ಪುಸ್ತಕ ವಿಮರ್ಶೆ

ಹೊಸ ಪುಸ್ತಕಗಳು

field_vote: 
No votes yet
To prevent automated spam submissions leave this field empty.

2014 ರ‌ ಡಿಸೆಂಬರಿನಲ್ಲಿ ಬೆಂಗಳೂರಿನ‌ ಪ್ರಕಾಷ‌ ಸಾಹಿತ್ಯದವರು ಪ್ರಕಟಿಸಿದ‌ ನನ್ನ‌ ವಿಮರ್ಷಾ ಲೇಖನಗಳ‌ ಸ0ಕಲನ್ 'ಅನುಸಂಧಾನ‌' ಇದರಲ್ಲಿ 55 ಲೇಖನಗಳಿವೆ.11/1/2015ರ‌ ಕನ್ನಡ‌ ಪ್ರಭದಲ್ಲಿ ಇದರ‌ ವಿಮರ್ಷೆ ಪ್ರಕಟವಾಗಿದೆ.ಅದನ್ನು ಇಲ್ಲಿ ಅಪ್ಲೋಡ್ ಮಾಡಲಾಗುತ್ತಿಲ್ಲ‌.

ಲೇಖನ ವರ್ಗ (Category): 

ಅಲೆಮಾರಿಯ ಅಂಡಮಾನ್ ಬಗ್ಗೆ ನನ್ನ ಕಿರು ವಿಮರ್ಶೆ

field_vote: 
Average: 3.5 (2 votes)
To prevent automated spam submissions leave this field empty.

 ಕೆ.ಪಿ. ಪೂರ್ಣಚಂದ್ರ ತೇಜಸ್ವಿ ವಿರಚಿತ ಅಲೆಮಾರಿಯ ಅಂಡಮಾನ್ ಮತ್ತು ಮಹಾನದಿ ನೈಲ್ ಕನ್ನಡ ಸಾಹಿತ್ಯದಲ್ಲಿ ಎಂದೂ ಮೂಡಿಲ್ಲದಂಥಹ ಒಂದು ವಿಶಿಷ್ಟ ರೀತಿಯ ಪ್ರವಾಸ ಕಥನವಾಗಿದೆ. ಕಾಲ ಮತ್ತು ದೇಶಗಳಲ್ಲಿ ಅಥವಾ ಚರಿತ್ರೆ ಮತ್ತು ವರ್ತಮಾನಗಳಲ್ಲಿ ಒಮ್ಮೆಲೇ ಚಲಿಸುವ ಬರಹಗಾರರ ಪ್ರಜ್ಞೆ ಅನುಭವಗಳ ಅನೇಕ ಆಯಾಮಗಳನ್ನು ಒಟ್ಟೊಟ್ಟಿಗೇ ಸೃಷ್ಟಿಸುತ್ತದೆ. ಅಲೆಮಾರಿಯ ಅಂಡಮಾನ್ ಹೊಸರೀತಿಯ ಕಥನ ತಂತ್ರವನ್ನೇ ಕನ್ನಡ ಸಾಹಿತ್ಯದಲ್ಲಿ ಸೃಷ್ಟಿಸಿದೆ .

ಲೇಖನ ವರ್ಗ (Category): 

ಸಹಜ ಸ್ವರದಲ್ಲೇ ಮನಸ್ಸು ಸೆಳೆಯುವ ‘ನೆಲದ ಕರುಣೆಯ ದನಿ’

field_vote: 
Average: 5 (2 votes)
To prevent automated spam submissions leave this field empty.

ಗಾಯದ ತುಟಿಗಳಿಂದ ಮುರಿದ ಕೊಳಲನೂದಬೇಕಿದೆ’-ಎಂದು ವಾಸ್ತವದ ಸಂಕಟಗಳನ್ನು ತೆರೆದಿಡುವ ಶ್ರೀ ವೀರಣ್ಣ ಮಡಿವಾಳರ ತಮ್ಮ ಮೊದಲ ಕವನ ಸಂಕಲನ ‘ನೆಲದ ಕರುಣೆಯ ದನಿ’ ಯ ಮೂಲಕ ಸಾರಸ್ವತ ಲೋಕಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಮೊದಲ ಸಂಕಲನ ತರುವ ಎಲ್ಲ ಕವಿಗಳಿಗೂ ಇರುವ ಹಾಗೇ ವೀರಣ್ಣನವರಿಗೂ ಇಲ್ಲಿನ ಕವಿತೆಗಳ ಆಯ್ಕೆಯಲ್ಲಿ ದ್ವಂದ್ವಗಳು ಕಾಡಿರುವ ಕುರುಹುಗಳಿವೆ. ಮೊದಲ ಸಂಕಲನ ಪ್ರಕಟಿಸುವ ಕವಿಗೆ ಕಾಡುವ ವಿಚಿತ್ರ ಸಮಸ್ಯೆಯೆಂದರೆ ಎಲ್ಲವನ್ನೂ ಮೊಗೆ ಮೊಗೆದು ಹೇಳಬೇಕು ಎಂಬ ಉತ್ಸಾಹ ಮತ್ತು ಅಂಥ ಉತ್ಸಾಹದ ಜೊತೆಗೇ ಹೇಳುವ ರೀತಿಯಲ್ಲಿ ಬಳಸಬೇಕಾದ ಮಾರ್ಗದ ಅನುಸೂಚಿ.

ಲೇಖನ ವರ್ಗ (Category): 

ಭಾರತೀಯ ಸಮಾಜಕ್ಕೆ ’ಕವಲು’ ಕಾದಂಬರಿಯ ಅವಶ್ಯಕತೆ

field_vote: 
Average: 5 (5 votes)
To prevent automated spam submissions leave this field empty.

  (ನನ್ನ ಈ ಲೇಖನ ಆಗಸ್ಟ್ ೮, ೨೦೧೦ರ ’ಕರ್ಮವೀರ’ದಲ್ಲಿ ಪ್ರಕಟವಾಗಿದೆ.)

  ಎಸ್.ಎಲ್. ಭೈರಪ್ಪನವರು ಮತ್ತೊಮ್ಮೆ ನಮ್ಮ ಮನ-ಮಸ್ತಿಷ್ಕಗಳಿಗೆ ಚುರುಕು ಮುಟ್ಟಿಸಿದ್ದಾರೆ. ’ಕವಲು’ ಕಾದಂಬರಿಯನ್ನು ಕೊಟಿದ್ದಾರೆ.

ಲೇಖನ ವರ್ಗ (Category): 

’ಭೈರಪ್ಪಾಭಿನಂದನಾ’ ಗ್ರಂಥ : ಒಂದು ಮೌಲಿಕ ಕೃತಿ

field_vote: 
Average: 5 (1 vote)
To prevent automated spam submissions leave this field empty.

  ಈಚೆಗೆ ನನ್ನ ಕೈಗೊಂದು ಮೌಲಿಕ ಕೃತಿ ಸಿಕ್ಕಿತು. ಕೊಂಡಜ್ಜಿ ಕೆ. ವೆಂಕಟೇಶ್ ಸಂಪಾದಿಸಿರುವ ’ಭೈರಪ್ಪಾಭಿನಂದನಾ’ ಗ್ರಂಥ ಅದು. ೧೯೯೩ರಲ್ಲಿ ಪ್ರಥಮ ಮುದ್ರಣವಾಗಿ ಹೊರಬಂದು ೨೦೦೫ರಲ್ಲಿ ದ್ವಿತೀಯ ಮತ್ತು ವಿಸ್ತೃತ ಮುದ್ರಣ ಕಂಡಿರುವ ಈ ಪುಸ್ತಕ ಅದುಹೇಗೋ ಇದುವರೆಗೆ ನನ್ನ ದೃಷ್ಟಿಯಿಂದ ತಪ್ಪಿಸಿಕೊಂಡುಬಿಟ್ಟಿತ್ತು! ಓದುತ್ತಹೋದಂತೆ ಈ ಕೃತಿಯು ನನ್ನನ್ನು ಹಿಡಿದಿಟ್ಟು ಕುಳ್ಳಿರಿಸಿ ಓದಿಸಿಕೊಂಡಿತು.

ಲೇಖನ ವರ್ಗ (Category): 

ಈ ಕಡಲ ತುಂಬ ಅವಿಶ್ರಾಂತ ಅಲೆಗಳು--ರೂಪ ಹಾಸನ ಅವರ ಕಡಲಿಗೆಷ್ಟೊಂದು ಬಾಗಿಲು

field_vote: 
No votes yet
To prevent automated spam submissions leave this field empty.


ಈ ಕಡಲ ತುಂಬ ಅವಿಶ್ರಾಂತ ಅಲೆಗಳು. . . . . .                             
       

ಲೇಖನ ವರ್ಗ (Category): 

ರೂಪ ಹಾಸನ ಅವರ ’ಕಡಲಿಗೆಷ್ಟೊಂದು ಬಾಗಿಲು-’ಈ ಕಡಲ ತುಂಬ ಅವಿಶ್ರಾಂತ ಅಲೆಗಳು. . . . . .

field_vote: 
No votes yet
To prevent automated spam submissions leave this field empty.


ಈ ಕಡಲ ತುಂಬ ಅವಿಶ್ರಾಂತ ಅಲೆಗಳು. . . . . .                             
       

ಲೇಖನ ವರ್ಗ (Category): 

ವಾಚ್ಯವಾಗಿಯೇ ಉಳಿವ ಅಂಗನವಾಡಿಯ ಪದ್ಯಗಳು

field_vote: 
Average: 1 (1 vote)
To prevent automated spam submissions leave this field empty.


ಡಾ.ಅರುಣ ಜೋಳದಕೂಡ್ಲಿಗಿ ವಾಚಕರವಾಣಿ ಮತ್ತು ಓದುಗರ ಪತ್ರದ ಮೂಲಕ ನಿರಂತರವಾಗಿ ತಮ್ಮ ಸುತ್ತಲಿನ ಅನ್ಯಾಯಗಳನ್ನು ಕುಂದುಕೊರತೆಗಳನ್ನೂ ಅವರಿವರ ಕತೆ-ಕವಿತೆಗಳಿಗೆ ಪ್ರತಿಕ್ರಿಯೆಗಳನ್ನು  ಬರೆಯುತ್ತಲೇ ಕವಿಯಾಗಿ ಅರಳಿದವರು. ಕಾವ್ಯ ಸ್ಪರ್ಧೆಗಳಲ್ಲೂ ತಮ್ಮ ಕವಿತೆಗಳಿಗೆ ಬಹುಮಾನಗಳನ್ನು ಪಡೆಯುವ ಮೂಲಕ ಎಡ ಪಂಥೀಯ ಆಶಯಗಳನ್ನು, ಸಮಾನತೆಯ ಕನಸುಗಳನ್ನೂ ತಮ್ಮ ಬರಗಳುದ್ದಕ್ಕೂ ಕಾಣಿಸುತ್ತಲೇ ಬಂದವರು. ಈಗಾಗಲೇ ‘ನೆರಳು ಮಾತಾಡುವ ಹೊತ್ತು’ (೨೦೦೪) ಕವನ ಸಂಕಲನವನ್ನೂ, ಮತ್ತು ‘ಸೊಂಡೂರಿನ ಭೂ ಹೋರಾಟಗಳು’ (೨೦೦೮) ಅಧ್ಯಯನ ಕೃತಿಯನ್ನೂ  ಪ್ರಕಟಿಸಿ ಸಾರಸ್ವತ ಲೋಕದಲ್ಲಿ ದಾಖಲಾಗಿರುವವರು. ಅವರ ಎರಡನೇ ಕವನ ಸಂಕಲನ ‘ಅವ್ವನ ಅಂಗನವಾಡಿ’.

ಒಟ್ಟು ೪೧ ಪದ್ಯಗಳೆಂದು ಕರೆದಿರುವ ರಚನೆಗಳು ಈ ಸಂಕಲನದಲ್ಲಿವೆ. ಕಾವ್ಯ ಪರಂಪರೆಯ ಬೆರಗು ಹುಟ್ಟಿಸುವ ದನಿಗಳನ್ನು ಅಭ್ಯಸಿಸಿ ಆ ಮೂಲಕ ಅದನ್ನು ಪಡೆದ ಕವಿ, ಹಾಗೆ ತನಗೊಲಿದ ತನ್ನದೇ ದನಿಯಲ್ಲಿ ಕವಿತೆ ಕಟ್ಟಬೇಕೆಂಬ ಮತ್ತು ಪ್ರತಿಮೆ/ರೂಪಕಗಳ ಜೊತೆಗೇ ಕವಿಯು ಅನುಸಂಧಾನ ಮಾಡಬೇಕೆನ್ನುವ ‘ಪುರಾತನ’ ಮಾತುಗಳನ್ನೂ ಈ ಕವಿ ನೇರವಾಗಿ ಮತ್ತು ನಯವಾಗಿ ತಿರಸ್ಕರಿಸಿರುವುದು ಮೊದಲ ಓದಿಗೇ ಶೃತವಾಗುವ ಅಂಶಗಳು. ಏಕೆಂದರೆ ಕವಿತೆಯ ಕಟ್ಟುವಿಕೆಗೆ ಕವಿಯಾದವನಿಗೆ ಇರಲೇಬೇಕೆಂದು ಬಹುತೇಕರು ನಂಬಿರುವ ‘ಕವಿಸಮಯ’ ಮತ್ತು ಕಾವ್ಯಾನ್ವೇಷಣೆಯ ದೀರ್ಘಪಥವನ್ನು ಬೇಕೆಂತಲೇ ಬಿಟ್ಟುಕೊಟ್ಟು  ತನಗೊಲಿದ ಕಾಲುದಾರಿಯಲ್ಲೇ ಇಲ್ಲಿನ ಎಲ್ಲ ಕವಿತೆಗಳನ್ನೂ ಅರುಣ ಅರಳಿಸಿದ್ದಾರೆ.

ಮುನ್ನುಡಿಕಾರ ಕೆ.ವಿ.ನಾರಾಯಣರವರು  ಗುರ್ತಿಸಿರುವಂತೆ ಈ ಕಾಲದ ಹೊಸ ಬರಹಗಾರ ಹಳೆಯ ಕಾಲದವರ ಹಳಹಳಿಕೆಯ ಮಾತುಗಳು ನುಸುಳದಂತೆ ಇಲ್ಲವೇ ಎಲ್ಲರೂ ಮೆಚ್ಚಿದಂತೆ, ಯಾರಿಗೂ ಗೊತ್ತಾಗದಂತೆ ಬರೆಯುವ ಬಗೆಯಿಂದ  ಇಲ್ಲಿನ ಪದ್ಯಗಳು ತಪ್ಪಿಸಿಕೊಂಡಿವೆ. ಅರುಣ ವಯಸ್ಸು ಮತ್ತು ಅನುಭವದಲ್ಲಿ ಇನ್ನೂ ಚಿಕ್ಕವರು. ಅವರು ಬೆಳೆದು ಬಂದ ವಾತಾವರಣದಲ್ಲಿ ಅವರು ಕಂಡುಂಡ ನೋವು, ಹತಾಶೆ ನಿರಾಶೆಗಳನ್ನು ತಮಗೊಲಿದ ಕಾವ್ಯಮಾರ್ಗದಲ್ಲಿ ಹೇಳಬಯಸಿದ್ದಾರೆ. ಇಲ್ಲಿನ ಎಲ್ಲ ಕವಿತೆಗಳಲ್ಲೂ ಸಂತಸದ ಸುಳಿವಾಗಲೀ, ಆನಂದದ ಕ್ಷಣಗಳಾಗಲೀ ಇಲ್ಲವೇ ಇಲ್ಲ. ಎಲ್ಲ ರಚನೆಗಳ ಹಿಂದೂ ನೋವು ನಿಟ್ಟುಸಿರು ಮತ್ತದಕ್ಕೆ ಮರುಗುವ ಹೃದಯದ ಹಾಡುಗಳಿವೆ. ಆದರೆ ಎಂತಹುದೇ ಕಷ್ಟಕಾರ್ಪಣ್ಯದಲ್ಲಿರುವ ವ್ಯಕ್ತಿಗೂ ಕ್ಷಣಕಾಲದವರೆಗಾದರೂ ಸಂತಸದ ಘಳಿಗೆಗಳಿದ್ದೇ ಇರುವುದರಿಂದ ಈ ಕವಿ ಬೇಕೆಂತಲೇ ಅವನ್ನು ನಿರಾಕರಿಸಿದ್ದಾರೋ ಅಥವ ಪ್ರಯತ್ನಪೂರ್ವಕವಾಗಿ ಬೇಕೆಂತಲೇ ನೋವು-ವಿಷಾದಗಳನ್ನೇ ತಮ್ಮ ಕಾವ್ಯಾಭಿವ್ಯಕ್ತಿಯ ಮಾಧ್ಯಮವನ್ನಾಗಿಸಿಕೊಂಡಿದ್ದಾರೋ ಎಂಬುದನ್ನು ಕವಿತೆಗಳ ಓದಿನಿಂದಲೇ ಮನಗಾಣಬಹುದು.

