ಕೊನೆಗೆ ಸೋಲು ವಿಧಿಗೆ ಅಲ್ಲವೇ??

ಕೊನೆಗೆ ಸೋಲು ವಿಧಿಗೆ ಅಲ್ಲವೇ??

ಲಗ್ನದ ಸೀರೆ ಕೆಂಪು ಬಣ್ಣದ್ದು ಇದ್ದರೆ ಭಾರಿ ಕಾಣ್ತಿಯಾ ಕಣೆ ಅಂತ ರಾಗಿಣಿ ಮಾತು ಕಿವಿಯಲ್ಲಿ ಇನ್ನು ಪ್ರತಿದ್ವನಿಸುತಿತ್ತು. ಅದಕ್ಕೆ ಇನ್ನೊಂದು ಸೀರೆ ಖರೀದಿ ಮಾಡೋಣ ಅಂತ ಬೆಳಿಗ್ಗೆನೆ ಗೆಳತಿಯರ ಜೊತೆ ಅಂಗಡಿಗೆ ಬಂದಿದ್ದಳು.

ಅಂಗಡಿಯವನಿಗಂತೂ ಇದೊಂದು ಮಾಮೂಲಿ ಕೆಲಸ ಅನ್ನು ವಂತೆ ರಾಶಿ ರಾಶಿ ಸೀರೆ ತೆಗೆದು ತೋರಿಸುತಿದ್ದ. ಅದ್ಯಾವದು ಅವಳಿಗೆ ಇಷ್ಟ ಆಗಿರಲಿಲ್ಲ.

ಕೆಂಪು ಅಂತ ನೋಡಿದರೂ, ಅದರಲ್ಲೆನಾದರು ಹುಳುಕು ಅವಳಿಗೆ ಕಾಣುತಿತ್ತು. ಛೇ ತಪ್ಪು ಮಾಡಿದೆ ಅಮ್ಮನಿಗೆ ಕರೆದು ತರಬೇಕಾಗಿತ್ತು ಅಂತ ಮನಸಲ್ಲೇ ತನ್ನನ್ನೇ ಬೈದುಕೊಳ್ತಾ ಮತ್ತಷ್ಟು ಸೀರೆ ನೋಡತೊಡಗಿದಳು ಐಶ್ವರ್ಯ.

 ****                   ***************                   *********              

ಮದುವೆ ಶಾಪಿಂಗ್ ಅಂತು ಮಾಡಿಯಾಗಿತ್ತು, ನಾನು ನೋಡಿದ ಅದೆಷ್ಟೋ ಹುಡುಗಿಯರಲ್ಲಿ ಇವಳು ಮಾತ್ರ ಇಷ್ಟವಾಗಿದ್ದಳು. ನನಗೆ ಇವ್ಳು ಇಷ್ಟ ಅಂತ ಹೇಳಿದ್ದೆ ಸಾಕು ಅಮ್ಮ ಅಪ್ಪ ಖುಷಿಯಿಂದ ಮದುವೆಯ ತಯಾರಿ ನಡೆಸಿದ್ದರು, ನಾಡದ್ದೆ ಮದುವೆ, ಕೆಲಸಗಳ ಕಾರಣಗಳಿಂದ  ರಜೆ ಸಿಗದೇ ಎರಡು ದಿನ ಮುಂಚಿತವಾಗಿವಾಗಿಯಷ್ಟೇ ರಜೆ ಸಿಕ್ಕಿದೆ. ನಾಳೆ ಹೋದ ತಕ್ಷಣ ಮದುವೆ ತಯಾರಿ, ಹುಡುಗಿ ತುಂಬಾ ಮುದ್ದಾಗಿದ್ದಾಳೆ ಅಂತೆಲ್ಲ ಹೇಳ್ತಾ ಇದ್ದಾ ವಿಮಾನದಲ್ಲಿ ಕುಳಿತ ಸಹ ಪ್ರಯಾಣಿಕನಿಗೆ ರಮೇಶ್.

****                   ***************                   *********                

ಕೊನೆಗೆ ಇಷ್ಟವಾದ ಸಿರೆಯೊಂದನ್ನು ಖರಿದಿಸಿ ಬರುತ್ತಿರಬೇಕಾದರೆ, ನಡುವೆ ಸಿಕ್ಕ ಗೆಳತಿಯೊಬ್ಬಳು, ಏನೇ ನನಗೆ ಸೀರೆ ತೋರ್ಸಲ್ವಾ ಅಂತ ಕೇಳಿದಾಗ, ಇಲ್ಲಾ ವೆನ್ನದೆ ಕೆಂಪು ಸೀರೆ ಬಿಚ್ಚಿ ತೋರಿಸುತ್ತಿದ್ದಾಗ ಐಶ್ವರ್ಯ, ಎಲ್ಲಿಂದಲೋ ಬಂದ ಎತ್ತೊಂದು ಇಳಿಸಿಯೇ ಬಿಟ್ಟಿದೆ ಖೋಡುಗಳನ್ನು ಇವಳ ಬೆನ್ನಿಗೆ.

 

ಆಕಾಶದಲ್ಲಿ ಹಾರುತಿದ್ದ ವಿಮಾನದಲ್ಲೇನೋ ಅಡಚಣೆ ಉಂಟಾಗಿ ವಿಮಾನಕ್ಕೆ ಬೆಂಕಿ ಹತ್ತಿ, ಪ್ರಯಾಣಿಕರೆಲ್ಲರೂ ಬೂದಿ ಬೂದಿ.

 ****                   ***************                   *********              

ರಕ್ತದ ಮಡುವಿನಲ್ಲಿ ಬಿದ್ದ ಇವಳ ಮುಖದ ಮೇಲೆ ಎಲ್ಲಿಂದಲೋ ಹಾರಿ ಬಂದ ಬೂದಿ ಬಿದ್ದಾಗ, ಮುತೈದಿಯಾಗಿ ಸತ್ತ ಸಂತೋಷ ಇವಳ ಮುಖದಲ್ಲಿ ನಗೆಯಾಡುತಿತ್ತು.

ಇಷ್ಟೊಂದು ಸಂಭ್ರಮದ ಸಾವು ನೋಡಿ, ವಿಧಿನೂ ವಿಧಿಯನ್ನು ಹಳಿದಿರಬಹುದಲ್ಲವೇ?? ಕೊನೆಗೆ ಸೋಲು ವಿಧಿಗೆ ಅಲ್ಲವೇ??

 

-ಅಶ್ವಿನಿ   
Rating
No votes yet

Comments