ನೀತಿ ಕಥೆ

ನೀತಿ ಕಥೆ

ಬರಹ

ಒಂದು ಊರಲ್ಲಿ ಕೂಚಂ ಭಟ್ಟ ಎಂಬ ಮಹಾನ್ ಬುದ್ದಿವಂತ ಇದ್ದ. ಹಾಗಂತ ದಡ್ಡನೇನೂ ಅಲ್ಲ ಬುದ್ದಿವಂತನೇ. ಆದರೆ ಅದನ್ನು ಎಲ್ಲರಿಗೂ ಪ್ರದರ್ಶನ ಮಾಡಬೇಕೆಂಬ ಹಂಬಲ. ತನ್ನಿಂದಲೇ ಲೋಕ ಬೆಳಗಾಗುವುದು, ಎಲ್ಲರ ಮನೆಗೆ ಬೆಳಕು ಹರಡುವುದು ಎಂದುಕೊಂಡಿದ್ದ. ಅವನಿಗಂತೆಯೇ ಕೆಲವೊಂದಿಷ್ಟು ಶಿಷ್ಯರು ಕೂಡ ಇದ್ದರು. ಗ್ರಾಮದ ಪ್ರತಿಯೊಂದು ತೀರ್ಮಾನವೂ ಈತನಿಂದಲೇ ನಡೆಯುತ್ತಿತ್ತು. ಕೆಲವೊಮ್ಮೆ ತಪ್ಪಾದರೂ ಅನಿವಾರ್ಯವಾಗಿ ಸರಿ ಎನ್ನಲೇ ಬೇಕಾಗಿತ್ತು. ತಾನು ಹೇಳಿದರೆ ಮಾತ್ರ ಕೋಳಿ ಕೂಗುವುದು, ಬೆಳಕು ಆಗುವುದು ಎಂದು ಹೆಮ್ಮೆ ಪಡುತ್ತಿದ್ದ. ಹಾಗಾಗಿ ವಿಶೇಷ ಗೌರವ.

ಆ ಗ್ರಾಮದಲ್ಲಿ ಈತನಿಗಿಂತ ಬುದ್ದಿವಂತರು ಇದ್ದರೂ ಕೂಡ ಯಾರು ಕೂಚಂ ಭಟ್ಟನನ್ನು ವಿರೋಧಿಸುತ್ತಿರಲಿಲ್ಲ. ಯಾಕೆ ಬೇಕು ತೊಂದರೆ ಎನ್ನುವ ಕಾರಣಕ್ಕೆ. ಇವನು ಹೇಳಿದ ಎಂದಾಕ್ಷಣ ಅಲ್ಲಿದ್ದಂತವರು ಬಹು ಪರಾಕ್ ಅನ್ನಲೇಬೇಕು. ಇಲ್ಲವೆಂದರೆ ಅವರಿಗೆ ಗ್ರಾಮದಿಂದ ಬಹಿಷ್ಕಾರ. ಇದು ಅಲ್ಲಿನ ಮಾತಾಗಿತ್ತು. ಇವನ ನೈಜ ಬಣ್ಣವನ್ನು ಹೇಗಾದರೂ ಗ್ರಾಮಕ್ಕೆ ತಿಳಿಸಲೇಬೇಕೆಂದು ಕೆಲವೊಂದಿಷ್ಟು ಯುವಕರು ಉಪಾಯ ಹೂಡಿದರು. ಒಂದು ದಿನ ಗ್ರಾಮದ ಕೋಳಿಯನ್ನೆಲ್ಲಾ ಬಚ್ಚಿಟ್ಟರು. ಕೂಚಂ ಭಟ್ಟ ಹೇಳಿದ ನಂತರವೂ ಯಾವುದೇ ಕೋಳಿ ಕೂಗಲಿಲ್ಲ. ಕೆಲ ಸಮಯಕ್ಕೆ ಬೆಳಕೂ ಹರಿಯಿತು. ಆಗ ಗ್ರಾಮಸ್ತರಿಗೆ ಕವಿದಿದ್ದ ಮಂಕು ಬದಿಗೆ ಸರಿಯಿತು. ಯಾರಿಂದಲೂ ಬೆಳಗಾಗುವುದಿಲ್ಲ. ಬದಲಾಗಿ ಇದು ಪ್ರಕೃತಿಯ ನಿಯಮ ಎಂದು. ಆಗ ಗ್ರಾಮಸ್ತರು ಕೂಚಂ ಭಟ್ಟರೆ ನೀವು ನಮಗಿಂತ ಹಿರಿಯರು, ಬುದ್ದಿವಂತರು ಆದರೆ ನೀವು ಆಡುತ್ತಿರುವ ರೀತಿಯಿಂದಾಗಿ ಹೀಗೆ ಮಾಡಿದೆವೆ ಹೊರತು ಮತ್ತಿನ್ಯಾವುದಕ್ಕೂ ಅಲ್ಲಾ ಅಂದ ಮೇಲೆ. ಕೂಚಂ ಭಟ್ಟನಿಗೂ ಜ್ಞಾನೋದಯವಾಯಿತು. ಇದೀಗ ಗ್ರಾಮದಲ್ಲಿ ಎಲ್ಲರೂ ಒಬ್ಬರನೊಬ್ಬರು ಅರಿತು ಸುಖವಾಗಿ ಬಾಳುತ್ತಿದ್ದಾರೆ.

 

ಈ ಲೇಖನ ಕರ್ಮವೀರ ಪುಸ್ತಕವೊಂದರಲ್ಲಿ ಓದಿದ್ದೆ.

ಕ್ರೆಡಿಟ್ಸ್ ಏನಿದ್ದರೂ ಅದರ ಸಂಪಾದಕರಿಗೆ