ಲೇಖನ ವರ್ಗ (Category): 

ಪರ್ವ (ಎಸ್.ಎಲ್.ಭೈರಪ್ಪ) - ನನ್ನನಿಸಿಕೆ

ಇಷ್ಟು ದಿವಸ ನಾನ್ಯಾಕೆ ಸಂಪದಕ್ಕೆ ಬರಲಿಲ್ಲ?  (ಯಾರೂ ಕೇಳಲೇ ಇಲ್ಲ! :() ಆದರೂ ನಾನೇ ಹೇಳಿಬಿಡುತ್ತೇನೆ.  ಪರ್ವ ಓದಲು ಶುರು ಮಾಡಿದಂದಿನಿಂದ ಬೇರಾವುದನ್ನೂ ಓದಲಾಗಲೇ ಇಲ್ಲ.    ಪರ್ವ -  ನನ್ನ ಇಷ್ಟು ವರ್ಷಗಳ ಓದಿನಲ್ಲಿ ನನ್ನ ಮನದ ಮೇಲೆ ಬಹು ಪರಿಣಾಮ ಬೀರಿದ ಪುಸ್ತಕ.  ಕುಳಿತಿದ್ದರೂ, ನಿಂತಿದ್ದರೂ, ಕನಸಿನಲ್ಲೂ, ಪಾತ್ರಗಳ ಗುಂಗು.  ಪ್ರತಿಯೊಂದು ಪಾತ್ರದ ಚಿತ್ರಣವನ್ನು ಓದುತ್ತಿದ್ದಾಗಲೂ ನಾನೇ ಆ ಪಾತ್ರವೇನೋ ಎಂಬಂತಹ, ನನ್ನ ಬಗ್ಗೆಯೇ ಬರೆದಿದ್ದಾರೋ ಎಂಬಂತಹ ಭಾವ ಮನದೊಳಗೆ ಆವರಿಸಿಬಿಡುತ್ತಿತ್ತು.  ನಾನೇ ಕುಂತಿ ಯಾಗಿದ್ದೆ, ನಾನೇ ದ್ರೌಪದಿಯಾಗಿದ್ದೆ, ನಾನೇ ಎಲ್ಲವೂ ಆಗಿದ್ದೆ.  ಪ್ರತಿಯೊಂದು ಪಾತ್ರವನ್ನು ಕಲ್ಪನೆಯಲ್ಲಿ ಅನುಭವಿಸುತ್ತಿದ್ದೆ.

field_vote: 
Average: 3.8 (4 votes)
To prevent automated spam submissions leave this field empty.
ಲೇಖನ ವರ್ಗ (Category): 

ಪರ್ವ (ಎಸ್.ಎಲ್.ಭೈರಪ್ಪ)

field_vote: 
Average: 3.7 (3 votes)
To prevent automated spam submissions leave this field empty.

ಯಾವುದೋ ಕಾಲದ ವ್ಯಕ್ತಿ ಸಂಗತಿಗಳು ನಮ್ಮ ಕಾಲದವಾಗಿ, ನಮಗೆ ತೀರ ಹತ್ತಿರದವಾಗಿ ಮಾರ್ಪಡುವ ಕಲಾಕೌಶಲವನ್ನು ಈ ಕಾದಂಬರಿ ತೋರಿಸುತ್ತದೆ.  ನಾನು ಬರೆಯುತ್ತಿರುವುದು  ಭಾರತ ಪಾತ್ರಗಳ ಕಥೆಯನ್ನಲ್ಲ.  ಮಾನವ ಅನುಭವದ ವಿವಿಧ ಮುಖ, ರೂಪ, ಮಾನವಸಂಬಂಧ ಸ್ವರೂಪ, ಮತ್ತು ವಿವೇಚನೆಗಳನ್ನು ಎಂಬ ಪ್ರಜ್ಞೆ ನನಗೆ ಉದ್ದಕ್ಕೂ ಇತ್ತು.  ಒಂದೊಂದು ಹೊಸ ಪಾತ್ರ ಅಥವಾ ಸನ್ನಿವೇಶವನ್ನು ಬರೆಯುವಾಗಲೂ ಇವುಗ ಹೊಸ ಹೊಸ ಆಯಾಮವನ್ನು ಗೋಚರಿಸುತ್ತಿದ್ದವು.  ಸಿದ್ಧತೆಯ ಹಲವು ಮಜಲುಗಳಲ್ಲಿ ನನ್ನ ಕಲ್ಪನೆಗೆ ಗೋಚರಿಸಿದ್ದುದ್ದಕ್ಕಿಂತ ಅಭಿವ್ಯಕ್ತ ಕಾದಂಬರಿಯಾಗಿ ಇದು ತಾಳಿರುವ ಸ್ವರೂಪ ಮತ್ತು ಒಟ್ಟಂದದ ಅರ್ಥಗಳು ಸಂಪೂರ್ಣ ಬೇರೆಯಾಗಿವೆ.  ಪರ್ವ ಬರೆದ ಅನುಭವವು ನನ್ನಲ್ಲಿ ಹೊಸ ಭಾವ ತಂದಿತ್ತು.  ನನಗೆ ಹೊಸ ಹುಟ್ಟು ಕೊಟ್ಟಿತ

ಲೇಖನ ವರ್ಗ (Category): 

ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳು

field_vote: 
No votes yet
To prevent automated spam submissions leave this field empty.

ಕನ್ನಡ ಪಾಕ್ಷಿಕ ’ದ ಸ೦ಡೇ ಇ೦ಡಿಯನ್’ ಪಟ್ಟಿ ಮಾಡಿರುವ ಕನ್ನಡದ 100 ಶ್ರೇಷ್ಠ ಸಾಹಿತ್ಯ ಕೃತಿಗಳ ಪಟ್ಟಿ ಇಲ್ಲಿದೆ. ಈ ಬಾರಿಯ ಕನ್ನಡ ಸಾಹಿತ್ಯ ಸಮ್ಮೇಳನದ ವಿಶೇಷಾ೦ಕದಲ್ಲಿಯ ’ಓದಿನ ಪ್ರೀತಿಗೆ 100 ಹೊತ್ತಗೆ’ ಲೇಖನದಲ್ಲಿ ಕನ್ನಡದಲ್ಲಿ ಪ್ರಕಟವಾಗಿರುವ 100 ಶ್ರೇಷ್ಠ ಪುಸ್ತಕಗಳ ಕಿರು ಪರಿಚಯವಿದೆ.

 

ಲೇಖನ ವರ್ಗ (Category): 

ನನ್ನ ಮದುವೆಗೆ ಬನ್ನಿ

field_vote: 
Average: 5 (1 vote)
To prevent automated spam submissions leave this field empty.

ಪ್ರಿಯರೇ. ನಾನು ಹಲವು ದಿನದಿಂದ ಕೆಲಸದ ಒತ್ತಡದಿಂದ ಸಂಪದದಿಂದ ದೂರವಿದ್ದೆ ಈ ನನ್ನ ಮದುವೆಯ ಆಮಂತ್ರಣದೊಂದಿಗೆ ನಿಮ್ಮೊಂದಿಗೆ ಬೆರೆಯಲು ಬಂದಿದ್ದೇನೆ


"ಜೀವನದ ಪ್ರೀತಿಯನ್ನು ಹಂಚಿಕೊಂಡು,


ಬದುಕಿನ ಹಸಿರು ಉಳಿಸಿಕೊಳ್ಳಲು,


ಸಮಾನ, ಸಹಬಾಳ್ವೆ ಬೆಳಸಿಕೊಳ್ಳಲು,


ಬಾಳ ವನದಲ್ಲಿ ಸಂಭ್ರಮದ ತಂಗಾಳಿಯಾಗಿ,


ಬರುತಿಹ ನನ್ನ ಬಾಳ ಸಂಗಾತಿ ಮಮತಳೊಂದಿಗೆ


ನಾನು ಮದುವೆ ಎಂಬ ಬಂಧನಕ್ಕೆ


ಸಪ್ತಪದಿ ತುಳಿದು ಅಡಿ ಇಡಲು ನಿಮ್ಮ- ಹಾರೈಕೆಗಾಗಿ


ಕಾದಿರುವೆ, ಬನ್ನಿ ನಮ್ಮಿಬ್ಬರನ್ನು ಹರಸಿ ಹಾರೈಸಿ


                                      ನಿಮ್ಮ ಪ್ರೀತಿಯವ

ಲೇಖನ ವರ್ಗ (Category): 

ಪುಸ್ತಕಗಳ ಬಿಡುಗಡೆ ಸಮಾರಂಭ....

field_vote: 
No votes yet
To prevent automated spam submissions leave this field empty.

ನಿನ್ನೆ ೩೧ನೇ ಜನವರಿಯಂದು ಶ್ರೀ ನಾಗೇಶ ಹೆಗಡೆಯವರ ಆರು ಪುಸ್ತಕಗಳ ಬಿಡುಗಡೆ ಸಮಾರಂಭ ನಡೆಯಿತು.  ಅದರಲ್ಲಿ ಮೂರು ಪುಸ್ತಕಗಳು ’ಪ್ರತಿದಿನ ಪರಿಸರ ದಿನ’, ’ಇರುವುದೊಂದೇ ಭೂಮಿ’ ಮತ್ತು ’ಸುರಿಹೊಂಡ ಭರತ ಖಂಡ’ ಅಂಕಿತ ಪ್ರಕಾಶನದಿಂದ ಮರು ಮುದ್ರಣಗೊಂಡವು.  ಹೊಸದಾದ ಮೂರು ಪುಸ್ತಕಗಳು "ಅಭಿವೃದ್ಧಿಯ ಅಂಧಯುಗ", "ಟಿಪ್ಪು ಖಡ್ಗದ ನ್ಯಾನೋ ಕಾರ್ಬನ್" ಮತ್ತು "ಕೊಪೇನ್ ಹೇಗನ್ ಋತು ಸಂಹಾರ" ಭೂಮಿ ಬುಕ್ಸ್ ಪ್ರಕಾಶನದ ಮೊಟ್ಟ ಮೊದಲ ಪುಸ್ತಕಗಳು..

ಲೇಖನ ವರ್ಗ (Category): 

ಪಂಪ ಮಹಾಕವಿಯ "ಆದಿ ಪುರಾಣ"ದ PDF ಬೇಕಾಗಿದೆ. ಸಂಪದ ಬಳಗದಲ್ಲಿ ಯಾರಿಗಾದರೂ ಸಹಾಯ ಮಾಡಲಾಗುತ್ತದೆಯೇ?

field_vote: 
Average: 5 (1 vote)
To prevent automated spam submissions leave this field empty.
ಸ್ನೇಹಿತರೆ,

ಪ್ರೊಫೆಸರ್ ಅಶ್ವತ್ಥನಾರಾಯಣ ಹಾಗೂ ಅವರ ಶ್ರೀಮತಿ ಈಗ ನಮ್ಮ (Columbia, Maryland)  ಊರಿಗೆ ಬಂದಿದ್ದಾರೆ.  ನಮ್ಮ ಮನೆಯಲ್ಲಿ ಜನವರಿ ೨ನೆ ತಾರೀಖು  ಅವರಿಬ್ಬರೊಂದಿಗೆ   'ಸಾಹಿತ್ಯ-ಸಂವಾದ'  ಆಯೋಜಿಸಿದ್ದೀವಿ. ಸಂವಾದದ ಒಂದು ವಿಷಯ ಪಂಪ ಮಹಾಕವಿಯ 'ಆದಿ ಪುರಾಣ'.   ಇದರ Tiff ಆವೃತ್ತಿ DLI ನಲ್ಲಿ ಇದೆಯಾದರೂ linux ಇಲ್ಲದ ಕಾರಣ ನನಗೆ ಅದನ್ನು PDF ಗೆ ಬದಲಾಯಿಸಲು ಸಾಧ್ಯವಾಗ್ತಿಲ್ಲ.  ಇದರಲ್ಲಿನ ಕೆಲವು ಪದ್ಯಗಳನ್ನು ಪ್ರಿಂಟ್ ಮಾಡಿ ಸಂವಾದಿಗರಿಗೆ ಹಂಚುವ ಯೋಚನೆ ಇದೆ. ನಿಮ್ಮಲ್ಲಿ ಯಾರಿಗಾದರೂ ಇದನ್ನು pdf ಮಾಡಿ ಗೂಗಲ್ ಡಾಕ್ಸ್ ಗೆ ಹಾಕಿ ನನಗೆ ಅದರ access ಕಳಿಸಲು ಸಾಧ್ಯವೇ? 

ಲೇಖನ ವರ್ಗ (Category): 

ತಮಿಳು ತಲೆಗಳ ನಡುವೆ!

field_vote: 
Average: 5 (2 votes)
To prevent automated spam submissions leave this field empty.

ಬಿ.ಜಿ.ಎಲ್.ಸ್ವಾಮಿಯರ"ತಮಿಳು ತಲೆಗಳ ನಡುವೆ’ ತಮಿಳರ ಭಾಷಾದುರಭಿಮಾನದ ಬಗ್ಗೆ ವಿವರಿಸುವ ರೀತಿ

ಅನನ್ಯವಾದದ್ದು. ಇದರಲ್ಲಿ ಬರುವ ಸ್ವಾರಸ್ಯಕರ ಸಂಗತಿಗಳು, ಸಂಭಾಷಣೆಗಳು ನಗೆಯುಕ್ಕಿಸುತ್ತವೆ.

ಒಂದೊಂದು ಅಧ್ಯಾಯಕ್ಕಿರುವ ಹೆಸರುಗಳೇ ಕುತೂಹಲಕರವಾಗಿದ್ದು ಓದುಗರನ್ನು ಸೆಳೆಯುತ್ತದೆ.

(ಉ.ದಾ-ಮಂಗಮಾಯಕಲೆ)

ತಮಿಳರ ಉಚ್ಚಾರಣಾ ಶೈಲಿ, ಸೀಮಿತ ಅಕ್ಷರಗಳಿಂದುಂಟಾಗುವ ಪ್ರಮಾದಗಳನ್ನು ಚೆನ್ನಾಗಿ ವಿವರಿಸಿದ್ದಾರೆ.

ತಮಿಳಿನಲ್ಲೇ ಎಲ್ಲದರ ಮೂಲವನ್ನು ಹುಡುಕುವ ಮತ್ತು ಅದರ ಪ್ರಾಚೀನತೆಯ ಕುರಿತಾದ ತಮಿಳರ ಭ್ರಮೆಗಳನ್ನು ಸ್ವಾಮಿಯವರು ಸಾಧಾರವಾಗಿ ನಮ್ಮೆದುರು ತೆರೆದಿಡುತ್ತಾರೆ.

ವೀರ ತಮಿಳರು ವಿಶ್ವವಿದ್ಯಾಲಯಗಳಲ್ಲಿ ಸುಲಭವಾಗಿ p.h.d ಪಡೆಯುವ ರೀತಿ ಅದರ ವಿಷಯಗಳು

ಲೇಖನ ವರ್ಗ (Category): 

ಚ.ಹ.ರಘುನಾಥರ 'ರಾಗಿಮುದ್ದೆ'-ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರದ ಬೆಡಗು

field_vote: 
Average: 3.7 (3 votes)
To prevent automated spam submissions leave this field empty.

