ಮಗುವಿನ ನಗುವಿಗೆ ಬೆಲೆಕಟ್ಟಲಾದೀತೆ?? / ಎಳೆಯ ಕಂದಮ್ಮಗಳ ಕರುಳ ಕಾಡುವ ಅಪರೂಪದ ಖಾಯಿಲೆ = ಹರ್ಶ್ಸ್ ಸ್ಪ್ರುಂಗ್ಸ್

ಮಗುವಿನ ನಗುವಿಗೆ ಬೆಲೆಕಟ್ಟಲಾದೀತೆ?? / ಎಳೆಯ ಕಂದಮ್ಮಗಳ ಕರುಳ ಕಾಡುವ ಅಪರೂಪದ ಖಾಯಿಲೆ = ಹರ್ಶ್ಸ್ ಸ್ಪ್ರುಂಗ್ಸ್

ಬರಹ


  ಮದುವೆಯಾಗಿ ೨ ವರುಶಗಳ ನಂತರ ಮನೆಗೆ ಪುಟಾಣಿ ಪಾಪು ಬರುವ ಸಂತಸ, ಆ ದಂಪತಿಗಳ ಮೊಗದಲ್ಲಿ ಹೊಳಪು, ಉತ್ಸಾಹ ತಂದಿತ್ತು. ಮಗುವಿನ ಕನಸನ್ನೇ ಕಾಣುತ್ತ ಹಗಲಿರುಳ ಕಳೆಯುತಳಿದ್ದಳು ಆ ಭಾವಿ ತಾಯಿ.ಆಕೆಯ ಬಯಕೆ ತೀರಿಸುವುದೇ ತನ್ನ ಸದ್ಯದ ಗುರಿ ಎಂಬಂತೆ ಪತಿ. ಹಾಲಿನೊಂದಿಗೆ ಕೇಸರಿ ತಪ್ಪದೇ, ಕುಡಿಯಲೇ ಬೇಕೆಂಬ ಪತಿಯ ಆಶಯ, ಆಜ್ನೆ ಯಂತೆ. ನಡೂರಾತ್ರಿ ಕೆಲಸ ಮುಗಿಸಿ ಬಂದು, ಆಗಲು ಹಣ್ಣು ತಿನ್ನ ಬೇಕು,ನಿನಗಲ್ಲ ನನ್ನ ಪಾಪುಗೆ ಇದು ಎಂದು ಹೇಳುತ್ತಿದ್ದ ಆತ. ಆಕೆಯ ಬಯಕೆಯ ಮಾವಿನಕಾಯಿಯನ್ನ ೯ ತಿಂಗಳೊಳಗೆ ತಿಂದೇ ತಿನ್ನಿಸುವೆ ಎಂಬ ಪ್ರೊಜೆಕ್ಟ್ ಬೇರೆ, ಕೊನೆಗೂ ಯಶಸ್ವಿ, ಆದರೂ ಬಯಕೆಯ ನೇರಳೆ ಹಣ್ಣು  ತಿನ್ನಿಸಲಾಗಲಿಲ್ಲವಲ್ಲ ಎಂಬ ನಿರಾಸೆ ಒಂದೆಡೆ ಆತನಿಗೆ.
 
ಆ ದಿನ ಬಯಕೆ ಶಾಸ್ತ್ರ, ಅವಳಾಸೆಯ ದುಂಡು ಮಲ್ಲಿಗೆ ಮೊಗ್ಗಿನ ಜಡೆ ಗಾಗಿ ೩ ಗಂಟೆ ಕಾದು ಹೂಗಾರನ ಬಳಿ ಚಂದದಿ ಫೋಣಿಸಿ ತಂದಿದ್ದ ಪತಿರಾಯರು, ಚೋಟುದ್ದ ಜುಟ್ಟಿಗೆ ಮಾರುದ್ದದ ಜಡೆ ಹೆಣೆದು ,ಹಸಿರ ರೇಶಿಮೆ ಸೀರೆ ಉಡಿಸಿ,ಅಲಂಕರಿಸಿ, ನೆಂಟರಿಸ್ತರನ್ನೆಲ್ಲಾ ಸೇರಿಸಿ, ಮನೆಗೆ ಬರಲಿದ್ದ ಹೊಸ ಅತಿಥಿ ಗೆ ಅದ್ದೂರಿ ಸ್ವಾಗತ. ಆ ದಿನ ಸುಧಿನ.

