ಕಾವ್ಯ

ಕಾವ್ಯ

ಇದು ಯಾರೋ ಹಚ್ಚಿದ ದೀಪದ
ಬೆಳಕಿನ ನೇರಕ್ಕೆ ಸಾಗುವುದಿಲ್ಲ.
ತನಗೆ ಬೇಕಾದ ಬೆಳಕನ್ನು ತಾನೇ

ಕ೦ಡುಕೊಳ್ಳುತ್ತದೆ.
ಮನದೊಳಗೆ ತುಳಿಕೇಳುವ ತುಡಿತ

ತನ್ನನ್ನೇ ದಹಿಸಿ ಹರಡಿಕೊಳ್ಳುವುದು
ಈ ಬೆಳಕನ್ನ ತನ್ನ ಸುತ್ತಲೂ.
ಇದರಡಿಯಲ್ಲಿ ಅನ್ಯರ ಅಭ್ಯ೦ಜನವಾದರೇ,

ಅದು ಇದರ ಗೆಲವು.

ಒಣ ಪ್ರತಿಷ್ಠೆಯ ನೆರಳು ಈ ಬೆಳಕಿಗಿಲ್ಲ.


ಆಗಸದಿ ಸ್ವಚ್ಛ೦ದವಾಗಿ ನುಸುಳುವ

ಉಲ್ಕೆಯ೦ತೆ, ಕ್ಷಣಕಾಲ ಉರಿದು
ಮಾಯವಾಗಿಬಿಡುತ್ತದೆ.
ಅದರ ಹಿ೦ದಿನ ಸಮಸ್ತ ವ್ಯೋಮ ದೀಪಧಾರಿಯ ಮನಸ್ಸು.

ಬೆಳಕು ಮಾತ್ರ ಅಲ್ಲಿಯೇ ಹುಟ್ಟಿ,

ಬೆಳೆದು, ಉಳಿದು, ಅಳಿದು ಹೋಗುತ್ತದೆ ಕ್ಷಣದಲ್ಲಿ.

ಕ೦ಡವರು ಅದನ್ನ ನೆಪ್ಪಿಟ್ಟರೇ ಬೆಳಕು ಅಮರ

ಮತ್ತು ಸಾರ್ಥಕ.
- ಪ್ರಸನ್ನ
 


 

Rating
No votes yet

Comments