ದೇಸೀತನದ ಘಮಲಿಗೆ ಆಧುನಿಕತೆಯ ಬಡಿವಾರ

ಚ. ಹ. ರಘುನಾಥರ ಬಿಡಿ ಬರಹಗಳನ್ನು ಓದಿದಾಗೆಲ್ಲಾ ಅವರೊಬ್ಬ ಸಾಹಿತ್ಯದ ವಿನಮ್ರ ವಿದ್ಯಾರ್ಥಿಯೆಂದು ಮತ್ತೆ ಮತ್ತೆ ಮನದಟ್ಟಾಗುತ್ತದೆ. ಸೂಕ್ಷ್ಮ ಮನಸ್ಸಿನ ಅಂತರ್ಮುಖೀ ವ್ಯಕ್ತಿತ್ವವೊಂದು ಸುತ್ತಣ ವಿವರಗಳನ್ನು, ಘಟನೆಗಳನ್ನು ಗಮನಿಸಿದ, ಗ್ರಹಿಸಿದ ಮತ್ತವುಗಳನ್ನು ಅತಿ ವಿಶಿಷ್ಟತೆಯಿಂದ ಬರಹಗಳನ್ನಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ. ಈಗಾಗಲೇ ಕವಿಯಾಗಿ, ಕಥೆಗಾರನಾಗಿ ಹೊಸ ಪೀಳಿಗೆಯ ಲೇಖಕರ ನಡುವೆ ತಮ್ಮದೇ ಛಾಪನ್ನಿರಿಸಿಕೊಂಡಿರುವ ರಘುನಾಥರ ಪ್ರಬಂಧ ಸಂಕಲನ " ರಾಗಿಮುದ್ದೆ" ದೇಸೀತನದ ಘಮಲನ್ನು ನೆನಪಿಸುತ್ತಲೇ ಆಧುನಿಕ ಬಡಿವಾರಗಳನ್ನು ಅಣಕಿಸುತ್ತದೆ, ವಿಮರ್ಶಿಸುತ್ತದೆ.

ಆತ್ಮೀಯತೆಯಿಂದ ನೇರವಾಗಿ ಸಹಜವಾಗಿ ಸಂಕೋಚಗಳಿಲ್ಲದೆ ತಮಗನಿಸಿದ್ದನ್ನು ದಿಟವಾಗಿ ಹೇಳುವುದು ಈ ಎಲ್ಲಾ ಪ್ರಬಂಧಗಳ ಮೂಲ ಗುಣ. ಗ್ರಾಮೀಣ ಬದುಕನ್ನು ಚಿತ್ರಿಸುತ್ತಲೇ ನಗರ ಜೀವನದ ತಲ್ಲಣಗಳನ್ನು ತೆರೆದಿಡುವ ರಘುನಾಥರ ಶೈಲಿ ಪ್ರಿಯವಾಗುತ್ತದೆ. ಸೂಕ್ಷ್ಮ ಮನಸ್ಸೊಂದು ಬದುಕನ್ನು ಅರಿಯುವ ಪ್ರಯತ್ನ ಇಲ್ಲಿನ ಪ್ರಬಂಧಗಳಲ್ಲಿ ಢಾಳಾಗಿದೆ. ಲೇಖಕನ ಸ್ವಂತ ಅನುಭವದ ಸ್ಪರ್ಶ ಈರೀತಿಯ ಬರಹಗಳಲ್ಲಿಲ್ಲದೇ ಹೋದಲ್ಲಿ ಅವು ಹೈಸ್ಕೂಲಿನ ಚರ್ಚಾಸ್ಪರ್ಧೆಯ ಭಾಷಣಗಳಾಗಿಬಿಡುತ್ತವೆ ಎನ್ನುವ ಅರಿವು ಅವರಿಗೆ ಗೊತ್ತಿದೆ. ಹಾಗಾಗಿಯೆ "ಅಧರಂ ಮಧುರಂ" ನಂತಹ ಕಾಮನ್ ಹ್ಯಾಂಗೋವರ್‌ನಲ್ಲಿ ಮಿಡಿಯುತ್ತಲೇ ಅಮೆಝಾನ್ ಕಾಡುಗಳಲ್ಲೂ ಹಲ್ಲು ತೊಳೆಸಿಕೊಳ್ಳಬಲ್ಲರು! ಮುಂಜಾನೆಯ "ಯಾತ್ರೆ" ಯ ಚಿತ್ರಗಳನ್ನು ಕಣ್ಮುಂದೆ ನಿಲ್ಲಿಸಬಲ್ಲಂತೆಯೇ ಚಂದಿರನನ್ನು ಕಂಬ ಕಂಬಗಳಿಗೆ ನೇಣು ಹಾಕಬಲ್ಲರು. ಜಾತ್ರೆಯ ಕಾಮನಬಿಲ್ಲು ಬಿಡಿಸಿಡುತ್ತಲೇ ಗುಬ್ಬಿಗಳಿಗೆ ಮನೆಯನ್ನೂ ಕಟ್ಟಿಕೊಡಬಲ್ಲವರು-ಚ.ಹ.ರಘುನಾಧ.

ಲೇಖನ ವರ್ಗ (Category): 

'ಯೇಗ್ದಾಗೆಲ್ಲಾ ಐತೆ' --ನೆಚ್ಚು ಮೂಡಿದ ಬಗೆ

field_vote: 
Average: 4.5 (2 votes)
To prevent automated spam submissions leave this field empty.

'ಬೆಳಗೆರೆ ಕೃಷ್ಣಶಾಸ್ತ್ರಿ'ಗಳು ಬರೆದಿರುವ ಅವರ ಸ್ವಾನುಭವದ ಒಂದು ಕಥನ- 'ಯೇಗ್ದಾಗೆಲ್ಲಾ ಐತೆ'. 'ಮುಕುಂದೂರು ಸ್ವಾಮಿ'ಗಳ ನಿತ್ಯ ಜೀವನದ ತಂತುಗಳನ್ನು ತಮ್ಮ ಅನುಭವಗಳೊಂದಿಗೆ ಹೇಳುತ್ತಾ ಹೋಗುವ ರೀತಿ ನಿಜಕ್ಕೂ ಅಪ್ಯಾಯಮಾನವಾದುದು. ಕನ್ನಡ ಆಧ್ಯಾತ್ಮಿಕ ರಂಗದಲ್ಲಿ ತಮ್ಮದೇ ಆದ ಸ್ಥಾನವನ್ನು ಹೊಂದಿರುವ ಕೃಷ್ಣಶಾಸ್ತ್ರಿಗಳು ಪ್ರಸ್ತುತ ಬರಹದಲ್ಲಿ ಯಾವುದೋ ಒಂದು ಅರಿಯದ ಲೋಕಕ್ಕೆ ನಮ್ಮನ್ನು ಕರೆದುಕೊಂಡುಹೋಗುತ್ತಾರೆ. ಈ ಅನುಭವವನ್ನು ಪಡೆಯಲೋಸುಗವಾದರೂ ಪ್ರತಿಯೊಬ್ಬರೂ ಇದನ್ನು ಓದಲೇಬೇಕಿದೆ. ನಾನು 'ಅಶಿಸ್ತಿನಿಂದ ಬದುಕಿರಿ ಆರೋಗ್ಯವಾಗಿರಿ' ಎಂಬ ಪುಸ್ತಕವನ್ನು ಓದುವಾಗ ಕೃಷ್ಣಶಾಸ್ತ್ರಿಗಳ 'ಯೇಗ್ದಾಗೆಲ್ಲಾ ಐತೆ' ಪುಸ್ತಕದ ಬಗೆಗೆ ಉಲ್ಲೇಖವಿದುದ್ದನು ಕಂಡು ಮನೆಯಲ್ಲಿಯೇ ಇದ್ದೂ ನಾನಿನ್ನು ಓದದಿದ್ದ ಪುಸ್ತಕದ ಬಗೆಗೆ ಗಮನ ಹರಿಯಿತು.ಮುಂಜಾನೆ ಓದಲು ಕುಳಿತವಳಿಗೆ ಅದನ್ನು ಓದಿ ಮುಗಿಸುವವರೆಗೂ ಯಾವುದೇ ವಿಷಯದ ಮೇಲೂ ಗಮನವಿಲ್ಲದ್ದಂತು ನಿಜ. ನನ್ನ ಕೈಲಿದ್ದದ್ದು 2007ರಲ್ಲಿ 7ನೆಯ ಮುದ್ರಣವನ್ನು ಕಂಡಿದ್ದ ಪುಸ್ತಕ. 1994ರಿಂದ 2007ರ ಅಂತರದಲ್ಲಿ 7 ಮುದ್ರಣಗಳನ್ನು ಕಂಡಿರುವ ಇದರ ಪ್ರಾಮುಖ್ಯವನ್ನು ನಾವು ಓದಿಯೇ ಅರಿಯಬೇಕು.

ಲೇಖನ ವರ್ಗ (Category): 

'ಪರ್ವ' -ಕುತೂಹಲಗಳಿಗೊಂದು ಆಶಾದಾಯಕ ಉತ್ತರ

field_vote: 
Average: 4.5 (2 votes)
To prevent automated spam submissions leave this field empty.

ನಾನು ಈ ಮುಂಚೆ ಭೈರಪ್ಪನವರ ಕಾದಂಬರಿಗಳನ್ನು ಯಾಕೋ ಹೆಚ್ಚು ಓದಿಯೇ ಇಲ್ಲ. ಅದರಿಂದ ನಾನು ಎಂತಹ ತಪ್ಪು ಮಾಡಿದ್ದೆನೆಂದು ನನಗೆ ಇತ್ತೀಚೆಗೆ ತಿಳಿಯಹತ್ತಿತ್ತು. ಅವರ ಆವರಣ,ದಾಟು,ಗೃಹಭಂಗ ಕಾದಂಬರಿಗಳನ್ನು ಅವು ದೊರೆತಾಗಿನಿಂದ ಒಂದೇ ಉಸಿರಿಗೆ ಓದಿ ಮುಗಿಸಿದ್ದೆ. ಆದರೆ ಭೈರಪ್ಪನವರ 'ಪರ್ವ' ಕಾದಂಬರಿ ಮನೆಯಲ್ಲೆ ಇದ್ದರೂ ಆಮೇಲೆ ಓದಿದರಾಯ್ತೆಂಬ ಉದಾಸೀನ. ಅವರ ಕಾದಂಬರಿಗಳ ಮೇಲೆ ಒಲವು ಬೆಳೆದಿದ್ದರೂ,ಇದು ಮಹಾಭಾರತದ ಕಥೆಯಲ್ಲವೇ ಓದೋಣ ಎಂಬ ಮುಂದೂಡುವಿಕೆಯ ನಂತರ ಕಳೆದ ವಾರ ಅದನ್ನು ಕೈಗೆ ತೆಗೆದುಕೊಂಡೆ. ಕಾದಂಬರಿಯ ಆರಂಭ ಶಲ್ಯ ಮತ್ತು ಆತನ ಮೊಮ್ಮಗಳ ಮಾತಿನೊಂದಿಗೆ ಆಗುವುದರೊಂದಿಗೆ ನಾನೂ ಅಲ್ಲೇ ಕುಳಿತು ಕುತೂಹಲದಿಂದ ಆಲಿಸುತ್ತಿರುವವಳ ಹಾಗೆ ನಾನೂ ಕೆಲವು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದು ಸಮಾಧಾನಗೊಂಡು ಮುಂದುವರೆದಂತೆ ಓದತೊಡಗಿದೆ.

ಲೇಖನ ವರ್ಗ (Category): 

ಸಾಹಸಿ ಪಯಣಿಗರ ನೂರೆಂಟು ಗಂಟುಗಳು

field_vote: 
Average: 5 (1 vote)
To prevent automated spam submissions leave this field empty.

ಮನುಷ್ಯನ ಬದುಕೇ ಒಂದು ಪಯಣ. ಇದು ನಿರಂತರವೂ ಹೌದು. ಅವನು ತನ್ನ ಪಯಣದಲ್ಲಿ ಎದುರಿಸ ಬೇಕಾದ ಮತ್ತು ಎದುರಾಗಬಹುದಾದ ಸಂಗತಿಗಳನ್ನು ತಿಳಿದುಕೊಂಡು ತನ್ನ ಪಯಣದ ದಾರಿಯನ್ನು ಸುಗಮಗೊಳಿಸಲು ಪ್ರಯತ್ನಿಸುತ್ತಾನೆ. ಆದರೆ ಈ ಪಯಣ ಅವನ ಅನುಭವದ ಮೂಟೆಯಾಗಬಹುದು ಅಥವಾ ಮುಂದಿನ ಪೀಳಿಗೆಯ ಊಹನೆಯೂ ಆಗಿರಬಹುದು. ಇಂತಹ ಅದೆಷ್ಟೋ ಕಥನಕಗಳು ನಮಗೆ ದೊರೆಯುತ್ತವೆ. ಅದರಲ್ಲೂ ಪಾಶ್ಚಾತ್ಯರು ಸಾಹಸಿಗಳು ಮತ್ತು ಧೈರ್ಯಶಾಲಿಗಳು. ಅವರ ಒಂದೊಂದು ಸಾಹಸಗಳೂ ಹೊಸ ಹೊಸ ಆವಿಷ್ಕಾರಗಳಿಗೆ ನಾಂದಿಯೂ ಹೌದು. ಅಂತಹ ಅನುಭವ ಕಥನಗಳು ಓದುಗನಲ್ಲಿಯೂ ಕುತೂಹಲ ಮೂಡಿಸಿ, ಹೊಸದೊಂದು ಅನುಭವವನ್ನು ಬಿಚ್ಚಿಡುತ್ತವೆ. ಅಂತಹ ಪಯಣದ, ಅದರಲ್ಲೂ ಸಮುದ್ರಯಾನದ ಪ್ರಯಾಣವನ್ನು `ಪಶ್ಚಿಮದ ಪಯಣಿಗರು' ಅನ್ನುವ ಪುಸ್ತಕದ ಮೂಲಕ ಕನ್ನಡಿಗರಿಗಾಗಿ ಅನುವಾದಿಸಿರುವವರು ಬಿ. ಎಸ್.

ಲೇಖನ ವರ್ಗ (Category): 

’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ

field_vote: 
No votes yet
To prevent automated spam submissions leave this field empty.

’ಹಳ್ಳ ಬಂತು ಹಳ್ಳ’: ಇತಿಹಾಸದ ಹಿಂದಿನ ಕಥನ ಒಂದು ಕಾಲದ ಇತಿಹಾಸವನ್ನು ತಿಳಿಯಲು ಆ ಕಾಲಕ್ಕೆ ಸಂಬಂಧಿಸಿದ ಇತಿಹಾಸ ಪುಸ್ತಕಗಳನ್ನಷ್ಟೇ ಓದಿದರೆ ಸಾಲದು. ಆ ತಿಳುವಳಿಕೆ ಅಪೂರ್ಣ ಮತ್ತು ಸೀಮಿತವಾದುದಾಗಿರುತ್ತದೆ. ಆ ಕಾಲದಲ್ಲಿ ಆಳಿದ್ದವರ ಮತ್ತು ಹೆಚ್ಚೆಂದರೆ, ಅವರ ವಿರುದ್ಧ ಪಾಳೆಯದವರ ದೃಷ್ಟಿಕೋನಗಳ ಮೂಲಕ ಅಥವಾ ಅವೆರಡರ ನಡುವಿನ ಸಂಘರ್ಷದಲ್ಲಿ ಮೂಡುವ ಬದುಕಿನ ಸ್ಥೂಲ ಚಿತ್ರವಷ್ಟೇ ಅಲ್ಲಿ ದೊರಕಬಹುದು. ಈಚಿನ ದಿನಗಳಲ್ಲಿ ಇತಿಹಾಸವೆಂಬುದು ಸಾಹಿತ್ಯ, ಸಂಸ್ಕೃತಿ, ಸಮಾಜಶಾಸ್ತ್ರ ಇತ್ಯಾದಿ ನೆಲೆಗಳ ಒಂದು ಬಹುಶಿಸ್ತೀಯ ಅಧ್ಯಯನವಾಗಿ ಬೆಳೆಯುತ್ತಿರುವುದಾದರೂ, ಅದಕ್ಕಿನ್ನೂ ತಾನು ದಾಖಲಿಸುವ ಕಾಲಾವಧಿಯ ಮಾನವ ಸ್ಪಂದನೆಯ ಜೀವಂತ ಚಿತ್ರವನ್ನು ಕೊಡುವ ಶಕ್ತಿ ಸಂಪನ್ನವಾಗಿಲ್ಲ. ಬಹುಶಃ ಅದು ಅದರ ಉದ್ದೇಶವೂ ಆಗಿರಲಿಕ್ಕಿಲ್ಲ.

