ಝೆನ್ ಕಥೆಗಳು (ಕಥಾ ಮಾಲಿಕೆ)

ಝೆನ್ ಕಥೆಗಳು

ಝೆನ್ ಕಥೆಗಳು ಒಂದು ರೀತಿಯಲ್ಲಿ "ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು" ಎಂಬ ರೀತಿಯವು. ಹೆಚ್ಚಿನವುಗಳು ಚಿಕ್ಕ ಕಥೆಗಳಾದರೂ ಇವುಗಳಲ್ಲಿ ತುಂಬಿರುವ ಅರ್ಥ ಅಗಾಧ. ಒಂದು ಬಾರಿ ಒಂದು ರೀತಿಯ ಅರ್ಥ ನೀಡುವಂತೆ ಭಾಸವಾಗುವ ಈ ಕಥೆಗಳು ಇನ್ನೊಂದು ಬಾರಿ ಓದಿದರೆ ಬೇರೆಯದೇ ಅರ್ಥ ಕೊಡುತ್ತವೆ. ಕೊನೆಗೆ ಎಲ್ಲಾ ಗೋಜಲಾಗಿ ಏನೂ ಅರ್ಥವಾಗದ ಕಥೆಗಳೂ ಇವೆ. ಆದರೂ ಇವುಗಳನ್ನು ಓದಿದಲ್ಲಿ ಏನೋ ಸಮಾಧಾನ ಆಗುವುದಂತೂ ಖಂಡಿತ.

 

ಕೆಲವು ಝೆನ್ ಕಥೆಗಳು ಇಲ್ಲಿವೆ.

 

 

ಘಂಟೆ ಹಾಗೂ ಗುರು

field_vote: 
Average: 3.2 (5 votes)
To prevent automated spam submissions leave this field empty.
ಸರಣಿ: 

ಆತುರ --ಒ೦ದು ಜ಼ೆನ್ ಕಥೆ

field_vote: 
Average: 4.5 (2 votes)
To prevent automated spam submissions leave this field empty.

ಯುದ್ಧಶಸ್ತ್ರಾಭ್ಯಾಸದ ವಿದ್ಯಾರ್ಥಿಯೊಬ್ಬ ತನ್ನ ಗುರುವಿನ ಬಳಿ ಹೋಗಿ ನಮ್ರನಾಗಿ ಕೇಳಿದ,'
' ನಿಮ್ಮ ಯುದ್ಧ ಕೌಶಲದ ಕಲೆಯನ್ನು ಕಲಿಯಲು ನಾನು ಬದ್ಧನಾಗಿದ್ದೇನೆ. ಅದರ  ಪರಿಣಿತಿ ಪಡೆಯಲು ಎಷ್ಟು ಕಾಲ ಬೇಕಾದೀತು?
ಗುರುವಿನ ಉತ್ತರ ಬಹಳ ಸರಳವಾಗಿತ್ತು,
'ಹತ್ತು ವರ್ಷಗಳು.'
ಅಸಹನೆಯಿ೦ದ ವಿದ್ಯಾರ್ಥಿ ಉತ್ತರಿಸಿದ,
'ಆದರೆ ನಾನು ಆ ಪರಿಣಿತಿಯನ್ನು ಅದಕ್ಕಿ೦ತಲೂ ಮು೦ಚೆಯೇ ಸಾಧಿಸಬೇಕೆ೦ದಿದ್ದೇನೆ. ಅದಕ್ಕೋಸ್ಕರ ನಾನು ಬಹಳ ಕಷ್ಟ ಪಡಬಲ್ಲೆ. ಪ್ರತಿ ದಿನ ಅಭ್ಯಾಸ ಮಾಡುತ್ತೇನೆ, ದಿನಕ್ಕೆ ಹತ್ತು ಅಥವಾ ಅದಕ್ಕಿ೦ತಲೂ ಹೆಚ್ಚು ಗ೦ಟೆಗಳು ಬೇಕಾದರೆ . ಹಾಗಾದಲ್ಲಿ ನನಗೆ ಎಷ್ಟು ಸಮಯ ಬೇಕಾದೀತು?

ಆ ಗುರು ಕೆಲ ಕ್ಷಣ ಕಾಲ ಯೋಚಿಸಿ ಮರುನುಡಿದರು.

"ಇಪ್ಪತ್ತು ವರ್ಷಗಳು."

***

ಹೋಗು ಸುಮ್ಮನೆ ಮಲಗು-ಜ಼ೆನ್

field_vote: 
Average: 4 (1 vote)
To prevent automated spam submissions leave this field empty.

ಗಾಸನ್ ತನ್ನ ಗುರು ಟೆಕಿಸ್ಯುವಿನ ಹಾಸಿಗೆಯ ಪಕ್ಕದಲ್ಲೇ ಕುಳಿತಿದ್ದ. ಸಾಯಲು ಮೂರು ದಿನ ಉಳಿದಿತ್ತು. ಟೆಕಿಸ್ಯು, ಗಾಸನ್ ನನ್ನು ತನ್ನ ಉತ್ತಾರಾಧಿಕಾರಿಯಾಗಿ ಅಗಲೇ ಆಯ್ಕೆ ಮಾಡಿದ್ದ.
ಒ೦ದು ದೇಗುಲ ಇತ್ತೀಚಿಗೆ ಸುಟ್ಟುಹೋಗಿತ್ತು. ಗಾಸನ್ ಮತ್ತೆ ಆ ದೇಗುಲವನ್ನು ಪುನನಿರ್ಮಾಣಮಾಡುವುದರಲ್ಲಿ ನಿರತನಾಗಿದ್ದ. ಟೆಕಿಸ್ಯು ಅವನನ್ನು ಕೇಳಿದ;

ಭಿಕ್ಷುಕನ ಜೀವನದಲ್ಲಿ ಜ಼ೆನ್

field_vote: 
No votes yet
To prevent automated spam submissions leave this field empty.

ಟೊಸಾಯಿ ತನ್ನ ಕಾಲದ ಒಬ್ಬ ಪ್ರಸಿದ್ಧ ಜ಼ೆನ್ ಗುರುವಾಗಿದ್ದ. ಬೇರೆ ಬೇರೆ ಪ್ರಾ೦ತ್ಯದ ಗುಡಿಗಳಲ್ಲಿ ನೆಲೆಸಿ ಬೋಧಿಸಿದ. ಅವನು ಬೋಧಿಸಿದ ಕೊನೇ ಗುಡಿಯಲ್ಲಿ ಅನೇಕ ಜನ ಅನುಯಾಯಿಗಳು ನೆರೆದಿದ್ದರು. ಆತ ಹೇಳಿದ, 'ಇದೇ ನನ್ನ ಅ೦ತಿಮ ಉಪದೇಶ. ಈ ಭೋಧೆಯ ಕೆಲಸ ತಾನು ಬಿಡುತ್ತೇನೆ.' ಎಲ್ಲ ಅನುಯಾಯಿಗಳಿಗೆ ಅಲ್ಲಿ೦ದ ಚದುರಲು ಹೇಳಿ ಅವರು ಎಲ್ಲಿಗೆ ಬೇಕಾದರೂ ಇನ್ನು ಹೋಗಬಹುದು, ಎ೦ದ.

ಒ೦ದು ಜ಼ೆನ್ ಕಥೆ:

field_vote: 
No votes yet
To prevent automated spam submissions leave this field empty.

ಒಬ್ಬ ಸನ್ಯಾಸಿ ಒಬ್ಬ ಗುರುವಿನ ಬಳಿ ಹೋದ. ತಾನು ಈಗ ತಾನೇ ಆಶ್ರಮವನ್ನು ಸೇರಿದ್ದೇನೆ. ತನಗೆ ಧರ್ಮದ ಮಾರ್ಗದರ್ಶನ ಮಾಡಬೇಕೆ೦ದು ಕೇಳಿಕೊ೦ಡ.
'ನಿನ್ನ ಉಪಾಹಾರವನ್ನು ಮುಗಿಸಿದ್ದೀಯಾ?' ಗುರುಗಳು ಪ್ರಶ್ನಿಸಿದರು.
'ಆಗಿದೆ'. ಭಿಕ್ಷು ಉತ್ತರಿಸಿದ.
'ಹಾಗಾದರೆ ಹೋಗು, ನಿನ್ನ ಪಾತ್ರೆಯನ್ನು ತೊಳೆದುಕೊ೦ಡು ಬಾ.' ಗುರು ಅದೇಶಿಸಿದ.

ಭಿಕ್ಷುವಿಗೆ ಜ್ಞಾನೋದಯವಾಯಿತು...

ಲ೦ಡನ್ ಪ್ರವಾಸಕಥನ ಭಾಗ ೧೪: ಒ೦ದಿಷ್ಟು ಚೂರು ಪಾರು--ಅಡುಗೆ

field_vote: 
Average: 5 (1 vote)
To prevent automated spam submissions leave this field empty.

ನನ್ನ ಕೋಣೆಯ ಪಕ್ಕದಲ್ಲಿ ಕಾಮನ್ ಕಿಚನ್ ಎ೦ದೆ. ದಿನವಹೀ ಅಲ್ಲಿ ಒಬ್ಬರಲ್ಲ ಒಬ್ಬರು ಅಡುಗೆ ಮಾಡುವದು ‘ಕಾಮನ್' ಆದ್ದರಿ೦ದ ಅದನ್ನು ಕಾಮನ್ ಕಿಚನ್ ಅನ್ನುವುದು. ಅಡುಗೆ ಮಾಡಲು ಹೋದಾಗಲೆಲ್ಲ ಸ್ಟೌವಿನ ಮೇಲೆ ಯಾರಾದರೂ ಏನನ್ನಾದರೂ ಬೇಯಿಸಿರುತ್ತಿದ್ದರು. ಜಮೈಕದ ಹುಡುಗಿ ಬೇಯಿಸಿರುತ್ತಿದ್ದ ಅಡುಗೆ ನನ್ನ ಫೇವರಿಟ್--ಏಕೆ೦ದರೆ ಅದು ಯಾವ ಪ್ರಾಣಿಯ ಯಾವ ಭಾಗ ಎ೦ಬುದು ಕೊನೆಗೂ ತಿಳಿಯುತ್ತಿರಲಿಲ್ಲ. ಆದರೆ ಅದರೆ ರುಚಿ ಮಾತ್ರ ಅದ್ವಿತೀಯ. ತವ್ವದ ಮೇಲಿರುತ್ತಿದ್ದ ಹತ್ತಾರು ದೊಡ್ಡ ದೊಡ್ಡ ಮಾ೦ಸದ ತು೦ಡುಗಳಲ್ಲಿ ಒ೦ದು ಬಾರಿಗೆ ಒ೦ದು ಪೀಸನ್ನು ಮತ್ರ ಎತ್ತಿಕೊಳ್ಳುತ್ತಿದ್ದೆ. ಹಾಗೆ ಮಾಡಲು ನನಗೆ ನಾನೇ ಅನುಮತಿ ನೀಡಿಕೊಳ್ಳುತ್ತಿದ್ದೆ. ಬದಲಿಗೆ ಜಮೈಕದ ಹುಡುಗಿ ಮೇರಿಗೆ ಆಗಾಗ ಏನಾದರೂ ಗಿಫ್ಟ್ ನೀಡುತ್ತಿದ್ದೆ. ‘ಕಾರ್ಯಕಾರಣ ಸ೦ಬ೦ಧ'ವೆ೦ದರೇನೆ೦ದು ಕೇಳಿ ತಿಳಿಯದ ಆಕೆಗೆ ಮಟನ್ನಿಗಾಗಿ ನೀಡಲಾಗಿತ್ತಿದ್ದ ಗಿಫ್ಟ್ ಅದು ಎ೦ದು ಹೇಗೆ ತಿಳಿಹೇಳಲಿ ಹೇಳಿ. ‘ಧನ ತಿನ್ನುವವನಿಗೆ ಗೊಬ್ಬರದಾಣೆ' ಎ೦ದ೦ತಾಯ್ತಿದು!        

ಝೆನ್ ಕಥೆ: ಝೆನ್ ಅಂದರೆ ಎಲ್ಲದಕ್ಕೂ ಅರ್ಥ ಹುಡುಕೋದಲ್ಲ!

field_vote: 
No votes yet
To prevent automated spam submissions leave this field empty.

     ಜಪಾನ್ ದೇಶದ ಪ್ರಸಿದ್ಧ ಝೆನ್ ಗುರುವೊಬ್ಬ ತನ್ನ ಆಶ್ರಮದಲ್ಲಿ ಆರಾಮವಾಗಿ ಕಾಲು ಚಾಚಿ ಕುಳಿತು ವಿಶ್ರಾಂತಿ ಪಡೆಯುತ್ತಿದ್ದ. ಅವನ ಪಕ್ಕದಲ್ಲಿಯೇ ಶಿಷ್ಯನೊಬ್ಬ ಝೆನ್ ಗ್ರಂಥವೊಂದನ್ನು ಓದುತ್ತ ಕುಳಿತಿದ್ದ. ಮಧ್ಯಾಹ್ನ ಬಿಸಿಲಿನ ಸಮಯ. ಗುರುವಿಗೆ ಏನಾದರೂ ಹಣ್ಣನ್ನು ತಿನ್ನಬೇಕೆಂದು ಅನ್ನಿಸಿ ತನ್ನ ಕೈಚೀಲದಿಂದ ಮೂಸಂಬಿಯೊಂದನ್ನು ಹೊರತೆಗೆದ. ಒಬ್ಬನೇ ತಿನ್ನುವುದು ಸರಿಯಲ್ಲವೆನಿಸಿ, ಪಕ್ಕದಲ್ಲಿಯೇ ಇದ್ದ ಶಿಷ್ಯನಿಗೂ ಕೊಡುವುದಕ್ಕೆಂದು ಹಣ್ಣನ್ನು ಎರಡು ಭಾಗ ಮಾಡಿ, ಶಿಷ್ಯನಿಗೆ ಒಂದನ್ನು ಕೊಟ್ಟು ತನ್ನ ಭಾಗದ ಮೂಸಂಬಿಯನ್ನು ತಿನ್ನಲು ಪ್ರಾರಂಭಿಸಿದ.

ಇನ್ನೊಂದು ಒಳೆಯ ಝೆನ್ ಕಥೆ :- ಒಮ್ಮೊಮ್ಮೆ ಹಾಗಾಗುತ್ತದೆ!

field_vote: 
Average: 4.5 (2 votes)
To prevent automated spam submissions leave this field empty.

ಒಬ್ಬ ಶಿಷ್ಯ ಗುರುವಿನ ಬಳಿ ಹೋಗಿ
"ಗುರುಗಳೇ ನನ್ನಿಂದ ಏಕಾಗ್ರತೆಯನ್ನು ಸಾಧಿಸಲಾಗುತ್ತಿಲ್ಲ ; ಧ್ಯಾನ ಮಾಡಲಾಗುತ್ತಿಲ್ಲ ; ಸಾಧನೆ ಮಾಡಲು ನನ್ನಲ್ಲಿ ಯೋಗ್ಯತೆ ಇಲ್ಲವೇನೋ ಅನಿಸುತ್ತಿದೆ. ಬಹಳ ನಿರಾಶೆಯಾಗಿದೆ" ಎಂದು ಹೇಳುತ್ತಾನೆ.

ನಾನು ಈವರೆಗೂ ಸತ್ತಿಲ್ಲ!- ಝೆನ್ ಕಥೆ

field_vote: 
No votes yet
To prevent automated spam submissions leave this field empty.

ಒಬ್ಬ ರಾಜ ಗುರುವಿಗೆ ಕೇಳುತ್ತಾನೆ. ' ಜ್ಞಾನೋದಯವಾದವನು ಸತ್ತ ನಂತರ ಏನಾಗುತ್ತಾನೆ? '
ಗುರು ಹೇಳುತ್ತಾನೆ ' ನನಗೆ ಗೊತ್ತಿಲ್ಲ' .

ಗುರುತಿನ ಚೀಟಿ-ಝೆನ್ ಕಥೆ

field_vote: 
No votes yet
To prevent automated spam submissions leave this field empty.

ಕಿತಾಗಾಕಿ ಗುರುವನ್ನು ಭೆಟ್ಟಿಯಾಗಲು ಬಂದ . ಆಗ ಅವನು ಕ್ಯೋಟೊ ಪ್ರಾಂತದ ರಾಜ್ಯಪಾಲನಾಗಿದ್ದ . ತನ್ನ ಗುರುತಿನ ಚೀಟಿಯನ್ನು ಗುರುವಿನ ಸಹಾಯಕನ ಮೂಲಕ ಕೊಟ್ಟು ಕಳಿಸಿದ . ಆ ಚೀಟಿಯಲ್ಲಿ ಹೀಗೆ ಬರೆದಿತ್ತು - " ಕಿತಾಗಾಕಿ , ಕ್ಯೋಟೊದ ಗವರ್ನರ್ ". ಗುರು ಅದನ್ನು ನೋಡಿ ಹೇಳಿದ - " ಗವರ್ನರ್ ಜತೆಗೆ ನನಗೆ ಏನು ಕೆಲಸ ? ಅವನಿಗೆ ಹೋಗಲು ಹೇಳಿ " . ಸಹಾಯಕ ವಿಷಾದ ಸೂಚಿಸುತ್ತ ಆ ಚೀಟಿಯನ್ನು ಹೊರಗೆ ಕಾದು ನಿಂತಿದ್ದ ಕಿತಾಗಾಕಿಗೆ ಮರಳಿಸಿದ . "ನನ್ನದೇ ತಪ್ಪು " ಎಂದ ರಾಜ್ಯಪಾಲ ಚೀಟಿಯಲ್ಲಿದ್ದ " ಕ್ಯೋಟೊದ ಗವರ್ನರ್ " ಎಂಬ ಬರಹವನ್ನು ಗೀಚಿ ಮರೆ ಮಾಡಿ ' ನಿಮ್ಮ ಗುರುಗಳನ್ನು ಇನ್ನೊಮ್ಮೆ ವಿನಂತಿಸುತ್ತೀರಾ ? ' ಎಂದು ಕೇಳಿದ . ಗುರು ಆ ಚೀಟಿಯನ್ನು ನೋಡಿದವನೇ " ಓ! ಇದು ನಮ್ಮ ಕಿತಾಗಾಕಿಯಲ್ಲವೇ ?

ಎಚ್ಚರ -ಝೆನ್ ಕಥೆ

field_vote: 
No votes yet
To prevent automated spam submissions leave this field empty.

ಜು‌ಇಗನ್ ಎಂಬ ಒಬ್ಬ ಭಿಕ್ಷು ಪ್ರತಿನಿತ್ಯ ಬೆಳಿಗ್ಗೆ ಎದ್ದ ಕೂಡಲೇ ಮತ್ತೆಲ್ಲಕ್ಕಿಂತ ಮುಂಚೆ ತನಗೆ ತಾನೇ ಪ್ರಶ್ನೋತ್ತರ ನಡೆಸಿಕೊಳ್ಳುತ್ತಿದ್ದ . ಇಬ್ಬರ ಮಧ್ಯೆ ಅನ್ನುವ ಹಾಗೆ ಪ್ರಶ್ನೆ ಕೇಳಿಕೊಂಡು ಅದಕ್ಕೆ ತಾನೇ ಉತ್ತರ ಕೊಟ್ಟುಕೊಳ್ಳುತ್ತಿದ್ದ. ಹೀಗೆ-

ತಗೋ ಬೆಳಕು

field_vote: 
Average: 4.5 (2 votes)
To prevent automated spam submissions leave this field empty.

ಶಿಷ್ಯ ಪ್ರತಿದಿನ ಗುರುವಿನ ಹತ್ತಿರ ಬರುತ್ತಿದ್ದ. ಒಂದು ದಿನ ರಾತ್ರಿ ಹೊತ್ತಾಗಿಬಿಟ್ಟಿತು .

ಬೋಧನೆಯ ವರಸೆ - ಮತ್ತು ಇತರ ಕಥೆಗಳು

field_vote: 
No votes yet
To prevent automated spam submissions leave this field empty.