ನವ ಮಾಸಗಳು ತುಂಬಿದವು, ಇಂದೋ, ನಾಳೆಯೋ, ಬೇಗ ಬರಬಾರದೇ ಆ ದಿನ?
ವಲ್ಲದ ಮನಸ್ಸಲ್ಲು ಕೆಲಸಕ್ಕೆ ಹೋಗಬೇಕು, ಮನೆಯಿಂದ ಯಾವಾಗಲಾದರು ಕರೆ ಬರಬಹುದು ಎಂಬ ಆತಂಕ ಪತಿಗಾದರೆ, ಅವರಿಲ್ಲದೆ ಒಂದು ಕ್ಶಣ ಕಳೆಯುವುದೂ ಕಸ್ಟ. ದಿನ ಕಳೆದಂತೆ, ಏನೋ ಭಯ, ಕಾತುರ, ಹೆರಿಗೆಯ ಸಮಯದಲ್ಲಿ ಅವರಿದ್ದರೆ ನೂರಾನೆ ಭಲ ಎಂಬಂತೆ, ಆಕೆಗೆ!!
  ಆ ದಿನ ಬಂದೇ ಬಿಟ್ಟಿತು.ಗರ್ಭ ಚೀಲದ ನೀರೊಡೆದು, ಆಕೆ ಆಸ್ಪತ್ರೆಗೆ ದಾಖಲು. ಅವಸರದಿಂದ ಧಾವಿಸಿದ ಪತಿ, ಮುಖದಲ್ಲಿ ಎಲ್ಲಿಲ್ಲದ ಆತಂಕ. ಕೊನೆಗೆ ಸಿಸೀರಿಯನ್ ಮಾಡಲೇ ಬೇಕಾದ ಅಗತ್ಯ ತಿಳಿಸಿದರು ವೈದ್ಯೆ!.
ಅದು ಬೆಳಗಿನ ಜಾವ ಸುಮಾರು ೬ ಗಂಟೆ, ಪತ್ನಿಯ ಕೈ ಹಿಡಿದು ಧೈರ್ಯ ಹೇಳುತ್ತಿದ್ದ ಅವನ ಕೈ ನಡುಗುತ್ತಿತ್ತು, ತಣ್ಣಗೆ ಕೊರೆಯುತ್ತಿತ್ತು. ಕೊನೆಗೆ ಪತಿಗೇ ಧೈರ್ಯ ಹೇಳಿ ಶಸ್ತ್ರ ಚಿಕಿತ್ಸಾ ಕೊಟಡಿಯೊಳಗೆ ಹೊರಟ ಮಡದಿಯ ಕೈಗೆ ದೇವರ ಫೋಟೊ ಇಟ್ಟ ಆತನ ಮನದಲ್ಲೇನೋ ತವಕ, ತಳಮಳ. ಧೈರ್ಯಸ್ತೆಯಂತೇ ಒಳ ಹೋದ ಆಕೆ ನನಗೇನೂ ಭಯವಿಲ್ಲ ವೆಂದಳಾದರೂ ಅವಳ ಹ್ರುದಯ ಮಾತ್ರ ಲಬ್ ಡ್ಬ್ ಲಬ್ ಡ್ಭ್!

ಸಮಯ ೭. ೧೭.ಆಸ್ಪತ್ರೆಗೇ ಕೇಳಿಸುವಂತೆ ಅವ್ವಾವ್ವ್ವಾ ಆವ್ವಾ ಏಂದು ಕಿರುಚುತಾ ಅಮ್ಮನ ಹೊಟ್ಟೆ ಸೀಳಿ ಭೂಮಿಗೆ ಬಂತು ಮುದ್ದಾದ  ಪುಟಾಣಿ ಹೆಣ್ಣು ಮಗು.ತಿದ್ದಿ ತೀಡಿದಂತಿದ್ದ ಹುಬ್ಬು, ಉದ್ದನೆಯ ಮೂಗು, ಕೈ ಕಾಲು ಬೆರಳುಗಳು ,ಕೆಂಪಾದ ತುಟಿ, ನೋಡಿ ಸಂತಸದಿಂದುಬ್ಬಿದ ಅಪ್ಪ ತನ್ನ ಕಂದನನ್ನ ಕರೆದದ್ದು ಏಂಜೆಲ್ ಅಂತ.ಸಧ್ಯ ಎಲ್ಲ ಕ್ಶೇಮವಾಗಿ ಆಯಿತಲ್ಲ ಎಂದು ಮನೆಯವರೆಲ್ಲರೂ ನಿಟ್ಟುಸಿರಿಟ್ಟರು, ಎಲ್ಲರಿಗೂ ಸಿಹಿ ಹಂಚಿದರು.

