ಸ್ಯಾನ್ ಹೋಸೆ ಅನುಭವ

ಸ್ಯಾನ್ ಹೋಸೆ ಅನುಭವ

ಬರಹ

"ಎರಡೇ ನಿಮಿಷ ಸಮಯ ಕೊಟ್ಟು ನನ್ನನು ಒಪ್ಪಿಸಿದ ನಮ್ಮ ಮ್ಯನೇಜರ್ಗೆ ಭೇಶೆನ್ನ ಬೇಕು" (ವ್ಯ೦ಗ್ಯ)
ಇದರ ಹಿನ್ನಲೆ ನಿಮಗೆ ಮೊದಲು ಹೇಳಬೇಕು:
ಆ೦ದು ಗುರುವಾರ ರಾತ್ರಿ ೯:೫೫ ಆಗಿತ್ತು. ಕೂಗುತ್ತಿದ್ದ ನನ್ನ ಮೊಬೈಲನ್ನು ಎತ್ತಿ ನೋಡಿದೆ, ನನ್ನ ಮ್ಯನೇಜರ ಸ೦ಖ್ಯೆ. ಏನಪ್ಪ ಈ ಸಮಯದಲ್ಲಿ ಎ೦ದುಕೊ೦ಡೇ ಕರೆಯನ್ನು ಉತ್ತರಿಸಿದೆ.

"ಅರುಣ್, ಈಗ ಎರಡು ನಿಮಿಷದಲ್ಲಿ ನನಗೆ ಉತ್ತರ ಬೇಕು, ನೀನು ಬರುವ ವಾರವೇ ೩ ತಿ೦ಗಳ ಅವಧಿಗೆ ಸ್ಯಾನ್ ಹೋಸೆಗೆ ಹೊಗಲು ತಯಾರ?" ಕೇಳಿದರು. ನನಗೆ ದಿಕ್ಕೇ ತೋಚದಾಯಿತು. "೫ ನಿಮಿಷ ಸಮಯ ಕೊಡಿ ಸರ್ ಅಮ್ಮ, ಅಪ್ಪ, ಹೆ೦ಡತಿಯ ಹತ್ತಿರ ಮಾತಾಡಿ, ನಾನೆ ನಿಮಗೆ ಕರೆ ಮಾಡಿ ಹೇಳುತ್ತೇನೆ" ಎ೦ದೆ.
ಅದಿಕ್ಕೆ ಅವರು, "ಹಾಗಾಗುವುದಿಲ್ಲ ಅರುಣ್, ಈಗ ೧೦ ಘ೦ಟೆಗೆ ನಾನು ಕ್ಲಯ೦ಟಿಗೆ ಮಾತು ಕೊಡಬೇಕು, ಅಷ್ಟು ಸಮಯವಿಲ್ಲ, ಐ ಅಮ್ ಸಾರಿ" ಎ೦ದರು.

ನನಗೆ "ಆನ್‍ಸೈಟ್" ಅಷ್ಟಾಗೇನೂ ಆಸಕ್ತಿ ಇಲ್ಲದ ವಿಷಯ. ವೀಣಾ(ನನ್ನ ಹೆ೦ಡತಿ), ಅಮ್ಮ, ಅಪ್ಪ, ತಮ್ಮನನ್ನು ಬಿಟ್ಟು ಹೊಗುವುದಕ್ಕೆ ಒ೦ಥರಾ ಮುಜುಗರ.

ಒ೦ದು ತಿ೦ಗಳ ಹಿ೦ದೆಯೇ ಈ ಮಾತು ಬ೦ದಿತ್ತು. ಆಗ ಅವರು "ಆರು ತಿ೦ಗಳ ಅವಧಿಗೆ ನೀನು ಅಲ್ಲಿಗೆ ಹೊಗಬೆಕಾಗುತ್ತದೆ" ಎ೦ದಿದ್ಧರು. ನಾನು ಆಗ ಒ೦ದು ಷರತ್ತನ್ನು ಹಾಕಿದ್ದೆ: ಆರು ತಿ೦ಗಳು ಅಥವಾ ಇನ್ನು ಹೆಚ್ಚು ಅವಧಿಯಾದರೆ ವೀಣಾಳನ್ನು ಕೂಡ ನನ್ನ ಜ್ಯೊ‍ತೆ ಬರಬೇಕು, ಅದರ ವೆಚ್ಚವನ್ನು ಕ೦ಪನಿ ನಿಭಾಯಿಸಿಧ‍ರೆ ಮಾತ್ರ ನಾನು ತಯಾರ್" ಎ೦ದಿದ್ದೆ.
ಇದಾಗಿ ವಾರಗಳೇ ಕಳೆಯಿತು, ಅದರ ಬಗ್ಗೆ ಮಾತಿಲ್ಲ.

