ಟೀವೀ ಚಾನಲ್‍ಗಳಿಲ್ಲ. ಅವನೊಬ್ಬ ಕರಿಯನಾಗಿದ್ದುಕೊಂಡು ಏನೆಲ್ಲ ಸಾಧನೆಯನ್ನು ಮಾಡಿದ! ಹಿಂದೊಮ್ಮೆ ಕರಿಯರನ್ನು ಅಸ್ಪೃಶ್ಯರಂತೆ ನಡೆಸಿಕೊಡ ದೇಶಕ್ಕೆ ಈಗ ಅವನೇ ಅಧಿಪತಿ!

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕೊರೆವ ಚಳಿ ಉರಿವ ಬಿಸಿಲಿನ ಮಾಗಿಕಾಲ

ಮಾಗಿಕಾಲದಲ್ಲಿ ಹಗಲು ಕಡಿಮೆ, ರಾತ್ರಿ ಸುಧೀರ್ಘ. ಸಂಜೆ ಐದುಮುಕ್ಕಾಲಿಗೆಲ್ಲಾ ಹೊತ್ತು ಮುಣುಗಿ ಮಕ್ಕತ್ತಲಾದರೆ ಬೆಳಿಗ್ಗೆ ಆರು ಗಂಟೆ ದಾಟಿದರೂ ಸಹ ಬೆಳಕರಿಯುವುದಿಲ್ಲ. ಮಾಗಿ ಕಾಲದ ಮತ್ತೊಂದು ಲಕ್ಷಣವೆಂದರೆ ಚಳಿ ಮತ್ತು ತೀಕ್ಷ್ಣ ಬಿಸಿಲು. ಸಂಜೆ, ರಾತ್ರಿ ಮತ್ತು ಬೆಳಗಿನ ೯ ಗಂಟೆಯವರೆಗೂ ಮೈಕೊರೆಯುವ ಚಳಿ ಇದ್ದರೆ ನಡು ಹಗಲಲ್ಲಿ ಚುರು-ಚುರು ಬಿಸಿಲು. ನೆತ್ತಿ ಮೇಲಿನ ಸೂರ್ಯ ಹೆಚ್ಚು ಪ್ರಖರವಾಗಿರುತ್ತಾನೆ. ಬೆಳಿಗ್ಗೆ ಆಫೀಸಿಗೆ ಅಥವಾ ಹೊರಗೆ ಹೋಗುವಾಗ ಸ್ವೆಟರ್ ಹಾಕಿಕೊಳ್ಳಬೇಕೆನಿಸಿದರೆ ಹನ್ನೊಂದು ಗಂಟೆಗೆಲ್ಲಾ ತೆಗೆದು ಹಾಕಬೇಕೆನಿಸುತ್ತದೆ.

ಬಿಡುವು ಮಾಡಿಕೊಂಡು ವ್ಯವಧಾನದಿಂದ ಸುತ್ತಲಿನ ನಿಸರ್ಗವನ್ನು ಗಮನಿಸುವವರಿಗೆ ಈ ಕಾಲದಲ್ಲಾಗುವ ಬದಲಾವಣೆಗಳು ಸ್ಪಷ್ಟವಾಗಿ ಅನುಭವಕ್ಕೆ ಬರುತ್ತವೆ. ಹಳ್ಳಿಗರು, ಒಕ್ಕಲು ಮಕ್ಕಳು ಈ ಪಲ್ಲಟವನ್ನು ಗುರುತಿಸುತ್ತಾರೆ ಮತ್ತು ಅನುಭವಿಸುತ್ತಾರೆ.ಮಾಗಿ ಹೊತ್ತು ಕಣ್ಣಗ್ ಬೆಳಕಿದ್ದಂಗೆ ಕೆಲ್ಸ ಮುಗ್ಸಿ ಮನೆ ಸೇರ್ಕಳಿ ಎಂದು ಎಚ್ಚರಿಸುವ ಮಾತುಗಳನ್ನು ಪದೇ-ಪದೇ ಹೇಳುತ್ತಿರುತ್ತಾರೆ. ಆದರೆ ನಗರವಾಸಿಗಳಿಗೆ, ಒತ್ತಡದಲ್ಲಿ ಕೆಲಸ ಮಾಡುವವರಿಗೆ, ಶಿಫ್ಟ್ ಗಳಲ್ಲಿ ದುಡಿಯುವವರಿಗೆ ಮಾಗಿ ಋತುವಿನಲ್ಲಾಗುವ ಸೂಕ್ಷ್ಮ ಏರು-ಪೇರುಗಳು ಅರಿವಾಗುವುದಿಲ್ಲ, ಈ ಸುಂದರ ಅನುಭೂತಿಯಿಂದ ಅವರು ವಂಚಿತರಾಗುತ್ತಾರೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಹೆಸರಿನ ಹಸಿರು!!! (ಹೆಸರುಗಳ-ಹಾಸ್ಯ ಹರಟೆ!!!)

* ಹೆಸರಿನ ಹಸಿರು *
(ನಾಮಾಮೃತ)
ಹೆಸರುಗಳ ಹಾಸ್ಯ-ಹರಟೆ!!!

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಅಟ ಮುಗಿಸಿದ ಕೆರೆಮನೆ ಶಂಭುಹೆಗ್ಗಡೆ

ಯಕ್ಷಗಾನ ರಂಗದ ಸುಖ-ದುಃಖ ಮತ್ತು ಏರಿಳಿತಗಳನ್ನು ಬಾಲ್ಯದಿಂದಲೇ ಅನುಭವಿಸಿಕೊಂಡು, ಪೋಷಿಸಿಕೊಂಡು ಬಂದ ಹಿರಿಯ ಯಕ್ಷಗಾನ ಕಲಾವಿದ, ಕರ್ನಾಟಕ ಯಕ್ಷಗಾನ ಮತ್ತು ಜಾನಪದ ಅಕಾಡಮಿ ಅಧ್ಯಕ್ಷರೂ ಆದ ಕೆರೆಮನೆ ಶಂಭುಹೆಗ್ಗಡೆ ಎಂಬ ಮಹಾನ್ ಚೇತನ ಇನ್ನು ಇತಿಹಾಸದ ಪುಟಗಳಲ್ಲಿ ಮಾತ್ರ!

ಕೇರಳದಲ್ಲಿ ಕಥಕ್ಕಳಿ ನಾಡಿನ ಸಾಂಸ್ಕೃತಿಕ ರಂಗದ ಮಾನ್ಯತೆ ಪಡೆದಿದೆಯೋ ಹಾಗೆಯೇ ಯಕ್ಷಗಾನ ಕರ್ನಾಟಕದಲ್ಲಿ ಅಗ್ರಪಂಕ್ತಿಯ ಕಲೆಯಾಗಿ ಮಾನ್ಯತೆ ಪಡೆಯಬೇಕಾದ ಅಗತ್ಯವಿದೆ ಎಂಬ ತಮ್ಮ ಮಹದಾಸೆಯನ್ನು ಇಟ್ಟುಕೊಂಡಿದ್ದ ಹೆಗಡೆಯವರು, ಅನುಷ್ಟಾನಕ್ಕಾಗಿ ಬಹಳಷ್ಟು ಶ್ರಮಿಸಿದರೂ ಕಡೆಗೂ ಅವರ ಆಸೆ ಈಡೇರಲಿಲ್ಲ.

ಔದ್ಯೋಗಿಕತೆಗೆ ಸಿಕ್ಕಿ ಜಾನಪದ ಕಲಾಪ್ರಕಾರಗಳು ನಾಶವಾಗುತ್ತಿದ್ದು, ಜಾನಪದ ಕಲಾಪ್ರಕಾರಗಳನ್ನು ಉಳಿಸುವ ಕೆಲಸವನ್ನು ಕಲಾವಿದರು, ಪ್ರೇಕ್ಷಕರು ಮಾಡಬೇಕು. ಯಕ್ಷಗಾನ ಕ್ಷೇತ್ರಕ್ಕೆ ತಮ್ಮಿಂದ ಒಳ್ಳೆಯದಾಗಿದೆಯೋ ಇಲ್ಲವೋ, ಕೆಟ್ಟದಂತೂ ಆಗಬಾರದು ಎನ್ನುವ ಕಳಿಕಳಿ ಹೊಂದಿದ್ದ ಅವರು, ಇತ್ತೀಚಿನ ದಿನಗಳಲ್ಲಿ ಯಕ್ಷಗಾನ ಹಾಗೂ ರಂಗಭೂಮಿ ತನ್ನ ಮೂಲ ಸ್ವರೂಪವನ್ನು ಕಳೆದುಕೊಳ್ಳುತ್ತಿರುವ ಬಗ್ಗೆ ವಿಷಾಧ ವ್ಯಕ್ತಪಡಿಸುತ್ತಿದ್ದರು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಗಣಿ ಮಹಾತ್ಮೆ

Mining೨೦೦೩ ರ ನಂತರ ಜಗತ್ತಿನೆಲ್ಲೆಡೆ ಎಕಾನಮಿ ಬೂಮ್. ಅದರ ಜೊತೆಗೆ ಬಂತು ಚೀನಾದ ಒಲಂಪಿಕ್ಸ್ ಆಟ. ಕ್ರೀಡಾಂಗಣ ನಿರ್ಮಾಣಕ್ಕೆ ಬೇಕಿತ್ತು ಟನ್ ಗಟ್ಟಲೆ ಸ್ಟೀಲ್. ಇದಕ್ಕೆ ಸಹಕರಿಸಿದವರು ನಮ್ಮ ರಾಜ್ಯದ ಗಣಿ ಸಾಮ್ರಾಟರು. ಶುರುವಾಯಿತು ಗಣಿ ರಂಪಾಟ, ಕೇಳುವವರಿಲ್ಲ ಜನರ ಪರದಾಟ. ಚೀನಾದ ಕೃಪೆಯಿಂದ ಮಣ್ಣಿಗೂ ಬಂತು ಹೊನ್ನಿನ ಬೆಲೆ. ಲಾರಿ ತಯಾರಿಕರಿಗಂತೂ ಹಬ್ಬವೋ ಹಬ್ಬ. ಹಾಗೆ ರಾಜ್ಯದ ಬಂದರುಗಳು ಭರ್ಜರಿ ಹಣವನ್ನು ಎಣಿಸುತ್ತಿದ್ದವು. ರಾಜ್ಯದ ಲೆಕ್ಕವಿಲ್ಲದಷ್ಟು ಅರಣ್ಯ ಪ್ರದೇಶಗಳು ಬಯಲು ಪ್ರದೇಶವಾದವು. ಬಳ್ಳಾರಿ, ತುಮಕೂರು, ಚಿತ್ರದುರ್ಗ ಸೀಮೆಯ ಕೆಲವೇ ಮಂದಿ ದಿಡೀರ್ ಶ್ರೀಮಂತರಾದರು. ಯುವಕರು ಗಣಿ ಕೆಲಸಕ್ಕೆ ಇಳಿದರು. ಹಲವಾರು ಮಂದಿ ಕೃಷಿ ಬಿಟ್ಟು ಗಣಿಗೆ ಕೈ ಚಾಚಿದರು. ಗಣಿ ನಾಯಕರು ಪ್ರತ್ಯೇಕ ಹೆಲಿ-ಪಾಡ್ ಗಳ ಒಡೆಯರಾದರು.

ಆದರೆ ಇದರಿಂದ ಆದ ದುಷ್ಪರಿಣಾಮಗಳು ಯಾರಿಗೂ ಬೇಡ. ಕರ್ನಾಟಕದಲ್ಲಿ ಅತ್ಯಂತ ಭಯಾನಕ ಮತ್ತು ಹದೆಗೆಟ್ಟ ರಾಷ್ಟ್ರೀಯ ಹೆದ್ದಾರಿಗಳೆಂದರೆ ೧೭,೪೮,೬೩,೧೩. ಇವುಗಳಲ್ಲಿ ಅನೇಕ ಹೋಲಿಕೆಗಳು ಇದೆ. ಎಲ್ಲ ಹೆದ್ದಾರಿಗಳು ಕರಾವಳಿ ಮತ್ತು ಮಲೆನಾಡಿನ ಭಾಗ. ಹಾಗೆ ಎಲ್ಲ ಹೆದ್ದಾರಿಗಳು ಸಿಕ್ಕಾಪಟ್ಟೆ ಮಳೆ ಬೀಳುವ ಪ್ರದೇಶಗಳು. ಅಷ್ಟೇ ಅಲ್ಲ , ಎಲ್ಲ ಹೆದ್ದಾರಿಗಳು, ಗಣಿ ಲಾರಿಗಳು ಸಂಚರಿಸುವ ರಸ್ತೆಗಳು. ೨೦ ಟನ್ ಸಾಗಿಸಬೇಕೆಂಬ ನಿಯಮ ಇದ್ದರೂ ಸಹ ೪೦ ಟನ್ ಸಾಗಿಸುತ್ತಿದ್ದ ಲಾರಿಗಳಿಂದ, ಹೆದ್ದಾರಿ ಸಂಪೂರ್ಣ ಕುಸಿದುಹೊಗಿತ್ತು. ಅದರಲ್ಲೂ ಶಿರಾಡಿ ಘಾಟಿ(೪೮), ಉಡುಪಿ-ಕುಂದಾಪುರ(೧೭) ರಸ್ತೆಗಳು national-highway ಬದಲು notional-highwayಗಳಾಗಿದ್ದವು. ಸುಮಾರು ಎರಡು ವರ್ಷದ ಹಿಂದೆ ಕರಾವಳಿಯಲ್ಲಿ ಕಾಣಿಸುತ್ತಿದ್ದ ರಸ್ತೆಗಳು ಮೂರೇ ಬಗೆಯವು. ಒಂದು ಕೆಟ್ಟ ರಸ್ತೆ, ಎರಡನೆಯದು ಅತಿ ಕೆಟ್ಟ ರಸ್ತೆ, ಮೂರನೆಯದು ರಸ್ತೆಯೇ ಇಲ್ಲ. ಇದು ಗ್ರಾಮೀಣ ರಸ್ತೆ ಸ್ಥಿತಿ ಅಲ್ಲ, ಬದಲಾಗಿ ರಾಷ್ಟ್ರೀಯ ಹೆದ್ದಾರಿಗಳ ಅವಸ್ಥೆ. ಕಡೆಗೂ ಹೆದ್ದಾರಿ ಬಂದ್ ಮಾಡಿಸಿ ರಸ್ತೆ ದುರಸ್ತಿ ಆಯಿತು. ಇನ್ನು ಹೆದ್ದಾರಿ-೧೩ ಕ್ಕೆ ಬಂದರೆ ಆ ರಸ್ತೆಗೆ ರಾಷ್ಟ್ರೀಯ ಹೆದ್ದಾರಿ ಮಾನ್ಯತೆ ಹೇಗೆ ಕೊಟ್ಟರೋ ತಿಳಿಯದು. ಕೇವಲ ಒಂದು ಬಸ್ಸು ಹೋಗುವಷ್ಟು ಜಾಗ ಇರುವ ಕಡಿದಾದ ಮಾರ್ಗ. ಇದರಲ್ಲೂ ರಾಜಕೀಯ ನಡೆದಿರಬಹುದು. ತುಮಕೂರಿನಿಂದ ಸಾಗಿಸುವ ಗಣಿಗಳಿಗೆ ಮಂಗಳೂರಿಗೆ ಹೋಗಲು ಅತ್ಯಂತ ಸಮೀಪದ ಮಾರ್ಗ ಈಗಿರುವ ಹೆದ್ದಾರಿ-೧೩. ಗಣಿ ಲಾರಿಗಳಿಗೆ ರಾಷ್ಟ್ರೀಯ-ಹೆದ್ದಾರಿ ಬಿಟ್ಟರೆ ಬೇರೆ ಯಾವ ರಸ್ತೆಗಳಲ್ಲೂ ಅವಕಾಶವಿಲ್ಲ. ಅದಕ್ಕೆ ಇಂತಹ ಮಾರ್ಗಗಳನ್ನು ಸಹ ರಾಷ್ಟ್ರೀಯ-ಹೆದ್ದಾರಿಯಾಗಿ ಮಾರ್ಪಾಡು ಮಾಡಲಾಯಿತು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಚಂದಿರನೇತಕೆ ಓಡುವನಮ್ಮಾ? (ಹೋಳಿ ಹುಣ್ಣಿಮೆಯ ನೆನಪಲ್ಲಿ)

“ಚಂದಿರನೇತಕೆ ಓಡುವನಮ್ಮ ಮೋಡಕೆ ಹೆದರಿಹನೆ?” ಶಿಶು ಗೀತೆಯ ಸಾಲುಗಳು ನೆನಪಾದಾಗಲೆಲ್ಲ ನಮ್ಮೊಂದಿಗೆ ಓಡುತ್ತೋಡುತ್ತಲೇ ತಾನು ಮಾತ್ರ ಇದ್ದಂತೆಯೇ ಇರುವ ಚಂದ್ರನ ಬಗ್ಗೆ ಮತ್ಸರ ಹುಟ್ಟುತ್ತದೆ. ಅಳುವ ಮಕ್ಕಳಿಗೆಲ್ಲ ಚಂದಮಾಮನಾಗಿ ಬಂದು ಸಮಾಧಾನ ಮಾಡುವ ಅವನು, ಹದಿಹರಯದವರಲ್ಲಿ ಕುತೂಹಲ ಹುಟ್ಟಿಸುತ್ತ, ಪ್ರೇಮಿಗಳಿಗೆ ಸಂತಸದ ಸಂಭ್ರಮವನ್ನೇ ಹರಿಸುವ ಚಂದ್ರಮ ಮುಪ್ಪಡರಿದವರ ಜೊತೆ ಜೊತೆಗೇ ಹೆಜ್ಜೆ ಹಾಕುತ್ತ ಅವರ ಒಂಟಿತನ ನೀಗಿಸುತ್ತಾನೆ.

ಚಂದ್ರಿಕೆಯ ಬೆಳಕನ್ನೇ ಉಂಡು ಸುಖಿಸುವ ಚಕೋರ ಪಕ್ಷಿಯ ವಿಚಾರವೂ ಎಲ್ಲರಿಗೆ ತಿಳಿದದ್ದೇ ಆಗಿದೆ. ಗಣಪನಿಂದ ಶಪಿತನಾದ ಚಂದ್ರನ ಕತೆಯೂ ನಮಗೆ ಗೊತ್ತು. ಇನ್ನು ಈ ಚಂದ್ರನ ತಿಂಗಳ ಬೆಳಕಿನ ಬಗ್ಗೆ ಗೊತ್ತಿರದವರು ಯಾರಿದ್ದಾರೆ?

