ಸಂಪದಿಗ ಮಂಜಣ್ಣ ಹಾಸನಕ್ಕೆ ಬಂದಿದ್ದರು

ಸಂಪದಿಗ ಮಂಜಣ್ಣ ಹಾಸನಕ್ಕೆ ಬಂದಿದ್ದರು

ಸಂಪದಿಗ ಮಿತ್ರರೇ, ಸಂಪದದಿಂದ ಅದೆಷ್ಟು ಜನ ನನಗೆ ಮಿತ್ರರಾದರು! ಅಚ್ಚರಿಯುಂಟಾಗುತ್ತೆ. ಸಂಪದದಿಂದ ಪರಿಚಿತರಾದ ಹಂಸಾನಂದಿ, ಡಾ||ಮೀನಾಸುಬ್ಬರಾವ್ ವಿದೇಶದಿಂದ ಕರ್ನಾಟಕಕ್ಕೆ ಬಂದಾಗ ಅನೇಕ ಸಂಪದಿಗರನ್ನು ಭೇಟಿಯಾಗಿದ್ದರು.ನನ್ನ ಸ್ವಂತ ಊರಾದ ಹರಿಹರಪುರಕ್ಕೂ ಡಾ|| ಮೀನಾ ಸುಬ್ಬರಾವ್ ಮತ್ತು ಭಾಸ್ಕರ್ ಬಂದಿದ್ದರು. ಈಗ ಹೊಳೇನರಸೀಪುರ ಮಂಜುನಾಥ್ ಅವರು ದುಬಾಯ್ ನಿಂದ ಬಂದು ಧರ್ಮಸ್ಥಳ, ಶೃಂಗೇರಿ ಪ್ರವಾಸ ಮಾಡಿ ಹಾಸನಕ್ಕೆ ಭೇಟಿನೀಡಿ ಇಂದು ಮಧ್ಯಾಹ್ನ ಹಾಸನಕ್ಕೆ ಬಂದರು. ಜೊತೆಯಲ್ಲಿ ಊಟಮಾಡುವ ಅವಕಾಶ ಸಿಕ್ಕಿತ್ತು. ಈ ಮುಂಚೆ ಚಾರಣಕ್ಕೆ ಹೆಸರಾದ ಪ್ರಾಸ್ಕ[ ಪ್ರಸನ್ನ] ಅವರ ಪತ್ನಿ ಚಿತ್ರ ಮತ್ತು ಮಗನೊಡನೆ ಹಾಸನಕ್ಕೆ ಬಂದು ಭೇಟಿಯಾಗಿದ್ದರು.ಭಾಸ್ಕರ್ ಬೆಂಗಳೂರಿನಿಂದ ಹಾಸನಕ್ಕೆ ಯಾವುದೋ ಮದುವೆಗೆ ಬಂದಾಗ ಭೇಟಿಯಾಗಿದ್ದಾರೆ.ನಾನು ಬೆಂಗಳೂರಿಗೆ ಬಂದಾಗ ರೂಪ ಬೆಂಗಳೂರು, ಎಮ್.ಡಿ.ಎನ್.ಪ್ರಭಾಕರ್, ರಾಕೇಶ್, ವಿನಯ್, ಭಾಸ್ಕರ್ ಮುಂತಾದವರ ಭೇಟಿಯಾಗಿದೆ.ನಾನು ಶೃಂಗೇರಿಗೆ ಹೋಗಿದ್ದೆ. ನಾನು ಬರ್ತೀನಿ ಅನ್ನೋಕಾರಣಕ್ಕೆ ರಾಘವೇಂದ್ರ ನಾವಡ ಕಾಯ್ತಾ ಇದ್ರು. ಸಂಪದಿಗರ ಭೇಟಿಯೇ ಒಂದು ಅಪರಿಮಿತ ಸಂತೋಷ ಕೊಡುವ ಸಂಗತಿ. ನೋಡಿ ಸಂಪದಿಗ ಮಿತ್ರರೇ, ಕೇವಲ ನಮ್ಮ ಬರಹಗಳಿಂದ ಪರಿಚಿತರಾಗಿರುತ್ತೇವೆ. ಭಾವನೆಯು ಹತ್ತಿರ ತಂದಿರುತ್ತೆ. ಇದಕ್ಕೆಲ್ಲಾ ಕಾರಣವಾಗಿರುವ ಶ್ರೀ ಹರಿಪ್ರಸಾದ್ ನಾಡಿಗ್ ಹಾಗೂ ಇಂದಿನ ತಂತ್ರಜ್ಞಾನಕ್ಕೆ ಎಲ್ಲರೂ ಆಭಾರಿಯಾಗಿರಬೇಕಲ್ಲವೇ?

Rating
No votes yet

Comments