ಪ್ರಬಂಧದ ಶೀರ್ಷಿಕೆ ಊಹಿಸಿ !

ಪ್ರಬಂಧದ ಶೀರ್ಷಿಕೆ ಊಹಿಸಿ !

ಬರಹ
ಸನ್ನಿವೇಶ ೧: 
ಶಾಲೆಯೆ ಮುಗಿದ ಮೇಲೆ ಡೇ ಕೇರ್’ಗೆ ಹೋಗುವ ಮಗಳು. ಕೆಲಸ ಮುಗಿಸಿ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಬರುವ ತಾಯಿ. 
"ಹಾಯ್, ಚಿನ್ನುಮಿನ್ನು, How was your day?"
ಖುಷಿಯಿಂದ ಜೋರಾಗಿ ನುಡಿದಳು ಮಗಳು " it was so fun ಅಮ್ಮ, ನಾನು ಇವತ್ತು ಈ ಡ್ರಾಯಿಂಗ್ ಮಾಡಿದೆ, ನೋಡು !"
ತಾಯಿ ಹಗುರಾಗಿ ಗದರುತ್ತ ಅವಳಿಗೆ ಮಾತ್ರ ಕೇಳಿಸುವಂತೆ ನುಡಿದಳು "ಆನ್ನಾ, ಹುಷ್, Dont scream ok? this is Day Care. speak in English .. do you understand?  "
ಮಗುವಿನ ಮುಖ ಸಪ್ಪಗಾಯಿತು ... ತನ್ನ ಡ್ರಾಯಿಂಗ್ ಬಗ್ಗೆ ತಾಯಿ ಏನೂ ಹೇಳದೆ ಇದ್ದುದಕ್ಕೆ.
ಕಾರಿನಲ್ಲಿ ಕೂತರು ತಾಯಿ-ಮಗಳು.
ಮಗಳು ಕೇಳಿದಳು "Which party are we going tonight  ಅಮ್ಮ?"
ಥಟ್ಟನೆ ನುಡಿದಳು ತಾಯಿ "not you. Its just me and Mad'. you will stay with ajji, ok? "
ಮಗುವಿಗೆ ಅಳುವೇ ಬಂದುಬಿಡ್ತು "why not me  ಅಮ್ಮ?"
ಭದ್ರವಾಗಿ ಕಾರಿನ ಬಾಗಿಲು ಜಡಿದ ತಾಯಿ ನುಡಿದಳು "ಅಲ್ಲಿ ಬಂದು ನೀನು ಎಲ್ಲರ ಮುಂದೆ ಕನ್ನಡದಲ್ಲಿ ಮಾತನಾಡಿ ಬಿಡ್ತೀಯ. I dont feel good. Fine, Did you finish your homework? How about your test scores? Did you score more than Mark? "
ಮಗಳು ನುಡಿದಳು "ಯಸ್ ಅಮ್ಮ. you know what  ಅಮ್ಮ, ಇವತ್ತು ನಮ್ ಕ್ಲಾಸ್’ಗೆ ಹೊಸಾ "Language Teacher" ಬಂದ್ರು"
ತಾಯಿ: "ಗುಡ್. Spanish or French? "
ಮಗಳು: "its ಕನ್ನಡ ಟೀಚರ್ ಅಮ್ಮ. ಏನೇನೋ ಕಾಂಪ್ಲಿಕೇಟೆಡ್ ಆಗಿ ಟಾಕ್ ಮಾಡಿದ್ರು. ಅಜ್ಜಿ ಟಾಕ್ ಮಾಡ್ತಾರಲ್ಲ ಹಾಗೆ."
ತಾಯಿ: "Never mind. If the teacher has given any homework, ask Ajji ok?"
ಸನ್ನಿವೇಶ ೨:
ಮನೆ ಮುಂದೆ ಕಾರು ನಿಂತಿತು. ತಾಯಿ ಸೀದ ಒಳನೆಡೆದು, ಸಿದ್ದಳಾಗಲು ಮಹಡಿ ಏರುತ್ತ "Mad, are you ready? "
ಒಳಗಿನಿಂದ ಅಜ್ಜಿ ಹೊರಬಂದು "ನನ್ನ ಅನ್ನಪೂರ್ಣ ಮರಿ ಬಂತಾ ?"
ತಾಯಿ ಸಿಡುಕುತ್ತ ನುಡಿದಳು "Mad, your mom is making me mad  ... ಆನ್ನಾ ಅಂತ ಕರೀರಿ ಅಂತ ಎಷ್ಟು ಹೇಳಿದರೂ ಇವರಿಗೆ ಅರ್ಥವೇ ಆಗೋಲ್ಲ."
ಸ್ವಲ್ಪ ಹೊತ್ತಾದ ಮೇಲೆ ಮ್ಯಾಡ್ ಅರ್ಥಾತ್ ಮಾಧವಮೂರ್ತಿ ಜೊತೆ ಆ ತಾಯಿ "ಬಾಯ್" ಎನ್ನುತ್ತ ಹೊರಗೆ ಹೊರಟಳು.
ಆನ್ನಾ ಅಲಿಯಾಸ್ ಅನ್ನಪೂರ್ಣ ಕೇಳಿದಳು "ಅಜ್ಜಿ, Is Mark coming here now? "
ಅಜ್ಜಿ ಅಂದರು "ಮಾರ್ಕ್ ಅನ್ನಬೇಡವೇ ಪುಟ್ಟಮ್ಮ. ಬಾಯ್ತುಂಬ ಮಾರ್ಕಂಡೇಯ ಅನ್ನು"
ಅನ್ನಪೂರ್ಣ ಅಜ್ಜಿಗೆ ಹೋಮ್ ವರ್ಕ್ ತೋರಿಸುತ್ತ ಹೇಳಿದಳು "ಅಜ್ಜಿ, ಈ topic ’ಗೆ  one paragraph writeup  ಬರ್ಕೊಂಡ್ ಬನ್ನಿ ಅಂದ್ರು ಟೀಚರ್. can you help me  ಅಜ್ಜಿ"
ಟಾಪಿಕ್ ಏನೆಂದು ಓದಿದ ಅಜ್ಜಿಯ ಕಣ್ಣಾಲಿಗಳಲ್ಲಿ ನೀರು ತುಂಬಿತು .....
----
ಸನ್ನಿವೇಶಗಳನ್ನು ಮನದಲ್ಲಿ ಊಹಿಸಿಕೊಂಡಿರಾ? 
ಈಗ ಊಹಿಸಿ: ಅಜ್ಜಿಯ ಕಣ್ಣಲ್ಲಿ ನೀರು ತರಿಸಿದ ಆ ಪ್ರಬಂಧದ ಶೀರ್ಷಿಕೆ ಏನೆಂದು ......