ಹಾಲು ಸುರಿದಂತೆ ಬೆಳದಿಂಗಳೆಂದು ಒಬ್ಬರು ಹೇಳಿದರೆ ಹಿಟ್ಟು ಚೆಲ್ಲಿದಂತೆ ಬೆಳದಿಂಗಳೆಂದು ಮತ್ತೊಬ್ಬರ ವಾದ. ಚೆಲ್ಲಲು ಹಾಲು ಸಿಕ್ಕಬಹುದಾದರೂ ಹಾಗೆ ಚೆಲ್ಲಿದ ಹಾಲು ನೆಲದಲ್ಲಿಂಗದೇ ಉಳಿಯಲು ಸಾಧ್ಯವೆ? ಹಿಟ್ಟನ್ನು ಚೆಲ್ಲಿದ್ದಾರೆನ್ನುವವರಿಗೂ ಅಷ್ಟೊಂದು ಹಿಟ್ಟು ಅದೆಲ್ಲಿ ಸಿಕ್ಕುತ್ತದೋ ಗೊತ್ತಿಲ್ಲ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಪು.ತಿ. ನ. ಅವರ ಕಾವ್ಯಗಳ ರಸಧಾರೆ!!!

ಸಹೃದಯ ಗೋಷ್ಠಿಯಲ್ಲಿ "ಪು.ತಿ.ನ. ಅವರ ಕಾವ್ಯಗಳ ರಸಧಾರೆ"!!!

ಡಾ. ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ.

field_vote: 
Average: 3 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಅಂತರ್ಜಾಲದಲ್ಲಿ ಬ್ಯಾಂಕಿಂಗ್

"ನಾಳೆ ಮುಂಗಡ ತೆರಿಗೆ ಪಾವತಿಗೆ ಕೊನೆಯ ದಿನ,ನೆನಪಿದೆ ತಾನೆ?" ಸಂಜೆ ಕ್ಲಿನಿಕ್ ಮುಗಿಸಿ ಮನೆಗೆ ಹೋಗುವ ಸಮಯದಲ್ಲಿ ಆಡಿಟರ್ ಇಂದ ದೂರವಾಣಿ ಕರೆ. ರಾತ್ರಿ ಊಟ ಮುಗಿಸಿ ,ಲ್ಯಾಪ್ ಟಾಪ್ ತೆರೆದು ಬ್ರಾಡ್ ಬ್ಯಾಂಡ್ ಹಾಕುತ್ತಿದ್ದಂತೆ ಔಟ್ಲುಕ್ ನಿಂದ ನೆನಪಿಸುವ ಮೆಮೊ- ಮೊಬೈಲ್ ಬಿಲ್ ಪಾವಥಿಸಬೇಕು, ಎಲ್ ಐ ಸಿ ಪ್ರೀಮಿಯಮ್ ಕಟ್ಟುವ ಕೆಲಸ ಬಾಕಿ ಇದೆ!

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಕಂಪ್ಯೂಟರ್ ಮೆಮೊರಿ: ಹಾಗೆಂದರೇನು?

ಕಂಪ್ಯೂಟರ್ ಮೆಮೊರಿ, GB, MB ಇತ್ಯಾದಿ ಶಬ್ದಗಳನ್ನು ನೀವು ಕೇಳಿರಬಹುದು. ಹಾಗೆ ಎಂದರೇನು ಎಂದು ನಿಮಗೆ ಗೊತ್ತಿಲ್ಲದಿದ್ದರೆ, ಯಾರನ್ನು ಕೇಳಬೇಕೆಂದು ತಿಳಿಯದಿದ್ದರೆ (ಅಥವಾ ಕೇಳಲು ನಾಚಿಕೆ ಪಟ್ಟುಕೊಂಡಿದ್ದರೆ) ನಿಮಗಾಗಿ ಈ ಲೇಖನ.

ಕಂಪ್ಯೂಟರ್ ಬಹಳ ವೇಗವಾಗಿ ಸಂಖ್ಯೆಗಳನ್ನು ಕೂಡಿ, ಕಳೆದು ಮಾಡುತ್ತೆ ಆದರೆ ಅದರ 'ಮಿದುಳಿನ' ಒಳಗೆ ತುಂಬಾ ಸಂಖ್ಯೆಗಳನ್ನು ಇಟ್ಟುಕೊಳ್ಳುವುದಕ್ಕೆ ಜಾಗ ಇರೋಲ್ಲ. ಅದಕ್ಕೆ ನಾವು ಚಿಕ್ಕವರಿದ್ದಾಗ ಲೆಕ್ಕ ಮಾಡಲು ಕೈ ಬೆರಳುಗಳನ್ನು ಮಡಿಚಿ ಇಟ್ಟುಕೊಂಡಿರುತ್ತೀವಲ್ಲ (ದಶಕ / ಕೈಲಿ ನೆನಪು ಇಟ್ಟುಕೊಳ್ಳೋಕೆ ) ಅದೇ ರೀತಿ ಕಂಪ್ಯೂಟರ್ ಗೆ ಕೂಡ ಮಿದುಳು (processor) ಜೊತೆಗೆ ಮೆಮೊರಿ ಬೇಕು.

ನಾವು ಅಡಿಗೆ ಮಾಡುವಾಗ ಅಕ್ಕಿಯನ್ನು ಹೇಗೆ ಬಳಸುತ್ತೇವೆ ಹೇಳಿ? ಮನೆಯ ಮೂಲೆಯಲ್ಲಿ ಒಂದು ದೊಡ್ಡ ಮೂಟೆಯಲ್ಲಿ ಅಕ್ಕಿ ಇಟ್ಟಿರುತ್ತೇವೆ. ವಾರಕ್ಕೆ ಬೇಕಾದಷ್ಟು ಅಕ್ಕಿಯನ್ನು ಅಡುಗೆ ಮನೆಯ ಮೂಲೆಯಲ್ಲಿ ಒಂದು ಸಣ್ಣ ಡಬ್ಬದಲ್ಲೋ, ಚೀಲದಲ್ಲೋ ಇಟ್ಟಿರುತ್ತೇವೆ. ಇನ್ನು ಅಡಿಗೆ ಮಾಡುವಾಗ ಬೇಕಾದಷ್ಟು ಅಕ್ಕಿಯನ್ನು ಅನ್ನ ಮಾಡುವ ಪಾತ್ರೆಯಲ್ಲಿ ಹಾಕಿ ಮಾಡುತ್ತೇವೆ ಅಲ್ಲವೇ?

field_vote: 
Average: 3.7 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಕೃಷಿಕರ ಯುಗಾದಿ

ಯುಗಾದಿ ಯಾವುದೇ ದೇವ-ದೇವತೆಗಳ ಸೋಂಕಿಲ್ಲದ ನಿಸರ್ಗದ ಹಬ್ಬ. ಜನಪದರಿಗೆ ಹೊಸವರ್ಷದ ಮೊದಲ ದಿನ. ಹೊಸ ಮಳೆಗಾಲಕ್ಕೆ ಶ್ರೀಕಾರ. ಒಳ್ಳೆಯದು - ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸುವ ಆಶಯದಿಂದ ಬೇವು-ಬೆಲ್ಲ ಬಾಯಿಗೆ ಹಾಕಿಕೊಳ್ಳುತ್ತಾರೆ. ಹೊಸ ಬಟ್ಟೆ ತೊಟ್ಟು ಹೊಟ್ಟೆ ತುಂಬಾ ಒಬ್ಬಟ್ಟು ತಿಂದು ಆಗತಾನೇ ಎಳೆ ಚಿಗುರಿಡುತ್ತಿರುವ ಹೊಂಗೆ ಮರದ ನೆರಳಲ್ಲಿ ಹಳ್ಳಿಗರು ಮಲಗುವುದು ಸಾಮಾನ್ಯ. ಇಸ್ಪೀಟು ಈ ಹಬ್ಬಕ್ಕೆ ಹೇಗೆ ತಳುಕು ಹಾಕಿಕೊಂಡಿತೆಂಬುದು ತಿಳಿಯುತ್ತಿಲ್ಲ. ಯುಗಾದಿ ಮರುದಿನ ಹೊಸತಡುಕು, ಚಂದ್ರ ದರ್ಶನ. ಮಾಂಸಾಹಾರಿಗಳಿಗೆ ಸಡಗರ. ಕೆಲವೆಡೆ ಸಾಮೂಹಿಕ ಬೇಟೆಯೂ ಉಂಟು.

ಯುಗಾದಿ ಸಂಪೂರ್ಣ ಬಿಡುವಿನ ಕಾಲದಲ್ಲಿ ಅಥವಾ ವಿರಾಮದ ಕೊನೆಯ ಮತ್ತು ದುಡಿಮೆಯ ಆರಂಭ- ಇವೆರಡರ ನಡುವೆ ಬರುವಂತಹುದು. ಹಾಗಾಗಿಯೇ ಈ ಹಬ್ಬದಲ್ಲಿ ಸಿಹಿ-ಕಹಿಯ ಮಿಶ್ರಣವಿರುತ್ತದೆ. ಯುಗಾದಿ ಬರುವ ಸ್ವಲ್ಪ ದಿನ ಮುಂಚೆ ಕಾಮನ ಹಬ್ಬ ಬಂದಿರುತ್ತದೆ. ಕಾಮನ ಹಬ್ಬವನ್ನು ಹಳ್ಳಿಗರು ಕದಿರೆ ಹುಣ್ಣಿಮೆ ಎಂತಲೂ ಕರೆಯುತ್ತಾರೆ. ಕಾಮನ ಹಬ್ಬ ನಿಸರ್ಗದ ವರ್ಷದಲ್ಲಿ ಕೊನೆಯ ಹಬ್ಬ. ಹಳೆಯ ವಸ್ತುಗಳನ್ನು ಸುಟ್ಟು ಹೊಸ ವಸಂತದ ಆಗಮನಕ್ಕೆ ಸಿದ್ಧವಾಗುವ ಪರ್ವ ಕಾಲ. ಇದಾದ ಸ್ವಲ್ಪ ದಿನಕ್ಕೆ ಬರುವ ಯುಗಾದಿ ನಿಸರ್ಗ ವರ್ಷದ ಮೊದಲ ಹಬ್ಬ. ಯುಗದ ಆದಿ. ಶಾಲಿವಾಹನ ಶಕೆಯ ಹೊಸ ಸಂವತ್ಸರದ ಶುರು.

field_vote: 
Average: 4 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಕತ್ತರಿ ಬಂಧ

ಮೊನ್ನೆ ದೇವಸ್ಥಾನಕ್ಕೆ ಹೋಗಿ ಬರುತ್ತಿದ್ದೆ. ಬರುವಾದ ಓವಱ ತಾಯಿ ತನ್ನ ಮಗುವನ್ನೆತ್ತಿಕೊಂಡು ಹಿಂತಿರುಗುತ್ತಿದ್ದಳು. ಸುಮಾರು 3-4 ವಷಱದ ದಷ್ಟಪುಷ್ಟವಾಗಿಯೇ ಬೆಳೆದಿದ್ದ ಮಗು ಚಾಕೀ ಚಾಕೀ ಎಂದು ಜೋರಾಗಿ ಅಳುತ್ತಾ ರಂಪಾಟ ಮಾಡುತ್ತಿತ್ತು.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

Mothers' day

ಅಮೆರಿಕೆಯ NPR ರೇಡಿಯೋ ಬಾತ್ಮೀದಾರ ಸ್ಕಾಟ್ ಸಿಮೋನ್ ಮಾತೆಯರ ದಿನದಂದು ಬರೆದ ಪ್ರಬಂಧದ ಅನುವಾದ.

ನಾನಿರುವಲ್ಲಿ ದಿನವೂ ಮಾತೆಯರ ದಿನ.
ನನ್ನ ಪತ್ನಿ ಕೆಲಸಕ್ಕೆ ಹೋಗುವುದಿಲ್ಲ. ಆಕೆ ಪೂರ್ಣ ಸಮಯ ತಾಯಿ. ಬೆಳಗ್ಗಾದ ಕೂಡಲೇ ಮಮ್ಮ ಮಮ್ಮ ಎಂದು ಚೀರುವ ೨ ವರ್ಷದ ಮಗಳನ್ನು ಒಂದು ಕೈಯಲ್ಲಿ ಎತ್ತಿಕೊಂಡು ಮತ್ತೊಂದು ಕಾಯ್ಯಿಂದ ಹಾಲು ಕಾಯಿಸಲು ಅಡುಗೆ ಮನೆಗೆ ಹೋಗುತ್ತಾಳೆ.

field_vote: 
Average: 3.7 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಅತಿಯಾಸೆ ದುಃಖಕ್ಕೆ ಮೂಲ

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಬೇಡುವಿರಾ, buy ಮಾಡುವಿರಾ?

ಒಹ್ ೮೦೦ ರೂಪಾಯಿ ಕೊಟ್ ತೊಗೊಂಡ್ಯಾ ಈ ಪುಸ್ತ್ಕಾನ? ನಾನ್ ಅಷ್ಟೊಂದು ಕೊಟ್ಟು ಬುಕ್ಸ್ ತೊಗೊಳಲ್ಲ ಕಣಪ್ಪ. ನನ್ನ ಮಿತ್ರ ಅಚ್ಚರಿ ಅಸೂಯೆ ತುಂಬಿದ ಧ್ವನಿಯಲ್ಲಿ ಹೇಳಿದ. ಇದನ್ನು ಕೇಳಿ ನನಗೇನೂ ಅಚ್ಚರಿ ಆಗಲಿಲ್ಲ ಅನ್ನಿ. ಸಾವಿರ ರೂಪಾಯಿ ಕೊಟ್ಟು ಬೂಟು ಕೊಳ್ಳುತ್ತಾರೆ, ನೂರಾರು ಕೊಟ್ಟು T ಶರ್ಟ್ ಕೊಳ್ತಾರೆ ಓದುವ ದಿನ ಪತ್ರಿಕೆ ಮಾತ್ರ ಎರವಲು ಪಡೆದೇ ಆಗಬೇಕು.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಮೇಣದ ಲೋಕ

ಮೇಣದ ಲೋಕ
ಮೇಣ ಎಂದ ಕೂಡಲೇ ನಾವು ಹಿಡಿ ಹಿಡಿ ಶಾಪ ಹಾಕುವ ಪವರ್ ಔಟೇಜ್ ನೆನಪಿಗೆ ಬಂದು ಬಿಡುತ್ತದೆ. ಮೇಣದ ಉಪಯೋಗ ಹಲವೆಡೆಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಬಳಸುತ್ತೇವೆ. ಈ ಆಧುನಿಕ ಇಲೆಕ್ಟ್ರಾನಿಕ್ ಯುಗದಲ್ಲಿ ಇನ್ನೂ ತನ್ನ ಉಪಯುಕ್ತತೆಯನ್ನು ಬಿಟ್ಟು ಕೊಡದೆ ಸೆಣಸುತ್ತಿರುವ ಹಲವು ವಸ್ತುಗಳಲ್ಲಿ ಬಡ ಮೇಣವೂ ಒಂದು.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಶೇಕ್ಸ್ ಪಿಯರ್ ಯಾರು? ಒ೦ದು ಶೇಷ ಪ್ರಶ್ನೆಯೋ, ಯಕ್ಷಪ್ರಶ್ನೆಯೋ??

ಉದಯ್ ಇಟಗಿಯವರ ಲೇಖನ "ನಮಗೆ ಗೊತ್ತಿರದ ಶೇಕ್ಸ್ ಪಿಯರ್" ಈ ನನ್ನ ಲೇಖನಕ್ಕೆ ಸ್ಫೂರ್ತಿ.

ಒಬ್ಬ ಮಹಾನ್ ವ್ಯಕ್ತಿ ಅಥವ ಮಹಾನ್ ಸಾಹಿತಿಯ ಸಾಧನೆ ಬರಹಗಳಷ್ಟೇ ಅವರ ವೈಯುಕ್ತಿಕ ಬದುಕೂ ಅನೇಕ ಸ೦ದರ್ಭಗಳಲ್ಲಿ ರೋಚಕ ಕುತೂಹಲದಿ೦ದ ಕೂಡಿರುತ್ತವೆ. ಇದನ್ನು ಅರಿಯಬಯಸುವುದೂ ಒ೦ದು ಮಾನವಸಹಜವಾದ instinct ಎ೦ದೇ ನಾನು ಭಾವಿಸುತ್ತೇನೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

line of control

" ಓಹ್, ಸಮಯವೇ ಸಿಗುವುದಿಲ್ಲ ವ್ಯಾಯಾಮಕ್ಕೆ"
"ಒಮ್ಮೆ ವ್ಯಾಯಾಮ ಶುರು ಮಾಡಿದ್ರೆ ಬಿಡಲೇ ಬಾರದಂತೆ, ಇಲ್ದಿದ್ರೆ muscles ಲೂಸ್ ಆಗ್ಬಿಡತ್ತಂತೆ"

"ನನಗೆ ಡಿಗ್ರಿ ಮಾಡಲು ತುಂಬಾ ಇಷ್ಟ, ಆದರೇನು ಮಾಡೋದು, ನನಗೀಗ ೩೪ ವಯಸ್ಸು, ಡಿಗ್ರೀ ಮುಗಿಸುವಷ್ಟರಲ್ಲಿ ೩೭ ಆಗ್ಬಿಡತ್ತೆ"

"ಏನಾದರೂ ಹೊಸ ಹವ್ಯಾಸ ಅಥವಾ ಕೋರ್ಸ್ ಮಾಡೋಣ ಅಂದ್ರೆ ನೆರೆಯವರು, ಗೆಳಯ/ತಿ ಯರು ತಮಾಷೆ ಮಾಡಬಹುದು ಅಂತ ಭಯ"

" ಈ ವಯಸ್ನಲ್ಲಿ ಓದಾ? ಒಳ್ಳೆ ತಮಾಷೆ"

ಮೇಲೆ ಹೇಳಿದ ಸಾಲುಗಳೇ line of control. ಇವು ನಿಮ್ಮಲ್ಲಿರುವ ಅಭಿಲಾಷೆಯನ್ನು, ಆಸಕ್ತಿಯನ್ನು, ತುಡಿತವನ್ನು ಹೊಸಕಿ ಹಾಕಲು ಉಪಯೋಗಿಸಲ್ಪಡುವ ಹಲವು ಮಾತುಗಳಲ್ಲಿ ಕೆಲವು. ಮೇಲೆ ಹೇಳಿದ ಸಾಲುಗಳೇ ನಿಯಂತ್ರಣ ರೇಖೆಯನ್ನು ದಾಟಿ ಮುಂದೆ ಸಾಗಿ ಭವಿಷ್ಯವನ್ನು ರೂಪಿಸಲು, ಸ್ವಪ್ನವನ್ನು ಸಾಕಾರಗೊಳಿಸಲು, ಹೊಸ ತನ್ನತನವನ್ನು ಕಂಡುಕೊಳ್ಳಲು ನಿಮ್ಮನ್ನು ಅಡ್ಡಿ ಪಡಿಸುವಂಥವು.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

Red Tape

ರೆಡ್ ಟೇಪ್ ಅಂದರೆ ಓರ್ವ ಇನಿಯ ತನ್ನ ಪ್ರೇಯಸಿಗೆ ನೀಡುವ ಉಡುಗೊರೆ ಯನ್ನು ಸುಂದರವಾಗಿ ಪ್ಯಾಕ್ ಮಾಡಿ ಕಟ್ಟುವ ಕೆಂಪು ಪಟ್ಟಿಯಲ್ಲ. ಇದು ನೌಕರ ಶಾಹಿ ಮತ್ತು ಬಳೆಕೆದಾರ ಎಂಬ ಬಡಪಾಯಿಯ ನಡುವಣ ಪ್ರೇಮ ಸಂಬಂಧ ಬೆಸೆಯುವ ವ್ಯವಸ್ಥೆ.

