ಕಿರಿ ಕಿರಿ .......ಕವನಗಳು

ಕಿರಿ ಕಿರಿ .......ಕವನಗಳು

  ಸಾಕೇ.....ಬೇಕೆ

  ಸಾಕು ...ಎಂದರೆ  ಸಾಕೇ?

  ಬೇಕು  ....ಎಂದರೆ  ಬೇಕೇ ?

  ಸಾಕು ಎಂದರೆ ಸಾಕಾಗುವದಿಲ್ಲ!

  ಬೇಕು  ಎಂದರೆ  ಬೇಕಾಗುವದಿಲ್ಲ

  ನನ್ನ  ಈ  ಕಿರು ಕವನ ಓದಿ...

  ಸಾಕು....... ಬೇಕಾಯಿತಲ್ಲ !

  ಓಡಿ.....ಓಡಿ...!

  ಓಡಿ ಓಡಿ ಓಡಿ..

  ಗಾಡಿ ಬಂತು ಓಡಿ

  ಎಲ್ಲೂ ನಿಲ್ಲ ಬೇಡಿ

  ನಿಂತರೆ ಬದುಕು ರಾಡಿ

 

....................(ಮುಂದುವರಿಯುವದು)- ಇದು ನಾನು ತಾಯಿ ಉದರದಲ್ಲಿದ್ದಾಗ  ನೆನಪಿಸಿಕೊಂಡು ಎಲ್.ಕೆ.ಜಿ.ಯಲ್ಲಿರುವಾಗ ಬರೆದದ್ದು.

  ಒಂದು ...ಎರಡು

  ಒಂದು ಎರಡು

  ಮೂರು ನಾಲ್ಕು

  ಎಣಿಸಲು ಬರದು

  ಇಷ್ಟೇ ಸಾಕು

  ''''''''''''''''''''''''''''''''''''''''''''''( ಯು.ಕೇ.ಜಿ.ಯಲ್ಲಿ ನಮ್ಮ  ಟೀಚರ್   ನನಗೆ ಹೆದರಿಸಿ ಹೊಡೆದು  ಬರೆಸಿದ ಕವನ)


  (  ದಯವಿಟ್ಟು ಸಂಪದಿಗರು  ನನ್ನ  ಕವನಗಳಿಗೆ  ಹೆಚ್ಚು  ಪ್ರತಿಕ್ರೀಯೆ ನೀಡಿದರೆ ನನ್ನಲ್ಲಿ ಅಡಗಿ ಹೊಂಚು ಹಾಕಿ ಕುಳಿತಿರುವ     ಕವಿಶಕ್ತಿ ಹುಚ್ಚೆಬ್ಬಿಸಿ ಕುಣಿಸಬಹುದು  ದಯಮಾಡಿ ಸಹಕರಿಸಿ )

 

   ವಿಶೇಷ ಸೂಚನೆ: ಅತಿ ಹೆಚ್ಚು ಪ್ರತಿಕ್ರೀಯೆ ನೀಡಿದವರಿಗೆ ನಿಮ್ಮ  ಒಂದು ಜನ್ಮಕ್ಕೆ ಸಾಕಾಗುವಷ್ಟು ಇಂತಹ 1000 ಕಿರು ಕವನಗಳ ಸಂಕಲನ ಉಚಿತವಾಗಿ ಮನೆಗೆ ತಲುಪಿಸಲಾಗುವದು  -ಎಚ್ಚರ!

Rating
No votes yet

Comments