ಗುರು ಸಿಯುಂಗ್ ಸಾನ್ ತನ್ನ ವಿದ್ಯಾರ್ಥಿಗಳಿಗೆ ಯಾವಾಗಲೂ ಹೇಳುತ್ತಿದ್ದ - " ನೀವು ತಿನ್ನುತ್ತಿರುವಾಗ ಕೇವಲ ತಿನ್ನಿ , ಅಷ್ಟೆ . ಪೇಪರ್ ಓದುವಾಗ ಕೇವಲ ಪೇಪರ್ ಓದಿ, ಅಷ್ಟೆ . ನೀವು ಏನು ಮಾಡುತ್ತೀರೋ ಅದಕ್ಕಿಂತ ಹೊರತಾದದ್ದನ್ನು ಮಾಡಬೇಡಿ , ಎರಡೆರಡು ಕಡೆ ಗಮನ ಹರಿಸಬೇಡಿ . " ಒಂದು ದಿನ ಗುರು ಏನನ್ನೋ ತಿನ್ನುತ್ತ ಪೇಪರ್ ಓದುತ್ತಿರುವದನ್ನು ನೋಡಿದ ಶಿಷ್ಯ ಕೇಳಿದ -" ನಿಮ್ಮ ಬೋಧನೆಗೆ ವ್ಯತಿರಿಕ್ತವಾದದ್ದಲ್ಲವೇ ಇದು ? " ಗುರು ಉತ್ತರಿಸಿದ - " ನೀನು ತಿನ್ನುತ್ತ ಪೇಪರ್ ಓದುತ್ತ ಇರುವಾಗ , ಕೇವಲ ತಿನ್ನುತ್ತ ಪೇಪರ್ ಓದು ಅಷ್ಟೇ ".

ನಶ್ವರತೆ-ಝೆನ್ ಕಥೆ

field_vote: 
Average: 1 (1 vote)
To prevent automated spam submissions leave this field empty.

ಗುರುವಿನ ಹತ್ತಿರ ಒಂದು ಬೆಲೆಬಾಳುವ ಪಿಂಗಾಣಿ ಬಟ್ಟಲು ಇತ್ತು . ಶಿಷ್ಯ ಇಕ್ಯೂ ಒಂದು ದಿನ ಅಕಸ್ಮಾತ್ತಾಗಿ ಒಡೆದುಬಿಟ್ಟ . ಗುರು ಅತ್ತಲೇ ಬರುವದು ಕಂಡಿತು . ಬಟ್ಟಲಿನ ಚೂರುಗಳನ್ನು ಮರೆ ಮಾಡಿಟ್ಟ .

ಇಬ್ಬರು ಸನ್ಯಾಸಿಗಳು ಮತ್ತು ಒಬ್ಬ ತರುಣಿ

field_vote: 
Average: 3.5 (2 votes)
To prevent automated spam submissions leave this field empty.

ಇಬ್ಬರು ಸನ್ಯಾಸಿಗಳು ಒಂದು ತುಂಬಿ ಹರಿಯುತ್ತಿರುವ ಹೊಳೆಯನ್ನು ದಾಟುತ್ತಿರುವಾಗ ಒಬ್ಬ ಹರೆಯದ ಸುಂದರ ತರುಣಿ ಹೊಳೆಯನ್ನು ದಾಟಲು ಅವರ ಸಹಾಯ ಕೇಳಿದಳು. ಅವರಲ್ಲೊಬ್ಬ ಸಹಾಯ ಮಾಡಲು ಒಪ್ಪಿ ಅವಳನ್ನು ಹೊತ್ತುಕೊಂಡು ನದಿಯನ್ನು ದಾಟಿಸಿ ಅವಳನ್ನು ಇಳಿಸಿದ.

ಬುದ್ಧ ಮತ್ತು ಬೆಂಕಿ- ಝೆನ್ ಕಥೆ

field_vote: 
Average: 3 (3 votes)
To prevent automated spam submissions leave this field empty.

ಸಂಚಾರದಲ್ಲಿದ್ದ ಸನ್ಯಾಸಿ ಒಂದು ಬೌದ್ಧ ಮಂದಿರದಲ್ಲಿ ರಾತ್ರಿಗೆಂದು ಉಳಿದುಕೊಳ್ಳುತ್ತಾನೆ. ಚಳಿ ಬಹಳ ಇತ್ತು. ಅಗ್ಗಿಷ್ಟಿಕೆ ಬೆಂಕಿ ಆರತೊಡಗಿತ್ತು. ಅಲ್ಲಿ ಕಟ್ಟಿಗೆಯೂ ಇರಲಿಲ್ಲ . ಸನ್ಯಾಸಿ ಅಲ್ಲಿದ್ದ ಬುದ್ಧನ ಕಟ್ಟಿಗೆಯ ಮೂರ್ತಿಯೊಂದನ್ನು ತೆಗೆದುಕೊಂಡು ಬೆಂಕಿಗೆ ಚಾಚಿದ . ಇದನ್ನು ನೋಡಿದ ಮಂದಿರದ ಪೂಜಾರಿಗೆ ಅಘಾತವಾಯಿತು. ಸನ್ಯಾಸಿ ಅದನ್ನು ಗಮನಿಸಿದ. ಒಂದು ಕಡ್ಡಿಯನ್ನು ತೆಗೆದುಕೊಂಡು ಬೆಂಕಿಯನ್ನು ಕೆದರುತ್ತ ಏನನ್ನೊ ಹುಡುಕತೊಡಗಿದ ಪೂಜಾರಿ .ಕುತೂಹಲದಿಂದ 'ಏನನ್ನು ಹುಡುಕುತ್ತ ಇದ್ದೀರಿ?' ಎಂದು ಕೇಳಿದ.'ಹೌದು. ಭಗವಾನ್ ಬುದ್ದನ ಅಸ್ಥಿಗಳನ್ನು ಹುಡುಕುತ್ತ ಇದ್ದೇನೆ ' ಎಂದ. 'ಮರದ ಪ್ರತಿಮೆ ಸುಟ್ಟರೆ ಅಸ್ತಿ ಸಿಗುತ್ತದೆಯೆ?' ಎಂದು ನಕ್ಕ ಪೂಜಾರಿ . ಅದಕ್ಕೆ ಗುರು ಹೇಳಿದ. ' ಹೌದಲ್ಲವೆ?

ತಟ್ಟೆಯ ಮಾತು.- ಝೆನ್ ಕಥೆ

field_vote: 
No votes yet
To prevent automated spam submissions leave this field empty.

ಹೊಸಬನಾದ ಒಬ್ಬ ಭಿಕ್ಷು ಗುರುವಿನ ಹತ್ತಿರ ಬಂದ. ಹೇಳಿದ - "ಈಗಷ್ಟೆ ನಾನು ಸಂಘದಲ್ಲಿ ಸೇರಿಕೊಂಡಿದ್ದೇನೆ. ಜ಼ೆನ್ ನ್ ಪ್ರಥಮ ತತ್ವವನ್ನು ತಿಳಿಯಲು ಕಾತರನಾಗಿದ್ದೇನೆ. ನನಗೆ ಅದನ್ನು ಬೋಧಿಸುತ್ತೀರ, ಗುರುವೆ? "

ನಿತ್ಯ ಪವಾಡಗಳು-ಝೆನ್ ಕಥೆ

field_vote: 
No votes yet
To prevent automated spam submissions leave this field empty.

ಗುರುವಿನ ಪ್ರವಚನ ನಡೆದಿತ್ತು . ಬೇರೆ ಧರ್ಮದ ಪುರೋಹಿತನೊಬ್ಬ ನಡುವೆ ಬಾಯಿ ಹಾಕಿ ತನ್ನ ದರ್ಮಸಂಸ್ಥಾಪಕನ ಪವಾಡಗಳನ್ನು ಹೇಳಿ "ನೀವು ಅಂಥ ಪವಾಡ ಮಾಡಬಲ್ಲಿರ ?" ಎಂದು ಪ್ರಶ್ನಿಸಿದ.

ಪರಿಶುದ್ಧ ಚರಿತ್ರ-ಝೆನ್ ಕಥೆ

field_vote: 
No votes yet
To prevent automated spam submissions leave this field empty.

ಜ಼ೆನ್ ಗುರು ಹಕು‌ಇನ್ ಪರಿಶುದ್ಧ ಚರಿತ್ರನೆಂದು ಎಲ್ಲರೂ ಹೇಳುತ್ತಿದ್ದರು . ಹೀಗಿರುವಾಗ ಒಂದು ಘಟನೆ ನಡೆಯಿತು . ಸಮೀಪದಲ್ಲಿ ಇದ್ದ ಒಬ್ಬ ಎಳೆಯ ಅವಿವಾಹಿತ ಹುಡುಗಿ ಗರ್ಭಿಣಿಯಾದಳು . ತಂದೆ ತಾಯಿ ಅವಳನ್ನು ಅದಕ್ಕೆ ಕಾರಣ ಯಾರು ಎಂದು ತಿಳಿಯಲು ಪ್ರಯತ್ನಿಸಿದರು. ಆಕೆ ಮೊದಲು ಬಾಯಿ ಬಿಡಲಿಲ್ಲ . ಅವಳಿಗೆ ಹಿಂಸೆ ಕೊಟ್ಟಾಗ ಗುರು ಹಕು‌ಇನ್ ನ ಹೆಸರು ಹೇಳಿದಳು.

ಗಾಳಿ ಮತ್ತು ಧ್ವಜ - ಒಂದು ಒಳ್ಳೆಯ ಝೆನ್ ಕಥೆ

field_vote: 
No votes yet
To prevent automated spam submissions leave this field empty.

ಗಾಳಿ ಬಲವಾಗಿ ಬೀಸುತ್ತಿತ್ತು. ದ್ವಜ ಗಾಳಿಗೆ ಪಟಪಟಿಸುತ್ತಿತ್ತು. ಅಲ್ಲಿ ಇಬ್ಬರು ಭಿಕ್ಷುಗಳು ನಿಂತಿದ್ದರು . ಒಬ್ಬ ಹೇಳಿದ. " ಚಲಿಸುತ್ತಿರುವದು ಗಾಳಿಯಲ್ಲ, ದ್ವಜ." .

ಝೆನ್ ಕಥೆ ೩೪: ಜ್ಞಾನೋದಯ

field_vote: 
No votes yet
To prevent automated spam submissions leave this field empty.

ಶಿಷ್ಯನೊಬ್ಬ ಗುರುವನ್ನು ಕೇಳಿದ: "ಗುರುವೇ, ಜ್ಞಾನೋದಯ ಎಂದರೆ ಏನು?"