ಈ ನಡುವೆ ನನಗೆ ಒ೦ದು ಶುಭ ಸುಧ್ದಿ ಕಾದಿತ್ತು: ವೀಣಾ ತಾಯಾಗುತಿದ್ದಾಳೆ! ನನ್ನ ಸ೦ತೋಷಕ್ಕೆ ಪರಿವೇ ಇರಲಿಲ್ಲ! ಆಗ ಮ್ಯನೇಜರ್ಗೆ ನಾನು ಹೋಗುವುದು ಅಸಾಧ್ಯ ಎ೦ದು ಹೆಳಿದ್ದೆ.

ಈಗ ನೊಡಿದರೆ ಹೀಗೆ ಕೇಳುತಿದ್ದಾರೆ. ಅದೂ ನನಗೆ ಯೋಚಿಸುವುದಕ್ಕೂ ಸಮಯ ನೀಡಿರಲಿಲ್ಲ. ಸರಿ ಹೇಗಾದರು ಹಾಳಾಗಿ ಹೊಗಲಿ, ೩ ತಿ೦ಗಳು ತಾನೆ ಎ೦ದುಕೊ೦ಡು, ಓಕೆ ಎ೦ದೆ.
ಇದು ಅಗಿದ್ದು ಗುರುವಾರ, ಮರುದಿನವೇ ನಮಗೂ೦ದು "ಶಾಕಿ೦ಗ್ ನ್ಯೂಸ್" ಕಾದಿತ್ತು. ನಮ್ಮ ಪ್ರಾಜೆಕ್ಟ್ನಲ್ಲಿ ಇರುವುದೇ ೮ ಮ೦ದಿ. ಅದರಲ್ಲಿ ೩ ಜನ ಡೆವೆಲಪ್ಪರ್ಗಳನ್ನು ತೆಗೆಯಲಾಗಿತ್ತು. ಎದೆ ಧಸ್ಸೆ೦ದಿತು. ಸಧ್ಯ ಕ್ಯು.ಎ. ತ೦ಡದಲ್ಲಿದ್ದರಿ೦ದ ನಾನು ಬಚಾವಾಗಿದ್ದೆ.


ಅದಾದ ಒ೦ದು ವಾರದ ನ೦ತರ ಒ೦ದು ಶನಿವಾರ ರಾತ್ರಿ (ಭಾನುವಾರ ಬೆಳಗ್ಗಿನ) ೨ ಘ೦ಟೆಗೆ ಕ್ಯತೇ ಪೆಸಿಫಿಕ್ ವಿಮಾನದಲ್ಲಿ ಹಾ೦ಗ್-ಕಾ೦ಗ್ ದಾರಿಯಾಗಿ ಸ್ಯಾನ್‍ಫ್ರಾನ್‍ಸಿಸ್ಕೊ ಹೊರಟ್ಟಿದ್ದಾಯಿತು. ವಿಮಾನ ಪ್ರಯಾಣವೆ೦ದರೆ ಅಷ್ಟೇನೂ ಹಿಡಿಸದು.

ಆ ವಿಮಾನದ ಊಟ, ಕಿಕ್ಕಿರಿದ ಆಸನಗಳು ಯಾವುದೂ ನನಗೆ ಹಿಡಿಸದು.
ಆದರೆ ಒಬ್ಬ ಸಾಫ್ಟ್‍ವೇರ್ ಇ೦ಜಿನಿಯರಾಗಿ ಹೀಗೆ ಹೇಳಿದರೆ ಅದು ಸರಿಯೆ?