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

father's day

ಇಂದು ಅಪ್ಪನ ದಿನ. ಎಲ್ಲರಿಗೂ ಇರುವಂತೆ ಬಡ ಅಪ್ಪನಿಗೂ ಒಂದು ದಿನ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಮನೆಯಿಂದ ಮನೆಗೆ......

ಒಂದೂರಿಂದ ಮತ್ತೊಂದೂರಿಗೆ ಹೋಗುವುದು, ಇದ್ದ ಮನೆ ಬಿಡುವ ಸಲುವಾಗಿ ಮತ್ತೊಂದನ್ನು ಹುಡುಕಿಕೊಳ್ಳುವುದು ಸ್ವಂತ ಮನೆಯಿರದ ಮತ್ತು ವ್ಯಾಪಾರ ವಹಿವಾಟುಗಳಿಲ್ಲದೇ ಬರಿಯ ಸರ್ಕಾರೀ ನೌಕರಿಯ ಸಂಬಳವನ್ನೇ ಆಶ್ರಯಿಸಿರುವ ನನ್ನಂಥವರ ಅನಿವಾರ್ಯ ಕರ್ಮ! ನಮ್ಮದೇ ಮನೆಯಾಗಿಬಿಟ್ಟರೆ ಎನ್ನುವ ಕನಸಲ್ಲೇ ಅರ್ಧ ಸರ್ವೀಸು ಮುಗಿಸಿ ಅಂತೂ ಇಂತೂ ಥರ್ಟಿ ಫಾರ್ಟಿಯ ಒಂದು ಸೈಟು ಮಾಡಿಕೊಳ್ಳುವ ಹೊತ್ತಿಗೇ ನೆತ್ತಿಯಲ್ಲಿ ನೀರು ಬಂದಿರುತ್ತೆ. ಸ್ವಂತ ಮನೆ ಕಟ್ಟಿಕೊಳ್ಳುವ ಕನಸು ಮಗಳ ಮದುವೆಯ ಕಾರಣಕ್ಕೋ ಅಥವಾ ಮಗನ ವಿದ್ಯಾಭ್ಯಾಸದ ನೆವದಿಂದಲೋ ಅಂತೂ ಇಂತೂ ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಲಕ್ಷಕ್ಕೆ ಕೊಂಡ ಸೈಟಿನ ಬೆಲೆ ಯದ್ವಾತದ್ವಾ ಏರುತ್ತ ಹೋದಹಾಗೆಲ್ಲ ಒಳಗಿಂದೊಳಗೇ ನಮ್ಮ ಅದೃಷ್ಟಕ್ಕೆ ನಾವೇ ನಮ್ಮನ್ನು ಅಭಿನಂದಿಸಿಕೊಳ್ಳುತ್ತಾ ಖುಷಿಪಡುತ್ತಲೇ ಇರುತ್ತೇವೆ. ಇನ್ನೂ ಕಟ್ಟಿಕೊಳ್ಳದ ಮನೆಗೆ ವಾಸ್ತುವಿನ ಪ್ಲಾನು ಹಾಕಿಸು ಅಂತ ಒಬ್ಬರು ಹೇಳಿದರೆ ನಿಮ್ಮ ಜನ್ಮ ನಕ್ಷತ್ರಕ್ಕೆ ಹೊಂದುವ ಆಯ ನೋಡಿಸಿ ಮನೆ ಕಟ್ಟಿಸಿ ಅನ್ನುವ ಬಿಟ್ಟಿ ಸಲಹೆಗಳೂ ಬರುತ್ತಲೇ ಇರುತ್ತವೆ. ಇಂದೋ ನಾಳೆಯೋ ನಮ್ಮ ಮನೆ ಆಗಿಯೇ ಆಗುತ್ತೆ ಅಂತ ಅಂದುಕೊಳ್ಳುತ್ತಿರುವಾಗಲೇ ಪ್ರಮೋಷನ್ನು ಬಂದು ಆ ಊರನ್ನು ಬಿಟ್ಟು ಮುಂದಿನ ಊರಿಗೆ ಹೋಗಲೇ ಬೇಕಾಗುತ್ತೆ. ಹೊಸ ಊರು ಅಲ್ಲಿ ಮನೆ, ಮಕ್ಕಳಿಗೆ ಶಾಲೆ-ಕಾಲೇಜು ಅಂತೆಲ್ಲ ಒದ್ದಾಡಿ ಅಂತೂ ಇಂತೂ ಒಂದು ಹಂತ ಮುಟ್ಟುವ ಹೊತ್ತಿಗೆ ರಿಟೈರ್‌ಮೆಂಟಿನ ದಿನ ಹತ್ತಿರಕ್ಕೆ ಬಂದು ಅಯ್ಯೋ ಈ ವಯಸ್ಸಲ್ಲಿ ಮನೆ ಕಟ್ಟಿಕೊಳ್ಳೋ ಹುಮ್ಮಸ್ಸು, ಅದಕ್ಕೆ ಬೇಕಾದ ಮನಸ್ಸು ಎರಡೂ ಕಳಕೊಂಡಿರುವುದರಿಂದ ಹ್ಯಾಗೋ ಆಗುತ್ತೆ ಅನ್ನುವ ಹಾಗೇ ಹಣೆಬರಹ ತಪ್ಪಿಸಿಕೊಳ್ಳಲಿಕ್ಕಾದೀತೆ ಅನ್ನುವ ಸಮಾಧಾನದಲ್ಲೇ ಮಗನ ಮದುವೆಗೆ ತಯಾರಿ ನಡೆಸುತ್ತಿರುತ್ತೇವೆ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಹದಿಮೂರರ ಪೋರ, ಕೆಚ್ಚೆದೆಯ ವೀರ

 
ಮೊದಲ ವಿಶ್ವ ಮಹಾಯುದ್ಧ ದಲ್ಲಿ ಮಡಿದ ಸೈನಿಕರ ಸ್ಮಾರಕ ಸ್ಥಳಕ್ಕೆ ಹೋದ British National Party (BNP) ನಾಯಕ ನಿಕ್ ಗ್ರಿಫ್ಫಿನ್ ತಬ್ಬಿಬ್ಬಾಗಿ, ಅವಮಾನಕ್ಕೊಳಗಾದರು. ತನ್ನ ಧ್ವೇಷಪೂರಿತ ರಾಜಕಾರಣಕ್ಕೆ ಸವಾಲು ನುರಿತ ವರದಿಗಾರರಿಂದ ಅಲ್ಲ ಶಾಲೆಯಲ್ಲಿ ಕಲಿಯುತ್ತಿರುವ ತನ್ನದೇ ದೇಶದ ಕೇವಲ ೧೩ ರ ಪೋರ ವಿಲಿಯಂ ರೊಬಿ ಇಂದ ಬರಬಹುದು ಎಂದು ಗ್ರಿಫ್ಫಿನ್ ಕನಸಿನಲ್ಲೂ ನೆನಸಿರಲಿಲ್ಲ. ಫೋಟೋ ತೆಗೆಯುತ್ತಾ "ಇದು ನಿಮ್ಮ ಪಕ್ಷದ ಧೋರಣೆಗೆ ವಿರುದ್ಧವಲ್ಲವೇ ( BNP, ಬಿಳಿಯರು ಶ್ರೇಷ್ಠ ಎಂದು ನಂಬುವ ಪಕ್ಷ), ನಿಮ್ಮದು ಧ್ವೇಷದ ತಳಹದಿಯ ಮೇಲೆ ನಿಂತಿರುವ ಪಕ್ಷ" ಎಂದು ಗ್ರಿಫ್ಫಿನ್ ರನ್ನು ತರಾಟೆಗೆ ತೆಗೆದುಕೊಂಡು ತನ್ನ ಎಳೆಯ ವಯಸ್ಸನ್ನು ಮೀರುವ ಪ್ರಬುದ್ಧತೆಯನ್ನು ಸಾರಿದ ವಿಲ್ಲಿಯಮ್. ಈ ಮಾತನ್ನು ಆ ಹುಡುಗ ಹೇಳಲು ಕಾರಣ ಅವಿಭಜಿತ ಭಾರತದ ಸೈನಿಕರು ವಿಶೇಷವಾಗಿ 40th Pathans ರೆಜಿಮೆಂಟಿಗೆ ಸೇರಿದ ಯೋಧರು ಸಾಕಷ್ಟು ಸಂಖ್ಯೆಯಲ್ಲಿ ಈ ಯುದ್ಧದಲ್ಲಿ ಬಲಿಯಾಗಿದ್ದರು.    

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಜಸ್ವಂತ್ ಸಿಂಗ್ ಮತ್ತು ಜಿನ್ನಾ

ಸತ್ಯಮೇವ ಜಯತೆ ಎನ್ನುವುದು ಈಗ ಬ್ಯಾಂಕ್ ನೋಟುಗಳಿಗೆ ಮಾತ್ರ ಸೀಮಿತ. truth alone triumphs ಯಾವ ಘಳಿಗೆ ನಮ್ಮೆಡೆಯಿಂದ ಮಾಯವಾಯಿತು ಎನ್ನುವುದು ನಿಖರವಾಗಿ ಗೊತ್ತಿಲ್ಲದಿದ್ದರೂ ಅದರ ಸಾವು ಮಾತ್ರ unsung ಆಗಿದ್ದು ಖೇದಕರ. ಕಾರಣ ನಮ್ಮ ದೇಶದಲ್ಲಿ ನಡೆಯುವ ಹಲವು ಮಹತ್ವದ ಘಟನೆಗಳು ಹಾಲು - ಸುಣ್ಣ conundrum ಗೆ ಸೇರಿದ್ದು. ಹಾಲು ಎಂದು ನಂಬಿ ಸಂತಸ ಹೆಮ್ಮೆ ಪಡುತ್ತಿರುವಾಗಲೇ ಅಲ್ಲಲ್ಲ ಅದು ಸುಣ್ಣ ಎನ್ನುವ ಕಹಿ ಸತ್ಯ party ಯನ್ನು ಹಾಳು ಮಾಡಿಬಿಡುತ್ತದೆ. ಸತ್ಯ ಹರಿಶ್ಚಂದ್ರನ tryst with truth ಅನ್ನು ನಾವು ಎಂಜಾಯ್ ಮಾಡಿ ವಿಶ್ವಕ್ಕೂ ಬಡಿಸಿದೆವು ಇದೇ ನಮ್ಮ ಜೀವನ ರೀತಿ, ನಮ್ಮ ಸಂಸ್ಕೃತಿ ಎಂದು.

field_vote: 
Average: 4 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಹೀಗೊಂದು ಕಲಿಸುವಿಕೆಯ ಕಥೆ

ಮುಂಜಾನೆ ಏಳುವಾಗಲೇ ಆರಾಗಿಹೋಗಿತ್ತು. ಏಳೂವರೆಗೆ ಸೆಕ್ರೆಟರಿಯವರು ಕಾಫಿ ಕುಡಿಯುತ್ತ ಶಾಲೆಯ ಬಿಲ್ಡಿಂಗಿನೊಳಗೇ ಹೊಂದಿಕೊಂಡಂತಿರುವ ಅವರ ಮನೆಯ ಮೆಲ್ಮಾಳಿಗೆಯಲ್ಲಿ ಕುಂತುಕೊಂಡು ತಾವು ಶಾಲೆಗೆಂದು ತರಿಸುವ ಅಷ್ಟೂ ಪತ್ರಿಕೆಗಳನ್ನು ಹರವಿಕೊಂಡು ಒಂದೊಂದನ್ನೇ ಕಣ್ಣಾಡಿಸ್ತಾ ಇರ್ತಾರೆ ಅಂತ ಕ್ಲರ್ಕ್ ಮೇಡಮ್ ಅವತ್ತೇ ಹೇಳಿದ್ದಾರೆ. ಎದ್ದವಳೇ ಅವಸರವಸರವಾಗಿ ಎಲ್ಲ ಕೆಲಸ ಮುಗಿಸಿಕೊಂಡು, ತಯಾರಾಗಿ ಗಡಿಬಿಡಿಯಿಂದ ಓಡುತ್ತೋಡುತ್ತ ಆರೂ ಮುಕ್ಕಾಲಿಗೆಲ್ಲ ಬಸ್ಟಾಪಿನಲ್ಲಿ. ಎಷ್ಟು ಬೇಗ ಸ್ನಾನ ಮಾಡಿರ್ತೀನೋ ಹಾಳಾದ ಹೊಟ್ಟೆ ಅಷ್ಟೇ ಬೇಗ ಚುರ್ಗುಡೋಕೆ ಶುರುವಿಟ್ಟುಕೊಳ್ಳುತ್ತೆ. ಕಾಫೀ ಕೂಡ ಕುಡೀದೇ ಬಂದೆ. ಅಷ್ಟರಲ್ಲಿ ಬಸ್ಸು ಬಂತು. ಮುಂಜಾನೆಯ ಬಸ್ಸುಗಳು ಚಿಂತೆಗಳೇ ಇಲ್ಲದ ಮನಸ್ಸಿನಂತೆ ಖಾಲಿಯಾಗಿರ್ತವೆ. ಸಮಸ್ಯೆಗೊಂದು ಪಟಕ್ಕಂತ ಉತ್ತರ ಹೊಳೆಯೋಷ್ಟು ವೇಗವಾಗಿ, ಕಂಡಕ್ಟ್ರು ಬಸ್ ಹತ್ತೋದೂ ಪುರುಸೊತ್ತಿಲ್ಲದಂಗೆ ಟಿಕೇಟು ಕೊಡಲು ಬಂದು ಬಿಡುತ್ತಾನೆ. ಛಳಿಯೆನಿಸಿತು. ಫೈಲನ್ನೇ ಎದೆಗವಚಿಕೊಂಡು ಕುಳಿತೆ.

field_vote: 
Average: 4.4 (8 votes)
To prevent automated spam submissions leave this field empty.
ಲೇಖನ ವರ್ಗ (Category): 

ಕಡಲ್ಗಳ್ಳರ ಕಣ್ಣೀರು

water water everywhere, not a drop to drink... P.B.Shelley ಬರೆದ ಈ ಮಹಾ ಕವಿತೆ ಓದಿರಬಹುದು ನೀವು. ಸೊಮಾಲಿಯಾದ ಬಡ ಮೀನುಗಾರರ ಪಾಲಿಗೆ ಈ ಪದ್ಯದ ಸಾಲು ಹೀಗೆ... water water everywhere, not a place to "fish".  

ಇತ್ತೀಚಿಗೆ ನಾವು ಕೇಳುತ್ತಿರುವ ಸುದ್ದಿ ಸೋಮಾಲಿಯದ ಪೈರೇಟ್ ಗಳ ಬಗ್ಗೆ. ಹಿಂದೂ ಮಹಾಸಾಗರದ ಮಾರ್ಗ ಹಾದುಹೋಗುವ ಹಡಗುಗಳನ್ನು ಅಪಹರಿಸಿ ತಮಗೆ ಬೇಕಾದ ಹಣ (ransom) ಕೇಳುವುದು. ಕಪ್ಪ ಕಾಣಿಕೆ ಕೊಟ್ಟು ಹಡಗು ಬಿಡಿಸಿಕೊಳ್ಳಬೇಕು. ತೈಲ ಹೊತ್ತ ಕೋಟ್ಯಾಂತರ ಡಾಲರ್ ಬೆಲೆಬಾಳುವ ಸೌದಿ ನೌಕೆ sirius ಅನ್ನು ಹಿಡಿದ ನಂತರ ವಿಶ್ವದ ಗಮನ ಇವರೆಡೆ ಹರಿಯಿತು. ಕದಲ್ಗಲ್ಲರು ಕೇಳಿದ ಹಣ ಕೊಟ್ಟು sirius ಅನ್ನು ಬಿಡಿಸಿಕೊಂಡಿದ್ದು, ಆ ಹಣ ತೆಗೆದುಕೊಂಡು ಈಜಿ ದಡ ಸೇರಲೆತ್ನಿಸಿದ ಕಡಲ್ಗಳ್ಳರಲ್ಲಿ  ಕೆಲವರು ನೀರುಪಾಲಾದದ್ದು ಎಲ್ಲರಿಗೂ ತಿಳಿದದ್ದೇ. ಒಂದು ಕಡೆ ತನ್ನ ಮಿಲಿಟರಿ ಸಾಹಸವನ್ನು ಹಲವು ದೇಶಗಳಿಗೆ ವಿಸ್ತರಿಸಿ ಪಾರುಪತ್ಯ ಮೆರೆಯುತ್ತಿರುವ ಅಮೆರಿಕೆಯ ಪೈರಸಿ (piracy) ಒಂದೆಡೆಯಾದರೆ  ಮತ್ತೊಂದೆಡೆ ಸೊಮಾಲಿ ಪುಂಡರ ಸಮುದ್ರದ ಅಲೆಗಳ ಮೇಲಿನ ಪಾರುಪತ್ಯ.