ಗುರು ಹೇಳಿದ: "ಹಸಿವಾದಾಗ ಉಣ್ಣು, ಬಾಯಾರಿದಾಗ ನೀರು ಕುಡಿ, ನಿದ್ರೆ ಬಂದಾಗ ಮಲಗು"

ಝೆನ್ ಕಥೆ ೩೩: ಸಾವಧಾನ!

field_vote: 
No votes yet
To prevent automated spam submissions leave this field empty.
try hard
 ಕತ್ತಿವರಸೆಯನ್ನು ಕಲಿಯುವುದರಲ್ಲಿ ಆಸಕ್ತನಾಗಿದ್ದ ಯುವಕನೊಬ್ಬ ಝೆನ್ ಗುರುವಿನ ಬಳಿಗೆ ಬಂದ.
"ನಾನು ನಿಮ್ಮ ಬಳಿ ಕತ್ತಿವರಸೆಯ ಕೌಶಲ ಕಲಿಯಬೇಕೆಂದಿದ್ದೇನೆ. ಪರಿಣತಿಯನ್ನು ಪಡೆಯಲು ಎಷ್ಟು ಕಾಲ ಬೇಕಾದೀತು?" ಎಂದು ಕೇಳಿದ.
ತೀರ ಸಹಜವೆಂಬಂತೆ ಗುರು "ಹತ್ತು ವರ್ಷ" ಎಂದ.
"ನನಗೆ ಬೇಗ ಕಲಿಯಬೇಕೆಂದು ಇಷ್ಟ. ಪ್ರತಿ ದಿನವೂ, ದಿನಕ್ಕೆ ಹದಿನೆಂಟು ಗಂಟೆಯ ಕಾಲ ಬೇಕಾದರೆ ಅಭ್ಯಾಸ ಮಾಡಬಲ್ಲೆ. ಹಾಗಾದರೆ ಎಷ್ಟು ಕಾಲ ಹಿಡಿದೀತು?" ಆತುರದಿಂದ  ಯುವಕ ಕೇಳಿದ.
ಗುರು ಒಂದು ಕ್ಷಣ ಯೋಚನೆ ಮಾಡಿ "ಇಪ್ಪತ್ತು ವರ್ಷ" ಎಂದ.

[ನಮ್ಮ ಮಕ್ಕಳ ಶಿಕ್ಷಣದ ಬಗ್ಗೆ ನಾವು ಯೋಚಿಸುವ ರೀತಿಯನ್ನು ನೆನಪಿಸಿಕೊಳ್ಳಿ!] 

ಝೆನ್ ಕಥೆ ೩೨: ಕೌಶಲ ಮತ್ತು ಮನಸ್ಸು

field_vote: 
No votes yet
To prevent automated spam submissions leave this field empty.
archer
 

ಅನೇಕ ಬಿಲ್ಲುಗಾರಿಕೆಯ ಸ್ಪರ್ಧೆಗಳಲ್ಲಿ ಬಹುಮಾನ ಗೆದ್ದಿದ್ದ ಅಹಂಕಾರಿ ಯುವಕನೊಬ್ಬ  ಧನುರ್ವಿದ್ಯೆಯಲ್ಲಿ ಪರಿಣತನಾಗಿದ್ದ ಝೆನ್ ಗುರುವಿನ ಬಳಿ ಬಂದು ಪಂದ್ಯ ಕಟ್ಟಿದ.
ಯುವಕ ಚತುರ ಬಿಲ್ಲುಗಾರ. ದೂರದಲ್ಲಿದ್ದ ಗುರಿಗೆ ಸರಿಯಾಗಿ ಬಾಣ ಬಿಟ್ಟ. ಎರಡನೆಯ ಬಾಣದಿಂದ ಮೊದಲ ಬಾಣವನ್ನು ಸರಿಯಾಗಿ ಎರಡು ಭಾಗವಾಗುವಂತೆ ಸೀಳಿದ. "ನಿಮ್ಮ ಕೈಯಲ್ಲಿ ಆಗುವುದೋ ನೋಡಿ" ಎಂದ ಹೆಮ್ಮೆಯಿಂದ.
ಗುರು ವಿಚಲಿತನಾಗಲಿಲ್ಲ. ಹಾಗೆಂದು ಕೂಡಲೆ ಬಿಲ್ಲು ಎತ್ತಿ ಬಾಣ ಬಿಡಲೂ ಇಲ್ಲ. ಬಾ ನನ್ನೊಡನೆ ಎಂದು ಹೇಳಿ ಬೆಟ್ಟ ಏರ ತೊಡಗಿದ. ವೃದ್ಧನ ಉದ್ದೇಶ ಏನಿರಬಹುದೆಂದು ಅಚ್ಚರಿ ಪಡುತ್ತಾ ಯುವಕ ಹಿಂದೆಯೇ ಸಾಗಿದ.
ಬೆಟ್ಟದ ತುದಿ ಬಂದಿತು. ಅಲ್ಲೊಂದು ಆಳವಾದ ಕಮರಿ. ಅದಕ್ಕೆ ಅಡ್ಡಲಾಗಿ ಲಡ್ಡು ಹಿಡಿದಿದ್ದ ಮರದ ತುಂಡೇ ಸೇತುವೆ. ಕಾಲಿಟ್ಟರೆ ಸಾಕು ಅಲುಗಾಡುತ್ತಿತ್ತು. ಗುರು ಆ ಮರದ ದಿಮ್ಮಿಯ ಮಧ್ಯ ಭಾಗಕ್ಕೆ ನಡೆದು ಸ್ಥಿರವಾಗಿ ನಿಂತ. ದೂರ ಮರದಲ್ಲಿದ್ದ ಹಣ್ಣಿಗೆ ಗುರಿ ಇಟ್ಟು ಬಾಣ ಬಿಟ್ಟ. ಹಣ್ಣು ಬಿತ್ತು. " ಮತ್ತೆ ಹಿಂದಿರುಗಿ ಈಗ ನಿನ್ನ ಸರದಿ" ಎಂದ ಯುವಕನತ್ತ ನೋಡುತ್ತಾ.
ಆಳವಾದ ಕಮರಿಯನ್ನು ನೋಡುತ್ತ ಯುವಕ ಭಯ ಭೀತನಾಗಿದ್ದ. ಲಡ್ಡು ಹಿಡಿದ ಮರದ ದಿಮ್ಮಿಯ ಮೇಲೆ ಕಾಲಿಡುವುದಕ್ಕೇ ಅವನಿಗೆ ಧೈರ್ಯವಾಗಲಿಲ್ಲ. ಅಲ್ಲಿ ನಿಂತು ಬಾಣಬಿಡುವ ಮಾತು ದೂರವೇ ಉಳಿಯಿತು.
"ನಿನಗೆ ಬಿಲ್ಲುಗಾರಿಕೆಯ ಕೌಶಲವಿದೆ. ಆದರೆ ಬಾಣವನ್ನು ಎಸೆಯುವ ಬಿಲ್ಲನ್ನೂ, ಬಾಣವನ್ನು ಬಿಡುವ ಕೈಯನ್ನೂ ನಿಯಂತ್ರಿಸುವ ಮನಸ್ಸನ್ನು ನೀನು ಹೇಳಿದಂತೆ ಕೇಳುವಹಾಗೆ ಮಾಡುವ ಕೌಶಲ ಬಂದಿಲ್ಲ" ಎಂದ ಗುರು.

ಝೆನ್ ಕಥೆ ೩೧: ಚೆಲುವು

field_vote: 
No votes yet
To prevent automated spam submissions leave this field empty.

ಸುಪ್ರಸಿದ್ಧ ಝೆನ್ ದೇವಾಲಯವೊಂದರಲ್ಲಿ ಯುವಕ ಸನ್ಯಾಸಿಯೊಬ್ಬನಿಗೆ ತೋಟವನ್ನು ನೋಡಿಕೊಳ್ಳುವ ಕೆಲಸ ಕೊದಲಾಗಿತ್ತು. ಅವನಿಗೆ ಹೂಗಳು, ಗಿಡಮರಗಳು ಎಂದರೆ ಬಹಳ ಪ್ರೀತಿ, ಅದಕ್ಕೇ ಆ ಕೆಲಸ ಕೊಟ್ಟಿದ್ದರು. ಆ ದೇವಸ್ಥಾನದ ಪಕ್ಕದಲ್ಲಿ ಇನ್ನೊಂದು ಹಳೆಯ ಪುಟ್ಟ ದೇವಸ್ಥಾನವಿತ್ತು. ಅಲ್ಲೊಬ್ಬ ವಯಸ್ಸಾದ ಝೆನ್ ಗುರು ಇದ್ದ.

ಝೆನ್ ಕತೆ: ಯಾರಿಗೆ ಗೊತ್ತು?

field_vote: 
No votes yet
To prevent automated spam submissions leave this field empty.

ಹೊಸ ವರ್ಷದ ಪಾರ್ಟಿಯಲ್ಲಿ ಮೂವರು ಮುದುಕರು ಕೂತು ಮಾತಾಡುತ್ತಿದ್ದರು. “ಇವತ್ತು ಪಾರ್ಟಿಗೆ ಬಂದಿರುವವರಲ್ಲಿ ಎಷ್ಟು ಜನ ಮುಂದಿನ ವರ್ಷದ ಪಾರ್ಟಿಗೆ ಯಾರಿರುತ್ತಾರೋ ಯಾರಿಲ್ಲವೋ, ಯಾರಿಗೆ ಗೊತ್ತು?” ಅವನ ಗೆಳೆಯ ಹೇಳಿದ, “ನೀನು ಮುಂದಿನ ವರ್ಷ ಅಂದದ್ದು ದೂರದ ಮಾತು. ಇವತ್ತು ರಾತ್ರಿ ನಾವು ಮನೆಗೆ ಹೋಗಿ ಶೂ ಬಿಚ್ಚಿ, ಸಾಕ್ಸು ತೆಗೆದಿಟ್ಟ ಮೇಲೆ ನಾಳೆ ಬೆಳಗ್ಗೆ ಅವನ್ನು ಹಾಕಿಕೊಳ್ಳಲು ಇರುತ್ತೇವೋ ಇಲ್ಲವೋ ಯಾರಿಗೆ ಗೊತ್ತು?” ಮೂರನೆಯಾತ ನುಡಿದ: “ಅಯ್ಯಾ ನೀನು ನಾಳೆ ಎಂದು ಬಲು ದೂರದ ಮಾತು ಹೇಳುತ್ತಿರುವೆ. ನಾವು ಬಿಟ್ಟ ಉಸಿರು ಗೊತ್ತು, ಬಿಟ್ಟ ಉಸಿರನ್ನು ಒಳಗೆ ಎಳೆದುಕೊಳ್ಳಲು ಇರುತ್ತೇವೋ ಇಲ್ಲವೋ ಯಾರಿಗೆ ಗೊತ್ತು?”