ಲೇಖನ ವರ್ಗ (Category): 

’ಭಕ್ತಾಷ್ಟಕ'- ಪರಮಪೂಜ್ಯ, ಶ್ರೀ. ವಿರಜಾನಂದ ಸರಸ್ವತಿ ಮಹರಾಜ್ ರವರ, ಭಗವದ್ಗೀತಾ-ಉಪನ್ಯಾಸಮಾಲೆಯ ಸಂಪಾದಿತ ಗ್ರಂಥ !

field_vote: 
No votes yet
To prevent automated spam submissions leave this field empty.

"ಭಕ್ತಾಷ್ಟಕ," ಪುಸ್ತಕದ ಸಂಪಾದಕ ಕರ್ತೃ, ಡಾ. ಶ್ರೀಪಾದ್ ರವರು, ಒಬ್ಬ ಭೌತಶಾಸ್ತ್ರದ ವಿದ್ಯಾರ್ಥಿ. ತಮ್ಮ ಪ್ರಮುಖ ಕೃಷಿ, ವಿಜ್ಞಾನವಾದಾಗ್ಯೂ ಪಾರಮಾರ್ಥದಲ್ಲಿ ವಿಶೇಷವಾದ ಆಸಕ್ತಿ, ಗೌರವ, ಹಾಗೂ ಒಲವುಳ್ಳವರು. ಇದಕ್ಕೆ ಅವರ ಮನೆತನದ ಪರಿಸರವೇ ಪ್ರಮುಖಕಾರಣ. ವಿಚಾರವಂತ ತಂದೆತಾಯಿ, ಅಜ್ಜ ಅಜ್ಜಿ, ಚಿಕ್ಕಪ್ಪ ಇವರುಗಳ ಆಶೀರ್ವಾದ ಹಾಗೂ ಜೀವನಶೈಲಿ, ಲೇಖಕರ ಹೃದಯದಲ್ಲಿ ಎಲ್ಲೋ ಒಂದು ಕಡೆ ಅಚ್ಚಾಗಿರುವ ಕಾರಣದಿಂದಲೇ, ಶ್ರೀಯವರ ಉಪನ್ಯಾಸಗಳನ್ನು ಆಲಿಸುತ್ತಿದ್ದಂತೆಯೇ ಆ ಸಂಸ್ಕಾರ ಅವರಲ್ಲಿ ಜಾಗೃತವಾಗಿ, ಈ ಒಂದು ಸತ್ಕಾರ್ಯಕ್ಕೆ ಎಡೆಮಾಡಿ ಕೊಟ್ಟಿರುವುದು, ಅವರನ್ನು ತೀರಾ ಹತ್ತಿರದಿಂದ ಗಮನಿಸುತ್ತಿರುವ ನನ್ನ ಗಮನಕ್ಕೆ ಬರುತ್ತಿದೆ.

ಲೇಖನ ವರ್ಗ (Category): 

ಗಲಿವರ್ ಟ್ರಾವಲ್ಸ್ ನ ವಾಯೇಜ್ ಟು ಲಿಲ್ಲಿಪುಟ್ ನಲ್ಲಿನ ಟ್ರಿವಿಯ

field_vote: 
No votes yet
To prevent automated spam submissions leave this field empty.

ಲೇಖಕನ ಬಗ್ಗೆ – ಜೋನಾಥನ್ ಸ್ವಿಫ್ಟ್ ಒಬ್ಬ ಹದಿನೇಳನೇ ಶತಮಾನದ ವಿಭಿನ್ನ ವ್ಯಕ್ತಿ. ಈತ ಜನರನ್ನು ಒಂದು ಒಂದು ಪಂಗಡವಾಗ್ ಪ್ರೀತಿಸಿದ, ವ್ಯಕ್ತಿಗತವಾಗಿ ದ್ವೇಷಿಸಿದ. ಮಾನವ ಸ್ವಾತಂತ್ರ್ಯದ ಪ್ರತಿಪಾದಕನಾಗಿದ್ದ ಜೋನಾಥನ್ ಒಬ್ಬ ಸಾಹಸಿ ಹಾಗೂ ವಿಕ್ಶಿಪ್ತ ಮನದ ವ್ಯಕ್ತಿ. ತನ್ನ ಕಷ್ಟ ಜೀವನದ ಮಧ್ಯೆ ಹಲವರಲ್ಲಿ ಕೆಲಸ ಮಾಡಿ ಮಾನವ ಪ್ರವೃತ್ತಿ, ಅಭ್ಯಾಸ, ಅಭಿವ್ಯಕ್ತಿಗಳನ್ನು ತಿಳಿದುಕೊಂಡ. ತನ್ನ ಗಲಿವರ್ ಟ್ರಾವಲ್ಸ್ ನಿಂದ ಲೋಕಪ್ರಸಿದ್ಧನಾದ. ರಾಜಕೀಯ ಚಾತುರ್ಯ ಹೊಂದಿದ್ದ ಅವನು ಸ್ಕಾಟ್ಲಾಂಡ್ ನ ಅನೇಕ ಗೆಲುವಿಗೂ ಕಾರಣೀಕರ್ತನಾದ. ಇಬ್ಬರೊಂದಿಗೆ ಸಂಸಾರ ಅನುಭವಿಸಿದ – ಅವರಲ್ಲಿ ಒಬ್ಬಳನ್ನು ಪ್ರೀತಿಸಿದ. ಆದರೆ ಜೀವನದ ಕೊನೆಯಲ್ಲಿ ಭಯ, ಒಂಟಿತನ ಅನುಭವಿಸಿ ತನ್ನ ೭೬ನೇ ವಯಸ್ಸಿನಲ್ಲಿ ಮಡಿದ.

ಲೇಖನ ವರ್ಗ (Category): 

ನಾನು ಕಂಡಂತೆ ’ಜುಗಾರಿ ಕ್ರಾಸ್’

field_vote: 
Average: 5 (1 vote)
To prevent automated spam submissions leave this field empty.

ಕನ್ನಡದ ಶ್ರೇಷ್ಠ ಬರಹಗಾರರಲ್ಲಿ ಪೂರ್ಣಚಂದ್ರ ತೇಜಸ್ವಿಯವರು ಒಬ್ಬರು. ಅವರ ಪ್ರತಿಯೊಂದು ಕೃತಿಗಳು ವಿಶಿಷ್ಟವಾದವುಗಳು. ನಾನು ಅವರ ಜುಗಾರಿ ಕ್ರಾಸ್ ಕಾದಂಬರಿಯನ್ನು ಇತ್ತೀಚಿಗೆ ಪುನಃ ಓದಿದೆ. ಈ ಕಾದಂಬರಿ ಕಾಣಬರುವ ವಿಚಾರಗಳನ್ನು ನನಗೆ ಅನಿಸಿದ ಮಟ್ಟಿಗೆ ಇಲ್ಲಿ ಹಂಚಿಕೊಳ್ಳುತ್ತೇನೆ.

ಲೇಖನ ವರ್ಗ (Category): 

ನರೇಂದ್ರ ಮೋಡಿ - ಯಾರೂ ತುಳಿಯದ ಹಾದಿ

field_vote: 
Average: 2 (1 vote)
To prevent automated spam submissions leave this field empty.

ಮೊನ್ನೆ ಸ್ನೇಹಿತರೊಬ್ಬರು ಪ್ರತಾಪ ಸಿಂಹರು ಬರೆದಿರುವ ಈ ಪುಸ್ತಕದ ಲಿಂಕು ಕೊಟ್ಟರು. ಅಲ್ಪ ಕಾಲದಲ್ಲಿ ತಮ್ಮ ಸಾಧನೆಯಿಂದ ಬಹಳಷ್ಟು ಜನಪ್ರಿಯತೆ ಗಳಿಸಿದ್ದ ಈ ವ್ಯಕ್ತಿಯಬಗ್ಗೆ ತಿಳಿದುಕೊಳ್ಳುವ ಕುತೂಹಲ ನನಗೂ ಇತ್ತು. ಅವರ ಜೀವನದ ಬಗ್ಗೆ ಬರೆದಿರುವುದನ್ನು ಓದುತ್ತಾ ಹೋದಂತೆ ಕುತೂಹಲ ಮೂಡಿಸುತ್ತದೆ. .

ಲೇಖನ ವರ್ಗ (Category): 

ಅಶೋಕಹೆಗಡೆ ಕಥಾಲೋಕ - ಒಳ್ಳೆಯವನು

field_vote: 
No votes yet
To prevent automated spam submissions leave this field empty.

"ಧಾರವಾಡದ ಬೀದಿಯಲ್ಲಿ, ಒಂದು ಕೈಯಲ್ಲಿ ಚೀಲ ಮತ್ತೊಂದು ಕೈಯಲ್ಲಿ ಮಗುವನ್ನು ಹಿಡಿದು, ಗಿರಾಕಿಗಾಗಿ ಕಾಯುತ್ತ ನಿಂತ ದೇವತೆ; ಬದಲಾದ ಆರ್ಥಿಕ ಸ್ಥಿತಿಯಲ್ಲಿ ಬದುಕಿನ ಹೋರಾಟ ನಡೆಸುವ ಕುಟುಂಬ; ದಟ್ಟ ಅಡವಿಯನ್ನು ಬರಿದಾಗಿಸುತ್ತಿರುವ ಲಾರಿಗಳು; ಬಾರ್‌ನಲ್ಲಿ, ಡ್ಯಾನ್ಸ್ ಮಾಡುತ್ತ ಸಹಜ ಬದುಕಿಗೆ ಹಂಬಲಿಸುವ ಹುಡುಗಿಯರು; ಇವರೆಲ್ಲರ ಮಧ್ಯವೇ ಒಂದು ಕೈಯಲ್ಲಿ ತಂಗಿಯನ್ನು, ಮತ್ತೊಂದು ಕೈಯಲ್ಲಿ ತಮ್ಮನನ್ನು ಹಿಡಿದುಕೊಂಡು, ಧೀರೋದಾತ್ತ ಹೆಜ್ಜೆ ಇಟ್ಟು ನಡೆದುಹೋದ ಬಾಲಕ; ಪಕ್ಕದಲ್ಲಿಯೆ ಹಾಲಿಲ್ಲದೆ ಮಲಗಿರುವ ಪುಟ್ಟ ಮಗು, ಅದನ್ನ ಕಂಡರೂ ಕಾಣದಂತೆ ಸರಿದು ಹೋದ ನನ್ನ ಸಣ್ಣತನ; ಪತ್ರಗಳಲ್ಲಿಯೂ ದೂರವಾಗಿಯೆ ಉಳಿಯುವ ಸಂಬಂಧದ ನಂಟು; ಪ್ರತಿಯೊಂದರಲ್ಲಿಯೂ ಸಾಕ್ಷಿಗಾಗಿ ಹುಡುಕುವ ವ್ಯವಸ್ಥೆ; ತಲೆತಲಾಂತರದಿಂದ ಬಂದ ಅಪ್ಪ ಮಗನ ನಡುವಿನ ಬಿರುಕು; ಎಲ್ಲರ ನೋವು, ನಲಿವು, ಸಡಗರ ಮತ್ತು ಇದೆಲ್ಲದರ ಮಧ್ಯವೂ ಅರಳುವ ಬದುಕಿನ ಮಳೆಯ ಹಾತೆಯ ಒಂದು ಕ್ಷಣವನ್ನ ಹಿಡಿದಿಡಲು ಮೀಸಲಿಟ್ಟ ಈ ಕ್ಷಣವೊಂದು ನಿನ್ನನ್ನು ತಲುಪುವಲ್ಲಿ ಮಾತ್ರ ಧನ್ಯವಾಗಬಲ್ಲದು"

ಲೇಖನ ವರ್ಗ (Category): 

ಅಶೋಕ ಹೆಗಡೆ ಕಥಾಲೋಕ - ಹಸಿರು ಸೀರೆ

field_vote: 
No votes yet
To prevent automated spam submissions leave this field empty.

ಅಶೋಕ ಹೆಗಡೆಯವರ ಮೂರನೆಯ ಕಥಾಸಂಕಲನ, "ವಾಸನೆ, ಶಬ್ದ, ಬಣ್ಣ ಇತ್ಯಾದಿ" ಹೊರಬಂದಿದೆ.

ಲೇಖನ ವರ್ಗ (Category): 

ಜಯಂತ್ ಕಾಯ್ಕಿಣಿಯವರ ಕಥಾಲೋಕ - ಬಣ್ಣದ ಕಾಲು

field_vote: 
Average: 5 (1 vote)
To prevent automated spam submissions leave this field empty.

ಗಾಳಿ ಮರದ ನೆಳಲು, ಸ್ವಪ್ನದೋಷ, ಟ್ರೈಸಿಕಲ್, ಬಿಡು ಬಿಡು ನಿನ್ನಯ, ಚೌತಿ ಚಂದ್ರ, ಬಣ್ಣದ ಕಾಲು, ಸೇವಂತಿ ಹೂವಿನ ಟ್ರಕ್ಕು ಮತ್ತು ಅಪರೂಪ ಕತೆಗಳು ಬೇರೆ ಬೇರೆ ಕಾರಣಗಳಿಗಾಗಿ ಮುಖ್ಯವಾಗುತ್ತವೆ.

ಲೇಖನ ವರ್ಗ (Category): 

ಜಯಂತ ಕಾಯ್ಕಿಣಿಯವರ ಕಥಾಲೋಕ - ತೂಫಾನ್‌ಮೇಲ್

field_vote: 
No votes yet
To prevent automated spam submissions leave this field empty.

ರೂಪಕದ ಭಾಷೆಯವರೆಂದೇ ಗುರುತಿಸಲ್ಪಡುವ, ಹಲವಾರು ಹೃದ್ಯ ಕತೆಗಳನ್ನು ಕನ್ನಡಕ್ಕೆ ನೀಡಿರುವ, ಅನನ್ಯ ರೀತಿಯಲ್ಲಿ ಕವಿಭಾವ ಪುನರ್‌ಸೃಷ್ಟಿ ಮಾಡಬಲ್ಲ, ಆಪ್ತ ನುಡಿಚಿತ್ರಗಳ ಕುಶಲ ಕಲೆಗಾರ ಜಯಂತ್ ಕಾಯ್ಕಿಣಿ ಜನ್ಮತಃ ಕವಿ. ಅವರ ಕತೆಗಳೂ, `ಬೊಗಸೆಯಲ್ಲಿ ಮಳೆ'ಯಂಥ ಅಂಕಣಗಳೂ, ಎಲ್ಲವೂ ಈ ಅರ್ಥದಲ್ಲಿ ಕವನಗಳೇ. ಆದಾಗ್ಯೂ, ಜಯಂತ್ ಇವತ್ತಿನ ಕನ್ನಡ ಸಾಹಿತ್ಯ ಪರಿಸರದಲ್ಲಿ ಬಹಳ ಮುಖ್ಯವಾಗುವುದು ಅವರಿಗೆ ಮಾನವೀಯತೆಯಲ್ಲಿ, ಮನುಷ್ಯನ ಹೃದಯವಂತಿಕೆಯಲ್ಲಿ, ಮನುಷ್ಯ ಸಂಬಂಧಗಳಲ್ಲಿ, ಮಾನವ ಪ್ರೀತಿಯಲ್ಲಿ ಮತ್ತು ಶಿಶುಸಹಜ ಮುಗ್ಧತೆಯಲ್ಲಿ ಇರುವ ಅಚಲವಾದ ನಂಬುಗೆಗಾಗಿ. ಅವರ ಸಾಹಿತ್ಯದ ಮೂಲಸೆಲೆಯೇ ಈ ಪ್ರೀತಿ ಮತ್ತು ಮನೋವೈಶಾಲ್ಯ ಎನಿಸುತ್ತದೆ.

ಲೇಖನ ವರ್ಗ (Category): 

ಮನಸುಖರಾಯನ ಮನೋಲೋಕ

field_vote: 
No votes yet
To prevent automated spam submissions leave this field empty.