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ನಂಜಮ್ಮಮತ್ತುNancy

ಇದುವರೆವಿಗೆ ನಾನು ಓದಿರುವ ಎಸ. ಎಲ್. ಭೈರಪ್ಪನವರ ಕಾದಂಬರಿಗಳಲ್ಲಿನ ಎಲ್ಲಾ ಪಾತ್ರಗಳೂ ಬಹಳ ಸೂಕ್ತವಾಗಿ ಹೊಂದಿಕೆಯಾಗುವಂತೆ ಅನಿಸಿದರೂ, ಗೃಹಭಂಗದ ನಂಜಮ್ಮನ ಪಾತ್ರವನ್ನು ಇಂದಿಗೂ ನನ್ನಿಂದ ಮರೆಯಲು ಸಾಧ್ಯವಾಗುತ್ತಿಲ್ಲ. ನಾನು ಗೃಹಭಂಗ ಓದಿ ಆರೇಳು ವರ್ಷಗಳೇ ಕಳೆದಿವೆ. ಆದರೂ, ಆ ನಂಜಮ್ಮನ ಪಾತ್ರದ ಗಟ್ಟಿತನ, ಆ ಸಹನೆ, ಎಂಥವರನ್ನೂ ಮೂಕವಿಸ್ಮಿತರನ್ನಾಗಿಸುತ್ತದೆ. ನಂಜಮ್ಮ..., ಹೆಸರನ್ನು ಮೊದಲ ಸಾರಿ ಓದಿದಾಗ,

field_vote: 
Average: 4.8 (4 votes)
To prevent automated spam submissions leave this field empty.
ಲೇಖನ ವರ್ಗ (Category): 

"for weddings and funerals"

ಬೆಳಿಗ್ಗೆ ಆಫೀಸಿಗೆ ಮತ್ತು ಮಗ ಹಿಶಾಮ್ ನನ್ನು ಶಾಲೆಗೆ ಬಿಡಲು ತಯಾರಾಗುತ್ತಾ ಕೂತಾಗ ಒಂದು ಬಾಂಬ್ ಹಾಕಿದೆ ಮಡದಿಯ ಮೇಲೆ. ಈ ಬಾಂಬ್ ನೋಡಿ " ಬುದ್ಧ ಸ್ಮೈಲ್" ಮಾಡದಿದ್ದರೂ, ಛಗಾಯ್ ಬೆಟ್ಟಗಳ ಶ್ರೇಣಿ  ಬಿಳಿ ಬಣ್ಣಕ್ಕೆ ತಿರುಗದಿದ್ದರೂ ನನ್ನ ಧರ್ಮ ಪತ್ನಿ ಮುಖ ಮಾತ್ರ ನಿಧಾನವಾಗಿ ಜೆಡ್ಡಾ ದ  ಕೆಂಪು ಸಮುದ್ರದಂತೆ ಬಣ್ಣಕ್ಕೆ ತಿರುಗಿಸುವಲ್ಲಿ ಯಶಸ್ವಿಯಾಯಿತು. " ನಾನು ಸೌದಿ ಬಿಟ್ಟು ಭಾರತಕ್ಕೆ ಹೋಗಲು ನಿರ್ಧರಿಸಿದ್ದೇನೆ." ಇದು ನಾನು ಹಾಕಿದ ಬಾಂಬ್.

field_vote: 
Average: 4.6 (17 votes)
To prevent automated spam submissions leave this field empty.
ಲೇಖನ ವರ್ಗ (Category): 

ಸಾಮರಸ್ಯ ಮೆರೆಯೋಣ ಅಯೋಧ್ಯೆಯಲ್ಲಿ

ಇಂದು ಅಯೋಧ್ಯೆಯ ಬಾಬರಿ ಮಸ್ಜಿದ್ ಉರುಳಿದ ಸ್ಮರಣಾ ದಿನ. ಮಸ್ಜಿದ್ ಅನ್ನು ಕೆಡವಿ ೧೭ ವರ್ಷಗಳೂ ಸಂದರೂ ಸಮಸ್ಯೆಗೆ ಯಾವ ಪರಿಹಾರವೂ ಇದುವರೆಗೆ ಕಂಡಿಲ್ಲ ಮತ್ತು ಅದರೆಡೆ ಗಂಭೀರವಾಗಿ ಯೋಚಿಸುವ ಲಕ್ಷಣವೂ ಕಾಣುತ್ತಿಲ್ಲ.


ರಾಮ ಮಂದಿರದ ಬಗ್ಗೆ ಮುಸ್ಲಿಮರು ಹಿಂದೂಗಳ ಭಾವನೆಗಳನ್ನು ಗೌರವಿಸಬೇಕುಎಂದು ದ್ವಾರಕ ಪೀಠದ ಶಂಕರಾಚಾರ್ಯ ಶ್ರೀ ಸ್ವಾಮಿ ಸ್ವರೂಪಾನಂದ ಸರಸ್ವತಿ ಎಂದು ಹಿಂದೊಮ್ಮೆ ಮನವಿ ಮಾಡಿಕೊಂಡಿದ್ದರು.

field_vote: 
Average: 4 (9 votes)
To prevent automated spam submissions leave this field empty.
ಲೇಖನ ವರ್ಗ (Category): 

ಸಾಮರಸ್ಯ ಮೆರೆಯೋಣ ಅಯೋಧ್ಯೆಯಲ್ಲಿ

ಇಂದು ಅಯೋಧ್ಯೆಯ ಬಾಬರಿ ಮಸ್ಜಿದ್ ಉರುಳಿದ ಸ್ಮರಣಾ ದಿನ. ಮಸ್ಜಿದ್ ಅನ್ನು ಕೆಡವಿ ೧೭ ವರ್ಷಗಳೂ ಸಂದರೂ ಸಮಸ್ಯೆಗೆ ಯಾವ ಪರಿಹಾರವೂ ಇದುವರೆಗೆ ಕಂಡಿಲ್ಲ ಮತ್ತು ಅದರೆಡೆ ಗಂಭೀರವಾಗಿ ಯೋಚಿಸುವ ಲಕ್ಷಣವೂ ಕಾಣುತ್ತಿಲ್ಲ.


ರಾಮ ಮಂದಿರದ ಬಗ್ಗೆ ಮುಸ್ಲಿಮರು ಹಿಂದೂಗಳ ಭಾವನೆಗಳನ್ನು ಗೌರವಿಸಬೇಕುಎಂದು ದ್ವಾರಕ ಪೀಠದ ಶಂಕರಾಚಾರ್ಯ ಶ್ರೀ ಸ್ವಾಮಿ ಸ್ವರೂಪಾನಂದ ಸರಸ್ವತಿ ಎಂದು ಹಿಂದೊಮ್ಮೆ ಮನವಿ ಮಾಡಿಕೊಂಡಿದ್ದರು.

field_vote: 
Average: 4.6 (8 votes)
To prevent automated spam submissions leave this field empty.
ಲೇಖನ ವರ್ಗ (Category): 

ಎರಡು ಹನಿ "ಹರಟೆ"ಗಳು

೧. "ಟ್ಯಾಕ್ಸಿ ಡ್ರೈವರ್ಗಳು ಶೌಚಾಲಯಕ್ಕಿಂತಲೂ ಗಬ್ಬು". ಇದು ನಾನು ಹೇಳುತ್ತಿರುವುದಲ್ಲ, ಮಲೇಷ್ಯಾದ ಕ್ಯಾಬಿನೆಟ್ ದರ್ಜೆಯ ಸಚಿವರ ಬಾಯಿಂದ ಉದುರಿದ್ದು. ಮಲೇಷ್ಯಾದ ಪ್ರವಾಸ ಉದ್ಯಮಕ್ಕೆ ಒರಟಾಗಿ ನಡೆದುಕೊಳ್ಳುವ, ಬೇಕಾಬಿಟ್ಟಿ ಚಾರ್ಜ್ ಮಾಡುವ, ಮೀಟರ್ ಉಪಯೋಗಿಸಲೊಲ್ಲದ ಚಾಲಕರಿಂದ ಗಂಡಾಂತರ ಎಂದು ಸಚಿವರ ಅಭಿಪ್ರಾಯ. ಇದನ್ನು ಓದಿದಾಗ ನಮ್ಮ ನಗರಗಳೂ ಅದರಲ್ಲೂ ವಿಶೇಷವಾಗಿ ನಮ್ಮ ನೆಚ್ಚಿನ ಗಾರ್ಡನ್ ಸಿಟಿ ಬೆಂಗಳೂರಿನ ಆಟೋ ಚಾಲಕರು ಕಣ್ಣಿನ ಮುಂದೆ ಬಂದು ನಿಲ್ಲುತ್ತಾರೆ ಅಲ್ಲವೇ? ಅವರು ಹೋಗುವ ಕಡೆ ನಾವು ಹೋಗಬೇಕು. ಹಾಗೆ ಹೋದರೆ ಒಂದೆರಡು ಆಟೋಗಳು ಮತ್ತು ನಾಲ್ಕಾರು ಬಡಾವಣೆಗಳ ಟೂರ್ ಮುಗಿಸಿ  ನಮ್ಮ ನೆಲೆಗೆ ನಾವು ಬಂದು ತಲುಪಬಹುದು. 

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ನನಗಾಗಿ ಒಂದು ವೃಕ್ಷ ನೆಡುವಿರಾ, ಪ್ಲೀಸ್?

ಕೋಪನ್ ಹೇಗನ್ ನಲ್ಲಿ ಜಾತ್ರೆ. ನಿಸರ್ಗ ದೇವಿ ಮುನಿಸಿಕೊಂಡಿದ್ದಾಳೆ ಎಂದು ವಿಶ್ವದ ನಾಯಕರು ಸಭೆ ನಡೆಸಿ ಕಾರ್ಬೋನ್  emission ಬಗ್ಗೆ ಏನಾದರೂ ಮಾಡಲು ಉತ್ಸುಕರಾಗಿದ್ದಾರೆ. ಆದರೆ ದೇವಿಯನ್ನು ಒಲಿಸಿಕೊಳ್ಳಲು ಯಾರನ್ನಾದರೂ ಬಲಿ ಕೊಡಬೇಕಲ್ಲ? ಈಗ ಎಲ್ಲರ ಕಣ್ಣು bric ರಾಷ್ಟ್ರಗಳ ಮೇಲೆ. brazil, russia, india, china. ಈ ರಾಷ್ಟ್ರಗಳು ಈಗ ಅಭಿವೃದ್ಧಿಯತ್ತ ದಾಪುಗಾಲು ಹಾಕುತ್ತಿರುವುವು. ಅದನ್ನು ನೋಡಿ ಶ್ರೀಮಂತ ರಾಷ್ಟ್ರಗಳಿಗೆ ಕಣ್ಣುರಿ. ಇಂಗಾಲದ di oxide ಆಗಸಕ್ಕೆ ತುಂಬಿದ್ದೆ ಈ ಸಿರಿವಂತ ರಾಷ್ಟ್ರಗಳು, ಅದರಲ್ಲೂ ಅಮೇರಿಕ. ಅಮೇರಿಕ ಶೇಕಡಾ ೭೦ ಇಂಗಾಲವನ್ನು ಬಿಡುತ್ತದಂತೆ. ಇಂಗಾಲದ ಕಡಿತದ ಮಾತು ಬಂದಾಗ ಅಮೇರಿಕ ಒಪ್ಪಿದ್ದು ಶೇಕಡಾ ೧೭ ಕಡಿತಕ್ಕೆ. ಹೇಗಿದೆ ನ್ಯಾಯ?

field_vote: 
Average: 4.4 (5 votes)
To prevent automated spam submissions leave this field empty.
ಲೇಖನ ವರ್ಗ (Category): 

ನೀ ಅಂಕಲ್ ಎಂದು ಕರೆಯದಿರು ಎನ್ನಾ...

ಇತ್ತೀಚೆಗೆ ಸಂಪದ ದಲ್ಲಿ ಸ್ವಾಗತ ಸಮಾರಂಭ ರಗಳೆ ರಾದ್ಧಾಂತವಾಗಿ ಪರಿವರ್ತಿತವಾಯಿತು. ಶೀ (she) ಸಂಪದಿಗರೊಬ್ಬರು (ಸಂಪದಿಗ ಶಬ್ದದ ಸ್ತ್ರೀಲಿಂಗ ಗೊತ್ತಿಲ್ಲ) ತಮ್ಮ ಚೊಚ್ಚಲ ಬ್ಲಾಗ್ ಬರವಣಿಗೆಗೆ ಪ್ರತಿಕ್ರಯಿಸಿದ ನನ್ನನ್ನೂ ಮತ್ತು ಮತ್ತಿಬ್ಬರನ್ನೂ ಅಂಕಲ್, ಅಣ್ಣ ಎಂದು ಸಂಬೋಧಿಸಿ ಕೆಂಗಣ್ಣಿಗೆ ಗುರಿಯಾಗಬೇಕಾಯಿತು. ಅಂಕಲ್ ಅಣ್ಣ ಎನ್ನಲು ಕಾರಣ ನೀಡಿದ ಅವರು ತನಗೆ ತನ್ನ ಅಮ್ಮ ಹಿರಿಯರನ್ನು ಅಂಕಲ್ ಅಣ್ಣ ಎಂದು ಕರೆಯಬೇಕು, ಹಾಗೆ ಮಾಡದಿದ್ದರೆ ಅಮ್ಮ ಬಯ್ಯುತ್ತಾರೆ ಎಂದು ಹೇಳಿದರು.

field_vote: 
Average: 2 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಹುಟ್ಟಿನಿಂದ ಹುಟ್ಟಡಗುವವರೆಗೆ ಹುಡುಕಾಟವೇ ಜೀವನ

field_vote: 
Average: 1 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಮುಟ್ಟಿದ್ದೆಲ್ಲಾ ಚೈನಾ...

ಮುಟ್ಟಿದ್ದೆಲ್ಲಾ ಚಿನ್ನ ನಮಗೆ ತಿಳಿದ ಗಾದೆ.  ಆದ್ರೆ ಇದು ಚಿನ್ನದ ಕತೆಯಲ್ಲ, ಚೀನಾ ದೇಶದ್ದು.

field_vote: 
Average: 4.9 (10 votes)
To prevent automated spam submissions leave this field empty.
ಲೇಖನ ವರ್ಗ (Category): 

ವ್ಯಾನಿಟಿ ಬ್ಯಾಗಿನಲಿ ಕೈ ಹಾಕಿ ನೋಡುವುದು ಎಂದಿಗೂ ಉಚಿತವಲ್ಲ ಪುರುಷರೇ......

ವ್ಯಾನಿಟಿ ಬ್ಯಾಗ್ ಒಯ್ಯದೇ ಇರುವ ಹೆಂಗಸರು ಯಾರು ಇದ್ದಾರೆ? ಕಾಲೇಜು ಲಲನಾಂಗೆಯರಿಂದ ಹಿಡಿದು ಗೃಹಿಣಿ, ಉದ್ಯೊಗಸ್ಥ ಮಹಿಳೆ, ಮುದಕಿಯರು ಎಲ್ಲರೂ ಸಾಮಾನ್ಯವಾಗಿ ಹೊರಗೆ ಹೋಗುವಾಗಲೆಲ್ಲಾ ತಮ್ಮ ಬಗಲಿಗೆ ಈ ಚೀಲವನ್ನು ಸಿಕ್ಕಿಸಿಕೊಂಡು ಹೋಗುತ್ತಾರೆ. ಈ ವ್ಯಾನಿಟಿ ಬ್ಯಾಗ್ ಇರುವದರಿಂದಲೋ ಏನೋ ಸದಾ ಅವರ ಮುಖದಲ್ಲೊಂದು ಸುರಕ್ಷಿತ ಭಾವನೆ ಎದ್ದು ಕಾಣುತ್ತಿರುತ್ತದೆ ಹಾಗೂ ತಮ್ಮೆಲ್ಲ ರಹಸ್ಯಗಳನ್ನು ಅದರಲ್ಲಿ ಬಚ್ಚಿಟ್ಟುಕೊಂಡಿರುವದರಿಂದಲೋ ಏನೋ ಅವರ ಮುಖದ ಮೇಲೆ ಸಹಜವಾದ ಒಂದು ನಿರಾಳತೆ ಮೂಡಿರುತ್ತದೆ. ಈ ನಿರಾಳತೆಯನ್ನೇ ನಾವು ‘ವ್ಯಾನಿಟಿ’ ಎಂದುಕೊಂಡು, ಅದನ್ನು ಯಾವಾಗಲೂ ಅವರ ವ್ಯಾನಿಟಿ ಬ್ಯಾಗಿನ ಜೊತೆ ಸಮೀಕರಿಸಿ, ಈ ವ್ಯಾನಿಟಿ ಬ್ಯಾಗಿನಿಂದಲೇ ಅವರಿಗೆ ‘ವ್ಯಾನಿಟಿ’ ಬಂದಿದೆಯೇನೋ ಎಂಬಂತೆ ಮಾತನಾಡುತ್ತೇವೆಯೆ? ಗೊತ್ತಿಲ್ಲ!

ನನಗೆ ಚಿಕ್ಕಂದಿನಿಂದಲೂ ಹೆಂಗಸರ ವ್ಯಾನಿಟಿ ಬ್ಯಾಗ್ ನೋಡಿದಾಗಲೆಲ್ಲಾ ಏನೋ ಒಂದು ತರ ವಿಚಿತ್ರ ಕುತೂಹಲ ತಾನೆ ತಾನಾಗಿ ಮೂಡುತ್ತಿತ್ತು. ಯಾಕೆ ಹೆಂಗಸರು ಹೊರಗೆ ಹೋಗುವಾಗ ಯಾವಗಲೂ ತಮ್ಮ ಬಗಲಿಗೆ ವ್ಯಾನಿಟಿ ಬ್ಯಾಗ್ ಹಾಕಿಕೊಂಡು ಹೋಗ್ತಾರೆ ಮತ್ತು ಅದರಲ್ಲಿ ಅಂಥಾದ್ದೇನಿರುತ್ತದೆ ಎಂದು ತಿಳಿಯಬೇಕೆಂಬ ಕುತೂಹಲ. ಏಕೆಂದರೆ ನನ್ನ ಸಂಬಂಧಿಕರಲ್ಲಿ ಬಹಳಷ್ಟು ಹೆಂಗಸರು ಹೊರಗೆ ಹೋಗುವಾಗ ಇದನ್ನು ತಪ್ಪದೇ ಒಯ್ಯುತ್ತಿದ್ದರು ಮತ್ತು ಹೊರಗಿನಿಂದ ಬಂದ ತಕ್ಷಣ ಅದನ್ನು ಕಪಾಟಿನಲ್ಲೋ, ಬೀರುವಿನಲ್ಲೋ ಭದ್ರವಾಗಿ ಇಟ್ಟು ನಿರಾಳರಾಗುತ್ತಿದ್ದರು. ಇವರೇಕೆ ಅದನ್ನು ಒಯ್ಯುತ್ತಾರೆ?  ಹೊರಗಿನಿಂದ ಬಂದ ತಕ್ಷಣ ಅದನ್ನು ಕಪಾಟಿನಲ್ಲೋ, ಬೀರುವಿನಲ್ಲೋ ಏಕೆ ಇಡುತ್ತಾರೆ? ಹೊರಗೇ ಇಡಲು ಏನು ಕಷ್ಟ?  ಎಂದು ನನ್ನಷ್ಟಕ್ಕೆ ನಾನೆ ಕೇಳಿಕೊಳ್ಳುತ್ತಿದ್ದೆ. ಆದರೆ ಉತ್ತರ ಮಾತ್ರ ಸಿಕ್ಕಿರಲಿಲ್ಲ. ಒಂದು ಸಾರಿ ಕುತೂಹಲ ತಡೆಯಲಾರದೆ ನನ್ನ ದೊಡ್ದಮ್ಮನನ್ನು ಕೇಳಿಯೂ ಬಿಟ್ಟೆ. ಅದಕ್ಕೆ ಆಕೆ ನಗುತ್ತಾ ನಿಮಗೆ ಗಂಡಸರಿಗಾದರೆ ಜೇಬುಗಳಿರುತ್ತವೆ ಅದರಲ್ಲಿ ಎಲ್ಲಾನೂ ಇಟ್ಕೊಳಿತೀರಿ. ಪಾಪ, ಹೆಂಗಸರಿಗಾದರೆ ಎಲ್ಲಿ ಜೇಬುಗಳಿರುತ್ತವೆ? ಅದ್ಕೆ ಅವರು ಹೊರಗೆ ಹೋಗುವಾಗ ವ್ಯಾನಿಟಿ ಬ್ಯಾಗ್ ಒಯ್ಯುತ್ತಾರೆ ಎಂದು ಉತ್ತರ ಕೊಟ್ಟಿದ್ದಳು. ನಾನಿನ್ನೂ ಚಿಕ್ಕವನಾಗಿದ್ದರಿಂದ ಮತ್ತು ಅಷ್ಟಾಗಿ ತಿಳುವಳಿಕೆ ಇಲ್ಲದ್ದರಿಂದ ಅವಳು ಹೇಳಿದ್ದು ಸರಿಯಿರಬಹುದೆಂದು ಸಮಾಧಾನ ಪಟ್ಟುಕೊಂಡಿದ್ದೆ. ಆದರೆ ಅದರ ಬಗ್ಗೆ ಇರುವ ಅಪಾರ ಕುತೂಹಲ ಮಾತ್ರ ತಣಿದಿರಲಿಲ್ಲ.

field_vote: 
Average: 4.8 (10 votes)
To prevent automated spam submissions leave this field empty.
ಲೇಖನ ವರ್ಗ (Category): 

ಹಳೇ ಸೇತುವೆಗೆ ತುಂಬಿತು ನೂರು

ಹಳೇ ಸೇತುವೆಗೆ ತುಂಬಿತು ನೂರು. ನೂರು ಎಂದರೆ ಸೇತುವೆಗೆ ನೂರು ವರ್ಷ ತುಂಬಿತು ಎಂದಲ್ಲ. ನಾನು ಆರಂಭಿಸಿದ "ಹಳೇ ಸೇತುವೆ" ಹೆಸರಿನ ಬ್ಲಾಗ್ ಗೆ ೧೦೦ ಪೋಸ್ಟ್ಗಳು ತುಂಬಿ ಕೊಂಡವು.  


