ಅಡ್ಡಾ-ದಿಡ್ಡಿಯಾಗಿ ಹೋಗುತ್ತಿರುವ ಅಡ್ಡಾ-ದಿಡ್ಡಿ ಕಾರ್ಯಕ್ರಮ

ಅಡ್ಡಾ-ದಿಡ್ಡಿಯಾಗಿ ಹೋಗುತ್ತಿರುವ ಅಡ್ಡಾ-ದಿಡ್ಡಿ ಕಾರ್ಯಕ್ರಮ

ಬರಹ

ಗೆಳೆಯರೇ,

 

ಮೊನ್ನೆ ಮನೆಲಿ ಕೂತು ಟಿವಿ ನೋಡ್ತಾ ಇದ್ದೆ. ನಮ್ ಸುವರ್ಣ ನ್ಯೂಸ್ ವಾಹಿನಿನಲ್ಲಿ ಹೊಸ ಕಾರ್ಯಕ್ರಮ ಒಂದು ಶುರು ಮಾಡಿದ್ದಾರೆ. ಅದರ ಹೆಸರು "ಅಡ್ಡಾ-ದಿಡ್ಡಿ"  ಅಂತ. ಕಾಲೇಜು ಹುಡುಗ್ರು, ಹುಡುಗೀರನ್ನ ಗುರಿಯಾಗಿಟ್ಟುಕೊಂಡು ಮಾಡಿರೋ ಈ ಕಾರ್ಯಕ್ರಮದ ಉದ್ದೇಶ ಅಂತು ಚೆನ್ನಾಗಿದೆ. ಕಾಲೇಜು ವಿಧ್ಯಾರ್ಥಿಗಳನ್ನ ಮಾತಾಡ್ಸೋದು, ಕನ್ನಡ ಚಿತ್ರರಂಗದ ಯುವ ಪ್ರತಿಭೆಗಳನ್ನ ಮಾತಾಡಸೋದು, ತಮಾಷೆ ಮಾಡೋದು ಇದೆಲ್ಲ ಈ ಕಾರ್ಯಕ್ರಮದಲ್ಲಿದೆ.  ಒಟ್ಟಾರೆಯಾಗಿ "ಕನ್ನಡ ಇಸ್ ಕೂಲ್ " ಅನ್ನೋ ಸಂದೇಶ ಸಾರ್ತಿದ್ದಾರೆ.

ಆದ್ರೆ ಈ ಕಾರ್ಯಕ್ರಮದಲ್ಲಿ "ಶಿವ ಪೂಜೆಲಿ ಕರಡಿ" ಬಿಟ್ಟಂಗೆ ಆಗಾಗ ಯಾವ್ ಯಾವುದೋ ಹಿಂದಿ ಸಿನೆಮಾ, ಸಿನೆಮಾದವರ ಬಗ್ಗೆ, ಅದ್ಯಾವುದೋ ಹಿಂದಿ ಹಾಡಿನ ಸ್ಪರ್ಧೆ ಬಗ್ಗೆಯೆಲ್ಲ ಚರ್ಚೆ ಶುರು ಹಚ್ಕೊತಾರೆ.  ಅವರು ಭೇಟಿ ಮಾಡುವ ಜನರನ್ನ ಹಿಂದಿ ಚಿತ್ರಗಳ ಬಗ್ಗೆ, ಹಿಂದಿ ಧಾರಾವಾಹಿಗಳ ಬಗ್ಗೆ, ಹಿಂದಿ ನಟ,ನಟಿಯರ ಬಗ್ಗೆ ಕೇಳಿ, ಹಿಂದಿ ಇಸ್ ಇವನ್ ಮೋರ್ ಕೂಲ್ ದ್ಯಾನ್ ಕನ್ನಡ ಅನ್ನೋ ರೀತಿಲಿ ಆಡ್ತಾರೆ. ಹಿಂದಿಗೆ ಅಂತಲೇ ನೂರಾರು ಚಾನೆಲ್ ಇರೋವಾಗ, ಕನ್ನಡ ನೋಡಲು ಬಯಸೋ ಕನ್ನಡದ ಹುಡುಗರಿಗೆ ಇಲ್ಲೂ ಬೇಡದಿರುವ ಹಿಂದಿನ ಯಾಕಪ್ಪ ಹೇರ್ತಾ ಇದ್ದಾರೆ ಅಂತ ತಿಳಿತಿಲ್ಲ.  

ಇವರು ಹೋಗೊ ಕಾಲೇಜಿನಲ್ಲಿ ಈ ರೀತಿ ಹಿಂದಿಗೆ acceptability ಕೊಡಿಸೋ ಕೆಲಸ ಇವರು ಮಾಡ್ತಾ ಇದ್ದಾರೆ ಅನ್ನಿಸುತ್ತೆ. ಇವರ ಫೇಸ್ ಬುಕ್ ಫ್ಯಾನ್ ಪುಟದಲ್ಲಿ ಹೋಗಿ ಇವರಿಗೆ ಮನವಿ ಮಾಡ್ಕೊಳ್ಳೋಣ. ಕನ್ನಡದ ಚಾನೆಲ್ ನಲ್ಲಿ ಬರೋ ಕನ್ನಡದ ಕಾರ್ಯಕ್ರಮದಲ್ಲಿ ಸುಮ್ ಸುಮ್ನೆ ಹಿಂದಿ ಹಾಕಿ ರಸಭಂಗ ಮಾಡಬೇಡಿ ಅಂತ ಹೇಳೊಣ.  

ಕನ್ನಡದ ಯುವ ಪೀಳಿಗೆಗೊಸ್ಕರ ಮಾಡಿರೋ ಕಾರ್ಯಕ್ರಮದಲ್ಲಿ ಹಿಂದಿ ಹಾಕಿದ್ರೆ ಕಾರ್ಯಕ್ರಮದ ಜನಪ್ರಿಯತೆ ನೇರವಾಗಿ ಹೋಗದೆ ಅಡ್ಡಾ-ದಿಡ್ಡಿಯಾಗಿ ಹೋಗಿ ಮಕಾಡೆ ಮಲಗುತ್ತೆ ಅಂತ ಅವರಿಗೆ ತಿಳಿ ಹೇಳೊಣ.  

ನೀವು ಮಾಡಬೇಕಿರೋದು ಇಷ್ಟೇ. ಕೆಳಗಿನ ಕೊಂಡಿಯನ್ನು ತೆರೆದು ಆ ಪುಟಕ್ಕೆ "Like" ಮಾಡಿ. ನಂತರ ಅಭಿಪ್ರಾಯವನ್ನು ಹಂಚಿಕೊಳ್ಳಿ

http://www.facebook.com/#!/pages/AddaDiddi/271375679033?ref=ts 

ಜೊತೆಗೆ adda@suvarnanews.tv ಗು ಮಿಂಚೆ ಬರೆಯಿರಿ. 

 

ಅಮರ