ಶ್ರೀನಿವಾಸ ವೈದ್ಯರು ಇವನ್ನೆಲ್ಲ ಕಥಾರೂಪಿ ಹರಟೆ, ಹರಟೆ ರೂಪಿ ವ್ಯಕ್ತಿ ಚಿತ್ರಣ ಅಥವಾ ಶುದ್ಧ ತಲೆಹರಟೆ ರೂಪಿ ಹರಟೆ ಎಂದು ಕರೆದಿದ್ದಾರೆ. ಅಂದರೆ ಎಲ್ಲದರಲ್ಲೂ ಹರಟೆಯ ಅಂಶ ಸ್ವಲ್ಪ ಹೆಚ್ಚೇ ಇದ್ದರೆ ಅದು ದೋಷವಲ್ಲ, ಗುಣ ಎಂದೇ ಪರಿಗಣಿಸುವುದು ಅನಿವಾರ್ಯ. ಆದರೆ ಇಲ್ಲಿ ಬರುವ ಎಲ್ಲ ವ್ಯಕ್ತಿಗಳೂ ಘಟನೆಗಳೂ ಕಾಲ್ಪನಿಕ. ಈ ಸ್ಥೂಲ ಪರಿಚಯದೊಂದಿಗೇ ಇಲ್ಲಿನ ಕತೆಗಳನ್ನು ಪ್ರವೇಶಿಸಿದರೆ ಗುಂಗು ಹತ್ತಿಸುವ ವಿವರಗಳು, ಹೃದಯದ ಭಾವಕ್ಕೆ ಮೆದುಳಿನ ತರ್ಕದ ಸ್ಪರ್ಶ, ಹಾಗೆ ಲಾಜಿಕ್‌ಗೆ ಭಾವದ ಸಂವೇದನೆ, ಹೊಸದೇ ಆದ ಬಿಂಬ ಪ್ರತಿಬಿಂಬಗಳ ಕೊಲಾಜ್ ಹುಟ್ಟಿಸುವ ಒಂದು ವಿಶಿಷ್ಟ ಲಯವಿನ್ಯಾಸ ಎದುರಾಗುತ್ತದೆ. ಮನಸ್ಸು ಉಲ್ಲಾಸಗೊಳ್ಳುತ್ತ, ಚುರುಕುಗೊಳ್ಳುತ್ತ, ಮುದುಡುತ್ತ, ಅರಳುತ್ತ ಹೊಸ ಲೋಕವೊಂದನ್ನು ತಡಕುತ್ತದೆ.

ಲೇಖನ ವರ್ಗ (Category): 

ವಿವೇಕ ಶಾನಭಾಗರ `ಒಂದು ಬದಿ ಕಡಲು'

field_vote: 
No votes yet
To prevent automated spam submissions leave this field empty.

"ಒಂದು ಬದಿ ಸಹ್ಯಾದ್ರಿ, ಒಂದು ಬದಿ ಕಡಲು

ನಡು ಮಧ್ಯದಲಿ ಅಡಕೆ ತೆಂಗುಗಳ ಮಡಲು

ಸಿರಿಗನ್ನಡದ ಚಪ್ಪರವೆ ನನ್ನ ಜಿಲ್ಲೆ

ಇಲ್ಲಿಯೇ ಇನ್ನೊಮ್ಮೆ ಹುಟ್ಟುವೆನು ನಲ್ಲೆ "

ಲೇಖನ ವರ್ಗ (Category): 

ಗಾಂಧಿ ಎಂಬ ರೂಪಕ, ಜೀವನವೆಂಬ ನಾಟಕ!

field_vote: 
No votes yet
To prevent automated spam submissions leave this field empty.

ಬಾಳಾಸಾಹೇಬ ಲೋಕಾಪುರ ಅವರು ತಮ್ಮ `ಹುತ್ತ' ಕಾದಂಬರಿಯ ಮೂಲಕ ಬದುಕಿನ ಹಲವು ಮೂಲಭೂತ ಪ್ರಶ್ನೆಗಳಿಗೆ ಮುಖಾಮುಖಿಯಾಗಿದ್ದಾರೆ ಮತ್ತು ತಮ್ಮ ಓದುಗನೂ ಅವುಗಳಿಗೆ ಮುಖಾಮುಖಿಯಾಗುವಂತೆ ಮಾಡಿದ್ದಾರೆ. ತುಂಬ ಪ್ರಾಮಾಣಿಕವಾದ ಬದುಕಿನ ಸತ್ಯದ ಶೋಧ ಇಲ್ಲಿದ್ದು ಕಾದಂಬರಿ ಓದಿನಾಚೆ ಒಂದು ಜಿಜ್ಞಾಸೆಯಾಗಿ ಓದುಗನೊಳಗೆ ಬೆಳೆಯುವ ಕಸು ಹೊಂದಿದೆ. ಅಷ್ಟೇ ಮಹತ್ವದ್ದಾಗಿ ಇದನ್ನು ಸಾಧಿಸುವಾಗ ಅವರು ಕಾದಂಬರಿ ಪ್ರಕಾರದ ಎಲ್ಲ ಅಂಶಗಳಿಗೂ ಸೂಕ್ತ ನ್ಯಾಯ ಸಲ್ಲಿಸಿರುವುದು ಕೂಡ ಗಮನಾರ್ಹವಾಗಿದೆ. ಇಲ್ಲಿನ ಭಾಷೆ, ವಿವರಗಳು ಕಟ್ಟಿಕೊಡುವ ಒಂದು ವಾತಾವರಣ, ಇವುಗಳಿಂದ ಅಲ್ಲಿನ ಬದುಕು ಜೀವಂತಗೊಳ್ಳುವ ಪರಿ ನಿಜಕ್ಕೂ ತುಂಬ ಸಹಜವಾಗಿ, ಲಾಲಿತ್ಯಪೂರ್ಣವಾಗಿ ಬಂದಿದೆ.

ಲೇಖನ ವರ್ಗ (Category): 

ಜುಂಪಾ ಲಾಹಿರಿಯವರ ಹೊಸ ಪುಸ್ತಕ

field_vote: 
No votes yet
To prevent automated spam submissions leave this field empty.

Unaccustomed Earth ಹೆಸರಿನ ನೀಳ್ಗಥೆಗಳ ಸಂಕಲನ ಹೊರಬಿದ್ದಿದೆ. ಮನುಷ್ಯ ಸಂಬಂಧಗಳು, ಅವನ ಭಾವನೆಗಳು ಕ್ರಮೇಣ ಅರ್ಥಕಳೆದುಕೊಳ್ಳುವುದನ್ನು, ಸಡಿಲಗೊಳ್ಳುವುದನ್ನು ಮೌನವಾದ ತಲ್ಲಣಗಳಲ್ಲಿ ಗುರುತಿಸುತ್ತಲೇ ಅವುಗಳಿಂದ ಆತ ಬಿಡುಗಡೆ ಪಡೆಯುವ ಹಂತದಲ್ಲಿ ಅಥವಾ ಬಿಡುಗಡೆ ಪಡೆದ ನಂತರ ಉಳಿಯುವ ಶಿಲ್ಕು ಏನಿದೆ ಅದರಲ್ಲಿ ಆ ಸಂಬಂಧಗಳ, ಭಾವನೆಗಳ ಪ್ರಾಮಾಣಿಕತೆಯನ್ನು ಅರಸುವ ಕತೆಗಳು, ಬೇರೆ ಹೊಸ ಸಂಬಂಧದ ಹುರುಪಿನ ಆಳದಲ್ಲಿ ಹಳೆಯ ಸಂಬಂಧದ ನೆರಳುಗಳನ್ನು ಕಾಣುವ ಕಥೆಗಳು, ನಡುವಯಸ್ಸಿನಲ್ಲಿ ಸಂಬಂಧಗಳು ಪಡೆದುಕೊಂಡ ಅನಿವಾರ್ಯ ಆಕಾರ ವಿಕಾರಗಳನ್ನು ಮೌನವಾಗಿ ಚಿತ್ರಿಸುತ್ತ ಅವರ ಅಥವಾ ಎಳೆಯರ ಹೊಸ ಸಂಬಂಧಗಳನ್ನು ನಿರೂಪಿಸುವ ಕಥೆಗಳು ಇಲ್ಲಿವೆ. ಹೆಚ್ಚಾಗಿ ಇಲ್ಲಿ ಗಂಡು ಹೆಣ್ಣು ಸಂಬಂಧಗಳೇ ಪ್ರಾಮುಖ್ಯ ಪಡೆದಂತಿದೆಯಾದರೂ ತಂದೆ ಮಗಳು, ತಾಯಿ ಮಗ, ಅಕ್ಕ ತಮ್ಮ, ಕೇವಲ ಇಬ್ಬರು ಬಾಡಿಗೆದಾರರ ನಡುವಿನ ಸಂಬಂಧದ ಎಳೆಗಳು ಕೂಡ ಸಮಾನಾಂತರ ಗತಿಯಲ್ಲಿ ಕತೆಯ ಇನ್ನೊಂದು ಪಾತಳಿಯಲ್ಲಿ ತನ್ನ ಹುಟ್ಟು, ಬೆಳವಣಿಗೆ, ಕುಸಿತ ಅಥವಾ ಮಿಡಿತ ದಾಖಲಿಸುತ್ತ ಹೋಗುತ್ತವೆ ಎಂಬುದನ್ನು ಗಮನಿಸಬಹುದು. ಈ ಎಲ್ಲ ಕತೆಗಳು ಅಮೆರಿಕೆಯಲ್ಲಿ ಅಥವಾ ವಿದೇಶದಲ್ಲಿ ನಡೆಯುತ್ತವೆ, ಭಾರತದ ಬಂಗಾಳಿ ನೆರಳು ಎಷ್ಟೇ ಗಾಢವಾಗಿ ಹರಡಿದ್ದರು ಕತೆಯ ನಡೆ ಭಾರತದ ನೆಲದಲ್ಲಿಲ್ಲ.

 

ಲೇಖನ ವರ್ಗ (Category): 

ಚೀನಾದ ಜನಸಾಮಾನ್ಯರು

field_vote: 
No votes yet
To prevent automated spam submissions leave this field empty.

ನಮ್ಮ ಅತ್ಯುತ್ತಮ ಕಥೆಗಾರರಲ್ಲಿ ಒಬ್ಬರೆಂದು ಈಗಾಗಲೇ ಗುರುತಿಸಿಕೊಂಡಿರುವ ಗೋಪಾಲಕೃಷ್ಣ ಪೈಯವರು ನಿಜಕ್ಕೂ ಕೆಲವು ಒಳ್ಳೊಳ್ಳೆಯ ಚೀನೀ ಕಥೆಗಳನ್ನು ಆಯ್ದು ಅನುವಾದಿಸಿಕೊಟ್ಟಿದ್ದಾರೆ. ಈ ಸಂಕಲನದಲ್ಲಿರುವ ಒಟ್ಟು ಹದಿನಾರು ಕಥೆಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದ ಎಲ್ಲಾ ಕಥೆಗಳೂ ತಮ್ಮದೇ ಆದ ಒಂದು ಗುಂಗು ಆವರಿಸುವಂತೆ ಮಾಡುವಲ್ಲಿ, ನಮ್ಮ ಒಳಗನ್ನು ತಟ್ಟುವಲ್ಲಿ, ಮತ್ತೆ ನೆನೆದಾಗ ವಾಹ್ ಅನಿಸುವಂತೆ ಮಾಡುವಲ್ಲಿ ಸಫಲವಾಗಿವೆ. ಈ ಎಲ್ಲ ಅಂಶಗಳಿಗಾಗಿ ನಾವು ಮೊದಲು ಅಭಿನಂದಿಸಬೇಕಾದ್ದು ಪೈಯವರನ್ನೆ. ಅವರ ಅನುವಾದ ಅಷ್ಟು ಸೊಗಸಾಗಿದೆ. ಅನುವಾದ ಅನಿಸದ ಹಾಗಿದೆ. ಈ ಸಂಕಲನದ ಪಾತ್ರಗಳು ಬಹುಕಾಲ ಮನಸ್ಸಿನಲ್ಲಿ ಉಳಿದು ನಮ್ಮ ನಿಮ್ಮ ನಡುವಿನ ವ್ಯಕ್ತಿಗಳಾಗಿ ಬಿಡುವುದು ಈ ಸಂಕಲನದ ಬಹುಮುಖ್ಯ ಸಾಧನೆ.

 

ಲೇಖನ ವರ್ಗ (Category): 

ಬಾಳೇ ಒಂದು ಗಿಡವಾದರೆ ಪ್ರೀತಿಯದರ ಗೊನೆ!

field_vote: 
No votes yet
To prevent automated spam submissions leave this field empty.

ಇದೊಂದು ಪುಟ್ಟ ಪುಸ್ತಕ. ಐವತ್ತು ಅರವತ್ತು ಪುಟಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದವೆಲ್ಲ ಪುಟ್ಟ ಪುಟ್ಟ ಕಥೆಗಳೇ. ಈ ಪುಸ್ತಕ ಕೂಡ ಸಾಹಿತ್ಯದ ವಲಯದಲ್ಲಿ ಪ್ರಚಲಿತವಿರುವ ಸದ್ದುಗದ್ದಲ ಎಬ್ಬಿಸಿದಂತಿಲ್ಲ. ಅದೇ ರೀತಿ ತಣ್ಣಗೇ ಮನಸ್ಸನ್ನು ಆವರಿಸುವ ಇಲ್ಲಿನ ಏಳು ಕಥೆಗಳು ನಮ್ಮನ್ನು ನಿಜಕ್ಕೂ ಚಕಿತಗೊಳಿಸುತ್ತವೆ. ಇಲ್ಲಿನ ಕತೆಗಳ ಹಂದರ, ಆಪ್ತ ನಿರೂಪಣೆ, ಜಾಣತನವನ್ನು ಮರೆಮಾಚದ ತಾಂತ್ರಿಕ ಕಲೆಗಾರಿಕೆ, ಸಹಜವಾಗಿ ಒಂದು ವಾತಾವರಣವನ್ನು ತನ್ನ ಕತೆಯ ಸುತ್ತ ನಿರ್ಮಿಸಿಕೊಳ್ಳುವ ಸರಳ ಶೈಲಿ, ಎಲ್ಲವನ್ನೂ ಮೀರಿಸುವ ಮಾನವೀಯ ಕಳಕಳಿಯ ತುಡಿತ ಯಾರನ್ನೂ ಸೆಳೆಯುವಂತಿವೆ. ಈ ಪುಸ್ತಕದ ಹೆಸರೇ ಮುದ್ದಾಗಿದೆ, ಬಾಳೆಗಿಡ ಗೊನೆಹಾಕಿತು! ಕತೆಗಾರ ಬಿ.ಎಂ.ಬಶೀರ್.

ಲೇಖನ ವರ್ಗ (Category): 

ವೇದಾಂತಿಯ ಹಾಡೂ ಕವಿಯೊಬ್ಬನ ಸಿದ್ಧಾಂತಗಳೂ...

field_vote: 
No votes yet
To prevent automated spam submissions leave this field empty.

ಜರ್ಮನ್ ಕಾದಂಬರಿಕಾರ ಹರ್ಮನ್ ಹೆಸ್ ಬರೆದ ನಾರ್ಸಿಸಸ್ ಮತ್ತು ಗೋಲ್ಡಮಂಡ್ (ಇಂಗ್ಲೀಷಿಗೆ ಉರ್ಸುಲ್ ಮೊಲಿನಾರೊ, ಕನ್ನಡಕ್ಕೆ ಡಿ. ಆರ್. ಮಿರ್ಜಿ) ಒಂದು ಉತ್ತಮ ಪುಸ್ತಕ. ಕಾದಂಬರಿಯ ನಡುನಡುವೆ ನಡುನಡುವೆ ನಮ್ಮ ಕಂಬಾರರ (ಚಕೋರಿ, ಶಿಖರಸೂರ್ಯ) ಮಾತೃಪರಂಪರೆ, ಪಿತೃಪರಂಪರೆಯ ನೆನಪಾದರೆ ಅಚ್ಚರಿಯಿಲ್ಲ!

 

ಅನುವಾದ ಸಿಬಿಲ್ ಕಾದಂಬರಿಯಷ್ಟು ಕಲಾತ್ಮಕವಾಗಿದೆ ಅನಿಸುವುದಿಲ್ಲ ನಿಜ. ಆದರೆ ಡಿ.ಆರ್.ಮಿರ್ಜಿಯವರು ಕೃತಿಯ ಸೊಗಡನ್ನು ಉಳಿಸಿಕೊಡಲು ವಹಿಸಿದ ಶ್ರಮ ಎದ್ದು ಕಾಣುತ್ತದೆ. 1946ರ ನೊಬೆಲ್ ಪಾರಿತೋಷಕ ವಿಜೇತ ಕೃತಿಯನ್ನು ಐಬಿಎಚ್ ನವರು ಪ್ರಕಟಿಸಿದ್ದಾರೆ. ಇನ್ನೂರ ತೊಂಭತ್ತನಾಲ್ಕು ಪುಟಗಳ ಈ ಕಾದಂಬರಿಯ ಬೆಲೆ ನೂರ ಎಂಭತ್ತು ರೂಪಾಯಿಗಳು.

