KFCC ನಿಯಮಗಳನ್ನು ಗಾಳಿಗೆ ತೂರಿ ಬಿಡುಗಡೆಯಾದ ಎಂಧಿರನ್

ಬರಹ
ಎಂದಿರನ್ ಬಗ್ಗೆ ಮೈ ಮೇಲೆ ದೆವ್ವ ಬಂದವರಂತೆ ಪ್ರಚಾರ ಕೊಟ್ಟ ಕನ್ನಡ ಮಾಧ್ಯಮಗಳ ಬಗ್ಗೆ, ಅವುಗಳಿಂದಾಗಿ ಕನ್ನಡ ನೆಲದಲ್ಲೇ ಕನ್ನಡ ಚಿತ್ರೋದ್ಯಮ ಬಡವಾಗುತ್ತಿರುವ ಬಗ್ಗೆ ಈ ಹಿಂದಿನ ಲೇಖನದಲ್ಲಿ (link) ಬರೆದಿದ್ದೆ.  
ಈಗ ಇವರೆಲ್ಲರ ಈ ಹುಚ್ಚುತನಕ್ಕೆ ತನ್ನದು ಒಂದಿಷ್ಟು ಕೊಡುಗೆ ಇರಲಿ ಅನ್ನುವಂತೆ ಅಮೇರಿಕದಲ್ಲಿ ಕನ್ನಡದ ತೇರು ಎಳೆಯುತ್ತ, ಇಡೀ ಕರ್ನಾಟಕದ, ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದ್ದ ’ಅಕ್ಕ’ ಕೂಡ ತನ್ನ ಸ್ಥಾಪನೆಯ ಧ್ಯೇಯೋದ್ದೇಶಗಳನ್ನೇ ಮರೆತು ಅಮೇರಿಕದಲ್ಲಿ "ಎಂದಿರನ್" ನೋಡಿ ಪ್ರೋತ್ಸಾಹಿಸಿ ಅನ್ನುವ ಮಿಂಚೆಯನ್ನು ಅಕ್ಕದ ಅಧಿಕೃತ ಈಮೇಲ್ ವಿಳಾಸದಿಂದ ಅಕ್ಕದ ಸಾವಿರಾರು ಸದಸ್ಯರಿಗೆ ಕಳಿಸಿರುವ ಆಘಾತಕಾರಿ ಸುದ್ದಿ ಹೊರ ಬಂದಿದೆ.
ಕನ್ನಡ ಚಿತ್ರಗಳ ಬಗ್ಗೆ "ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು" ಎಂಬಂತೆ ವಿಮರ್ಷೆ ಬರೆಯುವ ಕನ್ನಡ ಮಾಧ್ಯಮಗಳು, ಎಂದಿರನ್ ಬಗ್ಗೆ ಅತಿರೇಕದ ಪ್ರಚಾರ ಕೊಟ್ಟಿದ್ದು ಒಂದೆಡೆಯಾದರೆ, ಅಮೇರಿಕದಲ್ಲಿ ಹರಡಿಕೊಂಡಿರುವ ಕನ್ನಡಿಗರಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಇತಿಹಾಸ, ಪರಂಪರೆ, ಭಾಷೆ, ಸಂಸ್ಕೃತಿಯ ಅರಿವು ಬೆಳೆಸುವುದು, ನಮ್ಮತನದ ಉಳಿವು, ಬೆಳೆವಿಗಾಗಿ ಕೆಲಸ ಮಾಡುವುದೇ ತಮ್ಮ ಧ್ಯೇಯೋದ್ದೇಶ ಅನ್ನುವ ಮಾತನ್ನು ತನ್ನ ಸಂವಿಧಾನದಲ್ಲೇ ಬರೆದುಕೊಂಡಿರುವ ಅಕ್ಕ ತಮ್ಮ ಯಾವುದೇ ಒಬ್ಬ ಅಜೀವನ ಪರ್ಯಂತ ದೇಣಿಗೆ ಕೊಡುವವರ ಮಾತಿಗೆ ಕಟ್ಟು ಬಿದ್ದು ಇಂತಹ ಕನ್ನಡ ವಿರೋಧಿ ಕೆಲಸ ಮಾಡಿದೆ.
