ನನ್ನೇನ್ ನೋಡಿಯೇ ನನ್ನಾ,......

ನನ್ನೇನ್ ನೋಡಿಯೇ ನನ್ನಾ,......

ಬರಹ

ಬೇರು:( ನಮ್ಮ ಮಂಡ್ಯ ಜಿಲ್ಲೆಯ ಹಳ್ಳಿಗಳಲ್ಲಿ ಪ್ರಚಲಿತವಿರುವಂತ ಒಂದು ಜಾನಪದ ಕಿರುಕತೆ)


ಕತ್ತಲೆ ಕೋಣೆಯಲ್ಲಿರುವ ಅಡ್ಡಗೋಡೆಯ ಮೇಲೆ ಅಥವಾ ಕಿಟಕಿಯ ಬಳಿ ಅಥವಾ ಹಲಗೆ ಗೂಡಿನಲ್ಲಿ, ಹೀಗೆ ಎಲ್ಲೇ ಹಾಲು, ಮೊಸರು ಇಟ್ಟರೂ ಅದನ್ನು ಬೆಕ್ಕು ಬೀಳಿಸಿ, ಕುಡಿದು, ಹರಡಿ ಕೋಣೆಯೊಳಗೆಲ್ಲಾ ರಂಪರಾಮಾಯಣ ಮಾಡಿಬಿಡುತಿತ್ತು. ಇದನ್ನು ನಿಲ್ಲಿಸಲು ಮನೆಯಾಜಮಾನ ಹಗ್ಗದಿಂದ ಬುತ್ತಿಯೊಂದನ್ನು ನೇಯ್ದು ಅದರೊಳಗೆ ಹಾಲಿನ, ಮೊಸರಿನ ಬೋಸಿಯನ್ನು ಇತ್ತು ಎತ್ತರದ ಸಜ್ಜಕ್ಕೆ ನೇತುಹಾಕಿದನು. ತನ್ನಾಟವಿನ್ನು ನಡೆಯದೆಂಬುದನ್ನರಿತ ಬೆಕ್ಕು, ಆ ಬುಟ್ಟಿಗೆ ನೇರವಾಗಿ ಕೆಳಗೆ ಕೂತು, ತನ್ನ ತಲೆಯನ್ನೆತ್ತಿ, ಆ ಬುಟ್ಟಿಯನ್ನೇ ದಿಟ್ಟಿಸಲಾರಂಭಿಸಿತು. ಬಹಳ ಹೊತ್ತಾದರೂ ಎದ್ದು ಹೋಗದ ಬೆಕ್ಕನ್ನು ನೋಡಿ, ಆ ಹಗ್ಗದ ಬುಟ್ಟಿಯೇ ಬೆಕ್ಕನ್ನು ಉದ್ದೇಶಿಸಿ ಹೇಳಿತು  


                       " ಅಯ್ಯೋ ಬೆಕ್ಕೇ ..............
                          ನನ್ನೇನ್ ನೋಡಿಯೇ ನನ್ನಾ,
                          ನಾನೇನ್ ಮಾಡ್ದಿ ನಿನ್ನಾ;
                          ನೀ ಮಾಡಿದ್ ತಪ್ಗೆ,
                          ನಿನ್ನವ್ರೇ ತನ್ದ್ಕುಣ್ಸವ್ರಿಲ್ ನನ್ನ "


ಈ ಮೇಲಿನ ಕಥನ ಬರವಣಿಗೆಯ ರೂಪದಲ್ಲಿ (ಅದರಲ್ಲಿಯೂ ನನ್ನ ಬರವಣಿಗೆ!!) ಅಷ್ಟೇನು ಸ್ವಾರಸ್ಯವಾಗಿ ಕಂಡುಬಾರದಿದ್ದರು, ನನ್ನ ಅವ್ವನ (ಉದಾ: ನಿಂಗಮ್ಮ ,ಚಿಕ್ಕಹೆಣ್ಣಮ್ಮ ಇತರೆ ಮಂಡ್ಯ ಸೀಮೆಯ ಮುದುಕಿಯರು) ಬಾಯಿಯಿಂದ ಕೇಳುವುದಕ್ಕೆ ಬಹಳ ಸಕ್ಕತ್ತಾಗಿರುತ್ತೆ.