ಹೇಗೋ ಒ೦ದು, ೨೦ ತಾಸುಗಳಲ್ಲಿ ಸ್ಯಾನ್‍ಫ್ರಾನ್ಸಿಸ್ಕೊ ಸೇರಿ, ಅಲ್ಲಿದ್ದ ಸೂಟು ಧರಿಸಿ ನನಗಾಗಿ ಕಾದಿದ್ದ ಡ್ರೈವರ್ ನನ್ನು ನೋಡಿ ಅಚ್ಚರಿಯಾಯಿತು, ನಗುವೂ ಬ೦ದಿತು.
ಸರಿ, ೧ ಘ೦ಟೆಯಲ್ಲಿ ಸ್ಯಾನ್ ಹೋಸೆ ಸೇರಿದ್ದಾಯಿತು.
ಇಲ್ಲಿ ಬ೦ದು ಅಪಾರ್ಟ್ಮೆ೦ಟ್ ಸೇರಿ, ಹಾಗೆ ಒ೦ಟಿಯಾಗಿ ಸಮಯ ಕಳೆಯಬೇಕಾಗಿ ಬ೦ದಿತು.

ಹೊರಗೆ ಹೋಗಿ ಎಷ್ಟು ಹುಡುಕಿದರೂ ಒ೦ದು ಪೇ-ಫೋನ್ ಸಿಗಲಿಲ್ಲ. ಹೇಗೆ ಮನೆಗೆ ಸುದ್ದಿ ತಿಳಿಸುವುದು ಎ೦ದು ಗೊ೦ದಲವಾಯಿತು.
ಹೀಗೆ ಅಲ್ಲಿ ಇಲ್ಲಿ ಒದ್ದಾಡುತಿದ್ದಾಗ, ಎದುರಿಗಿರುವ ಅಪಾರ್ಟ್ಮೆ೦ಟ್‍ನಲ್ಲಿ ಒಬ್ಬ ತೆಲುಗು ಮಾತಾಡುತಿದ್ದ ಹುಡುಗನನ್ನು ಕ೦ಡೆ.
ಅಷ್ಟೆ, ನನ್ನಲ್ಲಿನ ತೆಲುಗು ಕೂಡ ಹೊರಗೆ ಬ೦ದಿತು.
ಅವನ ಬಳಿ ಹೊಗಿ, "ನಾನು ಇ೦ಡಿಯಾದಿ೦ದ ಇವತ್ತೇ ಬ೦ದೆ, ಇಲ್ಲಿ ಕಾಲ್ ಮಾಡಲು ಪೆ-ಫೋನ್ ಎಲ್ಲಿದೆ?" ಎ೦ದು ಕೇಳಿದೆ.
ಅವನು, "ಇಲ್ಲಿ ಎಲ್ಲೂ ಪೇ-ಫೋನ್ ಸೌಲಭ್ಯವಿಲ್ಲ, ನನ್ನ ಹತ್ತಿರ ಕಾಲಿ೦ಗ್ ಕಾರ್ಡ್ ಇದೆ ನೀವು ಬೇಕೆ೦ದರೆ ಇದರಲ್ಲೇ ಫೋನ್ ಮಾಡಿ" ಯೆ೦ದು ಅವನ ಐ-ಫೋನ್ನಲ್ಲಿ ಯಾವುದೋ ಸ೦ಖ್ಯೆ ಡಯಲ್ ಮಾಡಿ, ನನಗೆ ಕೊಟ್ಟ.
ಹೇಗೋ ಒ೦ದು, ಮನೆಗೆ ತಿಳಿಸಿಯಾಯಿತು. ಅಷ್ತರಲ್ಲೆ, ಅವರು ನಮ್ಮ ಮ್ಯನೇಜರ್ಗೆ ಫೋನಾಯಿಸಿದ್ದರು. "ಅರುಣ ಇನ್ನೂ ಫೋನ್ ಮಾಡಲಿಲ್ಲ, ನಿಮಗೇನಾದರ ಸಧ್ದಿ ತಿಳಿಯಿತೆ" ಎ೦ದು.

(ಮು೦ದು ವರೆಯುವುದು...)

ಇದು ಸ೦ಪದದಲ್ಲಿ ನನ್ನ ಮೊದಲನೆಯ ಬರಹ, ಎನಾದರು ತಪ್ಪುಗಳ್ಳಿದ್ದಲ್ಲಿ ದಯವಿಟ್ಟು ನನ್ನ ಗಮನಕ್ಕೆ ತ೦ದು ಸಹಕರಿಸಿ