ಯಾರೋ ದೇಣಿಗೆ ಕೊಡುವವರು ಹೇಳಿದ್ರೂ ಅಂತ ಇವತ್ತು ತಮಿಳು ಚಿತ್ರ ನೋಡಿ ಅನ್ನುವವರು, ನಾಳೆ ದಿನ ಇನ್ಯಾರೋ ದೇಣಿಗೆ ಕೊಡುವವರು ತೆಲುಗು, ಹಿಂದಿ, ಮಲಯಾಳಿ ಚಿತ್ರ ತೋರಿಸಿ ಅಂದರೆ ಹೀಗೆ ಮಾಡದೇ ಇರುತ್ತಾರೆಯೇ? ಅಥವಾ ಇನ್ಯಾರೋ ಬಂದು ದೇಣಿಗೆ ಕೊಡ್ತಿನಿ ಇನ್ ಮೇಲೆ ಅಕ್ಕ ಕಾರ್ಯಕ್ರಮದಲ್ಲಿ ಹಿಂದಿ ಹಾಡಿಗೆ ಡ್ಯಾನ್ಸ್ ಮಾಡಿ ಅಂದರೆ ಮಾಡುತ್ತಾರೆಯೇ? ದೇಣಿಗೆ ಕೊಡುವ ಯಾರೋ ಒಬ್ಬರ ವೈಯಕ್ತಿಕ ಸ್ವಾರ್ಥಕ್ಕೆ ಕನ್ನಡದ ಹೆಸರಲ್ಲಿ ಕರ್ನಾಟಕ ಸರ್ಕಾರದಿಂದಲೂ ಹಣ ಪಡೆಯುವ ’ಅಕ್ಕ’ ಈ ರೀತಿ ಕನ್ನಡದ ಬುಡಕ್ಕೆ ಕೊಳ್ಳಿ ಇಡುವ ಕೆಲಸ ಮಾಡಿದ್ದು ಸರಿಯೇ?
ಅಮೇರಿಕದಲ್ಲಿ ಎರಡರಿಂದ ಮೂರು ಲಕ್ಷ ಕನ್ನಡಿಗರಿದ್ದು, ಸರಿಯಾಗಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಬೆಳೆಸುವ ಪ್ರಯತ್ನ ಮಾಡಿದರೆ ನಿಜಕ್ಕೂ ಕನ್ನಡ ಚಿತ್ರೋದ್ಯಮಕ್ಕೆ ಕರ್ನಾಟಕದಾಚೆ ಅತ್ಯಂತ ದೊಡ್ಡ ಮಾರುಕಟ್ಟೆಯಾಗುವ ಎಲ್ಲ ಅವಕಾಶವಿದೆ. ಸುಮ್ಮನೆ ಲೆಕ್ಕ ಹಾಕಿ, 2 ಲಕ್ಷ ಕನ್ನಡಿಗರು ವರ್ಷಕ್ಕೆ 4 ಕನ್ನಡ ಚಿತ್ರಗಳನ್ನು ಬರೀ 10 ಡಾಲರ್ ಕೊಟ್ಟು ನೋಡುವ ಹಾಗೇ ಮಾಡಿದರೆ, ಅದೊಂದೇ ಹೆಜ್ಜೆಯಲ್ಲಿ (2,00,000 X 4 X 10 = 80,00,000 X 50rs) 40 ಕೋಟಿಯಷ್ಟು ದೊಡ್ಡ ಮಾರುಕಟ್ಟೆಯನ್ನು ಅಲ್ಲಿ ಕಟ್ಟಿಕೊಳ್ಳಬಹುದು. ಇದೆಲ್ಲ ಎಲ್ಲಿ ಆಗುತ್ತೆ, ಇದೆಲ್ಲ ಕಷ್ಟ ಅಂತೆಲ್ಲ ಹೇಳಬಹುದು. ಆದರೆ ಯಾವ ಬದಲಾವಣೆಯೂ ತಾನೇ ತಾನಾಗಿ ಆಗುವುದಿಲ್ಲ. ಶ್ರಮ, ಹಣ ಎಲ್ಲವನ್ನೂ ಹಾಕಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಇದು ಖಂಡಿತ ಸಾಧ್ಯವಾಗುವ ಮಾತು. "ಅಕ್ಕ" ಇಂತಹದೊಂದು ಕನ್ನಡ-ಕರ್ನಾಟಕದ ಹಿತಕ್ಕೆ ಪೂರಕವಾದ ದೂರದೃಷ್ಟಿಯ ಕೆಲಸದ ಕಡೆ ಗಮನ ಹರಿಸುವುದನ್ನು ಬಿಟ್ಟು "ರಜನಿ, ಐಶ್ವರ್ಯ ಎಲ್ಲ ನಮ್ಮವರು, ಅದಕ್ಕೆ ಎಂದಿರನ್ ನೋಡಿ" ಅನ್ನುವಂತಹ ಚೀಪ್ ಕೆಲಸಕ್ಕೆ ಕೈ ಹಾಕಿದ್ದನ್ನು ಕನ್ನಡಿಗರೆಲ್ಲರೂ ಖಂಡಿಸಬೇಕು. 
ಇನ್ನು ಇದೇ ಸಮಯದಲ್ಲಿ ಎಂದಿರನ್ ನ ಕರ್ನಾಟಕ ವಿತರಣಾ ಹಕ್ಕು ಪಡೆದವರು ವಾಣಿಜ್ಯ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿರುವ ಸುದ್ದಿಯೂ ಅಲ್ಲಲ್ಲಿದೆ (please put that chitraloka link). ಹೊರದೇಶದಲ್ಲಿ, ಇಲ್ಲಿ ಹೀಗೆ ಎಲ್ಲೆಡೆ ಕನ್ನಡ ಭಾಷೆಯ ಮೇಲೆ ಮನರಂಜನೆಯ ರೂಪದಲ್ಲಿ ನಡೆಯುತ್ತಿರುವ ಈ ಭಾಷಿಕ ದಾಳಿಗೆ ಪರಿಹಾರವೆಂದರೆ ಡಬ್ಬಿಂಗ್ ಮೇಲಿನ ನಿಷೇಧ ಹಿಂಪಡೆಯುವುದು. ಯಾವ ಭಾಷೆಯ ಎಂತಹುದೇ ಚಿತ್ರವಿರಲಿ ಅದು ಕರ್ನಾಟಕದಲ್ಲಿ ಕನ್ನಡದಲ್ಲೇ ನೋಡಬೇಕು ಅನ್ನುವ ಸ್ಥಿತಿ ನಿರ್ಮಾಣವಾದರೆ ನಿಧಾನವಾಗಿಯಾದರೂ ಸರಿ ಕರ್ನಾಟಕದಲ್ಲಿ ಕನ್ನಡಿಗರ ಮನರಂಜನೆಯ ಮೊದಲ ಆಯ್ಕೆಯ ಭಾಷೆಯಾಗಿ ಕನ್ನಡ ಉಳಿಯುತ್ತೆ. ಇವತ್ತು ಕರ್ನಾಟಕದ ಚಿಕ್ಕ ಚಿಕ್ಕ ಊರುಗಳನ್ನು ಹಿಂದಿ, ತೆಲುಗು, ತಮಿಳು ಚಿತ್ರಗಳು ಆಕ್ರಮಿಸಿಕೊಳ್ಳುತ್ತಿವೆ. ಚಲನಚಿತ್ರದಂತಹ ಅತ್ಯಂತ ಪ್ರಭಾವಿ ಮಾಧ್ಯಮದ ಮೂಲಕ ಕನ್ನಡಿಗರ ಮನದಿಂದ ಕನ್ನಡವನ್ನು ಮರೆಯಾಗಿಸುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಇವೆಲ್ಲವುದರ ಪ್ರಭಾವವನ್ನು ಈಗಾಗಲೇ ಕಿರುತೆರೆಯ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಬಹುದು. ಕನ್ನಡ ಚಾನೆಲ್ ಗಳಲ್ಲಿ ಹಿಂದಿ ಹಾಡು, ಡ್ಯಾನ್ಸ್ ಮಾಡಿಸುವುದು, ತೆಲುಗು ಹಾಡು ಹಾಕುವುದು ಮುಂತಾದ ಮೂರ್ಖತನ ಈಗಾಗಲೇ ಕಾಣಿಸುತ್ತಿದೆ. ಕನ್ನಡಿಗರ ಮನರಂಜನೆಯ ಮೊದಲ ಆಯ್ಕೆಯ ಭಾಷೆಯಾಗಿ ಕನ್ನಡ ಉಳಿಯದೇ ಹೋದರೆ ಇನ್ನೊಂದು ಪೀಳಿಗೆಯ ಅವಧಿಯಲ್ಲಿ ಕನ್ನಡದ ಸ್ಥಿತಿ ಹೀನಾಯವಾಗುವುದರಲ್ಲಿ ನನಗಾವ ಅನುಮಾನವೂ ಇಲ್ಲ. ಅಂತಹ ದುರ್ದಿನಗಳು ಬರುವ ಮೊದಲು ಡಬ್ಬಿಂಗ್ ಮೇಲಿನ ಪರದೆ ಸರಿಯಲಿ.

ಎಂದಿರನ್ ಬಗ್ಗೆ ಮೈ ಮೇಲೆ ದೆವ್ವ ಬಂದವರಂತೆ ಪ್ರಚಾರ ಕೊಟ್ಟ ಕನ್ನಡ ಮಾಧ್ಯಮಗಳ ಬಗ್ಗೆ, ಅವುಗಳಿಂದಾಗಿ ಕನ್ನಡ ನೆಲದಲ್ಲೇ ಕನ್ನಡ ಚಿತ್ರೋದ್ಯಮ ಬಡವಾಗುತ್ತಿರುವ ಬಗ್ಗೆ ಈ ಹಿಂದಿನ ಲೇಖನದಲ್ಲಿ (http://sampada.net/article/28294) ಬರೆದಿದ್ದೆ.  
ಈಗ ಇವರೆಲ್ಲರ ಈ ಹುಚ್ಚುತನಕ್ಕೆ ತನ್ನದು ಒಂದಿಷ್ಟು ಕೊಡುಗೆ ಇರಲಿ ಅನ್ನುವಂತೆ ಅಮೇರಿಕದಲ್ಲಿ ಕನ್ನಡದ ತೇರು ಎಳೆಯುತ್ತ, ಇಡೀ ಕರ್ನಾಟಕದ, ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದ್ದ ’ಅಕ್ಕ’ ಕೂಡ ತನ್ನ ಸ್ಥಾಪನೆಯ ಧ್ಯೇಯೋದ್ದೇಶಗಳನ್ನೇ ಮರೆತು ಅಮೇರಿಕದಲ್ಲಿ "ಎಂದಿರನ್" ನೋಡಿ ಪ್ರೋತ್ಸಾಹಿಸಿ ಅನ್ನುವ ಮಿಂಚೆಯನ್ನು ಅಕ್ಕದ ಅಧಿಕೃತ ಈಮೇಲ್ ವಿಳಾಸದಿಂದ ಅಕ್ಕದ ಸಾವಿರಾರು ಸದಸ್ಯರಿಗೆ ಕಳಿಸಿರುವ ಆಘಾತಕಾರಿ ಸುದ್ದಿ ಹೊರ ಬಂದಿದೆ.
