ಉದ್ಯಾನವೆಂಬುದು ಕಾಡಿನ ಕಸದ ತೊಟ್ಟಿಯಾದರೆ ಮೃಗಾಲಯದ ಹೊರಗಿನ ಜಗವು ಸೆರೆವಾಸ!

ಉದ್ಯಾನವೆಂಬುದು ಕಾಡಿನ ಕಸದ ತೊಟ್ಟಿಯಾದರೆ ಮೃಗಾಲಯದ ಹೊರಗಿನ ಜಗವು ಸೆರೆವಾಸ!

(೭೧)ಬಹಳಷ್ಟು ಜನರು ನೀನು ಏನಾಗಿದ್ದೀಯೋ ಅದಕ್ಕಾಗಿ ನಿನ್ನನ್ನು ಇಷ್ಟಪಡುತ್ತಾರೆ. ಮಿಕ್ಕುಳಿದವರು ನಿನ್ನನ್ನು ಅದೇ ಕಾರಣಕ್ಕಾಗಿ ದ್ವೇಷಿಸಲು ಇಷ್ಟಪಡುತ್ತಾರೆ!


(೭೨) ಅಸ್ತಿತ್ವದಲ್ಲಿರುವ ಪ್ರತಿಯೊಂದು ಕಾಡೂ ಸಹ ಮನುಷ್ಯನ ಸೋಲಿನ ಸಂಕೇತವಾಗಿದೆ. ಅದನ್ನು ಆತ ವಸಾಹತೀಕೃತಗೊಳಿಸಲಾಗದ ಸೋಲು ಅದು!


(೭೩) ಮಿಕ್ಕುಳಿದ ಜಗವು ಮಾನವರ ಸಹಾಯದಿಂದ ಅವರುಗಳನ್ನೇ ಏಕೆ ಬಂಧಿಸಿಟ್ಟುಕೊಂಡಿದೆ ಎಂದು ಮೃಗಾಲಯದೊಳಗಿನ ಪ್ರಾಣಿಗಳು ಅಚ್ಚರಿಪಡುತ್ತವೆ. ಮತ್ತು ತಮ್ಮನ್ನು ಅದರೊಳಗಿಂದ ಏಕೆ ಬಿಡುಗಡೆಗೊಳಿಸಲಾಗಿದೆ ಎಂದೂ ಅರ್ಥವಾಗದೆ ಚಿಂತಿಸುತ್ತವೆ!


(೭೪) ಕಾಡಿನ ಕಸದ ತೊಟ್ಟಿಯನ್ನು ಉದ್ಯಾನವನ ಎನ್ನುತ್ತೇವೆ!


(೭೫) ದೃಶ್ಯಗಳು ’ಕಲಾಕೃತಿಗಳು’ ಎಂಬ ದುರದೃಷ್ಟವಶಾತ್ ಬಿರುದಾಂಕಿತಗೊಂಡು ಬಂಧಿತವಾಗುವ ಪ್ರದೇಶಗಳನ್ನು ಸಂಗ್ರಹಾಲಯವೆನ್ನುತ್ತೇವೆ!

Rating
No votes yet

Comments