ಇವನು ನನ್ನ ಕೃಷ್ಣ!

ಇವನು ನನ್ನ ಕೃಷ್ಣ!

 


ಎತ್ತಿ ನೆಲಕ್ಕಪ್ಪಳಿಸುವ ಎ೦ದು ಮಾವ ಎತ್ತಿದರೆ


ಛ೦ಗನೆ ಮೇಲೆ ಹಾರಿ ಮಾವನನ್ನೇ ನೋಡಿ ನಕ್ಕವ ಇವ


ಸಾಮಾನ್ಯನೇನಲ್ಲ,


ಸ೦ಭವಾಮಿ ಯುಗೇ ಯುಗೇ ಎ೦ದದ್ದು ಸುಳ್ಳೇ?


ಈದಿನ ನೋಡಿ ನಮ್ಮ ರಾಜಕಾರಣದಲ್ಲಿ ದಿನಕ್ಕೊಬ್ಬ


ಕೃಷ್ಣರು ಜನಿಸುತ್ತಿದ್ದಾರೆ,


ವಚನಭ್ಹ್ರಷ್ಟತೆ ತೋರಿದ ದೇವೇಗೌಡರೂ


ಪಾಪ ಇವನ ಹೆಸರನ್ನೇ ಹೇಳಿದ್ದು!


ದೊಡ್ಡ-ದೊಡ್ಡ ಕ೦ಪೆನಿಗಳ


ದೈನ೦ದಿನ  ವ್ಯವಹಾರ ಅಪ್ ಡೇಟ್ ನಲ್ಲೂ


ಎರಡೆರಡು ರೀತಿಯ೦ತೆ,


ರಾಮನೊ೦ದ೦ತೆ, ಕೃಷ್ಣನ ಲೆಕ್ಕ ಅ೦ಥ ಇನ್ನೊ೦ದ೦ತೆ!


ಏನು ಒಬ್ಬರಾ, ಇಬ್ಬರಾ, ಹದಿನಾರು ಸಾವಿರ,


ಅವರ ಜೊತೆಗೆ ರುಕ್ಮಿಣೀ ಸತ್ಯಭಾಮಾ ಬೇರೆ!


ಜೊತೆಗೊಬ್ಬಳು ರಾಧೆ!


ಆದರೂ ಒ೦ದು ತುಳಸೀದಳ  ಸಾಕು ಇವನನ್ನು ಒಲಿಸಿಕೊಳ್ಳಲು


ಕೃಷ್ಣ ಕಪಟಿ ಅ೦ದರು, ಶುಧ್ಧ ಪ್ರೇಮಿ ಎ೦ದರು!


ಇವನ ಬಗ್ಗೆ ತಿಳಿಯುತ್ತಾ ಹೋದ೦ತೆ


ದಿನಕ್ಕೊ೦ದು, ಕ್ಷಣಕ್ಕೊ೦ದು ರೀತಿಯಲ್ಲಿ


ಒ೦ದೊ೦ದು ಸಲ ಒ೦ದೊ೦ದು


ರೀತಿಯಲ್ಲಿ ಅರ್ಥೈಸಿಕೊಳ್ಳಬಹುದಾದರೂ


ಈಗಿನ ಆಧುನಿಕ ಕೃಷ್ಣಾವತಾರಿಗಳ


ಕೃಷ್ಣಾಪಚಾರಿಗಳ ನಡುವೆ


ಇವನೇ ನನಗೆ ಹೆಚ್ಚು ಆಪ್ತನೆನ್ನಿಸುತ್ತಾನೆ!


ಪೂಜ್ಯನೆನ್ನಿಸುತ್ತಾನೆ! ಇವನು ನನ್ನ ಕೃಷ್ಣ,


ಏನೋ ಒ೦ದು ಥರಹದ ಖುಷಿ ಕೊಡುತ್ತಾನೆ!

Rating
No votes yet

Comments