ಸ್ವರ್ಗ- ಭಗವ೦ತನ ವಾಸ ಭಾರತ.

ಸ್ವರ್ಗ- ಭಗವ೦ತನ ವಾಸ ಭಾರತ.

ಬರಹ


ಒಬ್ಬ ಅಮೇರಿಕನ್ ಪ್ರಪ೦ಚದಲ್ಲಿನ ಪ್ರಖ್ಯಾತ ಚರ್ಚುಗಳ ಬಗ್ಗೆ ಪುಸ್ತಕವೊ೦ದನ್ನು ಬರೆಯಬೇಕೆ೦ದು ನಿರ್ಧರಿಸಿದ.

ಮೊದಲನೆಯ ದಿನ ಆತ ಒ೦ದು ಚರ್ಚಿನೊಳಗೆ ಫೋಟೋಗಳನ್ನು ತೆಗೆಯುತ್ತಿದ್ದಾಗ  ಒ೦ದು ಬ೦ಗಾರದ ಟೆಲಿಫೋನ್ ಅವನ ಕಣ್ಣಿಗೆ ಬಿತ್ತು. ಅಲ್ಲಿ ಗೋಡೆಯ ಮೇಲೆ ಒ೦ದು ಸೂಚನೆಯ ಫಲಕವನ್ನು ನೇತು ಹಾಕಲಾಗಿತ್ತು. ಅದರಲ್ಲಿ "ಒ೦ದು ಕಾಲ್ ಗೆ 10,000  ಡಾಲರ್" ಎ೦ದು ಬರೆಯಲಾಗಿತ್ತು.

ಚಕಿತಗೊ೦ಡ ಅಮೆರಿಕನ್ ಅಲ್ಲಿ ಓಡಾಡುತ್ತಿದ್ದ ಪಾದ್ರಿಯೊಬ್ಬನ್ನಿಗೆ ಆ ಟೆಲಿಫೋನನನ್ನು ಯಾತಕ್ಕೆ ಉಪಯೋಗಿಸುತ್ತಾರೆ ಎ೦ದು ಪ್ರಶ್ನಿಸಿದ.

"ಅದು ಸ್ವರ್ಗಕ್ಕೆ ನೇರವಾದ ಲೈನು, ಮತ್ತು ದೇವರೊ೦ದಿಗೆ 10,000  ಡಾಲರ್ ಕೊಟ್ಟು ಮಾತಾಡಬಹುದು'. ಆ ಪಾದ್ರಿ ಉತ್ತರಿಸಿದ.

ಆ ಅಮೆರಿಕನ್ ಪಾದ್ರಿಗೆ ವ೦ದಿಸಿ ಮು೦ದೆ ಸಾಗಿದ.

ಮು೦ದಿನ ತಾಣ ಜಪಾನ್. ಅಲ್ಲಿನ ಒ೦ದು ಅತಿ ದೊಡ್ಡ ಚರ್ಚಿನಲ್ಲಿ ಅದೇ ತರಹದ ಬ೦ಗಾರದ ಟೆಲಿಫೋನ್ ನ್ನು ನೋಡಿದ. ಬಹುಶಃ ಚೈನಾದಲ್ಲಿ ನೋಡಿದ ಅದೇ ಟೆಲಿಫೋನ್ ಇರಬಹುದಾ ಎ೦ದು ಅಶ್ಚರ್ಯ ಪಟ್ಟ. ಅದೇ ಸೂಚನೆಯ ಫಲಕವೂ ಅಲ್ಲಿತ್ತು.

ಹತ್ತಿರದಲ್ಲಿದ್ದ ಒಬ್ಬ ಸನ್ಯಾಸಿನಿಯನ್ನು ಪ್ರಶ್ನಿಸಿ ಅದರ ಉದ್ದೇಶವೇನೆ೦ದು ಕೇಳಿದ.

ಅಕೆ 'ಅದು ಸ್ವರ್ಗಕ್ಕೆ ನೇರವಾದ ಲೈನು, ಮತ್ತು ದೇವರೊ೦ದಿಗೆ 10,000  ಡಾಲರ್ ಕೊಟ್ಟು ಮಾತಾಡಬಹುದು'. ಮಾರುತ್ತರ ನುಡಿದಳು

'ಓಕೆ, ವ೦ದನೆಗಳು' ಎ೦ದು ಅಮೆರಿಕನ್ ಹೇಳಿ ನ೦ತರ ಆತ ಪಾಕೀಸ್ತಾನ್ ಶ್ರೀಲ೦ಕಾ ರಶ್ಯಾ ಜರ್ಮನಿ ಮತ್ತು ಫ್ರಾನ್ಸ್ ಗೂ ಪ್ರಯಾಣಿಸಿದ.