 ಈ ಬ್ಲಾಗ್ ಆರಂಭಿಸುವಾಗ ನನಗನ್ನಿಸಿರಲಿಲ್ಲ ಇಷ್ಟು ದೂರ ಬರುವೆ ಎಂದು ಏಕೆಂದರೆ ನಾನು ನುರಿತ ಬರಹಗಾರನೇನೂ ಅಲ್ಲ. ಪತ್ರಿಕೋದ್ಯಮದ ವಿದ್ಯಾರ್ಥಿಯೂ ಅಲ್ಲ, ಬರಹಗಾರರ ಗೆಳೆತನವೂ ಇಲ್ಲ. ಒಂದೆರಡು ಆನ್ ಲೈನ್ ಪತ್ರಿಕೆಗಳಲ್ಲಿ ಅಭಿಪ್ರಾಯ ಬರೆದು ಬರೆಯುವ ಧೈರ್ಯ ನನಗೆ ನಾನೇ ತಂದುಕೊಂಡೆ.   

field_vote: 
Average: 4.2 (6 votes)
To prevent automated spam submissions leave this field empty.
ಲೇಖನ ವರ್ಗ (Category): 

ಇ - ಪುಸ್ತಕವೋ, ಆ ಪುಸ್ತಕವೋ?

ಇ - ಪುಸ್ತಕವೋ, ಆ ಪುಸ್ತಕವೋ?


ನಿಮಗೆ ಯಾವುದಾಗಬಹುದು?  ಇ - ಪುಸ್ತಕವೋ, ಆ ಪುಸ್ತಕವೋ?


ನನಗಂತೂ  ಆ ಪುಸ್ತಕವೇ ಇಷ್ಟ. ಅದೇ ನಮ್ಮ ಹಳೆಕಾಲದ  ಕಾಲದ ಸವಾಲನ್ನು ಸ್ವೀಕರಿಸಿ ನಮ್ಮ ನೆಚ್ಚಿನ ಗೆಳೆಯನಂತೆ ಯಾವ ಸಮಯದಲ್ಲೂ, ಯಾವ ಸ್ಥಳದಲ್ಲೂ ಸೇರಲು ಉತ್ಸುಕತೆ ತೋರುವ ಬಣ್ಣ ಬಣ್ಣದ ಕವಚದ ಮೇಲೆ ಕೆಲವೊಮ್ಮೆ ಧೂಳನ್ನು ಹೊತ್ತು ನಿಂತ ಪುಸ್ತಕ, ಕಾಗದದ ಪುಸ್ತಕ.  

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಮೈ ನೇಮ್ ಇಸ್ ಅಬ್ದುಲ್, ಬಟ್...

my name is abdul, but i am not a fanatic. ಖಂಡಿತವಾಗಿಯೂ ಅಲ್ಲ. ಯಾರೋ ನನಗರಿವಿಲ್ಲದ ಜನ ಮಾಡಿದ, ಸತ್ಯವೋ ಮಿಥ್ಯೆಯೋ, ಸುಳ್ಳೋ ಪೊಳ್ಳೋ ಆಗಿರಬಹುದಾದ ಚಾರಿತ್ರಿಕ ಘಟನೆಗಳನ್ನು ಅಗಿದೂ ಅಗಿದೂ ಕರುಬಿ, ಕೊನೆಗೆ ಘಟನೆಗೆ ಸಂಬಂಧವಿಲ್ಲದ ಮುಗ್ಧ, ಅಮಾಯಕ ಜನರ ಜೀವ ಹಿಂಡುವುದು ನನ್ನ ಜಾಯಮಾನವಲ್ಲ, ಅಷ್ಟು ಮಾತ್ರವಲ್ಲ ನಾನು ಬೆಳೆದು ಬಂದ ಸಂಸ್ಕೃತಿಯೂ ನನಗದನ್ನು ಕಲಿಸಿಲ್ಲ. ಮಾತು ಮಾತಿಗೆ ಇಲ್ಲ್ಲಾ ಘಜನಿ, ಘೋರಿ, ಅಲ್ಲಾವುದ್ದೀನ್ ಖಿಲ್ಜಿ, ಅದು ಬಿಟ್ಟರೆ ಕಾಶ್ಮೀರಿ ಪಂಡಿತರ ಗೋಳು, ಇವುಗಳಾಚೆಯೂ ಪ್ರಪಂಚ ಇದೆ, ದಿನವೂ ಹೊಸ ಸೂರ್ಯ, ಚಂದಿರರು ಹುಟ್ಟುತ್ತಾರೆ ಎನ್ನುವ ಪರಿವೆ ಇಲ್ಲದೆ, ಅತ್ಯುತ್ಸಾಹದಿಂದ ಸಮುದಾಯಗಳ ನಡುವೆ ಕಂದಕ ನಿರ್ಮಿಸಲು ಹೊರಟ ಜನ ನಿಸರ್ಗದಿಂದ ಪಾಠ ಕಲಿತು ಸಹಬಾಳ್ವೆ ನಡೆಸಲು ಪ್ರಯತ್ನಿಸಬೇಕು.     

field_vote: 
Average: 3 (16 votes)
To prevent automated spam submissions leave this field empty.
ಲೇಖನ ವರ್ಗ (Category): 

ಅಬಾಯಾ, ಅಭಯ

ಇತ್ತೀಚೆಗೆ ರಾಜ್ಯದಲ್ಲಿ ಕೋಲಾಹಲ. ಮುಸ್ಲಿಂ ಮಹಿಳೆಯರು, ತಮ್ಮಿಷ್ಟದ ಪ್ರಕಾರ, ಹಕ್ಕುಬದ್ಧವಾಗಿ ಧರಿಸುವ, ಬುರ್ಖಾ ಎಂದು ಕರೆಯಲ್ಪಡುವ, (ಅರಬ್ ದೇಶ ಗಳಲ್ಲಿ "ಅಬಾಯಾ" ಎನ್ನುತ್ತಾರೆ)   "ಹಿಜಾಬ್" ದೊಡ್ಡ ಅನಾಹುತವನ್ನೇ ಸೃಷ್ಟಿಸಿತು.  ತನ್ನ ಕೂದಲನ್ನು ಮರೆಮಾಡಲು ಉಪಯೋಗಿಸುವ ಒಂದು ತುಂಡು ಬಟ್ಟೆ ಇಷ್ಟೊಂದು ದೊಡ್ಡ ವಿವಾದವನ್ನು ಸೃಷ್ಟಿಸುತ್ತದೆ ಎಂದು ಯಾರೂ ಅಂದು ಕೊಂಡಿರಲಿಲ್ಲ, ಮುಸ್ಲಿಂ ಮಹಿಳೆಯಂತೂ ಕನಸಿನಲ್ಲೂ ಕಂಡಿರಲಿಕ್ಕಿಲ್ಲ ದೊಂಬಿಯಿಂದ  ಉಂಟಾದ ಈ ರಕ್ತಸಿಕ್ತ  ಚಿತ್ರಣವನ್ನು. 

field_vote: 
Average: 2.3 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ಅಭಿವ್ಯಕ್ತಿ ಸ್ವಾತಂತ್ರ್ಯ...ಮತ್ತಷ್ಟು

ಹಿಂದೂ ದೇವರುಗಳನ್ನು ವಿಲಕ್ಷಣವಾಗಿ ಚಿತ್ರಿಸಿ ಹುಸೇನ್ ತನ್ನ ದೇಶ ವನ್ನು ಕಳೆದುಕೊಂಡರು.
ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ನಾವು ಪೂಜಿಸುವ, ಆದರಿಸುವ, ನಮ್ಮ ಬದುಕಿನಲ್ಲಿ ಆದರ್ಶ ವ್ಯಕ್ತಿಗಳನ್ನಾಗಿ ಮಾಡಿ ಕೊಂಡವರನ್ನು ವಿವಸ್ತ್ರ ಗೊಳಿಸಿ ನಮ್ಮ ನಂಬಿಕೆಗೆ, ಭಕ್ತಿಗೆ ಕುಂದುಂಟು ಮಾಡುವುದು ಅಕ್ಷಮ್ಯ ಅಪರಾಧ. ಚಿತ್ರಗಳ ಮೂಲಕ ಮಾತ್ರವಲ್ಲ, ಬರಹಗಳ ಅವತಾರಗಳಲ್ಲೂ ನಮ್ಮ ಭಾವನೆಗಳನ್ನು ಕೆರಳಿಸುವ ಇಂಥ ಚಟುವಟಿಕೆ ಗಳನ್ನು ನಾವು ಪ್ರತಿಭಟಿಸಬೇಕು. ಧರ್ಮ ಮತ್ತು ಧಾರ್ಮಿಕ ಹೆಗ್ಗುರುತುಗಳು, ಪವಾಡ ಪುರುಷರು ಸಾರ್ವಜನಿಕ ಸ್ವತ್ತಾಗಿರಬಹುದು. ನೆರಳನ್ನು ನೀಡುವ ರಸ್ತೆ ಬದಿಯ ಮರ ಸಾರ್ವಜನಿಕರಿಗಾಗಿ ಎಂದು ಅಲ್ಲೇ ಶೌಚಕ್ಕೆ ಕುಳಿತರೆ?
ಇದನ್ನು ಬರೆಯಲು ಕಾರಣ ಹುಸೇನ್ ಬಗೆಗಿನ, ಅಭಿವ್ಯಕ್ತಿ ಸ್ವಾತಂತ್ರ್ಯದ ಬಗೆಗಿನ ಚರ್ಚೆ ಬಿರುಸಿನಿಂದ ನಡೆಯುತ್ತಿದೆ. ಖಂಡನಾರ್ಹವಾದ ಹುಸೇನರ ಚಿತ್ರಗಳು ನಮ್ಮ ಸಹನೆಯನ್ನು ಪರೀಕ್ಷಿಸುತ್ತಿವೆ. ಬೆಣ್ಣೆ ಸುಣ್ಣದ ರಾಜಕೀಯ ಬಿಟ್ಟು, ದ್ವಂದ್ವಗಳ ದೊಂಬರಾಟ ಬಿಟ್ಟು ಯಾವುದೇ ಧರ್ಮದ ಬಗ್ಗೆಯೂ ಬರುವ ವಿಲಕ್ಷಣ "ಕೃತಿ" ಗಳನ್ನು ಖಂಡಿಸೋಣ.

field_vote: 
Average: 5 (3 votes)
To prevent automated spam submissions leave this field empty.
ಲೇಖನ ವರ್ಗ (Category): 

ತಿಳಿವಳಿಕೆಗೆ ತಿಳಿಸಾರು

ಬದುಕು ಎಷ್ಟು ಸುಲಭವೋ ಅಷ್ಟೇ ಸವಾಲುಗಳನ್ನು, ಸಂಕಷ್ಟಗಳನ್ನೂ ನಮ್ಮೆದುರು ತಂದು ನಿಲ್ಲಿಸುತ್ತದೆ.  ಮಹರ್ಷಿಗಳ, ಋಷಿಪುಂಗವರ, ಸಾಧಕರ ಮಾತುಗಳನ್ನು ನೆನೆದು, ಧೃತಿ ಗೆಡದೆ ಸಾಗಿದರೆ ಬಾಳು ಹಸನು, ಹಸನ್ಮುಖಿ. ಮಾನಸಿಕ ಕ್ಲೇಶಗಳು, ವಿಹ್ವಲತೆ, ನಿರಾಶೆ ಇವೆಲ್ಲಾ ಹೆಚ್ಚೂ ಕಡಿಮೆ ನಮ್ಮ ಸಂಪಾದನೆಯೇ. ಬಳುವಳಿಯಾಗಿ ಬಂದವೇನೂ ಅಲ್ಲ. ನಮ್ಮ ವಂಶವಾಹಿಯಲ್ಲೂ ಇಲ್ಲ. ಅತಿಯಾಸೆ, ಅನುಕಂಪವಿಲ್ಲದ ಬದುಕು, ನಮ್ಮದಾಗುವುದು ಬೇಡ.   

field_vote: 
Average: 5 (5 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

ಕಾಲದ ಕನ್ನಡಿ - `` ನನ್ನೂರಿನ ಜನ ಸೋದರತ್ವವನ್ನೇ ಮರೆತ ಆ ದಿನಗಳು``

            ೧೯೯೨-೯೩ ರ ಸಾಲು. ನಾನು ಆಗ ತಾನೇ ನನ್ನ ಹುಟ್ಟೂರಾದ ಭದ್ರಾವತಿಯ ನ್ಯೂಟೌನ್ ನಲ್ಲಿದ್ದ ರಜತ ಮಹೋತ್ಸವ ಸರ್ಕಾರೀ ಪದವಿ ಪೂರ್ವ ಕಾಲೇಜಿನಲ್ಲಿ ( ಸಿಲ್ವರ್ ಜ್ಯೂಬಿಲಿ ಕಾಲೇಜು) ದ್ವಿತೀಯ ಪಿ.ಯು  ತರಗತಿಯನ್ನು  ಮುಗಿಸಿ ಅಲ್ಲಿ೦ದ ಸ್ವಲ್ಪ ಮು೦ದಿದ್ದ ಸರ್.ಎ೦.ವಿಶ್ವೇಶ್ವರಯ್ಯ ಕಲಾ ವಾಣಿಜ್ಯ ಕಾಲೇಜಿನಲ್ಲಿ ಬಿ.ಎ. ಸೇರಿದ್ದ ದಿನಗಳವು.  ಭದ್ರಾವತಿಯ ಹೊಸಮನೆ ಪ್ರದೇಶದಿ೦ದ  ಮುಖ್ಯ ರಸ್ತೆಯಲ್ಲಿ ಮು೦ದಕ್ಕೆ ಹೋದರೆ ಸಿಗುವ ಅಶ್ವಥ್ಥ ನಗರ ಎ೦ಬಲ್ಲಿ ನಮ್ಮ ಮನೆ. ನಮ್ಮ ತ೦ದೆ( ನಾನು ಅವರನ್ನು ಅಪ್ಪಯ್ಯ ಅ೦ತಲೇ ಕರೀತಾ ಇದ್ದಿದ್ದು)  ಹೊಸಮನೆಯಲ್ಲಿ ಅತ್ಯ೦ತ ಗೌರವಾನ್ವಿತರಾಗಿದ್ದ ವ್ಯಕ್ತಿ.

field_vote: 
Average: 5 (6 votes)
To prevent automated spam submissions leave this field empty.
ಲೇಖನ ವರ್ಗ (Category): 

ಅಲ್ಲಮ

ಈಗಿನ ಶಿವಮೊಗ್ಗೆ ಜಿಲ್ಲೆ ಶಿಕಾರಿಪುರ ತಾಲ್ಲೂಕಿನ ಬಳ್ಳಿಗಾವೆಯಲ್ಲಿ ಸುಮಾರು ಎಂಟನೂರೈವತ್ತು ವರ್ಷಗಳಿಂದಲೂ ಇರುವ ಊರು. ಆಗಿನ ಬನವಾಸೆ-೧೨೦೦೦ ಎಂಬ ಪ್ರಾಂತ್ಯದ ಒಂದು ಹಳ್ಳಿ. ಇದೇ ಬಳ್ಳಿಗಾವೆಯ ಹತ್ತಿರವಿರುವ ಕೋಡಿಮಠ ಕಾಳಾಮುಖ ಶೈವರ ಪ್ರಮುಖ ಕೇಂದ್ರ. ಬಳ್ಳಿಗಾವೆಯೇ ಅಲ್ಲಮಪ್ರಭುವಿನ ಜನ್ಮಸ್ಥಳ. ಅಲ್ಲಮನ ಬಾಲ್ಯದ ದಿನಗಳ ಬಗ್ಗೆಯಾಗಲೀ ತಂದೆ-ತಾಯಿಗಳ ಬಗ್ಗೆಯಾಗಲೀ ಹೆಚ್ಚಿನ ವಿವರಗಳು ಲಭ್ಯವಾಗಿಲ್ಲ. ಕೆಲವು ವೀರಶೈವ ಕಾವ್ಯಗಳಲ್ಲಿ ಅಲ್ಲಮನ ತಂದೆಯ ಹೆಸರು ನಿರಹಂಕಾರನೆಂಬುವವನು. ತಾಯಿ ಸುಜ್ಞಾನದೇವಿ. ನಿರಹಂಕಾರನು ಮೂಲತಃ ಕರುವೂರಿನವನು. ಬಳ್ಳಿಗಾವೆಗೆ ಬಂದು ಅಲ್ಲಿನ ರಾಜನ ಅರಮನೆಯಲ್ಲಿ ಅಂತಃಪುರದ ಅಧಿಕಾರಿಯಾಗಿದ್ದನು. ನಿರಹಂಕಾರ ಮತ್ತು ಸುಜ್ಞಾನದೇವಿಯರಿಬ್ಬರೂ ಶಿವಭಕ್ತರಾಗಿದ್ದರು.