ಆ ಕೂಸೋ ಬಹಳ ಸಮಾಧಾನಿ, ಮೊದಮೊದಲು ಅಳುತ್ತಿದ್ದ ಕೂಸು ಅಳುವುದನ್ನೂ ಕಡಿಮೆ ಮಾಡುತ ಚನ್ನಾಗಿ ನಿದ್ರೆ ಮಾಡಲಾರಂಭಿಸಿತು.ಎಸ್ಟು ಒಳ್ಳೆಯ ಮಗು, ತಾಯಿ ಗೆ ಕೊಂಚವೂ ಕಾಡಿಸುವುದಿಲ್ಲ ಎಂದು ಕೊಂಡಾಡಿದರು.
ಎರಡನೆಯ ದಿನ ಆಯಿತು, ಮಗು ಇನ್ನು ಕಕ್ಕ ಮಾಡಿಲ್ಲ, ವಂದ ಮಾಡುವುದೂ ಕಡಿಮೆ, ಪದೇ ಪದೇ ನ್ಯಾಪಿ ಬದಲಿಸುವ ಕೆಲಸವೂ ಇಲ್ಲ, ಎಸ್ಟೂ ಓಳ್ಳೇ ಮಗು ಎಂದು ಉಧ್ಘರಿಸಿದ್ದೂ ಅಯಿತು.ಯಾಕೋ ಕುಡಿದ ಹಾಲನ್ನೆಲ್ಲ ವಾಂತಿ ಮಾಡುತ್ತಿದೆಯೆಲ್ಲಾ ಎಂದರೆ, ಕಕ್ಕಿದ ಮಕ್ಕಳೂ ದಕ್ತಾವೆ, ಅನ್ನೋ ಹಿರಿಯರ ಮಾತು ಬೇರೆ?
ಆದರು ಒಮ್ಮೆ ಡ್ಯೂಟೀಡಾಕ್ಟರ್ ಗೆ , ದಾದಿಯರಿಗೆ ವಿಶಯ ತಿಳಿಸಿದ್ದಾಯಿತು, ಮಕ್ಕಳು ೪ ದಿನ ಕಕ್ಕ ಮಾಡದೇ ಹೋದರೂ ಏನು ಆಗಲ್ಲ, ಅದು ಸಮಸ್ಯೆ ಅಲ್ಲ, ಮಾಡತ್ತೆ ಬಿಡೀ ಏಂದಾಗ, ಎಲ್ಲರು ನಿರಾಳ. ೩ ನೆಯ ದಿನ ಆಸ್ಪತ್ರೆ ಯಿಂದ ಮನೆಗೆ ಕಳುಹಿಸಿದ್ದಾಯಿತು. ಪುಟಾಣಿ ಯೊಂದಿಗೆ ಮನೆಗೆ, ತಮ್ಮ ಕನಸಿನ ಮನೆಗೆ ಬಂದರಾ ದಂಪತಿ.

 ಮಗು ಹಾಯಾಗಿ ನಿದ್ರೆ ಮಾಡಿದ್ದನ್ನ ನೋಡಿ, ಅಂದು ಮನೆಯವರೆಲ್ಲ ಬೇಗ ಮಲಗಿದರು. ಮಧ್ಯ ರಾತ್ರಿ ಮಗು ಏಕೋ ಉಸಿರಾಡಲು ತುಂಬಾ ಕಸ್ಟ ಪಡ್ತಿತ್ತು .ಹೊಟ್ಟೆಯೆಲ್ಲ ಉಬ್ಬರಿಸಿ, ಕಲ್ಲಿನಂತಾಗಿತ್ತು. ಹೊಟ್ಟೆ ಯ ನರಗಳೆಲ್ಲ ಹಸಿರಾಗಿ, ಮಗು ತುಂಬ ಸುಸ್ತಾದಂತೆ ಕಾಣುತ್ತಿತ್ತು. ಗಾಬರಿಗೊಂಡ ತಾಯಿ ವಿಶಯ ತಿಳಿಸಿದಳು, ಬೆಳಗ್ಗೆ ವೈದ್ಯರ ಬಳಿ ಹೋಗೋಣ ಎಂದು ಹೇಳಿ ಎಲ್ಲ ಮಲಗಿದರು. ಆದರೆ ಆ ತಾಯಿ ಮಲಗಲು ಸಾಧ್ಯಾವೇ???

