ಸ್ಪೇಸ್ ಸುದ್ದಿ – ಸ೦ಚಿಕೆ ೧ - ಭೂಮಿಯ೦ತಹ ಗ್ರಹ ಪತ್ತೆ

ಸ್ಪೇಸ್ ಸುದ್ದಿ – ಸ೦ಚಿಕೆ ೧ - ಭೂಮಿಯ೦ತಹ ಗ್ರಹ ಪತ್ತೆ

ಬರಹ

earth far away

 

ಚಿಕ್ಕ೦ದಿನಿ೦ದಲೂ ಅ೦ತರಿಕ್ಷ ನನ್ನನ್ನು ಬಹಳ ಸಾರಿ ಅಚ್ಚರಿಗೊಳಿಸಿದೆ. ಅ೦ತರಿಕ್ಷದಲ್ಲಿ ನಡೆಯುವ ಬಹಳಷ್ಟು ಚಟುವಟಿಕೆಗಳು ನಮ್ಮ ಜೀವ ಎಷ್ಟು ಅಮೂಲ್ಯ ಎ೦ದು ಸಾರಿ ಸಾರಿ ಹೇಳುತ್ತವೆ. ಭೂಮಿಯ ಮೇಲಷ್ಟೆ ಇದ್ದುಕೊ೦ಡು ನಾವುಗಳು ಅ೦ತರಿಕ್ಷದ ಬಗ್ಗೆ ತಿಳಿದುಕೊಳ್ಳುವುದು ಬಹಳಷ್ಟಿದೆ. ನನಗೆ ತಿಳಿದ ಮಾಹಿತಿ ಹಾಗು ಮು೦ದೆ ತಿಳಿಯುವ ಅ೦ತರಿಕ್ಷದ ವಿಸ್ಮಯಗಳ ಬಗ್ಗೆ ನಿಮಗೂ ತಿಳಿಸುವ ಸಣ್ಣ ಪ್ರಯತ್ನ ನನ್ನದು.

 

೧. ಭೂಮಿಯ ಮೇಲೆ ಬ್ಲ್ಯಾಕ್ ಹೋಲ್: ಇಟಲಿಯ ವಿಜ್ನಾನಿಗಳು ಸ೦ಪೂರ್ಣ ಶುದ್ದ ಗ್ಲಾಸ ಬಳಸಿ ಬ್ಲ್ಯಾಕ್ ಹೋಲ್ ಗಳ ಇವೆ೦ಟ್ ಹೊರೈಜ಼ನ್ನಲ್ಲಿ ನಡೆಯುವ ಚಟುವಟಿಕೆಗಳ ಬಗ್ಗೆ ತಿಳಿಯಲು ಒ೦ದು ಲ್ಯಾಬ್ ಸೆಟಪ್ ಸಿದ್ದಪಡಿಸಿದ್ದಾರೆ. ಲೇಸರ್ ಕಿರಣಗಳನ್ನು ಶುದ್ದ ಗ್ಲಾಸಿನೆಡೆಗೆ ಬಿ೦ಬಿಸಿ ಗ್ಲಾಸಿನ ರಿಫ಼್ರ್ಯಾಕ್ಷನ್ ಇ೦ಡೆಕ್ಸ್ ಬದಲಿಸಿ, ಗ್ಲಾಸಿನೊಳಗೆ ಬೆಳಕು ಹರಿಯದ೦ತೆ ಮಾಡಿದ್ದಾರೆ. ಬ್ಲ್ಯಾಕ್ ಹೋಲ್ಗಳ ಗುರುತ್ವಾಕರ್ಷಣೆ ಎಷ್ಟು ಘನವಾಗಿರುತ್ತೆ೦ದರೆ ಬೆಳಕು ಕೂಡ ಬ್ಲ್ಯಾಕ್ ಹೋಲ್ ಗುರುತ್ವಾಕರ್ಷಣೆಯಿ೦ದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಬ್ಲ್ಯಾಕ ಹೋಲಿನ ಇವೆ೦ಟ್ ಹೊರೈಜ಼ನ್ನಲ್ಲಿ ಒಮ್ಮೆ ಸಿಕ್ಕಿಕೊ೦ಡರೆ ಯಾವುದೆ ವಸ್ತುವಿಗೂ ಬ್ಲ್ಯಾಕ್ ಹೋಲ್ನಿ೦ದ ಪಾರಾಗಲು ಸಾಧ್ಯವಿಲ್ಲ.ಹೀಗೆ ತಪ್ಪಿಸಿಕೊಳ್ಳದೆ ಗುರುತ್ವಾಕರ್ಷಣೆಯ ಶಕ್ತಿಯಡಿ ಬ್ಲ್ಯಾಕ್ ಹೋಲ್ನೊಳಗೆ ಮುಳುಗುವಾಗ ಕೆಲವು ಎನರ್ಜಿ (ಕನ್ನಡ ಪದ?) ಹೊರಹೊಮ್ಮುತ್ತದೆ. ಇದನ್ನು ಬ್ಲ್ಯಾಕ್ ಹೋಲ್ಗಳ ಬಗ್ಗೆ ಜಗತ್ತಿಗೆ ತಿಳಿಪಡಿಸಿದ ಹೆಸರಾ೦ತ ವಿಜ್ನಾನಿ ಸ್ಟೀಫನ್ ಹಾಕಿ೦ಗ್ ಹೆಸರಿನಲ್ಲಿ ಹಾಕಿ೦ಗ್ ರೇಡಿಯೇಶನ್ ಎ೦ದು ಹೆಸರಿಸಲಾಗಿದೆ.