ಝೆನ್: ಕೆಲವು ಉಪದೇಶಗಳು: ನಿರ್ಲಿಪ್ತಿ

field_vote: 
No votes yet
To prevent automated spam submissions leave this field empty.

ತಾಂಗ್ ವಂಶದವರ ಆಳ್ವಿಕೆಯ ಕಾಲದಲ್ಲಿದ್ದ ಝೆನ್ ಗುರು ಝೆನ್‌ಗೆಟ್ಸು ತನ್ನ ಶಿಷ್ಯರಿಗೆ ಹೀಗೆ ಉಪದೇಶಗಳನ್ನು ಮಾಡಿದ:

ಝೆನ್ ಕಥೆ: ೨೮ ಮೌನ

field_vote: 
No votes yet
To prevent automated spam submissions leave this field empty.

ಝೆನ್ ಇನ್ನೂ ಜಪಾನಿನಲ್ಲಿ ಪರಿಚಯಗೊಳ್ಳುವ ಮುನ್ನ ತೆಂಡೈ ಪಂಥದ ನಾಲ್ವರು ವಿದ್ಯಾರ್ಥಿಗಳು ಧ್ಯಾನವನ್ನು ಅಭ್ಯಾಸ ಮಾಡುತ್ತಿದ್ದರು. ಅವರು ನಾಲ್ಕು ಜನರೂ ಆತ್ಮೀಯ ಸ್ನೇಹಿತರು. ಏಳು ದಿನಗಳ ಕಾಲ ಮೌನವನ್ನು ಪಾಲಿಸಬೇಕೆಂದು ನಿರ್ಧರಿಸಿದರು.

ಝೆನ್ ಕತೆ: ೨೭ ಬದಲಾವಣೆ

field_vote: 
No votes yet
To prevent automated spam submissions leave this field empty.

ಗುರು ರ್ಯೋಕಾನ್ ತನ್ನ ಇಡೀ ಜೀವಿತವನ್ನು ಝೆನ್ ಅಭ್ಯಾಸದಲ್ಲಿ ಕಳೆದಿದ್ದ. ಒಂದು ದಿನ ತನ್ನ ಸೋದರಳಿಯ ವೇಶ್ಯೆಯೊಬ್ಬಳ ಸಹವಾಸಕ್ಕೆ ಬಿದ್ದಿದ್ದಾನೆ, ಸಂಪತ್ತನ್ನೆಲ್ಲ ಹಾಳು ಮಾಡುತ್ತಿದ್ದಾನೆ ಎಂದು ತಿಳಿಯಿತು. ಬಂಧುಗಳೆಲ್ಲ ಬಂದು ರ್ಯೋಕಾನ್ ತನ್ನ ಸೋದರಳಿಯನಿಗೆ ಬುದ್ಧಿ ಹೇಳದಿದ್ದರೆ ಕುಟುಂಬದ ಸಂಪತ್ತೆಲ್ಲ ನಾಶವಾಗುತ್ತದೆ ಎಂದು ಗೋಳಾಡಿದರು.

ಝೆನ್ ಕತೆ: ೨೬: ಅಮ್ಮನಂತೆ ಕತೆ ಹೇಳು

field_vote: 
No votes yet
To prevent automated spam submissions leave this field empty.

ಎನ್ಕೋ ಸುಪ್ರಸಿದ್ಧ ಕತೆಗಾರ. ಅವನು ಪ್ರೀತಿಯ ಕತೆ ಹೇಳಿದಾಗ ಕೇಳುಗರ ಮನಸ್ಸಿನ ತುಂಬ ಪ್ರೀತಿಯ ಭಾವ ತುಂಬಿಕೊಳ್ಳುತ್ತಿತ್ತು. ಯುದ್ಧದ ಕತೆ ಹೇಳಿದಾಗ ಕೇಳುಗರು ತಾವೂ ಸೈನ್ಯಕ್ಕೆ ಸೇರಿ ಯುದ್ಧಮಾಡಬೇಕು ಎಂದು ಹಾತೊರೆಯುವಂತೆ ಆಗುತ್ತಿತ್ತು.

ಝೆನ್ ಕತೆ ೨೫: ಒಳ್ಳೆಯ ಆಶೀರ್ವಾದ

field_vote: 
No votes yet
To prevent automated spam submissions leave this field empty.

ಗುರು ಸೆನ್ಗಿಯನ್ನು ಶ್ರೀಮಂತನೊಬ್ಬ ಕೇಳಿದ. “ಗುರುವೇ, ನಮ್ಮ ಮನೆತನದವರಿಗೆ ಒಳ್ಳೆಯದಾಗಲೆಂದು ಆಶೀರ್ವಾದದ ಮಾತುಗಳನ್ನು ಬರೆದುಕೊಡು. ಅದನ್ನು ನಮ್ಮ ವಂಶದವರೆಲ್ಲ ನಿನ್ನ ಹರಕೆಯೆಂದು ಜೋಪಾನವಾಗಿ ಕಾಪಾಡಿಕೊಳ್ಳುತ್ತೇವೆ” ಎಂದ.

ಝೆನ್ ಕತೆ: ೨೪: ಸಾಯುವ ಸಮಯ

field_vote: 
No votes yet
To prevent automated spam submissions leave this field empty.
ಝೆನ್ ಗುರು ಇಕ್ಕ್ಯು ತನ್ನ ಚಿಕ್ಕಂದಿನಿಂದಲೇ ಚುರುಕು ಬುದ್ಧಿಗೆ ಪ್ರಸಿದ್ಧನಾಗಿದ್ದ. ಇಕ್ಕ್ಯುನ ಗುರುವಿನ ಬಳಿ ಒಂದು ಪ್ರಾಚೀನವಾದ, ಸುಂದರವಾದ, ಅತ್ಯಂತ ಬಲೆಬಾಳುವ, ಪಿಂಗಾಣಿಯ ಚಹಾ ಕಪ್ಪು ಇತ್ತು. ಇಕ್ಕ್ಯು ಒಮ್ಮೆ ಅದನ್ನು ಒರೆಸುತ್ತಿದ್ದಾಗ ಕೈ ಜಾರಿ ಬಿದ್ದು ಒಡೆದು ಹೋಯಿತು. ಏನುಮಾಡುವುದೆಂದು ತಿಳಿಯದೆ ಗೊಂದಲಗೊಂಡ.

ಝೆನ್ ಕತೆ: ೨೩: ಕೋಪ

field_vote: 
Average: 5 (1 vote)
To prevent automated spam submissions leave this field empty.
ಗುರು ಬೆನ್ಕಿಯ ಬಳಿ ಶಿಷ್ಯನೊಬ್ಬ ಬಂದು ಗೋಳಾಡಿಕೊಂಡ. “ಗುರುವೇ, ನನಗೆ ತಡೆಯಲಾರದಷ್ಟು ಕೋಪ ಬಂದುಬಿಡುತ್ತದೆ. ಏನು ಮಾಡಲಿ? ಕೋಪವನ್ನು ಹೇಗೆ ಕಳೆದುಕೊಳ್ಳಲಿ?”

ಝೆನ್ ಕತೆ: ೨೨: ಅಮೂಲ್ಯ

field_vote: 
Average: 5 (1 vote)
To prevent automated spam submissions leave this field empty.
ಚೀನಾದ ಝೆನ್ ಗುರು ಸೋಝನ್‌ನನ್ನು ಒಮ್ಮೆ ಶಿಷ್ಯನೊಬ್ಬ ಹೀಗೆ ಕೇಳಿದ: “ಗುರುವೇ, ಈ ಜಗತ್ತಿನಲ್ಲಿ ಅತ್ಯಂತ ಅಮೂಲ್ಯವಾದದ್ದು ಯಾವುದು?”

ಝೆನ್ ಕತೆ: ೨೧: ಪ್ರಾಮಾಣಿಕತೆ

field_vote: 
No votes yet
To prevent automated spam submissions leave this field empty.
ಗುರು ಬೆನ್ಕಿ ತೀರಿಹೋಗಿದ್ದ. ಅವನಿದ್ದ ದೇವಾಲಯದ ಬಳಿಯ ಕುರುಡನೊಬ್ಬ ಗೆಳೆಯನ ಬಳಿ ಹೀಗೆ ಹೇಳಿದ:

ಝೆನ್ ಕತೆ: ೨೦ ಎರಡು ಮೊಲಗಳ ಬೇಟೆ

field_vote: 
No votes yet
To prevent automated spam submissions leave this field empty.
ಯುದ್ಧ ಕಲೆಯನ್ನು ಅಭ್ಯಾಸ ಮಾಡುತ್ತಿದ್ದ ಒಬ್ಬ ಶಿಷ್ಯ ಗುರುವನ್ನು ಕೇಳಿದ: "ಗುರುವೇ, ನಾನು ಯುದ್ಧ ಕಲೆಯನ್ನು ಕುರಿತು ಎಲ್ಲವನ್ನೂ ತಿಳಿಯಬೇಕೆಂದಿದ್ದೇನೆ. ನಿಮ್ಮೊಡನೆ ಕಲಿಯುತ್ತಿರುವುದರೊಂದಿಗೆ ಬಿಡುವಿನ ಸಮಯದಲ್ಲಿ ಇನ್ನೊಬ್ಬ ಗುರುವಿನ ಬಳಿ ಯುದ್ಧ ಕಲೆಯ ಮತ್ತೊಂದು ಶೈಲಿಯನ್ನೂ ಅಭ್ಯಾಸ ಮಾಡಬೇಂದಿರುವೆ. ನಿಮಗೇನು ಅನ್ನಿಸುತ್ತದೆ?"