ಸನ್ನಿವೇಶ ೧: 

ಶಾಲೆ ಮುಗಿದ ಮೇಲೆ ಡೇ ಕೇರ್’ಗೆ ಹೋಗುವ ಮಗಳು. ಕೆಲಸ ಮುಗಿಸಿ ಮಗಳನ್ನು ಮನೆಗೆ ಕರೆದುಕೊಂಡು ಹೋಗಲು ಬರುವ ತಾಯಿ. 

"ಹಾಯ್, ಚಿನ್ನುಮಿನ್ನು, How was your day?"

ಖುಷಿಯಿಂದ ಜೋರಾಗಿ ನುಡಿದಳು ಮಗಳು " it was so fun ಅಮ್ಮ, ನಾನು ಇವತ್ತು ಈ ಡ್ರಾಯಿಂಗ್ ಮಾಡಿದೆ, ನೋಡು !"

ತಾಯಿ ಹಗುರಾಗಿ ಗದರುತ್ತ ಅವಳಿಗೆ ಮಾತ್ರ ಕೇಳಿಸುವಂತೆ ನುಡಿದಳು "ಆನ್ನಾ, ಹುಷ್, Dont scream ok? this is Day Care. speak in English .. do you understand?  "

ಮಗುವಿನ ಮುಖ ಸಪ್ಪಗಾಯಿತು ... ತನ್ನ ಡ್ರಾಯಿಂಗ್ ಬಗ್ಗೆ ತಾಯಿ ಏನೂ ಹೇಳದೆ ಇದ್ದುದಕ್ಕೆ.

ಕಾರಿನಲ್ಲಿ ಕೂತರು ತಾಯಿ-ಮಗಳು.

ಮಗಳು ಕೇಳಿದಳು "Which party are we going tonight  ಅಮ್ಮ?"

ಥಟ್ಟನೆ ನುಡಿದಳು ತಾಯಿ "not you. Its just me and Mad'. you will stay with ajji, ok? "

ಮಗುವಿಗೆ ಅಳುವೇ ಬಂದುಬಿಡ್ತು "why not me  ಅಮ್ಮ?"

ಭದ್ರವಾಗಿ ಕಾರಿನ ಬಾಗಿಲು ಜಡಿದ ತಾಯಿ ನುಡಿದಳು "ಅಲ್ಲಿ ಬಂದು ನೀನು ಎಲ್ಲರ ಮುಂದೆ ಕನ್ನಡದಲ್ಲಿ ಮಾತನಾಡಿ ಬಿಡ್ತೀಯ. I dont feel good. Fine, Did you finish your homework? How about your test scores? Did you score more than Mark? "

ಮಗಳು ನುಡಿದಳು "ಯಸ್ ಅಮ್ಮ. you know what  ಅಮ್ಮ, ಇವತ್ತು ನಮ್ ಕ್ಲಾಸ್’ಗೆ ಹೊಸಾ "Language Teacher" ಬಂದ್ರು"

ತಾಯಿ: "ಗುಡ್. Spanish or French? "

ಮಗಳು: "its ಕನ್ನಡ ಟೀಚರ್ ಅಮ್ಮ. ಏನೇನೋ ಕಾಂಪ್ಲಿಕೇಟೆಡ್ ಆಗಿ ಟಾಕ್ ಮಾಡಿದ್ರು. ಅಜ್ಜಿ ಟಾಕ್ ಮಾಡ್ತಾರಲ್ಲ ಹಾಗೆ."

ತಾಯಿ: "Never mind. If that teacher has given any homework, ask Ajji ok?"