ಬೆಳಗ್ಗೆಯೇ ಎದ್ದು ವೈಧ್ಯರ ಬಳಿ ಮಗುವನ್ನು ಕರೆದೊಯ್ದರು. ಏನಾಯ್ತು ಎಂದಾಗ, ಮಗು ೪ ದಿನವಾದರು ಕಕ್ಕ ಮಾಡಿದ್ದನ್ನ ನಾವು ನೋಡೇ ಇಲ್ಲ, ವಂದ ಮಾಡುವ ಪ್ರಮಾಣವು ತೀರ ಕಡಿಮೆ, ಹೊಟ್ಟೆ ಉಬ್ಬರಿಸಿದೆ, ಉಸಿರಾಡಲು ಪ್ರಯಾಸಪಡುತ್ತಿದೆಯೆಂದರು. ಮಗುವನ್ನ ಪರೀಕ್ಶಿಸಿದ ಅವರು ಮಗುವಿನ ಹೊಟ್ಟೇಲಿ ಏನೋ ತೊಂದರೆ ಇದೆ, ನುರಿತ, ಮಕ್ಕಳ ಶಸ್ತ್ರ್ ಚಿಕಿತ್ಸಾ ವೈದ್ಯರ ಕಾಣವ ಅಗತ್ಯವಿದೆ, ತಕ್ಶಣ ಸುಸಜ್ಜಿತ ಆಸ್ಪತ್ರೆಗೆ ಕರೆದೊಯಲು ತಿಳಿಸಿದರು.
ಸರಿ ನಿಮ್ಮ ಫೀಜು ಏಸ್ಟು  ಡಾಕ್ಟರ್ ಏಂದಾಗ,ಫೀಜು ಕೊಡುವಸ್ಟು ಸಮಯ ನಿಮ್ಮ ಮಗುವಿಗಿಲ್ಲ ಆದಸ್ಟು ಬೇಗ ಕರೆದೊಯಿರಿ!!!! ಎಂದಾಗಲೆ ಅವರಿಗೆ ಪರಿಸ್ಥಿತಿಯ ತೀವ್ರತೆ ಅರ್ತವಾಗಿದ್ದು!
ಆ ದಂಪತಿಗಳ ಆಶಾಗೋಪುರವೇ ಕಳಚಿಬಿತ್ತು, ಕಂಗಳು ತೇವವಾದವು, ಮುಂದೇನೋ, ಏನೂ ತೋಚದಂತಾಯಿತು, ಮಗು?????
ಮಗುವನ್ನು ಸುಸಜ್ಜಿತ ಆಸ್ಪತ್ರೆಗೆ  ಕರೆತಂದರು, ಕೊಂಚವೂ ತಡ ಮಾಡದೆ ಅಲ್ಲಿಯ ವೈದ್ಯರು ತಾವೇ ಅಲ್ಪ ಸಮಯದಲ್ಲೇ  ಹಲವು ಪರೀಕ್ಶೆಗಳನ್ನು ನಡೆಸಿ ತಕ್ಶಣ ಮಗುವನ್ನು ಚಿಕಿತ್ಸೆಗಾಗಿ ನವಜಾತ ಶಿಶು ತೀವ್ರ ನಿಘಾ ಘಟಕಕ್ಕೆ  ದಾಖಲಿಸಿದರು.
 ಆ ದಂಪತಿಗಳಿಂದ ಯಾವ ಆರ್ಜಿಯನ್ನೂ ತುಂಬಿಸದೆ, ಅದನ್ನು ತಾವೆ ಮಾಡೀ, ಮುಂಗಡ ಯಾವ ಹಣವನ್ನೂ ಕೇಳದೆ, ಹಿಡಿ ಜೀವ ಹಿಡಿದಿದ್ದ ಕೂಸಿನ ಅಮೂಲ್ಯ ಸಮಯವನ್ನು ವ್ಯರ್ತ ಮಾಡದೇ ಆ ಪುಟ್ಟ ಕೂಸಿನ ಜೀವ ಉಳಿಸುವ ಪಣ ತೊಟ್ಟು ಮಾನವೀಯತೆ ಮೆರೆದರು.
.
ವೈದ್ಯರು ಭೂ ಲೋಕದ ದೇವರು ಏಂದರೆ ತಪ್ಪಾಗದು.