ಝೆನ್ ಕತೆ: ೧೯: ಭೂತವನ್ನು ಓಡಿಸಿದ್ದು

field_vote: 
Average: 4 (1 vote)
To prevent automated spam submissions leave this field empty.
ಒಬ್ಬಾತನ ಹೆಂಡತಿಗೆ ಬಹಳ ಕಾಯಿಲೆಯಾಗಿತ್ತು. ಗಂಡನನ್ನು ಸಮೀಪಕ್ಕೆ ಕರೆದು ಹೇಳಿದಳು-- “ನನಗೆ ನಿನ್ನ ಮೇಲೆ ತುಂಬ ಪ್ರೀತಿ. ನನಗೆ ಸಾಯುವುದಕ್ಕೆ ಇಷ್ಟವಿಲ್ಲ. ಆದರೆ ಸಾವು ಸಮೀಪವಿದೆ. ನಿನ್ನನ್ನು ಬಿಟ್ಟು ಇರಲಾರೆ. ನನ್ನ ಪ್ರೀತಿಗೆ ನೀನು ಮೋಸ ಮಾಡಲಾರೆಯೆಂಬ ನಂಬಿಕೆ ನನಗಿದೆ. ನಾನು ಸತ್ತ ಮೇಲೆ ನೀನು ಬೇರೆಯ ಹೆಂಗಸರನ್ನು ನೋಡುವುದಿಲ್ಲ, ಮದುವೆಯಾಗುವುದಿಲ್ಲ ಎಂದು ನನಗೆ ಮಾತು ಕೊಡಬೇಕು. ನೀನು ಮಾತಿಗೆ ತಪ್ಪಿದರೆ ಭೂತವಾಗಿ ಬಂದು ಕಾಡುತ್ತೇನೆ”

ಝೆನ್ ಕತೆ: ೧೮ ನಿಜದ ಹಾದಿ

field_vote: 
No votes yet
To prevent automated spam submissions leave this field empty.
ನಿನ್‌ಕವಾ ಸಾಯುವ ಕೊಂಚ ಮೊದಲು ಝೆನ್ ಗುರು ಇಕ್ಕ್ಯೂ ಅವನನ್ನು ಭೇಟಿ ಮಾಡಿದ. “ನಿನಗೆ ದಾರಿ ತೋರಲೇ” ಎಂದು ಕೇಳಿದ ಗುರು.

ಝೆನ್ ಕತೆ: ೧೭ ಪ್ರೇಮ ಪತ್ರ

field_vote: 
Average: 1 (1 vote)
To prevent automated spam submissions leave this field empty.
ಗುರುಗಳಾದವರು ದಿನವೂ ಧರ್ಮ ಪರೀಕ್ಷೆಯಲ್ಲಿ ತೊಡಗುವರು ಜಟಿಲ ಸೂತ್ರಗಳನ್ನು ದಣಿವಿಲ್ಲದೆ ಪಠಿಸುವರು

ಝೆನ್ ಕತೆ ೧೬: ಕನಸಿನ ಚಿಟ್ಟೆ-ಚಿಟ್ಟೆಯ ಕನಸು

field_vote: 
No votes yet
To prevent automated spam submissions leave this field empty.
ಝೆನ್‌ನ ಮಹಾನ್ ಗುರು ಚುಆಂಗ್ ತ್ಸು ಗೆ ಒಮ್ಮೆ ಕನಸು ಬಿತ್ತು. ಕನಸಿನಲ್ಲಿ ಅವನೊಂದು ಚಿಟ್ಟೆಯಾಗಿಬಿಟ್ಟಿದ್ದ. ಅತ್ತಿತ್ತ ಹಾರಾಡುತ್ತಿದ್ದ. ಕನಸು ಇದ್ದಷ್ಟು ಹೊತ್ತೂ ಅವನಿಗೆ ತಾನು ಚುಆಂಗ್ ಎಂಬುದು ಗೊತ್ತೇ ಇರಲಿಲ್ಲ.

ಝೆನ್ ಕತೆ ೧೫. ಏನೇನೂ ಇಲ್ಲ!

field_vote: 
Average: 4 (2 votes)
To prevent automated spam submissions leave this field empty.
ಯಮಕೊಅ ತೆಶ್ಶು ಒಬ್ಬ ಕಿರಿಯ ವಿದ್ಯಾರ್ಥಿ. ಅನೇಕ ಗುರುಗಳನ್ನು ಭೇಟಿ ಮಾಡಿದ್ದ. ಒಮ್ಮೆ ಆತ ಶೊಕೊಕು ಊರಿನ ದುಕೌನ್ ನನ್ನು ಕಾಣಲೆಂದು ಹೋದ.

ಝೆನ್ ಕತೆ ೧೪ ಪ್ರತಿ ಕ್ಷಣ ಝೆನ್

field_vote: 
Average: 5 (2 votes)
To prevent automated spam submissions leave this field empty.
ಝೆನ್ ವಿದ್ಯಾರ್ಥಿಗಳು ಕನಿಷ್ಠಪಕ್ಷ ಹತ್ತು ವರ್ಷ ಶಿಷ್ಯವೃತ್ತಿ ಮಾಡಿದ ಮೇಲಷ್ಟೆ ಇತರರಿಗೆ ಬೋಧಿಸುವ ಗುರುಗಳಾಗುತ್ತಾರೆ. ತೆನೋ ಎಂಬಾತ ತನ್ನ ಶಿಷ್ಯವೃತ್ತಿ ಮುಗಿಸಿ ಗುರುವಾಗಿ ಹಿರಿಯ ನಾನ್ ಇನ್ ಬಳಿಗೆ ಬಂದಿದ್ದ. ಅಂದು ಬಹಳ ಮಳೆ. ತೆನೋ ಹೊರ ಕೋಣೆಯಲ್ಲಿ ತನ್ನ ಮರದ ಚಪ್ಪಲಿಗಳನ್ನೂ ಕೊಡೆಯನ್ನೂ ಇಟ್ಟು ಒಳಬಂದು ನಾನ್ ಇನ್‌ಗೆ ನಮಸ್ಕರಿಸಿದ. “ನಿನ್ನ ಚಪ್ಪಲಿ ಮತ್ತು ಕೊಡೆ ಹೊರಗೆ ಬಿಟ್ಟು ಬಂದಿದ್ದೀಯೆ. ನಿನ್ನ ಕೊಡೆ ಚಪ್ಪಲಿಗಳ ಎಡಗಡೆಗೆ ಇದೆಯೋ, ಬಲಗಡೆಗೋ?” ಎಂದು ನಾನ್ ಇನ್ ಕೇಳಿದ.

ಝೆನ್ ಕತೆ ೧೩: ಮೌನ ದೇವಾಲಯ

field_vote: 
Average: 3.6 (5 votes)
To prevent automated spam submissions leave this field empty.

ಮೌನ ದೇವಾಲಯ

ಶೋಹಿಚಿ ಒಕ್ಕಣ್ಣ ಝೆನ್ ಗುರು. ಅವನಲ್ಲಿ ಜ್ಞಾನದ ಪ್ರಭೆ ಇತ್ತು. ಅವನು ತನ್ನ ಶಿಷ್ಯರಿಗೆ ತೊಫುಕು ದೇವಾಲಯದಲ್ಲಿ ಶಿಕ್ಷಣ ನೀಡುತ್ತಿದ್ದ.
ಅವನ ಶಿಕ್ಷಣ ವಿಧಾನವೆಂದರೆ ಮೌನದ ಸಾಧನೆ.
ದೇವಾಲಯದಲ್ಲಿ ಯಾವ ಸದ್ದೂ ಇರುತ್ತಿರಲಿಲ್ಲ. ಸಂಪೂರ್ಣ ನಿಶ್ಶಬ್ದ.
ಧರ್ಮ ಸೂತ್ರಗಳನ್ನು ಪಠಿಸುವುದಕ್ಕೂ ಅವನು ಅನುಮತಿ ನೀಡುತ್ತಿರಲಿಲ್ಲ.
ಅವನ ಶಿಷ್ಯರು ಮೌನ ಧ್ಯಾನವನ್ನು ಬಿಟ್ಟು ಬೇರೆ ಯಾವ ಸಾಧನೆಯನ್ನೂ ಮಾಡಬೇಕಿರಲಿಲ್ಲ.

ಝೆನ್ ಕತೆಗಳು ೧೨: ಆರಿಹೋದ ದೀಪ

field_vote: 
Average: 4 (3 votes)
To prevent automated spam submissions leave this field empty.

ಆರಿಹೋದ ದೀಪ

ಹಿಂದಿನ ಕಾಲದ ಜಪಾನಿನ ಜನ ರಾತ್ರಿಯ ಹೊತ್ತಿನಲ್ಲಿ ಬಿದಿರಿನ ಬುಟ್ಟಿಗೆ ತೆಳ್ಳನೆಯ ಹಾಳೆಯನ್ನು ಸುತ್ತಿ, ಅದರೊಳಗೆ ಒಂದು ದೀಪವಿಟ್ಟುಕೊಂಡು ಓಡಾಡುತ್ತಿದ್ದರು. ಕುರುಡನೊಬ್ಬ ತನ್ನ ಗೆಳೆಯನನ್ನು ನೋಡಲೆಂದು ಹೋಗಿದ್ದ. ರಾತ್ರಿಯಾಯಿತು. ಗೆಳೆಯ ಅವನ ಕೈಗೆ ಬಿದಿರು ಹಾಳೆಯ ದೀಪವನ್ನು ಕೊಟ್ಟ.
“ದೀಪ ನನಗೇಕೆ? ಹೇಗಿದ್ದರೂ ಕುರುಡ. ಹಗಲು ಇರುಳು ಎರಡೂ ಒಂದೇ ನನಗೆ.”

