ನೀರಸ ಸಂಪದ

ನೀರಸ ಸಂಪದ

ಬರಹ

ಸೋಮವಾರದಿಂದ ಶುಕ್ರವಾರದವೆರೆಗೆ ಸಂತೆಯಂತೆ ಗಿಜಿಗುಡುತ್ತಿದ್ದ ಸಂಪದ ಶನಿವಾರ, ಭಾನುವಾರ ಬಂತೆಂದೆರೆ ನೀರಸವಾಗಿ ಬಿಡುತ್ತದೆ. ಧೋ ಎಂದು ಮಳೆ ಸುರೆಯುವಂತೆ ವಾರದ 5ದಿನಗಳಲ್ಲಿ ಕವನ,ಲೇಖನಹಾಸ್ಯ ಅಂತಾ ದಬ ದಬ ಎಂದು ಬ್ಲಾಗ್,ಲೇಖನಕ್ಕೆ ಬಿದ್ದಿದ್ದೇ ಬಿದ್ದದ್ದು. ಬಿಸಿ ಬಿಸಿ ಚರ್ಚೆ. ಒಬ್ಬರು ಮೇಲೆ ಒಬ್ಬರು ಗುದ್ದಾಡಿದ್ದೇ ಗುದ್ದಾಡಿದ್ದು. ಅಕ್ಷರಗಳಲ್ಲಿ. ಅದೇ ಕಡೆಯ ಎರಡು ದಿನಗಳಲ್ಲಿ ಮಳೆ ನಿಂತ ಮೇಲೆ ಎಲೆಯಿಂದ ಆಗೊಂದು ಈಗೊಂದು ಬೀಳುವ ಹನಿಯಂತೆ ಬರಹಗಳು ಬಂದು ಬೀಳುತ್ತಿರುತ್ತದೆ. ಈ ದಿನಗಳಲ್ಲಿ ಪ್ರತಿಕ್ರಿಯೆ ಕೂಡ ಗಂಟೆಗೊಂದು ಕೆಲವೊಮ್ಮೆ ಅರ್ಧದಿನಕ್ಕೆ ಒಂದು ಬಂದರೆ ಹೆಚ್ಚು ಅನ್ನುವಂತಿರುತ್ತದೆ.

ವಾರದ 5ದಿನಗಳು  ಸಂಪದಿಗರು ಕೆಲಸದಲ್ಲಿ ನಿರತರಾಗಿರುವುದರಿಂದ ಬಿಡುವು ಇದ್ದಾಗಲೆಲ್ಲಾ ಸಂಪದಕ್ಕೆ ಒಂದು ಕಣ್ಣು ಹಾಯಿಸುತ್ತಾರೆ. ಹಾಗಾಗಿ ಪ್ರತಿಕ್ರಿಯೆಗಳ ಭರಾಟೆ ಜೋರಾಗಿ ಇರುತ್ತೆ. ಕಡೆಯ ಎರಡು ದಿನಗಳು ಹಾಯಾಗಿ ಇರೋಣ, ಯಾವನಿಗೆ ಬೇಕು ಕಂಪ್ಯೂಟರ್ ಸಹವಾಸ ಎಂದುಕೊಂಡು ಕುಟುಂಬದೊಂದಿಗೆ ಕಾಲ ಕಳೆಯುವ ನಿರ್ಧಾರ ಮಾಡುವ ಕಾರಣ ಈ ರೀತಿಯಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ. ಆದರೆ ನಾವು ಎಲ್ಲಾ ದಿನಾನೂ ಗಂಟೆ ಗಟ್ಟಲೆ ಕೂರಲೇಬೇಕು. ಒಂದು ಪದ ತಪ್ಪಾಗಿ ಬಂದರೆ ಬೆಳಗ್ಗೆ ನಾವು ಏಳಕ್ಕಿಂತ ಮುಂಚೆ ಆತ್ಮೀಯ ಓದುಗರೇ ಎಬ್ಬಿಸಿರುತ್ತಾರೆ. ಯಾಕಣ್ಣಾ, ಹಿಂಗೆ ಬರೆದಿದ್ದೀಯಾ ಅಂತಾ ಸುಪ್ರಭಾತ. ವಾರದ ಕಡೆಯ ದಿನಗಳಲ್ಲಿ ಜನ ಫ್ರೀಯಾಗಿ ಇರುತ್ತಾರೆ. ಹಾಗಾಗಿ ಅಂದು ವಿಶೇಷ ಲೇಖನಗಳನ್ನು ಓದುತ್ತಾರೆ ಎನ್ನುವ ಕಾರಣ ಕೆಲವು ವರದಿಗಾರರು ಶನಿವಾರ ಮತ್ತು ಭಾನುವಾರ ಪತ್ರಿಕೆಗಳಲ್ಲಿ ತಮ್ಮ ಸುದ್ದಿ ಪ್ರಕಟವಾಗುವಂತೆ ನೋಡಿಕೊಳ್ಳುತ್ತಾರೆ. ಹಾಗೇ ಸಂಪದದಲ್ಲಿ ಕೂಡ ವಿಶೇಷ ಬರಹಗಳು ಈ ದಿನಗಳಲ್ಲಿ ಬಂದರೆ ಓದುವುದಕ್ಕೆ ಸಮಯ ಇರುತ್ತದೆ. ಸ್ವಾರ್ಥ ಅಂತಾ ಅಲ್ಲ. ಈ ದಿನಗಳಲ್ಲೂ ಬಂದು ಭಾಗವಹಸಿ, ಸಂಜೆಯ ನಂತರ ಷಾಪಿಂಗ್ ಹೋಗಿ ಇಲ್ಲಾಂದ್ರೆ ಸಂಪದ ನೀರಸ.

ಇಂತಿ

ತಮ್ಮ ವಿಶ್ವಾಸಿ

ಸುರೇಶ್ ನಾಡಿಗ್