ಲೇಖನ ವರ್ಗ (Category): 

ಬದುಕು ಮತ್ತು ಮನುಷ್ಯ ಸಂಬಂಧಗಳ ವಿಶ್ಲೇಷಣೆ

field_vote: 
No votes yet
To prevent automated spam submissions leave this field empty.

ಸಿ.ಎನ್ ರಾಮಚಂದ್ರರ ಮೊತ್ತ ಮತ್ತು ಇತರ ಕಥೆಗಳು ಸಂಕಲನದಲ್ಲಿ ಒಟ್ಟು ಹತ್ತು ಕಥೆಗಳಿವೆ. ತೀರ ಆಪ್ತವಾದ ಧಾಟಿಯಲ್ಲಿ, ಸ್ವಗತದ ವಿನಯವಂತಿಕೆಯನ್ನು ಪಡೆದಿರುವ ಈ ಕಥೆಗಳು ಅದೇ ಕಾರಣಕ್ಕೆ ಓದಿಗೆ ಒಂದು ಬಗೆಯ ಆಹ್ವಾನವನ್ನು ನೀಡುವಂತಿವೆ.

ಕೃತಿ: ಮೊತ್ತ ಮತ್ತು ಇತರ ಕಥೆಗಳು(ಕಥಾ ಸಂಕಲನ)

ಲೇಖಕರು: ಸಿ.ಎನ್.ರಾಮಚಂದ್ರ

ಪ್ರಕಾಶಕರು: ಸುಮುಖ ಪ್ರಕಾಶನ, 174ಇ/28,1ನೆಯ ಮಹಡಿ, 1ನೆಯ ಮುಖ್ಯ ರಸ್ತೆ, ವಿದ್ಯಾರಣ್ಯ ನಗರ, ಮಾಗಡಿ ರಸ್ತೆ, ಟೋಲ್ಗೇಟ್ ಸರ್ಕಲ್, ಬೆಂಗಳೂರು-560 023. ಪುಟ ಸಂಖ್ಯೆ: 120 ಬೆಲೆ: ಅರವತ್ತು ರೂಪಾಯಿ.

(ಶ್ರೀ ಮಹಾಬಲಮೂರ್ತಿ ಕೂಡ್ಲೆಕೆರೆಯವರ "ಒಂದಲ್ಲಾ ಒಂದೂರಿನಲ್ಲಿ" ಹೆಸರಿನ ಕಥೆಗಳಿಗಾಗಿಯೇ ಇರುವ ಹೊಸ ಪತ್ರಿಕೆಯಲ್ಲಿ ಪ್ರಕಟಿತ ಲೇಖನದ ಆಯ್ದ ಭಾಗ.)

ಲೇಖನ ವರ್ಗ (Category): 

ಮನದ ಮುಂದಣ ಮಾಯೆ

field_vote: 
No votes yet
To prevent automated spam submissions leave this field empty.

ಪ್ರಹ್ಲಾದ ಅಗಸನಕಟ್ಟೆಯವರ `ಮನದ ಮುಂದಣ ಮಾಯೆ' ಸಂಕಲನಕ್ಕೆ ಸಾಹಿತ್ಯ ಅಕೆಡಮಿಯ ಪುರಸ್ಕಾರ ಸಂದಿದೆ. ಈ ಸಂಕಲನದಲ್ಲಿ ಒಟ್ಟು ಹನ್ನೆರಡು ಕಥೆಗಳಿವೆ. ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಕನ್ನಡ ಸಂಘ ಹೊರತಂದಿದೆ.

ಲೇಖನ ವರ್ಗ (Category): 

ಕಥೆಗಾರನೊಬ್ಬನ ರೂಪಕ ಲೋಕದ ಕಥನ, ನೇರಳೆ ಮರ

field_vote: 
No votes yet
To prevent automated spam submissions leave this field empty.

ಕೇಶವ ಮಳಗಿಯವರ ನೇರಳೆ ಮರ ಒಂದು ವಿಶಿಷ್ಟ ಕಥಾನಕ! ಒಬ್ಬ ಬರಹಗಾರನ ತಳಮಳಗಳನ್ನು ವಯಸ್ಸಿನ ಹಲವು ಹಂತಗಳಲ್ಲಿ, ಬದುಕಿನ ಹಲವು ತಿರುವುಗಳಲ್ಲಿ ಮತ್ತು ಮನಸ್ಸಿನ ಹಲವು ಪಾತಳಿಗಳಲ್ಲಿ ಅವು ದಾಖಲಾಗುವ ವಿಸ್ಮಯವನ್ನು, ದಾಖಲಾಗುತ್ತ ಅವು ಮಾಡುವ ಚಮತ್ಕಾರವನ್ನು ಮಳಗಿಯವರು ಅಕ್ಷರಗಳಲ್ಲಿ ಹಿಡಿದುಕೊಡಲು ಇಲ್ಲಿ ಪ್ರಯತ್ನಿಸಿದ್ದಾರೆ. ಅನುಭವವೊಂದು ಬರಹಗಾರನನ್ನು ಕಾಡುತ್ತ, ತಟ್ಟುತ್ತ, ತಡವುತ್ತ, ತದುಕುತ್ತ, ಸಂತೈಸುತ್ತ, ಪೊರೆಯುತ್ತ, ತೊರೆಯುತ್ತ, ತಲ್ಲಣಗಳಿಗೆ ನೂಕುತ್ತ ಮತ್ತು ಕೈಹಿಡಿದೆತ್ತುತ್ತ ಕಥೆಗಾರನನ್ನು ಬೆಳೆಸುವ ಬಗೆಯೇ ವಿಲಕ್ಷಣವಾದದ್ದು.

ಲೇಖನ ವರ್ಗ (Category): 

ಮಲ್ಲಿಗೆಯ ಘಮಘಮ, ಬ್ಯಾಡಗಿ ಮೆಣಸಿನ ಘಾಟು!

field_vote: 
No votes yet
To prevent automated spam submissions leave this field empty.

ಸುನೀತಾಗೆ ಮಲ್ಲಿಗೆ ಎಂದರೆ ಇಷ್ಟ (ಕಥಾ ಸಂಕಲನ)

ಭಾಸ್ಕರ ಹೆಗಡೆ

ಸುಂದರ ಪ್ರಕಾಶನ `ಚಿತ್ರಶ್ರೀ', 43, ಕಲಾಮಂದಿರ, 5ನೆಯ ಅಡ್ಡರಸ್ತೆ ಅ.ನ.ಸುಬ್ಬರಾವ್ ರಸ್ತೆ, ಹನುಮಂತನಗರ, ಬೆಂಗಳೂರು - 560 019

ಪುಟಗಳು:105+6

ಬೆಲೆ:ರೂ.100

ಲೇಖನ ವರ್ಗ (Category): 

ಕನ್ನಡ ಪ್ರಜ್ಞೆ ಮತ್ತು ಪರಿಸರ

field_vote: 
No votes yet
To prevent automated spam submissions leave this field empty.

ಡಾ.ಕೆ.ವಿ. ನಾರಾಯಣವರು ಆಧುನಿಕ ಕನ್ನಡ ಜಗತ್ತು ಕಂಡ ವಿಶಿಷ್ಟ ಮತ್ತು ಸೂಕ್ಷ್ಮ ಚಿಂತಕ ಹಾಗೂ ಭಾಷಾಶಾಸ್ತ್ರಜ್ಞ. ಇವರು ಇತ್ತೀಚಿಗೆ ಬರೆದ "ಕನ್ನಡ ಜಗತ್ತು: ಅರ್ಧ ಶತಮಾನ" ಕೃತಿ ಓದಿದ ಮೇಲೆ ನನ್ನಲ್ಲಿ ಹುಟ್ಟಿದ ಚರ್ಚೆ, ವಾಗ್ವಾದ ಮತ್ತು ಸಮರ್ಥನೆಗಳನ್ನು ಕ್ರೋಡಿಕರಿಸಿಕೊಂಡು ಈ ಪುಸ್ತಕವನ್ನು ಕುರಿತು ಕೆಲವು ವಿಷಯಗಳನ್ನು ಚರ್ಚಿಸಲು ಪ್ರಯತ್ನಿಸುವೆ. ಕನ್ನಡ ಭಾಷೆಯನ್ನು ಕುರಿತು ಹಲವಾರು ವಾಗ್ವಾದಗಳು ನಿರಂತರವಾಗಿ ನಡೆದಿವೆ. ಈ ಸಧ್ಯದ ಪರಿಸ್ಥಿತಿಯಲ್ಲಿ ಕನ್ನಡದ ಪ್ರಾಚೀನತೆ, ಪರಂಪರೆಯನ್ನು ಕೆಲವು ಛಿದ್ರ ಛಿದ್ರ ದಾಖಲೆಗಳ ಮುಖಾಂತರ ಕನ್ನಡ ಪ್ರಜ್ಞೆಯನ್ನು ಕಟ್ಟುವ ಭಾವನಾತ್ಮಕ ಪ್ರಯತ್ನಗಳು ನಡೆದಿವೆ.

ಲೇಖನ ವರ್ಗ (Category): 

ಮನುಷ್ಯನನ್ನು ಲಿಬರೇಟ್ ಮಾಡುತ್ತಲೇ ಹೋಗುವ `ಒಂದು ಕೈಫಿಯತ್'

field_vote: 
No votes yet
To prevent automated spam submissions leave this field empty.

ಚಂದ್ರಕಾಂತ ಕುಸನೂರರ ಹೊಸ ಕಾದಂಬರಿ `ಒಂದು ಕೈಫಿಯತ್' ಈ ದಿಸೆಯಲ್ಲಿ ಒಂದು ಹೊಸತನದ, ವಿಶಿಷ್ಟ ಪ್ರಯೋಗ. ಕುಸನೂರರ ಮೂಲಭೂತ ಕಾಳಜಿ ಮನುಷ್ಯನನ್ನು ಎಲ್ಲದರಿಂದ ಲಿಬರೇಟ್ ಮಾಡಿಯೂ ಅವನ ಜೀವನಾಸಕ್ತಿಯನ್ನು ಸಾಯಿಸದೇ, ಸಂನ್ಯಾಸಿಯಾಗಿಸದೇ ಬದುಕಿನೊಳಗೇ ಇರಿಸಿ ಈ ಶೋಧವನ್ನು ನಡೆಸಬೇಕೆನ್ನುವುದು. ಒಂದು ಅರ್ಥದಲ್ಲಿ ಇಲ್ಲಿರುವುದು ಒಂದು ಸಂಘರ್ಷ. ಕಾದಂಬರಿ ಮಾತು, ವಿವರ, ನೋಟಗಳಿಗಿಂತ ಮೌನ, ಅಮೂರ್ತ ಮತ್ತು ಅನೂಹ್ಯಗಳನ್ನೆ ಹೆಚ್ಚು ನೆಚ್ಚಿಕೊಂಡಿರುವಂತಿದೆ. ನಿಜಕ್ಕೂ ಇದೊಂದು ವಿಶಿಷ್ಟ ಪ್ರಯೋಗ, ಹೊಸತನದಿಂದ ಕೂಡಿದ ಕಾದಂಬರಿ.

 

ಕಾದಂಬರಿಯ ಹೆಸರು : ಒಂದು ಕೈಫಿಯತ್

ಲೇಖನ ವರ್ಗ (Category): 

ಸಾಮಾಜಿಕ ಕ್ರಾಂತಿಯ ಹೊಸ ಮಾರ್ಗಾನ್ವೇಷಣೆ - ಉಧೋ ಉಧೋ

field_vote: 
No votes yet
To prevent automated spam submissions leave this field empty.

ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿ ಉಧೋ ಉಧೋ ಕುರಿತು ಹೇಳುವುದಾದರೆ ಉಧೋ ಉಧೋ ಎಂಬ ಹೆಸರೇ ಸೂಚಿಸುವಂತೆ ಇದು ಒಂದು ಊರಿಗೆ ಊರೇ ಒಂದಾಗಿ ಎಬ್ಬಿಸುವ ಅತ್ಯುತ್ಸಾಹದ ಜಯಕಾರ, ಅಥವಾ ಅರ್ಥಹೀನ ಸಮೂಹ ಸನ್ನಿಯ ಒಂದು ಗೊಂದಲದ ಗುಲ್ಲು, ಅಥವಾ ಎಲ್ಲ ಬಗೆಯ ಅತಿಯನ್ನು ಕೊಂಕುವ ಒಂದು ವ್ಯಂಗ್ಯದ ಸೊಲ್ಲು ಇತ್ಯಾದಿಗಳಲ್ಲಿ ಯಾವುದೂ ಆಗಬಹುದಾದ್ದು. ಬಾಳಾಸಾಹೇಬ ಲೋಕಾಪುರ ಸೃಷ್ಟಿಸುವ ನಂದೋವಾಡಿಯ ಮಟ್ಟಿಗೆ ಈ ಉಧೋ ಉಧೋ ಎಂಬ ಜೈಕಾರ ಇದೆಲ್ಲವನ್ನೂ ಸೂಚಿಸುತ್ತದೆ ಎನ್ನಬೇಕು. ಅದನ್ನು ಅದರ ವಿಭಿನ್ನ ಪಾತಳಿಗಳಲ್ಲೇ ಅರ್ಥೈಸಿಕೊಳ್ಳಲು ಮಾತ್ರ ಈ ಕಾದಂಬರಿಯ ಪ್ರತಿಯೊಂದು ಪಾತ್ರದ ಪ್ರಜ್ಞೆ ಹರಿಯುವ ಬಗೆಯನ್ನು ಮತ್ತು ಆ ಪ್ರಜ್ಞೆ ಒಟ್ಟಾರೆಯಾಗಿ ಊರಿನ ಸಮಷ್ಟಿಪ್ರಜ್ಞೆಯೊಂದಿಗೆ ಚಲಿಸುವ ಬಗೆಯನ್ನು ಒಟ್ಟಾಗಿಯೇ ಗ್ರಹಿಸಬೇಕಾಗುತ್ತದೆ. ಅಷ್ಟರಮಟ್ಟಿಗೆ ವ್ಯಕ್ತಿಯೊಬ್ಬ ತನ್ನೊಳಗೆ ತನ್ನ ಸುತ್ತಲಿನ ಸಮಾಜವನ್ನು ಅನುಭವಿಸುತ್ತಿರುತ್ತಾನೆ ಮತ್ತು ಸಮಾಜ ಎಂದು ನಾವು ಸರಳಗೊಳಿಸುವ ಸಂಗತಿ ವ್ಯಕ್ತಿ ನಿರ್ಮಿತ ಸಮಷ್ಟಿಯೇ ಆಗಿರುತ್ತದೆ ಎನ್ನುವುದು ಇಲ್ಲಿ ಸಾಕಾರಗೊಂಡಿರುವ ಬಗೆ ಅನನ್ಯವಾಗಿದೆ.

ಊರಿಗಿರುವ ಒಂದೇ ಬಾವಿಯ ನೀರಿಗಾಗಿ ಹೊಲೆಯರ ಮತ್ತು ಮೇಲ್ಜಾತಿಯವರ ನಡುವೆ ನಡೆಯುವ ಒಂದು ಪ್ರಹಸನದಂಥ ಸಂಘರ್ಷ ಮತ್ತು ಅದಕ್ಕೆ ಕಾರಣವಾದ ಕೆಲವು ಕ್ಷುಲ್ಲಕ ಘಟನೆಗಳು, ಅದರ ಫಲಶ್ರುತಿ ಎನ್ನಬಹುದಾದ ಇನ್ನು ಕೆಲವು ಘಟನೆಗಳು ಹಲವಾರು ಗಹನವಾದ ಪ್ರಶ್ನೆಗಳನ್ನು ನಮ್ಮ ಮುಂದಿಡುತ್ತವೆ.

ಲೇಖನ ವರ್ಗ (Category): 

ಬದುಕಿನ ಕತೆ ಹೇಳುವ 'ಬಿಳಿಯ ಚಾದರ'

field_vote: 
No votes yet
To prevent automated spam submissions leave this field empty.