ನಮ್ಮ ಮಗುವಿಗೆ ಏನಾಗಿದೆ, ಎಂದಾಗ, ನಿಮ್ಮ ಮಗು ೪ ದಿನದಿಂದ ಉಪವಾಸವಿದೆ. ಕುಡಿದ ಹಾಲೆಲ್ಲ ವಾಂತಿಯಾಗಿ ಮಗುವಿಗೆ  ಸಂಪೂರ್ಣ ನಿರ್ಜಲೀಕರಣವಾಗಿದೆ, ಅದರ ಪರಿಣಾಮ ಕಿಡ್ನಿ ಕೆಲಸ ನಿಲ್ಲಿಸುವ ಹಂತ ತಲುಪಿದೆ. ದೇಹದ ಎಲ್ಲ ರಾಸಾಯನಿಕಗಳು ಏರುಪೇರಾಗಿವೆ. ಮಗು ಅಪಾಯದ ಹಂತದಲ್ಲಿದೆ ಎಂದರು. ಮುಖ್ಯ ವಾಗಿ ಮಗುವಿನ ಕರುಳಿನಲ್ಲಿ ಏನೋ ತೊಂದರೆ ಇರುವ ಸಂಶಯ ವ್ಯಕ್ತಪಡಿಸಿದರು. ಅದಕ್ಕಾಗಿ ಹಲವು ಪರೀಕ್ಶೆಗಳನ್ನು ಮಾಡಬೇಕಾಗುವುದು ಎಂದರು.
ಹೇಗಾದರು ಸರಿ ತಮ್ಮ ಕನಸಿನ ಕೂಸನ್ನ ಉಳಿಸಿಕೊಡಿ  ಎಂದು ಅಂಗಲಾಚಿದರಾ ದಂಪತಿ ??//??//??

ಆ ಮಗುವಿಗೇನಾಗಿತ್ತು?
ಆ ಕನಸಿನ ಕೂಸು  ಹರ್ಶ್ಸ್ ಸ್ಪ್ರುಂಗ್ಸ್ ಎಂಬ ಅಪರೂಪದ ಕರುಳಿನ ಖಾಯಿಲೆ ಇಂದ ಬಳಲುತ್ತಿತ್ತು.

               ಹರ್ಶ್ಸ್ ಸ್ಪ್ರುಂಗ್ಸ್ HIRSCHSPRUNG’S DISEASE
ಎಳೆಯ ಕಂದಮ್ಮಗಳ ಕರುಳ ಕಾಡುವ ಅಪರೂಪದ ಖಾಯಿಲೆ .

ಏನಿದು ಹರ್ಶ್ಸ್ ಸ್ಪ್ರುಂಗ್ಸ್?
 ಇದೊಂದು ನವಜಾತ ಶಿಶುಗಳ (ಕೆಲವೊಮ್ಮೆ ಬೆಳೆದ ಮಕ್ಕಳನ್ನೂ) ಕಾಡುವ ಅಪರೂಪದ ಖಾಯಿಲೆ.                                  
ಸಾಮಾನ್ಯವಾಗಿ, ಆರೋಗ್ಯವಂತ ಮಕ್ಕಳ ಕರುಳಿನಲ್ಲಿ ಗ್ಯಾಂಗ್ಲಿಯಾನ್ ಕೋಶ (GANGLION NERVE CELLS)ಗಳೆಂಬ ವಿಶೇಶವಾದ ನರಕೋಶಗಳಿದ್ದು ಇವು ಮಲವಿಸರ್ಜನೆಗೆ ಸಹಾಯ ಮಾಡುತ್ತವೆ. ಆದರೆ  ಹರ್ಶ್ಸ್ ಸ್ಪ್ರುಂಗ್ಸ್ ಖಾಯಿಲೆ ಇರುವ ಮಕ್ಕಳ ದೊಡ್ಡ\ಸಣ್ಣ  ಕರುಳಿನ ಪೂರ್ತಿ\ಕೆಲವು ಭಾಗಗಳಲ್ಲಿ ಗ್ಯಾಂಗ್ಲಿಯಾನ್ ಕೋಶಗಳ ಬೆಳವಣಿಗೆ ಸಮರ್ಪಕವಾಗಿ ಆಗಿರುವುದಿಲ್ಲ. ಈ ಕಾರಣದಿಂದಾಗಿ ಕರುಳು ಪಂಪ್ ಮಾಡಲು ಸಾಧ್ಯವಾಗದೇ ಮಲವಿಸರ್ಜನೆ ಆಗುವುದಿಲ್ಲ. ಅಥವಾ ಅದರೂ ಪ್ರಯಾಸದ್ದಾಗಿರುತ್ತದೆ. ಹಾಗೆ ತೀವ್ರ ಮಲಬದ್ದತೆ ಇರುತ್ತದೆ.

