ನೀನು ಯಾರು ?.

ನೀನು ಯಾರು ?.

ಮಲ್ಲಿಗೆಯ ಪರಿಮಳದಲಿ

ತಾವರೆಯ ಚಲುವಿನಲಿ

ಮಂದಾರದ ಒಡಲಿನಲಿ

ಮುತ್ತಿನ ತೇರಲಿ ಬಂದೆ ನೀ ಯಾರು ?.

 

ಮುಂಗಾರಿನ ಮಿಂಚಿನಲಿ

ಚೈತ್ರಮಾರುತದ ಅಂಚಿನಲಿ

ನಕ್ಷತ್ರಗಳ ಮಾಲೆಯಲಿ

ಅಂಬರದ ಉಯ್ಯಾಲೆಯಲಿ ಬಂದೆ ನೀ ಯಾರು ?.

 

ಕೋಗಿಲೆಯ ರಾಗದಲಿ

ಸುಶ್ರಾವ್ಯ ಕಂಠದಲಿ

ಸ್ವರ್ಣಗೀತೆ ಕಾವ್ಯದಲಿ

ಕುಣಿಯುತ ಬಂದೆ ನೀ ಯಾರು ?.

 

ಮಧುಮಾಸದ ಸಂಜೆಯಲಿ

ರವಿಮುಳುಗಿದ ನಸುಕಿನಲಿ

ಬಿದಿಗೆ ಚಂದ್ರಮನ ಬೆಳಕಿನಲಿ

ನನ್ನ ಹೃದಯವ ತುಂಬಿಕೊಂಡೆ ನೀ ಯಾರು ?.

 

                                                                 ವಸಂತ್

 

 

Rating
No votes yet

Comments