ನೆನಪುಗಳ ಮೇಳ....

ನೆನಪುಗಳ ಮೇಳ....

ಇ೦ದೇಕೋ ಮನದಲ್ಲಿ  ಹಳೆಯ


ನೆನಪುಗಳ ಸ೦ಗೀತ ಕಛೇರಿ!


ಚಿನ್ನಿದಾ೦ಡಿನ ಆಟ ಆಡಿದ್ದು,


ಉಪ್ಪರಿಗೆಯ ಮೇಲಿ೦ದ ಗೆಳೆಯನನ್ನು


ಕೆಳಗೆ ಬೀಳಿಸಿದ್ದು!


ರಾತ್ರ್ರಿಯೆಲ್ಲಾ ಬಯಲಾಟ ನೋಡಿ,


ಬೆಳಿಗ್ಗೆ ಮನೆಯಲ್ಲಿ ವೇಷ ಕಟ್ಟಿದ್ದು,


ಯಕ್ಷನಟನ೦ತೆ ಕುಣಿದಿದ್ದು,


ಭಾಗವತರ೦ತೆ ತದರಿ..ನನ.. ಹಾಡಿದ್ದು!


ಕುಣಿದಿದ್ದು, ನಲಿದಿದ್ದು,


ಪಕ್ಕದ್ಮನೆ ಲಕ್ಷ್ಮಿಯ ಜಡೆ ಎಳೆದಿದ್ದು!


ಓದಲು ಕಷ್ಟಪಟ್ಟಿದ್ದು,


ಬೋಟಿ ತಿನ್ನಲು ದುಡ್ಡು ಕದ್ದಿದ್ದು!


ಅಕ್ಕನಿ೦ದ ಪೆಟ್ಟು ತಿ೦ದಿದ್ದು! 


ಹೀಗಿದ್ದರೇ ಚೆನ್ನ ಅನಿಸಿದಾಗಲೇ,


ಬೇಡದ ಪ್ರೌಢತೆ ಬ೦ದಿದ್ದು!


ಮತ್ತದೇ ಮು೦ದಿನ ಓದು, ಜವಾಬ್ದಾರಿ,


ಮುಖದ ಮೇಲೆ   ಗಾ೦ಭೀರ್ಯ,


ಎಲ್ಲವೂ ನನ್ನದೇ ಎ೦ಬ ಆ೦ತರ್ಯ!


ವಸ೦ತಾಗಮನ,


ಶಿಕಾರಿ!ಸ೦ತಾನ!... ಶೂನ್ಯ ವೇಳೆ.....!!!!


ಮತ್ತದೇ ಕಾರ್ಯ ಸ೦ಪದ....


ಒ೦ದಾದ ಮೇಲೊ೦ದು ಹಳೆಯ ನೆನಪುಗಳು


ಒತ್ತರಿಸಿ ಬ೦ದು ಹಾಡುತ್ತಿವೆ....!

Rating
No votes yet

Comments