ಈ ಖಾಯಿಲೆಯ ಲಕ್ಶಣಗಳೇನು?
೧. ಮಗು ಜನಿಸಿ ಎರೆಡು ದಿನಗಳಾದರೂ ಮಲವಿಸರ್ಜನೆ (meconium) ಮಾಡದಿರುವುದು.
೨.ಹಾಲೂಡಿಸಿದ ಕೂಡಲೇ ಹಸಿರು ಬಣ್ನದಿಂದ (GREEN BILE) ಕೂಡಿದ ವಾಂತಿ ಮಾಡುವುದು.
೩.ಹೊಟ್ಟ ಉಬ್ಬರಿಸಿರುವುದು.
೪.ಕೆಲವು ಮಕ್ಕಳಲ್ಲಿ ಸ್ವಲ್ಪ ಬೆಳೆದ ಮೇಲೆ ಖಾಯಿಲೆ ಕಾಣಿಸಬಹುದು ಅಂತವರಲ್ಲಿ ಮಲವಿಸರ್ಜನೆ ಆದರೂ,ರಬ್ಬರ್ ನಂತೆ ಇದ್ದು, ತೀವ್ರ ಮಲಬದ್ದತೆ ಇರುವುದು, ಪ್ರಯಾಸದ್ದಾಗಿರುವುದು, ನಿಧಾನವಾಗಿ ತೂಕ ಹೆಚ್ಹಳವಾಗುವುದು, ಅನೀಮಿಯಾ ಲಕ್ಶಣಗಳಿರುವುದು.ಕಂಡುಬರುತ್ತದೆ.
೫.ಎಂನ್ಟ್ರೊಕೊಲೈಟಸ್ (ENTEROCOLITUS) ಎಂಬ ಜೀವಕ್ಕೆ ಸಂಚಕಾರ ತರಬಲ್ಲ ಕರುಳಿನ ಸೋಂಕು.
೬.ಬೇದಿ
 ಈ ಖಾಯಿಲೆ ಪತ್ತೆ ಹಚ್ಹುವ ಪರೀಕ್ಶೆಗಳು-
೧. ಕಾಂಟ್ರಾಶ್ಟ್ ಏನಿಮಾ (CONTRAST ENEMA) ಮೂಲಕ ಗ್ಯಾಂಗ್ಲಿಯಾನ್ ಕೋಶಗಳು ಇರದ ಭಾಗವನ್ನು ಪತ್ತೆ ಹಚ್ಹುವುದು
೨. ಬೈಯಾಪ್ಸಿ(BIOPSY) ಮೂಲಕ ಪತ್ತೆ ಹಚ್ಹುವುದು.

ಚಿಕಿತ್ಸೆ ಏನು?
ಈ ಖಾಯಿಲೆಗೆ ಶಸ್ತ ಚಿಕಿತ್ಸೆ ಯೊಂದೇ ಮದ್ದು.( ಮಕ್ಕಳ ಶಸ್ರ ಚಿಕಿತ್ಸಾತಜ್ನರು ಈ ಚಿಕಿತ್ಸೆ ನೀಡುವರು.)
ಕರುಳಿನ ಯಾವ ಭಾಗದಲ್ಲಿ ಗ್ಯಾಂಗ್ಲಿಯಾನ್ ಕೋಶಗಳು ಇರುವುದಿಲ್ಲವೋ ಅಂತಹ ಭಾಗವನ್ನುಶಸ್ತ ಚಿಕಿತ್ಸೆ ಮೂಲಕ ಕತ್ತರಿಸಿ ತೆಗದುಹಾಕಲಾಗಿ, ಉಳಿದ ಒಳ್ಳೆಯ ಭಾಗವನ್ನು ಮರು ಜೋಡಿಸಲಾಗುತ್ತದೆ.
ಈ ಶಸ್ತ ಚಿಕಿತ್ಸೆಯನ್ನು ೨ ರೀತಿ ಮಾಡಲಾಗುವುದು.
೧. ಒಂದೇ ಶಸ್ತ ಚಿಕಿತ್ಸೆಯ ಮೂಲಕ, ಲ್ಯಾಫ್ರೊಸ್ಕೋಫಿಕ್ ಉಪಕರಣಗಳ ಸಹಾಯಾದಿಂದ ಎನಸ್ ಮೂಲಕ, ಯಾವುದೆ ಗಾಯವಿಲ್ಲದೆ ಮಾಡಲಾಗುವುದು.(SINGLE STAGE –TRANSANAL ENDORECTAL PULL THROUG)

