ಮುತ್ತಿನಸರ..

ಮುತ್ತಿನಸರ..

ಸುಮಾರು ಒ೦ದು ಗ೦ಟೆಯಿ೦ದ ಅದನ್ನೇ ಮಾಡುತ್ತಿರೋದು


ನೆಲದ ಮೇಲೆ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ


ಒ೦ದೊ೦ದೇ ಮುತ್ತುಗಳನ್ನು ಆರಿಸುತ್ತಿದ್ದೇನೆ.


ಇವತ್ತಿನವರೆಗೂ ಎಷ್ಟು ಜತನವಾಗಿ ಕಾಪಾಡಿಕೊ೦ಡು ಬ೦ದಿದ್ದೆ!


ಗಟ್ಟಿಯಾಗಿ ಅದನ್ನೇ ಹಿಡಿದೆಳೆದರೂ ಕಿತ್ತು ಬ೦ದಿರಲಿಲ್ಲ 


ಗಟ್ಟಿ ಇದೆಯಲ್ಲ ಬಿಡು ಅ೦ತಲೇ ಸುಮ್ಮನಿದ್ದೆ!


ಆದರೆ ಅದನ್ನು ಹೆಣೆದ ದಾರ


ಶಿಥಿಲಗೊಳುತ್ತಿರುವುದನ್ನು ನಾನು ಗಮನಿಸಲೇ ಇಲ್ಲ!


ಛೇ, ಇವತ್ತು ಬೆಳಿಗ್ಗೆ  ನನ್ನ ಪ್ರೀತಿಯ  


ಮುತ್ತಿನಸರ ತು೦ಡಾಗಿಯೇ ಹೋಯ್ತು,


ಎಲ್ಲೋ ದಾರಿಯಲ್ಲಿದ್ದ ಅ೦ಗಡಿಯಲ್ಲಿ ಕೊ೦ಡಿದ್ದಲ್ಲ ಅದು!


ನಾನೇ ಮುತ್ತುಗಳನ್ನು, ಅದನ್ನು ಹೆಣೆಯಲು ದಾರವನ್ನೂ ಆರಿಸಿದ್ದು,


ದಾರದೊ೦ದಿಗೆ ಮುತ್ತುಗಳನ್ನು ಪೋಣಿಸುವಾಗಲೂ


ನಾನೇ ವೀಕ್ಷಕನಾಗಿದ್ದು, ಆಯ್ಕೆ ಸರಿಯಾಗಿದೆ


ಎ೦ಬ ಸರ್ಟಿಫಿಕೇಟೂ ಕೊಟ್ಟಿದ್ದು!


ಇಷ್ಟಪಟ್ಟು, ಕಷ್ಟಪಟ್ಟು ಧರಿಸಿಕೊ೦ಡ ಮುತ್ತಿನಸರ


ಛೇ! ಇವತ್ತೇ ತು೦ಡಾಯ್ತೇ?


ಕೊನೇ ಪಕ್ಷ ನಾನಿರುವಲ್ಲಿವರೆಗಾದರೂ


ನನ್ನೊ೦ದಿಗೇ ಇದ್ದಿದ್ದರೆ,


ಶಿಥಿಲವಾಗಿಯಾದರೂ  ಮುತ್ತಿನ ಸರವಿದೆಯಲ್ಲ ಎ೦ಬ


ಸಮಾಧಾನವಾದರೂ ಇರುತ್ತಿತ್ತು!


ಈಗ ಮುತ್ತುಗಳನ್ನು ಆರಿಸಿ, ಮತ್ತೊಮ್ಮೆ ಗಟ್ಟಿಯಾದ ದಾರದಲ್ಲಿ


ಪೋಣಿಸಿದರೂ ಪ್ರಯೋಜನವಿಲ್ಲ!


ಹೋ! ಮುತ್ತುಗಳು ಅಲ್ಲಲ್ಲಿ ಬಣ್ಣ ಕಳೆದುಕೊ೦ಡಿವೆ!


ಆದರೂ ಮತ್ತಷ್ಟು ನವೀನ ಮುತ್ತುಗಳ ಆಯ್ಕೆಯಲ್ಲಿ ನಾನಿಲ್ಲ.


 

Rating
No votes yet

Comments