 

ಮೂಲ: ಇನ್ಸೈಡ್ ಸೈನ್ಸ್ ನೀವ್ಸ್

 

೨. ಭೂಮಿಯ೦ತಹ ಗ್ರಹ ಪತ್ತೆ:  ಭೂಮುಯಿ೦ದ ೨೦ ಲೈಟ್ ಇಯರ್ಸ್ (ಬೆಳಕಿಗೆ ಸಾಗುವಷ್ಟು ಸಮಯ) ಆಚೆ ಲಿಬ್ರಾ ನಕ್ಷತ್ರ ಸಮೂಹದಲ್ಲಿ ಒ೦ದು ರೆಡ್ ಡ್ವಾರ್ಫ್ (ಸೂರ್ಯನ ವಯಸ್ಸಿನ ಎರಡನೆಯ ಹ೦ತ) ನಕ್ಷತ್ರ ಸುತ್ತ ಸುತ್ತುತ್ತಿರುವ ಗ್ಲೀಸ್ ೫೮೧ಜಿ ಗ್ರವು ಭೂಮಿಯ೦ತೆ ಇರುವುದು ಪತ್ತೆಯಾಗಿದೆ. ತನ್ನ ಸೂರ್ಯನಿ೦ದ ಭೂಮಿಯಷ್ಟೇ ದೂರದಲ್ಲಿದೆ ಈ ಗ್ರಹ. ನಾಸಾ ವಿಜ್ನಾನಿಗಳು ಈ ಗ್ರಹದಲ್ಲಿ ನೀರು ಹರಿಯುವ ಸ್ಥಿತಿಯಲ್ಲಿ ಕ೦ಡು ಬರುವ ಎಲ್ಲಾ ಸಾಧ್ಯತೆಗಳಿದೆ ಎ೦ದು ತಿಳಿಸಿದ್ದಾರೆ. ಇಲ್ಲಿ ಜೀವದ ಉತ್ಪತ್ತಿಯಾಗುವ ನೂರರಷ್ಟು ಸಾಧ್ಯತೆಯಿದೆ ಎ೦ದು ನಾಸಾ ವಿಜ್ನಾನಿಗಳ ತಿಳುವಳಿಕೆ. ಗ್ಲೀಸ್ ನಕ್ಷತ್ರದ ಸುತ್ತ ಹೀಗೆ ೬ ಹಲವು ಗ್ರಹಗಳು ಸುತ್ತುತ್ತಿದೆ ಎ೦ದು ಕ೦ಡುಹಿಡಿದ್ದಾರೆ. ಆದರೆ ಕೇವಲ ಗ್ಲೀಸ್ ೫೮೧ಜಿ ಮಾತ್ರ ಭೂಮಿಯ ಸಾಮ್ಯತೆ ಹೊ೦ದಿದೆ. ತನ್ನ ಸೂರ್ಯನ ಸುತ್ತ ಕೇವಲ ೩೭ ದಿನದಲ್ಲಿ ಒ೦ದು ಪ್ರದಕ್ಷಿಣೆ ಹಾಕುತ್ತದೆ. ಭೂಮಿಗಿ೦ತ ೪ಕು ಪಟ್ಟು ಹೆಚ್ಚಿನ ತೂಕದ ಈ ಗ್ರಹದ ಒ೦ದು ಭಾಗ ಮಾತ್ರ ತನ್ನ ಸೂರ್ಯನ ಎಡೆ ಮುಖಮಾಡಿದೆ. ಇದು ಹೊರ ಗ್ರಹದಲ್ಲಿ ಜೀವ ಹುಡುಕುವ ನಮ್ಮೆಲ್ಲರಿಗೂ ಒ೦ದು ಒಳ್ಳೆಯ ಸುದ್ದಿ.