ಅಲ್ಲಮನಿಗೆ ಬಾಲ್ಯದಲ್ಲಿಯೇ ಅರವತ್ತನಾಲ್ಕು ವಿದ್ಯೆಗಳ ಪರಿಚಯವಾಯಿತು. ಮದ್ದಳೆ ಬಾರಿಸುವುದು ವಂಶಪಾರಂಪರಿಕವಾಗಿ ಬಂದ ವಿದ್ಯೆಯಾಗಿತ್ತು. ಹಾಗಾಗಿ ಅಲ್ಲಮ ಒಬ್ಬ ಮದ್ದಳೆ ಬಾರಿಸುವ ಕಲಾವಿದನಾಗಿದ್ದ. ಯೌವ್ವನಕ್ಕೆ ಬಂದ ಅಲ್ಲಮನಿಗೆ ಮದುವೆ ಮಾಡಲು ತಾಯಿ ತಂದೆಯರು ನಿರ್ಧರಿಸಿ ಹೆಣ್ಣು ನೋಡತೊಡಗಿದರು. ಆಗ ಬಳ್ಳಿಗಾವೆ ಧನದತ್ತ ಎಂಬುವವನ ಮಗಳಾದ ಕಾಮಲತೆಯನ್ನು ನೋಡಿ ಇವಳೇ ನಮ್ಮ ಮಗನಿಗೆ ಸರಿಯಾದ ವರ ಎಂದು ನಿರ್ಧರಿಸಿ ಅಲ್ಲಮನಿಗೆ ಮದುವೆ ಮಾಡಿದರು. ಅಲ್ಲಮ-ಕಾಮಲತೆಯರ ಸಾಂಸಾರಿಕ ಜೀವನ ಸಂತೋಷದಿಂದ ಕೂಡಿತ್ತು. ಆದರೆ ಕಾಮಲತೆ ಎಳೆಯ ವಯಸ್ಸಿನಲ್ಲೇ ಜ್ವರಪೀಡಿತಳಾಗಿ ಸತ್ತು ಹೋದಳು. ಅಲ್ಲಮನಿಗೆ ಜೀವನ ನಿಸ್ಸಾರವೆನಿಸಿತು. ವೈರಾಗ್ಯವೆಂಬುದು ಅವನ ಮೈಮನಸ್ಸುಗಳನ್ನು ಆವರಿಸಿತು. ವಿಶ್ವವೆಲ್ಲ ಶೂನ್ಯವೆನಿಸಿತು. ಅದೇ ಶೂನ್ಯತೆಯಲ್ಲಿ ಬಳಲುತ್ತ ಬಳ್ಳಿಗಾವಿಯ ಹೊರಗಿದ್ದ ಕಣಗಿಲೆ ತೋಟಕ್ಕೆ ಬಂದು ಕುಳಿತುಕೊಂಡ. ಅಲ್ಲಿದ್ದ ಹಾಳು ಶಿವಾಲಯವೊಂದು ಅವನ ಕಣ್ಣಿಗೆ ಬಿತ್ತು. ಅದು ನೋಡಲು ಬೀಕರವಾಗಿತ್ತಾದರೂ, ಜೀವನವೇ ಬೇಸರವಾಗಿ ಬಂದಿದ್ದ ಅಲ್ಲಮ ತುಸುವೂ ಎದೆಗುಂದದೆ, ಆ ಹಾಳು ಶಿವಾಲಯದೊಳಗೆ ಹೋಗೀ ನೋಡಿದ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಕ್ಷೌರ ಸುಖದೊಳಗೆಲ್ಲ ಮರೆತಿಹನು ಎನ್ನದಿರಿ.....

ಊರಿಂದ ಊರಿಗೆ ವರ್ಗವಾಗುವ ಉದ್ಯೋಗದಲ್ಲಿರುವವರಿಗೆ ಪ್ರತಿ ವರ್ಗಾವರ್ಗಿಯಲ್ಲೂ ಹೊಸ ಊರಲ್ಲಿ ಮನೆ ಹುಡುಕುವುದು, ಮಕ್ಕಳಿಗೆ ಆ ಊರಿನ ಪ್ರಖ್ಯಾತ ಸ್ಕೂಲಲ್ಲಿ ಸೀಟು ಗಿಟ್ಟಿಸುವುದು, ರೇಷನ್ ಕಾರ್ಡು-ಗ್ಯಾಸ್ ಕನೆಕ್ಷನ್-ಟೆಲಿಫೋನ್ ವರ್ಗಾವಣೆ ಮಾಡಿಸಿಕೊಳ್ಳುವುದು ಹೀಗೆ ಸಾಲು ಸಾಲು ಕೆಲಸಗಳ ಕ್ಯೂ ಇರುತ್ತದೆ. ಹೆಚ್ಚು ನೀರು ಬೆರಸದೇ ಸಮಯಕ್ಕೆ ಸರಿಯಾಗಿ ಹಾಲು ತಂದುಕೊಡುವವನನ್ನು ಹುಡುಕುವುದು ಸದ್ಯ kmf ನಂದಿನಿಯ ಕೃಪೆಯಿಂದಾಗಿ ತಪ್ಪಿದೆ. ಶುದ್ಧೀಕರಿಸಿದ ದಿನಸಿ ಪದಾರ್ಥ ಸಿಕ್ಕುವ ಅಂಗಡಿ, ಕಲೆಬೆರಕೆಯಾಗದ ಪೆಟ್ರೋಲು ಸಿಗುವ ಬಂಕು ಸ್ವಂತ ಅನುಭವದಿಂದ ಹುಡುಕಿಕೊಳ್ಳಬೇಕಾದ ಆತ್ಯಂತಿಕ ಸತ್ಯಗಳು!

field_vote: 
Average: 5 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ನಾವೇಕೆ ಸೋಲಬೇಕು?

TWENTY20 ವಿಶ್ವ ಪಂದ್ಯಾವಳಿಯಲ್ಲಿ ಭಾರತ ಔಪಚಾರಿಕವಾಗಿ ಹೊರಕ್ಕೆ. ಅಷ್ಟೇನೂ ಬಲಿಷ್ಠವಲ್ಲದ ವೆಸ್ಟ್ ಇಂಡೀಸ್ ಟೂರ್ನಮೆಂಟ್ ನ ಫೇವರಿಟ್ ಭಾರತಕ್ಕೆ ಹೊರಹೋಗುವ ಬಾಗಿಲನ್ನು ತೋರಿಸಿ ಒಂದು ರೀತಿಯ ಇತಿಹಾಸವನ್ನು ಸೃಷ್ಟಿಸಿತು. ಕ್ರಿಕೆಟ್ ನ ಜ್ವರ ನನ್ನನ್ನು ಬಿಟ್ಟು ಹಲವು ವರ್ಷಗಳೇ ಕಳೆದವು. ಆದರೆ ಭಾರತದಲ್ಲಿ ಇದರ ಹುಚ್ಚನ್ನು ಅರಿತ ನನಗೆ ಗೊತ್ತು ಯಾವ ರೀತಿಯ ಯಾತನೆಯನ್ನು ಕ್ರೀಡಾ, ಕ್ಷಮಿಸಿ ಕ್ರಿಕೆಟ್ ಪ್ರೇಮಿಗಳು ಅನುಭವಿಸುತ್ತಿದ್ದಾರೆಂದು. ಆಫೀಸಿನಿಂದ ಮನೆಗೆ ಡ್ರೈವ್ ಮಾಡುತ್ತಾ ನನ್ನ ಭಾವನಿಗೆ ಫೋನಾಯಿಸಿದೆ. ಅವರ ಅರ್ಧ ಸತ್ತ ಸ್ವರ ಕೇಳಿ ಯಾರಾದರೂ ಬೇಕಾದವರು ಗೊಟಕ್ ಅಂದು ಬಿಟ್ಟರಾ ಎಂದು ಗಾಭರಿಯಾದೆ. ನೋಡಿದರೆ ಭಾರತ ಸೋತದ್ದಕ್ಕೆ ಆಕಾಶ ತಲೆ ಮೇಲೆ ಬಿದ್ದವರಂತೆ ಮಾತನಾಡುತ್ತಿದ್ದರು ನನ್ನ ಭಾವ. ಆಗಲೇ ನನಗೆ ಗೊತ್ತಾಗಿದ್ದು ಭಾರತ ಸೋತ ವಿಷಯ. ಸುದೈವವಶಾತ್ ನನ್ನ ತಲೆ ಮೇಲೆ ಆಗಸ ಬಂದು ಬೀಳಲಿಲ್ಲ, ಬದಲಿಗೆ ಆದದ್ದು ಒಂದು ರೀತಿಯ ಸಂತೋಷವೇ. ನಾವು ಸೋಲಬೇಕು. ಹೌದು ನಾವು ಸೋಲಬೇಕು. I am not mincing my words. ಬರೀ ಈ ಪಂದ್ಯಾವಳಿಯಲ್ಲಿ ಮಾತ್ರವಲ್ಲ, ಇನ್ನು ಬರಲಿರುವ  ಹತ್ತು ಹಲವು ಪಂದ್ಯಾವಳಿ ಗಳಲ್ಲಿ ನಮಗೆ ಸೋಲನ್ನುಣಿಸಿ ನಮ್ಮ ಕ್ರಿಕೆಟಿಗರು ನಮಗೆ ಮತ್ತು ನಮ್ಮ ದೇಶಕ್ಕೆ ಒಂದು ಮಹದುಪಕಾರವನ್ನು ಮಾಡಬೇಕು. ಸತ್ತು ಹೋದ, ಸಾವಿನಂಚಿನಲ್ಲಿರುವ ನಮ್ಮ ದೇಸೀ ಕ್ರೀಡೆಗಳಿಗೆ ಒಂದು ಮರುಜನ್ಮ ಬರಬೇಕಾದರೆ ಕ್ರಿಕೆಟ್ನ ಸಾವು ಅತ್ಯವಶ್ಯಕ. ಹೀಗೆ ಮೇಲಿಂದ ಮೇಲೆ ಈ ರೀತಿಯ ಸೋಲುಗಳನ್ನು ನಮ್ಮ ಕ್ರಿಕೆಟ್ ಕಲಿಗಳು ನಮ್ಮ ಹೊಸ್ತಿಲಿನ ಮುಂದೆ ತಂದು ಸುರಿದಾಗ ಗತಿಯಿಲ್ಲದೆ ನಾವು ಮನೋರಂಜನೆಗೆ ಇನ್ಯಾವುದಾದರೂ ಕ್ರೀಡೆಗಳನ್ನು ಆರಿಸಿಕೊಳ್ಳುತ್ತೇವೆ, ಪೋಷಿಸುತ್ತೇವೆ. ಕಂಗಾಲಾಗಿ, ಕರುಬುತ್ತಾ ಸಿರಿವಂತ ಕ್ರಿಕೆಟಿಗರನ್ನು ನೋಡುವ ನಮ್ಮ ಹಾಕಿ ಪಟುಗಳು, ಮತ್ತು ಇತರೆ ಕ್ರೀಡಾ ಪಟುಗಳು ಹೊಸ ಎತ್ತರ ಏರಲು ಸಹಾಯ ಮಾಡುತ್ತೇವೆ. ಅವರಲ್ಲಿ ಹುರುಪನ್ನು ತುಂಬುತ್ತೇವೆ.          

field_vote: 
Average: 4.9 (9 votes)
To prevent automated spam submissions leave this field empty.
ಲೇಖನ ವರ್ಗ (Category): 

ಪ್ರತ್ಯೇಕ ದಿನವೊಂದು ಬೇಕೆ?

                  
    ನನಗೇನೋ ಒಂದು ರೀತಿಯ ಭಯ ಆಗ. ಬೆಚ್ಚಗೆ ಮುದುರಿ ಕುಳಿತಿದ್ದ ನನ್ನನ್ನು ಹೊರಕ್ಕೆ ಎಳೆದು ತಂದ ಕೂಡಲೇ ನಾನೆಂದೂ ಅನುಭವಿಸದಿದ್ದ ವಿಚಿತ್ರ ಅನುಭವಗಳು. ಚಿತ್ರ ವಿಚಿತ್ರವಾದ ಬೆಳಕು ನನ್ನ ಕಣ್ಣ ಚುಚ್ಚಿ ಚುಚ್ಚಿ, ಕಣ್ಣು ತೆರೆಯಲು ಅದೆಷ್ಟೋ ದಿನಗಳೇ ಆದವು.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಎಸ್ಸೆಮ್ಮೆಸ್ಸಾಯಣ

                                     Hi frnds! gm/ga/ge :) hd ur brkfst/lunch/din ? 

  ಅರ್ಥ ಆಗ್ಲಿಲ್ವಾ? ನನಗೂ ಮೊದಮೊದಲು ಇದು ಅರ್ಥ ಆಗ್ತಾ ಇರ್ಲಿಲ್ಲ. ಈಗಿನ ಎಸ್ಸೆಮ್ಮೆಸ್ಸಿಗರಿಗಂತೂ ಇವೆಲ್ಲ ಲೀಲಾಜಾಲ. ur ಅಂದ್ರೆ your. ನಡುವೆ space ಕೊಟ್ರೆ you are. gm ಅಂದ್ರೆ good morning..break fast ಗೆ brkfst. ಹೀಗೆ SMS ಭಾಷೆ SMS ತಜ್ಞರಿಗೆ ಮಾತ್ರ ಗೊತ್ತು.

field_vote: 
Average: 2 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ನಾಲ್ಕು ವರ್ಷದ ನಂತರವೂ ರಾಜ್ಕುಮಾರ್ ! -- ಭಾಗ ೧

(ನಾಲ್ಕು ವರ್ಷದ ಹಿಂದಿನ ಮಾತು. ರಾಜ್ಕುಮಾರ್ ತೀರಿಕೊಂಡ ದಿನ, ರಾತ್ರಿ ಮತ್ತು ಮಾರನೇ ದಿನ ಬರೆದು ಮುಗಿಸಿದ ಲೇಖನವಿದು--ಗೆಳೆಯ ಎನ್.ಎ.ಎಂ.ಇಸ್ಮಾಯಿಲ್ರ ಒತ್ತಾಯವೆಂಬ ಆದೇಶದ ಮೇರೆಗೆ. ಇದನ್ನು ಬರೆದು ಮುಗಿಸುವವರೆಗಿನ ಆ ಹತ್ತನ್ನೆರೆಡು ಗಂಟೆಕಾಲವೂ ಸೂತಕದ ವಾತಾವರಣ. ಮೊದಲು ’ಉದಯವಾಣಿ’ಯಲ್ಲಿ, ನಂತರ ವಾರ್ತಾ ಮತ್ತು ಪ್ರಚಾರ ಇಲಾಖೆಯ ಪತ್ರಿಕೆಯಲ್ಲಿ, ತದನಂತರ ’ಸಂಪದದಲ್ಲಿ’ (೧೦ನೆ ಮೇ, ೨೦೦೬) ಯಥಾವತ್ ಪ್ರಕಟವಾಗಿತ್ತು. ಈಗ ಅಲ್ಪ-ಸ್ವಲ್ಪ ಬದಲಾವಣೆಯ ನಂತರ ಪುನಃ ಸಂಪದದಲ್ಲಿ ಪ್ರಕಟಿಸುತ್ತಿದ್ದೇನೆ. ಇತ್ತೀಚೆಗೆ ಬರುತ್ತಿರುವ ಕನ್ನಡ ಸಿನೆಮಗಳ, ನಟರ ಅವತಾರಗಳ ಭೀಕರತೆಯು, ಈ ಪುನರ್-ಪ್ರಕಟಣೆಯ ತುರ್ತಿನ ಹಿಂದಿನ ಪ್ರೇರಣೆಯಾಗಿರಬಹುದೆಂಬ ಸಣ್ಣ ಅನುಮಾನದ ಬಗ್ಗೆ ಎಳ್ಳಷ್ಟೂ ಡೌಟು ಬೇಡ)


 (ಅ)  

field_vote: 
Average: 4.7 (6 votes)
To prevent automated spam submissions leave this field empty.
ಲೇಖನ ವರ್ಗ (Category): 

ನಾಲ್ಕು ವರ್ಷದ ನಂತರವೂ ರಾಜ್ಕುಮಾರ್ ! -- ಭಾಗ ೨

 
(ಹಿಂದಿನ ಸಂಚಿಕೆಯಿಂದ...)                                                                    

field_vote: 
Average: 3.2 (9 votes)
To prevent automated spam submissions leave this field empty.
ಲೇಖನ ವರ್ಗ (Category): 

ಒಂದು ವಿಚ್ಛೇದನದ ಸುತ್ತ

ನಲವತ್ತು ವಸಂತಗಳು, ಎಂಥ ಮೊಂಡು ಸಸಿಯನ್ನೂ ಮರವನ್ನಾಗಿಸಿ, ಪಳಗಿಸಿ, ಆಳವಾಗಿ ಬೇರೂರಿ ಸುಲಭವಾಗಿ ಶಿಥಿಲವಾಗದಂತೆ ಮಾಡುತ್ತವೆ. ನಲವತ್ತು ಸಂವತ್ಸರಗಳು ಮನುಷ್ಯನನ್ನು ಎಷ್ಟೊಂದು ಪ್ರಬುದ್ಧವಾಗಿಸುತ್ತವೆ. ಅದೂ ನಲವತ್ತು ಸಂವತ್ಸರಗಳ ಅನುಭವ ಒಂದು ಹೊಸ ಅನುಭೂತಿಯನ್ನು ತರುತ್ತದೆ ಮನುಷ್ಯನಲ್ಲಿ. ನಲವತ್ತು ವರುಷಗಳ ಅನುಭವ ಮನುಷ್ಯನನ್ನು ಹೊಸ ಎತ್ತರಕ್ಕೆ ಒಯ್ಯುತ್ತದೆ. ನಾಲ್ಕು ದಶಕಗಳು....ಅವುಗಳ ಬಗ್ಗೆ ಊಹಿಸುವುದೂ ಕಷ್ಟ.