`ಬಿಳಿಯ ಚಾದರ' ಗುರುಪ್ರಸಾದ್ ಕಾಗಿನೆಲೆಯವರ ಹೊಸ ಮತ್ತು ಮೊದಲ ಕಾದಂಬರಿ. ಇದನ್ನು ಧಾರವಾಡದ ಮನೋಹರ ಗ್ರಂಥ ಮಾಲೆಯವರು ಹೊರತಂದಿದ್ದಾರೆ.

ಲೇಖನ ವರ್ಗ (Category): 

ಗಿಬ್ರಾನನ ಜೀಸಸ್

field_vote: 
No votes yet
To prevent automated spam submissions leave this field empty.

"ನನ್ನಯ ಬಾಳಿನಲ್ಲಿ ಜೀವಿಸುವುದು ನಾನಲ್ಲ, ಯೇಸುವೆ ನನ್ನಲಿ ಜೀವಿಸುತ್ತಾರಲ್ಲ" ಎಂದೊಬ್ಬ ಕವಿಹೃದಯಿ ಹಾಡಿದ್ದಾನೆ. ಇಂಥದೇ ಧ್ವನಿಯ ಒಂದು ಕವಿಹೃದಯ ಇಪ್ಪತ್ತನೇ ಶತಮಾನದ ಪ್ರಾರಂಭಕಾಲದಲ್ಲಿ ಯೇಸುಕ್ರಿಸ್ತನು ನೆಲೆಸಿದ ದೇಶಕ್ಕೆ ಸಮೀಪದ ಲೆಬನಾನ್ ಎಂಬ ನಾಡಲ್ಲಿ ನೆಲೆಸಿತ್ತು. ಕಹ್ಲಿಲ್ ಗಿಬ್ರಾನ್ ಎಂಬ ಆ ಕವಿಚೇತನ ಯೇಸುವಿನ ನಡೆನುಡಿಯನ್ನು ಆತನ ಸಮಕಾಲೀನರಿಂದ ಸುಶ್ರಾವ್ಯವಾದ ಮಂಜುಳ ನಿನಾದದಂತೆ ಹೇಳಿಸಿದ್ದಾನೆ. ಒಂದು ರೀತಿಯಲ್ಲಿ ಯೇಸುವನ್ನು ನೋಡದೆ, ಯೇಸುವನ್ನು ಸ್ಪರ್ಶಿಸದೆ ಕೇವಲ ಅವನ ಬಟ್ಟೆಯಂಚನ್ನು ಮುಟ್ಟಿ ಪರಮಪಾವನನಾದಂತೆ ಆ ಎಪ್ಪತ್ತು ವ್ಯಕ್ತಿಗಳ ಮುಖಾಂತರ ಯೇಸುವಿನ ವ್ಯಕ್ತಿತ್ವವನ್ನು ಸ್ವತಃ ಅನುಭವಿಸುತ್ತಾನೆ, ಯೇಸುವನ್ನೇ ತನ್ನಲ್ಲಿ ಧರಿಸುತ್ತಾನೆ.

ಲೇಖನ ವರ್ಗ (Category): 

ಅಖಂಡ ಕರ್ನಾಟಕ - ಒಂದು ಇಣುಕು ನೋಟ

field_vote: 
Average: 5 (1 vote)
To prevent automated spam submissions leave this field empty.

ಕನ್ನಡ ನಾಡು-ನುಡಿಗೆ ಒದಗಿರುವ ದುಃಸ್ಥಿತಿ, ಕಾವೇರಿ ತೀರ್ಪಿನಂತಹ ಅನ್ಯಾಯ ನಮಗೆ ಆಗಿದ್ದರೂ, "ಮುಂದಿನ ವಾರ ಅಧಿವೇಶನ ಸೇರಿ, ವಿಚಾರ ಮಾಡಿ, ಆನಂತರ ನಮ್ಮ ಮುಂದಿನ ಕ್ರಮದ ಬಗ್ಗೆ ತೀರ್ಮಾನ ಮಾಡಿದರಾಯಿತು; ಈಗೇನು ಅಂತಹ ಅರ್ಜೆಂಟು?" ಎನ್ನುವಂತೆ ಸುಮ್ಮನಿರುವ ನಮ್ಮ ಮಂತ್ರಿ-ಮಹೋದಯರು, ಇವೇ ಮೊದಲಾದ ಹತ್ತಾರು ವಿಚಾರಗಳು ನಮ್ಮನ್ನು ಆಗಾಗ ಕಾಡುತ್ತಿರುತ್ತವೆ ಅಲ್ಲವೇ? ಆಶ್ಚರ್ಯವೆಂದರೆ ಇದೇ ರೀತಿಯ ಸಮಸ್ಯೆಗಳೇ ಸುಮಾರು ಅರವತ್ತು ವರ್ಷಗಳ ಹಿಂದೆಯೂ (ಅಂದರೆ ಏಕೀಕರಣಕ್ಕೂ ಹತ್ತು ವರ್ಷ ಮೊದಲು) ನಮ್ಮನ್ನು ಕಾಡುತ್ತಿದ್ದವು, ಇವೇನೂ ಹೊಸ ಸಮಸ್ಯೆಗಳಲ್ಲ ಎನ್ನುವ ಮಾತನ್ನು ನಿಮ್ಮ ಮುಂದಿಟ್ಟರೆ ನಂಬುತ್ತೀರಾ? ಪ್ರಾಯಶಃ ನಂಬಲಿಕ್ಕಿಲ್ಲ.

ಲೇಖನ ವರ್ಗ (Category): 

ಮಂಕುತಿಮ್ಮನ ಕಗ್ಗಕ್ಕೆ ಕೈಪಿಡಿಯ ಬೆಳಕು

field_vote: 
No votes yet
To prevent automated spam submissions leave this field empty.

ಡಿ.ವಿ.ಜಿ.ಯವರ ಮಂಕುತಿಮ್ಮನ ಕಗ್ಗ ಕನ್ನಡದ ಮಹತ್ವದ ಕೃತಿಗಳಲ್ಲೊಂದು. ರಾಷ್ಟ್ರಕವಿ ಕುವೆಂಪು ಅವರು ಕಗ್ಗವನ್ನು ಕುರಿತು ಹೇಳಿದ ಈ ಮಾತುಗಳು ಅದರ ಸತ್ವಕ್ಕೆ ಹಿಡಿದ ಕನ್ನಡಿಯೆನ್ನಬಹುದು.
ಹಸ್ತಕ್ಕೆ ಬರಿ ನಕ್ಕೆ; ಓದುತ್ತ ಓದುತ್ತ
ಮಸ್ತಕಕ್ಕಿಟ್ಟು ಗಂಭೀರವಾದೆ
ವಿಸ್ತರದ ದರ್ಶನಕೆ ತುತ್ತತುದಿಯಲಿ ನಿನ್ನ
ಪುಸ್ತಕಕೆ ಕೈಮುಗಿದೆ - ಮಂಕುತಿಮ್ಮ || (ಕುವೆಂಪು)

ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿರುವವರೆಲ್ಲರೂ ಒಂದಲ್ಲ ಒಂದು ಬಾರಿ "ಕಗ್ಗ"ವನ್ನು ಎಡತಾಕಿರುತ್ತೇವೆ. ಒಳ್ಳೆಯ "ಜೀವನ ದರ್ಶನ"ವಾಗಿಯೋ, ಇಲ್ಲವೇ ಉತ್ತಮ ಸಾಹಿತ್ಯ ಕೃತಿಯಾಗಿಯೋ, ಕಗ್ಗ ನಮ್ಮೆಲ್ಲರ ಬಾಳಿನಲ್ಲಿ ಒಮ್ಮೆಯಾದರೂ ಸುಳಿದಾಡಿರುತ್ತದೆ. ನಾನು ಹಲವಾರು ಬಾರಿ ಸ್ವತಂತ್ರವಾಗಿ (ಬೇರೆ ಯಾವುದೇ ಸಹಾಯವಿಲ್ಲದೆ), ನಿಘಂಟನ್ನು ಪಕ್ಕದಲ್ಲಿಟ್ಟುಕೊಂಡು, "ಮಂಕುತಿಮ್ಮನ ಕಗ್ಗ"ವನ್ನು ಓದುವ ಪ್ರಯತ್ನ ಮಾಡಿದ್ದೆ. ಆದರೆ ಪ್ರತಿ ಬಾರಿಯೂ "ಯಾಕೋ ಇದರ ಸಂಪೂರ್ಣ ಭಾವ ನನ್ನ ಗ್ರಹಿಕೆಗೆ ಸಿಗುತ್ತಿಲ್ಲ" ಎನ್ನುವ ನಿರಾಶೆ ನನ್ನನ್ನು ಕಾಡುತ್ತಿತ್ತು. ನಿಮ್ಮಲ್ಲೂ ಎಷ್ಟೋ ಜನರಿಗೆ ಹೀಗೆ ಅನ್ನಿಸಿರಬಹುದು ಅಲ್ಲವೇ? ಎಷ್ಟೋ ಬಾರಿ ಕಗ್ಗದಿಂದ ಪದ್ಯವೊಂದನ್ನು ಅದರ ಪೂರ್ಣ ಭಾವಾರ್ಥ ತಿಳಿಯದೆಯೇ ಬಳಸುವಾಗ, ಮನಸ್ಸಿನ ಒಂದು ಮೂಲೆಯಲ್ಲಿ, "ಈ ಪದ್ಯ ನನಗೆ ನಿಜವಾಗಿಯೂ ಅರ್ಥವಾಗಿದ್ದಲ್ಲಿ ಇನ್ನೂ ಎಷ್ಟು ಚೆನ್ನಾಗಿರುತ್ತಿತ್ತು!" ಅನ್ನಿಸುವುದು ಸಹಜ. ಈಗ್ಗೆ ಏಳೆಂಟು ತಿಂಗಳಿಂದ "ಕಗ್ಗಕ್ಕೊಂದು ಕೈಪಿಡಿ"ಯೆಂಬ ಕೈಪಿಡಿಯ (ಗೈಡ್) ಬೆಳಕಿನಲ್ಲಿ "ತಿಮ್ಮಗುರು"ವನ್ನು ನೋಡುವ, ಸಾಧ್ಯವಾದಷ್ಟೂ ಅರ್ಥ ಮಾಡಿಕೊಳ್ಳುವ ಪ್ರಯತ್ನ ಮಾಡಿದೆ. ಬಹಳ ಉಪಯೋಗವಾಯಿತು ಎಂದು ನನಗನ್ನಿಸಿತು. ಕಗ್ಗವನ್ನು "ಓದಿದ ಸುಖ" ನನ್ನದಾಯಿತು. ಈ ಪುಸ್ತಕದ ಬಗ್ಗೆ ಪರಿಚಯ ಬರೆಯೋಣ; ಆಕಸ್ಮಾತ್ ನನಗೆ ಉಪಯೋಗವಾದಂತೆ ಇನ್ನೂ ಯಾರಿಗಾದರೂ ಆಗುವುದಾದಲ್ಲಿ ಆಗಲಿ ಅಂತ ಈ ಪ್ರಯತ್ನ.

ಲೇಖನ ವರ್ಗ (Category): 

ನಾಗವರ್ಮನ ಕರ್ನಾಟಕ ಕಾದ೦ಬರಿ

field_vote: 
No votes yet
To prevent automated spam submissions leave this field empty.

ನಾಗವರ್ಮನು ಕರ್ನಾಟಕ ಕಾದ೦ಬರಿಯನ್ನು ರಚಿಸಿದನು. ಈತನು ಭೋಜ ರಾಜನ
ಸಮಕಾಲೀನನವನು. ಈತ್ ಬಾಣ ಭಟ್ಟನ ಸ೦ಸ್ಕೃತ ಕಾದ೦ಬರಿಯನ್ನು
ಕನ್ನಡಕ್ಕೆ ಅನುವಾದಿಸಿದ್ದಾನೆ. ಬಾಣ ಭಟ್ಟ ಶ್ರೀ ಹರ್ಷನ ಆಸ್ಥಾನ ಕವಿ.
ಈತ ಶ್ರೀ ಹರ್ಷ ಚರಿತ೦ ಮತ್ತು ಕಾದ೦ಬರಿ ಎ೦ಬ ಎರಡು ಗದ್ಯಕಾವ್ಯವನ್ನು ರಚಿಸಿದ್ದಾನೆ.

ಲೇಖನ ವರ್ಗ (Category): 

ಕನ್ನಡ ಕಾವ್ಯಗಳ ಗೆಜ್ಜೆನಾದ( ಕನ್ನಡಮ್ಮನ ಕನಕ ವರ್ಷದ ಕಾಣಿಕೆ )

field_vote: 
No votes yet
To prevent automated spam submissions leave this field empty.
ಕನ್ನಡಮ್ಮನ ಕನಕ ವರ್ಷದ ಕಾಣಿಕೆ

ಕನ್ನಡಮ್ಮನ ಕೂರ್ಮೆಯ ಕುವರ ಕುವರಿಯರಿಗೊಂದು ಕಳಕಳಿಯ ಕರೆ. ಕನ್ನಡ ಕಾವ್ಯಾಸಕ್ತ ಜ್ಞಾನಪಿಪಾಸುಗಳಿಗೊಂದು

ಮನಃಪೂರ್ವಕ ಮೊರೆ. ಕನ್ನಡಮ್ಮನ ಕನಕ ವರ್ಷದ ಈ ಕಲ್ಯಾಣಕಾರಿ ಕಾಲದಲ್ಲಿ ಕನ್ನಡದ ಆಧುನಿಕ ಅಶ್ವಿನಿ ದೇವತೆಗಳಂತಹ

ಕನ್ನಡ ಕಿಂಕರರೀರ್ವರ ಜ್ಞಾ ನ ಶಕ್ತಿ, ಇಚ್ಚಾ ಶಕ್ತಿ, ಕ್ರಿಯಾ ಶಕ್ತಿಗಳ ತ್ರಿವೇಣಿ ಸಂಗಮದ ಫಲಸ್ವರೂಪದ ಪ್ರತೀಕವಾಗಿ

ಪ್ರಕಾಶಿಸುತ್ತಿರುವುದೊಂದು ದಿವ್ಯಕೃತಿ. ಹಿಮಗಿರಿಯ ಗೌರಿಶಂಕರ ಶಿಖರವನ್ನೇರಿದ ತೇನ್ ಸಿಂಗ್ ಹಿಲರಿಯವರಂತಹ

ಆ ಪರ್ವತಾರೋಹಿಗಳ ಸಾಹಸಕ್ಕೆ ಸಮನಾದ ಕನ್ನಡ ಕಾವ್ಯ ಶಿಖರಾರೋಹಿಗಳಂತಿರುವ ಸಾಹಸಿಗರೀರ್ವರು ಸಂಗ್ರಹಿಸಿರುವ

ಲೇಖನ ವರ್ಗ (Category): 

ಸತ್ಯನಾರಾಯಣರ ಕಾಲಜಿಂಕೆ ಕಾದಂಬರಿ

field_vote: 
No votes yet
To prevent automated spam submissions leave this field empty.

ಗೆಳೆಯ ಸತ್ಯನಾರಾಯಣರ ಹೊಸ ಕಾದಬರಿ ಕಾಲಜಿಂಕೆ ಪ್ರಕಟವಾಗಿದೆ. ಡಾ. ಯು. ಆರ್. ಅನಂತಮೂರ್ತಿ ಮುನ್ನುಡಿ ಬರೆದಿದ್ದಾರೆ.

ಲೇಖನ ವರ್ಗ (Category): 

ಕನ್ನಡ ಸಾಹಿತ್ಯ ಚರಿತ್ರೆ -ಮುಗಳಿ.

field_vote: 
Average: 4.1 (12 votes)
To prevent automated spam submissions leave this field empty.

