ಭಾವ ಬಂಧನ

ಭಾವ ಬಂಧನ

ಭಾವನೆಗಳ ಬಂಧನದಲಿ


ಬಂದಿಯಾಗಿರುವೆ ನಾನು


ಬಿಡಿಸಲಾರೆಯ ಬಂದು ನೀನು


 


ಮನದ ತುಡಿತ


ಹೃದಯದ ಮಿಡಿತ


ಭಾವಗಳ ಒಮ್ಮತ


ಬಿಡಿಸಲಾರದ ಒಳ ಅರ್ಥ


 


ಎದೆಯಾಳಾದಿಂದ


ಮೂಡಿಬಂದ ಮಾತುಗಳು


ತುಟಿಯಂಚಿನಲಿ ಬಂದಿಯಾಗಿವೆ


ಹೇಗೆ ಹೇಳಲಿ ನಿನಗೆ.


                              -  ಮೌನೇಶ

Rating
No votes yet

Comments