ನಲವತ್ತು ವರುಷಗಳ ಕಾಲ ತೀರಾ ಹತ್ತಿರವಾಗಿದ್ದವರು, ಸಾವಿರಾರು ಹಗಲನ್ನೂ, ಇರುಳನ್ನೂ ಕಂಡವರು ಏಕಾಏಕಿ ದೂರವಾದರು, ಅಮೆರಿಕೆಯಲ್ಲಿ.  

field_vote: 
Average: 3.8 (6 votes)
To prevent automated spam submissions leave this field empty.
ಲೇಖನ ವರ್ಗ (Category): 

ತಾಯ್ತನ ವೈಭವಿಕೃತಗೊಂಡಷ್ಟು ತಂದೆತನ ವೈಭವಿಕೃತಗೊಂಡಿಲ್ಲ ಯಾಕೆ?

ನಾಳೆ ಅಪ್ಪನ ದಿನ. ಜಗತ್ತಿನೆಲ್ಲೆಡೆ ಅಪ್ಪನಿಗೊಂದು ಥ್ಯಾಂಕ್ಸ್ ಹೇಳುವ ದಿನ. ಆತ ನಮ್ಮನ್ನು ಹುಟ್ಟಿಸಿ ಬೆಳೆಸಿದ್ದಕ್ಕೆ, ನಮ್ಮ ಕನಸುಗಳನ್ನು ಸಾಕಾರಗೊಳಿಸಿದ್ದಕ್ಕೆ ನಮನ ಸಲ್ಲಿಸುವ ದಿನ. ಆದರೆ ಖೇದದ ಸಂಗತಿಯೆಂದರೆ ಮೊದಲಿನಿಂದಲೂ ಅಮ್ಮನ ದಿನ ವಿಶೇಷತೆ ಪಡೆದಷ್ಟು ಅಪ್ಪನ ದಿನ ಅದ್ಯಾಕೋ ಅಷ್ಟೊಂದು ವಿಶೇಷತೆಯನ್ನು ಪಡೆದೇ ಇಲ್ಲ. ಏಕೆಂದರೆ ಜಗತ್ತಿನ ಯಾವುದೇ ಭಾಗವನ್ನು ತೆಗೆದುಕೊಂಡರೂ ಅಲ್ಲಿ ಅಮ್ಮನಿಗೆ ವಿಶೆಷ ಆದ್ಯತೆ. ಅವಳಿಗೆ ಮೊದಲ ಸ್ಥಾನ. ಅಪ್ಪ ಎಷ್ಟೇ ಮಾಡಿದರೂ ಅವನಿಗೆ ಸದಾ ಎರಡನೆ ಸ್ಥಾನ. ಪುರುಷ ಪ್ರಧಾನ ಸಮಾಜದಲ್ಲೂ ಒಂದು ಕುಟುಂಬ ಕಟ್ಟಿ ಬೆಳೆಸುವಷ್ಟರಲ್ಲಿ ಅಮ್ಮನ ಪಾತ್ರವನ್ನು ಗುರುತಿಸುವಷ್ಟು ಅಪ್ಪನ ಪಾತ್ರವನ್ನು ಗುರುತಿಸುವದರಲ್ಲಿ ಏನೋ ಒಂದು ತರದ ಉದಾಸೀನ. ಅಮ್ಮ ಸರಿಯಿದ್ದರೆ ಸಾಕು. ಅಪ್ಪ ಹೇಗಿದ್ದರೇನು?

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ನಾ ಕಂಡುಕೊಂಡ ಇಸ್ಲಾಂ

ಇಸ್ಲಾಂ ಧರ್ಮದ ಬಗೆಗಿನ ಸಂಶಯ, ಅಪನಂಬಿಕೆಗಳು, ತಾರಕಕ್ಕೇರಿದ್ದು ನಮ್ಮೆಲ್ಲರ ಮಧ್ಯೆ ಇರುವ, ನಾವು ದಿನವೂ ಕಾಣುವ ಇಸ್ಲಾಮಿನ ಆಚಾರ ವಿಚಾರಗಳು ಇದ್ದಕ್ಕಿದ್ದಂತೆ ಅಪರಿಚಿತವಾಗಿ ಇದೀಗ ತಾನೇ ಭೂಲೋಕಕ್ಕೆ ಅವತರಿಸಿದ ಅನರ್ಥದಂತೆ ಚಿತ್ರಿಸಲಾಗುತ್ತಿದೆ ಮುಸ್ಲಿಮರನ್ನು ಮತ್ತು ಅವರು ನಂಬಿಕೊಂಡು ಬಂದ ಧರ್ಮವನ್ನು. ಸೆಪ್ಟಂಬರ್ ೧೧, ೨೦೦೧ ರಲ್ಲಿ ಅಮೆರಿಕೆಯ ಗಗನಚುಂಬಿ ಕಟ್ಟಡಗಳನ್ನು ೧೯ ಜನ ಅರಬ್ ಮೂಲದ ಯುವಕರು ಕದ್ದೊಯ್ದ ವಿಮಾನಗಳನ್ನು ಕ್ಷಿಪಣಿಗಳಂತೆ ಉಪಯೋಗಿಸಿ ನೆಲಸಮಗೊಳಿಸಿದ್ದು, ಸಾವಿರಾರು ಜನರ ಸಾವು ನೋವುಗಳಿಗೆ ಕಾರಣವಾಗಿದ್ದು ಇಸ್ಲಾಮಿನ ಬಗ್ಗೆ ಭಯ ಜನರ ಮನಸ್ಸಿನಲ್ಲಿ ಬೇರೂರಲು ಸಹಾಯಮಾಡಿತು. ತಮ್ಮ ಸ್ವಾರ್ಥ, ಕ್ಷುಲ್ಲಕ, "ಅಡಗಿರಿಸಿದ ಕಾರ್ಯತಂತ್ರ" ಸಾಧಿಸುವ ನಿಟ್ಟಿನಲ್ಲಿ ಇಸ್ಲಾಂ ವಿರೋಧಿಗಳು ಮಾಧ್ಯಮಗಳ ಸಹಾಯದಿಂದ ಈ ಭಯ ಜನರ ಮನಸ್ಸಿನಲ್ಲಿ ಮತ್ತಷ್ಟು ಬೇರೂರಿಸಿ ಒಬ್ಬ ಮುಸ್ಲಿಮನ ದರ್ಶನವಾದರೂ ಮುಗಿಬೀಳುವಂತೆ ಅಥವಾ ವಿಷ ಜಂತುವನ್ನು  ಕಂಡಂತೆ ಆಡಲು ಕಾರಣಕರ್ತರಾದರು.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಆಕೃತಿ ಪುಸ್ತಕ ಮಳಿಗೆಯಲ್ಲಿ ವಸುಧೇ೦ದ್ರರಿ೦ದ ’ರಕ್ಷಕ ಅನಾಥ’ದ ಪ್ರಬ೦ಧ ವಾಚನ

ವಸುಧೇಂದ್ರ ಪ್ರಬಂಧ ಬರೆಯುವಷ್ಟೇ ಚೆನ್ನಾಗಿ, ಅದನ್ನು ಓದುವರೇ? ನಾವು ಅವರ ಪುಸ್ತಕವನ್ನು ಓದಿ ಆನಂದಿಸುವುದಕ್ಕಿಂತ, ಅವರಿಂದಲೇ ಅದನ್ನು ಓದಿಸಿದಾಗ ನಮಗೆ ಹೆಚ್ಚು ಆನಂದ ಸಿಗುವುದೇ? ಇವೆಲ್ಲಾ ಕುತೂಹಲಕ್ಕೆ, ಉತ್ತರ ನಿಮಗೆ 11 ಜುಲೈ 2010 ಭಾನುವಾರ, ಆಕೃತಿ ಪುಸ್ತಕ ಮಳಿಗೆಯಲ್ಲಿ ಸಿಗಲಿದೆ!


field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

"ಜಿಹಾದ್" ಎಂದರೇನು?

ನಮ್ಮಲ್ಲಿ ಧಾರ್ಮಿಕ ವಿದ್ಯೆಗಾಗಿ "ಮದ್ರಸಾ" ಗಳಿಗೆ ಮಕ್ಕಳನ್ನು ಕಳಿಸುವುದಿದೆ. ಅಲ್ಲಿ ಕುರಾನ್ಅನ್ನು ಉರು ಹೊಡೆಯುವುದು, ನಮಾಜ್ ಯಾವ ರೀತಿ ಮಾಡುವುದು ಮತ್ತು ಇತರೆ ಧಾರ್ಮಿಕ ಸಂಗತಿಗಳನ್ನು ಹೇಳಿ ಕೊಡುತ್ತಾರೆ. ಮದರಸಾ ಶಿಕ್ಷಣ ಪಡೆದ ನಾನು ಪ್ರಪ್ರಥಮವಾಗಿ ಜಿಹಾದ್ ಎನ್ನುವ ಪದ ಕೇಳಿದ್ದು ೨೦೦೧ ರಲ್ಲಿ. ಅಮೆರಿಕೆಯ ಮೇಲೆ ನಡೆದ ಧಾಳಿಯಲ್ಲಿ ಅಮೇರಿಕಾ ಮತ್ತು ಇತರೆ ಪಾಶ್ಚಾತ್ಯ ರಾಷ್ಟ್ರಗಳ ರಾಜಕೀಯ ಪಂಡಿತರುಗಳು ಉಪಯೋಗಿಸಿದ ಪದದಿಂದ ನನಗೆ ಪ್ರಥಮವಾಗಿ ಜಿಹಾದ್ ಪದದ ಪರಿಚಯವಾಯಿತು. ಇನ್ನು ಮುಸ್ಲಿಮರಿಗೆ ಧಾರ್ಮಿಕ ಆಚರಣೆಗಳ ರೀತಿ ಜಿಹಾದ್ ಅನ್ನೂ ಹೇಳಿ ಕೊಟ್ಟು, ಜಿಹಾದ್ ಅಂದರೆ ಯುದ್ಧ, ಸಿಕ್ಕ ಸಿಕ್ಕವರನ್ನು ಕೊಲ್ಲುವುದು ಎಂದಿದ್ದರೆ ವಿಶ್ವ ಈ ರೀತಿಯಲ್ಲಿ ಖಂಡಿತಾ ಇರುತ್ತಿರಲಿಲ್ಲ.

field_vote: 
Average: 4 (8 votes)
To prevent automated spam submissions leave this field empty.
ಲೇಖನ ವರ್ಗ (Category): 

ಯಾರೀ ಸೈತಾನ?

ಮೊನ್ನೆ ಆಪ್ತ ಸಂಪದಿಗರೊಬ್ಬರು ಸೈತಾನನೊಂದಿಗಿನ ಜೊತೆ ಬಸ್ಸಿನಲ್ಲಿ ತಮಗೆ ಆದ ಒಂದು ಅನುಭವವನ್ನು ಬರೆದಿದ್ದರು.  ಪ್ರಯಾಣದ ವೇಳೆ ಸಹಪ್ರಯಾಣಿಕರಾಗಿದ್ದ ಯಾರೋ ಅಪರಿಚಿತ ತಂದೆ-ಮಗಳ ನಡುವಿನ  ಸಂವಾದವನ್ನು ಆಲಿಸಿ ತಂದೆ ಉಪಯೋಗಿಸಿದ ಸೈತಾನ್ ಪದದ ಬಗ್ಗೆ ದುಃಖಿತರಾಗಿ ತಮ್ಮ ಅಳಲನ್ನು ತೋಡಿಕೊಂಡಿದ್ದರು. ತಮ್ಮ ಇಷ್ಟ ದೇವರನ್ನು ಸೈತಾನ ಎಂದು ಕರೆದ ವ್ಯಕ್ತಿಯ ನಂಬುಗೆಯ ಬಗ್ಗೆ ರಂಗು ರಂಗಿನ ಕಾಮೆಂಟುಗಳೂ ಬಂದವು. ನಾನಂತೂ ಇದು ಶುದ್ಧ ಸುಳ್ಳು ಎಂದು ಜೇನುಗೂಡಿಗೆ ಕಲ್ಲು ಬೀಸಿದ್ದೇ ತಡ ಬಂದೆರಗಿದವು  ದಂಡು. ನೆಚ್ಚಿನ ನಟನ autograph ಪಡೆಯಲು ಮುತ್ತಿಕ್ಕುವ ಅಭಿಮಾನಿಗಳಂತೆ. ಈ storm in a tea cup ತೆರನಾದ ವಿವಾದವನ್ನ ಎಬ್ಬಿಸಿದ ಸೈತಾನ್ ನನ್ನ ಹಿಂದೆಯೂ ಬಿದ್ದ ತನ್ನ ಬಗ್ಗೆ ಸಹಾ ಒಂದಿಷ್ಟು ಬರಿ ಎಂದು.  

field_vote: 
Average: 2.6 (5 votes)
To prevent automated spam submissions leave this field empty.
ಲೇಖನ ವರ್ಗ (Category): 

ಹೀಗೇ............ ಲೋಕಾಭಿರಾಮ...... ಮತ್ತು ........ಒಂದು.. ಮಳೆಯ............ ಸಂಜೆಮಧ್ಯಾಹ್ನ ಊಟಕ್ಕೆ ಸ್ವಲ್ಪ  ತಡವಾಗಿಯೇ  ಬಂದಿದ್ದೆ, ಮುಗಿಸಿ ಹೊರಡಲು ನೋಡಿದರೆ ಹೊರಗೆ ಜಡಿಮಳೆ.
ಅರ್ಧ ಖುಷಿಯಲ್ಲಿ, ಮಳೆಯನ್ನು ಮನೆಯ ಕಿಟಕಿಯಿಂದ ನೋಡುತ್ತಕುಳಿತೆ. ಪ್ರಹರಿ ಮುಂದುವರಿಸಲು ಲಹರಿಯಿರದೇ ಹಾಗೇ ಮಯೂರ ಓದುತ್ತ ಕುಳಿತೆ. ಏನೂ ರಾಯರು ಹೀಗೇ ಮಾಡಿದರೆ ನಿಮ್ಮ ಬಾಸ್ ನಾಳೆಯಿಂದ ಮನೇಲೇ ಇರಿ ಎಂದರೆ ಏನ್ರೀ ಮಾಡ್ತೀರಾ ಎಂದಳು.ನನಗೆ ಕೊಡುವ ಸಂಬಳಕ್ಕೆ ಯಾರು ಬರ್ತಾರೆ ಬಿಡೇ ಎಂದೆ .
ಆಗಲೇ ಜಂಗಮವಾಣಿ ಉಲಿಯಿತು
"ಎಲ್ಲಿದ್ದೀರಿ ಐದು ನಿಮಿಷದಲ್ಲಿ ಸೈಟಿಗೆ ಬರ್ತಾ ಇದ್ದೇನೆ.... ಅಲ್ಲೇ ಇದ್ದೀರಲ್ಲಾ... " ಈಗ ಸ್ವರ ಡಾಕ್ಟರ್ ದ್ದು.( Claint) ನನ್ನವಳು ಈಗ ಹೇಳಿ ಎಂಬಂತೆ ನಕ್ಕಳು.

field_vote: 
Average: 4 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಪ್ರೇತಗಳಿಗೆ ತೃಪ್ತಿ, ಶಾಂತಿ ಸಿಗುವುದೋ ಇಲ್ಲವೋ ?

ಭೂತ, ಪ್ರೇತ, ಪಿಶಾಚಿ ನಂಬಿಕೆ ಅವರವರ ಭಾವಕ್ಕೆ. ವಿಶ್ವದಾದ್ಯಂತ ಬೇರೆ ಬೇರೆ ವಿಧಾನಗಳಲ್ಲಿ ಆತ್ಮ (spirit)ಗಳನ್ನು ತೃಪ್ತಿ ಪಡಿಸುವ ಈ ಭೂಲೋಕದ ಜೀವಾತ್ಮಗಳ ಪ್ರಯತ್ನಗಳು ಬೇರೆಬೇರೆ ರೀತಿಯಲ್ಲಿ ನಡೆಯುತ್ತಲೇ ಇರುತ್ತವೆ. ಇದರಿಂದಾಗಿ ಪ್ರೇತಗಳಿಗೆ ತೃಪ್ತಿ, ಶಾಂತಿ ಸಿಗುವುದೋ ಇಲ್ಲವೋ ಬೇರೆ ಮಾತು. ಆದರೆ ಹಬ್ಬ ಮಾಡುವವರಿಗಂತೂ ಸುಗ್ರಾಸ ಭೋಜನ, ಮಾನಸಿಕ ನೆಮ್ಮದಿಯೂ ದೊರಕುತ್ತದನ್ನಿ . ಹೊಟ್ಟೆಗಾಗಿ ಹಾಗೂ ನೆಮ್ಮದಿಗಾಗಿ ಎಷ್ಟೊಂದು ವೇಷಗಳು- ಆಚರಣೆಗಳು...


 

field_vote: 
Average: 5 (1 vote)
To prevent automated spam submissions leave this field empty.
ಲೇಖನ ವರ್ಗ (Category): 

ಜಲದ ಕಣ್ಣುಗಳನ್ನು ಅರಳಿಸಬೇಕಿದೆ.