ಕನ್ನಡ ಚಿತ್ರಗಳ ಬಗ್ಗೆ "ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು" ಎಂಬಂತೆ ವಿಮರ್ಷೆ ಬರೆಯುವ ಕನ್ನಡ ಮಾಧ್ಯಮಗಳು, ಎಂದಿರನ್ ಬಗ್ಗೆ ಅತಿರೇಕದ ಪ್ರಚಾರ ಕೊಟ್ಟಿದ್ದು ಒಂದೆಡೆಯಾದರೆ, ಅಮೇರಿಕದಲ್ಲಿ ಹರಡಿಕೊಂಡಿರುವ ಕನ್ನಡಿಗರಲ್ಲಿ ಕನ್ನಡ-ಕನ್ನಡಿಗ-ಕರ್ನಾಟಕದ ಇತಿಹಾಸ, ಪರಂಪರೆ, ಭಾಷೆ, ಸಂಸ್ಕೃತಿಯ ಅರಿವು ಬೆಳೆಸುವುದು, ನಮ್ಮತನದ ಉಳಿವು, ಬೆಳೆವಿಗಾಗಿ ಕೆಲಸ ಮಾಡುವುದೇ ತಮ್ಮ ಧ್ಯೇಯೋದ್ದೇಶ ಅನ್ನುವ ಮಾತನ್ನು ತನ್ನ ಸಂವಿಧಾನದಲ್ಲೇ ಬರೆದುಕೊಂಡಿರುವ ಅಕ್ಕ ತಮ್ಮ ಯಾವುದೇ ಒಬ್ಬ ಅಜೀವನ ಪರ್ಯಂತ ದೇಣಿಗೆ ಕೊಡುವವರ ಮಾತಿಗೆ ಕಟ್ಟು ಬಿದ್ದು ಇಂತಹ ಕನ್ನಡ ವಿರೋಧಿ ಕೆಲಸ ಮಾಡಿದೆ.
ಯಾರೋ ದೇಣಿಗೆ ಕೊಡುವವರು ಹೇಳಿದ್ರೂ ಅಂತ ಇವತ್ತು ತಮಿಳು ಚಿತ್ರ ನೋಡಿ ಅನ್ನುವವರು, ನಾಳೆ ದಿನ ಇನ್ಯಾರೋ ದೇಣಿಗೆ ಕೊಡುವವರು ತೆಲುಗು, ಹಿಂದಿ, ಮಲಯಾಳಿ ಚಿತ್ರ ತೋರಿಸಿ ಅಂದರೆ ಹೀಗೆ ಮಾಡದೇ ಇರುತ್ತಾರೆಯೇ? ಅಥವಾ ಇನ್ಯಾರೋ ಬಂದು ದೇಣಿಗೆ ಕೊಡ್ತಿನಿ ಇನ್ ಮೇಲೆ ಅಕ್ಕ ಕಾರ್ಯಕ್ರಮದಲ್ಲಿ ಹಿಂದಿ ಹಾಡಿಗೆ ಡ್ಯಾನ್ಸ್ ಮಾಡಿ ಅಂದರೆ ಮಾಡುತ್ತಾರೆಯೇ? ದೇಣಿಗೆ ಕೊಡುವ ಯಾರೋ ಒಬ್ಬರ ವೈಯಕ್ತಿಕ ಸ್ವಾರ್ಥಕ್ಕೆ ಕನ್ನಡದ ಹೆಸರಲ್ಲಿ ಕರ್ನಾಟಕ ಸರ್ಕಾರದಿಂದಲೂ ಹಣ ಪಡೆಯುವ ’ಅಕ್ಕ’ ಈ ರೀತಿ ಕನ್ನಡದ ಬುಡಕ್ಕೆ ಕೊಳ್ಳಿ ಇಡುವ ಕೆಲಸ ಮಾಡಿದ್ದು ಸರಿಯೇ?
