ನನ್ನ ಸಂತಸ ನಿಮ್ಮೊಂದಿಗೆ...ಅನಿಸಿಕೆ ಕೂಡಾ ಬೇಕು...

ನನ್ನ ಸಂತಸ ನಿಮ್ಮೊಂದಿಗೆ...ಅನಿಸಿಕೆ ಕೂಡಾ ಬೇಕು...

ಸಂಪದಿಗ ಮಿತ್ರರಲ್ಲಿ ನನ್ನ ಒಂದು ಸಂತಸವನ್ನು ಹಂಚಿಕೊಳ್ಳೋಣ ಅನಿಸಿತು...ಅದಕ್ಕೇ ಈ ಬರಹ. :) 


ಬಹಳ ದಿನಗಳಿಂದ ಆರೋಗ್ಯ ಕ್ಷೇತ್ರದಲ್ಲಿನ ವಿಚಾರಗಳನ್ನು ಹಂಚಿಕೊಳ್ಳಲು ಒಂದು ವೆಬ್ಸೈಟ್ ಮಾಡಬೇಕು ಅಂದುಕೊಂಡಿದ್ದೆ. ಕಳೆದ ತಿಂಗಳು ಅದಕ್ಕೊಂದು ಸ್ಪಷ್ಟ ಕಲ್ಪನೆ ಸಿಕ್ಕಿ, ಇ-ಪತ್ರಿಕೆ ಮಾಡುವುದು ಅಂತ ಹೊರಟೆ. ಬಹಳ ಹುಡುಕಾಡಿ, ಜನಸಂಪರ್ಕ ಮಾಡಿ, ಲೇಖನಗಳು ದೊರೆತ ಮೇಲೆ ಜೂನ್ ೧ ರಂದು ಅದನ್ನು ಹೊರತಂದಾಯಿತು. :) 


"ದ ವೆಲ್ನೆಸ್ ಟುಡೆ" ಅಂತ ಹೆಸರೂ ಇಟ್ಟಿದ್ದಾಯಿತು. ಮೊದಲಿಗೆ ಅದನ್ನು ಹಣ ಕೊಟ್ಟು ಸೇರುವಂತೆ ಮಾಡಿದ್ದೆ (ಉಚಿತಕ್ಕೆ ಬೆಲೆ ಇಲ್ಲ ಎಂಬ ಭಾವನೆಯಿಂದ). ನಂತರ ಯಾಕೋ 'ಆರೋಗ್ಯ' ವಿಷಯದಲ್ಲಿ ಅದು ಸರಿಯಲ್ಲ ಅನ್ನಿಸಿತು. ಹಾಗೇ ಅದನ್ನು ಉಚಿತ ಸದಸ್ಯತ್ವ ಅಂತ ಮಾಡಿದೆ. ಆದರೆ, ಅದನ್ನು ನಡೆಸುವ, ಬರಹಗಾರರಿಗೆ ಸಂಭಾವನೆ ಕೊಡುವ ಇತ್ಯಾದಿ ಖರ್ಚಿಗೆ ಬೇಕಲ್ಲ ಅಂತ ಎಷ್ಟಾದರೂ ಕೊಡಬಹುದು ಅಂತ 'ಡೊನೇಷನ್' ಗುಂಡಿ ಇಟ್ಟಿದ್ದೇನೆ. 


ನನ್ನ ಒಬ್ಬ ಸ್ನೇಹಿತನ ಪ್ರಕಾರ ಅದು ಕೂಡ ಮಾಡಬಾರದಂತೆ, ಇಮೇಜ್ ಒಳ್ಳೆಯದಿರಲ್ಲ ಅಂತಾನೆ. ಒಂದು ರೀತಿಯಲ್ಲಿ ಹೌದಾದರೂ, ಒತ್ತಾಯವಿಲ್ಲದ ಕಾರಣ ಮತ್ತು ಎಷ್ಟಾದರೂ ಕೊಡಬಹುದಾದ ಕಾರಣ, ನಮ್ಮ ಒಳ್ಳೆಯ ಪ್ರಯತ್ನವನ್ನು ಮುಂದಾದರೂ ಗುರ್ತಿಸುತ್ತಾರೆ ಅಂತ ನನ್ನ ಭಾವನೆ. ನಿಮ್ಮ ಅಭಿಪ್ರಾಯವೇನು, ತಿಳಿಸ್ತೀರಾ? 


ವಿ.ಸೂ: ಹೆಚ್ಚು ಜನವನ್ನು ತಲುಪಲಿ ಅಂತ ಇಂಗ್ಲಿಷ್ನಲ್ಲಿ ಮಾಡಿದ್ದೇನೆ ಅಷ್ಟೆ, ಬೇರೇನಿಲ್ಲ. :) ಅಲ್ಲದೆ ನನ್ನ ಇಲ್ಲಿನ ಬಹಳಷ್ಟು ಮಿತ್ರರಿಗೆ ಕನ್ನಡ ಬರುವುದಿಲ್ಲವಲ್ಲ, ಅದು ಇನ್ನೊಂದು ಕಾರಣ. :) :)

Rating
No votes yet

Comments