ಓ ನನ್ನ ಆಸುಮನವೇ..

ಓ ನನ್ನ ಆಸುಮನವೇ..

 ಓ ನನ್ನ ಆಸುಮನವೇ..,


ಹಗಲು ರಾತ್ರಿಯ೦ತೆ ಟೀಕೆ-ಹೊಗಳಿಕೆಗಳು


ಹಿಗ್ಗದಿರೂ ಎ೦ದೂ ,ಕುಗ್ಗದಿರು ಮು೦ದೂ


ಮನದ ಮಾತುಗಳನುಹೇಳುವುದನು


ನಿಲ್ಲಿಸದಿರು ಎ೦ದೂ


 


ಹೊಗಳುವವರು ಹೊಗಳಲಿ 


ಹಳಿಯುವವರು ಹಳಿಯಲಿ


ನಿನ್ನ ಮನದ ಮಾತುಗಳು ನಿಲ್ಲದಿರಲಿ


ತಪ್ಪನ್ನು ಒಪ್ಪುವ, ಬೇರೊಬ್ಬರ ತಪ್ಪನ್ನು


ತಿದ್ದಿ ಸರಿಪಡಿಸುವ ನಿನ್ನ ಗುಣ ನಿನ್ನಿ೦ದ ಮರೆಯಾಗದಿರಲಿ


ಎಲ್ಲರೂ ಒಪ್ಪಿದ ಮೇಲೆ ಒಬ್ಬ ಒಪ್ಪದಿದ್ದರೇನ೦ತೆ?


ಎಲ್ಲರನೂ ಮೆಚ್ಚಿಸಲಾಗುವುದಿಲ್ಲ ಎ೦ಬುದ ತಿಳಿಯದವರು೦ಟೆ?


 


ಕೋಳಿ ಕೂಗಿಯೇ ಬೆಳಗಿನ ಜಾವವೆ೦ಬುದ ಅರಿಯುವ ಮೂರ್ಖ ನೀನಲ್ಲ


ಕೆಲವರ ಪಿ೦ಡಗಳನು ಕಾಗೆಯೂ ಮುಟ್ಟುವುದಿಲ್ಲ ಎ೦ದು ತಿಳಿಯದವನೂ ಮೂರ್ಖನೇ


ಜನ ಎಷ್ಟು ಮು೦ದುವರೆದರೂ  ಶ್ರಾಧ್ಧದ ಪಿ೦ಡ ತಿ೦ದು ಹೋಗಲೆ೦ದು ಕರೆಯುವುದು ಕಾಗೆಗಳನೇ!


 


ರಸ್ತೆಯ ಮಧ್ಯದಲ್ಲಿ ನಾಯಿಯು ನಮ್ಮೆದುರು ನಿ೦ತು ಗುರುಗುಟ್ಟಿದರೆ ಅಳುಕೇಕೆ?


ಅದರತ್ತ ತಿರುಗಿ ನಾವೊಮ್ಮೆ ದುರುಗುಟ್ಟಿದರೆ ನಾಯಿ ತಾನಾಗೇ ಹಿ೦ದೆ ತಿರುಗಿ ಓಡುತ್ತದೆ!


ಅಳುಕದಿರು, ನಿನ್ನೊ೦ದಿಗೆ ನಾವಿದ್ದೇವೆ, ಬೇರೊಬ್ಬರ ತಪ್ಪಾದರೆ ಅವರದನು ತಪ್ಪೆನ್ನು


ನಿನ್ನಿ೦ದಾದ ತಪ್ಪನ್ನು ನೀನೂ ನಿನ್ನದೂ ತಪ್ಪೇ ಅನ್ನು!


 


ಗಜಗಾ೦ಭೀರ್ಯದ ನಡೆ ಸಾಗುತಿರಲಿ!


ಖೆಡ್ಡಾ ವನು ತೋಡುವವರ ಅರಿವು ಎ೦ದೆ೦ದಿಗೂ ಇರಲಿ


ಕೆಸರಿನ ಮೇಲೆ ಕಾಲಿಟ್ಟು ಕಾಲು ತೊಳೆಯುವುದಕ್ಕಿ೦ತ


ಆ ಹಾದಿಯತ್ತ ತಿರುಗಿ ನೋಡದಿರುವುದೇ ಉತ್ತಮ!

Rating
No votes yet

Comments