ಅಮೇರಿಕದಲ್ಲಿ ಎರಡರಿಂದ ಮೂರು ಲಕ್ಷ ಕನ್ನಡಿಗರಿದ್ದು, ಸರಿಯಾಗಿ ಕನ್ನಡ ಚಿತ್ರಗಳಿಗೆ ಮಾರುಕಟ್ಟೆ ಬೆಳೆಸುವ ಪ್ರಯತ್ನ ಮಾಡಿದರೆ ನಿಜಕ್ಕೂ ಕನ್ನಡ ಚಿತ್ರೋದ್ಯಮಕ್ಕೆ ಕರ್ನಾಟಕದಾಚೆ ಅತ್ಯಂತ ದೊಡ್ಡ ಮಾರುಕಟ್ಟೆಯಾಗುವ ಎಲ್ಲ ಅವಕಾಶವಿದೆ. ಸುಮ್ಮನೆ ಲೆಕ್ಕ ಹಾಕಿ, 2 ಲಕ್ಷ ಕನ್ನಡಿಗರು ವರ್ಷಕ್ಕೆ 4 ಕನ್ನಡ ಚಿತ್ರಗಳನ್ನು ಬರೀ 10 ಡಾಲರ್ ಕೊಟ್ಟು ನೋಡುವ ಹಾಗೇ ಮಾಡಿದರೆ, ಅದೊಂದೇ ಹೆಜ್ಜೆಯಲ್ಲಿ (2,00,000 X 4 X 10 = 80,00,000 X 50rs) 40 ಕೋಟಿಯಷ್ಟು ದೊಡ್ಡ ಮಾರುಕಟ್ಟೆಯನ್ನು ಅಲ್ಲಿ ಕಟ್ಟಿಕೊಳ್ಳಬಹುದು. ಇದೆಲ್ಲ ಎಲ್ಲಿ ಆಗುತ್ತೆ, ಇದೆಲ್ಲ ಕಷ್ಟ ಅಂತೆಲ್ಲ ಹೇಳಬಹುದು. ಆದರೆ ಯಾವ ಬದಲಾವಣೆಯೂ ತಾನೇ ತಾನಾಗಿ ಆಗುವುದಿಲ್ಲ. ಶ್ರಮ, ಹಣ ಎಲ್ಲವನ್ನೂ ಹಾಕಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡಿದರೆ ಇದು ಖಂಡಿತ ಸಾಧ್ಯವಾಗುವ ಮಾತು. "ಅಕ್ಕ" ಇಂತಹದೊಂದು ಕನ್ನಡ-ಕರ್ನಾಟಕದ ಹಿತಕ್ಕೆ ಪೂರಕವಾದ ದೂರದೃಷ್ಟಿಯ ಕೆಲಸದ ಕಡೆ ಗಮನ ಹರಿಸುವುದನ್ನು ಬಿಟ್ಟು "ರಜನಿ, ಐಶ್ವರ್ಯ ಎಲ್ಲ ನಮ್ಮವರು, ಅದಕ್ಕೆ ಎಂದಿರನ್ ನೋಡಿ" ಅನ್ನುವಂತಹ ಚೀಪ್ ಕೆಲಸಕ್ಕೆ ಕೈ ಹಾಕಿದ್ದನ್ನು ಕನ್ನಡಿಗರೆಲ್ಲರೂ ಖಂಡಿಸಬೇಕು. 