 
ದಿನ ಕಳೆದ ಹಾಗೆ ಯಾಂತ್ರಿಕವಾಗುತ್ತಿರುವ  ಬದುಕ ಪಲುಕುಗಳನ್ನು, ಆಧುನಿಕತೆಯ ಮೂಲಕ ಕಂಡುಕೊಂಡಿರುವ ಸವಲತ್ತುಗಳ ಉರುಳುಗಳನ್ನು, ರೌರವ ನರಕವನ್ನು ನಮ್ಮೊಳಗೆ ಸೃಷ್ಟಿಸಿರುವ ಒತ್ತಡಗಳನ್ನೂ ನೀಗಿಕೊಳ್ಳಲು ಲಲಿತಕಲೆಯ ಒಂದಲ್ಲ ಒಂದು ವಿಭಾಗ ನಮ್ಮ ನೆರವಿಗೆ ಬಂದೊದಗುತ್ತಲೇ ಇವೆ. ಅದು ಸಾಹಿತ್ಯ ಓದುವುದು, ಚಿತ್ರಕಲೆಯನ್ನೋ, ಶಿಲ್ಪಕಲೆಯನ್ನೋ ನೋಡುವುದು, ಸಂಗೀತವನ್ನು ಕೇಳುವುದು ಹಾಗೇ ನೋಡನೋಡುತ್ತಲೇ ಕೇಳುವುದೂ ಆಗಿರುವ ಸಿನಿಮಾ ಅಥವ ನಾಟಕ ಯಾವುದೋ ಒಂದು ಆಗಿ ನಮ್ಮ ವಿಷಾದದ ಹೊತ್ತುಗಳಲ್ಲಿ ಚೈತ್ರದ ಚಿಗುರನ್ನು ಪಲ್ಲವಿಸಿವೆ, ಸಂತಸದ ಸಮಯವನ್ನು ದುಪ್ಪಟ್ಟುಗೊಳಿಸಿವೆ. ಲಲಿತ ಕಲೆ  ಮನುಷ್ಯನಿಗೆ ಬೇಕೇ ಬೇಕು ಅಂತ ವಾದಿಸುವವರ ಸಮಸಮವಾಗಿ ಅದೆಲ್ಲವನ್ನೂ ನಿರಾಕರಿಸಿ ಕಲೆಯ ಗೊಡವೆಗೆ ಕೈಹಾಕದೆಯೇ ಭವ್ಯವಾಗಿ ಬದುಕು ನಡೆಸಿದವರ, ನಡೆಸುತ್ತಿರುವವರ ದೊಡ್ದ ಪಟ್ಟಿಯೇ ನಮ್ಮೆದುರು ತೆರೆದುಕೊಳ್ಳುತ್ತದೆ. ಆದರೂ ಕಲೆ ಮನುಷ್ಯನಲ್ಲಿ ಕಡಿಮೆಯಾಗುತ್ತಿರುವ ಮನುಷ್ಯತ್ವವನ್ನು ಪೂರೈಸಿಕೊಳ್ಳಲಾದರೂ ಬೇಕೇ ಬೇಕು. ಏಕೆಂದರೆ ಲಲಿತಕಲೆಯ ವಿವಿಧ ವಿಭಾಗಗಳಲ್ಲೂ ಒಂದು ಸಾಮಾನ್ಯವಾದ ಧರ್ಮವಿದೆ. ಅದೆಂದರೆ ಬದುಕನ್ನು ಪ್ರೀತಿಸುವಂತೆ ಉದ್ದೀಪಿಸಿ ಅದರ ಅರ್ಥವನ್ನು ಹಿಗ್ಗಲಿಸಿ ಸಾರ್ಥಕಪಡಿಸುವುದು.


ಪ್ಲೇಟೋ ತನ್ನ ಆದರ್ಶ ರಾಜ್ಯದಲ್ಲಿ ಕವಿಗಳಿಗೆ ಜಾಗವಿರುವುದಿಲ್ಲ ಅಂತ ಹೇಳಿದ್ದು ನೆನಪಿರುವ ಹಾಗೇ ಕಾಳಿದಾಸನಿಲ್ಲದ ಭೋಜರಾಜನನ್ನು, ಪಂಪನಿಲ್ಲದ ಅರಿಕೇಸರಿಯನ್ನೂ ಊಹಿಸಿಕೊಳ್ಳುವುದು ಅಸಾಧ್ಯ. ವ್ಯಾಂಗೋ ಗೆರೆಗಳಿಗೆ ಜೀವ ಬರಿಸಿದ್ದನ್ನು, ತನ್ನ ಗಾಯನದಿಂದಲೇ ದೀಪ ಬೆಳಗಿಸಿದ ಸಂಗೀತಗಾರನ ಕತೆಯಂಥ ಹಲವು ಕಥಾನಕಗಳನ್ನು, ಚಾಪ್ಲಿನ್‌ನಿಂದ ಹಿಡಿದು ನಿನ್ನೆ ಮೊನ್ನೆ ಸಿನಿಮಾದ ವ್ಯಾಕರಣ ಕಲಿತು ಅದ್ಭುತ ಚಿತ್ರಗಳನ್ನು ಮಾಡುತ್ತಲೇ ಇರುವ ಅಸಂಖ್ಯರನ್ನು, ನೀನಾಸಂ, ರಂಗಾಯಣ, ಎನೆಸ್ಡಿ ಮುಂತಾದ ಸಂಸ್ಥೆಗಳ ಮೂಲಕ ತಯಾರಾಗಿ ಈಗ ಸದ್ಯದ ಸಿನಿಮಾ, ರಂಗಭೂಮಿ, ದೂರದರ್ಶನಗಳಲ್ಲಿ ಹೊಸತನವನ್ನು ತಂದು ತಂದು ಪೇರಿಸುತ್ತಿರುವ ಪ್ರತಿಭೆಗಳನ್ನೂ ಹಾಗೆಲ್ಲ ನೇಪಥ್ಯಕ್ಕೆ ಸರಿಸುವ ಹಾಗಿಲ್ಲ. ಆದರೂ ಒಟ್ಟೂ ಪ್ರಜಾ ಸಂಖ್ಯೆಗೆ ಲಲಿತಕಲೆಗಳ ಮೋಡಿಗೆ ಸಿಲುಕಿದವರ ಸಂಖ್ಯೆಯನ್ನು ಹೋಲಿಸಿದರೆ ಅದು ಕಡಿಮೆಯೆಂದೇ ನಮಗೆಲ್ಲರಿಗೂ ಗೊತ್ತು. ಹಾಗಿದ್ದೂ ಸಾಹಿತಿಗಳ ನಡುವೆ, ಸಿನಿಮಾ ಮಾಡುವವರ ನಡುವೆ, ಸಂಗೀತಗಾರರ ನಡುವೆ, ಕಲಾವಿದರ ನಡುವೆ ಒಂದು ಅಘೋಷಿತ ಯುದ್ಧ ನಡೆಯುತ್ತಲೇ ಇರುತ್ತದೆ. ತಾನು ನಂಬಿದ್ದು, ಸ್ರೃಷ್ಟಿಸಿದ್ದೇ ಮಹತ್ವದ್ದು ಅನ್ನುವ ಇರಾದೆಯೇ ಇದಕ್ಕೆಲ್ಲ ಮೂಲ. ಏಕಂ ಸತ್ ವಿಪ್ರಾ ಬಹುದಾ ವದಂತಿ ಅನ್ನುವುದು ಗೊತ್ತಿದ್ದೂ ಇರುವ ಒಂದೇ ಸತ್ಯವನ್ನು ಸಾಹಿತಿಗಳೂ ಕಲಾವಿದರೂ ಅವರವರಿಗೆ ತಿಳಿದ ಮಟ್ಟದಲ್ಲಿ ವ್ಯಾಖ್ಯಾನಿಸುತ್ತಿರುವುದೂ ಇದಕ್ಕೆ ಪ್ರಮುಖ ಕಾರಣ.

field_vote: 
Average: 5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಗಣೇಶ ಶರಣಂ..ಶರಣಂ ಗಣೇಶ

ಗಣೇಶ ಹಬ್ಬ ಎಂದಾಗ ನನಗೆ ನೆನಪಾಗೋದು ಮೈಸೂರಿನಲ್ಲಿ ಮನೆ, ಮನೆಗೂ ತಿರುಗಿ "ರೀ ಗಣೇಶನ್ನ ಇಟ್ಟಿದೀರಾ", ಕಡ್ಲೆಪುರಿ, ಕೋಡುಬಳೆ, ಸೌತೆಕಾಯಿ, ಅಹಾಅ... ಹೊಸಬಟ್ಟೆ ಧರಿಸಿ ಮನೆ, ಮನೆ ತಿರುಗಿ ಮೆರೆಯೋದು, ಸಿಗೋ ತಿನಿಸುಗಳನ್ನು ಎಗ್ಗು ತಗ್ಗಿಲ್ಲದೆ ಮುಕ್ಕೋದು ಧ್ಯೇಯವಾಗಿತ್ತು.ಈಗಿನಂತೆ ಟಿಶ್ಯೂ ಇರಲಿಲ್ಲ. ಉಂಡೆಗಳು. ಫ್ರಾಕ್ ಮಲ್ಟಿ ಪರ್ಪಸ್ ಯೂಸೇಜ್. ಜೊತೆಗೆ "ಗಣೇಶ ಬಂದ, ಕಾಯಿ ಕಡುಬು ತಿಂದ".  ಈಗ ಗಣೇಶನ್ನ ಇಟ್ಟಿದೀರ ಕಾಲ ಇಲ್ಲವೂ ಇಲ್ಲ, ಟಿ.ವಿ. ಯಲ್ಲೇ ನೂರೊಂದು ಗಣೇಶ ಕಾಣ್ತಾನೆ. ಕಾಲವೂ ಬದಲಾಗಿದೆ.


 


"ಪರದೇಸಿ" ವಾಸಿಗಳಾದ ನಮಗೆ ಮನೆ ಮಟ್ಟಿಗೆ ಹಬ್ಬ ಮಾಡಿದರೂ ದೀಪಾವಳಿ, ಗಣೇಶ, ಉಗಾದಿ, ಗೋಕುಲಾಷ್ಟಮಿಗಳು "ತೌರೂರು ಸುಖವೆಂದು" ..ಆ ಸಂಭ್ರಮ ಮಿಸ್ ಆಗುತ್ತೆ.


 

field_vote: 
Average: 3.8 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಮೀಸೆ ಮೀಮಾಂಸೆ".

 


 


 


 


ಮೀಸೆ ಇದ್ದ ಮುಖ ನೋಡಿ, ನೋಡಿ ಆ ಮೀಸೆ ಬೋಳಿಸಿದಾಗ ಛೀ, ಥೂ, ನೋಡೋಕ್ಕೆ ಆಗೋಲ್ಲ ಕಮೆಂಟ್ ಮಾಡೋವ್ರು ಹೆಂಗಸ್ರೇ! ಪತಿಯನ್ನು ಕಂಡ್ರೆ ಕಣ್ಣುರಿ-ಕಾಣ್ದಿದ್ರೆ ಹೊಟ್ಟುರಿ............. ಈ ಅನುಭವ ನಿಮ್ಮದೂ ಆಗಿರಬಹುದಲ್ಲವೇ.....


 


ಮೀಸೆ-ಮೀಮಾಂಸೆ


 


ಮೊನ್ನೆ ಮೀಸೆ ಟ್ರಿಮ್ ಮಾಡಿಕೊಳ್ತಿದ್ದ ನನ್ನ ಯಜಮಾನರು ಬಂದು "ಮೀಸೆ ಟ್ರಿಮ್ ಮಾಡ್ಕೊಂಡೆ, ಕನ್ನಡಿ ಸರಿ ಇಲ್ಲ, ಸರಿಯಾಗಿ ಇದೆಯಾ ನೋಡು" ಎಂದರು. ಅವನ ಮೂತಿ ಹಿಡಿದು ಅತ್ತ-ಇತ್ತ ತಿರುಗಿಸಿ, ನನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನಿನ್ನ ಮೀಸೆ ಎನ್ನುತ್ತಾ...ವಯಸ್ಸಾಯಿತು ಅರ್ಧಕಪ್ಪು-ಬಿಳುಪು, ಇತ್ತ ದಪ್ಪ-ಅತ್ತ ಸಣ್ಣ, ಈ ಪರಿಯ ಸೊಬಗಾ, ಯಾಕೋ ದಿನಾ ಕಷ್ಟ ಪಡ್ತೀಯ, ಪೂರ ಬೋಳಿಸ್ಬಿಡು ರಾಜ, ಹೇಗಿರ್ತೀಯಾ ನೊಡೋಣ ಎಂದು ಕಿಸಕ್ಕನೆ ನಕ್ಕೆ. ಶುದ್ಧ ತರಲೆ ಅಂತಾ ಗೊತ್ತಿದ್ದೊ, ಗೊತ್ತಿದ್ದೊ ನಿನ್ ಹತ್ರ ಕೇಳ್ತೀನಲ್ಲಾ...ಎನ್ನುತ್ತಾ ಮತ್ತೆ ಕನ್ನಡಿ ಹಿಡಿದ ಹುಸಿಮುನಿಸು ತೋರುತ್ತಾ.

field_vote: 
No votes yet
To prevent automated spam submissions leave this field empty.
ಲೇಖನ ವರ್ಗ (Category): 

ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿವುದೇ ............. ಲೈಫು ಇಷ್ಟೇನೇ

 ನಮ್ಮ ಹೊಸ ಚಲನಚಿತ್ರ ‘ಪಂಚರಂಗಿ’ ಭರ್ಜರಿ ಆರಂಭವನ್ನು ಪಡೆದುಕೊಂಡಿತು. ಈ ರೀತಿಯ ಪ್ರಚಂಡ ಆರಂಭದ ಯಶಸ್ಸನ್ನು ನಾನಾಗಲೀ, ನಮ್ಮ ತಂಡವಾಗಲೀ ನಿರೀಕ್ಷಿಸಿಯೇ ಇರಲಿಲ್ಲ!   ನಾನು ಪವನ್ ಕುಮಾರ್, ಪಂಚರಂಗಿ ಯ ಕಥೆ, ಚಿತ್ರಕಥೆ ಬರೆದವರಲ್ಲಿ ಒಬ್ಬ!  ಜೊತೆಗೆ ಈ ಚಿತ್ರದ ‘ಲಕಿ’ ಪಾತ್ರಧಾರಿ ಕೂಡ ನಾನೇ.  ನಾವು ಪಂಚರಂಗಿಯನ್ನು ತೆರೆಗೆ ತರುವ ಮುನ್ನಾ ಏನಾಯಿತು, ಹೇಗಾಯಿತು ಎನ್ನುವುದನ್ನು ನಿಮ್ಮ ಮುಂದಿಡಲು ಇಚ್ಚಿಸುತ್ತೇನೆ. 
field_vote: 
Average: 4 (2 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 

"ರಾಭಣನ" ಮಹತ್ತೇ ಮಹತ್ತು.

ರಾವಣನ್ನ ನೋಡೋಣ ಎಂದು ನನ್ನ ರಾಮ ಹೇಳ್ತಾನೇ ಇದ್ದ. ಹೊಡಿ, ಬಡಿ, ಕುತ್ತು, ಕೊಲ್ಲು ಯಾರು ನೋಡ್ತಾರೆ ಎಂದು ನಾನು ದಿನ ದೂಡುತ್ತಲೇ ಬಂದೆ. ದಿನ್ ಬೆಳಗಾದ್ರೆ ಪೇಪರ‍್ನಲ್ಲಿ "ಯಾವೋನ್ ಹೆಂಡ್ತಿನಾ ಯೋವೋನೋ ಹೊತ್ಕೊಂಡು ಹೋದ್ನಂತೆ, ಅವ್ಳನ್ನ್ ಹುಡುಕ್ಕಂಡು ಇನ್ಯಾವನೋ ಹೋಗ್ತಾನಂತೆ" ಎಂಬ ಕನಕ-ವಾಣಿಯ ಸುದ್ದಿ ಬರ್ತಾನೇ ಇರುತ್ತೆ, "ರಾವಣ" ನ ಥೀಮ್ ಕೂಡ ಅದೇ, ನೋಡಲೇಬೇಕೇ ನನ್ನ ರಾಜ, ಎಂದು ಕೇಳಿದೆ. ಬಾರೋ ನಮ್ಮ ಮನೆಗೆ ಎಂದು ಅಂತೂ ಇಪ್ಪತ್ತು ಡಾಲರ್ ತೆತ್ತು ಹೊತ್ತು ತಂದೆ  "ರಾವಣ" ನನ್ನ ಮನೆಗೆ...


ರಾಮನ ಅವತಾರ - ರಾಮಾಯಣ, ಸಂಪೂರ್ಣ ರಾಮಾಯಣ ಚಿತ್ರಗಳ ಕಾಲ ಮುಗಿಯಿತು. ಇದೀಗ ರಾವಣನ ಕಾಲ...  ರಾವಣ ಮಹಿಮೆ, ಪ್ರಚಂಡ ರಾವಣ, ರಾಮಾಪುರದ ರಾವಣ-ಅತ್ತೆಗೊಂದು-ಕತ್ತೆಗೊಂದು ಎಂಬಂತೆ,  ರಾಮನಿಗೊಂದು-ರಾವಣನಿಗೊಂದು ಕಾಲ. ರಾವಣ ಬಂದ ಅಂದಾದ್ಮೇಲೆ ಕುಂಭಕರ್ಣ-ವಿಭೀಷಣರು ಏನ್ ಪಾಪ ಮಾಡಿದ್ರು, ಅವರಿಗೂ ಬರುತ್ತೆ  ಚಿತ್ರಕಾಲ...! ಹೆಸರಿನಲ್ಲೇನಿದೆ ಮಹಾ ಎಂದು ನಾನೂ ಹೇಳ್ತಾ ಇದ್ದೆ...ಆದ್ರೆ...

field_vote: 
Average: 4 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಕಪ್ಪುಕುಳಿಯಲ್ಲಿ(black hole) ಮಾಯವಾದ ವಸ್ತು ಏನಾಗುತ್ತದೆ?

 

 

 

ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಏನಾಗುತ್ತದೆ ಅನ್ನುವುದಕ್ಕೆ ಎರಡು ವಾದಗಳಿವೆ ಆದರೆ ಯಾವುದನ್ನೂ ಸರ್ವವ್ಯಾಪಿಯಾಗಿ ಸ್ವೀಕರಿಸಿಲ್ಲ

 

 

 

1. ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಇನ್ನೊದು ವಿಶ್ವಕ್ಕೆ ರವಾನೆಯಾಗುತ್ತದೆ ಅಥವಾ ನಮ್ಮ ವಿಶ್ವದಲ್ಲಿಹೆ ಬೇರೆಡೆಗೆ ರವಾನೆಯಾಗುತ್ತದೆ

 

 

field_vote: 
Average: 4.5 (2 votes)
To prevent automated spam submissions leave this field empty.
ಲೇಖನ ವರ್ಗ (Category): 

ಮೌನವೆಂಬ ಮಹಾನಿಧಿ

ಮೌನವನ್ನು ಕುರಿತು ಮಾತನಾಡಿದರೆ ಅಥವ ಅದನ್ನು ಕುರಿತು ಬರೆಯುತ್ತ ಹೋದರೆ ಅದು ವಿರೋಧಾಭಾಸವೇ ಆಗುತ್ತದೆ. ಏಕೆಂದರೆ ಮೌನವೆನ್ನುವುದು ಅದರ ಶುದ್ಧ ಸ್ವರೂಪದಲ್ಲಿ ಒಂದು ಅನಿರ್ವಚನೀಯ ಸ್ಥಿತಿ. ಅಂದರೆ ಮಾತುಗಳೆಲ್ಲವನ್ನೂ ನಿರಾಕರಿಸಿದ ಮತ್ತು ಕೇವಲ ಅನುಭವದ ಮೂಲಕವೇ ಸಕಲಕ್ಕೂ ಉತ್ತರಕೊಡಬಲ್ಲ ತಾಕತ್ತು ಮೌನಕ್ಕಿದೆ. ಸರಿಯಾದ ಮಾತುಗಳು ಹುಟ್ಟುವುದೂ ಮೌನದ ಗರ್ಭದಲ್ಲೇ!

 

field_vote: 
Average: 5 (4 votes)
To prevent automated spam submissions leave this field empty.
ಲೇಖನ ವರ್ಗ (Category): 
ಸರಣಿ: 
Subscribe to ಪ್ರಬಂಧ