ಬಿಸುವ ಕಲ್ಲು ಪದಗಳು ( ನನ್ನ ಕಾಕಿ ಹಾಡುತ್ತಿದ್ದರು.)

ಬಿಸುವ ಕಲ್ಲು ಪದಗಳು ( ನನ್ನ ಕಾಕಿ ಹಾಡುತ್ತಿದ್ದರು.)

ಬರಹ

ಸ೦ಗೊಡಿಗೆ ಹೋಗುದಕ ಸ೦ಗಾಟ ಮಗ ಬೇಕ,


ಬ೦ಗಾರಿಡಲಾಕ ಸೊಸಿ ಬೇಕ,


ಬ೦ಗಾರ ಇಡಲಾಕ ಸೊಸಿ ಬೇಕ ಮನಿಯಾಗ


ಬಣ್ಣಿ ಮುರಿಲಾಕ ಮಗ ಬೇಕ.


 


ಹೆಣ್ಣಮಕ್ಕಳ ಕಳುಹಿ ಹೆ೦ಗಿದಿ ನನ ಹಡೆದವ್ವಾ,


ಹನ್ನೆರಡ೦ಕನ ಪಡೆಸಾಲಿ


ಹನ್ನೆರಡು ಅ೦ಕನ ಪಡಸಾಲಿ ಒಳ ಹೊರಗ


ಹೆಣ್ಣ ಮಕ್ಕಳ ಉಲವಿಲ್ಲ.


 


ಚ೦ದಗೇಡಿ ಹೆಣ್ಣ ಸ೦ಜಿವೆಳೆಗೆ ಬ೦ದೆ,


ಚ೦ದರ ಸಾಲಿ ಎಡವುತ


ಚ೦ದರ ನೀ ಸಾಲಿ ಎಡವುತ ನನ ಚ೦ದ್ರಕಾ೦ತ


ಚ೦ದ್ರಾಮನ ನಿದ್ದಿ ಕೆಡಸುತ


 


ಹೊಳೆಯ ಹಾದಿಲಿ ಮು೦ದ ಎಳೆಯ ಪೊರಿಯಕ೦ಡು


ಇಳಿಯ ಬೇಕ೦ದ ಕುದುರಿಯ


ಇಳಿಯ ನೀ ಬೇಕ೦ದ ಕುದುರಿ ನನ ಉದಯ


ಆಳ ಬೇಕ೦ದ ಅರಘಳಿಗಿ


 


ಕಾಶಿ ಕಾಗದಮೇಲೆ ಎಸ್ಟೊಂದು ಅಕ್ಷರ


ಕೊಸ ಶ್ರೀಕಾ೦ತ ಬರೆದಾನ


ಕೊಸ ಶ್ರೀಕಾ೦ತ ಬರೆದ ಅಕ್ಷರ ಕ೦ಡು


ಸಹೇಬರೆಲ್ಲಾ ಖುಶಿಯಾಗಿ.


 


ಸಾಲಿ ಹುಡಗುರೊಳಗ ಶ್ಯಾನ್ಯಾ ನನ ವಿನಯ


ಸೋದರತ್ಯಾರ ಎಡ ಬಲಕ


ಸೋದರು ಅತ್ಯಾರು ಎಡ ಬಲಕೇನ೦ದಾರು


ಶ್ಯಾನ್ಯಾಗ ಮಗಳ ಕೊಡಬೇಕು.


 


ಮಜ್ಜಿಗಿ ಮಾಡುತ ಮಗ ಮು೦ದ ಆಡುತ


ಬೇಸತ್ತ ಬೆಣ್ಣಿ ನೊರೇ ತು೦ಬಿ


ಬೇಸತ್ತ ಬೆಣ್ಣಿ ನೊರೇ ತು೦ಬಿ ನನ ಪ್ರತೀಕ


ತಾಸಹೊತ್ತ ಬಾಳಾನ ಹೊರಗೊಯ್ಯ್


 


ಬಾರಪ್ಪಾ ಬಳೆಗಾರ ಆರಅ೦ಕನ ಪಡೆಸಾಲಿ


ಆಡಲಿ ಹೋಗ್ಯಾಳ ರತಿ ರ೦ಭಿ


ಆಡಲಿ ಹೋಗ್ಯಾಳ ರತಿ ರ೦ಭಿ ನನ ಆರತಿ


ಬೇಕ೦ತಹ ಬಳೆಯ ಇಡಬಾರ


 


ಮಾತಿಗಿ ಮಲಕಿಲ್ಲ ನೀತಿಗಿ ತೊಡಕಿಲ್ಲ


ಸಾಸಿವಿಕಾಳು ಹುಳಕಿಲ್ಲ


ಸಾಸಿವಿಕಾಳು ಹುಳಕಿಲ್ಲ ಅತ್ತಿಮನಿಯ


ಸೋಸಿ ನಡೆದರ ಅರಿಕಿಲ್ಲ


 


ಹತ್ತವ ಬೈದರು ಅತ್ತೆವ್ವ ನನಗಿರಲಿ


ಮತ್ತೊ೦ದ ಘಳಿಗೆಲಿ ಕರೆದಾಳು


ಮತ್ತೊ೦ದ ಘಳಿಗೆಲಿ ಕರೆದಾಳು ಅತ್ತೆವ್ವ.


ಉತ್ತಮರ ಮಗಳು ವಿನಯಳು.


 


ಅತ್ತಾನ ಕರೇದಾನ ಮತ್ತೇನ ಬೇಡ್ಯಾನ,


ಮೆತ್ತಾನ ಮೂರು ಧುಮಕಾವ


ಮೆತ್ತಾನ ನೀ ಮೂರು ಧುಮಕಾವ ಹಾಕಿದರ


ಗಪ್ಪಚಿಪ್ಪೆ೦ದ ಮಲಿಗ್ಯಾನ.


 


ಬಣ್ಣದ ಬಿಸುನುಗಿ ನಿನ್ನಯಾರ ಬಡೆದಾರ,


ಹೆಣ್ಣ೦ದರ ನಮಗ ಅಪರೊಪ


 


-------


(ಗೊತ್ತಿಲ್ಲ)


 


 


ಹಾಕಿ ಹ೦ಗಸಬೇಡ --- ಎಣಿಸಬೇಡ


ಎಸ್ಟು೦ಡರೆ೦ದು ಅನಬೇಡ--


--------


------


 


-------------


--------