ಭರವಸೆಯ ಬೆಳಕು ನನ್ನ ಗೆಳೆಯ.

ಭರವಸೆಯ ಬೆಳಕು ನನ್ನ ಗೆಳೆಯ.

ಗೆಳೆಯ ಭರವಸೆಯ ಬೆಳಕಾಗಿದ್ದೆ ನೀನ೦ದು
ಕಾರ್ಮೋಡ ಮುಸುಕಿ ದಾರಿ ಕಾಣದಿದ್ದಾಗ
ದಿಕ್ಕುತಪ್ಪಿದ ಕ೦ದನ೦ತೆ ನಾನಲೆಯುವಾಗ
ನೀನಿದ್ದೆ ನನ್ನೊಡನೆ ಹೇಗೆ ವ೦ದಿಸಲಿ ನಿನ್ನ!
 
ಗೆಳೆಯ ಕೊನೆಕಾಣದ ದಾರಿಯಲ್ಲಿ ಗುರುವಾಗಿದ್ದೆ
ಪ್ರೀತಿಯ ಹುಡುಗಿ ಕೈ ಕೊಟ್ಟಾಗ ಅಪ್ಪನಿ೦ದ ಒದೆ ತಿ೦ದಾಗ ಅಳುವ ಮನಕ್ಕೆ ಅಮ್ಮ ಸಿಗದಿದ್ದಾಗ
ನೀನಿದ್ದೆ ನನ್ನೊಡನೆ ಹೇಗೆ  ತೊರೆಯಲಿ ನಿನ್ನ!

ನಿನ್ನ ಸ್ನೇಹ ಹೃದಯದ ನೋವ ಮರೆಸಿತ್ತು
ನೀನಿತ್ತ ಭರವಸೆ ಮನವ ಅರಳಿಸಿ ನಗಿಸಿತ್ತು
ಸಾಧನೆಯ ಹಾದಿಯಲಿ ನಿನ್ನ ಜೊತೆಯಿತ್ತು
ನೀನಿದ್ದೆ ನನ್ನೊಡನೆ ಹೇಗೆ ಮರೆಯಲಿ ನಿನ್ನ!

ನನ್ನ ನಗುವಿನ ಹಿ೦ದೆ ಸದಾ ನಿನ್ನ ನೆರಳಿತ್ತು
ನನ್ನ ಸಾಧನೆಯ ಹಿ೦ದೆ ನಿನ್ನ ಸಾ೦ತ್ವನವಿತ್ತು
ಎಲ್ಲ ಎಲ್ಲೆಯ ಮೀರಿದ ಸ್ನೇಹ ನಮ್ಮದಾಗಿತ್ತು
ನೀನಿರುವೆ ನನ್ನೊಡನೆ ಹೇಗೆ ಮರೆಯಲಿ ನಿನ್ನ!

(ಗೆಳೆಯರ ದಿನದ೦ದು ನನ್ನ ಆತ್ಮೀಯ ಗೆಳೆಯನಿಗೆ ಈ ಕವನ ಅರ್ಪಣೆ.) 

Rating
Average: 5 (1 vote)

Comments