ಇನ್ನು ಇದೇ ಸಮಯದಲ್ಲಿ ಎಂದಿರನ್ ನ ಕರ್ನಾಟಕ ವಿತರಣಾ ಹಕ್ಕು ಪಡೆದವರು ವಾಣಿಜ್ಯ ಮಂಡಳಿಯ ನಿಯಮಗಳನ್ನು ಗಾಳಿಗೆ ತೂರಿ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆ ಮಾಡಿರುವ ಸುದ್ದಿಯೂ ಅಲ್ಲಲ್ಲಿದೆ (http://ic-technews.com/entertainment/1627-endhiran-to-dominate-more-than-60-screens-in-karnataka). ಹೊರದೇಶದಲ್ಲಿ, ಇಲ್ಲಿ ಹೀಗೆ ಎಲ್ಲೆಡೆ ಕನ್ನಡ ಭಾಷೆಯ ಮೇಲೆ ಮನರಂಜನೆಯ ರೂಪದಲ್ಲಿ ನಡೆಯುತ್ತಿರುವ ಈ ಭಾಷಿಕ ದಾಳಿಗೆ ಪರಿಹಾರವೆಂದರೆ ಡಬ್ಬಿಂಗ್ ಮೇಲಿನ ನಿಷೇಧ ಹಿಂಪಡೆಯುವುದು. ಯಾವ ಭಾಷೆಯ ಎಂತಹುದೇ ಚಿತ್ರವಿರಲಿ ಅದು ಕರ್ನಾಟಕದಲ್ಲಿ ಕನ್ನಡದಲ್ಲೇ ನೋಡಬೇಕು ಅನ್ನುವ ಸ್ಥಿತಿ ನಿರ್ಮಾಣವಾದರೆ ನಿಧಾನವಾಗಿಯಾದರೂ ಸರಿ ಕರ್ನಾಟಕದಲ್ಲಿ ಕನ್ನಡಿಗರ ಮನರಂಜನೆಯ ಮೊದಲ ಆಯ್ಕೆಯ ಭಾಷೆಯಾಗಿ ಕನ್ನಡ ಉಳಿಯುತ್ತೆ. ಇವತ್ತು ಕರ್ನಾಟಕದ ಚಿಕ್ಕ ಚಿಕ್ಕ ಊರುಗಳನ್ನು ಹಿಂದಿ, ತೆಲುಗು, ತಮಿಳು ಚಿತ್ರಗಳು ಆಕ್ರಮಿಸಿಕೊಳ್ಳುತ್ತಿವೆ. ಚಲನಚಿತ್ರದಂತಹ ಅತ್ಯಂತ ಪ್ರಭಾವಿ ಮಾಧ್ಯಮದ ಮೂಲಕ ಕನ್ನಡಿಗರ ಮನದಿಂದ ಕನ್ನಡವನ್ನು ಮರೆಯಾಗಿಸುವ ಎಲ್ಲ ಪ್ರಯತ್ನಗಳು ನಡೆಯುತ್ತಿವೆ. ಇವೆಲ್ಲವುದರ ಪ್ರಭಾವವನ್ನು ಈಗಾಗಲೇ ಕಿರುತೆರೆಯ ಹಲವು ರಿಯಾಲಿಟಿ ಶೋಗಳಲ್ಲಿ ಕಾಣಬಹುದು. ಕನ್ನಡ ಚಾನೆಲ್ ಗಳಲ್ಲಿ ಹಿಂದಿ ಹಾಡು, ಡ್ಯಾನ್ಸ್ ಮಾಡಿಸುವುದು, ತೆಲುಗು ಹಾಡು ಹಾಕುವುದು ಮುಂತಾದ ಮೂರ್ಖತನ ಈಗಾಗಲೇ ಕಾಣಿಸುತ್ತಿದೆ. ಕನ್ನಡಿಗರ ಮನರಂಜನೆಯ ಮೊದಲ ಆಯ್ಕೆಯ ಭಾಷೆಯಾಗಿ ಕನ್ನಡ ಉಳಿಯದೇ ಹೋದರೆ ಇನ್ನೊಂದು ಪೀಳಿಗೆಯ ಅವಧಿಯಲ್ಲಿ ಕನ್ನಡದ ಸ್ಥಿತಿ ಹೀನಾಯವಾಗುವುದರಲ್ಲಿ ನನಗಾವ ಅನುಮಾನವೂ ಇಲ್ಲ. ಅಂತಹ ದುರ್ದಿನಗಳು ಬರುವ ಮೊದಲು ಡಬ್ಬಿಂಗ್ ಮೇಲಿನ ಪರದೆ ಸರಿಯಲಿ.