೨. ಕೆಲವು ಮಕ್ಕಳಿಗೆ ಎರೆಡು ಶಸ್ತ ಚಿಕಿತ್ಸೆಯ ಮೂಲಕ ಮಾಡಲಾಗುವುದು.
  ಮೊದಲು ನರಕೋಶಗಳಿಲ್ಲದ ಭಾಗವನ್ನು ಕತ್ತರಿಸಿ ತೆಗೆದು, ತಾತ್ಕಾಲಿಕ ಸ್ಟೋಮ (STOMA) ಮಾಡಲಾಗುವುದು.ಸ್ಟೊಮ ಮೂಲಕ ಮಲವಿಸರ್ಜನೆಯನ್ನು ಹೊಟ್ಟೆಯ ಮೇಲ್ಭಾಗದಿಂದಲೇ ಹೋಗುವಂತೆ ತಾತ್ಕಾಲಿಕವಾಗಿ ಅನುವು ಮಾಡಿ ಕೊಡುವುದು, ಹಾಗು  ಕೆಲವು ತಿಂಗಳ ನಂತರ ಮತ್ತೊಂದು ಶಸ್ತ ಚಿಕಿತ್ಸೆಯ ಮೂಲಕ ಸ್ಟೋಮ ಮುಚ್ಹಿ ಮುಖ್ಯ ಚಿಕಿತ್ಸೆ ಮಾಡುವುದು. ಎಸ್ಟು ಬೇಗ ಸಾಧ್ಯವೊ ಅಸ್ತ್ಟೂ ಬೇಗ ಚಿಕಿತ್ಸೆ ಮಾಡಿದರೆ ಸೋಂಕಿನ ಅಪಾಯ ಕಡಿಮೆ.

ಚಿಕಿತ್ಸೆಯ ನಂತರ -
ಚಿಕಿತ್ಸೆಯ ನಂತರ ಮಗುವನ್ನು ಸ್ವಲ್ಪ ಸೂಕ್ಶ್ಮ ವಾಗಿ ನೋಡೀಕೊಳ್ಳಬೇಕಾಗುತ್ತದೆ, ಮಗು ಮತ್ತೆ ಆಹಾರ ತೆಗೆದುಕೊಂಡು ಮಲವಿಸರ್ಜನೆ ಮಾಮುಲಿನಂತೆ ಮಾಡಿದರೆ ಆಸ್ಪತ್ರೆಯಿಂದ ಕಳುಹಿಸಲಾಗುವುದು. ಹಾಗೆ, ಮಗುವಿಗೆ ಕೆಲವು ಚಿಕ್ಕ ಪುಟ್ಟ ಸಮಸ್ಯೆ ಬಿಟ್ಟರೆ ಉಳಿದಂತೆ ಬೇರೆ ಮಕ್ಕಳಂತೆ ಆರೋಗ್ಯವಂತ ಜೇವನ ನಡೆಸ ಬಹುದು.
ಆದರೆ, ಮಗುವಿನ ಕರುಳಿನ ಭಾಗ ಕತ್ತರಿಸುವುದರಿಂದ, ಮಗುವಿನ ದೇಹ ಹೆಚ್ಹು ನೀರು ಸಂಗ್ರಹಿಸಲು ಆಗದೆ ಇರಬಹುದು. ಆದ್ಧರಿಂದ ಹೆಚ್ಹು ನೀರನ್ನು ಕುಡಿಸಬೇಕಾಗುವುದು ಹಾಗು ನಾರಿನಾಂಶ ದ ಅಹಾರವನ್ನು ಹೆಚ್ಹು ತಿನ್ನಿಸಬೇಕಾಗುತ್ತದೆ.
--------------------------------------------------------------------------------------------
ಹಾ! ಆ ಕನಸಿನಾ ಕೂಸನ್ನ ಮರೆತೇ ಬಿಟ್ಟೇ!!
ಆ ಮಗುವಿಗೂ ಹರ್ಶ್ಸ್ ಸ್ಪ್ರುಂಗ್ಸ್ ಧ್ರುಡಪಟ್ಟ ಮೇಲೆ ಶಸ್ತ್ರ ಚಿಕಿತ್ಸೆ ಮಾಡಲಾಯಿತು, ಮಗು ಗುಣಹೊಂದಿತು.
ಆ ಹಂತದಲ್ಲಿ ಮಗು ಸಾಕಸ್ಟು ನೋವು ತಿಂದು, ಭೂಮಿಯೇ ಬಾಯಿ ಬಿಡುವಂತೆ ಅಳುತ್ತಿದ್ದದ್ದು ಮಾತ್ರ !!!!!!!!!!
ಇಂತಹ ಕಸ್ತ್ಟ ಇನ್ಯಾವ ಮಗುವಿಗೂ ಬರುವುದು ಬೇಡಪ್ಪಾ ಏಂದು ಮಾತ್ರ ಆ ದೇವರಲ್ಲಿ ಬೇಡಿದಳಾ ತಾಯಿ!!!!!
ಈಗ ಮಗುವಿಗೆ ೭ ನೆಯ ತಿಂಗಳು. ಮಗು ತನ್ನೆಲ್ಲ್ಲ ತುಂಟಾಟ ಗಳ ನಡುವೆ ಆರೋಗ್ಯವಾಗಿ ಬೆಳೀತಾ ಇದೆ.
ತನ್ನ ಮುಗ್ಧ ನಗೆಯಿಂದ ಎಲ್ಲರನ್ನ ನಗಿಸುತ್ತಾ ಇದೆ.ಸಧ್ಯಕ್ಕೆ ಅಮ್ಮನ ಬೆಚ್ಹನೆ ಮಡಿಲಲ್ಲಿ, ಅಜ್ಜಿ ತಾತ ನ ಆರೈಕೆಯಲ್ಲಿದೆ.
 ಆಕೆ ತನ್ನ ಮಗುವಿನೊಂದಿಗೆ ತನ್ನ ಕನಸಿನಾ ಮನೆಗೆ ಹೋಗುವ ದಿನಗಳನ್ನ ಏಣಿಸುತ್ತಿದ್ದಾಳೆ, ಇತ್ತ ತನ್ನ ಪ್ರೀತಿಯ ಮಡದಿ, ಕರುಳಿನ ಕುಡಿ ಯ ಬರುವಿಕೆಯನ್ನೇ ಆತ  ಕಾದಿದ್ದಾನೆ..

