ಸಂಪದಿಗರ ’ಸಂಮಿಲನ’ : ಆನಂದನ ದುಃಖ

ಸಂಪದಿಗರ ’ಸಂಮಿಲನ’ : ಆನಂದನ ದುಃಖ

ಬರಹ

 
ಕಾವ್ಯಶಾಸ್ತ್ರವಿನೋದೇನ ಕಾಲೋ ಗಚ್ಛತಿ ಧೀಮತಾಂ
ವ್ಯಸನೇನ ತು ಮೂರ್ಖಾಣಾಂ ನಿದ್ರಯಾ ಕಲಹೇನ ವಾ
(ಹಿತೋಪದೇಶ)

ಕಾವ್ಯ-ಶಾಸ್ತ್ರಗಳೋದಿ ಸಂತೋಷಪಡುವಲ್ಲಿ
ಕಳೆಯುವುದು ಧೀಮಂತ ಜನರ ಸಮಯ;
ದುಶ್ಚಟಗಳಲ್ಲಿ ಮೇಣ್ ನಿದ್ರೆ-ಕಲಹಗಳಲ್ಲಿ
ಮೂರ್ಖರಾ ಸಮಯವದು ವ್ಯಯವು ಅಯ್ಯ.
(ಆನಂದರಾಮಾನುವಾದ)

ಸಾಹಿತ್ಯ-ಸಂಸ್ಕೃತಿಯ ಚರ್ಚೆ-ಪ್ರಸ್ತುತಿಗಳಲಿ
ಸಂಪದಿಗ ಸಂಮಿಲನ ಸಂಪನ್ನವು;
ಹಲವು ಮಿತ್ರರಿಗೆ ಈ ಅವಕಾಶ ಸಿಗದಾಯ್ತು
ನನ್ನಂಥ ನತದೃಷ್ಟಗದುವೆ ನೋವು
(ಆನಂದನ ದುಃಖ)