ನನ್ನ ಅಂದಿನ ಸಮಸ್ಯೆಗೆ ಇಂದು ಸಿಕ್ಕಿತು ಉತ್ತರ

ನನ್ನ ಅಂದಿನ ಸಮಸ್ಯೆಗೆ ಇಂದು ಸಿಕ್ಕಿತು ಉತ್ತರ

ಬರಹ

ತುಂಬಾ ಹಿಂದೆ ನೆಟ್ಗೆ ಕನೆಕ್ಟ್ ಆಗಿರುವ ಸಿಸ್ಟಮ್‌ಗೆ ಮತ್ತೊಂದು ಸಿಸ್ಟಮ್‌ಗೆ ಲಾಗ್  ಆನ್  ಆಗೋದು ಹೇಗೆ ಎಂದು ಕೇಳಿದ್ದೆ. ಅದಕ್ಕೆ ಉತ್ತರ ಸಿಕ್ಕಿರಲಿಲ್ಲ.

ಅದಕ್ಕೆ ಒಂದು ವಾರದ ಹಿಂದೆ ಉತ್ತರವನ್ನು ಕಂಡುಕೊಂಡೆ

ಅದನ್ನ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳೋಣ ಎಂದು ಇದನ್ನ ಇಲ್ಲಿ ಪೋಸ್ಟ್ ಮಾಡುತ್ತಿದ್ದೇನೆ

ಬಹುಶ:  ಬಹಳ ಜನರಿಗೆ ಇದು ಈಗಾಗಲೇ ತಿಳಿದಿರುತ್ತದೆ . ಆ ತಿಳಿದಿಲ್ಲದ ಜನಕ್ಕಾಗಿ ಇದು.

 

ನಿಮ್ಮ ಕಂಪ್ಯೂಟರ್ ಆಫೀಸಿನಲ್ಲಿದೆ ಎಂದಿಟ್ಟುಕೊಳ್ಳಿ ಮತ್ತು ಆನ್ ಆಗಿದೆ ಹಾಗು ಅಂತರ್ಜಾಲದ ಸಂಪರ್ಕ ಹೊಂದಿದೆ

ನಿಮ್ಮ ಬಳಿಯೂ ಒಂದು ಕಂಪ್ಯೂಟರ್ ಇದೆ ಅದರಿಂದ ದೂರದಲ್ಲಿರುವ  ನಿಮ್ಮ ಆಫೀಸಿನ ಕಂಪ್ಯೂಟರ್‌ಗೆ ಲಾಗ್ ಆನ್ ಆಗುವುದಲ್ಲದೇ ಅದರಿಂದ ಕಡತ ವಿಲೇವಾರಿ  ಮಾಡಬಹುದು ಜೊತೆಗೆ .ನೀವು ಎದುರಿನಲ್ಲಿದ್ದರೆ ಯಾವ ರೀತಿ ಕಂಪ್ಯೂಟರ್  ಆಪರೇಟ್ ಮಾಡುತ್ತೀರೊ ಅದೇ ಥರ ದೂರದಿಂದಲೇ ನಿಮ್ಮ ಕಂಪ್ಯೂಟರ್ ಅನ್ನು ಮತ್ತೊಂದು ಕಂಪ್ಯೂಟರ್(ಲ್ಯಾಪಟಾಪ್, ನೆಟ್ ಬುಕ್) ಇಂದ ನಿಯಂತ್ರಿಸಬಹುದು

ಇದಕ್ಕೆ ನಿಮಗೆ ಬೇಕಿರುವುದು ಅಂತರ್ಜಾಲ ಸಂಪರ್ಕ , ಮತ್ತು ಹೆಚ್ಚು ಸಾಮರ್ಥ್ಯವುಳ್ಳ ಕಂಪ್ಯೂಟರ್ ಹಾಗು  ಟೀಮ್ ವ್ಯೂವರ್ (team viewer -down load from  http://www.teamviewer.com)  ನಾನ್ ಕಮರ್ಷಿಯಲ್ ವರ್ಶನ್ ಉಚಿತ

ಒಮ್ಮೆ ಡೌನ್ ಲೊಡ್ ಮಾಡಿಕೊಂಡ ನಂತರ  ಟೀಮ್ ವ್ಯೂಯರ್ ಸಾಪ್ಟವೇರ್ ಅನ್ನು ನಿಮ್ಮ ಗಣಕದಲ್ಲಿ ಅನುಸ್ಥಾಪಿಸಿ(install). ನೀವು ಯಾವ ಯಾವ ಗಣಕವನ್ನು ಒಮ್ಮೆಲೇ ನೋಡಬಯಸುವಿರೋ ಆ ಗಣಕಗಳಲ್ಲೆಲ್ಲಾ  ಟೀಮ್ ವ್ಯೂವರ್ ಅನ್ನು ಇನಸ್ಟಾಲ್ ಮಾಡಾಬೇಕು. ಕೊಂಚ ಸೆಟ್ಟಿಂಗ್ಸ್ ಮಾಡಿ.

ನಂತರ   ಆ  ಗಣಕಗಳ  ಪಾರ್ಟ್ನರ್ ಐಡಿಯನ್ನು ನೋಟ ಮಾಡಿಕೊಳ್ಳಿ (ಪಾರ್ಟ್ನರ್ ಐಡಿ ನೀವು ಟೀಮ್ ವ್ಯೂವರ್ ರನ್ ಮಾಡಿದೊಡನೆಯೇ ಕಾಣಿಸುತ್ತದೆ.) ಪಾಸ್ವರ್ಡ್ ಅನ್ನು ಸೆಟ್ ಮಾಡಿ .

ನಂಟರ ನಿಮ್ಮ ಕಂಪ್ಯೂಟರ್ ನಲ್ಲಿ ಟೀಮ್ ವ್ಯೂವರ್ ರನ್ ಮಾಡಿ . ಪಾರ್ಟ್ನರ್ ಐಡಿ ಮತ್ತು ಪಾಸವರ್ಡ್ ಹಾಕಿ ಅಷ್ಜ್ಟೇ ಕೆಲವೇ ಕ್ಷಣಗಳ್ಲಲ್ಲಿ  ಆ ಕಂಪ್ಯೂಟರ್ನ್ ಡೆಸ್ಕ್ ಟಾಪ್ ನಿಮ್ಮ ಗಣಕದಲ್ಲಿ ಲಭ್ಯ

ನನಗಂತೂ ಈ  ಫೀಚರ್ ಬಹಳ ಉಪಯೋಗವಾಗ್ತಿದೆ.

ನಮ್ಮ ಕೆಲಸಗಾರರ ಗಣಕ ಚಟುವಟಿಕೆಯ  ಮೇಲೆ ಕಣ್ಣಿಡಲು,  ಅಲ್ಲಿಂದ ಸುಲಭವಾಗಿ ಕಡತಗಳನ್ನು ಇಳಿಸಿಕೊಳ್ಳಲು . ಆನ್‌ಲೈನ್ ಟ್ರೈನಿಂಗ್ ಕೊಡಲು ಹೀಗೆ ಇನ್ನೂ ಅನೇಕ

ನೀವು ಒಮ್ಮೆ ಪ್ರಯತ್ನಿಸಿ