ನಗುತಾ ನಗುತಾ ಬಾಳೂ ನೀನು ನೂರು ವರುಶ
ಎಂದೂ ಹೀಗೇ ಇರಲೀ ಇರಲೀ  ಹರುಶ ಹರುಶ

ಎಂದು ಹಾರೈಸುವ ಈ ತಾಯಿಯೇ ಆ ತಾಯಿ
ಆ ಮಗು ನನ್ನದೇ...ಬೇಬಿ ಆಫ್ ಸೌಮ್ಯ.

ಇದು ನನ್ನ ಮೊದಲ ಲೇಖನ, ಬರೀ ಲೇಖನ ಅಲ್ಲ ನನ್ನ ಭಾವನ.
ನನಗಾದ ನೈಜ ಅನುಭವವನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಂಡಿದ್ದೀನೆ.ಹಾಗೆಯೇ ಆಪರೂಪದ ಖಾಯಿಲೆಯ ಬಗ್ಗೆ ನಾನು ತಿಳ್ಲಿದದ್ದನ್ನ ತಿಳಿಸುವ ಚಿಕ್ಕ ಪ್ರಯತ್ನವನ್ನು  ಮಾಡಿದ್ದೇನೆ..ತಫ್ಫಿದ್ದಲ್ಲಿ ತಿದ್ದಿ,
 ಸಾವನ್ನೆ ಜಯಿಸಿಬಂದ ನನ್ನ ಮುದ್ದು ಮಗಳಿಗೊಂದು ಅರ್ಥ ಗರ್ಭಿತ ಹೆಸರ ಸೂಚಿಸುವಿರಾ???

ಧನ್ಯವಾದಗಳೊಂದಿಗೆ.
ಸೌಮ್ಯ ಬಿ. ಎಸ್


 
    ದಾರಿ ದೀಪ
 ನಮಗೆ ಮೊದಲು ಸೂಕ್ತ ದಾರಿ ತೋರಿದ್ದು -
ಡಾ.ಗೋಪಾಲ್ (ಮಕ್ಕಳ ತಜ್ನ್ ರು. ಮಣಿಫಾಲ್ ಆಸ್ಪತ್ರೆ, ಬೆಂಗಳೂರು.)
ಇನ್ನೇನು ಆರಿಯೇ ಹೋಗುತ್ತಿದ್ದ ದೀಪವನ್ನ ಆರದಂತೆ ಕಾದದ್ದು - 
ಡಾ. ಸಾಯಿಪ್ರಸಾದ್ (ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ನರು, ಕೊಲೊಂಬಿಯಾ ಏಶಿಯಾ ಆಸ್ಪತ್ರೆ, ಮಲ್ಲೇಶ್ವರಮ್,ಬೆಂಗಳುರು)
ದೀಪಕ್ಕೆ ಮತ್ತೆ ಹೊಸ ಬತ್ತಿ ಎಣ್ಣೆ ಹಾಕಿ ನೂರ್ಕಾಲ ಬೆಳಗುವಂತೆ ಮಾಡಿದ್ದು -
ಡಾ. ಕಾನಿಶ್ಕಾ ದಾಸ್ (ಮಕ್ಕಳ ಶಸ್ತ್ರ ಚಿಕಿತ್ಸಾ ತಜ್ನರು,ಸೇಂಟ್ ಜಾನ್ಸ್ ಆಸ್ಪತ್ರೆ, ಕೋರಮಂಗಲ, ಬೆಂಗಳೂರು)
  




.