ಚರಿತ್ರೆಯೆ೦ದರೆ ರಾಜರ ಕತೆ, ಯುದ್ದ್ಧಗಳ ಮಾಹಿತಿ ಎ೦ದು ತಿಳಿದಿದ್ದ ನನಗೆ ಚರಿತ್ರೆಯೆ೦ದರೆ ಅಷ್ಟು ಆಸಕ್ತಿಯಿರಲಿಲ್ಲಾ. ಆದರೆ ಮುಗಳಿಯವರ ಕನ್ನಡ ಸಾಹಿತ್ಯ ಚರಿತ್ರೆಯನ್ನು ಓದಿದ ನ೦ತರ ಚರಿತ್ರೆಯ ಬಗ್ಗೆಯಿದ್ದ ಕಲ್ಪನೆ, ಮತ್ತು ತಿರಸ್ಕಾರವೆರಡು ಬದಲಾವಣೆಗೊ೦ಡಿದೆ. ವರ್ತಮಾನದಲ್ಲಿ ಆಶಾವದಿಯಾಗಿರದ ಮನಸ್ಸು ಚರಿತ್ರೆಯಲ್ಲಿ ಬೆಳಕನ್ನು ಕಾಣುವುದ್ದಕ್ಕೆ ಪರಿತಪಿಸುತ್ತದೆ. ಅದಕ್ಕಾಗಿ ಬಹುಶ: ನಾವು ಚರಿತ್ರೆಯನ್ನು ಓದುವುದು. ಚರಿತ್ರೆಯನ್ನು ಕೇಳುವುದು ಇನ್ನೂ ಅನುಭವಕಾರಿ.

ಲೇಖನ ವರ್ಗ (Category): 

ಛೇದ

ಛೇದ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತ, ಮುಂಬೈ ನಿವಾಸಿ ಯಶವಂತ ಚಿತ್ತಾಲರ ಕಥೆ.

ಅಬ್ರಾಹ್ಮಣ

ವ್ಯಕ್ತಿ ಬದುಕನ್ನು ತಾನರ್ಥ ಮಾಡಿಕೊಂಡ ರೀತಿಯಲ್ಲಿ ಯಾವುದಕ್ಕೂ ಜಗ್ಗದೇ ಬದುಕುವುದೇ ಒಂದು ದೊಡ್ಡ ಸಮರವಾಗುತ್ತದೆ ಎಂಬುದನ್ನು ಈ ಕಥೆಯಲ್ಲಿ ಕೆ.

ಮೂವತ್ತು ಮಳೆಗಾಲ - ಎಚ್.ಎಸ್. ವೆಂಕಟೇಶಮೂರ್ತಿಯವರ ಸಮಗ್ರ ಕಾವ್ಯ-ಭಾಗ -೧

field_vote: 
No votes yet
To prevent automated spam submissions leave this field empty.

'ಚಿನ್ನಾರಿ ಮುತ್ತ' ಚಿತ್ರದ ಹಾಡುಗಳು ( ' ಎಷ್ಟೊಂದ್ ಜನ ಯಾರು ನಮ್ಮೋರು? , ಹೇಗಿದ ಹೇಗಾದ ಗೊತ್ತಾ ನಮ್ಮ ಚಿನ್ನಾರಿ ಮುತ್ತ, ಚಂದ್ರ ನಿಂಗೆ ಕರುಣೆ ಇರ್ಲಿ ) ಕೇಳಿರಬಹುದು . ಅವುಗಳನ್ನು ಬರೆದವರು ಶ್ರೀ ಎಚ್.ಎಸ್.ವೆಂಕಟೇಶಮೂರ್ತಿ ಅವರು . ಈಗ ಅವರ ಮೂವತ್ತು ವರ್ಷಗಳ ಕಾವ್ಯ ಈಗ 'ಮೂವತ್ತು ಮಳೆಗಾಲ' ಎಂಬ ಹೆಸರಿನಲ್ಲಿ ಮೂರು ಭಾಗಗಳಲ್ಲಿ ಪ್ರಕಟವಾಗಿದೆ.

ಲೇಖನ ವರ್ಗ (Category): 

ಮೂರ್ತಿರಾಯರ ರಸಗವಳಗಳು

ಎ.ಎನ್‌. ಮೂರ್ತಿರಾವ್‌ ಆಯ್ದ ಲಲಿತ ಪ್ರಬಂಧಗಳು
ಸಂ: ಚಿ. ಶ್ರೀನಿವಾಸರಾಜು
ಪ್ರ: ಕನ್ನಡ ಸಂಘ, ಕ್ರೈಸ್ಟ್‌ ಕಾಲೇಜು, ಡಾ. ಎಂ.ಎಚ್‌. ಮರಿಗೌಡ ರಸ್ತೆ, ಕುವೆಂಪುನಗರ, ಬೆಂಗಳೂರು-560 029

ವಿಜ್ಜಾಚರಣ ಸಂಪನ್ನ - ಭಗವಾನ್ ಬುದ್ಧನ ಕುರಿತಾದ ಒಳ್ಳೆಯ ಅಧ್ಯಯನ

field_vote: 
No votes yet
To prevent automated spam submissions leave this field empty.

ವಿಜ್ಜಾಚರಣ ಸಂಪನ್ನ ಅಂದರೆ ಜ್ಞಾನ ಮತ್ತು ಆಚರಣೆಗಳಿಂದ ಕೂಡಿದ ಎಂದರ್ಥ. ಈ ಪುಸ್ತಕ ಬುದ್ಧನ ಕುರಿತು ಪ್ರಚಲಿತ ವಿಷಯಗಳನ್ನಾಧರಿಸದೆ , ಪಾಲಿ ಭಾಷೆಯಲ್ಲಿರುವ ಬೌದ್ಧ ಸಾಹಿತ್ಯ ಮೂಲಗಳನ್ನು ಅಧ್ಯಯನ ಮಾಡಿ ಬರೆದಿರುವ ಪುಸ್ತಕ . ಉದಾಹರಣೆಗೆ ಎಲ್ಲರೂ ನಂಬಿಕೊಂಡಿರುವಂತೆ ರಾಜಕುಮಾರ ಸಿದ್ಧಾರ್ಥ ಒಬ್ಬ ರೋಗಿ , ಹಣ್ಣು ಹಣ್ಣು ಮುದುಕ, ಮತ್ತು ಒಂದು ಶವಯಾತ್ರೆಯನ್ನು ನೋಡಿ ಸಂಸಾರವನ್ನು ತ್ಯಜಿಸಿದ ಘಟನೆ ನಿಜಕ್ಕೂ ಅವನ ಜೀವನದಲ್ಲಿ ನಡೆದದ್ದೇ ಅಲ್ಲ ; ಅದು ಬೇರೆ ಯಾರೋ ಸನ್ಯಾಸಿಗೆ ಸಂಬಂಧಿಸಿದ್ದು ರಾಜಕುಮಾರ ಸಿದ್ದಾರ್ಥನಿಗೆ ಆರೋಪಿಸಲ್ಪಟ್ಟು , ಅಸಂಖ್ಯ ಕಲಾವಿದರಿಗೆ , ಕವಿಗಳಿಗೆ ವಸ್ತುವಾಗಿದೆ.

ಲೇಖನ ವರ್ಗ (Category): 

ಮಾಸ್ತಿಯವರ ಶ್ರೀರಾಮ ಪಟ್ಟಾಭಿಷೇಕ- ಪರಿಚಯ

field_vote: 
Average: 5 (3 votes)
To prevent automated spam submissions leave this field empty.

ಇಲ್ಲಿ ಮಾಸ್ತಿಯವರು ಮೂಲ ವಾಲ್ಮೀಕಿ ರಾಮಾಯಣವನ್ನು ಆಧರಿಸಿದ್ದರೂ ತಾವು ನಂಬದ ಸಂಗತಿಗಳನ್ನು ಕೈ ಬಿಟ್ಟಿದ್ದಾರೆ. ಅವರು ಮಾಡಿಕೊಂಡಿರುವ ಬದಲಾವಣೆಗಳನ್ನು ಇತರರು ಒಪ್ಪಲಿಕ್ಕಿಲ್ಲ . ಆದರೆ ಈ ಕಾರಣದಿಂದ ಅವರು ತಮ್ಮ ನಂಬುಗೆಗಳನ್ನು ಬದಲಾಯಿಸಲು ಒಪ್ಪುವದಿಲ್ಲ .ಪವಾಡಗಳನ್ನು ಸಹಜ ಸಂಗತಿಗಳನ್ನಾಗಿ ಇವರು ಮಾರ್ಪಡಿಸಿ ಕಾವ್ಯವನ್ನು ರಚಿಸಿದ್ದಾರೆ. ಈ ಕಾವ್ಯ ಜನರಿಗೆ ರುಚಿಸಿತೇ ತಾವು ಧನ್ಯ; ರುಚಿಸಲಿಲ್ಲ , ದೈವ ತಮಗೆ ಅನುಗ್ರಹಿಸಿದ ಭಾಗ್ಯ ಇಷ್ಟೇ ಎಂದು ಸಮಾಧಾನ ಪಟ್ಟುಕೊಳ್ಳುತ್ತಾರೆ.

ಇಲ್ಲಿ ಇರುವ ಮುದ್ರಣದೋಷಗಳನ್ನು ಕುರಿತು ಹೀಗೆ ಹೇಳುತ್ತಾರೆ- 'ಸಹೃದಯರಾದ ವಾಚಕರು ಇವನ್ನು ಕಂಡಾಗ ಇದು ಏನು ಎಂದು ಯೋಚಿಸಿ ಒಗಟು ಬಿಡಿಸುವಂತೆ ತಪ್ಪನ್ನು ಕಂಡುಹಿಡಿದು ತಿದ್ದಿಕೊಳ್ಳಬೇಕು . ಇದು ಶ್ರಮ; ಆದರೆ ಬುದ್ದಿಗೆ ಒಂದು ರೀತಿಯ ವ್ಯಾಯಾಮ ; ನಾನೂ ಅಚ್ಚಿನ ಮನೆಯ ನನ್ನ ಗೆಳೆಯರೂ ಉದ್ದೇಶಿಸದೆ ಒದಗಿಸಿರುವದು. ಈ ವಿಷಯದಲ್ಲಿ ಓದುಗರ ಕ್ಷಮೆಯನ್ನು ಬೇಡುತ್ತೇನೆ'.

ಲೇಖನ ವರ್ಗ (Category): 

ಪುಟ್ಟ ರಾಜಕುಮಾರ(ಸಚಿತ್ರ ದೃಷ್ಟಾಂತ ಕಥೆ)

ಇದು ಕುತೂಹಲಕಾರಿ ಮೋಜಿನ ಪುಸ್ತಕ . ೨೦ನೇ ಶತಮಾನದ ಪೂರ್ವಾರ್ಧದಲ್ಲಿ ಫ಼್ರಾನ್ಸಿನಲ್ಲಿ ವಿಮಾನ ಚಾಲಕರಾಗಿದ್ದ ಲೇಖಕರು ಜೀವನದುದ್ದಕ್ಕೂ ಅಪಾಯಗಳನ್ನು ಎದುರಿಸುತ್ತ ಬದುಕುತ್ತಿದ್ದುದರಿಂದ ಜೀವನದ ಮಹತ್ವ ತಿಳಿದಿತ್ತು. ಹುಟ್ಟು ಸಾವುಗಳ ನಡುವಿನ ಈ ಜೀವನ ಕೂಡಿ ಬಾಳುವದರಿಂದ ಉದಾತ್ತ ಮತ್ತು ಉಪಯುಕ್ತವಾಗುವದೆಂದು ನಂಬಿದ್ದ ಅವರು ತಮ್ಮೆಲ್ಲ ಕೃತಿಗಳಲ್ಲಿ ಮಾನವಕುಲವನ್ನು ಒಂದಾಗಿ ಕಂಡರು. ಮಾನವಜೀವನದ ಸುಖಕ್ಕೆ ಪ್ರೀತಿ ಮತ್ತು ಮೈತ್ರಿಗಳೇ ಆಧಾರ ಎಂದು ತಮ್ಮ ಬರಹದಲ್ಲಿ ಮಾನವ ಜೀವನದ ಹಿರಿಮೆಯನ್ನು ಮೆರೆಸಿದರು . ಅವರ ಹನ್ನೊಂದು ಕೃತಿಗಳಲ್ಲಿ "ಲ ಪತಿ ಫ಼್ರಾನ್ಸ್ " ಅತ್ಯಂತ ಜನಪ್ರಿಯ . ಅನೇಕ ಭಾಶೆಗಳಲ್ಲಿ ಅನುವಾದವಾಗಿ , ಚಲನಚಿತ್ರವೂ ಆಗಿರವು ಇದನ್ನು ಶ್ರೀ ತಲ್ಲೂರ ಅವರು ಮೂಲ ಫ಼್ರೆಂಚ್‍ನಿಂದಲೇ ಕನ್ನಡಕ್ಕೆ ತಂದಿದ್ದಾರೆ.

ಸ್ಕಲ್ ಮಂತ್ರ ಮತ್ತು ಜುಗಾರಿ ಕ್ರಾಸ್

field_vote: 
Average: 5 (1 vote)
To prevent automated spam submissions leave this field empty.

ಇತ್ತೀಚೆಗೆ ಎರಡು ಪುಸ್ತಕ ಓದಿದೆ .

ಒಂದು ಇಂಗ್ಲೀಷಿನಿಂದ ಶ್ರೀ ಬೇಳೂರು ಸುದರ್ಶನರವರು ಮಾಡಿರುವ ಅನುವಾದ - ಸ್ಕಲ್ ಮಂತ್ರ ( ನೋಡಿ [:http://thatskannada.indiainfo.com/sahitya/book/211103sudarshan.html|(ದಟ್ಸ್ ಕನ್ನಡ ಸಂಪರ್ಕ)]) ಆದರೆ ಅದರ ಅನುವಾದ ಬಹಳ ಚೆನ್ನಾಗಿದೆ. ( ಒಂದೇ ಒಂದು ತಪ್ಪು ಗಮನಿಸಿದೆ. ಅದೂ ಯಾಕೆ ಎಂದರೆ , ಸರಾಗ ಓದಿಗೆ ಅಡ್ಡಿಯಾದದ್ದಕ್ಕೆ - ಮುದ್ರಣ ದೋಷಗಳನ್ನು ಸಹಜವಾಗಿ ನಾವು ಗಮನಿಸುವದಿಲ್ಲ - ಆದರೆ ತಪ್ಪು ಪದಕ್ಕೆ ಒಂದು ಬೇರೆ ಅರ್ಥವಿದ್ದಾಗ ನಮ್ಮ ಓದು ಎಡವುತ್ತದೆ ) 'ರಸ್ತೆಯನ್ನು ಅಗಲಿಸಿದ್ದಾರೆ' ಎಂಬುದು ಆ ವಾಕ್ಯ. ಅಗಲಿಸು ಎನ್ನುವದು ಅಗಲು ಶಬ್ದದ ರೂಪ. ಅಗಲ ಎಂಬುದರದ್ದಲ್ಲ . ವಾಕ್ಯದ ಉದ್ದೇಶ ಅಗಲ ಮಾಡಿದ್ದಾರೆ ಎಂಬುವದು.

ಲೇಖನ ವರ್ಗ (Category): 

ಕನ್ನಡಿಗರ ಜನ್ಮ ಸಾರ್ಥಕತೆ - ಒಂದು ಶತಮಾನ ಹಳೆಯದಾದರೂ ಇಂದಿಗೂ ಪ್ರಸ್ತುತ ವಿಚಾರ

ಕನ್ನಡಿಗರ ಜನ್ಮ ಸಾರ್ಥಕತೆ
--
ವಲ್ಲಭ ಮಹಾಲಿಂಗ ತಟ್ಟಿ
--

ಕರ್ನಾಟಕ ವಿದ್ಯಾವರ್‍

ಕನ್ನಡಿಗರಿಗೊಂದು 'ಕ್ಲಾಸಿಕ್' ಪುಸ್ತಕ

'ರಂಗಣ್ಣನ ಕನಸಿನ ದಿನಗಳು' ಕನ್ನಡದ 'ಕ್ಲಾಸಿಕ್' ಪುಸ್ತಕಗಳಲ್ಲಿ ಒಂದು. ಸ್ವಾತಂತ್ರ್ಯಪೂರ್ವ 'ಮೈಸೂರು' ರಾಜ್ಯದಲ್ಲಿ ಇನ್ಸ್ಪೆಕ್ಟರ್ ಆಗಿ ನೇಮಕಗೊಳ್ಳುವ (ಲೇಖಕರ ಮೂಲಕ ಮೂಡಿ ಬರುವ) 'ರಂಗಣ್ಣ'ನ ಅನುಭವದ ಕಥನ ಈ ಪುಸ್ತಕ.

Subscribe to ಪುಸ್ತಕ ವಿಮರ್ಶೆ