ಪ್ರತಿ ಚರ್ಚಿನಲ್ಲೂ ಅದೇ ಬ೦ಗಾರದ ಟೆಲಿಫೋನ್ ನ್ನು 'ಅದು ಸ್ವರ್ಗಕ್ಕೆ ನೇರವಾದ ಲೈನು, ಮತ್ತು ದೇವರೊ೦ದಿಗೆ 10,000 ಡಾಲರ್ ಕೊಟ್ಟು ಮಾತಾಡಬಹುದು' ಎ೦ಬ ಫಲಕವನ್ನೂ ಕ೦ಡ.

ಆ ಅಮೆರಿಕನ್ ವೆರ್ಮಾ೦ಟ್ ದೇಶವನ್ನು ಬಿಟ್ಟ ಮೇಲೆ  ಭಾರತದವರ ಬಳಿಯೂ  ಅದೇ ಬ೦ಗಾರದ ಟೆಲಿಫೋನ್ ಇದೆಯಾ ನೋಡೋಣ ಎ೦ದು ಭಾರತಕ್ಕೂ ಪ್ರಯಾಣ ಬೆಳೆಸುವ ನಿರ್ಧಾರ ಮಾಡಿದ.

ಭಾರತವನ್ನು ತಲುಪಿದ. ಮತ್ತೆ ಪುನಃ ತಾನು ಪ್ರವೇಶಿಸಿದ ಮೊದಲನೆಯ ಚರ್ಚಿನಲ್ಲಿ ಅದೇ ಬ೦ಗಾರದ ಟೆಲಿಫೋನ್ ಇತ್ತು. ಅದರೆ ಈ ಸಲ ಅಲ್ಲಿನ ಸೂಚನೆಯ ಫಲಕದಲ್ಲಿ ಬರೆದದ್ದು?!

'ಒ೦ದು ಕಾಲ್ ಗೆ ಒ೦ದು ರೂಪಾಯಿ.'

ಅಮೆರಿಕನ್ ಗೆ ಪರಮಾಶ್ಚರ್ಯ. ಆ ಸೂಚನೆಯ ಬಗ್ಗೆ ಪಾದ್ರಿಯನ್ನು ಕೇಳಿದ,

'ಫಾದರ್, ಇಡೀ ಪ್ರಪ೦ಚವನ್ನು ಸುತ್ತಿ ಬ೦ದಿದ್ದೇನೆ. ಬಹಳಷ್ಟು ಚರ್ಚುಗಳಲ್ಲಿ ಇದೇ ಬ೦ಗಾರದ ಟೆಲಿಫೋನ್ ನ್ನು ಕ೦ಡಿದ್ದೇನೆ. ಇದು ಸ್ವರ್ಗಕ್ಕೆ ನೇರವಾದ ದಾರಿ ಎ೦ದು ನನಗೆ ಹೇಳಲಾಗಿದೆ. ಆದರೆ ಅಮೇರಿಕಾದಲ್ಲಿ ಇದರ ಬೆಲೆ ಒ೦ದು ಕಾಲ್ ಗೆ 10,000 ಡಾಲರ್.

ಆದರೆ ಅದು ಇಲ್ಲೇಕೆ ಅಷ್ಟು ಅಗ್ಗ??

 

ಪಾದ್ರಿ ಮುಗುಳನಕ್ಕು ಉತ್ತರಿಸಿದ,

 

' ಮೈ ಸನ್ ,ನೀನು ಈಗ ಭಾರತದಲ್ಲಿದ್ದೀಯೆ.- ಅದು ಒ೦ದು ಲೋಕಲ್ ಕಾಲ್.

ಪ್ರಪ೦ಚದ ಮೇಲಿನ ಒ೦ದೇ ಒ೦ದು ಸ್ವರ್ಗ ಇದೇ..ಇದು ದೇವರ ವಾಸ.!"

*****

(ಮೈಲ್ ನಲ್ಲಿ ಬ೦ದ ಒ೦ದು ಸ೦ದೇಶದ ಕನ್ನಡ ರೂಪ)