ಝೆನ್ ೧೧: ವಾದದಲ್ಲಿ ಗೆದ್ದಿದ್ದು ಹೀಗೆ

field_vote: 
Average: 4 (1 vote)
To prevent automated spam submissions leave this field empty.
ಅದೊಂದು ಝೆನ್ ದೇವಾಲಯ. ಅಲ್ಲಿನ ನಿವಾಸಿಗಳನ್ನು ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಚರ್ಚೆಗಳಲ್ಲಿ ಸೋಲಿಸಿದ ಸಂನ್ಯಾಸಿಗೆ ಅಲ್ಲಿರಲು ಅವಕಾಶ ದೊರೆಯುತ್ತಿತ್ತು. ಜಪಾನಿನ ಉತ್ತರಭಾಗದಲ್ಲಿದ್ದ ಆ ದೇವಾಲಯದಲ್ಲಿ ಇಬ್ಬರು ಸನ್ಯಾಸಿಗಳಿದ್ದರು. ದೊಡ್ಡವನು ತುಂಬ ಓದಿಕೊಂಡಿದ್ದ, ಚಿಕ್ಕವನು ಮೂರ್ಖ. ಅವನಿಗೆ ಇದ್ದದ್ದು ಒಂದೇ ಕಣ್ಣು. ಅಲೆಮಾರಿ ಸನ್ಯಾಸಿಯೊಬ್ಬ ಅಲ್ಲಿಗೆ ಬಂದ. ದೇವಾಲಯದಲ್ಲಿ ಉಳಿಯಲು ಅವಕಾಶ ಕೇಳಿದ. ದೊಡ್ಡ ಸನ್ಯಾಸಿ ಅಂದು ದಿನವೆಲ್ಲ ಓದಿ, ಬರೆದು, ವಾದ ಮಾಡಿ ಸುಸ್ತಾಗಿದ್ದ. ಆದ್ದರಿಂದ ಚಿಕ್ಕವನನ್ನು ಕರೆದು ನೀನೇ ವಾದ ಮಾಡು ಎಂದ. ಹುಷಾರು, ಮೌನ ವಾಗ್ವಾದವನ್ನು ಮಾಡುತ್ತೇನೆ ಎಂದು ಮೊದಲೇ ಹೇಳಿಬಿಡು ಎಂದು ಎಚ್ಚರಿಕೆಯನ್ನೂ ನೀಡಿದ.

ಝೆನ್ ೧೦ : ಇನ್ನೂ ಮೂರು ದಿನ

field_vote: 
Average: 5 (1 vote)
To prevent automated spam submissions leave this field empty.
ಹಕು-ಇನ್ನ ಶಿಷ್ಯ ಸುಯಿಒ ಒಳ್ಳೆಯ ಗುರುವೆಂದು ಖ್ಯಾತನಾಗಿದ್ದ. ಬೇಸಗೆಯಲ್ಲಿ ಗುರು ಶಿಷ್ಯರೆಲ್ಲ ಏಕಾಂತ ಧ್ಯಾನವನ್ನು ಮಾಡುವ ಕಾಲದಲ್ಲಿ ಜಪಾನಿನ ದಕ್ಷಿಣ ದ್ವೀಪಗಳಿಂದ ಒಬ್ಬ ಶಿಷ್ಯ ಅವನನ್ನು ಹುಡುಕಿಕೊಂಡು ಬಂದ. "ಒಂದೇ ಕೈಯಿಂದ ಹುಟ್ಟುವ ಸದ್ದನ್ನು ಕೇಳಿಸಿಕೊ" ಎಂಬ ಮುಂಡಿಗೆಯನ್ನು ಗುರು ಅವನಿಗೆ ನೀಡಿದ. ಧ್ಯಾನದ ಮೂಲಕ ಉತ್ತರವನ್ನು ಕಂಡುಕೋ ಎಂದ. ಶಿಷ್ಯ ಮೂರು ವರ್ಷಗಳನ್ನು ಗುರುವಿನೊಡನೆ ಕಳೆದ. ಆದರೂ ಅವನಿಗೆ ಉತ್ತರ ದೊರೆಯಲಿಲ್ಲ, ಗುರು ನೀಡಿದ್ದ ಪರೀಕ್ಷೆಯನ್ನು ದಾಟಲಿಲ್ಲ.

ಝೆನ್ ೯ : ಸೂತ್ರ ಪಠಣ

field_vote: 
No votes yet
To prevent automated spam submissions leave this field empty.

ರೈತನೊಬ್ಬನ ಹೆಂಡತಿ ಸತ್ತು ಹೋಗಿದ್ದಳು. ಮಂತ್ರಗಳನ್ನು ಹೇಳುವುದಕ್ಕೆ ಆ ರೈತ ಬೌದ್ಧ ಸಂನ್ಯಾಸಿಯನ್ನು ಕರೆಸಿದ್ದ.
ಸಂನ್ಯಾಸಿ ಸೂತ್ರಗಳನ್ನು ಪಠಿಸಿದ. ಎಲ್ಲ ಮುಗಿದ ಮೇಲೆ “ಹೀಗೆ ಮಂತ್ರಗಳನ್ನು ಹೇಳಿದ್ದರಿಂದ ನನ್ನ ಹೆಂಡತಿಗೆ ಪುಣ್ಯ ದೊರೆಯುತ್ತದೆಯೇ” ಎಂದು ಕೇಳಿದ ರೈತ.
“ನಿನ್ನ ಹೆಂಡತಿಗೆ ಮಾತ್ರವಲ್ಲ, ಈ ಜಗತ್ತಿನ ಎಲ್ಲ ಮನುಷ್ಯರಿಗೂ ಜೀವರಾಶಿಗಳೆಲ್ಲಕ್ಕೂ ಒಳ್ಳೆಯದಾಗುತ್ತದೆ” ಎಂದ ಸಂನ್ಯಾಸಿ.

ಲೇಖನ ವರ್ಗ (Category): 

ಝೆನ್ ೭ : ಎಶುನ್ಳ ಅಂತ್ಯಕಾಲ

field_vote: 
No votes yet
To prevent automated spam submissions leave this field empty.

ಝೆನ್ ಸಂನ್ಯಾಸಿನಿ ಎಶುನ್ ಅರುವತ್ತು ವರ್ಷ ದಾಟಿದ್ದಳು. ಈ ಲೋಕವನ್ನು ಬಿಡುವ ಕಾಲ ಬಂದಿತ್ತು. ಶಿಷ್ಯರನ್ನೆಲ್ಲ ಕರೆದು ಅಂಗಳದಲ್ಲಿ ಸೌದೆಗಳನ್ನು ಜೋಡಿಸುವಂತೆ ಹೇಳಿದಳು.
ಸೌದೆಗಳ ನಡುವೆ ಸ್ಥಿರವಾಗಿ ಕುಳಿತು ಕಟ್ಟಿಗೆ ರಾಶಿಗೆ ಬೆಂಕಿ ಇಕ್ಕುವಂತೆ ಹೇಳಿದಳು. ಬೆಂಕಿ ಉರಿಯಿತು.
"ಬೆಂಕಿ ಸುಡುತ್ತಿಲ್ಲವೇ?" ಎಂದು ಸಂನ್ಯಾಸಿಯೊಬ್ಬ ಕೂಗಿ ಕೇಳಿದ.
"ನಿನ್ನಂಥ ಮೂರ್ಖನಿಗೆ ಮಾತ್ರ ಇಂಥ ಪ್ರಶ್ನೆ ಹೊಳೆಯುತ್ತದೆ" ಎಂದಳು ಎಶುನ್.

ಲೇಖನ ವರ್ಗ (Category): 

ಝೆನ್ ೬ : ಬೆಂಕಿಯಂತೆ ಉರಿಯುತ್ತಿದೆ ನನ್ನ ಹೃದಯ

field_vote: 
Average: 3 (1 vote)
To prevent automated spam submissions leave this field empty.

ಮೆರಿಕಾಕ್ಕೆ ಹೋದ ಮೊಟ್ಟಮೊದಲ ಝೆನ್ ಗುರು ಸೋಯೆನ್ ಶಾಕು "ನನ್ನ ಹೃದಯ ಬೆಂಕಿಯಂತೆ ಉರಿಯುತ್ತಿದೆ, ನನ್ನ ಕಣ್ಣು ಮಾತ್ರ ಬೂದಿಯ ಹಾಗೆ ತಣ್ಣಗಿದೆ" ಎಂದ. ಅವನು ಕೆಲವು ನಿಯಮಗಳನ್ನಿಟ್ಟುಕೊಂಡು ಹಾಗೆಯೇ ಬದುಕಿದ್ದ. ಆ ನಿಯಮಗಳು ಇವು:
ಬೆಳಗ್ಗೆ ಎದ್ದು ಬಟ್ಟೆ ಹಾಕಿಕೊಂಡು ಸಿದ್ಧವಾಗುವ ಮೊದಲು ಧೂಪವನ್ನು ಹಾಕಿ ಧ್ಯಾನಮಾಡು.
ನಿಗದಿಯಾದ ಸಮಯದಲ್ಲಿ ಮಲಗು. ನಿಗದಿಯಾದ ಹೊತ್ತಿನಲ್ಲಿ ಊಟಮಾಡು. ಹೊಟ್ಟೆ ತುಂಬಿ ತೃಪ್ತಿಯಾಗುವಷ್ಟು ತಿನ್ನಬೇಡ.

ಲೇಖನ ವರ್ಗ (Category): 

ಝೆನ್ ಕತೆ: ೫: ಒಂದು ಕೈ ಚಪ್ಪಾಳೆ

field_vote: 
Average: 3.3 (3 votes)
To prevent automated spam submissions leave this field empty.
ಕೆನಿನ್ ದೇವಾಲಯದಲ್ಲಿದ್ದ ಝೆನ್ ಗುರುವಿನ ಹೆಸರು ಮೊಕೌರಿ. ಮೊಕೌರಿ ಎಂದರೆ ಸದ್ದಿಲ್ಲದ ಗುಡುಗು ಎಂದರ್ಥ. ಹನ್ನೆರಡು ವಯಸ್ಸಿನ ಪ್ರತಿಭಾವಂತ ಹುಡುಗ ಟೊಯೊ ಎಂಬಾತ ಅವನ ಬಳಿ ಶಿಷ್ಯನಾಗಿದ್ದ. ಸ್ವಲ್ಪ ವಯಸ್ಸಾದ ಶಿಷ್ಯರು ದಿನವೂ ಬೆಳಗ್ಗೆ ಸಂಜೆ ಗುರುವಿನ ಬಳಿ ಬಂದು ಸಾನ್‌ಝೆನ್ ಪಡೆದುಕೊಳ್ಳುವುದನ್ನು ನೋಡುತ್ತಿದ್ದ. ಸಾನ್‌ಝೆನ್ ಎಂದರೆ ವೈಯಕ್ತಿಕ ಮಾರ್ಗದರ್ಶನ. ಗುರು ಒಬ್ಬರಿಗೂ ಅವರಿಗೆ ತಕ್ಕ ಮುಂಡಿಗೆಯನ್ನು ನೀಡುತ್ತಿದ್ದ. ಈ ಬೆಡಗಿನಂಥ ಮಾತುಗಳ ಮುಂಡಿಗೆಯನ್ನು ಕೋನ್ ಎನ್ನುತ್ತಾರೆ. ಟೊಯೊ ತನಗೂ ಇಂಥ ಒಂದು ಕೋನ್ ಹೇಳಿ ಎಂದು ಗುರುವನ್ನು ಕೇಳಿದ.
ಲೇಖನ ವರ್ಗ (Category): 