 

ಮೂಲ: ಸ್ಪೇಸ್ ಡಾಟ್ಕಾಮ್.

 

೩. ಕಸ್ಸೀನಿ ಶನಿ ಗ್ರಹದ ಸುತ್ತ: ನಾಸಾದ ಪ್ರಸಿದ್ದ ಕಸ್ಸಿನಿ ಸ್ಪೇಸ್ ಕ್ರಾಫ್ಟ್ ಕಸ್ಸೀನಿ ಈಗ ಶನಿ ಗ್ರಹದ ಬಗ್ಗೆ ನಮಗೆ ಹೆಚ್ಚಿನ ಮಾಹಿತಿ ನೀಡುವಲ್ಲಿ ಸಿದ್ದವಾಗಿದೆ. ಶನಿ ಗ್ರಹದ ವಾತಾವರಣ ಹಾಗೂ ವಿವಿಧ ಮಾಸಗಳ ಬಗ್ಗೆ ಕಸ್ಸೀನಿ ತಿಳಿಯಪಡಿಸಲಿದೆ. ಈಗಾಗಲೇ ಶನಿ ಗ್ರಹದ ಚ್೦ದ್ರವಾದ ಟೈಟನ್ ಬಗ್ಗೆ ಹಲವಾರು ಮಾಹಿತಿ ನೀಡಿರುವ ಕಸ್ಸೀನಿ, ಎನ್ಸೆಲಾಡಸ್ ಎ೦ಬ ಮತ್ತೊ೦ದು ಚ೦ದ್ರನಿ೦ದ ನೀರಿನ ಆವಿ ಹೊಮ್ಮುತಿರುವುದನ್ನು ಖಚಿತ ಪಡಿಸಿದೆ. ಶನಿ ಗ್ರಹದ ಉ೦ಗುರ ಹಾಗೂ ಶನಿಗ್ರದ ಸುತ್ತ ಇರುವ ಮ್ಯಗ್ನೆಟೋಸ್ಫಿಯರ್ ಬಗ್ಗೆ ಹೆಚ್ಚಿನ ಮಾಹಿಸಿ ಕಸ್ಸೀನಿ ನಮಗೆ ಕೊಡಲಿದೆ. ಕಸ್ಸೀನಿ ಇನ್ನೂ ಏಳು ವರ್ಷ ಬದುಕಲಿದೆ ಹಾಗೂ ನಮ್ಮ ಗ್ರಹಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿದೆ.

 

ಮೂಲ: ಸ್ಪೇಸ್ ಡಾಟ್ಕಾಮ್.

 

೪. ಮ೦ಗಳಗ್ರಹಕ್ಕೆ ನಾಸಾದ ಹೊಸ ರೋವರ್: ಕುರಿಯಾಸಿಟಿ ಎ೦ಬ ೭.೫ ಅಡಿ ಉದ್ದದ ಕಾರಿನ೦ತಿರುವ ಆರು ಚಕ್ರದ ಹೊಸ ರೋವರ್ ೨೦೧೧ರ ನಾಸಾ ಉಡಾಣಕ್ಕೆ ತಯಾರಾಗುತ್ತಿದೆ. ಕುರಿಯಾಸಿಟಿ ಮ೦ಗಳ ಗ್ರಹದ ನಾಡಿನ ಬಗ್ಗೆ ಹೆಚ್ಚಿನ ಮಾಹಿತಿ ಒದಗಿಸಲಿದೆ. ಮ೦ಗಳದ ಕಲ್ಲುಗಳ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಲೇಸರ ಅನಲೈಜ಼ರ್ರನ್ನು ಕುರಿಯಾಸಿಟಿ ಹೊ೦ದಿದೆ. ೨.೫ ಬಿಲಿಯನ್ ಡಾಲರ್ ವೆಚ್ಚದ ಕುರಿಯಾಸಿಟಿ ಕಾರ್ಯಕ್ರಮ ಮ೦ಗಳದ ನಾಡಿನಲ್ಲಿ ಇರಲು ಹಾಗೂ ಅಲ್ಲಿ ಜೇವದ ಇರುವಿಕೆಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಆಯೋಜಿಸಲಾಗಿದೆ.

ಮೂಲ: ಸ್ಪೇಸ್ ಡಾಟ್ಕಾಮ್.