ಝೆನ್ ಕತೆ: ೪: ಪ್ರಥಮ ಸೂತ್ರ

field_vote: 
Average: 5 (3 votes)
To prevent automated spam submissions leave this field empty.
ಕ್ಯೋಟೋದಲ್ಲಿರುವ ಒಬಾಕು ದೇವಾಲಯಕ್ಕೆ ಹೋದವರಿಗೆ ಅಲ್ಲಿನ ಮಹಾದ್ವಾರದ ಮೇಲೆ "ಪ್ರಥಮ ಸೂತ್ರ" ಎಂದು ಬರೆದಿರುವುದು ಕಾಣುತ್ತದೆ. ಅಕ್ಷರಗಳು ಬಲು ದೊಡ್ಡವು. ಕೈ ಬರಹದ ಕಲೆಯ ನಿಷ್ಣಾತರು ಈ ಬರವಣಿಗೆಯನ್ನು ಅತ್ಯುತ್ತಮ ಕಲಾಕೃತಿ ಎಂದು ಹೊಗಳುತ್ತಾರೆ. ಇದನ್ನು ಬರೆದವನು ಇನ್ನೂರು ವರ್ಷಗಳ ಹಿಂದೆ ಬದುಕಿದ್ದ ಕೊಸೆನ್ ಎಂಬ ಕಲಾವಿದ. ಕೊಸೆನ್ ಅಕ್ಷರಗಳನ್ನು ಹಾಳೆಯ ಮೇಲೆ ಬರೆಯುತ್ತಿದ್ದ. ಆಮೇಲೆ ಬಡಗಿಗಳು ಆ ಅಕ್ಷರಗಳನ್ನು ಮರದ ಮೇಲೆ ಕಾಪಿ ಮಾಡಿಕೊಂಡು ಕೆತ್ತುತ್ತಿದ್ದರು.
ಲೇಖನ ವರ್ಗ (Category): 

ಝೆನ್: ೩: ಒಂದು ಹನಿ

field_vote: 
Average: 3 (1 vote)
To prevent automated spam submissions leave this field empty.
ಗೀಸನ್ ಎಂಬ ಝೆನ್ ಗುರು ಸ್ನಾನಕ್ಕೆ ಇಳಿದಿದ್ದ. ನೀರು ಬಹಳ ಬಿಸಿ ಇತ್ತು. ತಣ್ಣೀರು ತರುವಂತೆ ಶಿಷ್ಯನಿಗೆ ಹೇಳಿದ. ಶಿಷ್ಯ ತಣ್ಣೀರು ತಂದ. ಕೊಳಗಕ್ಕೆ ಹಾಕಿದ. ನೀರು ತಣ್ಣಗಾಯಿತು. ತಾನು ತಂದ ತಪ್ಪಲೆಯಲ್ಲಿ ಇನ್ನೂ ಉಳಿದಿದ್ದ ನೀರನ್ನು ಶಿಷ್ಯ ಬಚ್ಚಲಿನಲ್ಲೇ ಚೆಲ್ಲಿ ಬಿಟ್ಟ. ”ಮೂರ್ಖ. ಉಳಿದ ನೀರನ್ನು ಗಿಡಗಳಿಗೆ ಹಾಕಬಾರದಿತ್ತೆ? ದೇವಸ್ಥಾನದ ನೀರನ್ನು ವ್ಯರ್ಥಮಾಡುವುದಕ್ಕೆ ನಿನಗೇನು ಅಧಿಕಾರವಿದೆ?” ಎಂದು ಕೇಳಿದ. ಆ ಕ್ಷಣದಲ್ಲಿ ಶಿಷ್ಯನಿಗೆ ಝೆನ್ ಸಾಕ್ಷಾತ್ಕಾರವಾಯಿತು. ತನ್ನ ಹೆಸರನ್ನು ಟೆಕಿಸುಇ ಎಂದು ಬದಲಾಯಿಸಿಕೊಂಡ. ನೀರಿನ ಹನಿ ಎಂಬುದು ಈ ಮಾತಿನ ಅರ್ಥ. ಏನನ್ನೂ ವ್ಯರ್ಥ ಮಾಡದಿರುವುದು ಕೂಡ ಝೆನ್.
ಲೇಖನ ವರ್ಗ (Category): 

ಝೆನ್: ಕಿರು ಪರಿಚಯ

field_vote: 
Average: 3.7 (6 votes)
To prevent automated spam submissions leave this field empty.
ಸಂಸ್ಕೃತದ ಧ್ಯಾನ ಎಂಬ ಪದ ಚೀನೀ ಭಾಷೆಯಲ್ಲಿ ಛಾನ್ ಎಂದಾಗಿ, ಅಲ್ಲಿಂದ ಜಪಾನೀ ಸಂಸ್ಕೃತಿಯಲ್ಲಿ ಝೆನ್ ಎಂದು ಪರಿಚಯಗೊಂಡಿತು. ಇದು ಜಪಾನಿನ ಬೌದ್ಧಧರ್ಮದ ಒಂದು ಪ್ರಮುಖ ಧಾರೆಯಾಗಿ ಬೆಳೆಯಿತು. ಧ್ಯಾನದ ಮುಖಾಂತರ “ಬೋಧಿ” ಸತ್ವವನ್ನು ಹೊಂದಬಹುದೆಂಬುದು ಈ ಪಂಥದ ನಂಬಿಕೆ. ಗೌತಮನಾದ ಬುದ್ಧನು ಧ್ಯಾನದ ಮೂಲಕವೇ ತನ್ನ ಬೋಧಿ-ಸತ್ವವನ್ನು ಪಡೆದವನು. ಧ್ಯಾನ ಮುಖ್ಯವಾದ ಈ ಪಂಥವು ಕ್ರಿಶ ೬ನೆಯ ಶತಮಾನದಲ್ಲಿ ಮಹಾಯಾನ ಬೌದ್ಧರ ಮೂಲಕ ಛಾನ್ ಎಂಬ ಹೆಸರಿನಲ್ಲಿ ಪ್ರಚಾರಕ್ಕೆ ಬಂದಿತು. ಹಲವಾರು ಶತಮಾನಗಳ ತರುವಾಯ ಈ ಪಂಥವು ಜಪಾನನ್ನು ಪ್ರವೇಶಿಸಿತು. ಹನ್ನೆರಡನೆಯ ಶತಮಾನದ ಜಪಾನಿನನಲ್ಲಿ ಸಮೃದ್ಧವಾಗಿ ಬೆಳೆಯಿತು.
ಲೇಖನ ವರ್ಗ (Category): 

ಝೆನ್ ೨: ಶೌನ್ ಮತ್ತು ಅವನ ತಾಯಿ

field_vote: 
Average: 5 (1 vote)
To prevent automated spam submissions leave this field empty.
ಶೌನ್ ಸೊತೊ ಝೆನ್ ಪಂಥದ ಒಬ್ಬ ಗುರು. ಅವನಿನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವನ ತಂದೆ ತೀರಿಹೋದ. ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಶೌನ್‌ನ ಪಾಲಿಗೆ ಬಂತು. ಶೌನ್ ಧ್ಯಾನಕ್ಕೆ ಹೋದಾಗಲೆಲ್ಲ ತಾಯಿಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಅವನ ಅಲೆದಾಟದಲ್ಲಿ ಯಾವ ಮಠದಲ್ಲೂ ತಂಗಲು ಆಗುತ್ತಿರಲಿಲ್ಲ. ಹೆಂಗಸರನ್ನು ಮಠದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅದಕ್ಕೇ ಒಂದು ಪುಟ್ಟ ಮನೆಯನ್ನು ಕಟ್ಟಿ ತಾಯಿಯೊಡನೆ ಇರತೊಡಗಿದ ಶೌನ್. ಬುದ್ಧನ ಸೂತ್ರಗಳನ್ನು ಬರೆದು, ಭಕ್ತರಿಗೆ ಕೊಟ್ಟು, ಅವರಿಂದ ಪಡೆದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದ.
ಲೇಖನ ವರ್ಗ (Category): 

ಝೆನ್ ೧: ನಗುವ ಬುದ್ಧ

field_vote: 
Average: 4.5 (2 votes)
To prevent automated spam submissions leave this field empty.

ಝೆನ್ ೧

ದೊಡ್ಡ ಗಂಟನ್ನು ಹೊತ್ತಿರುವ, ದಪ್ಪ ಹೊಟ್ಟೆಯ, ನಗುಮುಖದ, ಕುಳ್ಳ ದೇಹದ ವ್ಯಕ್ತಿಯೊಬ್ಬನ ಬೊಂಬೆಯನ್ನು ನೀವು ನೋಡಿರಬಹುದು. ಕೆಲವೊಮ್ಮೆ ಎರಡೂ ಕೈ ಎತ್ತಿ ಜೋರಾಗಿ ನಗುತ್ತಿರುವ ಬೊಂಬೆಯ ರೂಪದಲ್ಲೂ ಇದು ಎಲ್ಲ ಕಡೆ ಕಾಣಿಸುತ್ತದೆ. ಚೀನಾದ ವ್ಯಾಪಾರಿಗಳು ಇವನನ್ನು ನಗುವ ಬುದ್ಧ ಅನ್ನುತ್ತಾರೆ.
ಈತ ಹೋಟಿ. ಇವನು ಬದುಕಿದ್ದು ತಾಂಗ್ ವಂಶಸ್ಥರ ಆಳ್ವಿಕೆಯ ಕಾಲದಲ್ಲಿ. ಅವನಿಗೆ ತಾನು ಝೆನ್ ಗುರು ಎಂದು ಹೇಳಿಕೊಳ್ಳುವ ಆಸೆ ಇರಲಿಲ್ಲ. ಶಿಷ್ಯರನ್ನು ಗುಂಪುಗೂಡಿಸಿಕೊಳ್ಳುವ ಹಂಬಲವಿರಲಿಲ್ಲ.

ಲೇಖನ ವರ್ಗ (Category): 
Subscribe to ಝೆನ್ ಕಥೆಗಳು (ಕಥಾ ಮಾಲಿಕೆ)